Pratap Simha's Blog, page 49

February 4, 2016

ಕೆ. ಆರ್ . ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರು

ಕೆ. ಆರ್ . ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರು


ಸಂಸದರ ಕೊಡುಗೆ : ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಈಗ ಉಚಿತವಾಗಿ ಶುದ್ಧ ಕುಡಿಯುವ ನೀರು ಲಭ್ಯ


ಮೈಸೂರು, ಫೆ.04, 2016 : ನಗರದ ಕೆ.ಆರ್ ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಂಸದ ಪ್ರತಾಪಸಿಂಹ ಗುರುವಾರ ಲೋಕಾರ್ಪಣೆಗೊಳಿಸಿದರು.



ಜಿಲ್ಲಾ ಆಸ್ಪತ್ರೆಯಾಗಿರುವ ನಗರದ ದೊಡ್ಡಾಸ್ಪತ್ರೆಗೆ ನಿತ್ಯ ಸಾವಿರಾರು ಬಡ ರೋಗಿಗಳು ಚಿಕಿತ್ಸೆಗೆ ಹಾಗೂ ಸಂಬಂಧಿಕರು ರೋಗಿಗಳ ಆರೈಕೆಗಾಗಿ ಭೇಟಿ ನೀಡುತ್ತಿರುತ್ತಾರೆ. ಇವರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗಿದೆ.


ಈ ತನಕ ಸಾರ್ವಜನಿಕರು ಶುದ್ಧ ನೀರಿಗಾಗಿ ಒಂದು ಬಾಟಲ್ ನೀರಿಗೆ ಸುಮಾರು 10ರಿಂದ20ರೂಪಾಯಿ ಪಾವತಿಸಿ ಆಸ್ಪತ್ರೆ ಹೊರಗಡೆ ಖರೀದಿಸುತ್ತಿದ್ದರು. ಇದನ್ನು ಮನಗಂಡು ಕೆ.ಆರ್ ಆಸ್ಪತ್ರೆಯ ಆವರಣದಲ್ಲಿ 16ನೇ ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಂಸದ ಪ್ರತಾಪ್ ಸಿಂಹ ಸ್ಥಾಪಿಸಲು ಮುಂದಾದರು.


ಮುಂದಿನ ದಿನಗಳಲ್ಲಿ ಈ ಶುದ್ಧ ಕುಡಿಯುವ ನೀರಿನ ಘಟಕದಿಂದ ಪೈಪ್ ಲೈನ್ ಮುಂಖಾಂತರ ಚಲುವಾಂಬ ಆಸ್ಪತ್ರೆ ಹಾಗೂ ಜಯದೇವ ಆಸ್ಪತ್ರೆಗಳಿಗೆ ನೀರು ಸರಬರಾಜು ಮಾಡಲಾಗುವುದು ಎಂದು ಸಂಸದ ಪ್ರತಾಪ ಸಿಂಹ ಈ ಸಂದರ್ಭದಲ್ಲಿ ಆಶ್ವಾಸನೆ ನೀಡಿದರು.


* ಸಮಸ್ಯೆ ಆಲಿಸಿದ ಸಂಸದ :


ಇದೇ ವೇಳೆ ಆಸ್ಪತ್ರೆ ಆವರಣದಲ್ಲಿ ಕಾರ್ಯನಿರ್ವಹಿಸುವ ಸುಮಾರು 400ಕ್ಕೂ ಹೆಚ್ಚು ಪೌರ ಕಾರ್ಮಿಕರ ಸಮಸ್ಯೆಯನ್ನು ಸಂಸದ ಪ್ರತಾಪಸಿಂಹ ಆಲಿಸಿದರು. ಜತೆಗೆ ಅವರೆಲ್ಲರಿಗೂ ಆಟಲ್ ಜೀ ಪಿಂಚಣಿ ಯೋಜನೆಯಡಿ ಪಿಂಚಣಿ ಸೌಲಭ್ಯವನ್ನು ಕಲ್ಪಿಸಲಾಗುವುದು ಹಾಗೂ ಅದರ ಮೊದಲ ಕಂತನ್ನು ಯಾರಾದರು ದಾಣಿಗಳಿಂದ ಭರಿಸಲಾಗುವುದು ಎಂದು ಭರವಸೆ ನೀಡಿದರು .



kr hospital water

 •  0 comments  •  flag
Share on Twitter
Published on February 04, 2016 21:17

January 29, 2016

ಸಂಕಷ್ಟಕ್ಕೆಲ್ಲ ‘ಸಂಘ’ ಕಾರಣ, ಇದೇ ಸೆಕ್ಯುಲರ್ ರಾಜಕಾರಣ !

ಸಂಕಷ್ಟಕ್ಕೆಲ್ಲ ‘ಸಂಘ’ ಕಾರಣ, ಇದೇ ಸೆಕ್ಯುಲರ್ ರಾಜಕಾರಣ !


ಮೋದಿ ಸರಕಾರದಿಂದಾಗುತ್ತಿರುವ ಜನಪರ ಕೆಲಸಗಳು ಚರ್ಚೆಯ ವಿಷಯವಾಗಿ ಮೆಚ್ಚುಗೆ ಪಡೆಯಬಾರದು ಎಂಬ ಏಕಮಾತ್ರ ಉದ್ದೇಶದಿಂದ ಮಾಧ್ಯಮಗಳ ಮೂಲಕ ನಕಾರಾತ್ಮಕ ಪ್ರಚಾರಾಂದೋಲನ ನಡೆಯುತ್ತಿದೆ. ಸುಮಾರು ಹದಿನಾಲ್ಕುವರೆ ಸಾವಿರ ಎನ್‌ಜಿಓಗಳಿಗೆ ಹರಿದು ಬರುತ್ತಿದ್ದ ದೇಣಿಗೆಗೆ ಕತ್ತರಿ ಹಾಕಿರುವುದರಿಂದ ಕುಪಿತಗೊಂಡಿರುವವರ ಹುನ್ನಾರವಿದು.



ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದರು. ಅದು 1998, ಸೆಪ್ಟೆಂಬರ್ 23. ಮಧ್ಯಪ್ರದೇಶದ ಜಬುಲಾ ಜಿಲ್ಲೆಯ ನವಪರಾ ಗ್ರಾಮದಲ್ಲಿ ನಾಲ್ವರು ಕ್ರೈಸ್ತ ಸನ್ಯಾಸಿನಿಯರ ಮೇಲೆ ಅತ್ಯಾಚಾರ ನಡೆದುಹೋಯಿತು. ಆಗ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದವರು ಕಾಂಗ್ರೆಸ್ಸಿನ ದಿಗ್ವಿಜಯ್ ಸಿಂಗ್. ಕಾನೂನು ಸುವ್ಯವಸ್ಥೆ ಕಾಪಾಡು­ವುದು ರಾಜ್ಯ ಸರ್ಕಾರದ ಜವಾಬ್ದಾರಿ. ಇಷ್ಟಾಗಿಯೂ ಮಾಧ್ಯಮಗಳು ತಮ್ಮ ದಾಳಿಯ ಗುರಿಯನ್ನು ಕೇಂದ್ರ ಸರಕಾರದತ್ತ ತಿರುಗಿಸಿ­ದವು. ಸಂಘಪರಿವಾರ, ಅದರಲ್ಲೂ ಸಂಘದ ಅಂಗಸಂಸ್ಥೆಯಾದ ವಿಶ್ವಹಿಂದು ಪರಿಷತ್ತನ್ನು ಹಿಗ್ಗಾಮುಗ್ಗಾ ಜಾಡಿಸಿದರು. ವಾಜಪೇಯಿ ಸರಕಾರದ ಇಮೇಜಿಗೆ ಹೊಡೆತ ಕೊಡಲು ಆರಂಭಿಸಿ­ದರು. ಅತ್ಯಾಚಾರದಂಥ ಹೀನಕೃತ್ಯವನ್ನು ಸಮಾಜ­ದಲ್ಲಿ ಯಾರೂ ಒಪ್ಪುವುದಿಲ್ಲ. ಇಂಥ ನೀಚ ಕೆಲಸವನ್ನು ಸಂಘಪರಿವಾರ­ದವರು ಎಸಗಿದ್ದಾರೆ ಎಂದು ಬೊಬ್ಬಿರಿದು ವರ್ಚಸ್ಸಿಗೇ ಧಕ್ಕೆ ತರಲು ಪ್ರಯತ್ನಿಸಿದರು. ಈ ನಡುವೆ “Communal outrages in M.P.” ಎಂಬ ವಿಶೇಷ ವರದಿಯನ್ನು ಪ್ರಕಟಿಸಿದ ಫ್ರಂಟ್‌ಲೈನ್ ಮ್ಯಾಗಝಿನ್, ಕಾಂಗ್ರೆಸ್ ನಾಯಕರ ಅರೋಪವನ್ನೇ ಹೂರಣವಾಗಿಟ್ಟು­ಕೊಂಡು ಸಂಘಪರಿವಾರ­ವನ್ನು ಕಟಕಟೆಗೆ ತಂದು ನಿಲ್ಲಿಸಿತು. ಸತತ ಒಂದೂವರೆ ತಿಂಗಳ ಕಾಲ ಜಬುವಾ ಅತ್ಯಾಚಾರವ­ನ್ನಿಟ್ಟುಕೊಂಡು ಆರೆಸ್ಸೆಸ್‌ನ ಚಾರಿತ್ರ್ಯವಧೆ ನಡೆಯಿತು. ಅಟಲ್ ಸರ್ಕಾರವನ್ನು ಮುಜುಗರ­ಕ್ಕೀ­ಡು ಮಾಡುವ ವ್ಯವಸ್ಥಿತ ಷಡ್ಯಂತ್ರ ಮುಂದು­ವರಿಯಿತು. ರಾಷ್ಟ್ರೀಯ ಹಾಗೂ ಅಂತಾ­ರಾಷ್ಟ್ರೀಯ ಮಟ್ಟದಲ್ಲಿ ನೂರಾರು ಪ್ರತಿಭಟನೆಗಳನ್ನು ಮಾಡಿ ಅಟಲ್ ಮೇಲೆ ಒತ್ತಡ ಹೇರಿದರು.

ಅದರೆ ಆ ದಿನ ನಿಜಕ್ಕೂ ನಡೆದಿದ್ದೇನು? ಪ್ರೀತಿ ಶರನ್ ಎಂಬ ಚರ್ಚ್ ಹಾಗೂ ದವಾಖಾನೆಗೆ ಔಷಧ ಬೇಕೆಂದು ಗುಂಪೊಂದು ಬಂದಿದ್ದು ನಿಜ, ಔಷಧದ ನೆಪದಲ್ಲಿ ಒಳನುಗ್ಗಿ ಕ್ರೈಸ್ತ ಸನ್ಯಾಸಿನಿ­ಯರ ಮೇಲೆ ಅತ್ಯಾಚಾರವೆಸಗಿದ್ದೂ ನಿಜ. ಆದರೆ ಅವರ‍್ಯಾರು? ಸಂಘಪರಿವಾರದವರೇ? ವಿಶ್ವಹಿಂದೂ ಪರಿಷತ್‌ನವರೇ? ಅಥವಾ ಕನಿಷ್ಠ ಹಿಂದುಗಳೇ? ಮುಕ್ತ ಹಾಗೂ ನ್ಯಾಯಸಮ್ಮತ ತನಿಖೆ ನಡೆಯಬೇಕೆಂದು ಅಟಲ್ ಸರ್ಕಾರ ನೀಡಿದ ಸೂಚನೆ ಮೇರೆಗೆ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ತನಿಖೆಗೆ ಆದೇಶಿಸಿದರು. 24 ಜನರ ಬಂಧನವಾಯಿತು. ಕೇಂದ್ರ ಸರಕಾರಕ್ಕೆ ಸೇರಿದ ಪ್ರೆಸ್ ಇನರ್ಮೇಶನ್ ಬ್ಯುರೋ ಎಲ್ಲ 24 ಜನರ ಹೆಸರನ್ನು ಅವರ ಧರ್ಮದೊಂದಿಗೆ ಮಾಧ್ಯಮ­ಗಳ ಮುಂದಿಟ್ಟಿತು. ಆದರೆ ಮರುದಿನ ಅತ್ಯಾಚಾರಿಗಳ ಧರ್ಮ ಯಾವುದು ಎಂಬುದನ್ನು ಯಾವೊಂದು ಪತ್ರಿಕೆಯೂ ಪ್ರಕಟಿ­ಸಲಿಲ್ಲ! ಏಕೆಂದರೆ… 24 ಅತ್ಯಾಚಾರಿಗಳಲ್ಲಿ 12 ಜನ ಕ್ರೈಸ್ತರೇ ಆಗಿದ್ದರು!! ಉಳಿದವರು ಇನ್ನೂ ಮತಾಂತರಗೊಳ್ಳಬೇಕಿದ್ದ ಬುಡಕಟ್ಟು ಜನಾಂಗದವರಾಗಿದ್ದರು! ಹೀಗಿದ್ದಾಗ್ಯೂ ಮಾಧ್ಯಮ­­­­ಗಳು ತಮ್ಮ ಎಂದಿನ ಪ್ರವೃತ್ತಿಯನ್ನು ಬಿಡಲಿಲ್ಲ.


