Pratap Simha's Blog, page 11

December 28, 2017

December 23, 2017

ನಿನ್ನೆ ಅವರ ಜನ್ಮದಿನವಿತ್ತು , ಹಾಗೇ ನೆನಪಿಸಿಕೊಳ್ಳಬೇಕೆನಿಸಿತು!

ನಿನ್ನೆ ಅವರ ಜನ್ಮದಿನವಿತ್ತು , ಹಾಗೇ ನೆನಪಿಸಿಕೊಳ್ಳಬೇಕೆನಿಸಿತು!


He can be compared to a great mathema hcian like Srinivasa Ramanujan!’ ಹಾಗಂತ ಅಮೆರಿಕದ ಖ್ಯಾತ ಗಣಿತಶಾಸ್ತ್ರಜ್ಞ ಜಾನ್ ಫೋಬ್ಸರ್ ನ್ಯಾಶ್ ಅವರನ್ನು ಉಲ್ಲೇಖಿಸಿ Beautiful Mind’’ ಎಂಬ ಅವರ ಜೀವನಚರಿತ್ರೆಯಲ್ಲಿ ಹೇಳಲಾಗುತ್ತದೆ. 1997ರಲ್ಲಿ ಬಿಡುಗಡೆಯಾದ Good Will Hunting’ ಎಂಬ ಚಿತ್ರದಲ್ಲೂ ಅದರ ಮುಖ್ಯ ಪಾತ್ರಧಾರಿ ವಿಲ್ ಹಂಟಿಂಗ್ ಬಗ್ಗೆ Will might have the potential to be as great a mathematician as the legendary Srinivasa Ramanujan’’ ಎಂಬ ಹೋಲಿಕೆ ಬರುತ್ತದೆ! ಅಂದರೆ ನಮ್ಮ ಶ್ರೀನಿವಾಸ ರಾಮಾನುಜನ್ ಎಂಥ ಮಹಾನ್ ವ್ಯಕ್ತಿಯಾಗಿದ್ದಿರಬಹುದು? ನೀವೇ ಯೋಚನೆ ಮಾಡಿ, ಸಚಿನ್ ತೆಂಡೂಲ್ಕರ್‌ನನ್ನು ಡಾನ್ ಬ್ರಾಡ್ಮನ್ಗೆ ಹೋಲಿಸಬಹುದು ಅಂದರೆ’ ಡಾನ್ ಬ್ರಾಡ್ಮನ್ ಆಛ್ಞ್ಚಿ ಞ್ಟ ಎಂದಂತಾಯಿತು. ಅದನ್ನೇ ಸರಳವಾಗಿ ಹೇಳುವುದಾದರೆ 100 ಅಂಕಗಳಿಗೆ ಪರೀಕ್ಷೆ ನಡೆಯುತ್ತಿದೆ ಎಂದಾದರೆ ಗರಿಷ್ಠ ಮಿತಿಯಾದ 100’ Bench mark!! ಅಷ್ಟಕ್ಕೂ ನೂರಕ್ಕಿಂತ ಹೆಚ್ಚು ಅಂಕ ಪಡೆಯಲು ಸಾಧ್ಯವಿಲ್ಲ.


ಹಾಗಿರುವಾಗ ಗುಡ್ ಹಂಟಿಂಗ್’ ಚಿತ್ರದಲ್ಲಿ ಬರುವ ಯುವ ಗಣಿತಶಾಸ್ತ್ರಜ್ಞ ವಿಲ್ ಹಂಟಿಂಗ್ನದ್ದು ಕಾಲ್ಪನಿಕ ಪಾತ್ರವೇ ಆಗಿದ್ದರೂ ಆತ ಶ್ರೀ ನಿವಾಸ ರಾಮಾನುಜನ್ ಅವರಂಥ ಮಹಾನ್ ಗಣಿತಶಾಸ್ತ್ರಜ್ಞನಾಗುವ ಶಕ್ಯತೆ ಹೊಂದಿದ್ದಾನೆ ಎನ್ನುತ್ತಾರೆಂದರೆ ರಾಮಾನುಜನ್ ಅವರೇ Bench mark ಎಂದಾಗುತ್ತದಲ್ಲವೆ? ಅಷ್ಟೇ ಅಲ್ಲ, 1994ರಲ್ಲಿ ಅರ್ಥಶಾಸ್ತ್ರಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಮ್ಯಾಥಮೆಟೀಶಿಯನ್ ಜಾನ್ ನ್ಯಾಶ್ ಅವರನ್ನು ಮಹಾನ್ ಗಣಿತಜ್ಞ ರಾಮಾನುಜನ್ರಿಗೆ ಹೋಲಿಸಬಹುದು’ಎನ್ನುತ್ತಾರೆಂದರೆ ರಾಮಾನುಜನ್ ಎಷ್ಟು ಗ್ರೇಟ್ ಇರಬಹುದು? ಅಬ್ಬಾ! ಅವರದ್ದು ಗಣಿತದ ಇತಿಹಾಸದಲ್ಲೇ ಅತ್ಯಂತ ಕಥೆ. ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿದ್ದ ಜಿ.ಎಚ್. ಹಾರ್ಡಿಂಗ್ ಅದಾಗಲೇ ವಿಶ್ವವಿಖ್ಯಾತ ಗಣಿತ ಶಾಸ್ತ್ರಜ್ಞನೆನಿಸಿಕೊಂಡಿದ್ದರು. ಅಂಥ ಗಣಿತಶಾಸ್ತ್ರಜ್ಞರಿಗೆ ಉತ್ತರ ಬಯಸಿ ಪತ್ರಗಳು ಬರುವುದು ಸಹಜ.


ಭಾರತದಿಂದಲೂ ಒಂದು ಪತ್ರ ಬಂದಿತ್ತು. ಮದ್ರಾಸ್ ಪೋರ್ಟ್ ಟ್ರಸ್ಟ್ ನಲ್ಲಿ ಗುಮಾಸ್ತರಾಗಿರುವ ಶ್ರೀನಿವಾಸ ರಾಮಾನುಜನ್ ಎಂಬ ಹೆಸರಿನಲ್ಲಿ ಬಂದಿದ್ದ ಆ ಹತ್ತು ಪುಟಗಳ ಪತ್ರದಲ್ಲಿ 120 ಥೇರಮ್‌ಗಳಿದ್ದವು ಹಾಗೂ ಅವುಗಳನ್ನು ರೂಪಿಸಿದ್ದು ತಾನೇ ಎಂದು ಪ್ರತಿಪಾದಿಸಲಾಗಿತ್ತು. ನಿರಾಸಕ್ತಿಯಿಂದಲೇ ಅವುಗಳತ್ತ ಕಣ್ಣುಹಾಯಿಸಿದ ಹಾರ್ಡಿ ಪತ್ರವನ್ನು ಪಕ್ಕಕ್ಕೆ ಆದರೆ ಆ ಪತ್ರದಲ್ಲಿ ಗಣಿತದ ಸೂತ್ರಗಳ ಬಗ್ಗೆ ಬರೆಯಲಾಗಿದ್ದ ವಿಷಯಗಳು ಹಾರ್ಡಿಯವರು ಮತ್ತೆ ಅದರತ್ತ ದೃಷ್ಟಿಹಾಯಿಸುವಂತೆ ಮಾಡಿದವು. ಈ ಬಾರಿ ಸಹ ಗಣಿತಶಾಸ್ತ್ರಜ್ಞ ಜೆ.ಇ. ಲಿಟ್ಲಿವುಡ್ ಅವರನ್ನೂ ಬರಮಾಡಿಕೊಂಡ ಹಾರ್ಡಿ, ರಾಮಾನುಜನ್ ಕಳುಹಿಸಿದ್ದ ಪತ್ರವನ್ನು ಕೂಲಂಕಷವಾಗಿ ಪರಾಮರ್ಶೆ ಮಾಡಿದರು. 1913ರಲ್ಲಿ ನಡೆದ ಈ ಘಟನೆ ಗಣಿತ ಜಗತ್ತಿನ ಹೊಸ ಮೈಲುಗಲ್ಲು. ರಾಮಾನುಜನ್ ವಿವರಿಸಿದ್ದ ಕೆಲವು ಥೇರಮ್‌ಗಳು ವಿಚಿತ್ರವಾಗಿ ಕಾಣುತ್ತಿದ್ದರೂ ಅವುಗಳಲ್ಲಿ ನಿಜಾಂಶ ವಿಲ್ಲದೇ ಹೋಗಿದ್ದರೆ ಅವುಗಳನ್ನು ಸೃಷ್ಟಿಸುವ ಕಲ್ಪನೆಯೇ ಎಂಬುದು ಹಾರ್ಡಿಯವರಿಗೆ ಮನವರಿಕೆ ಯಾಯಿತು.


ಹೀಗೆ ಮದ್ರಾಸ್‌ನ ಯಾವುದೋ ಮೂಲೆಯಲ್ಲಿ ಕೊಳೆಯುತ್ತಿದ್ದ ಪ್ರತಿಭೆಗೆ ಜಾಗತಿಕ ಮನ್ನಣೆ ದೊರೆಯುವಂತಾಯಿತು. 1887, ಡಿಸೆಂರ್ಬ 22ರಂದು ತಮಿಳುನಾಡಿನಲ್ಲಿ ಜನಿಸಿದ ರಾಮಾನುಜನ್ ಅವರದ್ದು ತೀರಾ ಬಡ ಕುಟುಂಬ. ಕುಂಬಕೋಣಂನಲ್ಲಿ ಅಕೌಂಟೆಂಟ್ ಆಗಿದ್ದ ಅವರ ತಂದೆಗೆ ಬರುತ್ತಿದ್ದ ಸಂಬಳದಲ್ಲಿ ಕುಟುಂಬ ನಿರ್ವಹಣೆಯೇ ಕಷ್ಟವಾಗಿತ್ತು. ಆದರೆ ಓದಿನಲ್ಲಿ ಮುಂದಿದ್ದ ರಾಮಾನುಜನ್, 1903ರಲ್ಲಿ ನಡೆದ ಹೈಸ್ಕೂಲ್ನ ಅಂತಿಮ ಪರೀಕ್ಷೆಯಲ್ಲಿ ಮೊದಲಿಗರಾಗಿ ಪಾಸಾದ ಕಾರಣ ಕಾಲೇಜಿಗೆ ಸೇರಲು ಸ್ಕಾಲರ್‌ಶಿಪ್ ಸಿಕ್ಕಿತು. ಅ Synopsis of Elementary Results in Pure and Applied Mathematics ಎಂಬ ಪುಸ್ತಕ ರಾಮಾನುಜನ್ ಅವರನ್ನು ಚಿಂತೆಗೆ ಹಚ್ಚಿತು.


ಆ ಪುಸ್ತಕ ಗಣಿತದ ಲೆಕ್ಕಗಳ ಫಲಿತಾಂಶವನ್ನೇನೋ ನೀಡುತ್ತಿತ್ತು. ಆದರೆ ಅದರಲ್ಲಿ ಪ್ರೂಫ್‌ಗಳೇ ಇರಲಿಲ್ಲ. ಅಂದರೆ ತರ್ಕ ಸಮೇತ ವಿವರಿಸುವ ಬದಲು ಬರೀ ಫಲಿತಾಂಶಗಳನ್ನಷ್ಟೇ ನೀಡಲಾಗಿತ್ತು. ಹಾಗಾಗಿ ಸ್ವತಃ ಲಾಜಿಕ್ ಹುಡುಕಲು ಹೊರಟ ರಾಮಾನುಜನ್ ಗಣಿತದೊಳಗೇ ಮುಳುಗಿಹೋದರು. ಹಾಗೆ ಗಣಿತದಲ್ಲಿ ಅತಿ ಹೆಚ್ಚು ಅಂಕ ಪಡೆದರೂ ಇತರ ನಿರ್ಲಕ್ಷಿಸಿದ ಕಾರಣ ಪರೀಕ್ಷೆಯಲ್ಲಿ ಪಲ್ಟಿ ಹೊಡೆದರು. ಮರಳಿ ಯತ್ನ ಮಾಡಿದರೂ ಪಾಸಾಗಲಿಲ್ಲ. ಜತೆಗೆ ಸ್ಕಾಲರ್‌ಶಿಪ್ ನಿಂತುಹೋದ ಕಾರಣ ಓದನ್ನೇ ನಿಲ್ಲಿಸಬೇಕಾಗಿ ಬಂತು. ಈ ನಡುವೆ ಇನ್ನಿಬ್ಬರು ತಮ್ಮಂದಿರು ಜನಿಸಿದ ಕಾರಣ ಮನೆಯ ಹಣಕಾಸು ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಫೇಲಾಗಿದ್ದ ಮಗನ ಬಗ್ಗೆ ಸಿಟ್ಟಿಗೆದ್ದ ಅಮ್ಮ-ಅಪ್ಪ ಕನಿಷ್ಠ ಮನೆಪಾಠವನ್ನಾದರೂ ಹೇಳಿಕೊಟ್ಟು ಒಂದಿಷ್ಟು ಸಂಪಾದನೆ ಮಾಡು ಎಂದರು. ಆದರೆ ರಾಮಾನುಜನ್ ಅವರ ಉತ್ಕೃಷ್ಟವಾದ ಮನೆಪಾಠ ಮಕ್ಕಳ ತಲೆಯೊಳಕ್ಕೇ ಹೋಗುತ್ತಿರಲಿಲ್ಲ.


