Dog and shadow are the symbols of our Karma, which follow us through all our births. A young boy remembers what he was in his previous life, and on exploration a town and a family therein was discovered corresponding to his descriptions. A middle aged widow of that family and her son turn out to be this boy’s wife and son from his previous life. The widow accepts him as her husband but the boy rejects him. It is a para-psychological novel exploring psychological and social depths of the characters and society.
Dr S.L. Bhyrappa is a litterateur par excellence. He writes in the south Indian language, Kannada, and has been the bestselling novelist for over 25 years now. His novels are widely translated to pan Indian languages. He is the bestselling novelist in Marathi over the past decade and is among the top-five bestselling authors in Hindi. He is a conscious artist that depicts fundamental human emotions in his novels. In addition to his profound knowledge of Indian philosophical and cultural traditions, Professor Bhyrappa has since his childhood had intense personal experiences in both rural and urban milieu. Consequently, his characters are deeply rooted in Indian soil. Seminars have been and are being held on his novels, and volumes of literary criticism have been published on his works.
His books have found their way to the curriculum of undergraduate and postgraduate degree courses of the universities in the state of Karnataka, and have been the subject of about 20 PhD dissertations. He has penned 24 novels and four volumes of literary criticism and books on aesthetics, social issues and culture. Most of his novels are translated into almost all the Indian languages and six into English. He has served as a Prof. of Philosophy over three decades at NCERT.
Dr Bhyrappa is an avid listener of both Indian and Western classical music and has a keen eye for Art. Travelling has been his paasion since childhood and he has travelled across the globe touching the glaciers of poles, forests of Amazon, deserts of Africa, bustling cities of Europe and the United States. He has trekked in the Alps, the Rockies, Andes and in Fujiama, but the Himalayas remain his greatest passion.
Academic Publications in English -------------------------------------- Values in Modern Indian Educational Thought, 1968 (New Delhi: National Council of Educational Research and Training) Truth & Beauty: A Study in Correlations, 1964 (Baroda: M. S. University Press) 20 Research Papers published in various Journals like Indian Philosophical Quarterly, Darshana International, Journal of University of Baroda
Research and Fellowship ---------------------------- National Research Professor, Government of India, 2014 One of the five members of the Indian Literary Delegation that visited China on invitation by the Government of China, 1992 Ford Foundation Award to visit the USA to study the cultural problems of Indian immigrants to the USA, 1983 British Council Fellowship tenured at the School of Education, University of London, 1977
ನಾನು ಮೊದಲು ಓದಿದ ಬೈರಪ್ಪನವರ ಕೃತಿ "ಆವರಣ". ಅದನ್ನು ಓದುವಾಗ, ಏನಪ್ಪಾ ಇವರು ಹೀಗೆಲ್ಲಾ ಬರೀತಾರೆ ಅಂತ ಒಂದು ತರಹದ ಹೇಳಿಕೊಳ್ಳಲಾಗದ ಭಾವನೆಗಳು ನನ್ನಲ್ಲಿ ಹುಟ್ಟಿಕೊಂಡವು, ಅದಾದ ನಂತರ ನಾನು ಬೈರಪ್ಪನವರ ಪುಸ್ತಕಗಳನ್ನು ಓದುವ ಗೋಜಿಗೆ ಹೋಗಲಿಲ್ಲ. ನಂತರ ಯಾವುದೋ ಒಂದು ಪ್ರೋಗ್ರಾಂನಲ್ಲಿ ಗಂಗಾವತಿ ಪ್ರಾಣೇಶ ಅವರು ನಾಯಿ ನೆರಳು ಪುಸ್ತಕದ ಬಗ್ಗೆ ಮಾತನಾಡಿದಾಗ ಇದನ್ನೂ ಒಂದು ಸಾರಿ ಟ್ರೈ ಮಾಡೋಣ ಅಂತ ಕೊಂಡು ಓದಿದೆ. ಪುಸ್ತಕ ಓದಿದ ಮೇಲೆ ಅನಿಸ್ತು It's really mind blowing.
ಭೈರಪ್ಪನವರ ಮೊದಮೊದಲ ಕೃತಿಗಳು ಇಷ್ಟು ಮಾಗಿರಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಪ್ರತಿ ಸೂಕ್ಷ್ಮಮತಿ ಓದುಗನಲ್ಲಿ ಮೂಡಿರುತ್ತದೆ. ಉತ್ತರ ಸಿಗದೇ ಆಶ್ಚರ್ಯಗೊಂಡು "ಬರೆಯುವುದಕ್ಕೆಂದೇ ಹುಟ್ಟಿದರೇನೋ" ಎಂದು ಉಪಸಂಹರಿಸಿಕೊಂಡುಬಿಡಬೇಕು ಅಷ್ಟೇ!! ಒಟ್ಟಾರೆ, ಭೈರಪ್ಪನವರ ಭಾಷಾ ಪಾಂಡಿತ್ಯ, ಕಲ್ಪನಾಶಕ್ತಿ ಮತ್ತು ಮೈಸೂರು-ಹಾಸನ-ತುಮಕೂರು ಭಾಗದ ಕನ್ನಡವು ಈ ಕಾದಂಬರಿಯಲ್ಲಿಯೂ ಸಹ ಕಾಣಸಿಗುತ್ತದೆ. ಪುನರ್ಜನ್ಮ, ಆತ್ಮ ಮತ್ತು ಪ್ರಾಚೀನ ಕರ್ಮಗಳು ಪುಸ್ತಕದ ಒಡಲು!!!
ಪುನರ್ಜನ್ಮ ಇದೆಯಾ? ಸಾವು ಕೊನೆಯಾ? ಆತ್ಮ ಮತ್ತು ಚೈತನ್ಯಗಳು? ಆತ್ಮ ಮತ್ತು ವಿಜ್ಞಾನ? ಇಸ್ ದೇರ್ ಎ ಲೈಫ್ ಆಫ್ಟರ್ ಡೆತ್?
ಇವು ಬಹುಶಃ ನಮ್ಮೆಲ್ಲರನ್ನೂ ಬಹುವಾಗಿ ಕಾಡುವ ಪ್ರಶ್ನೆಗಳು. ಪುನರ್ಜನ್ಮ ಮತ್ತು ಆತ್ಮ ಎಂಬ ವಿಷಯಗಳು ಮೌಢ್ಯ ಎಂದು ಹೇಳಿರುವವರಾದರೂ ಕೆಲವು ಪುನರ್ಜನ್ಮಗಳ ನಿದರ್ಶನಗಳನ್ನು ನಾವೆಲ್ಲರೂ ಕಂಡಿದ್ದೇವೆ/ಕೇಳಿದ್ದೇವೆ, ಕಾಕತಾಳೀಯವಿರಬಹುದು. ಪುನರ್ಜನ್ಮ ಎಂಬುದು ಇದೆ ಎನ್ನುವುದಕ್ಕೆ ಹಲವಾರು ಥಿಯರಿಗಳಿವೆ. ಚರ್ಚೆಗಳು ನಡೆಯುತ್ತಿವೆ. ಹಾಗಾಗಿ ಪುನರ್ಜನ್ಮ ಇನ್ನೂ ಡಿಬೇಟಬಲ್.
