Pratap Simha's Blog, page 41
June 18, 2016
June 17, 2016
June 16, 2016
June 15, 2016
June 4, 2016
ಕೇರಳದಲ್ಲಿ ಕಮಲ ಅರಳಿಸಿದ ರಾಜಗೋಪಾಲ
ಕೇರಳದಲ್ಲಿ ಕಮಲ ಅರಳಿಸಿದ ರಾಜಗೋಪಾಲ
ಅದೊಂದು ಕಾಲವಿತ್ತು. ಕೇರಳ ಚುನಾವಣೆಗಳಲ್ಲಿ ವಿಶೇಷವೇನಿರುತ್ತದೆ ಎಂದು ಎಂಥವರಿಗೂ ಅನಿಸುತ್ತಿತ್ತು. ಒಂದೋ ಅದೇ ಹಳೆಯ ಕಾಲದ ಕಮ್ಯುನಿಸ್ಟರು, ಇಲ್ಲಾ ಕಾಂಗ್ರೆಸ್ ನಡುವೆ ಸ್ಪಧೆ೯ ನಡೆಯಬಹುದು ಎಂದು ಹೊರ ರಾಜ್ಯಗಳೂ ಅಂದುಕೊಳ್ಳುತ್ತಿದ್ದವು. ಬಿಜೆಪಿ ದೇಶವಾಳಬಹುದೇ ಹೊರತು ಕೇರಳದಲ್ಲಿ ಅದರ ಆಟ ನಡೆಯದು ಎಂದೇ ಎಲ್ಲರೂ ಆಡಿಕೊಳ್ಳುತ್ತಿದ್ದರು. ಕೇರಳವನ್ನು ಒಮ್ಮೆ ಸುತ್ತಿ ಬಂದವರಿಗೂ ಕೂಡ ಹಾಗೇ ಅನಿಸುತ್ತಿತ್ತು. ಎಲ್ಲೆಲ್ಲೂ ಕಾಣುವ ಕೆಂಪು ಬಾವುಟಗಳು, ಕಮ್ಯುನಿಸ್ಟ್ ಕಚೇರಿಗಳು, ವಿದೇಶಿ ನಾಯಕರ ಚಿತ್ರಗಳೇ ರಾರಾಜಿಸಿ ಸಂಪೂಣ೯ ಕೇರಳವೇ ಕೆಂಪು ಜನರ ಕೋಟೆ, ಉಳಿದಲ್ಲಿ ಗೆಲ್ಲುವವರು ಕಮ್ಯುನಿಸ್ಟರು ಎಂದು ಅಂದಾಜಿಸುತ್ತಿದ್ದರು. ಹೀಗಿರುವಾಗ ಮೂರನೇ ಶಕ್ತಿಯ ಉದ್ಬವ ಹೇಗೆ ತಾನೇ ಸಾಧ್ಯ ಎಂದು ತೀಮಾ೯ನಿಸಿಬಿಡುತ್ತಿದ್ದರು.
ಆದರೆ ಈ ಬಾರಿಯ ಕೇರಳ ವಿಧಾನಸಭೆ ಚುನಾವಣೆಯನ್ನು ಜನ ಹಾಗೆ ಭಾವಿಸಲಿಲ್ಲ. ಏಳು ತಿಂಗಳ ಹಿಂದೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶಗಳು ಕೇರಳ ಈಗ ಮೊದಲಿನಂತಿಲ್ಲ ಎಂಬುದನ್ನು ದೇಶಕ್ಕೇ ತೋರಿಸಿಕೊಟ್ಟಿತ್ತು. ಏಕೆಂದರೆ ತಿರುವನಂತಪುರಂ ಕಾರ್ಪೊರೇಶನಿನಲ್ಲಿ 32 ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದರು. ಪಾಲಕ್ಕಾಡಿನಲ್ಲಿ ಬಿಜೆಪಿ ಅಧಿಕಾರ ಹಿಡಿದಿತ್ತು. ಇನ್ನು ಹಲವು ಕಮ್ಯುನಿಸ್ಟ್ ಕೋಟೆಗಳಲ್ಲೂ ಬಿಜೆಪಿ ಖಾತೆ ತೆಗೆದಿತ್ತು. ಇನ್ನು ಕೆಲವೆಡೆ ಕಮ್ಯುನಿಸ್ಟರಿಗೆ ಮತ್ತು ಕಾಂಗ್ರೆ ಸಿಗರಿಗೆ ತೀವ್ರ ಸ್ಪಧೆ೯ಯನ್ನು ಬಿಜೆಪಿ ಒಡ್ಡಿತ್ತು. ಆಗಲೇ ಈ ಎರಡೂ ಪಕ್ಷಗಳು ನಿದ್ದೆಗೆಟ್ಟು ವಿಧಾನಸಭಾ ಪ್ರಚಾರವನ್ನು ಆರಂಭೀಸಿಬಿಟ್ಟಿದ್ದರು. ಕಾಂಗ್ರೆ ಸ್ ನಾಯಕ ಎ.ಕೆ. ಆಂಟನಿಯಂತೂ ಪ್ರಚಾರಕ್ಕೆ ಹೋದಲ್ಲೆಲ್ಲಾ “ಬಿಜೆಪಿಯವರು ಭ್ರಮೆಯಲ್ಲಿದ್ದಾರೆ. ಅವರು ಒಂದು ಸೀಟಿನ ಭರವಸೆಯನ್ನೂ ಇಟ್ಟುಕೊಳ್ಳುವುದು ಬೇಡ. ಕೇರಳದಲ್ಲಿ ಕಾಂಗ್ರೆ ಸ್ ಇರುವವರೆಗೆ ಬಿಜೆಪಿಯವರು ಕೇರಳ ವಿಧಾನಸಭೆಯ ಒಳಭಾಗವನ್ನು ನೋಡಲು ಪಾಸ್ ತೆಗೆದುಕೊಳ್ಳುವುದು ತಪ್ಪುವುದಿಲ್ಲ’ ಎಂದು ಭಾಷಣ ಮಾಡುತ್ತಿದ್ದರು.
ಈಗ ಎ.ಕೆ ಆಂಟನಿಯೇ ಪಾಸ್ ತೆಗೆದುಕೊಂಡು ವಿಧಾಸಭೆಯ ಒಳಹೋಗಬೇಕಾದ ಪರಿಸ್ಥಿತಿ.
ಕೇರಳ ರಾಜ್ಯ ಬಿಜೆಪಿ ಯುವಮೋಚಾ೯ ಸದಸ್ಯರು ಈಗಾಗಲೇ ಆಂಟನಿಯವರಿಗೆ ಆ ಪಾಸನ್ನು ತಲುಪಿಸಿಯೂ ಆಗಿದೆ! ಏಕೆಂದರೆ ಕೇರಳ ಬಿಜೆಪಿ ಕಾಯ೯ಕತ೯ರ ಪ್ರೀತಿಯ ರಾಜಟನ್ ಈಗ ಶಾಸಕರಾಗಿದ್ದಾರೆ.
ಮೊನ್ನೆ ಆ ಹೊಸ ಶಾಸಕರು ಕೇರಳ ವಿಧಾನಸಭೆಗೆ ಪ್ರವೇಶಿಸಿದಾಗ ಕೇರಳದ ರಾಷ್ಟ್ರೀಯವಾದಿಗಳು ತಾವೇ ಅಧಿಕಾರ ಹಿಡಿದವರಂತೆ ಸಂಭ್ರಮಿಸಿದರು. ಕಳೆದ ಆರು ದಶಕಗಳಿಂದ ಕಾಯುತ್ತಿದ್ದ ಹೊತ್ತನ್ನು ಅವರು ಸಂತೋಷದಿಂದ ಕಣ್ಣು ತುಂಬಿಕೊಂಡರು. ಪುಳಕಗೊಂಡರು. ಹೆಚ್ಚು ಕಡಿಮೆ ಒಂದೇ ರೀತಿಯಂತೆ ಕಾಣುವ ಎಡಪಂಥೀಯ ಮತ್ತು ಕಾಂಗ್ರೆಸ್‍ಗಳ ಆಟಾಟೋಪಗಳಿಗೆ ದಿಟ್ಟ ಧ್ವನಿಯಾಗುವ ಆ ವ್ಯಕ್ತಿಯನ್ನು ಪೂಜ್ಯ ಭಾವದಿಂದ ಕಂಡರು. ದೀನದಯಾಳ ಉಪಾಧ್ಯಾಯರ ತತ್ವಗಳಿಗೆ ಮಾರುಹೋಗಿ, ಆರೆಸ್ಸೆಸಿನ ಶಾಖೆಗಳಿಗೆ ಹೋಗಿ, ಭಾರತ ಮಾತೆಗೆ ಜಯಕಾರ ಹಾಕಿ ಪ್ರಾಣ ಕಳೆದುಕೊಂಡ ಎಷ್ಟೋ ದೇಶಭಕ್ತರ ಆತ್ಮಗಳಿಗೆ ಈಗ ಶಾಂತಿ ಸಿಕ್ಕಿದೆ ಎಂದು ಜನ ಭಾವುಕರಾದರು.
ಆ ವ್ಯಕ್ತಿ ಒ. ರಾಜಗೋಪಾಲ್.