ಆಸ್ಟ್ರೇಲಿಯಾದ ಬ್ರೆಟ್ ಬೌನ್ಸರ್‌ನಂತೆ ತಲೆ ಮೇಲೇ ಹೋಗುತ್ತಿತ್ತು! ಮಕ್ಕಳು ಪಾಠಕ್ಕೆ ಬರುವುದನ್ನೇ ನಿಲ್ಲಿಸಿದರು. ಆದರೇನಂತೆ, ಮನೆಪಾಠ ಹೇಳಿಕೊಡುತ್ತಿದ್ದಾಗ ದೊರೆಯುತ್ತಿದ್ದ ಬಿಡುವಿನ ವೇಳೆಯಲ್ಲಿ ಗಣಿತದ ಲೆಕ್ಕಗಳನ್ನು ಬಿಡಿಸುತ್ತಿದ್ದ ರಾಮಾನುಜನ್, ಹೊಸ ಹೊಸ ಥಿಯರಮ್ ಬರೆಯಲು ಮನೆದೇವಿಯಾದ ನಾಮಗಿರಿ ಲಕ್ಷ್ಮಿ’ಯೇ ತನಗೆ ಪ್ರೇರಣೆ ಎಂದು ಸ್ನೇಹಿತರ ಜತೆ ಹೇಳಿಕೊಳ್ಳುತ್ತಿದ್ದರು. ಇತ್ತ ಉದ್ಯೋಗವಿಲ್ಲದೆ ಹತಾಶರಾಗಿದ್ದ ರಾಮಾನುಜನ್ ಅವರ ಗಣಿತದ ದಾಹವನ್ನು ಅರಿತು ಸ್ನೇಹಿತರು, ಹಿತೈಷಿಗಳೇ ಅಷ್ಟಿಷ್ಟು ಸಹಾಯ ಮಾಡುತ್ತಿದ್ದರು. ಅಂಥ ಸಹಾಯ ಹಾಗೂ 1912ರಲ್ಲಿ ಮದ್ರಾಸ್ ಟ್ರಸ್‌ಟ್ನಲ್ಲಿ ದೊರೆತ ಗುಮಾಸ್ತನ ಹುದ್ದೆಯ ಬಲದಿಂದ ಹಲವಾರು ಥಿಯರಮ್‌ಗಳನ್ನು ಬರೆಯಲು ಸಾಧ್ಯವಾಯಿತು. ಅವುಗಳನ್ನು ಇಂಗ್ಲೆಂಡಿನಲ್ಲಿರುವ ಪರಿಣತರಿಗೆ ಕಳುಹಿಸಿ ಕೊಡು ಎಂದು ಸ್ನೇಹಿತರೇ ಒತ್ತಾಯಿಸಿದರು. ಆದರೆ ಮೂರು ಬಾರಿ ಕಳುಹಿಸಿದರೂ ಯಾವ ಉತ್ತರವೂ ಬರಲಿಲ್ಲ. ಕೊನೆಗೆ 1913, ಜನವರಿ 16ರಂದು ಜಿ.ಎಚ್. ಹಾರ್ಡಿಯವರಿಗೆ ಪತ್ರ ಬರೆದರು. ಅದು ರಾಮಾನುಜನ್ ಜೀವನವನ್ನು ಮಾತ್ರವಲ್ಲ, ಗಣಿತಶಾಸ್ತ್ರದ ಇತಿಹಾಸವನ್ನೇ ಬದಲಾಯಿಸಿ ಬಿಟ್ಟತು! ಇಂಗ್ಲೆಂಡಿಗೆ ಬರುವಂತೆ ಹಾರ್ಡಿಯವರಿಂದ ಕರೆ ಬಂತು. ಆದರೆ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ರಾಮಾನುಜನ್ ಸಾಗರೋಲ್ಲಂಘನ ಮಾಡಲು ಆತನ ಅಮ್ಮ ಕೋಮಲತಮ್ಮಾಳ್ ತೀವ್ರ ವಿರೋಧ ವ್ಯಕ್ತಪಡಿಸಿದಳು. ಹಾಗಾಗಿ ತಾತ್ಕಾಲಿಕ ತಡೆ ಸೃಷ್ಟಿಯಾಯಿತು.


ಆದರೇನಂತೆ ಬೆಳಗ್ಗೆ ನಾನೊಂದು ಕನಸು ಕಂಡೆ. ಒಂದು ದೊಡ್ಡ ಕೊಠಡಿಯೊಳಗೆ ತನ್ನ ಮಗ ಕುಳಿತಿದ್ದ. ಆತನ ಸುತ್ತ ಯುರೋಪಿಯನ್ನರಿದ್ದರು. ಇದ್ದಕ್ಕಿದ್ದಂತೆಯೇ ಪ್ರತ್ಯಕ್ಷಳಾದ ನಾಮಗಿರಿ ದೇವಿ, ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಹೊರಟಿರುವ ನಿನ್ನ ಮಗನಿಗೆ ಅಡ್ಡಿಪಡಿಸಬೇಡ ಎಂದಳು’ ಎಂದ ಕೋಮಲತಮ್ಮಾಳ್ ಮಗನಿಗೆ ಅನುಮತಿ ನೀಡಿದಳು. 1914, ಏಪ್ರಿಲ್ ನಲ್ಲಿ ಬ್ರಿಟನ್ ಗೆ ಬಂದಿಳಿದ ರಾಮಾನುಜನ್, ಟ್ರಿನಿಟಿ ಕಾಲೇಜು ಸೇರಿದರು. ಯಾರ ಸಹಾಯವೂ ಇಲ್ಲದೆ ತಮಗಿಷ್ಟ ಬಂದಹಾಗೆ ಗಣಿತವನ್ನು ಕರಗತ ಮಾಡಿಕೊಂಡಿದ್ದ ರಾಮಾನುಜನ್ಗೆ ಶಾಸ್ತ್ರಬದ್ಧವಾಗಿ ಗಣಿತವನ್ನು ಕಲಿಸಲು ಹಾರ್ಡಿಯವರೇ ಮುಂದಾದರು. ಆದರೆ ನಾನು ಹೇಳಿಕೊಟ್ಟಿದ್ದಕ್ಕಿಂತ ರಾಮಾನುಜನ್ ಅವರಿಂದ ಕಲಿತಿದ್ದೇ ಹೆಚ್ಚು ಎನ್ನುತ್ತಾರೆ ಹಾರ್ಡಿ.


ಐದು ವರ್ಷಗಳ ಕಾಲ ಬ್ರಿಟನ್ನಲ್ಲಿದ್ದ ರಾಮಾನುಜನ್ ಅವರ ಜತೆ ಸೇರಿದ ಹಾರ್ಡಿ ಗಣಿತ ಶಾಸ್ತ್ರದ ಇತಿಹಾಸದಲ್ಲೇ ಅತ್ಯುತ್ತಮ ಸಂಶೋಧನಾ ಪ್ರಬಂಧಗಳನ್ನು ಬರೆದು ಜಗತ್ತಿನ ಹುಬ್ಬೇರಿಸಿದರು. ಕೇಂಬ್ರಿಡ್‌ಜ್ನಲ್ಲಿ ತನ್ನ ಕಲಿಕೆಯ ದಾಹವನ್ನು ಇಂಗಿಸಿಕೊಳ್ಳುತ್ತಾ ರಾಮಾನುಜನ್ ಅವರು ಕಂಡುಹಿಡಿದ ಗಣಿತದ ಫಲಿತಾಂಶಗಳು 21ನೇ ಶತಮಾನದಲ್ಲಿ ಕಂಪ್ಯೂಟರ್ ಸೈನ್ಸ್, ಭೌತಶಾಸ್ತ್ರ, ಕ್ಯಾನ್ಸರ್ ಸಂಶೋಧನೆ, ಪಾಲಿರ್ಮ ಕೆಮಿಸ್ಟ್ರಿಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವಲ್ಲಿ ಸಹಕಾರಿಯಾಗುತ್ತಿವೆ! ಸಾಮಾನ್ಯವಾಗಿ ವಿಜ್ಞಾನಿಗಳು ದೇವರನ್ನು ನಂಬುವುದಿಲ್ಲ ಎನ್ನುತ್ತಾರೆ.


ಆ ಮಾತಿಗೆ ಒಂದು ಉದಾಹರಣೆಯೆಂಬಂತೆ ಹಾರ್ಡಿಯವರು ಕಟ್ಟಾ ನಾಸ್ತಿಕ. ಆದರೆ ವೈರುಧ್ಯವೆಂದರೆ ರಾಮಾನುಜನ್ ಅವರು ಅಷ್ಟೇ ಕಟ್ಟಾ ದೈವಭಕ್ತ. ರಾಮಾನುಜನ್ ಹಾಗೂ ಹಾರ್ಡಿ ಸ್ನೇಹದ ಬಗ್ಗೆ ಡೆವಿಡ್ ಲೀವಿಟ್ ಬರೆದಿರುವ ದಿ ಇಂಡಿಯನ್ ಕ್ಲರ್ಕ್’ ಇಂಥ ವೈರುಧ್ಯದ ಬಗ್ಗೆಯೇ ಬೆಳಕು ಚೆಲ್ಲಲಾಗಿದೆ. ರಾಮಾನುಜನ್ ಅವರು ತಮ್ಮ ಮನೆಯವರನ್ನು ಮೆಚ್ಚಿಸುವುದಕ್ಕೋಸ್ಕರ ಆಸ್ತಿಕನಂತೆ ಸೋಗು ಹಾಕುತ್ತಾರೆ. ಅವರೊಬ್ಬ ವಿಚಾರವಾದಿ’ ಎಂದೇ ಹಾರ್ಡಿ ಹೇಳುತ್ತಿದ್ದರು. ಆದರೆ An equation has no meaning unless it expresses a thought of God’ ಎನ್ನುತ್ತಿದ್ದರು ರಾಮಾನುಜನ್. ವಿಜ್ಞಾನ ಎಂದಿಗೂ ದೇವರ ಅಸ್ತಿತ್ವವನ್ನು ನಿರಾಕರಿಸುವುದಿಲ್ಲ. ಅದು ಯಾವತ್ತೂ ಅತ್ಯುನ್ನತ ಶಕ್ತಿಯ(ಸುಪ್ರೀಂ ಪರ್ವ) ಇರುವನ್ನು ಒಪ್ಪಿಕೊಳ್ಳುತ್ತದೆ ಎಂದು ಏಂಜೆಲ್ಸ್ ಆಂಡ್ ಡೆಮೊನ್ಸ್’ನಲ್ಲಿ ಬ್ರೌನ್ ಹೇಳಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇದೇನೇ ಇರಲಿ, ಕಟ್ಟಾ ಸಸ್ಯಾಹಾರಿಯೂ ಆಗಿದ್ದ ರಾಮಾನುಜನ್ ಅವರು ಆಹಾರ ಮತ್ತು ಹವಾಮಾನ ವೈಪರಿತ್ಯದಿಂದಾಗಿ ಲಂಡನ್ನಲ್ಲಿ ಹಾಸಿಗೆ ಹಿಡಿದಿದ್ದರು. ಅವರನ್ನು ಕಾಣಲು ಬಂದ ಹಾರ್ಡಿಯವರು ತಾವು ಆಗಮಿಸಿದ ಟ್ಯಾಕ್ಸಿ ನಂಬರ್ ಬಗ್ಗೆ ಚರ್ಚಿಸಲು ಆರಂಭಿಸಿದರು. ಅದೊಂದು ಸಪ್ಪೆನಂಬರ್(1729) ಎಂದರು ಹಾರ್ಡಿ!


ಆದರೆ ಇಲ್ಲಾ, ಇಲ್ಲಾ ಹಾರ್ಡಿಅದು ತುಂಬಾ ಒಳ್ಳೆಯ ನಂಬರ್‌. ಅದರಲ್ಲಿ ಎರಡು ಕ್ಯೂಬ್ಗಳ ಒಟ್ಟು ಮೊತ್ತವನ್ನು ಎರಡು ವಿಭಿನ್ನ ವಿಧಗಳಲ್ಲಿ ವಿವರಿಸಬಹುದು. 1729=(12x12x12)+(1x1x1)ಮತ್ತು (9x9x9)+(10x10x10)’’ ಎಂದರು ರಾಮಾನುಜನ್!! ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರೂ ಅಷ್ಟು ಶೀಘ್ರವಾಗಿ, ಮತ್ತೊಬ್ಬ ಮಹಾನ್ ಹಾಗೂ ತನ್ನನ್ನು ಜಗತ್ತಿಗೆ ಪರಿಚಯಿಸಿದ ಗಣಿತಶಾಸ್ತ್ರಜ್ಞನ ಮಾತನ್ನೇ ತಪ್ಪೆಂದು ಸಾಬೀತು ಪಡಿಸುತ್ತಾರೆಂದರೆ ರಾಮಾನುಜನ್ ಅವರ ಚಿಂತನೆಯ ಮಟ್ಟ ಎಂಥದ್ದಿರಬಹುದು? ಕ್ಯಾಲ್ಕುಲೇಟರ್ ಇಲ್ಲದ ಕಾಲದಲ್ಲಿ ಅಷ್ಟು ಶೀಘ್ರವಾಗಿ ವಿವರಿಸುತ್ತಿದ್ದರೆಂದರೆ ಅವರೆಷ್ಟು ಪರಿಶ್ರಮ ಪಟ್ಟಿರಬಹುದು? ಗಣಿತದ ಬಗ್ಗೆ ಎಷ್ಟು ತಲೆಕೆಡಿಸಿಕೊಂಡಿರಬಹುದು?ಆದರೆ ಅವರು ಹುಟ್ಟಿದ ನಾಡಾದ ಭಾರತದಲ್ಲಿ ಈಗ ಎಂಥ ಪರಿಸ್ಥಿತಿ ಸೃಷ್ಟಿಯಾಗಿದೆ? ಎರಡೊಂದ್ಲಿ ಎರಡು, ಎರಡೆರಡ್ಲಿ ಅಂಥ ಈಗಿನ ಮಕ್ಕಳಿಗೆ ಬಾಯಿಪಾಠ ಮಾಡಿಸುತ್ತಾರೆ.


ಉನ್ನತ ಶಿಕ್ಷಣದ ಹಂತಕ್ಕೆ ಬಂದಾಗಲೂRote memorization ಮಾಡಲಾಗುತ್ತದೆ. ಅಂದರೆ ಸೂತ್ರಗಳನ್ನು ಬಾಯಿಪಾಠ ಮಾಡಿಕೊಂಡರಷ್ಟೇ ಪರೀಕ್ಷೆಯಲ್ಲಿ ಲೆಕ್ಕಗಳನ್ನು ಬಿಡಿಸಲು ಹಾಗೂ ಪಾಸಾಗಲು ಸಾಧ್ಯ ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ. ಖಂಡಿತ ಬಾಯಿಪಾಠ ಮಾಡಲೇಬಾರದು ಎಂದು ಹೇಳುತ್ತಿಲ್ಲ. ಆದರೆ ಸೂತ್ರದಲ್ಲಿರುವ ತರ್ಕವನ್ನು ಅರ್ಥಮಾಡಿಕೊಂಡು ಬಾಯಿಪಾಠ memorization ಮಾಡುವುದಕ್ಕೂ ಸುಮ್ಮನೆ ಬಾಯಿಪಾಠ (Rote memorization) ಮಾಡಿಕೊಂಡು ಪರೀಕ್ಷೆ ವೇಳೆ ನೆನಪಿಸಿಕೊಂಡು ಬರೆಯುವುದಕ್ಕೂ ಭಾರೀ ವ್ಯತ್ಯಾಸವಿದೆ. ಅಷ್ಟಕ್ಕೂ ಅರ್ಥಮಾಡಿಕೊಂಡು ಬಾಯಿಪಾಠ ಮಾಡಿದರಷ್ಟೇ ಚಿರಕಾಲ ನೆನಪಿನಲ್ಲಿ ಉಳಿಯಲು ಸಾಧ್ಯ.


