M V Nagarajarao ತುಮಕೂರಿನ ಚಿಕ್ಕನಾಯಕನ ಹಳ್ಳಿಯಲ್ಲಿ ಗೋಲಿ, ಗಿನ್ನಿದಾಂಡು ಆಡುತ್ತಿದ್ದ ಹುಡುಗ ಬೆಳೆದಾಗ ನಾಡಿನ ಜನರನ್ನು ಮಾತಾಡಿಸಿದ್ದು ನಿಯತಕಾಲಿಕೆಗಳಲ್ಲಿ ಕಾದಂಬರಿಗಳನ್ನು ಬರೆದು. ಆ ಹುಡುಗನಿಗೆ ಈಗ ಅರುವತ್ತೊಂದರ ಹರೆಯ. ಇವತ್ತು ಅಮೆರಿಕೆಯ ಗಲ್ಲಿಗಳಲ್ಲಿ ತಮ್ಮ ಜೀವನಾನುಭವವನ್ನು ಹಂಚಿಕೊಳ್ಳುತ್ತಿದ್ದಾರೆ.
ಎಂ.ವಿ.ನಾಗರಾಜರಾಯರು ಆದದ್ದು ಮೇಷ್ಟ್ರು; ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ. 37 ವರ್ಷಗಳ ಪಾಠ ಹೇಳಿದ ಅನುಭವ ತುಂಬಿಕೊಂಡ ಇವರು ಪ್ರಾಂಶುಪಾಲರಾಗಿ ನಿವೃತ್ತಿಯಾದರು. ಕನ್ನಡದಲ್ಲೊಂದು, ಹಿಂದಿಯಲ್ಲೊಂದು ಎಂ.ಎ. ಮೇಲೊಂದು ಬಿ.ಇಡಿ ಸಾಹಿತ್ಯ ರತ್ನ. ಆ್ಯವರೇಜ್ ಲೆಕ್ಕಾಚಾರದಲ್ಲಿ ವರ್ಷಕ್ಕೆ ಕನಿಷ್ಠ ಮೂರು ಕೃತಿಗಳು. ಇದು ನಾಗರಾಜ ರಾಯರ ಸಂಕ್ಷಿಪ್ತ ಪರಿಚಯ.
ಹಿಂದಿಯತ್ತ ಒಲವು, ಕನ್ನಡದ ಬರವಣಿಗೆಯ ಕಸುವು ಉಳಿಸಿಕೊಳ್ಳಬೇಕೆಂಬ ತುಮುಲ. ಜೇಮ್ಸ್ ಹ್ಯಾಡ್ಲಿ ಚೇಸರ್ ಆಪ್ಯಾಯಮಾನ. ಈ ಕಾರಣಕ್ಕೇ ಓದು- ಬರೆಹ ಒಟ್ಟೊಟ್ಟಿಗೆ ಜೋರು. ನಿಯತಕಾಲಿಕಗಳಿಗೆ ಬರೆಯಲೇಬೇಕೆಂಬ ಕಮಿಟ್ಮೆಂಟು ರಾಯರ ಪೆನ್ನಿಗೆ ಬಿಡುವು ಕೊಡಲಿಲ್ಲM V Nagarajarao ತುಮಕೂರಿನ ಚಿಕ್ಕನಾಯಕನ ಹಳ್ಳಿಯಲ್ಲಿ ಗೋಲಿ, ಗಿನ್ನಿದಾಂಡು ಆಡುತ್ತಿದ್ದ ಹುಡುಗ ಬೆಳೆದಾಗ ನಾಡಿನ ಜನರನ್ನು ಮಾತಾಡಿಸಿದ್ದು ನಿಯತಕಾಲಿಕೆಗಳಲ್ಲಿ ಕಾದಂಬರಿಗಳನ್ನು ಬರೆದು. ಆ ಹುಡುಗನಿಗೆ ಈಗ ಅರುವತ್ತೊಂದರ ಹರೆಯ. ಇವತ್ತು ಅಮೆರಿಕೆಯ ಗಲ್ಲಿಗಳಲ್ಲಿ ತಮ್ಮ ಜೀವನಾನುಭವವನ್ನು ಹಂಚಿಕೊಳ್ಳುತ್ತಿದ್ದಾರೆ.
