Karanam Pavan Prasad's Blog: ಕರಣಂ ಬರೆಹಗಳು, page 2
July 24, 2017
ಕಲೆಯ ಅಂತರಂಗ ಮತ್ತು ಬಹಿರಂಗ
Art is an expression ಎಂಬುದು ಸಾಮಾನ್ಯ ಮಾತು. ಇದಕ್ಕೆ ಯಾವುದೇ ರೀತಿಯ ಗಹನ ವ್ಯಾಪ್ತಿ ಇಲ್ಲ. ಏಕೆಂದರೆ Art is not merely an expression, imitation or representation. ಅಭಿವ್ಯಕ್ತಿ ಕಲೆಯಾಗಬಲ್ಲದು, ಆದರೆ ಅಭಿವ್ಯಕ್ತಿಯೇ ಕಲೆಯಲ್ಲ. ಕಲೆಯು ಜಗತ್ತಿನ ಪ್ರತಿಬಿಂಬ, ಕಲೆಯು ಜಗತ್ತಿನ ಕನ್ನಡಿ ಎಂಬ ಮಾತುಗಳಿವೆ. ಸೂರ್ಯನು ಪೂರ್ವದಲ್ಲಿ ಹುಟ್ಟಿದ, ನನಗೆ ದುಃಖವಾಗಿದೆ, E = mc 2. ಇವೂ ಕೂಡ ಅಭಿವ್ಯಕ್ತಿಯೇ, ಹೇಳಿಕೆಯೇ. ಆದರೆ ಇದು ಕಲೆಯೇ? ಹೇಳಿಕೆ, ಅನುಕರಣೆ, ಅಭಿವ್ಯಕ್ತಿಗಳೆಲ್ಲವೂ ಕಲೆಯಾಗುವುದಿಲ್ಲ. ಕಲೆಗೆ ವಸ್ತು ಮತ್ತು ರಚನೆ ಹೊರತಾಗಿ ಅದಕ್ಕೊಂದು ಸೌಂದರ್ಯ ಇರಬೇಕಾಗುತ್ತದೆ. ಸೌಂದರ್ಯ ಇರಬೇಕೆಂದರೆ ರಸವಿರಬೇಕು. ಪ್ರಚಲಿತ ಕಲೆಗಳು ಎಂದು ಮುಖ್ಯವಾಗಿ ನೋಡುವ ಸಂಗೀತ, ಸಾಹಿತ್ಯ, ನೃತ್ಯ, ಚಿತ್ರಕಲೆ ಇವೆಲ್ಲವು ಸೌಂದರ್ಯದಿಂದಲೇ ಪೂರ್ಣವಾಗುತ್ತದೆ ಹೊರತು ಅಭಿವ್ಯಕ್ತಿ ಇಂದಲ್ಲ. ಉದಾಹರಣೆಗೆ ‘ಚಂದ್ರ ಬಾನಿನಲ್ಲಿ ಬಂದ’ ಎಂಬುದು ಹೇಳಿಕೆ, ‘ಆ ಚಂದ್ರನು ಮನಸ್ಸಿನಲ್ಲಿ ಉಲ್ಲಾಸ ತರುತ್ತಿದ್ದಾನೆ’ ಎಂಬುದು ಅಭಿವ್ಯಕ್ತಿ. ಇಲ್ಲಿ ವಸ್ತುವೂ ಇದೆ, ವಿವರಣೆಯೂ ಇದೆ ಆದರೂ ಸೌಂದರ್ಯವಿಲ್ಲ. ಇದೇ ವಿಚಾರವನ್ನು ಸಂಗೀತಗಾರ ಯಾವುದೋ ರಾಗದ ಮಂದ್ರ ಷಡ್ಜದ ಸ್ಥಾನದಲ್ಲಿ ಸೌಂದರ್ಯ ನೀಡಿ ನಿಮ್ಮದೇ ಅಭಿವ್ಯಕ್ತಿಯು ಅಂತರಂಗದಲ್ಲಿ ಬಿಚ್ಚಿಕೊಳ್ಳುವಂತೆ ಮಾಡಬಲ್ಲ. ಸಾಹಿತಿಯು-ಕವಿಯು ಇದೇ ವಿವರಣೆಯನ್ನು ತನ್ನ ರೂಪಕಗಳೊಂದಿಗೆ ನಿಮಗೆ ಅಚ್ಚರಿಯಲ್ಲಿ ನೀಡಬಲ್ಲ. ನೃತ್ಯಗಾರ್ತಿಯೊಬ್ಬಳು ತನ್ನ ಹಸ್ತ ಚಲನೆಯಲ್ಲಿಯೇ ನಿಸರ್ಗ ರೂಪವನ್ನು ನಿಮಗೆ ಕಾಣಿಸಬಲ್ಲಳು. ಚಿತ್ರ ಕಲಾವಿದ ಇದೇ ನೋಟವನ್ನು ಕುಶಲ ವರ್ಣ ಸಂಯೋಜನೆಯೊಂದಿಗೆ ಗಾಢವಾಗಿ ನೆಲೆಗೊಳಿಸಬಲ್ಲ. ಆ ರೀತಿ ಆಗಬೇಬೇಕಾದರೆ ಪ್ರತಿ ಕಲಾವಿದನಿಗೂ ರಸಪ್ರಜ್ಞೆ ಇರಬೇಕಾಗುತ್ತದೆ, ಆ ರಸಕ್ಕೆ ತನ್ನ ಕಲಾಮಾಧ್ಯಮದ ಮಿತಿಯಲ್ಲಿ ರಚನಾತ್ಮಕವಾಗಿ ಸೌಂದರ್ಯ ಸೃಷ್ಟಿ ಮಾಡಬೇಕಾಗುತ್ತದೆ. ಇಲ್ಲಿ ಗಮನಿಸಬೇಕಾದ್ದು ಸೃಷ್ಟಿ ಎಂದರೆ ಉತ್ಪಾದನೆಯಲ್ಲ. ಉತ್ಪಾದನ ಕೌಶಲ್ಯ ಕಲೆ ಎನ್ನಲಿಕ್ಕೆ ಆಗುವುದಿಲ್ಲ. ಅಲ್ಲಿ ಸಿದ್ಧವಸ್ತುವಿನ ಆಧಾರದ ಮೇಲೆ ಉತ್ಪನ್ನ ಇರುತ್ತದೆ. ಕಲೆ ಎಂಬುದು ಸಿದ್ಧವಸ್ತು ಇಲ್ಲದಿದ್ದರೂ ಉತ್ಪನ್ನ ನೀಡಬಲ್ಲದ್ದಾಗಿರುತ್ತದೆ. ಕಲೆ ಎಂಬುದು ಸೃಷ್ಟಿ ಕಾರ್ಯ. ಅಲ್ಲಿ ಸೌಂದರ್ಯವೇ ಸೃಷ್ಟಿಯ ಧಾತು.
ಹಾಗಾದರೆ ಸೌಂದರ್ಯದ ಮಾಪನ ಯಾವುದು? ಸೌಂದರ್ಯ ಎಂಬುದು ವಸ್ತುವಲ್ಲ ಅದು ಸ್ಥಿತಿ. ಆ ಸ್ಥಿತಿಯನ್ನು ಗ್ರಹಿಸುವ ರಸಿಕನಿದ್ದಾಗ ಮಾತ್ರ ಸೌಂದರ್ಯವು ಕಲಾವಿದನಿಂದ ರಸಿಕನಿಗೆ ದಾಟಬಲ್ಲದು. ರಸವನ್ನು ಗ್ರಹಿಸಬಲ್ಲವನೇ ರಸಿಕ. ಒಂದು ನಿರ್ದಿಷ್ಟ ಆಲಾಪ, ಸ್ವರ ವಿಸ್ತಾರದಲ್ಲಿ ತನ್ನ ಸೃಷ್ಟಿಯನ್ನು ಸಂಗೀತಗಾರ ತೋರ್ಪಡಿಸುತ್ತಿರುತ್ತಾನೆ, ಆ ನಿರ್ದಿಷ್ಟ ಸ್ಥಿತಿಯನ್ನು ರಸಿಕ ಗ್ರಹಿಸುತ್ತಾನೆ. ಅವನಿಗೆ ಆನಂದವಾಗುತ್ತದೆ (ಆನಂದ ಎಂಬುದು ಸ್ವಾದ ಸ್ಥಿತಿ, ಅದು ವಿವಿಧ ರಸದಿಂದ ಕೂಡಿರಬಹುದು). ಆತ ಗ್ರಹಿಸಿದ ಆನಂದವನ್ನು, ಕಲಾವಿದ ಸ್ಪುರಿಸಿದ ಸೃಷ್ಟಿ ಸೌಂದರ್ಯವನ್ನು ನಂತರದಲ್ಲಿ ವಿವರಿಸಲು ಇಬ್ಬರಿಗೂ ಸಾಧ್ಯವಿಲ್ಲ. ಆ ಸಾಫಲ್ಯವೇ ಕಲೆಯ ಗುರಿ. ಸಾಹಿತ್ಯ ಬರೆಯುತ್ತಾ-ಓದುತ್ತಾ, ನೃತ್ಯ ಮಾಡುತ್ತಾ-ನೋಡುತ್ತಾ, ಚಿತ್ರವನ್ನು ರಚಿಸುತ್ತಾ-ಆಸ್ವಾದಿಸುತ್ತಾ... ಹೀಗೆ ಎಲ್ಲಾ ಕ್ರಿಯೆಯೂ ಇದನ್ನೇ ಒಳಗೊಂಡಿರುತ್ತದೆ. ಇದು ಏಕಕಾಲದಲ್ಲಿ ಅಂತರಂಗದ ಸೌಂದರ್ಯವೂ ಹೌದು, ಬಹಿರಂಗ ಸೌಂದರ್ಯವೂ ಹೌದು. ಕಲಾವಿದ ರಸಿಕನಾಗದಿದ್ದಲ್ಲಿ ಅವನು ಕಲಾವಿದನೇ ಆಗಿರುವುದಿಲ್ಲ. ಸೃಷ್ಟಿ ಕ್ರಿಯೆಯಲ್ಲಿ ಅವನೇ ರಸಿಕನಾಗಿ ತನ್ನ ಅಂತರಂಗವನ್ನ ಅವನೇ ಕಂಡುಕೊಳ್ಳಬೇಕು. ಆದ್ದರಿಂದ ಕಲೆ ಕೇವಲ ಅಭಿವ್ಯಕ್ತಿಯಲ್ಲ, ಅದು ಅಂತರಂಗದ ಒಟ್ಟು ಬಹಿರಂಗ ರೂಪ. ಅಂತರಂಗದಿಂದ, ಬಹಿರಂಗದವರೆಗೂ ಇರುವ ಪ್ರಕ್ರಿಯೆಯೇ ಸೃಷ್ಟಿ, ಅದರ ಒಟ್ಟು ರೂಪವೇ ಸೌಂದರ್ಯ.
ಕಲೆಯ ಹಲವಾರು ಮಾಧ್ಯಮವು ನಿಸರ್ಗದ ವರ್ಣನೆಯೊಂದಿಗೇ ಪ್ರಾರಂಭವಾದದು. ಕಾಲಾಕಾಲಾದಲ್ಲಿ ನಿಸರ್ಗದಿಂದ ಹೊರಟು ತನ್ನ ಒಳಗನ್ನೇ ಅಲ್ಲಿ ಕಾಣಲು ಮನುಷ್ಯ ಹೊರಟ. ಈ ನಿಟ್ಟಿನಲ್ಲಿ ಜಗತ್ತಿಗೆ ಕನ್ನಡಿ ಹಿಡಿಯುವುದೇ ಕಲೆ ಎನ್ನುವುದಕ್ಕೆ ಅರ್ಥವಿದೆ. ಒಬ್ಬ ದಾರ್ಶನಿಕ ಮಂಡಿಸುವಂತೆ ಈ ಜಗತ್ತೇ ಮಿಥ್ಯೆ ಎಂದಮೇಲೆ, ಅದರ ಮಿಥ್ಯಾರೂಪವನ್ನು ಪ್ರತಿಬಿಂಬಿಸುವ ಈ ಕಲೆ ಇನ್ನಷ್ಟು ಮಿಥ್ಯೆ ಎನ್ನಬೇಕಾಗುತ್ತದೆ. ಇದಕ್ಕೆ ಉತ್ತರವನ್ನು ಕಲ್ಪಿಸುವುದು ಕಷ್ಟವೇ ಆಗಿದೆ. ಏಕೆಂದರೆ ಕಲೆಯು ಹೊರಗಿನ ಮಾಪನಗಳಿಗೆ ಬದ್ಧವಾಗಿಲ್ಲ. ಸೌಂದರ್ಯ ಎಂಬ ಸ್ಥಿತಿಯೂ ಕೂಡ ಯಾವುದೇ ಮಾಪನಕ್ಕೆ ಒಳಗಾಗಿಲ್ಲ. ಅನುಭವದಲ್ಲಿ ಸೌಂದರ್ಯ ಕಾಣಬಹುದಾದರು, ಕಂಡದ್ದನ್ನು ವಿವರಿಸಿ ತಿಳಿಸಲು ಸಾಧ್ಯವಿಲ್ಲ. ವಿಜ್ಞಾನದ ಎಲ್ಲಾ ನಿಯಮಗಳು ಕೂಡ ಹೊರಗಿನ ಮಾಪನಗಳಿಗೆ ಬದ್ಧವಾಗಿರುವುದರಿಂದ ತಕ್ಕಮಟ್ಟಿಗೆ ಅಲ್ಲಿ ಒಮ್ಮತ ಸಾಧಿಸಬಹುದು. ಆದರೆ ಅಲ್ಲಿಯೂ ಕೂಡ ವಸ್ತುವಿನ ಮೌಲ್ಯ ನಿರ್ಣಯದಲ್ಲಿ ವಿವಿಧ ಅಭಿಪ್ರಾಯ ಮೂಡುತ್ತದೆ. ಸೌಂದರ್ಯವನ್ನು ಅದರ ವಸ್ತುವಿನಿಂದ, ರಚನೆಯಿಂದ ಅಳೆಯಲಿಕ್ಕೂ ಸಾಧ್ಯವಿಲ್ಲ. ಒಂದು ದೊಡ್ಡ ವೃತ್ತಕ್ಕೂ, ಚಿಕ್ಕ ವೃತ್ತಕ್ಕೂ ಇರುವ ವ್ಯತ್ಯಾಸ ಅಳತೆಯಲ್ಲೇ ಹೊರತು, ಅದರ ರೂಪ ವೃತ್ತಾಕಾರವೇ ಆಗಿದೆ. ಹಾಗೆಯೇ ಸೌಂದರ್ಯವು ಒಂದೇ ರೂಪದಲ್ಲೂ, ಸ್ಥಿತಿಯಲ್ಲೂ ಇರುವಂಥದ್ದು. ಅನುಭವ ಜನ್ಯವೂ ಕಲೆಯಲ್ಲಿರುತ್ತದೆ, ಭವ್ಯಾನುಭವೂ ಕಲೆಯಲ್ಲಿರುತ್ತದೆ. ಮನುಷ್ಯ ಅನುಭವವನ್ನು ಕಲೆಯ ಮೂಲಕ ವ್ಯಕ್ತಪಡಿಸುತ್ತಾ ಹೊರಟು ಭವ್ಯಾನುಭವದ ಕಡೆಗೆ ನಡೆದಿದ್ದಾನೆ. ಕೇವಲ ಅನುಭವ ವ್ಯಕ್ತಪಡಿಸುವುದು ಕಲೆಯ ಪ್ರಕ್ರಿಯೆಯನ್ನೇ ಅಲ್ಲಗೆಳೆದಂತೆ. ಕಲೆಯು ಆ ಪ್ರಕ್ರಿಯೆಯಲ್ಲಿ ಕಂಡುಕೊಂಡ ಭವ್ಯಾನುಭವದ ಸ್ವರೂಪವನ್ನೇ ಅಲ್ಲಗೆಳದಂತೆ. ಕಲೆಯು ಮಿಥ್ಯೆಯೋ, ಕನ್ನಡಿಯೋ, ಅನುಭವವೋ ಆಷ್ಟೇ ಆಗಿಲ್ಲ. ಅದು ಮನುಷ್ಯ ಲೋಕದ ಭವ್ಯಾನುಭವದ ಸಶಕ್ತ ಮಾಧ್ಯಮವಾಗಿದೆ. ಭವ್ಯಾನುಭವ ಎಂಬುದು ಸೌಂದರ್ಯದ ಪರಮೋಚ್ಛ ಸ್ಥಿತಿಯಾಗಿದೆ.

Published on July 24, 2017 23:27
May 18, 2017
ಜಗತ್ತು ಮತ್ತು ಅನುಭವ
ನಮ್ಮ ಗ್ರಹಿಕೆ ಅನುಭವಜನ್ಯವಾದದ್ದು ಎಂದು ಹೇಳಿಕೊಳ್ಳುವುದು ಸಾಮಾನ್ಯ. ಯಾವಾಗ ನಾವು ನಮ್ಮ ಅನುಭವ ಆಧಾರಿತವಾಗಿ ನಮ್ಮ ಗ್ರಹಿಕೆ, ಅಭಿಪ್ರಾಯ, ನಿರ್ಣಯಗಳನ್ನು ಕಟ್ಟಿ ಹಾಕಿಕೊಳ್ಳುತ್ತೇವೋ ಆಗ ನಮ್ಮ ಪ್ರಪಂಚ ಚಿಕ್ಕದಾಗುತ್ತಾ ಹೋಗುತ್ತದೆ. ಏಕೆಂದರೆ ನಮ್ಮ ಅನುಭವವೆಲ್ಲಾ ಜಗತ್ತಿನದ್ದೇ ಆಗಿದೆ ಆದರೆ ಜಗತ್ತಿನ ಅನುಭವವೆಲ್ಲಾ ನಮ್ಮದಲ್ಲ! ನಮ್ಮ ಅನುಭವಕ್ಕೆ ದಕ್ಕಿದ್ದು ಮಾತ್ರ ಸತ್ಯ ಎಂದು ಹೇಳಿಕೊಳ್ಳುವ ಪರಂಪರೆಯು ಉಂಟು. ನಮ್ಮ ಅನುಭವ ನಮ್ಮ ಯೋಗ್ಯತೆ-ದೃಷ್ಟಿಯ ಅನುಸಾರವಿರುತ್ತದೆ. ನಮ್ಮ ಯೋಗ್ಯತೆಯನ್ನ ಮೀರಿದ್ದು ಇದೆ ಎಂದು ಒಪ್ಪಿಕೊಳ್ಳಲಾಗದ ಅಸ್ತಿತ್ವ ಹೇಡಿಗಳು ಸೃಷ್ಟಿಸಿದ ಚಿಂತನೆ ಇದಿರಬಹುದು. ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಎಷ್ಟು ಭೌತಿಕ ಅನುಭವ ಪಡೆಯಬಲ್ಲ!? ಎಷ್ಟು ವಿಧವಾದ ಸವಾಲು, ವಾತಾವರಣ, ಚಿಂತನೆಯನ್ನು ಎದುರಿಸಬಲ್ಲ!? ತನ್ನ ಸೀಮಿತ ವೃತ್ತದ, ಜನರ, ಸಮಾಜದ, ತನ್ನ ಸೀಮಿತ ಪರಂಪರೆಯ ಹಿಂದಿನ ಜನಾಂಗದ ಅನುಭವಗಳನ್ನೇ ಉಣ್ಣುತ್ತಾ ಬಂದವನು ಅದೇ ಜಗತ್ತಿನ ಸಮಷ್ಟಿ ಅನುಭವ ಎಂದು ತನ್ನ ಮಿತಿಯನ್ನು ಇತರರ ಮೇಲೆ ಹೇರುತ್ತಾನೆ. ಅನುಭವ ಮತ್ತು ಇತಿಹಾಸ ಒಂದೇ ಅರ್ಥ ಕೊಡುವ ಬೇರೆ ಬೇರೆ ಪದಗಳು. ಇತಿಹಾಸವು ಕೂಡ ಜಗತ್ತಿನ ಒಟ್ಟು ಅನುಭವವಲ್ಲ! ಇಂದು ನಡೆದ ಒಂದು ಭೌತಿಕ ಕ್ರಿಯೆಗೆ ತನ್ನ ಸೀಮಿತ ಅನುಭವದಿಂದ ಉಂಟಾದ ಗ್ರಹಿಕೆಯನ್ನು ಅದರ ಮೇಲೆ ಪ್ರಯೋಗಿಸಿ ತನ್ನದೇ ಒಂದು ವಿವರ ಒಬ್ಬ ದಾಖಲಿಸುತ್ತಾನೆ. ಖುದ್ದು ಅವನ ಆತ್ಮಕಥನವನ್ನು ಅವನೇ ಬರೆದರೂ, ತನ್ನ ಕಾಲದ ಇತಿಹಾಸವನ್ನು ಬರೆದರೂ ಅದೂ ಕೂಡ ಅವನ ಅನುಭವದ ಮಿತಿಯಲ್ಲೇ ಹೊಮ್ಮಿದ್ದಾಗಿರುತ್ತದೆ. ತನ್ನನ್ನು ಹೊಗಳಿಕೊಳ್ಳಲೋ, ತಾನು ಸಭ್ಯ ಎಂದು ತೋರಿಸಿಕೊಳ್ಳಲೋ ಅಲ್ಲಲ್ಲಿ ಆತ್ಮವಂಚನೆ ಮಾಡಿಕೊಂಡಿರುತ್ತಾರೆ. ಜಗತ್ತಿನಲ್ಲಿ ಯಾವನೂ ಕೂಡ ನೇರಾ ನೇರಾ ತನ್ನ ಅನುಭವವನ್ನ ನಿಷ್ಠವಾಗಿ ದಾಖಲಿಸಲು ಸಾಧ್ಯವಿಲ್ಲ. ಸತ್ಯನಿಷ್ಠತೆಯು ಕೇವಲ ಅವನಲ್ಲೇ... ಅವನು ತನ್ನೊಡನೆಯೇ ಮಾತಾಡಿಕೊಂಡಾಗ ಮಾತ್ರ ಗೋಚರಿಸುವುದ್ದಾಗಿದೆ. ತನ್ನ ಅನುಭವ ಅಧಾರಿತವಾದುದರಲ್ಲೇ ಸತ್ಯನಿಷ್ಠತೆ ಇಲ್ಲ ಎನ್ನಬೇಕಾದರೆ, ಜಗತ್ತಿನ ಒಟ್ಟು ಅನುಭವದಲ್ಲಿ ಸತ್ಯನಿಷ್ಠತೆ ತೋರುವುದಾದರೂ ಹೇಗೆ? ಅನುಭವ ಎಂಬುದೇ ‘ಮಿತಿ’ ಎಂದು ನಮಗರಿವಾಗಬೇಕು. ಜಗತ್ತು ಎಂದರೆಯೇ ‘ಆದರ್ಶ’ ಎಂದು ನಾವು ತಿಳಿಯಬೇಕು.
