Pratap Simha's Blog, page 47
March 19, 2016
ಭಾರತ ಮಾತೆಗಿಂತ ಧರ್ಮವೇ ಮೇಲು ಎನ್ನುವವರು 47ರಲ್ಲೇ ತೊಲಗಬಹುದಿತ್ತಲ್ಲ?
ಭಾರತ ಮಾತೆಗಿಂತ ಧರ್ಮವೇ ಮೇಲು ಎನ್ನುವವರು 47ರಲ್ಲೇ ತೊಲಗಬಹುದಿತ್ತಲ್ಲ?
ದೇಶವನ್ನೇ ತುಂಡರಿಸಿ ಕೊಟ್ಟ ನಂತರವೂ ಓವೈಸಿಯಂಥ ಮನಸ್ಸುಗಳು ಇನ್ನೂ ಭಾರತದಲ್ಲಿ ಉಳಿದುಕೊಂಡಿವೆಯಲ್ಲಾ ಹಾಗೂ ಆತನನ್ನು ಸ್ವಧರ್ಮೀಯರು ಎದ್ದು ನಿಂತು ಖಂಡಿಸುತ್ತಿಲ್ಲವಲ್ಲಾ ಎಂಬುದು ಮಾತ್ರ ಆಶ್ಚರ್ಯದ ಹಾಗೂ ಆತಂಕದ ಸಂಗತಿ! ಓವೈಸಿಯಂಥ ಒಬ್ಬ ವ್ಯಕ್ತಿಗಳು ಸಾಕಾಗುವು ದಿಲ್ಲವೆ ದೇಶಕ್ಕೆ ವಿಷ ಹಿಂಡಲು?
ವಂದೇ ಮಾತರಂಗೆ ವಿರೋಧಿಸಿದ್ದಾಯಿತು. ಈಗ ಭಾರತ್ ಮಾತಾಕೀ ಜೈ ಎನ್ನುವುದಕ್ಕೆ ತಕರಾರು ಎತ್ತಲಾಗುತ್ತಿದೆ. ಇಂಥ ವಿರೋಧಗಳನ್ನು ಯಾರೋ ಧರ್ಮಾಂಧನೋ, ಅವಿವೇಕಿಯೋ, ಕಿಡಿಗೇಡಿಯೋ ಮಾಡಿದ್ದಾರೆ ಎಲ್ಲಾ ಧರ್ಮಗಳಲ್ಲೂ ಇಂತಹ ವ್ಯಕ್ತಿಗಳಿರುತ್ತಾರೆ ಎಂದು ಸುಮ್ಮನಾಗಬಹುದಿತ್ತು. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹಾಗೂ ಜಮಾತೆ ಉಲೆಮಾ ಇ ಹಿಂದ್‌ನಂತಹ ಮುಸಲ್ಮಾನ ಸಮಾಜಕ್ಕೇ ಮಾರ್ಗದರ್ಶನ ನೀಡುವ ವ್ಯವಸ್ಥೆಗಳು ವಂದೇ ಮಾತರಂಗೆ ಸತತವಾಗಿ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದರೆ, ಈ ನಡುವೆ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಜವಾಬ್ದಾರಿ ವಹಿಸಿಕೊಂಡಿರುವ ಸಂಸದ ಅಸಾದುದ್ದೀನ್ ಓವೈಸಿ ಕುತ್ತಿಗೆ ಮೇಲೆ ಖಡ್ಗವಿಟ್ಟರೂ ಭಾರತ್ ಮಾತಾ ಕೀ ಜೈ ಎನ್ನವುದಿಲ್ಲ ಎಂದಿದ್ದಾನೆ.
ಆದರೆ ದೇಶವನ್ನೇ ತುಂಡರಿಸಿ ಕೊಟ್ಟ ನಂತರವೂ ಓವೈಸಿಯಂಥ ಮನಸ್ಸುಗಳು ಇನ್ನೂ ಭಾರತದಲ್ಲಿ ಉಳಿದುಕೊಂಡಿವೆಯಲ್ಲಾ ಹಾಗೂ ಆತನನ್ನು ಸ್ವಧರ್ಮೀ ಯರು ಎದ್ದು ನಿಂತು ಖಂಡಿಸುತ್ತಿಲ್ಲವಲ್ಲಾ ಎಂಬುದು ಮಾತ್ರ ಆಶ್ಚರ್ಯದ ಹಾಗೂ ಆತಂಕದ ಸಂಗತಿ!
ಈ ಹಿಂದಕ್ಕೆ ಹೋಗಿ ಘಟನೆಯೊಂದನ್ನು ನೆನಪಿಸಿ ಕೊಳ್ಳೋಣ. ಪಂಡಿತ್ ವಿಷ್ಣು ದಿಗಂಬರ ಪಲುಸ್ಕರ್. ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ? ಹತ್ತೊಂಬತ್ತನೇ ಶತಮಾ ನದ ಅಂತ್ಯ ಹಾಗೂ ಇಪ್ಪತ್ತನೇ ಶತಮಾನದ ಆದಿಯಲ್ಲಿ ಅವರದ್ದು ದೊಡ್ಡ ಹೆಸರು. 1872ರಲ್ಲಿ ಜನಿಸಿದ ಪಲುಸ್ಕರ್ ಹಿಂದೂಸ್ತಾನಿ ಶಾಸ್ತ್ರಿಯ ಸಂಗೀತದಲ್ಲಿ ಭೀಷ್ಮ ಪಿತಾಮಹನಂತಿದ್ದರು. ಮಹಾತ್ಮ ಗಾಂಧಿಜಿಯವರ ಪ್ರೀತಿಯ ‘ರಘುಪತಿ ರಾಘವ ರಾಜಾರಾಂ’ ಹಾಡಿಗೆ ರಾಗ ಸಂಯೋಜಿಸಿದ ಮಹಾನ್ ಸಂಗೀತಗಾರ ಅವರು. ನಮ್ಮ ಶಾಸ್ತ್ರಿಯ ಸಂಗೀತವನ್ನು ಕಲಿಸಲೆಂದು 1901ರಲ್ಲಿ ಲಾಹೋರ್‌ನಲ್ಲಿ ‘ಗಂಧರ್ವ ಮಹಾವಿದ್ಯಾಲಯ’ ಸ್ಥಾಪಿಸಿದ್ದರು. ಸಾರ್ವಜನಿಕರು ನೀಡಿದ ದೇಣಿಗೆ ಮೇಲೆ ನಡೆಯುತ್ತಿದ್ದ ಮೊದಲ ಸಂಗೀತ ಶಾಲೆಯದು. ಆನಂತರ ಮುಂಬೈನಲ್ಲೂ ಅದರ ಒಂದು ಶಾಖೆಯನ್ನು ತೆರೆದಿದ್ದರು. ಪಂಡಿತ್ ಡಿ.ವಿ. ಪಲುಸ್ಕರ್, ಪಂಡಿತ್ ನಾರಾಯಣರಾವ್ ವ್ಯಾಸ್ ಮತ್ತು ಪಂಡಿತ್ ಓಂಕಾರನಾಥ್ ಠಾಕೂರ್ ಮುಂತಾದ ಸಂಗೀತ ಕ್ಷೇತ್ರದ ದಿಗ್ಗಜರಿಗೆ ಪಲುಸ್ಕರ್ ಅವರೇ ಗುರುಗಳಾಗಿದ್ದರು.