ಮೌಲ್ಯಾಧಾರಿತ ರಾಜಕಾರಣಕ್ಕೆ ಮತ್ತೊಂದು ಹೆಸರು. ಸಿದ್ಧಾಂತ ನಿಷೆ, ನಿಷ್ಠಾವಂತ ಕಾಯ೯ಕತ೯ ಎಂಬುದರ ಪ್ರತ್ಯಕ್ಷ ಸಾಕ್ಷಿ. ಜನಸಂಘದ ಕಾಲದಿಂದಲೂ ಪಕ್ಷಕ್ಕಾಗಿ ದುಡಿದವರು. ಭಾಜಪವನ್ನು ಮೊದಲ ದಿನದಿಂದಲೇ ಕಂಡವರು. ಸತತವಾಗಿ ಸೋತವರು. ಸೋತರೂ ಕುಗ್ಗದವರು, ಸೋತಷ್ಟೂ ಉತ್ಸಾಹದಿಂದ ಮೇಲೆದ್ದು ಪಕ್ಷವನ್ನು ಬಲಪಡಿಸಲು ನಿರಂತರ ಪ್ರವಾಸ ಮಾಡಿದವರು. ಊರೂರುಗಳಿಗೆ ನಡೆದೇಹೋದವರು. ಸೋಲುಗಳಿಂದ ಕಾಯ೯ಕತ೯ರು ಕುಗ್ಗಲು ಬಿಡದೆ ಅವರಲ್ಲಿ ಮತ್ತಷ್ಟು ಶಕ್ತಿ ತುಂಬಿದವರು. ಕಮ್ಯುನಿಸ್ಟರ ಗೂಂಡಾಗಿರಿಗೆ ಹೆದರದಂತೆ ಪಡೆ ಕಟ್ಟಿದವರು. ಅಂಥ ವಯೋವೃದ್ದ ಒ. ರಾಜಗೋಪಾಲರನ್ನು ಕೇರಳದ ಸಮಸ್ತ ರಾಷ್ಟ್ರೀಯವಾದಿಗಳು ಒಂದೇ ಒಂದು ಬಾರಿ ವಿಧಾನಸಭೆಗೆ ಪ್ರವೇಶಿಸಲಿ ಎಂದು ಹಾತೊರೆಯುತ್ತಿದ್ದರು. ಹಾಗಿರುವಾಗ ಈಗ ಅವರ ಸಂತೋಷಕ್ಕೆ ಪಾರವೆಲ್ಲಿ?
ಆದರೆ ಅವರ ಒ.ರಾಜಗೋಪಾಲ್ ಕೇರಳದ ಜನರ ಪ್ರೀತಿಯ ರಾಜಟನ್ ಆಗಲಿಲ್ಲ. ಅದೊಂದು ವ್ರತ. ಅವರ ರಾಜಕೀಯ ಬದುಕು ಒಂದು ತಪಸ್ಸು. ಏಕೆಂದರೆ ಅದು ಕೇರಳ. ರಾಜ್ಯ ಮಾವೋ-ಸ್ಟಾಲಿನ್‍ಗಳ ಆಸ್ತಿಯೆಂದು ನಂಬಿರುವ ಕಟ್ಟರ್ ಎಡಪಂಥೀಯ ಕಮ್ಯನಿಸ್ಟರ ನಾಡು. ತನ್ನನ್ನು ಒಪ್ಪದವರನ್ನು ಕೊಂದಾದರೂ ಅಧಿಕಾರಕ್ಕೇರುವ ರಕ್ತದಾಹಿ ಜನಗಳ ಕೇಂದ್ರ. ಇನ್ನೊಂದೆಡೆ ತನ್ನ ಅದೇ ಓಲ್ಯೆಕೆಯ ರಾಜಕಾರಣವನ್ನು ಮಾಡುವ ಕಾಂಗ್ರೆ ಸ್ ಎಲ್ಲಾ ಸೇರಿ ಸಮಸ್ತ ಕೇರಳವನ್ನು ಮತಾಂಧರ ಬೀಡಾಗಿಯೂ, ನಿರೊದ್ಯೋಗಿಗಳ ಅಡ್ಡೆಯನ್ನಾಗಿಯೂ ಮಾಡಿಬಿಟ್ಟಿತ್ತು. ಜಾತಿಯ ವಾಸನೆ ಮೇಲುನೋಟಕ್ಕೆ ಅಷ್ಟೊಂದು ರಾಚದಿದ್ದರೂ ಒಳಗೊಳಗೇ ಜಾತಿಸಂಘಟನೆಗಳು ರಾಜಕೀಯ ಪಕ್ಷಗಳಂತೆ ಬೆಳೆಯುತ್ತಿದ್ದವು. ಅಂಥ ಹೊತ್ತಲ್ಲಿ ಕೇರಳ ರಾಜಕೀಯದಲ್ಲಿ ರಾಷ್ಟ್ರೀಯತೆಯ ಬೀಜ ಬಿತ್ತಿದವರಲ್ಲಿ ಕೆ.ಜಿ ಮರಾರ್ ಒಬ್ಬರಾದರೆ ಮತ್ತೊಬ್ಬರು ಒ.ರಾಜಗೋಪಾಲ್.
ಜನಸಂಘ ಬಿಜೆಪಿಯಾದಾಗ ದೇಶದ ಉಳಿದ ಭಾಗಗಳಲ್ಲಿದ್ದಂತೆ ಕೇರಳದಲ್ಲೂ ಕಾಯ೯ಕತ೯ರನ್ನು ಹುಡುಕಬೇಕಾದ ಪರಿಸ್ಥಿತಿ ಇತ್ತು. ಅಥವಾ ಉಳಿದೆಡೆಗಳಿಗಿಂತಲೂ ಕೇರಳದ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿತ್ತು. ಅಂಥ ಹೊತ್ತಲ್ಲಿ ರಾಜ್ಯ ಬಿಜೆಪಿಯ ನೊಗ ಹೊತ್ತವರು ರಾಜಗೋಪಾಲರು. ಅವರು ಹಿಂಡು ಹಿಂಡಾಗಿ ಕಾಯ೯ಕತ೯ರನ್ನು ಗುರುತಿಸಿ ಬೆಳೆಸಿದವರು. ಆ ಹೊತ್ತಲ್ಲಿ ಅವರ ಸಂಘಟನಾ ಚಾತುಯ೯ ಹೇಗಿತ್ತೆಂದರೆ ಕಟ್ಟರ್ ಕಮ್ಯುನಿಸ್ಟ್ ಆಗಿದ್ದ ಸಾವಿರಾರು ಜನರು ಬಿಜೆಪಿಗೆ ಸೇಪ೯ಡೆಗೊಳ್ಳಲಾರಂಭೀಸಿದರು. ಮೊಟ್ಟಮೊದಲ ಬಾರಿಗೆ ಕೇರಳದ ಕಮ್ಯುನಿಸ್ಟರು ತಮ್ಮ ಗಮನವನ್ನು ಕಾಂಗ್ರೆ ಸಿನಿಂದ ಕಿತ್ತು ಬಿಜೆಪಿಯ ಮೇಲೆ ನೆಟ್ಟರು. ಮತ್ತು ಬಿಜೆಪಿಯ ದಮನಕ್ಕಿಳಿದರು. ಮುಂದೊಂದು ದಿನ ಈ ಪಕ್ಷ ದಾರಿಯ ಮುಳ್ಳಾಗಲಿದೆ ಎಂಬುದನ್ನು ಕಮ್ಯುನಿಸ್ಟರು ಕಾಂಗ್ರೆಸಿಗಿಂತ ಬಹುಬೇಗನೆ ಅರಿತುಕೊಂಡರು. ರಾಜ್ಯದಲ್ಲಿ ರಾಜಗೋಪಾಲ್ ಅವರು ಮಾಡಿದ ಸಂಘಟನೆ, ಪಕ್ಷ ಬೆಳೆದ ರೀತಿ ಮತ್ತು ಅಲ್ಲಿನ ಕಾಯ೯ಕತ೯ರ ನಿಷ್ಠೆ-ಪ್ರಾಮಾಣಿಕತೆಯನ್ನು ದೆಹಲಿಯಲ್ಲಿ ಗಮನಿಸುತ್ತಿದ್ದ ಕೇಂದ್ರ ಬಿಜೆಪಿ ಅವರನ್ನು ಅಖಿಲ ಭಾರತೀಯ ಕಾಯ೯ದಶಿ೯ಗಳನ್ನಾಗಿ ನೇಮಕ ಮಾಡಿತು. ಮುಂದೆ ಅವರು ಪಕ್ಷದ ಪ್ರಧಾನ ಕಾಯ೯ದಶಿ೯ಗಳಾದರು. ರಾಷ್ಟ್ರೀಯ ಉಪಾಧ್ಯಕ್ಷರೂ ಆದರು. ಅಷ್ಟು ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದರೂ ರಾಜಗೋಪಾಲರು ಅದೇ ಸಾಮಾನ್ಯ ಕಾಯ೯ಕತ೯ನಂತೆಯೇ ಪಕ್ಷದೊಳಗಿದ್ದರು. ಕೇರಳ ಕಾಯ೯ಕತ೯ರ ಪ್ರೀತಿಯ ರಾಜಟನ್‍ನಾಗಿಯೇ ಉಳಿದರು.