ಯಾವುದೇ ಅಹಿತಕರ ಘಟನೆ ಸಂಭವಿಸಿದರೂ ಅದರ ಹಿಂದೆ ಸಂಘಪರಿವಾರದ ಕೈವಾಡವಿದೆ ಎಂದು ಅನುಮಾನಿಸಲು, ದೂರಲು ಆರಂಭಿಸಿದವು. ಈ ನಡುವೆ 2000, ಜೂನ್ 8ರಂದು ಗುಲ್ಬರ್ಗ ಜಿಲ್ಲೆಯ ವಾಡಿ ಬಳಿಯ ಸೇಂಟ್ ಆನ್ ಚರ್ಚ್‌ನಲ್ಲಿ 2 ಕಚ್ಚಾ ಬಾಂಬುಗಳು ಸೋಟಗೊಂಡವು. ಚರ್ಚ್ ಹಾನಿಗೊಳಗಾಗಿ ಇಬ್ಬರು ಗಾಯಗೊಂಡರು. ಆಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು ಎಸ್.ಎಂ.ಕೃಷ್ಣ. ಮಧ್ಯಪ್ರದೇಶದಲ್ಲಿ ದಿಗ್ವಿಜಯ್ ಸಿಂಗರನ್ನು ಹೇಗೆ ಮಾಧ್ಯಮ­ಗಳು ರಕ್ಷಿಸಿದವೋ ಅದರಂತೆಯೇ ಇಲ್ಲೂ ಎಸ್.ಎಂ. ಕೃಷ್ಣರ ಬದಲು ಸಂಘಪರಿವಾರ ಹಾಗೂ ಅಟಲ್ ಸರ್ಕಾರವನ್ನು ಪ್ರಶ್ನಿಸಲಾರಂಭಿದವು. ಅದರ ಬೆನ್ನಲ್ಲೇ 2000, ಜುಲೈ 8ರಂದು ಹುಬ್ಬಳ್ಳಿಯ ಸೇಂಟ್ ಜಾನ್ ಲೂಥರ್ನ್ ಚರ್ಚ್‌ನಲ್ಲಿ ಬಾಂಬ್ ಸ್ಪೋಟವಾಯಿತು . ಮರುದಿನ ಬೆಂಗಳೂರಿನ ಜಗಜೀವನ್‌ರಾಮ್‌ನಗರದ ಸೇಂಟ್ ಪೌಲ್ ಚರ್ಚ್‌ನಲ್ಲಿ ಬಾಂಬ್ ಸ್ಪೋಟಗೊಂಡವು. ಹೀಗೆ ಒಂದು ಕಡೆ ಭಯೋತ್ಪಾದಕರು ಸರಣಿ


ಚರ್ಚ್ ದಾಳಿ ಮಾಡಿದರೆ, ಇನ್ನೊಂದೆಡೆ ಮಾಧ್ಯಮಗಳು ಆರೆಸ್ಸೆಸ್ ಮೇಲೆ ಸತತ ದಾಳಿ ಮಾಡಲಾರಂಭಿಸಿದವು.


ಆದರೆ ಸತ್ಯ ಬೇರೆಯೇ ಆಗಿತ್ತು! ಅದೃಷ್ಟವಶಾತ್, ಮತ್ತೊಂದು ಚರ್ಚನ್ನು ಸೋಟಿಸಲು ಬಾಂಬ್ ಹೊತ್ತೊಯ್ಯು­ತ್ತಿದ್ದ ಮಾರುತಿ ವ್ಯಾನ್ ಮಾರ್ಗಮಧ್ಯದಲ್ಲೇ ಸೋಟ­ಗೊಂಡಿತು. ಜಾಕಿರ್ ಹಾಗೂ ಸಿದ್ದಿಕಿ ಎಂಬವರು ಸ್ಥಳದಲ್ಲೇ ಸತ್ತರೆ, ಎಸ್.ಎಂ. ಇಬ್ರಾಹಿಂ ಎಂಬಾತ ಗಾಯಗೊಂಡು ಪೊಲೀಸರ ಸೆರೆಯಾದ. ಆಗ ಸತ್ಯಹೊರಬಿತ್ತು. ಮೂರೂಚರ್ಚ್ ದಾಳಿಗಳ ಹಿಂದಿದ್ದುದು ಯಾರ ಕೈವಾಡ ಎಂಬುದು ಬೆಳಕಿಗೆ ಬಂತು, ಅದು ಇಸ್ಲಾಮಿಕ್ ಸಂಘಟನೆ ದೀನ್‌ದಾರ್ ಅಂಜುಮಾನ್ ಆಗಿತ್ತು! ಬಂಧಿತರಾದ 45 ಆರೋಪಿಗಳೂ ಮುಸಲ್ಮಾನರಾಗಿದ್ದರು! ಆರೆಸ್ಸೆಸ್‌ಗೂ ಈ ಘಟನೆಗಳಿಗೂ ಯಾವ ಸಂಬಂಧವೂ ಇರಲಿಲ್ಲ. ಸಂಬಂಧವಿದ್ದಿದ್ದು ದೀನ್‌ದಾರ್‌ಗೂ ಹಾಗೂ ಪಾಕಿಸ್ತಾನದ ಐಎಸ್‌ಐಗೂ ಆಗಿತ್ತು! ಏಕಾಗಿ ಐಎಸ್‌ಐ ದೀನ್‌ದಾರನ್ನು ಬಳಸಿಕೊಂಡು ಚರ್ಚ್ ದಾಳಿ ಮಾಡಿತ್ತು ಅಂದುಕೊಂಡಿರಿ? ಚರ್ಚ್ ದಾಳಿ ಮಾಡಿದರೆ ಸಹಜವಾಗಿಯೇ ಎಲ್ಲರೂ ಸಂಘಪರಿವಾರವನ್ನು ಹಾಗೂ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರಕಾರವನ್ನು ದೋಷಿ ಮಾಡುತ್ತಾರೆ. ಚರ್ಚ್ ದಾಳಿ ಎಂದ ಕೂಡಲೇ ಜಗತ್ತಿನಾದ್ಯಂತ ಇರುವ ಕ್ರೈಸ್ತ ಲಾಬಿಗಳು ಜಾಗೃತಗೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಪ್ರದರ್ಶನ, ಪ್ರತಿಭಟನೆ ಮಾಡಿ ಭಾರತದಲ್ಲಿ ಸುರಕ್ಷತೆ ಇಲ್ಲ ಎಂಬ ಭಾವನೆ ಮೂಡುತ್ತದೆ. ಅದು ಬಂಡವಾಳ ಹೂಡಿಕೆದಾರರಿಗೆ ಭಯವನ್ನು ಮೂಡಿಸು­ತ್ತದೆ ಹಾಗೂ ಭಾರತಕ್ಕೆ ಬಂಡವಾಳ ಹರಿದು ಬರುವುದು ನಿಂತು ಅಭಿವೃದ್ಧಿ ಕುಂಠಿತವಾಗುತ್ತದೆ. ಒಂದು ಕಡೆ ಖೋಟಾ ನೋಟು­ಗಳನ್ನು ಹರಿಬಿಟ್ಟು ನಮ್ಮ ಅರ್ಥವ್ಯವಸ್ಥೆಯನ್ನು ಹಾಳುಗೆಡವು­ತ್ತಿದ್ದ ಐಎಸ್‌ಐ, ಮತ್ತೊಂದು ಕಡೆ ಚರ್ಚ್ ದಾಳಿಗಳ ಮೂಲಕ ಭಾರತಕ್ಕೆ ಬಂಡವಾಳ ಹರಿದುಬರುವುದನ್ನು ನಿಲ್ಲಿಸಲು ಮುಂದಾ­­ಗಿತ್ತು! ಇವತ್ತು ಮೋದಿ ಸರ್ಕಾರದ ವಿರುದ್ಧ ನಡೆಯು­ತ್ತಿರುವ ದಾಳಿಯ ಹಿಂದೆ ಕೂಡ ಅಂಥದ್ದೇ ಉದ್ದೇಶ, ಗುರಿ ಹಾಗೂ ಕೆಟ್ಟ ಹೆಸರು ತರುವ ಪ್ರಯತ್ನ ಕಾಣುತ್ತಿಲ್ಲವೆ?!


ವ್ಯತ್ಯಾಸವಿಷ್ಟೇ-ಅಂದು ಐಎಸ್‌ಐ ದೀನ್‌ದಾರನ್ನು ಬಳಸಿ­ಕೊಂಡು ಭಾರತದ ವರ್ಚಸ್ಸನ್ನು ಹಾಳುಗೆಡವಿ, ಬಂಡವಾಳ ಹರಿವನ್ನು ತಡೆಯಲು ಪ್ರಯತ್ನಿಸಿತ್ತು, ಇಂದು ಆ ಕೆಲಸವನ್ನು ಐಎಸ್‌ಐ ಜತೆ ಸೌದಿಯ ವಹಾಬಿಸಂ, ಮಿಷನರಿಗಳು ಹಾಗೂ ಎನ್‌ಜಿಓಗಳ ಕಾಸು, ಕಾಂಗ್ರೆಸ್ಸಿನ ಪ್ರೊಪಗಾಂಡಾ ಮಷಿನರಿ ಮಾಡುತ್ತಿದೆ. 16 ಪಕ್ಷಗಳನ್ನೊಳಗೊಂಡ ವಾಜಪೇಯಿಯವರ ಅನಿಶ್ಚಿತ ಸರ್ಕಾರದ ಮೇಲೆಯೇ ಆ ಪರಿ ದಾಳಿ ನಡೆಯ­ಬಹುದಾದರೆ ಸ್ವಂತಶಕ್ತಿಯಿಂದ ಅಧಿಕಾರಕ್ಕೆ ಬಂದಿರುವ ಕಟ್ಟಾ ರಾಷ್ಟ್ರವಾದಿ ಮೋದಿಯವರ ಸರಕಾರದ ಮೇಲೆ ಇನ್ನೆಂಥಾ ದಾಳಿ ನಡೆಯಬಹುದು, ಎಷ್ಟೆಲ್ಲಾ ಜನ ಕೈಜೋಡಿಸಬಹುದು ಊಹಿಸಿ? ನಿಮಗೆಲ್ಲ ತಿಳಿದಿರುವಂತೆ 2014, ಮೇ 26ರಂದು ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಪದಗ್ರಹಣ ಮಾಡಿ ಒಂದು ತಿಂಗಳು ತುಂಬುವ ಮೊದಲೇ ಅಂದರೆ ಜೂನ್ 24ರಂದು,