ಇನ್ನೊಂದು ಕಡೆ ಆತ್ಮ ಮತ್ತು ಪರಮಾತ್ಮ ಎಂಬುದು ವೈಜ್ಞಾನಿಕವಾಗಿ/ವೈದ್ಯಕೀಯವಾಗಿ ಇನ್ನೂ ಸಾಬೀತಾಗಿಲ್ಲ. ಆದ್ದರಿಂದ ಪುನರ್ಜನ್ಮ ಮತ್ತು ಆತ್ಮ ಎಂಬ ಎರಡು ವಿಷಯಗಳು ಸರ್ವಸಮ್ಮತವಲ್ಲ. ಐಂದ್ರಜಾಲಿಕ ವಿದ್ಯೆಯಲ್ಲಿ ಕೇಳಿ ಬರುವ ಜಿನ್‌ಗಳು (ದೇಹರೂಪದಿಂದ ಮುಕ್ತಿಗೊಂಡ ಆತ್ಮ) ಎಷ್ಟರ ಮಟ್ಟಿಗೆ ಎಂಬುದು ಕೂಡ ಗೊತ್ತಿಲ್ಲ.
ಇಷ್ಟು ಇಲ್ಲ ಮತ್ತು ಗೊತ್ತಿಲ್ಲಗಳಿದ್ದರೂ ನಾಯಿ-ನೆರಳು ಕಾದಂಬರಿಯು ಓದುಗನನ್ನು ಆವರಿಸಿಕೊಳ್ಳುತ್ತದೆ.
ಈ ಕಾದಂಬರಿಯನ್ನು ವೈಜ್ಞಾನಿಕವಾಗಿ ಓದಬಹುದು ಹಾಗೂ ಆಧ್ಯಾತ್ಮಿಕವಾಗಿ ಓದಬಹುದು. ಎರಡೂ ರೀತಿಯಲ್ಲಿ ಓದಿದಾಗ ಅಥವಾ ಅರ್ಥೈಸಿಕೊಂಡಾಗ ಈ ಕಾದಂಬರಿ ಬೇರೆಯ ರೀತಿಯಲ್ಲೇ ಅರ್ಥವಾಗುವುದು ಈ ಕಾದಂಬರಿಯ ವೈಶಿಷ್ಟ್ಯ. ಒಟ್ಟಿನಲ್ಲಿ ಆಧ್ಯಾತ್ಮಕ್ಕೆ ಹತ್ತಿರವಾಗಿಯೂ ವಿಜ್ಞಾನಕ್ಕೆ ಚರ್ಚಾತ್ಮಕವಾಗಿ ಉಳಿಯುತ್ತದೆ ಎಂದನಿಸಬಲ್ಲದು. ಕಾದಂಬರಿಯ ಮುಖ್ಯಪಾತ್ರದ ಪುನರ್ಜನ್ಮ ಮತ್ತು ಹಿಂದಿನ ಜನ್ಮದ ಉದ್ದೇಶಗಳೇನಿದ್ದವು ಎಂಬುದರ ಹುಡುಕಾಟದಲ್ಲಿ ಕಥಾಹಂದರ ಸಾಗುತ್ತದೆ. ಅಷ್ಟಲ್ಲದೇ ಭೈರಪ್ಪನವರ ಪುಸ್ತಕಗಳಲ್ಲಿ ಕಂಡುಬರುವ ಧರ್ಮ, ಪ್ರೀತಿ, ಸಾವು ಬಂದುಹೋಗಿದೆ. ನಾಯಕನ ಕಥೆಯೂ ಕೊನೆಯ ಪುಟದ ತನಕ ಕುತೂಹಲ ಉಳಿಸಿಕೊಂಡು ಕಾದಂಬರಿಗೊಂದು ರೋಚಕತೆಯನ್ನು ತಂದಿದೆ.
ವೈಯಕ್ತಿಕವಾಗಿ ಪ್ರತಿ ಕಾದಂಬರಿಯಲ್ಲಿನ ಪ್ರಸ್ತುತತೆ ಮತ್ತು ವಾಸ್ತವಿಕತೆ ನನ್ನೊಳಗಿನ ಓದುಗನನ್ನು ಉತ್ಸುಕನನ್ನಾಗಿಸುತ್ತದೆ. ಕರ್ಮಫಲದ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ಬಹುಪಾಲು ಮಂದಿ ನಂಬುತ್ತೇವೆ ಕೂಡ. ಹಾಗಾಗಿ ನಾಯಿ ನೆರಳು ಕಾದಂಬರಿ ಪ್ರಸ್ತುತತೆಯನ್ನು ಕಾಯ್ದುಕೊಂಡಿದೆ ಎನ್ನಬಹುದು. ಕರ್ಮವೆಂಬುದು ಕೇವಲ ಕೆಲಸವಾ ಅಥವಾ ಕರ್ಮಕ್ಕೆ ಪಾಪ ಪುಣ್ಯಗಳ ಗಂಟು/ನಂಟು ಇದೆಯಾ ಎಂಬ ಪ್ರಶ್ನೆಗಳಿವೆ ನನಗೆ. ಹಾಗಾಗಿ ಕರ್ಮದ ಥಿಯರಿಯೂ ಕೂಡ ಅಸ್ಪಷ್ಟ. ಪುನರ್ಜನ್ಮಯಿಂದಾಗಿ ವಾಸ್ತವಿಕತೆ ಇಸ್ ದೇರ್ ಆ್ಯಂಡ್ ದೇರ್ ಎಬೌಟ್ಸ್ ಎನ್ನಬಹುದು.
ಒಟ್ಟಿನಲ್ಲಿ ಉತ್ತಮ ಓದು, ಭೈರಪ್ಪನವರ ಕ್ಲಾಸಿಕ್‌ಗಳಲ್ಲಿ ಓಂದು! ಸಮಯ ಮಾಡಿಕೊಂಡು ಓದಿ!!!
Brilliant, just Brilliant. SL Bhyrappa is just a phenomenal writer. What a novel. This is the book that captures 3 rebirths of a person in a span of almost 40 to 50 years. After all, those who don't believe in reincarnations might not able to understand the awesomeness of this book.
In just 160 pages, SLB sir had given us an amazing tale of a person who was born 3 times just to finish off his karma or duties. In all these births the protagonist a sadhu in first birth who gets cheated by a person, in his 2nd birth the same sadhu born as Vishveshwara will repay his debt and dies and in the 3rd Birth he again takes birth as Kshetrapala to finish off his remaining duty.
But why the title Naayi Neralu (Dog's Shadow) is a question marks on many readers face including me. But what I understood from the entire novel is, Karma follows you in every walk, every birth of your life, just as a loyal dog would do to his master, no matter what. This is Naayi Neralu!!
Must read for every Kannada book lover at least once in their lifetime.
