ಬುದ್ಧನು ಪರಿನಿರ್ವಾಣ ಹೊಂದಿದಾಗ ಅವನ ಅಸ್ಥಿಯಿಂದ ನಾಲ್ಕು ಹಲ್ಲುಗಳನ್ನು ಸಂಗ್ರಹಿಸಲಾಯ್ತು. ಅದು ಇಂದಿಗೂ ಭದ್ರವಾಗಿದೆ ಎಂದು ನಂಬಲಾಗಿದೆ. ಕಾಳಸಂತೆಯಲ್ಲಿ ಈ ದಂತದ ಬೆಲೆ ಲೆಕ್ಕಮಾಡಲಸಾಧ್ಯ. ಅಲ್ಲದೇ ಬೌದ್ಧಗುರು ಅಶ್ವಘೋಷನ ದಂತಗಳೂ ಇವೆಯಂತೆ. ಅವುಗಳಲ್ಲಿ ಆತನೇ ಅಲೆಗ್ಸಾಂಡರ್ ಬಚ್ಚಿಟ್ಟು ಹೋದ ನಿಧಿಯಿರುವ ಸ್ಥಳದ ನಕ್ಷೆ ಕೊರೆದಿದ್ದಾನಂತೆ. ತನ್ನನ್ನು ತಾನೇ ಅಗ್ನಿಗರ್ಪಿಸಿಕೊಂಡು ಅಶ್ವಘೋಷ ಸಾಧಿಸಿದ್ದೇನು? ಆ ನಿಧಿ ಈಗ ಎಲ್ಲಿದೆ? ಈಗ ಅದರ ಹುಡುಕಾಟದಲ್ಲಿರುವವರು ಯಾರು? ಅಶ್ವಘೋಷನ ಆಸೆಯಂತೆ ನಿಧಿ ಸತ್ಪಾತ್ರರಿಗೆ ಸಂದಿತೇ!?
ಐತಿಹಾಸಿಕ ರೋಚಕ ಘಟನೆಗಳ ಸುತ್ತ ಹೆಣೆಯಲಾದ ಅದ್ಭುತ ಥ್ರಿಲ್ಲರ್ ಕಾದಂಬರಿ ಡಾ.ಕೆ.ಎನ್.ಗಣೇಶಯ್ಯನವರ "ಚಿತಾದಂತ - ಶಾಂತಿದೂತನ ದಂತಯಾನ"
Dr. K.N. Ganeshaiah is an agricultural scientist and professor at the University of Agricultural Sciences, Bangalore. He is also a novelist specializing in thrillers, and writes in the Kannada language.
Education: Ph. D. University of Agricultural Sciences, Bangalore, India, l983 M.Sc. (Agri.) in Genetics & Plant Breeding, UAS, Bangalore, l979 B.Sc (Agri.), University of Agricultural Sciences, Bangalore, l976.
Prof Ganeshaiah has pioneered a new style of writing novels and short stories in Kannada that seamlessly mixes facts and fiction in the form of thrillers. Through this style, his writings have captured a new generation of readers in Kannada contributing to the growth of story writing in Kannada.
Though an agriculture scientist, his novels and stories bring to the reader, the lesser-known and hidden facts of history along with science. Some of his novels are also aimed at bringing the most complicated elements of science to the general reader.
Recognizing the novelty in the style of writing, he was awarded Kannada Sahitya Academy Datti Award for his novel Kanaka Musuku, which combines both history and science. As some experts have inferred, his thrillers have drawn a large number of new readers to Kannada.
In recognition of his novel contribution to Kannada Literature, Prof Ganeshaiah has also been honored with the Honorary President of Kolar District Sahitya Parishat during 2013
Prof Ganeshaiah has written Nine novels, and 41 short/long stories (in eight collections) and over 63 essays in the areas related Science and Society. His recent book Sasya Sagga on the wonders of plant life as told through his own journey in the field of botany and evolution has attracted your readers. Several of his novels and stories were serialized in Kannada Weekly Magazines
My third book of K N Ganeshaiah after ಕನಕ ಮುಸುಕು & ಕಪಿಲಿಪಿಸಾರ. A bit longer than the other two, but keeps you hooked till the end if you fancy history mixed with some fiction. The difference I found compared with the other two I have read is that the history is dug deep here. One that involves treasures and hunt for it always keeps me in check, I keep turning page after page. Present day story is linear and continuously focusses on a murder and around it unlike the other two books whose present day stories are branched. The most intriguing part is from where 2 of the leads climb on a mountain, drop down inside a cave and come out of it. Also, the last few pages are unexpected part of the story, a turnaround I least expected but felt contented. Must read.
ಗಣೇಶಯ್ಯನವರ ಸಂಶೋಧನಾತ್ಮಕ ಶೈಲಿಯಲ್ಲಿರುವ ಮತ್ತೊಂದು ಪುಸ್ತಕ. ಬೌದ್ಧ ಧರ್ಮದ ಬಗೆಗಿನ ಅಪೂರ್ವ ಮಾಹಿತಿಗಳನ್ನು ಕಾದಂಬರಿಯಲ್ಲಿ ಹೇಳಿದ್ದಾರೆ. ಅಲೆಕ್ಸಾಂಡರ್ ಹುದುಗಿಟ್ಟ ಅಪೂರ್ವ ಸಂಪತ್ತಿನ ಹುಡುಕಾಟ ಮತ್ತು ಬುದ್ಧನ ನಿಜವಾದ ಹಲ್ಲಿನ ಬಗೆಗಿನ ಸಂಶೋಧನೆ ಮಾಡುವ ಪೂಜಾ, ರಚಿತಾ, ಸುಹಾಸ್ ಇಲ್ಲಿಯ ಮುಖ್ಯ ಭೂಮಿಕೆ. ಆಡಿಬಲ್ ಆ್ಯಪಲ್ಲಿ ಧ್ವನಿ ರೂಪದಲ್ಲಿ ಕೇಳಿದ ಮೊದಲ ಪುಸ್ತಕವಿದು. ಪುಸ್ತಕ ಓದಿದಷ್ಟು ಮನಸ್ಸಿಗೆ ನಾಟದಿದ್ದರೂ, ಪ್ರಯಾಣಿಸುವಾಗ ಸಮಯ ಕಳೆಯಲು ಉತ್ತಮ ದಾರಿ.
