Pratap Simha's Blog, page 20
May 4, 2017
May 1, 2017
April 28, 2017
ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

ಮೇಜರ್ ಬಾರ್ಬರಾ!
ಇದು ವಿಶ್ವವಿಖ್ಯಾತ ಲೇಖಕ, ವಿಮರ್ಶಕ, ನೊಬೆಲ್ ಪುರಸ್ಕೃತ ಜಾರ್ಜ್ ಬರ್ನಾರ್ಡ್ ಷಾ ಅವರ ನಾಟಕ. ಈ ಬರ್ನಾರ್ಡ್ ಷಾ ಅವರಿಗೂ ಬ್ರಿಟನ್‌ನ ಲೆಜೆಂಡರಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್‌ಗೂ ಆಗಾಗ್ಗೆ ಜಟಾಪಟಿ ನಡೆಯುತ್ತಿರುತ್ತಿತ್ತು. ಅದು ಬಹಳಷ್ಟು ಸಲ ಅವಹೇಳನಕಾರಿಯಾಗಿರುತ್ತಿದ್ದರೂ ಆ ನಿಂದನೆಯಲ್ಲೂ ಒಂದು Class,, ಶ್ರೇಷ್ಠತೆ ಇರುತ್ತಿತ್ತು. ಒಮ್ಮೆ ‘ಮೇರ್ಜ ಬಾರ್ಬರಾ’ ನಾಟಕ ಏರ್ಪಡಾಯಿತು. ಸಾಮಾನ್ಯವಾಗಿ ನಾಟಕಗಳು ರಾತ್ರಿ ವೇಳೆಯೇ ಹೆಚ್ಚಾಗಿ ನಡೆಯುತ್ತವೆ. ವಿನ್‌ಸ್ಟನ್ ಚರ್ಚಿಲ್‌ಗೆ ಟೆಲಿಗ್ರಾಂ ಮಾಡಿದ ಬರ್ನಾರ್ಡ್ ಷಾ, ‘ಫ್ಟ್ ನೈಟ್’ಗೆ (ಮೊದಲ ಪ್ರದರ್ಶನಕ್ಕೆ) ನಿಮಗಾಗಿ 2 ಆಸನಗಳನ್ನು ಕಾದಿರಿಸಿದ್ದೀನಿ, ಜತೆಗೊಬ್ಬ ಸ್ನೇಹಿತರನ್ನೂ ಕರೆದುಕೊಂಡು ಬನ್ನಿ. ಒಂದು ವೇಳೆ ಇರುವುದೇ ಆದರೆ… ಎಂಬ ಕುಟುಕು ಸಂದೇಶ ಕಳುಹಿಸಿದರು! ಅದಕ್ಕೆ ಪ್ರತಿಯಾಗಿ ಚರ್ಚಿಲ್ ಕೂಡ ಚಚ್ಚಿದರು- ‘ಫ್ಟ್ ನೈಟ್’ಗೆ ಬರುವುದಕ್ಕಂತೂ ಸಾಧ್ಯವಿಲ್ಲ, ‘ಸೆಕೆಂಡ್ ನೈಟ್’ಗೆ ಖಂಡಿತಾ ಬರುತ್ತೇನೆ, ಒಂದು ವೇಳೆ ಅದನ್ನು ನೀವು ಇಟ್ಟುಕೊಂಡರೆ…
ಇವರಿಬ್ಬರ ತಾಕಲಾಟಗಳು ಇಂದು ದಂತಕತೆಯಾಗಿವೆ. ನಮ್ಮಲ್ಲೂ ಒಬ್ಬರು ಕರ್ನಾಟಕದ ಬರ್ನಾರ್ಡ್ ಷಾ ಎಂದು ಖ್ಯಾತರಾಗಿದ್ದರು. ಅವರೇ ರಾಯಸಂ ಭೀಮಸೇನ ರಾವ್ ಅಲಿಯಾಸ್ ಬೀchi! ಅವರದ್ದು ದುರಂತಮಯ ಬಾಲ್ಯ. ಅದನ್ನು ಅವರ ಆತ್ಮಚರಿತ್ರೆ ‘ನನ್ನ ಭಯಾಗ್ರಫಿ’ಯಲ್ಲಿ ಮಾರ್ಮಿಕವಾಗಿ ವರ್ಣಿಸುತ್ತಾರೆ. ‘ಅರ್ಜುನ ಅದೆಲ್ಲಿಗೋ ಹೋದ, ಚಿತ್ರಾಂಗದೆ ಸಿಕ್ಕಿದಳು. ಅವಳೊಟ್ಟಿಗೆ ಸುಖ ಕೆಲಕಾಲ-ದೈವಾಂಶವಿರುವವ ವ್ಯವಹಾರ-ಗಾಂಧರ್ವ ವಿವಾಹ ಆದರು. ಸುಖ ಸಾಕಾಯಿತು, ಅರ್ಜುನ ಅಲ್ಲಿಂದ ಕಾಲ್ತೆಗೆದ. ಗರ್ಭವತಿಯಾಗಿದ್ದ ಚಿತ್ರಾಂಗದೆ ಗಂಡು ಮಗುವಿಗೆ ಜನ್ಮವಿತ್ತಳು, ಅವನೇ ಬಭ್ರುವಾಹನ.
ಅರ್ಜುನನಿಗೆ ಚಿತ್ರಾಂಗದೆಯ ನೆನಪಿಲ್ಲ, ಬಭ್ರುವಾಹನ ಅಪ್ಪ ಯಾರೆಂದು ಕೇಳಿದರೆ ಏನಾಶ್ಚರ್ಯ? ನಮ್ಮ ಪುರಾಣ ಪುಣ್ಯಕಥೆಗಳ ತುಂಬ ಬರೀ ಇಂಥ ಕಥೆಗಳೇ. ನನ್ನ ಕಥೆಯೂ ಈ ಒಂದು ದೃಷ್ಟಿಯಲ್ಲಿ ಪೌರಾಣಿಕವೇ- ಆದರೆ ಆ ಪುರಾಣ ಪುರುಷರಂತೆ ನನ್ನ ತಂದೆ ನನ್ನ ತಾಯಿಗೆ ಗರ್ಭದಾನ ಉಪಕಾರದ ಹೊರೆ ಹೊರಿಸಿ ಓಡಿ ಹೋಗಲಿಲ್ಲ, ಸತ್ತುಹೋದ. ಇದು ದೈವಾಂಶವಿಲ್ಲದವರ ಕಥೆ, ಆದುದರಿಂದ ವ್ಯಥೆ. ನಾನು ಹುಟ್ಟಿದೊಡನೆ ನನ್ನ ತಂದೆ ಸಾಯಲಿಲ್ಲ. ಆದರೆ ನಾನು ಅವರನ್ನು ಗುರುತಿಸುವ ಒಳಗಾಗಿಯೇ ಸತ್ತರು. ಒಂದು ರೀತಿಯಿಂದ ಇದು ನನಗೆ ಒಳಿತೇ ಆಯಿತು, ಪಿತೃಶೋಕದ ಅರಿವೂ ನನಗಾಗಲಿಲ್ಲ. ಅಪ್ಪ ಸತ್ತ ಎಂದು ನಾನಳಲಿಲ್ಲ. ಆಗ ನಾನು ಅತ್ತಿದ್ದರೆ ಹಸಿವಿನಿಂದ ಇರಬೇಕು ಅಷ್ಟೇ’ ಎನ್ನುತ್ತಾರೆ ಬೀchi
ತಾಯಿಯ ಬಗ್ಗೆಯೂ ಅವರಿಗೆ ಅಷ್ಟಕ್ಕಷ್ಟೇ. ಆಕೆ ಸತ್ತಾಗ ಬೀchiಗೆ ಆರೇಳು ವರ್ಷ. ಸಾವು ಎಂದರೇನು ಎಂಬುದೇ ತಿಳಿಯದ ವಯಸ್ಸು. ಅವರಿವರು ಅಳುವುದನ್ನು ನೋಡಿ ಅಳುವ ಏಜು ಅದು. ಕ್ಷಯ ರೋಗಕ್ಕೆ ತುತ್ತಾಗಿದ್ದ ತಾಯಿಯಿಂದ ಬೀchiಯವರನ್ನು ದೂರವೇ ಇರಿಸಿದ್ದರು. ಸೋದರತ್ತೆ ರಿಂದತ್ತಿಯ ಜತೆಯೇ ಬೆಳೆದರು. ‘ಬದುಕಲ್ಲಿ ಸಾಕಷ್ಟು ನೋವು, ಸಂಕಷ್ಟಗಳನ್ನು ಎದುರಿಸಿದ್ದ ನನ್ನ ತಾಯಿಗೆ ಮಕ್ಕಳನ್ನು ಹೊಡೆಯುವುದು ಅಭ್ಯಾಸವಾಗಿ ಹೋಗಿತ್ತು. ನನ್ನ ತಾಯಿಯ ಬದಲು ರಿಂದತ್ತಿ ಸತ್ತಿದ್ದರೆ ಪ್ರಾಯಶಃ ನಾನು ಅಳುತ್ತಿದ್ದೆ’ ಎಂದು ಬರೆದುಕೊಳ್ಳುತ್ತಾರೆ ಬೀchi. ಇಂಥ ದುರಂತಮಯ ಬಾಲ್ಯವನ್ನು ಕಂಡರೂ ಒಬ್ಬ ಬರಹಗಾರರಾಗಿ ಬೀಇಜಿ ಓದುಗರ ಮುಖದಲ್ಲಿ ನಗು ಅರಳಿಸಲು ಪ್ರಯತ್ನಿಸಿದರು. ಬಹುಶಃ ಅವರಿಗಿದ್ದ ಹಾಸ್ಯಪ್ರಜ್ಞೆ, ವಿಡಂಬನಾಶಕ್ತಿ ಆ ಕಾಲದ ಯಾವ ಸಾಹಿತಿಗಳಿಗೂ ಇರಲಿಲ್ಲ. ಅವರ ನಂತರ ಬಂದ ಕನ್ನಡದ ಸಾಹಿತಿಗಳಲ್ಲೂ ಆ ವಿಷಯದಲ್ಲಿ ಬೀchiಗೆ ಸರಿಸಮಾನಾಗಿ ನಿಲ್ಲುವ ಸಾಮರ್ಥ್ಯವಿಲ್ಲ.