ಪ್ರಾಚೀನ ಕರ್ಮಗಳು ಒಬ್ಬ ವ್ಯಕ್ತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆಂದು ಈ ಕಾದಂಬರಿಯಲ್ಲಿ ವಿವರಣೆ ನೀಡಿದ್ದಾರೆ.. ತನ್ನ ಗತಜನ್ಮದ ಕರ್ಮಗಳೆನ್ನೆಲ್ಲ ಪೂರಯಿಸಲು ಕ್ಷೇತ್ರಪಾಲನು ವಿಶ್ವೇಶ್ವರನಾಗಿ ಮತ್ತೆ ಹುಟ್ಟುತ್ತಾನೆ, ಆಗ ವಿಶ್ವೇಶ್ವರನು ಪಡುವ ಕಷ್ಟಗಳನ್ನು ಇಲ್ಲಿ ತಿಳಿಯಬಹುದು.. ಆದರೆ ಈ ಕಾದಂಬರಿಗೆ ನಾಯಿ ನೆರಳು ಅಂತ ಶೀರ್ಷಿಕೆ ಯಾಕೆ ಕೂಟ್ಟಿದ್ದಾರೋ ಅನ್ನುವ ಪ್ರಶ್ನೆಗೆ ನನಗೆ ಇನ್ನು ಉತ್ತರ ಪೂರ್ತಿಯಾಗಿ ಸಿಕ್ಕಿಲ್ಲ
ನಾನು ಅರ್ಥ ಮಾಡಿಕೂಂಡಿರುವ ಪ್ರಕಾರ ನಾಯಿಯು ವಿಶ್ವಾಸದಿಂದ ತನ್ನ ಒಡೆಯನನ್ನು ಹಿಂಬಾಲಿಸುತ್ತದೋ, ಕರ್ಮವೆಂಬುವುದು ಸಹ ಜನ್ಮ ಜನ್ಮಕ್ಕೊ ನಮ್ಮನ್ನೆ ಅನುಸರಿಸುತ್ತದೆ.
ಪೂರ್ವ ಜನ್ಮದ ಬಗ್ಗೆ ಎಷ್ಟೇ ಜಿಜ್ಞಾಸೆಗಳಿದ್ದರೂ ಅದು ಭಾರತೀಯ ನಂಬಿಕೆಗಳಲ್ಲಿ ಬೇರೂರಿರುವುದಂತೂ ನಿಜ. ಅದನ್ನು ತೆಗೆದು ಹಾಕಿ ಮುಂದಡಿ ಇಡುವುದು ಭಾರತೀಯ ಮನಸ್ಸಿಗೆ ಕಷ್ಟ. ಪೂರ್ವಜನ್ಮದ ಪರವಾಗಿ ಎಷ್ಟೋ ಪುರಾಣಕಥೆಗಳು, ಸಿದ್ಧಿಪುರುಷರ ಕತೆಗಳು ಉದಾಹರಣೆಯಾಗಿ ನಿಲ್ಲುತ್ತವೆ.
ಇಂತಹ ಪೂರ್ವಜನ್ಮದ ಕಥೆಯೊಂದಿರುವ, ನಂಬಿಕೆ-ಅಪನಂಬಿಕೆ, ದೇವರು-ವಿಜ್ಞಾನ, ಶ್ರದ್ಧೆ-ಅಂಧಶ್ರದ್ಧೆ, ಆಧ್ಯಾತ್ಮ-ವೈಚಾರಿಕತೆ ಅಂತಹ ಸಂಘರ್ಷಗಳನ್ನೊಳಗೊಂಡಿರುವ ಕಾದಂಬರಿ ನಾಯಿನೆರಳು.
ಇದರಲ್ಲಿನ ಕೆಲವು ಸಂದರ್ಭಗಳನ್ನು ಮೊದಲ ಬಾರಿಗೆ ಓದಿದಾಗ ಇದ್ದಕ್ಕಿದ್ದಂತೆ ತೊಡರಿ ಬೀಳುವಂತಾಗಿತ್ತು. ಅದರಲ್ಲೂ, ತನ್ನ ಪಾಡಿಗೆ ಯಾವುದೋ ಲೋಕದಲ್ಲಿ ಇರುತ್ತಿದ್ದ ವಿಶ್ವೇಶ್ವರನಿಗೆ ದೇಹಬಾಧೆಯನ್ನು ತಡೆಯುವಲ್ಲಿ ವಿಫಲವಾದುದು ಅಭಾಸವೆನಿಸಿತ್ತು ನನಗೆ. ಈ ಬಾರಿಯು ಅದೇ ಸಂದರ್ಭಗಳು ಮನಸ್ಸನ್ನು ಸ್ವಲ್ಪ ಅಳುಕಿಸಿದರು, ಭೈರಪ್ಪನವರು 'ನಾನೇಕೆ ಬರೆಯುತ್ತೇನೆ' ಕೃತಿಯಲ್ಲಿ ನಾಯಿ ನೆರಳು ಕೃತಿಯನ್ನು ಚಿತ್ರಿಸಿರುವ ಕುರಿತು ಬರೆದಿದ್ದನ್ನ ಓದಿದ್ದರಿಂದ ಮತ್ತು ಗೆಳೆಯರಾದ ಚೈತನ್ಯ ರವರು ಕೃತಿಯ ಬಗ್ಗೆ ಮತ್ತೊಂದು ಮಜಲನ್ನು ತೆರೆದಿಟ್ಟ ಪೋಸ್ಟ್ ಓದಿದ್ದರಿಂದ ( https://www.facebook.com/share/p/1V4z... ) ಎಷ್ಟೋ ಹೊಳಹುಗಳು ಈ ಕೃತಿಯ ಬಗ್ಗೆ ಸಿಕ್ಕಿದ್ದವು ಹಾಗಾಗಿ ಈ ಬಾರಿಯ ಓದು ಸ್ವಲ್ಪ ಸರಾಗವಾಗಿ ಸಾಗಿತ್ತು.
ಒಟ್ಟಿನಲ್ಲಿ ಕರ್ಮ ಸಿದ್ಧಾಂತದ ಹಿನ್ನೆಲೆಯಲ್ಲಿ ರೂಪಗೊಂಡಿರುವ ಈ ಕಾದಂಬರಿ ಮುಗಿದ ಮೇಲೂ.. ಅಚ್ಚಣ್ಣಯ್ಯನ ಪಾಪಕಾರ್ಯ, ವೆಂಕಮ್ಮನ ಅಂದಿನ ಭಾರತೀಯ ಹೆಣ್ಣಿನ ಮನಸ್ಥಿತಿ, ವಿಶ್ವೇಶ್ವರನ ನಡವಳಿಕೆ, ಅಚ್ಚಣ್ಣಯ್ಯನ ಮನೆಗೆ ಬಂದ ಗುರುಗಳು, ಹಳ್ಳಿಯ ಪರಿಸರ, ನಾಯಿಯ ಜೊತೆಯ ಒಡನಾಟ, ಅಚ್ಚ್ಯುತನ ಜಿಜ್ಞಾಸೆಗಳು, ಜೋಗಯ್ಯ ಕೊನೆಯಲ್ಲಿ ನಕ್ಕ ನಗು. ಎಲ್ಲವೂ.. ಕಾಡುತ್ತಲೇ ಇರುತ್ತವೆ ಓದುಗನಿಗೆ.