ನನ್ನ ಅಚ್ಚುಮೆಚ್ಚಿನ ಲೇಖಕರಲ್ಲಿ ಕೆ.ಎನ್. ಗಣೇಶಯ್ಯ ಸಹ ಒಬ್ಬರು. ಅವರ 'ಕರಿಸಿರಿಯಾನ' ಕಾದಂಬರಿಯನ್ನು ಹಿಂದೆ ಓದಿದ ಬಳಿಕ ಅವರ ಎಲ್ಲಾ ಕೃತಿಗಳನ್ನು ಓದಬೇಕೆಂಬ ಆಸೆ ಮೂಡಿತು. ಕಳೆದ ನವೆಂಬರ್ ತಿಂಗಳಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದವರ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಅವರ ಜೊತೆ ನಡೆದ ಸಂವಾದವನ್ನು ಫೇಸ್ಬುಕ್ನಲ್ಲಿ ನೋಡಿದ್ದೆ. ಆಗ ಈ ವೆಬ್ ಸಿರೀಸ್ ಕಾಲದಲ್ಲಿ ನಿಮ್ಮ ಒಂದು ಕಾದಂಬರಿಯನ್ನು ವೆಬ್ ಸಿರೀಸ್ ಮಾಡುವುದಾದರೆ ಯಾವ ಕೃತಿಯನ್ನು ಸೂಚಿಸುವಿರಿ ಎಂಬ ಪ್ರಶ್ನೆಗೆ ಅಳೆದೂ ತೂಗಿ ಚಿತಾದಂತ ಕಾದಂಬರಿಯನ್ನು ಸೂಚಿಸಿದರು. ತಕ್ಷಣವೇ ಆ ಕೃತಿಯನ್ನು ನನ್ನ ಓದಿನ ಪಟ್ಟಿಗೆ ಸೇರಿಸಿಕೊಂಡೆ.
ಗಣೇಶಯ್ಯನವರು ನನಗೆ ಇಷ್ಟವಾಗಲು ಕಾರಣ ಅವರು ಒಂದು ಕೃತಿಯನ್ನು ಹೊರತರುವ ಮುಂಚೆ ಮಾಡಿಕೊಳ್ಳುವ ತಯಾರಿ. ಅವರ ಕೃತಿಗಳನ್ನು ಓದುವಾಗ ಅಡಿಟಿಪ್ಪಣಿಗಳಾಗಿ ಉಲ್ಲೇಖಿಸುವ ಗ್ರಂಥಗಳು, ಐತಿಹಾಸಿಕ ಘಟನೆಗಳನ್ನು ಹೊಸ ದೃಷ್ಟಿಕೋನದಿಂದ ವಿಶ್ಲೇಷಿಸುವ ಪರಿ, ಉಪಯೋಗಿಸುವ ರಹಸ್ಯ ಸೂಚಕ ಚಿಹ್ನೆಗಳು, ಓದುಗರಿಗೆ ಅರ್ಥವಾಗುವ ಹಾಗೆ ಅದನ್ನು ಬಿಡಿಸಿ ಹೇಳುವ ರೀತಿ, ಅವುಗಳನ್ನು ವರ್ತಮಾನದೊಂದಿಗೆ ಸಮೀಕರಿಸಿ ತಾಳೆ ಮಾಡುವ ಬಗೆ ಬೆರಗು ಮೂಡಿಸುತ್ತದೆ. ಕೆಲವೊಂದು ಬಾರಿ ನಾವು ಓದಿದ ಇತಿಹಾಸವೇ ತಪ್ಪಿರಬಹುದೇನೋ ಎಂಬಂತಹ ವಿಚಾರಗಳು ಸುಳಿಯಲಾರಂಭಿಸುತ್ತವೆ. ಕಾದಂಬರಿಯಲ್ಲಿ ಸಮಯ ಮತ್ತು ಸ್ಥಳವನ್ನು ಅಧ್ಯಾಯದ ಮೊದಲಲ್ಲಿ ಹೇಳುವುದು ಅವರು ಇನ್ನೊಂದು ವಿಶೇಷತೆ. ಹಾಗಾಗಿ ಓದುವಾಗ ಕೃತಿಯ ಕಾಲಮಾನ ಮತ್ತು ಸ್ಥಳ ವಿವರಗಳ ಹಿನ್ನೆಲೆಯಲ್ಲಿ ಅವರು ಮಂಡಿಸುವ ವಿಚಾರಗಳು ಸ್ಪಷ್ಟವಾಗಿ ಮನದೊಳಗೆ ಇಳಿಯಲು ಸಹಕಾರಿಯಾಗುತ್ತದೆ. ಅವರ ಮೇಲಿರುವ ಒಂದು ಆರೋಪವೆಂದರೆ ಎಲ್ಲಾ ಕೃತಿಗಳ ಅಂತ್ಯ ಒಂದೇ ತರಹ ಮಾಡುತ್ತಾರೆ ಎಂಬುದು. ಆದರೆ ಅವರ ತಯಾರಿ ಮತ್ತು ಒದಗಿಸುವ ಐತಿಹಾಸಿಕ ಆಧಾರಗಳ ಮೇಲೆ ಹೆಚ್ಚು ಗಮನಹರಿಸುವುದರಿಂದ ನನ್ನ ಮಟ್ಟಿಗೆ ಈ ಆರೋಪ ನಗಣ್ಯ.