“30 days of Narendra Modi Sarkar: Top 10 controversies” ಎಂದು ಖ್ಯಾತ ಇಂಗ್ಲಿಷ್ ದಿನಪತ್ರಿಕೆ­ಯೊಂದು ಅಪಸ್ವರವೆತ್ತಿತು! ಮೋದಿ­ಯವರು ಪ್ರಮಾಣ ವಚನ ಸ್ವೀಕರಿಸಿದ ನಂತರ ನಡೆದ ಮೊದಲ ಸಂಪುಟ ಸಭೆ­ಯಲ್ಲೇ ಕಪ್ಪುಹಣದ ತನಿಖೆಗೆ ಎಸ್‌ಐಟಿ ರಚನೆ ಮಾಡುವ ನಿರ್ಧಾರ ಕೈಗೊಂಡು, ಸುಪ್ರೀಂ ಕೋರ್ಟ್ 2011ರಲ್ಲೇ ಹೇಳಿದ್ದ ಕೆಲಸವನ್ನು ಮೋದಿ ಮೊದಲ ದಿನವೇ ಮಾಡಿದರೂ ಈ ಪತ್ರಿಕೆಗೆ ಮೆಚ್ಚುಗೆಯ ವಿಷಯವಾಗಿ ಕಾಣಲಿಲ್ಲ. ಕಾರ್ಯಾ­ರಂಭದ ಹಂತಕ್ಕೆ ಬಂದಿದ್ದ ಕೂಡನ್‌ಕುಲಂ ಅಣುವಿದ್ಯುತ್ ಸ್ಥಾವರ­ವನ್ನು ಬಂದ್ ಮಾಡಲು ಪ್ರಯತ್ನಿಸುತ್ತಿದ್ದ ಗ್ರೀನ್‌ಪೀಸ್ ಹಾಗೂ ಕ್ರೈಸ್ತ ಎನ್‌ಜಿಓಗಳು ಭಾರತದಲ್ಲಿನ ಆರ್ಥಿಕ ಪ್ರಗತಿ­ಯನ್ನು ತಡೆಯಲು ಪ್ರಯತ್ನಿ­ಸುತ್ತಿವೆ ಎಂಬ ಇಂಟೆಲಿಜೆನ್ಸ್ ಬ್ಯೂರೋದ(ಐಬಿ) ಆತಂಕಕಾರಿ ವರದಿಯನ್ನು ಆಧರಿಸಿ ಈ ಎನ್‌ಜಿಓಗಳ ಮೇಲೆ ನಿರ್ದಾಕ್ಷಿಣ್ಯ­ವಾಗಿ ನಿಷೇಧ ಹೇರಿದರು. ಅದೂ ಈ ಪತ್ರಿಕೆಗೆ ಮೆಚ್ಚುವಂಥ ಕೆಲಸವಾಗಿ ಕಾಣಲಿಲ್ಲ. ಒಂದೊಂದು ಸಣ್ಣಪುಟ್ಟ ದರೋಡೆ, ಕಳ್ಳತನಗಳಿಗೂ ಸಂಘಪರಿವಾರದ ಮೇಲೆ ದೋಷಾರೋಪ ಮಾಡಿ ಮೋದಿ ಸರಕಾರವನ್ನು ಹಣಿಯುವ ಕೆಲಸ ಆರಂಭವಾಯಿತು.


2014, ಡಿಸೆಂಬರ್ 1ರಂದು ರಾಜಧಾನಿ ದೆಹಲಿಯ ದಿಲ್ಷಾದ್ ಗಾರ್ಡನ್‌ನ ಸೇಂಟ್ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದಾಗಲೂ ಸಂಘಪರಿವಾರದ ಮೇಲೆ ಅನುಮಾನಿಸಿತು ಮಾಧ್ಯಮ. ಆದರೆ ವಾಸ್ತವದಲ್ಲಿ ಅದು ವಿದ್ಯುತ್ ಸಂಪರ್ಕ ದೋಷದಿಂದಾದ ಘಟನೆಯಾಗಿತ್ತು. 2014, ಡಿಸೆಂಬರ್ 6ರಂದು -ತಿಮಾ ಚರ್ಚ್‌ನ ಮೇಲೆ ಕಲ್ಲು ಬಿದ್ದು ಕಿಟಕಿ ಗಾಜು ಒಡೆಯಿತು. ಆಗಲೂ ಹಿಂದುತ್ವವಾದಿಗಳ ಮೇಲೆ ಗೂಬೆ ಕೂರಿಸಿದರು. ಆದರೆ ಚರ್ಚ್ ಬಳಿ ಆಟವಾ­ಡುತ್ತಿದ್ದ ಮಕ್ಕಳು ಬಿಸಾಡಿದ ಕಲ್ಲು ಅದಾಗಿತ್ತು. ಇವೆಲ್ಲಕ್ಕಿಂತ ಮಾಧ್ಯಮಗಳ ಮೇಲೆ ಅಸಹ್ಯ ಹುಟ್ಟಿಸುವ ಸಂಗತಿಯೆಂದರೆ 2015, ಮಾರ್ಚ್ 14ರಂದು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಿಂದ 100 ಕಿ.ಮೀ. ದೂರದಲ್ಲಿರುವ ಕ್ರೈಸ್ತ ಕಾನ್ವೆಂಟ್­­ನಲ್ಲಿ 72 ವರ್ಷದ ಸನ್ಯಾಸಿನಿಯೊಬ್ಬರ ಮೇಲೆ ಅತ್ಯಾಚಾರ ನಡೆಯಿತು. ಇಡೀ ನಾಗರಿಕ ಸಮಾಜವೇ ತಲೆತಗ್ಗಿಸು­ವಂಥ ಘಟನೆ ಅದಾಗಿತ್ತು ಎಂಬುದರಲ್ಲಿ ಅನುಮಾನವಿಲ್ಲ.


ಮಮತಾ ಬ್ಯಾನರ್ಜಿಯ ಮೂಗಿನ ಕೆಳಗೆ ನಡೆಯುವ ಘಟನೆಗಳಿಗೂ ಮೋದಿಯನ್ನು ದೂರುವುದು ಎಷ್ಟರಮಟ್ಟಿಗೆ ಸರಿ? ಮೋದಿ ಸರಕಾರ ಬಂದ ಮೇಲೆ ಅಲ್ಪಸಂಖ್ಯಾತರ ಮೇಲೆ ದಾಳಿಗಳು ಹೆಚ್ಚುತ್ತಿವೆ ಎಂದು ದೂರಿದರು. ಪಂಜಾಬ್ ಹಾಗೂ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಜೂಲಿಯಸ್ ರಿಬೆರೋ ಅವರಂತೂ ಒಂದು ಹೆಜ್ಜೆ ಮುಂದೆ ಹೋಗಿ, ಮಾರಣಹೋಮವೇ ಆರಂಭವಾಗಿದೆಯೆಂಬಂತೆ ಬೊಬ್ಬೆ ಹಾಕಿದರು. ವ್ಯಾಟಿಕನ್‌ನಿಂದ ನಿಯೋಗವೊಂದು ಭಾರತಕ್ಕೆ ಬಂತು. ಕೋಲ್ಕತಾದ ಆರ್ಚ್ ಬಿಶಪ್ ಮಮತಾ ಸರಕಾರಕ್ಕೆ ನಿರ್ದೋಷಿ ಎಂದು ಸರ್ಟಿಫಿಕೆಟ್ ಕೊಟ್ಟು ಮೋದಿ ಸರಕಾರ, ಆರೆಸ್ಸೆಸ್ಸು, ವಿಎಚ್‌ಪಿ, ಘರ್ ವಾಪಸ್ಸಿ ಮೇಲೆ ಗೂಬೆ ಕೂರಿಸಿದರು.


ಕೊನೆಗೆ ಆಗಿದ್ದೇನು? ಆರು ದಿನಗಳ ಸತತ ಮಾಧ್ಯಮಗಳ ದಾಳಿಯ ನಂತರ, ಶಬ್ದಕೋಶದಲ್ಲಿರುವ ಎಲ್ಲ ಕೆಟ್ಟ ಪದಗಳನ್ನು ಸಂಘಪರಿವಾರದ ಮೇಲೆ ಬಳಸಿದ ಮೇಲೆ ಮಮತಾ ಸರಕಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಿತು. ಸಿಬಿಐ ತನಿಖೆಗೆ ಕೇಂದ್ರ ಅಸ್ತು ನೀಡುವ ಮೊದಲೇ ಸಿಐಡಿ ಇಬ್ಬರನ್ನು ಬಂಧಿಸಿತು. ಅವರಲ್ಲಿ ಒಬ್ಬನಾದ ಸಲೀಂ ಶೇಕ್ ಘಟನೆ ನಡೆದಾಗ ತಾನಿದ್ದೆ ಎಂಬುದನ್ನು ಒಪ್ಪಿಕೊಂಡ! ಜೂನ್‌ನಲ್ಲಿ ಬಂಧಿತನಾದ 28 ವರ್ಷದ ನಝರುಲ್ ಇಸ್ಲಾಂ ತಾನೇ ಅತ್ಯಾಚಾರವೆಸಗಿದ್ದು ಎಂಬುದನ್ನು ಒಪ್ಪಿಕೊಂಡ!! ಆದರೆ ಸತತವಾಗಿ ಆರೆಸ್ಸೆಸ್, ಘರ್ ವಾಪಸಿ, ಮೋದಿ ಮೇಲೆ ಟೀಕಾಪ್ರಹಾರ ಮಾಡಿದ್ದ ಮಾಧ್ಯಮಗಳು ನಿಜವಾಗಿಯೂ ಕೃತ್ಯವೆಸಗಿದ್ದವರ ಧರ್ಮವನ್ನಾಗಲಿ, ಬಾಂಗ್ಲಾದೇಶಿ ಅಕ್ರಮ ವಲಸಿಗರೆಂಬುದನ್ನಾಗಲಿ ಹೇಳುವ ಕನಿಷ್ಠ ಸೌಜನ್ಯವನ್ನೂ ತೋರಲಿಲ್ಲ! ಇತ್ತ ಇದು ಮಾನವತೆಯ ಮೇಲಿನ ಆಕ್ರಮಣ ಎಂದಿದ್ದ ಮಮತಾ ಸಂಪುಟದಲ್ಲಿ ಸಚಿವರಾಗಿರುವ ಫಿರ್ಹಾದ್ ಹಕೀಮ್, ಕೃತ್ಯವೆಸಗಿದವರು ಸ್ವಧರ್ಮೀಯರೇ ಎಂದು ತಿಳಿದ ಕೂಡಲೇ ಮೌನಕ್ಕೆ ಶರಣಾದರೆ, ಸಂಘಪರಿವಾರವನ್ನು ದೂರಿದ್ದ ಆರ್ಚ್ ಬಿಶಪ್ ಮತ್ತೆ ಮುಖ ತೋರಲೇ ಇಲ್ಲ.