ಸ್ವಾತಂತ್ರ್ಯ ಆಂದೋಲನದ ನೇರ ಸಂಪರ್ಕವಿದ್ದ ಅವರಿಗೆ ಲೋಕಮಾನ್ಯ ತಿಲಕ್, ಲಾಲಾ ಲಜಪತ್ ರಾಯ, ಮಹಾತ್ಮ ಗಾಂಧಿಜಿ ಮುಂತಾದವರು ಚಿರಪರಿಚಿತರಾಗಿದ್ದರು. 1923ರಲ್ಲಿ ಆಂಧ್ರಪ್ರದೇಶದ ಕಾಕಿನಾಡದಲ್ಲಿ ಕಾಂಗ್ರೆಸ್ ಅಧಿವೇಶನ ಆಯೋಜನೆಯಾಗಿತ್ತು.‘ವಂದೇ ಮಾತರಂ’ ಹಾಡಲೆಂದು ಪಂಡಿತ್ ವಿಷ್ಣು ದಿಗಂಬರ ಪಲುಸ್ಕರ್ ಆಗಮಿಸಿದ್ದರು. ಕಾಂಗ್ರೆಸ್ ಅಧಿವೇಶನಗಳಲ್ಲ ವಂದೇ ಮಾತರಂ ಹಾಡುವ ಪರಂಪರೆಯನ್ನು 1915ರಿಂದ ಪಲುಸ್ಕರರೇ ಹುಟ್ಟುಹಾಕಿದ್ದರು. ತಾವೇ ರಾಗ ಹಾಕಿದ್ದ ಧಾಟಿಯಲ್ಲಿ ವಂದೇ ಮಾತರಂ ಹಾಡುವುದು ಅವರ ರೂಢಿ. ಅದನ್ನು ತಿಲಕ್, ಗಾಂಧಿಜಿ ಸೇರಿದಂತೆ ನಾಡೇ ಒಪ್ಪಿಕೊಂಡಿತ್ತು. ಅಂದು ಕಾಕಿನಾಡದಲ್ಲಿ ಪಲುಸ್ಕರರು ‘ವಂದೇ ಮಾತರಂ’ ಹಾಡಲು ನಿಂತಾಗ ಕಾಂಗ್ರೆಸ್ ಅಧ್ಯಕ್ಷ ರಾಗಿದ್ದ(ಮುಸ್ಲಿಂ ಲೀಗ್ ಸ್ಥಾಪಕರಲ್ಲಿಯೂ ಒಬ್ಬರಾಗಿದ್ದ) ಮೌಲಾನಾ ಅಹಮದ್ ಅಲಿ ಮಧ್ಯದ ತಡೆದರು. ಅವರ ಸೋದರ ಶೌಕತ್ ಅಲಿ ಕೂಡ ವಂದೇ ಮಾತರಂ ಹಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು.ಇಸ್ಲಾಂನ ಕಾನೂನಿನಂತೆ ಸಂಗೀತ ನಿಷಿದ್ಧ ಎಂದರು!ಆ ಮಾತನ್ನು ಕೇಳಿದ್ದೇ ತಡ, ಪಂಡಿತ ಪಲುಸ್ಕರರು ಕೆರಳಿ ಕೆಂಡವಾದರು. ಸ್ವಾಮಿ ಇದು ಕಾಂಗ್ರೆಸ್‌ನ ರಾಷ್ಟ್ರೀಯ ಮಹಾಸಭೆ. ಇದು ಯಾವುದೇ ಒಂದು ಕೋಮಿನ ಗುತ್ತಿಗೆ ಅಲ್ಲ. ಮುಸ್ಲಿಮರ ಮಸೀದಿಯೂ ಅಲ್ಲ. ಹೀಗಿರುವಾಗ ಈ ರಾಷ್ಟ್ರೀಯ ವೇದಿಕೆಯ ಮೇಲೆ ‘ವಂದೇ ಮಾತರಂ’ ಹಾಡಲು ಅಡ್ಡಿಪಡಿಸಲು ನಿಮಗ್ಯಾವ ಅಧಿಕಾರವಿದೆ? ಸಂಗೀತ ನಿಮ್ಮ ಮತಕ್ಕೆ ನಿಷಿದ್ಧ ಎಂಬುದಾದರೆ ನಿಮ್ಮ ಅಧ್ಯಕ್ಷ ಮೆರವಣಿಗೆಯಲ್ಲಿ ವಿಜೃಂಭಣೆಯಿಂದ ಬಾಜಾ ಭಜಂತ್ರಿ ನಡೆದಾಗ ಅದು ಮಾತ್ರ ಮೌಲಾನಾ ಸಾಹೇಬರಿಗೆ ಹೇಗೆಹಿಡಿಸಿತು? ಎಂದು ಪಲುಸ್ಕರ್ ಸವಾಲು ಹಾಕಿದರು.
ವಂದೇ ಮಾತರಂಗೆ ವಿರೋಧ ಹೊಂದಿರುವವರು ಧಾರಾಳವಾಗಿ ಅಧಿವೇಶನದಿಂದ ಹೊರಹೋಗಬಹುದು ಎಂದು ಜಾಡಿಸಿದರು! ಇಂತಹ ಪ್ರತಿಕ್ರಿಯೆಯಿಂದ ಕಕ್ಕಾಬಿಕ್ಕಿಯಾದ ಮೌಲಾನಾ ಮಹಮದ್ ಅಲಿ ನಿರುತ್ತರರಾಗಿ ನಿಂತಿದ್ದರು. ಪಲುಸ್ಕರ್ ವಂದೇ ಮಾತರಂ ಅನ್ನು ಸಂಪೂರ್ಣವಾಗಿ ಹಾಡಿ, ಭಾರತಾಂಬೆಗೆ ವಂದಿಸಿ ಕೆಳಗಿಳಿದರು. ಅವತ್ತು ಯಾವ ವಿದ್ರೋಹಿ ಮನಸ್ಸುಗಳು ವಿಭಜನೆಯ ವಿಷಬೀಜ ಬಿತ್ತಿ, 1947ರಲ್ಲಿ ದೇಶವನ್ನು ಒಡೆದವೋ ಆ ಮನಸುಗಳು ಇಂದಿಗೂ ಭಾರತದಲ್ಲಿವೆ!‘ನಾವು ದೇಶವನ್ನು ಪ್ರೀತಿಸುತ್ತೇವೆ. ಆದರೆ ಪೂಜಿಸುವುದ ಕ್ಕಾಗುವುದಿಲ್ಲ. ವಂದೇ ಮಾತರಂ ಮಾತೃಭೂಮಿಯನ್ನು ಆರಾಧಿಸುತ್ತದೆ, ನಾವು ಅಹುನನ್ನು ಬಿಟ್ಟರೆ ಬೇರಾರನ್ನೂ ಆರಾಧಿಸುವಂತಿಲ್ಲ.’ ‘ಮುಸ್ಲಿಮರಾರೂ ವಂದೇ ಮಾತರಂ ಹಾಡಕೂಡದು’. ‘ಒಂದು ವೇಳೆ ಈ ಹಾಡನ್ನು ಕಡ್ಡಾಯ ಮಾಡಿದರೆ ಅಂತಹ ಶಾಲೆಗಳಿಂದ ಮುಸ್ಲಿಮರು ತಮ್ಮ ಮಕ್ಕಳನ್ನು ಹಿಂತೆಗೆದುಕೊಳ್ಳಬೇಕು.’ಹಾಗೆಂದು ಉತ್ತರ ಪ್ರದೇಶದ ಮುಸ್ಲಿಂ ಸಂಘಟನೆ ‘ಜಮಾತೆ ಉಲೆಮಾ ಇ ಹಿಂದ್’ ಹಿಂದೊಮ್ಮೆ ನಿರ್ಣಯ ವೊಂದನ್ನು ಮಂಡಿಸಿ, ಅಂಗೀಕರಿಸಿತ್ತು. ಆ ಮೂಲಕ ತನ್ನ ವಿದ್ರೋಹಿ ಮನಸ್ಥಿತಿಯನ್ನು ಹೊರಹಾಕಿತ್ತು. ಇದಕ್ಕೆ ಎಸ್‌ಕ್ಯುಆರ್ ಇಲ್ಯಾಸಿ, ಝಫರ್ಯಾಬ್ ಜಿಲಾನಿ ಮುಂತಾದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯರೂ ಕೂಡ ಸಹಮತ ವ್ಯಕ್ತಪಡಿಸಿದ್ದನ್ನು ನೆನಪಿಸಿಕೊಂಡರಂತೂ ಮನಸಿಗೆ ಕಸಿವಿಸಿಯಾಗುತ್ತದೆ. ಈ ದೇಶದಲ್ಲಿ ಜೈನರಿದ್ಧಾರೆ, ಬೌದ್ಧರಿದ್ಧಾರೆ, ಕ್ರೈಸ್ತರಿದ್ಧಾರೆ. ಇವರ್ಯಾರಿಗೂ ಚುಚ್ಚದ ವಂದೇ ಮಾತರಂ ಮುಸ್ಲಿಮರಿಗೇ ಏಕೆ ನೋವು ತರುತ್ತದೆ? ತಾಯಿ ಭಾರತಿಯನ್ನು ಭಜಿಸುವ ಗೀತೆಯನ್ನೇ ಹಾಡದವರು ದೇಶಕ್ಕಾಗಿ ಪ್ರಾಣ ತೆತ್ತಾರೆ? ಇದೆಂತಹ ಕೃತಘ್ನ ಮನಃಸ್ಥಿತಿ? ಮಾತೃಭೂಮಿಗೆ ನಮಿಸುವುದಿಲ್ಲ ಎಂದರೆ ಇನ್ನಾರಿಗೆ ನಮಸ್ಕರಿಸುತ್ತಾರೆ? ಭಾರತ ಮಾತೆಗೆ ನಮಿಸಲು ಧರ್ಮವೇಕೆ ಅಡ್ಡ ಬರಬೇಕು? ಅನ್ನ, ನೆಲೆ ನೀಡಿದ ಭೂಮಿಗೇ ನಮಸ್ಕರಿಸದವರು ಒಂದು ವೇಳೆ ಪಾಕಿಸ್ತಾನ ಅಥವಾ ಬಾಂಗ್ಲಾದೇಶವೇನಾದರೂ ನಮ್ಮ ಮೇಲೆ ದಾಳಿ ಮಾಡಿದರೆ ದೇಶರಕ್ಷಣೆಗೆ ಮುಂದಾಗುತ್ತಾರೆ ಎಂದು ಹೇಗೆತಾನೇ ನಿರೀಕ್ಷಿಸುವುದು? ದೇಶಕ್ಕಿಂತ ಧರ್ಮವೇ ಮೇಲು ಎಂದಾದರೆ ಸ್ವಧರ್ಮೀಯರಾದ ಪಾಕಿಸ್ತಾನಿಯರ ಜತೆ ಕೈಜೋಡಿಸುವುದಿಲ್ಲ ಎಂಬುದಕ್ಕೆ ಯಾವ ಗ್ಯಾರಂಟಿ? ಎಲ್ಲ ಮುಸ್ಲಿಮರೂ ಜಮಾತೆ ಉಲೇಮಾ ಮಾತು ಕೇಳುತ್ತಾರೆ, ದೇಶಕ್ಕೆ ವಂದಿಸಲು ನಕಾರ ವ್ಯಕ್ತಪಡಿಸುತ್ತಾರೆ ಅಂತ ಹೇಳುತ್ತಿಲ್ಲ. ಮುಸ್ಲಿಂ ಸಮುದಾಯದಲ್ಲಿ ಸಾಕಷ್ಟು ದೇಶಪ್ರೇಮಿಗಳಿದ್ಧಾರೆ, ಈ ದೇಶದ ಅಭಿವೃದ್ಧಿಯಲ್ಲಿ ಮುಸ್ಲಿಮರ ಕೊಡುಗೆಯೂ ಸಾಕಷ್ಟಿದೆ.
