Pratap Simha's Blog, page 35
September 10, 2016
ಅವರು ಎರಡೂವರೆ ಕೋಟಿಯಲ್ಲಿ ಕಟ್ಟೆ ಕಟ್ಟಿದರು, ಇವರು 25 ಕೋಟಿ ಸುರಿದೂ ನೀರು ಉಳಿಸಿಕೊಳ್ಳಲಿಲ್ಲ!
ಅವರು ಎರಡೂವರೆ ಕೋಟಿಯಲ್ಲಿ ಕಟ್ಟೆ ಕಟ್ಟಿದರು, ಇವರು 25 ಕೋಟಿ ಸುರಿದೂ ನೀರು ಉಳಿಸಿಕೊಳ್ಳಲಿಲ್ಲ!
ಅದು 1909ರ ಜೂನ್. ಮುಖ್ಯ ಎಂಜಿನಿಯರ್ ಆಗಿದ್ದ ಮೆಕ್ ಹಚಿನ್ ಸೇವೆಯಿಂದ ನಿವೃತ್ತಿ ಹೊಂದುವವರಿದ್ದರು. ಅವರ ಸ್ಥಾನಕ್ಕೆ ಒಬ್ಬ ದಕ್ಷ ಎಂಜಿನಿಯರ್‍ನ ಹುಡುಕಾಟ ಮ್ಯೆಸೂರು ಸಂಸ್ಥಾನದಲ್ಲಿ ನಡೆಯುತ್ತಿತ್ತು. ಅದೇ ಹೊತ್ತಿಗೆ ಸಂಸ್ಥಾನದ ದಿವಾನರಾಗಿದ್ದ ವಿ.ಪಿ ಮಾಧವರಾಯರೂ ನಿವೃತ್ತರಾಗಿ ಅವರ ಸ್ಥಾನಕ್ಕೆ ಟಿ. ಆನಂದರಾಯರು ಬಂದಿದ್ದರು. ಸದಾ ಸಂಸ್ಥಾನದ ಧ್ಯಾನದಲ್ಲೇ ಇರುತ್ತಿದ್ದ ಮಹಾಪ್ರಭು ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಒಂದೇ ಹೊತ್ತಲ್ಲಿ ಸಾಮ್ರಾಜ್ಯದ ಎರಡು ಹೊಸ ಕಂಬಗಳನ್ನು ನಿಲ್ಲಿಸುವ ಹೊರೆ ಬಿತ್ತು. ನಾಲ್ವಡಿಯವರು ನಿವೃತ್ತರಾದ ಮಾಧವರಾಯರನ್ನು ಸುಲಭಕ್ಕೆ ವಿಶ್ರಾಂತ ಜೀವನಕ್ಕೆ ಬಿಟ್ಟುಕೊಡಲಿಲ್ಲ. ಸಂಸ್ಥಾನಕ್ಕೆ ಹೊಸ ಎಂಜಿನಿಯರರನ್ನು ನೇಮಕ ಮಾಡುವ ಹೊಣೆಯನ್ನು ವಹಿಸಿಬಿಟ್ಟಿದ್ದರು. ಮಾಧವರಾಯರು ದಿವಾನಪಟ್ಟದಲ್ಲಿರುವಾಗಲೇ ಬಾಂಬೆ ಪ್ರಾಂತದಲ್ಲಿ ಅದ್ಭುತ ಕೆಲಸಗಳನ್ನು ಮಾಡಿದ ಒಬ್ಬ ಕನ್ನಡದ ಯುವಕನತ್ತ ಒಂದು ಕಣ್ಣಿಟ್ಟಿದ್ದರು. ಸಂಸ್ಥಾನಕ್ಕೆ ಆತನನ್ನು ಕರೆತರಬೇಕೆಂದು ಯೋಚನೆ ಮಾಡಿದ್ದರು. ಯಾಕೋ ಅವರ ಅಧಿಕಾರಾವಧಿಯಲ್ಲಿ ಅದು ಕೈಗೂಡಲಿಲ್ಲ. ಕೊನೆಗೆ ಮಾಧವರಾಯರು ಅದದ್ದಾಗಲಿ ಎಂದು ತಮ್ಮ ಉತ್ತರಾಧಿಕಾರಿ ಆನಂದರಾಯರೊಡನೆ ಮಾತುಕತೆ ನಡೆಸಿ ಅವರಿಂದ ಒಂದು ಪತ್ರ ಬರೆಸಿದರು.
“ತಾಯ್ನಾಡಿನಲ್ಲಿ ಸೇವೆ ಲಭಿಸಲಿದೆ’ ಎಂದು ಭಾವುಕ ವಾಕ್ಯವನ್ನೂ ಹೊಡೆದರು!
ಆ ಎಂಜಿನಿಯರರು ಮ್ಯೆಸೂರಿನ ಮುಖ್ಯ ಎಂಜಿನಿಯರ್ ಆಗಲು ಒಪ್ಪಿದರು. ಆ ಒಪ್ಪಿಗೆ ಮುಂದೆ ಕನಾ೯ಟಕದ ದಿಸೆಯನ್ನೇ ಬದಲು ಮಾಡಿತು. ಸಮಾಜವನ್ನೇ ಬದಲಿಸಿತು. ಆ ಒಪ್ಪಿಗೆ ನಾಡಿಗೆ ವರವಾಯಿತು. ಒಪ್ಪಿಕೊಂಡವ ಮುಂದೆ ನಾಡ ಜನರಿಗೆ ದೇವರಾದ. ಆ ಮಹಾತ್ಮ ನಮ್ಮ ವಿಶ್ವೇಶ್ವರಯ್ಯನವರು. ಹೀಗೆ 1909ರ ನವೆಂಬರ್‍ನಲ್ಲಿ ವಿಶ್ವೇಶ್ವರಯ್ಯನವರು ಮ್ಯೆಸೂರು ಸಂಸ್ಥಾನದ ಮುಖ್ಯ ಎಂಜಿನಿಯರಾಗಿ ಸೇವೆಗೆ ಸೇರಿದರು. ಆ ಹೊತ್ತಲ್ಲೂ ಮ್ಯೆಸೂರು ಸಂಸ್ಥಾನ ದೇಶದಲ್ಲೇ ಅಭಿವೃದ್ಧಿ ಹೊಂದಿದ ಸಂಸ್ಥಾನ ಎಂದು ಖ್ಯಾತವಾಗಿದ್ದರೂ ಆಗಬೇಕಾದ ಸುಧಾರಣೆಗಳು ಇನ್ನೂ ಬೇಕಾದಷ್ಟಿದ್ದವು. ವಿಶ್ವೇಶ್ವರಯ್ಯನವರು ಸಾಮ್ರಾಜ್ಯವನ್ನು ಕೂಲಂಕಷವಾಗಿ ಅಧ್ಯಯನ ಮಾಡತೊಡಗಿದರು. ಖಾನ್‍ದೇಶ, ನಾಸಿಕ್, ಬಾಂಬೆಗಳಲ್ಲಿ ಮಾಡಿದ ಕೆಲಸ ಮತ್ತು ಅಮೆರಿಕ, ಯುರೋಪ್ ಮತ್ತು ಜಪಾನಿಗೆ ಕೈಗೊಂಡ ಪ್ರವಾಸಗಳಿಂದ ಅತೀ ಶೀಘ್ರದಲ್ಲೇ ವಿಶ್ವೇಶ್ವರಯ್ಯನವರಿಗೆ ಸಾಮ್ರಾಜ್ಯದಲ್ಲಿ ಏನುಂಟು ಏನಿಲ್ಲ ಎಂಬುದು ತಿಳಿದುಹೋಯಿತು. ಅತ್ತ ಇನ್ನೊಂದೆಡೆ ನಾಲ್ವಡಿ ಮಹಾರಾಜರು ಮಾರುವೇಷದಲ್ಲಿ ಹಳ್ಳಿಹಳ್ಳಿಗಳಿಗೆ ಭೇಟಿಕೊಟ್ಟು ಸಮಸ್ಯೆಗಳನ್ನು ಅರಿಯುವ ಪ್ರಯತ್ನಗಳನ್ನು ಮಾಡುತ್ತಿದ್ದರು. ಒಂದು ದಿನ ಇಬ್ಬರೂ ಸಮಾಜದ ಭವಿಷ್ಯದ ಚಿಂತೆಯನ್ನು ಹೊತ್ತು ಅರಮನೆಯಲ್ಲಿ ಎದುರುಬದುರು ಕುಳಿತರು. ವಿಚಿತ್ರ ಎಂದರೆ ಇಬ್ಬರಿಗೂ ಆಗಬೇಕಾದುದೇನು ಎಂಬ ಪ್ರಶ್ನೆಗೆ ಹೊಳೆದ ಉತ್ತರ ಒಂದೇ ಆಗಿತ್ತು. ಅದು ಸಂಸ್ಥಾನದ ನೀರಾವರಿ ಯೋಜನೆ. ಅದರಿಂದ ಹಲವು ಯೋಜನೆಗಳಿಗೆ ದಾರಿ, ಅಂದರೆ ವಿವಿದೋದ್ದೇಶ ನೀರಾವರಿ ಯೋಜನೆ. ಸಂಸ್ಥಾನದಲ್ಲಿ ನೀರಿನ ಹರಿವು ಸಾಕಷ್ಟು ಇತ್ತು. ಹಲವು ಸಣ್ಣಪುಟ್ಟ ಒಡ್ಡುಗಳೂ ಇದ್ದವು. ಜಲಪಾತಗಳೂ ಇದ್ದವು. ಸಾವಿರಾರು ಕೆರೆಗಳಿದ್ದವು. ಮಾರಿಕಣಿವೆ ಎಂಬಲ್ಲಿ ಕಟ್ಟಿದ ಅಣೆಕಟ್ಟನ್ನೇ ಅತಿ ದೊಡ್ಡ ಅಣೆಕಟ್ಟು ಎಂದು ಆಲ್ಲಿಯವರೆಗೆ ಭಾವಿಸಲಾಗಿತ್ತು. ಶಿವನಸಮುದ್ರದ ಬಳಿ ವಿದ್ಯುತ್ ಯೋಜನೆಯೊಂದು ಇತ್ತಾದರೂ ಅದರಲ್ಲಿ ಕೊರತೆಗಳೇ ಹಲವಿದ್ದವು. ಆದರೆ ವಿದ್ಯುತ್ತಿನ ಬೇಡಿಕೆ ದಿನೇ ದಿನೆ ಹೆಚ್ಚುತ್ತಿತ್ತು. ಸಹಜವಾಗಿ ಮಹಾರಾಜರೂ, ದಿವಾನರೂ ಚಿಂತಿತರಾಗಿದ್ದರು. ಮಹಾರಾಜರ ಮುಂದೆ ಕುಳಿತ ವಿಶ್ವೇಶ್ವರಯ್ಯನವರು ಎಲ್ಲವನ್ನೂ ವಿವರಿಸುತ್ತಿದ್ದರೆ ನಾಲ್ವಡಿಯವರ ಮೈಯ ರೋಮರೋಮಗಳೂ ಪುಳಕಗೊಳ್ಳುತ್ತಿದ್ದವು. ಎಲ್ಲವನ್ನೂ ಕೇಳಿದ ಮಹಾರಾಜರು “ನಿಮ್ಮ ಯಾವ ಯೋಜನೆಗಳಲ್ಲೂ ಯಾವ ನ್ಯೂನತೆಗಳೂ ಬರದಂತೆ ನೋಡಿಕೊಳ್ಳುತ್ತೇವೆ, ಮುಂದುವರಿಯಿರಿ’ ಎಂದು ಆದೇಶಿಸಿಯೇ ಬಿಟ್ಟರು.
ವಿಶ್ವೇಶ್ವರಯ್ಯನವರು ಮರುದಿನದಿಂದಲೇ ಕೆಲಸ ಆರಂಭಿಸಿದರು. ಶಿವನಸಮುದ್ರಕ್ಕೆ ತೆರಳಿ ವಿದ್ಯುತ್ ಉತ್ಪಾದನೆಯನ್ನು ಗಮನಿಸಿದರು. ಅಲ್ಲಿ 13,000 ಹೆಚ್.ಪಿ ವಿದ್ಯುತ್ ಮಾತ್ರ ಉತ್ಪಾದನೆಯಾಗುತ್ತಿತ್ತು. ಅದರಲ್ಲಿ 11,000 ಹೆಚ್‍ಪಿಯನ್ನು ಅಲ್ಲಿಂದ ನೂರೈವತ್ತಕ್ಕೂ ಹೆಚ್ಚು ಕಿ.ಮೀ ದೂರದ ಕೆ.ಜಿ.ಎಫ಼್‍ಗೆ ರವಾನಿಸಲಾಗುತ್ತಿತ್ತು. ಶಿವನಸಮುದ್ರದ ನೀರಿನ ಹರಿವಿಗೂ, ಅಲ್ಲಿನ ಉತ್ಪಾದನೆಗೂ ಆಗುತ್ತಿದ್ದ ವೆಚ್ಚಕ್ಕೂ ಅಜಗಜಾಂತರ ವ್ಯತ್ಯಾಸ ಕಾಣುತ್ತಿತ್ತು. ಅವನ್ನೆಲ್ಲಾ ನೋಡುತ್ತಾ ಅದೇ ಸ್ಥಳದಲ್ಲಿ ವಿಶ್ವೇಶ್ವರಯ್ಯನವರ ಕಣ್ಣಲ್ಲಿ ದೊಡ್ಡ ಜಲಾಶಯ ವೊಂದರ ನಕಾಶೆ ಮೂಡಲಾರಂಭಿಸಿತು. ಆ ಜಲಾಶಯ ನಾಡಿನ ಬರವನ್ನು ತಣಿಸಿದಂತೆ, ಹಸಿದವರಿಗೆ ಅನ್ನ ಉಣಿಸಿದಂತೆ, ದೀಪವನ್ನು ಬೆಳಗಿದಂತೆ, ನಗರ ನಿಮಾ೯ಣವಾದಂತೆ, ಸಂಸ್ಥಾನದ ಹೆಸರು ಗಂಗೆಯನ್ನೂ ದಾಟಿ ಥೇಮ್ಸ್‌ವರೆಗೆ ಮುಟ್ಟಿದಂತೆ, ಮಹರಾಜರ ಕೀತಿ೯ ಶಿಖರದೆತ್ತರ ಏರಿದಂತೆ ದೃಶ್ಯಗಳು ಮೂಡಲಾರಂಭಿಸಿದವು. ವಿಶ್ವೇಶ್ವರಯ್ಯನವರು ಮತ್ತೆ ತಡ ಮಾಡಲಿಲ್ಲ. ಅಷ್ಟರಲ್ಲಾಗಲೇ ವಿಶ್ವೇಶ್ವರಯ್ಯನವರು ಅಮೆರಿಕಾದ ಖ್ಯಾತ ವಿವಿದ್ದೊದ್ದೇಶ ನೀರಾವರಿ ಯೋಜನೆ “ಟೆನಿಸಿ’ ಬಗ್ಗೆ ಅಧ್ಯಯನ ಮಾಡಿದ್ದರು. ಹೀಗೆ ನಕಾಶೆ ಬರೆಯುತ್ತಾ ಬರೆಯುತ್ತಾ ಅವರಿಗೆ ಶ್ರೀರಂಗಪಟ್ಟಣದ ಸಮೀಪದ ಕನ್ನಂಬಾಡಿ ಟೆನಿಸಿಯಂತೆ ಕಾಣಲಾರಂಭಿಸಿತು. ಸಂಸ್ಥಾನದ ಹಿರಿಯ ಅಧಿಕಾರಿಗಳೊಡನೆ ಚಚಿ೯ಸಿದರು. ಆರಂಭದಲ್ಲಿ ಕೃಷಿ ಮತ್ತು ಕೈಗಾರಿಕಾಭಿವೃದ್ಧಿಯ ಯೋಜನೆಗಾಗಿ ನಿಮಾ೯ಣವಾಗುವ ಅಣೆಕಟ್ಟೆಯನ್ನು 124 ಅಡಿ ಎತ್ತರದಲ್ಲಿ 48 ಟಿಎಂಸಿ ಅಡಿ ನೀರನ್ನು ಹಿಡಿದಿಟ್ಟುಕೊಳ್ಳಬಲ್ಲ ಯೋಜನೆಯನ್ನು ಮಾಡಲಾಯಿತು. ನಂತರ ಹೆಚ್ಚಿನ ಕೃಷಿ ಭೂಮಿ ಮತ್ತು ಕೆಜಿಎಫ್ ಅಲ್ಲದೆ ಬೆಂಗಳೂರು ಮತ್ತು ಮೈಸೂರು ಮಹಾನಗರಗಳಿಗೂ ವಿಧ್ಯುತ್ ಕಲ್ಪಿಸುವ ನಿಟ್ಟಿನಲ್ಲಿ ಎತ್ತರವನ್ನು 130 ಅಡಿಗಳಿಗೆ ಮತ್ತು ಉದ್ದವನ್ನು 8600 ಅಡಿಗಳಿಗೆ ವಿಸ್ತರಿಸಲಾಯಿತು. ಕನ್ನಂಬಾಡಿ ಜಲಾಶಯದಿಂದ ಶಿವನಸಮುದ್ರ ಮತ್ತು ಶಿಂಷಾಗಳೂ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬೇಕೆಂಬ ದೂರದೃಷ್ಟಿಯ ಯೋಜನೆಯೂ ಸಿದ್ಧವಾಯಿತು. ಆದರೆ ಕೆಲಸ ಆರಂಭವಾಗಲೇ ಇಲ್ಲ. ಏಕೆಂದರೆ ಯೋಜಿತ ಅಣೆಕಟ್ಟೆಯಂಥ ಅಣೆಕಟ್ಟೆ ಭಾರತದಲ್ಲಿ ಮೊದಲೆಂದೂ ಕಟ್ಟಿರಲಿಲ್ಲ. ಯೋಜನೆಯ ಮೊದಲ ಅಂದಾಜುಪಟ್ಟಿ ಪ್ರಕಾರ ಯೋಜನೆಯ ಒಟ್ಟು ವೆಚ್ಚ 2 ಕೋಟಿ 53 ಲಕ್ಷ ರೂಪಾಯಿಗಳಾಗಿತ್ತು. ಅದುವರೆಗೆ ಯಾವ ಸಂಸ್ಥಾನ ಕೂಡಾ ಒಂದು ಯೋಜನೆಗೆ ಅಷ್ಟು ಹಣವನ್ನೂ ಖಚು೯ ಮಾಡಿರಲಿಲ್ಲ. ಮಹಾರಾಜರಿಗೆ ಯೋಜನೆಯ ಬಗ್ಗೆ ತುಂಬು ಉತ್ಸಾಹವಿತ್ತಾದರೂ ಅವರ ಕೈಕಟ್ಟಿತ್ತು. ಮಹಾರಾಜರೂ ಮಂಕಾದರು. ಜತೆಗೆ ಕೆಲವು ಭಟ್ಟಂಗಿಗಳು ಅದಾಗಲೇ ವಿಶ್ವೇಶ್ವರಯ್ಯನವರ ಬಗ್ಗೆ ಮಹಾರಾಜರಲ್ಲಿ ಸಂಶಯ ವ್ಯಕ್ತಪಡಿಸಿದ್ದರು. ಇದೊಂದು ದುಂದುವೆಚ್ಚ ಎಂದು ತಲೆಕೆಡಿಸಲು ನೋಡಿದರು. ಇವೆಲ್ಲವೂ ವಿಶ್ವೇಶ್ವರಯ್ಯನವರಿಗೆ ತಿಳಿದು ಉತ್ಸಾಹದ ಬುಗ್ಗೆ ಒಡೆದುಹೋಯಿತು. ಮಹಾರಾಜರಂತೆ ವಿಶ್ವೇಶ್ವರಯ್ಯನವರೂ ಮಂಕಾದರು. ಯೋಜನೆ ನನೆಗುದಿಗೆ ಬಿತ್ತು.
ಹೀಗೆ ತಿಂಗಳುಗಳು ಕಳೆದವು. ಒಂದು ದಿನ ಮಹಾರಾಜರಿಗೆ ನನೆಗುದಿಗೆ ಬಿದ್ದ ಕಾರಣ ಮತ್ತು ನಾಡಿನ ನಾಳೆಯ ಬಗ್ಗೆ ಚಿಂತೆಯನ್ನು ಮನವರಿಕೆ ಮಾಡಿಕೊಟ್ಟರು. ಮಹಾರಾಜರಿಗೆ ಪರಿಸ್ಥಿತಿ ಅಥ೯ವಾದದ್ದು ಮಾತ್ರವಲ್ಲದೆ ತಕ್ಷಣವೇ ಯೋಜನೆಯನ್ನು ಮುಂದುವರಿಸಬೇಕೆಂದೂ ಎಲ್ಲಾ ವ್ಯವಸ್ಥೆಗಳನ್ನೂ ಮಾಡುವುದೆಂದೂ ಮಾತು ಕೊಟ್ಟರು. ಈ ಮಾತು ನಾಡಿನ ನಕಾಶೆಯನ್ನು ಬದಲಿಸಿದ ಎರಡನೆಯ ಪ್ರಸಂಗ. ನಾಲ್ವಡಿ ಕೃಷ್ಣರಾಜ ಒಡೆಯರದ್ದು ಸ್ವತಂತ್ರ ಸಂಸ್ಥಾನವಲ್ಲ. ಬ್ರಿಟಿಷ್ ದೊರೆಗಳ ಅನುಮತಿ ಇಲ್ಲದೆ ಸರಕಾರಿ ಖಜಾನೆಯನ್ನು ಬಳಸುವಂತಿಲ್ಲ. ಬ್ರಿಟಿಷರಿಗೆ ನಾಡಿಗೆ ನೀರು ಹರಿಯಲಿ ಬಿಡಲಿ, ಆಗಬೇಕಾದುದೇನೂ ಇಲ್ಲ. ಆದರೂ ನಾಲ್ವಡಿಯವರು ಅಳುಕಲಿಲ್ಲ. ತಮ್ಮ ಮತ್ತು ಮಹಾರಾಣಿ ಪ್ರತಾಪಕುಮಾರಿಯ ಆಭರಣಗಳನ್ನು ಬಾಂಬೆಗೆ ಕೊಂಡೊಯ್ದರು. ಅಡವಿಟ್ಟರು. ರಾಜ ಪೋಷಾಕಿನ ಹಲವು ರತ್ನಹಾರಗಳು ಗಿರಿವಿಯಾದವು. ನಾಡಿಗಿಂತ ದೊಡ್ಡದೇ ರಾಜಪೋಷಾಕು ಎಂದು ಮಹಾರಾಜರು ಆಡಿದವರ ಬಾಯಿ ಮುಚ್ಚಿಸಿದರು. ಕೆಲವರು ನಿರಾಭರಣ ರಾಜರನ್ನು ಮರೆಯಲ್ಲಿ ಆಡಿಕೊಂಡರು. ಆದರೆ ಅನ್ನ ಬೆಳೆಯುವ ಜನರ ಕಣ್ಣಲ್ಲಿ ಅಂದೇ ನಾಲ್ವಡಿ ದೇವರ ಸ್ಥಾನಕ್ಕೇರಿಬಿಟ್ಟಿದ್ದರು. ಕಟ್ಟೆ ಏಳತೊಡಗಿತು. ಯಜ್ಞದಂತೆ ಎಲ್ಲವೂ ನಡೆಯುತ್ತಿದ್ದವು. ಅದಾಗಲೇ ಮಡ್ರಾಸ್ ಸರಕಾರದಿಂದ ಕ್ಯಾತೆ ಆರಂಭವಾಯಿತು. ಕನ್ನಂಬಾಡಿಗಿಂತ ಎರಡುಪಟ್ಟು ದೊಡ್ಡ ಕಟ್ಟೆಯನ್ನು ಮೆಟ್ಟೂರು ಎಂಬಲ್ಲಿ ಸ್ಥಾಪಿಸಲು ಅದು ಉದ್ದೇಶಿಸಿತ್ತು. ಕೆಲಸವನ್ನೂ ಆರಂಭಿಸಿಬಿಟ್ಟಿತ್ತು. ಕನ್ನಂಬಾಡಿಗಿಂತ ತೀರಾ ಕೆಳಗೆ ಅಂದರೆ 60 ಮ್ಯೆಲಿಗಳಲ್ಲೇ ಮೆಟ್ಟೂರು ನಿಮಾ೯ಣ ಆಗಕೂಡದು. ಇದು ಸಮಸ್ಯೆಯನ್ನು ಶಾಸ್ವತವಾಗಿಟ್ಟಂತೆ ಎಂದು ವಿಶ್ವೇಶ್ವರಯ್ಯನವರು ಪಟ್ಟು ಹಿಡಿದರು. ವೈಸರಾಯಿಗಳಿಗೆ ದೂರು ಒಯ್ದರು.
ಮೆಟ್ಟೂರು ಕಟ್ಟೆ ಎದ್ದರೆ ಅದು ನಿರಂತರ ಕನ್ನಂಬಾಡಿಯನ್ನೇ ಅವಲಂಬಿಸಬೇಕಾಗುತ್ತದೆ. ಕನ್ನಂಬಾಡಿ ನಿಮಾ೯ಣ ಯೋಜನೆ ಮೊದಲು ತಯಾರಾದದ್ದು. ಹಾಗಾಗಿ ಮೆಟ್ಟೂರು ಅವೈಜ್ಞಾನಿಕ ಎಂದು ಸಾಭೀತುಪಡಿಸಿದರು. ಆದರೆ ಮೆಡ್ರಾಸ್ ಸರಕಾರ ಕೂಡ ಪಟ್ಟು ಬಿಡಲಿಲ್ಲ. ಕನಾ೯ಟಕಕ್ಕೆ ಹೋಲಿಸಿದರೆ ಮೆಡ್ರಾಸಿನಲ್ಲೇ ಕಾವೇರಿ ಮುಖಜಭೂಮಿ ಪ್ರದೇಶ ಅತಿ ಹೆಚ್ಚಿತ್ತು. ಅಂದರೆ ಕಾವೇರಿ ನೀರಿನ ಪ್ರಮಾಣ ಅಲ್ಲಿಗೆ ಹೆಚ್ಚು ಬೇಕು. ಹಾಗೆ ಮಾಡಿದರೆ ಕನ್ನಡದ ನೆಲದಲ್ಲಿ ನೀರು ಮತ್ತು ಶಕ್ತಿ ಎರಡೂ ಪೋಲಾಗುತ್ತದೆ. ನೀರನ್ನು ಆರಂಭದಲ್ಲೇ ಬಳಸಿ ವಿವಿದೋದ್ದೇಶ ಯೋಜನೆ ರೂಪಿಸಲು ಮೆಟ್ಟೂರಿಗಿಂತ ಕನ್ನಂಬಾಡಿ ಸೂಕ್ತ ಎಂದು ಮ್ಯೆಸೂರು ಸಂಸ್ಥಾನ ವೈಸರಾಯರಲ್ಲಿ ವಾದಿಸಿತು. ಆದರೆ ಬ್ರಿಟಿಷರ ನೇರ ಆಡಳಿತಕ್ಕೊಳಪಟ್ಟ ಮೆಡ್ರಾಸ್ ಸಂಸ್ಥಾನವನ್ನು ವೈಸರಾಯಿ ಬರಿಗೈಯಲ್ಲಿ ಕಳುಹಿಸಲಿಲ್ಲ. ಕನ್ನಂಬಾಡಿಯ ಎತ್ತರ ಕೇವಲ 80 ಅಡಿ ಇರಲಿ ಎಂದು ಸಂಧಾನ ಮಾಡಿ ಕಳುಹಿಸಿದರು. ಅಂದರೆ ಬ್ರಿಟಿಷರು ಕನ್ನಂಬಾಡಿಯ ನೀರಿನ ಶೇಖರಣಾ ಸಾಮಥ್ಯ೯ವನ್ನು ಕಡಿತಗೊಳಿಸಿಬಿಟ್ಟಿದ್ದರು. ಆದರೆ ಕನ್ನಂಬಾಡಿಯ ತಳಪಾಯ 130 ಅಡಿಗೆ ಎಂದು ಕಲ್ಲಿಟ್ಟಾಗಿತ್ತಲ್ಲ. ವಿಶ್ವೇಶ್ವರಯ್ಯನವರ ಸಮಯಪ್ರಜ್ಞೆಯಿಂದ ವಿನ್ಯಾಸಗೊಳಿಸಿದ ವಿಶಾಲ ತಳಹದಿಯಲ್ಲೇ ಕಟ್ಟೆ ಕೆಲಸ ಆರಂಭವಾಯಿತು. ಮಡ್ರಾಸ್ ಮತ್ತೆ ತಗಾದೆ ತೆಗೆಯಿತು. ವಿಶ್ವೇಶ್ವರಯ್ಯನವರು ತಳಪಾಯದ ಬಗ್ಗೆ ಮೆಡ್ರಾಸ್ ತಲೆಕೆಡಿಸಿಕೊಳ್ಳಬಾರದು ಎಂದು ವಾದ ಹೂಡಿ ಕಟ್ಟೆ ಎಬ್ಬಿಸಿಯೇ ಬಿಟ್ಟರು! ಈ ಸಮಯಪ್ರಜ್ಞೆ ಮುಂದೆ ನಾಡಿನ ಜನರ ಪ್ರತೀ ತುತ್ತು ಅನ್ನಕ್ಕೆ ಕಾರಣವಾಯಿತು. ಅಂದು ಮೆಡ್ರಾಸ್ ಸರಕಾರದ ಒತ್ತಡದ ವಿರುದ್ಧ ಅವರು ಹೋರಾಟ ಮಾಡದೇ ಇದ್ದಿದ್ದರೆ ಕನ್ನಂಬಾಡಿ ಏಳುವ ಸಂಭವ ಕೂಡ ಇರಲಿಲ್ಲ. ಎದ್ದಿದ್ದರೂ ಕನ್ನಂಬಾಡಿ ಒಂದು ಸಣ್ಣ ಒಡ್ಡು ಆಗಿರುತ್ತಿತ್ತು ಅಥವಾ ಅಡಿಗಲ್ಲು ಸಣ್ಣದಾಗಿದ್ದರೆ ಮತ್ತೆಂದೂ ಕನ್ನಂಬಾಡಿ ದೊಡ್ಡದಾಗುವ ಸಂಭವವೇ ಇರುತ್ತಿರಲಿಲ್ಲ. ಅವೆಲ್ಲಾ ಕಂಟಕಗಳನ್ನು ದೂರ ಮಾಡಿದವರು ಸರ್. ಎಂವಿ. ಯೋಗ್ಯ ಕಾಲುವೆಗಳು ನಿಮಾ೯ಣವಾದವು. ಲಕ್ಷಗಟ್ಟಲೆ ಏಕರೆ ನೀರಾವರಿಗೆ ಒಳಪಟ್ಟಿತು. ವಿದ್ಯುತ್ ಉತ್ಪಾದನೆ ನಿರೀಕ್ಷೆಗಿಂತ ಮೀರಿ ನಡೆಯಿತು. ಯೋಜನೆ ಮುಗಿದ ಒಂದೂವರೆ ದಶಕದ ನಂತರ ನಡೆದ ಆಥಿ೯ಕ ಸಮೀಕ್ಷೆಯೊಂದರಲ್ಲಿ ಕಟ್ಟೆಗೆ ಹಾಕಿದ ಬಂಡವಾಳ ಮರಳಿ ಬಂದಿತ್ತು. ಅಂದರೆ ಅದರ ಪ್ರತಿಫಲ ನೀಡಿತ್ತು. (ಸರಕಾರಿ ಕಂದಾಯ ಎಲ್ಲಾ ಉತ್ಪಾದನೆಗಳು ಸೇರಿ). ಕನ್ನಂಬಾಡಿ ಕೃಷ್ಣರಾಜಸಾಗರವಾಗಿತ್ತು. ನಾಲ್ವಡಿಯವರ ಜೊತೆಗೆ ವಿಶ್ವೇಶ್ವರಯ್ಯನವರನ್ನೂ ಜನ ಮನೆಮನೆಯಲ್ಲಿ ಚಿತ್ರಪಟ ಹಾಕಿ ಪೂಜಿಸಲಾರಂಭಿಸಿದರು.