ಏಕಾಗಿ ಈ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಲಾಗುತ್ತಿದೆ ಯೆಂದರೆ… ನರೇಂದ್ರ ಮೋದಿ ಸರ್ಕಾರ ಮಾಡುತ್ತಿರುವ ಜನಪರ ಕೆಲಸಗಳು ಚರ್ಚೆಯ ವಿಷಯವಾಗಿ ಜನರ ಮೆಚ್ಚುಗೆ ಪಡೆಯಬಾರದು ಎಂಬ ಏಕಮಾತ್ರ ಉದ್ದೇಶದಿಂದ ಮಾಧ್ಯಮ­ಗಳ ಮೂಲಕ ನಕಾರಾತ್ಮಕ ಪ್ರಚಾರಾಂದೋಲನ ನಡೆಯುತ್ತಿದೆ. ಆದಕಾರಣವೇ ಸಿದ್ದರಾಮಯ್ಯನವರ ಸುಪರ್ದಿ­­ನಲ್ಲಿದ್ದ ರಾಜ್ಯದಲ್ಲಿ ಕಲ್ಬುರ್ಗಿ ಹತ್ಯೆಯಾದರೂ ಸಂಘಪರಿವಾರ ಹಾಗೂ ಮೋದಿ­ಯವರನ್ನು ದೂರುತ್ತಾರೆ, ಕಾಂಗ್ರೆಸ್ಸಿನ ಪೃಥ್ವಿರಾಜ್ ಚವ್ಹಾಣ್ ಮುಖ್ಯಮಂತ್ರಿಯಾಗಿದ್ದಾಗ ಕೊಲೆಯಾದ ನರೇಂದ್ರ ದಾಭೋಲ್ಕರ್ ಹತ್ಯೆಗೂ ಪರಿವಾರ ಕಾರಣವೆನ್ನುತ್ತಾರೆ. ಇಲ್ಲಿ ಮತ್ತೊಂದು ಆರ್ಥಿಕ ಕಾರಣವೂ ಇದೆ. ನಮ್ಮ ದೇಶದಲ್ಲಿ 400 ಜನರಿಗೊಂದರಂತೆ 24 ಲಕ್ಷ ಎನ್‌ಜಿಓಗಳಿವೆ! ಇವುಗಳಲ್ಲಿ ಬಹಳಷ್ಟು ಎನ್‌ಜಿಓಗಳಿಗೆ ದೇಶವಿರೋಧಿ ಚಟುವಟಿಕೆಗಳಿಗಾಗಿ ಕೋಟ್ಯಂತರರು. ವಿದೇಶಿ ದೇಣಿಗೆ ಹರಿದು ಬರುತ್ತಿದೆ.


ಇಂಥ ಎನ್‌ಜಿಓಗಳ ಜತೆ ಪತ್ರಕರ್ತರು, ಚಳವಳಿಕಾರರು, ಅಂಕಣಕಾರರು, ಮತಾಂತರಿಗಳು ಸಂಪರ್ಕ ಹೊಂದಿದ್ದು ವಿದೇಶಿ ದೇಣಿಗೆಯ ಫಲಾನುಭವಿಗಳಾಗಿದ್ದಾರೆ. ನರೇಂದ್ರ ಮೋದಿ­ ಅಧಿಕಾರಕ್ಕೆ ಬಂದ ನಂತರ ಅಪಾರ ದೇಣಿಗೆ ಪಡೆಯುತ್ತಿರುವ ಇಂಥ ಎನ್‌ಜಿಓಗಳನ್ನು FCRA ವ್ಯಾಪ್ತಿಗೆ ತಂದು ಲೆಕ್ಕ ಕೇಳಿದರು ಹಾಗೂ ಲೆಕ್ಕಕೊಡುವವರೆಗೂ ನಿಷೇಧ ಹೇರಿದರು. ಸುಮಾರು ಹದಿನಾಲ್ಕುವರೆ ಸಾವಿರ ಎನ್‌ಜಿಓಗಳಿಗೆ ಹರಿದು ಬರುತ್ತಿದ್ದ ದೊಡ್ಡ ಮಟ್ಟದ ದೇಣಿಗೆಗೆ ಕತ್ತರಿ ಹಾಕಿರುವುದರಿಂದ ಕುಪಿತಗೊಂಡಿರುವವರು ನಡೆಸುತ್ತಿರುವ ನಕಾರಾತ್ಮಕ ಪ್ರಚಾರಾಂದೋಲನವೇ ಇದಾಗಿದೆ.


ಇದನ್ನೆಲ್ಲ ಗಮನಿಸಿದಾಗ “A nation can survive its fools, and even the ambitious. But it cannot survive treason from within”,ಅಂದರೆ ಒಂದು ದೇಶ ತನ್ನಲ್ಲಿರುವ ಮೂರ್ಖರು, ಮಹತ್ವಾಕಾಂಕ್ಷಿ­ಗಳನ್ನು ಜೀರ್ಣಿಸಿಕೊಳ್ಳಬಹುದು, ಆದರೆ ಒಳಶತ್ರುಗಳಿದ್ದರೆ ಯಾವ ದೇಶವೂ ಉಳಿಯುವುದಿಲ್ಲ ಎಂಬ ಸಿಸೆರೋ ಮಾತು ನೆನಪಾಗುತ್ತದೆ ಅಲ್ಲವೆ?27789

 •  0 comments  •  flag
Share on Twitter
Published on January 29, 2016 21:28

January 25, 2016

January 22, 2016

ಇಪ್ಪತ್ಮೂರಕ್ಕೆ ಸಿಗಲಿದೆಯೊ ಉತ್ತರ ?

ಇಪ್ಪತ್ಮೂರಕ್ಕೆ ಸಿಗಲಿದೆಯೊ ಉತ್ತರ ?



ಶಾ ನವಾಝ್ , ಖೋಸ್ಲಾ ಸಮಿತಿಗಳ೦ತೆ ನೆಹರು ಕುಟು೦ಬಕ್ಕೆ “ಬೇಕಾದ’ ವರದಿಯನ್ನು ಮುಖಜಿ೯ ಆಯೋಗ ನೀಡಲಿಲ್ಲ. ಅಷ್ಟೇ ಅಲ್ಲ, ಸುಭಾಷ್ ಸಾವಿನ ಮೇಲಿದ್ದ ಪರದೆಯನ್ನು ಅದು ಕಿತ್ತೊಗೆದಿತ್ತು! ವಿಮಾನ ಅಪಘಾತದಲ್ಲಿ ಮಡಿದರು ಎನ್ನಲು ಅ೦ಥದ್ದೊ೦ದು ಅಪಘಾತವೇ ನಡೆದಿಲ್ಲ, ಆ ವಿಮಾನ ಮರುದಿನವೂ ಹಾರಾಟ ನಡೆಸಿತ್ತು ಎ೦ಬ ಸತ್ಯವನ್ನು ಹೊರಹಾಕಿತ್ತು!!


ಇಡೀ ಜಗತ್ತು ಇವತ್ತಿಗೂ ಅನುಮಾನದಿ೦ದಲೇ ನೋಡುವ ಅತ್ಯ೦ತ ದೊಡ್ಡ ಐತಿಹಾಸಿಕ ಸುಳ್ಳೊ೦ದು ಅ೦ದು ಸದ್ದಿಲ್ಲದೆ ಹುಟ್ಟಿಕೊ೦ಡಿತೆ?! Mr.subhas chendrs bose is dead! ಇ೦ಥದ್ದೊ೦ದು ಆಘಾತಕಾರಿ ಸುದ್ದಿ ಮೊದಲು ಹೊರಬಿದ್ದಿದ್ದು 1945ರ ಆಗಸ್ಟ್ 23ನೇ ತಾರೀಕು. ಸುದ್ದಿ ಬಿತ್ತರಿಸಿದ್ದು ಜಪಾನಿನ ರೇಡಿಯೋ ಟೋಕಿಯೋ. ರೇಡಿಯೋ ಟೋಕಿಯೋದ ನ್ಯೂಸ್ ರೀಡರ್ ಹೇಳಿದ್ದಿಷ್ಟು-ವಿಮಾನ ಅಪಘಾತವೊ೦ದರಲ್ಲಿ ತೀವ್ರವಾಗಿ ಗಾಯಗೊ೦ಡ ಮಿಸ್ಟರ್ ಸುಭಾಶ್ಚ೦ದ್ರ ಬೋಸ್ ಜಪಾನಿನ ಆಸ್ಪತ್ರೆಯೊ೦ದರಲ್ಲಿ ಕೊನೆಯುಸಿರೆಳೆದರು. ಭಾರತದ “ಆಜಾದ್ ಹಿ೦ದ್’ ಪ್ರಾ೦ತೀಯ ಸಕಾ೯ರದ ಮುಖ್ಯಸ್ಥರಾಗಿದ್ದ ಮಿ. ಬೋಸ್ ಆಗಸ್ಟ್ ಹದಿನಾರನೇ ತಾರೀಕಿನ೦ದು ವಿಮಾನದ ಮೂಲಕ ಸಿ೦ಗಪುರದಿ೦ದ ಜಪಾನಿಗೆ ಪ್ರಯಾಣಿಸುತ್ತಿದ್ದರು. ಜಪಾನಿನ ರಾಜಧಾನಿ ಟೋಕಿಯೋದಲ್ಲಿ ಅಲ್ಲಿನ ಜಪಾನೀ ಸರಕಾರದ ಮುಖ್ಯಸ್ಥರೊ೦ದಿಗೆ ಮಾತುಕತೆ ನಡೆಸಲಿಕ್ಕಾಗಿ ಹೋಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀ ಡಾಯಿತು. ಆಗಸ್ಟ್ ಹದಿನೆ೦ಟರ ಹದಿನಾಲ್ಕು ಗ೦ಟೆಗೆ (ಪೂವಾ೯ಹ್ನ ಎರಡು ಗ೦ಟೆಗೆ) ತೈಹೋಕು ವಿಮಾನ ನಿಲ್ದಾಣದ ಸಮೀಪ ಈ ಅಪಘಾತ ಸ೦ಭವಿಸಿತು. ತೀವ್ರವಾಗಿ ಗಾಯಗೊ೦ಡ ಬೋಸ್‍ರನ್ನು ಜಪಾನಿನ ಆಸ್ಪತ್ರೆಯೊ೦ದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾ ದರೂ ಆತ ಮಧ್ಯರಾತ್ರಿ ಸಾವನ್ನಪ್ಪಿದರು. ಬೋಸ್ ಅವರ ಜೊತೆಗೆ ಪ್ರಯಾಣಿಸುತ್ತಿದ್ದ ಲೆಫ್ಟಿನೆ೦ಟ್ ಜನರಲ್ ತ್ಸುನಾಮಸಾ ಶಿಡೈ ಅವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಸುಭಾಶ್ಚ೦ದ್ರ ಬೋಸ್ ಅವರ ಸೇನೆಯ ಅಧಿಕಾರಿ ಹಾಗೂ ಆಪ್ತ ಹಬೀಬರ್ ರೆಹಮಾನ್ ಮತ್ತಿತರ ನಾಲ್ಕು ಮ೦ದಿ ಅಪಘಾತದಲ್ಲಿ ಗಾಯಗೊ೦ಡು ಚಿಕಿತ್ಸೆ ಪಡೆಯುತ್ತಿದ್ದಾರೆ.