ಇತ್ತ ತರ್ಕವನ್ನು ಹೇಳಿಕೊಡುವಂಥ ಸಾಮರ್ಥ್ಯವೂ ಹೆಚ್ಚಿನ ಮೇಷ್ಟ್ರಿಗಿಲ್ಲ! ಎರಡನ್ನ ಮೂರು ಸಲ ಕೂಡಿಸಿದರೆ (2ಸ3=6) ಆರಾಗುತ್ತದೆ- ಇಂಥ ಸರಳ ಲಾಜಿಕ್ಕನ್ನು ಸಾಮಾನ್ಯವಾಗಿ ಎಲ್ಲರೂ ಹೇಳಿಕೊಡುತ್ತಾರೆ. ಆದರೆ ಮೈನಸ್ ಡ ಮೈನಸ್ ಏಕೆ ಪ್ಲಸ್ ಆಗುತ್ತದೆ? ಮೈನಸ್ ಡ ಪಸ್ಲ್ ಏಕೆ ಮೈನಸ್ ಆಗುತ್ತದೆ ನೀವೇ ಹೇಳಿ? ಅದರ ಹಿಂದಿರುವ ಲಾಜಿಕ್ ಏನು? ಆ ಲಾಜಿಕ್ಕನ್ನು ಹೇಳಿಕೊಟ್ಟರೆ, ಅದನ್ನು ವಿದ್ಯಾರ್ಥಿಗಳು ಕಬ್ಬಿಣದ ಕಡಲೆ ಎನಿಸಿಕೊಳ್ಳುವ ಗಣಿತವೂ ಅತ್ಯಂತ ಕುತೂಹಲಕಾರಿ ಸಬ್ಜೆಕ್ಟ್ ಆಗಬಲ್ಲದು. ಹಾಗೆ ಆಸಕ್ತಿ ಹುಟ್ಟಿಸುವ ಬದಲು ನಮ್ಮ ಈಗಿನ ಶಿಕ್ಷಣದಲ್ಲಿ ಪರೀಕ್ಷೆ ಬರೆಯುವುದಕ್ಕೂ ಕ್ಯಾಲ್ಕುಲೇಟರ್ ಬಳಸಲು ಅವಕಾಶ ಕಲ್ಪಿಸಲಾಗಿದೆ ಎಂದರೆ ನಾವೆತ್ತ ಸಾಗುತ್ತಿದ್ದೇವೆ ಎಂಬುದನ್ನು ಯೋಚಿಸಿ? ಜ್ಞಾನಾರ್ಜನೆಗೆ ಬದಲಾಗಿ ಪರೀಕ್ಷೆಗೆ ಸೀಮಿತವಾಗಿರುವ ನಮ್ಮ ಕಲಿಕೆಯಿಂದಾಗಿ ಬಾಯಿಪಾಠ ಮಾಡುವ ಜಾಡ್ಯ ಅಂಟಿಕೊಂಡಿದೆ.


ಇಂಥ ತಪ್ಪನ್ನು ಸರಿಪಡಿಸಿಕೊಳ್ಳದೇ ಹೋದರೆ ಈ ದೇಶದಲ್ಲಿ ರಾಮಾನುಜನ್ ಅವರಂಥ ಮತ್ತೊಬ್ಬ ಜೀನಿಯಸ್ ಹುಟ್ಟುವುದು ಬಿಡಿ, ಒಬ್ಬ ಕೂಡ ಜನಿಸುವುದಿಲ್ಲ. ಜಗತ್ತಿಗೆ ಸೊನ್ನೆ ಕೊಟ್ಟಿದ್ದು ನಾವೇ, ಆರ್ಯಭಟ, ವರಾಹ ಮಿಹಿರ, ಭಾಸ್ಕರ ನಮ್ಮವರೇ ಅಂತ ಹಳೆಯದನ್ನೇ ಜಪ ಮಾಡಬೇಕಾಗುತ್ತದೆ. ಜಗತ್ತಿಗೆ ಸೊನ್ನೆಯನ್ನು ಕೊಟ್ಟವರು ನಾವೇ ಆಗಿದ್ದರೂ ಬಾಯಿಪಾಠ ಮಾಡುವ ಜಾಡ್ಯದಿಂದಾಗಿ ಈಗ ಜಗತ್ತಿಗೆ ನಾವು ಕೊಡುತ್ತಿರುವ ಕೊಡುಗೆಯೂ ಸೊನ್ನೆಯೇ ಆಗಿದೆ! ಈ ದೇಶ ಹೋಮಿ ಜೆ. ಭಾಭಾ, ಸಿ.ವಿ. ರಾಮನ್, ವಿಕ್ರಮ್ ಸಾರಾಭಾಯ್, ರಾಜಾರಾಮಣ್ಣ, ವಿಶ್ವೇಶ್ವರಯ್ಯ ಅವರಂಥ ಮಹಾನ್ ವ್ಯಕ್ತಿಗಳಿಗೆ ಜನ್ಮ ನೀಡಿದೆ. ಅದರಲ್ಲೂ ಸ್ವಾಮಿ ವಿವೇಕಾನಂದ ವರ್ಷ), ಶ್ರೀನಿವಾಸ ರಾಮಾನುಜನ್(32 ವರ್ಷ) ಅವರು ಬದುಕಿದ್ದು ಕೆಲವೇ ವರ್ಷಗಳಾದರೂ ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುವಂಥ ಸಾಧನೆ ಮಾಡಿ ಹೋಗಿದ್ದಾರೆ.


ಒಬ್ಬರು ನಮ್ಮ ಧರ್ಮದ ಹಿರಿಮೆಯನ್ನು ಸಾರುವ ಮೂಲಕ ಜಗತ್ತಿನ ಕಲ್ಪನೆಯನ್ನೇ ಬದಲಾಯಿಸಿದರೆ, ಮತ್ತೊಬ್ಬರು ಗಣಿತದ ತರ್ಕಕ್ಕೆ ಹೊಸ ಅರ್ಥವನ್ನೇ ಕೊಟ್ಟು ಹೋಗಿದ್ದಾರೆ. ಇನ್ನೂ ಹತ್ತು- ಹಲವು ಸಹಸ್ರಮಾನಗಳು ಬಂದರೂ, ಗಣಿತ ಇರುವವರೆಗೂ ರಾಮಾನುಜನ್ ಕೊಟ್ಟ ಸೂತ್ರಗಳನ್ನು ಪ್ರತಿಯೊಬ್ಬರೂ ಓದಿಯೇ ಓದುತ್ತಾರೆ. ಹಾಗೆ ರಾಮಾನುಜನ್ ಹೆಸರನ್ನು ನೆನಪಿಸಿಕೊಳ್ಳುವಾಗಲೆಲ್ಲ ಅವರಿಗೆ ಜನ್ಮ ನೀಡಿದ ನೆನಪಿಸಿಕೊಳ್ಳಬೇಕಾಗುತ್ತದೆ. ಅಂದಹಾಗೆ, ರಾಮಾನುಜನ್ ಜನ್ಮತಳೆದ ದಿನ ಡಿಸೆಂಬರ್ 22. ಹಾಗಾಗಿ ಅವರ ಬಗ್ಗೆ ಬರೆಯಬೇಕೆನಿಸಿತು. ಸಾಧ್ಯವಾದರೆ The man who knew infinity’’ ಪುಸ್ತಕವನ್ನೊಮ್ಮೆ ಓದಿ.


 •  0 comments  •  flag
Share on Twitter
Published on December 23, 2017 00:50

December 17, 2017

December 9, 2017

ಅಯ್ಯರ್ ಉಚ್ಛಾಟನೆ ಆಯ್ತು, ಹಾಗಾದರೆ ಗದ್ದಾರ್ ಎಂದವರು?

ಅಯ್ಯರ್ ಉಚ್ಛಾಟನೆ ಆಯ್ತು, ಹಾಗಾದರೆ ಗದ್ದಾರ್ ಎಂದವರು?




ಅಂದು ಸಾವಿನ ವ್ಯಾಪಾರಿ ಅನ್ನುವಾಗ, ಬಂದು ಟೀ ಮಾರು ಎಂದು ಹೀಗಳೆಯುವಾಗ, ಹಿಂದೂ ವಾದಿ ಎಂದು ಫತ್ವಾಾ ಹೊರಡಿಸಿದಾಗ ಎಲ್ಲಿ ಸತ್ತು ಬಿದ್ದಿತ್ತು ಈ ಶಿಸ್ತು ಉಲ್ಲಂಘನೆ, ಪಕ್ಷದ ಘನತೆ, ಸಭ್ಯತೆಯ ಮಾತುಗಳು? ಮಣಿಶಂಕರ ಅಯ್ಯರ್‌ನೆಂಬ ಹಲ್ಲಿಲ್ಲದ ಹಾವನ್ನು ಮುಲಾಜಿಲ್ಲದೆ ಕಿತ್ತು ಬಿಸಾಡಿದಾದ ಇದ್ದ ಧೈರ್ಯ ಈ ಮೊದಲಿನ ಯಾವ ಕಾಂಗ್ರೆಸಿನ ಶಿಸ್ತು ಸಮಿತಿಗೂ ಇರಲಿಲ್ಲ! ಈಗ ಏಕಾಏಕಿ ಉಂಟಾದ ಶಿಸ್ತು ಆಗೆಲ್ಲಿ ಹೋಗಿತ್ತು? ಮೊದಲೆಲ್ಲಾ ಮೋದಿಯನ್ನೂ ಅವರ ಪಕ್ಷವನ್ನೂ ಅತ್ಯಂತ ಹೀನಾಯವಾಗಿ ತೆಗಳುತ್ತಿದ್ದಾಗ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದವರು ಈಗ ಕಟು ನಿರ್ಣಯ ತೆಗೆದುಕೊಂಡರೇಕೆ? ಹಾಗಾದರೆ ಕಾಂಗ್ರೆಸಿನಲ್ಲಿರುವ ಆಂತರಿಕ ಪ್ರಜಾಪ್ರಭುತ್ವವೇನು? ವಂಶಪಾರಂಪರ್ಯವೇ ಕಾಂಗ್ರೆಸಿನಲ್ಲಿ ಅಂತಿಮವೇ? ಅದರ ಪ್ರತೀ ನಡೆಗಳೂ ಹಾಗೇ ಹೇಳುತ್ತವೆ. ಅದಕ್ಕೆ ತಾಜಾ ಉದಾಹರಣೆ ಮಣಿಶಂಕರ್ ಅಯ್ಯರ್ ಉಚ್ಛಾಟನೆ.

ಅದೊಂದು ಸಂಸತ್ ಅಧಿವೇಶನ. ಮಧ್ಯಾಹ್ನ 12 ಗಂಟೆಗೆ ಆರಂಭವಾದ ಪ್ರಧಾನಿ ಮೋದಿಯವರ ಉತ್ತರ ಸುದೀರ್ಘ 2 ಗಂಟೆಗಳ ಕಾಲ ನಡೆದು ಮೂರು ಗಂಟೆಗೆ ಮುಕ್ತಾಯವಾದಾಗ ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ನಿರ್ಜೀವ ಭಾವ ಮೂಡಿತ್ತು, ಸಾಮಾನ್ಯವಾಗಿ ಸದಾ ಸಭ್ಯತೆಯ ಗೆರೆ ದಾಟಿಯೇ ಮಾತನಾಡುವ ಮಲ್ಲಿಕಾರ್ಜುನ ಖರ್ಗೆಯವರು ಪೆಚ್ಚುಮುಖ ಹಾಕಿಕೊಳ್ಳುವಷ್ಟು ದಾಳಿ ಮಾಡಿದ್ದರು ಪ್ರಧಾನಿ ಮೋದಿ. ಮರುದಿನ ಸಂಜೆ ರಾಜ್ಯಸಭೆಯಲ್ಲಿ ಮೋದಿಯವರ ಉತ್ತರವಿತ್ತು. ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ನೋಟು ರದ್ದತಿಯ ಬಗ್ಗೆ ದೊಡ್ಡ ದೊಡ್ಡ ಮಾತನಾಡಿದ್ದರು. ಅವರನ್ನು ಎದುರಿಸಲು ಮೋದಿಯವರಿಗೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹುರುಪಿನಲ್ಲಿತ್ತು.