ಕಾವೇರಿ ಜಲವಿವಾದ ತಾರಕ್ಕೇರಿದಾಗಲೆಲ್ಲಾ ಈ ಸಾಹಸ ಮತ್ತೆ ಮತ್ತೆ ಕಾಡುತ್ತದೆ!
ಪ್ರತೀ ಹನಿ ನೀರು ಕುಡಿಯುವಾಗಲೂ ನಮ್ಮ ಹಳೇ ಮ್ಯೆಸೂರು ಭಾಗದ ಜನರಿಗೆ ಈ ಕಥೆ ನೆನಪಾಗುತ್ತವೆ. ಮಹಾಸ್ವಾಮಿ ನಾಲ್ವಡಿಯವರು ಮತ್ತು ವಿಶ್ವೇಶ್ವರಯ್ಯನವರ ಶ್ರಮ ಇಲ್ಲದಿದ್ದಿದ್ದರೆ ನಮ್ಮ ನಾಡು ಹೇಗಿರುತ್ತಿತ್ತು ಎಂಬುದನ್ನು ಯೋಚಿಸಿದರೆ ನಡುಕ ಹುಟ್ಟುತ್ತದೆ. ಅವರ ಶ್ರಮದ ಒಂದು ಅಂಶವನ್ನಾದರೂ ನಮ್ಮನ್ನಾಳಿದ ಸರಕಾರಗಳು ಪಟ್ಟಿದ್ದರೆ ನಾಡಿನ ನಕಾಶೆ ಮತ್ತೊಮ್ಮೆ ಬದಲಾಗುತ್ತಿತ್ತು ಎನಿಸುತ್ತದೆ. ಬಹಳ ಬೇಸರದ ಸಂಗತಿಯೆಂದರೆ, ಅವರು ಎರಡೂವರೆ ಕೋಟಿಯಲ್ಲಿ ಕಟ್ಟೆ ಕಟ್ಟಿದರು, ಇವರು 25 ಕೋಟಿ ಖಚು೯ ಮಾಡಿದರೂ ನೀರು ಉಳಿಸಿಕೊಳ್ಳಲಾಗಲಿಲ್ಲವಲ್ಲಾ ಸ್ವಾಮಿ?! ಬಹುಶಃ ತಮ್ಮ ಹೆಂಡತಿಯ ಒಡವೆ ಅಡವಿಟ್ಟು ಕಟ್ಟಿದ್ದರೆ ಇವರಿಗೆ ಕನ್ನಂಬಾಡಿಯ ಮಹತ್ವ ಅರಿವಾಗುತ್ತಿತ್ತೇನೋ!
ಈ ವಕೀಲ ಮಹಾಶಯರಿಗೆ ನಮ್ಮ ರಾಜ್ಯ ಸರಕಾರ ಬೊಕ್ಕಸದಿಂದ ಬರೋಬ್ಬರಿ 25 ಕೋಟಿ ವಷ೯ಕ್ಕೆ ಖಚು೯ ಮಾಡುತ್ತಿದೆ!
ಅನಿಲ್ ದಿವಾನ್‍ರೊಬ್ಬರಿಗೇ 9.66 ಕೋಟಿ ರೂಪಾಯಿಗಳನ್ನು ರೂಗಳನ್ನು ವ್ಯಯಿಸಿದರೆ,
2.08 ಕೋಟಿಯನ್ನು ನಾರಿಮನ್‍ಗೆ ನೀಡಿದೆ! ದಿವಾನ್ ಬೆಂಗಳೂರು-ದೆಹಲಿ ನಡುವೆ 49 ಸಲ, ನಾರಿಮನ್ 19, ಮೋಹನ್ ಕಟಾಕಿ೯ 193 ಬಾರಿ ತಿರುಗಾಡಿದ ಕಚಿ೯ನ ಮೊತ್ತವೇ ರೂ.2.75 ಕೋಟಿಗಳು!
ಅಂದರೆ ಅಂದು ಸರ್.ಎಂ ವಿಶ್ವೇಶ್ವರಯ್ಯನವರು ಅಣೆಕಟ್ಟೆ ನಿಮಾ೯ಣಕ್ಕೆ ಮಾಡಿದ ಅಂದಾಜುಪಟ್ಟಿಗಿಂತಲೂ ಹೆಚ್ಚು!! ಇವರಷ್ಟೇ ಅಲ್ಲ, ಎಸ್.ಎಸ್ ಜವಳಿ ದೆಹಲಿಯಿಂದ ಬೆಂಗಳೂರಿಗೆ 158 ಬಾರಿ ಪ್ರಯಾಣ ಮಾಡಿದ್ದಾರೆ, ಶಂಭುಪ್ರಸಾದ್ ಶಮಾ೯ ಎಂಬವರು 138 ಬಾರಿ ದಂಡಯಾತ್ರೆ ಮಾಡಿದ್ದಾರೆ. ಇವರಿಬ್ಬರ ಪ್ರವಾಸ ಮತ್ತು ಖಚಿ೯ನ ಬಾಬ್ತು 6 ಕೋಟಿಗೂ ಹೆಚ್ಚು. ಕಾವೇರಿ ಕೆಲವರ ಪಾಲಿಗೆ ನಿಜಕ್ಕೂ ಕಾಮಧೇನುವಾಗಿಹೋದಳು. ಇನ್ನು ಕೆಲವು ಮಹಾನುಭಾವರು ಕಾವೇರಿ ಹೆಸರಲ್ಲಿ ಕೊಬ್ಬಿದವರಿದ್ದಾರೆ. ಆದರೂ ರಾಜ್ಯಕ್ಕೆ ನ್ಯಾಯ ಒದಗಿಸಲಾಗದೆ ಇಂದು ಭಾರೀ ನೋವು ಅನುಭವಿಸಿದವರಂತೆ ಪೋಸು ಕೊಡುತ್ತಿದ್ದಾರೆ. ಫೇಸ್‍ಬುಕ್‍ನಲ್ಲಿ ರಾಜ್ಯದ ರಕ್ಷಕರೆಂಬಂತೆ ಪೋಸು ಕೊಡುವ ವಕೀಲ ಬ್ರಿಜೇಶ್ ಕಾಳಪ್ಪ ನಯವಾಗಿ 31.42 ಲಕ್ಷಗಳನ್ನು ಕೇಸಿನ ಫೀಸಿನ ರೂಪದಲ್ಲಿ ತೆಗೆದುಕೊಂಡಿದ್ದಾರೆ. ಇಂಥ ತಾಕತ್ತಿಲ್ಲದ ವಕೀಲರುಗಳಿಗೆ ಕೋಟಿಗಟ್ಟಲೆ ಹಣ ಸುರಿದೂ ನಮ್ಮ ನೀರಿನ ಹಕ್ಕನ್ನು ರಕ್ಷಿಸಿಕೊಳ್ಳಲಾಗದವರಿಂದ ರಾಜ್ಯ ಹೆಚ್ಚಿನದೇನನ್ನು ನಿರೀಕ್ಷಿಸಲು ಸಾಧ್ಯ ಹೇಳಿ? ಅಂದು ನಾಡು ಬೆಳಗಲು ಅವರು ಪಟ್ಟ ಶ್ರಮವಷ್ಟೇ ಸಾಕೇ? ಅದನ್ನು ಉಳಿಸಿಕೊಳ್ಳುವಲ್ಲಿ ನಮ್ಮದೂ ಪಾಲಿಲ್ಲವೇ? ಆಭರಣಗಳನ್ನು ಅಡವಿಟ್ಟ ಮಹಾರಾಜರು ಇಂದಿನ ಮುಖ್ಯಮಂತ್ರಿಗಳಿಗೆ ಪ್ರೇರಣೆ ಹುಟ್ಟಿಸದಿದ್ದರೆ ನಾಡು ಹೇಗೆ ಬೆಳಗೀತು?
ಇದೇ ಹೊತ್ತಲ್ಲಿ ಅತೀ ಬೇಸರದ ಸಂಗತಿಯೊಂದನ್ನೂ ಹೇಳಬೇಕೆನಿಸುತ್ತಿದೆ. ಕಾವೇರಿ ರೈತರಿಗೆ ನೀರುಣಿಸುವುದರಲ್ಲಿ ಗಂಗೆಗಿಂತಲೂ ಮುಂದೆ ಎಂಬ ಮಾತೊಂದಿದೆ. ತಾನು ಹರಿಯುವಲ್ಲೆಲ್ಲಾ ಕಾವೇರಿ ಅನ್ನ ಹುಟ್ಟಿಸುತ್ತಾ ಸಾಗಿ ಬಂಗಾಳಕೊಲ್ಲಿಯನ್ನು ಸೇರಿ ಲೋಕಪಾವನೆ ಎಂದು ಕರೆದುಕೊಳ್ಳುತ್ತಾಳೆ. ಕನಾ೯ಟಕದಲ್ಲಿ ಆಕೆ ತಾಯಿ ಎನಿಸಿಕೊಂಡಷ್ಟೇ ತಮಿಳುನಾಡಿನಲ್ಲೂ ಕಾವೇರಿ ತಾಯಿ ಎಂದು ಕರೆಸಿಕೊಳ್ಳುತ್ತಾಳೆ. ಯಾರಿಗೆ ತಾಯಿಯಾದರೂ ಕೊಡಗಿನಲ್ಲಿ ಆಕೆ ಕುಲದೇವಿ! ಕೊಡಗಿನವರು ಕಾವೇರಿಯನ್ನು ತಮ್ಮ ಕುಲಮಾತೆ ಎಂದೇ ನಂಬುತ್ತಾರೆ. ಇಷ್ಟೆಲ್ಲಾ ಇದ್ದರೂ ಒಂದು ವಿಚಿತ್ರವನ್ನು ಎಲ್ಲರೂ ಗಮನಿಸಿರಬಹುದು. ಪ್ರತೀ ಬಾರಿ ಕಾವೇರಿ ವಿವಾದದ ಬಿಸಿ ಏರಿದಾಗಲೂ ಕಾವೇರಿಯ ತವರುಮನೆ ಕೊಡಗು ಮಹಾಮೌನಕ್ಕೆ ಜಾರುತ್ತದೆ.