ಒಂದೆಡೆ ಕೇರಳದಲ್ಲಿ ಪಕ್ಷ ಬೆಳೆಯುತ್ತಿದ್ದರೂ ತಲೆನೋವು ತರುತ್ತಿದ್ದುದು ಚುನಾವಣೆಗಳ ಸಮಯದಲ್ಲಿ. ಸೋಲುವ ಪಕ್ಷಕ್ಕೆ ಅಭ್ಯಥಿ೯ಗಳಾರು? ಹಾಗಾಗಿ ಸ್ಪಧಿ೯ಸಿದವರೇ ಸ್ಪಧಿ೯ಸಿದರು. ಸೋತರು. ಸೋತವರೇ ಮತ್ತೆ ಸ್ಪಧಿ೯ಸಿದರು. ಮಾತ್ರವಲ್ಲ. ಲೋಕಸಭೆಗೆ ನಿಂತವರೇ ಗ್ರಾಮಪಂಚಾಯಿತಿಗೂ ಸ್ಪಧಿ೯ಸಿದರು. ಪ್ರತೀ ಬಾರಿ ಸೋತಾಗಲೂ ಕಾಯ೯ಕತ೯ರು ಹೆಚ್ಚಿದ ಮತಗಳನ್ನು ಲೆಕ್ಕ ಹಾಕಿ ಖುಷಿ ಪಡುತ್ತಿದ್ದರು. ಕಮ್ಯುನಿಸ್ಟರ ವಿಜಯೋತ್ಸವಗಳೇ ನಾಚುವಂತೆ ಸಂಭ್ರಮಿಸಿದರು. ರಾಜಗೋಪಾಲ್ ಕೂಡ ಇಂಥ ಸತತ ಸೋಲುಗಳಿಂದ ಪಳಗಿದವರು. ಶಿಲ್ಪಿಯ ಉಳಿಯ ಪೆಟ್ಟಿನಿಂದ ಶಿಲೆಯೊಂದು ಸುಂದರ ಶಿಲ್ಪವಾಗುವಂತೆ ಮಾಗಿದರು. ಲೋಕಸಭೆಗೆ ಸ್ಪಧಿ೯ಸಿದಂತೆ ಕಾಪೊ೯ರೇಶನ್ ಚುನಾವಣೆಗೂ ಸ್ಪಧಿ೯ಸಿ ಅಲ್ಲೂ ಸೋತರು. 89ರ ಲೋಕಸಭಾ ಚುನಾವಣೆಯಲ್ಲಿ ಮಂಜೇರಿ ಕ್ಷೇತ್ರದಿಂದ ಸ್ಪಧಿ೯ಸಿ ಸೋತರು. ಎರಡು ವಷ೯ಗಳ ನಂತರ ತಿರುವನಂತಪುರದಲ್ಲಿ ಸ್ಪಧಿ೯ಸಿ ಅಲ್ಲೂ ಸೋತರು. ಆದರೆ ಕೇಂದ್ರ ಬಿಜೆಪಿ ಇಂಥ ಚತುರ ಸಂಘಟಕನನ್ನು ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ದೆಹಲಿಗೆ ಕಳುಹಿಸಿತು. ಅಷ್ಟರಲ್ಲಿ 99ರ ಚುನಾವಣೆ ಬಂತು. ರಾಜಗೋಪಾಲ್ ಅವರು ಪುನಃ ತಿರುವನಂತಪುರಂ ಕ್ಷೇತ್ರದಿ೦ದ ಸ್ಪಧಿ೯ಸಿ ಮತ್ತೆ ಸೋತರು. ಸೋಲುತ್ತಿದ್ದರೂ ರಾಜಗೋಪಾಲರಿಗೆ ಸಿಗುವ ವೋಟುಗಳ ಪ್ರಮಾಣ ಹೆಚ್ಚುತ್ತಲೇ ಹೋಯಿತು. 2004ರ ಚುನಾವಣೆಯಲ್ಲೂ ಮತ್ತೆ ಅಲ್ಲಿಂದಲೇ ಸ್ಪಧಿ೯ಸಿ ಮೂರನೆ ಸ್ಥಾನವನ್ನು ಪಡೆದರು. ಮೂರನೇ ಸ್ಥಾನ ಪಡೆದರೂ ರಾಜಗೋಪಾಲ್ ಅವರು ಶೇ.29.9 ರಷ್ಟು ವೋಟುಗಳನ್ನು ಪಡೆದಿದ್ದರು! ಇದು ಬಿಜೆಪಿ ಕೇರಳದಲ್ಲಿ ಪಡೆದ ಅತ್ಯಧಿಕ ಮತ. ಇದರ ನಡುವೆ 2011ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕೇವಲ 6.400 ಮತಗಳ ಅಂತರದಿಂದ ಸೋತರು. 2014ರ ಚುನಾವಣೆಯಲ್ಲಿ ತಿರುವನಂತಪುರಂ ಕ್ಷೇತ್ರದಿ೦ದ ಸ್ಪಧಿ೯ಸಿದ ರಾಜಗೋಪಾಲ್ ಶಶಿ ತರೂರ್‍ಗೆ ತೀವ್ರ ಪ್ಯೆಪೋಟಿ ನೀಡಿದ್ದರು. ಮತ್ತು ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಪಡೆದಿದ್ದರು. ಸತತ ಚುನಾವಣೆಗೆ ನಿಂತರೂ ಅವರು ವೋಟುಗಳನ್ನು ಖರೀದಿಸಲಿಲ್ಲ. ಕೇರಳದಲ್ಲಿ ಬಿಜೆಪಿಗೆ ಸಿಕ್ಕಿದ್ದೆಲ್ಲ ಅಅತ್ಯಂತ ಪ್ರಾಮಾಣಿಕ ಮತಗಳು. ಅಲ್ಲದೆ ರಾಜಗೋಪಾಲ್ ಕೇರಳದ ಅತ್ಯಂತ ಪ್ರಭಾವಿ ನಾಯರ್ ಸಮುದಾಯಕ್ಕೆ ಸೇರಿದವರು. ಆದರೆ ಎಲ್ಲೂ ಅವರು ತಮ್ಮನ್ನು ತಾವು ನಾಯರ್ ಎಂದು ಗುರುತಿಸಿಕೊಳ್ಳಲಿಲ್ಲ. ಮತಗಳು ಕಡಿಮೆ ಬಿದ್ದರೂ ತೂಕವನ್ನು ಕಳೆದುಕೊಳ್ಳಬಾರದು ಎಂಬ ನೀತಿಯನ್ನು ಅವರು ಎಲ್ಲಾ ಬೈಠಕ್‍ಗಳಲ್ಲಿ ತಪ್ಪದೇ ಉಲ್ಲೇಖಿಸುತ್ತಿದ್ದರು. ಯಾವ ಪ್ರಚಾರ ಸಭೆಗಳಲ್ಲೂ ಅವರು ವ್ಯಯಕ್ತಿಕ ಟೀಕೆಗಳಿಗೆ ಹೋಗುತ್ತಿರಲಿಲ್ಲ. ಕಮ್ಯುನಿಸ್ಟರ ಕ್ರೌಯ೯ವನ್ನು ಹೇಳುತ್ತಿದ್ದರೇ ಹೊರತು ನಾಯಕರ ತೇಜೋವಧೆ ಮಾಡುತ್ತಿರಲ್ಲ. ನೆನಪಿಡಿ, ಇದು ಒಂದೆರಡು ವಷ೯ಗಳ ವ್ರತವಲ್ಲ. ದಶಕಗಟ್ಟಲೆ ಅದೇ ವ್ರತವನ್ನು ಪಾಲಿಸಿಕೊಂಡು ಬಂದವರು ಒ. ರಾಜಗೋಪಾಲರು. ಸಾಮಾನ್ಯನೊಬ್ಬ ಒಂದು ಸೋಲಿನಿಂದ ಜೀವನವಿಡೀ ಹೊರಬರದೆ ಒದ್ದಾಡುತ್ತಾನೆ. ಅಂಥಲ್ಲಿ ರಾಜಗೋಪಾಲ್ ದೊಡ್ಡವರಾಗಿ ಕಾಣುತ್ತಾರೆ.
ಹೀಗೆ ರಾಜಗೋಪಾಲ್ ಅವರು ಒಟ್ಟು ಸ್ಪರ್ಧಿಸಿ ಸೋತ ಚುನಾವಣೆಗಳ ಸಂಖ್ಯೆ ಬರೋಬ್ಬರಿ 13! ಯಾವ ರಾಜಕಾರಣಿಗೆ ತಾನೇ ಇದು ಸಾಧ್ಯ? ಜಗತ್ತಿನ ಎಲ್ಲಿ ತಾನೇ ಇಂಥ ಪರಿಸ್ಥಿತಿ ಕಂಡುಬರಲು ಸಾಧ್ಯ? ಯಾವ ರಾಜಕಾರಣಿ ತಾನೇ ಸತತವಾಗಿ ಸೋತು ಕುಗ್ಗದೆ ಇರಲು ಸಾಧ್ಯ? ಹಾಗಾದರೆ ರಾಜಗೋಪಾಲ್ ಅವರ ಮನಸ್ಸು ಅದೆಂಥಾ ಗಟ್ಟಿಯಾಗಿರಬೇಕು? ಗೆಲ್ಲುವ ಭರವಸೆಯೊಂದಿಗೆ ಚುನಾವಣೆಗೆ ನಿಲ್ಲುವವನ ಗಟ್ಟಿತನಕ್ಕೂ ಸೋಲುವೆನೆಂದು ತಿಳಿದಿದ್ದರೂ ಸ್ಪಧಿ೯ಸುವ ರಾಜಕಾರಣಿಯ ಗಟ್ಟಿಗತನಕ್ಕೂ ವ್ಯತ್ಯಾಸವಿಲ್ಲವೇ? ಕೇರಳದ ಕಟ್ಟರ್ ಕಮ್ಯುನಿಸ್ಟರು ಕೂಡ ಎರಡು ಸೋಲುಗಳಿಂದ ಕಳೆದುಹೋದವರೆಷ್ಟೋ ಜನ ಇದ್ದಾರೆ.
ಒಬ್ಬ ರಾಜಕಾರಣಿ ತನ್ನ ಗೆಲವು, ತನ್ನ ಉನ್ನತಿಯನ್ನು ಯೋಚಿಸುತ್ತಾನೆಯೇ ಹೊರತು ರಾಜಗೋಪಾಲರಂತೆ ತನ್ನ ಸೋಲು ಪಕ್ಷದ ಸೋಲು. ಗೆಲ್ಲುವವರೆಗೂ ಸೋಲುವೆ ಎಂದುಕೊಳ್ಳುವವರು ಅಪರೂಪ. ಪ್ರಪಂಚದ ಇತಿಹಾಸದಲ್ಲಿ ಇಂಥದ್ದು ಕಾಣುವ ಒಂದೇ ಒಂದು ಪಕ್ಷವೆಂದರೆ ಅದು ಬಿಜೆಪಿ ಮಾತ್ರ. ಒಬ್ಬ ರಾಜಗೋಪಾಲರನ್ನು ಸೃಷ್ಟಿಸಲು ಸಾಧ್ಯವಾಗುವುದು ಕೇವಲ ಬಿಜೆಪಿಗೆ ಮಾತ್ರ. ಅಂಥ ಕಠೋರ ಸಿದ್ದಾಂತ ನಿಷ್ಠರು ಒ.ರಾಜಗೋಪಾಲರು.