‘ಹೆಚ್ಚೂ ಕಡಿಮೆ ಕಳೆದ 35 ವರ್ಷಗಳಿಂದ ಭಾರತದ ಅರ್ಥವ್ಯವಸ್ಥೆ ಮತ್ತು ಆರ್ಥಿಕ ನೀತಿಗಳ ಮೇಲೆ ಡಾ.ಮನಮೋಹನ್ ಸಿಂಗ್ ಅತೀವ ಪ್ರಭಾವ ಬೀರಿದ್ದಾರೆ. ಎಷ್ಟಾದರೂ ಲಕ್ಷ ಕೋಟಿ ಹಗರಣಗಳು ಸಂಭವಿಸಲಿ, ಅವರ ಮೇಲೆ ಸಣ್ಣ ಭ್ರಷ್ಟಾಚಾರ ಹಗರಣವೂ ಇಲ್ಲ! ರೈನ್‌ಕೋಟ್ ಹಾಕಿಕೊಂಡು ಸ್ನಾನ ಮಾಡುವ ಕಲೆಯನ್ನು ಬಹುಶಃ ಡಾ.ಸಿಂಗ್ ಅವರಿಂದ ಮಾತ್ರ ಕಲಿಯಬಹುದಷ್ಟೇ!’ ಪ್ರಧಾನಿ ಮೋದಿ ಹೇಳಿದ್ದು ಇಷ್ಟೇ. ಎರಡೇ ನಿಮಿಷದಲ್ಲಿ ಸಭಾತ್ಯಾಗ ಮಾಡಿ ಪಲಾಯನ ಮಾಡಿತು ಕಾಂಗ್ರೆಸ್. ಎರಡೇ ನಿಮಿಷದಲ್ಲಿ ಇಂಥ ಹೊಡೆತ ಬಿದ್ದರೆ, ಮುಂದಿನ ಒಂದೂವರೆ ಗಂಟೆಗಳಲ್ಲಿ ಇನ್ನು ಎಂತೆಂಥಾ ಹೊಡೆತ ಬೀಳಬಹುದೋ ಎಂಬ ಭಯ ಅವರಿಗೆ ಕಾಡಿತ್ತು! ರಾಜ್ಯಸಭೆಯಿಂದ ಹೊರ ನಡೆದ ಕಾಂಗ್ರೆಸ್, ಪ್ರಧಾನಿ ಸ್ಥಾನದ ಘನತೆ, ಗೌರವ, ಸಭ್ಯತೆ, ಸಂಸ್ಕಾರಗಳ ಮಾತನಾಡಿತು!

1962ರ ಯುದ್ಧದಲ್ಲಿ ಅಕ್ಸಯ್-ಚಿನ್ ಚೀನಾ ಪಾಲಾದಾಗ, ತಪ್ಪನ್ನು ಒಪ್ಪಿಕೊಳ್ಳುವ ಬದಲು ಅಲ್ಲಿ ಹುಲ್ಲುಕಡ್ಡಿಯೂ ಹುಟ್ಟುವುದಿಲ್ಲ ಎಂದು ತಾನು ಪ್ರಧಾನಿ ಎಂಬುದನ್ನೂ ಮರೆತು ಲಜ್ಜೆಗೆಟ್ಟು ಹೇಳಿದ್ದ ನೆಹರು ಮತ್ತು 1984ರ ಸಿಖ್ ಹತ್ಯಾಕಾಂಡವನ್ನು ಒಂದು ದೊಡ್ಡ ಮರ ಉರುಳಿದಾಗ ಭೂಮಿ ಅಲುಗುವುದು ಸಹಜ ಎಂದು ಸಮರ್ಥಿಸಿಕೊಂಡಿದ್ದ ರಾಜೀವ್ ಗಾಂಧಿಯವರನ್ನು ಆದರ್ಶವಾಗಿಟ್ಟುಕೊಂಡಿರುವ ಕಾಂಗ್ರೆಸ್‌ನಿಂದ ನೀಚತನವನ್ನಲ್ಲದೆ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ? ಆದರೆ ಅವರಿಗೆಲ್ಲಾ ಇಂದು ನೀಚತನದ ಮಾತಾಡಿದ ಅಯ್ಯರ್ ಮಾತು ಅಸಹನೀಯವಾಯಿತು. ಅಯ್ಯರ್‌ನ ಮಾತು ಕೀಳುದರ್ಜೆಯದೆಂದಾಮೇಲೆ ಇವರೆಲ್ಲರ ಮಾತೂ ಕೀಳುದರ್ಜೆಯದ್ದೇ ಅಲ್ಲವೇ?
ಅಮದು ಪ್ರಧಾನಿಯ ಮಾತುಗಳನ್ನು ಕಾಂಗ್ರೆಸ್ ಕೀಳು ದರ್ಜೆಯದ್ದು ಎಂದು ಆಡಿಕೊಂಡಿತ್ತು. ರೈನ್‌ಕೋಟ್ ಹಾಕಿಕೊಂಡು ಸ್ನಾನ ಮಾಡುವ ಕಲೆಯನ್ನು ಬಹುಶಃ ಡಾ. ಸಿಂಗ್‌ರಿಂದ ಮಾತ್ರ ಕಲಿಯಬಹುದಷ್ಟೇ ಎಂಬುದನ್ನೇ ಘನತೆಗೆ ತಕ್ಕುದಲ್ಲದ ಮಾತುಗಳು ಎನ್ನುವುದಾದರೆ, 1998ರಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಮಾತನಾಡುತ್ತಾ ಪ್ರಧಾನಿ ಅಟಲ್ ಬಿಹಾರಿಯವರನ್ನು ‘ಗದ್ದಾರ್’ (ದೇಶದ್ರೋಹಿ) ಎಂದು, 2007ರಲ್ಲಿ ಮೋದಿಯವರನ್ನು ‘ಸಾವಿನ ವ್ಯಾಪಾರಿ’ ಎಂದು ಸೋನಿಯಾ ಗಾಂಧಿಯವರು ಕರೆದಾಗ ಅವು ಘನತೆವೆತ್ತ ಮಾತುಗಳಾಗಿದ್ದವೇ? ಆಗೇಕೆ ಯಾರೂ ಪಕ್ಷದಿಂದ ಉಚ್ಛಾಟನೆಯಾಗಿಲ್ಲ?

ನರೇಂದ್ರ ಮೋದಿ ಭಾರತದ ಪ್ರಧಾನಿಯಂತೂ ಆಗೋಲ್ಲ, ಎಐಸಿಸಿ ಸಭೆಯಲ್ಲಿ ಮೋದಿ ಟೀ ಮಾರಲು ಒಪ್ಪಿದರೆ ಅದಕ್ಕೆ ಅವಕಾಶ ಮಾಡಿ ಕೊಡುತ್ತೇವೆ ಎಂದು ಅಂದೇ ಮಣಿಶಂಕರ್ ಅಯ್ಯರ್ ಜರಿದಾಗಲೇ ಏಕೆ ಆತನನ್ನು ಕಾಂಗ್ರೆಸ್ ಉಚ್ಛಾಟನೆ ಮಾಡಲಿಲ್ಲ? ಮೋದಿ ಅವರು ‘ಆರೆಸ್ಸೆಸ್’ನ ಗೂಂಡಾ, ರಾಜನಾಥ್ ಸಿಂಗ್ ಅವರ ಗುಲಾಮ ಎಂದು ಬೇಣಿ ಪ್ರಸಾದ್ ವರ್ಮಾ ತುಚ್ಛ ಮಾತುಗಳನ್ನಾಡಿದಾಗ, ಮೋದಿಯವರ ವಿರುದ್ಧ ಫತ್ವಾ ಹೊರಡಿಸಿದಾಗ ಎಲ್ಲಿ ಹೋಗಿತ್ತು ಈ ಶಿಸ್ತು ಕ್ರಮ? ಕಳೆದ ಒಂದೂವರೆ ದಶಕಗಳಿಂದ ಮೋದಿ ವಿರುದ್ಧ ಅಸಹ್ಯಕರ, ಅಶ್ಲೀಲ ಮಾತುಗಳನ್ನು ಆಡುತ್ತಿದ್ದಾಗ ಕಾಂಗ್ರೆಸಿನ ಯಾವ ಸಮಿತಿಗಳಿಗೂ ಶಿಸ್ತು ಕ್ರಮ ಕೈಗೊಳ್ಳುವ ಮನಸ್ಸು ಬರಲೇ ಇಲ್ಲ. ಆದರೆ ಈಗ ಧಿಡೀರ್ ಶಿಸ್ತಿನ ನೆನಪಾಗಿಬಿಟ್ಟಿದೆ!

2002ರಿಂದಲೂ ಮೋದಿ ಸತತ 15 ವರ್ಷಗಳು ಎಲ್ಲ ಥರದ ಟೀಕೆ, ನಿಂದನೆ, ಬೈಗುಳ, ಅಸಭ್ಯ ಮಾತುಗಳಿಗೆ ಗುರಿಯಾಗುತ್ತಾ ಬಂದಿದ್ದಾರೆ. ಆಗೆಲ್ಲಾ ಕಾಂಗ್ರೆಸ್ ನರೇಂದ್ರ ಮೋದಿಯವರ ಸ್ಥಾನದಲ್ಲಿ ನಿಂತು ಅವರಿಗೇನನಿಸಬಹುದು ಎಂದು ಒಮ್ಮೆಯಾದರೂ ಯೋಚಿಸಲಿಲ್ಲ. ಆದರೆ ಈಗ ನೆನಪಾಯಿತೇ? ಗುಜರಾತ್ ಚುನಾವಣೆ ಅದನ್ನು ನೆನಪು ಮಾಡಿದೆ? ಅಮೆರಿಕದ ಕಪ್ಪುವರ್ಣೀಯ ಕವಯತ್ರಿ ಮಾಯಾ ಏಂಜೆಲೋ ಬರೆದ ಅವರ Still I’ll rise ಎಂಬ ಕವಿತೆಯನ್ನು ಬಹಳಷ್ಟು ಬಾರಿ ಹೇಳುತ್ತೇನೆ. ಏಕೆಂದರೆ ಅಂಥ ಸಂದರ್ಭ ಆಗಾಗ ಬರುತ್ತಿರುತ್ತದೆ.

You may write me down in history
With your bittier, twisted lies,
You may trod me in the very dirt
But still, like dust, I’ll rise.
Does my sassiness upset you?
Why are you beset with gloom?
‘Cause I walk like I’ve got oil wells
Pumping in my living room.
Just like moons and like suns,
With the certainty of tides,
Just like hopes springing high,
Still I’ll rise. Did you want to see me broken?
Bowed head and lowered eyes?
Shoulders falling down like teardrops.
Weakened by my soulful cries.
Does my haughtiness off end you?
Don’t you take it awful hard
‘Cause I laugh like I’ve got gold mines
Diggin’ in my own back yard.
You may shoot me with your words,
You may cut me with your eyes,
You may kill me with your hatefulness,
But still, like air, I’ll rise.

ಹೌದು, ಈ ಕವಿತೆಯನ್ನು ಓದಿದಾಗಲೆಲ್ಲ ಪ್ರಧಾನಿ ನರೇಂದ್ರ ಮೋದಿ ಕಣ್ಣಮುಂದೆ ಬರುತ್ತಾರೆ. ಹಾಗೆಯೇ ಮೋದಿಯವರ ಬಗ್ಗೆ ಬರೆಯಲು ಕುಳಿತಾಗಲೆಲ್ಲ ಮಾಯಾ ಏಂಜೆಲೋಳ ಈ ಕವಿತೆ ನೆನಪಾಗುತ್ತದೆ. ಆಕೆ ಬರೆದಿದ್ದು ವರ್ಣಭೇದ ನೀತಿಯ ವಿರುದ್ಧ, ಶ್ವೇತ ವರ್ಣೀಯರ ಮೇಲು-ಕೀಳೆಂಬ ಭಾವನೆಯನ್ನು ಧಿಕ್ಕರಿಸಿಯಾದರೂ ಅದರಲ್ಲಿನ ಬಹುತೇಕ ಪದ, ಪಂಕ್ತಿಗಳು ಮೋದಿಯವರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಬರೆದಂತೆ ಭಾಸವಾಗುತ್ತವೆ! ಅದರಲ್ಲೂ ಕವಿತೆಯ ಮೊದಲ ಪಲ್ಲವಿಯ ಮೊದಲೆರಡು ಸಾಲುಗಳಾದ You may write me down in history With your bitier, twisted lies ,  ಯಾರಿಗಾದರೂ ನೂರಕ್ಕೆ ನೂರರಷ್ಟು ಅನ್ವಯವಾಗುವುದೇ ಆದರೆ ಅದು ನರೇಂದ್ರ ಮೋದಿಯವರಿಗೆ ಮಾತ್ರ. ಕಳೆದ 15 ವರ್ಷಗಳಿಂದ, ಅಂದರೆ 2002ರಿಂದ ಮೋದಿಯವರ ವಿರುದ್ಧ ಮಾಡದ ಅಪವಾದ, ಆರೋಪಗಳೇ ಇಲ್ಲ. ಅವರನ್ನು ದೂಷಿಸುವಲ್ಲಿ ಬಳಸದೇ ಉಳಿದ ಕೆಟ್ಟ ಶಬ್ದಗಳೂ ಇಲ್ಲ. ಆದರೆ ಅದಕ್ಕಾಗಿ ಕಾಂಗ್ರೆಸ್ ಯಾರನ್ನೂ ಉಚ್ಛಾಟನೆ ಮಾಡಲೇ ಇಲ್ಲ!

ಕಾಂಗ್ರೆಸ್ ಹಾಗೂ ಕಾಂಗ್ರೆಸ್‌ನಿಂದ ಕುಮ್ಮಕ್ಕು ಪಡೆದಿರುವ ಮಾಧ್ಯಮದ ಬಹುದೊಡ್ಡ ವರ್ಗ ಬಹಳ ಜತನದಿಂದ ಮೋದಿ ಚಾರಿತ್ರ್ಯವಧೆ ಕೆಲಸ ಮಾಡಿಕೊಂಡು ಬರುತ್ತಿದೆ. ಇಷ್ಟಾಗಿಯೂ ಅವರ ಉದ್ದೇಶ ಈಡೇರಿಲ್ಲ. ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ಚುನಾವಣೆಯಲ್ಲೂ ಮೂರನೇ ಎರಡರಷ್ಟು ಬಹುಮತದಿಂದ ಪುನರಾಯ್ಕೆಯಾಗುತ್ತಾ ಬಂದರು. ಅಷ್ಟು ಮಾತ್ರವಲ್ಲ, 2014ರ ಲೋಕಸಭೆ ಚುನಾವಣೆಯಲ್ಲಿ ವಿರೋಧಿಗಳು ಮಾತ್ರವಲ್ಲ, ಸ್ವಪಕ್ಷೀಯ ಶತ್ರುಗಳನ್ನೂ ಮೆಟ್ಟಿ ಕಳೆದ 30 ವರ್ಷಗಳಲ್ಲಿ ಒಂದು ಪಕ್ಷ ಸ್ವಂತ ಶಕ್ತಿಯಿಂದ ಕೇಂದ್ರದಲ್ಲಿ ಅಧಿಕಾರ ಬಂದ ಕೀರ್ತಿಯನ್ನು ಬಿಜೆಪಿಗೆ ತಂದುಕೊಟ್ಟು ಪ್ರಧಾನಿಯಾದರು! ಇಷ್ಟಾಗಿಯೂ ಮಾಧ್ಯಮಗಳು ಹಾಗೂ ವಿರೋಧಿಗಳಿಂದ ಅವರ ಮೇಲಿನ ಆಕ್ರಮಣ ನಿಂತಿಲ್ಲ.

