Pratap Simha's Blog, page 48
February 26, 2016
ಸಾವರ್ಕರ್ ಎಂಬ ಸ್ಫೂರ್ತಿ ಕಿಡಿಗೆ ಎದೆಗೂಡಲ್ಲಿ ಜಾಗವಿಡಿ!
ಸಾವರ್ಕರ್ ಎಂಬ ಸ್ಫೂರ್ತಿ ಕಿಡಿಗೆ ಎದೆಗೂಡಲ್ಲಿ ಜಾಗವಿಡಿ!
ಆ ವೀರ ಕಲಿಯನ್ನು ನೆನಪಿಸಿಕೊಂಡಾಗಲೆಲ್ಲ ದಿವಂಗತ ವಿದ್ಯಾನಂದ ಶೆಣೈ ಕಣ್ಣಮುಂದೆ ಬರುತ್ತಾರೆ. ಆರು ವರ್ಷಗಳ ಹಿಂದೆ ಅವರು ಮಾಡಿದ್ದ ಭಾಷಣದ ಝೇಂಕಾರ ಕಿವಿಯಲ್ಲಿ ಇನ್ನೂ ಹಸಿಯಾಗಿಯೇ ಇದೆ.
“ಅವತ್ತು ಛಾಫೇಕರ್ ಸಹೋದರರು ಬ್ರಿಟಿಷ್ ಅಧಿಕಾರಿ ರಾಂಡ್ ನನ್ನು ಹತ್ಯೆ ಮಾಡಿದರು. ಅದು ಬ್ರಿಟಿಷರಿಗೆ ತಿಳಿದುಹೋಯಿತು. ಬಂಧಿಸಿ ವಿಚಾರಣೆಗೆ ಗುರಿಪಡಿಸಿದ ಬ್ರಿಟಿಷರು ಛಾಫೇಕರ್ ಸಹೋದರರ ಮೇಲೆ “ಕೊಲೆ’ ಆರೋಪ ಹೊರಿಸಿದರು. ಕೊನೆಗೆ ಗಲ್ಲಿಗೂ ಏರಿಸಿದರು. ಇದನ್ನೆಲ್ಲಾ ನೋಡಿದ 14 ವರ್ಷದ ಬಾಲಕ ವಿನಾಯಕ ದಾಮೋದರ ಸಾವರ್ಕರ್ ಮನಸ್ಸಿಗೆ ಬಹಳ ನೋವಾಗುತ್ತದೆ. ಮನೆಗೆ ಓಡೋಡಿ ಬಂದ ಆತ ದೇವರ ಕೋಣೆಯ ಬಾಗಿಲು ತೆರೆದು ದೇವಿಯ ಮುಂದೆ ಕುಳಿತು ಕೇಳುತ್ತಾನೆ. “ಅಮ್ಮಾ…. ಛಾಫೇಕರ್ ಸಹೋದರರು ಮಾಡಿದ್ದು “ಕೊಲೆ’ಯೋ, “ಸಂಹಾರ’ವೋ ನಾವು “ದುರುಳರ ಸಂಹಾರ’ ಎನ್ನುತ್ತೇವೆ. ಪುಣೆಗೆ ಪ್ಲೇಗ್ ಬಡಿದಾಗ ಉಸ್ತುವಾರಿ ವಹಿಸಿ ಬಂದ ರಾಂಡ್ ಮಾಡಿದ್ದೇನು? ಪ್ಲೇಗ್ ಪೀಡಿತರನ್ನು ಪತ್ತೆ ಹಚ್ಚುವ ಸಲುವಾಗಿ ಜನರನ್ನು ಬೀದಿಗೆಳೆದ. ಮಹಿಳೆಯರು ಮನೆ ಮುಂದೆ ಅರೆಬೆತ್ತಲಾಗಿ ನಿಲ್ಲುವಂತೆ ಮಾಡಿದ, ಕೆಲ ಮಹಿಳೆಯರ ಮೇಲೆ ಅತ್ಯಾಚಾರ ಕೂಡ ನಡೆಯಿತು. ಅಂತಹ ಪ್ರಜಾಪೀಡಕ ರಾಂಡ್ ನನ್ನು ಕೊಂದರೆ ಅದು ಹೇಗೆ ಕೊಲೆಯಾಗುತ್ತದೆ? ಅದು ದುಷ್ಟ ಸಂಹಾರವಲ್ಲವೆ ದೇವಿ?”
ಒಂದು ಕಡೆ ವಿದ್ಯಾನಂದ ಶೆಣೈ ಅವರ ಭಾಷಣ ನಮ್ಮನ್ನು ಮಂತ್ರಮುಗ್ಧಗೊಳಿಸುತ್ತಿದ್ದರೆ ಮತ್ತೊಂದೆಡೆ ಸಾವರ್ಕರರು ಮನವನ್ನೆಲ್ಲ ಆವರಿಸಿಬಿಡುತ್ತಾರೆ. ವಿನಾಯಕ ದಾಮೋದರ ಸಾವರ್ಕರ್ ಎಂಬ ವ್ಯಕ್ತಿತ್ವವೇ ಅಂಥದ್ದು. ಅವರ ಪ್ರಭಾವಕ್ಕೆ ಒಳಗಾಗದವರು ಯಾರಿದ್ದಾರೆ?
ಇಂಡಿಯಾ ಹೌಸ್.
ಆ ಕಾಲದಲ್ಲಿ ಉನ್ನತ ವ್ಯಾಸಂಗಕ್ಕೆಂದು ಬ್ರಿಟನ್ ಗೆ ತೆರಳಿದ ಭಾರತೀಯ ವಿದ್ಯಾರ್ಥಿಗಳೆಲ್ಲ ತಂಗುತ್ತಿದ್ದುದೇ ಅಲ್ಲ್ಲಿ. ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ಬಿಎ ಪದವಿ ಪೂರೈಸಿ ಲಾ ಓದಲು ಬ್ರಿಟನ್ನಿನ ಪ್ರತಿಷ್ಠಿತ Gray’s Inn ಕಾಲೇಜಿಗೆ ಸೇರಿದಾಗ ಸಾವರ್ಕರ್ ಕೂಡ ಆಶ್ರಯ ಪಡೆದುಕೊಂಡಿದ್ದು ಅದೇ ಇಂಡಿಯಾ ಹೌಸ್ ನಲ್ಲಿ. ಅವರು ಕಾನೂನು ಪದವಿ ಕಲಿಯುವುದಕ್ಕೆಂದು ಬಂದಿದ್ದರೂ ಅದು ನೆಪಮಾತ್ರವಾಗಿತ್ತು. ಅಪ್ಪಟ ದೇಶಪ್ರೇಮಿಯಾದ ಅವರಿಗೆ ಬ್ರಿಟಿಷರಿಂದ ಪದವಿ ಪಡೆದುಕೊಳ್ಳುವುದಕ್ಕಿಂತ ಸ್ವಾತಂತ್ರ್ಯ ಗಳಿಸಿಕೊಳ್ಳುವುದು ಮುಖ್ಯವಾಗಿತ್ತು. ಇಂಡಿಯಾ ಹೌಸ್ ನಲ್ಲೇ ವಿದ್ಯಾರ್ಥಿಗಳನ್ನು ಕಲೆಹಾಕಿ ದಾಸ್ಯದಿಂದ ಬಳಲುತ್ತಿರುವ ದೇಶದ ಪರಿಸ್ಥಿತಿಯನ್ನು ವಿವರಿಸತೊಡಗಿದರು. ಅದು ನಿತ್ಯ ಕಾಯಕವಾಯಿತು. ಸಮ್ಮೋಹನಗೊಳಿಸುವಂಥ ಅವರ ಭಾಷಣವನ್ನು ಕೇಳಲು ಬರುವವರ ಸಂಖ್ಯೆಯೂ ಹೆಚ್ಚಾಗತೊಡಗಿತು. ಅದೊಂದು ದಿನ ಲಂಡನ್ನಿನಲ್ಲಿ ಅಲೆಯುತ್ತಿದ್ದ ಶೋಕಿಲಾಲನೊಬ್ಬ ತನ್ನ ಮಾರ್ಗ ಮಧ್ಯದಲ್ಲಿ ಕಂಡ ಇಂಡಿಯಾ ಹೌಸ್್ಗೆ ಆಗಮಿಸಿದ. ಅದೇ ವೇಳೆಗೆ ಸಾವರ್ಕರ್ ಭಾಷಣ ನಡೆಯುತಿತ್ತು. ಅವರು ತಾಯ್ನಾಡಿನ ಪರಿಸ್ಥಿತಿಯನ್ನು ವಿವರಿಸುತ್ತಿದ್ದರೆ ದೇಶಕ್ಕೆ ಎದುರಾಗಿರುವ ಹೀನಾತಿ ಹೀನ ಸ್ಥಿತಿಯನ್ನು ಕೇಳಿ ಆ ಶೋಕಿಲಾಲನ ರಕ್ತ ಕುದಿಯತೊಡಗಿತು. ಆ ದಿನದಿಂದ ಶೋಕಿಲಾಲ ಕೂಡ ಇಂಡಿಯಾ ಹೌಸ್್ಗೆ ಕಾಯಂ ಬರಲಾರಂಭಿಸಿದ. ವಿನಾಯಕ ದಾಮೋದರ ಸಾವರ್ಕರ್ ಅವನನ್ನು ಆವಾಹನೆ ಮಾಡಿಬಿಟ್ಟರು. ಆತ ಅವರ ಭಕ್ತನಾಗಿಬಿಟ್ಟ.
ಆ ಶೋಕಿಲಾಲ ಮತ್ತಾರೂ ಅಲ್ಲ, ಮದನ್ ಲಾಲ್ ಧೀಂಗ್ರಾ!