ತುತು೯ಪರಿಸ್ಥಿಯ ಸಂದಭ೯ದಲ್ಲಿ ರಾಜಗೋಪಾಲರು ತ್ರಿಶೂರು ಮತ್ತು ಶ್ರೀಯೂರು ಜೈಲುಗಳಲ್ಲಿದ್ದರು. ಈ ಎರಡೂ ಜೈಲುಗಳಲ್ಲಿ ಅವರ ಜೊತೆಗಿದ್ದವರು ಖ್ಯಾತ ಕಮ್ಯುನಿಸ್ಟ್ ನಾಯಕ ನಂಬೂದರಿಪಾದ್. ಕೆಲವೇ ದಿನಗಳಲ್ಲಿ ನಂಬೂದರಿಪಾದ್‍ರಿಗೆ ರಾಜಗೋಪಾಲರ ವ್ಯಕ್ತಿತ್ವದ ದಶ೯ನವಾಯಿತು. ರಾಜಗೋಪಾಲರೂ ಸಾಮಾನ್ಯ ಆಸಾಮಿಯಲ್ಲ. ಸಾಕ್ಷಾತ್ ನಂಬೂದರಿಪಾದ್‍ರನ್ನೇ ಆರ್ ಎಸ್ ಎಸ್ ಮಾಡಲು ಪ್ರಯತ್ನಿಸಿದ್ದರು! ಸ್ವತಃ ನಂಬೂದರಿಪಾದ್‍ರಿಗೆ ಎಲ್ಲಿ ಈ ಮನುಷ್ಯ ತನ್ನ ಜನರ ತಲೆಕೆಡಿಸಿಬಿಡುವನೋ ಎಂದು ಹೆದರಿ ಜೈಲಲ್ಲಿದ್ದ ಕಮ್ಯುನಿಸ್ಟ್ ಕಾಯ೯ಕತ೯ರನ್ನು ಅವರ ಸಮೀಪ ಸುಳಿಯಲು ಬಿಡದೇ ತಾವೇ ಹೆಚ್ಚು ಹೆಚ್ಚು ಅವರ ಜೊತೆಗಿರತೊಡಗಿದರು! ನಿಜಕ್ಕೂ ನಂಬೂದರಿಪಾದ್ ರಾಜಗೋಪಾಲರಿಗೆ ಮರುಳಾಗಿದ್ದರು. ಒಂದು ದಿನ ಸಂಜೆ ನಂಬೂದರಿಪಾದ್‍ರು ರಾಜಗೋಪಾಲರನ್ನು ಜೈಲಿನ ಮೂಲೆಗೆ ಕರೆದೊಯ್ದು ಮೆಲುದನಿಯಲ್ಲಿ “ನೋಡು, ನಿನ್ನಲ್ಲಿ ಸಾಮಥ್ಯ೯ವಿದೆ. ಮಾತಿನಲ್ಲಿ ಮೋಡಿಯಿದೆ. ಜನ ನಿನ್ನನ್ನು ನಂಬಬೇಕು ಎನ್ನುವಂತೆ ನಿನ್ನ ಸ್ವಭಾವವಿದೆ. ನೀನು ನಿನ್ನ ಬದುಕನ್ನು ಆ ಆರೆಸೆಸ್ಸಿನವರ ಜೊತೆ ಸೇರಿ ಯಾಕೆ ಹಾಳು ಮಾಡಿಕೊಳ್ಳುತ್ತಿದ್ದೀಯಾ. ಯಾಕೆ ನಿನಗೆ ಆ ಹುಚ್ಚು. ಅದು ಗೆಲ್ಲುವ ಪಕ್ಷವಾ? ಶಕ್ತಿಯಿದ್ದವರು ಸೋಲಬಾರದು, ಗೆಲ್ಲಬೇಕು. ಗೆಲ್ಲುತ್ತಾ ಹೋಗಬೇಕು. ನೋಡು ನಮ್ಮಲ್ಲಿ ಸಮಾನತೆಯಿದೆ. ಕ್ರಾಂತಿಯ ಕಿಚ್ಚಿದೆ. ನನ್ನೊಡನೆ ಬಾ. ನಿನ್ನ ಭವಿಷ್ಯವನ್ನು ನೋಡು’ ಎಂದರು. ರಾಜಗೋಪಾಲರು “ನೀವು ನನ್ನನ್ನು ಮೂಲೆಗೆ ಕರೆದೊಯ್ದಾಗಲೇ ನನಗೆ ಅಥ೯ವಾಯಿತು. ಆಗಲಿ ಮುಂದಿನ ಚುನಾವಣೆಯಲ್ಲಿ ನಾವು ಭೇಟಿಯಾಗೋಣ. ನಿಮ್ಮ ಜೊತೆಯಲ್ಲಲ್ಲ, ನಿಮ್ಮ ಎದುರಲ್ಲಿ’ ಎಂದುತ್ತರಿಸಿದರು. ಅಂಥ ಕಠೋರ ಸಿದ್ಧಾಂತ ನಿಷ್ಠರು ಒ. ರಾಜಗೋಪಾಲ್
.
ಜೈಲಿನಿಂದ ಹೊರಬಂದ ನಂತರ ಕಾಂಗ್ರೆಸ್‍ನ ತಂಡವೊಂದು ರಾಜಗೋಪಾಲ್ ಅವರ ಮನೆಗೆ ಆಗಮಿಸಿದರು. “ನೋಡಿದ್ರಾ, ಆರೆಸೆಸ್ಸಿನ ಜನ ನಿಮ್ಮ ಮಗನ ತಲೆಕೆಡಿಸಿ ಜೈಲಿಗೆ ಹೋಗುವಂತೆ ಮಾಡಿದರು. ನಿನ್ನ ಅಪ್ಪ, ನಿನ್ನ ಹಿರಿ ತಲೆಗಳೆ ಲ್ಲಾ ನಮ್ಮ ಪಕ್ಷದ ಕಾಯ೯ಕತ೯ರು. ಇವನು ನಮ್ಮ ನಿರೀಕ್ಷೆಗಳನ್ನು ಹುಸಿಮಾಡಿದ. ಇನ್ನೂ ಕಾಲ ಮಿಂಚಿಲ್ಲ. ನಮ್ಮ ಕಚೇರಿಯ ಬಾಗಿಲು ನಿನಗೆ ಯಾವಾಗಲೂ ತೆರೆದಿದೆ’ ಎಂದು ಆಹ್ವಾನವನ್ನು ಕೊಟ್ಟರು. ರಾಜಗೋಪಾಲ್ ಬಂದವರಿಗೆ ಕಟ್ಟಂ ಚಾಯ ನೀಡಿ “ನಮ್ಮ ಆಫೀಸಿನ ಬಾಗಿಲು ಕೂಡಾ ನಿಮಗೆ ಸದಾ ತೆರೆದಿದೆ’ ಎಂದರು. ಇಂಥ ಎಷ್ಟೋ ಘಟನೆಗಳನ್ನು ಅವರು ತಮ್ಮ ಜೀವನಚರಿತ್ರೆ “ಜೀವಿತಾಮೃತ’ ದಲ್ಲಿ ಬರೆದುಕೊಂಡಿದ್ದಾರೆ.
13 ಚುನಾವಣೆಗಳನ್ನು ಸೋತರೂ ರಾಜಗೋಪಾಲ್ ಕಳೆದುಹೋಗಲಿಲ್ಲ. ಬದಲಿಗೆ ರಾಜ್ಯದ ಪ್ರಭಾವಿ ರಾಜಕಾರಣಿಯಾದರು. ಕೇರಳದ ಆರ್ ಎಸ್ ಎಸ್ ಮುಖಂಡ ಪರಮೇಶ್ವನ್‍ಜಿಯವರ ಸಂಪಕ೯ ಅವರನ್ನು ಹಾಗೆ ರೂಪಿಸಿತ್ತು. ಕೆ.ಜಿ. ಮರಾರ್ ಅವರಂಥ ಮೌಲ್ಯಾಧಾರಿತ ರಾಜಕಾರಣಿಯ ಸಂಪಕ೯ ಅವರಲ್ಲಿ ತ್ಯಾಗ, ಸಾತ್ವಿಕತೆಗಳನ್ನು ಹುಟ್ಟಿಸಿತ್ತು. ವಾಜಪೇಯಿ ಸರಕಾರದಲ್ಲಿ ರಾಜ್ಯ ಸಚಿವರಾಗಿ ರಾಜಗೋಪಾಲರು ಮಾಡಿದ ಕಾಯ೯ವನ್ನು ಕೇರಳ ಪಕ್ಷಭೇದವಿಲ್ಲದೆ ಇಂದಿಗೂ ಹೊಗಳುತ್ತದೆ. ಹೊಸ ರೈಲುಗಳು, ರೈಲು ಮೇಲುಸೇತುವೆಗಳು, ಸುಸಜ್ಜಿತ ರೈಲುಗಳನ್ನು ಕೇರಳಕ್ಕೆ ತಂದವರು ರಾಜಗೋಪಾಲರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಡಿಎಸ್, ಪೊಲೇರ್ ಮಹಾಸಭಾ ಮತ್ತು ಆದಿವಾಸಿ ಗೋತ್ರಸಭಾಗಳನ್ನು ಎನ್‍ಡಿಎ ತೆಕ್ಕೆಗೆ ತಂದು ಕಮ್ಯನಿಸ್ಟರ ನಿದ್ರೆ ಕೆಡಿಸಿದ ತಂತ್ರಗಾರ ರಾಜಗೋಪಾಲ್. ಆದರೂ ಕಮ್ಯುನಿಸ್ಟರು ಅವರನ್ನು ಗೌರವಿಸುತ್ತಾರೆ. ಇಂದಿಗೂ ಸಮಸ್ತ ಮಲಯಾಳಿಗಳನ್ನು ಕೇರಳದ ಇಬ್ಬರು ಯೋಗ್ಯ ರಾಜಕಾರಣಿಗಳಾರೆಂದು ಕೇಳಿದರೆ ಮುಕ್ಕಾಲು ಪಾಲು ಜನರು ಹೇಳುವುದು ಎರಡೇ ಹೆಸರುಗಳನ್ನು ಒಂದು ವಿಎಸ್ ಅಚ್ಯುತಾನಂದನ್ ಮತ್ತೊಬ್ಬರು ಈಗಷ್ಟೇ ಶಾಸಕರಾದ ಒ.ರಾಜಗೋಪಾಲ್!