ಎಂ.ವಿ.ನಾಗರಾಜರಾಯರು ಆದದ್ದು ಮೇಷ್ಟ್ರು; ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ. 37 ವರ್ಷಗಳ ಪಾಠ ಹೇಳಿದ ಅನುಭವ ತುಂಬಿಕೊಂಡ ಇವರು ಪ್ರಾಂಶುಪಾಲರಾಗಿ ನಿವೃತ್ತಿಯಾದರು. ಕನ್ನಡದಲ್ಲೊಂದು, ಹಿಂದಿಯಲ್ಲೊಂದು ಎಂ.ಎ. ಮೇಲೊಂದು ಬಿ.ಇಡಿ ಸಾಹಿತ್ಯ ರತ್ನ. ಆ್ಯವರೇಜ್ ಲೆಕ್ಕಾಚಾರದಲ್ಲಿ ವರ್ಷಕ್ಕೆ ಕನಿಷ್ಠ ಮೂರು ಕೃತಿಗಳು. ಇದು ನಾಗರಾಜ ರಾಯರ ಸಂಕ್ಷಿಪ್ತ ಪರಿಚಯ.
ಹಿಂದಿಯತ್ತ ಒಲವು, ಕನ್ನಡದ ಬರವಣಿಗೆಯ ಕಸುವು ಉಳಿಸಿಕೊಳ್ಳಬೇಕೆಂಬ ತುಮುಲ. ಜೇಮ್ಸ್ ಹ್ಯಾಡ್ಲಿ ಚೇಸರ್ ಆಪ್ಯಾಯಮಾನ. ಈ ಕಾರಣಕ್ಕೇ ಓದು- ಬರೆಹ ಒಟ್ಟೊಟ್ಟಿಗೆ ಜೋರು. ನಿಯತಕಾಲಿಕಗಳಿಗೆ ಬರೆಯಲೇಬೇಕೆಂಬ ಕಮಿಟ್ಮೆಂಟು ರಾಯರ ಪೆನ್ನಿಗೆ ಬಿಡುವು ಕೊಡಲಿಲ್ಲ. ಜೇಮ್ಸ್ ಹ್ಯಾಡ್ಲಿ ಚೇಸರ 20 ಕಾದಂಬರಿಗಳನ್ನು ಮೆಚ್ಚಿಗೆ ಬಿದ್ದು, ಅನುವಾದಿಸಿದರು. ಪತ್ರಿಕೆಗಳಿಗೆ ಬರೆಯುವ ಗೀಳನ್ನು ಇಟ್ಟುಕೊಂಡಿದ್ದರಿಂದ, 300ಕ್ಕೂ ಹೆಚ್ಚು ಲೇಖನಗಳು ಪ್ರಕಟವಾದವು. ಇವುಗಳಲ್ಲಿ ನವಿರು ಹಾಸ್ಯ, ವಿಡಂಬನೆಯ ಚಾಟಿ, ವೈಚಾರಿಕ ಬರೆಹಗಳೂ ಉಂಟು. ಇವನ್ನು ಹೊರತುಪಡಿಸಿ, ಈವರೆಗೆ ಪ್ರಕಟವಾಗಿರುವ ಕೃತಿಗಳು ಬರೋಬ್ಬರಿ 188!