ಏಕೆಂದರೆ…
ಕೊಡಗಿನಲ್ಲಿ ಮಳೆಯಾದರೆ ಸರಕಾರಕ್ಕೂ ಖುಷಿ, ಕಟ್ಟೆ ತುಂಬುವ ಹೊತ್ತೆಂದು ಹಳೆ ಮ್ಯೆಸೂರು-ತಮಿಳುನಾಡಿಗೂ ಖುಷಿ. ಆದರೆ ಕೊಡಗು ಅಕ್ಷರಶ ಆ ಹೊತ್ತಲ್ಲಿ ನರಳಾಡುತ್ತದೆ. ಇಲ್ಲಿ ಕಟ್ಟೆ ತುಂಬುವ ಹೊತ್ತಲ್ಲಿ ಅಲ್ಲಿ ಕತ್ತಲಿರುತ್ತದೆ. ಭತ್ತದ ಬಿತ್ತನೆಗೆ ಅಲ್ಲಿನ ರೈತ ಮಳೆ ನಿಲ್ಲಲಿ ಎಂದು ಕಾಯುತ್ತಿರುತ್ತಾನೆ. ಕಾವೇರಿಗೆ ಸೇರುವ ಉಪನದಿಗಳು, ತೋಡುಗಳೂ ತುಂಬಿ, ಏರಿ ಒಡೆದು ಗದ್ದೆಗೆ ನುಗ್ಗುತ್ತದೆ. ಅಲ್ಲಿನ ರೈತ ನಷ್ಟ ಅನುಭವಿಸುತ್ತಾನೆ. ನಷ್ಟದ ಭತಿ೯ಗೆ ಆತ ಸರಕಾರಕ್ಕೆ ಅಜಿ೯ ಹಾಕುತ್ತಾನೆ. ಸಾವಿರಾರು ರೂಪಾಯಿ ನಷ್ಟಕ್ಕೆ ಸರಕಾರ ಚಿಲ್ಲರೆ ನೂರಿನ್ನೂರು ರೂಪಾಯಿ ಪರಿಹಾರ ನೀಡುತ್ತದೆ. ನಿಲ್ಲದೆ ಬೀಳುವ ಮಳೆ ನಗರದಲ್ಲಿ ಕುಳಿತ ನಮಗೆ ಖುಷಿಯಾಗುತ್ತದೆ. ಕೊಡಗಿನಲ್ಲಿ ಬಜ೯ರಿ ಮಳೆ ಎಂಬ ಸುದ್ಧಿಗೆ ಹಳೆ ಮ್ಯೆಸೂರು-ಬೆಂಗಳೂರಿನ ಜನ ಈ ವಷ೯ ಕಾವೇರಿ ಕ್ಯಾತೆ ಇಲ್ಲ, ಕುಡಿಯುವ ನೀರಿಗೆ ಬರವಿಲ್ಲ, ಫಸಲಿಗೆ ನಷ್ಟವಿಲ್ಲ ಎಂದುಕೊಳ್ಳುತ್ತೇವಲ್ಲಾ ಅದೇ ಹೊತ್ತಲ್ಲಿ ನಮ್ಮ ಕೊಡಗಿನ ರೈತನ ಬಲಿಯುತ್ತಿರುವ ಕಾಫಿ, ಕಾಳುಮೆಣಸು ಕಣ್ಣೆದುರೇ ಉದುರುದುರಿ ಬೀಳುತ್ತವೆ. ಆತ ಮಳೆಯಲ್ಲೇ ಅವನ್ನು ನೋಡುತ್ತಾ ಕಣ್ಣೀರು ಹಾಕುತ್ತಾನೆ. ಅಲ್ಲಿನ ಮಳೆಗೆ ಇಲ್ಲಿನ ರೈತನ ಕನಸ್ಸು ಚಿಗುರುತ್ತಿದ್ದಾಗಲೇ ಅಲ್ಲಿನ ರೈತರ ಕನಸ್ಸು ಮುದುಡುತ್ತದೆ. ಮಗಳ ಮದುವೆ ಚಿಂತೆ, ತಂದೆ-ತಾಯಿಯ ಆರೋಗ್ಯದ ಚಿಂತೆ, ಅಧ೯ಕ್ಕೆ ನಿಂತ ಹೊಸ ಮನೆ, ಮಕ್ಕಳ ಓದಿನ ಚಿಂತೆ ಒಂದು ಮಳೆಗಾಲದಲ್ಲೇ ಆತನಿಗೆ ಶುರುವಾಗುತ್ತದೆ. ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಾನೆ. ಆ ಮಳೆಯಲ್ಲಿ ಆತನ ಕಣ್ಣೀರು ಕೊಡಗನ್ನು ದಾಟುವುದಿಲ್ಲ. ಜಲಾಶಯ ತುಂಬಿದರೆ ಕರೆಂಟಿನ ಉತ್ಪಾದನೆಯೂ ಹೆಚ್ಚು ಎಂದು ಎಂಜಿನಿಯರುಗಳು ಇಲ್ಲಿ ಲೆಕ್ಕಾಚಾರ ಹಾಕುತ್ತಿದ್ದಾಗಲೇ ಅಲ್ಲಿ ಕೊಡಗಿನ ಪೊನ್ನಂಪೇಟೆ, ಶ್ರೀಮಂಗಲ, ಕುಟ್ಟ, ನಾಪೋಕ್ಲು, ಸೂಲ೯ಬ್ಬಿ, ಬಿರುನಾಣಿಗಳು ತಿಂಗಳುಗಟ್ಟಲೆ ಕತ್ತಲುಹೊದ್ದು ಮಲಗಿರುತ್ತದೆ. ಹೊರಲೋಕದ ಸಂಪಕ೯ವನ್ನು ಕಳೆದುಕೊಳ್ಳುತ್ತವೆ. ಅವರೂ ರೈತರು ಎಂಬುದು ನಮಗೆ ಯಾವತ್ತಾದ್ರೂ ನೆನಪಿಗೆ ಬಂದಿದೆಯೇ? ಅವರ ಉದುರುವ ಕಾಫಿ, ಮೆಣಸು, ಬತ್ತದ ಬೆಂಬಲ ಬೆಲೆಗೆ ನಾವೆಂದಾದರೂ ಬೀದಿಗಿಳಿದು ಹೋರಾಟ ಮಾಡಿದ್ದೇವೆಯೇ? ರಸ್ತೆ ತಡೆದು ಟಯರು ಹೊತ್ತಿಸಿದ್ದೇವೆಯೇ? ಕೊಡಗಿನ ಸಂಪನ್ಮೂಲವನ್ನು ಸೂರೆಗೈಯುವ ಕೇರಳ ಲೂಟಿಕೋರರ ಬಗ್ಗೆ, ಕೊಡಗಿನ ಲೂಟಿಗೆ ಸರದಾರನಂತೆ ನಿಂತಿರುವ ಮಾಜಿ ಗ್ರಹಮಂತ್ರಿಯ ಬಗ್ಗೆ ನಾವೆಂದಾದರೂ ಮಾತಾಡಿದ್ದೇವೆಯೇ?
ತಮಿಳುನಾಡಿಗೆ ನೀರು ಬಿಡುವಾಗ ನೆನಪಾಗುವ ಕಾವೇರಿ, ತೀಥ೯ರೂಪಿಣಿಯಾಗಿ ದಶ೯ನ ಕೊಡುವ ತುಲಾ ಸಂಕ್ರಮಣದ ದಿನ ನಮಗೆ ನೆನಪೇ ಆಗುವುದಿಲ್ಲ! ಅದೇ ರೀತಿ ಉತ್ತರ ಕನಾ೯ಟಕದ ಗೋಳಿಗೆ ದಕ್ಷಿಣ ಕನಾ೯ಟಕ ಎಂದೂ ಸ್ಪಂದಿಸುವುದಿಲ್ಲ ಎಂಬ ನೋವು ಉತ್ತರ ಕನಾ೯ಟಕದವರನ್ನು ಕಾಡುತ್ತಿತ್ತು. ಆದರೆ ಬಹಳ ಖುಷಿಕೊಡುವ ಸಂಗತಿಯೆಂದರೆ ಮಹಾದಾಯಿ ಹೋರಾಟಕ್ಕೆ ದಕ್ಷಿಣವೂ ಸ್ಪಂದಿಸಿತು, ಕಾವೇರಿಯ ಕೂಗು ನಿನ್ನೆ ಹುಬ್ಬಳ್ಳಿಯಲ್ಲೂ ಮಾದ೯ನಿಸಿದೆ. ನಮ್ಮ ನ್ಯಾಯಾಲಯ ನೀಡಿದ ವ್ಯತಿರಿಕ್ತ ತೀಪಿ೯ನ ಸಲುವಾಗಿಯಾದರೂ ನೆಲ, ಜಲದ ವಿಷಯದಲ್ಲಿ ಕನ್ನಡಿಗರೆಲ್ಲ ಒಂದಾಗುವಂತಾಯಿತಲ್ಲಾ… ಈ ಒಗ್ಗಟ್ಟನ್ನು ಹೀಗೆಯೇ ಮುಂದುವರಿಸಿ ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನುಗ್ಗೋಣ. ನಮ್ಮ ಹಕ್ಕಿಗಾಗಿ ಹೋರಾಡೋಣ.
ಅಂದಹಾಗೆ, ಸೆಪ್ಟೆಂಬರ್ 15, ವಿಶ್ವೇಶ್ವರಯ್ಯನವರ ಜನ್ಮದಿನ, ಮಣ್ಣಿಗೆ ನೀರುಣಿಸಿದವನ ಮರೆಯದೆ ನೆನೆಯೋಣ. ಇನ್ನೊಂದು ತಿಂಗಳಲ್ಲಿ ಬರಲಿರುವ ಕಾವೇರಿ ತುಲಾಸಂಕ್ರಮಣಕ್ಕೂ ಶ್ರದ್ಧೆಯಿಂದ ಹೋಗೋಣ.
September 9, 2016
September 3, 2016
ಬ್ರಿಟಿಷರ ಜತೆ ನಿಜಕ್ಕೂ ಕೈಜೋಡಿಸಿದ್ದು ಯಾರು?!
ಬ್ರಿಟಿಷರ ಜತೆ ನಿಜಕ್ಕೂ ಕೈಜೋಡಿಸಿದ್ದು ಯಾರು?!
“She found in Panditji the companionship and equality of spirit and intellect that she craved. Each helped overcome loneliness in the other’, ಆಕೆ ಯಾವುದಕ್ಕಾಗಿ ಹಾತೊರೆಯುತ್ತಿದ್ದಳೋ ಆ ಸಂಗಾತಿಯನ್ನು, ಸಮಾನ ಉತ್ಸಾಹ ಹಾಗೂ ಪಾಂಡಿತ್ಯವನ್ನು ಪಂಡಿತ್‍ಜಿಯಲ್ಲಿ ಆಕೆ ಕಂಡುಕೊಂಡಳು. ಏಕಾಂಗಿತನದಿಂದ ಹೊರಬರಲು ಪರಸ್ಪರರ ಸಹಕಾರ ದೊರೆಯಿತು.
***
“”The four of them — father, mother, daughter and prime minister — would walk out together, but always with Edwina and Nehru together side by side up ahead’, ಆ ನಾಲ್ವರೂ, ತಂದೆ -ತಾಯಿ-ಮಗಳು-ಮೊದಲ ಪ್ರಧಾನಿ ಒಟ್ಟೊಟ್ಟಿಗೇ ಹೊರ ಹೋಗುತ್ತಿದ್ದರು. ಆದರೆ ಎಡ್ವಿನಾ ಮತ್ತು ನೆಹರು ಯಾವತ್ತೂ ಅಕ್ಕಪಕ್ಕ ಮತ್ತು ಎಲ್ಲರಿಗಿಂತ ಮುಂದೆ.
***
“”And I came to realise how deeply he and my mother loved each other”, ಆತ ಮತ್ತು ನನ್ನ ತಾಯಿ ಅದೆಷ್ಟು ಆಳವಾಗಿ ಪ್ರೀತಿಸಿದ್ದರು ಎಂಬುದು ನನಗರಿವಾಯಿತು.
***
ನಾಲ್ಕು ವಷ೯ಗಳ ಹಿಂದೆ ಪ್ರಕಟವಾದ ಭಾರತದ ಕೊನೆಯ ವೈಸರಾಯ್ ಲಾಡ್‍೯ ಮೌಂಟ್ ಬ್ಯಾಟೆನ್ ಅವರ ಕಿರಿಯ ಪುತ್ರಿ ಪಮೀಲಾ ಹಿಕ್ಸ್‌ರ ಆತ್ಮಚರಿತ್ರೆ “Daughter of Empire’ ನಲ್ಲಿ ತನ್ನ ತಾಯಿ ಎಡ್ವಿನಾ ಮತ್ತು ಪಂಡಿತ್‍ಜಿ(ಯಾರು ಅಂತ ಗೊತ್ತು ತಾನೇ?) ನಡುವಿನ ಸ್ನೇಹದ ಬಗ್ಗೆ ಹೀಗೆಲ್ಲ ಬರೆದುಕೊಂಡಿದ್ದಾರೆ. ಅಂತಾರಾಷ್ಟ್ರೀಯ ಗೂಢಚಾರ ವ್ಯವಸ್ಥೆಯಲ್ಲಿ ಹೇಗೆ ಹೆಣ್ಣು, ಹೊನ್ನನ್ನು ಬಳಸಿಕೊಂಡು ಶತ್ರುಗಳನ್ನು ಹೆಣೆಯುತ್ತಾರೆ ಎಂಬುದನ್ನು ನಾವೆಲ್ಲ ಓದಿದ್ದೇವೆ. ಆದರೂ ಈ ದೇಶದ ಮೇಲೆ ದಾಸ್ಯದ ಸಂಕೋಲೆಯನ್ನು ಹೇರಿದ ದೇಶದ ರೂಲರ್‍ನ ಪತ್ನಿಯ ಜತೆಗಿದ್ದ ವಿಶೇಷ ಸ್ನೇಹದ ಬಗ್ಗೆ ನಾವೆಂದೂ ಅನುಮಾನಿಸಲಿಲ್ಲ. ಅವರ ನಿಷ್ಠೆ, ದೇಶಪ್ರೇಮದ ಬಗ್ಗೆಯೂ ಪ್ರಶ್ನಿಸಲಿಲ್ಲ. ಸುಭಾಷ್‍ಚಂದ್ರ ಬೋಸರು ಭಾರತ ರಾಷ್ಟ್ರೀಯ ಸೇನೆಯೊಂದಿಗೆ ಬರುತ್ತಿದ್ದೇನೆ ಎಂದು ಬ್ರಿಟಿಷರ ವಿರುದ್ಧ ಸಮರ ಸಾರಿದಾಗ ಸುಭಾಷ್ ವಿರುದ್ಧ ತಾನೇ ಖಡ್ಗ ಹಿಡಿದು ಹೋರಾಡುತ್ತೇನೆ ಎಂದಾಗಲೂ ಪಂಡಿತ್‍ಜಿಯನ್ನು ನಾವು ಪ್ರಶ್ನಿಸಲಿಲ್ಲ. ಒನದೆಡೆ ಕ್ರಾಂತಿಕಾರಿಗಳನ್ನು ನಿಧ೯ಯವಾಗಿ ಗುಂಡಿಟ್ಟು ಕೊಲ್ಲುತ್ತಿರುವಾಗ, ನೇಣಿಗೆ ಏರಿಸುತ್ತಿರುವಾಗ ಈ ಕಾಂಗ್ರೆಸ್ಸಿಗರ ವಿರುದ್ಧ ಬ್ರಿಟಿಷರೇಕೆ ಬಂದೂಕು ಬಿಡಿ, ಕನಿಷ್ಠ ಹಲ್ಲುಕಡ್ಡಿಯನ್ನೂ ಎತ್ತುತ್ತಿಲ್ಲವಲ್ಲಾ ಎಂದು ಸಂಶಯಪಡಲಿಲ್ಲ. ಸ್ವಾತಂತ್ರ ಬಂದ ನಂತರವೂ ಸಿಯಾಚಿನ್‍ನ ಒಂದಷ್ಟು ಭಾಗ ಕೈತಪ್ಪಿ ಹೋದಾಗ ಅಲ್ಲ ಹುಲ್ಲುಕಡ್ಡಿಯೂ ಹುಟ್ಟುವುದಿಲ್ಲ ಎಂದು ಪಂಡಿತ್ ಜಿ ಸಮಥಿ೯ಸಿಕೊಂಡಾಗಲೂ ನಾವು ಸುಮ್ಮನಾದೆವು.
ಆದರೆ…
ಹೆಜ್ಜೆ ಹೆಜ್ಜೆಗೂ ಸಂಶಯ, ಶಂಕೆ, ಅನುಮಾನಕ್ಕೆ ಎಡೆಮಾಡಿ- ಕೊಡುವಂತೆಯೇ ನಡೆದುಕೊಂಡು ಬಂದ ಪಂಡಿತ್‍ಜಿ ಕುಟುಂಬವಗ೯ದವರು ಹಾಗೂ ಅವರ ಭಟ್ಟಂಗಿಗಳು ಮಾತ್ರ ಬೇರೆಯವರ ನಿಷೆಯನ್ನು ಪ್ರಶ್ನಿಸಿಕೊಂಡೇ ಬರುತ್ತಿದ್ದಾರೆ. ಒಂದೇ ವಷ೯ದಲ್ಲಿ ಮಂಡ್ಯದ ಜನರಿಂದ ತಿರಸ್ಕೃತರಾದ ಯಕಶ್ಚಿತ್ ನಾಯಕಿಯೊಬ್ಬರು ರಾಷ್ಟ್ರವಾದಿ ಆರೆಸ್ಸೆಸ್ ಬ್ರಿಟಿಷರ ಜತೆ ಕೈಜೋಡಿಸಿತ್ತು ಎಂದು ಹೇಳಿಕೆ ಕೊಟ್ಟಿದ್ದಾರೆ.
ಪಾಠಕ್, ತದನಂತರ ಕಪೂರ್ ಆಯೋಗದಿಂದ ಖೋಸ್ಲಾ ಆಯೋಗದವರೆಗೂ ಎಲ್ಲ ತನಿಖಾ ಆಯೋಗಗಳು ಆರೆಸ್ಸೆಸ್‍ಗೆ ಕ್ಲೀನ್ ಚಿಟ್ ಕೊಟ್ಟಿದ್ದರೂ “ರಾಷ್ಟ್ರಪಿತ ಗಾಂಧಿಯನ್ನು ಕೊಂದರು’, “ಆರೆಸ್ಸೆಸ್ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳಲಿಲ್ಲ, ಅದು ಬ್ರಿಟಿಷರೊಂದಿಗೆ ಕೈಜೋಡಿಸಿತು’ ಎಂಬ ಆರೋಪವನ್ನು ಇಂದಿಗೂ ಪುನರಾವತ೯ನೆ ಮಾಡಲಾಗುತ್ತಿದೆ.