ಐದಾರು ವಷ೯ಗಳ ಹಿಂದೆ ಅವರಿಗೆ 80 ವಷ೯ ತುಂಬಿದಾಗ ಅವರ ಅಭಿಮಾನಿಗಳು ಅಭಿನಂದನಾ ಸಮಾರಂಭವೊಂದನ್ನು ತಿರುವನಂತಪುರದಲ್ಲಿ ಆಯೋಜಿಸಿದ್ದರು. ಕಮ್ಯುನಿಸ್ಟ್ ನಾಯಕರು, ಕಾಂಗ್ರೆ ಸಿಗರು ಮತ್ತು ಮುಸ್ಲಿಂ ಲೀಗಿನ ಜನಗಳಿಂದ ಮ್ಯೆದಾನ ಭತಿ೯ಯಾಗಿತ್ತು. ವೇದಿಕೆಯಲ್ಲಿ ಮಾತಾಡಿದ ಕಮ್ಯುನಿಸ್ಟ್ ನಾಯಕರೊಬ್ಬರು “ನಾನು ಇಂಥ ಸಿದ್ಧಾಂತ ನಿಷ್ಠನೊಬ್ಬನನ್ನು ನಮ್ಮ ಪಕ್ಷದಲ್ಲಿ ಕಾಣಲು ಬಯಸುತ್ತೇನೆ’ ಎಂದರು. ಶುಭಾಶಯವನ್ನು ಕಳುಹಿಸಿದ ವಿ.ಎಸ್. ಅಚ್ಯುತಾನಂದನ್ “ರಾಜಗೋಪಾಲ್ ಅವರ ಪ್ರಾಮಾಣಿಕತೆಯನ್ನು ನಮ್ಮ ಕೇರಳ ಹೆಮ್ಮೆ ಪಡುತ್ತದೆ’ ಎಂದಿದ್ದರು. ಉಮ್ಮನ್ ಚಾಂಡಿ ತಮ್ಮ ಸಂದೇಶದಲ್ಲಿ “ನಮ್ಮ ರಾಜ್ಯದಲ್ಲಿ ರೈಲು ಅಭಿವೃದ್ಧಿಯಾಗಲು ಕಾರಣರಾದವರು ರಾಜಗೋಪಾಲ್’ ಎಂದು ಬಣ್ಣಿಸಿದ್ದರು.
ಅಂಥ ಒ.ರಾಜಗೋಪಾಲ್‍ಜಿ ಮೊನ್ನೆ ಕೇರಳ ವಿಧಾನಸಭೆಗೆ ನಡೆದು ಹೋದಾಗ ಮಲಯಾಳಿಗಳ ಕಣ್ಣಲ್ಲಿ ಕಂಡ ಆ ಮಿಂಚು, ಆ ತೇವಕ್ಕೂ ಒಂದು ಅಥ೯ ಇದೆ ಅನ್ನಿಸುತ್ತದೆ. ಇದ್ದರೆ ಅಂಥ ರಾಜಕಾರಣಿ ಇರಬೇಕು ಅನಿಸುತ್ತದೆ.
June 1, 2016
May 28, 2016
ಕಾನ್‌ಸ್ಟೆಬಲ್‌ಗಳ ಖಾಕಿಗೆ ಖದರು, ಕಿಮ್ಮತ್ತೂ ಎರಡೂ ಇಲ್ಲ, ಆದರೆ ಅವರಿಲ್ಲದಿದ್ದರೆ ನಾವಿಲ್ಲ!
ಕಾನ್‌ಸ್ಟೆಬಲ್‌ಗಳ ಖಾಕಿಗೆ ಖದರು, ಕಿಮ್ಮತ್ತೂ ಎರಡೂ ಇಲ್ಲ, ಆದರೆ ಅವರಿಲ್ಲದಿದ್ದರೆ ನಾವಿಲ್ಲ!
ಕಳೆದ ಒಂದು ವಾರದಿಂದ ರಾಜ್ಯದ ಮೂಲೆ ಮೂಲೆಗಳಿಂದ ಕರೆ ಬಂದಿವೆ. ಇತ್ತೀಚೆಗೆ ನಮ್ಮ ಲೋಕೋಪಯೋಗಿ ಖಾತೆ ಸಚಿವರಾದ ಡಾ. ಮಹಾದೇವಪ್ಪನವರ ಮಗನ ಮದುವೆಗೆ ಹೋಗಿದ್ದಾಗ ಕಾನ್‌ಸ್ಟೆಬಲ್‌ಗಳ ಒಂದು ದಂಡೇ ಅಡ್ಡಹಾಕಿ ನಮ್ಮ ಪರ ಧ್ವನಿಯೆತ್ತಿ, ಈ ಹಿಂದೆ ಪೋಲೀಸ್ ಇಲಾಖೆಯ ಬಗ್ಗೆ ಅಭಿಮಾನದಿಂದ ಬರೆದಿದ್ದೀರಿ, ಈಗಲೂ ನಮ್ಮ ಬಗ್ಗೆ ಮಾತನಾಡಿ ಎಂದು ಕೇಳಿಕೊಂಡರು. ಅಷ್ಟು ಮಾತ್ರವಲ್ಲ, ನೆರೆರಾಜ್ಯಗಳಲ್ಲಿ ಕೆಲಸಕ್ಕೆ ಸೇರುವ ಕಾನ್‌ಸ್ಟೆಬಲ್‌ಗೆ 28 ಸಾವಿರ ಪ್ರಾರಂಭಿಕ ಸಂಬಳವಿದೆ, ಹೆಡ್‌ಕಾನ್‌ಸ್ಟೆಬಲ್‌ಗೆ 56 ಸಾವಿರ ಸಂಬಳ ಬರುತ್ತಿದೆ ಎಂದು ಪೇಸ್ಲಿಪ್ ಕಳುಹಿಸಿದ್ದಾರೆ. ಕಳೆದ ವರ್ಷ ಮೈಸೂರಿನ ಪೊಲೀಸರಿಗೆ ಸನ್ಮಾನ ಮಾಡುವ ಸಮಾರಂಭದಲ್ಲಿ ಕಾನ್‌ಸ್ಟೆಬಲ್ ಹುದ್ದೆಗೆ ಕನಿಷ್ಟ 25 ಸಾವಿರ ಪ್ರಾರಂಭಿಕ ಸಂಬಳ ಕೊಡಬೇಕು ಎಂದಿದ್ದೆ. ಈ ಮಧ್ಯೆ, ಕಳೆದ ಹತ್ತಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ, ಕಡತದಲ್ಲೇ ಕುಳಿತಿರುವ ಪೊಲೀಸರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೂನ್-4ರಂದು ಸಾಮೂಹಿಕ ರಜೆ ಹಾಕಲು ಕಾನ್‌ಸ್ಟೆಬಲ್ ಹಾಗೂ ಹೆಡ್‌ಕಾನ್‌ಸ್ಟೆಬಲ್‌ಗಳು ನಿರ್ಧರಿಸಿದ್ದಾರೆ.
1. ವೇತನ ತಾರತಮ್ಯ
2. ಮಾನವಹಕ್ಕು ಉಲ್ಲಂಘನೆ
3. ರಾಜಕೀಯ ಪ್ರಭಾವ
4. ಅಭದ್ರತೆ
ಇಂಥ ನಾಲ್ಕು ಪ್ರಮುಖ ವಿಚಾರಗಳನ್ನು ಕರ್ನಾಟಕ ಪೊಲೀಸ್ ಮಹಾಸಂಘ ಮುಂದಿಟ್ಟಿದೆ. ಇತ್ತ ಖಾಕಿ, ಖಾದಿ, ಕಾವಿ ಬಗ್ಗೆ ಸಮಾಜದಲ್ಲಿ ವಾಕರಿಕೆ ಮನಸ್ಥಿತಿ ಇರುವುದು ದಿಟವೇ. ಆದರೆ ಖಾದಿ, ಕಾವಿಯಿಲ್ಲದ ಪರಿಸ್ಥಿತಿ ಹೇಗಿದ್ದೀತು ಎಂದು ಊಹಿಸಿ ನೆಮ್ಮದಿ ಪಟ್ಟುಕೊಳ್ಳಬಹುದು.ಖಾಕಿಯಿಲ್ಲದ ಪರಿಸ್ಥಿತಿಯನ್ನು, ಸಮಾಜವನ್ನು, ವ್ಯವಸ್ಥೆಯನ್ನು ಊಹಿಸಿಕೊಳ್ಳಲಿಕ್ಕಾದರೂ ಸಾಧ್ಯವಿದೆಯೇ? ಅಂಥ ಭದ್ರತೆಯ ಭಾವನೆಯನ್ನು ಸಮಾಜಕ್ಕೆ ಕೊಟ್ಟಿರುವ ಆ ಖಾಕಿಗೆ ಅಥವಾ ಪೊಲೀಸ್ ವ್ಯವಸ್ಥೆಗೆ ತಕ್ಕಮಟ್ಟಿನ ವೃತ್ತಿ ಸ್ವಾತಂತ್ರ್ಯ ಕೊಡುವುದಕ್ಕಾಗಲಿ, ಅವರ ಯೋಗಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳವ ನಿಟ್ಟಿನಲ್ಲಾಗಲಿ ನಾವು ಎಂದಾದರೂ ಯೋಚಿಸಿದ್ದೇವೆಯೇ?