ಈ ಕುರಿತು ಜಪಾನ್ ಸಕಾ೯ರವಾಗಲಿ, ಅಲ್ಲಿನ ರಾಜಪ್ರಭುತ್ವ- ಕ್ಕೊಳಪಟ್ಟ ಸೈನ್ಯದ ಮುಖ್ಯ ಕಚೇರಿಯಾಗಲಿ ಯಾವುದೇ ಅಧಿಕೃತ ಘೋಷಣೆ ಮಾಡಲಿಲ್ಲ, ಪ್ರಕಟಣೆ ಹೊರಡಿಸಲಿಲ್ಲ! ಒ೦ದು ವೇಳೆ ಜಪಾನ್ ರಾಜತಾ೦ತ್ರಿಕ ಕಾರಣಗಳಿಗಾಗಿ ಈ ಸುದ್ದಿಯನ್ನು ಮುಚ್ಚಿಟ್ಟಿತೆ೦ದು ನ೦ಬೋಣವೆ೦ದುಕೊ೦ಡರೂ ಅದಷ್ಟು ಸುಲಭವಿರಲಿಲ್ಲ. ಏಕೆ೦ದರೆ ನೇತಾಜಿ ಜೊತೆಗೆ ಜಪಾನಿ ಸೈನ್ಯದ ಲೆಫ್ಟಿನೆ೦ಟ್ ಜನರಲ್ ತ್ಸುನಾಮಸಾ ಶಿಡೈ ಕೂಡಾ ಸಾವನ್ನಪ್ಪಿದ್ದರು ಅ೦ತ ರೇಡಿಯೋ ಟೋಕಿಯೋ ಬಿತ್ತರಿಸಿತ್ತು. ಜನರಲ್ ಶಿಡೈ ಜಪಾನಿ ಸೇನೆಯ ಅತ್ಯ೦ತ ಹಿರಿಯ ಕಮಾ೦ಡರ್ ಗಳಲ್ಲೊಬ್ಬರಾಗಿದ್ದರಲ್ಲದೆ, ಕೆಲ ಸಮಯದ ಹಿ೦ದಷ್ಟೆ ಕ್ವಾ೦ಟು೦ಗ್ ಪ್ರಾ೦ತೀಯ ಸೈನ್ಯದ ಉಪಮುಖ್ಯಸ್ಥರಾಗಿ ನೇಮಕವಾಗಿದ್ದರು. ಹಾಗಾಗಿ ಜಪಾನ್ ಸಕಾ೯ರ ಮತ್ತು ಸೈನ್ಯ ಜನರಲ್ ಶಿಡೈ ಸಾವನ್ನು ಮುಚ್ಚಿಟ್ಟಿದ್ದು ಸ೦ಶಯ ತರಿಸುತ್ತದೆ. ಹಾಗಾದರೆ ನಿಜಕ್ಕೂ ನಡೆದಿದ್ದೇನು?


1945 ಆಗಸ್ಟ್ ಇಪ್ಪತ್ಮೂರನೇ ತಾರೀಕು “ರೇಡಿಯೋ ಟೋಕಿಯೋ’ದ ಉದೊಷಕ ಓದಿದ ಸುದ್ದಿಯನ್ನು ಎರಡು ದಿನದ ಹಿ೦ದೆಯೇ ಬರೆಯಲಾಗಿತ್ತು! ಅ೦ದರೆ ಆಗಸ್ಟ್ 21ನೇ ತಾರೀಕಿಗೇ ಈ ಸುದ್ದಿ ಸಿದ್ಧವಾಗಿತ್ತು. ಆಶ್ಚಯ೯ವೆ೦ದರೆ ಇದನ್ನು ಬರೆದಾತ ಒಬ್ಬ ಭಾರತೀಯ! ಹೆಸರು ಎಸ್. ವಿ. ಅಯ್ಯರ್! ಆ ಸಮಯದಲ್ಲಿ ಈತ ನೇತಾಜಿ ಸ್ಥಾಪಿಸಿದ್ದ “ಇ೦ಡಿಯನ್ ನ್ಯಾಶನಲ್ ಆಮಿ೯ಯ ಸದಸ್ಯನಾಗಿದ್ದ. ಅಷ್ಟೇ ಅಲ್ಲ, ನೇತಾಜಿ ಬೋಸ್ ನೇತೃತ್ವದ “ಆಜಾದ್ ಹಿ೦ದ್’ ಪ್ರಾ೦ತೀಯ ಸಕಾ೯ರದ ವಾತಾ೯ ಮತ್ತು ಪ್ರಚಾರ ಇಲಾಖೆಯ ಮ೦ತ್ರಿಯೂ ಆಗಿದ್ದ. ಇದಕ್ಕೂ ಮಿಗಿಲಾಗಿ ಸ್ವತ೦ತ್ರ ಭಾರತದ ಕನಸು ಕ೦ಡಿದ್ದ ನೇತಾಜಿ ಮಹತ್ವಾಕಾ೦ಕ್ಷೆಯಿ೦ದ ಸ್ಥಾಪಿಸಿದ್ದ “ಆಜಾದ್ ಹಿ೦ದ್ ರಾಷ್ಟ್ರೀಯ ಬ್ಯಾ೦ಕ್’ನ ಮುಖ್ಯಸ್ಥನೂ ಆಗಿದ್ದ. ನೇತಾಜಿಯವರ ನ೦ಬಿಕಸ್ಥ ಜೊತೆಗಾರನೊಬ್ಬನೇ ಅವರ ಸಾವಿನ ಸುದ್ದಿಯನ್ನು ಬರೆದಿದ್ದ- ನೆ೦ಬುದು ನಿಜಕ್ಕೂ ಆಶ್ಚಯ೯ ತರಿಸುತ್ತದೆ. ಆ ಸುದ್ದಿ ಬರೆಯೋದಕ್ಕಿ೦ತ ಕೇವಲ ನಾಲ್ಕು ದಿನ ಮೊದಲು ಅ೦ದರೆ ಆಗಸ್ಟ್ 17ನೇ ತಾರೀಕಿಗೆ ಈ ಅಯ್ಯರ್ ನೇತಾಜಿ ಜೊತೆಗೇ ಸೈಗಾನ್‍ಗೆ ಬ೦ದಿದ್ದ. ಅಲ್ಲಿ೦ದ ನೇತಾಜಿ ತೈಪೆಗೆ ಬ೦ದಾಗ ಅಯ್ಯರ್ ಜೊತೆಗಿರಲಿಲ್ಲ. ಸೈಗಾನ್‍ನಲ್ಲಿದ್ದ ಅಯ್ಯರ್‍ನನ್ನು ಟೋಕಿಯೋಗೆ ಕರೆಸಿಕೊಳ್ಳಲಾಗಿತ್ತು. ಆಗ ಆತನ ಜೊತೆಗಿದ್ದಿದ್ದು ಜಪಾನೀ ಸೇನಾಧಿಕಾರಿ ಕನ೯ಲ್ ಟಾಡಾ. ನೇತಾಜಿಯ ಆಜಾದ್ ಹಿ೦ದ್ ಸಕಾ೯ರದ ವಾತಾ೯ ಮ೦ತ್ರಿಯೇ ಖುದ್ದು ಬರೆದ ನೇತಾಜಿ ಸಾವಿನ ಸುದ್ದಿಯೇ ಜಗತ್ತಿನಾದ್ಯ೦ತ ಪತ್ರಿಕಾ ಮತ್ತು ರೇಡಿಯೋ ಕಚೇರಿಗಳಿಗೆ ತಲುಪಿದವು. ಈ ಕೆಲಸ ಮಾಡಿದ್ದು ಆ ಕಾಲದ ಜಪಾನಿನ ವಾತಾ೯ ಸ೦ಸ್ಥೆ “ಡೊಮ್ಯೆ ನ್ಯೂಸ್ ಏಜೆನ್ಸಿ’.


    ಆ ಸಮಯದಲ್ಲಿ ಬ್ರಿಟಿಷರಿಗೆ ಸಡ್ಡು ಹೊಡೆದು “ಆಜಾದ್ ಹಿ೦ದ್’ ಎ೦ಬ ಪಯಾ೯ಯ ಸರಕಾರವನ್ನು ನಡೆಸುತ್ತಿದ್ದರು ಸುಭಾಷ್ ಚ೦ದ್ರ ಬೋಸರು. ಅದೇ ಸಕಾ೯ರದಲ್ಲಿ ವಾತಾ೯ ಮ೦ತ್ರಿಯಾಗಿದ್ದ ಅಯ್ಯರ್ ತನ್ನ ಪರಮೋಚ್ಛ ನಾಯಕನ ಸಾವಿನ ಸುದ್ದಿಯನ್ನು ಅ೦ದು ಯಾಕೆ ಬರೆದ? ಟೋಕಿಯೋಗೆ ಬ೦ದ ಮೇಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನೇತಾಜಿ ಸತ್ತರೆ೦ಬ ಸಾಲುಗಳನ್ನು ಬರೆಯುವ ಮೊದಲು ಅಯ್ಯರ್ ಸುದ್ದಿಸತ್ಯಾಸತ್ಯತೆಯನ್ನು ಪರಿಶೀಲಿಸುವ ಗೋಜಿಗೇ ಹೋಗಲಿಲ್ಲ ಯಾಕೆ? ವಿಮಾನ ಅಪಘಾತಕ್ಕೀಡಾಯಿತು ಅಂತ ಹೇಳಲಾದ ತೈಪೆ ಯಲ್ಲೂ ಅಯ್ಯರ್ ಆ ಸಮಯದಲ್ಲಿ ಇರಲಿಲ್ಲ. ಹಾಗಾಗಿ ಸುದ್ದಿ ಬರೆಯುವ  ವೇಳೆ ಅಯ್ಯರ್ ಗಿದ್ದ ಏಕಮಾತ್ರ . ಜಪಾನೀ ಅಧಿಕಾರಿಗಳ ಹೇಳಿಕೆ ಮಾತ್ರ. ಇನ್ನೊಂದು ಆಶ್ಚರ್ಯವೆಂದರೆ ಇದು ತೈಪೆಯಲ್ಲಿ ಸುದ್ದಿಯಾಗಲೇ ಇಲ್ಲ!

ಇತ್ತ ಭಾರತದಲ್ಲಿ ನೇತಾಜಿಯ ಸಾವಿನ ಸುದ್ದಿ ಅವರ ಅಸಂಖ್ಯ ಅಭಿಮಾನಿಗಳಿಗೆ ಆಘಾತಕಾರಿಯಾಗಿತ್ತು, ದೇಶವೇ ಅಲ ಕಲವಾಗಿತ್ತು. ಇಲ್ಲಿ ಈ ಬಗ್ಗೆ ಮೊದಲು ವರದಿ ಮಾಡಿದ್ದು ‘ಹಿಂದುಸ್ತಾನ್ ಟೈಮ್ಸ್’ ಪತ್ರಿಕೆ. ಅದು ಆಗಸ್ಟ್ ೨೫ರಂದು ಪ್ರಕಟಿಸಿದ ಸುದ್ದಿಯ ಮೂಲವೂ ಜಪಾನಿನ ಡೊಮೈ ನ್ಯೂಸ್ ಏಜೆನ್ಸಿಯದ್ದೇ ಆಗಿತ್ತು. ಆದರೆ ಈ ಪತ್ರಿಕೆ ಕೂಡಾ ವರದಿ ಸಂಪೂರ್ಣ ಸತ್ಯವೆಂಬಂತೇನೂ ಪ್ರಕಟಿಸಲಿಲ್ಲ. ಅದಕ್ಕಾಗಿಯೇ ಏನೋ ಅದು ಕೊಟ್ಟ ಹೆಡ್‌ಲೈನ್ ರಿಪೋರ್ಟೆಡ್ ಡೆತ್ ಆ- ಸುಭಾಷ್ ಬೋಸ್! ವರದಿಯ ಕೊನೆಯಂದು ಚಿಕ್ಕ ಟ್ವಿಸ್ಟ್ ಇತ್ತು. ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠವಾಗಿರುವ ಹಿಂದುಸ್ತಾನ್ ಟೈಮ್ಸ್, ‘ಜಪಾನೀಯರು ತಿಳಿಸಿದಂತೆ ಒಂದು ವೇಳೆ ನೇತಾಜಿಯ ಸಾವಿನ ಸುದ್ದಿ ನಿಜವೇ ಆಗಿದ್ದರೆ ಅದರಿಂದ ಕೋಟ್ಯಂತರ ಭಾರತೀಯ ಮನಸುಗಳಿಗೆ ಘಾಸಿಯಾಗುತ್ತದೆ. ಆದರೆ ಅದೇ ವೇಳೆಗೆ ಬ್ರಿಟಿಷ್


ಪ್ರಭುತ್ವಕ್ಕೆದುರಾಗಿದ್ದ ಬಹಳ ದೊಡ್ಡ ಸಂಕಟವೊಂದು ನಿವಾರಣೆಯಾಯ್ತು… ಎಂದು ಷರಾ ಬರೆದಿತ್ತು.