ಆದರೆ ವಂದೇ ಮಾತರಂ ಅನ್ನೇ ವಿವಾದದ ವಸ್ತುವನ್ನಾಗಿಸಿಕೊಂಡು, ಆ ಮೂಲಕ ಧರ್ಮದ ಆಧಾರದ ಮೇಲೆ ದೇಶ ಒಡೆದು ಪ್ರತ್ಯೇಕ ರಾಷ್ಟ್ರವನ್ನು ಪಡೆದುಕೊಂಡ ನಂತರವೂ ಜಮಾತೆ ಉಲೇಮಾದಂತಹ ಸಂಘಟನೆಗಳು ಸ್ವಾತಂತ್ರ್ಯ ಪೂರ್ವದಲ್ಲಿದ್ದ ವಿದ್ರೋಹಿ ಮನಸ್ಥಿತಿಯನ್ನು ಏಕೆ ಇಂದಿಗೂ ಮುಂದುವರಿಸಿಕೊಂಡು ಬರುತ್ತಿವೆ? ಏಕೆ ಧರ್ಮವನ್ನು ಬದಿಗಿಟ್ಟು ನಾವೆಲ್ಲರೂ ಒಂದೇ ಎಂಬಂತೆ ವರ್ತಿಸುವುದಿಲ್ಲ? ಏಕೆ ರಾಷ್ಟ್ರೀಯ ಮುಖ್ಯವಾಹಿನಿಯಿಂದ ದೂರ ಹಾಗೂ ಪ್ರತ್ಯೇಕವಾಗಿರಲು ಪ್ರಯತ್ನಿಸುತ್ತಿವೆ? ಮುಸ್ಲಿಮರೇ ಆದ ಖ್ಯಾತ ಸಂಗೀತಗಾರ ಎ.ಆರ್. ರೆಹಮಾನ್‌ಗೆ, ಖ್ಯಾತ ಸಿನಿಮಾ ಸಾಹಿತ್ಯ ರಚನೆಕಾರ ಜಾವೆದ್ ಅಖ್ತರ್‌ಗೆ ಹಾಡಲು ಅವಮಾನವೆನಿಸದ ವಂದೇ ಮಾತರಂ ಉಳಿದವರಿಗೇಕೆ ಅದೇ ದೊಡ್ಡ ಅಡಚಣೆಯಾಗುತ್ತದೆ?
ಅಷ್ಟಕ್ಕೂ ವಂದೇ ಮಾತರಂ ನಲ್ಲಿ ಮುಸ್ಲಿಮರಿಗೆ ನೋವುಂಟಾಗುವಂಥದ್ದೇನಿದೆ?ವಂದೇ ಮಾತರಂಸುಜಲಾಂ ಸುಫಲಾಂ ಮಲಯಜ ಶೀತಲಾಂಸಸ್ಯಶ್ಯಾಮಲಾಂ ಮಾತರಂಈ ಹಾಡನ್ನು ಹಾಡಲು ಏಕೆ ಧರ್ಮ ಅಡ್ಡಬರಬೇಕು? ‘ಅನ್ನ, ನೆಲೆ ನೀಡಿದ ಭಾರತಾಂಬೆಗೆ, ತಾಯೆ ನಿನಗೆ ವಂದಿಸುವೆ’(ವಂದೇ ಮಾತರಂ) ಎಂದು ಹಾಡಲು ಏನು ತ್ರಾಸ? ಬಂಕಿಮಚಂದ್ರರು ಇಂಥದ್ಧಾಂದು ದೇಶಪ್ರೇಮ ಉಕ್ಕಿಸುವ ಗೀತೆಯನ್ನು ಬರೆದಿದ್ಧಾದರೂ ಏಕೆ?ಈಗಿನ ಪಶ್ಚಿಮ ಬಂಗಾಳದ, 24 ಪರಗಣ ಜಿಯ, ಕಾಂತಲ ಪದದಲ್ಲಿ ಬಂಕಿಮಚಂದ್ರರು ಜನಿಸುವ ವೇಳೆಗೆ (1828, ಜೂನ್ 27ರಂದು) ದೇಶಕ್ಕೆ ನಿಧಾನವಾಗಿ ಸ್ವಾತಂ ತ್ರ್ಯದ ಜ್ವರವೇರತೊಡಗಿತ್ತು. ಅಂತಹ ಕಾಲದ ಶಿಶುವಾದ ಬಂಕಿಮಚಂದ್ರರಲ್ಲೂ ದೇಶಪ್ರೇಮ ಮಿಳಿತ ಗೊಂಡಿತ್ತು. 1875ರಲ್ಲಿ ಅವರು ರಜೆಗೆಂದು ರೈಲನ್ನೇರಿ ಮನೆಗೆ ಹೊರಟಿದ್ದರು. ಹಾಗೆ ಹಾದುಹೋಗುವಾಗ ನಗರವನ್ನು ದಾಟಿ ರೈಲು ಪ್ರಕೃತಿಯ ಮಡಿಲಲ್ಲಿ ಪ್ರಯಾಣಿಸತೊಡಗಿತು. ಆ ಬೆಟ್ಟ-ಗುಡ್ಡ, ಹಸಿರಿನಿಂದ ಮೈದುಂಬಿದ್ದ ಬಯಲು, ಚಳಿಗಾಲದಲ್ಲಿ ಅರಳಿನಿಂತಿದ್ದ ಬಣ್ಣಬಣ್ಣದ ಹೂವುಗಳು, ಅವುಗಳ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದ ನದಿ, ಸರೋವರ ಗಳು, ಒಟ್ಟಾರೆ ಪ್ರಕೃತಿ ಸೌಂದರ್ಯ. ಹೀಗೆ ಭಾರತಮಾತೆಯ ಸಿರಿ ಬಂಕಿಮಚಂದ್ರರ ಮನಸೂರೆಗೊಳಿಸಿತು. ಕವಿಹೃದಯ ತುಂಬಿತು, ಭಾವನೆಗಳು ಉಕ್ಕಿಹರಿಯಲಾರಂಭಿಸಿದವು.ಆಗ ಹುಟ್ಟಿದ್ದೇ ‘ವಂದೇ ಮಾತರಂ’!‘ತಾಯೆ ನಿನಗೆ ವಂದಿಸುವೆ’ ಎಂಬ ಕವಿಯ ಒಂದೊಂದು ಸಾಲುಗಳಲ್ಲೂ ಭರತಖಂಡ ಸೌಂದರ್ಯವನ್ನು ಹಿಡಿದಿಟ್ಟರು, ತನಗೆ ಜನ್ಮ ನೀಡಿದ್ದಕ್ಕಾಗಿ ಈ ಭೂಮಿಗೆ ಧನ್ಯತೆಯನ್ನು ಸೂಚಿಸಿದರು. ಇದರಲ್ಲಿ ಖಂಡಿತ ಪೂಜ್ಯಭಾವನೆಯಿದೆ, ತಾಯಿಯ ಆರಾಧನೆ ಇದೆ. ಅದರಲ್ಲಿ ತಪ್ಪೇನಿದೆ? ಒಬ್ಬ ಹೆಣ್ಣಲ್ಲಿ ಹೆಂಡತಿ, ಮಗಳು, ಜನ್ಮದಾತೆ ಎಲ್ಲವನ್ನೂ ಕಂಡುಕೊಳ್ಳುವ ಸಂಸ್ಕೃತಿ ನಮ್ಮದು. ದುರ್ಗೆ, ಲಕ್ಷ್ಮೀ ಎಲ್ಲರನ್ನೂ ಭಾರತಮಾತೆಯ ಕಂಡುಕೊಳ್ಳಲು ಬಂಕಿಮಚಂದ್ರರು ಪ್ರಯತ್ನಿಸಿದ್ಧಾರೆ ಅಷ್ಟೇ. ವಂದೇ ಮಾತರಂನ ಹೀರೋ ಭಾರತಮಾತೆಯೇ ಹೊರತು ಯಾವ ದೇವ-ದೇವತೆಗಳೂ ಅಲ್ಲ. ಹಾಗಾಗಿಯೇ ಅದು ಸ್ವಾತಂತ್ರ್ಯ ಹೋರಾಟಗಾರರಿಗೂ ಪ್ರೇರಣೆಯಾಯಿತು.ಬಾರಿಸಾಲ್ ಕೂಡ ಪಶ್ಚಿಮ ಬಂಗಾಳದಲ್ಲಿದೆ. 1906, ಏಪ್ರಿಲ್ 14ರಂದು ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಬಾರಿಸಾಲ್‌ನಲ್ಲಿ ಆಯೋಜನೆಯಾಗಿತ್ತು. ಭಾರತಮಾತೆ ಯನ್ನು ದಾಸ್ಯಮುಕ್ತಳನ್ನಾಗಿ ಮಾಡುವ ಶಪಥ ತೆಗೆದುಕೊಳ್ಳುವ ಇರಾದೆ ಅಲ್ಲಿತ್ತು. ಭಾರೀ ಜನಸ್ತೋಮವೇ ನೆರೆದಿತ್ತು. ಸುರೇಂದ್ರನಾಥ್ ಬ್ಯಾನರ್ಜಿ, ಬಿಪಿನ್ ಚಂದ್ರಪಾಲ, ಶ್ರೀ ಅರವಿಂದರ ನೇತೃತ್ವದಲ್ಲಿ ಜನ ಬಾರಿಸಾಲ್ನ ಬೀದಿ ಬೀದಿಗಳಲ್ಲಿ ಸಾಗುತ್ತಾ ಅಧಿವೇಶನ ನಡೆಯುವ ಸ್ಥಳಕ್ಕೆ ಹೊರಟಿದ್ದರು.