ಇವತ್ತು ಇಂಟರ್‌ನೆಟ್‌ನಲ್ಲಿ ಎಲ್ಲವೂ ಲಭ್ಯವಿದೆ. ಪೋಲಿ ಜೋಕಿನಿಂದ ಹಿಡಿದು ಎಲ್ಲವೂ ಸಿಗುತ್ತದೆ. ಆದರೆ ಆ ಕಾಲಕ್ಕೆ ಇಂಟರ್‌ನೆಟ್ ಎಂಬುದು ಕಲ್ಪನೆಗೂ ನಿಲುಕದ ವಿಷಯವಾಗಿತ್ತು. ಟಿವಿ ಕೂಡ ಶೈಶವಾವಸ್ಥೆಯಲ್ಲಿತ್ತು. ಅಂತಹ ಕಾಲದಲ್ಲಿ ಓದುಗರಿಗೆ ಕುಚುಕು ಕೊಡುವ, ಕಚಗುಳಿ ಹಾಕುವ ಜೋಕುಗಳನ್ನು ಬರೆದವರು ಬೀಇಜಿ.ಅವರ ‘ತಿಂಮನ ತಲೆ’ ಬಂದಿದ್ದು 1950ರಲ್ಲಿ. ಅದು ಹಾಗೂ ‘ಬೆಳ್ಳಿ ತಿಂಮ ನೂರೆಂಟು ಹೇಳಿದ’, ‘ತಿಂಮನ ತಲೆ’, ‘ತಿಮ್ಮಿಕ್ಷನರಿ’ ಪುಸ್ತಕಗಳಲ್ಲಿರುವ ಅದ್ಭುತ ಜೋಕುಗಳನ್ನು ಕನ್ನಡ ಸಾರಸ್ವತ ಲೋಕದಲ್ಲಿ ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ.
ಅಮೆರಿಕದ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯಲ್ಲಿ ಬರೆಯುತ್ತಿದ್ದ ಅಂಕಣದಲ್ಲಿ ಹಾಸ್ಯಕ್ಕೆ ಹೊಸ ಭಾಷ್ಯ ಬರೆದವರು ಆರ್ಟ್ ಬುಕ್‌ವಾಲ್ಡ್. ಅವರದ್ದು ರಾಜಕೀಯ ವಿಡಂಬನೆ. ಆದರೆ ಬೀchiಯವರು ಎಲ್ಲ ಗಂಭೀರ ವಿಷಯಗಳ ಬಗ್ಗೆಯೂ ವಿಡಂಬನೆ ಮಾಡುತ್ತಿದ್ದರು.
ಇದು ನಟನೆಯಲ್ಲ
ತಿಂಮ ಕಂಡಿದ್ದ ಜೀವನದ ನಾನಾ ಮುಖಗಳಲ್ಲಿ ನಾಟಕ ಕಂಪನಿಯ ಬಾಳೂ ಒಂದು. ಹರಿಶ್ಚಂದ್ರನಲ್ಲಿ ನಕ್ಷತ್ರಿಕ, ರಾಮಾಯಣದಲ್ಲಿ ಮಾರೀಚ, ಕೃಷ್ಣಲೀಲೆಯಲ್ಲಿ ಕಂಸ ಮುಂತಾದ ‘ಪಾರ್ಟು’ಗಳು ತಿಂಮನವು.
ಸಿನಿಮಾ ಯುಗದಲ್ಲಿ ತಿಂಮನ ನಾಟಕವನ್ನು ಯಾರು ನೋಡಬೇಕು? ಸಾಯುವಷ್ಟು ಜೀವವಿಲ್ಲದ ಕಾರಣ, ಹಾಗೂ-ಹೀಗೂ ಬದುಕಿದ್ದಿತು ನಾಟಕ ಕಂಪನಿ.
ಅದೇನೋ ಕಾಯಿಲೆ ಎಂದು ತಿಂಮ ಬಂದ ಡಾಕ್ಟರರ ಬಳಿ. ಕಾಂಪ್ಲಿಮೆಂಟರಿ ‘ಪಾಸ್’ನಿಂದ ನಾಟಕ ನೋಡಿದ್ದ ಡಾಕ್ಟರರು ಮುಲಾಜಿಗೆ ಔಷಧ ಕೊಡಲೇಬೇಕಾಯಿತು.
ಮೂರು ಗುಳಿಗೆಗಳನ್ನು ಕೈಗಿಟ್ಟು ಹೇಳಿದರು,
‘ಊಟವಾದ ಮೇಲೆ ಒಂದೊಂದರಂತೆ ಮೂರು ಬಾರಿ ಇವನ್ನು ತೆಗೆದುಕೊ. ಆಮೇಲೆ ನನಗೆ ಬಂದು ಹೇಳು. ತಿಳಿಯಿತೇನಯ್ಯಾ?’
ತಲೆಯಾಡಿಸಿ ಹೋದ ತಿಂಮ. ಆಮೇಲೆ ಅವನೆಲ್ಲಿಯೋ, ಡಾಕ್ಟರೆಲ್ಲಿಯೋ!
ಎರಡು ತಿಂಗಳ ನಂತರ ರಸ್ತೆಯಲ್ಲಿ ಸಿಕ್ಕ ಡಾಕ್ಟರರು ಕೇಳಿದರು,
‘ಕಾಣಲೇ ಇಲ್ಲವಲ್ಲಯ್ಯ ಮತ್ತೆ? ನನಗೆ ಹೇಳಬೇಡವೇ ನೀನು ಗುಳಿಗೆಯ ಪರಿಣಾಮವೇನೆಂಬುದ?’
‘ಮೂರು ಗುಳಿಗೆಗಳು ಮುಗಿದ ನಂತರ ಅಲ್ಲವೇನು ಸ್ವಾಮೀ, ನಾನು ನಿಮ್ಮನ್ನು ಕಾಣಬೇಕಾದುದು?’
ಜೇಬಿನಿಂದ ಹೊರತೆಗೆದು ಎರಡು ಗುಳಿಗೆಗಳನ್ನು ತೋರಿಸಿದ.
‘ಏಕಯ್ಯಾ ತೆಗೆದುಕೊಳ್ಳಲಿಲ್ಲ? ನಾನು ಕೊಟ್ಟೇ ಎರಡು ತಿಂಗಳಾಗುತ್ತ ಬಂದಿತು?’
‘ಉಂಡ ನಂತರ ತೆಗೆದುಕೋ ಎಂದು ಹೇಳಿದ್ದಿರಿ. ಊಟ?’
ಕಡೇ ಪರೀಕ್ಷೆ
ತಿಂಮನ ಅಜ್ಜ ತಮ್ಮ ಕೋಣೆಯಿಂದ ಹೊರಕ್ಕೇ ಬರುತ್ತಿರಲಿಲ್ಲ. ಅವರಾಯಿತು ಅವರ ಗ್ರಂಥಾವಲೋಕನವಾಯಿತು. ತಿಂಮನ ತಮ್ಮನಿಗೆ ಆಶ್ಚರ್ಯವಾಯಿತು. ಅಣ್ಣನನ್ನು ಕೇಳಿದ- ‘ಅದೇನು ಅಜ್ಜ ಅಷ್ಟು ಓದುತ್ತಿದ್ದಾರೆ? ಅವರಿಗೂ ಪರೀಕ್ಷೆ ಇದೆಯೇ?’
ತಿಂಮ ತಮ್ಮನಿಗೆ ಸಮಾಧಾನ ಹೇಳಿದ.
‘ಹೌದು. ಭಗವದ್ಗೀತೆ ಬಾಯಿಪಾಠ ಮಾಡುತ್ತಿದ್ದಾರೆ- ಕಡೇ ಪರೀಕ್ಷೆ ಬಂತಲ್ಲಾ ಅವರಿಗೆ?!’
ಮಾತು ಕೇಳುವ ಹೆಂಡತಿ
‘ತಿಂಮಾ?’
‘ಏನು ಸ್ವಾಮಿ?’
‘ನನ್ನ ಹೆಂಡತಿ ನನ್ನ ಮಾತನ್ನು ಕೇಳುವುದೇ ಇಲ್ಲ. ನಿನ್ನ ಹೆಂಡತಿ?’
‘ಚೆನ್ನಾಗಿ ಕೇಳಿದಿರಿ. ಯಾರು, ನನ್ನ ಹೆಂಡತಿಯೇ?’
‘ಹೌದು. ಕೇಳುತ್ತಾಳೇನಯ್ಯಾ ನಿನ್ನ ಮಾತು?’