ಭೈರಪ್ಪನವರ ಯಾವ ಪುಸ್ತಕ ಓದಿದ್ರು ಕೆಲವು ಪ್ರಶ್ನೆಗಳು ನನಗೆ ಹಾಗೆ ಉಳಿದು ಹೋಗುತ್ತೆ..
ವಿಶ್ವೇಶ್ವರ ಯಾಕೆ ನದಿಯಲ್ಲಿ ಮುಳುಗಿದ ? ಅವನಿಗೆ ಪುನರ್ಜನ್ಮ ಯಾಕಾಗಿ ?. ಕ್ಷೇತ್ರಪಾಲನಾಗಿ ಹುಟ್ಟಿ ವಿಶ್ವೇಶ್ವರನಾಗಿ ಮತ್ತೆ ಬದುಕಿ, ಸೆರೆಮನೆ ವಾಸ ಅನುಭವಿಸಿ ಕೊನೆಗೆ ಯಾಕೆ ಸನ್ಯಾಸಿ ಆದ ?. ವೆಂಕಮ್ಮಳ ಕಷ್ಟಕ್ಕೆ ಮಗ ಅಚ್ಯುತ ಸಹಾಯಕ್ಕೆ ಬಂದ್ರು ಯಾಕೆ ಅವಳು ಅಂಗೀಕರಿಸಲಿಲ್ಲ ?. ತಾಯಿಯ ಶಾಪವೇ ಅವನಿಗೆ ಮಕ್ಕಳಾಗಲಿಲ್ಲದಕ್ಕೆ ಅಥವಾ ಅಚ್ಚಣ್ಣಯ್ಯರ ಶಾಪವೇ ? ನಂಜಮ್ಮ ಮುತ್ತೈದೆಯಾಗಿ ಸತ್ತಿದ್ದು ಅವಳ ಪುಣ್ಯ ಕರ್ಮವೇ ?. ಈ ಜನ್ಮದ ಕಷ್ಟಕ್ಕೆ ಪೂರ್ವಜನ್ಮವನ್ನು ಹಣಿಯಬಹುದೇ ? ನಾಯಿಯು ವಿಶ್ವೇಶ್ವರನಿಗೆ ಏನಾಗಿತ್ತು ಪೂರ್ವ ಜನ್ಮದಲ್ಲಿ ? ಅದು ಸತ್ತಾಗ ಅವನು ಗಹ ಗಹಿಸಿ ನಕ್ಕಿದ್ಯಾಕೆ ?. ಅನಂತನಿಂದ ವೆಂಕಮ್ಮ ಸುಖ ಕಾಣುವಳೇ ?...ತಲೆಯ ತುಂಬಾ ಪ್ರಶ್ನೆಗಳು.....
I was having argument with a friend as to whether the movies with Happy endings are good or the ones with Sad(or not so happy) endings. He was leaning towards the latter. He was of the opinion that, a movie should leave the movie goer with lot of thoughts as to how the movie could have ended or how the life of a protagonist might have changed if he had followed path X instead of path Y. Happy ending movies seldom do this. This applies equally to the books.
Although Byrappa reasons for most of things happening with the protagonist of novel, he still leaves lot of things unsaid which the reader can ponder over. What I liked most about the book is how Byrappa captures the thoughts in the character's mind. I also liked how he captured the transition of an Atheist into a Theist happening slowly over time.
This is the second Kannada novel that I have read and this book has left me yearning for more Kannada literature.
A great story. But the ending is not satisfactory. I feel complete justice is not given to the characters. Worth reading because the plot has so many twists and turns. It's set fantastically that you just want to finish in one seating.
ಕೆಲವೊಂದು ಕಥೆಗಳೇ ಹೀಗೆ . ಮುಗಿದಮೇಲೂ ಮನದಲ್ಲಿ ಉಳಿಯುತ್ತವೆ . ಜ್ಞಾನವನ್ನು ಒರೆಗಚ್ಚುವುದಕ್ಕಲ್ಲ , ಯೋಚನಾಲಹರಿಗೆ ಇಂಬು ಕೊಡುವುದಿಲ್ಲ , ಅದ್ಭುತವಾದ ಜಗದ್ನಿರ್ಮಾಣದಿಂದಲ್ಲ . ನಮ್ಮ ಅನುಭವಗಳ ಅಭಿವ್ಯಕ್ತಿಗಳಾಗಿ ಕೆಲವು ಕಥೆಗಳು ಮನದಲಿ ಉಳಿದುಬಿಡುತ್ತವೆ . ಈ ಪುಸ್ತಕ ಅಂಥ ಸಾಲಿನಲ್ಲಿ ಸೇರುತ್ತದೆ . ಕೆಲವೇ ದಿನಗಳ ಹಿಂದೆ ಭ್ಯರಪ್ಪನವರೇ ಬರೆದಿರುವ "ನೆಲೆ" ಓದಿದೆ . ಪುಸ್ತಕ ಓದಲು ಖುಷಿ ಕೊಟ್ಟರೂ , ಅದರಲ್ಲಿ ಲೇಖಕರು ಬರೆದಿರುವ ಹಲವು ವಿವರಗಳು , ಕಥೆಯ ಪಾತ್ರಗಳ ಅನುಭವಗಳು , ಸಂಭಂದಗಳ ಭಾವನೆಗಳು ನನ್ನ ಅನುಭವದ ಭಾಗವಾಗಿ ಅಷ್ಟೊಂದು ಉಳಿದಂತೆ ಅನ್ನಿಸಲಿಲ್ಲ . ೨೫ ವಯಸ್ಸಿನ ನನಗೆ , ಕಥೆಯಲ್ಲಿ ಬರುವ ಹಲವು ಪಾತ್ರಗಳ ಅನುಭವ ಆಗದೆ ಇರುವುದೂ ಅದರಲ್ಲಿ ಒಂದು ಕಾರಣ ಎನ್ನಿಸಬಹುದು .