ಅನುಭವ ಕೇವಲ ಭೌತಿಕವಾದುದ್ದಲ್ಲ. ಅದು ನಾವು ನಮ್ಮಲ್ಲೇ ಗಳಿಸಿ ನಾವೇ ತಿಳಿದುಕೊಳ್ಳಬೇಕಾದ್ದು ಎಂಬುದು ಹಲವು ದಾರ್ಶನಿಕರು ಸ್ಪಷ್ಟಪಡಿಸಿದ ವಿಚಾರ. ಮತ್ತು ಅಂಥಹ ಇಂದ್ರಿಯಾತೀತ ಅನುಭವವು ವಿವರಣೆಗೆ ಸಿಲುಕುವುದಲ್ಲ. ಅನುಭವ ಮತ್ತು ಜಗತ್ತು ಎರಡೂ ಒಂದೇ ಆಗಿದೆ. ಅನುಭವವೇ ಜಗತ್ತು, ಜಗತ್ತೇ ಅನುಭವವು. ಈ ವಾದವು ಸಮುದಾಯಕ್ಕೆ ಎಂದಿಗೂ ಅರ್ಥವಾಗುವ, ಎಟುಕುವ ವಿಚಾರವಲ್ಲ. ಇದು ವೈಯುಕ್ತಿಕವಾಗಿ ಆಗುವುದು ಮತ್ತು ಅದನ್ನು ವ್ಯಕ್ತಪಡಿಸಲು ಸಾಧ್ಯವಾಗದ್ದು. ಮತ್ತು ಯಾರು ಜಗತ್ತು ಮತ್ತು ಅನುಭವ ಎಂಬುದನ್ನು ಏಕೀಕರಿಸಿಕೊಳ್ಳುತ್ತಾನೋ, ಅಂದರೆ ಎಲ್ಲಾ ಅನುಭವವನ್ನೂ ದಕ್ಕಿಸಿಕೊಂಡು ಜ್ಞಾನಿಯಾಗುತ್ತಾನೋ ಅವನು ಉಪದೇಶ ಮಾಡುವುದಿಲ್ಲ. ತಾನೇ ಜಗತ್ ಆಗಿಬಿಡುತ್ತಾನೆ. ಅಂದರೆ ಉಪದೇಶ, ದೊಂಬರಾಟ, ವ್ಯವಸ್ಥೆ, ರಾಜಕೀಯ ಇದೆಲ್ಲದರ ಹಂಗಿನಲ್ಲಿ ಬಿದ್ದುಕೊಂಡು ಜ್ಞಾನಿ ನಾನು ಎಂದು ಹೇಳಿಕೊಳ್ಳುತ್ತಾ, ತನ್ನ ಅನುಭವವನ್ನೇ ಲೋಕದರ್ಶನ ಎಂದುಕೊಂಡವನು ಅಜ್ಞಾನಿಯೇ ಆಗಿರುತ್ತಾನೆ. ಮಿತಿ ಮತ್ತು ಆದರ್ಶಗಳ ತುದಿಗಳು ಇಲ್ಲದ್ದು ಮಾತ್ರ ಪೂರ್ಣ!
ಇತರ ಪ್ರಾಣಿಗಳಿಗೂ ಅನುಭವವಿದೆ, ಕಡಲಾಳದಲ್ಲಿರುವ ಒಂದು ಜೀವಿ, ಇನ್ನೊಂದು ಜೀವಿಯನ್ನು ಹಿಡಿದು ತಿನ್ನುವಾಗ ಅದಕ್ಕಾದ ಅನುಭವವನ್ನು ಅಥವಾ ಅದಕ್ಕೂ ಇರಬಹುದಾದ ಇಂದ್ರಿಯಾತೀತ ಗ್ರಹಿಕೆಯನ್ನು ಈ ಮನುಷ್ಯ ಎಂಬ ಜೀವಿ ಎಷ್ಟೇ ತಿಣುಕಾಡಿದರೂ ತಿಳಿಯಲಾಗುವುದಿಲ್ಲ. ಅಷ್ಟೇಕೆ ಸಿಹಿ ತಿಂದಾಗ ನಮಗಾದ ಅನುಭವವನ್ನು ಇತರರಿಗೆ ವಿವರಿಸಲು ಸಾಧ್ಯವಿಲ್ಲ. ಇಂದು ನಾವು ಯಾವುದನ್ನು ಅನುಭವ ಎನ್ನುತ್ತಿದ್ದೀವೋ... ಅದನ್ನೇ ಜಗತ್ತು ಎಂದು ಪರಿಗಣಿಸಿದ್ದೀವೋ ಅದು ಕೇವಲ ಮನುಷ್ಯ ಎಂಬ ಜೀವಿಯ ಕಲ್ಪನೆಯ, ಅವನ ಅಸ್ತಿತ್ವ ಹೋರಾಟದ ತೆವಲಿನ ಪ್ರತಿಬಿಂಬವಷ್ಟೇ. ಎಷ್ಟೋ ವಿಸ್ತಾರವಾದ ಬ್ರಹ್ಮಾಂಡದಲ್ಲಿರುವ ಭೂಮಿ ಎಂಬ ಕ್ಷುಲ್ಲಕ ಧೂಳಿನ ಕಣದಲ್ಲಿರುವ, ಆ ಕಣದಲ್ಲಿನ ಧೂಳು ಎನ್ನಲಿಕ್ಕೂ ಲಾಯಕ್ಕಿಲ್ಲದ ಮನುಷ್ಯ ಎಂಬ ಪ್ರಾಣಿಯ ಅನುಭವವನ್ನು ಜಗತ್ತಿನ ಅನುಭವ ಎಂಬಂತೆ ಸ್ವೀಕರಿಸುವುದು ಹಾಸ್ಯಾಸ್ಪದವೇ ಸರಿ. ಮನುಷ್ಯ ಮಿತಿ ಮತ್ತು ಆದರ್ಶಗಳನ್ನು ಮೀರಿದವನಂತೂ ಅಲ್ಲವೇ ಅಲ್ಲ. ನಮ್ಮೆಲ್ಲರ ಒಟ್ಟು ಅನುಭವ, ಗ್ರಹಿಕೆ, ವಿಚಾರ, ನಿರ್ಣಯ, ವಾದ, ಪ್ರತಿವಾದ, ಇತರೆ ಇತರೆ ಎಲ್ಲವೂ ಮನುಷ್ಯನ ಮಿತಿಯ ಉತ್ಪನ್ನಗಳೇ ಆಗಿದೆ. ಅದಕ್ಕಾಗಿಯೇ ತನ್ನ ಮಿತಿಯನ್ನು ಮುಚ್ಚಿಕೊಳ್ಳಲು ಮನುಷ್ಯನು ಅಂಡಾಂಡವೇ ಬ್ರಹ್ಮಾಂಡ ಎಂದುಬಿಟ್ಟ ಎನ್ನಿಸುತ್ತದೆ.

Published on May 18, 2017 03:30
March 15, 2017
ಸೃಜನಶೀಲ ಅಥವಾ ಸೃಷ್ಟಿಶೀಲ ಸಾಹಿತ್ಯ ಎಂದರೆ...
ಸೃಷ್ಟಿ ಎಂಬ ಪದವು ಹೊಸದಾದ ಉತ್ಪನ್ನ ಸೂಚಕವಲ್ಲ. ಸಾಹಿತ್ಯ ಸೃಷ್ಟಿ ಶೂನ್ಯದಿಂದ ಹೊರತೆಗೆದ ಮಾಯಾವಸ್ತುವಲ್ಲ. ಸಾಹಿತ್ಯದಲ್ಲಿ ಸೃಷ್ಟಿ ಪ್ರಕ್ರಿಯೆ ಎಂಬುದು ಜಗತ್ತಿನಲ್ಲಿ ಯಾರೂ ಗ್ರಹಿಸದ್ದನ್ನು, ಯಾರಿಗೂ ಅನುಭವ ಆಗದಿದ್ದನ್ನು, ಮನುಷ್ಯ ಆಲೋಚನೆಯ ಮಿತಿ ಮೀರಿದ್ದನ್ನು ಅನ್ವೇಷಿಸುವುದಲ್ಲ. ಸೃಷ್ಟಿ ಪ್ರಕ್ರಿಯೆ ಎಂದರೆ ಸಾಕ್ಷಾತ್ಕಾರ. ಅದರಲ್ಲಿ ನಮ್ಮನ್ನು ನಾವೇ ನಿರೀಕ್ಷಿಸುವ ಗುಣವಿರುತ್ತದೆ, ಹೊರಗಿನ ಜಗತ್ತನ್ನು ನಮ್ಮ ನೋಟದಲ್ಲಿ ಆಲ್ಲದೇ ವಿಸ್ತಾರವಾಗಿ ನೋಡುವ ಶಕ್ತಿ ಇರಬೇಕಾಗುತ್ತದೆ. ತನ್ನ ಅನುಭವ ಮಿತಿಯನ್ನು ಮೀರಿದ ಅಂಶಗಳನ್ನು ತಾದಾತ್ಮ್ಯದಲ್ಲಿ ಸ್ವೀಕರಿಸುವ, ವಿಮರ್ಶಿಸುವ ದೃಷ್ಟಿ ಬೇಕಾಗುತ್ತದೆ. ಎಲ್ಲಾ ಬರೆಹವೂ ಸೃಷ್ಟಿಶೀಲವೇ ಎಂಬ ವಾದವಿದೆ. ಆದರೆ ಅದು ಸಾಹಿತ್ಯ ದೃಷ್ಟಿಯಿಂದ ಅಪ್ರಬುದ್ಧ ಗ್ರಹಿಕೆ. ಮೇಲೆ ತಿಳಿಸಿದ ಸೃಷ್ಟಿಶೀಲ ಸಾಹಿತ್ಯದ ಪ್ರಮುಖಾಂಶಗಳು ಹಲವು ಬರೆಹ ಪ್ರಕಾರದಲ್ಲಿ ದೊರೆಯುವುದಿಲ್ಲ. ವಿಚಾರವನ್ನು ದಾಖಲಿಸುವ, ಯಾರೋ ಹೇಳಿದ್ದನ್ನು ನಮೂದಿಸುವ, ಅದಕ್ಕೆ ನಮ್ಮ ವಿಶ್ಲೇಷಣೆ ಜೋಡಿಸುವ, ತನ್ನ ಅರಿವನ್ನು ತೋರ್ಪಡಿಸುವ ಅಥವಾ ತನ್ನ ಅರಿವನ್ನು ಮಂಡಿಸುವ ಕ್ರಿಯೆ ಸೃಷ್ಟಿಶೀಲವಲ್ಲ. ಸೃಷ್ಟಿಶೀಲ ಸಾಹಿತ್ಯದ ಮೂಲ ಬೇರು ಜೀವನದ ಅಂತಃದೃಷ್ಟಿ. ಅದು ಕಥನವಾಗಲಿ, ಕಾವ್ಯವಾಗಲಿ, ಕಾದಂಬರಿಯಾಗಲಿ. ಅಲ್ಲಿ ಬರೆಹಗಾರ ತನ್ನದೇ ಒಂದು ಚೌಕಟ್ಟು ಹಾಕಿ, ರಸಪಾಕವನ್ನು ಅದರಲ್ಲಿ ಸುರಿಯುತ್ತಾನೆ. ಕೊನೆಗೆ ಚೌಕಟ್ಟು ತೆಗೆದಾಗ ಪಾಕದ ರುಚಿ, ಹದ, ಗಟ್ಟಿತನ, ಸ್ವಾದಕ್ಕೆ ಕುಂದು ಬರಬಾರದು. ಅದು ಚೌಕಟ್ಟಿನಾಚೆ ಹೊರಬರಬಾರದು. ಇಲ್ಲಿ ಪಾಕಕ್ಕೆ ಬೇಕಾದ ಸಾಮಗ್ರಿ ಯಾರದ್ದೇ ಆಗಲಿ ಅಥವಾ ಅವನದ್ದೇ ಆಗಲಿ, ಬಾಣಸಿಗನಾಗಿ ಅವನು ಪುನಃ ಸಂಸ್ಕಾರ ಅದಕ್ಕೆ ಕೊಡಬೇಕು. ಇದು ನನ್ನದೇ ಸಾಮಗ್ರಿ ಎಂದು ಸಂಸ್ಕಾರ ನೀಡದೇ ಹಾಗೆ ಇಟ್ಟರೆ ಅದು ಸಾಮಾಗ್ರಿಯಾಗಿಯೇ ಉಳಿಯುತ್ತದೆ, ಅದು ರಸಪಾಕವಾಗೋಲ್ಲ. ಸಾಮಗ್ರಿಗೆ ಮತ್ತು ಪಾಕಕ್ಕೆ ಎಷ್ಟು ವ್ಯತ್ಯಾಸವಿದೆಯೋ ಅಷ್ಟೇ ವ್ಯತ್ಯಾಸ ಸೃಷ್ಟಿಶೀಲ ಸಾಹಿತ್ಯಕ್ಕೂ, ಇತರ ಬರೆಹಕ್ಕೂ ಇದೆ.
ಸೃಷ್ಟಿಶೀಲತೆ ಎಂಬುದು ವಸ್ತುವಿನ ಮೌಲ್ಯದ ಅನ್ವೇಷಣೆಯೂ ಹೌದು. ಒಂದೇ ಪಾತ್ರ ಅಥವಾ ಘಟನೆಯನ್ನು ವಿಭಿನ್ನ ವಾತಾವರಣದಲ್ಲಿ ಇಟ್ಟು ಅದು ಅದಕ್ಕೆ ಪ್ರತಿಸ್ಪಂದಿಸುವ ಗುಣವನ್ನು ಗಮನಿಸಬೇಕು. ಕಥಾನಕಕ್ಕೆ ಬೇಕಾದ ರಸವೈವಿಧ್ಯತೆಯನ್ನು ಅದರಿಂದ ಹೊರತರಬೇಕು. ಇದನ್ನು ನಾನು ಅನುಭವದಿಂದಲೇ ವ್ಯಕ್ತಪಡಿಸುತ್ತಿದ್ದೇನೆ. ಇಲ್ಲಿ ಒಣ ಗ್ರಹಿಕೆ ಇಲ್ಲ. ದುರಂತ ಸೃಷ್ಟಿಶೀಲ ಲೇಖಕ, ವಿಮರ್ಶಕನಾದಾಗ ಬಡಬಡಿಸುವ ಮಾತಿದಲ್ಲ. ಮೌಲ್ಯದ ಅನ್ವೇಷಣೆ ಮಾಡದ ಹೊರತು ಕಥಾನಕವು, ಪಾತ್ರವು, ಘಟನೆಯೂ ಗಟ್ಟಿತನ ಪಡೆಯಲಾಗದು. ಹಾಗು ಮೌಲ್ಯ ಹುಡುಕುವ ದಾರಿ ಪೂರ್ವಗ್ರಹ ಪೀಡಿತವಾಗಿರಬಾರದು. ಪ್ರತಿ ಪಾತ್ರಕ್ಕೂ ಉದ್ದೇಶವಿರುತ್ತದೆ ಆದರೆ ಕಥಾನಕಕ್ಕೇ ಉದ್ದೇಶ ಇರಬಾರದು. ಕಥಾನಕಕ್ಕೆ ಉದ್ದೇಶ ಇದ್ದರೆ ಅದು ಲೇಖಕನ ವೈಯಕ್ತಿಕ ತುಮುಲಗಳ ಸಮರ್ಥನೆಯಾಗಿ ಹೊರಹುಮ್ಮುತ್ತದೆ. ಇಲ್ಲೊಂದು ಉದಾಹರಣೆ ಗಮನಿಸೋಣ. ಕರ್ಮ ಕಾದಂಬರಿಯಲ್ಲಿ ವೆಂಕಟೇಶ ಭಟ್ಟ, ಪುರುಷೋತ್ತಮ ಮತ್ತು ಸುರೇಂದ್ರ ಮೂರು ಪಾತ್ರದ ಭಾವನೆಯೇ ಬೇರೆ. ಮೂರು ಪಾತ್ರದ ಮೌಲ್ಯಗಳೇ ಬೇರೆ. ಅವು ಕಥಾನಕಕ್ಕೆ ಚೆಲ್ಲುವ ಪರಿಣಾಮವೇ ಬೇರೆ. ಮೂರೂ ಪಾತ್ರದಲ್ಲು ಲೇಖಕನ ಭಾವನೆಯೇ ಹೊಮ್ಮಿದರೆ ಅದು ಸೃಷ್ಟಿಶೀಲತೆಯ ದುರಂತ. ಇದನ್ನು ಕರ್ಮ ಕಾದಂಬರಿಯಲ್ಲಿ ದಾಟಿದ್ದೇನೆ. ನನ್ನಿ ಕಾದಂಬರಿಯಲ್ಲಿ ರೋಣಾಳಿಗೆ, ಮದರ್ ಎಲಿಸಾ ಪಾತ್ರದ ಮೇಲೆ ಅಸಹನೆ ಇರಬೇಕೆ ಹೊರತು ಲೇಖಕನಿಗಲ್ಲ. ಮೂರನೇ ವ್ಯಕ್ತಿಯಾಗಿ ಲೇಖಕ ಎಲಿಸಾರ ಪಾತ್ರವನ್ನು ಎಲ್ಲೂ ವಿಮರ್ಶಿಸುವುದಿಲ್ಲ. ಒಂದು ಕೃತಿಯಲ್ಲಿ ಲೇಖಕ ಅನುಸರಿಸಬೇಕಾದ ಸೂಕ್ಷ್ಮಗಳಿವು. ಸೃಷ್ಟಿಶೀಲತೆಯನ್ನು ಆವಾಹನೆ ಮಾಡಿಕೊಳ್ಳಬೇಕಾದರೆ, ಆಯಾ ಪಾತ್ರ ಆಯಾ ಘಟನೆಗೆ ಲೇಖಕನು ಹೋಗಿ ಅವರದ್ದೇ ಮಿತಿಯಲ್ಲಿ, ಅವರದ್ದೇ ವ್ಯಕ್ತಿತ್ವದಲ್ಲಿ, ಅವರದ್ದೇ ವಾತಾವರಣದಲ್ಲಿ ಮಿಳಿತವಾಗಿ ಅದರ ಅಭಿವ್ಯಕ್ತಿಯನ್ನು ಹೊಮ್ಮಿಸಬೇಕೆ ವಿನಹ ತನ್ನ ಅಭಿವ್ಯಕ್ತಿಗೆ ತಕ್ಕ ಹಾಗೆ ಪಾತ್ರವನ್ನು ಕುಣಿಸಬಾರದು. ಆ ದೃಷ್ಟಿಯಲ್ಲಿ ಸ್ವಲ್ಪಮಟ್ಟಿಗೆ ’ಗ್ರಸ್ತ’ದ ಅವಿನಾಶನನ್ನು ಬಿಟ್ಟರೆ, ನನ್ನ ಕಾದಂಬರಿಯ ಯಾವುದೇ ಪಾತ್ರಗಳಲ್ಲೂ ನನ್ನ ಅಭಿಪ್ರಾಯವನ್ನು ತುಂಬಿಲ್ಲ. ಪಾತ್ರ ಮತ್ತು ಘಟನೆಗಳನ್ನು ಸಂಘಟಿಸುವಾಗ ನಾನು ಅದಕ್ಕೆ ರೂಪ ನೀಡಿದ್ದೇನೆ, ಸೌಂದರ್ಯ ನೀಡಿದ್ದೇನೆ. ಈ ನಿಟ್ಟಿನಲ್ಲಿ ಸೃಷ್ಟಿಶೀಲ ಸಾಹಿತ್ಯವು ಸ್ವತಂತ್ರವು, ವಿಸ್ತಾರವು, ಉನ್ನತವು ಆಗಿರಬೇಕು. ಅಭಿಪ್ರಾಯ ಮಂಡನೆ ಸೃಷ್ಟಿಶೀಲ ಸಾಹಿತ್ಯವಲ್ಲ.