‘ಏನು ಸ್ವಾಮಿ. ಹಾಗನ್ನುತ್ತೀರಿ? ಬೇರೆ ಸ್ತ್ರೀಯರೊಟ್ಟಿಗೆ ನಾನು ಮಾತನಾಡುತ್ತಿರುವಾಗ ಎಷ್ಟು ಚೆನ್ನಾಗಿ ಕಿವಿಗೊಟ್ಟು ಕೇಳುತ್ತಾಳೆ ಗೊತ್ತೆ?!’
ಅನುಮಾನ ಪರಿಹಾರ
‘ನೀವು ನನಗೆ ಮೋಸ ಮಾಡಬೇಡಿ. ನನ್ನನ್ನು ಬಿಟ್ಟು ಬೇರಾರನ್ನೂ ಪ್ರೀತಿಸುತ್ತಿಲ್ಲ ತಾನೆ?’
‘ಛೆ! ಎಲ್ಲಾದರೂ ಉಂಟೆ?’
ತಿಂಮ ತನ್ನ ಪ್ರೇಯಸಿಗೆ ಸಮಾಧಾನ ಹೇಳಿದ.
‘ಹಾಗಿದ್ದರೆ ನನಗೆ ಈಗಲೇ ಹೇಳಿಬಿಡಿ. ನಂಬಿಕೆ ಹುಟ್ಟಿಸಿ ಆಮೇಲೆ ನನ್ನ ಎದೆ ಒಡೆಯುವಂತೆ ಮಾಡಬೇಡಿ.’
‘ನಿಜವಾಗಿಯೂ ಮತ್ತಾರೂ ಇಲ್ಲ. ನೀನೇಕೆ ಹಾಗೆಲ್ಲ ಮನೋವ್ಯಥೆ ಮಾಡಿಕೊಳ್ಳುತ್ತೀ?’
‘ಅಹುದು. ನನಗೆ ಸುಳ್ಳು-ಠಕ್ಕು, ಮೋಸ-ವಂಚನೆ ಸರಿ ಬರುವುದಿಲ್ಲ. ಅಂತಹುದೇನಾದರೂ ಇದ್ದರೆ ಈಗಲೇ ಹೇಳಿಬಿಡಿ.’
‘ಯಾರನ್ನೂ ನಾನು ಕಣ್ಣೆತ್ತಿ ಕೂಡ ನೋಡುವುದಿಲ್ಲ ಮಹರಾಯಿತಿ. ಈ ಹುಚ್ಚು ನಿನಗೆಲ್ಲಿಂದ ಹಿಡಿಯಿತು?’
‘ಬೇರಾರೂ ಇಲ್ಲವೆಂದು ಆಣೆ ಮಾಡಿ ಹಾಗಾದರೆ.’
ತಿಂಮ ಹತ್ತು ಬಾರಿ ಆಣೆ, ಪ್ರಮಾಣ ಮಾಡಿದ.
ಪ್ರೇಯಸಿಯ ಮನಸ್ಸಿಗೆ ಆಗ ನೆಮ್ಮದಿಯಾಯಿತು.
‘ಆ ಅನುಮಾನವೇಕೆ ಬಂತು ರಾಧಾ?’
‘ರಾಧಾ! ಅದು ಯಾರ ಹೆಸರು? ಯಾರವಳು?’
ಅದು ಮುಖ್ಯ
ಹೊಸದಾಗಿ ಮಂತ್ರಿಯಾದೊಬ್ಬರ ಸಂದರ್ಶನಕ್ಕೆ ಬಂದ, ಪತ್ರಿಕಾ ವರದಿಗಾರನಾದ ತಿಂಮ.
‘ಏನಾದರೊಂದು ಹೇಳಿಕೆ ಕೊಡಿ, ಮಹಾಸ್ವಾಮೀ!’
‘ಏನಿದೆ ಹೇಳಲು?’
ಪ್ರಾಮಾಣಿಕವಾಗಿ ನುಡಿದು, ಕೈ ತಿರುವಿ ತಾರಮ್ಮಯ್ಯ ಆಡಿಬಿಟ್ಟರು ಆ ಮಂತ್ರಿಗಳು.
‘ಏನೂ ಇಲ್ಲವೆಂಬುದು ಎಲ್ಲರಿಗೂ ಗೊತ್ತಿದೆ ಸ್ವಾಮೀ. ಪತ್ರಿಕೆಯಲ್ಲಿ ಹಾಕಲಂತೂ ಬೇಕಲ್ಲ? ಏನೇ ಆದರೂ ಒಂದು ಹೇಳಿ- ಇಬ್ಬರ ಕೆಲಸವೂ ಉಳಿಯಬೇಕು, ನೋಡಿ.’
ಅಳದ ಮಗು
‘ರಾತ್ರಿ ಎಲ್ಲ ನಿದ್ರೆಯೇ ಇಲ್ಲವೋ ತಿಂಮಾ? ಸಾಕು-ಸಾಕಾಗಿ ಹೋಯಿತು.’
‘ಏಕಮ್ಮಾ, ಏನಾದರೂ ಓದುತ್ತಿದ್ದೀರಾ?’
‘ಓದು! ಈ ಮಗುವನ್ನು ಕಟ್ಟಿಕೊಂಡು ಓದಿದಂತೆಯೇ ಇದೆ. ಅತ್ತದ್ದೇ ಅತ್ತದ್ದು ಇಡೀ ರಾತ್ರಿ ತೆರೆದ ಬಾಯಿ ಮುಚ್ಚಿಲ್ಲ ಇದು’.
‘ನಮ್ಮ ಮಗುವೂ ಹಾಗೆಯೇ ಅಳುತ್ತಿತ್ತು ಆಗೆಲ್ಲವೂ.’
‘ಈಗ ಅಳುವುದಿಲ್ಲವೇ? ಏನು ಮಾಡಿದಿ?’
‘ಮುಚ್ಚಿದ ಬಾಯಿ ತೆರೆದಿಲ್ಲ ನೋಡಿ, ಅವನು.’
ಜೇಬು-ತಲೆ
ಬೆಂಗಳೂರು ನಗರವನ್ನು ನೋಡಲು ಹೊಸದಾಗಿ ಬಂದ ತಿಂಮ. ಅಲ್ಲಿ ಇಲ್ಲಿ ನೋಡುತ್ತ ಊರೆಲ್ಲ ಸುತ್ತಿಿದ, ಕೈಲಿದ್ದ ಕಾಸು ಒಳ್ಳೆಯ ವೇಗದಲ್ಲಿ ಓಡುತ್ತಿತ್ತು.
ಕತ್ತಲಾದ ಮೇಲೆ ಒಬ್ಬನೇ ಬರುತ್ತಿದ್ದ ತಿಂಮನನ್ನು ಮೂವರು ಗೂಂಡಾಗಳು ಹಿಡಿದರು,
‘ಜೇಬಿನಲ್ಲಿರುವ ಹಣವನ್ನೆಲ್ಲಾ ಸುರಿದು ಮುಂದೆ ಹೋಗು’- ಎಂದರು.
‘ಕೊಡುವುದಿಲ್ಲ’
ತಕರಾರು ಹೂಡಿದ ತಿಂಮ.
‘ನಿನ್ನ ತಲೆ ತೆಗೆಯುತ್ತೇವೆ.’
‘ಅಗತ್ಯವಾಗಿ ತೆಗೆಯಿರಿ. ತಲೆ ಇಲ್ಲದೆ ವರ್ಷಗಟ್ಟಲೆ ಇರಬಹುದು ನಿಮ್ಮ ಬೆಂಗಳೂರಿನಲ್ಲಿ. ಹಣವಿಲ್ಲದೆ ಕಾಲು ಗಂಟೆಯೂ ಸಾಧ್ಯವಿಲ್ಲ.’
—
ಜೋಕುಗಳಷ್ಟೇ ಅಲ್ಲ, ಅದ್ಭುತ “One Liners’ಗಳನ್ನೂ ಬರೆಯುತ್ತಿದ್ದರು.
– ವಿದ್ಯೆ ಎನ್ನುವುದು ಮೋಟಾರ್ ಕಾರ್ ಇದ್ದಂತೆ. ಎಲ್ಲಿಯಾದರೂ ಕೆಲಸ ಮಾಡಲು ಹೋಗುವಾಗ ಅದನ್ನು ಹೊರಗಡೆಯೇ ಬಿಟ್ಟು ಒಳಗಡೆ ಹೋಗಬೇಕು.
– ಪ್ರತಿಯೊಬ್ಬನಿಗೂ ಗುಟ್ಟಾಗಿಡಲಾರದಂಥದೊಂದು ಅವನ ಜೀವನದಲ್ಲಿ ಇದ್ದೇ ಇದೆ- ತನ್ನ ಬಗ್ಗೆ ತನಗೇ ಇರುವ ತಪ್ಪು ಅಭಿಪ್ರಾಯ?
– ಆಸ್ಪದವಿಲ್ಲದಾಗ ಎಲ್ಲ ಕಳ್ಳರೂ ಪ್ರಾಮಾಣಿಕನ ಅಪ್ಪಂದಿರೇ!
– ಅನ್ನ ಕೊಡುವ ಪೈರಿನೊಡನೆ ಕಸ-ಕಡ್ಡಿ ಹುಟ್ಟುತ್ತವೆ, ಏನೂ ಕೊಡದ ಕೀರ್ತಿಯೊಡನೆ ಚಿಕ್ಕ, ಪುಟ್ಟ ಶತ್ರುಗಳೂ ಹುಟ್ಟುತ್ತಾರೆ.