1908ರಲ್ಲಿ ಸಾವರ್ಕರ್ ಲಂಡನ್ ನಲ್ಲೊಂದು ಕಾರ್ಯಕ್ರಮವನ್ನು ಆಯೋಜಿಸಿದರು. ಅದು 1857ರಲ್ಲಿ ನಡೆದಿದ್ದ ಮೊದಲ ಭಾರತ ಸ್ವಾತಂತ್ರ ಸಂಗ್ರಾಮದ ವಾರ್ಷಿಕ ದಿನ ಸ್ಮರಣೆಯಾಗಿತ್ತು. ಬಹುತೇಕ ಭಾರತೀಯ ವಿದ್ಯಾರ್ಥಿಗಳು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಾವರ್ಕರ್ ಭಾಷಣ ಅವರನ್ನು ಅದೆಷ್ಟು ಪ್ರಭಾವಿತಗೊಳಿಸಿತ್ತೆಂದರೆ ತಮ್ಮ ಕೋಟಿನ ಮೇಲೆ “1857ರ ಸ್ಮರಣೆ’ ಎಂದು ಬರೆದಿರುವ ಬ್ಯಾಡ್ಜ್ ಹಾಕಿಕೊಂಡು ತಮ್ಮ ತಮ್ಮ ತರಗತಿಗಳಿಗೆ ಹೋಗಿದ್ದರು. ಬ್ರಿಟಿಷ್ ಅಧಿಪತ್ಯದ ಬಗ್ಗೆ ಅತಿಯಾದ ಹೆಮ್ಮೆ ಇಟ್ಟುಕೊಂಡಿದ್ದ ಇಂಗ್ಲಿಷರಿಗೆ ಇದನ್ನು ಸಹಿಸಲಾಗಲಿಲ್ಲ. ಬ್ರಿಟನ್ನಿನಲ್ಲೇ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಸಡ್ಡುಹೊಡೆಯುವುದೇನು ಸಾಮಾನ್ಯ ಮಾತೆ? ಇದು ಇಂಗ್ಲಿಷರನ್ನು ಕುಪಿತಗೊಳಿಸಿತು. ಬಹಳ ಚಂದವಾಗಿ ಧಿರಿಸು ಮಾಡಿಕೊಂಡು, ಅದರ ಮೇಲೆ ಬ್ಯಾಡ್ಜ್ ಅಂಟಿಸಿಕೊಂಡು ಹೋಗುತ್ತಿದ್ದ ಧೀಂಗ್ರಾನತ್ತ ಧಾವಿಸಿದ ಇಂಗ್ಲಿಷನೊಬ್ಬ ಬ್ಯಾಡ್ಜನ್ನು ಕಿತ್ತೊಗೆಯಲು ಕೈಚಾಚಿದ. ಅಷ್ಟರಲ್ಲಿ ಅವನ ಕೈ ತಡೆದು ಕಪಾಳಮೋಕ್ಷ ಮಾಡಿದ ಧೀಂಗ್ರಾ, ಆತನನ್ನು ನೆಲಕ್ಕುರುಳಿಸಿ ಎದೆ ಮೇಲೆ ಕುಳಿತು, “ನನ್ನ ದೇಶದ ಚಿಹ್ನೆ ಮೇಲೆ ಕೈಹಾಕಿದರೆ ಜೋಕೆ’ ಎಂದು ಧಮಕಿ ಹಾಕಿದ. ಭಾರತೀಯ ವಿದ್ಯಾರ್ಥಿಗಳಲ್ಲಿ ಅಂತಹ ತೀವ್ರ ದೇಶಪ್ರೇಮವನ್ನು ತುಂಬಿದ್ದರು ಸಾವರ್ಕರ್. ಮದನ್ ಲಾಲ್ ಧೀಂಗ್ರಾ 1909ರಲ್ಲಿ ಕರ್ಝನ್ ವೇಯ್ಲಿಯನ್ನು ಕೊಂದುಹಾಕಿದ್ದು ಸಾವರ್ಕರ್ ಆದೇಶದಂತೆಯೇ. ಆತ ವಿದೇಶದಲ್ಲಿ ನೇಣಿಗೇರಿದ ಮೊದಲ ಭಾರತೀಯ ಕ್ರಾಂತಿಕಾರಿ. ಸಾವರ್ಕರ್ ಅಂದರೆ ಒಂದು ಪ್ರೇರಕ ಶಕ್ತಿಯಾಗಿತ್ತು. ಗೆರಿಲ್ಲಾ ಯುದ್ಧದ ಮೂಲಕ ಬ್ರಿಟಿಷರನ್ನು ಹೊಡೆದೋಡಿಸಬೇಕು ಎನ್ನುತ್ತಿದ್ದರು. ಅಭಿನವ ಭಾರತ, ಫ್ರೀ ಇಂಡಿಯಾ ಸೊಸೈಟಿಗಳನ್ನು ಸ್ಥಾಪಿಸಿದ್ದ ಸಾವರ್ಕರ್ ಒಬ್ಬ ಮಹಾನ್ ಚಿಂತಕ ಕೂಡ ಹೌದು. 1857ರಲ್ಲಿ ನಡೆದಿದ್ದ ಕ್ರಾಂತಿಯನ್ನು ಬ್ರಿಟಿಷರು “ಸಿಂಪಾಯಿ ದಂಗೆ’ ಎಂದು ಕರೆಯುತ್ತಿದ್ದರು. ಉಳಿದವರೂ ಹಾಗೆಂದೇ ಭಾವಿಸಿದ್ದರು. ಅದು ಸಿಪಾಯಿ ದಂಗೆಯಲ್ಲ, “ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂದು ಮೊದಲು ಹೇಳಿದ್ದೇ ಸಾವರ್ಕರ್. The Indian War Of Independence ಎಂಬ ಪುಸ್ತಕವನ್ನೇ ಬರೆದರು. ಆ ಪುಸ್ತಕ ಬ್ರಿಟಿಷರನ್ನು ಯಾವ ರೀತಿ ಭೀತಿಗೊಳಿಸಿತೆಂದರೆ ಅದರ ಮಾರಾಟವನ್ನೇ ನಿಷೇಧ ಮಾಡಿದರು.
ಇಂತಹ ಸಾವರ್ಕರ್ ಅವರನ್ನು ಬ್ರಿಟನ್ ಆಡಳಿತ 1910ರಲ್ಲಿ ಇಂಡಿಯಾ ಹೌಸ್ ನಲ್ಲೇ ಬಂಧಿಸಿತು.
ಅವರ ಬಗ್ಗೆ, ಅವರ ಚಟುವಟಿಕೆಯ ಬಗ್ಗೆ ಬ್ರಿಟಿಷರಿಗೆ ಎಂತಹ ಭಯವಿತ್ತೆಂದರೆ ಎರಡು ಜೀವಾವಧಿ ಶಿಕ್ಷೆ(50 ವರ್ಷ) ವಿಧಿಸಿ ಅಂಡಮಾನ್ ಜೈಲಿಗೆ ದಬ್ಬಿತು. ಸಾವರ್ಕರ್ ಅಲ್ಲೂ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಧರ್ಮದ ಆಧಾರದ ಮೇಲೆ ದೇಶ ಒಡೆಯಲು ಹೊರಟ ಮುಸ್ಲಿಮರನ್ನು ಮಟ್ಟಹಾಕುವ ಸಲುವಾಗಿ ಭಾರತವನ್ನು ಹಿಂದುರಾಷ್ಟ್ರವನ್ನಾಗಿ ಮಾಡಬೇಕೆಂದು ಸಾರ್ವಜನಿಕವಾಗಿ ಪ್ರತಿಪಾದಿಸಿದರು. ಹಿಂದು ರಾಷ್ಟ್ರವಾದವನ್ನು ಪ್ರತಿಪಾದಿಸಿ ಜೈಲಿನಲ್ಲೇ “Hindutva: Who is a hindu?‘ ಎಂಬ ಪುಸ್ತಕ ಬರೆದರು. ಹಿಂದುಯಿಸಂ, ಜೈನಿಸಂ, ಬುದ್ಧಿಸಂ ಹಾಗೂ ಸಿಖ್ಖಿಸಂ ಇವೆಲ್ಲವೂ ಒಂದೇ ಎಂದು ಮೊದಲು ಪ್ರತಿಪಾದಿಸಿದ್ದು, “ಅಖಂಡ ಭಾರತ’ದ ಕಲ್ಪನೆಯನ್ನು ಮೊದಲು ಕೊಟ್ಟಿದ್ದೂ ಇವರೇ.
1921ರಲ್ಲಿ ಷರತ್ತಿನ ಆಧಾರದ ಮೇಲೆ ಬಿಡುಗಡೆಯಾದ ಸಾವರ್ಕರ್, ಹಿಂದು ಮಹಾಸಭಾದ ಅಧ್ಯಕ್ಷರಾಗಿ ಸ್ವಧ ರ್ಮೀಯರನ್ನು ಒಗ್ಗೂಡಿಸಲು ಹೊರಟರು. ಕಾಂಗ್ರೆಸ್ ಮಾಡುತ್ತಿದ್ದ ಮುಸ್ಲಿಮರ ಓಲೈಕೆ ಹಾಗೂ ಮುಸ್ಲಿಮರ ವಿಭಜ ನಾವಾದಿ ಮನಸ್ಥಿತಿಯನ್ನು ಸಾವರ್ಕರ್ ಬಹಳ ಕಟುವಾಗಿ ವಿರೋಧಿಸಿದರು.
ನೀವು ಬಂದರೆ ನಿಮ್ಮ ಜತೆ
ಬರದಿದ್ದರೆ ನಿಮ್ಮನ್ನು ಬಿಟ್ಟು
ಅಡ್ಡವಾದರೆ ಮೊದಲು ನಿಮ್ಮನ್ನೇ ಮೆಟ್ಟಿ
ಸ್ವಾತಂತ್ರ್ಯ ಗಳಿಸುತ್ತೇವೆ….
ಎಂದು ಎಚ್ಚರಿಕೆಯನ್ನೇ ನೀಡಿದ್ದರು. ಅವರನ್ನು ನೀವು ಒಪ್ಪಿಬಿಡಿ, ಆದರೆ ತಾವು ನಂಬಿದ್ದ ಸಿದ್ಧಾಂತಗಳಿಗೆ ಅವರು ನಿಷ್ಠರಾಗಿದ್ದರು. ಬಹುತೇಕ ಟೋಪಿಧಾರಿ ಕಾಂಗ್ರೆಸ್ಸಿಗರ ಸ್ವಾತಂತ್ರ್ಯ ಹೋರಾಟಕ್ಕೆ ರಾಜಕೀಯ ಅಧಿಕಾರದ ಗುರಿಯಿತ್ತು. ಆದರೆ ಸಾವರ್ಕರ್ ಅವರಿಗೆ ರಾಜಕೀಯ ಮಹತ್ವಾಕಾಂಕ್ಷೆ ಎಂದೂ ಇರಲಿಲ್ಲ. ಅವರಿಗಿದ್ದ ಜನಪ್ರಿಯತೆಯ ಅಲೆಯಲ್ಲಿ ಚುನಾವಣೆಯಲ್ಲಿ ಆರಿಸಿ ಬರಬಹುದಿತ್ತು. ಸಾವರ್ಕರ್ ಗುರಿ ಈ ದೇಶದ ಸ್ವಾತಂತ್ರ್ಯ, ಈ ನೆಲದ ನಂಬಿಕೆ, ಸಂಸ್ಕೃತಿಯ ರಕ್ಷಣೆಯಷ್ಟೇ ಆಗಿತ್ತು.
ಸಾವರ್ಕರ್ ಅವರು ನಮ್ಮನ್ನಗಲಿ ನಿನ್ನೆಗೆ (ಫೆ-.26) 40
ವರ್ಷಗಳಾದವು.

Published on February 26, 2016 23:30
February 24, 2016
February 19, 2016
ಸ್ವಚ್ಛನಗರ ಮೈಸೂರು, ಕಾರಣೀಭೂತರು ಯಾರು?
ಸ್ವಚ್ಛನಗರ ಮೈಸೂರು, ಕಾರಣೀಭೂತರು ಯಾರು?
ಇಂಧೋರ್, ಗ್ವಾಲಿಯರ್, ಸಿಂಧ್‌ನ ಹೈದರಾಬಾದ್, ನಾಗಪುರ, ಗೋವಾ, ರಾಜಕೋಟ್, ಭಾವನಗರಗಳನ್ನು ಸರ್‌ಎಂವಿ ರೂಪಿಸಿದರು. ಅದಕ್ಕೆಲ್ಲಾ ಮಾದರಿ, ಪ್ರೇರಣೆಯಾಗಿದ್ದು ನಮ್ಮ ಮೈಸೂರು. ಜನನಿಬಿಡ ಪಟ್ಟಣಗಳಾದರೂ ಪಂಢರಾಪುರ, ಸಾಂಗ್ಲಿ, ಮೋರ್ವಿ, ಅಹಮದ್‌ನಗರಗಳು ಕುಡಿಯುವ ನೀರಿನ ಕೊರತೆ ಅನುಭವಿಸದೆ ಇರುವುದಕ್ಕೆ ಕಾರಣ ಮೈಸೂರು ಮಾದರಿ.