ಅದಕ್ಕೂ ಮೊದಲು ಒಂದು ಘಟನೆ ಕೇಳಿ…
Bullet for bullet ಎನ್ನುತ್ತಿದ್ದ ಡಿ.ಜಿ.ಪಿ ಜೂಲಿಯಸ್ ರಿಬೆರೋ ಅವರೇ ಅಸಹಾಯಕತೆಯಿಂದ ಕೈಚೆಲ್ಲುವಂತಾಗಿತ್ತು. ಇನ್ನೇನು ಪಂಜಾಬ್ ಸಿಡಿದು ಸ್ವತಂತ್ರಗೊಳ್ಳುತ್ತದೇನೋ ಎಂಬಂತಹ ವಾತಾವರಣ ಸೃಷ್ಟಿಯಾಗಿತ್ತು. ಇಡೀ ರಾಜ್ಯವೇ ಕದಡಿತ್ತು. ಇತ್ತ ಅಜಿತ್ ಸಿಂಗ್ ಸಂಧು , ಸೀನಿಯರ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಆಗಿ ಪಂಜಾಬ್‌ನ ತರನ್ ತಾರನ್ ಜಿಲ್ಲೆಗೆ ಕಾಲಿಟ್ಟಾಗ, ಸಾಮಾನ್ಯ ಜನರಿಗಿಂತ ಭಯೋತ್ಪಾದಕರೇ ಹೆಚ್ಚಿದ್ದರು! ಏಕೆಂದರೆ ಅದು ಖಲಿಸ್ತಾನಿ ಪ್ರತ್ಯೇಕತಾವಾದಿಗಳ ರಾಜಧಾನಿಯೆನಿಸಿತ್ತು. ತರನ್ ತಾರನ್‌ಗೆ ಕಾಲಿಡುವುದೆಂದರೆ ಸಾವಿಗೆ ಆಹ್ವಾನ ನೀಡಿದಂತೆಯೇ ಎಂಬತಿತ್ತು. ಜತೆಗೆ ಸ್ವತಃ ಸಿಖ್ ಪಂಥಕ್ಕೆ ಸೇರಿದ್ದರೂ ಸಂಧು, ಸಿಖ್ಹರ ವಿರುದ್ದವೇ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಸಾಲದೆಂಬಂತೆ, ಭಯೋತ್ಪಾದಕರ ವಿರುದ್ದ ಕಾರ್ಯಾಚರಣೆ ಕೈಗೊಳ್ಳುವ ಮೊದಲು ಪೊಲೀಸರಲ್ಲಿ ಆತ್ಮಸ್ಥ್ಯೆರ್ಯ ತುಂಬುವ ಕಾರ್ಯ ಮಾಡಿದರು. ಆನಂತರ ಪ್ರಾರಂಭವಾಗಿದ್ದೇ ಆಪರೇಶನ್ ವುಡ್ ರೋಸ್, ಆಪರೇಶನ್ ಲಿಲ್ಲಿ ವೈಟ್, ಆಪರೇಶನ್ ಪ್ಲಶೌಟ್! 1984 ರಿಂದ 94ರವರೆಗೂ ನಡೆದ ಈ ಕಾರ್ಯಾಚರಣೆಗಳ ಮೂಲಕ ಪ್ರತ್ಯೇಕತಾವಾದಾವನ್ನು ಬೇರು ಸಮೇತ ಕಿತ್ತೊಗೆಯಲಾಯಿತು. ಭಿಂದ್ರನ್ ವಾಲೆಯ ಟೈಗರ್ ಫೊರ್ಸನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲಾಯಿತು. ಒಟ್ಟು 13 ವರ್ಷ ನಡೆದ ಸಂಘರ್ಷದ ನಂತರ ಪಂಜಾಬ್‌ನಲ್ಲಿ ಶಾಂತಿಯೇನೋ ಸ್ಥಾಪನೆಯಾಯಿತು. ಆದರೆ ಅಂದು ಜೀವ ಒತ್ತೆಯಿಟ್ಟು , ಪ್ರಾಣದ ಹಂಗುತೊರೆದು ಹೋರಾಡಿದ ಪೊಲೀಸರಿಗೆ ಈ ದೇಶ ಕೃತಜ್ಞತೆ ಅರ್ಪಿಸುವ ಬದಲು ಕೋರ್ಟಿಗೆಳೆಯಿತು! ಅಜಿತ್ ಸಿಂಗ್ ಸಂಧು ವಿರುದ್ಧ 43 ಕೊಲೆ ಮತ್ತು ಮಾನವ ಹಕ್ಕು ಉಲ್ಲಂಘನೆ ಆರೋಪಗಳನ್ನು ಹೊರಿಸಲಾಯಿತು. ಮೊಕದ್ದಮೆ ಹೂಡಿ ನ್ಯಾಯಾಲಯಕ್ಕಳೆಯಲಾಯಿತು. ಭಿಂದ್ರನ್ ವಾಲೆಯ ರಕ್ಕಸೀ ಕೃತ್ಯವನ್ನು ಮೌನವಾಗಿ ವೀಕ್ಷಿಸುತ್ತಿದ್ದ ಮಾನವ ಹಕ್ಕು ಆಯೋಗ, ಸಂಧು ವಿರುದ್ಧ ಇಲ್ಲ – ಸಲ್ಲದ ಆರೋಪ ಹೊರಿಸಿತು. ದುರದೃಷ್ಟವಶಾತ್, 1996ರಲ್ಲಿ ಸಂಧು ಅವರನ್ನು ಕೆಲಸದಿಂದ ಕಿತ್ತೊಗೆದು ಜೈಲಿಗೆ ತಳ್ಳಲಾಯಿತು!
ಕಟ್ಟಾ ಭಯೋತ್ಪಾದಕ ನಿಶಾನ್ ಸಿಂಗ್ ಕಲನೂರ್ ಅದೇ ಜೈಲಿನಲಿದ್ದ. ಪಂಜಾಬ್ ಪ್ರತ್ಯೇಕಗೊಳ್ಳುವ ಅಪಾಯ ಎದುರಾಗಿದ್ದಾಗ , ಎಂತಹ ಕಠಿಣ ಕ್ರಮವನ್ನಾದರೂ ತೆಗೆದುಕೊಂಡು ಪರಿಸ್ಥಿತಿಯನ್ನು ಹತೋಟಿಗೆ ತನ್ನಿ ಎಂದಿದ್ದ ಸರಕಾರ, ಜೈಲಿನಲ್ಲಿ ಸಂಧು ಮೇಲೆ ಆಕ್ರಮಣ ಮಾಡಲು ನಿಶಾನ್ ಸಿಂಗ್‌ಗೆ ಅವಕಾಶ ಮಾಡಿಕೊಟ್ಟಿತು! ಎಲ್ಲರೂ ಎಣಿಸಿದಂತೆಯೇ ಸಂಧು ಮೇಲೆ ಹಲ್ಲೆ ನಡೆಯಿತು. ಹೇಗೋ ಒಂದು ವರ್ಷ ಜೈಲುವಾಸ ಅನುಭವಿಸಿದ ಸಂಧು, 1997ರಲ್ಲಿ ಬಿಡುಗಡೆಯಾದರು. ಆದರೆ ನ್ಯಾಯಾಲಯಕ್ಕೆ ಅಲೆಯುವುದು ತಪ್ಪಲಿಲ್ಲ. ಈ ಮಧ್ಯೆ, ಸಂಧು ಅವರಿಗೆ ನೀಡಿದ್ದ ಜಾಮೀನನ್ನು ವಜಾ ಮಾಡಬೇಕು ಎಂದು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬಂತು. ಆದರೆ ಜಾಮೀನು ವಜಾ ಗೊಂಡು ಮತ್ತೆ ಜೈಲು ಸೇರಬೇಕಾಗುತ್ತದೆಂಬ ಬಗ್ಗೆ ಸಂಧು ಮನದಲ್ಲಿ ಯಾವ ಸಂಶಯವೂ ಇರಲಿಲ್ಲ. ಅವತ್ತು 1997, ಮೇ 13, ಸಂಧು ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ. ಕಟಕಟೆಯಲ್ಲಿ ನಿಲ್ಲಲಿಲ್ಲ. ಕಳಂಕಿತ ಬದುಕಿಗಿಂತ ಸಾವೇ ಮೇಲು ಎಂದು ಬರೆದಿಟ್ಟು , ಹಿಮಾಲಯನ್ ಕ್ವೀನ್ ಎಕ್ಸ್ ಪ್ರೆಸ್ ರೈಲಿಗೆ ತಲೆಕೊಟ್ಟರು! ಆತ್ಮಹತ್ಯೆ ಮಾಡಿಕೊಂಡರು! ಟ್ರಕ್‌ಗಳಲ್ಲಿ ಹಣ ಆರ್‌ಡಿ ಎಕ್ಸ್, ಎಕೆ-47 ರೈಫಲ್‌ಗಳನ್ನು ತುಂಬಿ ಕಳುಹಿಸಿದರೂ ಕೈಗೂಡದ ಪಾಕಿಸ್ತಾನದ ಐಎಸ್‌ಐ ಕನಸನ್ನು ಮಾನವ ಹಕ್ಕುಗಳ ಹೆಸರಲ್ಲಿ ಭಾರತೀಯರೇ ಸಾಕಾರಗೊಳಿಸಿದರು!
Bolting the stable after the horse has left! ಅಂದರೆ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು ಅಂತಾ ಪೊಲೀಸರನ್ನು ಮೂದಲಿಸುವುದನ್ನು, ಕುಹಕವಾಡುವುದನ್ನು ನಾವೆಂದೂ ಮರೆಯುವುದಿಲ್ಲ.ಒಬ್ಬ ಸಾಮಾನ್ಯ ಸೈನಿಕ ಸತ್ತರೂ, ಆತ ಸೇನೆಯಲ್ಲಿ ಅಡುಗೆ ಭಟ್ಟನ ಕೆಲಸ ಮಾಡುತ್ತಿದ್ದರೂ ಪರವಾಗಿಲ್ಲ. ನಾವು ಕಣ್ಣೀರು ಸುರಿಸುತ್ತೇವೆ. ಹುತಾತ್ಮರಾದರು, ಪ್ರಾಣತ್ಯಾಗ ಮಾಡಿದರು, ವೀರ ಮರಣವನ್ನಪ್ಪಿದರು, ದೇಶಕ್ಕಾಗಿ ಮಡಿದರು ಎಂದು ಗುಣಗಾನ ಮಾಡುತ್ತೇವೆ. ಹೊಗಳಿ ಅಟ್ಟಕ್ಕೇರಿಸುತ್ತೇವೆ. ಹೊತ್ತು ಮರೆಯುತ್ತೇವೆ. ಒಬ್ಬ ಮಾಜಿ ಸಚಿವ ಅಥವಾ ಭ್ರಷ್ಟ ರಾಜಕಾರಣಿ ಸತ್ತರೂ ದೇಶ ಸೇವೆ ಮಾಡಿದರು, ಜನಸೇವೆಯೇ ಜನಾರ್ದನನ ಸೇವೆ ಎಂದು ನಂಬಿದ್ದರು ಎಂದು ಪುಟಗಟ್ಪಲೆ ಬರೆಯುತ್ತೇವೆ. ಹಾಲಿ ಸಚಿವರು ಹೂಗುಚ್ಚ ಇಟ್ಟು ಕಂಬನಿ ಮಿಡಿದು ಹೋಗುತ್ತಾರೆ, ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡುತ್ತೇವೆ. ಆದರೆ ಮಳೆ, ಚಳಿಯೆನ್ನದೆ ಮಣಭಾರದ ಬಂದೂಕು ಹೊತ್ತು ಹಗಲು ರಾತ್ರಿ ಗಸ್ತು ತಿರುಗುವ ಬೀಟ್ ಪೋಲಿಸರು, ಕಾನ್‌ಸ್ಟೆಬಲ್ ಗಳ ಬಗ್ಗೆ ಏಕೆ ತಾತ್ಸಾರ? ಅವರ ಸೇವೆ ಖಾದಿಧಾರಿ ಪೊಲಿಟಿಕಲ್ ಪುಢಾರಿಗಳಿರಬಹುದು, ಇನ್ನಾವುದೇ ಸರಕಾರಿ ಉದ್ಯೋಗಿಗಿಂತ ಗುರುತರವಾದುದು, ಅವರ ಯೋಗಕ್ಷೇಮವನ್ನು ನೋಡಿಕೊಳ್ಳಬೇಕು ಎಂದು ಸಮಾಜ ಹಾಗೂ ಆಳುವ ವರ್ಗ ಇಬ್ಬರಿಗೂ ಏಕೆ ಅನಿಸುವುದಿಲ್ಲ?