– ಯಾರ ಬಗ್ಗೆಯೇ ಆಗಲಿ, ಅವರ ಹಿಂದೆ ಆಡುವುದು ಅಷ್ಟು ಒಳ್ಳೆಯದಲ್ಲ. ಕೆಲವರ ಬಗ್ಗೆಯಂತೂ ಇದಿರಿನಲ್ಲಿ ಆಡುವುದು ಎಷ್ಟೂ ಒಳ್ಳೆಯದಲ್ಲ.
– ನಾಗರಿಕತೆ ಒಂದನ್ನಂತೂ ತಪ್ಪದೆ ಕಲಿಸುತ್ತದೆ- ನಾಗರಿಕತೆಯನ್ನು ಸಹಿಸುವುದು!
– ಇಂದು ಒಂದು ಶಾಲೆಯನ್ನು ಸ್ಥಾಪಿಸು. ಮುಂದೆ ಎಂದಾದರೂ ಎರಡು ಜೈಲು ತಾವಾಗಿಯೇ ಮುಚ್ಚುತ್ತವೆ.
– ಆಳವು ಕಡಿಮೆಯಾದಂತೆಲ್ಲ ಉದ್ದದಲ್ಲಿ ಜಾಸ್ತಿಯಾಗುವ ರಬ್ಬರ್‌ನಂಥದಕ್ಕೆ ಭಾಷಣ ಎಂದು ಹೆಸರು.
– ಮಾನವ ಜೀವನವು ಒಂದು ಟ್ಯಾಕ್ಸಿ, ಆಯುಸ್ಸು ಅದರ ಮೀಟರ್. ಓಡುತ್ತಿರಲಿ ನಿಂತಿರಲಿ, ಅಯುಸ್ಸು ಮತ್ತು ಮೀಟರ್ ಓಡುತ್ತಲೇ ಇರುತ್ತವೆ.
– ‘ಪ್ರೈವೇಟ್ ಟ್ಯೂಷನ್ ’- ವಿದ್ಯಾರ್ಥಿಗೆ ಔಷಧವಾಗಿರಬೇಕು. ಔಷಧವೇ ಅನ್ನವಾದರೆ ಗತಿ?
ಇವತ್ತು ಬೀChiಯವರ ಹಾಸ್ಯ ಚಟಾಕಿಗಳನ್ನು ಹಾರಿಸಿ ಪ್ರಾಣೇಶ ಆಚಾರ್ ‘ಗಂಗಾವತಿ ಬೀChi’ ಎಂದೇ ಖ್ಯಾತರಾಗಿದ್ದಾರೆ. ಸುಧಾ ಬರಗೂರು, ರಿಚರ್ಡ್ ಲೂಯಿಸ್, ಕೃಷ್ಣೇಗೌಡ ಮುಂತಾದವರೂ ಇಂದು ನಮ್ಮನ್ನೆಲ್ಲ ನಗಿಸುತ್ತಿರುತ್ತಾರೆ, ನಗೆಹಬ್ಬಗಳು ನಡೆಯುತ್ತಿರುತ್ತವೆ. ಆದರೆ ನಮ್ಮನ್ನೆಲ್ಲ ಬಾಯ್ತುಂಬ ನಗಿಸಿದ ಮೊದಲ ವ್ಯಕ್ತಿ ಬೀChi. ಏಪ್ರಿಲ್ 23 ಬೀchi ಅವರ ಜನ್ಮದಿನ ಹಾಗಾಗಿ ತಡವಾದರು ಮತ್ತೆ ನೆನಪಿಸಿಕೊಳ್ಳಬೇಕೆನಿಸಿತು.
Published on April 28, 2017 23:44
April 25, 2017
April 15, 2017
ನಮ್ಮ ಕಾರ್ಯಕರ್ತರ ಕ್ಷಮೆಯಾಚಿಸುತ್ತಾ ಹೀಗೊಂದು ಮನದಾಳದ ವಿನಮ್ರ ಅರಿಕೆ!
ನಮ್ಮ ಕಾಲದಲ್ಲಿ…. ಅನ್ನುತ್ತಾ ಬಹಳ ವರ್ಷಗಳ ಅಥವಾ ದಶಕಗಳ ಹಿಂದಕ್ಕೆ ಹೋಗಬೇಕಿಲ್ಲ. ಮೊನ್ನೆ ಮೊನ್ನೆ ಅಂದರೆ ಕಳೆದ ಡಿಸೆಂಬರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಒಂದು ಚಿತ್ರ ವೈರಲ್ ಆಗಿದ್ದು ನಿಮ್ಮೆಲ್ಲರಿಗೂ ನೆನಪಿರಬಹುದು.
ಅಂದು ವಾರಣಾಸಿಯಲ್ಲಿ ಬಿಜೆಪಿ ಕಾರ್ಯಕರ್ತರ ಬೈಠಕ್ ಒಂದು ನಡೆಯುವುದಿತ್ತು. ಮುಂಬರುವ ಉತ್ತರ ಪ್ರದೇಶದ ಚುನಾವಣೆಯ ಬಗ್ಗೆ ಚರ್ಚಿಸಲು ಆ ರಾಜ್ಯದ ಸುಮಾರು 26,000ಕ್ಕೂ ಹೆಚ್ಚಿನ ಕಾರ್ಯಕರ್ತರು ಬೈಠಕಿಗೆ ಅಪೇಕ್ಷಿತರಿದ್ದರು. ಅದರ ಹಿಂದಿನ ದಿನ ಪಕ್ಷ ತನ್ನ ಎಲ್ಲಾ ಕಾರ್ಯಕರ್ತರಿಗೂ ಸಭೆಯಲ್ಲಿ ಊಟದ ವ್ಯವಸ್ಥೆ ಇರುವುದಿಲ್ಲ, ಎಲ್ಲರೂ ತಮ್ಮ ಊಟ-ಉಪಹಾರವನ್ನು ಮನೆಯಿಂದ ತರತಕ್ಕದ್ದು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿತ್ತು. ಇದರಿಂದ ಕೆಲವು ಕಾರ್ಯಕರ್ತರು ಒಳಗೊಳಗೆ ಸಿಡಿಮಿಡಿಗೊಂಡರು. ಕೆಲವರು ಒಳಗೊಳಗೇ ಅಸಮಾಧಾನಗೊಂಡರು. ಒಪ್ಪೊತ್ತಿನ ಊಟ ಕೊಡಲಾಗದಿದ್ದರೆ ಚುನಾವಣೆಯಲ್ಲಿ ಗೆಲ್ಲುವುದಾದರೂ ಹೇಗೆ ಎಂದು ಕೆಲವರು ಗೊಣಗಿಕೊಂಡರು. ಆದರೆ ಸಭೆಯ ದಿನ ಕಾರ್ಯಕರ್ತರು ತಮ್ಮ ತಮ್ಮ ಬುತ್ತಿ ಬಿಚ್ಚುತ್ತಿರುವಾಗ ಎಲ್ಲರಿಗೂ ಅಚ್ಚರಿ, ಎಲ್ಲರ ಬಾಯಿಯೂ ಕಟ್ಟಿಹೋಗಿತ್ತು. ಏಕೆಂದರೆ ಸಾಕ್ಷಾತ್ ಪ್ರಧಾನಮಂತ್ರಿಗಳೇ ಸಭೆಗೆ ಊಟದ ಡಬ್ಬಿಯನ್ನು ತಂದಿದ್ದರು! ದೇಶಾದ್ಯಂತ ಅದು ಸುದ್ಧಿಯಾಯಿತು. ಅಂದು ಇಡೀ ದೇಶದ ಮೂಲೆ ಮೂಲೆಯಲ್ಲಿರುವ ಬಿಜೆಪಿ ಕಾರ್ಯಕರ್ತರು ಖುಷಿ ಪಟ್ಟಿದ್ದರು. ಹಳೆಯ ಕಾರ್ಯಕರ್ತರಿಗೆ ಅಂದಿನ ಪ್ರಧಾನಿಗಳ ಊಟದ ಬುತ್ತಿ ತಮ್ಮ ಜನಸಂಘದ ಕಾಲವನ್ನು ನೆನಪಿಗೆ ತಂದಿತ್ತು. ಇದು ಯಾವ ಕಾಲಕ್ಕೂ ಕೆಟ್ಟುಹೋಗುವ ಪಕ್ಷವಲ್ಲ , ಯಾವತ್ತಿದ್ದರೂ ನಮ್ಮದು ವಿಭಿನ್ನ ಪಕ್ಷ ಎಂದು ಹೆಮ್ಮೆ ಪಟ್ಟುಕೊಂಡಿದ್ದರು. ನಮ್ಮ ಕಾರ್ಯಕರ್ತರು ಖುಷಿಯಾಗಿದ್ದರೆ ಎಂತಹ ಮಾಯೆ ಸಂಭವಿಸಬಹುದು ಅನ್ನುವುದಕ್ಕೆ ಮಾರ್ಚ್ 11ರ ಫಲಿತಾಂಶ ಸಾಕ್ಷೀಭೂತವಾಯಿತು. ಬಿಜೆಪಿ 325 ಸೀಟುಗಳನ್ನು ಗೆದ್ದು ಉತ್ತರ ಪ್ರದೇಶದಲ್ಲಿ ದಾಖಲೆ ನಿರ್ಮಾಣ ಮಾಡಿತು.
ಭಾಜಪಾ ಮತ್ತು ಅದರ ಹಿಂದಿನ ಜನಸಂಘ ಎಂದರೆ ಹಾಗೆ!
