Belakina Beli Quotes

Rate this book
Clear rating
Belakina Beli Belakina Beli by Sharath H.K.
0 ratings, 0.00 average rating, 0 reviews
Belakina Beli Quotes Showing 1-11 of 11
“ಜೀವಂತಿಕೆ-
ನಿನ್ನ ಗುರಿ ಏನೆಂದು ಕೇಳಿದರು. ಏನೂ ಇಲ್ಲವೆಂದೆ. ಗೊಂದಲದಲ್ಲಿದ್ದೀಯ ಅಂದರು. ಜೀವಂತವಾಗಿದ್ದೇನೆ ಅಂದೆ.”
Sharath H.K., Belakina Beli
“ಶಾಪ-
ಬೇಯುತ್ತಲೇ ಜೊತೆಯಾದ ಇಟ್ಟಿಗೆಗಳು ಗೋಡೆಯಾಗಿ ಎದ್ದು ನಿಂತ ಮೇಲೆ ಸಿಮೆಂಟಿಗೆ ಹಿಡಿಶಾಪ ಹಾಕುತ್ತಿವೆ.”
Sharath H.K., Belakina Beli
“ಸಂತಾಪ-
ಏನೂ ಇಲ್ಲದ ದಿನ ನೋವಿಗೆ ಬರಲು ಹೇಳಿದೆ. ನೋವು ಬಂತು. ನಲಿವಿನ ಶವಕ್ಕೆ ಹೂಮಾಲೆ ಹಾಕಿ ಹೊರಟಿತು.”
Sharath H.K., Belakina Beli
“ವ್ಯತಿರಿಕ್ತ-
ಕಲ್ಲು ಎಸೆದೆ ಕಾಣದ ಹಣ್ಣಿಗೆ. ಮಣ್ಣು ತೆಗೆದೆ ಸಾಯದ ಹೆಣಕ್ಕೆ.”
Sharath H.K., Belakina Beli
“ಜೀವನ ಪ್ರೀತಿ-
ಪುಟ್ಟ ಮಗು ನಗುತ್ತಿತ್ತು, ಬುದ್ಧಿವಂತ ಜಗತ್ತು ಅಳುವಾಗ.”
Sharath H.K., Belakina Beli
“ಹರಾಜು-
ಬಟ್ಟೆ ಕಳಚಿಟ್ಟ ಮಾತು ಜಗದ ಮಾನ ಕಳೆಯುತ್ತಿದೆ.”
Sharath H.K., Belakina Beli
“ಮನುಷ್ಯತ್ವ-
ಸುಡುವ ಸೂರ್ಯ ಅವಳ ಕಣ್ಣೀರು ಒರೆಸಿದ.”
Sharath H.K., Belakina Beli
“ಮನುಷ್ಯ
ಚೂಪಾದ ತುದಿ ಮೊದಲು ಘಾಸಿಗೊಳಿಸಿದರೂ, ಒಂದು ಕೊಲೆಯ ಪೂರ್ಣ ಗೌರವ ಸಲ್ಲುವುದು ಹಿಡಿಯ ಹಿಂದಿರುವ ಜೀವಂತ ಚೂರಿಗೆ.”
Sharath H.K., Belakina Beli
“ಕಲಾಕೃತಿ-
ಬಣ್ಣದ ಬೆರಗು ಖಾಲಿ ಪುಟದ ನೋವು ಮರೆಮಾಚಿದೆ.”
Sharath H.K., Belakina Beli
“ವಿಪರ್ಯಾಸ-
ಹಸಿವಿಗೆ ಬಹಿಷ್ಕಾರ ಹಾಕಿದ ಊರಲ್ಲಿ ಉಣ್ಣಲಾಗದ ನೋವು ತಾಂಡವವಾಡುತ್ತಿದೆ.”
Sharath H.K., Belakina Beli
“ಚಿಂತೆ-
ನಾಳೆಯ ನೋವಿಗೆ ಇಂದೇ ಮುಲಾಮು ತಿಕ್ಕಿಕೊಂಡ ಮನಸ್ಸು ಈ ಕ್ಷಣದಿಂದಲೇ ರೋಗಗ್ರಸ್ತವಾಗಿದೆ.”
Sharath H.K., Belakina Beli