ರಸಾನುಭೂತಿ ಮತ್ತು ಚಳುವಳಿ ಮನಸ್ಥಿತಿ ಇವುಗಳಲ್ಲಿ ಸೃಷ್ಟಿಶೀಲ ಸಾಹಿತ್ಯಕ್ಕೆ ಬೇಕಾದ ಅಂಶ ಯಾವುದು ಎಂದರೆ, ಸ್ಪಷ್ಟವಾಗಿ ರಸಾನುಭೂತಿ ಎಂದೆನ್ನಬೇಕಾಗುತ್ತದೆ. ರಸಾನುಭೂತಿಯಲ್ಲೇ, ಚಳುವಳಿ ಮನಸ್ಥಿತಿ ಎಂಬುದು ಧೀರವೋ, ಭೀಭತ್ಸವೋ, ವೀರತ್ವ ರಸದ ಬಿಂಬವೇ ಆಗಿದೆ. ಯಾವುದೋ ಒಂದು ರಸದ ಅನ್ವೇಷಣೆಯಲ್ಲಿ ತೊಡಗುತ್ತಾ, ಅದನ್ನು ಸೃಷ್ಟಿಶೀಲ ಸಾಹಿತ್ಯದ ಮೂಲಭೂತ ಅಂಶ ಎಂದು ತೋರ್ಪಡಿಸುವುದು ಸಾಹಿತ್ಯದ ಸಂವೇದನೆಗೆ ಮಾಡುವ ಮೋಸ. ನನ್ನಿ ಕಾದಂಬರಿಯಲ್ಲಿ ರೋಣಾಳದ್ದು ಚಳುವಳಿಯ ಮನಸ್ಥಿತಿಯೇ, ಫಾಬ್ರಿಗಾಸ ತಾನಿರುವ ವ್ಯವಸ್ಥೆಯನ್ನೇ ಖಂಡಿಸುವಾತ. ತಪ್ಪನ್ನು ಖಂಡಿಸುವ, ತನಗಾದ ಮೋಸವನ್ನು ಪ್ರತಿಭಟಿಸುವ ವೀರ, ಧೀರ ರಸವು ಸ್ವಾಭಾವಿಕವಾಗಿ ಪ್ರತಿ ವಸ್ತುನಿಷ್ಠ ಸೃಷ್ಟಿಶೀಲ ಸಾಹಿತ್ಯದಲ್ಲೂ ಕಾಣುತ್ತದೆ. ಇಡೀ ಕಾದಂಬರಿಯುದ್ದಕ್ಕೂ ರೋಣಾ "ನನಗೆ ಗಂಡೆದರೆ ಆಗುವುದಿಲ್ಲ, ಫಾಬ್ರಿಗಾಸನು ಗಂಡು, ಅವನ ಜೊತೆ ಮಲಗುವುದಿಲ್ಲ. ಅವನನ್ನು ಕೊಲ್ಲಬೇಕು" ಎಂದು ಹೇಳಿದ್ದರೆ ಅದು ರೊಣಾಳ ಪಾತ್ರಕ್ಕೆ ಮಾಡಿದ ಅವಮಾನವಾಗುತ್ತಿತ್ತು. ಅವಳು ಚಳುವಳಿಯ ಮನಸ್ಥಿತಿಯನ್ನು ತೋರಬಲ್ಲಳು, ಶೃಂಗಾರವನ್ನು ಹರಿಸಬಲ್ಲಳು, ಹತಾಶಳಾಗಿ ಅಳುವಳು. ಎಂಥಾ ಸಂದರ್ಭದಲ್ಲೂ ಅವಳು ಗಂಡನ್ನು ದ್ವೇಷಿಸುತ್ತಾಳೆ ಎಂದು ಬರೆದಿದ್ದರೆ ಅಲ್ಲಿ ಲೇಖಕನ ಉದ್ದೇಶ ಕಾಣುತ್ತದೆ, ಪಾತ್ರದ ಹರಿವಲ್ಲ. ಪಾತ್ರದ ಸಹಜತೆಯನ್ನು ಅರ್ಥಮಾಡಿಕೊಳ್ಳದಿದ್ದರೆ, ಕಥಾನಕದ ಒಟ್ಟು ಪಾಕ ಒಂದೋ ಅತಿಯಾದ ಸ್ವಾದವನ್ನು ನೀಡಿ ಅಸಹ್ಯವಾಗುತ್ತದೆ, ಇಲ್ಲ ಸ್ವಾದವೇ ಇಲ್ಲದೆ ಸಪ್ಪೆಯಾಗುತ್ತದೆ. ಪ್ರತಿ ಸೃಷ್ಟಿಶೀಲ ಲೇಖಕನ ಕೃತಿಯಲ್ಲು ಪ್ರತಿಭಟನೆ ಮತ್ತು ಚಳುವಳಿಯ ಮನಸ್ಥಿತಿ ಕಾಣಬಹುದು. ಅದನ್ನು ಅವನು ಸಾಹಿತ್ಯಾತ್ಮಕವಾಗಿಯೇ ಹೊಮ್ಮಿಸಿರಬೇಕೆ ವಿನಹ, ರಾಜಕೀಯ ಭಾಷಣದಂತಲ್ಲ. ಪುಢಾರಿಗೂ ಮತ್ತು ಸೃಷ್ಟಿಶೀಲ ಲೇಖಕನಿಗೂ ಇರಬೇಕಾದ ವ್ಯತ್ಯಾಸವಿದು.
ಜನರನ್ನು ರಂಜಿಸುವುದು, ರಸಸ್ವಾದ ನೀಡುವುದೊಂದೇ ಇದರ ಉದ್ದೇಶವೇ ಎಂದರೆ ಅದೂ ತಪ್ಪು. ಸಾಮಾನ್ಯವಾಗಿ ಸೃಷ್ಟಿಶೀಲ ಸಾಹಿತ್ಯ ಕೆಡುವುದೇ ರಂಜನೆಯಿಂದ. ರಂಜನೆಯಲ್ಲಿ ರೋಚಕತೆ ಮುಖ್ಯವಾಗುತ್ತದೆ ಹೊರತು, ಮೌಲ್ಯವಲ್ಲ. ರೋಚಕತೆ, ಪಾತ್ರ ಮತ್ತು ಘಟನೆಯನ್ನು ಕಥೆಯ ರಂಜನೆಗೆ ಬಳಸುತ್ತದೆ. ಮೌಲ್ಯವು, ಪಾತ್ರ ಮತ್ತು ಘಟನೆಯನ್ನು ಕಥೆಯ ಅಂತರ್ಯವನ್ನು ಹಿಡಿಯಲು ಬಳಸುತ್ತದೆ. ಇವೆರೆಡರ ಆಯ್ಕೆ ಸಾಹಿತಿಗೆ ಬಿಟ್ಟದ್ದೇ ಆದರೂ, ಸಾಹಿತ್ಯ ಸಂವೇದನೆ ಇರುವುದೇ ಅಂತಃದೃಷ್ಟಿಯಲ್ಲಿ ಎಂದಮೇಲೆ. ಮೌಲ್ಯವೇ ಸೃಷ್ಟಿಶೀಲತೆಗೆ ಆಧಾರವಾಗಬೇಕೆ ಹೊರತು, ರಂಜನೆಯಲ್ಲ. ಇದಕ್ಕೆ ಯಾವುದೇ ಎಗ್ಗಿಲ್ಲದೆ ಒಂದು ಉದಾಹರಣೆ ನೀಡುತ್ತೇನೆ, ಕರ್ಮ ಕಾದಂಬರಿಯಲ್ಲಿ ನರಹರಿ ಮತ್ತು ನೇಹಾಳ ದೃಶ್ಯ ಮೌಲ್ಯಕ್ಕಿಂತಲೂ ರೋಚಕತೆಗೆ ಬಳಕೆಯಾಗಿದೆ, ಆದರೆ ನನ್ನಿಯಲ್ಲಿ ಫಾಬ್ರಿಗಾಸ ಮತ್ತು ರೋಣಾಳ ದೃಶ್ಯ ರೂಪಕವಾಗಿ ನಿಂತು, ತನ್ನತನವನ್ನು ಬೇರೊಬ್ಬರು ಕಸಿದಾಗ ಆಗುವ ತಳಮಳದ ಮೌಲ್ಯವನ್ನು ಬಿಂಬಿಸಿದೆ. ಗ್ರಸ್ತ ಕಾದಂಬರಿಯಲ್ಲಿ ಅವಿನಾಶನ ಹಪಹಪಿ ಮಾನವನ ಮಿತಿಯನ್ನು ವಿಶ್ಲೇಷಿಸುವ ಮೌಲ್ಯವಾಗಿ ಕಾಣುತ್ತದೆ. ಸೃಷ್ಟಿಶೀಲ ಲೇಖಕರ ಪ್ರತಿ ಬರೆವಣಿಗೆಯಲ್ಲೂ ರಂಜನೆ ನುಸುಳೇ ನುಸುಳುತ್ತದೆ, ಆದರೆ ಅದಕ್ಕೆ ಅಂಟಿಕೊಳ್ಳದೇ ಮೌಲ್ಯಾನ್ವೇಷಣೆಯನ್ನು ಹೆಚ್ಚು ರೂಢಿಸಿಕೊಂಡವ ಸೃಷ್ಟಿಶೀಲ ಸಾಹಿತ್ಯದ ಔನ್ನತ್ಯ ತಲುಪುತ್ತಾನೆ. ಮೊದಲೇ ಪ್ರಸ್ತಾಪಿಸಿದ ಹಾಗೆ ಸೃಷ್ಟಿಶೀಲ ಸಾಹಿತ್ಯವೆಂದರೆ ಕೇವಲ ಭಾಷೆ, ರಸ, ಅಭಿವ್ಯಕ್ತಿಯ ಸಂಯೋಜನೆ ಮತ್ತು ಪ್ರಸ್ತುತಿಯಲ್ಲ, ಅದು ಸತ್ಯ ಸಾಕ್ಷಾತ್ಕಾರ. ಅದನ್ನು ಸೌಂದರ್ಯ ಸಾಕ್ಷಾತ್ಕಾರದ ಅಂತಿಮ ರೂಪ ಎನ್ನಲೂಬಹುದು.

Published on March 15, 2017 02:33
March 6, 2017
‘ಪರ್ವ’ದ ಕೃಷ್ಣ : ರಾಜತಂತ್ರ ಮತ್ತು ರಾಜಕಾರಣ
ನಮ್ಮ ಭಾರತದ ಪರಂಪರೆಯಲ್ಲಿ ಎರಡು ದರ್ಶನಗಳು ಅತಿ ಮುಖ್ಯವಾದವು. ಒಂದು ಅದ್ವೈತ ದರ್ಶನ, ಮತ್ತೊಂದು ದ್ವೈತ ದರ್ಶನ. ಅದ್ವೈತವು ಆದರ್ಶ ಪ್ರಾಯವಾದರೆ, ದ್ವೈತವು ವಾಸ್ತವ ಪ್ರಾಯವಾದದ್ದು. ಅದರಂತೆ ವಾಲ್ಮೀಕಿಯ ರಾಮಾಯಣವು ಆದರ್ಶಪ್ರಾಯವಾದರೆ, ವ್ಯಾಸಭಾರತವು ವಾಸ್ತವ ಪ್ರಾಯ. ರಾಮನು ಆದರ್ಶ ಪ್ರಾಯನಾದರೆ, ಕೃಷ್ಣ ವಾಸ್ತವ ಪ್ರಾಯ. ನಮ್ಮ ಸನಾತನತೆಯ ವೇದ, ಉಪನಿಷತ್ತುಗಳ ಸಾರವು ಇವೆರೆಡೂ ಮಹಾಕಾವ್ಯದಲ್ಲಿ, ಅದರಲ್ಲಿನ ಪಾತ್ರಗಳಲ್ಲಿ ಅಡಕವಾಗಿದೆ. ವೇದ-ಉಪನಿಷತ್ತುಗಳು ಭಾರತದ ಮನೆ ಮನೆಯನ್ನು ತಲುಪದಿದ್ದರೂ, ಕಥಾನಕದ ರೂಪದಲ್ಲಿ, ಆದರ್ಶದ ಮತ್ತು ವಾಸ್ತವತೆಯ ರೂಪದಲ್ಲಿ ಈ ಮಹಾಕಾವ್ಯಗಳ ಮೂಲಕ ನಮ್ಮನ್ನು ತಲುಪಿ ಬೇರೂರಿದೆ. ಜಗತ್ತಿನ ಇನ್ನಾವುದೇ ಭಾಷೆಯ ಪುರಾತನ ಕಾವ್ಯವು ಪ್ರಸ್ತುತತೆಯ ತನಕ ಉಳಿದು ಬಂದಿಲ್ಲ. ಉಳಿದು ಬಂದಿದ್ದರೂ, ಅದರ ಮೂಲ ಒಳತೋಟಿ ಅರ್ಥವಾಗದಷ್ಟು ಭಿನ್ನವಾಗಿ ಅವರಿಗೆ ಕಾಣುತ್ತಿದೆ. ಸರಿ ಸುಮಾರು ನಾಲ್ಕು ಸಾವಿರ ಹಳೆದಷ್ಟಾದ ಕಾವ್ಯದ ಪಾತ್ರವನ್ನು, ಅದರಲ್ಲಿನ ಐತಿಹಾಸಿಕ ಅಂಶಗಳನ್ನು, ಇವತ್ತಿನ ಸಮಕಾಲೀನಸ್ಥಿತಿಯೊಂದಿಗೆ ಪರಿಶೀಲಿಸಿ ಮಾತನಾಡುವ ಮಟ್ಟಿಗೆ ನಮ್ಮ ಪರಂಪರೆ, ಭಾಷೆ, ತತ್ತ್ವ ಉಳಿದು ಬಂದಿದೆ ಎಂದರೆ ಅದು ಈ ನೆಲದ ಸತ್ವವನ್ನು ತೋರುವಂಥದ್ದು.
ಎಸ್ ಎಲ್ ಭೈರಪ್ಪನವರು ಪರ್ವ ಕಾದಂಬರಿಯನ್ನು ವ್ಯಾಸ ಪ್ರಮಾಣವಾಗೇ ಬರೆದಿದ್ದಾರೆ ಎಂದು ನಂಬಬೇಕಾಗಿದೆ. ಅದರಲ್ಲಿ ಹಲವಾರು ಭಾಗ ಸೃಜನಶೀಲ ರಸಸೃಷ್ಟಿಯೇ ಆದರೂ, ವ್ಯಾಸಭಾರತದ ಮೂಲವನ್ನು ಬಿಟ್ಟುಕೊಟ್ಟಿಲ್ಲ. ಮೂಲಭಾರತವನ್ನು ಸಾಣೆ ಹಿಡಿದು ನೋಡಿದ ಆಧುನಿಕ ಭಾರತ ‘ಪರ್ವ’ ಎಂಬುದು ವಿದ್ವಾಂಸರ, ಸಾಹಿತ್ಯಾಸಕ್ತರ ನಿಜನುಡಿಯಾಗಿದೆ. ಅಂಥಹ ಗದ್ಯರೂಪ ಭಾರತದ ಒಂದು ಪಾತ್ರದ ನೆಲೆಯನ್ನು, ಆ ಪಾತ್ರದ ಐತಿಹಾಸಿಕ ಮಾನ್ಯತೆಯನ್ನು, ಸ್ವರೂಪವನ್ನು, ಮುಖ್ಯವಾಗಿ ಆ ಪಾತ್ರದ ರಾಜತಂತ್ರ, ಯುದ್ಧತಂತ್ರ, ರಾಜಕಾರಣ, ಧರ್ಮಕಾರಣ ಇವೆಲ್ಲವನ್ನು ಒಟ್ಟು ರೂಪದಲ್ಲಿ ವಿಶ್ಲೇಷಿಸುವುದು ಧನ್ಯತೆಯ ವಿಚಾರವಾಗಿದೆ. ಆ ಸತ್ವಪೂರ್ಣ ಪಾತ್ರವೇ ‘ಕೃಷ್ಣ ವಾಸುದೇವ’. ಆತ ತಂತ್ರಗಾರ. ರಾಜ ತಾಂತ್ರಿಕ ಚತುರ, ಮೇಲಾಗಿ ಮಾನವನೇ ಆಗಿದ್ದರೂ ಅಸಮಾನ್ಯ ಗುಣದವ ಎಂಬ ಹೊಗಳಿಕೆ ಅವನಿಗಿದೆ.
ಪರ್ವ ಕಾದಂಬರಿಯಲ್ಲಿ ಕೃಷ್ಣನು ತಾನಾಗಿಯೇ ತನ್ನ ಪಾತ್ರದ ಹರಿವನ್ನು ಬಿಟ್ಟುಕೊಡುವುದಿಲ್ಲ. ಅದರ ಮಧ್ಯಭಾಗದಲ್ಲಿ ಮಿತ್ರನಾದ ಸಾತ್ಯಕಿಯ ಮೂಲಕವೇ ಪಾತ್ರದ ಅನಾವರಣವಾಗುವುದು. ಆದರೆ ಅದಕ್ಕೂ ಮುಂಚಿನ ಪಾತ್ರಗಳು ಕೃಷ್ಣನನ್ನು ನೆನೆಯದೇ ಬಿಡುವುದಿಲ್ಲ. ಯಾವಾಗ ದುಶ್ಯಾಸನನು, ಮಾದ್ರಿಯ ಅಣ್ಣ ಶಲ್ಯ ರಾಜನ ಬಳಿ ಬಂದು, ಯುದ್ಧಕ್ಕೆ ಬೆಂಬಲ ಕೋರಿ, ದುರ್ಯೋಧನ ಸಾಮರ್ಥ್ಯವನ್ನು ತಿಳಿಸಿ, ಆರ್ಯಾವರ್ತದ ಎಲ್ಲಾ ರಾಜರ ಅಭಿಮತವನ್ನು ಸೇರಿಸಿ, ಪಾಂಡವರ ಕುರಿತಾಗಿ ‘ಹಿಂದಿನ ವೈಭವದಿಂದ ರಾಜಕಾರಣಕ್ಕೆ ಶಕ್ತಿ ಬರುವುದಿಲ್ಲ, ಇವತ್ತು ಯಾರ ಬಳಿ ಅಧಿಕಾರ ಸೂತ್ರವಿದೆ ಎಂಬುದರ ಮೇಲೆ ನಿಶ್ಚಿತ’ ಎಂದು ಹೇಳುತ್ತಾನೋ, ಅಲ್ಲಿಂದಲೇ ರಾಜಕೀಯದ ಒಳಸುಳಿಗಳು ಪರ್ವದ ಕಥಾನಕದಲ್ಲಿ ಮೇಲೇಳುತ್ತದೆ. ಹಾಗೂ ಮಹಾಭಾರತ ಕಥಾನಕವೆಂದ ಮೇಲೆ ಕೃಷ್ಣನನ್ನು ರಾಜಕೀಯವನ್ನು ಬೇರೆಯದಾಗಿ ನೋಡಲು ಸಾಧ್ಯವಿಲ್ಲ.