2012ರ ಗುಜರಾತ್ ಚುನಾವಣೆಗೆ ಮುನ್ನಾಾ ಸನ್ನಿವೇಶಕ್ಕೆ ಸ್ವಲ್ಪ ಹೋಗೋಣ. ಡಿಸೆಂಬರ್‌ನಲ್ಲಿ ಗುಜರಾತ್ ವಿಧಾನಸಭೆ ಚುನಾವಣೆಯಿದ್ದು, 182 ಸದಸ್ಯ ಸಂಖ್ಯೆಯ ಸದನದಲ್ಲಿ ಮೋದಿ ಮತ್ತೆ ಬಹುಮತ ಪಡೆಯುವುದು ನೂರಕ್ಕೆ ನೂರರಷ್ಟು ಖಚಿತವಾಗಿತ್ತು. ಬಹುಮತಕ್ಕೆ 92 ಸೀಟುಗಳನ್ನು ಗೆದ್ದರೆ ಸಾಕು. ಆದರೆ 100ಕ್ಕೂ ಕಡಿಮೆ ಸ್ಥಾನಗಳು ಬಂದರೆ ಅದನ್ನು ಮೋದಿ ಪರಾಜಯ ಎಂದೇ ಬಿಂಬಿಸಲು ಯೋಚಿಸಿದರು. ಆ ಕಾರಣಕ್ಕಾಗಿಯೇ ಯಾವ ಮಟ್ಟಕ್ಕಾದರೂ ಇಳಿದು ಬಿಜೆಪಿ ಬಲಾಬಲವನ್ನು 100ಕ್ಕೂ ಕಡಿಮೆಗೊಳಿಸಲು ಕಾಂಗ್ರೆಸ್ ಹವಣಿಸಿತು. ಅದೇ ಸಂದರ್ಭದಲ್ಲಿ ‘ದಿ ಸಂಡೇ ಗಾರ್ಡಿಯನ್’ನಲ್ಲಿ ಮಾಧವ ನಳಪತ್ ಬರೆದ Congress plans sleaze campaign against Modi ಟೈಮ್ಸ್‌ ಬ್ಲಾಗ್‌ನಲ್ಲಿ ಮಿನಾಝ್ ಮರ್ಚೆಂಟ್ ಬರೆದ Target Modi ಹಾಗೂ ‘ದಿ ಇಂಟರ್ ನ್ಯಾಷನಲ್ ಹೆರಾಲ್ಡ್‌ ಟ್ರಿಬ್ಯೂನ್’ನ ಭಾರತೀಯ ಆವೃತ್ತಿಯಲ್ಲಿ ಆಕಾರ್ ಪಟೇಲ್ ಬರೆದ Spent guns target Modi ಲೇಖನಗಳನ್ನು ಇಂದಿಗೂ ಓದಿದರೆ ಮೋದಿಯವರನ್ನು ಹಣಿಯಲು ಕಾಂಗ್ರೆಸ್ ಎಂತೆಂಥಾ ಹೀನ ಹಾದಿ ಹಿಡಿದಿತ್ತು ಎಂಬುದು ಗೊತ್ತಾಗುತ್ತದೆ.

ಆ ಪರಂಪರೆಯನ್ನು ಮಣಿಶಂಕರ್ ಅಯ್ಯರ್ ಈ ಚುನಾವಣೆಯಲ್ಲಿ ಮುಂದುವರಿಸಿದ್ದ. ಆದರೆ ಕುಟುಂಬ ರಾಜಕಾರಣ ಮತ್ತೊಂದು ಯೋಚಿಸಿತು. ಅಯ್ಯರ್ ಉಚ್ಛಾಟನೆಗೊಂಡ. ಕಾಂಗ್ರೆಸ್ ಇತಿಹಾಸವನ್ನು ಅವಲೋಕಿಸಿದರೆ ಉಚ್ಛಾಟನೆಗೊಳ್ಳಬೇಕಾದವರ ಸಾಲೆಷ್ಟು ಉದ್ದವಿದೆ ಎನಿಸದೇ ಇರದು.  2014ರಲ್ಲಿ ಮೋದಿಯವರು ಪ್ರಧಾನಿಯಾಗಿದ್ದನ್ನು ಸಹಿಸಿಕೊಳ್ಳಲಾಗದ ಮಾಧ್ಯಮಗಳು ಮೊದಲು ಇನ್‌ಲರೆನ್ಸ್‌‌ನ ವರಾತ ತೆಗೆದವು. ಬಳಿಕ ರೋಹಿತ್ ವೇಮುಲ, ಅದಾದ ನಂತರ ಕನ್ಹಯ್ಯ ಕುಮಾರನೆಂಬ ಸೋಮಾರಿಯನ್ನು ಹೀರೋನಂತೆ ಬಿಂಬಿಸಿದವು. ಕೊನೆಗೆ ಹಾರ್ದಿಕ್ ಪಟೇಲ್, ಕೇಜ್ರಿವಾಲ್. ಎಲ್ಲಾ ಸಾಕಾಗಿ ಸಭ್ಯತೆ, ಘನತೆಯ ಪ್ರಶ್ನೆಗಳನ್ನೆತ್ತಿಕೊಂಡು ಕುಟುಕಲು ಪ್ರಯತ್ನಿಸುತ್ತಿವೆ. ಆದರೆ ಮೋದಿ ಜಗ್ಗುವ ವ್ಯಕ್ತಿಯಲ್ಲ.

ಸಾಮಾನ್ಯವಾಗಿ ಎಲ್ಲ ಯಶಸ್ವಿ ರಾಜಕಾರಣಿಗಳ ಹಿಂದೆ ಒಂದು ಚಾಣಾಕ್ಷ ಮಿದುಳು ಅಥವಾ ಒಳ್ಳೆಯ ಸಲಹೆಗಾರರು ಇರುತ್ತಾರೆ. ಮಹಾರಾಜ ಚಂದ್ರಗುಪ್ತನ ಹಿಂದೆ ಚಾಣಕ್ಯ, ಹಕ್ಕ-ಬುಕ್ಕರ ಹಿಂದೆ ಯತಿಶ್ರೇಷ್ಠ ವಿದ್ಯಾರಣ್ಯರು, ಶಿವಾಜಿ ಹಿಂದೆ ಸಮರ್ಥ ರಾಮದಾಸರು, ವಿವೇಕಾನಂದರ ಹಿಂದೆ ರಾಮಕೃಷ್ಣ ಪರಮಹಂಸರು, ನೆಹರು ಹಿಂದೆ ಗಾಂಧಿ ಇದ್ದಂತೆ. ಈಗಿನ ರಾಜಕಾರಣಿಗಳನ್ನು ತೆಗೆದುಕೊಂಡರೂ ಮಾಯಾವತಿ ಹಿಂದೆ ಸತೀಶ್ಚಂದ್ರ ಮಿಶ್ರಾ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಿಂದೆ ಪ್ಯಾರಿಮೋಹನ್ ಮಹಾಪಾತ್ರ ಇದ್ದಾರೆ. ಮುಲಾಯಂ ಸಿಂಗ್ ಹಿಂದೆ ಜ್ಞಾನೇಶ್ವರ್ ಮಿಶ್ರಾ, ತದನಂತರ ಅಮರ್‌ಸಿಂಗ್ ಇದ್ದರು. ಎನ್.ಟಿ. ರಾಮ್‌ರಾವ್ ಹಾಗೂ ಚಂದ್ರಬಾಬು ನಾಯ್ಡು ಹಿಂದೆ ರಾಮೋಜಿರಾವ್ ತಲೆ ಕೆಲಸ ಮಾಡುತ್ತಿದ್ದರೆ, ಕರುಣಾನಿಧಿ ಕೂಡ ಎಸ್. ಗುಹನ್ ಹಾಗೂ ಪ್ರೊ. ನಾಗನಾಥನ್ ಅವರನ್ನು ನೆಚ್ಚಿಕೊಂಡಿದ್ದರು.

ಲಾಲು ಪ್ರಸಾದ್ ಯಾದವ್ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಅವರ ಬೆನ್ನಹಿಂದೆ ಇದ್ದವರು ಹಾಗೂ ನಿಷ್ಠೆ ಬದಲಿಸಿ ನಿತೀಶ್ ಕುಮಾರ್ ಹಿಂದೆ ಈಗ ಇರುವುದು ಶಿವಾನಂದ್ ತಿವಾರಿ. ಜಯಲಲಿತಾ ಹಿಂದೆ ಚೋ. ರಾಮಸ್ವಾಮಿ, ಅಟಲ್ ಬಿಹಾರಿ ವಾಜಪೇಯಿಯವರ ಹಿಂದೆ ಬ್ರಜೇಶ್ ಮಿಶ್ರಾ. ಈ ನಾಯಕರು ತಮ್ಮ ಚಾಣಕ್ಯರನ್ನು ಕೇಳದೇ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಅವರ ಒಂದೊಂದು ನಡೆಯ ಹಿಂದೆಯೂ ಈ ಚಾಣಕ್ಯರ ತಲೆ ಕೆಲಸ ಮಾಡಿರುತ್ತದೆ. ಹಾಗೆಯೇ ಮಣಿಶಂಕರನ ಹಿಂದಿನ ಟೀಕೆಗಳ ಹಿಂದೆ ಇದ್ದವರು ಇದೇ ಕಾಂಗ್ರೆಸಿನ ದೊಡ್ಡ ತಲೆಗಳು!

ಆದರೆ ಚಾಣಕ್ಯ-ಚಂದ್ರಗುಪ್ತ ಒಬ್ಬನೇ ವ್ಯಕ್ತಿಯಲ್ಲಿದ್ದರೆ ಆತ ನರೇಂದ್ರ ಮೋದಿಯಾಗುತ್ತಾನೆ! ಹಾಗಾಗಿಯೇ ನೀವು ಘನತೆಯ ಗೆರೆ ದಾಟಿದರೆ, ಅದಕ್ಕೆ ದೊರೆಯುವ ಪ್ರತಿಕ್ರಿಯೆಯನ್ನೂ ಕೇಳಿಸಿಕೊಳ್ಳುವ ಧೈರ್ಯ ನಿಮಗಿರಬೇಕಾಗುತ್ತದೆ. ಮೋದಿಯವರಿಗೆ ಅದಿದೆ. ಇದುವರೆಗಿನ ಟೀಕೆಗಳೇ ಅವರನ್ನು ಬೆಳೆಸಿತು. ಕಾಂಗ್ರೆಸಿಗೆ ಅದು ತಡವಾಗಿ ಅರಿವಾಗಿದೆಯೇನೋ ಎನಿಸುತ್ತಿದೆ. ಆದರೆ ಒಂದಂತೂ ಸತ್ಯ. ನೀಚ ಹೇಳಿಕೆ ನೀಡಿದ ಮಣಿಶಂಕರ್ ಅಯ್ಯರ್‌ನನ್ನು ಉಚ್ಛಾಟಿಸಿದರೂ ಕಾಂಗ್ರೆಸ್ ಶುದ್ಧವಾಗುವುದಿಲ್ಲ. ಎಂದೂ ತೊಳೆದುಹಾಕಲಾರದ ಮಾತುಗಳನ್ನು ಕಾಂಗ್ರೆಸ್ ಮೋದಿ ವಿರುದ್ಧ ಆಡಿದೆ. ಮೋದಿ ಗೆಲ್ಲುತ್ತಾ ಹೋದಂತೆ ಆ ನೆನಪುಗಳು ಹಸಿರಾಗಿರುತ್ತವೆ.

 •  0 comments  •  flag
Share on Twitter
Published on December 09, 2017 00:34

December 8, 2017

December 2, 2017

ಯುಪಿ ಸ್ಥಳೀಯ ಸಂಸ್ಥೆಯಲ್ಲಿ ಬಿದ್ದ ಮತಗಳಲ್ಲಿ ಭಕ್ತಿಯಿತ್ತು, ಪ್ರೀತಿಯಿತ್ತು, ಸಮರ್ಪಣೆಯೂ ಇತ್ತು. ಹಾಗಾಗಿ ಫಲಿತಾಂಶ ಹಾಗಿತ್ತು

ಯುಪಿ ಸ್ಥಳೀಯ ಸಂಸ್ಥೆಯಲ್ಲಿ ಬಿದ್ದ ಮತಗಳಲ್ಲಿ ಭಕ್ತಿಯಿತ್ತು, ಪ್ರೀತಿಯಿತ್ತು, ಸಮರ್ಪಣೆಯೂ ಇತ್ತು. ಹಾಗಾಗಿ ಫಲಿತಾಂಶ ಹಾಗಿತ್ತು


ದೇಶದಲ್ಲಿ ನರೇಂದ್ರ ಮೋದಿಯವರ ಹವಾ ಮುಗಿದಿದೆ. ಈಗೇನಿದ್ದರೂ ಕಾಂಗ್ರೆಸಿನದ್ದೇ ದಿನ ಎಂದು ಮೊನ್ನೆ ತಾನೇ ನಮ್ಮ ಮುಖ್ಯಮಂತ್ರಿಗಳು ಮಾತನ್ನಾಡಿದ್ದರು. ವಿಚಿತ್ರ ಎಂದರೆ ಕಾಂಗ್ರೆಸಿಗರು ಯಾವ ಸಮಯದಲ್ಲೂ ಮೋದಿ ಹವಾ ಇತ್ತು ಎಂದು ಒಪ್ಪಿಕೊಂಡಿರಲಿಲ್ಲ. ಆದರೆ ಸಿದ್ದರಾಮಯ್ಯನವರ ಮಾತಿನಂತೆ ಮೊದಲು ಹವಾ ಇತ್ತು. ಈಗ ಅದನ್ನು ಪ್ರಮಾಣೀಕರಿಸಬೇಕಾದ ಪ್ರಮೇಯವೇ ಇಲ್ಲ. ಏಕೆಂದರೆ ಮೊದಲೂ ಇತ್ತು. ಈಗಲೂ ಇದೆ ಮತ್ತು ಮುಂದೂ ಇರಲಿದೆ ಎಂಬುದು ಸಿದ್ಧವಾಗಿದೆ. ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆಗಳ ಫಲಿತಾಂಶವೇ ಅದನ್ನು ಹೇಳುತ್ತಿವೆ. ಕಳೆದ ಲೋಕಸಭೆ ಮತ್ತು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳನ್ನು ಬಿಜೆಪಿ ಆಕಸ್ಮಿಕವಾಗಿ ಗೆದ್ದಿತ್ತು ಎನ್ನುತ್ತಿದ್ದವರ ವಾದಗಳೆಲ್ಲವೂ ಈಗ ಬುಡಮೇಲಾಗಿದೆ. ಅದರ ಅಸಲಿ ಕಾರಣಗಳನ್ನು ಹೇಳಬೇಕೆಂದರೆ ಈಗ ಬಿಜೆಪಿಯ ಖದರು ಮತ್ತಷ್ಟು ಹೆಚ್ಚಾಗಿದೆ.