ಹಾಗಾದರೆ ಸ್ವಾತಂತ್ರ್ಯ ಚಳವಳಿಗೆ ಆರೆಸ್ಸೆಸ್‍ನ ಕೊಡುಗೆಯೇ ಇಲ್ಲವೆ?
ಯಾವಾಗ ಕಾಂಗ್ರೆಸ್ ಪಾಳಯ ದೇಶವಿಭಜನೆಗೆ ಅಸ್ತು ಎಂದಿತೋ ಇಂಥದ್ದೊಂದು ಆರೋಪದ ಬೀಜಾಂಕುರವೂ ಆಯಿತು. ನಂತರ ಕಾಂಗ್ರೆಸ್ ತಾನು ಅಸಹಾಯಕ ವಾದಾಗಲೆಲ್ಲಾ ಅದನ್ನು ಹೇಳಿಕೊಂಡು ಬಂತು. ತನ್ನ ಹುಳುಕುಗಳು ಹೊರಬಂದಾಗಲೆಲ್ಲಾ ಅದನ್ನು ಮತ್ತೆ ಮತ್ತೆ ಆಡಿತು. ಭಾರತೀಯ ಜನಸಂಘ ಸ್ಥಾಪನೆಯಾದ ಮೇಲಂತೂ ಈ ಹುಯಿಲು ಮತ್ತಷ್ಟು ಹೆಚ್ಚಾಯಿತು. ಗಾಂಧಿ ಕೊಂದವರು ಎಂಬ ಆರೋಪಕ್ಕೆ ಬಲ ತುಂಬಲು ಸ್ವಾತಂತ್ರ್ಯ ಹೋರಾಟದ ಮಿಥ್ಯಾರೋಪವನ್ನು ಕಾಂಗ್ರೆಸ್ ಹೆಚ್ಚು ಹೆಚ್ಚು ಮಾಡುತ್ತಲೇ ಬಂತು. ಈ ಸುಳ್ಳುಗಳಿಂದಲೇ ಅವರು ತಮ್ಮ ಸೌಧ ಕಟ್ಟಿಕೊಂಡರು. ಕ್ರಮೇಣ ಗಾಂಧಿಯನ್ನು ಕೊಂದವರು ಎಂಬ ಆರೋಪ ಹುಸಿಯಾಗುತ್ತಾ ಬಂದಂತೆ ಕಾಂಗ್ರೆಸ್ ಮತ್ತು ಕಮ್ಯುನಿ ಸ್ಟರಿಗೆ ಆರೆಸ್ಸೆಸ್ ವಿರೋಧಿಸಲು ಉಳಿದಿದ್ದು ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ಭಾಗವಹಿಸಲಿಲ್ಲ ಎಂಬ ಮಿಥ್ಯಾರೋಪ ಒಂದೇ.
ನಿಜಕ್ಕೂ ಆರೆಸ್ಸೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲವೇ? ಹಾಗಾದರೆ ದಾಖಲಾಗಿರುವ ಈ ಇತಿಹಾಸಗಳೆಲ್ಲವೂ ಏನು? ಕಾಂಗ್ರೆಸ್ ಆದರತ್ತ ಕಣ್ಣುಮುಚ್ಚಿದ್ದೇಕೆ?
ಅದರ ಅಸಲಿ ಕಾರಣ ಹೀಗಿದೆ. 1925ರಲ್ಲಿ ಡಾ.ಕೇಶವ ಬಲಿರಾಮ ಹೆಡಗೇವಾರರು ಸಂಸ್ಕೃತಿ, ಧಮ೯, ಸಂಸ್ಕಾರ, ವ್ಯಕ್ತಿ ನಿಮಾ೯ಣದ ಉದ್ದೇಶದಿಂದ ಆರೆಸ್ಸೆಸ್ ಸ್ಥಾಪಿಸಿದಾಗ ಅವರ ಹಿಂದಿದ್ದವರು ಐದಾರು ಜನ ಇನ್ನೂ ಸರಿಯಾಗಿ ಮೀಸೆ ಮೂಡದ ಯುವಕರು ಮಾತ್ರ. ಆದರೆ ಈ ಮೀಸೆ ಮೂಡದ ಹುಡುಗರ ಶ್ರದ್ಧೆ, ಕಾಯ೯ಕ್ಷಮತೆ, ದೇಶಭಕ್ತಿ ಬಹುಬೇಗನೆ ಸಮಾಜದ ಗಮನವನ್ನು ಸೆಳೆಯತೊಡಗಿತು. ದಿನೇ ದಿನೆ ಆರೆಸ್ಸೆಸ್ ಶಾಖೆಗಳಿಗೆ ಹೊಸಬರು ಪ್ರವೇಶಿಸತೊಡಗಿದರು. ಆರೆಸ್ಸೆಸ್ ಸ್ಥಾಪನೆಯ ಆರಂಭದ ದಿನಗಳಲ್ಲೇ ಡಾ. ಹೆಡಗೇವಾರರು ತಮ್ಮ ಕಾಯ೯ಕತ೯ರಿಗೆ ಒಂದು ಗಂಟೆಯ ಶಾಖೆಯ ನಂತರ ಸ್ವಾತಂತ್ರ್ಯ ಹೋರಾಟಕ್ಕೆ ಸಮಯ ಕೊಡಿ ಎಂದು ಕರೆಕೊಟ್ಟಿದ್ದರು. ಮುಖ್ಯಸ್ಥರ ಆದೇಶಕ್ಕನುಗುಣವಾಗಿ ಆರೆಸ್ಸೆಸ್ ಕಾಯ೯ಕತ೯ರು ಸ್ವಾತಂತ್ರ್ಯ ಚಳವಳಿಗಳ ನಾನಾ ಹೋರಾಟಗಳಲ್ಲಿ, ನಾನಾ ಸಂಘಟನೆಗಳ ಜತೆ ಕೈಜೋಡಿಸಿ ಕೆಲಸ ಮಾಡತೊಡಗಿದರು. ಗುಲಾಮಗಿರಿಯ ವಿರುದ್ಧ ಹೋರಾಟಕ್ಕೆ ಯಾವ ಸಂಘಟನೆಯನ್ನು ಬೇಕಾದರೂ ಸೇರಿಕೊಳ್ಳಿ ಎಂಬ ಮುಖ್ಯಸ್ಥರ ಆದೇಶವನ್ನು ಸ್ವಯಂಸೇವಕರು ಚಾಚೂ ತಪ್ಪದೆ ಪಾಲಿಸಿದರು. ಕೆಲವರು ಭೂಗತ ಹೋರಾಟಕ್ಕೆ ಕೈಜೋಡಿಸಿದರೆ, ಇನ್ನು ಕೆಲವರು ಸತ್ಯಾಗ್ರಹ ನಡೆಸಿ ಜೈಲು ಸೇರಿದರು. ದಿನೇ ದಿನೆ ಆರೆಸ್ಸೆಸ್ ರೂಪಿಸುವ ಹೋರಾಟಗಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹೋರಾಟದ ತೀವ್ರತೆಯೂ ಹೆಚ್ಚಾಗುತ್ತಿತ್ತು. ಅಂದಿನ ಕಾಂಗ್ರೆಸ್ ನಾಯಕರೂ ಹೋರಾಟಕ್ಕೆ ಆರೆಸ್ಸೆಸ್ ಶಾಖೆಗಳತ್ತ ನೋಡುವ ಸ್ಥಿತಿ ನಿಮಾ೯ಣವಾಯಿತು.
ಈ ಎಲ್ಲಾ ಸಂಗತಿಗಳನ್ನು ಯಾಕೋ ಸ್ವಾತಂತ್ರ್ಯಾನಂತರದ ಭಾರತದ ಇತಿಹಾಸ ವ್ಯವಸ್ಥಿತವಾಗಿ ಮುಚ್ಚಿಹಾಕಿತು. ಇದರ ಜತೆಗೆ ಮತ್ತೂ ಒಂದು ಸಂಗತಿಯನ್ನು ಇತಿಹಾಸ ಮರೆಯಿತು. ಅದೇನೆಂದರೆ, ಕಾಂಗ್ರೆಸ್ 1885ರಲ್ಲಿ ಸ್ಥಾಪನೆಯಾಗಿದ್ದರೂ ಅದು ಸ್ವಾತಂತ್ರ್ಯ ಚಳವಳಿಗೆ ಅಧಿಕೃತ ಕರೆ ಅಂದರೆ ಪೂಣ೯ ಸ್ವರಾಜ್ಯಕ್ಕೆ ಕರೆಯನ್ನು ಕೊಟ್ಟಿದ್ದು1929ರಲ್ಲಿ. ಅಂದರೆ, ಕಾಂಗ್ರೆಸ್ ಸ್ಥಾಪನೆಯಾದ ಬರೋಬ್ಬರಿ 44 ವಷ೯ಗಳ ನಂತರ! ಹೀಗೆ ಮುಚ್ಚಿಡುವ ಕೆಲಸವನ್ನು ಕಾಂಗ್ರೆಸ್ ಸ್ವತಃ ಮಾಡಿತ್ತು. ಇತಿಹಾಸವನ್ನು ಮುಚ್ಚಿಟ್ಟು ಕೆಲವರನ್ನು ಹಣಿಯಬಹುದು ಮತ್ತು ತಾನು ದೊಡ್ಡವನಾಗಬಹುದು ಎಂಬುದನ್ನು ಅಂದಿನ ಕೆಲ ಕಾಂಗ್ರೆ ಸಿಗರು ಚೆನ್ನಾಗಿ ತಿಳಿದು ಕೊಂಡಿದ್ದರು. ಹಾಗಾದರೆ 1929ರವರೆಗೆ ಈ ಕಾಂಗ್ರೆಸ್ ಏನು ಮಾಡುತ್ತಿತ್ತು? ಅಲ್ಲೂ ಒಂದು ತಮಾಷೆಯಿದೆ! 1929ರವರೆಗೂ ಕಾಂಗ್ರೆ ಸಿನ ಬೇಡಿಕೆ “ಭಾರತಕ್ಕೆ ಡೊಮಿನಿಯನ್ ಪ್ರಾಶಸ್ತ್ಯ’ ಕೊಡಿ ಎಂಬುದಾಗಿತ್ತು! ಅಂದರೆ ಬ್ರಿಟಿಷರಿದ್ದರೆ ದೇಶಕ್ಕೆ ತೊಂದರೆ ಇಲ್ಲ, ಕೊಂಚ ಅಧಿಕಾರ ನಮಗೂ ಕೊಡಿ ಎಂಬ ಹೊಂದಾಣಿಕೆಯ ನಿಲುವಿಗೆ ಕಾಂಗ್ರೆಸ್ ಬದ್ಧವಾಗಿತ್ತು. ತಮ್ಮ ಚೀಲದಲ್ಲಿ ಕೊಳೆತ ಹಣ್ಣುಗಳನ್ನಿಟ್ಟುಕೊಂಡು ಇನ್ನೊಬ್ಬರ ಕೈಲಿರುವ ಹಣ್ಣು ಇನ್ನೂ ಬಲಿತಿಲ್ಲ ಎನ್ನುತ್ತಿದೆ ಇಂದಿನ ಇಂದಿನ ಕಾ೦ಗ್ರೆ ಸ್! ಕಾಂಗ್ರೆ ಸಿನ ಕಣ್ಣಾ ಮುಚ್ಚಾಲೆ ಆಟದಿಂದ ಇಂದು ಆರೆಸ್ಸೆಸ್, ಆಡುವ ಬಾಯಿಗೆ ಸುಲಭದ ತುತ್ತಾಗುತ್ತಿದೆ. ಸುಭಾಷರನ್ನೇ ನಿಂದಿಸುವ ಕಾಂಗ್ರೆಸ್ ಆರೆಸ್ಸೆಸನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲ ಎನ್ನುವುದು ವಿಶೇಷವೇನಲ್ಲ.
ಡಾ. ಹೆಡಗೇವಾರರು ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಇಂಗ್ಲೆಂಡಿನ ರಾಣಿಯ 60ನೇ ವಷ೯ದ ಪಟ್ಟಾಭೀಷೇಕ ಕಾಯ೯ಕ್ರಮ ದೇಶಾದ್ಯಂತ ವಿಜೃಂಭಣೆಯಿಂದ ನಡೆಯುತ್ತಿತ್ತು. ಅದರ ಅಂಗವಾಗಿ ಶಾಲೆಯಲ್ಲಿ ಉತ್ಸವವನ್ನು ಆಚರಿಸಿ ನೀಡಲಾಗಿದ್ದ ಸಿಹಿಯನ್ನೇ ಹೆಡಗೇವಾರರು ನಿರಾಕರಿಸಿದ್ದರು. ಸಿಹಿಯನ್ನು ನಿರಾಕರಿಸಿದ ಕಾರಣವನ್ನು ಕೆಲವರು ಕೇಳಿದಾಗ ಹೆಡಗೇವಾರರು “ನಮ್ಮ ಭೋಸ್ಲೇ ರಾಜವಂಶವನ್ನು ಕೊನೆಗೊಳಿಸಿದವರು ಕೊಟ್ಟ ಸಿಹಿಯನ್ನು ನಾನು ತಿನ್ನಬೇಕೇನು?’ ಎಂದು ಉತ್ತರಿಸಿದ್ದರು. ಇನ್ನೊಮ್ಮೆ ಶಾಲೆಯಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬ ಪರಿಶೀಲನೆಗೆ ಬಂದಾಗ ಹೆಡಗೇವಾರ್ ಎದ್ದು ನಿಂತು ವಂದೇ ಮಾತರಂ ಘೋಷಣೆ ಮೊಳಗಿಸಿ ಶಾಲೆಯಿಂದ ಹೊರಹಾಕಲ್ಪಟ್ಟರು. ಮುಂದೆ ಕಲ್ಕತ್ತಾದಲ್ಲಿ ಮೆಡಿಕಲ್ ಮಾಡುತ್ತಿರುವಾಗ ಕ್ರಾಂತಿಕಾರಿಗಳ ಜತೆ ಸೇರಿ ಪೊಲೀಸ್ ಠಾಣೆಯೊಂದಕ್ಕೆ ಬಾಂಬ್ ಕೂಡಾ ಎಸೆದಿದ್ದರು. ಆಗ ಹೆಡಗೇವಾರರ ವಯಸ್ಸು ಕೇವಲ 18. ಏಕೆಂದರೆ ಡಾಕ್ಟರ್‍ಜಿ ಖ್ಯಾತ ಕ್ರಾಂತಿಕಾರಿ ನಾಯಕ ಪುಲಿನ್ ಬಿಹಾರಿ ದಾಸರ ಗರಡಿಯಲ್ಲಿ ಪಳಗಿದ್ದರು. ಕೆಲವೇ ದಿನಗಳಲ್ಲಿ ಡಾಕ್ಟರ್‍ಜಿ, ಯಾವ ಹೆಸರನ್ನು ಕೇಳಿದಾಗ ಬ್ರಿಟಿಷರು ಹೆದರಿ ನಡುಗುತ್ತಿದ್ದರೋ ಅಂಥ “ಅನುಶೀಲನ ಸಮಿತಿ’ಯ ಸಕ್ರೀಯ ಕಾಯ೯ಕತ೯ರಾದರು. ಮುಂದೆ 1927ರಲ್ಲಿ ಮರಳಿ ನಾಗಪುರಕ್ಕೆ ಬಂದ ಡಾಕ್ಟರ್‍ಜಿ ಭಾವುಜಿ ಕಾವರೆ ಮತ್ತು ಅಪ್ಪಾಜೀ ಜೋಶಿಯವರ ಜೊತೆಗೂಡಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು.