ಅದು ಕಾರ್ಯಕರ್ತರದ್ದೇ ಬೆವರಿನ ಫಲ. ಕಾರ್ಯಕರ್ತರೇ ಉತ್ತು, ಬಿತ್ತಿ, ನೀರುಣಿಸಿ, ಬೆವರು ಹರಿಸಿ ಕಟ್ಟಿದ ಪಕ್ಷ. ಅದಿಂದು ಹೆಮ್ಮರವಾಗಲು ಕಾರಣ ಅಂದಿನ ಆ ಬೆವರು, ನೀರುಣಿಸಿದ ಕಾರ್ಯಕರ್ತರ ಪ್ರಯತ್ನ. ನೀವು ಭಾಜಪಾದ ಹುಟ್ಟು, ಬೆಳವಣಿಗೆಯ ಕಥೆಯನ್ನು ದೇಶದ ಯಾವುದೇ ಭಾಗದ ಉದಾಹರಣೆ ಕೊಟ್ಟು ಹೇಳಿದರೂ ಒಂದು ಭಗೀರಥ ಪ್ರಯತ್ನದ ಕಥೆಯಿಲ್ಲದೆ ಅದನ್ನು ಹೇಳಲು ಸಾಧ್ಯವಾಗುವುದಿಲ್ಲ. ಕೊಡಗಿನ ಶ್ರೀಮಂತ ಕಾಫಿ ಪ್ಲಾಂಟರುಗಳ ಪಾದಯಾತ್ರೆ, ಮನೆಯಿಂದ ಹೊತ್ತೊಯ್ದ ಊಟದ ಬುತ್ತಿಯನ್ನು ಎಲ್ಲೋ ಹೊಳೆಬದಿಯಲ್ಲಿ ಕುಳಿತು ಉಂಡಂತೆ, ಎಲ್ಲೋ ಉತ್ತರದಲ್ಲಿ ಅನಾಮಿಕ ಕಾರ್ಯಕರ್ತನೊಬ್ಬ ಊರೂರು ತಿರುಗಿ ಪಕ್ಷವನ್ನು ಕಟ್ಟಿರುತ್ತಾನೆ. ಹಲವು ಬಾರಿ ಆತ ಪ್ರಾಣವನ್ನೂ ಕಳೆದುಕೊಂಡಿದ್ದಾನೆ. ತಮ್ಮ ನಾಯಕರುಗಳೇ (ಶಾಮ ಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯ) ಪ್ರಾಣವನ್ನು ಕೊಟ್ಟಿರುವಾಗ ಈ ಪ್ರಾಣದ ಮೇಲೇಕೆ ಹಂಗು ಎನ್ನುವ ಭಾವದ ಕಾರ್ಯಕರ್ತನನ್ನು ವಿಶ್ವ ರಾಜಕೀಯದಲ್ಲಿ ಕಾಣುವುದು ಬಹುಶಃ ಭಾರತೀಯ ಜನತಾ ಪಾರ್ಟಿಯಲ್ಲಿ ಮಾತ್ರ. ಎಲ್ಲರೂ ಕಾರ್ಯಕರ್ತರೇ. ಯಾರಲ್ಲೂ ರಾಗವಿಲ್ಲ, ಯಾರಲ್ಲೂ ದ್ವೇಷವಿಲ್ಲ. ಯಾರಿಗೆ ಯಾರೂ ಪ್ರತಿಸ್ಪರ್ಧಿಯಲ್ಲ. ಇನ್ನು ಚುನಾವಣೆಗೆ ಅಭ್ಯರ್ಥಿ ಯಾರು? ಇಂಥ ಸಂದಿಗ್ದವನ್ನು ಪದೇ ಪದೆ ಅನುಭವಿಸಿದ್ದು ಮತ್ತು ಎದುರಿಸಿದ್ದೂ ಕೂಡಾ ಬಿಜೆಪಿ-ಜನಸಂಘ ಬಿಟ್ಟರೆ ಬೇರೆ ಪಕ್ಷಗಳಿಲ್ಲ! ಸೋಲಲೆಂದೇ ಸ್ಪರ್ಧಿಸುವ ಆ ಅಭ್ಯರ್ಥಿಯ ಮನಸ್ಥಿತಿಯನ್ನು ಇಂದಿನ ಕಾಲಮಾನದಲ್ಲಿ ನಿಂತು ಆಲೋಚಿಸಿದರೆ ‘ಪಾರ್ಟಿ ವಿಥ್ ಡಿಫರೆನ್ಸ್’ ಎನ್ನುವ ಮಾತು ಸುಲಭವಾಗಿ ಅರ್ಥವಾಗುತ್ತದೆ. ಒಂದು ಕಾಲದಲ್ಲಿ ಕೇವಲ ಎರಡು ಸೀಟುಗಳಿಂದ ಇಡೀ ಸಂಸತ್ತಿನಲ್ಲಿ ತಮ್ಮ ಛಾಪು ಒತ್ತಿದ್ದ ಪಕ್ಷದ ಹಿಂದಿದ್ದ ಶಕ್ತಿಯೆಂದರೆ ಇಂಥ ಕಾರ್ಯಕರ್ತರ ಬದ್ಧತೆ, ಶ್ರಮ ಮತ್ತು ನಿಷ್ಠೆಯೊಂದೇ. ಆ ಶಕ್ತಿ ಮುಂದೊಂದು ದಿನ ಇಡೀ ಸಂಸತ್ತನ್ನು ಆವರಿಸಿಕೊಳ್ಳುವಂತೆ ಬೆಳೆಯಿತು. ಪಕ್ಷ ಬೆಳೆದಂತೆಲ್ಲಾ ಕಾರ್ಯಕರ್ತ ವಿವರಿಸಲಾಗದ ಆನಂದವನ್ನು ಅನುಭವಿಸಿದ. ತನ್ನ ಪಕ್ಷ ಅಧಿಕಾರ ಹಿಡಿಯುವುದನ್ನು ನೋಡಬೇಕೆಂದು ಆಸೆಪಟ್ಟ. ದೇಶಾದ್ಯಂತ ಇಂಥ ಅದೆಷ್ಟು ಉದಾಹರಣೆಗಳು ನಮ್ಮ ಮುಂದಿವೆಯೆಂದರೆ ಭಾಜಪಾ ಎಂದರೆ ರಾಜಕೀಯ ವಿಶ್ಲೇಷಕರಲ್ಲೂ ಒಂದು ಆಪ್ತವಾದ ಭಾವ ಮೂಡುವಷ್ಟು.
ಇಲ್ಲಿ ಕಾರ್ಯಕರ್ತ ಎಂದರೆ ಯಾರೂ ದೊಡ್ಡವರಲ್ಲ ಎಂಬ ಮೌಲ್ಯಗಳನ್ನು ಹೊತ್ತವರ ಒಂದು ಪಡೆ, ಅದೆಷ್ಟೋ ಪ್ರತಿಭಟನೆಗಳು, ಹೋರಾಟಗಳು, ಹರತಾಳಗಳು, ಲಾಠಿಯ ಏಟು, ಎದುರಾಳಿಗಳ ಹೊಡೆತಗಳ ತರುವಾಯವೂ ಕಾರ್ಯಕರ್ತ ಇಟ್ಟ ಹೆಜ್ಜೆ ಹಿಂದಿಡುತ್ತಿರಲಿಲ್ಲ. ದೇಶಾದ್ಯಂತ ಮೂಲ ಸೌಲಭ್ಯಗಳಿಂದ ಹಿಡಿದು ವಿದೇಶಾಂಗ ನೀತಿಯವರೆಗೂ ತೀವ್ರವಾದ ಪ್ರತಿಭಟನೆಗಳು ನಡೆಯುತ್ತಿದ್ದವು. ಮೌಲ್ಯಾನುಷ್ಠಾನಕ್ಕಾಗಿ ಯೋಜಿತ ಕಾರ್ಯತಂತ್ರಗಳು ರೂಪುಗೊಳ್ಳುತ್ತಿದ್ದವು. ಕೆಲವು ಪೈಸೆಗಳಷ್ಟು ಬಸ್ ಪ್ರಯಾಣ ದರ ಹೆಚ್ಚಾದರೂ ರಸ್ತೆ ತಡೆ ನಡೆಯುತ್ತಿದ್ದವು. ಮಂಗಳೂರಿನಲ್ಲಿ ಕರಂಬಳ್ಳಿ ಸಂಜೀವ ಶೆಟ್ಟರು ಕೇವಲ ಕಾರ್ಯರಾಗಿದ್ದುಕೊಂಡೇ ಸಹಕಾರಿ ರಂಗದಲ್ಲಿ ಕ್ರಾಂತಿಯನ್ನು ಮಾಡಿದ್ದರು, ಪ್ರಭಾಕರ ಘಾಟೆಯವರು ಕಮ್ಯುನಿಸ್ಟ್ ಕಾರ್ಮಿಕ ಸಂಘಟನೆಗಳನ್ನು ಎದುರುಹಾಕಿಕೊಂಡು ಸಂಘಟನೆಯನ್ನು ಕಾರ್ಮಿಕರ ಮಧ್ಯೆ ಕೊಂಡೊಯ್ದಿದ್ದರು. ಪ್ರತಿ ಜಿಲ್ಲೆಯಲ್ಲಿ ಪ್ರತಿ ಊರಲ್ಲೂ ಅಂಥ ಹತ್ತಾರು ಕಾರ್ಯಕರ್ತರು. ಪ್ರತಿ ಕಾರ್ಯಕರ್ತನೂ ಮತ್ತೊಬ್ಬ ಕಾರ್ಯಕರ್ತನನ್ನು ದೇವರಂತೆ ಕಂಡರು. ಅಂಕೆ ಸಂಖ್ಯೆಗಳ ಆಟಕ್ಕಿಂತ, ಅಧಿಕಾರಕ್ಕಿಂತ ಮಿಗಿಲಾಗಿ ನಂಬಿದ ಸಿದ್ಧಾಂತದ ಅನುಷ್ಟಾನಕ್ಕಾಗಿ ದುಡಿದರು. ಹಾಗಾಗಿ ಮೊದಲು ಪಕ್ಷ ಸೋತಾಗ ಯಾರೂ ಟೀಕೆ ಮಾಡಬೇಕೆನಿಸುತ್ತಿರಲಿಲ್ಲ. ಪ್ರತೀ ಫಲಿತಾಂಶ ಘೋಷಣೆಯಾದಾಗಲೂ ವಿಜೃಂಭಣೆಯ ವಿಜಯೋತ್ಸವ ನಡೆಯುತ್ತಿತ್ತು. ಕಾರಣ ಪಕ್ಷದ ಮತಗಳ ಪ್ರಮಾಣದಲ್ಲಿ ಏರಿಕೆಯಾಗಿದೆ ಅಂತ!