ಲಾರ್ಡ್ ಕರ್ಝನ್ನನ ಪ್ರತಿಕೃತಿ ದಹನ ಮಾಡಿದ ಜನಸ್ತೋಮ ಇದ್ದಕ್ಕಿದ್ದಂತೆಯೇ ‘ವಂದೇ ಮಾತರಂ’ ಹಾಡತೊಡಗಿತು. ಆ ಹಾಡಿನ ಧ್ವನಿಗೆ ಇಡೀ ನಗರವೇ ರೋಮಾಂಚನಗೊಂಡಿತು, ರೋಮಗಳು ಸೆಟೆದುನಿಂತವು, ರಕ್ತನಾಡಿಗಳಲ್ಲಿ ದೇಶಪ್ರೇಮ ಉಕ್ಕಿಹರಿಯತೊಡಗಿತು. ಸ್ವಾಮಿ ವಿವೇಕಾನಂದರು ಯಾವುದನ್ನು ‘ಅಧ್ಯಾತ್ಮಿಕ, ಸಾಂಸ್ಕೃತಿಕ ರಾಷ್ಟ್ರೀಯವಾದ’ ಎಂದು ಕರೆದಿದ್ದರೋ ಅದು ಹೊರಹೊಮ್ಮಿದ್ದೇ ವಂದೇ ಮಾತರಂ ಗೀತೆಯಿಂದ! ಆ ಕಾರಣಕ್ಕಾಗಿಯೇ ಅದು ಸಕಲರಿಗೂ ಸೂರ್ತಿಯಾಯಿತು.ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಎಲ್ಲರೂ ಹೊರಟರಾದರೂ ಎಲ್ಲರ ಹಾದಿಯೂ ಒಂದೇ ಆಗಿರಲಿಲ್ಲ, ಎಲ್ಲರೂ ಒಂದೇ ಸಂಘಟನೆಯ ಅಡಿಯೂ ಒಂದಾಗಿರಲಿಲ್ಲ. ಆದರೆ ಸೌಮ್ಯವಾದಿಗಳು, ಉಗ್ರವಾದಿಗಳು, ಅಹಿಂಸಾವಾದಿಗಳು, ಕ್ರಾಂತಿಕಾರಿಗಳು, ಅದು ಯಾರೇ ಆಗಿರಲಿ ಎಲ್ಲರಿಗೂ ಪ್ರೇರಣೆಯಾಗಿದ್ದ ಸಮಾನ ಅಂಶ ಮಾತ್ರ ‘ವಂದೇ ಮಾತರಂ’. ಈ ನೆಲ, ಜಲ, ಪ್ರಕೃತಿ ಸಿರಿಯನ್ನು ಹಾಡಿಹೊಗ ಳುವ ಹಾಡು ಯಾರಿಗೆ ತಾನೇ ಪ್ರೇರಣೆ ನೀಡುವುದಿಲ್ಲ? ವಿದೇಶಿ ನೆಲದಲ್ಲಿ ಭಾರತದ ಧ್ವಜವನ್ನು ಹಾರಿಸಿದ ಮೊದಲ ಮಹಿಳೆ ಮೇಡಮ್ ಕಾಮಾ, ಪ್ಯಾರಿಸ್ ಹಾಗೂ ಬರ್ಲಿನ್‌ನಲ್ಲಿ ಹಾರಿಸಿದ ಬಾವುಟದಲ್ಲಿ ‘ವಂದೇ ಮಾತರಂ’ ಗೀತೆಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿತ್ತು. ವಂದೇ ಮಾತರಂ ಎಂದು ಹೇಳಿಯೇ ಮದನ್‌ಲಾಲ್ ಧಿಂಗ್ರಾ ನೇಣಿಗೆ ತಲೆಕೊಟ್ಟ. ಬನಾರಸ್ ಕಾಂಗ್ರೆಸ್ ಅಧಿವೇಶನದಲ್ಲಿ ಕವಿಯತ್ರಿ ಸರಳಾದೇವಿ ವಂದೇ ಮಾತರಂ ಹಾಡಿದರು.
‘ವಂದೇ ಮಾತರಂ’ನಿಂದ ಪ್ರೇರಣೆಗೊಂಡು ಬ್ರಿಟಿಷ್ ಸೇನೆಯ ಮದ್ರಾಸ್ ರೆಜಿಮೆಂಟ್‌ನಲ್ಲಿ ದಂಗೆ ಎಬ್ಬಿಸಲು ಪ್ರಯತ್ನಿಸಿದರೆಂಬ ಕಾರಣಕ್ಕೆ 14 ಸೈನಿಕರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಮಲೇಷಿಯಾದಲ್ಲಿ ಇಂಡಿಯನ್ ಇಂಡಿಪೆಂಡೆ ಲೀಗ್ ಎಂಬ ಸಂಘಟನೆ ಕಟ್ಟಿಕೊಂಡಿದ್ದ ಕ್ರಾಂತಿಕಾರಿಗಳಾದ ಆನಂದನ್, ಸತ್ಯೇಂದ್ರ ಬರ್ಧನ್, ಅಬ್ದುಲ್ ಕಾರ್ದಿ ಮತ್ತು ಫೌಝ ಬಾಯಲ್ಲಿ ವಂದೇ ಮಾತರಂ ಪಠಿಸುತ್ತಲೇ ನೇಣಿಗೇರಿದರು. ಅದರಲ್ಲೂ ನೇತಾಜಿ ಸುಭಾಷ್ಚಂದ್ರ ಬೋಸರಂತೂ ವಂದೇ ಮಾತರಂ ಅನ್ನು ಆಝಾದ್ ಹಿಂದ್ ಫೌಜ್‌ನ (ಭಾರತ ರಾಷ್ಟ್ರೀಯ ಸೇನೆ) ರಾಷ್ಟ್ರಗೀತೆಯೆಂದು ಘೋಷಿಸಿದರು. ಖುದಿರಾಮನಿಂದ ಭಗತ್‌ಸಿಂಗ್, ರಾಜಗುರು, ಸುಖದೇವ್‌ನವರೆಗೂ ಎಲ್ಲ ಕ್ರಾಂತಿಕಾರಿಗಳೂ ತುಟಿಯಲ್ಲಿ ‘ವಂದೇ ಮಾತರಂ’ ಎನ್ನುತ್ತಲೇ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದರು.ಅಂದು ಇಡೀ ದೇಶಕ್ಕೇ ಪ್ರೇರಣೆ ನೀಡಿದ ಗೀತೆಯ ಬಗ್ಗೆ ಇಂದಿಗೂ ತಕರಾರು ಎತ್ತುವುದೇಕೆ? ಕುತ್ತಿಗೆ ಮೇಲೆ ಖಡ್ಗ ಇಟ್ಟರೂ ಭಾರತ್ ಮಾತಾ ಕೀ ಜೈ ಎನ್ನುತ್ತಿದ್ದಾರಲ್ಲಾ ಅಸಾದುದ್ದೀನ್ ಓವೈಸಿಯಂಥ ಒಬ್ಬ ವ್ಯಕ್ತಿಗಳು ಸಾಕಾಗುವುದಿಲ್ಲವೆ ದೇಶಕ್ಕೆ ವಿಷ ಹಿಂಡಲು?