ಇತ್ತ ಬಾಲಗಂಗಾಧರನಾಥ ತಿಲಕರು ನಿಧನರಾಗಿದ್ದರು. ಆ ಸಮಯದಲ್ಲಿ ಡಾಕ್ಟರ್‍ಜಿ ಕಾಂಗ್ರೆಸ್ ಪ್ರವೇಶಿಸಿದರು. ಅದೇ ಹೊತ್ತಿಗೆ ಗಾಂಧೀಜಿ ಕೂಡಾ ಆಫ್ರಿಕಾದಿಂದ ಮರಳಿದ್ದರು. ಕಾಂಗ್ರೆ ಸ್‍ನ ಜೊತೆ ಜೊತೆಗೆ ಹೆಡಗೆವಾರರು ನಾಗಪುರದ ತಮ್ಮ ಕೆಲ ಸ್ನೇಹಿತರ ಜೊತೆಗೂಡಿ ನಾಗಪುರ ನ್ಯಾಶನಲ್ ಯೂನಿಯನ್ ಕೂಡ ಶುರು ಮಾಡಿದ್ದರು. ಕಾಂಗ್ರೆಸ್ ಪೂಣ೯ ಸ್ವರಾಜ್ಯವನ್ನು ಘೋಷಿಸುವ ಹತ್ತು ವಷ೯ಗಳ ಮೊದಲೇ ಹೆಡಗೇವಾರರು ಸಂಪೂಣ೯ ಸ್ವಾತಂತ್ರ್ಯಕ್ಕೆ ಬ್ರಿಟಿಷರಿಗೆ ಬೇಡಿಕೆ ಇಟ್ಟಿದ್ದರು! 1921ರಲ್ಲಿ ಗಾಂಧಿಯವರು ಕೈಗೊಂಡ ಅಸಹಕಾರ ಚಳವಳಿಯಲ್ಲಿ ಡಾ.ಹೆಡಗೇವಾರರು ಪಾಲ್ಗೊಂಡು 1 ವಷ೯ ಜೈಲುಪಾಲಾಗಿದ್ದರು. ಜೈಲಿನದ ಹೊರಬಂದ ಹೆಡಗೇವಾರರು 1930ರ ಚಳವಳಿಯಲ್ಲೂ ಗಾಂಧೀಜಿಯ ವರೊಂದಿಗೆ ಕೈಜೋಡಿಸಿದ್ದರು. ಮುಂದೆ ಆರೆಸ್ಸೆಸ್ ಸ್ಥಾಪನೆಯಾದ ನಂತರ ಹೆಡಗೇವಾರ್ ನಡೆಸಿದ ಜಂಗಲ್ ಸತ್ಯಾಗ್ರಹದಲ್ಲಿ 9 ತಿಂಗಳ ಕಾರಾಗ್ರಹ ಶಿಕ್ಷೆಯನ್ನು ಅನುಭವಿಸಿದ್ದರು.
ಹೆಡಗೇವಾರರ ಚಳವಳಿ ತೀವ್ರವಾಗುತ್ತಿದ್ದಂತೆ ಬ್ರಿಟಿಷ್ ಗುಪ್ತಚಕ ಇಲಾಖೆ ಸರಕಾರಿ ಉದ್ಯೋಗದಲ್ಲಿದ್ದ ಆರೆಸ್ಸೆಸ್ ಕಾಯ೯ಕತ೯ರ ಹಿಂದೆ ಬಿತ್ತು. ನೂರಾರು ಜನರು ಉದ್ಯೋಗ ಕಳೆದುಕೊಂಡರು. ಆ ಕಾಲದಲ್ಲಿ ಕಾಂಗ್ರೆಸ್ ಆರೆಸ್ಸೆಸ್ಸಿನ ನಡೆಯನ್ನು ಸಮಥಿ೯ಸಿಯೂ ಇತ್ತು. ಇಂದಿನ ಎಳಸು ಕಾಂಗ್ರೆ ಸಿಗರಿಗೆ ಅವರ ಇತಿಹಾಸವನ್ನಾದರೂ ಅರಿತಿದ್ದರೆ ಆರೆಸ್ಸೆಸ್ ಅಥ೯ವಾಗುತ್ತಿತ್ತು. ಆದರೆ 1932ರಲ್ಲಿ ಮಧ್ಯ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದ ಇ. ಗೋಡಾ೯ನ್ ಆರೆಸ್ಸೆಸ್ ಒಂದು ಸಾಂಪ್ರದಾಯಿಕ ಹಾಗು ರಾಜಕೀಯ ಶಕ್ತಿಯಾಗಿರುವ ಕಾರಣ ಸರಕಾರಿ ನೌಕರರು ಅದಕ್ಕೆ ಸೇರಬಾರದು ಎಂದು ಸುತ್ತೋಲೆಯನ್ನು ಹೊರಡಿಸಿದ. ಮುಂದೆ ಸ್ವಾತಂತ್ರ್ಯಾನಂತರ ಇದೇ ಕೆಲಸವನ್ನು ಕಾಂಗ್ರೆಸ್ ಎರಡು ಭಾರಿ ನಿಷೇಧದ ನೆಪದಲ್ಲಿ ಮಾಡಿತು! ಆರೆಸ್ಸೆಸ್ಸಿನ ಬದ್ಧತೆ ಅದಾಗಲೇ ಖ್ಯಾತವಾಗುತ್ತಿತ್ತು. ಸದಾ೯ರ್ ವಲ್ಲಭ್ ಭಾಯಿ ಪಟೇಲರ ಅಣ್ಣ ಹಾಗೂ ಸ್ವರಾಜ್ಯ ಪಕ್ಷದ ಸಂಸ್ಥಾಪಕರಲ್ಲೊಬ್ಬರಾದ ವಿಠ್ಠಲ್ ಭಾಯ್ ಪಟೇಲರು ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸಂಸ್ಥಾಪಕ ಮದನ್ ಮೋಹನ ಮಾಳವೀಯರು ಆರೆಸ್ಸೆಸ್ ಕಾಯ೯ಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದರು. ಗಾಂಧಿೀಜಿ ಕೂಡಾ ವಾದಾ೯ದಲ್ಲಿ ಆರೆಸ್ಸೆಸ್ ಶಾಖೆಗೆ ಭೇಟಿ ನೀಡಿ ಅದರ ಕಾಯ೯ವೈಖರಿಯನ್ನು ಹೊಗಳಿದ್ದರು. ಖ್ಯಾತ ಕಾಂಗ್ರೆಸ್ ನಾಯಕರಾಗಿದ್ದ ಅಪ್ಪಾಜಿ ಜೋಶಿಯವರು ಆರೆಸ್ಸೆಸ್ಸಿನ ಧ್ವಜಕ್ಕೆ ಧ್ವಜಪ್ರಣಾಮ್ ಕೂಡ ಮಾಡಿದ್ದರು! ಇವರೆಲ್ಲರೂ ಕೋಮುವಾದಿಗಳಾಗಿದ್ದರೆ? ಸ್ವಾತಂತ್ರ್ಯ ಹೋರಾಟದ ಈ ಅಧ್ವೆಯು೯ಗಳೆಲ್ಲರೂ ಅಂದು ಆರೆಸ್ಸೆಸ್ ಅನ್ನು ಏಕೆ ಬೆಂಬಲಿಸಿದ್ದರು? ಅಷ್ಟೇ ಅಲ್ಲ ಸಾಕ್ಷಾತ್ ಸುಭಾಷ್ ಚಂದ್ರ ಭೋಸ್ ಕೂಡಾ 1940ರಲ್ಲಿ ಡಾ.ಹೆಡಗೇವಾರರನ್ನು ಭೇಟಿಯಾಗಿ ಚಚಿ೯ಸಿದ್ದರು.
ಈ ಎಲ್ಲಾ ಇತಿಹಾಸವನ್ನು ನಮ್ಮ ಪಠ್ಯಪುಸ್ತಕಗಳು ಹೇಳುವುದಿಲ್ಲ. ಏಕೆಂದರೆ ಹೊಸ ಭಾರತಕ್ಕೆ ಜೀವಮಾನದಲ್ಲಿ ಒಂದೇ ಒಂದು ಲಾಠಿ ಏಟು ತಿನ್ನದ ನೆಹರೂವನ್ನು ಚಾಚಾ ಮಾಡಬೇಕಿತ್ತು! ಮುಂದೆ ಡಾ. ಹೆಡಗೇವಾರರು ತನ್ನ ಉತ್ತರಾಧಿಕಾರಿಯಾಗಿ ಮಹಾ ದಾಶ೯ನಿಕ ಮಾಧವ ಸದಾಶಿವ ಗೋಳವಲಕರರನ್ನು ಸರಸಂಘಚಾಲಕರನ್ನಾಗಿ ನಿಯುಕ್ತಿಗೊಳಿಸಿದರು. 1940ರಲ್ಲಿ ಎರಡನೆ ಸರಸಂಘಚಾಲಕ ಗೋಳವಲ್ಕರ್ ಗುರೂಜಿ ತಮ್ಮ ಸ್ವಯಂಸೇವಕರಿಗೆ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಂದು ಕರೆ ನೀಡಿದ್ದರು. ಆ ಹೊತ್ತಿಗೆ ಆರೆಸ್ಸೆಸ್ ಸ್ವಯಂಸೇವಕರಿಗೆ ಸಂಸ್ಕಾರ, ವ್ಯಕ್ತಿನಿಮಾ೯ಣ, ದೇಶದ ಭವಿಷ್ಯದ ಬಗ್ಗೆ ಮತ್ತಷ್ಟು ಸ್ಪಷ್ಟತೆ ಬಂದಿತ್ತು. ಚಳವಳಿ ಮತ್ತಷ್ಟು ತೀವ್ರವಾಯಿತು. ಮಹಾರಾಷ್ಟ್ರದ ವಿದಭ೯ ಪ್ರಾಂತ್ಯದ ಚಿಮುರ್‍ನಲ್ಲಿ ಸತ್ಯಾಗ್ರಹ ನಡೆಯುವ ವೇಳೆಯಲ್ಲಿ ಖಾಕಿ ಚಡ್ಡಿ ಹಾಕಿಕೊಂಡಿದ್ದ ರಾಷ್ಟ್ರಪ್ರೇಮಿ ಯುವಕನೊಬ್ಬ ತಿರಂಗಾ ಧ್ವಜ ಹಾರಿಸಲು ಹೋದಾಗ ಆರೆಸ್ಸೆಸ್ ಗುಂಡೇಟು ತಿಂದು ಪ್ರಾಣಬಿಟ್ಟಿದ್ದ. ಹಲವು ಸ್ವಯಂಸೇವಕರು ನೇರ ಚಳವಳಿಗಿಳಿದರು. ಮತ್ತೆ ಕೆಲವರು ಚಳವಳಿಗೆ ಬೆಂಬಲವಾಗಿ ನಿಂತರು. ಕ್ವಿಟ್ ಇಂಡಿಯಾ ಚಳವಳಿ ಸಂದಭ೯ದಲ್ಲಿ ಭೂಗತರಾಗಿದ್ದ ಕಾಂಗ್ರೆಸ್ಸಿನ ಕಾಯ೯ಕತ೯ರಿಗೆ ಆರೆಸ್ಸೆಸ್ ಆಶ್ರಯ ಕೊಟ್ಟಿತು. ಬಹುಶಃ ಕಾಂಗ್ರೆಸ್ ಇನದು ಅದನ್ನು ಮರೆತಿದೆ. ಅರುಣಾ ಆಸಫ಼್ ಅಲಿ, ಜಯಪ್ರಕಾಶ ನಾರಾಯಣ ಮೊದಲಾದವರು ದೆಹಲಿಯ ಸಂಘಚಾಲಕ ಲಾಲಾ ಹಂಸರಾಜ ಗುಪ್ತಾರವರ ಮನೆಯಲ್ಲಿ, ಅಚ್ಯುತ್ ಪಟವಧ೯ನ, ಸಾನೆ ಗುರೂಜಿಯವರು ಪುಣೆಯ ಸಂಘಚಾಲಕ ಭಾವುಸಾಹೇಬ್ ದೇಶಮುಖರ ಮನೆಯಲ್ಲಿ ಆಶ್ರಯ ಪಡೆದಿದ್ದರು ಹಾಗೂ ಕ್ರಾಂತಿವೀರ ನಾನಾ ಪಾಟೀಲರು ಔಂಧಿನ ಸಂಘಚಾಲಕರಾಗಿದ್ದ ಎಸ್.ಡಿ. ಸತ್ವಲೇಕರರ ಮನೆಯಲ್ಲಿ ಆಶ್ರಯ ಪಡೆದಿದ್ದರು. ಅರುಣಾ ಆಸಫ಼್ ಅಲಿಯವರು 1967ರಲ್ಲಿ ದೆಹಲಿಯ “ಹಿಂದುಸ್ತಾನ್’ ಎಂಬ ಹಿಂದಿ ಪತ್ರಿಕೆಗೆ ನೀಡಿದ ಸಂದಶ೯ನದಲ್ಲಿ 1942ರ ಕ್ವಿಟ್ ಇಂಡಿಯಾ ಚಳವಳಿಯ ಬಗ್ಗೆ ಹೀಗೆ ಹೇಳುತ್ತಾರೆ: “ಪ್ರಮುಖ ನಾಯಕರ ಬಂಧನದ ನಂತರ 1942ರ ಚಳವಳಿಯೊಂದು ದಿಶೆಯಿಲ್ಲದ ಚಳವಳಿಯಾಗಿತ್ತು. ಆಗ ನಾನು ಭೂಗತನಾಗಿ ದೆಹಲಿಯ ಆರೆಸ್ಸೆಸ್ ಪ್ರಾಂತ ಸಂಘಚಾಲಕರಾದ ಲಾಲಾ ಹಂಸರಾಜರ ಮನೆಯಲ್ಲಿ ಆಶ್ರಯ ಪಡೆದಿದ್ದಾಗ ನಾನು ಅವರ ಮನೆಯಲ್ಲಿದ್ದ ವಿಚಾರ ತಮ್ಮ ಕೆಲಸದ ಆಳುಗಳಿಗೂ ಸಂದೇಹ ಬರದಂತೆ 15 ದಿನ ಅವರು ನನಗೆ ವ್ಯವಸ್ಥಿತವಾದ ರಕ್ಷಣೆ ಒದಗಿಸಿದ್ದರು. ಭೂಗತವಾಗಿದ್ದ ವ್ಯಕ್ತಿ ಹೆಚ್ಚು ದಿನ ಒಂದೇ ಸ್ಥಳದಲ್ಲಿ ಇರಲಾಗದ ಕಾರಣ ಲಾಲಾ ಹಂಸರಾಜರು ತಮ್ಮ ಪತ್ನಿಯ ಬಟ್ಟೆಗಳಲ್ಲಿ ನನ್ನನ್ನು ಮುಚ್ಚಿ ಯಾರಿಗೂ ಸಂದೇಹ ಬರದ ರೀತಿಯಲ್ಲಿ ಅಲ್ಲಿಂದ ಬೇರೆಡೆಗೆ ಕಳಿಸಿಕೊಟ್ಟರು.’