ಇನ್ನು ಚಿತಾದಂತ ಕೃತಿಯ ಬಗ್ಗೆ ಹೇಳುವುದಾದರೆ, ಅಲೆಕ್ಸಾಂಡರ್ ಭಾರತದ ಮೇಲೆ ದಾಳಿ ನಡೆಸಿ ಲೂಟಿ ಹೊಡೆದು ಇಲ್ಲಿಯೇ ಬಿಟ್ಟು ಹೋದ ನಿಧಿಯ ಶೋಧ ಕೃತಿಯ ಮೂಲದ್ರವ್ಯ. ಅಂತಾರಾಷ್ಟ್ರೀಯ ಭೂಗತ ಜಗತ್ತಿನ ಕಣ್ಣು ಅದರ ಮೇಲೆ. ಇದನ್ನು ರಕ್ಷಿಸಿಕೊಳ್ಳುವ ಹೊಣೆ ಭಾರತೀಯರ ಮೇಲೆ. ಈ ಒಂದೆರಡು ಎಳೆಗಳನ್ನು ಇಟ್ಟುಕೊಂಡು ಲೇಖಕರು ಗೌತಮಬುಧ್ಧ, ಅಶ್ವಘೋಶ, ಚಾಣಕ್ಯ, ನಂದರ ಅಮಾತ್ಯ ರಾಕ್ಷಸ, ಚಕ್ರವರ್ತಿ ಅಶೋಕ, ಜವಾಹರಲಾಲ್ ನೆಹರು, ಟಿಬೆಟಿಯನ್ನರ ಧರ್ಮಗುರು ದಲಾಯಿಲಾಮಾ ಮುಂತಾದ ಐತಿಹಾಸಿಕ ವ್ಯಕ್ತಿಗಳ ಮೂಲಕ ಕಥೆಯನ್ನು ಹೆಣೆಯುತ್ತಾ ಪುಟಪುಟದಲ್ಲೂ ರೋಚಕತೆಯನ್ನು ಉಂಟು ಮಾಡುತ್ತಾರೆ. ಬುದ್ಧನ ದಂತ, ಅಶ್ವಘೋಶರ ದಂತಗಳ ಸುತ್ತ ಇರುವ ನಂಬಿಕೆಗಳು ಹಾಗೂ ರಹಸ್ಯಗಳು….., ಅಲೆಕ್ಸಾಂಡರ್ ಬಚ್ಚಿಟ್ಟುಹೋದ ನಿಧಿಯ ಕುರಿತಾದ ಸಿಕಂದರನ ಡೈರಿ….., ಹಿಂದೂಕುಶ್ ಕಣಿವೆಗೆ ಆ ಹೆಸರು ಬರಲು ಕಾರಣ, ಅಲ್ಲಿನ ಕಲಾಷ್ ಜನಾಂಗದವರ ಮೂಲಪುರುಷ ಯಾರು….., ಸ್ಕಾಟ್ಲೆಂಡ್ ನಲ್ಲಿ ದೊರೆತ ನ್ಯೂಟನ್ ಸ್ಟೋನ್ ಮತ್ತು ಅಲೆಕ್ಸಾಂಡರ್ ನಿಧಿಗೆ ಇರುವ ಸಂಬಂಧವೇನು….., ಬುದ್ಧನ ಹಲ್ಲುಗಳು ಇಂದಿಗೂ ಇವೆಯೋ…., ಬೌದ್ಧ ಧರ್ಮದ ತೇರವಾದಿ ಪಂಗಡ ಜನ್ಮ ತಾಳಿದ ಬಗೆ ಮತ್ತು ಅವರ ಮೂಲ ಉದ್ದೇಶವೇನು…., ಅಶೋಕ ಚಕ್ರವರ್ತಿ ಕಳಿಂಗ ಯುದ್ಧದ ನಂತರ ಯುದ್ಧವನ್ನು ಸಂಪೂರ್ಣವಾಗಿ ತ್ಯಜಿಸಲು ಅನ್ಯ ಕಾರಣಗಳೇನಾದರೂ ಇರಬಹುದೇ….. ಅಶೋಕನಿಂದ ನಿರ್ಮಿತವಾದ ನರಕದ ಕುರಿತಾಗಿ ಇತಿಹಾಸಕಾರರ ನಿಲುವೇನು…… ಅಶೋಕನ ಧರ್ಮಚಕ್ರ ಮತ್ತು ಅಲೆಕ್ಸಾಂಡರನ ಸ್ಟಾರ್ ಬರ್ಸ್ಟ್ ಚಿನ್ಹೆಗೆ ಇರುವ ಸಾಮ್ಯತೆ ಮತ್ತು ವ್ಯತ್ಯಾಸಗಳು….., ಅಶೋಕ ಸ್ತಂಭದಲ್ಲಿ ಸಿಂಹದ ಲಾಂಛನ ಏಕಿರಬಹುದು..,, ಜವಾಹರಲಾಲ್ ನೆಹರು ಅಶೋಕನ ಧರ್ಮಚಕ್ರವನ್ನು ನಮ್ಮ ಬಾವುಟದಲ್ಲಿ ಬಳಸಿಕೊಂಡಿದ್ದಕ್ಕೆ ಏನಾದರೂ ವಿಶೇಷವಾದ ಅರ್ಥಗಳಿವೆಯೇ….ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರವನ್ನು ಐತಿಹಾಸಿಕ ಆಧಾರಗಳ ಮೂಲಕ ಕಂಡುಕೊಳ್ಳುವ ರೀತಿ ಪುಸ್ತಕವನ್ನು ಕೆಳಗಿಡದಂತೆ ಓದಿಸಿಕೊಂಡು ಹೋಗುತ್ತದೆ….. ಪಾತ್ರಗಳ ಮನೋಸ್ಥಿತಿ ಮತ್ತು ಮನುಷ್ಯ ಸಂಬಂಧಗಳ ಕುರಿತಾದ ಯಾವ ವಿವರಣೆಯಾಗಲಿ ಇಲ್ಲಿ ಕಂಡುಬರುವುದಿಲ್ಲ. ಒಂದು ತರಹ ಸ್ಪೆಷಲ್ ಆಪರೇಷನ್ ಗೆ ನಿಯೋಜಿತರಾದ ಯೋಧರು ತಮ್ಮ ಗುರಿಯನ್ನು ತಲುಪಿ ಸುರಕ್ಷಿತವಾಗಿ ಹಿಂದಿರುಗುವುದರ ಬಗ್ಗೆ ಮಾತ್ರ ಗಮನಹರಿಸಿದಂತೆ ಇಲ್ಲಿನ ಪಾತ್ರಗಳಿವೆ.