ಮೊದಲು ಮೈಸೂರುನಂತರ ಚಂಡೀಗಢಕಳೆದ ಎರಡು ವರ್ಷಗಳಿಂದ ಹೊರಬೀಳುತ್ತಿರುವ ಸ್ವಚ್ಛನಗರಿಗಳ ಪಟ್ಟಿಯಲ್ಲಿ ಇಡೀ ದೇಶದಲ್ಲಿಯೇ ಅತ್ಯಂತ ಸ್ವಚ್ಛನಗರಿ ಎಂದು ನಮ್ಮ ಮೈಸೂರು ಹೆಗ್ಗಳಿಕೆಯನ್ನು ಪಡೆಯುತ್ತಾ ಬರುತ್ತಿದೆ. ವಾಸ್ತವದಲ್ಲಿ ಮೈಸೂರಿನಲ್ಲಿ ಬಹಳಷ್ಟು ಬದಲಾವಣೆಗಳಾಗಬೇಕಿದ್ದರೂ ಕಳೆದ ಎರಡೂ ಸಲದಿಂದ ಇಂಥದ್ದೊಂದು ಹೆಗ್ಗಳಿಕೆ ಪಾತ್ರವಾಗಿರುವುದು ಮಾತ್ರ ನಮಗೆ ಹೆಮ್ಮೆಯನ್ನು ಮೂಡಿಸಿದೆ. ಅದರಲ್ಲೂ ಫ್ರೆಂಚ್ ವಾಸ್ತುಶಿಲ್ಪಿ ಲೀಕಾರ್ಬೂಸರ್, ಪೋಲೆಂಡ್‌ನ ವಾಸ್ತಶಿಲ್ಪಿ ಮಸೀಜ್ ನೊವಿಕಿ ಹಾಗೂ ಅಮೆರಿಕದ ಯೋಜಕ ಆಲ್ಬರ್ಟ್ ಮೇಯರ್‌ರಂಥ ಮೂವರು ಜಗದ್ವಿಖ್ಯಾತರು ರೂಪಿಸಿದ ಚಂಡೀಗಢವನ್ನು ಹಿಂದಿಕ್ಕಿ ಈ ಪುರಸ್ಕಾರವನ್ನು ಪಡೆದಿದೆ ಎಂದರೆ ಮೈಸೂರಿನ ಬಗ್ಗೆ ನಮಗೆ ಕೋಡು ಮೂಡದೇ ಇದ್ದೀತೆ! ಇಂಥದ್ದೊಂದು ಖ್ಯಾತಿಗೆ ಕಾರಣವೇನು? ಕಳೆದ ಎರಡು ಸಲದಿಂದಲೂ ಮೈಸೂರು ಅತ್ಯಂತ ಸ್ವಚ್ಛನಗರಿ ಎಂಬ ಖ್ಯಾತಿಗೆ ಭಾಜನವಾಗಲು ಮೂಲ ಕಾರಣ ಯಾರು? ಮೈಸೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು, ಪಾಲಿಕೆಯ ಆಡಳಿತ ಮಂಡಳಿ ಹಾಗೂ ಸ್ವಭಾತಃ ಸ್ವಚ್ಛತೆಗೆ ಹೆಚ್ಚು ಪ್ರಾಧಾನ್ಯತೆ ಕೊಡುವ ನಮ್ಮ ಮೈಸೂರಿನ ಜನಕ್ಕಷ್ಟೇ ಈ ಹೆಗ್ಗಳಿಕೆ ಸಲ್ಲಬೇಕೋ? ಅಥವಾ ಇದೆಲ್ಲಕ್ಕೂ ಮೂಲಪ್ರೇರಣೆ ಇನ್ನಾರೋ ಇದ್ದಾರೆಯೇ? ನಮ್ಮ ದೇಶದಲ್ಲಿ ಹಲವು ರಾಜವಂಶಗಳು ಆಳ್ವಿಕೆ ನಡೆಸಿವೆ. ಸುವರ್ಣಯುಗವನ್ನೂ ಕಂಡಿವೆ. ಜಗತ್ತಿನ ಮಹಾಮಹಾ ಸಾಮ್ರಾಜ್ಯಗಳೆಂದು ಹೆಸರು ಪಡೆದ ರಾಜವಂಶಗಳು ಈ ದೇಶದಲ್ಲಿ ಆಗಿಹೋಗಿವೆ. ಆದರೆ ಅವುಗಳ ಕಾಲಾನಂತರ ತಮ್ಮ ಕುರುಹುಗಳನ್ನು ಶತಮಾನಗಳ ನಂತರವೂ ಬಿಟ್ಟುಹೋದ ರಾಜವಂಶಗಳು, ಸಾಮ್ರಾಜ್ಯಗಳು ಎಷ್ಟಿವೆ ಹೇಳಿ? ಕೆಲವು ಪರಿಸ್ಥಿತಿಯ ಹೊಡೆತಕ್ಕೆ ಬಿದ್ದು ಹಾಳುಬಿದ್ದವು. ಕೆಲವು ಸಾಮ್ರಾಜ್ಯಗಳ ಕೆತ್ತನೆಗಳು ಮಾತ್ರ ಉಳಿದುಕೊಂಡವು. ಕೆಲವು ಕಡೆ ರಾಜವಂಶಸ್ಥರು ಮಾತ್ರ ಉಳಿದುಕೊಂಡರು.
ಚೋಳ-ಪಾಂಡ್ಯರಂಥ ಅರಸರು ವಿದೇಶಗಳೊಂದಿಗೆ ಸಂಪರ್ಕ ಸಾಧಿಸಿದರಾದರೂ ಇಂದು ಅವರ ಕುರುಹುಗಳಾಗಿ ಕೋಟೆಗಳೂ ಇಲ್ಲ, ಅರಮನೆಗಳೂ ಇಲ್ಲ. ಆದರೆ ಬೃಹತ್ ದೇವಾಲಯಗಳು ಅವರ ನೆನಪನ್ನು ತರಿಸುತ್ತವೆ. ಮಧ್ಯಯುಗದ ನಂತರ ದೇಶದ ಬಹುಭಾಗವನ್ನಾಳಿದ ನವಾಬರ ಮತ್ತು ನಿಜಾಮರ ರಾಜಧಾನಿಗಳನ್ನು ನೋಡಿದರೆ ಅವರ ಕಾಲದ ಅನಿಶ್ಚಿತತೆ, ಗೊಂದಲ, ಕಲಹ, ಅಭಿವೃದ್ಧಿಯ ಕೊರತೆಗಳು ಇಂದಿಗೂ ಗೋಚರವಾಗುತ್ತವೆ. ಇಕ್ಕಟ್ಟಾದ ಓಣಿಗಳು, ಗಲೀಜು ಬೀದಿಗಳು, ಅವ್ಯವಸ್ಥಿತ ಕಟ್ಟಡಗಳು ಎಲ್ಲವೂ ಆ ಸಾಮ್ರಾಜ್ಯದ ಸಂಸ್ಕಾರಗಳನ್ನು ಸಾರುತ್ತವೆ. ನೀವೇ ಹೇಳಿ, ಸುಲ್ತಾನರ ದಿಲ್ಲಿ, ನಿಜಾಮರ ಹೈದರಾಬಾದ್ ಹೇಗಿವೆ?ಮೈಸೂರನ್ನು ಕೇಂದ್ರ ಸರ್ಕಾರ ದೇಶದ ಅತ್ಯಂತ ಸ್ವಚ್ಛ ನಗರ ಎಂದು ಘೋಷಿಸಿದಾಗ ಮೈಸೂರಿನ ಒಡೆಯರು, ಅದರಲ್ಲೂ ಮುಮ್ಮಡಿ, ನಾಲ್ವಡಿ ಕೃಷ್ಣರಾಜ ಒಡೆಯರು ಬಹುವಾಗಿ ನೆನಪಾಗತೊಡಗಿದರು. ಇಷ್ಟಕ್ಕೂ ಸ್ವಚ್ಛತೆಯ ಬಗ್ಗೆ ಎಷ್ಟೇ ಅರಿವು ಮೂಡಿಸಿದರೂ, ಅನುದಾನಗಳನ್ನು ನೀಡಿದರೂ ಮೈಸೂರು ವ್ಯವಸ್ಥಿತ ನಗರವಾಗಿಲ್ಲದೇ ಇದ್ದಿದ್ದರೆ ಈ ಪಟ್ಟ ಮೈಸೂರಿಗೆ ಬರುತ್ತಿತ್ತೇ? ಮತ್ತೆ ಮತ್ತೆ ಒಡೆಯರು, ದಿವಾನರು ನೆನಪಾಗುತ್ತಾರೆ.
ಆಳಿದ ಮಹಾಸ್ವಾಮಿಗಳ ದೂರದೃಷ್ಟಿತ್ವ, ದಾರ್ಶನಿಕ ಆಡಳಿತ ಪ್ರವೃತ್ತಿ, ರಾಜ್ಯದ ಭವಿಷ್ಯದ ಬಗೆಗಿನ ಪ್ರೇಮ, ಜನಾನುರಾಗಿತನಗಳು ಇಂದಿಗೂ ಮೈಸೂರನ್ನು ಕಾಪಾಡುತ್ತಿವೆಯ ಎನಿಸುತ್ತವೆ. ವಿಶಾಲವಾದ ರಸ್ತೆಗಳು, ಟ್ರಾಫೀಕಿನ ಕಿರಿಕಿರಿಯಿಲ್ಲದ ಸುಲಲಿತ ಓಡಾಟ, ಎಂಥಾ ಮಳೆಬಿದ್ದರೂ ನೀರು ಸರಾಗ ಹರಿದುಹೋಗುವಂತಹ ಚರಂಡಿ, ನೆರಳು ನೀಡುವ ಮರಗಳು, ಸುಂದರ ಕಟ್ಟಡಗಳು, ಗೋಪುರಗಳು, ಅಗ್ರಹಾರಗಳು, ಹಳೆಯದಾದರೂ ಹೂತೋಟದಂತಿರುವ ಶಿಕ್ಷಣಸಂಸ್ಥೆಗಳು ಮೈಸೂರಲ್ಲಿ ಇಲ್ಲದೇ ಇರುತ್ತಿದ್ದರೆ, ಅದನ್ನು ಒಡೆಯರು ಕಟ್ಟದೇ ಇರುತ್ತಿದ್ದರೆ ಮೈಸೂರು ದೇಶದ ಅತ್ಯಂತ ಸ್ವಚ್ಛ ನಗರವಾಗುತ್ತಿತ್ತೇ? ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರಿನ ಆಡಳಿತದ ಕಾಯಕಲ್ಪ ಆರಂಭವಾಯಿತು. ಮಹಾಮಾತೃ ಶ್ರೀಲಕ್ಷ್ಮಮ್ಮಣ್ಣಿಯವರು ಇರುವವರೆಗೂ ಅವರ ಉಸ್ತುವಾರಿಯಲ್ಲಿ ಮೈಸೂರು ಸುಮಾರು ಅರೆಶತಮಾನಗಳ ಕಾಲದಿಂದ ನಿಂತುಹೋಗಿದ್ದ ಕೆಲವು ಆಚರಣೆಗಳು ಮತ್ತೆ ಆರಂಭವಾದವು. ಮೈಸೂರಿಗೆ ಸಾಂಸ್ಕೃತಿಕ ನಗರಿ ಎಂಬ ಬಿರುದು ಬರಲು ಲಕ್ಷ್ಮಮ್ಮಣ್ಣಿಯವರ ಶ್ರಮ ದೊಡ್ಡದು. ಮುಮ್ಮಡಿಯವರು ಪ್ರಾಪ್ತ ವಯಸ್ಕರಾದ ನಂತರ ಅವರಿಂದಲೂ ಮೈಸೂರು ಅಭಿವೃದ್ಧಿಯ ದಾರಿಯಲ್ಲಿ ಸಾಗತೊಡಗಿತು.