ಮೊದಲೆಲ್ಲಾ ಮೋದಿ-ಶಾ ಮೋಡಿ ಎನ್ನುತ್ತಿದ್ದ ವಿಶ್ಲೇಷಕರು ಈಗ ಅವರ ಜತೆಗೆ ಯೋಗಿ ಹೆಸರನ್ನೂ ತರುತ್ತಿದ್ದಾರೆ. ಈ ಫಲಿತಾಂಶದ ಮತ್ತೊಂದು ವಿಶೇಷವೆಂದರೆ ಕಾಂಗ್ರೆಸಿನ ಯುವರಾಜನೆಂದೇ ಬಿಂಬಿಸಲ್ಪಡುವ ರಾಹುಲ್ ಗಾಂಧಿ ಕ್ಷೇತ್ರದಲ್ಲೇ ಕಾಂಗ್ರೆಸ್ ಮಕಾಡೆ ಮಲಗಿದೆ. ಅಂಥಲ್ಲಿ ಯೋಗಿ ಮಹಾತ್ಮೆಯನ್ನು ಹೇಳದಿದ್ದರೆ ಹೇಗೆ? ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯವನ್ನು ಬದಲಿಸಿಕೊಳ್ಳಲು ಇದು ಸಕಾಲ. ಮೋದಿಯಷ್ಟೇ ಅಲ್ಲ ಯೋಗಿ ಫಳವೂ, ಹವಾವೂ ದೇಶಾದ್ಯಂತ ಇದೆ. ಮುಂದೂ ಇರಲಿದೆ. ಆಗ ನೀವೇ ನೋಡುವಿರಂತೆ! ಅಂಥ ಹವಾ ಯಾಕಾಗಿ ಸೃಷ್ಟಿಯಾಯಿತು. ದೇಶವಾಸಿಗಳು ಮತ್ತಾರಿಗೂ ಇಲ್ಲದಂಥ ಭಾವನೆಯನ್ನು ಇವರಿಬ್ಬರ ಮೇಲೆ ಇಟ್ಟಿದ್ದೇಕೆ? ಉಳಿದವರಿಗಿಂತ ಇವರಿಬ್ಬರಲ್ಲಿರುವ ಶಕ್ತಿಯಾದರೂ ಏನು?


ಮೊದಲೆಲ್ಲ ಶಾಲೆ, ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳನ್ನು ಮುಂದೆ ಏನಾಗಬೇಕು ಅಂದುಕೊಂಡಿದ್ದೀಯಾ ಎಂದರೆ, ಐಎಎಸ್, ಐಪಿಎಸ್, ಡಾಕ್ಟರ್, ಎಂಜಿನಿಯರ್ ಎನ್ನುತ್ತಿದ್ದರು. ಬರಬರುತ್ತಾ ಸಾಫ್ಟ್ ವೇರ್ ಕ್ಷೇತ್ರ ಉಚ್ಛ್ರಾಯ ಸ್ಥಿತಿಗೆ ತಲುಪಿದಾಗ, ಎಲ್ಲರ ಬಾಯಲ್ಲೂ ನಾನೂ ಸಾಪ್ಟವೇರ್ ಎಂಜಿನಿಯರ್ ಆಗಬೇಕು ಎಂಬ ಮಾತು ಬರಲಾರಂಭಿಸಿತು. ಅದರಲ್ಲೂ ಹೆಗಲಿಗೆ ಒಂದು ಲ್ಯಾಪ್‌ಟಾಪ್ ಬ್ಯಾಗನ್ನು ಸಿಕ್ಕಿಸಿಕೊಂಡು ವಾಹನ ಏರಿದರಂತೂ ಜನ ಒಮ್ಮೆ ಮೆಚ್ಚುಗೆಯಿಂದ, ಬುದ್ಧಿವಂಥ ಎಂಬ ಭಾವನೆಯಿಂದ ನೋಡುವಂತಾಯಿತು. ಈಗಂತೂ ಇವೆಲ್ಲ ಬಿಟ್ಟು ನಮ್ಮ ಯುವ ಜನಾಂಗ ಸ್ವಂತ ಕಂಪನಿ ಮಾಡಿ ಸಿಇಓ ಆಗಬೇಕು ಎಂದು ಬಯಸುತ್ತದೆ. ಆದರೆ ಯಾರೊಬ್ಬರೂ ನಾನು ರಾಜಕಾರಣಿಯಾಗಬೇಕು ಎಂದು ಹೆಚ್ಚಾಗಿ ಹೇಳುವುದಿಲ್ಲ!


ನಮ್ಮ ಭ್ರಷ್ಟ ರಾಜಕಾರಣಿಗಳನ್ನು ಬಿಟ್ಟು, ಯಾವ ಅಪ್ಪ-ಅಮ್ಮನನ್ನು ಕೇಳಿದರೂ ರಾಜಕಾರಣಿಯಾಗು ಅಂತ ಸುತಾರಾಂ ತಮ್ಮ ಮಕ್ಕಳಿಗೆ ಹೇಳುವುದಿಲ್ಲ. ಏಕೆ? ಅಚ್ಚೇ ದಿನ್ ಆಯೇಗಾ ಅಂತ ಚುನಾವಣೆಯುದ್ದಕ್ಕೂ ಪ್ರಧಾನಿ ಮೋದೀಜಿ ಹೇಳಿದ್ದರು. ಖಂಡಿತ ಅಂತಹ ಒಳ್ಳೆಯ ದಿನಗಳು ಈಗ ಬಂದಿವೆ. ಒಳ್ಳೆಯ ದಿನಗಳು ಬಂದರಷ್ಟೇ ಸಾಲದು, ಒಳ್ಳೆಯವರಿಗೆ ಒಳ್ಳೆಯ ಕಾಲ ಬರಬೇಕು, ಒಳ್ಳೆಯವರು ರಾಜಕಾರಣಕ್ಕೆ ಬರಬೇಕು ಎಂದು ನೋಟು ರದ್ದತಿಯನ್ನೂ ಮಾಡಿ ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿದರು. ಆದರೂ ಜನರಲ್ಲಿ ಮಾತ್ರ, ಒಳ್ಳೆಯವರಿಗೆ ರಾಜಕೀಯದಲ್ಲಿ ಸ್ಥಳವಿಲ್ಲ, ಸ್ಥಾನಮಾನ ಸಿಗೋಲ್ಲ ಎಂಬ ಭಾವನೆ ನೆಲೆಗೊಂಡಿದೆ. ಇಷ್ಟಕ್ಕೂ ಇವತ್ತಿನ ರಾಜಕೀಯ, ಟಿಕೆಟ್ ಹಂಚಿಕೆ ಯಾವ ರೀತಿ ನಡೆಯುತ್ತಿದೆ ನೀವೇ ಹೇಳಿ? ಚುನಾವಣೆ ಸಮೀಪಿಸುತ್ತಿದೆ ಎಂದ ಕೂಡಲೇ ಯಾವುದೇ ಪಕ್ಷದ ಉನ್ನತ ನಾಯಕರ ಹಿಂದೆ ತಿರುಗುವ ಚೇಲಾ ಪಡೆ ದಿನೇ ದಿನೆ ದೊಡ್ಡದಾಗುತ್ತಾ ಹೋಗುತ್ತದೆ.


ಅಧಿಕಾರಕ್ಕೆ ಬರುವ ಪಕ್ಷವೆಂದರಂತೂ ಗದ್ದುಗೆ ಏರುವ ಮೊದಲೇ ನಾಯಕರ ಕಾರಿನ ಹಿಂದೆ ಮುಂದೆ ಉದ್ದದ ಕಾನ್ವೋಯ್ ಸೃಷ್ಟಿಯಾಗಿ ಬಿಡುತ್ತದೆ. ಯಾರಾದರೂ ನಾಯಕರ ಹಿಂದೆ ಹೋದರಷ್ಟೇ ಟಿಕೆಟ್ಟು, ರಾಜಕೀಯ ಭವಿಷ್ಯ ಎಂಬ ಭಾವನೆ ನೆಲೆಗೊಂಡಿದೆ. ಇನ್ನು ಚುನಾವಣೆ ಬಂತೆಂದರೆ ರಿಯಲ್ ಎಸ್ಟೇಟೋ ಅಥವಾ ಇನ್ನಾವುದೋ ದಂಧೆ ಮಾಡಿಕೊಂಡಿದ್ದವರು ನನಗೆ ಟಿಕೆಟ್ ಕೊಟ್ಟರೆ 25 ಕೋಟಿ ಖರ್ಚು ಮಾಡುತ್ತೇನೆ, ಪಕ್ಷಕ್ಕೂ ಇಷ್ಟು ಕೊಡುತ್ತೇನೆ, ಟಿಕೆಟ್ ಕೊಡಿಸಿದ್ದಕ್ಕೆ ನಿಮಗೂ ಇಷ್ಟು ಕೊಡುತ್ತೇನೆ ಎನ್ನುತ್ತಾರೆ. ನಮ್ಮ ನಾಯಕರೂ ಅಷ್ಟೆ. ಹತ್ತಾರು ವರ್ಷ ಸಂಘಟನೆಗೆ ದುಡಿದವನನ್ನು ಬಿಟ್ಟು ಯಾರು ದುಡ್ಡು ಖರ್ಚು ಮಾಡುತ್ತೇನೆ ಎಂದು ಬರುತ್ತಾರೋ ಅವರಿಗೇ ಮಣೆ ಹಾಕಲು ಮುಂದಾಗುತ್ತಾರೆ. ಟಿಕೆಟ್ ತೆಗೆದುಕೊಂಡು, ಹಣ ಸುರಿದು ಗೆದ್ದ ಮೇಲೆ ಮಂತ್ರಿಯಾಗುವ ಉಮೇದು ಶುರುವಾಗುತ್ತದೆ. ಆಗಲೂ ಪೇಮೆಂಟ್ ಮೇಲೆ ಕೆಲವರು ಸಚಿವ ಸ್ಥಾನ ಪಡೆದುಕೊಂಡು ಬಿಡುತ್ತಾರೆ. ಇನ್ನು ಕೆಲವರಂತೂ ಕೋಟಿ ಕೋಟಿ ಲೂಟಿ ಮಾಡಿದರೂ ಮುಖ್ಯಮಂತ್ರಿಯಾಗುವ ಕನಸ್ಸು ಕಾಣುತ್ತಾರೆ. ಮತ್ತೆ ಕೆಲವರು ದಾಢಸಿತನದ, ಲವಲೇಶವೂ ಇಲ್ಲದಿದ್ದರೂ ಎಲ್ಲರನ್ನೂ ಮೆಚ್ಚಿಸುವಂತೆ, ಬೆಣ್ಣೆಯಿಂದ ಕೂದಲು ತೆಗೆದಂತೆ ಮಾತನಾಡುವ ಮೂಲಕ, ಹೊಂದಾಣಿಕೆ ರಾಜಕಾರಣದ ಮೂಲಕ, ಎಲ್ಲೂ ವಿವಾದಕ್ಕೆ ಎಡೆಯಾಗದಂತೆ ಎಚ್ಚರಿಕೆ ವಹಿಸುವ ಮೂಲಕ ಎಲ್ಲರ ಬಾಯಲ್ಲೂ ತಾನೇ ಸಕಲಗುಣ ಸಂಪನ್ನ ಎಂದನಿಸಿಕೊಂಡು ಮುಖ್ಯಮಂತ್ರಿಯಾಗಬೇಕೆಂದು ತಯಾರಿ ನಡೆಸುತ್ತಿರುತ್ತಾರೆ.


ಇಂತಹ ಪರಿಸ್ಥಿತಿಯಲ್ಲಿ, ಇಂಥ ತೋರಿಕೆ ರಾಜಕಾರಣದಲ್ಲಿ ಒಂದು ಪಕ್ಷಕ್ಕೆ, ಸಿದ್ಧಾಂತಕ್ಕೆ ಇಟ್ಟುಕೊಂಡಿರುವ ಅಪ್ರತಿಮ ನಿಷ್ಠೆ, ಬದ್ಧತೆ, ಶುದ್ಧಹಸ್ತತೆ, ಪರಿಶ್ರಮದಿಂದ ಮುಖ್ಯಮಂತ್ರಿಯಾಗುವ ಕನಸ್ಸು ಕಾಣುವುದಕ್ಕಾದರೂ ಆಗುತ್ತದೆಯೇ? ಅದರಲ್ಲೂ ನೀವೊಬ್ಬ ರಾಷ್ಟ್ರವಾದಿಯಾಗಿದ್ದರೆ, ಹಿಂದೂಗಳ ಮೇಲೆ ನಡೆಯುವ ಆಕ್ರಮಣಕ್ಕೆ ಪ್ರತಿಯಾಗಿ ಅದೇ ಭಾಷೆಯಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ಹೇಳಿಕೆ ಕೊಟ್ಟ ಹಿನ್ನೆಲೆ ಇದ್ದರಂತೂ ನಿಮ್ಮ ರಾಜಕೀಯ ಭವಿಷ್ಯ ಕ್ಷೇತ್ರ ಗೆಲ್ಲುವುದಕ್ಕೆ ಮಾತ್ರ ಸೀಮಿತವಾಗಿ ಬಿಡುತ್ತದೆ. ನಿಮ್ಮ ನೇರವಂತಿಕೆ, ನಿಷ್ಠುರ ಮಾತುಗಳು, ಹಿಂದುತ್ವಕ್ಕೆ ಇಟ್ಟುಕೊಂಡಿರುವ ಬದ್ಧತೆ ಹೊರಗಿನವರನ್ನು ಬಿಡಿ, ಪಕ್ಷದೊಳಗೇ ಇರುವವರಿಗೂ ಅಪಥ್ಯವಾಗಿ ಬಿಡುತ್ತವೆ. ಮಾಧ್ಯಮಗಳ ದೃಷ್ಟಿಯಲ್ಲಂತೂ ನೀವು ಖಳನಾಯಕನೇ.