ಆದರೆ ೧೯೬೮ ರಲ್ಲೇ ಬರೆದಿರೋ 'ನಾಯಿ ನೆರಳು' , ಎಲ್ಲ ವರ್ಗದ ಓದುಗರಿಗೂ , ಮುಖ್ಯವಾಗಿ , ಹಳ್ಳಿಯ ನಂಟಿರುವ , ಅಜ್ಜಿ ತಾತಂದಿರ ಕಥೆಗಳನ್ನು ಕೇಳಿ ; ಈ ಹಳೆ ಮನುಷ್ಯರು ಒಂಥರಾ ಹುಚ್ಚರೆಂದು ಅಂದುಕೊಳ್ಳುವ ಯುವಕರಿಗೆ , ಅದೇ ಹಳೆ ಮನುಷ್ಯರ ಅನುಭವಗಳು ತಮಗಾದಾಗ ಅವರ ಮಾತುಗಳಲ್ಲಿ ಏನೂ ಹುರುಳಿದೆ , ಆದರೆ ಏನು ಗೊತ್ತಾಗ್ತಾ ಇಲ್ಲ ಅನ್ನೋ skepticism ನ ಆಳ್ವಿಕೆಗೆ ಒಳಪಡುವ ಪ್ರಗತಿಪರರಿಗೆ , ದೈವ ಭಕ್ತರಿಗೆ , ಪುನರ್ಜನ್ಮಗಳ ಮೇಲೆ ನಂಬಿಕೆ ಇಡುವ ಧಾರ್ಮಿಕರಿಗೆ , ಸಂಬಂಧಗಳ - ಅವು ಬೆಸೆದುಕೊಳ್ಳುವ , ಕಳಚಿಕೊಳ್ಳುವ ಅನುಭವವಿರುವವರಿಗೆ , ಮಾಟ ಮಾತ್ರ ಇದೆಲ್ಲವನ್ನು ನಂಬದಿದ್ದರೂ ಅದಕ್ಕೆ ಹೆದರುವವರಿಗೆ , ಇನ್ನೂ ಹಲವರ ಮನಸಲ್ಲಿ ಅಳಿಸಲಾರದ ಅಚ್ಚನ್ನು ಒತ್ತುತ್ತದೆ .
ಪುಸ್ತಕದ ಮುಖಪುಟವೇ ಕಥೆಯಲ್ಲಿ ಕುತೂಹಲ ಕೆರಳಿಸುವಂತಿದೆ . ಬೆಟ್ಟ ಅಥವಾ ಪಿರಮಿಡ್ , ಅದರ ಮುಂದೆ ನಿಂತಿರುವ ಮನುಷ್ಯ , ಅವನಿಗಿಂತ ಕುಬ್ಜವಾಗಿ ಇರುವ ಅವನ ನೆರಳು , ಮೂಲೆಯಲ್ಲೊಂದು ನಾಯಿ . ಕಥೆಯ ಸಾರಾಂಶವನ್ನು ಮುಖಪುಟದಲ್ಲೆ ಕಲಾವಿದರು ಅಧ್ಭುತವಾಗಿ ಸೃಷ್ಟಿಸಿದ್ದಾರೆ .
ಮನುಷ್ಯನ ಪೂರ್ವ ಜನ್ಮದ ಕರ್ಮ , ಪ್ರಾಚೀನ ಕರ್ಮ , ಕರ್ಮಗಳ ಸಂಕೇತಗಳು , ಅದರ ಪರಿಣಾಮಗಳು , ಈಗಿನ ಜನ್ಮದಲ್ಲಿ ಮಾನವ ತನ್ನ ಪೂರ್ವಜನ್ಮದ ಕರ್ಮಗಳನ್ನು ಕಳೆದುಕೊಳ್ಳಲು ಹೋಗಿ ಮತ್ತೆ ಮತ್ತೆ ನಿರ್ಮಿಸಿಕೊಳ್ಳುವ ಹೊಸ ಕರ್ಮಗಳು , ಅದರ ಬೆನ್ನು ಹತ್ತಿ ನಡೆಯುವ ದಾರಿ , ಅದರಿಂದ ಮಾನವನ ಸುತ್ತಲಿನ ವಾತಾವರಣಗಳಿಗೆ , ಅದರಲ್ಲಿ ಬದುಕುವ ಇತರೆ ಜೀವಿಗಳಿಗೆ ಆಗುವ ಪರಿಣಾಮಗಳು . ಕರ್ಮ ಧರ್ಮಗಳ ಈ ಚಕ್ರವನ್ನು ಅತ್ಯಂತ ಸರಳವಾಗಿ , ನಮಗೆಲ್ಲರಿಗೂ ಮುಟ್ಟುವಂತೆ ಬರೆಯುವ ಕಲೆ ಪ್ರಪಂಚದ ಕೆಲವೇ ಕೆಲವು ಲೇಖಕರಿಗೆ ಬರುತ್ತದೆ .
ಕಥೆ ಹೇಳುವುದರ ಜೊತೆ ,ತತ್ವಗಳ ತಾತ್ಪರ್ಯವನ್ನು ಅದೇ ಕಥೆಯಲ್ಲಿ ಹೊಂದಿಸಿ ..... ಅಲ್ಲ ಅಲ್ಲ ಬೆರೆಸಿ . ಮಿಶ್ರಣ ಕೊಂಚವೂ ರುಚಿಸದಿರುವಂತೆ ಮಾಡಿ ಬಡಿಸುವ ಕಲೆಗೆ ತಲೆ ಬಾಗಲೇ ಬೇಕು .
ಎಲ್ಲ ಪಾತ್ರಗಳಿಗೂ , ಲೇಖಕರರು ಸಮರ್ಥನೆ ನೀಡದೆ , ಅವರದೇ ರೀತಿಯಲ್ಲಿ ಪೂರ್ಣವಾಗಿಯೂ, ಅರ್ಧವಾಗಿಯೂ closure ನೀಡಿರುವುದು ನನಗೆ ತುಂಬಾ ಅರ್ಥಪೂರ್ಣವೆನ್ನಿಸಿತು .
Ultimately, all we need is closure, whatever form it might be in our lives.
This is my first novel of S.L. Bhyrappa and I am happy I chose this book even when I was doubtful if I would like it or not. The book mainly talks about the importance of Karma in a human's life and also gives us a glimpse of superstitious and religious believes which were followed in the olden days. The narration is very simple and fast and it would never bore the reader. Overall a good read and would recommend it to all the Kannada Book lovers over there.
Very different book about karma and reincarnation. It narrates the story of three generations and how karma affects them. In the end it leaves the reader with a lot of unanswered questions. But the narration and the language is so good that you feel like that you are a part of the story.
Byrappa’s stories are always hard hitting and this one is no exception . We would imagine our minds are manipulated by different beliefs and practices in our society . We have sometimes faith and otherwise on many such methods . But the reality is , there are situations and events behind the realm of science exploration , Beyond the limit of human quest and beyond the boundary of consciousness . One such is rebirth / reincarnation . The story in the book revolves around one such event which continuous to haunt the rest of the generations and how the dilemma between faith and logical thinking creates conflict in human minds . Towards the end of the story , nothing but faith wins but at very high cost . Very well written and thought provoking . Read it and am sure you will not regret .
Naayi Neralu means Dog and Shadow. It left me utterly spellbound. Written by the legendary S.L. Bhyrappa, this is perhaps his shortest novel, but it is no less powerful. From the very first page, I was drawn in by its fast paced narrative. The pages turned effortlessly, each one pulling me deeper into a world where the psychological and social undercurrents of life ripple just beneath the surface.
At its heart, the novel raises profound questions about relationships, reincarnation, and the enduring, often silent suffering of womanhood. Karma, in Bhyrappa’s universe, is not a distant idea. It walks beside us like a loyal dog, like an inescapable shadow following through every lifetime, touching not just us but our loved ones, shaping our surroundings.