ಲೇಖಕರು ಮುನ್ನುಡಿಯಲ್ಲಿ ಹೇಳಿರುವಂತೆ "ಕಲ್ಪನೆಯನ್ನು ಸತ್ಯದಿಂದ ಬೇರ್ಪಡಿಸುವ ಕಲೆಯನ್ನು ಓದುಗರು ಒಂದು ರಂಜನಾ ಕ್ರಮವಾಗಿ ಪರಿಗಣಿಸಲಿ" ಎಂಬ ಆಶಯದ ಹಿನ್ನೆಲೆಯಲ್ಲಿ ಈ ಕೃತಿಯನ್ನು ಓದಿ ಯಾವುದು ಸತ್ಯ ಮತ್ತು ಯಾವುದು ಕಲ್ಪನೆ ಎಂಬುದನ್ನು ಓದುಗರೇ ನಿರ್ಧರಿಸಿದರೆ ಉತ್ತಮ.
Thriller mystery. Though it is fiction, it feels as if everything is real. Keeps you gripped to the book until last word. Great work in keeping the suspense and curiosity till end.
ಇದೊಂದು ಇತಿಹಾಸವನ್ನು ಆಧರಿಸಿದ ರೋಚಕ ಕಥೆ. ಕಾದಂಬರಿಯುದಕ್ಕು ಇತಿಹಾಸದ ಪುರಾವೆಯನ್ನು ಕೊಡುತ್ತ ಕಥೆಯನ್ನು ಮುಂದುವರಿಸುವ ಕಾದಂಬರಿಕಾರರ ವಿಶಿಸ್ಟ ಬರವಣಿಗೆಯ ಶೈಲಿ ಅದ್ಭುತವಾಗಿದೆ. ಕ್ರಿಸ್ತಪೂರ್ವದಿಂದ ಆಧುನಿಕ ಕಲಾದವರಿಗೂ ವ್ಯಾಪಿಸುವ ಈ ಕಥೆ, ಒಂದು ನಿಧಿಯ ಹುಡುಕಾಟದಲ್ಲಿರುವ ಒಂದು ಗುಂಪು ಮತ್ತು ಅದನ್ನು ಕಾಪಾಡುವ ಮತ್ತೊಂದು ಇತಿಹಾಸ ತಜ್ಞ್ಯರ ನಡುವೆ ಮೂಡುವ ಕಥೆ . ಇತಿಹಾಸದಲ್ಲೂ ಆಸಕ್ತಿ ಇರುವರು ಈ ಕಾದಂಬರಿಯನ್ನು ಓದಲೇ ತಕದ್ದು.
Very fast paced thriller novel...pure Cinema or webseries materials.. ಇನ್ನೂ ಯಾಕೆ ಯಾವುದೇ ನಿರ್ದೇಶಕರು ಇದರ ಮೇಲೆ ಸಿನಿಮಾ ಮಾಡಿಲ್ಲ ಅಂತ ನನ್ನ ಪ್ರಶ್ನೆ....ಓದಿ..ಚೆನ್ನಾಗಿ ಇದೆ.
ಅಲೆಕ್ಸಾಂಡರ್ ಯುದ್ಧದಲ್ಲಿ ಗೆದ್ದ ಅಪಾರ ಸಂಪತ್ತನ್ನು ತಾಯ್ನಾಡಿ��ೆ ತೆಗೆದುಕೊಂಡು ಹೋಗಲು ವಿಫಲನಾಗಿದ್ದ. ಹಾಗಿದ್ದರೆ ಆ ಸಂಪತ್ತು ಏನಾಯಿತು? ಆಸೆಯೆ ದುಃಖಕ್ಕೆ ಮೂಲ ಎನ್ನುವ ಬೌದ್ಧಧರ್ಮ ವಿಶ್ವದಾದ್ಯಂತ ಪಸರಿಸಿದ್ದಾದರೂ ಹೇಗೆ? ಬುದ���ದನ ಅವಶೇಷವಾಗಿ ಉಳಿದಿರುವ ಆತನ ದಂತ ನಿಜಕ್ಕೂ ಆತನದೇ? ಬೌದ್ಧದರ್ಮದ ನಿಷ್ಠಾಸೇವಕರಾಗಿರುವ ತೇರವವಾದಿಗಳು ಅಂದರೆ ಯಾರು? ಇನ್ನು ಹಲವು ಪ್ರಶ್ನೆಗಳು ನಿಮ್ಮಲ್ಲಿ ಇರಲೂ ಬಹುದು ಇಲ್ಲದೆಯೂ ಇರಬಹುದು. ಒಂದೊಮ್ಮೆ ಇಲ್ಲಾ ಎಂದಾದರೂ ಈ ಕಾದಂಬರಿಯನ್ನು ಓದಲು ಪ್ರಾರಂಭಿಸಿದ ನಂತರ ಈ ಪ್ರಶ್ನೆಗೆ ಉತ್ತರ ಹುಡುಕಲು ಶುರುಮಾಡುತ್ತೀರಿ. ಆ ಕುತೂಹಲವೇ ನಿಮ್ಮನ್ನು ಕಾದಂಬರಿಯ ಕೊನೆಯ ಪುಟದವರೆಗೂ ಓದುವ ಹಾಗೆ ಮಾಡುತ್ತದೆ. ಗಣೇಶಯ್ಯ ಅವರಿಂದ ಮತ್ತೊಂದು ಅದ್ಭುತ ಕಾದಂಬರಿ. ಇದರಲ್ಲಿ ಯಾವುದು ನಿಜ ಯಾವುದು ಲೇಖಕನ ಕಲ್ಪನೆ ಎಂದು ವಿಂಗಡಿಸುವುದೇ ಕಷ್ಟ ಎಕೆಂದರೆ ಇದನ್ನು ಬರೆದ ರೀತಿ ಹಾಗಿದೆ.