ಇನ್ನು ಮೊದಲನೇ ಸಲ ಸಂಸದರಾದವರೇ ಮಂತ್ರಿಯಾಗಿದ್ದರೂ ಐದು ಸಲ ಸತತವಾಗಿ, ಒಂದಕ್ಕಿಂತ ಮತ್ತೊಂದು ಚುನಾವಣೆಯಲ್ಲಿ ಲಕ್ಷ ಲಕ್ಷ ಮತ ಹೆಚ್ಚು ಅಂತರದಿಂದ ಗೆದ್ದರೂ ಕೇಂದ್ರ ಮಂತ್ರಿಯಾಗುವುದಕ್ಕೇ ಸಾಧ್ಯವಾಗದ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾಗುತ್ತಾರೆ ಅಂತ ಯಾರು ತಾನೇ ಊಹಿಸಿದ್ದರು? ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಿಯುಕ್ತಿ ಮಾಡಿದ ನಂತರ ಒಬ್ಬೊಬ್ಬ ಪತ್ರಕರ್ತ ಮಹಾಶಯರೂ ಕೊಟ್ಟ ಹೇಳಿಕೆಗಳನ್ನು, ಮಾಡಿದ ಟ್ವೀಟ್‌ಗಳನ್ನು ನೋಡಿದರೆ ಇಷ್ಟೊಂದು ದ್ವೇಷಿಸುವ ಮಾಧ್ಯಮಗಳಿರುವಾಗ ಒಬ್ಬ ಅಪ್ಪಟ ರಾಷ್ಟ್ರಭಕ್ತ, ಶುದ್ಧ ಸಂಸದ ಮುಖ್ಯಮಂತ್ರಿಯಾಗುವುದೆಂದರೆ ಸಾಮಾನ್ಯ ಮಾತೇ?


ಬಹುಶಃ 12 ವರ್ಷಗಳ ಕಾಲ ಮಾಧ್ಯಮಗಳ ಸತತ ದ್ವೇಷದ ಜ್ವಾಲೆಯಲ್ಲಿ ಬೆಂದರೂ ಅರಳಿದ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಕಾಂಗ್ರೆಸ್ಸಿನ ದ್ವೇಷಕ್ಕೆ ಬಲಿಯಾಗಿ ಜೈಲಿಗೆ ಹೋಗಿ ಬಂದ ಅಮಿತ್ ಶಾ ಅವರಿಗೆ ಮಾತ್ರ ಯೋಗಿ ಆದಿತ್ಯನಾಥರ ನೋವು, ಯೋಗ್ಯತೆ, ಬದ್ಧತೆ ಗೊತ್ತಿತ್ತು. ಹಾಗಾಗಿ ಮುಖ್ಯಮಂತ್ರಿ ಮಾಡಿದರು. ಬಹುಶಃ ಬಿಜೆಪಿಯ ಒಬ್ಬ ನಿಷ್ಠಾವಂತ ಕಾರ್ಯಕರ್ತನಿಗೆ ಮೋದಿಯವರು ಪ್ರಧಾನಿಯಾದ ಕ್ಷಣದ ನಂತರ ಅತಿ ಹೆಚ್ಚು ಖುಷಿಕೊಟ್ಟ ಸಂದರ್ಭ ಯೋಗಿ ಮುಖ್ಯಮಂತ್ರಿಯಾಗಿದ್ದು. ಆ ಯೋಗಿಯದ್ದೇನು ಸಾಮಾನ್ಯ ಹೋರಾಟವೇ?


ಪ್ರಧಾನಿ ಮೋದಿ ಹಾಗೂ ಯೋಗಿಯವರ ಜೀವನದ ಬಗ್ಗೆ ಯೋಚನೆ ಮಾಡಿದಾಗಲೆಲ್ಲ, ಜೋಶುವಾ ಗ್ರಹಾಂ ಅವರ I survived because the fire inside burned brighter than the fire around me’ ಅಂದರೆ ನನ್ನೊಳಗಿನ ಜ್ವಾಲೆ ಸುತ್ತಲಿನ ಕಿಚ್ಚಿಗಿಂತ ಹೆಚ್ಚು ಪ್ರಜ್ವಲಿಸಿದ್ದರಿಂದ ನಾನು ಉಳಿದೆ ಎಂಬ ಮಾತು ನೆನಪಿಗೆ ಬರುತ್ತದೆ. ಈ ಸಂದರ್ಭದಲ್ಲಿ ಯೋಗಿ ಆದಿತ್ಯನಾಥರ ಜೀವನದಲ್ಲಿ ನಡೆದ ಒಂದು ಸಂಗತಿಯನ್ನು ಹೇಳಲೇಬೇಕು.


ಅದು 2007ರ ಮಾರ್ಚ್ 12ನೇ ತಾರೀಖು. ಆ ಘಟನೆ ಇನ್ನೂ ನೆನಪಿದೆ. ಲೋಕಸಭೆಯಲ್ಲಿ ಯೋಗಿ ಆದಿತ್ಯನಾಥರು ಸಣ್ಣ ಮಕ್ಕಳಂತೆ ಬಿಕ್ಕಳಿಸುತ್ತಾ ಅಳುತ್ತಿದ್ದರು. ಮುಲಾಯಂ ಸಿಂಗ್ ಯಾದವ್ ಸರಕಾರವಿದ್ದಾಗ ಕೋಮುಗಲಭೆಗಳಿಗೇನು ಕೊರತೆಯೇ ಇರಲಿಲ್ಲ. ಇನ್ನು ಉತ್ತರಪ್ರದೇಶದ ಪೂರ್ವಾಂಚಲದಲ್ಲಂತೂ ಕೋಮುಗಲಭೆಗಳೇ ಹೆಚ್ಚು. ಇದೇ ಪೂರ್ವಾಂಚಲದಲ್ಲಿ ನಡೆದ ಗಲಭೆಯಲ್ಲಿ ಅಜಿತ್ ಸಿಂಗ್ ಎಂಬುವವನೊಬ್ಬ ಮೃತಪಟ್ಟಿದ್ದ. ಅವನ ಶವ ಸಂಸ್ಕಾರ ಆಝಮ್‌ಗಢದಲ್ಲಿ ನೆರವೇರುತ್ತಿತ್ತು. ಕೊನೇ ಬಾರಿ ಅವನನ್ನು ಕಂಡು ಬರಲು ಹೋಗುತ್ತಿದ್ದಾಗ ಗುಂಪೊಂದು ಅವರ ಕಾರ್ ಮೇಲೆ ದಾಳಿ ಮಾಡಿತು. ಈ ಸಮಯದಲ್ಲಿ ಯೋಗಿ ಆದಿತ್ಯನಾಥರ ರಕ್ಷಣಾ ಪಡೆ ಮತ್ತು ಬೆಂಬಲಿಗರಿಗೆ ಬಹಳ ಪೆಟ್ಟಾಯಿತು. ಪರಿಸ್ಥಿತಿ ಕೈಮೀರುತ್ತಿದ್ದಾಗ ಯೋಗಿಜೀಯವರ ರಕ್ಷಣಾ ಪಡೆ ಗುಂಡಿನ ದಾಳಿ ಶುರು ಮಾಡಿತ್ತು.


ಆದಿತ್ಯನಾಥರ ಮೇಲೆ ದಾಳಿ ಮಾಡಲು ಬಂದ ಗುಂಪಲ್ಲಿರುವ ವ್ಯಕ್ತಿಗೆ ಗುಂಡು ತಗುಲಿ ಆತ ಮೃತಪಟ್ಟ. ಶಾಂತಿಭಂಗದ ಪ್ರಕರಣದಲ್ಲಿ 12 ತಾಸು ಜೈಲಿಗೆ ಕಳುಹಿಸಬಹುದು. ಆದರೆ ಯೋಗಿಯವರನ್ನು ಮುಲಾಯಮ್ ಸಿಂಗ್ ಸರಕಾರ 11 ದಿನಗಳ ಕಾಲ ಜೈಲಿಗಟ್ಟಿತ್ತು. ಜೈಲು ವಾಸ ಮುಗಿಸಿ ಬಂದ ನಂತರ ಮೊದಲು ಲೋಕಸಭೆಯಲ್ಲಿ ಮಾತಾಡಲು ಅವಕಾಶ ಸಿಕ್ಕಾಗ ಮಾತೇ ಹೊರಡಲಿಲ್ಲ. ಕಣ್ಣೀರು ಮಾತಾಡಿತ್ತು. ಸಮಾಜಕಲ್ಯಾಣಕ್ಕಾಗಿ ತನ್ನ ಕುಟುಂಬವನ್ನು ತೊರೆದು, ಸರ್ವವನ್ನೂ ತ್ಯಜಿಸಿದವನ ಮೇಲೆ ಶಾಂತಿಭಂಗ ಇತ್ಯಾದಿ ಪ್ರಕರಣ ದಾಖಲಿಸಿ, 11 ದಿನಗಳ ಕಾಲ ಜೈಲಿನಲ್ಲಿ ಕೊಳೆಸಿದರೆ ಹೇಗಾಗಬೇಡ ಅವರಿಗೆ?


ಇದರ ಹಿಂದಿನ ಕಾರಣ ಇಷ್ಟೇ, ಪೂರ್ವಾಂಚಲದಲ್ಲಿ ನಡೆಯುತ್ತಿರುವ ಕೋಮುಗಲಭೆಗಳ ವಿರುದ್ಧ ಯೋಗೀಜೀ ಧ್ವನಿ ಎತ್ತಿದ್ದರು. ಭಾರತ-ನೇಪಾಲ ಗಡಿ ಪ್ರದೇಶದಲ್ಲಿ ಐಎಸ್‌ಐ ಚಟುವಟಿಕೆಗಳ ವಿರುದ್ಧ ಆದಿತ್ಯನಾಥರ ಧ್ವನಿ ಪ್ರಬಲವಾಗಿತ್ತು. ಇದು ಉಗ್ರರಿಂದ ಹಿಡಿದು, ರಾಜಕಾರಣಿಗಳವರೆಗೂ ಎಲ್ಲರನ್ನೂ ನಡುಗಿಸಿತ್ತು. ಸಾದ್ವಿ ಪ್ರಗ್ಯಾ ಸಿಂಗರನ್ನೇ ಒಳಗೆ ಹಾಕಿ ರುಬ್ಬುತ್ತಿರುವಾಗ, ಆದಿತ್ಯನಾಥರು ಯಾವ ಲೆಕ್ಕ, ಜೈಲಿಗಟ್ಟಿದರು. ಇದರ ಬಗ್ಗೆ ಮಾತಾಡುತ್ತಾ ಅವರು ಅತ್ತಿದ್ದನ್ನು ನಾವು ನೋಡಿದ್ದೇವೆ.


ಆದರೆ?

ಅದೇ ಮಾರ್ಚ್ ತಿಂಗಳು, ಹತ್ತೇ ಹತ್ತು ವರ್ಷಗಳಲ್ಲಿ ಪರಿಸ್ಥಿತಿಯೇ ಉಲ್ಟಾ. ಮುಲಾಯಂ ಸಿಂಗ್ ಪುತ್ರ ಅಖಿಲೇಶರ ಸರಕಾರವನ್ನು ನೆಲಕ್ಕೆಡವಿ, 2012ರ ಮಾರ್ಚ್ 19ಕ್ಕೆ ಯೋಗಿ ಆದಿತ್ಯನಾಥರು ಎಲ್ಲರ ಮುಂದೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದು ಎಂಥವರಿಗೂ ಮೈನವಿರೇಳಿಸುವಂತಿತ್ತು. ಒಬ್ಬ ಸನ್ಯಾಸಿಯ ಹಠ ಎಂದರೆ ಇದು. ಏಕೆಂದರೆ, ಈ ಹಠಯೋಗಿಯವರ ಜನ್ಮಜಾತಕವೇ ಅಂಥದ್ದು!


ಅಜಯ್ ಸಿಂಗ್ ಬಿಶ್ತ್‌ರ ಮಗನಾದ ಆದಿತ್ಯನಾಥ ಹುಟ್ಟಿದ್ದು 1972ರ ಜೂನ್ 5ರಂದು. ಉತ್ತರಾಖಂಡದ ಪಾಂಚೂರು ಎಂಬಲ್ಲಿ. ಆದಿತ್ಯನಾಥ ಚಿಕ್ಕವರಾಗಿದ್ದಾಗ ಎಲ್ಲ ಮಕ್ಕಳಂತೆ ಆಟ, ಪಾಠ ಎಲ್ಲವೂ ಸಾಗುತ್ತಿತ್ತು. ಹುಚ್ಚುಕೋಡಿ ಮನಸ್ಸು, ಅದು ಹದಿನಾರರ ವಯಸ್ಸು ಎನ್ನುತ್ತಾರೆ. ಆದರೆ ಆದಿತ್ಯನಾಥರ ಮನಸ್ಸು ಮಾತ್ರ ಎಳೆಯುತ್ತಿದ್ದದ್ದು ಯೋಗಿಯಾಗುವುದರ ಬಗ್ಗೆ. ಆಗಲಿಂದಲೇ ಪುಸ್ತಕ, ಪ್ರವಚನಗಳ ಗೀಳು ಹತ್ತಿಸಿಕೊಂಡಿದ್ದರು. ಆಗಿನ ಕಾಲದ ಹುಡುಗರನ್ನು ಅವರ ತಂದೆ-ತಾಯಂದಿರು, ಯಾವ ಬೀದಿಯಲ್ಲಿ ಪೋಲಿ ಅಲೆಯುತ್ತಿದ್ದಾರೆ ಎಂದು ಹುಡುಕಬೇಕಿತ್ತು. ಆದರೆ ಆದಿತ್ಯನಾಥ ಮಾತ್ರ ಮನೆಯಲ್ಲಿಲ್ಲದಿದ್ದರೆ, ಇರುತ್ತಿದ್ದುದ್ದೇ ಗೋರಖನಾಥ ದೇವಾಲಯದಲ್ಲಿ. ಹಾಗಿತ್ತು ಅವರ ಬಾಲ್ಯ. ಇಲ್ಲಿಂದ ಮುಂದೇನಾಗುತ್ತದೆ ಎಂದು ಊಹಿಸುವುದು ಬಹಳ ಕಷ್ಟವೇನಲ್ಲ. ತಮ್ಮ 12ನೇ ವಯಸ್ಸಿಗೆ ಕುಟುಂಬವನ್ನು ತ್ಯಜಿಸಿ, ಗೋರಖನಾಥ ದೇವಾಲಯದ ಮುಖ್ಯ ಅರ್ಚಕರಾದ ಅವೈದ್ಯನಾಥ ಅವರ ಶಿಷ್ಯರಾದರು.