ಒಬ್ಬ ಪೇದೆ ಅಥವಾ ಕಾನ್‌ಸ್ಟೆಬಲ್ ಎಂದರೆ ಪೊಲೀಸ್ ವ್ಯವಸ್ಥೆಯಲ್ಲಿ ಅತ್ಯಂತ ತಳಮಟ್ಟದ ಹುದ್ದೆ. ಆದರೆ ಇಡೀ ಪೊಲೀಸ್ ವ್ಯವಸ್ಥೆ ನಿಂತಿರುವುದೇ ಅವರ ಮೇಲೆ. ಆದರೆ ಕಾನ್‌ಸ್ಟೆಬಲ್‌ಗಳ ಖಾಕಿಗೆ ಖದರೂ(ಗೌರವ) ಇಲ್ಲ, ಕಿಮ್ಮತ್ತೂ(ದುಡಿಮೆಗೆ ತಕ್ಕ ಸಂಬಳ) ಇಲ್ಲ! ಸಮಾಜ ಹಾಗೂ ಆಡಳಿವರ್ಗದ ಕಥೆ ಹಾಗಿರಲಿ, ಬಹಳಷ್ಟು ಕಡೆ ಪೊಲೀಸ್ ಇಲಾಖೆಯೊಳಗೂ ಕಾನ್‌ಸ್ಟೆಬಲ್‌ಗಳಿಗೆ ಕಾಳಜಿ, ಗೌರವ ಎರಡೂ ಸಿಗುವುದಿಲ್ಲ.
2009, ಫೆಬ್ರವರಿ 16ರಂದು ಹೀಗೊಂದು ಘಟನೆ ನಡೆದುಹೋಯಿತು. ಕೆಎಸ್‌ಆರ್‌ಪಿ ಕಾನ್‌ಸ್ಟೆಬಲ್ ಶಿವಕುಮಾರ್ ರಜೆ ಮೇಲೆ ತೆರಳಿದ್ದರು. ಆದರೆ ಕಮಾಂಡೆಂಟ್ ರಜೆ ದಯಪಾಲಿಸಿದ್ದರೂ ಅವರ ಕೆಳಗಿನ ಇನ್ಪೆಕ್ಟರ್ ನಾಗೇಗೌಡರಿಗೆ ಸಹಿಸಲಾಗಲಿಲ್ಲ. ಆ ರಜೆಯನ್ನು ಕಡಿತ ಮಾಡಿ, ವಾಪಸ್ ಬಾ ಎಂದರು. ಶಿವಕುಮಾರ್‌ಗೂ ಹತಾಶೆಯ ಕಟ್ಟೆಯೊಡೆಯಿತು, ಬಂದೂಕನ್ನೆತ್ತಿ ಇನ್ಸ್‌ಪೆಕ್ಟರ್ ನಾಗೇಗೌಡರ ಎದೆ ಸೀಳಿ, ಕೆಳಕ್ಕುರುಳಿಸಿದ. ಅಷ್ಟು ಮಾತ್ರವಲ್ಲ, ತಾನೂ ಆತ್ಮಹತ್ಯೆ ಮಾಡಿಕೊಂಡ. 2013ರಲ್ಲಿ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲೂ ರಕ್ತ ಹರಿಯಿತು. ಗೌರಿಬಿದನೂರಿನಲ್ಲಿ ಕಟ್ಟಿಸಿರುವ ಹೊಸಮನೆಯ ಗೃಹಪ್ರವೇಶಕ್ಕೆ ಕಾನ್‌ಸ್ಟೆಬಲ್ ಆನಂದ್ ಕುಮಾರ್ ಒಂದು ವಾರ ರಜೆ ಕೇಳಿದ್ದಾರೆ. ಈ ಮೊದಲು ಕಾನ್‌ಸ್ಟೆಬಲ್ ಆಗಿದ್ದು ಇತ್ತೀಚೆಗೆ ತಾನೇ ಸಬ್‌ಇನ್ಸ್‌ಪೆಕ್ಟರ್ ಪರೀಕ್ಷೆ ಪಾಸು ಮಾಡಿ ತರಬೇತಿ ಮುಗಿಸಿ ಡಿಸೆಂಬರ್‌ನಲ್ಲಷ್ಟೇ ರಾಜಾನುಕುಂಟೆ ಠಾಣೆಯ ಉಸ್ತುವಾರಿ ಪಡೆದುಕೊಂಡು ಬಂದಿದ್ದ ಎಸ್‌ಐ ವಿಜಯ್‌ಕುಮಾರ್ ರಜೆಯನ್ನು ನಿರಾಕರಿಸಿದ್ದಾರೆ. ಇದಕ್ಕೂ ಮೊದಲು ಆತ ಅನಧಿಕೃತ ರಜೆಗಳನ್ನು ಮಾಡಿದ್ದೇ ನಿರಾಕರಣೆಗೆ ಕಾರಣವಾಗಿತ್ತು.
ಈ ಮಧ್ಯೆ ತನ್ನ ತಂದೆ, ಹೆಂಡತಿಯನ್ನು ಕರೆದುಕೊಂಡು ಬಂದ ಆನಂದ್ ರಜೆಗಾಗಿ ಅಂಗಲಾಚಿದ್ದಾರೆ. ಅಷ್ಟರಲ್ಲಿ ಮಾತಿನ ಚಕಮಕಿ, ಬೈಗುಳಗಳ ವಿನಿಮಯವೂ ನಡೆದಿದೆ. ಏಯ್ ನಿನ್ನ ಹೆಂಡ್ತೀನ ಕರ್ಕೊಂಡ್ ಬರ್ತಿಯೇನೋ ಎಂದು ಕೆಣಕಿದಾಗ ಆನಂದ್ ರೈಫಲ್ ಎತ್ತಿ ವಿಜಯ್‌ಕುಮಾರ್‌ಗೆ ಗುಂಡಿಕ್ಕಿದರು. ಸೇನೆಯಲ್ಲಿ ಇಂಥ ಘಟನೆಗಳು ಸರ್ವೇ ಸಾಮಾನ್ಯ. ರಜೆ ವಿಚಾರಕ್ಕೆ ಆಗಿಂದಾಗ್ಗೆ ಮೇಲಾಧಿಕಾರಿಗಳು ಮತ್ತು ಸೈನಿಕರ ನಡುವೆ ಜಟಾಪಟಿ, ಹತ್ಯೆ ನಡೆಯುತ್ತಿರುತ್ತವೆ. ಗಡಿ ಕಾಯುವ ಸಾಮಾನ್ಯ ಸೈನಿಕನಲ್ಲಿ ಮಾತ್ರ ಕಾಣುತ್ತಿದ್ದ ಹತಾಶೆಯ ಜತೆಗೆ ಮಗ್ಗುಲ ಮುಳ್ಳಾಗಿ ಚುಚ್ಚುತ್ತಿರುವ ಸಂಬಳ ನಮ್ಮ ರಾಜ್ಯದ ಪೊಲೀಸ್ ಕಾನ್‌ಸ್ಟೆಬಲ್‌ಗಳ ಬದುಕನ್ನು ದುಸ್ತರವಾಗಿಸುತ್ತಿದೆ. ಹಾಗಾಗಿ ಸಾಮೂಹಿಕ ರಜೆ ಹೋಗಲು ಮುಂದಾಗಿದ್ದಾರೆ.
ಈಗಲಾದರೂ ಅವರ ಬಗ್ಗೆ ಅಂತಃಕರಣವನ್ನಿಟ್ಟುಕೊಂಡು ನಾವು ನೋಡಬೇಕೋ ಬೇಡವೋ ಹೇಳಿ?
ಇಷ್ಟಕ್ಕೂ ಇವತ್ತು ಪೊಲೀಸ್ ಇಲಾಖೆ ನಿಂತಿರುವುದೇ ಕಾನ್‌ಸ್ಟೆಬಲ್‌ಗಳ ಮೇಲೆ ಅಲ್ಲವೆ? ರಸ್ತೆ ಬದಿ ಮಾರಾಟಗಾರರು, ಪಾನಿಪುರಿ ಮಾರುವವರಿಂದ ಐದೋ ಹತ್ತೋ ರೂಪಾಯಿ ತೆಗೆದುಕೊಳ್ಳುವ ಕಾನ್‌ಸ್ಟೆಬಲ್‌ಗಳ ಬಗ್ಗೆ ಸಾಮಾನ್ಯ ಜನರಾದ ನಾವೂ ತಾತ್ಸಾರ ಭಾವನೆ ಹೊಂದಿದ್ದೇವೆ.