ಕೃಷ್ಣನು ಇಂದಿನ ಉತ್ತರ ಭಾರತ ಅಥವಾ ಅಂದಿನ ಅರ್ಯಾವರ್ತಾದ ಎಲ್ಲಾ ರಾಜ ಮನೆತನ, ಪ್ರದೇಶ ಮತ್ತು ರಾಜರೊಂದಿಗೆ ಒಡನಾಟವನ್ನು, ಓಡಾಟವನ್ನು ಇಟ್ಟುಕೊಂಡಿದ್ದನು, ಎಂಬುದು ಪ್ರಚಲಿತದಲ್ಲಿದ್ದ ವಿಚಾರ. ಆರ್ಯಾವರ್ತದ ಪ್ರದೇಶವೆಂದರೆ ಈಗಿನ ಮಹಾರಾಷ್ಟ್ರ, ಗೋದಾವರಿಯಿಂದ ಉತ್ತರದ ಅಫ್ಘಾನಿಸ್ತಾನದವರೆಗೂ ಹಾಗೂ ಗುಜರಾತಿನಿಂದ-ಪೂರ್ವ ರಾಜ್ಯಗಳವರೆಗೂ ಇದ್ದಂತ ಭೂಪ್ರದೇಶವಾಗಿತ್ತು. ಕೃಷ್ಣ ವಾಸುದೇವ ಹುಟ್ಟಿದ್ದು ಮಥುರೆಯಲ್ಲಿ. ಇವತ್ತಿನ ಉತ್ತರಪ್ರದೇಶದ ಆಗ್ರಾ ಸಮೀಪ. ಅಲ್ಲಿ ಕಂಸನ ರಾಜ್ಯಾಡಳಿತವಿತ್ತು. ನಂತರ ಕಂಸನನ್ನು ಕೊಂದು, ಜರಾಸಂಧನಿಂದ ತಪ್ಪಿಸಿಕೊಂಡು, ದ್ವಾರಕೆಗೆ ಅಂದರೆ ಗುಜರಾತಿನ ತೀರಪ್ರದೇಶಕ್ಕೆ ಬಂದು ಯಾದವ ಕೃಷ್ಣ ಹೊಸನಗರಿಯನ್ನು ಕಟ್ಟಿದ್ದ. ಸಕಲ ಇನ್ನಿತರ ರಾಜ ಮನೆತನದೊಡನೆ ಒಡನಾಟವನ್ನು ಇಟ್ಟುಕೊಂಡು ಅದಗಾಲೇ ಆರ್ಯಾವರ್ತದ ಪ್ರಭಾವಿ ವ್ಯಕ್ತಿಯಾಗಿ ಕಾಣತೊಡಗಿದ್ದ. ಅಂದಿನ ರಾಜಮನೆತನದ ದೇಶಗಳಾದರು ಯಾವುದು? ಬಾಲ್ಹೀಕ-ಇವತ್ತಿನ ಪಂಜಾಬ್ ಸುತ್ತಮುತ್ತಲಿನ ಪ್ರದೇಶ, ಮದ್ರದೇಶ-ಪಾಕಿಸ್ತಾನದ ಪಂಜಾಬ್ ಪ್ರದೇಶ ಮತ್ತು ಪಂಜಾಬ್, ಕೈಕೇಯ-ಪಾಕಿಸ್ತಾನದ ಲಾಹೋರ್, ಫೈಸಲಾಬಾದ್ ಪ್ರದೇಶ, ಕುರುಗಳ ಹಸ್ತಿನಾಪುರ-ಉತ್ತರಖಾಂಡ್, ಹರಿಯಾಣ, ಪಾಂಡವರ ಇಂದ್ರಪ್ರಸ್ಥ- ದಿಲ್ಲಿಯ ಆಚೀಚೆ, ವಿದರ್ಭ- ನಾಗಪುರ, ಅಂಗ- ಪಶ್ಚಿಮ ಬಂಗಾಳ, ಜರಾಸಂಧನ ಮಗಧ-ಜಾರ್ಖಂಡ್, ಚೇದಿ-ಛತ್ತೀಸ್ ಘರ್, ಕಲಿಂಗ-ಒರಿಸ್ಸಾ. ಮಥುರೆಯಿಂದ ದ್ವಾರಕೆಗೆ ಸರಿಸುಮಾರು ಸಾವಿರದ ಇನ್ನೂರು ಕಿ.ಮೀ ದೂರವಾಗುತ್ತದೆ. ಇನ್ನು ಅಲ್ಲಿಂದ ಪ್ರತಿ ಪ್ರದೇಶಕ್ಕೂ ಐನೂರು ಕಿ.ಮೀ. ಹೆಚ್ಚಾಗುತ್ತಾ ಸಾವಿರ ಸಾವಿರ ಕಿ.ಮೀ ಆಗುತ್ತದೆ. ದೇಶದೇಶಗಳನ್ನು ಸುತ್ತಿ ರಾಜಕೀಯ ಸಂಬಂಧವನ್ನು ಭದ್ರಪಡಿಸಿ, ಅಲ್ಲಿನ ಪ್ರದೇಶದ ಸೂಕ್ಷ್ಮವನ್ನು ಗಮನಿಸುವುದು, ಅಂದಿನ ಸಾರಿಗೆಯಾದ ರಥ, ಕುದುರೆಗಳನ್ನು ಹೂಡಿಕೊಂಡು ಹೋಗುವುದು ಕೃಷ್ಣನ ವಿಶಿಷ್ಟ ಕ್ರಮದಂತೆ ಕಾಣುತ್ತದೆ. ಈ ಅರಿವು ಇಲ್ಲದೆ ರಾಜ ತಾಂತ್ರಿಕನಾಗಲೂ ಸಾಧ್ಯವಿಲ್ಲ. ಸಮಕಾಲೀನಕ್ಕೂ ಇದು ಅವಶ್ಯವಾದ ಸಂಗತಿಯಾಗಿದೆ. ಇಂಥಹ ಜನಪ್ರಿಯ ‘ಕೃಷ್ಣ ವಾಸುದೇವ’ ದ್ವಾರಕೆಯಲ್ಲಿ ತನ್ನ ಹಿಡಿತವನ್ನು ಬಿಟ್ಟಿದ್ದನೇ ಎಂಬ ಸಂಶಯ ಕಾಡುವುದು ಸಹಜ. ‘ಊರೂರು ತಿರುಗುವ ಕೃಷ್ಣನಿಗಿಂತ ಊರಿನಲ್ಲಿರುವ ಅಣ್ಣನ ಕಡೆ ಸೈನ್ಯವಿರುತ್ತದೆ’ ಸುಭದ್ರೆ, ಈ ಕಾರಣಕ್ಕಾಗಿಯೇ ಹೀಗೆನ್ನುತ್ತಾಳೆ. ಯುದ್ಧದ ಸಂದರ್ಭದಲ್ಲಿ ಈ ಮಾತು ನಿಜವಾದಂತೆಯೂ ಕಾಣುತ್ತದೆ. ಪೂರ್ಣ ಯಾದವರ ಸೇನೆ ಕೃತವರ್ಮನ ನೇತೃತ್ವದಲ್ಲಿ ಕೌರವರ ಕಡೆ ಕಾಯ್ದರೆ, ಕೃಷ್ಣನೊಡನೆ ಸಾತ್ಯಕಿಯು ಮಾತ್ರ ಪಾಂಡವರ ಕಡೆ ನಿಲ್ಲುತ್ತಾನೆ. ಇದು ತೀರಾ ಕೊನೆಯ ಹಂತದ ವಿಶ್ಲೇಷಣಾ ಸಾಮಾಗ್ರಿ. ಇದಕ್ಕೂ ಮುನ್ನ ಕಂಸನನ್ನು ಕೊಂದ ಕಿಶೋರ ಕೃಷ್ಣ, ಉಗ್ರಸೇನ, ವಸುದೇವ, ಬಲರಾಮಾದಿಯಾಗಿ ಮಥುರೆಯ ಜನರನ್ನು ವಲಸೆಗೆ ತೊಡಗಿಸಿರುತ್ತಾನೆ. ಮಥುರೆಯ ಜನ ‘ಹೇಡಿ ಕೃಷ್ಣ’ ಎನ್ನುತ್ತಾರೆ. ಇನ್ನಿತರ ಯಾದವ ಪ್ರಮುಖರು ‚ಜರಾಸಂಧನನ್ನು ಎದುರಿಸೋಣ, ಪ್ರಾಣ ಹೋದರೆ ಹೋಗಲಿ‛ ಎಂದು ಹೇಳಿಕೊಳ್ಳುತ್ತಾರೆ. ಆಗ ಕೃಷ್ಣನು ಕೊಡುವ ಉತ್ತರ, ಪರ್ವದ ಕೃಷ್ಣನ ಸ್ವರೂಪವನ್ನು ಬಿಚ್ಚಿಡುತ್ತದೆ. ‘ಬದುಕಿದ್ದರೆ ಶತ್ರುವನ್ನು ಕೊಲ್ಲಬಹುದು, ದೊಡ್ಡ ಸೈನ್ಯಕ್ಕೆ ತಲೆಕೊಟ್ಟರೆ ವ್ಯರ್ಥ’ ಎಂದು ಹೇಳಿದ ಕೃಷ್ಣನನ್ನು ಕಂಡು ಅವನ ಅತಿ ಮಿತ್ರನಾದ ಸಾತ್ಯಕಿಗೂ ಕೋಪ ಒಸರುತ್ತದೆ. ಎಲ್ಲಾ ನಿಂದನೆಯನ್ನು ಕೃಷ್ಣ ತಾನೇ ಭರಿಸುತ್ತಾನೆ. ವಾಸ್ತವವಾಗಿ ಮುದುಕರಾದಿ, ಹುಡುಗ ಪಡೆ ಹೊಂದಿದ್ದ ಮಥುರೆಯ ಯಾದವರಿಗೆ ಜರಾಸಂಧನಂತ ಸಾಮ್ರಾಟನನ್ನು ಎದುರಿಸುವುದು ಸಾಧ್ಯವಿರಲಿಲ್ಲ. ಕ್ಷಣ ಮಾತ್ರದಲ್ಲಿ ಯಾದವರು ತರಿದು ಹೋಗುತ್ತಿದ್ದರು. ಆವೇಶದಿಂದ ವಿನಾಶವಾಗುತ್ತದೆ, ವಿವೇಕದಿಂದ ವಿಜಯವಾಗುತ್ತದೆ ಎಂಬ ಸಾಮಾನ್ಯ ಜ್ಞಾನವನ್ನು ಕೃಷ್ಣನು ಎಲ್ಲರಿಗೂ ತಿಳಿಸಿದ. ಅವನ ಭವಿಷ್ಯೋತ್ತರ ಕ್ರಿಯೆಗಳ ಪ್ರಗತಿಯ ಮೆಟ್ಟಿಲು ಈ ನಿರ್ಣಯವೇ ಆಗಿತ್ತು. ಅವನು ಸಾವಧಾನದಿಂದ ಎಲ್ಲರನ್ನೂ ಒಪ್ಪಿಸಿ ವಲಸೆ ಹೋಗುತ್ತಾ, ಪಶ್ಚಿಮದ ತೀರ ಪ್ರದೇಶವನ್ನು ತಲುಪುತ್ತಾರೆ. ಜರಾಸಂಧನ ಸೈನ್ಯ ಕ್ರೋಧದಿಂದ ಮಥುರೆಯನ್ನು ನಾಶಪಡಿಸಿ ಬರಿಗೈಯಲ್ಲಿ ಹಿಂತಿರುಗುತ್ತದೆ. ಈ ಸಂದರ್ಭದಲ್ಲೇ ಒಮ್ಮೆ ಸಾತ್ಯಕಿ ಕೃಷ್ಣನನ್ನು ‘ಜನರ ಬೇಗುದಿಯ ಬಗ್ಗೆ, ವಲಸೆ ಬಂದ ಸಂಕಟಕ್ಕೆ ಆಡಿತ ಮಾತುಗಳ ಬಗ್ಗೆ, ಹೇಡಿತನದ ಲಕ್ಷಣ ಹೊತ್ತ ಕ್ಷತ್ರಿಯ ಕುಲ ಎಂಬ ಹಣೆಪಟ್ಟಿಯ ಬಗ್ಗೆ’ ವಿವರಿಸಿ ಪ್ರಶ್ನಿಸುತ್ತಾನೆ. ಕೃಷ್ಣನು ಅದಕ್ಕೆ ಪ್ರತಿಯಾಗಿ ’ಜನರ ಮಾತನ್ನು ಗಣನೆಗೆ ತೆಗೆದುಕೊಳ್ಳಬಾರದು, ನೀನು ಎಷ್ಟೇ ಒಳ್ಳೆಯದು ಮಾಡಿದರೂ ಜನ ಬೈಯ್ಯಬಹುದು‛ ಎನ್ನುತ್ತಾನೆ. ಈ ಮಾತಿನಲ್ಲಿ ಯಾವ ತಂತ್ರವೂ ಇಲ್ಲ, ರಾಜ ಚತುರತೆ ಇಲ್ಲ, ಆದರೆ ಇಲ್ಲಿರುವುದು ಪ್ರಜೆಗಳನ್ನು ಪಾಲಿಸುವವರಿಗೆ ಇರಬೇಕಾದ ನಿರ್ಲಿಪ್ತಿಯ ಮತ್ತು ಸಂಯಮದ ಪಾಠವಾಗಿದೆ. ಮುಂದೆ ಜರಾಸಂಧನನ್ನು ಕೊಂದ ರೀತಿ ಮತ್ತು ಸಮಯ ಇವೆಲ್ಲದಕ್ಕೂ ಪ್ರಬುದ್ಧ ಉತ್ತರವನ್ನು ನೀಡಲಿತ್ತು.
***
ಪಾಂಡುವಿನ ಹೆಂಡತಿಯಾದ ಕುಂತಿ ಕೃಷ್ಣನಿಗೆ ಸೋದರ ಅತ್ತೆಯಾಗಬೇಕು. ತಂದೆ ವಸುದೇವನ ಹದಿನಾಲ್ಕು ಹೆಂಡತಿಯರಲ್ಲಿ ದೇವಕಿಯ ಮಗ ಕೃಷ್ಣನಾದರೆ, ರೋಹಿಣಿಯ ಮಗ ಬಲರಾಮ. ಪಾಂಡವರಲ್ಲಿ ಮತ್ತು ಯಾದವರಲ್ಲಿ ಸಂಬಂಧವೆಂದರೆ ಅದೊಂದು ಲಾಭದಾಯಕ, ರಾಜ್ಯಕ್ಕೆ ಶಕ್ತಿವರ್ಧಕ ಎಂದೆ ನಂಬಲಾಗಿತ್ತು (ಆಗಿನ ಎಲ್ಲಾ ರಾಜಮನೆತನದಲ್ಲೂ ಎನ್ನಬಹುದು). ಪರ್ವದಲ್ಲಿ ಕೃಷ್ಣನು ಮೊದಲಿನಿಂದಲೂ ಯಾದವರ, ಆರ್ಯಾವರ್ತಾದ ಪ್ರಮುಖನಾಗಿ, ತಂತ್ರಗಾರನಾಗಿಯೇ ಪ್ರವೇಶವನ್ನು ಪಡೆದುಕೊಳ್ಳುತ್ತಾನೆ. ‘ಗೋಪೀ ರಮಣ’ ಎಂಬ ಯಾವ ಉಲ್ಲೇಖವೂ ಕಾಣುವುದಿಲ್ಲ. ಮೂಲ ಮಹಾಭಾರತ ಎಂದೆನ್ನುವ ‘ಜಯ’ದಲ್ಲೂ ಕೂಡ ಈ ರೀತಿಯಾದ ಯಾವ ವರ್ಣನೆಯೂ ಇಲ್ಲ ಎಂಬುದು ವಿದ್ವಾಂಸರ ಅಭಿಮತ. ಪಾಂಡವರ-ಕೃಷ್ಣನ ಮೊದಲನೆಯ ಭೇಟಿ ದ್ರೌಪದಿಯ ಸ್ವಯಂವರದಲ್ಲಿ ಎಂದು ಹೇಳಬಹುದಾಗಿದೆ. ರಾಜನಲ್ಲದಿದ್ದರೂ ಕೃಷ್ಣನ ಪ್ರಭಾವವನ್ನು ಕಂಡು ಬಲರಾಮ ‘ತಾನು ಎಂದು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ, ಮುದುಕ ಸಿಂಹಾಸನದ ಮೇಲೆ ಕೂತಿರಬೇಕು, ಬಲರಾಮ ಹೇಳಿದಂತೆ ಕೇಳಬೇಕು’ ಎಂದು ಹೇಳುವುದುಂಟು. ಮುದುಕ ಎಂದದ್ದು ಉಗ್ರಸೇನನಿಗೆ, ತಾನು ಎಂಬುದು ಕೃಷ್ಣನಿಗೆ ಹೇಳಿದ್ದಾಗಿದೆ. ಕೃಷ್ಣ ವಿದರ್ಭದ ರುಕ್ಮಿಣಿಯನ್ನು ಮದುವೆಯಾದದ್ದಕ್ಕೆ ಬಲವಾದ ಕಾರಣವೇ ಇತ್ತು. ವಿದರ್ಭ ಮನೆತನದ ಜೊತೆಗಿನ ಸಂಬಂಧ ಯಾದವರಿಗೆ ಬಲವನ್ನು ನೀಡಲಿತ್ತು. ಮಥುರೆಗೆ ಒತ್ತಾಸೆಯಾಗುತ್ತಾರೆ ಎಂಬ ಆಲೋಚನೆಯು ಇದರಲ್ಲಿ ಅಡಕವಾಗಿತ್ತು. ಈ ರಾಜ ತಾಂತ್ರಿಕ ಉದ್ದೇಶವನ್ನು ಸಾತ್ಯಕಿಯು ನಂತರ ಬಲರಾಮನಿಗೂ ಸೂಚಿಸುತ್ತಾನೆ. ಆದರೆ ಅದನ್ನು ಒಪ್ಪದ ಬಲರಾಮ ‘ಹೆಣ್ಣು ಸಿಕ್ಕುವುದಾದರೆ ಏನು ಬೇಕಾದರೂ ಮಾಡುತ್ತಾನೆ’ ಎಂದು ಲಘುವಾಗಿ ನುಡಿಯುತ್ತಾನೆ. ಇದು ಮುಂದೆ ಬಲರಾಮನ ಮತ್ತು ರುಕ್ಮಿಣಿಯ ಜಗಳದಲ್ಲಿ ಮುಂದುವರೆದು, ದ್ವಾರಕೆಗೆ ಹಲವಾರು ವರ್ಷದ ನಂತರ ಬಂದಿದ್ದ ರುಕ್ಮಿಣಿಯ ಅಣ್ಣ ರುಕ್ಮಿಯನ್ನು ಬಲರಾಮ ಕೊಲ್ಲುವಲ್ಲಿ ಮುಗಿಯುತ್ತದೆ. ‘ಜರಾಸಂಧನನ್ನು ಭೀಮ ಕೊಂದ, ಶಿಶುಪಾಲನನ್ನು ನೀನು ಕೊಂದೆ, ಈ ರುಕ್ಮಿಯನ್ನು ನಾನು ಕೊಂದೆ’ ಎಂದು ಬಲರಾಮ ಸಮರ್ಥನೆ ಕೊಡುತ್ತಾನೆ. ಈ ವಿಚಾರ ಪ್ರಸ್ತಾಪವಾದಾಗ ಜರಾಸಂಧನ ಮತ್ತು ಶಿಶುಪಾಲನ ಹತ್ಯೆ ಮಹಾಭಾರತದ ಪ್ರಮುಖ ರಾಜಕೀಯ ವೃತ್ತಾಂತವೆಂದು ಗೋಚರಿಸತೊಡಗುತ್ತದೆ. ಪರ್ವದಲ್ಲಿ ಶಿಶುಪಾಲನ ಹತ್ಯೆಯ ವಿವರಣೆಯ ಪ್ರಸ್ತಾಪವಿಲ್ಲ ಆದರೆ ಜರಾಸಂಧನ ಹತ್ಯೆಯ ಹಿನ್ನಲೆ ಸೊಗಸಾಗಿ ಮೂಡಿಬಂದಿದೆ. ಕಥಾನಕವಾಗಿಯೂ, ಐತಿಹಾಸಿಕವಾಗಿಯೂ ಇದು ಪ್ರಮುಖ ಘಟ್ಟವಾಗಿದೆ. ಏಕೆಂದರೆ, ಜರಾಸಂಧನನ್ನು ಮುಗಿಸುವುದು ಯಾದವರಿಗೆ, ಮುಖ್ಯವಾಗಿ ಕೃಷ್ಣನಿಗೆ ಅವಶ್ಯವಿತ್ತು. ತನ್ನ ಅಂದಿನ ತಾಳ್ಮೆಯ ಫಲವನ್ನು ಕೃಷ್ಣನು ತೋರಬೇಕಿತ್ತು. ಎಷ್ಟೇ ದ್ವಾರಕೆಯನ್ನು ಸುಂದರವಾಗಿ ನಿರ್ಮಿಸಿದರೂ, ತನ್ನ ಮಥುರೆಯ ಹಿಡಿತ, ಕುರುಗಳ ಮೇಲೆ ಪಾಂಡವರ ಕಡೆಯಿಂದ ರಾಜತಾಂತ್ರಿಕ ಹಿಡಿತ ಮತ್ತು ಆರ್ಯಾವರ್ತದ ಎಲ್ಲಾ ರಾಜಕುಲದ ಮೇಲಿನ ಹಿಡಿತ ಸಾಧ್ಯವಾಗುವುದು ಇದರಿಂದ ಎಂದು ಅವನು ನಿಶ್ಚಯಿಸಿದಂತಿತ್ತು. ಜರಾಸಂಧನ ಹತ್ಯೆಯನ್ನು ಪಾಂಡವರಿಂದ ಮಾಡಿಸಲು ಕೃಷ್ಣನಿಗೆ ಪ್ರಮುಖವಾದ ರಾಜತಾಂತ್ರಿಕ ಕಾರಣಗಳಿದ್ದವು. ಇದಕ್ಕಾಗಿಯೇ ಪೂರ್ಣ ರೂಪುರೇಶೆ ಅವನಲ್ಲಿ ಸಿದ್ಧವಿದ್ದಂತೆ ಗೋಚರಿಸುತ್ತದೆ. ಮೊದಲನೆಯದಾಗಿ ಈ ಕಾರಣಕ್ಕಾಗಿಯೇ ಪಾಂಡವರ ಸಖ್ಯವನ್ನು ಅವನು ಬೆಳೆಸಿದ್ದ. ಅರ್ಜುನನ ಮಿತ್ರತ್ವದಿಂದ ಅದು ಇಮ್ಮಡಿಯಾಗಿತ್ತು. ಸುಭದ್ರೆಯನ್ನು ಅರ್ಜುನನಿಗೆ ಕೊಡುವ ಮೂಲಕ ಅರ್ಜುನನ ವಿಶ್ವಾಸವನ್ನು ಸಂಪಾದಿಸಿದ್ದ. ಜರಾಸಂಧನ ಹತ್ಯೆಗೆ ಇದು ಮೊದಲ ಅಡಿಪಾಯ. ತನ್ನ ಧ್ಯೇಯಕ್ಕಾಗಿ ನಮ್ಮನ್ನು ಬಳಸಿಕೊಂಡ ಎಂಬ ವೃಥಾ ಆರೋಪ ಬರಬಾರದು ಎಂಬ ದೃಷ್ಟಿಯಿಂದಲೇ ಧರ್ಮಜನಿಗೆ ರಾಜಸೂಯ ಮಾಡಲು ಹೇಳಿದ. ಎಷ್ಟಾದರೂ ಖಾಂಡವವನವನ್ನು ಸುಟ್ಟು ಸುಮಗೊಳಿಸಿ ಇಂದ್ರಪ್ರಸ್ಥವನ್ನು ಖುದ್ದು ಕೃಷ್ಣ-ಅರ್ಜುನರೇ ನಿಂತು ಮಯನ ನೇತೃತ್ವದಲ್ಲಿ ಕಟ್ಟಿಸಿದ್ದರು. ರಾಜಸೂಯವೆಂದರೆ ತನ್ನ ಸರೀಕ ಕ್ಷತ್ರಿಯ ಕುಲದಲ್ಲಿ ಶ್ರೇಷ್ಠನಾದವನು ನಡೆಸುವ ಯಾಗವಾಗಿತ್ತು. ಪಾಂಡವರು ಶ್ರೇಷ್ಠರೆನಿಸಬೇಕಾದರೆ ಸಾಮ್ರಾಟನಾದ ಜರಾಸಂಧನನ್ನು ಕೊಲ್ಲಲೇಬೇಕಿತ್ತು. ಆ ಮೂಲಕ ಇತರ ಆರ್ಯಾವರ್ತದ ರಾಜರನ್ನು ಗೆದ್ದಂತಾಗುತ್ತಿತ್ತು. ಇನ್ನು ಕುರುಗಳು ಕೂಡ ಪಾಂಡವರ ಶ್ರೇಷ್ಠತೆಯನ್ನು ಒಪ್ಪುವಂಥಾಗುತ್ತದೆ. ಒಮ್ಮೆ ಸರೀಕನು ರಾಜಸೂಯ ಮಾಡಿದರೆ ಕುರುಗಳು ಮಾಡುವಂತಿರಲಿಲ್ಲ. ಜರಾಸಂಧನು ಬಂಧಿಸಿ ಒತ್ತೆಯಲ್ಲಿರಿಸಿರುವ ಇತರ ರಾಜರು ಕೂಡ ಬಿಡುಗಡೆ ಹೊಂದಿ ಪಾಂಡವರ-ಕೃಷ್ಣನ ಪರವಾಗುವುದರಲ್ಲಿ ಸಂಶಯವಿರಲಿಲ್ಲ. ಇಷ್ಟು ಸರ್ವಮಾನ್ಯ ಫಲಗಳ ಕಾರಣದಿಂದಲೇ ರಾಜಸೂಯ ಎಂಬ ದಾಳದಿಂದ ಪಾಂಡವರ ಕೃತಜ್ಞತೆ – ಕುರುಗಳ ಮೇಲೆ ಹಿಡಿತ - ಜರಾಸಂಧನ ಹತ್ಯೆ ಮತ್ತು ಪ್ರತೀಕಾರ ಎಂಬ ಮೂರು ಕಾಯಿಯನ್ನು ಕೃಷ್ಣ ಗೆದ್ದುಕೊಂಡ. ಜರಾಸಂಧನ ಹತ್ಯೆಗಂತೂ ಕೃಷ್ಣ ಹುಚ್ಚು ಧೈರ್ಯದಿಂದ ಕೇವಲ ಅರ್ಜುನ, ಭೀಮರನ್ನು ಕರೆದುಕೊಂಡು ಹೋಗಿ ಚಾಣಾಕ್ಷತೆಯಿಂದ ದ್ವಂದ್ವ ಯುದ್ಧಕ್ಕೆ ಕರೆದು ಭೀಮನಿಂದ ಮುಗಿಸಿದ. ಫಲವನ್ನು ಮಾತ್ರ ಪಡೆದು ಕ್ರಿಯೆಯಲ್ಲಿ ಪಾಲ್ಗೊಳ್ಳದ ಒಣ ತಂತ್ರಗಾರನಾಗದೆ ಕೃಷ್ಣನೂ ಸಹ ಪ್ರಾಣ ಒತ್ತೆ ಇಟ್ಟು ಹೋದದ್ದು ಅವನ ನೀತಿಯ ಮೇಲ್ಮಟ್ಟವನ್ನು ತೋರುತ್ತದೆ. ಈ ಪ್ರಕರಣದ ಸೂಕ್ಷ್ಮತೆ ಇರುವುದು ಇದರಲ್ಲಿಯೇ. ಸಮಕಾಲೀನರಲ್ಲೂ ದ್ವಾರಕೆ ಅಥವಾ ಗುಜರಾತಿನ ತೀರ ಪ್ರದೇಶದಿಂದ ಬಂದು ಕುರುಗಳ ಮೇಲೆ ಅಥವಾ ದಿಲ್ಲಿಯ ಮೇಲೆ ಹಿಡಿತವನ್ನು ಬಯಸುವವರು, ಕೃಷ್ಣನಂತೆಯೇ ಯಾವ ರಾಜ ಪದವಿಯಿಲ್ಲದೇ, ರಾಜಕಾರಣದ ಹಿಂದೆ ನಿಂತು ಭಾರತಾದ್ಯಂತ ಮನ್ನಣೆ ಗಳಿಸಿದವರು ಇದ್ದಾರೆ. ಅವರು ‘ಅಹಿಂಸೋ ಪರಮೋ ಧರ್ಮಃ’ ಎಂಬುದನ್ನು ಮಾತ್ರ ನೆನಪಿನಲ್ಲಿಟ್ಟುಕೊಂಡಿದ್ದರು ಅಥವಾ ಬೇಕೆಂದಲೇ ಉಳಿದದ್ದನ್ನು ನಾಲಿಗೆಯಲ್ಲಿ ಕಚ್ಚಿಕೊಂಡಿದ್ದರು. ಅದರ ಮುಂದಿನ ತತ್ತ್ವವಾದ ‘ಧರ್ಮಹಿಂಸಾ ತಥೈವ ಚ’ ಎಂಬುದನ್ನು ಅರಿಯಲೇ ಇಲ್ಲ. ಆದರೆ ಕೃಷ್ಣ, ಕಾಲ, ಗುಣ, ಸ್ಥಿತಿ ಎಲ್ಲವನ್ನೂ ಗಮನಿಸಿ ಇವೆರೆಡರಲ್ಲಿ ಸೂಕ್ತವಾದುದನ್ನು ಅನುಸರಿಸುತ್ತಿದ್ದ. ಗುಜರಾತಿನಿಂದ ಬಂದು ಅದೇ ರೀತಿ ದಿಲ್ಲಿಯ ಮೇಲೆ ಹಿಡಿತ ಸಾಧಿಸುವ ಬಯಕೆ ಇಟ್ಟುಕೊಳ್ಳುವುದು ಮತ್ತು ಸಾಧಿಸುವುದು, ಅನೂಚಾನವಾಗಿ ಈಗಲೂ ಸಂಭವಿಸುತ್ತಿರುವುದು ಆಶ್ಚರ್ಯದ ಸಂಗತಿ!
***
‘ಹಾವು ಕಚ್ಚಿದರೆ ತಕ್ಷಣ ಅದನ್ನು ಹಿಡಿದು ವಿಷದ ಹಾವೋ ಅಥವಾ ವಿಷ ರಹಿತವೋ ಎಂದು ನೋಡುವ ಸಾವಧಾನ ಕೃಷ್ಣನದ್ದು’ ಎಂದು ಎಸ್ ಎಲ್ ಭೈರಪ್ಪನವರು ಕೃಷ್ಣನ ಗುಣದ ಬಗ್ಗೆ ನವಿರಾಗಿ ವರ್ಣಿಸುತ್ತಾರೆ. ಅದರಂತೆ ‘ಎಷ್ಟೇ ದೂರದ ಸಂಬಂಧವಿದ್ದರೂ, ಅಂತಃಕರಣ ಇಟ್ಟುಕೊಳ್ಳುವುದು ಕೃಷ್ಣನ ಸ್ವಭಾವ’ ಎಂಬ ಮಾತು ಬರುತ್ತದೆ. ಅವನ ಇಡೀ ಜೀವನವನ್ನು ನೋಡಿದಾಗ ಇದು ನಿಜವೆನ್ನಿಸುತ್ತದೆ. ಯಾವ ಅರ್ಜುನ, ದ್ರೌಪದಿಯಿಂದ ತಿರಸ್ಕೃತಗೊಂಡು, ಮಣಲೂರು, ನಾಗಾ ಮನೆತನದ ಹೆಣ್ಣುಗಳನ್ನು ಕೂಡಿ, ಕೊನೆಗೆ ಏನೂ ತಿಳಿಯದೆ ದ್ವಾರಕೆಗೆ ಬರುತ್ತಾನೊ, ಕೃಷ್ಣನು ಅವನನ್ನು ಆತ್ಮೀಯವಾಗಿ ಕಾಣುತ್ತಾನೆ. ನಿನ್ನ ನಿಜ ಸಖ ನಾನು ಎಂದು ಅಭಯವೀಯ್ಯುತ್ತಾನೆ. ಶೂರನಾದರೂ ದುಡುಕಿನ ಸ್ವಭಾವದ ಅರ್ಜುನನನ್ನು ತನ್ನದೇ ಆದ ಅಳತೆಯಲ್ಲಿ ಕಂಡು ತಂಗಿಯನ್ನು ಓಡಿಸಿಕೊಂಡು ಹೋಗಲು ಸಹಾಯ ಮಾಡುತ್ತಾನೆ ‘ತಾನು ನಿನ್ನೊಬ್ಬನಿಗೆ ಮಾತ್ರ ಹೆಂಡತಿ, ನಿಮ್ಮ ಅಣ್ಣ ತಮ್ಮಂದಿರಿಗಲ್ಲ. ನನ್ನ ಬಿಟ್ಟು ದಾಸಿಯರನ್ನು ಕೂಡಬಾರದು’ ಇಂಥಹ ನಿರ್ಬಂಧನೆಯನ್ನು ಸುಭದ್ರೆ ಅರ್ಜುನನಿಗೆ ತರುವಾಯ ವಿಧಿಸುತ್ತಾಳೆ. ವಿಶ್ವಾಸದ ಹೆಸರಿನಲ್ಲಿ ಕೃಷ್ಣ ತನ್ನ ತಂಗಿಯ ಬಾಳನ್ನು ದ್ರೌಪದಿಯಂತೆ ಆಗಲು ಬಿಡದೆ, ಈ ನಿರ್ಬಂಧಗಳನ್ನು ಅವನೇ ಹೇಳಿಕೊಟ್ಟಿರುವಲ್ಲಿ ಸಂಶಯವಿಲ್ಲ! ಸ್ವಜನ ಕ್ಷೇಮ, ಸ್ವಕುಲ ಹಿತ ಎಂಬುದು ಆಗಿನ ಕಾಲದಲ್ಲೂ ಮಾನವ ಸಹಜವಾದ ಧೋರಣೆಯೇ ಆಗಿತ್ತು. ಕೃಷ್ಣನ ಪ್ರತಿಯೊಂದು ಕಾರ್ಯವು ಕ್ಷತ್ರಿಯ ಕುಲದ ಸಂಘಟನೆಯ ಉದ್ದೇಶವನ್ನೇ ಹೊಂದಿತ್ತು. ರಾಜಸೂಯ ಅದರಲ್ಲಿ ಪ್ರಮುಖವಾದದ್ದು. ಹೋಮರನ ‘ಇಲಿಯಡ್’ ಕಾವ್ಯದಲ್ಲೂ ಈ ರೀತಿಯದನ್ನು ಕಾಣಬಹುದಾಗಿದೆ. ಈ ಪರಿಯ ಮುಂದಾಲೋಚನೆಯಲ್ಲಿ ನಡೆಯುತ್ತಿದ್ದ ಕೃಷ್ಣನ ಯೋಜನೆಯನ್ನು ಹಾಳುಗೆಡವಿದವರು ಪಾಂಡವರೇ. ಅವನು ದ್ವಾರಕೆಯಲ್ಲಿದ್ದ ಸಮಯದಲ್ಲಿ ಜೂಜಿನ ಮೋಹದಲ್ಲಿ, ದ್ರೌಪದಿಯನ್ನು ದಾಸಿಯಂತೆ ಮಾಡಿ, ರಾಜ್ಯವನ್ನೆಲ್ಲಾ ಕಳೆದುಕೊಂಡು, ಅದೇ ದ್ರೌಪದಿಯ ಭಿಕ್ಷೆಯಿಂದ ಬದುಕಿದವರು ಎಂದು ಅವಮಾನಿತರಾಗಿ, ವನವಾಸ ಅಜ್ಞಾತವಾಸಗಳನ್ನು ಅನುಭವಿಸಲಿಕ್ಕೆ ಸಿದ್ಧರಾಗಿದ್ದರು. ಈ ವಿಚಾರವನ್ನು ತಿಳಿದ ಕೃಷ್ಣ ಪಾಂಡವರನ್ನು ಸೇರಲು ಓಡಿಬರುತ್ತಾನೆ. ಹೆಚ್ಚೆಂದರೆ ತಂಗಿಯ ಗಂಡನ ಕಡೆಯವರು, ತುಸು ಹೆಚ್ಚೆಂದರೆ ಅರ್ಜುನ ಮಿತ್ರ, ಇಷ್ಟೇ ಇವರ ಹಣೆ ಬರಹ ಎಂದು ತಂಗಿಯನ್ನು ಕರೆಸಿಕೊಂಡು ಕೃಷ್ಣ ಸುಮ್ಮನಿರಬಹುದಿತ್ತು. ಆದರೆ ಕೃಷ್ಣ ಹಾಗೆ ಮಾಡಲಿಲ್ಲ, ಕಷ್ಟಕಾಲದಲ್ಲಿ ವಿಶ್ವಾಸವನ್ನು ಮರೆಯುವುದು ನೀತಿ ಭ್ರಷ್ಟತೆ ಎಂಬುದು ಇಲ್ಲಿ ಅರಿವಾಗುತ್ತದೆ ‘ನಾನಿದ್ದರೆ, ಜೂಜಾಡಲು ಬಿಡುತ್ತಿರಲಿಲ್ಲ. ನನ್ನ ಮಾತನ್ನು ಕೇಳಿರದಿದ್ದರೆ ಇಬ್ಬರ ಕೈಗಳನ್ನು ಕಡಿದು ಹಾಕುತ್ತಿದ್ದೆ’ ಎಂದು ಕೃಷ್ಣ ಗುಡುಗುತ್ತಾನೆ. ಅಂದು ಅವನು ಗಡುಸಾಗಿ ವರ್ತಿಸದಿದ್ದಲ್ಲಿ, ಪಾಂಡವರಿಗೆ ತಮ್ಮ ತಪ್ಪಿನ ಗಾಢತೆ ಅರಿವಾಗುತ್ತಿರಲಿಲ್ಲ, ರಾಜಸೂಯವೆಲ್ಲ ಮಣ್ಣು ಪಾಲಾದ ಆಘಾತ ಅರ್ಥವಾಗುತ್ತಿರಲಿಲ್ಲ, ಮುಂದೆ ಇದೇ ಕಾರಣದಿಂದ ಯುದ್ಧವಾಗುತ್ತದೆ, ತಾವು ಯುದ್ಧ ಮಾಡುತ್ತೇವೆ ಎಂಬ ಮುನ್ನೆಚ್ಚರಿಕೆಯೂ ಅವರಿಗೆ ಬರುತ್ತಿರಲಿಲ್ಲ. ಈ ಘಟನೆಯಿಂದ ಅರ್ಯಾವರ್ತದ ರಾಜಕೀಯ ಸ್ಥಿತಿ ಕೃಷ್ಣನ ಯೋಜನೆಗೆ ವಿರುದ್ಧ ಗತಿಯಲ್ಲಿ ಹಾಯತೊಡಗಿತ್ತು.
ದ್ರೌಪದಿಗೆ ಸೀರೆಯನ್ನು ನೀಡಲು ಕೃಷ್ಣನು ಬಂದ ಎಂಬುದೆಲ್ಲಾ ನಂತರ ಭಾರತದಲ್ಲಿ ಸೇರಿಸಿದ ಪ್ರಕ್ಷಿಪ್ತ ಭಾಗ ಎಂಬುದು ಸಾಮಾನ್ಯವಾದ ತಿಳುವಳಿಕೆ. ಕೃಷ್ಣನು ನರಕಾಸುರನ ಒತ್ತೆಯಲ್ಲಿದ್ದ ಹೆಣ್ಣುಗಳನ್ನು ವಿವಾಹವಾದುದ್ದರ ಬಗ್ಗೆ ವಾಸ್ತವಕ್ಕೆ ಹತ್ತಿರವಾದ ವಿವರಣೆ ಪರ್ವದಲ್ಲಿದೆ. ಕೃಷ್ಣನ ಹೆಂಡತಿಯರಾದ ರುಕ್ಮಿಣಿ, ಸತ್ಯಭಾಮೆ, ಜಾಂಬವತಿ, ಭದ್ರೆ, ಮಿತ್ರವಿಂದೆ, ನೀಲೇ, ಕಾಲಿಂದೀ, ಲಕ್ಷಣೇ ಇವೆರೆಲ್ಲರನ್ನೂ ಆಯಾ ರಾಜ್ಯವನ್ನು ಗೆದ್ದಾಗ, ಸಂಧಿ ಮಾಡಿಕೊಂಡಾಗ ಸಂಬಂಧ ಬೆಳೆಸಲು ಆದ ಮದುವೆ ಎಂಬುದು ಹೊರನೋಟಕ್ಕೆ ಲಭ್ಯವಾಗುತ್ತದೆ. ಆದರೆ ಬಲರಾಮನು ಮಾತ್ರ ಕೃಷ್ಣನನ್ನು ತಂತ್ರದ ವಿಚಾರದಲ್ಲಿ ಒಪ್ಪಿಕೊಂಡರೂ, ರಾಜ ಸಂಬಂಧದ ಹೆಸರಿನಲ್ಲಿ ಹೆಣ್ಣು ಗಳಿಸುವವನು ಎಂದೇ ನಿರ್ಧರಿಸುತ್ತಿದ್ದ ಎನ್ನಬಹುದು. ದೊಡ್ಡ ಆರ್ಯಾವರ್ತವನ್ನು ಹಿಡಿದಿಟ್ಟುಕೊಳ್ಳವ ಶಕ್ತಿಯಿದ್ದ ಯಾದವರ ಕೃಷ್ಣ ವಾಸುದೇವ ತನ್ನ ಹೆಂಡಿರ ನಡುವಿನ ರಾಜಕೀಯವನ್ನು ಹೇಗೆ ಸಂಭಾಳಿಸುತ್ತಿದ್ದ ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ. ‘ಹೆಂಡಿರ ಕಾಟಕ್ಕೆ, ಕೃಷ್ಣ ಉರೂರು ತಿರುಗುತ್ತಾನೆ’ ಎಂಬ ಸಾತ್ಯಕಿಯ ಸ್ವಗತ ಈ ವಿಚಾರಕ್ಕೆ ತಿಳಿಹಾಸ್ಯದ ನಿರ್ಣಯವನ್ನು ಹೇಳಿದಂತಿದೆ.