ಅವೈದ್ಯನಾಥರು ಕೇವಲ ಒಬ್ಬ ಮುಖ್ಯ ಅರ್ಚಕ ಎಂದು ನೀವು ಭಾವಿಸಿದ್ದರೆ ತಪ್ಪಾದೀತು. ಏಕೆಂದರೆ, ಅವರು ಹಿಂದೂ ಮಹಾಸಭಾದಿಂದ ಲೋಕಸಭೆ ಸದಸ್ಯರಾಗಿದ್ದರು. ಕೊನೆಗೆ ಅಲ್ಲಿಂದ ಬಿಜೆಪಿಗೆ ಸೇರಿದರು. ಇವರ ನಂತರ ಮಠಕ್ಕೆ ಉತ್ತರಾಧಿಕಾರಿಯಾದದ್ದು ಅವೈದ್ಯನಾಥರ ಶಿಷ್ಯರಾದ ದಿಗ್ವಿಜಯನಾಥರು. ಅಚ್ಚರಿಯೆಂಬಂತೆ, ದಿಗ್ವಿಜಯನಾಥರು ಸಹ ಹಿಂದೂ ಮಹಾಸಭಾದಿಂದ ಲೋಕಸಭೆಯ ಸದಸ್ಯರಾದರು. ಈ ಮಠದ ಪರಂಪರೆ ಹೇಗಿದೆಯೆಂದರೆ, ಅಲ್ಲಿ ಯಾವಾಗಲೂ ತಮ್ಮ ಶಿಷ್ಯವರ್ಗವನ್ನು ಸತತ ತರಬೇತಿ ನೀಡುತ್ತಲೇ ಇರುತ್ತಾರೆ. ವೇದ, ಮಂತ್ರ, ಉಪನಿಷತ್ತು ಮತ್ತು ಪುರಾಣಗಳ ಜತೆಗೆ ಎಲ್ಲ ವಿಷಯದಲ್ಲೂ ಅವರನ್ನು ತಯಾರು ಮಾಡುತ್ತಾರೆ. ಯುವಕರಾಗಿದ್ದಾಗಲೇ ತಯಾರಿ ಆರಂಭವಾಗುವುದರಿಂದ, ಒಂಥರಾ ಕಾದ ಕಬ್ಬಿಣಕ್ಕೆ ರೂಪ ಕೊಟ್ಟಂತೆ. ಆಮೇಲೆ ಅದೆಂದೂ ಬಾಗುವುದಿಲ್ಲ. ಅಂಥ ಗರಡಿಯಿಂದ ಹೊರ ಬಂದವರೇ ಯೋಗಿ ಆದಿತ್ಯನಾಥರು. 1998 ಲೋಕಸಭಾ ಚುನಾವಣೆಯಲ್ಲಿ ಸ್ಪಧಿಸಿ ಮೊದಲ ಭಾರಿ ಸಂಸದರಾದಾಗ ಅವರಿಗೆ ವಯಸ್ಸು 26 ಎಂದರೆ, ಆಗಲೇ ಅವರ ಕೀರ್ತಿ ಎಷ್ಟಿದ್ದಿರಬಹುದು ನೀವೇ ಊಹಿಸಿ. ಇದರಲ್ಲಿ ಬಹಳ ಮುಖ್ಯವಾದದ್ದೇನೆಂದರೆ, ಪ್ರತೀ ಬಾರಿ ಚುನಾವಣೆಯಲ್ಲೂ ಯೋಗಿ ಆದಿತ್ಯನಾಥರು ಹೆಚ್ಚೆಚ್ಚು ಮತಗಳಿಂದ ಗೆಲ್ಲುತ್ತಲೇ ಬಂದರು. ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.


ಐದು ಸಲ ಆರಿಸಿ ಬಂದರೂ ಅವರನ್ನು ಎಲ್ಲೂ ತಾನು ಮುಖ್ಯಮಂತ್ರಿಯಾಗಬೇಕೆಂದು ಹಪಾಹಪಿಸಲೇ ಇಲ್ಲ. ಆದರೆ ಸಂಸದರಾಗಿದ್ದುಕೊಂಡು ತನ್ನ ಕೆಲಸ ಮಾತ್ರ ಬಿಡಲಿಲ್ಲ. ಕೆಲ ಮಾತುಗಳನ್ನಾಡಿದ್ದರಿಂದ ಮಾಧ್ಯಮಗಳು ಅವರನ್ನು ದೊಡ್ಡ ಕೋಮುವಾದಿ ಎಂದೆಲ್ಲ ಬಣ್ಣಿಸಿದ್ದವು. ಆದರೆ ಅದಕ್ಕೆಲ್ಲ ಕ್ಯಾರೇ ಎನ್ನದ ಯೋಗಿ, ತಮ್ಮವರ ರಕ್ಷಣೆಗೆ ಸದಾ ನಿಂತಿರುತ್ತಿದ್ದರು. ಆ ಪುಣ್ಯಾತ್ಮ ಪ್ರತೀ ಸಲ ರಾಮ್ ಮಂದಿರ್ ವಹೀ ಬನಾಯೇಂಗೆ ಎಂದಾಗಲೂ ಶತ್ರುಗಳ ಎದೆಯಲ್ಲಿ ಭಯ ಇದ್ದೇ ಇತ್ತು. ಮಾಧ್ಯಮಗಳು ಈ ವಿಚಾರದಿಂದಲೇ ಅವರನ್ನು ಹುರಿದು ಮುಕ್ಕಲು ಬಂದರೂ, ಇವರ ಉತ್ತರ ಮಾತ್ರ ಒಂದೇ.


ಇಂಥ ಯೋಗಿ ಅಧಿಕಾರಕ್ಕೆ ಬಂದಾಗಿನಿಂದ ಒಂದು ಕ್ಷಣ ಸುಮ್ಮನೆ ಕುಳಿತಿಲ್ಲ, ನೀವೆಲ್ಲ ತಮಿಳಿನಲ್ಲಿ ಅರ್ಜುನ್ ಸರ್ಜಾ ಹಾಗೂ ಹಿಂದಿಯಲ್ಲಿ ಅನಿಲ್ ಕಪೂರ್ ಅಭಿನಯದ ‘ನಾಯಕ್’ ಚಿತ್ರ ನೋಡಿರುತ್ತೀರಿ. ಆತ ಅಽಕಾರಕ್ಕೆ ಬರುತ್ತಿದ್ದಂತೆ ವ್ಯವಸ್ಥೆಯನ್ನೇ ಬದಲಾಯಿಸುತ್ತಾನೆ. ಅರ್ಜುನ್ ಸರ್ಜಾ ರೀಲ್ ನಾಯಕನಾದರೆ, ರಿಯಲ್ ನಾಯಕರಾಗಿ ಯೋಗಿ ಸಿಡಿದೆದ್ದಿದ್ದಾರೆ. ಬೇರೆ ರಾಜಕಾರಣಿಗಳು ಅಧಿಕಾರಕ್ಕೆ ಬಂದ ಒಂದು ವರ್ಷ ಮಜಾ ಉಡಾಯಿಸುವುದರಲ್ಲೇ ಸಮಯ ಹಾಳು ಮಾಡುತ್ತಾರೆ, ಆದರೆ ಆದಿತ್ಯನಾಥರು, ರಾಜಕಾರಣಿಯಲ್ಲ ಹಠಯೋಗಿ. ಅವರು ಅಧಿಕಾರಕ್ಕೆ ಬಂದು ಆರು ದಿನಗಳಾಯಿತು. ತೆಗೆದುಕೊಂಡಿರುವ ಪ್ರಮುಖ ನಿರ್ಧಾರಗಳು ನೋಡಿ:


೧. ಯ್ಯಾಂಟಿ ರೋಮಿಯೋ ಸ್ಕ್ವಾಡ್: ಹುಡುಗಿಯರನ್ನು ಚುಡಾಯಿಸುವವರನ್ನು ಹತ್ತಿಕ್ಕಲು ಪ್ರತೀ ಜಿಲ್ಲೆಯಲ್ಲೂ ವಿಶೇಷ ತಂಡ ರಚನೆ. ಲಖನೌ ಭಾಗದ ಹನ್ನೊಂದು ಜಿಲ್ಲೆಗಳಲ್ಲಿ ಪೊಲೀಸರು ಆದೇಶ ನೀಡಿಯಾಗಿದೆ. ಇವುಗಳನ್ನು ಐಜಿಯವರೇ ಖುದ್ದು ನಿರ್ವಹಿಸುತ್ತಾರೆ.

೨. ಯುಪಿಪಿಎಸ್‌ಸಿ ಪರೀಕ್ಷೆಯ ಫಲಿತಾಂಶಕ್ಕೆ ತಡೆ: ಯುಪಿಪಿಎಸ್‌ಸಿ ಭ್ರಷ್ಟಾಚಾರದ ಕೂಟವಾಗಿದ್ದರಿಂದ, ಅದರ ಫಲಿತಾಂಶವನ್ನೇ ತಡೆಹಿಡಿದಿದ್ದಾರೆ.


೩. ಅನಧಿಕೃತ ಕಸಾಯಿಖಾನೆಗಳ ತೆರವು: ಘಾಜಿಯಾಬಾದ್, ಅಲಹಾಬಾದ್ ಮುಂತಾದ ಪ್ರದೇಶದಲ್ಲಿ ಪಾರ್ಥೇನಿಯಂನಂತೆ ಬೆಳೆದು ನಿಂತಿದ್ದ ಕಸಾಯಿಖಾನೆಗಳನ್ನು ಬಂದ ಮೊದಲ ದಿನವೇ ಮುಚ್ಚಿಸಿದ್ದಾರೆ.

೪. ಗೋವು ಕಳ್ಳ ಸಾಗಣೆಗೆ ತಡೆ: ಗೋವು ಕಳ್ಳ ಸಾಗಣೆ ಕಂಡುಬಂದಲ್ಲಿ, ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಖಡಕ್ ಆದೇಶ.

೫. ಭೂಮಿ ಅನುದಾನ: ಅಯೋಧ್ಯೆಯಲ್ಲಿ ರಾಮ್ ಮ್ಯೂಸಿಯಂ ನಿರ್ಮಾಣಕ್ಕೆ 25 ಎಕರೆ ಭೂಮಿ ನೀಡುವ ಬಗ್ಗೆ ಚರ್ಚೆ. ಇದಕ್ಕೆ ಕೇಂದ್ರ ಸರಕಾರ 154 ಕೂಟಿ ಅನುದಾನ ನೀಡಿದ್ದಾರೆ.


೬. ತಿಮಿಂಗಿಲದಂತೆ ಬಾಯಿ ತೆಗೆದುಕೊಂಡು ಹಣ ನುಂಗುತ್ತಿದ್ದ ಭ್ರಷ್ಟ, ಕರ್ತವ್ಯದ್ರೋಹಿ ಪೊಲೀಸರ ಅಮಾನತು.

ಆರು ದಿನಗಳಲ್ಲಿ, ಆರು ನಿರ್ಧಾರಗಳು! ಅರ್ಥಾತ್, ಒಂದು ಕ್ಷಣ ಸಹ ದಂಡ ಮಾಡಲಿಲ್ಲ. ಪಾರ್ಟಿ ಮಾಡುತ್ತಾ ಕೂರಲಿಲ್ಲ, ಬದಲಿಗೆ ವಿಜಯೋತ್ಸದ ನೆಪದಲ್ಲಿ ದಾದಾಗಿರಿ ಮಾಡುವವರನ್ನು ಒಳಗೆ ತಳ್ಳಿ ಎಂಬ ಖಡಕ್ ಆದೇಶ ಕೊಟ್ಟರು. ದೇಶದ ದೊಡ್ಡ ರಾಜ್ಯವೊಂದರ ಮುಖ್ಯಮಂತ್ರಿಯಿಂದ ಇನ್ನೇನನ್ನು ನಿರೀಕ್ಷಿಸುತ್ತೀರಿ? ಉತ್ತರ ಪ್ರದೇಶದ ಜನ ಅದನ್ನೇ ಸ್ಥಳೀಯ ಸಂಸ್ಥೆಗಳಲ್ಲಿ ತೋರಿಸಿದರು. ಅದು ಪೆಟ್ಟಿಗೆಯಲ್ಲಿ ಬಿದ್ದ ಮತಗಳಷ್ಟೇ ಅಲ್ಲ. ಅದು ಪ್ರೀತಿ, ಯೋಗಿಯ ಮೇಲಿನ ಭಕ್ತಿ, ದೇಶಕ್ಕೆ ಸಂದ ಸಮರ್ಪಣೆ. ಈ ಫಲಿತಾಂಶ ಹಲವು ಸಂದೇಶಗಳನ್ನೂ ಬಿಟ್ಟುಹೋಗಿದೆ. ಮುಂದೆ ಗುಜರಾತ್‌ಹಿಮಾಚಲ ಪ್ರದೇಶವಿದೆ. ಇನ್ನಾರು ತಿಂಗಳಲ್ಲಿ ಕರ್ನಾಟಕವೂ ಇದೆ.


 


 


 •  0 comments  •  flag
Share on Twitter
Published on December 02, 2017 00:19

November 28, 2017

November 27, 2017

October 18, 2017

Pratap Simha's Blog

Pratap Simha
Pratap Simha isn't a Goodreads Author (yet), but they do have a blog, so here are some recent posts imported from their feed.
Follow Pratap Simha's blog with rss.