ಆದರೆ ಕೋಮುಗಲಭೆಯಾಗಲಿ, ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಲಿ, ದೊಂಬಿ ನಡೆಯಲಿ, ಆರೋಪಿಯ ಬಂಧನವಿರಲಿ ಮೊದಲು ಜೀವದ ಹಂಗುತೊರೆದು ನುಗ್ಗುವವರೇ ಕಾನ್‌ಸ್ಟೆಬಲ್‌ಗಳು. ಪೊಲೀಸ್ ಇಲಾಖೆಯ ಪಾಲಿಗೆ ಕಾನ್‌ಸ್ಟೆಬಲ್‌ಗಳೇ Foot Soldiers. 2003, ಡಿಸೆಂಬರ್ 13ರಂದು ನಮ್ಮ ಸಂಸತ್ ಮೇಲೆ ದಾಳಿ ನಡೆದಾಗಲೂ ಸತ್ತಿದ್ದು ಕಾನ್‌ಸ್ಟೆಬಲ್‌ಗಳೇ. ಇನ್ನೊಂದು ಮಜಾ ಕೇಳಿ, ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ, ಎಸ್ಪಿ ನೇತೃತ್ವದಲ್ಲಿ, ಡಿಸಿಪಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಇಂತಿಷ್ಟು ಜನ ಕಳ್ಳಕಾಕರು, ದರೋಡೆಕೋರರನ್ನು ಬಂಧಿಸಲಾಗಿದೆ ಎಂದು ಬಿರುದು ಬಾವಲಿ ತೆಗೆದುಕೊಳ್ಳುತ್ತಾರೆ. ಆದರೆ ಈ ‘ನೇತೃತ್ವ’ದ ಹಿಂದಿರುವ ವ್ಯಕ್ತಿ, ಶಕ್ತಿಗಳು ಸಾಮಾನ್ಯ ಕಾನ್‌ಸ್ಟೆಬಲ್‌ಗಳೇ ಅಲ್ಲವೆ? ಅದಿರಲಿ, ಮಣಭಾರದ ರೈಫಲ್ ಹೊತ್ತು ಹೆಣಕಾಯುವಂತೆ ರಸ್ತೆ ರಸ್ತೆ ಮೇಲೆ ನಿಗಾ ಇಡುವ ಕಾನ್‌ಸ್ಟೆಬಲ್‌ಗಳಿಗೆ, ವಾರದ ರಜೆಯಿಲ್ಲ ಎಂದರೆ ನಂಬುತ್ತೀರಾ? ಪೊಲೀಸ್ ಮ್ಯಾನ್ಯುವಲ್ ಪ್ರಕಾರ ಪೊಲೀಸರು ಯಾವಾಗಲೂ ಆನ್‌ಡ್ಯುಟಿಯೇ. ಯಾವಾಗ ಕರೆದರೂ ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲ ಅಂದರೆ ಅಶಿಸ್ತು ಎಂದೇ ಪರಿಗಣಿಸಲ್ಪಡುತ್ತದೆ. ಹಾಗಂತ ವಾರಕ್ಕೊಂದು ರಜೆಯೂ ಇಲ್ಲದೇ ದುಡಿಯುವುದು ಸಾಧ್ಯವೇ? ಇತ್ತೀಚಿನವರೆಗೂ ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದ್ದಕ್ಕೆ ದಿನಕ್ಕೆ 50 ರೂ. ಇತ್ತು! ಈಗ 200 ರೂಪಾಯಿಗೆ ಏರಿಸಿದ್ದಾರೆ. ಒಬ್ಬ ಕೂಲಿ ಕಾರ್ಮಿಕನಿಗಿಂತಲೂ ಕಡೆಯಾಯಿತೆ ಕಾನ್‌ಸ್ಟೆಬಲ್‌ಗಳ ಕಿಮ್ಮತ್ತು? ರಜೆ ಕೊಡುವುದಿಲ್ಲ ಅಂತ ಸಬ್ಇನ್‌ಸ್ಟೆಕ್ಟರ್, ಇನ್‌ಸ್ಪೆಕ್ಟರ್ ಅಥವಾ ಮೇಲಧಿಕಾರಿಗಳನ್ನು ದೂರಿಯೂ ಪ್ರಯೋಜನವಿಲ್ಲ. ಇಷ್ಟಕ್ಕೂ 6 ಕೋಟಿ ಜನಸಂಖ್ಯೆಯಿರುವ ಕರ್ನಾಟಕದಲ್ಲಿರುವ ಪೊಲೀಸರ ಸಂಖ್ಯೆಯೆಷ್ಟು? ಒಂದು ಲಕ್ಷ ಮೀರುವುದಿಲ್ಲ. ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ 150-200 ಜನರಿಗೆ ಒಬ್ಬ ಪೊಲೀಸ್ ಇರಬೇಕು. ನಮ್ಮ ರಾಜ್ಯದಲ್ಲಿ 700-800 ಜನರಿಗೆ ಒಬ್ಬ ಪೊಲೀಸ್ ಇದ್ದಾರೆ.
ಉಳಿದೆಡೆಗೆ ಹೋಲಿಸಿದರೆ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸ್ ಬಲ ಉತ್ತಮವಾಗಿದೆ. ಆದರೂ ಶೇ.20ರಷ್ಟು ಕೊರತೆ ಇದೆ. ಉಳಿದ ಪ್ರದೇಶಗಳಲ್ಲಿ ಈ ಕೊರತೆ ಇನ್ನೂ ಹೆಚ್ಚಿದೆ. ಪ್ರತಿ ಸ್ಟೇಷನ್‌ನಲ್ಲಿ ಕನಿಷ್ಠ 35 ಜನ ಇರಬೇಕು, ಅದರಲ್ಲಿ 30 ಪರ್ಸೆಂಟ್ ಮಹಿಳೆಯರಿರಬೇಕು ಎಂಬುದು ನಾಲ್ಕನೇ ಪೊಲೀಸ್ ಆಯೋಗದ ಪ್ರಮುಖ ಶಿಫಾರಸು. ಆದರೆ 35 ಪೊಲೀಸರಿರುವ ಎಷ್ಟು ಸ್ಟೇಷನ್‌ಗಳಿವೆ ಹೇಳಿ? ಪ್ರತಿವರ್ಷವೂ ಪೊಲೀಸ್ ನೇಮಕಾತಿ ನಡೆಯಬೇಕೆಂದೂ ಹೇಳಿದೆ. ಆದರೆ ಅದು ಬಿಜೆಪಿ ಇರಬಹುದು, ಕಾಂಗ್ರೆಸ್ ಆಗಿರಬಹುದು ಯಾವ ಪಕ್ಷಗಳು ತಾನೇ ಪೊಲೀಸರ ಬಗ್ಗೆ ಸಂವೇದನೆ, ಅಂತಃಕರಣ ತೋರಿದ್ದಾರೆ?
ಈಗಲಾದರೂ ಪೊಲೀಸ್ ಸುಧಾರಣೆಗಳನ್ನು ತರುವುದೇ ಸಮಸ್ಯೆಯ ಪರಿಹಾರಕ್ಕೆ ಯೋಗ್ಯ ಮಾರ್ಗ. ಆ ಮೂಲಕ ಸಿಬ್ಬಂದಿ ಕೊರತೆ ನೀಗಿಸಿ ಪ್ರತಿಯೊಬ್ಬ ಪೇದೆಗೂ ದಿನಕ್ಕೆ 8 ತಾಸು ಕೆಲಸ, ವಾರಕ್ಕೊಂದು ರಜೆ ಸಿಗುವಂತೆ, ಅನಿವಾರ್ಯ ಪರಿಸ್ಥಿತಿಯಲ್ಲಿ ತುರ್ತು ರಜೆ ದೊರೆಯುವಂತೆ ಮಾಡಬೇಕು. ಅವರ ಮಕ್ಕಳಿಗೆ ಉಚಿತ ಅಥವಾ ರಿಯಾಯಿತಿ ಶಿಕ್ಷಣ, ಪ್ರವಾಸ ರಜೆ ಹಾಗೂ ಭತ್ಯೆ ನೀಡಬೇಕು. ಎಂಪ್ಲಾಯಿ ಬೆನಿಫಿಟ್ ಎಲ್ಲವೂ ಅವರಿಗೆ ಸಿಗಬೇಕು. ಸುಲಭ ಸಾಲ ಹಾಗೂ ಎಲ್ಲ ಪೊಲೀಸರಿಗೂ ವಸತಿ ಕೊಡಬೇಕು, ವರ್ಗಾವಣೆಯಲ್ಲಿ ಪ್ರಭಾವ ಇರಬಾರದು, ಮೆರಿಟ್‌ಗೆ ಮಾತ್ರ ಬೆಲೆ ಎನ್ನುವಂತಾಗಬೇಕು. ಇದೆಲ್ಲ ಮಾಡಿದಾಗ ನಮ್ಮ ಸಮಾಜಕ್ಕೆ ಒಳ್ಳೆಯ ಭದ್ರತೆಯೂ ಸಿಗುತ್ತದೆ. ನಾನು ದುಡಿದರೆ ನನ್ನ ಭವಿಷ್ಯಕ್ಕೇ ಒಳ್ಳೆಯದಾಗುತ್ತದೆ, ಪ್ರಮೋಷನ್ ಸಿಗುತ್ತದೆ, ಕೆಲಸಕ್ಕೆ ಮನ್ನಣೆ, ಪ್ರತಿಫಲ ಸಿಗುತ್ತದೆ ಎಂದರೆ ಎಲ್ಲರು ಚೆನ್ನಾಗಿಯೂ ಕರ್ತವ್ಯ ನಿರ್ವಹಿಸುತ್ತಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಸಮಾಜದಲ್ಲಿ ಯಾವುದೇ ಅಹಿತರ ಘಟನೆಗಳು ನಡೆದರೂ ಅದನ್ನು ತಡೆಯಲು, ನಿಯಂತ್ರಿಸಲು ಮೊದಲು ಮುಂದಾಗುವವರು ಕಾನ್‌ಸ್ಟೆಬಲ್‌ಗಳೇ. ಗೂಡಂಗಡಿಯೋ, ತಳ್ಳುಗಾಡಿಯೋ, ಟೀಸ್ಟಾಲ್ ಬಳಿಯೋ ನಿಂತು ಕಳ್ಳಕಾಕರು, ಸಮಾಜಘಾತುಕ ಶಕ್ತಿಗಳ ಬಗ್ಗೆ ಮಾಹಿತಿ ಕಲೆಹಾಕುವವರು ಇವರೇ. ಪ್ರತಿಯೊಬ್ಬ ಜನಪ್ರತಿನಿಧಿಗೂ ಭದ್ರತೆ ಒದಗಿಸುವ ಗನ್‌ಮ್ಯಾನ್‌ಗಳು ಕೂಡ ಕಾನ್‌ಸ್ಟೆಬಲ್‌ಗಳೇ ಅಗಿರುತ್ತಾರೆ. ನಿಮ್ಮ ಮನೆಕಾಯುವವರು, ಹೋದಲೆಲ್ಲ ನಿಮ್ಮನ್ನು ಹಿಂಬಾಲಿಸಿ ಭದ್ರತೆ ಕೊಡುವವರೂ ಅವರೇ. ಅವರಿಗೂ ಒಳ್ಳೆಯ ಬದುಕು ನಡೆಸುವ ಅರ್ಹತೆ ಇದೆ. ಒಬ್ಬ ಕಾನ್‌ಸ್ಟೆಬಲ್‌ಗೂ ತನ್ನ ಮಗ, ಮಗಳನ್ನು ಒಳ್ಳೆಯ ಸ್ಕೂಲಿಗೆ ಸೇರಿಸಬೇಕು ಅನ್ನೋ ಆಸೆ ಇರುವುದಿಲ್ಲವಾ? ಯೋಚಿಸಿ…
Pratap Simha's Blog
- Pratap Simha's profile
- 58 followers