***
ಮಹಾಭಾರತವನ್ನು ಪುರಾಣವೆಂದು ಪರಿಗಣಿಸುವುದರಿಂದ ಅದರ ಐತಿಹಾಸಿಕ ಮಾನ್ಯತೆ ಕಳೆದು ಹೋಗುವ ಸಾಧ್ಯತೆ ಇದೆ. ಅದೇ ರೀತಿಯಲ್ಲಿ ಸಮಕಾಲೀನ ಪ್ರಸ್ತುತತೆಯ ಬಗ್ಗೆ ವಿಶ್ಲೇಷಿಸುವಾಗ ನೇರಾನೇರ ಘಟನೆಗಳನ್ನು ಉಲ್ಲೇಖಿಸುವುದು ಕ್ಷುಲ್ಲಕ ಪ್ರಯತ್ನವಾಗುತ್ತದೆ. ಇದು ನಮ್ಮ ನೆಲದ ಮಾನವೀ ಮೌಲ್ಯಗಳ, ಮನುಜ ಮುಖದ ಅನಾವರಣ ಎಂದುಕೊಂಡಾಗ ಮಾತ್ರ ಪ್ರಸ್ತುತಕ್ಕೆ ಅದು ದಕ್ಕುವುದು. ಪರ್ವ ಕಾದಂಬರಿಯು ಅದೇ ನೆಲೆಯಲ್ಲಿದೆ. ಕೃಷ್ಣನ ಪಾತ್ರವು ಆ ಹಿನ್ನಲೆಯದ್ದೇ ಆಗಿದೆ.
ಇತ್ತ ಕೃಷ್ಣ ಯುದ್ಧದ ಮುಂಚಿನ ದಿನಗಳಲ್ಲಿ ಉಪಪ್ಲಾವ್ಯಕ್ಕೆ ಬಂದು ಪಾಂಡವರನ್ನು ಕೂಡುತ್ತಾನೆ, ಆತ್ತ ದುರ್ಯೋಧನ ಬಲರಾಮನಲ್ಲಿಗೆ ಹೋಗಿರುತ್ತಾನೆ. ಯುದ್ಧವು ನಿಶ್ಚಿತ ಎಂದು ತಿಳಿದಿದ್ದರೂ ಕೃಷ್ಣನು ಯುದ್ಧವನ್ನು ನಿಲ್ಲಿಸುವ ಬಗ್ಗೆಯೇ ಆಲೋಚಿಸುತ್ತಿದ್ದ. ಅದಕ್ಕಾಗಿ ಅವನು ಮಾಡಿದ ಪ್ರಯತ್ನಗಳು ನಿಚ್ಚಳವಾಗಿತ್ತು. ದುರ್ಯೋಧನನ ಒಡ್ಡೋಲಗಕ್ಕೆ ತನ್ನ ಖಾಸಾ ಅಂಗರಕ್ಷಕರನ್ನು, ಸಭೆಯ ವೈಭವ ನೋಡಲು ಬಂದ ವೀಕ್ಷಕರೆಂದು ಮರೆಮಾಚಿ, ಸಂಧಾನದ ಮಾತನ್ನು ಕೃಷ್ಣನು ಮುಂದಿಡುತ್ತಾನೆ. ಅಲ್ಲಿದ್ದ ಪಿತಾಮಹ ಭೀಷ್ಮ, ಕೃಷ್ಣನ ಸಂಧಿಯ ನುಡಿಗೆ ‘ಸಾಧು ಸಾಧು’ ಎನ್ನುತ್ತಾರೆ. ಪ್ರಾರಂಭಿಕವಾಗಿ ಕೃಷ್ಣ, ಅಲ್ಲಿ ಯುದ್ಧವನ್ನು ನಿಲ್ಲಿಸುವ ದೃಷ್ಟಿಯಿಂದಲೇ ತನ್ನ ಎಂದಿನ ಸೂಕ್ಷ್ಮ ಮಾತನ್ನು ಮುಂದುವರೆಸಲು, ದುರ್ಯೋಧನನ ಅಸಡ್ಡೆ ಅವನ ಗ್ರಹಿಕೆಗೆ ಸಿಗುವಂತೆಯೇ ಇತ್ತು. ಎಷ್ಟಾದರೂ ದುರ್ಯೋಧನ ಕೃಷ್ಣನಿಗೆ ಬೀಗರಾದವನು, ದುರ್ಯೋಧನನ ಮಗಳು ಲಕ್ಷಣೆಯನ್ನು ಇಷ್ಟಪಟ್ಟ ಕೃಷ್ಣನ ಮಗ ಸಾಂಬನನ್ನು ಕೌರವರು ಕಟ್ಟಿ ಹಾಕಿ, ಕೊನೆಗೆ ಅದು ಮದುವೆಯಲ್ಲಿ ಸಮಾಪ್ತಿಯಾಗಿತ್ತು. ಈ ಪ್ರಕರಣದಿಂದಲೇ ತನ್ನ ಮತ್ತು ದುರ್ಯೋಧನನ ಲಹರಿ ಹೊಂದುವುದಿಲ್ಲ ಎಂದು ಕೃಷ್ಣ ಅರಿತಿದ್ದ. ಯುದ್ಧವನ್ನು ಮಾಡುವುದೇ ಇವರ ಗುರಿಯಾಗಿದೆ ಎನ್ನುವುದನ್ನು ಗ್ರಹಿಸಿದ ಕೃಷ್ಣ, ಭೀಮಾರ್ಜುನರ ಪರಾಕ್ರಮವನ್ನು ವರ್ಣಿಸುತ್ತಾನೆ. ‘ಸ್ವಪಕ್ಷದ ಸಾಮರ್ಥ್ಯದ ವರ್ಣನೆ, ಶತ್ರು ಪಕ್ಷಕ್ಕೆ ಮೊದಲ ಏಟು’ ಎಂಬುದು ತಂತ್ರದ ಒಂದು ಭಾಗ. ‘ನೀವು ಸೋಲುವುದು ಖಚಿತ’ ಎಂಬ ಸೇರ್ಪಡೆಯು, ಕೃಷ್ಣ, ಮೌಖಿಕ ಆಕ್ರಮಣವನ್ನೇ ಮಾಡಿದಂತಿತ್ತು. ಇಂದಿನ ಚುನಾವಣೆಗಳಲ್ಲಿ, ಪ್ರಚಾರದ ಆರ್ಭಟದಲ್ಲೂ ಈ ಪ್ರವೃತ್ತಿ ಕಾಣಬಹುದಾಗಿದೆ. ಕೌರವರು ಕೃಷ್ಣನನ್ನು ಅಲ್ಲಿಯೇ ಬಂಧಿಸಲು ಯತ್ನಿಸಿದರು. ಕೃಷ್ಣ ಸಿಕ್ಕಿಹಾಕಿಕೊಳ್ಳುವಷ್ಟು ದಡ್ಡನಿರಲಿಲ್ಲ ಎಂಬುದನ್ನು ಗ್ರಹಿಸದ ಕೌರವರಿಗೆ, ಒಡ್ಡೋಲಗದಲ್ಲೇ ಮೊದಲ ಸೋಲಾಯಿತು. ಯುದ್ಧ ಸಂದರ್ಭದಲ್ಲಿನ ಘಟನೆ ಮತ್ತು ಕಾರ್ಯಗಳನ್ನು ರಾಜತಂತ್ರ ಮತ್ತು ರಾಜಕಾರಣ ಎನ್ನುವ ಬದಲಾಗಿ ಯಥಾವತ್ ಯುದ್ಧತಂತ್ರ ಮತ್ತು ಧರ್ಮಕಾರಣ ಎಂದು ಅಂಗೀಕರಿಸುವುದು ಉತ್ತಮ. ಅದಾಗಲೇ ಕೃಷ್ಣ ಕರ್ಣನಿಗೆ ಆತನ ಹುಟ್ಟಿನ ವಿಚಾರವಾದ, ಕುಂತಿಯ ಕಾನೀನ ಪುತ್ರ ಎಂಬುದನ್ನು ತಿಳಿಸಿ, ಪಾಂಡವರಿಂದ ವಿಚಾರವನ್ನು ಮುಚ್ಚಿಟ್ಟು, ಭಾವನಾತ್ಮಕ ತಂತ್ರವನ್ನು ಹೂಡತೊಡಗಿದ್ದ. ಕರ್ಣ ಇದಕ್ಕೆ ಯಶಸ್ವಿಯಾಗಿ ಬಲಿಯಾದದ್ದು ಪಾಂಡವರ ಪುಣ್ಯ. ‘ವೈರಿಯ ಮನಸ್ಸಿನ ಮರ್ಮವನ್ನು ಅರಿಯುವುದೇ ಯುದ್ಧದ ಮುಕ್ಕಾಲು ಕೆಲಸ’ ಎಂಬುದನ್ನು ಕೃಷ್ಣ ಸ್ಪಷ್ಟಪಡಿಸುತ್ತಾನೆ. ಕೃಷ್ಣನು ಯುದ್ಧದಲ್ಲಿ ಸೇನಾಪತ್ಯವನ್ನು ವಹಿಸಿಕೊಂಡಿಲ್ಲ ಎಂಬುದೇ ಕೌರವರಿಗೆ ಆತಂಕದ ವಿಚಾರವಾಗಿತ್ತು. ದ್ರೋಣರು ಇದನ್ನು ಗಮನಿಸಿದ್ದರು. ಎರಡೂ ಪಕ್ಷದಲ್ಲಿ ಲೆಕ್ಕವಿಲ್ಲದಷ್ಟು ಸೈನಿಕರು ಸೇರಿರುತ್ತಾರೆ. ಯಾರು ಯಾವ ಪಕ್ಷ ಎಂದು ಗೊತ್ತಾಗದ ಪರಿಸ್ಥಿತಿ. ‘ಧರ್ಮಯುದ್ಧ’ವಾಗದೆ ಅಧಿಕ ಪ್ರಾಣ ಹಾನಿ ತಪ್ಪಿಸಲು ಸಾಧ್ಯವಿಲ್ಲವೆಂದೇ ಧರ್ಮಸಭೆಗೆ ಭೀಷ್ಮ, ದ್ರೋಣ, ಶಲ್ಯರು ಪಾಂಡವರಲ್ಲಿ ಬರುತ್ತಾರೆ. ಎಂದಿನಂತೆ ಕೃಷ್ಣನೇ ಯುದ್ಧ ಧರ್ಮದ ಬಗ್ಗೆ ವಿವರಿಸುತ್ತಾನೆ. ಆ ಮೂವರಲ್ಲಿ ಅನ್ಯ ಮನಸ್ಕನಾಗಿದ್ದ ಶಲ್ಯನನ್ನು ಕಂಡು ‘ನೀವು ಹಿರಿಯರು’ ಎಂದು ಸಂಬೋಧಿಸಿ ‘ಯಾವುದೋ ತಪ್ಪು ಸಂಪರ್ಕ ನುಡಿಯಿಂದ ನೀವು ಆ ಕಡೆಯಲ್ಲಿದ್ದೀರಿ, ನಿಮ್ಮ ತಂಗಿಯ ಮಕ್ಕಳಾದ ನಕುಲ-ಸಹದೇವ ಇಲ್ಲಿದ್ದಾರೆ ನೋಡಿ’ ಎಂದೆಲ್ಲಾ ಸೇರಿಸಿ, ‘ನಿಮ್ಮ ಆಶೀರ್ವಾದ ಮಾತ್ರ ನಮ್ಮ ಕಡೆಗಿರಲಿ’ ಎನ್ನುತ್ತಾನೆ ಕೃಷ್ಣ. ಎಂಥಹ ಭಾವನಾತ್ಮಕ ಬೇಟೆ! ಶತ್ರು ಪಕ್ಷದಲ್ಲಿನ ಮಿತ್ರ ಸಂಖ್ಯೆ ಹೆಚ್ಚಾದಷ್ಟು ವಿಜಯ ಸಲೀಸು ಎಂಬ ತಂತ್ರಕ್ಕೆ ಶಲ್ಯ ಬಲಿಯಾಗಿದ್ದ. ಧರ್ಮಯುದ್ಧದ ನಿಯಮಗಳು ಅಂದರೆ ರಥದವನು ರಥದವನಿಗೆ ಮಾತ್ರ ಹೊಡೆಯಬೇಕು, ಕಾಲಾಳು ಕಾಲಾಳುವಿನೊಂದಿಗೆ ಮಾತ್ರ ಸೆಣೆಸಬೇಕು, ಒಬ್ಬರ ಬಳಿ ಯುದ್ಧ ಮಾಡುತ್ತಿರುವವರನ್ನು ಇನ್ನೊಬ್ಬ ಮುಟ್ಟಬಾರದು, ಸಾರಥಿ ಇಲ್ಲದವನನ್ನು ಹೊಡೆಯಬಾರದು, ಯುದ್ಧದ ಸಮಯದ ನಂತರ ದಾಳಿ ಇಲ್ಲ, ಇಂಥದ್ದೇ ಇತರ ನಿಯಮಗಳಿದ್ದವು. ಯುದ್ಧದ ಬಿಸಿ ಏರಿದಾಗ ಇದಾವ ನಿಯಮ ಉಳಿಯುವುದಿಲ್ಲ ಎಂಬುದು ಕೌರವರಿಗೆ ನಂತರ ಅರಿವಾಯಿತು. ಕೃಷ್ಣನಿಗೆ ಧರ್ಮಸಭೆಯಲ್ಲೇ ತಿಳಿದಿತ್ತು!
ಯುದ್ಧಕ್ಕೆ ಮುನ್ನ ಎರಡು ದಿನದಲ್ಲಿ ಅರ್ಜುನನಿಗೆ ಗುರುವಾದ ದ್ರೋಣರ ಮೇಲೆ, ಪಿತಾಮಹರ ಮೇಲಿನ ಮೋಹ ಅತಿಯಾಗಿ ಕರ್ಮಭ್ರಷ್ಟನಾಗುವಾಗ,
ಕ್ರೋಧಾದ್ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿ ವಿಭ್ರಮಃ ಸ್ಮೃತಿ ಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾತ್ ಪ್ರಣಶ್ಯತಿ
ಎಂಬುದನ್ನು ಅರಿಯಲು ಕೃಷ್ಣ ಹೇಳುತ್ತಾನೆ. ಈ ಅವಧಿಯನ್ನೇ ಭಗವದ್ಗೀತೆಯ ಅವಧಿ ಎಂದು ಸ್ವೀಕರಿಸಬಹುದಾಗಿದೆ. ಪರ್ವದಲ್ಲಿ ಈ ಬಗ್ಗೆ ವಿವರಣೆಯಿಲ್ಲ. ‘ಪ್ರಕೃತಿಸ್ತ್ವಾಂ ನಿಯೋಕ್ಷ್ಯತಿ, ನೀನು ಎಷ್ಟೇ ಬೇಡವೆಂದರೂ ಯುದ್ಧ ಮಾಡದೇ ಇರಲಾರೆ, ಆತ್ಮ ವಿಸ್ಮೃತಿ ಮಾಡಿಕೊಳ್ಳಬೇಡ’ ಎಂಬ ಮಾತು ಇಲ್ಲಿ ಗಣನೆಗೆ ಬರುತ್ತದೆ. ಎಲ್ಲವನ್ನೂ ನಿರ್ವಿಕಾರ ಸ್ಥಿತಿಯಲ್ಲಿ ನಿಂತು ಸ್ವೀಕರಿಸುವ ಕೃಷ್ಣ, ಭೀಷ್ಮನ ಮೇಲೆ ಚಕ್ರವಿಡಿದು ಹೋಗುವುದು ಅಸಂಭವವಾದ ವಿಚಾರ. ಆದರೇ ಭೀಷ್ಮನನ್ನು ಕೊಲ್ಲದೇ ಅರ್ಜುನ ಕ್ಷಮತೆ ತೋರುವುದಿಲ್ಲ ಎಂದು ಅರಿತೇ ಶಿಖಂಡಿಯನ್ನು ಮುಂದೆ ನಿಲ್ಲಿಸಿ, ಭೀಷ್ಮ ಪದತ್ಯಾಗ ಮಾಡುವಂತೆ ಮಾಡುತ್ತಾನೆ. ಪ್ರಭಾವಶಾಲಿಯ ಮುಂದೆ ಅಶಕ್ತನನ್ನು ನಿಲ್ಲಿಸುವ ತಂತ್ರ ಸಮಕಾಲೀನ ಚುನಾವಣೆ, ರಾಜಕೀಯದಲ್ಲಿ ನಿಲುಕುವ ನೋಟವೇ ಆಗಿದೆ. ಸೋತರೆ ಬೇಸರವಿಲ್ಲ, ಗೆದ್ದರೆ ದ್ವಿಲಾಭ. ಯುದ್ಧದ ಮಧ್ಯಭಾಗದಲ್ಲಿ ಸೇನಾಪತಿಯಾದ ದ್ರೋಣನನ್ನು ದ್ರುಪದನ ಮಗ ಧೃಷ್ಟದುಮ್ಯ ವಧಿಸುತ್ತಾನೆ. ಮತ್ತೊಮ್ಮೆ ವಿಸ್ಮೃತಿಗೆ ಒಳಗಾದ ಅರ್ಜುನ ಧೃಷ್ಟದುಮ್ಯನ ಮೇಲೆಯೇ ಎರಗುತ್ತಾನೆ. ಈ ಸಂದರ್ಭದಲ್ಲೂ ಕೃಷ್ಣನೇ ಅವನನ್ನು ಸಂಭಾಳಿಸುತ್ತಾನೆ. ಶತ್ರುಪಕ್ಷದ ಹೊಡೆತವನ್ನು ತಪ್ಪಿಸುವುದು ಎಷ್ಟು ಮುಖ್ಯವೋ, ಸ್ವಪಕ್ಷದ ಐಕ್ಯ ಅಷ್ಟೇ ಪ್ರಮುಖವಾದದ್ದು ಎಂಬುದು ಈ ನಂತರದ ಎಷ್ಟೋ ಪ್ರಕರಣದಲ್ಲಿ ಗಮನಕ್ಕೆ ಬರುತ್ತದೆ. ಕರ್ಣನಿಗೆ ಹೆದರಿ ಬಿಡಾರಕ್ಕೆ ಓಡಿಬಂದ ಧರ್ಮನನ್ನು, ಅಣ್ಣನ ಮೇಲೆ ಹೊಡೆಯಲು ಹೋದ ಅರ್ಜುನನನ್ನು ಕೃಷ್ಣನೇ ನಿಭಾಯಿಸಬೇಕಾಯಿತು. ಅಭಿಮನ್ಯುವಿನ ಮರಣದ ನಂತರ ಬಿಡಾರದಲ್ಲಿ ಅರ್ಜುನ ಕೋಪದಿಂದ ಪ್ರತಿಜ್ಞೆ ಮಾಡುತ್ತಾನೆ. ‘ಪ್ರತಿಜ್ಞೆಗಳಿಂದ ಯುದ್ಧ ಗೆಲ್ಲಲು ಸಾಧ್ಯವಿಲ್ಲ, ಪೌರುಷದ ಷರತ್ತುಗಳ ಅವಶ್ಯಕೆತೆ ಏನಿತ್ತು?‛ ಎಂದು ಕೇಳಿದ ಕೃಷ್ಣನ ಮಾತಿಗೆ ಅರ್ಜುನ ಮೂಕನಾಗುತ್ತಾನೆ. ಸಾತ್ಯಕಿಯು ಈ ಸಂದರ್ಭದಲ್ಲಿ ‘ತ್ರಿಗರ್ತದ ರಾಜರು, ಧರ್ಮನನ್ನು ಯುದ್ಧಕ್ಕೆ ಕರೆದರು, ಅವನು ಪೌರುಷದ ಷರತ್ತಿಗೆ ಬಿದ್ದು ರಕ್ಷಣೆ ಮರೆತು ಹೋದ. ಆದರೆ ಜರಾಸಂಧನ ವಿಚಾರದಲ್ಲಿ ಕೃಷ್ಣ ‘ಹೇಡಿ’ ಎನ್ನಿಸಿಕೊಂಡರೂ ದುಡುಕು ಮಾಡಿಕೊಳ್ಳಲಿಲ್ಲ. ಕೃಷ್ಣನ ತಾಳ್ಮೆ ಪಾಲಿಸಿದ್ದರೆ ಅಭಿಮನ್ಯು ಸಾಯುತ್ತಿರಲಿಲ್ಲ’ ಎಂದು ಹೇಳುವುದು ಕೃಷ್ಣ ಪ್ರಜ್ಞೆಯನ್ನು ಸುಂದರವಾಗಿ ತಿಳಿಸಿದ ಭಾಗವಾಗಿದೆ. ಜಯದ್ರಥನ ವಧೆ ಮುಂದಿದ್ದ ಗುರಿಯಾಗಿತ್ತು. ಜಯದ್ರಥನ ವಿಚಾರವಾಗಿ ಭೀಮನಿಗೆ ಕೃಷ್ಣ ‘ಬರೀ ರೋಷದಿಂದ ಯುದ್ಧ ಮಾಡುವುದಲ್ಲ’ ಎಂದು ವಿವೇಕದ ಮಾತನ್ನು ನೆನಪಿಸಿದ್ದ. ಯಾದವರ ಸೇನೆಯ ಕೃತವರ್ಮ ಕೃಷ್ಣಾರ್ಜುನರ ರಥಕ್ಕೆ ದಾರಿ ಮಾಡಿಕೊಟ್ಟದ್ದು ಈ ಪ್ರಕರಣದ ಇನ್ನೊಂದು ಮಜಲು. ಸಂಜೆಯಾಯಿತು ಎಂದು ಯುದ್ಧವನ್ನು ನಿಲ್ಲಿಸಿ, ದುರ್ಯೋಧನನು ಜಯದ್ರಥನೊಂದಿಗೆ ಸೇನೆಯ ವ್ಯೂಹದಿಂದ ಹೊರ ಬಂದಾಗ ಅವನನ್ನು ಕೊಂದದ್ದು ಮುಕ್ತಾಯದ ಮಜಲು. ದುರ್ಯೋಧನ ‘ಮೋಸ’ ಎಂದು ಕೂಗಿದ. ಆದರೆ ಧರ್ಮವನ್ನು ಮುರಿದು ರಥವಿಲ್ಲದೆ ಕೆಳಗಿದ್ದ ಅಭಿಮನ್ಯುವನ್ನು ಸುತ್ತವರಿದು ಕೊಂದದ್ದಕ್ಕೆ ಪ್ರತೀಕಾರವಿದು ಎಂಬತೆ ಈ ಕ್ರಿಯೆಯಾಗುತ್ತದೆ. ಈ ಹಿಂದಿನ ದಿನದಲ್ಲಿ ಭೂರಿಶ್ರವ ಸಾತ್ಯಕಿಯ ಮೇಲೆ ಗುರಿ ಇಟ್ಟಾಗ, ಇನ್ನೊಂದು ರಥದಿಂದ ಅರ್ಜುನನ ಕೈಯಲ್ಲಿ ಭೂರಿಶ್ರವನನ್ನು ಕೊಲ್ಲಿಸಿದ್ದು, ಧರ್ಮಯುದ್ಧಕ್ಕೆ ಬಾಹೀರವಾಗಿತ್ತಾದರೂ, ತನ್ನೊಡೊನೆ ಬಂದ ಯಾದವ ಮಿತ್ರ ಸಾತ್ಯಕಿಯನ್ನು ಉಳಿಸುವುದು ಕೃಷ್ಣನಿಗೆ ಮುಖ್ಯವಾಗಿತ್ತು.