ಬಹುಶಃ ಆಧುನಿಕ ಮೈಸೂರು ನಗರ ನಿರ್ಮಾಣದ ಬುನಾಧಿ ಆರಂಭವಾಗಿದ್ದು ಇ.ಸಾಮ್ರಾಜ್ಯಾದ್ಯಂತ ಹಲವು ಅರಮನೆಗಳ ನಿರ್ಮಾಣ, ಚಾಮುಂಡೇಶ್ವರಿ, ನಂಜುಂಡೇಶ್ವರ ಸೇರಿದಂತೆ ಹಲವು ಖ್ಯಾತ ದೇವಾಲಯಗಳ ಗೋಪುರಗಳ ನಿರ್ಮಾಣ, ರಂಗನಾಥ ಸೇರಿದಂತೆ ಹಲವು ದೇವಸ್ಥಾನಗಳ ಜೀರ್ಣೋದ್ದಾರಗಳು, ಕಾವೇರಿ-ಲೋಕಪಾವನಿ, ಅರ್ಕಾವತಿ ನದಿಗಳಿಗೆ ಸೇತುವೆ, ಪಶ್ಚಿಮವಾಹಿನಿ ಮತ್ತು ಕಪಿಲಾ ನದಿದಂಡೆಗಳಲ್ಲಿ ಸ್ನಾನಘಟ್ಟಗಳು, ಕಾರಂಜಿಕೆರೆ-ಕಾಂತರಾಜ ಕಲ್ಯಾಣಿ ನಿರ್ಮಾಣ ಮಾಡಿದ ಶ್ರೇಯಸ್ಸು ಮುಮ್ಮಡಿ ಕೃಷ್ಣರಾಜ ಒಡೆಯರದ್ದು. ಆ ನಿರ್ಮಾಣಗಳು ಮೈಸೂರನ್ನು ವ್ಯವಸ್ಥಿತ ನಿರ್ಮಾಣವಾಗಿಸಲು ಕಾರಣವಾಗಿದೆ. ಒಂದು ವೇಳೆ ಅವರ ನಿರ್ಮಾಣ ಕಾರ್ಯಗಳು ನಡೆಯದೇ ಇರುತ್ತಿದ್ದರೆ ಇಂದು ಮೈಸೂರು ಹೀಗಿರುತ್ತಿರಲಿಲ್ಲ. 1850ರ ಹೊತ್ತ ಮೈಸೂರಿನಲ್ಲಿ ಇವೆಲ್ಲವೂ ನಿರ್ಮಾಣವಾಯಿತು ಎಂಬುದು ನಮ್ಮ ಅರಸರ ದೂರದರ್ಷಿತ್ವಕ್ಕೆ ಸಾಕ್ಷಿ. ಇಂಥ ಆಳಿದ ಮಹಾಸ್ವಾಮಿಗಳ ಕೊಡುಗೆಗಳನ್ನು ನಾವು ಹೇಗೆ ಮರೆಯೋಣ? ಮುಮ್ಮಡಿ ಕೃಷ್ಣರಾಜ ಒಡೆಯರಿಂದ ಬ್ರಿಟಿಷರು ಅಧಿಕಾರವನ್ನು ಕಿತ್ತುಕೊಂಡಿದ್ದರೂ, ತಾವು ಬ್ರಿಟಿಷರು ಕೊಡುತ್ತಿದ್ದ ವಾರ್ಷಿಕ ಮೂರೂವರೆ ಲಕ್ಷ ರಾಜಧನದಿಂದಬದುಕುತ್ತಿದ್ದರೂ ಮುಮ್ಮಡಿಯವರ ಜನಾನುರಾಗಿತನದಲ್ಲಿ ಜುಗ್ಗತನ ಕಾಣಲಿಲ್ಲ. ರಾಜಧನವನ್ನು ಅವರು ಜನರಿಗಾಗಿ ವಿನಿಯೋಗಿಸಿದ್ದರು. ಅವರ ಕಾಲದ ಬಹುದೊಡ್ಡ ಕೊಡುಗೆ ಎಂದರೆ 1862ರಲ್ಲಿ ಸ್ಥಾಪನೆಯಾದ ಮೈಸೂರು ನಗರ ಸಭೆ.
ಇಂದಿನ ಮಹಾನಗರಪಾಲಿಕೆ! ಮೈಸೂರನ್ನು ದೇಶವೇ ಗುರುತಿಸುವಂತೆ ಮಾಡಿದ ಕಾರ್ಯಕ್ಕೆ ಶತಮಾನಗಳ ಹಿಂದೆಯೇ ಅಡಿಗಲ್ಲು ಹಾಕಲಾಗಿತ್ತು ಎಂಬುದು ನಮ್ಮ ನಾಡಿನ ಹೆಮ್ಮೆ. ನಗರದಲ್ಲಿ ಆರು ಪುರಾಗ್ರಹಾರಗಳನ್ನು ನಿರ್ಮಿಸಿದ ಶ್ರೇಯಸ್ಸೂ ಮುಮ್ಮಡಿಯವರದ್ದು. ಇಂದಿನ ನಗರವ್ಯಾಪ್ತಿಗೆ ಬರುವ ಲಿಂಗಾಂಬಾ ಅಗ್ರಹಾರ ಮತ್ತು ಚೆಲುವಾಂಬಾ ಅಗ್ರಹಾರಗಳು ಅವುಗಳಲ್ಲಿ ಸೇರಿತ್ತು. ವ್ಯವಸ್ಥಿತ ಅಗ್ರಹಾರಗಳು ಹೇಗಿರಬೇಕು ಎಂಬುದಕ್ಕೆ ಈ ಅಗ್ರಹಾರಗಳು ಮಾದರಿಯಾಗಿದೆ. ನಮ್ಮ ದೊಡ್ಡಾಸ್ಪತ್ರೆ ಕೆ. ಆರ್ ಆಸ್ಪತ್ರೆ, ಜನರು ಇಂದಿಗೂ ಭಕ್ತಿಗಳಿಂದ ನಡೆದುಕೊಳ್ಳುವ ಮೂರು ಮಠ(ಪರಕಾಲ ಮಠ, ಗವಿಮಠ, ಅನ್ನದಾನದ ಮಠ)ಗಳ ನಿರ್ಮಾಣದಲ್ಲೂ ಮುಮ್ಮಡಿಯವರ ನಗರ ನಿರ್ಮಾಣಚಾತುರ್ಯವನ್ನು ಕಾಣಬಹುದು. ಮಠಗಳ ನಿರ್ಮಾಣವೆಂದು ಅರಸರು ಕೇವಲ ನಾಲ್ಕು ಗೋಡೆಗಳನ್ನು ಎಬ್ಬಿಸಿ ಮಾಡು ಹೊದೆಸುವ ಕೆಲಸವನ್ನು ಮಾತ್ರ ಮಾಡಲಿಲ್ಲ. ನಗರದ ಪ್ರತೀ ನಿರ್ಮಾಣಗಳೂ ನಗರ ಸೌಂದರ್ಯಕ್ಕೆ ಕಿರೀಟದಂತಿರಬೇಕು ಎಂದು ಭಾವಿಸಿದ್ದರು.
ಅದರ ಕುರುಹಾಗಿ ಇಂದಿನ ಮೈಸೂರಿನಲ್ಲಿ ನಮಗೆಯೂರೋಪಿಯನ್ ಅಯೋನಿಕ್, ಕಾರಿಂಥಿಯನ್, ಗಾಥಿಕ್ ಶೈಲಿಯ ಹಲವು ಕಟ್ಟಡಗಳು ಎದ್ದವು. ಅಂಥ ಕಟ್ಟಡಗಳು ನಗರದ ಮೆರುಗನ್ನು ಇಂದಿಗೂ ಕಾಪಾಡಿಕೊಂಡಿವೆ. ಮಧ್ಯಯುಗದ ಇಂಗ್ಲೆಂಡ್ ಮತ್ತು ಫ್ರಾನ್ಸ್‌ಗಳ ವಾಸ್ತುಶಿಲ್ಪಗಳು ಹೇಗೆ ಇಂದಿಗೂ ಆ ದೇಶಗಳ ಸೌಂದರ್ಯಪ್ರeಯ ಪ್ರತೀಕದಂತಿದೆಯೋ ಮೈಸೂರು ಕೂಡಾ ಆ ಸ್ಥಾನದಲ್ಲಿ ನಿಲ್ಲುತ್ತದೆ.
ಆ ಪರಂಪರೆಯನ್ನು ಮುಂದುವರಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರು!
1902ರಲ್ಲಿ ಶಿವನಸಮುದ್ರ ಜಲಧಾರೆಯಿಂದ ವಿದ್ಯುತ್ ತಯಾರಿಸಿ ತಂದರು. ಕನ್ನಂಬಾಡಿ ಕಟ್ಟೆ ಕಟ್ಟಿ ನೀರು ಕೊಟ್ಟರು. 1907ರಲ್ಲಿ ಮೈಸೂರು ಲೆಜಿಸ್ಲೇಟಿವ್ ಕೌನ್ಸಿಲ್ ಆರಂಭಿಸಿದರು. 1913ರಲ್ಲಿ ಮೈಸೂರು ಬ್ಯಾಂಕು ಆರಂಭಿಸಿದರೆ 1916ರಲ್ಲಿ ಮೈಸೂರು ವಿವಿ ಆರಂಭಿಸಿ ವಿದ್ಯಾದಾನಕ್ಕೆ ಕೈಹಾಕಿದರು. ಅದೇ ವರ್ಷ ಯುವರಾಜ ಕಾಲೇಜು ಆರಂಭವಾಯಿತು. ಒಂದು ವರ್ಷದ ನಂತರ ಮಹಾರಾಣಿ ಕಾಲೇಜು, ಮರುವರ್ಷವೇ ಮೈಸೂರು ರೈಲ್ವೇ ನಿಲ್ದಾಣ ತಲೆಯೆತ್ತಿದವು. ಮೈಸೂರು ಅರಸರ ಸ್ವಚ್ಛತೆ ಮತ್ತು ಆರೋಗ್ಯ ಕಾಳಜಿಯ ಪ್ರಮುಖ ಅಂಶವೆಂದರೆ ದೇಶದ ಮೊಟ್ಟಮೊದಲ ಬಾರಿಗೆ ‘ದಿ ಪ್ರಿವೆನ್ಷನ್ ಆಫ್ ಜುವೆನೈಲ್ ಸ್ಮೋಕಿಂಗ್ ಆಕ್ಟ್’ (ಬಾಲಕರು ಧೂಮಪಾನ ನಿಷೇಧ) ಎಂಬ ಕಾಯ್ದೆಯನ್ನು 1911ರ ಜಾರಿಮಾಡಿದ್ದು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸುವುದು ಮತ್ತು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತಂದೆಯ ಅನುಮತಿಪತ್ರವಿಲ್ಲದೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು ಮತ್ತು ಅಂಥವರನ್ನು ಶಿಕ್ಷೆಗೆ ಗುರಿಪಡಿಸಬಹುದು ಎಂದು ಆ ಕಾಯ್ದೆಯಲ್ಲಿ ಉಖಿಸಲಾಗಿತ್ತು. ಇದೇ ರೀತಿ ದೇವದಾಸಿ ಪದ್ದತಿ, ಬಸವಿ ಬಿಡುವುದು, ಗೆಜ್ಜೆಪೂಜೆ ಮೊದಲಾದ ಅನಿಷ್ಟ ಆಚರಣೆಗಳನ್ನು ನಿಷೇಧಿಸುವ ಕಾಯ್ದೆಯನ್ನು 1910ರ ಅವಧಿಯಲ್ಲಿ ನಾಲ್ವಡಿಯವರು ಜಾರಿಮಾಡಿದ್ದರು. ಸ್ವಚ್ಛನಗರವೆಂದರೆ ಮಾದರಿ ಸಮಾಜ ಎಂಬ ಮಹೋನ್ನತ ಕಲ್ಪನೆ ನಮ್ಮ ಅರಸರದ್ದು. ಮೈಸೂರನ್ನು ಸುಂದರ ನಗರ ಎಂದು ಕರೆಯಲು ಇಲ್ಲಿನ ಅರಮನೆಗಳ ಸೌಂದರ್ಯದ ಪಾತ್ರವೂ ಇದೆ. 14 ಅರಮನೆಗಳಿರುವ ನಗರ ದಕ್ಷಿಣ ಭಾರತದ ಬೇರೆ ಇಲ್ಲವೆಂದು ಇತಿಹಾಸ ತಜ್ಞರು ಹೇಳುತ್ತಾರೆ.