ಅಂದರೆ ಒಂದು ವೇಳೆ ನೇತಾಜಿ ಬದುಕಿದ್ದರೆ ಅದರಿಂದ ಬ್ರಿಟಿಷ್ ಸರ್ಕಾರಕ್ಕೆ ಬಹಳ ದೊಡ್ಡ ವಿಪತ್ತು ಎದುರಾಗುತ್ತಿತ್ತು ಎಂಬುದು ನಿಚ್ಚಳವಾಯ್ತು. ಇದೇ ವೇಳೆಗೆ ಭಾರತದಲ್ಲಿ ನೇತಾಜಿ ಸಾವಿನ ಬಗ್ಗೆ ಜನ ಸಂಶಯ ವ್ಯಕ್ತಪಡಿಸತೊಡಗಿದರು. ಬಹುಶಃ ಜಪಾನೀಯರೇ ನೇತಾಜಿಯವರು ಭೂಗತರಾಗಲು ಸಹಕರಿಸಿರಬಹುದು. ಆ ಮೂಲಕ ಮಿತ್ರರಾಷ್ಟ್ರಗಳ ಮೇಲೆ ಯುದಟಛಿ ಸಾರಿದ ತಪ್ಪಿಗಾಗಿ ದೊರಕುವ ಶಿಕ್ಷೆಯಿಂದ ನೇತಾಜಿಯವರನ್ನು ಪಾರು ಮಾಡಲು ಜಪಾನಿ ಸೈನ್ಯಾಽಕಾರಿಗಳೇ ಈ ಸುಳ್ಳು ಹಬ್ಬಿಸಿರಬಹುದೆಂಬ ಒಂದು ವಾದವೂ ಕೇಳಿಬಂತು. ಇಂಥದು ಸಾಧ್ಯತೆಯನ್ನೂ ತಳ್ಳಿಹಾಕಲು ಸಾಧ್ಯವಿಲ್ಲ. ದಕ್ಷಿಣ ಭಾರತದ ಪ್ರಮುಖ ಇಂಗ್ಲಿಷ್ ದೈನಿಕ ‘ದಿ ಹಿಂದು’ ಈ ಬಗ್ಗೆ ನೇರವಾಗಿ ಬರೆಯಲಿಲ್ಲ. ಬದಲಿಗೆ ಅದು ಲಂಡನ್‌ನಲ್ಲಿ ವಾಸಿಸುತ್ತಿರುವ ಭಾರತೀಯರು ನೇತಾಜ ಸಾವಿನ ಸುದ್ದಿಯನ್ನು ನಂಬಲಿಲ್ಲ ಅಂತನ್ನೋ ರೀತಿಯ ವರದಿ ಬರೆಯಿತು. ಇದೇ ರೀತಿಯ ವರದಿಯನ್ನು ಹಿಂದುಸ್ತಾನ್ ಟೈಮ್ಸ್ ಕೂಡಾ ಪ್ರಕಟಿಸಿತು. ‘ಬೋಸ್ ಡೆಡ್, ಸ್ಟೋರಿ ನಾಟ್ ಬಿಲೀವ್ಡ್ ಇನ್ ಲಂಡನ್’ ಎಂಬ ಹೆಡ್ಡಿಂಗ್‌ನ ಈ ವರದಿಯಲ್ಲಿ ಒಂದು ಅತ್ಯಂತ ಮಹತ್ವದ ಸಂಗತಿಯನ್ನು ಉಖಿಸಲಾಗಿತ್ತು. ಅದೇನೆಂದರೆ ಹಿಂದೊಮ್ಮೆ ಸುಭಾಷ್‌ಶ್ಚಂದ್ರ ಬೋಸ್‌ರು ಜರ್ಮನಿಯಿಂದ ನಾಪತ್ತೆಯಾದಾಗಲೂ ಜಪಾನ್ ಇದೇ ರೀತಿಯ ಸುದ್ದಿ ಹಬ್ಬಿಸಿತ್ತು. ಆದರೆ ಬಳಿಕ ನೇತಾಜಿ ಟೋಕಿಯೋದಲ್ಲಿ ಪ್ರತ್ಯಕ್ಷವಾಗಿದ್ದರು. ಈ ಘಟನೆಯನ್ನೇ ಉಖಿಸಿ ತರ್ಕ ಮುಂದಿಟ್ಟ ಪತ್ರಿಕೆ ‘ಜಪಾನಿ ಸುದ್ದಿ ಸಂಸ್ಥೆಗಳಿಗೆ ಇಂತಹ ಚಾಳಿಯಿದೆ. ಈ ಬಾರಿ ನೇತಾಜಿ ಸಾವಿನ ಸುದ್ದಿಯು ಹೊರಬಂದ ಕಾಲ ಬಹಳ ಪರಿಪಕ್ವವಾಗಿದೆ. ಈ ಸುದ್ದಿ ಕಪೋಲಕಲ್ಪಿತವಾಗಿರುವ ಎ ಸಾಧ್ಯತೆಗಳಿವೆ. ಬಹುಶಃ ನೇತಾಜಿಯವರೇ ಮಿತ್ರ ರಾಷ್ಟ್ರಗಳ ಸೇನೆಯಿಂದ ಸುಲಭವಾಗಿ ಪಾರಾಗಲು ಯೋಚಿಸಿರಬಹುದೇ?’ ಎಂಬ ಸಂಶಯವನ್ನೂ ವರದಿ ವ್ಯಕ್ತಪಡಿಸಿತ್ತು! ಆದರೆ ನೇತಾಜಿ ಸಾವಿನ ಸುದ್ದಿಯ ಬಗ್ಗೆ ಮಹಾತ್ಮ ಗಾಂಽ ತಕ್ಷಣಕ್ಕೆ ನೀಡಿದ ಪ್ರತಿಕ್ರಿಯೆ ಏನು ಗೊತ್ತಾ? ಸುಭಾಷ್ ಬೋಸ್ ಸತ್ತಿzರೆಂಬುದು ನಿಜವಾಗಿದ್ದರೂ ಆತ ನಿಸ್ಸಂಶಯವಾಗಿಯೂ ಮಹಾನ್ ದೇಶಭಕ್ತ. ಆದರೆ ಆತ ತಪ್ಪುದಾರಿ ಹಿಡಿದಿದ್ದ! ಇತ್ತ ನಮ್ಮೊಳಗಿದ್ದ ವೈಯಕ್ತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಾನು ನೇತಾಜಿಯವರ ಬಗ್ಗೆ ಅತೀವವಾದ ಗೌರವಭಾವನೆ ಹೊಂದಿz. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಎಂದುಬಿಟ್ಟರು ನೆಹರು ಮಹಾಶಯರು!


ಭಾರತಕ್ಕೆ ಸ್ವಾತಂತ್ರ್ಯ ಬಂದ ಕ್ಷಣದಲ್ಲೂ ಸುಭಾಶರನ್ನು ಕಳೆದುಕೊಂಡ ಸೂತಕ ದೇಶವನ್ನು ಆವರಿಸಿತ್ತು. ಸಾವಿನ ರಹಸ್ಯವನ್ನು ಭೇದಿಸುವಂತೆ ನೆಹರು ಸರ್ಕಾರದ ಮೇಲೆ ಒತ್ತಡ ಬಿತ್ತು. ಹಾಗಾಗಿ ೧೯೫೬ರಲ್ಲಿ ಶಾ ನವಾಝ್ ಸಮಿತಿ ರಚನೆಯಾಯಿತು. ಬೋಸರು ಭಾರತೀಯ ರಾಷ್ಟ್ರೀಯ ಸೇನೆಯನ್ನು ತಂದರೆ ನಾನೇ ಅದರ ವಿರುದಟಛಿ ಖಡ್ಗ ಹಿಡಿದು ಹೋರಾಡುತ್ತೇನೆ ಎಂದಿದ್ದ ನೆಹರು ರಚಿಸಿದ ಸಮಿತಿಯಿಂದ ಏನ   ತಾ ನಿರೀಕ್ಷಿಲ  ಸಾಧ್ಯ? ವಿಮಾನ ಅಪಘಾತದಲ್ಲಿ ಮಡಿದರು ಎಂದು ಷರಾ ಬರೆಯಿತು ಶಾ ನವಾಝ್ ಸಮಿತಿ. ಆದರೆ ಒತ್ತಡ ನಿಲ್ಲಲಿಲ್ಲ. ಅದಕ್ಕೆ ಮಣಿದ ನೆಹರು ಪುತ್ರ ಇಂದಿರಾ ಗಾಂಽಯವರು ಖೋಸ್ಲಾ ಸಮಿತಿ ರಚಿಸಿ, ಅದರ ಕೈಯಿಂದಲೂ ಮಡಿದರು ಎಂದು ಬರೆಸಿ ಕಣ್ಣೊರೆಸಲು ಯತ್ನಿಸಿದರೂ ಜನ ನಂಬಲಿಲ್ಲ. ಕೊನೆಗೆ ೧೯೯೮, ಏಪ್ರಿಲ್ ೩೦ರಂದು ಕೋಲ್ಕತಾ ಹೈಕೋರ್ಟ್, ವಿವಾದಕ್ಕೆ ಅಂತ್ಯ ಕಾಣಿಸುವಂಥ ಒಂದು ಕೂಲಂಕಷ ಶೋಧನೆ, ಪರಾಮರ್ಶೆ ಮಾಡುವ ಆಯೋಗ ರಚನೆ ಮಾಡಿ ಎಂದು ಆಗಿನ ಬಿಜೆಪಿ ನೇತೃತ್ವದ ಅಟಲ್ ಬಿಹಾರಿ ವಾಜಪೇಯಿ ಸರ್ಕಾರಕ್ಕೆ ಆದೇಶ ನೀಡಿತು. ೧೯೯೯ರಲ್ಲಿ ಅಟಲ್ ಸರ್ಕಾರ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮನೋಜ್ ಮುಖರ್ಜಿಯವರ ಸಮಿತಿ ರಚನೆ ಮಾಡಿತು. ಅದು ೨೦೦೬ರಲ್ಲಿ ತನ್ನ ವರದಿ ನೀಡಿತು, ಆದರೆ ಅಷ್ಟರೊಳಗೆ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರ್ಕಾರ ವರದಿಯನ್ನೇ ತಿರಸ್ಕಾರ ಮಾಡಿಬಿಟ್ಟಿತು! ಏಕೆ ಗೊತ್ತಾ? ಶಾ ನವಾಝ್, ಖೋಸ್ಲಾ ಸಮಿತಿಗಳಂತೆ ನೆಹರು ಕುಟುಂಬಕ್ಕೆ ‘ಬೇಕಾದ’ ವರದಿಯನ್ನು ಮುಖರ್ಜಿ ಆಯೋಗ ನೀಡಲಿಲ್ಲ. ಅಷ್ಟೇ ಅಲ್ಲ, ಸುಭಾಷ್ ಸಾವಿನ ಮೇಲಿದ್ದ ಪರದೆಯನ್ನು ಅದು ಕಿತ್ತೊಗೆದಿತ್ತು! ಸುಭಾಷ್ ಚಂದ್ರ ಬೋಸ್ ಈಗ ಬದುಕಿಲ್ಲ, ಆದರೆ ೧೯೪೫ ಆಗಸ್ಟ್ ೧೮ರಂದು ತೈವಾನಿನ ತೈಹೋಕು ಬಳಿ ನಡೆದ ವಿಮಾನ ಅಪಘಾತದಲ್ಲಿ ಮಡಿದರು ಎನ್ನಲು ಅಂಥzಂದು ಅಪಘಾತವೇ ನಡೆದಿಲ್ಲ, ಆ ವಿಮಾನ ಮರುದಿನವೂ ಹಾರಾಟ ನಡೆಸಿತ್ತು ಎಂಬ ಸತ್ಯವನ್ನು ಹೊರಹಾಕಿತ್ತು!! ಅಷ್ಟೇ ಅಲ್ಲ, ಜಪಾನಿನ ರೆಂಕೋಜಿ ದೇವಾಲಯದಲ್ಲಿರುವ ಚಿತಾಭಸ್ಮ ಕೂಡ ನೇತಾಜಿಯವರದ್ದಲ್ಲ ಎಂಬ ಕಠೋರ ಸತ್ಯವನ್ನು ಬಹಿರಂಗ ಮಾಡಿತ್ತು!!! ಈ ವರದಿಯನ್ನು ಆಧರಿಸಿ ನೇತಾಜಿ ಸೇನೆಯಲ್ಲಿದ್ದ ಮನ್ವತಿ ಆರ್ಯ ಅವರು ‘ಒbಜಛಿಞಛ್ಞಿಠಿ: ಘೆಟ ಅಜ್ಟ್ಚ್ಟಿ   judjement:no aircrash, no death ‘ ಎಂಬ ಪುಸ್ತಕ ಹೊರತಂದಿರೆ. ನೇತಾಜಿ ಸತ್ತಿದ್ದು ಭಾರತದ ಹೊರತು, ವಿಮಾನ ಅಪಘಾತದಲ್ಲಲ್ಲ; ಬ್ರಿಟಿಷರನ್ನು ಹೊರದಬ್ಬಿದ್ದು ಗಾಂಽಯಲ್ಲ, ಬೋಸ್ ಎಂದು ಮೂರು ವರ್ಷದ ಹಿಂದೆ ಖ್ಯಾತ ಅಂಕಣಕಾರ ಟಿಜೆಎಸ್ ಜಾರ್ಜ್ ಕೂಡ ಬgದಿ   . ಈ ಮಧ್ಯೆ, ಬೋಸ್ ಬದುಕು-ಸಾವಿಗೆ ಸಂಬಂಽಸಿದ ೩೩ ಕ್ಲಾಸಿ-ಯ್ಡ್(ಗೌಪ್ಯ) ದಾಖಲೆಗಳನ್ನು ನೀಡುವಂತೆ ಬೋಸ್ ಕುಟುಂಬದ ೩೦ ಸದಸ್ಯರು ಮಾಹಿತಿ ಹಕ್ಕಿನ ಮೂಲಕ ಮನವಿ ಮಾಡಿದರೂ ಕೇಂದ್ರದ ಕಾಂಗ್ರೆಸ್ ಸರ್ಕಾರ ತಿರಸ್ಕಾರ ಮಾಡಿದೆ ಎಂದು ೨೦೧೩ ಜನವರಿ ೮ರಂದು ಕೋಲ್ಕತಾದ ಸ್ಟೇಟ್ಸ್‌ಮನ್ ಪತ್ರಿಕೆಯಲ್ಲಿ ವರದಿಯೊಂದುಪ್ರಕಟವಾಗಿತ್ತು! ಅದರ ಬೆನ್ನಲ್ಲೇ ೨೦೧೪ರ ಚುನಾವಣಾಪ್ರಚಾರಾಂದೋಲನದ ಸಮಯದಲ್ಲಿ ನರೇಂದ್ರ ಮೋದಿಯವರೂ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ೨೦೧೪, ಮೇ ೨೬ರಂದು ಅವರೇ ಪ್ರಧಾನಿಯಾದ ನಂತರ ಬೋಸ್ ಕುಟುಂಬ ಭೇಟಿಯಾಗಿ ದಾಖಲೆಗಳನ್ನು ಬಹಿರಂಗಪಡಿಸ ಬೇಕೆಂದು ಆಗ್ರಹಪಡಿಸಿತ್ತು. ಅದಕ್ಕೆ ಸಮ್ಮತಿಸಿದ ಮೋದಿಯವರು, ಸುಭಾಷ್ ಜನ್ಮದಿನವಾದ ಇಂದು ಅವರ ಬದುಕಿಗೆ ಸಂಬಂಽಸಿದ ಗೌಪ್ಯ ದಾಖಲೆಗಳನ್ನು ಬಹಿರಂಗ ಮಾಡುತ್ತಿದ್ದಾರೆ. ಹಾಗಾದರೆ ಇಪ್ಮತ್ಮೂರಕ್ಕೆ ಸಿಗಲಿದೆಯೇ ಉತ್ತರ? ಅಥವಾ ೫೦ ವರ್ಷ ದೇಶವಾಳಿದ ಅಪ್ಪ, ಮಗಳು, ಮೊಮ್ಮಗ, ಸೊಸೆ ಕಾಲದಲ್ಲೇ ದಾಖಲೆಗಳನ್ನು ನಾಶಮಾಡಿರಬಹು ದೇ?! ಕನಿಷ್ಠ ರಷ್ಯಾ, ಜಪಾನ್‌ನಲ್ಲಾದರೂ ದಾಖಲೆಗಳು ಉಳಿದಿರಬಹುದೆಂದು ಸುಭಾಷ್ ಬದುಕಿಗೆ ಸಂಬಂಽಸಿದ ದಾಖಲೆಗಳಿದ್ದರೆ ಕೊಡಿ ಎಂದು ಆ ರಾಷ್ಟ್ರಗಳಿಗೆ ಮೋದಿ ಮನವಿ ಮಾಡಿಕೊಂಡಿರುವುದು ಆ ಕಾರಣಕ್ಕಾಗಿಯೇ? ದಾಖಲೆಗಳನ್ನು ಎಷ್ಟೇ ನಾಶ ಮಾಡಿದ್ದರೂ ಒಂದಿಲ್ಲೊಂದು dossier ನಲ್ಲಿ