ಆದರೆ…
ನಂಜನಗೂಡು, ಗುಂಡ್ಲುಪೇಟೆ ಸೋಲು ಯಾಕೋ ನಮ್ಮ ಕಾರ್ಯಕರ್ತರ ಸಹನೆಯನ್ನೇ ಅಲ್ಲಾಡಿಸಿದಂತೆ ಕಾಣುತ್ತಿದೆ. ಗುರುವಾರ ರಾತ್ರಿ ಫೇಸ್‍ಬುಕ್ ಗೋಡೆಯ ಮೇಲಿದ್ದ ಟೀಕೆ, ಟಿಪ್ಪಣಿಗಳನ್ನು ಒಂದೊಂದೇ ನೋಡುತ್ತಿದ್ದರೆ ನಮ್ಮ ಕಾರ್ಯಕರ್ತರು, ಹಿತೈಷಿಗಳ ಹತಾಶೆ, ನೋವು ತೀಕ್ಷ್ಣವಾಗಿ ಅಲ್ಲಿ ವ್ಯಕ್ತವಾಗಿತ್ತು. ನಮ್ಮ ಮೇಲಿನ ದ್ವೇಷ, ಮತ್ಸರದಿಂದ ಅವರೇನು ಟೀಕಿಸಿರಲಿಲ್ಲ. ಗೆಲ್ಲಲಾಗಲಿಲ್ಲವಲ್ಲಾ ಎಂಬ ಹತಾಶೆಯಿಂದ ನಮ್ಮ ಮೇಲೆ ಹರಿಹಾಯ್ದಿದ್ದರು. ಯಾವತ್ತೂ ಗೆದ್ದ ಹಿನ್ನೆಲೆಯಿಲ್ಲದ ಆ ಕ್ಷೇತ್ರಗಳಲ್ಲಿ ಸಹಜವಾಗಿಯೇ ಎದುರಾದ ಸೋಲಿಗೆ ಸಾಕಷ್ಟು ಕಾರಣಗಳನ್ನು ಕೊಡಬಹುದು. ಆದರೆ ಕಾರ್ಯಕರ್ತರಿಗಾಗಿರುವ ನೋವಿಗೆ ಅದು ಖಂಡಿತ ಮುಲಾಮು, ಸಾಂತ್ವನವಾಗುವುದಿಲ್ಲ. ಹಾಗಾಗಿ ಮೊದಲನೆಯದಾಗಿ ಕಾರ್ಯಕರ್ತರೇ, ದಯವಿಟ್ಟು ಕ್ಷಮಿಸಿ. ನಿಮ್ಮ ಪ್ರೀತಿ, ವಿಶ್ವಾಸ ಎಂಥದ್ದು ಎಂಬುದನ್ನು ಹೊರಗಿನವನಾಗಿಯೂ (ಪತ್ರಕರ್ತನಾಗಿ) ಬಲ್ಲೆ.
2008, ಮೇ 30 ರಂದು ವಿಧಾನಸೌಧದ ಮುಂದೆ ಸೇರಿದ್ದ ಜನಸಾಗರ ಇಂದಿಗೂ ಕಣ್ಣಮುಂದೆ ಬರುತ್ತದೆ.
ಆ ದಿನವನ್ನು ಬಿಜೆಪಿಗೆ ಮತ ಹಾಕದವರೂ ಮರೆಯಲು ಸಾಧ್ಯವಿಲ್ಲ. ಅದುವರೆಗೂ ಈ ರಾಜ್ಯ 18 ಮುಖ್ಯಮಂತ್ರಿಗಳನ್ನು ಕಂಡಿದ್ದರೂ ಬಿ.ಎಸ್. ಯಡಿಯೂರಪ್ಪನವರಿಗೆ ಕೊಟ್ಟಷ್ಟು ಪ್ರೀತಿ-ಆದರದಿಂದ ಬಹುಶಃ ಯಾರನ್ನೂ ಗದ್ದುಗೆ ಮೇಲೆ ಕೂರಿಸಿರಲಿಲ್ಲ. 1993ರಲ್ಲಿ ಡಾ. ರಾಜ್‍ಕುಮಾರ್ ಅವರಿಗೆ `ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ ವಿಧಾನಸೌಧದ ಮುಂಭಾಗ ಎಷ್ಟು ಕಳೆಗಟ್ಟಿತ್ತೋ ಅದನ್ನೂ ಮೀರಿಸುವಂತಿತ್ತು ಅಂದಿನ ಸಂಭ್ರಮ. ನಾನು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ… ಅಂತ ರೈತನ ಹೆಸರಿನಲ್ಲಿ ಪ್ರಮಾಣ ಮಾಡಿ ಪದಗ್ರಹಣ ಮಾಡುವಾಗ ಬಿಜೆಪಿ ಮತದಾರರ ಮುಖದಲ್ಲಿ ಕಂಡ ಆಹ್ಲಾದ ವರ್ಣನೆಗೆ ನಿಲುಕದ್ದು. 4, 17, 38, 42, 79 ಕೊನೆಗೆ 110 ಹೀಗೆ ಹಲವು ದಶಕಗಳ ಹೋರಾಟದ ನಂತರ ಬಿಜೆಪಿಗೆ ಅಧಿಕಾರ ದಕ್ಕಿತ್ತು. ಅಂಥದ್ದೊಂದು ದಿನಕ್ಕಾಗಿ ಜೀವನವಿಡೀ ಕಾದಿದ್ದರೇನೋ ಎಂಬಂತೆ ಬಿಜೆಪಿ ಮತದಾರರು ಅಂದು ಸಂಭ್ರಮಿಸಿದ್ದರು. ಮುಖ್ಯಮಂತ್ರಿಯಾಗಿದ್ದು ಯಡಿಯೂರಪ್ಪನವರಾದರೂ ಅಧಿಕಾರ ತಮಗೇ ದಕ್ಕಿದೆ ಎಂಬಂತೆ ಬಿಜೆಪಿ ಕಾರ್ಯಕರ್ತರು ಖುಷಿಪಟ್ಟಿದ್ದರು. ನಮ್ಮ ಸರಕಾರ ಬಂದಿದೆ, ಇನ್ನು ಮುಂದೆ ಭಯೋತ್ಪಾದನೆ, ಮತಾಂತರ, ಭ್ರಷ್ಟಾಚಾರ, ಅಲ್ಪಸಂಖ್ಯಾತರ ಉಪಟಳ ಇದ್ಯಾವ ವಿಷಯಗಳ ಬಗ್ಗೆಯೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೆಗಲ ಭಾರ ಇಳಿಸಿದವರಂತೆ ನಿಟ್ಟುಸಿರು ಬಿಟ್ಟಿದ್ದರು, ಸುಭದ್ರತೆಯ ಭಾವನೆಯೊಂದಿಗೆ ನಿರಾಳಗೊಂಡಿದ್ದರು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ವಾರಗಳಲ್ಲಿ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ನಡೆದಾಗಲೂ, ಇನ್ನೂ ಅನನುಭವಿಗಳು ಎಂದು ಜನ ಸರಕಾರವನ್ನು ಮಾಫಿ ಮಾಡಿದ್ದರು. ಅದರ ಬೆನ್ನಲ್ಲೇ ರಸಗೊಬ್ಬರ ಕೊರತೆ ಕಾರಣ ದಾವಣಗೆರೆಯಲ್ಲಿ ರೈತರು ದಂಗೆ ಎದ್ದಾಗಲೂ ಜನ ಶಂಕಿಸಿದ್ದು ವಿರೋಧ ಪಕ್ಷದವರ ಹುನ್ನಾರವನ್ನು. ಆಪರೇಷನ್ ಕಮಲಕ್ಕೆ ಕೈಹಾಕಿದಾಗಲೂ 110 ಸೀಟು ಗೆದ್ದಿದ್ದರೂ ಸುಮ್ಮನೆ ಕುಳಿತುಕೊಳ್ಳಬೇಕಾ, ಕಾಂಗ್ರೆಸ್-ಜೆಡಿಎಸ್‍ನವರಿಗೆ ಅಧಿಕಾರ ಬಿಟ್ಟುಕೊಡಬೇಕಾ ಎಂದು ಜನರೇ ಬಿಜೆಪಿಯ ಸಮರ್ಥನೆಗೆ ನಿಂತಿದ್ದರು. ಬಿಜೆಪಿ ಸರಕಾರದ ಬಗ್ಗೆ ಯಾರಾದರೂ ಟೀಕೆ ಮಾಡಿದರೆ, ಸಾಕು ಬಿಡ್ರೀ… ನಿಮ್ಮ ಕಾಂಗ್ರೆಸ್, ಜೆಡಿಎಸ್‍ನವರು 60 ವರ್ಷ ಮಾಡಿದ್ದೇನು ಅಂತ ಗೊತ್ತು, ನಿಮ್ಮಿಂದ ಪಾಠ ಕಲಿಯಬೇಕಿಲ್ಲ ಎಂದು ಮುಲಾಜಿಲ್ಲದೆ ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದರು. ನಮ್ಮ ಸರಕಾರ ಬಂದಿದೆ, ಅದನ್ನು ಉಳಿಸಿಕೊಳ್ಳಲು ಆಪರೇಷನ್ ಕಮಲದ ಅಗತ್ಯವಿದೆ, ಅನನುಭವದಿಂದಾಗಿ ಸಣ್ಣಪುಟ್ಟ ತಪ್ಪುಗಳಾಗುತ್ತವೆ, ಅಚಾತುರ್ಯಗಳು ಜರುಗುತ್ತವೆ ಎಂದು ಜನರೇ ಬಿಜೆಪಿ ವಕ್ತಾರರಂತೆ ಮಾತನಾಡುತ್ತಿದ್ದರು, ಸಮರ್ಥನೆಗೆ ನಿಲ್ಲುತ್ತಿದ್ದರು. ಅಯ್ಯೋ… ಯಾರು ದುಡ್ಡು ಮಾಡಿಕೊಂಡಿಲ್ಲ ಹೇಳಿ, ಈಗ ಅಧಿಕಾರಕ್ಕೆ ಬಂದಿದ್ದಾರೆ ಸ್ವಲ್ಪ ಮಾಡಿಕೊಳ್ಳಲಿ ಬಿಡಿ ಎಂದು ಬಿಜೆಪಿಯವರು ಮಾಡಿದ ಎಡವಟ್ಟೂಗಳನ್ನೂ ಸಹಿಸಿಕೊಂಡರು.