ಆಗಿನ ಕಾಲದ ನಿರ್ಮಾಣವಾದ ಉದ್ಯಾನಗಳು, ಕಾರಂಜಿಗಳು, ಒಳಚರಂಡಿ, ಅರಮನೆಯ ನೌಕರರಿಗಾಗಿ ಕಟ್ಟಲ್ಪಟ್ಟಿದ್ದ ನೀರಿನ mಂಕುಗಳು, ಪೈಪುಗಳು ಒಡೆಯರ ನಗರಾಬಿವೃದ್ಧಿ ಕೌಶಲಕ್ಕೆ ಹಿಡಿದ ಕೈಗನ್ನಡಿ. ಚಾಮರಾಜ ಒಡೆಯರು ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರಿನ ಖ್ಯಾತಿ ಉತ್ತುಂಗಕ್ಕೇರಿತು. ಖ್ಯಾತ ದಿವಾನರುಗಳ ಶ್ರಮದಿಂದ ಸಾಮ್ರಾಜ್ಯ ಅಭಿವೃದ್ಧಿಯನ್ನು ಹೊಂದತೊಡಗಿತು. ಜತೆಗೆ ರಾಜಧಾನಿಯ ಸೌಂದರ್ಯ ಮತ್ತು ಸ್ವಚ್ಛತೆಯ ಗುಣಮಟ್ಟಗಳು ಹೆಚ್ಚತೊಡಗಿದವು. ರಾಜಧಾನಿ ಮೈಸೂರಿನಲ್ಲಿ ಎಲ್ಲವೂ ವ್ಯವಸ್ಥಿತವಾಗಿ ಬೆಳೆದವು, ಆರೋಗ್ಯಇಲಾಖೆ, ಅಂಚೆ, ಶಿಕ್ಷಣ, ಕಾರ್ಖಾನೆಗಳು, ರೈಲು, ನೀರಾವರಿ, ವಿದ್ಯುತ್, ಗಿರಣಿಗಳು, ಆ ಕಾಲದಲ್ಲಿ ದೇಶದ ಖ್ಯಾತವಾದವು. ಒಮ್ಮೆ ನಗರದಲ್ಲಿ ಪ್ಲೇಗ್ ಬಂದಾಗ ಇಡೀ ಲಕ್ಷ್ಮೀಪುರಂ, ಕೃಷ್ಣಮೂರ್ತಿಪುರಂ, ಅಶೋಕಪುರಂಗಳಿಂದ ಜನರನ್ನು ಸ್ಥಳಾಂತರ ಮಾಡಿ ನಗರ ನೈರ್ಮಲ್ಯವನ್ನು ಮೈಸೂರು ಮೆರೆದಿತ್ತು. ಸಾಮ್ರಾಜ್ಯದ ಎ ನಗರಗಳು ವ್ಯವಸ್ಥಿತವಾಗಿ ಬೆಳೆದವು.
ಇಂದಿಗೂ ನಂಜನಗೂಡು ಸಮೀಪದ ಕಳಲೆ ಸಂಸ್ಥಾನದ ನಗರ ಚೌಕಟ್ಟನ್ನು ನೋಡಿದ ಎಂಜಿನಿಯರುಗಳೇ ಇದೊಂದು ವ್ಯವಸ್ಥಿತ ಮತ್ತು ಅಧ್ಬುತ ನಗರವಾಗಿತ್ತು ಎಂದು ಬಣ್ಣಿಸುತ್ತಾರೆ. ಮೈಸೂರು ನಗರಕ್ಕೆ ನೀಡಿದ ನಗರಾಬಿವೃದ್ಧಿಯ ಮುತುವರ್ಜಿಯಷ್ಟೇ ಅವರಿಗೆ ಸಾಮ್ರಾಜ್ಯದ ಎಲ್ಲ ನಗರಗಳ ಮೇಲೂ ಇತ್ತು ಎಂಬುದಕ್ಕೆ ಕಳಲೆ ಒಂದು ಉದಾಹರಣೆ. ಅಡ್ಡಾದಿಡ್ಡಿಯಾಗಿ, ಮನಸೋ ಇಚ್ಛೆ ಕಟ್ಟಿ ಬೆಳೆಸಿದ್ದರೆ ಇಂದು ಮೈಸೂರು ವಿಚಿತ್ರವಾಗಿ, ಅತ್ಯಂತ ಕೊಳಕಾಗಿ ಸುಲ್ತಾನರ ಓಲ್ಡ್ ದಿಲ್ಲಿ, ನಿಜಾಮರ ಓಲ್ಡ್ ಹೈದರಾಬಾದ್‌ನಂತೆ ಕಿಷ್ಕಿಂದೆಯಾಗಿ ಇರುತ್ತಿತ್ತು. ಆದರೆ…. ತಮ್ಮ ಅರಮನೆಗಳನ್ನು ಕಟ್ಟಿದ್ದಷ್ಟೇ ಮುತುವರ್ಜಿಯಿಂದ ಒಡೆಯರು ನಗರವನ್ನೂ ಕಟ್ಟಿದ್ದರ ಪರಿಣಾಮ ಇಂದು ಮೈಸೂರಿಗೆ ಸ್ವಚ್ಛ ನಗರ ಎಂಬ ಪಟ್ಟ ಸಿಕ್ಕಿದೆ. ಮೈಸೂರು ನಗರದ ಬಹುತೇಕ ಸುಧಾರಣೆಗಳು ನಾಲ್ವಡಿಯವರ ಕಾಲದಲ್ಲಿ ನಡೆಯಿತಾದರೂ ಅದರ ಮುಂದುವರಿಕೆ ಮತ್ತು ವಿಸ್ತಾರವಾದದ್ದು ಸರ್.ಎಂ.ವಿಶ್ವೇಶ್ವರಯ್ಯನವರು ಮತ್ತು ಮಿರ್ಜಾ ಇಸ್ಮಾಯಿಲ್ ಅವರ ಕಾಲದಲ್ಲಿ. ಅವರಿಬ್ಬರು ನಗರ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಯೋಜನೆಯನ್ನು ಹಾಕಿಕೊಂಡರು.
ಅಮೆರಿಕ, ಯೂರೋಪ್, ಲಂಡನ್ ಮತ್ತು ಫ್ರಾನ್ಸ್‌ಗಳ ನಗರ ವ್ಯವಸ್ಥೆಯನ್ನು ಅಧ್ಯಯನ ಮಾಡಿದ್ದ ವಿಶ್ವೇಶ್ವರಯ್ಯನವರು ಮೈಸೂರಿನ ಒಳಚರಂಡಿ ಮತ್ತು ನೀರಾವರಿ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದರು. ಮೈಸೂರಿನ ಪ್ರಾಥಃಸ್ಮರಣೀಯ ದಿವಾನರುಗಳಾದ ಸರ್.ಶೇಷಾದ್ರಿ ಅಯ್ಯರ್, ವಿ.ಪಿ.ಮಾಧವ ರಾವ್ ಅವರುಗಳು ಈ ಯೋಜನೆಯನ್ನು ಮತ್ತಷ್ಟು ಸುಧಾರಿಸಿದರು. ಅವರ ಶ್ರಮವಿಲ್ಲದೇ ಇರುತ್ತಿದ್ದರೆ ಇಂದಿನ ಮೈಸೂರಿಗೆ ಉತ್ತಮ ನಗರವೆಂಬ ಪಟ್ಟ ಎಲ್ಲಿತ್ತು? ವಿಶ್ವೇರಯ್ಯನವರ ನಿವೃತ್ತಿಯ ನಂತರ ಅವರ ಮೈಸೂರು ಮತ್ತು ಬೆಂಗಳೂರಿನಲ್ಲಿ ಮಾಡಿದ ನಗರಾಭಿವೃದ್ಧಿ ಕಾರ್ಯ ದೇಶಾದ್ಯಂತ ಹೆಸರಾಯಿತು. ಬಾಂಬೆ ಸರಕಾರ ಅವರನ್ನು ನಗರಾಭಿವೃದ್ಧಿ ಮತ್ತು ಉಪನಗರಗಳ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ವಿನಂತಿ ಮಾಡಿಕೊಂಡಿತು. ಆ ಹೊತ್ತಲ್ಲಿ ಬಾಂಬೆ ನಗರ ಪಾಲಿಕೆಯ ಸ್ಥಿತಿ ತೀರಾ ಹದಗೆಟ್ಟಿತ್ತು. ಅಂಥಾ ಪಾಲಿಕೆಯನ್ನು ವಿಶ್ವೇಶ್ವರಯ್ಯನವರು ಮೇಲಕ್ಕೆತ್ತಿದರು. ಮುನ್ಸಿಪಲ್ ರೀಸರ್ಚ್ ಬ್ಯೂರೋವನ್ನು ರಚನೆ ಮಾಡಿ, ಅಮೆರಿಕಾ ಮಾದರಿಯಲ್ಲಿ ನಗರ ನಿರ್ಮಾಣಕ್ಕೆ ಸೂಚನೆಗಳನ್ನು ಕೊಟ್ಟರು. ಮುಂಬೈಯ ಮಾರ್ಕೆಟ್ ಮತ್ತು ಅಂಧೇರಿ ಭಾಗಗಳು ಇಂದು ಹೀಗಿರುವುದಕ್ಕೆ ಮೂಲ ಕಾರಣ ವಿಶ್ವೇಶ್ವರಯ್ಯನವರು ಮತ್ತು ಅದಕ್ಕೆ ಮಾದರಿಯಾಗಿದ್ದು ನಮ್ಮ ಮೈಸೂರು.
ಬಾಂಬೆ ಮಾದರಿಯ ಯಶಸ್ವಿನಿಂದ 1924ರಲ್ಲಿ ಕರಾಚಿ ನಗರ ನಿರ್ಮಾಣ ಮತ್ತು ಸುಧಾರಣೆಗೆ ಸರ್.ಎಂವಿಯವರನ್ನು ವಿನಂತಿ ಮಾಡಲಾಯಿತು. ಕರಾಚಿಯಲ್ಲೂ ಮೈಸೂರು ಮಾದರಿ ಯಶಸ್ವಿಯಾಯಿತು. ಇವಿಷ್ಟೇ ಅಲ್ಲ. ಮೈಸೂರಿನ ನೀರು ಸರಬರಾಜಿನಂತೆ ಖಾನ್ ದೇಶದ ಧುಲಿಯಾದಲಿ, ಗುಜರಾತಿನ ಸೂರತ್‌ನಲ್ಲಿ, ಮಹಾರಾಷ್ಟ್ರದ ನಾಸಿಕ್, ಪುಣೆ, ನಮ್ಮ ಧಾರವಾಡ, ವಿಜಯಪುರ, ಬೆಳಗಾವಿ. ನೆರೆಯ ಕೊಲ್ಲಾಪುರಗಳಲ್ಲೂ ಯಶಸ್ವಿಯಾಯಿತು. ಜತೆಗೆ ನಗರ ಯೋಜನೆ ರೂಪಿಸಿಕೊಡಬೇಕೆಂಬ ಇಂಧೋರ್, ಗ್ವಾಲಿಯರ್, ಸಿಂಧ್‌ನ ಹೈದರಾಬಾದ್, ನಾಗಪುರ, ಗೋವಾ, ರಾಜಕೋಟ್, ಭಾವನಗರಗಳನ್ನು ಸರ್‌ಎಂವಿಯವರು ರೂಪಿಸಿದರು. ಅದಕ್ಕೆಲ್ಲಾ ಮಾದರಿಯಾಗಿದ್ದು, ಪ್ರೇರಣೆಯಾಗಿದ್ದು ನಮ್ಮ ಮೈಸೂರು.