ಗಣೇಶಯ್ಯ ಅವರ ಮತ್ತೊಂದು ರೋಚಕ ಕಾದಂಬರಿ ಚಿತಾದಂತ. ಬೌದ್ಧ ಧರ್ಮದ ದಂತಕಥೆಗಳು, ಅದರ ಕುರಿತಾದ ಅನೇಕ ವಿವರಗಳು, ಬೌದ್ಧ ಧರ್ಮದ ಪ್ರಭಾವಕ್ಕೆ ಒಳಗಾದ ಶ್ರೀಲಂಕಾ ಟಿಬೆಟ್ ಹಾಗೂ ಭಾರತದ ಕುರಿತಾದ ವಿಚಾರಗಳ ವಿವರಣೆ ನಾಜೂಕಾಗಿದೆ. Alexanderನ ದಾಳಿಯ ಪರಿಣಾಮ ಹಿಂದೂ ಹಾಗೂ ಬೌದ್ಧ ಧರ್ಮದ ಮೇಲೆ ಹೇಗಾಯ್ತು, Alexander ನ ನಿಧಿ, ಸ್ವಾತಂತ್ರ್ಯದ ವಿಭಾಗೀಕರಣದ ಸಮಯದಲ್ಲಿ ಈ ನಿಧಿಯ influence ಇವೆಲ್ಲವುಗಳ ವಿವರಣೆಯನ್ನ ತಕ್ಕ ಪುರಾವೆ ಜತೆ ಹೇಳ್ತ ಒಂದು fictionous suspense create ಮಾಡಿದ್ದಾರೆ. ಓದಿ ಮುಗಿಸುವ ತನಕ book ಕೆಳಗಿಡಕೆ ಮನ್ಸ್ ಆಗದೇ ಇರೋ ಅಷ್ಟ್ ಚೆನ್ನಾಗಿದೆ 😊
ಹೆಸರೇ ಎಷ್ಟು ಹೊಸತು! ತುಂಬಾ ಜನ ಪ್ರಾಯಶಃ ಕೇಳಿರಿಲಕ್ಕಿಲ್ಲ. ಹೊಸದೊಂದು ಎಳೆಯ ಹಿಡಿದು ಹೆಣೆದ ಕಾದಂಬರಿ. ಅಲೆಕ್ಸಾಂಡರ್‌ನಿಂದ ಹಿಡಿದು ಮೌರ್ಯರ ಅಶೋಕನ ಕಾಲದವರೆಗೂ ಒಂದೊಂದೇ ಡಾಟ್‌ಗಳನ್ನು ಜೋಡಿಸುತ್ತಾ ಒಂದು ಕ್ಷಣ ಇದು ಸತ್ಯವಿರಬಹುದಾ ಎಂದನಿಸಿನಿಡುತ್ತದೆ. ಸತ್ಯವಿರಬಹುದು, ಇತಿಹಾಸವನು ತಿರುಚಿರಬಹುದು, ಧರ್ಮಗಳನ್ನು ತಪ್ಪಾಗಿ ಬಿಂಬಿಸಿರಬಹುದು! ಅದರ ಬಗ್ಗೆ ಚರ್ಚೆ ಮಾಡುವಷ್ಟು ಪ್ರಾಜ್ಞನಲ್ಲ. ಆ ಎಲ್ಲಾ ವಿಷಯಗಳನ್ನು ಬದಿಗಿಟ್ಟು ಸುಮ್ಮನೆ ಓದಿದರೆ ಮೈ ನವಿರೇಳಿಸುವಂತಹ ತಿರುವುಗಳಿವೆ. ಮುಖಪುಟದಲ್ಲೇ ಇದೆ ನೋಡಿ "ರೋಚಕ ಕಾದಂಬರಿ" ಅಂತಾ!
ಕಾದಂಬರಿ ತೆರೆದುಕೊಳ್ಳುವ ರೀತಿಯಲ್ಲೇ ಇದರಲ್ಲಿರುವ ವಿಷಯ ಬಹಳ ಗಹನವಾದದ್ದು ಅನಿಸುತ್ತದೆ. ಅಲೆಕ್ಸಾಂಡರ್, ಬುದ್ಧ, ಅಶ್ವಘೋಷ, ಅಮಾತ್ಯ ರಾಕ್ಷಸ, ನೆಹರೂ, ದಲಾಯ್‌ಲಾಮಾ, ಅಶೋಕ ಸೇರಿದಂತೆ ಬಹಳಷ್ಟು ಐತಿಹಾಸಿಕ ಪಾತ್ರಗಳು, ಐತಿಹಾಸಿಕ ಕುರುಹುಗಳು, ಬ್ರಾಹ್ಮಿ ಲಿಪಿ ಇನ್ನೂ ವಿಶೇಶಾತಿ ವಿಶೇಷಗಳನ್ನು ಪೋಣಿಸಿದಂತೆ ಬರೆದಿರುವ ಈ ಕಾದಂಬರಿ ಸತ್ಯವಾಗಿಯೂ ವರ್ಥ್ ರೀಡಿಂಗ್.