ಆದರೆ ಇವತ್ತು ನಮ್ಮ ಕಾರ್ಯಕರ್ತನಲ್ಲಿ ಆ ತಾಳ್ಮೆ ಉಳಿದಿಲ್ಲ. ಏಕೆಂದರೆ ರಾಜ್ಯ ಬಿಜೆಪಿ ನಾಯಕರುಗಳು ಮಾಡಿದ ತಪ್ಪಿಗೆ ಬೀದಿ ಬೀದಿಗಳಲ್ಲಿ ಚುಚ್ಚುಮಾತುಗಳನ್ನು ಕೇಳಿಸಿಕೊಂಡವನು ಅವನು ಮಾತ್ರ. ವೋಟು ಕೇಳಲು ಮನೆ ಮನೆಗೆ ಹೋಗದಂಥ ಪರಿಸ್ಥಿತಿಯನ್ನು ಎದುರಿಸಿದವನೂ ಅವನೇ. ಎಲ್ಲೋ ಹಾಲಾಡಿ ಶ್ರೀನಿವಾಸ ಶೆಟ್ಟರು, ಮರೆಯಾದ ವಿ.ಎಸ್. ಆಚಾರ್ಯರನ್ನು ಬಿಟ್ಟರೆ ಯಾರಿದ್ದಾರೆ ಎಂದು ತಲೆಕೆರೆದುಕೊಳ್ಳಬೇಕಾಯಿತು. ಒಂದು ಕಾಲದಲ್ಲಿ ಹಾಕಲು ಹವಾಯಿ ಚಪ್ಪಲಿ ಇಲ್ಲದವರು ಹವಾ ಕಾರಿನಲ್ಲಿ ಕುಳಿತು, ಬಾರೋ ಎಂದು ಕಾರ್ಯಕರ್ತನನ್ನು ದರ್ಪದಿಂದ ಕರೆಯುವುದನ್ನೂ ಕಾಣಬೇಕಾಯಿತು. ಚುನಾವಣೆ ಬಂತೆಂದರೆ ಬೂತಿಗೆಷ್ಟು ಬಾಟಲಿ, ದುಡ್ಡು ಬಂತು ಎಂದು ಕೇಳುವವರು ಬೇರೆ ಪಕ್ಷದಲ್ಲಿದ್ದರೆ, ನನ್ನ ಬೂತಲ್ಲಿ ಇಷ್ಟು ವೋಟು ಕೊಡಿಸುತ್ತೇನೆ, ಇಷ್ಟು ಲೀಡ್ ಕೊಡಿಸುತ್ತೇನೆ ಎನ್ನುತ್ತಿದ್ದ ನಮ್ಮ ನಿಷ್ಠಾವಂತ ಕಾರ್ಯಕರ್ತರು ಅತೀವವಾಗಿ ನೊಂದುಕೊಡಿದ್ದರು. ಇಂತಹ ಪರಿಸ್ಥಿತಿಯಲ್ಲಿದ್ದಾಗ, ಹಳೇ ಕಾರ್ಯಕರ್ತರಂತೂ ನೊಂದು ಮನೆ ಸೇರಿದ್ದಾಗ, ಪಕ್ಷ ಒಡೆದು ಛಿದ್ರವಾಗಿದ್ದಾಗ ಮತ್ತೆ ಇಡೀ ಮನೆಯನ್ನು ಒಂದು ಮಾಡಿದ್ದು, ಹೆಮ್ಮೆಯಿಂದ ಮತ ಕೇಳಲು ಹೋಗುವಂಥ ಪರಿಸ್ಥಿತಿ ನಿರ್ಮಾಣ ಮಾಡಿದ್ದು 2014ರ ಲೋಕಸಭೆ ಚುನಾವಣೆ ಮತ್ತು ನರೇಂದ್ರ ದಾಮೋದರದಾಸ್ ಮೋದಿ! ಹರ್ ಹರ್ ಮೋದಿ, ಘರ್ ಘರ್ ಮೋದಿ ಎಂದು ಊರೆಲ್ಲ ಘೋಷಣೆ ಕೂಗಿದ. ಈಗಂತೂ ಬೆಳಗ್ಗೆ ಎದ್ದು ದೇವರ ಫೋಟೋ ನೋಡದಿದ್ದರೂ, “ಕರಾಗ್ರೇ ವಸತೇ ಲಕ್ಷ್ಮೀ…” ಅಂತ ಹೇಳದಿದ್ದರೂ ಕರದಿಂದ ಮೊಬೈಲ್ ಎತ್ತಿಕೊಂಡು ಮೊದಲು ಸ್ಕ್ರೀನ್‍ಸೇವಿರ್‍ನಲ್ಲಿ ಹಾಕಿಕೊಂಡಿರುವ ಮೋದಿ ಫೋಟೋವನ್ನು ಭಕ್ತಿ ನೋಡುತ್ತಾನೆ.
ಇವತ್ತು ಕಾರ್ಯಕರ್ತರು ನಮ್ಮ ಒಬ್ಬೊಬ್ಬ ನಾಯಕರಲ್ಲೂ ಮೋದಿಯವರಂಥ ಬದ್ಧತೆ, ಪ್ರಾಮಾಣಿಕತೆ, ಕಾರ್ಯಕ್ಷಮತೆ, ಸಮಾಜಕ್ಕೇ ಎಲ್ಲ, ಸ್ವಂತಕ್ಕೆ ಏನಿಲ್ಲ ಎಂಬ ತತ್ವ, ಅಸಾಧ್ಯವಾದದ್ದನ್ನು ಸಾಧಿಸಿತೋರಿಸುವ ಮೋದಿಯವರ ಶಕ್ತಿಯ ಸಣ್ಣ ಲವಲೇಶವನ್ನಾದರೂ ಕಾಣಲು ಬಯಸುತ್ತಿದ್ದಾರೆ. ಅಷ್ಟು ಮಾತ್ರವಲ್ಲ, ಜನರಿಂದ ಅಭಿಪ್ರಾಯ ಪಡೆಯುವ, ಕಾರ್ಯಕರ್ತರ ಶಕ್ತಿಯಿಂದ ಚುನಾವಣೆ ನಡೆಸುವ ಅಮಿತ್ ಶಾ-ಮೋದಿಯವರಂತೆ ನಾವೆಲ್ಲ ನಡೆದುಕೊಳ್ಳಬೇಕು ಎಂಬ ನಿರೀಕ್ಷೆ ಕಾಣುತ್ತಿದೆ.
ಇಷ್ಟಕ್ಕೂ ನಮ್ಮ ವರ್ಚಸ್ಸನ್ನು, ನಮ್ಮ ಮೇಲಿನ ಗೌರವವನ್ನು ಹೆಚ್ಚು ಮಾಡುವ ವ್ಯಕ್ತಿತ್ವಕ್ಕಿಂತ ದೊಡ್ಡ ರಿಯಲ್ ಎಸ್ಟೇಟ್ ಯಾವುದಿದೆ ಹೇಳಿ?!