ಇದೆಲ್ಲಾ ಸ್ವಾತಂತ್ರ್ಯ ಚಳವಳಿಗೆ ಆರೆಸ್ಸೆಸ್‍ನ ಕೊಡುಗೆಯೇ ಅಲ್ಲವೇ?
ಕೇರಳದ ಬಹುದೊಡ್ಡ ಕಮ್ಯುನಿಸ್ಟ್ ನಾಯಕರಾಗಿದ್ದಂತೂ ಇಎಂಎಸ್ ನಂಬೂದಿರಿಪಾಡ್ ಅವರಂಥವರೇ, BJP-RSS: In the service of the Right Reaction’ ಎಂಬ ತಮ್ಮ ಕಿರು ಹೊತ್ತಗೆಯಲ್ಲೂ ಡಾ. ಹೆಡಗೇವಾರರು ಗಾಂಧಿ ಅನುಯಾಯಿ ಯಾಗಿದ್ದರು. 1930ರ ದಂಡೀ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು ಎಂದು ಬರೆದಿರುವಾಗ ರಾಹುಲ್ ಗಾಂಧಿ ಹಾಗೂ ಆತನ ತಿಳಿಗೇಡಿ ಅನುಯಾಯಿಗಳಿಂದ ಆರೆಸ್ಸೆಸ್‍ಗೆ ಸಟಿ೯ಫಿಕೆಟ್ ಬೇಕೇ?
ಕಳೆದ 70 ವಷ೯ಗಳಿ೦ದ ಇಂಥ ಎಷ್ಟೋ ಉಳಿಪೆಟ್ಟುಗಳನ್ನು ತಿನದು ಆರೆಸ್ಸೆಸ್ ಶಿಲ್ಪವಾಗಿದೆ. ತುತು೯ಪರಿಸ್ಥಿತಿ ಸಮಯದಲ್ಲಿ ಅರೆಸ್ಸೆಸ್‍ನ ಪಾತ್ರವನ್ನು ಅರಿತವರಿಗೆ ಸ್ವಾತಂತ್ರ್ಯ ಚಳವಳಿಯಲ್ಲಿನ ಅದರ ಪಾತ್ರದ ಬಗ್ಗೆ ಯಾವ ಸಂಶಯವೂ ಮೂಡುವುದಿಲ್ಲ. ಆದರೆ ತುತು೯ಪರಿಸ್ಥಿಯಲ್ಲಿ ಕಾಂಗ್ರೆಸ್ ನಡೆಸಿದ ದೌಜ೯ನ್ಯವನ್ನು ಕೇಳಿದವರು ಕಾಂಗ್ರೆ ಸಿನ ಜಾಯಮಾನವನ್ನು ಸುಲಭವಾಗಿ ಅಥ೯ಮಾಡಿಕೊಳ್ಳಬಹುದು. ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ಕೆದಕಿದರೆ ಇಂಥ ಮತ್ತಷ್ಟು ಸತ್ಯಗಳು ತೆರೆದುಕೊಳ್ಳುತ್ತಾಹೋಗುತ್ತವೆ. ಸತ್ಯ ತೆರೆದುಕೊನಡಷ್ಟೂ ಕಾಂಗ್ರೆಸ್ ಪಾತಾಳಕ್ಕೆ ಕುಸಿಯುತ್ತಾ ಹೋಗುತ್ತದೆ. ಅದರ ಬ್ರಿಟಿಷ್ ನಂಟು ಬೇರೊಂದು ಕಥೆಯನ್ನು ಹೇಳತೊಡಗುತ್ತದೆ. ಆ ಕಥೆ ಬೆಡ್‍ರೂಮುವರೆಗೂ ಮುಟ್ಟುತ್ತದೆ. ಆರೆಸ್ಸೆಸ್ ನಿಷ್ಠೆಯನ್ನು ಅನುಮಾನಿಸುವವರೊಮ್ಮೆ ಅದರ ಬಗ್ಗೆ ಯೋಚಿಸುವುದೊಳಿತು.
August 31, 2016
August 29, 2016
ಅವರಿದ್ದಿದ್ದರೆ ಇಂದಿಗೆ ತೊಂಬತ್ತು ತುಂಬುತ್ತಿತ್ತು!
ಅವರಿದ್ದಿದ್ದರೆ ಇಂದಿಗೆ ತೊಂಬತ್ತು ತುಂಬುತ್ತಿತ್ತು!
ಆ ಕುರುಚಲು ಗಡ್ಡ, ಹೆಗಲ ಮೇಲೊಂದು ಶಾಲು. ಅವರನ್ನು ನೋಡುವುದಕ್ಕೇ ಒಂಥರಾ ಖುಷಿ. ಮಾತು ನಿಧಾನ, ಆದರೆ ಬಲು ತೂಕ. ಕನ್ನಡವೂ ಸ್ಫುಟ, ಇಂಗ್ಲಿಷ್ ಮೇಲೂ ಪ್ರಭುತ್ವ. ಒಂದು ಸಣ್ಣ ಟೀಕೆಗೂ ಸ್ಪಂದಿಸುವ ಸಂವೇದನೆ. ಆರೋಪ ಎದುರಾದಾಗ ಎರಡು ಬಾರಿ ರಾಜೀನಾಮೆ ನೀಡಿದ ಅವರ ಸನ್ನಡತೆ. ಸಾಕಷ್ಟು ಎದ್ದು ಕಾಣುವ ವ್ಯಕ್ತಿತ್ವ. ನಾವು ಶಾಲೆಗೆ ಹೋಗುವಾಗ ತೊಟ್ಟಿದ್ದು ಅವರು ಕೊಟ್ಟ ಉಚಿತ ಸಮವಸ್ತ್ರಗಳನ್ನೇ. ನಾವು ಓದಿದ್ದೂ ಅವರು ನೀಡಿದ ಪುಕ್ಕಟೆ ಪಠ್ಯಪುಸ್ತಕಗಳನ್ನೇ.
ಅವರ ಹೆಸರು ರಾಮಕೃಷ್ಣ ಹೆಗಡೆ!
ಅವರನ್ನು ಒಬ್ಬ ಮುಖ್ಯಮಂತ್ರಿ ಎನ್ನಬೇಕೋ, ಜನನಾಯಕ ಎನ್ನಬೇಕೋ ಎಂಬ ಗೊಂದಲವುಂಟಾಗುತ್ತದೆ . ಸಂಸದೀಯ ಪ್ರಜಾತಂತ್ರದಲ್ಲಿ ಯಾರು ಬೇಕಾದರೂ ಪ್ರಧಾನಿ, ಮುಖ್ಯಮಂತ್ರಿಯಾಗಬಹುದು, ಸಂಖ್ಯಾಬಲದ ಮೇಲೆ ನಡೆಯುವ, ನಿಂತಿರುವ ಈ ಪ್ರಕ್ರಿಯೆಯಲ್ಲಿ ಜಯಿಸಿ ಯಾರೂ ಅಧಿಕಾರ ಚಲಾಯಿಸ ಬಹುದು, ಎಂಥೆಂಥವರೂ ಗದ್ದುಗೆ ಏರಬಹುದು ಎಂಬುದನ್ನು ನಾವು ಕಾಣುತ್ತಿದ್ದೇವೆ. ಈ ರಾಜ್ಯ 22 ಮುಖ್ಯ ಮಂತ್ರಿಗಳನ್ನು ಕಂಡಿದ್ದರೂ ಗದ್ದುಗೆ ಏರಿದ ಮೇಲೂ ಜನನಾಯಕರೆಂಬಂತೆ ಕಂಡವರು, ಜನರ ಭಾವನೆಗಳಿಗೆ ಬಹುವಾಗಿ ಸ್ಪಂದಿಸಿದವರು, ಜನರ ಅಭ್ಯುದಯಕ್ಕೆ ಬಹುವಾದ ಆದ್ಯತೆ ಕೊಟ್ಟವರು ಇಬ್ಬರು ಮಾತ್ರ-ಡಿ. ದೇವರಾಜ್ ಅರಸು ಹಾಗೂ ರಾಮಕೃಷ್ಣ ಹೆಗಡೆ.
ನಿಮಗೆ ಬೆಂಡಿಗೆರಿ ಪ್ರಕರಣ ನೆನಪಿರಬಹುದು. ದಲಿತನೊಬ್ಬನಿಗೆ ಮಲ ತಿನ್ನಿಸಿದ ಘಟನೆ ನಡೆದಾಗ ಮುಖ್ಯಮಂತ್ರಿಗಾದಿಯಲ್ಲಿ ಕುಳಿತಿದ್ದ ಹೆಗಡೆಯವರು ಎಷ್ಟು ಕುಪಿತರಾದರೆಂದರೆ ಇನ್ನು ಮುಂದೆ ಇಂತಹ ಪ್ರಕರಣ ನಡೆದರೆ ತಪ್ಪಿತಸ್ಥನಿಗೆ ದೌಜ೯ನ್ಯಕ್ಕೊಳಗಾದ ದಲಿತನಿಂದಲೇ ಮಲ ತಿನ್ನಿಸುತ್ತೇನೆ ಎಂದು ಗುಡುಗಿದರು. ಆಯಾ ಜಿಲ್ಲೆಗಳ ಎಸ್ಪಿಗಳನ್ನೇ ಹೊಣೆಗಾರರನ್ನಾಗಿ ಮಾಡುತ್ತೇನೆ ಎಂದರು. ಅದರಿಂದ ದಲಿತರ ಆತ್ಮಸ್ಧೈಯ೯ ಹೆಚ್ಚಾಯಿತು. ಅಷ್ಟೇ ಅಲ್ಲ, ದಲಿತರಲ್ಲಿನ ಪ್ರತಿಭೆಗೆ ಮಣೆಹಾಕಲು, ಅಹ೯ತೆಯನ್ನು ಗುರುತಿಸಲು ಹಿಂದೆಂದೂ ಕಂಡುಕೇಳರಿಯದ ಕ್ರಮವೊಂದನ್ನು ಕೈಗೊಂಡರು. ದಲಿತ ವಿದ್ಯಾಥಿ೯ಯೊಬ್ಬ ಪದವಿ ಅಥವಾ ಎಂಎ, ಎಂಎಸ್ಸಿ, ಎಂಕಾಂ ಮುಂತಾದ ಸ್ನಾತಕೋತ್ತರ ಪದವಿಗಳಲ್ಲಿ ರ್ಯಾಂಕ್ ಪಡೆದರೆ ಆತನನ್ನು ಪ್ರೊಬೆಷನರಿ ಅವಧಿಗೆ ವಿವಿಧ ಇಲಾಖೆಗಳಿಗೆ ನೇರವಾಗಿ ನೇಮಕ ಮಾಡಿಕೊಳ್ಳುವ ಪದ್ಧತಿ ಜಾರಿಗೆ ತಂದರು. ಆತ ಸ್ಪಧಾ೯ತ್ಮಕ ಪರೀಕ್ಷೆ, ಸಂದಶ೯ನ ಎದುರಿಸುವ ಪ್ರಮೇಯವೇ ಇಲ್ಲದಂತೆ ಮಾಡಿದರು. ಇವು ದಲಿತರ ಮಾನಸಿಕ ಸ್ಧೈಯ೯ವನ್ನು ವೃದ್ಧಿಸುವ ತೀಮಾ೯ನಗಳಾಗಿದ್ದವು. ಅವರು ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತವಾಗಿ ಯೂನಿಫಾ ಮ್‍೯ ಕೊಡಮಾಡಿದ ಹಿಂದೆಯೂ ತಾರತಮ್ಯ ಭಾವನೆಯನ್ನು ತೊಡೆದುಹಾಕುವ, ಎಲ್ಲರೂ ಸಮಾನ ಎಂಬ ಭಾವನೆಯನ್ನು ಮೂಡಿಸುವ ಯೋಚನೆಯಿತ್ತು. ಈ ರೀತಿ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳೆರಡನ್ನೂ ಉಚಿತವಾಗಿ ನೀಡುವ ಯೋಜನೆ ದೇಶದಲ್ಲಿಯೇ ಮೊದಲ ಪ್ರಯೋಗವಾಗಿತ್ತು!
1983ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ರಾಮಕೃಷ್ಣ ಹೆಗಡೆಯವರು ತೆಗೆದುಕೊಂಡ ಕೆಲ ನಿಧಾ೯ರಗಳು ಹೇಗೆ ಮಾದರಿಯಾಗಿದ್ದವೆಂದರೆ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರೇ ಅನುಕರಣೆಗೆ ಹೊರಟರು. ಪಂಚಾಯತ್ ರಾಜ್ ಕಾಯಿದೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಕನಾ೯ಟಕ. ರಾಜೀವ್ ಗಾಂಧಿಯವರು ಸಂವಿಧಾನಕ್ಕೆ 73ನೇ ತಿದ್ದುಪಡಿ ತಂದು ಜಾರಿ ಮಾಡಲು ಹೊರಟ ಪಂಚಾಯತ್ ರಾಜ್ ವ್ಯವಸ್ಥೆಗೆ ಹೆಗಡೆಯವರ ಮಾದರಿಯೇ ಪ್ರೇರಣೆಯಾಗಿತ್ತು. ಇನ್ನು ಬಂಜರು, ಒಣಭೂಮಿ ಅಭೀವೃದ್ಧಿ ವಿಚಾರಕ್ಕೆ ಬರೋಣ. ರಾಜ್ಯದ ಒಟ್ಟಾರೆ ಪರಿಸ್ಥಿತಿಯನ್ನು ಗಮನಿಸಿದರೆ ಶೇ.20ರಷ್ಟು ಭೂಮಿಗೆ ಮಾತ್ರ ನೀರಾವರಿ ಅನುಕೂಲವಿತ್ತು. ಉಳಿದ 80 ಪರ್ಸೆಂಟ್ ಜಾಗವನ್ನೂ ಸದುಪಯೋಗ ಪಡಿಸಿಕೊಳ್ಳುವ ಸಲುವಾಗಿ ವೇಸ್ಟ್ ಲ್ಯಾಂಡ್ ಡೆವೆಲಪ್‍ಮೆಂಟ್ ಆ್ಯಕ್ಟಿವಿಟಿಗೆ ಚಾಲನೆ ನೀಡಿದರು. ಅಂದರೆ ತೋಟಗಾರಿಕೆ ಬೆಳೆ, ಫಾ ರೆಸ್ಟ್, ಡ್ರೈಕ್ರಾಪ್‍ಗಳಿಗೆ ಉತ್ತೇಜ ನ ಕೊಟ್ಟರು. ಪ್ರತಿ ಜಿಲ್ಲೆಗೊಂದರಂತೆ ತೋಟಗಾರಿಕಾ ನಿಗಮ ಸ್ಥಾಪನೆ ಮಾಡಿದರು. ಇದರಿಂದ ಪ್ರೇರಿತರಾದ ರಾಜೀವ್ ಗಾಂಧಿಯವರು “ನ್ಯಾಷನಲ್ ಹಾಟಿ೯ಕಲ್ಚರ್ ಬೋಡ್‍೯’ ಸ್ಥಾಪನೆ ಮಾಡಿದರು.