ಅಲೆಕ್ಸಾಂಡರ್ ಅಂದಿನ ಸಿಂಧೂ ನದಿಯ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡು ಆ ಅಗಾಧ ಸಂಪತ್ತನ್ನು ಹೊತ್ತೊಯ್ಯಲಾರದೇ ಅಶ್ವಘೋಷ ಎಂಬ ಋಷಿಯ ಸಲಹೆಯಂತೆ ಅದನ್ನು ಗೌಪ್ಯವಾಗಿ ಇರಿಸಲು ನಿರ್ಧರಿಸುತ್ತಾನೆ. ಅಲೆಕ್ಸಾಂಡರ್ ಕೊಲ್ಲುತ್ತಾನೆ ಎಂದು ತಿಳಿದ ಋಷಿಯು ಅದರ ಗುಟ್ಟನ್ನು ಅವನಿಗೆ ಹೇಳದೇ ಚಿತೆಗೆ ಹಾರಿ ಅಮಾತ್ಯ ರಾಕ್ಷಸನಿಗೆ ಈ ಗುಟ್ಟನ್ನು ತಿಳಿಸುತ್ತಾನೆ. ಸಾವಿರಾರು ವರ್ಷಗಳ ನಂತರ ಈ ನಿಧಿಯನ್ನು ಲೂಟಿ ಮಾಡಲು ಒಂದು ಮಾಫಿಯಾ ಇದನ್ನು ಕದಿಯಲು ಪ್ರಯತ್ನಿಸುವುದು ಕಾದಂಬರಿಯ ಒಡಲು.
ಈ ಕಾದಂಬರಿಯ ಮತ್ತಷ್ಟು ವಿಶೇಷವೆನಿಸುವುದು ಇದರ ಲಾಗ್‌ನಲ್ಲಿ. ಪ್ರತಿಯೊಂದು ಸನ್ನಿವೇಶವನ್ನು ದಿನಾಂಕ ಮತ್ತು ಸಮಯದೊಂದಿಗೆ ಶುರು ಮಾಡುವುದು ಓದುಗನಿಗೆ ಒಂದು ರೀತಿಯ ಟ್ರ್ಯಾಕಿಂಗ್ ಸಿಸ್ಟಮ್ ಅನ್ನು ಸೃಷ್ಟಿಸುತ್ತದೆ. ಕ್ರಿಸ್ತಪೂರ್ವದವರೆಗೂ ಹೋಗುತ್ತದೆ ಈ ಕಾದಂಬರಿ. ಬುದ್ಧನ ಕಾಲದವರೆಗೂ!
ಇಷ್ಟಲ್ಲದೇ ಅಜೈವಿಕರ ಬಗ್ಗೆ ಮಾತನಾಡುತ್ತದೆ, ಅಶ್ವಿನಿ ಮತ್ತು ಅಘೋರಿಗಳ ಬಗ್ಗೆಯೂ ಉಲ್ಲೇಖವಿದೆ. ಕಲಾಷರೆಂಬ ಜನಾಂಗದ ಉಲ್ಲೇಖವಿದೆ. "ತೇರವಾದಿಗಳು" ಅಂದರೆ ಬೌದ್ಧ ಧರ್ಮವು ರಾಜಕೀಯದೊಂದಿಗೆ ಬೆರೆತಾಗ ಅದರ ತತ್ತ್ವಗಳನ್ನು ಕಾಪಾಡಲು ಹುಟ್ಟಿಕೊಂಡ ಪಂಥ. ಅವರ ಬಗ್ಗೆ ಹೇರಳವಾಗಿ ತಿಳಿಸಿದ್ದಾರೆ. ಬುದ್ಧನ ಮೂರ್ತಿಯು ಗ್ರೀಕರ ದೇವರನ್ನು ಹೋಲುತ್ತದೆ ಅಂತಾ ಬರೆದಿದ್ದಾರೆ. ಪುಸ್ತಕದ ಪ್ರಕಾರ ಬುದ್ದನಿಗೆ ಮೂರ್ತಿಯಂತೆ ಆರಾಧಿಸಿಕೊಳ್ಳುವುದು ಇಷ್ಟವಿರಲಿಲ್ಲವಂತೆ. ಕ್ರಮೇಣ ಗ್ರೀಕರ ದೇವರಂತೆ ಕೂದಲು ಮತ್ತು ನಿಲುವಂಗಿಯನ್ನು ತೊಟ್ಟಿರುವ ಬುದ್ದನ ಸಿದ್ದರಾದರಂತೆ. ಎಷ್ಟು ಸತ್ಯ ಸುಳ್ಳು ತಿಳಿಯೇನು.
ಪುಸ್ತಕದ ಮುಖ್ಯ ಭೂಮಿಕೆಯಲ್ಲಿ ಬರುವ ಡಾ. ಪೂಜಾ, ರಚಿತಾ, ಸುಹಾಸ್ ಮತ್ತು ರಾಜೇಶ್ ಕೂಡ ನಮ್ಮ ನಿಮ್ಮಲ್ಲಿ ಒಬ್ಬರಂತೆ ಕಾಣುತ್ತಾರೆ. ಅವರು ಈ ವಿಷಯಗಳನ್ನು ಭೇದಿಸುವ ರೀತಿ ರೋಚಕತೆಯ ಅಡಿಷನಲ್ ಮಸಾಲೆಯನ್ನು ಸೇರಿಸಿ.
ಅಂದ ಹಾಗೇ ಅವನೇ ಶ್ರೀಮನ್ನಾರಾಯಣ ಸಿನಿಮಾವೂ ನೆನಪಾಗಬಹುದು!ಸಮಯ ಸಿಕ್ಕರೆ ಓದಿ. ಸಾಮಾನ್ಯರಂತೆ! ಇಷ್ಟವಾಗಬಹುದು. ಓದಿದ್ದರೆ ನಿಮ್ಮ ಅಭಿಪ್ರಾಯ ನನ್ನೊಂದಿಗೂ ಹಂಚಿಕೊಳ್ಳಿ.
ಗಣೇಶಯ್ಯನವರ ‘ಚಿತಾದಂತ’ ಓದಿದ ಮೇಲೆ ನಾನವರ ಸಾಹಿತ್ಯ ಹಾಗು ನಿರೂಪಣೆಯ ಪಕ್ಕಾ ಅಭಿಮಾನಿಯಾದೆ ಎಂದೇ ಹೇಳಬಹುದು.