ವಂದೇ ಮಾತರಂ ಹಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ, ಪ್ರತ್ಯೇಕ ರಾಷ್ಟ್ರ ಪಡೆದುಕೊಂಡು ಧರ್ಮಾಂಧ ಜಿನ್ನಾ ಅವರೇನೋ ಭಾರತದಿಂದ ಕಾಲ್ತೆಗೆದರು. ಆದರೆ ಅವರು ನೆಟ್ಟ ಪ್ರತ್ಯೇಕತೆಯ ಮರದ ಬೇರುಗಳು ಇಲ್ಲಿಯೇ ಉಳಿದವು. ಜಮಾತೆ ಉಲೇಮಾ, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಓವೈಸಿ ರೂಪದಲ್ಲಿ ಆ ಬೇರುಗಳು ಈಗ ಚಿಗುರೊಡೆದಿವೆ. ಆದರೆ ನಮ್ಮನ್ನು ಕಾಡುವ ಪ್ರಶ್ನೆಯಿಷ್ಟೇ, ಇವರಿಗೆ ಧರ್ಮವೇ ಅಂತಿಮ, ಈ ದೇಶಕ್ಕಿಂತ ಧರ್ಮವೇ ಮೇಲು ಎನ್ನುವುದಾರೆ 1947ರ ಭಾರತ ಬಿಟ್ಟು ತೊಲಗಬಹುದಿತ್ತ ಲ್ಲವೆ? ಯಾರು ಬೇಡವೆಂದಿದ್ದರು? ಪ್ರತ್ಯೇಕ ಮುಸ್ಲಿಂ ರಾಷ್ಟ್ರ ಪಡೆದುಕೊಂಡ ಮೇಲೂ ಇಲ್ಲಿಯೇ ಉಳಿದುಕೊಂಡಿದ್ದೇಕೆ? ಸಂಗೀತಕ್ಕೆ ಜಾತಿ, ಧರ್ಮ, ಗಡಿಗಳ ಭೇದವಿಲ್ಲ ಎನ್ನುತ್ತೇವೆ. ಅಂತಹ ಸಂಗೀತವನ್ನು ಒಲಿಸಿಕೊಂಡಿದ್ದ ವ್ಯಕ್ತಿ ಪಂಡಿತ್ ವಿಷ್ಣು ದಿಗಂಬರ ಪಲುಸ್ಕರ್. ಅವತ್ತು ಮೌಲಾನಾ ಅಹಮದ್ ಅಲಿ ವಂದೇ ಮಾತರಂ ಹಾಡಲು ಅಡ್ಡಿಪಡಿಸಿದಾಗ ಪಂಡಿತ ಪಲುಸ್ಕರರಂತಹ ಸಂಗೀತದ ರಸದೌತಣ ಉಣಿಸುವ ಕವಿ ಮನಸ್ಸೇ ರೊಚ್ಚಿಗೆದ್ದು, ವಂದೇ ಮಾತರಂ ಹಾಡಬೇಡಿ ಎನ್ನಲು ಇದು ಮಸೀದಿಯಲ್ಲ. ಹಿಡಿಸದವರು ಧಾರಾಳವಾಗಿ ಅಧಿ ವೇಶನದಿಂದ ಹೊರಹೋಗಬಹುದು ಎಂದು ಅಧ್ಯಕ್ಷನಿಗೇ ಹೇಳಿದಂತೆ, ಓವೈಸಿಯಂಥವರಿಗ ದೇಶದಿಂದ ತೊಲಗು ಎಂದು ಈಗ ಹೇಳುವವರಾರು?!
March 18, 2016
March 16, 2016
March 15, 2016
ನಾವಿರೋದು ಅರಮನೆ ನಗರಿಯಲ್ಲೋ ಇಲ್ಲ ತಾಲಿಬಾನ್’ನಲ್ಲೋ…? ಜಿಲ್ಲಾಡಳಿತದ ವಿರುದ್ಧ ಪ್ರತಾಪ್ ಸಿಂಹ ಆಕ್ರೋಶ
March 13, 2016
March 12, 2016
ಸಾಧನೆ ಮೇಲೆ ಸವಲತ್ತು ಎಂದ ವ್ಯಕ್ತಿಗೇ ವ್ಯೆವಸ್ಥೆಯ ಹೊಣೆ ಹೊರಿಸಿದ ಮೋದಿ!
ಸಾಧನೆ ಮೇಲೆ ಸವಲತ್ತು ಎಂದ ವ್ಯಕ್ತಿಗೇ ವ್ಯೆವಸ್ಥೆಯ ಹೊಣೆ ಹೊರಿಸಿದ ಮೋದಿ!
ಇಷ್ಟಕ್ಕೂ ಒಂದು ವ್ಯವಸ್ಥೆ ಶುಚಿಗೊಳ್ಳಬೇಕಾದರೆ, ರಾಜಕೀಯ ವರ್ಗವನ್ನು ತರಾಟೆಗೆ ತೆಗೆದುಕೊಳ್ಳಬೇಕಾದರೆ ಅದರ ವಿರುದ್ಧ ಹೋರಾಡುವ ಅಣ್ಣಾ ಹಜಾರೆಯವರಂಥ ಬಾಹ್ಯ ಶಕ್ತಿಗಳಂತೆಯೇ ವ್ಯವಸ್ಥೆಯ ಒಳಗಿದ್ದುಕೊಂಡು ಹೋರಾಡುವ ವಿನೋದ್ ರಾಯ್ ಅವರಂಥವರೂ ಬಹುಮುಖ್ಯವಾಗುತ್ತಾರೆ.
ಅದು 2011, ಜೂನ್ 29. ಸಾವಿರ ಉತ್ತರಗಳಿಗಿಂತ ನನ್ನ ಮೌನವೇ ಲೇಸು ಎಂದು ಆಗಾಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಯಭೀತರಾಗಿ ಮೌನ ಮುರಿದಿದ್ದರು. ಐದು ಪ್ರಮುಖ ಮಾಧ್ಯಮ ಸಂಸ್ಥೆಗಳ ಸಂಪಾದಕರ ಜತೆ ತಮ್ಮ ನಿವಾಸದಲ್ಲಿ ನಡೆಸಿದ ಸಂವಾದ/ಗೋಷ್ಠಿಯಲ್ಲಿ ನಿಯಂತ್ರಕರು ಹಾಗೂ ಮಹಾ ಲೆಕ್ಕ ಪರಿಶೋಧಕರು(ಸಿಎಜಿ) ಹದ್ದುಮೀರಿ ನಡೆಯುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. ತಮ್ಮ ಕಾರ್ಯವ್ಯಾಪ್ತಿ ದಾಟಿ ಸರಕಾರದ ನೀತಿನಿರೂಪಣೆಗಳ ಬಗ್ಗೆ ಹೇಳಿಕೆ ಕೊಡುತ್ತಿದ್ದಾರೆ ಎಂದು ಸಿಎಜಿ ವಿರುದ್ಧ ಟೀಕಾ ಪ್ರಹಾರ ಮಾಡಿದರು. ಅಷ್ಟರೊಳಗೆ ಕೇಂದ್ರ ಸರಕಾರದ ಮಂತ್ರಿಗಳು ಒಬ್ಬರ ಹಿಂದೆ ಒಬ್ಬರಂತೆ ರಾಜಿನಾಮೆ ಇತ್ತು ಕೆಳಗಿಳಿಯುತ್ತಿದ್ದರು. ಇನ್ನು ಕೆಲವರು ತಮ್ಮ ಬುಡಕ್ಕೆ ಯಾವಾಗ ಕುತ್ತು ಬರುತ್ತದೋ ಎಂದು ಆತಂಕದಿಂದ ಕುಳಿತಿದ್ದರು. ಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್ ತಮ್ಮ ಲಾಯರ್ ಬುದ್ಧಿ ಪ್ರಯೋಗಿಸಿ ‘ಝೀರೋ ಲಾಸ್ ಥಿಯರಿ’ ಮಂಡಿಸಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡಿದ್ದರು. ಆಗಿನ ಗೃಹ ಸಚಿವ ಪಿ. ಚಿದಂಬರಂ ಆ ಮೊದಲು ಹಣಕಾಸು ಸಚಿವರಾಗಿದ್ದಾಗ ಮಾಡಿದ ಪಾಪ ಕಾಡಲು ಆರಂಭಿಸಿತ್ತು. ಒಂದು ವೇಳೆ ಚಿದಂಬರಂ ಅವರು ರಾಜೀನಾಮೆ ನೀಡಬೇಕಾಗಿ ಬಂದರೆ ಕುತ್ತು ಕೊನೆಗೆ ಬಂದು ನಿಲ್ಲುವುದು ತನ್ನ ಕುರ್ಚಿಯ ಬಳಿಯೇ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರೂ ಭಯಭೀತಿಗೊಂಡಿದ್ದರು! ಅವರ ಪ್ರಾಮಾಣಿಕತೆ, ಕಾರ್ಯದಕ್ಷತೆ ಬಗ್ಗೆ ಜನರ ಮನದಲ್ಲೂ ಅನುಮಾನಗಳು ಮನೆಮಾಡಿದ್ದವು, ದೊಡ್ಡ ದೊಡ್ಡ ಕಂಪನಿಗಳ ಸಿಇಓಗಳು ತಿಹಾರ್ ಜೈಲು ಸೇರಿದ್ದರು, ಎ. ರಾಜ, ಕನಿಮೋಳಿ, ಕಲ್ಮಾಡಿ ಜೈಲೇ ಶಾಶ್ವತವಾಗಿ ಬಿಡುತ್ತದೇನೋ ಎಂಬ ಆತಂಕದಲ್ಲಿದ್ದರು, ಮಾಜಿ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ತಮ್ಮನ್ನು ಸಮರ್ಥಿಸಿಕೊಳ್ಳಲು ಹರಸಾಹಸ ಮಾಡುವಂತಾಗಿ ಬಿಟ್ಟಿತ್ತು, ತಮ್ಮ ಇಲಾಖೆಯಲ್ಲಿ ನುಂಗಿರುವುದನ್ನು ಯಾವ ಕ್ಷಣಕ್ಕೂ ಹೊರಹಾಕಬಹುದು ಎಂದು ಅಧಿಕಾರಶಾಹಿಗಳು, ಮಂತ್ರಿಗಳು ನಡುಗಲು ಆರಂಭಿಸಿದ್ದರು.