ಖಂಡಿತ ರಾಜಕೀಯವೆಂದರೆ ಎಲ್ಲರಿಗೂ ಮಹತ್ವಾಕಾಂಕ್ಷೆ ಇದ್ದೇ ಇರುತ್ತದೆ. ಎಂಎಲ್‍ಎ, ಎಂಪಿಯಾದ ಮರುದಿನದಿಂದಲೇ ಮುಖ್ಯಮಂತ್ರಿ ಚೇರು ಬಾಯಲ್ಲಿ ನೀರೂರಿಸುತ್ತದೆ. ಆದರೆ ಜನರಿಗೆ ಒಳ್ಳೆಯದನ್ನು ಮಾಡಬೇಕು ಎಂಬ ಉದ್ದೇಶದಿಂದ ಪದವಿ, ಅಧಿಕಾರಕ್ಕಾಗಿ ಎಷ್ಟು ಜನ ಹಾತೊರೆಯುತ್ತಾರೆ ಹೇಳಿ? ತಮ್ಮ ಸೀಟನ್ನು ಗೆಲ್ಲುವ ಅಥವಾ ಉಳಿಸಿಕೊಳ್ಳುವ ಶಕ್ತಿಯಿರುವ ನಾಯಕರು ಸಾಕಷ್ಟಿದ್ದಾರೆ. ಆದರೆ ಕ್ಷೇತ್ರದಾಚೆಗೆ, ಜಾತಿಯಾಚೆಗೆ ನಾಲ್ಕು ಜನರನ್ನು ಸೆಳೆಯುವ ವರ್ಚಸ್ಸು ತಮಗಿದೆಯೇ ಎಂದು ಎಷ್ಟು ಜನ ಆತ್ಮಾವಲೋಕನ ಮಾಡಿಕೊಂಡಿದ್ದಾರೆ? ಅದು 2013, ಸೆಪ್ಟೆಂಬರ್ 13. ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯೆಂದು ಬಿಜೆಪಿ ಘೋಷಣೆ ಮಾಡಿದ ದಿನ. ಅವತ್ತು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮೋದಿಯವರು, “ಜೀವನದಲ್ಲಿ ಏನೋ ಆಗಬೇಕೆಂದು ಹೋಗಬೇಡ, ಏನೋ ಮಾಡಬೇಕು ಅಂತ ಹೋಗು, ಆ ಕೆಲಸವೇ ನಿನ್ನನ್ನು ಏನೋ ಮಾಡಿಬಿಡುತ್ತದೆ” ಎಂದಿದ್ದರು. ಎಂತಹ ಅರ್ಥಪೂರ್ಣ ಮಾತು ಅಲ್ವಾ?
ಏಪ್ರಿಲ್ 24 ಬಂತೆಂದರೆ ಇಡೀ ಕರ್ನಾಟಕ ಡಾ. ರಾಜ್‍ಕುಮಾರ್‍ರ ಹುಟ್ಟುಹಬ್ಬವನ್ನು ಅವರು ಅಗಲಿ ಬಹಳ ವರ್ಷಗಳಾದೂ ವಿಜೃಂಭಣೆಯಿಂದ ಆಚರಿಸುತ್ತದೆ. ಡಾ. ರಾಜ್‍ಗಿಂತ ದೊಡ್ಡ ಸ್ಟಾರ್ ಕನ್ನಡ ಸಿನೆಮಾ ಮಾತ್ರವಲ್ಲ, ಯಾವ ಕ್ಷೇತ್ರದಲ್ಲೂ ಕರ್ನಾಟಕದಲ್ಲಿ ಹುಟ್ಟಲಿಲ್ಲ. ಅಂತ ಡಾ. ರಾಜ್ ಕುಮಾರ್ ವೇದಿಕೆಗೆ ಬಂದರೆ ಎರಡೂ ಕೈಯನ್ನು ಜೋಡಿಸಿ “ಅಭಿಮಾನಿ ದೇವರುಗಳೇ… ” ಎನ್ನುತ್ತಿದ್ದರು. ಏಕೆಂದರೆ ತನ್ನನ್ನು ಸ್ಟಾರ್ ಮಾಡಿರುವುದು, ತನ್ನನ್ನು ಎದೆಗೂಡಲ್ಲಿಟ್ಟು ಆರಾಧಿಸುವುದು, ತನಗೆ ಎಲ್ಲವನ್ನೂ ಕೊಟ್ಟಿರುವುದು ಗೌರವ ತುಂಬಿಕೊಂಡಿರುವ ಅಭಿಮಾನಿಗಳು ಎಂಬುದನ್ನು ಡಾ. ರಾಜ್ ವಿನಮ್ರತೆಯಿಂದ ಸ್ವೀಕರಿಸಿದ್ದರು. ನಮಗೂ ನಮ್ಮ ಕಾರ್ಯಕರ್ತರೇ ದೇವರು. ನಾವು ಎಷ್ಟೇ ಒಳ್ಳೆಯ ಕೆಲಸ ಮಾಡಿರಲಿ, ಅದನ್ನು ಕೂತಲ್ಲಿ, ನಿಂತಲ್ಲಿ, ಚಹಾ ಕುಡಿಯುವಲ್ಲಿ, ಮದುವೆ-ಮುಂಜಿಯಲ್ಲಿ, ಸಭೆ-ಸಮಾರಂಭದಲ್ಲಿ ಹೇಳುವವನು, ನಮ್ಮ ಪರವಾಗಿ ವಕಾಲತ್ತು ವಹಿಸುವವನು ಕಾರ್ಯಕರ್ತನೇ. ಮೋದಿಯವರು ಇಂದು ಜಗದೇಕವೀರನಾಗಿದ್ದರೆ ಅದಕ್ಕೆ ಅವರು ಮಾಡಿದ ಕೆಲಸವೊಂದೇ ಕಾರಣವಲ್ಲ, ಅದನ್ನು ಮನೆ-ಮನಕ್ಕೆ ತಲುಪಿಸುವ ಕಾರ್ಯಕರ್ತನ ಪಾತ್ರ ದೊಡ್ಡದಿದೆ. ನಮ್ಮ ಪರವಾಗಿ ವಾದಿಸುತ್ತಾ ಎಷ್ಟು ಜನ ನಮ್ಮ ಕಾರ್ಯಕರ್ತರು ಬೇರೆಯವರ ಜತೆ ಹೊಡೆದಾಟಕ್ಕೆ ಇಳಿದಿಲ್ಲ ಹೇಳಿ? ಇಂಥ ಕಾರ್ಯಕರ್ತ ನೊಂದಿದ್ದಾನೆ, ಮುನಿಸಿಕೊಂಡಿದ್ದಾನೆ, ಟೀಕೆಯ ಮುಖಾಂತರ ಹತಾಶೆಯನ್ನು ವ್ಯಕ್ತಪಡಿಸುತ್ತಿದ್ದಾನೆ ಎಂದರೆ ನಾವು ಎಚ್ಚೆತ್ತು ಆತ್ಮಾವಲೋಕನ ಮಾಡಿಕೊಳ್ಳಬೇಕೋ ಬೇಡವೋ? ಇಷ್ಟಕ್ಕೂ ನಾವು ಕಾರಿನಿಂದ ಇಳಿದಾಗ ಡೋರ್ ಹತ್ತಿರಕ್ಕೆ ಧಾವಿಸಿ ಬರುವ, ಜೈಕಾರ ಹಾಕುವ ಕಾರ್ಯಕರ್ತನಿಲ್ಲದಿದ್ದರೆ ನಾನೊಬ್ಬ ಲೀಡರ್ ಎನ್ನುವ ಭಿನ್ನಾಣ ಬಿಡಿ, ಯಕಶ್ಚಿತ್ ಎನ್ನುವ ವಾಸ್ತವ ಅರಿವಾಗಿ ಡಿಪ್ರೆಶನ್‍ಗೆ(ಖಿನ್ನತೆ) ಹೋಗಬೇಕಾಗುತ್ತದೆ. ನೀವೆಷ್ಟೇ ದೊಡ್ಡ ನಾಯಕನಾಗಿದ್ದರೂ, ಅದ್ಭುತ ಭಾಷಣಕಾರನಾಗಿದ್ದರೂ ಕುರ್ಚಿಹಾಕುವ, ಜನರನ್ನು ಕರೆದುಕೊಂಡು ಬರುವ, ಸ್ಟೇಟ್ ಕಟ್ಟುವ, ಬ್ಯಾನರ್, ಫ್ಲೆಕ್ಸ್ ಹಾಕುವ ನಿಷ್ಠಾವಂತ ಕಾರ್ಯಕರ್ತನಿಲ್ಲದಿದ್ದರೆ ಬಯಲಲ್ಲಿ ನಿಂತು ಬಾಯಿ ಬಡಿದುಕೊಳ್ಳಬೇಕಾಗುತ್ತದೆ.
ಇಂತಹ ನಿಸ್ವಾರ್ಥ ಕಾರ್ಯಕರ್ತರು ನೊಂದು ಟೀಕಿಸುತ್ತಿದ್ದಾರೆಂದರೆ ನಮ್ಮಲ್ಲೇ ಏನೋ ತಪ್ಪಿದೆ ಎಂಬುದನ್ನು ನಾವೆಲ್ಲ ಅರ್ಥಮಾಡಿಕೊಳ್ಳಬೇಕು ತಾನೇ?

Published on April 15, 2017 03:36
April 14, 2017
April 12, 2017
April 11, 2017
Pratap Simha's Blog
- Pratap Simha's profile
- 58 followers
Pratap Simha isn't a Goodreads Author
(yet),
but they
do have a blog,
so here are some recent posts imported from
their feed.