ಬುದ್ಧನ ನಿರ್ವಾಣದ ನಂತರ, ಬುದ್ಧನ ನೆನಪಿಗಾಗಿ ರಾಜರ ಕೈಸೇರುವ ಆತನ ಒಂದು ದಂತ, ಕಾಲಕ್ರಮೇಣ ಎಷ್ಟೋ ರಹಸ್ಯಗಳಿಗೆ, ಹೋರಾಟಗಳಿಗೆ, ಸಾವು – ನೋವುಗಳಿಗೆ ನಾಂದಿ ಹಾಡುತ್ತದೆ. ಇಂತಹುದೇ ಒಂದು ಸಾವಿನ ಸತ್ಯಾನ್ವೇಷೆಯ ಕತೆಯೇ ‘ಚಿತಾದಂತ’.
ಒಂದೆರಡು ಪುಟ ಓದಿ ಸಾಕು, ಪೂರ್ತಿ ಪುಸ್ತಕ ಓದದೇ ಕೈಬಿಡಲು ಸಾಧ್ಯವೇ ಇಲ್ಲ.
– ಪುಸ್ತಕ ಪ್ರಿಯೆ, ಪ್ರಿಯ ಕರ್ಜಿಗಿ To read my fully honest opinion on this book, please check out the link below..
Again it's a blend of history and mystery but at par excellence.unike KARISIRIYAANA this book's climax is satisfying. ದಳದ ಮಳಿಗಾವ (sacred temple in Sri Lanka) ಇಂದ ಅಶೋಕನ ಕಳಿಂಗ ಯುದ್ಧದವರೆಗು ಇತಿಹಾಸದ ಅಮೋಘ ವಿಷಯಗಳನ್ನು ಹೇಳುತ್ತಾ ರೋಚಕತೆ ಕಾಪಡಿಕೊಳ್ಳುತ್ತದೆ. Very good book, just go for it.
Very good book with a gripping story. The story is well linked from 4 different time periods and it gives a good insight of many things about the history. Its fiction but very interesting thou.
One of the excellent books that i hv red in the recent past.. liked very much on the way the story is narrated and the references provided at every stage
*ಚಿತಾದಂತ* ಕೆ.ಎನ್.ಗಣೇಶಯ್ಯನವರ ಮತ್ತೊಂದು ರೋಚಕ ಕಾದಂಬರಿ ಚಿತಾದಂತ. ಈ ಕಾದಂಬರಿಯಲ್ಲಿ ಬೌದ್ಧ ಧರ್ಮಕ್ಕೆ ಸಂಬಂಧಪಟ್ಟ ಎಷ್ಟೋ ದಂತಕಥೆಗಳು ಒಳಗೊಂಡಿವೆ. ಬುದ್ಧನ ದಂತ ಹಾಗೂ ಅಶ್ವಘೋಶನ ದಂತದ ಕುರಿತು, ಸಿಕಂದರನ ಸಿರಿ ಬಗ್ಗೆ, ಅಲೆಕ್ಸಾಂಡರ್ ಬಚ್ಚಿಟ್ಟಿದ್ದ ನಿಧಿಯ ಬಗ್ಗೆ, ಅಶೋಕನ ಧರ್ಮಚಕ್ರದ ಬಗ್ಗೆ, ನ್ಯೂಟನ್ ಸ್ಟೋನ್ ಬಗ್ಗೆ ಇನ್ನೂ ಹಲವಾರು ವಿಶಯಗಳ ಬಗ್ಗೆ, ಒಂದಕ್ಕೊಂದು ಒಂದು ಸಂಬಂಧವಿದೆ.
ಕಥೆಗೆ ಮೂಲವೇ ಶಾಲಿನಿಯ ಪಾತ್ರ. ಹಠಾತ್ತಾಗಿ ಶಾಲಿನಿಯನ್ನು ಕೊಲ್ಲುತ್ತಾರೆ, ಶಾಲಿನಿಯ ಮೊಬೈಲಿನಲ್ಲಿ ಪೂಜಾ ಹಾಗು ಪೂಜಾಳ ಶಿಷ್ಯೆ ರಚಿತಾಳ ಚಿತ್ರವಿದ್ದು, ಅವರನ್ನು ಸಿ.ಬಿ.ಐ ರವರು ಬಂಧಿಸಿ ಶಾಲಿನಿಯ ಹತ್ಯೆಯ ಬಗ್ಗೆ ಶೋಧೆ ನಡೆಸುತ್ತಾರೆ. ಆ ಸಂಶೋಧನೆಯಲ್ಲಿ ಅವರಿಗೆ ಶಾಲಿನಿಯು ಶ್ರೀಲಂಕಾದ ಕ್ಯಾಂಡಿಯಲ್ಲಿರುವ ಬುದ್ಧನ ದೇವಸ್ತಾನವನ್ನು ವೀಕ್ಷಿಸಿದ್ದು ಅದಕ್ಕೆ ಕಾರಣ ಅಲ್ಲಿರುವ ದೇವಾಲಯದಲ್ಲಿ ನಿಜವಾದ ಬುದ್ಧನ ದಂತವಿದೆಯೆ ಎಂದು ಖಚಿತ ಪಡಿಸಿಕೊಳ್ಳುವುದಕ್ಕೂ ಮತ್ತು ಇನ್ನತರೆ ಕಾರಣಗಳೂ ಕೂಡ. ನಿಜವಾದ ಬುದ್ಧನ ದಂತ ಶ್ರೀಲಂಕಾದ ಕ್ಯಾಂಡಿಯಲ್ಲಿದೆಯೋ, ಅಥವಾ ಚೀನಾ ದೇಶದಲ್ಲೋ ಅಥವಾ ಟಿಬೆಟಿನಲ್ಲೋ ಎಂಬುವುದನ್ನು ಪೂಜ ಮತ್ತು ರಾಜೇಶ್ ಸಂಶೋಧನೆ ನಡೆಸುತ್ತಾರೆ, ನಿಜವಾದ ದಂತ ಇದೆಯೋ ಇಲ್ಲವೋ ಅವರ ಸಂಶೋಧನೆ ಫಲಿಸಿತೋ ಇಲ್ಲವೋ ಓದಿದರೆ ಉತ್ತಮ.
