ಕರ್ಮ | Karma Quotes
ಕರ್ಮ | Karma
by
Karanam Pavan Prasad421 ratings, 4.13 average rating, 43 reviews
ಕರ್ಮ | Karma Quotes
Showing 1-3 of 3
“ನಮ್ಮದು ನಂಬಿಕೆಯ ಸಮಾಜವಲ್ಲ, ಶ್ರದ್ಧೆಯ ಸಮಾಜ. ಶ್ರದ್ಧೆಗೂ ನಂಬಿಕೆಗೂ ಬಹಳ ವ್ಯತ್ಯಾಸವಿದೆ. ನಿನ್ನ ಹೆಂಡತಿ ನಿನ್ನೊಬ್ಬನನ್ನೇ ಗಂಡ ಎಂದುಕೊಳ್ಳುತ್ತಾಳೆ ಎಂಬುದು ನಿನ್ನ ನಂಬಿಕೆ. ಆದರೆ ಅವಳನ್ನು ಹೆಂಡತಿಯಂತೆ ನಡೆಸುಕೊಂಡು ಹೋಗುತ್ತೇನೆ ಎಂಬುದು ಶ್ರದ್ಧೆ.”
― ಕರ್ಮ | Karma
― ಕರ್ಮ | Karma
“ನಾಟಕಕ್ಕೆ ಮುಂಚೆ ಗಣಪತಿ ನಾಮ ಯಾಕೆ ಹೇಳ್ತಿಯ? ಗಣಪತಿ ಇದಾನೋ ಇಲ್ಲವೋ ಎಂಬ ನಿಷ್ಕರ್ಷೆಗೆ ನೀನು ಹೋಗುವುದಿಲ್ಲ. ಅಲ್ಲಿರುವುದು ನಾಟಕದ ಬಗೆಗಿನ ನಿನ್ನ ಶ್ರದ್ಧೆ. ಕೆಲವರಿಗೆ ಮೂರ್ತಿಯ ಮೇಲೆ ಶ್ರದ್ಧೆ, ಕೆಲವರಿಗೆ ಪುರಾಣಗಳ ಬಗ್ಗೆ ಶ್ರದ್ಧೆ, ಇನ್ನೂ ಕೆಲವರಿಗೆ ಕಾಣದೆ ಇರುವ ಅಗೋಚರದ ಬಗ್ಗೆ ಶ್ರದ್ಧೆ. ಆ ಶ್ರದ್ಧೆಯನ್ನೇ ಧರ್ಮ ಕಲಿಸಿದ್ದು.”
― ಕರ್ಮ | Karma
― ಕರ್ಮ | Karma
“ಬೇರೆಯವರ ಮೇಲಿನ ನಿನ್ನ ಅವಲಂಬನೆ ನಂಬಿಕೆ, ನಿನ್ನ ಮೇಲಿನ ನಿನ್ನ ಅವಲಂಬನೆ ಶ್ರದ್ಧೆ. ನಂಬಿಕೆ ಚಂಚಲ, ಶ್ರದ್ಧೆ ಅಚಲ.”
― ಕರ್ಮ | Karma
― ಕರ್ಮ | Karma