The tale of Kshetrapala or Visheshwara, who must live through three janmas to fulfill his life’s purpose, is both haunting and enlightening. The novel doesn’t merely speak of rebirth, it delves into the turbulent clashes within families, villages, and between the educated and the uneducated.
Acchyuta, a rationalist molded by modern education, finds his ideals crumbling when confronted with life’s cruel ironies. He resists religion, attempts to reconcile with Christian theology, and ultimately finds himself disillusioned by it all. The narrative doesn't shy away from presenting the moral complexity of characters like Venkamma, and it's Acchannayya whose transformation is most profound—from a skeptic to a devout believer, haunted by the karmic consequences of his youthful choices.
Bhyrappa's portrayal of the 1950s Kumbh Mela is nothing short of transportive. One can almost feel the pulse of the crowd, the sacred chaos, the timelessness of belief.
Naayi Neralu reminded me of Vamshavriksha, another gem by Bhyrappa. His range as a writer is truly awe-inspiring each novel a new world, each character a mirror to our own complexities. While there is a film adaptation of Naayi Neralu, it doesn’t quite capture the soul of the book. The novel’s richness, its layers, are best experienced through Bhyrappa’s words. That said, the film does offer a visual feast especially the landscapes of coastal Karnataka.
In the end, Naayi Neralu isn’t just a story - it’s an introspection. It forces us to ask: what karma do we carry? And which ones will follow us beyond this life?
🔸 ನಾಯಿ ನೆರಳು ~ ಎಸ್ ಎಲ್ ಭೈರಪ್ಪನವರು ನಾನು ಓದಿದ ಭೈರಪ್ಪ ಅವರ ಮೊದಲ ಪುಸ್ತಕ , ನಿಜ ಹೇಳ್ಬೇಕು ಅಂದ್ರೆ ಓದೋಕೆ ಶುರು ಮಾಡಿದಾಗ ಏನು ಅರ್ಥ ಆಗ್ತಿರಲಿಲ್ಲ ಆಮೇಲೆ ಆಮೇಲೆ ಅರ್ಥ ಮಾಡ್ಕೊಳ್ತ ಹೋದೆ.
ನನಗೆ ಪುಸ್ತಕ ಓದಿದ ಮೇಲೆ ಅನ್ಸಿದ್ದು ನಿಮ್ಮ ಮುಂದೆ ಹೇಳ್ತಾ ಇದೀನಿ
ಎಸ್. ಎಲ್. ಭೈರಪ್ಪ ಅವರ "ನಾಯಿ ನೆರಳು" ಕಾದಂಬರಿಯು ಪುನರ್ಜನ್ಮ , ತತ್ತ್ವಚಿಂತನೆ ಮತ್ತು ತೀವ್ರವಾದ ಭಾವನೆಗಳ ಸಂಗಮವಾಗಿದೆ. ಈ ಕಾದಂಬರಿಯ ಈ ಅಂಶಗಳು ಓದುಗರನ್ನು ವಿಶೇಷ ಅನುಭವಕ್ಕೆ ಕೊಂಡೊಯ್ಯುತ್ತವೆ. ಈ ಕಾದಂಬರಿಯು ಮಾನವನ ಅಂತರಂಗದ ತಳಮಳಗಳನ್ನು ತೆರೆದಿಡುತ್ತದೆ. ಒಂದು ಚಿಕ್ಕ ಬಾಲಕ ತಾನು ಹಿಂದಿನ ಜನ್ಮದಲ್ಲಿ ವಿವಾಹಿತನಾಗಿದ್ದೆ ಎಂದು ಹೇಳುವುದು, ಆತನ ದೃಢವಾದ ನಂಬಿಕೆ, ಆತ ನೀಡುವ ವಿವರಗಳು ಮತ್ತು ಗುರುತಿಸುವ ಸ್ಥಳಗಳು ಎಲ್ಲವೂ ಕೇಳುಗರನ್ನು ಬೆರಗುಗೊಳಿಸುತ್ತವೆ.
ಭೈರಪ್ಪನವರು ಕೇವಲ ಕಥೆ ಹೇಳುವ ಲೇಖಕರಲ್ಲ, ಅವರು ಓದುಗರನ್ನು ಚಿಂತನೆಗೆ ಹಚ್ಚುವ ಸವಾಲುಗಾರ. ಈ ಕಾದಂಬರಿಯಲ್ಲಿ ಅವರು ಪುನರ್ಜನ್ಮದ ಕಲ್ಪನೆಯನ್ನು ಪ್ರಶ್ನಿಸುವಂತೆ ತೋರುತ್ತಾರೆ.ಭೈರಪ್ಪನವರು ತಮ್ಮ ಅಭ್ಯಾಸದಂತೆ ಎಲ್ಲವನ್ನೂ ಮರುಪರಿಶೀಲಿಸುವಂತೆ ಓದುಗರನ್ನು ಪ್ರೇರೇಪಿಸುತ್ತಾರೆ.
ಕಾದಂಬರಿಯ ಪಾತ್ರಗಳು, ಅದರಲ್ಲೂ ಬಾಲಕ ಕ್ಷೇತ್ರಪಾಲ,ತಿರುಮಾಲಜೋಯಿಸರು, ಅಚ್ಚಣ್ಣಯ್ಯ ,ನಜ್ಜಕ್ಕಯ್ಯ, ಉಪ್ಪಾರ ಪಾಪಯ್ಯ,ವಿಚಿತ್ರವಾದ ನಾಯಿಯ ಪಾತ್ರಗಳು ಕೇವಲ ಪಾತ್ರಗಳಲ್ಲ; ಅವು ಒಂದೊಂದು ಜೀವಂತ ಪ್ರಶ್ನೆಗಳಂತೆ ಕಾಣುತ್ತವೆ. ಕಥೆಯ ಸಂಭಾಷಣೆಗಳು ಸಹಜವಾಗಿದ್ದರೂ, ಅವುಗಳ ಆಳದಲ್ಲಿ ತೀವ್ರವಾದ ಭಾವನೆಗಳನ್ನು ಹುದುಗಿಸಿಡುವುದು ಭೈರಪ್ಪನವರ ಶಕ್ತಿ. "ನಾಯಿ ನೆರಳು" ಎಂಬ ಶೀರ್ಷಿಕೆಯು ಅನೇಕ ಓದುಗರಿಗೆ ಗೊಂದಲವನ್ನುಂಟು ಮಾಡಬಹುದು. ಆದರೆ ಕಥೆಯನ್ನು ಓದಿದ ನಂತರ ಅದರ ಆಳವಾದ ಅರ್ಥವು ಸ್ಪಷ್ಟವಾಗುತ್ತದೆ.