ಜನನಿಬಿಡ ಪಟ್ಟಣಗಳಾದರೂ ಸ್ವಚ್ಛತೆಯಿಂದ ಕಾಣುವ ಪಂಢರಾಪುರ, ಸಾಂಗ್ಲಿ, ಮೋರ್ವಿ, ಅಹಮದ್ನಗರಗಳು ಇಂದೂ ಕುಡಿಯುವ ನೀರಿನ ಕೊರತೆಯನ್ನು ಅನುಭವಿಸದೆ ಇರುವುದಕ್ಕೆ ಕಾರಣ ಕೂಡಾ ನಮ್ಮ ಮೈಸೂರು ಮಾದರಿ. ಮೈಸೂರು ಮಾದರಿಯನ್ನು ದೇಶಾದ್ಯಂತ ಕಂಡು ಬೆರಗಾದ ಬ್ರಿಟಿಷರು ‘ಮೈಸೂರು ಮಾದರಿಯ ಇಂಥ ಯೋಜನೆಗಳು ಮಿಲಾನ್, ಡುಸ್ಸೆಲ್ ಡ್ರಾಫ್, ಲಂಡನ್ ಮತ್ತು ಫ್ರಾನ್ಸಿನ ಗುಣಮಟ್ಟದ್ದು’ ಎಂದು ಹೊಗಳಿದರು. ಹಾಗಾಗಿಯೇ ನಮ್ಮ ರಾಜಕಾರಣಿಗಳು ನರ್ಮ್ ಹೆಸರಲ್ಲಿ ದುಡ್ಡನ್ನು ನುಂಗಿಹಾಕಿದರು, ರಾಜಪಥದ ಹೆಸರಲ್ಲಿ ರಾಜಾರೋಷವಾಗಿ ಕೊಳ್ಳೆಹೊಡೆದರು, ಮೈಸೂರು ಯೋಜಿತ ನಗರ ಚಂಡೀಗಢವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ. ”Victory has a Thousand Fathers, but defeat is an Orphan” ಎಂದು ಕ್ಯೂಬಾ ಸೋಲಿನ ನಂತರ ಅಮೆರಿಕದ ಅಧ್ಯಕ್ಷ ಜಾನ್ ಎಫ್ ಕೆನೆಡಿ ಹೇಳಿದ್ದರು. ಅದೇ ರೀತಿ ಮೈಸೂರಿಗೆ ಸ್ವಚ್ಛನಗರ ಎಂಬ ಕಿರೀಟ ಬಂದ ಕೂಡಲೇ ಯಾರ‍್ಯಾರೋ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ಆ ಖ್ಯಾತಿಯ ಹಿಂದಿರುವ ನಿಜವಾದ ಒಡೆಯರು ಯಾರೆಂದು ಈಗ ತಿಳಿಯಿತೇ?!
Published on February 19, 2016 23:27
February 18, 2016
February 15, 2016
February 5, 2016
ಪುರೋಹಿತಶಾಹಿ ಆಲಾಪವಾದಾಗಲೆಲ್ಲಾ ನಮ್ಮ ಅಪ್ಪಚ್ಚಕವಿ ನೆನಪಾಗುತ್ತಾರೆ!
ಪುರೋಹಿತಶಾಹಿ ಆಲಾಪವಾದಾಗಲೆಲ್ಲಾ ನಮ್ಮ ಅಪ್ಪಚ್ಚಕವಿ ನೆನಪಾಗುತ್ತಾರೆ!
ಒ೦ದು ಸು೦ದರ, ಸಮರಸ ಸಮಾಜದ ನಿಮಾ೯ಣ ಕಾಯ೯ವನ್ನು ಒಬ್ಬ ಸಾಹಿತಿ ತನ್ನ ಬಡತನ, ಕಷ್ಟ ಕಾಪ೯ಣ್ಯದ ನಡುವೆಯೂ ಮಾಡಬಹುದು ಎ೦ಬುದಕ್ಕೆ ಅಪ್ಪಚ್ಚಕವಿ ಸಾಕ್ಷಿ. ಕೊಡಗು ಅಪ್ಪಚ್ಚಕವಿಯ ಕೊಡುಗೆಯನ್ನು, ಅದಕ್ಕೆ ಕಾರಣಕತ೯ರಾದವರನ್ನು ಮರೆತಿಲ್ಲ. ಇ೦ದಿಗೂ ಕೊಡಗು ಬ್ರಾಹ್ಮಣರನ್ನು ಸ್ವಾಮಿ ಎ೦ಬ ಗೌರವಸೂಚಕ ಪದದಿ೦ದಲೇ ಸ೦ಬೋಧಿಸುತ್ತಿರುವುದು ಇದಕ್ಕೆ ಸಾಕ್ಷಿ.
ಕೊಡಗಿನ ವೀರಾಜಪೇಟೆಯಿ೦ದ ನಾಪೋಕ್ಲುವಿಗೆ ಸಾಗುವ ದಾರಿ ಮಧ್ಯೆ ಕಿರು೦ದಾಡು ಗ್ರಾಮ ಎ೦ಬ ಫಲಕ ಕ೦ಡಾಗಲೆಲ್ಲಾ ಬಳಿಯಲ್ಲಿರುವವರು ಇದೇ ಮಹಾಕವಿ ಅಪ್ಪಚ್ಚನ ಊರು ಎ೦ದು ಹೇಳುತ್ತಾರೆ. ಕಳೆದ ಒ೦ದುಮುಕ್ಕಾಲು ವಷ೯ದಿ೦ದ ಆ ಭಾಗ ನನಗೆ ಪರಿಚಿತ. ಪ್ರತಿಬಾರಿಯೂ ನನಗೆ ಆ ಊರನ್ನು ಜನ ಹೀಗೆಯೇ ಪರಿಚಯ ಮಾಡಿಕೊಡುತ್ತಾರೆ. ಹೊರನೋಟಕ್ಕೆ ಆ ಗ್ರಾಮ ಕೊಣ೦ಜಗೇರಿ ಪ೦ಚಾಯಿತಿಗೆ ಒಳಪಟ್ಟ, ಬೆಟ್ಟದ ತಪ್ಪಲಿನ ಸು೦ದರ ಊರು, ಅಷ್ಟೆ. ಇದೇ ಊರಲ್ಲಿ ಹರದಾಸ ಅಪ್ಪಚ್ಚ ಕವಿ ಹುಟ್ಟಿದರು ಎ೦ದು ಹೇಳುವಾಗ ಕೊಡಗಿನ ಜನರ ಕಣ್ಣಲ್ಲಿ ಹೊಳಪೊ೦ದು ಮೂಡುತ್ತವೆ. ಆ ಹೊಳಪಿನ ಕಾರಣ ಹುಡುಕಲೆ೦ದೇ ಕವಿಯನ್ನು ಹುಡುಕ ತೊಡಗಿದೆ. ಒ೦ದಿಷ್ಟು ಪುಸ್ತಕಗಳು, ಬಲ್ಲವರೊಡನೆ ಮಾತುಕತೆಗಳ ನ೦ತರ ಅಪೂವ೯ ವಾದ ಸ೦ಗತಿಯೊ೦ದನ್ನು ತಿಳಿದ ಅನುಭವವಾಯಿತು. ನಿಜಕ್ಕೂ ಅಪ್ಪಚ್ಚ ಮಹಾಕವಿ ಎನಿಸಿದರು. ಕಾವ್ಯಕ್ಕೂ ಮಿಗಿಲಾಗಿ ನಿ೦ತವರ೦ತೆ ಅವರು ಕ೦ಡರು. ಕಮ್ಯುನಿಸ್ಟರು, ಪೆರಿಯಾರ್ ಅನುಯಾಯಿಗಳು ತೀವ್ರವಾಗಿ ಪ್ರತಿಪಾದಿಸುತ್ತಿರುವ ಬ್ರಾಹ್ಮಣ ವಿರೋಧಿ ಧೋರಣೆಗಳಿಗೆ ತಕ್ಕ ಉತ್ತರವಾಗಿ ಕ೦ಡರು, ಸಮರಸ ಸಮಾಜಕ್ಕೆ ನಿದಶ೯ನವಾಗಿ ಕ೦ಡರು. ಕೊಡಗಿನ ವಿಭಿನ್ನ ಸಮಾಜ ಸ೦ರಚನೆಯ ಸ್ಪಷ್ಟ ಚಿತ್ರಣ ಸಿಗತೊಡಗಿತು.
ಹರದಾಸ ಅಪ್ಪನೆರವ೦ಡ ಅಪ್ಪಚ್ಚ ಕವಿ. ಕೊಡಗಿನ ಜನ ಅವರನ್ನು ಹೇಳುವುದೇ ಹೀಗೆ. ಒಬ್ಬರು ಫೀಲ್ಡ್ ಮಾಷ೯ಲ್, ಒಬ್ಬರು ಜನರಲ್, 6 ಏರ್‍ಮಾಷ೯ಲ್‍ಗಳು, 26 ಲೆಫ್ಟಿನೆ೦ಟ್ ಜನರಲ್‍ಗಳು, 30 ಮೇಜರ್ ಜನರಲ್‍ಗಳು, 50 ಬ್ರಿಗೇಡಿಯರುಗಳು, ನೂರಕ್ಕೂ ಹೆಚ್ಚಿನ ಕನ೯ಲ್‍ಗಳು, ಅದೆಷ್ಟೋ ಜನ ಫ್ಲೈಟ್ ಲೆಫ್ಟಿನೆ೦ಟ್‍ಗಳು, ಎರಡು ಮಹಾವೀರ ಚಕ್ರ, ಮೂರು ವೀರಚಕ್ರಗಳ ಗರಿಯ ಯೋಧರ ಕೊಡಗಿನ ಭೂಮಿಯಲ್ಲೊಬ್ಬ ಮಹಾಕವಿ! ಬಹುತೇಕ ಜನರಿಗೆ ಕೊಡಗಿನಲ್ಲೂ ಸಾಹಿತ್ಯವೇ ಎ೦ಬ ಅಚ್ಚರಿ ಮೂಡಿದರೂ ಮೂಡೀತು. ಅದೂ ಹರದಾಸನಾಗಿ, ನಾಟಕಕಾರನಾಗಿ. ತ್ರಿಭಾಷಾ ಸಾಹಿತಿ ಜಗದ್ವಿಖ್ಯಾತರಾಗಿದ್ದ ಐ.ಎ೦. ಮುತ್ತಣ್ಣ ನ೦ಥವರ ಆರಾಧ್ಯ ಗುರು ಕವಿ ಅಪ್ಪಚ್ಚ.
ಕಿರು೦ದಾಡು ಗ್ರಾಮದ ಅಪ್ಪನೆರವ೦ಡ ಕುಟು೦ಬ ಊರಿನ ಪ್ರತಿಷ್ಠಿತ ಮನೆತನ. ಆ ಕುಟು೦ಬದಲ್ಲಿ 1868ರಲ್ಲಿ ಅಪ್ಪಚ್ಚನೆ೦ಬ ಬಾಲಕ ಹುಟ್ಟಿದ. ಊರ ಶಾಲೆಗೆ ಬಾಲಕನನ್ನು ಸೇರಿಸಿದರು. ಅಪ್ಪಚ್ಚನಿಗೆ ಊರ ಅಚ೯ಕರ ಮಗ ಗೆಳೆಯನಾದ. ಮು೦ದೆ ಆ ಗೆಳೆತನವೇ ಅಪ್ಪಚ್ಚ ಕವಿಯನ್ನು ರೂಪುಗೊಳಿಸಿತು. ಏಕೆ೦ದರೆ ಈ ಅಚ೯ಕರ ಮಗ ಮತ್ತು ಕೊಡವ ಬಾಲಕನ ಗೆಳೆತನ ಶಾಲೆಗೆ ಮಾತ್ರ ಸೀಮಿತವಾಗದೆ ಮನೆಯವರೆಗೂ ಮು೦ದುವರಿಯಿತು. ಆ ಬ್ರಾಹ್ಮಣ ಹುಡುಗನ ತಾಯಿಗೆ ಮನೆಯಲ್ಲಿ ಜೈಮಿನಿ ಭಾರತ ಓದುವ ಅಭ್ಯಾಸವಿತ್ತು. ಆಕೆ ತನ್ನ ಮಗನೊ೦ದಿಗೆ ಅಪ್ಪಚ್ಚನನ್ನೂ ಕೂರಿಸಿ ಜೈಮಿನಿ ಭಾರತವನ್ನು ಹೇಳಿಕೊಡುತ್ತಿದ್ದಳು. ಅಪ್ಪಚ್ಚನಿಗೆ ಜೈಮಿನಿ ಭಾರತ ಅದೆಷ್ಟು ಹುಚ್ಚು ಹಿಡಿಸಿತೆ೦ದರೆ ದಿನವೂ ಶಾಲೆ ಬಿಟ್ಟೊಡನೆ ಅಚ೯ಕನ ಮನೆಗೆ ಓಡುತ್ತಿದ್ದ. ಅ೦ದು ಜೈಮಿನಿ ಭಾರತ ಕಲಿಯಲು ಓಡೋಡಿ ಬರುತ್ತಿದ್ದ ಕೊಡವ ಅಪ್ಪಚ್ಚನಿಗೆ ಯಾವ ಬ್ರಾಹ್ಮಣರೂ ಕಿವಿಗೆ ಸೀಸ ಕಾಯಿಸಿ ಸುರಿಯಲಿಲ್ಲ! ಯಾವ ಬ್ರಾಹ್ಮಣನೂ ಹ೦ದಿ ತಿನ್ನುವ ಕೊಡವನೆ೦ದು ನಿ೦ದಿಸಿ ಕಳುಹಿಸಲಿಲ್ಲ, ಯಾವ ಕೊಡವನೂ ಬ್ರಾಹ್ಮಣನ ಮನೆಗೆ ಹೋಗುವ ಕೊಡವ ಬಾಲಕನನ್ನು ಆಕ್ಷೇಪಿಸಲಿಲ್ಲ.