(ಕಾಗದಪತ್ರ, ದಾಖಲೆ) ಸುಭಾಷ್ ಸಾವಿನ ರಹಸ್ಯವನ್ನು ಭೇದಿಸುವ ಸುಳಿವು ಸಿಕ್ಕೀತೇ? ಆ ಸುಳಿವು, i am beyond love and  hate .i am beyond anger ,violence ಎನ್ನುತ್ತಿದ್ದ ಮಹಾನ್ ನಾಯಕರೊಬ್ಬರ ಶಿಷ್ಯೋತ್ತಮನ ನಿಜರೂಪವನ್ನು ಬಯಲಿಗೆಳೆದೀತೆ?




ps article on netaji 2016

 •  0 comments  •  flag
Share on Twitter
Published on January 22, 2016 21:21

January 21, 2016

ಸ್ಯಾಟಲೈಟ್ ರೈಲು ನಿಲ್ದಾಣಕ್ಕೆ ಆಗ್ರಹ

ಮೈಸೂರು ವಿಭಾಗದ ರೈಲ್ವೆ ಪ್ರಯಾಣದ ಅಭಿವೃದ್ದಿ;ರೈಲ್ವೆಸಚಿವರಿಗೆ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹರಿಂದ ಹಲವು ಬೇಡಿಕೆ


ಮೈಸೂರು.ಜ,20,2016: ಮೈಸೂರು ವಿಭಾಗದಲ್ಲಿ ರೈಲ್ವೆ ಪ್ರಯಾಣದ ಅಭಿವೃದ್ದಿಗಾಗಿ ಮುಂದಿನ 2016-17 ಸಾಲಿನ ರೈಲ್ವೆ ಬಜೆಟ್ ನಲ್ಲಿ ಕೆಲವು ಬೇಡಿಕೆ ಈಡೇರಿಸಬೇಕೆಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಮಾನ್ಯ ರೈಲ್ವೆ ಸಚಿವರ ಬಳಿ ಮನವಿ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ ಅವರು, ಪ್ರಯಾಣಿಕರ ಬೇಡಿಕೆ ,ಪ್ರವಾಸೋದ್ಯಮ ಗಮನದಲ್ಲಿರಿಸಿಕೊಂಡು ಈ ಬೇಡಿಕೆಯನ್ನು ಸಚಿವರಲ್ಲಿ ಮಾಡಲಾಗಿದೆ.ಈಗಾಗಲೇ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮೂಲ ಸೌಕರ್ಯ ಅಭಿವೃದ್ದಿ ಮತ್ತು ಹೊಸ ಯೋಜನೆಗಳ ಬಗ್ಗೆ ಕೂಲಂಕುಷ ಮಾಹಿತಿ ಪಡೆಯಲಾಗಿದೆ.ಇದರನ್ವಯ ಮುಂದಿನ ಆರೇಳು ವರ್ಷಗಳ ರೈಲ್ವೆ ಯೋಜನೆಯ ಚಿತ್ರಣವನ್ನು ಅರಿತು ಈ ಯೋಜಿತ ಪಟ್ಟಿಯನ್ನು ಮಾನ್ಯ ರೈಲ್ವೆ ಸಚಿವರಿಗೆ ನೀಡಲಾಗಿದೆ ಎಂದು ತಿಳಿಸಿದರು.


ಪ್ರತಾಪ್ ಸಿಂಹ ಅವರು ಮುಂದಿನ ಬಜೆಟ್ ನಲ್ಲಿ ಸೇರಿಸಲು ಸೂಚಿಸಿರುವ ಯೋಜನೆಗಳು ಹೀಗಿವೆ ನೋಡಿ…….


ಮೈಸೂರು-ಕುಶಾಲನಗರ-ಮಡಿಕೇರಿ ಹೊಸ ರೈಲ್ವೇ ಮಾರ್ಗದ (110 ಕಿ.ಮೀ) ಮಂಜೂರಾತಿ…….

ಕನರ್ನಾಟಕದ ಕೊಡಗು ಜಿಲ್ಲೆಯು ಪ್ರಸ್ತುತ ಯಾವುದೇ ರೈಲ್ವೇ ಸಂಪರ್ಕವನ್ನು ಹೊಂದಿಲ್ಲದಿರುವುದರಿಂದ ಕೊಡಗನ್ನು ಭಾರತದ ರೈಲ್ವೆಯ ನಕಾಶೆಯಲ್ಲಿ ತರಬೇಕೆಂದು ಈ ಪ್ರದೇಶದ ಜನರ ಒತ್ತಾಯವಿದೆ. ಕೆಲ ವರ್ಷಗಳ ಹಿಂದೆಯೇ ಮೈಸೂರು-ಕುಶಾಲನಗರ ರೈಲ್ವೇ ಸಂಪರ್ಕಕ್ಕಾಗಿ ಒಂದು ಅಂದಾಜನ್ನು ರೈಲ್ವೇ ಮಂಡಳಿಗೆ ಸಲ್ಲಿಸಲಾಗಿತ್ತು ಎಂದು ತಿಳಿದುಬಂದಿದೆ. ಆದರೆ ಕಳೆದ ವರ್ಷದ ಬಜೆಟ್ನಲ್ಲಿ ಅದು ಮಂಜೂರಾಗಲಿಲ್ಲ. ಆಗಿನ ಗೌರವಾನ್ವಿತ ರೈಲ್ವೆ ಸಚಿವರು ಅವರ ಬಜೆಟ್ ಭಾಷಣದಲ್ಲಿ ಅಂದಾಜು ಮಾಡಿದ ಯೋಜನೆಯ ಸ್ಥಳ ಸಮೀಕ್ಷೆ ಕೆಲಸವನ್ನು ಪೂರ್ಣಗೊಳಿಸಿ ಏಕೀಕೃತ ವರದಿಯನ್ನು ಪರಿಗಣನೆಗಾಗಿ ರೈಲ್ವೆ ಮಂಡಳಿಗೆ ಸಲ್ಲಿಸಲಾಗುತ್ತದೆ ಎಂದು ಹೇಳಲಾಗಿತ್ತು. ಈ ನಿಟ್ಟಿನಲ್ಲಿ ರೈಲ್ವೆ ಸವರ್ೇಕ್ಷಣಾ ವರದಿಯು ಅಂತಿಮ ಹಂತದಲ್ಲಿದ್ದು ಮಂಡಳಿಗೆ 2016ರ ಕೊನೆಯಲ್ಲಿ ಸಲ್ಲಿಸಲಾಗುವುದು ಎಂದು ನೈರುತ್ಯ ರೆಲ್ವೆ ಅಧಿಕಾರಿಗಳಿಂದ


ತಿಳಿದುಬಂದಿದೆ. ನೈರುತ್ಯ ರೈಲ್ವೆ ನಿಮರ್ಾಣ ಇಲಾಖೆಯ ಅಧಿಕಾರಿಗಳು ನನಗೆ ನೀಡಿದ ಯೋಜನೆಯ ಮುಖ್ಯಾಂಶಗಳನ್ನು ಅನುಬಂಧ “ಎ” ನಲ್ಲಿ ತೋರಿಸಲಾಗಿದೆ.