ಹಾಗಾದರೆ…ರಾಷ್ಟ್ರದ ಪ್ರಧಾನಿ ಕೋಪತಾಪ ವ್ಯಕ್ತಪಡಿಸುವ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದ್ದ, ಸರಕಾರದ ಮೈಯಲ್ಲಿ ಬೆವರೂರುವಂತೆ ಮಾಡಿದ್ದ, ಭ್ರಷ್ಟರಿಗೆ ಇಷ್ಟೆಲ್ಲ ತ್ರಾಸ ಕೊಟ್ಟ ವ್ಯಕ್ತಿಯಾದರೂ ಯಾರೆಂದುಕೊಂಡಿರಿ?
ನಿಮ್ಮ ಊಹೆ ಸರಿಯಾಗಿಯೇ ಇದೆ… 2ಜಿ ತರಂಗಾತರ ನೀಡಿಕೆಯಲ್ಲಿ 1.76 ಲಕ್ಷ ಕೋಟಿ, ಕಲ್ಲಿದ್ದಲು ಗುತ್ತಿಗೆಯಲ್ಲಿ 1.86 ಲಕ್ಷ ಕೋಟಿ, ಕಾಮನ್ವೆಲ್ತ್ ಹಗರಣದಲ್ಲಿ ಸಾವಿರಾರು ಕೋಟಿಯನ್ನು ನುಂಗಲಾಗಿದೆ ಎಂಬ ದಿಗ್ಭ್ರಮೆಯುಂಟು ಮಾಡುವಂಥ ಅಂಶವನ್ನು ಬೆಳಕಿಗೆ ತಂದ ವಿನೋದ್ ರಾಯ್!2008, ಜನವರಿ 7ರಂದು ನಿಯಂತ್ರಕರು ಹಾಗೂ ಮಹಾಲೆಕ್ಕ ಪರಿಶೋಧಕರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿನೋದ್ ರಾಯ್ ಮಾಡಿದ್ದೇನು ಗೊತ್ತೆ?
1. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯ (NHRM) ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸುಧಾರಣೆ ತಂದಿದ್ದೇವೆ ಎಂಬ ಕೇಂದ್ರ ಸರಕಾರದ ಪ್ರತಿಪಾದನೆ ಎಂತಹ ಹಸಿ ಸುಳ್ಳು ಎಂಬ ವರದಿಯನ್ನು ಸಿಎಜಿ 2009ರಲ್ಲಿ ನೀಡಿತು. ವಾಸ್ತವದಲ್ಲಿ ದೇಶದ 71 ಪರ್ಸೆಂಟ್ ಜಿಲ್ಲೆಯಲ್ಲಿ ಈ ಯೋಜನೆಯೇ ಚಾಲ್ತಿಯಲ್ಲಿಲ್ಲ ಎಂಬ ಅಂಶವನ್ನು ಅದು ಹೊರಹಾಕಿತು!
2. ಕಾಮನ್ವೆಲ್ತ್ ಹಗರಣವನ್ನು ಬೆಳಕಿಗೆ ತಂದಿದ್ದೇ 2009ರ ಸಿಎಜಿ ವರದಿ! ಎಷ್ಟೊಂದು ಅವ್ಯವಹಾರಗಳು ನಡೆದಿವೆ ಹಾಗೂ ನಡೆಯುತ್ತಿವೆ ಎಂಬುದನ್ನು ರಾಷ್ಟ್ರದ ಮುಂದಿಟ್ಟ ಸಿಎಜಿ, ಭಾರತೀಯ ಒಲಿಂಪಿಕ್ ಸಂಸ್ಥೆಯ ಮುಖ್ಯಸ್ಥ ಹಾಗೂ ಕಾಂಗ್ರೆಸ್ ಸಂಸದ ಸುರೇಶ್ ಕಲ್ಮಾಡಿ ಜೈಲು ಸೇರಲು ಭಾಷ್ಯ ಬರೆಯಿತು.
3. 2009ರಲ್ಲಿ ಅಡ್ಮಿರಲ್ ಗೋರ್ಶ್ಕೋವ್ (ರಷ್ಯಾದಿಂದ ಹಳೇ ಹಡಗು ಖರೀದಿ) ಹಗರಣ ಬಹಿರಂಗ.
4. 2009ರಲ್ಲಿ ಶಸ್ತ್ರಾಸ್ತ್ರ ಖರೀದಿ ಹಗರಣ ಹಾಗೂ ಸರಕಾರದ ಬೊಕ್ಕಸಕ್ಕೆ 9 ಸಾವಿರ ಕೋಟಿ ರು.ನಷ್ಟವುಂಟುಮಾಡಿದ ಅವ್ಯವಹಾರ ಬೆಳಕಿಗೆ.
5. 2011ರಲ್ಲಿ ಇಸ್ರೇಲ್‌ನಿಂದ ನಮ್ಮ ಬಾಹ್ಯ ಗುಪ್ತಚರ ಸಂಸ್ಥೆ ‘ರಾ’ (RAW) ಮಾಡಿದ ಚಾಲಕ ರಹಿತ ವಿಮಾನ ಖರೀದಿಯಲ್ಲಿ ಎಸಗಲಾದ 450 ಕೋಟಿ ಅವ್ಯವಹಾರ ಹೊರಕ್ಕೆ.