ನಿಜಕ್ಕೂ ಅವರೊಬ್ಬ ಪ್ರೇರಣಾದಾಯಿಕ ನಾಯಕ!
ಉತ್ತರ ಕನಾ೯ಟಕದಲ್ಲಿ ಲಿಂಗಾಯತರದ್ದೇ ಪ್ರಾಬಲ್ಯವಿ ದ್ದರೂ ಅವರು ತಮ್ಮ ಜಾತಿ ನಾಯಕರಿಗಿಂತ ಹೆಗಡೆಯವರ ಮೇಲೆ ಹೆಚ್ಚು ವಿಶ್ವಾಸವಿಟ್ಟಿ ದ್ದರು, ಗೌರವ ಹೊಂದಿದ್ದರು. ಅವರಲ್ಲಿದ್ದ ಮೇನೇಜಿರಿಯಲ್ ಸ್ಕಿಲ್ ಅನ್ನು ಈಗಿನವರು ಕಲಿಯಬೇಕು. ಲಿಂಗಾಯತರು , ಒಕ್ಕಲಿಗರನ್ನು ಸಂಭಾಳಿಸುವ ಜತೆಗೆ ಬಿ. ಸೋಮಶೇಖರ್, ರಾಚಯ್ಯ, ನಜೀರ್ ಸಾ ಬ್, ಪಿಜಿಆರ್ ಸಿಂಧ್ಯಾ, ಸಿದ್ದರಾಮಯ್ಯ (ಹಾಲಿ ಮುಖ್ಯಮಂತ್ರಿ), ಬಿ.ರಘುಪತಿ, ಜೀವರಾಜ್ ಆಳ್ವ ಅವರಂಥ ಅನ್ಯ ಜಾತಿ, ಧರ್ಮೀಯರನ್ನೂ ಪ್ರೋತ್ಸಾಹಿಸಿದರು. ಬಹುಶಃ ಕ್ಯಾಬಿನೆಟ್ ಮೇಲೆ ಅವರಿಗಿದ್ದ ಹಿಡಿತ ಮುಂದೆ ಯಾರಲ್ಲೂ ಕಾಣಲಿಲ್ಲ ಎನ್ನಬಹುದು. ಆರೋಪ ಎದುರಾದಾಗ ದೇವೇಗೌಡರು, ಜೀವಿಜಯ, ಬಿ. ಸೋಮಶೇಖರ್‍ರಿಂದ ರಾಜೀನಾಮೆ ಪಡೆದು ವಿಚಾರಣೆ ಎದುರಿಸುವಂತೆ ಸೂಚಿಸಿದ ಅವರ ಎದೆಗಾರಿಕೆಯನ್ನು ಈಗಿನವರಲ್ಲಿ ಕಾಣುವುದಕ್ಕಾದರೂ ಸಾಧ್ಯವಿದೆಯೇ? ಇವತ್ತು ಎಲ್ಲರೂ ಜನಲೋಕಪಾಲ, ಲೋಕಾಯುಕ್ತದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಲೋಕಾಯುಕ್ತ ಕಾಯಿದೆಯನ್ನು ಮೊಟ್ಟಮೊದಲಿಗೆ ಜಾರಿಗೆ ತಂದವರೇ ರಾಮಕೃಷ್ಣ ಹೆಗಡೆ ಎಂದರೆ ನಂಬುತ್ತೀರಾ?
ಆಡಳಿತದಲ್ಲಿ ಭ್ರಷ್ಟಾಚಾರವನ್ನು ಹತ್ತಿಕ್ಕುವ ಸಲುವಾಗಿ ಲೋಕಾಯುಕ್ತವನ್ನು ಜಾರಿಗೆ ತಂದಿದ್ದು ಮಾತ್ರವಲ್ಲ, ಸ್ವ ಇಚ್ಚೆಯಿಂದ ಪ್ರಕರಣ ದಾಖಲಿಸಿಕೊಳ್ಳುವ ಅಧಿಕಾರ ಪವರ್ ಕೊಟ್ಟರು! ಕೊನೆಗೆ ಪಕ್ಷದೊಳಗೆ ಎದುರಾದ ಭಾರೀ ಒತ್ತಡಕ್ಕೆ ಮಣಿದು ಅದನ್ನು ಹಿಂತೆಗೆದುಕೊಂಡಿದ್ದು ಬೇರೆ ಮಾತು. ಆದರೆ ಹೆಗಡೆಯವರಲ್ಲಿ ದ್ದ ಪ್ರಾಮಾಣಿಕ ಕಾಳಜಿಯನ್ನು ಮರೆಯಲು ಸಾಧ್ಯವಿಲ್ಲ. ಎ.ಡಿ. ಕೌಶಲ್ ಮೊದಲ ಲೋಕಾಯುಕ್ತರಾಗಿ ನೇಮಕಗೊಂಡರು. ಮಂತ್ರಿಗಳನ್ನು ವಿಚಾರಣೆ ನಡೆಸುವ ಅಧಿಕಾರವನ್ನು ಲೋಕಾಯುಕ್ತಕ್ಕೆ ಕೊಡಲಾಯಿತು. ಇಲ್ಲಿ ಗಮನಿಸಬೇಕಾದ ಮತ್ತೊಂದು ಗಮನಾಹ೯ ಅಂಶವೆಂದರೆ ಸ್ವಜನಪಕ್ಷಪಾತ, ಪ್ರಭಾವಗಳಿಂದ ಲೋಕಾಯುಕ್ತವ ನ್ನು ದೂರವಿಡುವ ಸಲುವಾಗಿ ಲೋಕಾಯುಕ್ತರಾಗಿ ಅನ್ಯರಾಜ್ಯದ ನ್ಯಾಯಾಧೀಶರನ್ನು ನೇಮಕ ಮಾಡುವ ಸಂಪ್ರದಾಯ ಆರಂಭೀಸಿದರು ಹೆಗಡೆ. ರಾಮಕೃಷ್ಣ ಹೆಗಡೆಯವರು ಎಂತಹ ವ್ಯಕ್ತಿಯೆಂದರೆ ಮೆಡಿಕಲ್ ಸೀಟು(ಎಂಡಿ) ಕೊಡಿಸಿದ್ದಕ್ಕೆ ಪ್ರತಿಯಾಗಿ ಲಂಚಪಡೆದುಕೊಳ್ಳಲಾಗಿದೆ ಪಡೆದುಕೊಳ್ಳಲಾಗಿದೆ ಎಂದು ಎ.ಕೆ. ಸುಬ್ಬಯ್ಯನವರು ಆರೋಪ ಮಾಡಿದಾಗ ಸ್ವಂತ ಮಗನ ವಿರುದ್ಧವೇ ನ್ಯಾಯಾಂಗ ತನಿಖೆಗೆ ಆದೇಶ ಮಾಡಿದರು. ಹಾಗೆ ಮಾಡಿದ ದೇಶದ ಮೊದಲ ಹಾಗೂ ಏಕೈಕ ಮುಖ್ಯಮಂತ್ರಿ ಅವರು! ಅವರ ಸಹೋದರ ಗಣೇಶ್ ಹೆಗಡೆ ಅಂತಾರಾಜ್ಯ ಅಕ್ಕಿ ಸಾಗಣೆ, ದಾಸ್ತಾನಿನಲ್ಲಿ ಭಾಗಿಯಾಗಿ ದ್ದಾರೆ ಎಂದು ಆರೋಪಿಸಿದಾಗ ಒಡಹುಟ್ಟಿದವನ ವಿರುದ್ಧವೂ ತನಿಖೆ ಮಾಡಿಸಿದರು. ಹೀಗೆ ಆಡಳಿತದಲ್ಲಿ ಮೌಲ್ಯಾಧಾರಿತ ನಿಲುವು, ನಿಧಾ೯ರಗಳನ್ನು ತೆಗೆದುಕೊಂಡರು!
ಇದು ಆಡಳಿತ ಹಾಗೂ ಜನಮಾನಸದಲ್ಲಿ ಒಳ್ಳೆಯ ಪರಿಣಾಮ ಬೀರಿತು. ಹಾಗಾಗಿ ಹೆಗಡೆ ಆಡಳಿತದ ಬಗ್ಗೆ ಜನರಲ್ಲಿ ಒಳ್ಳೆಯ ಇಂಪ್ರೆಷನ್ ಬಂತು. ಅವರ ಆಡಳಿತದಲ್ಲಿ ಜಾರಿಗೆ ಬಂದ ಸಮಗ್ರ ಶಿಕ್ಷಣ ಕಾಯಿದೆಯನ್ನು ಮರೆಯಲು ಸಾಧ್ಯವೆ? ಇವತ್ತು ನಾವು ಕಾಣುವ ಸಿಇಟಿ ಮತ್ತು ಅದರ ಮೂಲಕ ಪ್ರತಿಭಾವಂತ ವಿದ್ಯಾಥಿ೯ಗಳಿಗೆ ದೊರೆಯುತ್ತಿರುವ ಉಚಿತ ಸೀಟು ಸೌಲಭ್ಯಕ್ಕೆ ಹೆಗಡೆಯವರ ಜನತಾ ಸರಕಾರ ಜಾರಿಗೆ ತಂದ ಈ ಕಾಯಿದೆಯೇ ಕಾರಣ. ರಾಷ್ಟ್ರದಲ್ಲೇ ಮೊದಲ ಬಾರಿಗೆ ರ್ಯಾಗಿಂಗ್ ನಿಷೇಧ ಮಾಡಲಾಯಿತು. ಅದನ್ನು ಕ್ರಿಮಿನಲ್ ಅಪರಾಧ ಎಂದು ಘೋಷಿಸಲಾಯಿತು. 1985ರಲ್ಲಿ ಕ್ಯಾಪಿಟೇಷನ್ ಫೀ ಅನ್ನು ನಿಷೇಧ ಮಾಡಿದ್ದು ದೇಶದಲ್ಲೇ ಪ್ರಥಮ. ಗುಂಡೂರಾವ್ ಕಾಲದಲ್ಲಿ ಆರಂಭವಾಗಿದ್ದ ಗೂಂಡಾಗಿರಿಯನ್ನು ಮಟ್ಟಹಾಕಿದ್ದು, ಆಲ್ಟರ್ನೇಟಿವ್ ವಾಟರ್ ಸೋಸ೯ಸ್ ಅಂದರೆ ಬಾವಿ ಬದಲು ವ್ಯಾಪಕವಾಗಿ ಬೋರ್ ನಿಮಾ೯ಣ ಕಾಯ೯ ಆರಂಭೀಸಿದ್ದೂ ಹೆಗಡೆಯವರ ಆಡಳಿತದಲ್ಲೇ. ಜತೆಗೆ ಐಎಎಸ್ ಅಧಿಕಾರಿಗಳಿಗೆ ಸ್ವತಂತ್ರವಾಗಿ ಕಾಯ೯ನಿವ೯ಹಿಸಲು ಅನುವು ಮಾಡಿಕೊಡುವ ಮೂಲಕ ಒಳ್ಳೆಯ ಆಡಳಿತ ಕೊಡುವುದಕ್ಕೂ ಪ್ರಯತ್ನಿಸಿದರು, ಪಂಚಾಯತ್ ರಾಜ್ ಮೂಲಕ ಅಧಿಕಾರ ವಿಕೇಂದ್ರೀಕರಣಕ್ಕೂ ದಾರಿ ಮಾಡಿಕೊಟ್ಟರು. ಆಗಿನ ಕಾಲದಲ್ಲಿ ಈಗಿನಂತೆ ಹಣಬಲ, ತೋಳ್ಬಲದ ಪ್ರಭಾವ ಇರಲಿಲ್ಲ ಅಂದುಕೊಳ್ಳಬೇಡಿ. ಈಗಿನ ಗಣಿಧಣಿಗಳಂತೆ ಆಗ ಖೋಡೆ, ಕೇಶವಲು ರೂಪದಲ್ಲಿ ಹೆಂಡದ ದೊರೆಗಳಿದ್ದರು. ಆದರೆ ಹೆಗಡೆಯವರು ಅವರನ್ನೆಂದೂ ತೊಡೆಮೇಲೆ ಕೂರಿಸಿಕೊಳ್ಳಲಿಲ್ಲ.
ಹಾಗಂತ ಹೆಗಡೆಯವರಲ್ಲಿ ದೌಬ೯ಲ್ಯಗಳೇ ಇರಲಿಲ್ಲವೆಂದಲ್ಲ. ಸದ್ಗುಣಗಳ ಜತೆ ಕೆಲ ದೌಬ೯ಲ್ಯ, ಚಾಲಾಕಿತನಗಳು ಸೇರಿಕೊಂಡಿದ್ದವು. ಒಬ್ಬ ಚತುರ ರಾಜಕಾರಣಿಯಂತೆಯೇ ರೈತ ಹಾಗೂ ದಲಿತ ಸಂಘಟನೆಗಳ ಸದ್ದಡಗಿಸಿದರು. ಸಿದ್ದಲಿಂಗಯ್ಯನವರನ್ನು ಎಂಎಲ್‍ಸಿ ಮಾಡಿದರೆ, ದೇವನೂರು ಮಹಾದೇವ ಅವರ ಸಹೋದರ ದೇವನೂರ ಶಿವಮಲ್ಲರನ್ನು ರಾಜಕಾರಣಕ್ಕೆ ತಂದು ವಯಸ್ಕ ಶಿಕ್ಷಣ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಿ ದಲಿತರನ್ನು ಒಡೆದರು.
ಆದರೂ ಒಬ್ಬ ಮುಖ್ಯಮಂತ್ರಿಯಾಗಿ ಅವರು ಮಾಡಿದ ಕಾಯ೯ಗಳು ಮುಂದಿನ ಹಲವು ತಲೆಮಾರು ನೆನಪಿನಲ್ಲಿಟ್ಟು ಕೊಳ್ಳುವಂಥವಾಗಿದ್ದವು. ಅವರಂಥ ಸೂಕ್ಷ್ಮಜೀವಿ, ಸಂವೇದನಾಶೀಲ ವ್ಯಕ್ತಿ ಮತ್ತೆ ಕನಾ೯ಟಕದ ಮುಖ್ಯಮಂತ್ರಿ ಯಾಗಲಿಲ್ಲ ಎಂದರೂ ತಪ್ಪಾಗುವುದಿಲ್ಲ. ಇಂತಹ ರಾಮಕೃಷ್ಣ ಹೆಗಡೆಯವರು ಜನಿಸಿದ್ದು 1926, ಆಗಸ್ಟ್ 29ರಂದು. ಅವರಿದ್ದಿದ್ದರೆ 90 ತುಂಬುತ್ತಿತ್ತು. ಪ್ರಸ್ತುತ ಹೊಲಸೆದ್ದಿರುವ ರಾಜಕಾರಣವನ್ನು ಕಂಡಾಗ ಹೆಗಡೆ ನೆನಪಾದರು.
August 28, 2016
Pratap Simha's Blog
- Pratap Simha's profile
- 58 followers