ನಾಯಿಯು ನೆರಳಿನಂತೆ ಇರುವ ಶಕ್ತಿಯ ಸಂಕೇತವೋ ಅಥವಾ ಜೀವನವು ಕೊನೆಯವರೆಗೂ ಕೇವಲ ನೆರಳಾಗಿ ಉಳಿಯುವುದರ ಸಂಕೇತವೋ ಎಂಬ ಪ್ರಶ್ನೆಗಳು ಓದುಗರ ಮನಸ್ಸಿನಲ್ಲಿ ಉಳಿಯುತ್ತವೆ. ಓದಿದ ನಂತರ ಪುನರ್ಜನ್ಮದ ಕುರಿತು ಖಚಿತ ಉತ್ತರ ಸಿಗದೇ ಇರಬಹುದು, ಆದರೆ "ಈ ನಂಬಿಕೆಯು ನಮ್ಮ ಜೀವನವನ್ನು ಹೇಗೆ ರೂಪಿಸುತ್ತದೆ?" ಎಂಬ ಮಹತ್ವದ ಪ್ರಶ್ನೆಯತ್ತ ನಮ್ಮನ್ನು ಕೊಂಡೊಯ್ಯುತ್ತದೆ. ಇದು ಕೇವಲ ಒಂದು ಕಥೆಯಲ್ಲ, ಒಂದು ತಾತ್ವಿಕ ಪಯಣ. ಇದು ನಮ್ಮ ನಂಬಿಕೆಗಳೊಂದಿಗೆ ಸಂಘರ್ಷಿಸಿ, ನಮ್ಮ ಅಸ್ತಿತ್ವವನ್ನು ಮರುಪರಿಶೀಲಿಸುವ ಒಂದು ಪ್ರಯತ್ನ. ನೀವು ಇನ್ನೂ ಈ ಕಾದಂಬರಿಯನ್ನು ಓದಿಲ್ಲದಿದ್ದರೆ, ಇಂತಹ ಒಂದು ವಿಶಿಷ್ಟ ಅನುಭವವನ್ನು ಪಡೆಯಲು ತಪ್ಪಿಸಿಕೊಳ್ಳಬೇಡಿ.ಇದು ನಿಮ್ಮ ಒಳಜಗತ್ತಿಗೆ ಒಂದು ಕನ್ನಡಿಯಂತೆ ನಿಲ್ಲುತ್ತದೆ.
ಬಹುಶಃ ಶಿವರಾಂ ಕಾರಂತರ ಸನ್ಯಾಸಿಯ ಬದುಕು ಪುಸ್ತಕವನ್ನು ಈ ನಾಯಿನೆರಳು ಪುಸ್ತಕ ಓದುವ ಮೊದಲೇ ಓದಿದ್ದರಿಂದಲೋ ಏನೋ ಈ ಪುಸ್ತಕ ಹೆಚ್ಚು ಇಷ್ಟವಾಗಲಿಲ್ಲ.
ಕರ್ಮ, ಋಣ ತೀರಿಸುವ ಸಲುವಾಗ��� ಮತ್ತೆ ಹುಟ್ಟುವ ಒಬ್ಬ ಸನ್ಯಾಸಿ ನಂತರ ಸಂಸಾರದ ಸುಳಿಯಲ್ಲಿ ಸಿಕ್ಕು ಆ ಕರ್ಮ ತೀರಿಸಲು ಮತ್ತೆ ಹುಟ್ಟುತ್ತಾನೆ. ಜೊತೆಗಿರುವ ನಾಯಿ ಕರ್ಮದ ಸಂಕೇತ ಎಂಬ ರೀತಿ ತೋರಿಸಿದ್ದಾರೆ. ಆದರೆ ಎಲ್ಲವನ್ನೂ ಬಿಟ್ಟು ಸನ್ಯಾಸಿಯಾಗಿ ಎಲ್ಲವನ್ನೂ ಬಿಟ್ಟು ಹೋಗುವುದೇ ಸರಿ ಎಂಬ ರೀತಿಯಲ್ಲಿ ತೋರಿಸಿದ್ದಾರೆ.
ಅಚ್ಯುತ ಎಂಬ ವಿದ್ಯಾವಂತ ಯುವಕನು ಜನರ ನಂಬಿಕೆಯನ್ನು ನಂಬದೆ ವೈಜ್ಞಾನಿಕ ತಳಹದಿಯ ಮೇಲೆಯೇ ಯೋಚನೆ ಮಾಡುತ್ತಿರುತ್ತಾನೆ ಆದರೆ ಕಾದಂಬರಿಯ ಪ್ರತಿ ಹಂತದಲ್ಲೂ ಆತನಿಗೆ ಸ���ಲಾಗುವ ರೀತಿಯಲ್ಲೇ ಲೇಖಕರು ಕತೆ ಹೆಣೆದಿದ್ದಾರೆ. ಕ್ರೈಸ್ತ ಧರ್ಮದವರು ವೈಜ್ಞಾನಿಕ ತಳಹದಿಯ ಮೇಲೆ ನಮ್ಮ ದೇವರು ಇದ್ದಾನೆ ಎಂದು ಹೇಳುವ ಸಂಗತಿಯನ್ನು ಲೇಖಕರು ವಿಡಂಬನಾತ್ಮಕವಾಗಿ ಚೆನ್ನಾಗಿ ಬರೆದಿದ್ದಾರೆ ಯಾವ ನಂಬಿಕೆಯೂ ವೈಜ್ಞಾನಿಕ ತಳಹದಿಯ ಮೇಲೆ ನಿಲ್ಲುವುದಿಲ್ಲ ಎಂಬುದನ್ನು ಹೇಳಿದ್ದಾರೆ.
ತನ್ನ ಕರ್ಮವನ್ನು ತೀರಿಸಲು ಇತರ ಜೀವಿಗಳಿಗೆ ನೋವು ನೀಡುವ ಜೀವನ ಏತಕ್ಕೆ ಎನ್ನುವ ಚಿಂತೆ ಪುಸ್ತಕ ಮುಗಿಸಿದ ಮೇಲೆ ಬರುತ್ತೆ. ಸನ್ಯಾಸಿಯಾಗಿ ಎಲ್ಲವನ್ನೂ ಬಿಟ್ಟು ಹೋಗುವುದೇ ಸರಿ ಎನ್ನುವಂತ ಸಂದೇಶವನ್ನು ಈ ಪುಸ್ತಕ ನೀಡದೆ ಇದ್ದಿದ್ದರೆ ಬಹುಶಃ ೪.೫ ನಕ್ಷತ್ರ ನೀಡುವಷ್ಟು ಉತ್ತಮ ಪುಸ್ತಕ.
This entire review has been hidden because of spoilers.
This is one of the best books i have read from S L Bhyrappa Sir. This book takes you through a meditative journey. Once i started this book, i was not able to keep it down. This book dwells into What is Karma, how does it follow us through our entire life and after life in some cases and beautifully written by Bhyrappa Sir. I just love the portrayal of each character in the book. Let it be Kshetrapala, Venkamma, Achchappa. Insights that the author provides into a guilty mind of Achchappa, Achyutha are on another level. Insights that Jogayya share or other sanyasis share during this book sometimes make you wonder if the author himself has gone through these experiences. Overall, a thrilling experience reading this book.
This entire review has been hidden because of spoilers.