ಜೈಮಿನಿ ಕಲಿಯುತ್ತಿದ್ದ ಹೊತ್ತಲ್ಲೇ ಹುಡುಗ ಅಪ್ಪಚ್ಚ ಶಾಲೆ ಬಿಟ್ಟ. ಆದರೆ ಜೈಮಿನಿಯ ಓದು ಅಪ್ಪಚ್ಚನಿಗೆ ಕಾವ್ಯದ ಹುಚ್ಚನ್ನು ಹಿಡಿಸಿ ಬಿಟ್ಟಿತ್ತು. ಮತ್ತಷ್ಟು ಕಾವ್ಯಾಧ್ಯಯನಕ್ಕಾಗಿ ಅಪ್ಪಚ್ಚ ಹುಡುಕಿದಾಗ ಅವರಿಗೆ ಮತ್ತೆ ಸಿಕ್ಕವರು ಅದೇ ಅಕ್ಕಪಕ್ಕದ ಊರಿನ ಅಚ೯ಕರು. ಅ೦ದರೆ ಅದೇ ಬ್ರಾಹ್ಮಣರು. ಯಾರನ್ನು ಕಮ್ಯುನಿಸ್ಟರು ಪುರೋ ಹಿತಶಾಹಿ ಎ೦ದರೋ, ಯಾರನ್ನು ವಿದ್ಯೆಯನ್ನು ಬಚ್ಚಿಟ್ಟುಕೊ೦ಡ ವರು ಎ೦ದರೋ, ಯಾರನ್ನು ಹರಟೆಮಲ್ಲ ಬುದ್ಧಿಜೀವಿಯೊಬ್ಬ ಇತ್ತೀಚೆಗೆ ದೇಶ ಬಿಡಬೇಕೆ೦ದು ಹೇಳಿದರೋ ಅದೇ ಬ್ರಾಹ್ಮಣರು! ಅಪ್ಪಚ್ಚ ಅಚ೯ಕರ ಮ೦ತ್ರಗಳನ್ನು ಬೆರಗಿನಿ೦ದ ನೋಡುತ್ತಿದ್ದ, ಮ೦ತ್ರಗಳ ಕಾವ್ಯಗುಣವನ್ನು ತನ್ಮಯತೆಯಿ೦ದ ಆಲಿಸುತ್ತಿದ್ದ. ಹಿರಿಯ ಅಚ೯ಕರಿ೦ದ ಪುರಾಣ ಕಥೆಗಳನ್ನು ಕಲಿತ. ಆದರೂ ಅಪ್ಪಚ್ಚನಿಗೆ ಸಾಕೆನಿಸಲಿಲ್ಲ. ಇನ್ನೂ ಏನೋ ಬೇಕು ಎ೦ದೇ ಅನಿಸುತ್ತಿತ್ತು. ಅದೇ ಅಚ೯ಕ ಗೆಳೆಯರಿ೦ದ ಸ೦ಸ್ಕೃತವನ್ನು ಕಲಿಯಲು ಪ್ರಾರ೦ಭಿಸಿದ. ಪುರಾಣಗಳನ್ನು ಮೂಲದಲ್ಲೇ ಓದಬೇಕೆ೦ಬ ಛಲದಿ೦ದ ಸ೦ಸ್ಕೃತ ಕಲಿತ. ದಿನಗಟ್ಟಲೆ ಬ್ರಾಹ್ಮಣರ ಜೊತೆ ಕಾಲಕಳೆಯುತ್ತಿದ್ದ ಅಪ್ಪಚ್ಚನನ್ನು ಜನ ಹ೦ಗಿಸಿದರೇ ಹೊರತು, ಕೊಡವನೊಬ್ಬ ಸ೦ಸ್ಕೃತ ಕಲಿಯುವಾಗಲೂ ಯಾವೊಬ್ಬ ಬ್ರಾಹ್ಮಣನೂ ಅಪ್ಪಚ್ಚನಿಗೆ ವಿದ್ಯೆ ವ೦ಚಿಸಲಿಲ್ಲ. ಶಾಪ ಹಾಕಲಿಲ್ಲ.
ಅ೦ದಿನ ಕಾಲಮಾನದಲ್ಲಿ ಕೊಡಗಿನಲ್ಲಿ ಸ್ಮಾತ೯ ಹವ್ಯಕರೂ, ಮಾಧ್ವ ಶಿವಳ್ಳಿಗಳೂ ಮತ್ತು ಸ್ಥಾನಿಕರು ಎ೦ಬ ಬ್ರಾಹ್ಮಣ ಪ೦ಗಡ ಗಳಿದ್ದವು. ಅವರೆಲ್ಲರ ಸ೦ಪೂಣ೯ ಒಡನಾಟ ಅಪ್ಪಚ್ಚನಿಗೆ ಲಭಿಸಿತ್ತು. ಆದರೆ ಅಪ್ಪಚ್ಚ, ಕೊನೆಯವರೆಗೂ ಅಪ್ಪನೆರವ೦ಡ ಕುಟು೦ಬದ ಕೊಡವನಾಗಿಯೇ ಬದುಕಿದರು. ತನ್ನ ಅಚ೯ಕ ಮಿತ್ರರು ಅಪ್ಪಚ್ಚನ ಬಗ್ಗೆ ಎಷ್ಟೊ೦ದು ಗೌರವಾಧರಗಳನ್ನಿಟ್ಟಿದ್ದ ರೆ೦ದರೆ ಅಪ್ಪಚ್ಚನ ಸ೦ಸ್ಕೃತ ಪ್ರೇಮ ಮತ್ತು ಸಾಹಿತ್ಯಾಸಕ್ತಿಯನ್ನು ಗಮನಿಸಿ ಮುಜರಾಯಿ ಇಲಾಖೆಗೆ ಕೆಲಸಕ್ಕೆ ಸೇರುವ೦ತೆ ಆಗ್ರಹಿಸಿದರು. ಯುವಕ ಅಪ್ಪಚ್ಚ ಸಕಾ೯ರದ ಮುಜರಾಯಿ ಇಲಾಖೆಗೆ ಕೆಲಸಕ್ಕೆ ಸೇರಿದರು. ಅಲ್ಲೂ ಅಪ್ಪಚ್ಚರಿಗೆ ಹಲವು ಬ್ರಾಹ್ಮಣ ಪ೦ಡಿತರ ಒಡನಾಟ ಲಭ್ಯವಾಯಿತು. ವೆ೦ಕಟಾದ್ರಿ ಶ್ಯಾಮರಾವ್ ಎ೦ಬ ಪ೦ಡಿತರು ಅಪ್ಪಚ್ಚನನ್ನು ಸಾಹಿತ್ಯ ಲೋಕದೊಳಗೆ ಕೈಹಿಡಿದು ನಡೆಸಿದರು. ಭಾಗಮ೦ಡಲ ಮತ್ತು ಮಡಿಕೇರಿ ಓ೦ಕಾರೇಶ್ವರ ದೇವಸ್ಥಾನದಲ್ಲಿ ಹಲವು ವಷ೯ಗಳ ಕಾಲ ಪಾರುಪತ್ತೇಗಾರರಾಗಿದ್ದ ಸಮಯ ಅಪ್ಪಚ್ಚರ ಸಾಹಿತ್ಯಾ ಧ್ಯಯನದ ಮಹತ್ವಪೂಣ೯ ವಷ೯ಗಳು. ಆ ಹೊತ್ತಿನ ಕೊಡಗಿನ ಪರಿಸ್ಥಿತಿಯನ್ನು ನೋಡಿ ಅಪ್ಪಚ್ಚ ನೊ೦ದಿದ್ದರು. ಭಕ್ತಿಯಿಲ್ಲದ ಆಚರಣೆಗಳು ಅವರನ್ನು ಚಿ೦ತೆಗೆ ದೂಡಿದ್ದವು. ಪುರಾಣಗಳ ಅಧ್ಯಯನದಿ೦ದ ಅವರಿಗೆ ಕೊಡವರಿಗೆ ಕಾವೇರಿ ತಾಯಿಯೇ ಆರಾಧ್ಯ ದೇವತೆ ಎ೦ಬುದು ತಿಳಿದಿತ್ತು. ಆದರೆ ಎಲ್ಲೆಲ್ಲೂ ವಿಸ್ಮತಿ. ಭಕ್ತಿಯಿಲ್ಲದ ಸಮಾಜ ಸ೦ಸ್ಕಾರದ ಕೊರತೆಯನ್ನು ಅನುಭವಿಸುತ್ತದೆ ಎ೦ಬುದನ್ನು ಅಪ್ಪಚ್ಚಕವಿ ಮನಗ೦ಡರು. ಹಲವು ಊರಿನ ಮುಖ್ಯಸ್ಥರೊ೦ದಿಗೆ ಈ ಬಗ್ಗೆ ಮಾತುಕತೆ ನಡೆಸಿದರೂ ಪ್ರಯೋಜನವಾಗಲಿಲ್ಲ. ನೇರವಾಗಿ ತಿಪಟೂರಿಗೆ ಹೊರಟರು. ಆ ಹೊತ್ತಲ್ಲಿ ತಿಪಟೂರು ನಾಟಕ ಮ೦ಡಳಿಗಳಿಗೆ ಹೆಸರುವಾಸಿಯಾಗಿತ್ತು. ತಿಪಟೂರಿನಲ್ಲಿ ಪೌರಾಣಿಕ ನಾಟಕಗಳ ಬಗ್ಗೆ ಅಧ್ಯಯನ ನಡೆಸಿ ಮರಳಿ ಕೊಡಗಿಗೆ ಬ೦ದರು ಅಪ್ಪಚ್ಚ. ಆಗಿನ್ನೂ ಅವರು ಕವಿಯಾಗಿರಲಿಲ್ಲ.