ಕರ್ಣನನ್ನು ನಿಂದಿಸಿ ಅವನ ಸಾರಥಿಯಾದ ಶಲ್ಯನು ರಥದಿಂದ ಇಳಿದುಹೋದಾಗ, ಅರ್ಜುನನು ಕರ್ಣನ ಮೇಲೆ ಎರಗುತ್ತಾನೆ. ‘ಇದು ಯಾವ ಧರ್ಮ?’ ಎಂಬುದು ಕರ್ಣನ ಪ್ರಶ್ನೆಯಾದರೆ, ಬೇರೆಯವರೊಡನೆ ಕಾದಾಡುತ್ತಿದ್ದ ಘಟೋತ್ಕಚನ ಕತ್ತು ಕುಯ್ಯುವಾಗ ‘ಕರ್ಣ, ಕ್ವ ಧರ್ಮಸ್ಥದಾ ಗತಃ, ನಿನ್ನ ಧರ್ಮವು ಎಲ್ಲಿ ಹೋಗಿತ್ತು?’ ಎಂಬ ಪ್ರಶ್ನೆ ಕೃಷ್ಣನಲ್ಲಿ ಮೂಡಿತ್ತು. ಕರ್ಣನು ಭಾವನಾತ್ಮಕ ಭೇಟೆಯಿಂದ ಮೊದಲೇ ಸತ್ತು ಹೋಗಿದ್ದ. ಶಲ್ಯ ನಿಮಿತ್ತವಾದ. ಧರ್ಮಕಾರಣಗಳು ಹೇಡಿತನದ ಕುರುಹಾಗಬಾರದು ಎಂಬುದಕ್ಕಾಗಿಯೇ ಕೃಷ್ಣನು ತನ್ನ ಕ್ರಿಯೆಗಳನ್ನು ಮಾರ್ಪಾಡು ಮಾಡುತ್ತಿದ್ದ ಎನ್ನಿಸುತ್ತದೆ. ಯುದ್ಧಕ್ಕೆ ಮುನ್ನ ಶತಾಯಗತಾಯ ಯುದ್ಧ ನಿಲ್ಲಿಸಬೇಕು ಎಂದು ಓಡಾಡಿದವನು, ಯುದ್ಧ ಪ್ರಾರಂಭವಾದ ಮೇಲೆ ಗೆಲ್ಲಲೇ ಬೇಕೆಂದು ಧೃಡವಾಗಿ ನಿಂತುಬಿಟ್ಟಿದ್ದ. ದುರ್ಯೋಧನನನ್ನು ಕೊಲ್ಲುವ ಪ್ರಸಂಗ ಪರ್ವದಲ್ಲಿಲ್ಲ. ‘ಅವನನ್ನು ನೋಡು ಕೃಷ್ಣ, ಆಗಲೇ ಸತ್ತು ಹೋಗಿದ್ದಾನೆ. ಯುದ್ಧ ನೆನ್ನೆಯೆ ಮುಗಿದುಹೋಯಿತು’ ಎಂದು ಭೀಮ ಹೇಳುತ್ತಾನೆ. ಆದರೆ ಶತ್ರುಶೇಷ ಉಳಿಸಬಾರದು ಎಂಬುದನ್ನು ಕೃಷ್ಣ ಬಲವಾಗಿ ಪ್ರತಿಪಾದಿಸಿದ ಎನ್ನಬಹುದಾಗಿದೆ. ಯುದ್ಧಾನಂತರದಲ್ಲೂ ಪಾಂಡವರನ್ನು ಧೃತರಾಷ್ಟ್ರ ಮತ್ತು ಗಾಂಧಾರಿಯ ಬಳಿ ಕರೆದೊಯ್ಯುವಲ್ಲಿಯೂ ಕೃಷ್ಣನೇ ಮುಂದಾಗುತ್ತಾನೆ. ಧೃತರಾಷ್ಟ್ರ ‘ತಂತ್ರಗಾರ’ ಎಂದು ಒಳಗೆ ಸಿಡಿಯುತ್ತಿರುತ್ತಾನೆ. ಗಾಂಧಾರಿಯ ಕಣ್ಣ ಕಟ್ಟನ್ನು ಬಿಡಿಸಿ, ಅವಳ ಮನಸ್ಸನ್ನು ಹಗುರಾಗಿಸಿ ಪಾಂಡವರನ್ನು ನಿಮ್ಮವರೆಂದು ತಿಳಿ ಎಂದು ಕೃಷ್ಣ ಬೇಡುತ್ತಾನೆ.
ರಾಜಕೀಯ-ಯುದ್ಧ-ಧರ್ಮಕಾರಣಗಳಲ್ಲಿ ಈ ಪರಿಯಲ್ಲಿ ಮುಂದುವರೆದ ಕೃಷ್ಣ, ಕೊನೆಯಲ್ಲಿ ವಿಮುಖನಾಗುವುದು ಸಹಜವಾಗಿಯೇ ಕಾಣುತ್ತದೆ. ದೊಡ್ಡ ಯಶಸ್ಸಿನ ಮುಂದೆ ಹಲವಾರು ಸೋಲಿರುತ್ತದೆ ಎಂಬಂತೆ ಯಾದವರ- ಪಾಂಡವರ-ಕುರುನಾಡಿನ ಸ್ಥಿತಿಯಾಗಿತ್ತು. ಇಷ್ಟೆಲ್ಲದರ ಬಗ್ಗೆ ಶೂನ್ಯ ಕವಿಯುವುದು, ಇದರ ಅವಶ್ಯಕತೆ ಏನಿತ್ತು? ಎಂಬ ಯೋಚನೆ ಕೃಷ್ಣನಿಗೂ ಬಂದಿರಬಹುದು. ತಾನು ಸಾಧಿಸಿದ್ದೇನು ಎಂಬ ಅಳತೆಯನ್ನೂ ಮಾಡಿಕೊಂಡಿರಬಹುದು. ಆದರೆ ಇವೆಲ್ಲ ವೈರಾಗ್ಯ ಸಹಜ ಕ್ರಿಯೆಗಳು. ಬದುಕು ಎಂಬುದು ಕರ್ಮ ಮಾರ್ಗ, ಕರ್ಮವನ್ನು ನಿಭಾಯಿಸುವುದು, ಕರ್ಮದಲ್ಲಿ ನೈಪುಣ್ಯತೆ ಸಾಧಿಸುವುದೇ ಬದುಕಿನ ನಿಜವಾದ ಧರ್ಮ ಎಂಬುದನ್ನು ಆತ ಬರೀ ಉಪದೇಶಿಸಲಿಲ್ಲ, ಕೃತಿಯಲ್ಲೂ ಹಾಗೆಯೇ ನಡೆದುಕೊಂಡ. ಆದ್ದರಿಂದಲೇ ಕೃಷ್ಣನು ಮಾನವನೇ ಆದರೂ, ಅಸಮಾನ್ಯ ಮಾನವ. ಅಸಮಾನ್ಯತೆಯ ಉತ್ತುಂಗವನ್ನು ಏರಿದ ಕಾರಣಕ್ಕೆ ಕೃಷ್ಣನನ್ನು ದೈವ ಎಂದು ನೋಡುವ ಪ್ರಕ್ರಿಯೆ ಪ್ರಾರಂಭವಾಯಿತು ಎನ್ನಬಹುದಾಗಿದೆ.
- ಕರಣಂ ಪವನ್ ಪ್ರಸಾದ್
30.08.2015

Published on March 06, 2017 22:27
ಭಾರತದ ರಾಷ್ಟ್ರೀಯತೆಯ ಸ್ವರೂಪಗಳು ಮತ್ತು ಅಡ್ಡಪರಿಣಾಮ
ಮಾನವನ ದೃಷ್ಟಿ ವ್ಯಾಪ್ತಿ ದೊಡ್ಡದಲ್ಲ. ಮೊದಲಿಗೆ ಇದು ನನ್ನ ಮನೆ, ಅವನ ಮನೆ, ನನ್ನ ಕೇರಿ, ಅವನ ಕೇರಿ, ನನ್ನ ರಾಜ್ಯ ಅವನ ರಾಜ್ಯ ಎಂದು ಶುರುವಾಗುವ ಆತನ ವರ್ತನೆ, ದೇಶ ಎಂಬಲ್ಲಿಗೆ ನಿಲ್ಲುತ್ತದೆ. ಅದು ಮಾನವ ದೃಷ್ಟಿಯ ಬ್ರೇಕ್’ಡೌನ್ ಬಿಂದು. ಅಲ್ಲಿಂದಾಚೆಗೆ ಆತ ತನ್ನನ್ನು ಈ ದೇಶದವ ಎಂದೇ ಗುರುತಿಸಿಕೊಳ್ಳುತ್ತಾನೆ. ಮುಂದೊಂದು ದಿನ ಬೇರೆ ಗ್ರಹದ ಜೀವಿಗಳು ಭೂಮಿಯ ಮೇಲೆ ದಾಳಿ ಮಾಡಿದರೆ, ಇದು ನನ್ನ ಭೂಮಿ ನಾನು ಈ ಭೂಮಿಗೆ ಸೇರಿದವ, ನನ್ನ ತಾಯಿ ಈ ಭೂಮಿ ಎಂತಲೂ... ನಮ್ಮ ಗೆಲಾಕ್ಸಿಯ ಮೇಲೆ ಇನ್ನೊಂದು ಗೆಲಾಕ್ಸಿಯ ಜೀವ ಸಂಕುಲ ದಾಳಿ ಮಾಡಿದರೆ ನಾನು ಮಿಲ್ಕಿ ವೇ ಗೆಲಾಕ್ಸಿಗೆ ಸೇರಿದವನು, ನಮ್ಮ ಮಿಲ್ಕಿ ವೇ ಗೆಲಾಕ್ಸಿ ಶ್ರೇಷ್ಠವಾದದ್ದು, ನಮ್ಮ ಮಿಲ್ಕಿವೇ ಬಾವುಟ, ಗೆಲಾಕ್ಸಿ ಗೀತೆ ಶ್ರೇಷ್ಠವಾದದ್ದು ಎಂದು ಹೊಡೆದಾಡಬಹುದು. ಆದರೆ ಸದ್ಯಕ್ಕಿನ್ನು ಆತನ ಬ್ರೇಕ್’ಡೌನ್ ಬಿಂದು ದೇಶ ಎಂಬಲ್ಲಿರುವುದರಿಂದ, ರಾಷ್ಟ್ರೀಯತೆ ಎಂಬುದರ ಬಗ್ಗೆ ಗಮನ ಹರಿಸೋಣ. ರಾಷ್ಟ್ರೀಯತೆ ಎಂಬುದು ಮಾನವನ ಮಿತಿಯೂ ಹೌದು, ಮಾನವನ ಅಸ್ತಿತ್ವ ದ್ಯೋತಕವು ಹೌದು. ಅಸಲಿಗೆ ಇತಿಹಾಸದಲ್ಲಿ ದೇಶಪ್ರೇಮ ಎಂಬುದೇ ಪರಮಗುರಿ ಎಂಬಂತೆ ಮಾನವನು ವರ್ತಿಸಿರುವುದನ್ನು ಕಾಣಬಹುದು.
ಭಾರತದಲ್ಲಿ ವೇದ ಕಾಲೀನ ಯುಗದಿಂದ ಪ್ರಾರಂಭಿಸಿದರೆ, ಪಂಗಂಡ, ಒಕ್ಕಲು, ಜನಪದಗಳಾಗಿ ಗುರ್ತಿಸಿಕೊಂಡಿದ್ದ ಜನ ಒಂದು ಕಾಲದಲ್ಲಿ ಸಾಮ್ರಾಜ್ಯಾಧಿಪತಿ, ಸಾಮ್ರಾಜ್ಯ ಎಂಬ ಕಲ್ಪನೆಗೆ ತೆರೆದುಕೊಂಡಿತು. ಈ ಬಗ್ಗೆ ಋಗ್ವೇದದಲ್ಲಿ ಉಲ್ಲೇಖವಾಗುವ ’ಸುದಾಸ’ ಒಂದು ಬಗೆಯ ದೊಡ್ಡ ಪ್ರದೇಶದ ಚಕ್ರವರ್ತಿ ಎಂಬಂತೆ ಬಿಂಬಿತಗೊಳ್ಳುವುದನ್ನು ಕಾಣಬಹುದು (ಋಗ್ವೇದ ೭ನೇ ಮಂಡಲ). ನಂತರದಲ್ಲಿ ಕೃಷ್ಣ ಅದೇ ರೀತಿಯಾಗಿ ರಾಷ್ಟ್ರ ಕಲ್ಪನೆಯನ್ನು ಮಹಾಭಾರತದ ಕಾಲದಲ್ಲಿ ತರಲು ಪ್ರಯತ್ನಿಸಿದ ಎಂಬಂತೆ ಕಾಣುತ್ತದೆ. ಆರ್ಯಾವರ್ತದ ಸಕಲ ಕ್ಷತ್ರಿಯರನ್ನು ಒಂದು ನೆಲೆಯಾಗಿಸುವ ಪ್ರಯತ್ನದ ಉಲ್ಲೇಖಗಳು ಇವೆ. ಮೌರ್ಯ ಸಾಮ್ರಾಜ್ಯ, ಭಾರತ ಎಂಬ ದೇಶದ ಒಟ್ಟುಗೂಡುವಿಕೆಯ ಅತಿ ದೊಡ್ಡ ಸಾಮ್ರಾಜ್ಯ ಎನ್ನಬಹುದು. ಈ ಸಾಮ್ರಾಜ್ಯವಾದವೇ ಇಂದಿನ ರಾಷ್ಟ್ರೀಯತೆಯ ಬೇರು. ಶ್ರಮಿಕರನ್ನು ಕೆಳಕ್ಕೆ ತಳ್ಳುವುದು, ಮೇಲ್ವರ್ಗದವರ ಹಿತಾಸಕ್ತಿ ಕಾಯುವುದೇ ಇದರ ಉದ್ದೇಶ ಎಂಬ ವಾದವು ಪ್ರಚಲಿತದಲ್ಲಿದೆ. ಹಲವಾರು ದಾಳಿಗೊಳಗಾಗಿ ಸೊರಗಿ ಹೋಗಿದ್ದ ಭಾರತ ಎಂಬ ಭೂಪ್ರದೇಶ ಸ್ವಾತಂತ್ರ್ಯದ ಸಂದರ್ಭದಲ್ಲಿ ತನ್ನ ರಾಷ್ಟ್ರೀಯತೆಗೆ ಹಲವಾರು ಸ್ವರೂಪಗಳನ್ನು ಕೊಟ್ಟುಕೊಂಡಿತು. ಗಾಂಧೀಜಿ ಅದಕ್ಕೆ ಐಕ್ಯತೆಯ ರಾಷ್ಟ್ರೀಯತೆ ಎಂದರು, ಟಾಗೂರರು ವಿಶ್ವಬಾಂಧವ್ಯಕ್ಕೆ ರಾಷ್ಟ್ರೀಯತೆ ಎಂದರು. ಮುಸಲ್ಮಾನರು ನಾವು ಈ ನೆಲಕ್ಕೆ ಸೇರಿದವರು ಎಂದು ಹೇಳಿಕೊಳ್ಳಲು ಇಂಡಿಯನ್ ಮುಸ್ಲಿಮ್ ನ್ಯಾಷನಲಿಸ್ಟ್ ಎಂದು ಕರೆದುಕೊಂಡರು. ಸಾವರ್ಕರರು ಹಿಂದುತ್ವ ಎಂಬ ಪದವನ್ನು ಚಿಮ್ಮಿಸಿದರು. ಆರೆಸ್ಸಿಸ್ಸಿನ ಕೇಶವರು ಹಿಂದೂ ರಾಷ್ಟ್ರೀಯತೆಯನ್ನು ಚಾಲ್ತಿಗೆ ತಂದರು. ಲಿಬರಲ್ ವಾದಿಗಳು ಎಲ್ಲಾ ದೇಶದ ಶ್ರಮಿಕರ ಉನ್ನತಿಯೇ ನಮ್ಮ ರಾಷ್ಟ್ರೀಯತೆ ಎಂದು ಬಾಯಲ್ಲಿ ಹೇಳಿದರು. ಹೀಗೆ ಸ್ವಾತಂತ್ರ್ಯ ನಂತರದ ಭಾರತದಲ್ಲಿ ಹಲವಾರು ರಾಷ್ಟ್ರೀಯತೆ ಹೊರಳಾಡುತ್ತಿತ್ತು. ಈಗಲೂ ಅಲೆದಾಡುತ್ತಿದೆ.