For a person like me who never lived in a village (though visited frequently), this book gives the actual life of villages and more so in the late 18th or early 19th century when superstitions were order of the day. The tiffle between the minds of the well read son who defies such rules and his mother who lives on the belief that she endorses always has been well narrated. It also touches upon "punarjanma" which has been proven in few instances. Again the story telling aspect is great from SLB sir, touching many social issues which affect mainly the women fraternity in India.
ಪುಸ್ತಕ ಕೈ ಹಿಡಿದ ತಕ್ಷಣ ಮೊದಲು ಬರೋ ಯೋಚನೆ, ಈ ಪುಸ್ತಕಕ್ಕೆ ನಾಯಿ-ನೆರಳು ಅಂತ ಯಾಕೆ ಹೆಸರು ಎಂದು. ಬಹುಶಃ ನೆರಳು ಹೇಗೆ ಮನುಷ್ಯನ ಬೆನ್ನು ಬಿಡುವುದಿಲ್ಲವೋ ಹಾಗೆ ಕರ್ಮ ಕೂಡ ಅನ್ನೋ metaphor ಇರಬಹುದು. ಇನ್ನು ತನ್ನ ಕರ್ಮ ಸವೆಸಲೆಂದೇ ೩ ಬಾರಿ ಹುಟ್ಟುವ ಕ್ಷೇತ್ರಪಾಲನಿಗಿಂತ ಅವನ ಎರಡು ಜನ್ಮದ ಹೆಂಡತಿಯಾಗಿ ವೆಂಕಮ್ಮ ನಮ್ಮ ಗಮನ ಸೆಳಿತಾಳೆ. ಕರ್ಮ ಅನ್ನೊದು comes in full circle ಅಂತ ಈ ಪುಸ್ತಕದ ಕಥೆ ಪ್ರತಿಯೊಂದು ಘಟನೆಯಲ್ಲೂ prove ಮಾಡುತ್ತೆ. ಇನ್ನು ಭೈರಪ್ಪನವರ ಭಾಷೆ, ಸಾಹಿತ್ಯದ ಬಗ್ಗೆ ನಾವು ಹೇಳೋದೇ ಬೇಡ. ಓದುಗನನ್ನು ಆದಿಯಿಂದ ಅಂತ್ಯದವರೆಗೆ ಹಿಡಿದು ಇಡುತ್ತೆ. ಪುಸ್ತಕದ detailed ಪರಿಚಯಕ್ಕಾಗಿ ಈ ವಿಡಿಯೋ ನೋಡಿ. https://youtu.be/KE3w6tqLH0o
In "Naayi Neralu," the emphasis on karma and reincarnation as the central theme may leave unanswered questions for readers who don't believe in life after death. Some find that the narrative defends superstitions, challenging Achyutha's scientific mindset. Despite his eventual disagreement with certain illogical aspects, the book introduces elements, like the dog, that may seem disconnected or rushed. The climax, while exploring unconventional scenes, might feel unnatural in the practical world.
ಕರ್ಮ, ಪುನರ್ಜನ್ಮ ಹಾಗೂ ನಂಬಿಕೆಗಳ ನಡುವೆ ಇರುವ ಚಿಕ್ಕದಾದ ಚೊಕ್ಕದಾದ ಕೃತಿ. ನಮ್ಮ ಪೂರ್ವ ಜನ್ಮದ ಕರ್ಮಗಳು ನೆರಳು & ನಾಯಿಯ ರೂಪದಲ್ಲಿ ಕಾಡುತ್ತವೆ ಅನ್ನುವ ನಂಬಿಕೆ ಇದೆ ಆ ನಂಬಿಕೆಯ ಸುತ್ತವೆ ಈ ಕಥೆ ಸಾಗುತ್ತದೆ.
ಕಥೆಯ ವಸ್ತುವು ಬಹುಶಃ ಮೂಕಜ್ಜಿಯ ಕತೆಗಳು ವಿರುದ್ಧವಾಗಿದೆ, ಮೂಕಜ್ಜಿಯ ಕತೆಗಳಲ್ಲಿ ಎಲ್ಲವನ್ನೂ ತಾರ್ಕಿಕವಾಗಿ ಆಲೋಚಿಸುವಂತೆ ಹಚ್ಚುತ್ತದೆ ಆದರೆ ಈ ಕೃತಿಯಲ್ಲಿ ತರ್ಕಕ್ಕೆ ಜಾಗವಿಲ್ಲ ಬರೀ ನಂಬಿಕೆಯಷ್ಟೇ.
ಅಧ್ಯಾತ್ಮವು ಕಥೆಯ ಪ್ರಮುಖ ವಸ್ತು ಆದರೆ ಅದನ್ನು ಮಲೆಗಳಲ್ಲಿ ಮದುಮಗಳು ಕೃತಿಯಷ್ಟು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡಿಲ್ಲ.
ಕಥೆಯು ಕೆಲವು ಕಡೆ ಅಷ್ಪಷ್ಟ, ನೀವು ಭೈರಪ್ಪ ಅವರ ಅಭಿಮಾನಿ ಆಗಿದ್ದರೆ 168 ಪುಟಗಳ ಈ ಕೃತಿಯನ್ನು ಒಮ್ಮೆ ಓದಲು ಅಡ್ಡಿಯಿಲ್ಲ.
It talks about Reincarnation(Rebirth), Parapsychology and The Karma ಮೂರು ಪೀಳಿಗೆಯಾಗಿ ಕಾಡಿದ ಕರ್ಮವಿದು ಒಂದು ಕರ್ಮ ಕಳಿಯೋಕೆ ಮೂರು ಜನ್ಮಗಳ ಅವಶ್ಯ ಇತ್ತ? . 1. ಅಚ್ಚಣ್ಣಯ್ಯನ ಸುತ್ತಲಿನವರ ಪ್ರಾಚೀನವಾದರೂ ಏನು? ಮುಖ್ಯವಾಗಿ ವೆಂಕಮ್ಮನದೇನು? 2. ಅಚ್ಯುತಾ - ಕ್ಷೇತ್ರಪಾಲರ ನಡುವಣ ವ್ಯತ್ಯಾಸವೇಕೆ ಕಾಣಲಿಲ್ಲ? ಹೀಗೆಯೇ ಬಹಳಷ್ಟು ಪ್ರಶ್ನೆಗಳನ್ಬಿಟ್ಟು ಹೋದ ಬರಹವೇ ನಾಯಿನೆರಳು ಸಾಹಿತ್ಯವೇ ಹಾಗೇ ಯೋಚನೆಗಳನ್ನೊಡ್ದುವಂತದ್ದು, ಉತ್ತರಗಳನ್ನುಡುಕಿಸುವಂತದ್ದು. . Something like this needs a pure discussion. . Many people claim it as aatmagala kathe, but No it is not! ಋಣ ಸಂದಾಯದ ಕಥೆ, ಅಚ್ಯುತನಿಗಿದು ಮರ್ಮದ ವ್ಯಥೆ. ಕೊನೆಗೆ ಋಣ ಸಂದಾಯವಾಯ್ತು! ಕೆಲವಷ್ಟು ಹಾಗೇ ಉಳಿದವು...