2.ಮೈಸೂರಿನಲ್ಲಿ ಸ್ಯಾಟಲೈಟ್ ನಿಲ್ದಾಣದ ಅಭಿವೃದ್ಧಿ……..


ಮೈಸೂರು ರೈಲು ನಿಲ್ದಾಣವು ಸೀಮಿತ ಸಾಮಥ್ರ್ಯವನ್ನು ಹೊಂದಿದ್ದು ಇತ್ತೀಚೆಗೆ ಮೈಸೂರು-ಬೆಂಗಳೂರು ನಡುವಿನ ಜೋಡಿ ಮಾರ್ಗವು ಪೂರ್ಣಗೊಂಡಿದ್ದು ರೈಲುಗಳು ಓಡಾಡಲು ಪ್ರಾರಂಭಿಸಿವೆ. ಮೈಸೂರಿನ ಸಮಗ್ರ ಆಥರ್ಿಕ ಅಭುವೃದ್ಧಿಗೆ ಇನ್ನೂ ಹೆಚ್ಚಿನ ರೈಲುಗಳು ಓಡಿಸಲು ಬೇಡಿಕೆ ಇದೆ. ಆದ್ದರಿಂದ ಹೆಚ್ಚುವರಿ ಸಂಚಾರವನ್ನು ನಿರ್ವಹಿಸಲು ಪಯರ್ಾಯ ನಿಲ್ದಾಣದ ತುತರ್ು ಆವಶ್ಯಕತೆ ಇದೆ. ಅದಕ್ಕಾಗಿ ನೈರುತ್ಯ ರೈಲ್ವೆಯು ಮೈಸೂರು, ಚಾಮರಾಜನಗರ ವಿಭಾಗಗಳಲ್ಲಿ ಕಳಕೊಳ ರೈಲ್ವೆ ನಿಲ್ದಾಣವನ್ನು ಮತ್ತೊಂದು ಕೊನೆಯ ನಿಲ್ದಾಣವನ್ನಾಗಿ ಅಭಿವೃದ್ಧಿ ಪಡಿಸುವ ಪ್ರಸ್ತಾವನೆಯನ್ನು ಚಚರ್ಿಸಿ ಮಾನ್ಯ ಸಚಿವರ ಮುಂದೆ ಇಡಲಾಗಿದೆ.


ಹಾಸನದಲ್ಲಿನ ಲೆವೆಲ್ ಕ್ರಾಸಿಂಗ್ ನಂ.3ರ ಬದಲಾಗಿ ರಸ್ತೆ ಸೇತುವೆ ನಿರ್ಮಾಣ…..

ಹೊಸದಾಗಿ ನಿರ್ಮಾಣವಾಗಿರುವ ಹಾಸನ ಬಸ್ ನಿಲ್ದಾಣದ ಬಳಿ ಇರುವ ರೈಲ್ವೆ ಕ್ರಾಸಿಂಗ್ ನಂ.3ರಲ್ಲಿ ವಾಹನಗಳ ಬೃಹತ್ ಸಾಂದ್ರತೆಯಿಂದ ವಾಹನಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗಿದೆ. ಇದರ ಬದಲಾಗಿ ರಸ್ತೆ ಸೇತುವೆ ನಿರ್ಮಾಣ ಸಮಂಜಸ ಎಂದು ತಿಳಿದುಬಂದಿದೆ. ಅದಕ್ಕಾಗಿ ನೈರುತ್ಯ ರೈಲ್ವೆಯು ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ಈ ಯೋಜನೆಯು ಕಳೆದ ಬಜೆಟ್ ನಲ್ಲಿ ಬಂಜೂರಾಗಲಿಲ್ಲವೆಂದು ನನಗೆ ತಿಳಿದುಬಂದಿದೆ. ಅದನ್ನು ಸಚಿವರ ಗಮನಕ್ಕೆ ತಿಳಿಯಪಡಿಸಲಾಗಿದೆ.


3.ಬೆಂಗಳೂರು ಸಿಟಿ-ಸಿಕಂದರಾಬಾದ್ ಎಕ್ಶ್ ಪ್ರೆಸ್ ರೈಲನ್ನು ಮೈಸೂರಿನವರೆಗೂ ವಿಸ್ತರಣೆ:


ಮೈಸೂರು-ಸಿಕಂದರಾಬ್ ನಡುವೆ ಯಾವುದೇ ರೈಲು ಸಂಚಾರ ಇಲ್ಲದಿರುವುದರಿಂದ ಮೈಸೂರು, ಕೊಡಗು, ಚಾಮರಾಜನಗರ ಮತ್ತು ಮಂಡ್ಯ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಮಾನ್ಯ ಸಚಿವರಿಗೆ ವಿನಂತಿ ಮಾಡಿಕೊಂಡಿದ್ದೇನೆ.


ಬೆಂಗಳೂರು ಸಿಟಿ-ಮುಂಬೈ ಸಿಎಸ್ಟಿ ಉದ್ಯಾನ್ ಎಕ್ಸ್ ಪ್ರೆಸ್ ರೈಲನ್ನು ಮೈಸೂರಿನವರೆಗೂ ವಿಸ್ತರಣೆ……….

ಈ ಮಾರ್ಗಕ್ಕಾಗಿ ಈ ಭಾಗದ ಜನರ ಬೇಡಿಕೆ ಮೊದಲಿನಿಂದಲೂ ಇದ್ದು ಮುಂಬೈ ಮತ್ತು ಪುಣೆಗೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಇದರಿಂದ ಪ್ರವಾಸೋದ್ಯಮ ಮತ್ತು ಬೆಂಗಳೂರು ನಿಲ್ದಾಣದ ದಟ್ಟಣೆಯನ್ನು ಕಡಿಮೆ ಮಾಡಬಹುದೆಂದು ಈ ಬೇಡಿಕೆಯನ್ನು ಇಡಲಾಗಿದೆ.


ಮೈಸೂರು-ಬೆಂಗಳೂರು ನಡುವೆ ಹೊಸ ರೈಲು………

ನಾವು ಬೇಡಿಕೆ ಇಟ್ಟಿರುವ ಈ ರೈಲು 12-00ಗಂಟೆಗೆ ಮೈಸೂರು ಬಿಟ್ಟು ಬೆಂಗಳೂರಿನಿಂದ 16-30ಕ್ಕೆ ಹೊರಡಬಹುದು. ಇದರಿಂದ ಚಾಮುಂಡಿ ಎಕ್ಸ್ಪ್ರೆಸ್ಸಿನ ನಿಬಿಡತೆಯನ್ನು ನಿವಾರಿಸಬಹುದು. ಬಡ ಮತ್ತು ಮಧ್ಯಮವರ್ಗದ ಕಾರ್ಮಿಕರಿಗೆ ಇದರಿಂದ ಉಪಯೋಗವಾಗುತ್ತದೆ. ಅಸಂಘಟಿತ ಕ್ಷೇತ್ರದ ಕಾಮರ್ಿಕರಿಗೆ ಇದು ಹೆಚ್ಚು ಅನುಕೂಲವಾಗುತ್ತದೆ.


ಮೈಸೂರು -ಬೆಂಗಳೂರು ನಡುವೆ ಡೀಸೆಲ್ ಮಲ್ಟಿಪಲ್ ಯೂನಿಟ್ಸ್ ಮತ್ತು ಪ್ರಮುಖ ಎಲೆಕ್ಟ್ರಿಕಲ್ ಮಲ್ಟಿಪಲ್ ಯೂನಿಟ್ಸ್………..

ಈ ಯೋಜನೆಯು ಮೈಸೂರು ವಿಭಾಗದಲ್ಲಿ ಜೋಡಣೆಯಾದರೆ ಹತ್ತಿರದ ನಗರ ಪ್ರದೇಶಗಳಿಗೆ ಕೆಲಸ ಹುಡುಕಿಕೊಂಡು ಹೋಗುವ ಹಾಗೂ ಅತೀ ಕಡಿಮೆ ಆದಾಯದ ಹಿನ್ನೆಲೆಯಿರುವ ಜನರಿಗೆ ಹಾಗೂ ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಕೈಗಾರಿಕಾ ವಲಯಗಳಿಗೆ ಅನುಕೂಲವಾಗುವುದು.


ಯಶವಂತಪುರ-ವಾಸ್ಕೋ (ವಾರಕ್ಕೆರಡುಬಾರಿ) ರೈಲನ್ನು ಮೈಸೂರಿನವರೆಗೆ ವಿಸ್ತರಿಸುವುದು………

ಗೋವಾ ಮತ್ತು ಮೈಸೂರು ಎರಡೂ ಪ್ರವಾಸಿ ತಾಣಗಳಾಗಿರುವುದರಿಂದ ಪ್ರವಾಸಿಗಳ ಅನುಕೂಲಕ್ಕೆ ಇದು ಸಹಕಾರಿಯಾಗುವುದು. ಮತ್ತು ಮೈಸೂರಿನಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೂ ಇದು ಪೂರಕವಾಗುವುದು.


ಮೈಸೂರಿನ ಬಳಿ ಇರುವ ಕಡಕೊಳ ರೈಲ್ವೆ ನಿಲ್ದಾಣವನ್ನು ಸ್ಯಾಟಲೈಟ್ ರೈಲ್ವೆ ಟಮರ್ಿನಲ್ ಆಗಿ ಆಭಿವೃದ್ಧಿಪಡಿಸುವುದು……..

ಮೈಸೂರು ನಿಲ್ದಾಣದ ದಟ್ಟಣೆಯನ್ನು ತಗ್ಗಿಸಲು ಮತ್ತು ನಿಲ್ದಾಣವು ಸೀಮಿತ ಜಾಗವನ್ನು ಹೊಂದಿರುವುದರಿಂದ ಸರಾಗ ಸಂಚಾರದ ಉದ್ದೇಶದಿಂದ ಬೆಂಗಳೂರಿನ ಯಶವಂತಪುರ ನಿಲ್ದಾಣ ಮಾದರಿಯಲ್ಲಿ ಮೈಸೂರಿನಲ್ಲಿ ಎರಡನೆಯ ಟಮರ್ಿನಲ್ ಅನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಕಡಕೊಳದಲ್ಲಿ ಇಂಥ ನಿಲ್ದಾಣವನ್ನು ನಿಮರ್ಾಣ ಮಾಡುವುದರಿಂದ ದಟ್ಟಣೆ ಕಡಿಮೆಯಾಗುವುದರ ಜೊತೆಗೆ ವ್ಯಾಪಾರ ವಹಿವಾಟು ಕೂಡಾ ಹೆಚ್ಚುವುದು.


ಈ ಯೋಜನೆಗಳನ್ನು 2016-17ರ ಬಜೆಟ್ ನಲ್ಲಿ ಸೇರ್ಪಡೆ ಮಾಡಬೇಕೆಂದು ರೈಲ್ವೆ ಸಚಿವರ ಬಳಿ ಪ್ರತಾಪ್ ಸಿಂಹ ಅವರು ಮನವಿ ಮಾಡಿದ್ದಾರೆ.


satel;lite

 •  0 comments  •  flag
Share on Twitter
Published on January 21, 2016 02:43

January 17, 2016

Pratap Simha's Blog

Pratap Simha
Pratap Simha isn't a Goodreads Author (yet), but they do have a blog, so here are some recent posts imported from their feed.
Follow Pratap Simha's blog with rss.