ಕಾದಂಬರಿ ಹಾಗಿರಲಿ. ನಾಟಕ, ಮಕ್ಕಳ ಸಾಹಿತ್ಯ, ವ್ಯಕ್ತಿಚಿತ್ರ, ಪುರಾಣಾಧಾರಿತ ಕೃತಿಗಳು.... ಎಲ್ಲ ಪ್ರಕಾರಗಳಲ್ಲೂ ಒಂದು ಕೈ ನೋಡಿದವರು ರಾಯರು. ಇವರ ಕಂಪನ ಎಂಬ ಕಾದಂಬರಿ ಚಲನಚಿತ್ರವಾದದ್ದು ಎಷ್ಟೋ ಮಂದಿಗೆ ಗೊತ್ತಿಲ್ಲ. ಸ್ವತಃ ಮೂವರು ಮಕ್ಕಳ ತಂದೆಯಾದ ರಾಯರಿಗೆ ಮಕ್ಕಳೆಂದರೆ ನೆಚ್ಚು. ಹೀಗಾಗಿ ಇವರ ಕೃತಿಗಳ ಸಿಂಹ ಪಾಲು ಮಕ್ಕಳಿಗೆ. 100 ಕೃತಿಗಳು ಮಕ್ಕಳು ಓದುವಂತಹವು.
ಸಾಹಿತಿಯಾದವರು ಪರಿಚಾರಕರೂ ಆಗಬೇಕು ಎಂದು ನಂಬಿದ್ದ ನಾಗರಾಜ ರಾಯರು 1985ರಲ್ಲಿ ಶೃಂಗಾರ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದರು. ಆ ಮೂಲಕ 242 ಪುಸ್ತಕಗಳನ್ನು ಪ್ರಕಟಿಸಿ, ಹೂವಾಗಬಲ್ಲ ಮೊಗ್ಗುಗಳ ಗಮಲನ್ನು ಪಸರಿಸಿದರು. ಗ್ರಾಮಾಂತರ ಪ್ರದೇಶದಲ್ಲಿ ಇಷ್ಟೊಂದು ಪುಸ್ತಕ ಯಾರೂ ಪ್ರಕಟಿಸಿಲ್ಲ ಎಂಬ ಅಗ್ಗಳಿಕೆಯೂ ರಾಯರದು. ಸೊಗಸಾಗಿ ಪುಸ್ತಕ ಪ್ರಕಟಿಸುತ್ತಾರೆಂಬ ಕಾರಣಕ್ಕೆ ಕರ್ನಾಟಕ ಸರ್ಕಾರ ‘ಪುಸ್ತಕ ಸೊಗಸು’ ಪ್ರಶಸ್ತಿಯನ್ನೂ ಕೊಟ್ಟು ಗೌರವಿಸಿತು. ಇವರ ಪುಸ್ತಕ ಪ್ರೀತಿಗೆ ಎಲ್ಲರೂ ಬ್ರೇವೋ ಅಂದದ್ದು ಒಂದು ರಾಜ್ಯೋತ್ಸವದ ದಿನ. ಅಂದು ಕುವೆಂಪು ಅವರ 82ನೇ ಹುಟ್ಟುಹಬ್ಬದ ಆಚರಣೆ ಕೂಡ. ನಾಗರಾಜ ರಾಯರ ಕೈಲಿ ರಾಮಾಯಣ ದರ್ಶನಂ. ಬಂದವರಿಗೆಲ್ಲಾ ಪುಸ್ತಕ ಓದಲೇಬೇಕೆಂದು ಪ್ರೇರೇಪಿಸಿ, ಕೊಳ್ಳುವಂತೆ ಪ್ರಚೋದನೆ. ದಿನದ ಕೊನೆಗೆ ರಾಯರ ಓದಲೇಬೇಕೆಂಬ ಒತ್ತಾಸೆಗೆ ಭಾರೀ ಪ್ರತಿಕ್ರಿಯೆ. ಅವತ್ತು ಬಿಕರಿಯಾದ ‘ರಾಮಾಯಣ ದರ್ಶನಂ’ಗಳ ಸಂಖ್ಯೆ 1000 ಅಂದರೆ ನಂಬುತ್ತೀರಾ? ಮನಸ್ಸಿದ್ದರೆ ಮಾರ್ಗ ಎಂಬ ರಾಯರ ನಂಬಿಕೆ ಹಾಗೂ ಅವರ ಹೆಂಡತಿಯ ಬೆನ್ನು ತಟ್ಟುವಿಕೆ ಈ ಸಾಧನೆಯ ಹಿಂದಿನ ಕ್ಯಾಟಲಿಸ್ಟ್ಗಳು.