6. 2ಜಿ ಸ್ಪೆಕ್ಟ್ರಂ ಹಗರಣ! 2003ರಿಂದ 6 ವರ್ಷಗಳವರೆಗಿನ ದಾಖಲೆ, ಲೆಕ್ಕ ಪತ್ರಗಳನ್ನು ಪರಿಶೀಲಿಸಿ 2ಜಿ ಹಗರಣವನ್ನು ರಾಷ್ಟ್ರದ ಮುಂದೆ ಖುಲ್ಲಂಖುಲ್ಲಾ ಮಾಡಿದ್ದೇ ಸಿಎಜಿ. ರಾಷ್ಟ್ರದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರು. ನಷ್ಟವಾಗಿದೆ ಎಂದು ವರದಿ ನೀಡಿದ ಪರಿಣಾಮವೇ ನಮ್ಮ ಮಂತ್ರಿಮಹೋದಯರು ಜೈಲು ಸೇರಿದರು.ಇದೇನು ಸಾಮಾನ್ಯ ಕೆಲಸವೇ? ಅಂತಹ ಅಣ್ಣಾ ಹಜಾರೆಯವರ ಚಾರಿತ್ರ್ಯ ವಧೆ ಮಾಡಲು ಮುಂದಾದ, ಭ್ರಷ್ಟರೆಂದು ಕರೆದ, ಬಾಬಾ ರಾಮ್ ದೇವ್ ಬೆಂಬಲಿಗರ ಮೇಲೆ ಲಾಟಿ ಪ್ರಹಾರ ಮಾಡಿ ಒಬ್ಬರ ಜೀವವನ್ನೇ ತೆಗೆದ ಕಾಂಗ್ರೆಸ್ ಪಕ್ಷ ವಿನೋದ್ ರಾಯ್ ಅವರನ್ನು ಸುಮ್ಮನೆ ಬಿಟ್ಟೀತೆ?ಮೊದಲಿಗೆ 1.76 ಲಕ್ಷ ಕೋಟಿ ರೂ. ನಷ್ಟವೆಂಬುದು ತುಂಬಾ ಉತ್ಪ್ರೇಕ್ಷೆಯ ಅಂದಾಜು ಎಂದು ಕಾಂಗ್ರೆಸ್ ಟೀಕಿಸಿತು. ಆದರೆ ವಿನೋದ್ ರಾಯ್ ಜಗ್ಗಲಿಲ್ಲ. ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯನ್ನು ಕಾಂಗ್ರೆಸ್ ರಚಿಸಿತಾದರೂ ತನ್ನದೇ ಸಂಸದ ಪಿ.ಸಿ. ಚಾಕೋ ಅವರನ್ನೇ ಅದರ ಅಧ್ಯಕ್ಷರನ್ನಾಗಿ ನೇಮಿಸಿತು. ಆ ಜೆಪಿಸಿ ವಿನೋದ್ ರಾಯ್ ಅವರನ್ನೇ ವಿಚಾರಣೆಗೆ ಬರುವಂತೆ ಸೂಚಿಸಿತು. ಹಾಗಂತ ವಿನೋದ್ ರಾಯ್ ಬಗ್ಗುವವರಲ್ಲ. ನಾನು ಯಾರ ಮುಂದೆ ಬೇಕಾದರೂ ದಾಖಲೆ ಸಮೇತ ಅಂಕಿ-ಅಂಶ ನೀಡುತ್ತೇನೆ ಎಂದರು. ಅದರ ಬೆನ್ನಲ್ಲೇ ಹೈದರಾಬಾದ್‌ನ ಪೊಲೀಸ್ ಅಕಾಡೆಮಿಯಲ್ಲಿ ನಡೆದ 26ನೇ ಸರ್ದಾರ್ ವಲ್ಲಭ ಭಾಯಿ ಜ್ಞಾಪನಾ ಭಾಷಣ ಮಾಡಿದ ವಿನೋದ್ ರಾಯ್, ‘ಈ ಸರಕಾರದ ಸಮಗ್ರತೆ ತಳಕ್ಕಿಳಿದಿದೆ, ಆಡಳಿತ ಪಾತಾಳ ಸೇರಿದೆ, ಸರಕಾರಿ ಅಧಿಕಾರಿಗಳ ಅತ್ಮಸ್ಥೈರ್ಯ ಉಡುಗಿಹೋಗಿದೆ. ಹಾಗಾಗಿ ನಿರ್ಣಯ ಕೈಗೊಳ್ಳುವಿಕೆಯೇ ಬಲಿಪಶುವಾಗಿ ಬಿಟ್ಟಿದೆ’ ಎನ್ನುವ ಮೂಲಕ ಸರಕಾರದ ಜತೆ ಸಂಘರ್ಷಕ್ಕೆ ಸನ್ನದ್ಧರಾಗಿರುವ ಸೂಚನೆ ನೀಡಿದರು.ಅವರು ನಮಗೆ ಆಪ್ತರಾಗಿದ್ದೇ ಇಂತಹ ಎದೆಗಾರಿಕೆ ತೋರಿದ್ದರಿಂದ!ಇಷ್ಟಕ್ಕೂ ಒಂದು ವ್ಯವಸ್ಥೆ ಶುಚಿಗೊಳ್ಳಬೇಕಾದರೆ, ರಾಜಕೀಯ ವರ್ಗವನ್ನು ತರಾಟೆಗೆ ತೆಗೆದುಕೊಳ್ಳಬೇಕಾದರೆ ಅದರ ವಿರುದ್ಧ ಹೋರಾಡುವ ಅಣ್ಣಾ ಹಜಾರೆಯವರಂಥ ಬಾಹ್ಯ ಶಕ್ತಿಗಳಂತೆಯೇ ವ್ಯವಸ್ಥೆಯ ಒಳಗಿದ್ದುಕೊಂಡು ಹೋರಾಡುವ ವಿನೋದ್ ರಾಯ್ ಅವರಂಥವರೂ ಬಹುಮುಖ್ಯವಾಗುತ್ತಾರೆ.
ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ, ಸಿಎಜಿ, ಲೋಕಾಯುಕ್ತ, ಮುಂದೆ ಲೋಕಪಾಲ ಮುಂತಾದ ಬಲಿಷ್ಠ ಇನ್‌ಸ್ಟಿಟ್ಯೂಶನ್‌ಗಳ ರಚನೆ ಜತೆಗೆ ಚುನಾವಣಾ ಆಯೋಗ ಬಲಗೊಳಿಸಿದ ಟಿ.ಎನ್. ಶೇಷನ್, ಖ್ಯಾತ ಸಿವಿಸಿ (ಮುಖ್ಯ ಜಾರಿ ಆಯುಕ್ತ) ಎನ್. ವಿಠ್ಠಲ್ ಹಾಗೂ ಸಿಎಜಿ ವಿನೋದ್ ರಾಯ್ ಅವರಂಥ ಕ್ರುಸೇಡರ್ಗಳೂ ಪ್ರಮುಖವಾಗುತ್ತಾರೆ. ನೀವೇ ಯೋಚನೆ ಮಾಡಿ, ಕಾಮನ್ವೆಲ್ತ್ ಹಾಗೂ 2ಜಿ ಬಗ್ಗೆ ಸಿಎಜಿ ಧೈರ್ಯಶಾಲಿ ವರದಿ ನೀಡದೇ ಹೋಗಿದ್ದರೆ ರಾಷ್ಟ್ರಾದ್ಯಂತ ಭ್ರಷ್ಟಾಚಾರ ವಿರೋಧಿ ಭಾವನೆ ವ್ಯಾಪಿಸಲು, ಅಣ್ಣಾ ಹಜಾರೆ ಜನರ ಧ್ವನಿಯಾಗಿ ಹೊರಹೊಮ್ಮಲು ಸಾಧ್ಯವಿತ್ತೇ? ಅವರ ಒಂದು ವರದಿ ಕಲ್ಮಾಡಿಯನ್ನೂ ಜೈಲಿಗೆ ದಬ್ಬಿತು, ಎ. ರಾಜ ಮಂತ್ರಿ ಪದವಿ ಕಳೆದುಕೊಳ್ಳುವ ಜತೆಗೆ ಕೃಷ್ಣನ ಜನ್ಮಸ್ಥಳವನ್ನು ಸೇರುವಂತೆ ಮಾಡಿತು. ಉದ್ಯಮ ಕ್ಷೇತ್ರದ ಮುಖ್ಯಸ್ಥರನ್ನೂ ಕಂಬಿ ಎಣಿಸುವಂತೆ ಮಾಡುವ ಮೂಲಕ ದುಡ್ಡಿದ್ದರೆ ಏನನ್ನೂ ಮಾಡಬಹುದು, ಮಾಡಿ ಜಯಿಸಬಹುದು ಎಂಬ ನಂಬುಗೆಯನ್ನು ಸುಳ್ಳಾಗಿಸಿತು.ಅವರ ಬಗ್ಗೆ ಗೌರವ ಮೂಡುವುದೇ, ನಮ್ಮ ಮನಸ್ಸು ಅವರಿಗೊಂದು ಸಲಾಮು ಹಾಕುವುದೇ ಈ ಕಾರಣಕ್ಕೆ.1972ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದ ವಿನೋದ್ ರಾಯ್ ವೃತ್ತಿಯಲ್ಲಿ, ಜವಾಬ್ದಾರಿಯಲ್ಲೂ ಕುಶಲಮತಿ ಎನಿಸಿಕೊಂಡವರು. ಅದು 2006. ಆಗಿನ ಹಣಕಾಸು ಸಚಿವ ಪಿ. ಚಿದಂಬರಂ ತಮ್ಮ ಸಚಿವಾಲಯದ ಉನ್ನತ ಅಧಿಕಾರಿಗಳ ಸಭೆ ಕರೆದಿದ್ದರು. ಮುಂಬರುವ ಬಜೆಟ್ ಪ್ರಸ್ತಾವನೆಗಳನ್ನು ಪರಿಶೀಲಿಸುತ್ತಿದ್ದರು. ಅಚಾನಕ್ಕಾಗಿ ಪ್ಯಾರಾವೊಂದು ಕಂಡಿತು. ಅದರಲ್ಲಿ ‘ಇಂಡಿಯಾ ಇನ್ಫ್ರಾಸ್ಟ್ರಕ್ಚರ್ ಫೈನಾನ್ಸ್ ಕಂಪನಿ’ ಎಂಬ ಕಂಪನಿ ಆರಂಭ ಮಾಡುವ ವಾಗ್ದಾನವಿತ್ತು. ಅಣಕವೆಂದರೆ ಚಿದಂಬರಂ ಹಿಂದಿನ ಬಾರಿಯ ಬಜೆಟ್ ಮಂಡನೆ ವೇಳೆಯೇ ಅಂಥದ್ದಾಂದು ಕಂಪನಿ ಆರಂಭ ಮಾಡುವುದಾಗಿ ಭಾಷಣದಲ್ಲಿ ಹೇಳಿದ್ದರು. ಅದು ನೆನಪಾಗಿ ಕೋಪೋದ್ರಿಕ್ತರಾದ ಅವರು, ‘ನಿಮಗೆ ಒಂದು ಕಂಪನಿ ಆರಂಭಿಸಲು ಎಷ್ಟು ಕಾಲ ಬೇಕು?’ ಎಂದು ರೇಗಿದರು. ಮಾಮೂಲಿ ಕಾರಣ. ಆರ್ಥಿಕ ವ್ಯವಹಾರಗಳ ಇಲಾಖೆ ಹಾಗೂ ಹಣಕಾಸು ಸೇವಾ ಇಲಾಖೆ ನಡುವಿನ ಅಲೆದಾಟದಲ್ಲಿ ಕಡತ ಕೊಳೆಯುತ್ತಿತ್ತು. ಆತಂಕಕ್ಕೊಳಗಾದ ಅಧಿಕಾರಿಗಳು ಬೆಚ್ಚಿ ನಿಂತಿದ್ದಾಗ, ಆ ಸಂದರ್ಭದಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯ ಮುಖ್ಯಸ್ಥರಾಗಿದ್ದ ವಿನೋದ್ ರಾಯ್ ಹೇಳಿದರು-‘ಈ ವಾರಾಂತ್ಯದೊಳಗೆ?’! ಹಾಗೆ ಹೇಳಿದ ಅವರು ಕಚೇರಿಗೆ ವಾಪಸ್ಸಾಗಿ ಇಲಾಖೆಯ ಜಂಟಿ ಕಾರ್ಯದರ್ಶಿಯನ್ನು ಒಳಕರೆದು ಸಂಜೆಯೊಳಗೆ ಕಂಪನಿ ದಾಖಲಾಗಬೇಕು ಎಂದರು. “Next to impossible” ಎಂಬ ಉತ್ತರ ಬಂತು.