ಹಿಂದುತ್ವ ಎಂಬ ಪದವು ಸಂಚಲನ ಮೂಡಿಸಿದ್ದು ನಿಜ. ಆ ಪದಕ್ಕೆ ಕೇವಲ ಭೂರೇಖೆಯ ಅಳತೆ ಇಲ್ಲ, ಅದು ಸನಾತನ ಅದು ಅವಿನಾಶಿ ಎಂಬ ವೇದಾಂತ ನಿರೂಪಣೆಯನ್ನು ಮಾನವನ ಮಿತಿಗೆ ಜೋಡಿಸುವ ಪ್ರಯತ್ನವಾಯಿತು. ಹಿಂದೂ ರಾಷ್ಟ್ರೀಯವಾದವನ್ನು ಸಕ್ರಿಯವಾಗಿ ಬೆಳೆಸಿದ್ದು ಆರೆಸ್ಸೆಸ್ಸಿನ ಎರಡನೇ ಸರಸಂಘಚಾಲಕರಾದ ಮಾಧವ ಸದಾಶಿವ ಗೋಳ್ವಲ್ಕರ್. ನಮ್ಮ ರಾಷ್ಟ್ರೀಯತೆ ವಿಶ್ವದ ಒಳಿತನ್ನು ಬಯಸುವಂಥದ್ದು ಎಂದು ವೇದಾಂತದ ಎರಡು ವಾಕ್ಯವನ್ನು ರಾಷ್ಟ್ರೀಯತೆಗೆ ಅಂಟಿಸಿ ಪರಂಪರೆಯ ಬೌದ್ಧಿಕತೆಯನ್ನು, ಭೂಪ್ರದೇಶಾಭಿಮಾನ ಸಾಮಾನ್ಯತೆಯನ್ನು ಸಮೀಕರಿಸಲಾಯಿತು. ಈ ಭಾರತ ಎಂಬ ಪ್ರದೇಶದ ರಕ್ಷಣೆ, ಇಲ್ಲಿನ ಜನರ ಅಭಿವ್ಯಕ್ತಿ ಕಾಯಲು ಅವರು ನಿರೂಪಿಸಿದ ಎಷ್ಟೋ ಅಂಶ ದೇಶದ ಹಿತದೃಷ್ಟಿಯಿಂದ ಒಪ್ಪಬೇಕಾದ್ದು ಎನ್ನಿಸುತ್ತದೆ. ಮುಸ್ಲಿಮರು, ಕ್ರೈಸ್ತರು, ಕಮ್ಯೂನಿಷ್ಟರು ಒಳಗಿನ ಅಪಾಯಗಳು, ವೈರಿಗಳು ಎಂದು ನೇರವಾಗಿ ಅವರನ್ನು ದೂಷಿಸುವ ಯೋಚನಾ ಲಹರಿ (ಶ್ರೀ ಗುರೂಜಿ ಸಮಗ್ರ, ಸಂಪುಟ ೧೧ ಚಿಂತನಗಂಗಾ ಪುಟ ೨೪೧-೨೬೬), ಇತರ ನಂಬಿಕೆ-ಅಭಿಪ್ರಾಯ ಉಳ್ಳವರು, ಈ ಹಿಂದೂ ರಾಷ್ಟ್ರೀಯತೆಯನ್ನು ದ್ವೇಷಿಸುವಂತೆ ಮಾಡಿತು. ಪಾಕಿಸ್ತಾನಕ್ಕೆ ಹೋಗದೆ ಭಾರತದಲ್ಲಿ ಉಳಿದ ಮುಸ್ಲಿಮರೆಲ್ಲರೂ ರಾತ್ರೋ ರಾತ್ರಿ ದೇಶಭಕ್ತರಾಗಲಿಲ್ಲ. ನನಗೆ ಹಿಂದುಗಳು ಮುಖ್ಯ, ಮುಸ್ಲಿಮರಲ್ಲ. ಜಾತ್ಯಾತೀತತೆ ಅಂದರೆ ರಾಷ್ಟ್ರೀಯತೆ ಅಲ್ಲ, ಇಂಥಾ ಅವರ ಹಲವು ನಿರ್ಣಯಗಳನ್ನು ಕೆಲವರು ಉತ್ಸಾಹದಿಂದ ಸ್ವೀಕರಿಸಿದರು, ಕೆಲವರು ಪಟ್ಟಾಗಿ ವಿರೋಧಿಸಿದರು. ಗೋಳ್ವಲ್ಕರ್ ಅವರು ರಾಮ ಮನೋಹರ್ ಲೋಹಿಯಾರಂಥ ಸಮಾಜವಾದಿಗಳೊಂದಿಗೆ ಸಹ ಉತ್ತಮವಾದ ಸಂಬಂಧ ಹೊಂದಿದ್ದರಿಂದ ಅವರಲ್ಲಿ ಅಭಿಪ್ರಾಯ ಮಟ್ಟದಲ್ಲಿ ಮುಕ್ತತೆ ಇತ್ತು ಎನ್ನಬಹುದಾಗಿದೆ. ಹಿಂದೂ ರಾಷ್ಟ್ರೀಯವಾದ; ಗೋಳ್ವಲ್ಕರ್ ಅವರ ಚಿಂತನೆಯಲ್ಲಿ ಧ್ಯೇಯ ನಿಷ್ಠೆ, ಹಿಂದುಗಳ ಒಳಗಿನ ಒಗ್ಗಟ್ಟು, ಹೃದಯವಂತಿಕೆ, ಉಪೇಕ್ಷಿತ ಬಂಧುಗಳ ಸೇವೆಯೇ ಮುಖ್ಯ... ಎಂಬುದಾಗಿದ್ದರೆ ಅದು ಸಾಮಾನ್ಯ ಕಾರ್ಯಕರ್ತನ ಬಳಿ ಬರುವಲ್ಲಿ ಬೇರೆಯದೇ ರೂಪ ತಾಳುತ್ತಿತ್ತು. ಇನ್ನು ಹಿಂದೂ ರಾಷ್ಟ್ರೀಯವಾದದಿಂದ ಪ್ರಭಾವಿತರಾದ ಉನ್ಮಾದದ ಜನ ಇದನ್ನು ಸ್ವೀಕರಿಸಿದ್ದೇ ಬೇರೆ ರೀತಿಯಲ್ಲಿ. ಅದರ ಫಲವೇ ಗೋಡ್ಸೆ ಮನಸ್ಥಿತಿ. ಗೋಡ್ಸೆ ಆರೆಸ್ಸೆಸ್ಸಿನ ನೇರ ಕಾರ್ಯಕರ್ತನಲ್ಲ, ಸರಿಯಾಗಿ ಚಡ್ಡಿ ಹಾಕಿ ತೋಳು ಮಡಿಸಿದವನಲ್ಲ, ಹಿಂದುತ್ವವನ್ನು ಹೊರಗಿನಿಂದ ಕೇಳಿ ಉನ್ಮಾದಗೊಂಡವನು. ರಾತ್ರೋ ರಾತ್ರಿ ಹಿಂದುರಾಷ್ಟ್ರ ಮಾಡುವ ಅವಿವೇಕ ಹೊಂದಿದವನು. ಆದರೆ ಅವನು ನಿನ್ನ ಚಿಂತನೆ ಯಾವುದು ಎಂದರೆ ಹಿಂದೂ ರಾಷ್ಟ್ರೀಯತೆ ಎನ್ನುವನು. ಹಿಂದೂ ರಾಷ್ಟ್ರೀಯತೆಯ ಈ ಅಡ್ಡಪರಿಣಾಮ ಈಗಲಂತೂ ಹೆಚ್ಚುತ್ತಲೇ ಇದೆ. ಗೋಳ್ವಲ್ಕರ್ ಚಿಂತನೆಗಿಂತಲೂ, ಗೋಡ್ಸೆಯ ಉದ್ರೇಕ-ಅವಿವೇಕವೇ ಜನಕ್ಕೆ ಮುದ ನೀಡುತ್ತಿದೆ. ಗಾಂಧೀಜಿಯ ಕೊಲೆಯಾದಾಗ, ಆರೆಸ್ಸಿಸ್ಸಿನ ಕಾರ್ಯಕರ್ತರ ಮೇಲೆ ಜನರೆಲ್ಲ ಕಲ್ಲಲ್ಲಿ ಹೊಡೆಯಲು ಪ್ರಾರಂಭಿಸಿದ್ದರು, ಆಗ ಗೋಳ್ವಲ್ಕರ್ "ಯಾವುದೇ ಸ್ವಯಂಸೇವಕನು ಪ್ರತಿದಾಳಿ ಮಾಡಕೂಡದು. ನಾವು ಆರೋಪ ಮುಕ್ತರಾಗೋಣ, ಜನರ ವಿಶ್ವಾಸ ಗಳಿಸೋಣ" ಎಂದಿದ್ದರು. ಇಂದು ಇದನ್ನು ಕಲ್ಪಿಸಲು ಸಾಧ್ಯವಿಲ್ಲ! ಈ ರೀತಿಯಾಗಿ ಪ್ರಾರಂಭವಾದ ಹಿಂದೂ ರಾಷ್ಟ್ರೀಯತೆ ಇಂದು ಉದ್ರೇಕಾವಸ್ಥೆಯಲ್ಲಿದೆ. ಗೋಳ್ವಕರ್ ಅಲ್ಲ, ಆ ಸನಾತನ ಬ್ರಹ್ಮ ಸ್ವರೂಪ ಸಗುಣ ದೇವರೇ ಬಂದು ’ಇದಲ್ಲ ನಮ್ಮ ಚಿಂತನೆ, ಹೀಗಲ್ಲ ಎಂದರೆ’ ಅತನನ್ನೇ ಹೊಡೆಯುವ, ಹಿಂದೆ ಮುಂದೆ ನೋಡದೆ ವ್ಯಂಗ್ಯ, ಬೈಯ್ಯುವಿಕೆಯಲ್ಲಿ ಚಚ್ಚುವ, ಕೊಳಕು ಮಾತಿನ ಬೌದ್ಧಿಕ ಪ್ರದರ್ಶನ ಮಾಡಿ ಬಾಯಿ ಮುಚ್ಚಿಸುವ ವರ್ತನೆ ತೋರುತ್ತಾರೇನೋ. ಹಿಂದೂ ರಾಷ್ಟ್ರೀಯವಾದ ಒಂದು ಸಂಘಟನೆಯ ಮೂಲ ಚಿಂತನೆಯ ಹೊರತಾಗಿ, ಹಲವಾರು ಉಪಚಿಂತನೆಗಳು ಹುಟ್ಟಿಕೊಂಡಿದೆ, ಹಲವಾರು ಉಪ ಹಿತಾಸಕ್ತಿ ಜನರು ಬೆಳೆದಿದ್ದಾರೆ, ಅವರು ತಮ್ಮ ಹಿತಾಸಕ್ತಿ ಜಾಗೃತವಾದಾಗ ಮಾತ್ರ ನಾವು ಆರೆಸ್ಸೆಸ್ ಎಂದು ಹೇಳಿಕೊಳ್ಳುತ್ತಾರೆ, ಬೇಡದಿದ್ದಾಗ ತಮ್ಮ ಉದ್ರೇಕ ಮನಸ್ಥಿತಿಯನ್ನು ತೋರ್ಪಡಿಸಲು ತಮ್ಮದೇ ಕೂಟ, ಸಂಸ್ಥೆಗಳನ್ನು ಕಟ್ಟಿಕೊಂಡಿದ್ದಾರೆ. ರಾಜಕೀಯ ಹಿತಾಸಕ್ತಿ ತೋರುತ್ತಾರೆ. ಹಿಂದೂ ರಾಷ್ಟ್ರೀಯವಾದ ಅಧಿಕಾರ ಸ್ಥಾನದ ಮೂಲ ದ್ರವ್ಯವಾದಮೇಲಂತೂ ಇದು ಅತ್ಯಧಿಕವಾಗಿದೆ.
ಭಾರತದಲ್ಲಿರುವವರೆಲ್ಲ ಹಿಂದುಗಳೇ ಎಂಬ ರಾಷ್ಟ್ರೀಯತೆ ಸಫಲವಾಗುವುದಿಲ್ಲ. ಇದು ಬಾಯಿಮಾತಿಗೆ ಸೊಗಸಾಗಿ ಕಂಡರು ವಾಸ್ತವದಲ್ಲಿ ಅಸಾಧ್ಯ. ಮತನಿಷ್ಠೆ ಮಾನವನ ದೊಡ್ಡ ತೊಡಕು. ಮತನಿಷ್ಠೆಯನ್ನು ಬಿಟ್ಟು ಈ ನೆಲದಲ್ಲಿದ್ದೀನಿ ಎಂಬ ಕಾರಣಕ್ಕೆ ಇನ್ನೊಂದು ನಂಬಿಕೆಯ ಪದವನ್ನು ಇತರರು ಒಪ್ಪಿಕೊಳ್ಳುವುದಿಲ್ಲ. ಅದಕ್ಕೆ ನೂರು ಅರ್ಥ, ಒಳಾರ್ಥ, ಗೂಢಾರ್ಥದ ತೇಪೆ ಹಚ್ಚಿದರೂ ಅಷ್ಟೇ. ಭಾರತವು ತುಂಬಾ ಸಂಕೀರ್ಣವಾದುದು. ನಿಜ ಹೇಳಬೇಕೆಂದರೆ ಭಾರತವು ಹಲವು ದೇಶಗಳ ಒಕ್ಕೂಟ. ಇಲ್ಲಿರುವಷ್ಟು ಜನ, ಭಾಷೆ, ಊಟ, ಉಡುಪು, ಪದ್ಧತಿಯ ವೈವಿಧ್ಯತೆ ಜಗತ್ತಿನಲ್ಲಿ ಸಿಗಲಾರದು. ಇಲ್ಲಿರುವವರನ್ನೆಲ್ಲಾ ’ಹಿಂದು’ ಎಂದು ಒಪ್ಪಿಸುತ್ತೇನೆ, ಇದು ನಮ್ಮ ಪರಂಪರೆ... ಒಪ್ಪಿಕೊಳ್ಳಿ. ಇಲ್ಲವಾದರೆ ಇಲ್ಲಿಂದ ತೊಲಗಿ, ಎನ್ನುವುದು ವಾಸ್ತವದಲ್ಲಿ ಅವಿವೇಕವಾದರೆ. ಚಿಂತನೆಯಲ್ಲಿ ಅಪ್ರಾಮಾಣಿಕ ಚಿಂತನೆ. ಒಂದು ಕಾಲಘಟ್ಟದಲ್ಲಿ ದ್ವೈತಿಗಳು, ಅದ್ವೈತಿಗಳು ಎಂದುಕೊಳ್ಳುತ್ತಾ ಕೆಸರು ಎರಚಾಡಿದ ನೆಲವಿದು. ಇಂದಿಗೂ ನಮ್ಮಲ್ಲೇ ಬೇರೆ ಪಂಗಡದೊಂದಿಗೆ ಮದುವೆಯಾದರೆ ಕೊಲೆ ಮಾಡುವ ಮನಸ್ಥಿತಿ ಇರುವ ಅನಾಗರಿಕ ಜನರನ್ನೇ ಸರಿಪಡಿಸಲಾಗದ ನಾವು, ಇಂಥಾ ಬೃಹತ್ ರಾಷ್ಟ್ರವನ್ನು ಒಂದು ಚಿಂತನೆಯ ಅಡಿಯಲ್ಲಿ ಕಟ್ಟಿಹಾಕುವುದು ಅಸಾಧ್ಯವು, ಅಕ್ಷಮ್ಯವೂ ಆಗಿದೆ. ಪ್ರಾದೇಶಿಕತೆಯನ್ನು ನೆಹರು ಭಾಷಾವಾರು ರಾಜ್ಯ ವಿಂಗಡಣೆಯಿಂದ ಅತಿರೇಕಕ್ಕೆ ತೆಗೆದುಕೊಂಡು ಹೋದದ್ದರಿಂದ, ಹಿಂದೂ ರಾಷ್ಟ್ರೀಯವಾದ ಪ್ರಬಲವಾಯಿತು. ಹಲವಾರು ಭಾಷೆಯ, ಪದ್ಧತಿಯ ಜನರಲ್ಲಿ ರಾಷ್ಟ್ರೀಯತೆಯ ಕಲ್ಪನೆ ಬರಲು ’ಹಿಂದು’ ಎಂಬುದು ಪ್ರಮುಖ ಎಂಬ ವಾದ ಹೆಚ್ಚಾಯಿತು. ರಾಷ್ಟ್ರೀಯತೆ ಎಂಬ ಚಿಂತನೆಗೆ ಅತಿ ದೊಡ್ಡ ಸವಾಲು ಪ್ರಾದೇಶಿಕತೆ. ಆ ಸವಾಲನ್ನು ಎದುರಿಸುತ್ತಾ ಭಾರತ ರಾಷ್ಟ್ರವಾಗಿ ಇಂದಿಗೂ ನಿಂತಿರುವುದು ಅಚ್ಚರಿಯೇ ಸರಿ. ಆ ಅಚ್ಚರಿ ತುಂಬಾ ದಿನ ಉಳಿಯಲಾರದೇನೋ ಎಂಬ ಆತಂಕವೂ ಕಾಡುತ್ತದೆ.
ಹಾಗಾದರೆ ರಾಷ್ಟ್ರೀಯತೆ ಇರಬಾರದೇ? ಎಲ್ಲರೂ ವಿಶ್ವ ಮಾನವರು ಆಗಿಬಿಡುತ್ತಾರ? ದೇಶದ ಹಿತದೃಷ್ಟಿಗೆ ಏನು ಮಾಡಬೇಕು? ರಾಷ್ಟ್ರ ಕಲ್ಪನೆ ಇಲ್ಲದಿದ್ದರೆ ಅಸ್ತಿತ್ವ, ಅಸ್ಮಿತೆ ಉಳಿಯುವುದಾದರೂ ಹೇಗೆ? ಎಂಬುದು ನಿರೀಕ್ಷಿಸಬಹುದಾದ ಪ್ರಶ್ನೆಗಳು. ರಾಷ್ಟ್ರೀಯತೆ ಇದ್ದೇ ಇರುತ್ತದೆ. ಸ್ವಾಭಾವಿಕವಾಗಿ ತನ್ನ ನೆಲಕ್ಕೆ ನಾನು ಋಣಿಯಾಗಿರಬೇಕು ಎಂಬುದು ಮನುಷ್ಯನಲ್ಲಿ ಹರಡುತ್ತದೆ. ನಂತರದಲ್ಲಿ ಆ ಭಾವನೆ ಅವನಲ್ಲಿ ನಷ್ಟವಾಗುವುದಕ್ಕೆ ಅಥವಾ ಉದ್ರೇಕ ತಲುಪುವುದಕ್ಕೆ ಸಮಾಜ ಸೃಷ್ಟಿಸಿದ ಚೌಕಟ್ಟುಗಳು ಕಾರಣ. ರಾಷ್ಟ್ರೀಯತೆ ಎಂಬ ಸಹಜ ಭಾವನೆಯನ್ನು ಯಾವುದೇ ಸಿದ್ಧಾಂತಕ್ಕೆ ಅಂಟಿಸಿಕೊಳ್ಳದೇ ಸ್ವಸ್ಥವಾಗಿರಿಸಿಕೊಳ್ಳಬೇಕಾದ್ದು ಉತ್ತಮವಾದ ನಡೆ. ಬರ್ನಾಡ್ ಶಾ ಹೇಳುವಂತೆ "ಒಂದು ನೆಲದಲ್ಲಿ ನೀನು ಹುಟ್ಟಿದ ಮೆಲೆ, ಬೇಕೋ ಬೇಡವೋ, ಒಟ್ಟಿನಲ್ಲಿ ದೇಶಪ್ರೇಮದ ಒಪ್ಪಂದವಾಗಬೇಕು". ಬೇಡವೆಂದರು ನಮ್ಮ ನೆಲ ಎಂಬ ಭಾವನೆ ಎಲ್ಲರಲ್ಲೂ ಇರುತ್ತದೆ. ಕೀನ್ಯಾದಲ್ಲಿ ಹುಟ್ಟಿದವನಿಗೂ ಇರುತ್ತದೆ. ಜರ್ಮನಿಯಲ್ಲಿ ಹುಟ್ಟಿದವನಿಗೂ ಇರುತ್ತದೆ. ಮತ್ತು ಅವನ ನಿಷ್ಠೆ-ಪ್ರೇಮ ಆ ದೇಶ ಹಾಕಿದ ಭೂರೇಖೆಯ ಒಳಗೇ ಇರಬೇಕು ಎಂಬ ಒತ್ತಾಯ ಏರ್ಪಾಡಾಗುವುದು ಸಹಜವೇ ಆಗಿದೆ. ತಮ್ಮ ದೃಷ್ಟಿಯ ಬ್ರೇಕ್’ಡೌನ್ ಬಿಂದುವಾಗಿ ಮನುಷ್ಯ ಅದನ್ನು ಸ್ವೀಕರಿಸುತ್ತಾನೆ. ಎಲ್ಲ ದೇಶದಂತೆ ನನ್ನದೂ ಒಂದು ದೇಶ, ಎಲ್ಲರ ಅಮ್ಮನಂತೆ ನನ್ನವಳು ಒಬ್ಬ ಅಮ್ಮನೇ ಎಂದೆನ್ನುಕೊಳ್ಳುವ ವಿಶಾಲ ಭಾವನೆ ರಾಜಕೀಯ ಸಿದ್ಧಾಂತಗಳಲ್ಲಿ ಬರಲು ಸಾಧ್ಯವಿಲ್ಲ. ಮತ್ತು ಈ ವಿಶಾಲ ಚಿಂತನೆ ಎಲ್ಲರಿಗೂ ತಿಳಿಸಲು ಸಾಧ್ಯವಿಲ್ಲ. ರಾಷ್ಟ್ರೀಯತೆ ಶ್ರೇಷ್ಠತೆಯ ವ್ಯಸನವಾದಾಗ ಅಪಾಯಕಾರಿಯಾಗುತ್ತದೆ. ನನ್ನ ದೇಶವೇ ಶ್ರೇಷ್ಠ, ನಮ್ಮ ದೇಶವೇ ಎಲ್ಲರಿಗೆ ಗುರು ಎಂಬ ಅವಿವೇಕ ಹೆಚ್ಚಾಗುತ್ತದೆ. ಈ ಭೂಮಂಡಲ ವಿಭಿನ್ನ ಸಂಸ್ಕೃತಿಗೆ ಆಶ್ರಯ ಕೊಟ್ಟಿದೆ. ನಾನು ಶ್ರೇಷ್ಠ ಎಂದುಕೊಂಡರೆ ಇನ್ನೊಬ್ಬ ಕೀಳು ಎಂದಾಯ್ತು. ಇಲ್ಲಿ ಎಲ್ಲಾ ನೆಲವೂ ಶ್ರೇಷ್ಠವೇ. ಸಂಕುಚಿತ ಭಾವನೆಯ ಮನುಷ್ಯ ಮಾತ್ರ ಅಯೋಗ್ಯ. ಕಾಲಾಕಾಲದ ಅಂತರದಲ್ಲಿ ಎಲ್ಲಾ ಚಿಂತನೆಗಳು ಮನುಷ್ಯನ ಅಹಂಕಾರ, ಸ್ವಾರ್ಥ, ಬೂಟಾಟಿಕೆಗೆ ಮುಖವಾಡವಾಗುತ್ತವೆ.

Published on March 06, 2017 22:23