ಅದು 1891. ತಿಪಟೂರಿನಿ೦ದ ಮರಳಿದವರೇ ನಾಟಕ ರಚನೆ ಮತ್ತು ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊ೦ಡರು. 1906ರಲ್ಲಿ ಯಯಾತಿ ರಾಜನ ನಾಟಕವನ್ನು ಬರೆದರು. 1906 ರಲ್ಲಿ ಸಾವಿತ್ರಿ ಮತ್ತು ಸುಬ್ರಹ್ಮಣ್ಯ ನಾಟಕಗಳನ್ನು ಬರೆದರು. ಭಕ್ತಿ ಪ್ರಧಾನವಾದ ಈ ನಾಟಕಗಳನ್ನು ಕೊಡವ ಭಾಷೆಯಲ್ಲಿ ಪ್ರಕಟಿಸಿದ್ದು ಮಾತ್ರವಲ್ಲದೆ, ಉದಾರಿಗಳ ಸಹಾಯದಿ೦ದ ಅವು ಗಳ ರ೦ಗಪ್ರಯೋಗಗಳನ್ನೂ ಮಾಡಿದರು. ನ೦ತರ ಅವುಗಳ ಕನ್ನಡ ಪ್ರಯೋಗವನ್ನು ನಮ್ಮ ಪಿರಿಯಾಪಟ್ಟಣ, ಹುಣಸೂರಿ ನಲ್ಲೂ ಕೂಡಾ ಮಾಡಿದರು. 1917ರಲ್ಲಿ ತಮ್ಮ ಪಾರುಪತ್ತೇಗಾರ ಹುದ್ದೆಗೆ ರಾಜೀನಾಮೆ ಕೊಟ್ಟ ಅಪ್ಪಚ್ಚ ಕವಿ ಪೂಣ೯ ಪ್ರಮಾಣದ ಸಾಹಿತಿಯಾದರು. ಮರುವಷ೯ವೇ ಶ್ರೀ ಕಾವೇರಿ ನಾಟಕ ಬರೆದು ಕೊಡಗಿನ ಊರೂರುಗಳಲ್ಲಿ ಪ್ರದಶ೯ನ ಮಾಡಿದರು. ಈ ನಾಟಕ ಎಷ್ಟೊ೦ದು ಪ್ರಭಾವಿಯಾಯಿತೆ೦ದರೆ ಕೊಡವರು ತಮಗೂ ಕಾವೇರಿ ತಾಯಿಗೂ ಇರುವ ಸ೦ಬ೦ಧವನ್ನು ಅರಿತರು. ಕಾವೇರಿಯಮ್ಮನೇ ನಮ್ಮ ಕುಲದೇವಿ ಎ೦ದು ಕಾವೇರಿ ತೀಥೋ೯ದ್ಬವವನ್ನು ಕಾವೇರಿ ಸ೦ಕ್ರಮಣ ಎ೦ಬುದಾಗಿ ವಿಜೃ೦ಭಣೆಯಿ೦ದ ಆಚರಿಸಲು ತೊಡಗಿದರು. ತಲಕಾವೇರಿ ತೀಥ೯ಕ್ಷೇತ್ರವಾಯಿತು.
ಇದೇ ಅಲ್ಲದೆ ಎಷ್ಟೆಷ್ಟೋ ಕೀತ೯ನೆಗಳು, ಭಕ್ತಿಪ್ರಧಾನ ಕಥೆಗಳ ರಚನೆಯೂ ಅಪ್ಪಚ್ಚರಿ೦ದ ನಡೆಯಿತು. ಭಕ್ತಿ ರತ್ನಾಕರ ಕೀತ೯ನೆ ಎ೦ಬ ಕೃತಿಯನ್ನು ರಚಿಸಿದರು (ಅಪ್ರಕಟಿತ). ಈ ನಡುವೆ ಕವಿಯ ಮನೆಗೆ ಬೆ೦ಕಿ ಬಿದ್ದು ಹಲವು ಅಪ್ರಕಟಿತ ಕೃತಿಗಳು ಭಸ್ಮವಾದವು. ಭಕ್ತ ಸುಕನ್ಯಾ ಎ೦ಬ ನಾಟಕ ಬೆ೦ಕಿಗಾಹುತಿಯಾಯಿತು. ಆದರೆ ಜ್ಞಾನ ಸುಟ್ಟಿರಲಿಲ್ಲ. ಅಪ್ಪಚ್ಚಕವಿ ಹರಿಕಥೆಗಳ ಮೂಲಕ ಊರೂರು ತಿರುಗತೊಡಗಿದರು. ಕನಕ-ಪುರ೦ದರರ ರಚನೆಗಳು ಕೊಡವ ಭಾಷೆಗೆ ಬ೦ದವು. ಪುತ್ತೂರು, ಸುಳ್ಯ, ಮ೦ಗಳೂರುಗಳಲ್ಲೂ ಅವರ ಹರಿಕಥೆಗಳು ನಡೆದವು. ಅಪ್ಪಚ್ಚಕವಿ ಭಗ೦ಡೇಶ್ವರನ ಬಗ್ಗೆ ನೂರಾರು ಕೀತ೯ನೆಗಳನ್ನು ಕೊಡವ ಭಾಷೆಯಲ್ಲಿ ಬರೆದರು.
ನೀವೆ೦ದಾದರೂ ಕೊಡಗಿನ ಯಾವುದಾದರೂ ಕಾಯ೯ಕ್ರಮಗಳಿಗೆ ಹೋಗಿದ್ದರೆ ಶ೦ಭುವೇ ನಿನ್ನ ಅಥವಾ ಜಗದ೦ಬಿಕೇ ಎನ್ನುವ ಪ್ರಾಥ೯ನಾ ಗೀತೆಯನ್ನು ಕೇಳಿಯೇ ಕೇಳಿರುತ್ತೀರಿ. ಅವು ಅಪ್ಪಚ್ಚಕವಿಯ ರಚನೆಗಳು.
ಅಪ್ಪಚ್ಚಕವಿಯ ನಾಲ್ಕು ನಾಟಕಗಳು ಎ೦ದೇ ಖ್ಯಾತವಾದ ನಾಟಕ ಸ೦ಗ್ರಹ ಕನ್ನಡಕ್ಕೂ ಬ೦ತು. ಮು೦ದೆ ಯಾಯಾ೯ರೋ ಯಯಾತಿ ಬರೆದರು. ಕೆಲವರು ಮೂಲಕಥೆಯನ್ನು ತಿರುಚಿಯೂ ಬರೆದರು. ಭಾಷೆಯ ದೃಷ್ಟಿಯಿ೦ದ, ನಿರೂಪಣೆಯ ದೃಷ್ಟಿಯಿ೦ದ ಅಪ್ಪಚ್ಚಕವಿಯ ನಾಟಕಗಳು ಅವೆಲ್ಲಕ್ಕಿ೦ತಲೂ ಮು೦ದು. ಹರಿಕಥೆ, ನಾಟಕಗಳ ಮೂಲಕ ಅಪ್ಪಚ್ಚಕವಿ ಮತ್ತೊ೦ದು ಕೊಡುಗೆಯನ್ನು ನಾಡಿಗೆ ನೀಡಿದ್ದಾರೆ. ಅದು ನಮ್ಮ ಸು೦ದರ ಕೊಡವ ಭಾಷೆ. ಅಲ್ಲೂ ಅವರು ಹಲವು ಪ್ರಯೋಗಗಳನ್ನು ಮಾಡಿದರು. ಹೊಸ ಪದಗಳ ಸೃಷ್ಟಿ ಮಾಡಿದರು. ಗ್ರಾ೦ಥಿಕ ಪದಗಳನ್ನು ಜನಸಾಮಾನ್ಯರೂ ಆಡ ಬಹುದೆನ್ನುವುದನ್ನು ತೋರಿಸಿಕೊಟ್ಟರು.
ಇ೦ದು ಕೊಡವ ಭಾಷೆಯ ಲಾಸ್ಯದಲ್ಲಿ ಕಾಣುವ ಹಲವ೦ಶಗಳು ಅಪ್ಪಚ್ಚಕವಿಯ ಕೊಡುಗೆಗಳು. ಜೊತೆಗೆ ಇ೦ದು ಕೊಡವ ಭಾಷೆಯಲ್ಲಿ ಮಿಳಿತವಾಗಿಹೋಗಿರುವ ಸಾವಿರಾರು ನಾಣ್ನುಡಿಗಳು, ಗಾದೆ ಗಳು ಅವರ ನಾಟಕಗಳ ಉಕ್ತಿಗಳು. ಎಷ್ಟು ಭಾಷೆಗಳಿಗೆ ಇ೦ಥ ಭಾಗ್ಯ ದೊರೆತಿದೆ? ಕೆಲವರು ಬರೆದಿದ್ದನ್ನು ಓದಲು ತ್ರಾಸ ಪಡ ಬೇಕೆನ್ನುವ ಈ ಕಾಲದಲ್ಲಿ ಅಪ್ಪಚ್ಚ ಕವಿಯ ಸಾಹಸ ಬೆರಗು ಹುಟ್ಟಿ ಸುತ್ತವೆ. ಅವೆಲ್ಲಕ್ಕೂ ಕಾರಣ ಅವರ ಸ೦ಸ್ಕೃತ ಅಧ್ಯಯನ. ಅದಕ್ಕೆ ಕಾರಣರಾದ ಬ್ರಾಹ್ಮಣಶಾಹಿ ಎ೦ದು ಯಾವ ಸ೦ದೇಹಗಳಿಲ್ಲದೆ ಹೇಳಬಹುದು. ದೇಶ ಬಿಟ್ಟು ತೊಲಗಿ, ಸ೦ಸ್ಕೃತ ಎ೦ಬುದು ಹೇರಿಕೆ, ಆದಿಲ್‍ಶಾಹಿ ಅಪಾಯಕಾರಿ ಯಾಗಿರಲಿಲ್ಲ ಈ ಪುರೋಹಿತಶಾಹಿ ಅಪಾಯಕಾರಿಯಾಗಿತ್ತು, ಜ್ಞಾನವನ್ನು ತಮ್ಮ ಸ್ವತ್ತು ಮಾಡಿಕೊ೦ಡರು… ಎನ್ನುವುದು ಕೆಲವರಿಗೆ ಹೊಟ್ಟೆಪಾಡಾಗಿರಬಹುದು. ಆದರೆ ಕೊಡಗು ಅಪ್ಪಚ್ಚಕವಿಯ ಕೊಡುಗೆಯನ್ನು, ಅದಕ್ಕೆ ಕಾರಣಕತ೯ ರಾದವರನ್ನು ಮರೆತಿಲ್ಲ. ಇ೦ದಿಗೂ ಕೊಡಗು ಬ್ರಾಹ್ಮಣರನ್ನು ಸ್ವಾಮಿ ಎ೦ಬ ಗೌರವಸೂಚಕ ಪದದಿ೦ದಲೇ ಸ೦ಬೋಧಿಸುತ್ತಿ ರುವುದು ಇದಕ್ಕೆ ಸಾಕ್ಷಿ.
ಒ೦ದು ಸು೦ದರ, ಸಮರಸ ಸಮಾಜದ ನಿಮಾ೯ಣ ಕಾಯ೯ ವನ್ನು ಒಬ್ಬ ಸಾಹಿತಿ ತನ್ನ ಬಡತನ, ಕಷ್ಟ ಕಾಪ೯ಣ್ಯದ ನಡುವೆಯೂ ಮಾಡಬಹುದು ಎ೦ಬುದಕ್ಕೆ ಅಪ್ಪಚ್ಚಕವಿ ಸಾಕ್ಷಿ. ಅಪ್ಪಚ್ಚ ಕವಿ ಕಥೆಯನ್ನು ಅಪ್ರಸ್ತುತ ಸಮಯದಲ್ಲಿ ಹೇಳಲಾಗು ತ್ತಿದೆ ಎ೦ದು ಭಾವಿಸಬೇಡಿ. ಇತ್ತೀಚೆಗೆ ಎಲ್ಲದಕ್ಕೂ ಮೇಲ್ವಗ೯ ದವರನ್ನು, ಅದರಲ್ಲೂ ಬ್ರಾಹ್ಮಣರನ್ನು ದೂರುವ, ವಿನಾಕಾರಣ ಟೀಕಿಸುವ ಪ್ರವೃತ್ತಿ ಮತ್ತೆ ಕ೦ಡುಬರುತ್ತಿದೆ. “ಮೊದಲು ದೇಶ ಬಿಡಬೇಕಾದವರು ಬ್ರಾಹ್ಮಣರು’ ಎ೦ದು ಬುದ್ಧಿಜೀವಿಯೊಬ್ಬರು ಹೇಳಿದ್ದಾರೆ. ಹಾಗಾಗಿ ಅಪ್ಪಚ್ಚ ಕವಿ ನೆನಪಾದರು.
Published on February 05, 2016 21:32
Pratap Simha's Blog
- Pratap Simha's profile
- 58 followers
Pratap Simha isn't a Goodreads Author
(yet),
but they
do have a blog,
so here are some recent posts imported from
their feed.