‘ನಿಮ್ಮ ಸಹೋದ್ಯೋಗಿಗಳು ಹೇಳುತ್ತಿದ್ದರು- ನೀವೊಬ್ಬ ಬಹಳ ಒಳ್ಳೆಯ, ದಕ್ಷ ಅಧಿಕಾರಿಯಂತೆ. ನಮ್ಮ ಇಲಾಖೆಯ ಪ್ರತಿಷ್ಠೆ ಪಣಕ್ಕಿದೆ. ಈ ಕೆಲಸ ಆಗಲೇಬೇಕು’ ಎಂದು ತಲೆಸವರಿದರು ವಿನೋದ್ ರಾಯ್. ಇಡೀ ಆಡಳಿತಯಂತ್ರ ಕಾರ್ಯಕ್ಕಿಳಿಯಿತು, ವಿದ್ಯುತ್ ಕಡಿತದ ನಡುವೆ ಜನರೇಟರ್ ತಂದು ಹಗಲೂ ರಾತ್ರಿ ಕೆಲಸ ಮಾಡಿದರು. ಮರುದಿನ ಕಂಪನಿ ರಿಜಿಸ್ಟರ್ ಆಗಿ ಚಿದಂಬರಂ ಮೇಜಿನ ಮೇಲೆ ದಾಖಲೆ ಇತ್ತು!ವಿನೋದ್ ರಾಯ್ ಹಣಕಾಸು ಕಾರ್ಯದರ್ಶಿಯಾಗಿದ್ದಾಗ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಿಗೆ ಸಾಧನೆ ಆಧಾರಿತ ಸವಲತ್ತು, ಉತ್ತೇಜನೆ ನೀಡಬೇಕೆಂಬ ಪ್ರಸ್ತಾಪವಿಟ್ಟಿದ್ದರು. ಅದಕ್ಕೆ ಚಿದಂಬರಂ ತೀವ್ರ ವಿರೋಧ ವ್ಯಕ್ತಪಡಿಸಿದಾಗಲೂ ಬಿಡಿ ಬಿಡಿಯಾಗಿ ವಿವರಿಸಿ ಸಚಿವರ ಒಪ್ಪಿಗೆ ಪಡೆದಿದ್ದರು. ಇಂತಹ ವಿನೋದ್ ರಾಯ್ ಅವರಿಗೇ ವಾರದ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಕೃತ ಅಥವಾ ಸರ್ಕಾರಿ ನಿಯಂತ್ರಣದಲ್ಲಿರುವ ಬ್ಯಾಂಕುಗಳಿಗೆ ಕಾಯಕಲ್ಪ ನೀಡುವ ಜವಾಬ್ದಾರಿಯನ್ನು ನೀಡಿದ್ದಾರೆ. ಬ್ಯಾಂಕ್ ಬೋರ್ಡ್ ಬ್ಯುರೋ ಎಂಬ ಹೊಸ ವ್ಯವಸ್ಥೆಯನ್ನು ರೂಪಿಸಿ, ಅದರ ಮೊದಲ ಮುಖ್ಯಸ್ಥರನ್ನಾಗಿ ರಾಯ್ ಅವರನ್ನು ನೇಮಕ ಮಾಡಿದ್ದಾರೆ. ಈ ನಿರ್ಧಾರ ನಿಜಕ್ಕೂ ಬಹಳ ಮುಖ್ಯವಾಗುತ್ತದೆ. ಒಂದೆಡೆ ವಿಜಯ್ ಮಲ್ಯ ಅವರಂಥ ಗೌರವಾನ್ವಿತ ರಾಜ್ಯಸಭೆ ಸದಸ್ಯರು ಹಾಗೂ ಉದ್ಯಮಿಗಳು 9 ಸಾವಿರ ಕೋಟಿ ರು.ಗಳನ್ನು ಬ್ಯಾಂಕುಗಳಿಗೆ ಪಂಗನಾಮ ಹಾಕಿರುವ ಸಂದರ್ಭದಲ್ಲಿ, ಉದ್ಯಮಿಗಳು ಬ್ಯಾಂಕುಗಳಿಂದ ಪಡೆದುಕೊಂಡು ಮರುಪಾವತಿ ಮಾಡದ ಸಾಲದ ಪ್ರಮಾಣ 4 ಲಕ್ಷ ಕೋಟಿ ದಾಟಿರುವ ಪರಿಸ್ಥಿತಿಯಲ್ಲಿ ವಿನೋದ್ ರಾಯ್‌ರಂಥವರಿಗೆ ಸ್ಟೇಟ್ ಬ್ಯಾಂಕ್ ಆ- ಇಂಡಿಯಾ, ಐಡಿಬಿಐ, ಭಾರತೀಯ ಮಹಿಳಾ ಬ್ಯಾಂಕು ಸೇರಿದಂತೆ 22 ಸರ್ಕಾರಿ ನಿಯಂತ್ರಿತ ಬ್ಯಾಂಕುಗಳ ಚುಕ್ಕಾಣಿ ನೀಡಿರುವುದು ಶ್ಲಾಘನೀಯ ಕೆಲಸ. ಇವತ್ತು ಮಾನ ಮರ್ಯಾದೆ ಎಲ್ಲಿದೆ ಹಾಗೂ ಯಾರಲ್ಲಿದೆ ಹೇಳಿ? ಒಂದೆರಡು ಲಕ್ಷ ಸಾಲ ಮಾಡಿಕೊಂಡು, ಬಡ್ಡಿ ಕಟ್ಟಲಾರದೆ, ಬ್ಯಾಂಕುಗಳು ಜಫ್ತಿಗೆ ಬಂದಾಗ, ಬಡ್ಡಿಮಕ್ಕಳು ಬಂದು ಬೆದರಿಸಿದಾಗ ಮರ್ಯಾದೆ ಹೋಯಿತೆಂದು ನೇಣಿಗೆ ಶರಣಾಗುತ್ತಾನೆ ನಮ್ಮ ಬಡ ರೈತ. ಅದೇ ಸಾವಿರಾರು ಕೋಟಿ ಸಾಲ ಮಾಡಿ, ಅದರಿಂದಲೇ ಮೋಜು ಮಸ್ತಿ ಮಾಡುವ ಮಲ್ಯರಂಥವರು, ರಾಜಕಾರಣಿಗಳ ದುಡ್ಡನ್ನು ಮೇನೇಜ್ ಮಾಡುವ ಸುಬ್ರತೋ ರಾಯ್‌ರಂಥವರು ಯಾವತ್ತಾದರೂ ಮರ್ಯಾದೆಗೆ ಅಂಜಿದ್ದಾರಾ? ನೇಣುಹಾಕಿಕೊಂಡಿದ್ದಾರಾ?
ಇಂಥ ನಾಚಿಕೆಗೇಡಿಗಳಿಗೆ ಪಾಠ ಕಲಿಸಲು ಮೋದಿಯವರು ನಿಯುಕ್ತಿ ಮಾಡಿದ್ದಾರೆ ವಿನೋದ್ ರಾಯ್‌ರನ್ನು!
Pratap Simha's Blog
- Pratap Simha's profile
- 58 followers