ಮತ್ತೂಂದು ಕಡೆ ರಚಿತಾ ಮತ್ತು ಸುಹಾಸ್ ರವರು ಸಿಕಂದರನ ಸಿರಿಯ ಬಗ್ಗೆ ರಚಿತಾಳ ಅಜ್ಜನು ಬರೆದಿಟ್ಟ ಡೈರಿಯನ್ನು ಓದುತ್ತಾ ಹೋದಾಗ ಹಲವಾರು ವಿಷಯಗಳನ್ನು ಸಂಗ್ರಹಿಸುತ್ತಾರೆ. ಅಲೆಕ್ಸಾಂಡರ್ ತನ್ನ ನಿಧಿಯನ್ನು ಕಾಪಾಡಿಕೊಳ್ಳಲು ಅಶ್ವಘೋಶನ ಸಹಾಯವನ್ನು ಕೋರುತ್ತಾನೆ. ಅಶ್ವಘೋಶನು ಒಂದು ತಂತ್ರ ಉಪಯೋಗಿಸಿ ನಿಧಿಯ ಸುರಕ್ಷತೆಯ ಬಗ್ಗೆ ಯೋಜನೆ ನೀಡುತ್ತಾನೆ. ಆ ಯೋಜನೆ ಅಲೆಕ್ಸಾಂಡರ್ ಮೆಚ್ಚಿ ತನ್ನಲ್ಲಿರುವ ನಿಧಿಯನ್ನು 16 ಕಡೆ ಸುರಕ್ಷಿತ ಪಡಿಸುತ್ತಾನೆ *(ತಕ್ಷಶಿಲ,ಪಾಟಲೀಪುತ್ರ,ಪೇಶಾವರ ಇನ್ನೂ ಹಲವಾರು ಸ್ಥಳಗಳು, ೧೬ ಗೆರೆಗಳ ಸಿಡಿವ ನಕ್ಷತ್ರದ ಪ್ರತಿರೂಪ (Star Burst)*. ಆ ನಿಧಿಯ ಬಗ್ಗೆ ಅಲೆಕ್ಸಾಂಡರ್ ಹಾಗು ಅಶ್ವಘೋಶನಿಗೆ ಮಾತ್ರ ತಿಳಿದಿರುತ್ತದೆ, ಇದನ್ನು ಅರಿತ ಅಲೆಕ್ಸಾಂಡರ್ ಅಶ್ವಘೋಶನನ್ನು ಕೊಲ್ಲಲು ತಂತ್ರ ಹೂಡುತ್ತಾನೆ, ಅದು ತಿಳಿದ ಅಶ್ವಘೋಶ ಆ ನಿಧಿಯ ಬಗ್ಗೆ ಕೆಲವು ಚಿತ್ರಗಳ ಮೂಲಕ ತನ್ನ ಮೂರು ದಂತದಲ್ಲಿ ಕೆತ್ತಿ ತಾನು ಅಗ್ನಿಪ್ರವೇಶ ಮಾಡಿ ಸಾಯುತ್ತಾನೆ. ಸಾಯುವ ಮುನ್ನ ಅಲೆಕ್ಸಾಂಡರ್ ನ ತನ್ನ ಚಿತೆ ಮತ್ತು ನಿಧಿಯ ರಹಸ್ಯ ಅಡಗಿರುವ ದಂತವನ್ನು *ಅಮಾತ್ಯನಿಗೆ* ಒಪ್ಪಿಸಲು ಆದೇಶ ಮಾಡುತ್ತಾನೆ. ಆದರೆ ಅಲೆಕ್ಸಾಂಡರ್ ನಿಗೆ ಆ ರಹಸ್ಯವು ತಿಳಿಯದು, ಅವನ ಆದೇಶದಂತೆ ಚಿತೆ ಹಾಗು ತನ್ನ ಮೂರು ದಂತವನ್ನು ಅಮಾತ್ಯನಿಗೆ ಅರ್ಪಿಸುತ್ತಾನೆ. *ಇದರ ಕಾರಣವೆ ಈ ಕಾದಂಬರಿಯ ಶೀರ್ಷಿಕೆ ಚಿತಾದಂತ*. ಈ ಎಲ್ಲ ರಹಸ್ಯಗಳನ್ನು ಆಗಿನ ಕಾಲದಲ್ಲಿ ಚಿತ್ರದ ಮೂಲಕ ಸೂಚಿಸುತ್ತಿದ್ದರು ಅದನ್ನು ಡೀಕೋಡ್ ಮಾಡುವುದು ಅಷ್ಟು ಸುಲಭವಲ್ಲ.
ಚಾಣಕ್ಯನು ತನ್ನ ಬುದ್ಧಿಯನ್ನು ಉಪಯೋಗಿಸಿ ಅಮಾತ್ಯನ ಅರಮನೆಯಲ್ಲಿದ್ದ ತನ್ನ ಗೂಡಾಚಾರಿಗಳ ಮೂಲಕ ಅಲೆಕ್ಸಾಂಡರ್ ನ ನಿಧಿಯು ಅಮಾತ್ಯನಲ್ಲಿರುವುದೆಂದು ತಿಳಿದು,ತನ್ನ ಚಾಣಾಕ್ಷತನವನ್ನ ಉಪಯೋಗಿಸಿ ಅಮಾತ್ಯನಿಂದ ನಿಧಿಯನ್ನು ಚಂದ್ರಗುಪ್ತಮೌರ್ಯನಿಗೆ ಸೇರಿಸುತ್ತಾನೆ. ನಂತರ ಆ ನಿಧಿಯು ಅಶೋಕನ ಪಾಲಾಗಿ ಆ ನಿಧಿಯನ್ನು ೨೪ ಕಡೆಗಳಲ್ಲಿ ಸುರಕ್ಷೆ ಮಾಡುತ್ತಾನೆ. ಅಶೋಕನ ಧರ್ಮಚಕ್ರದಲ್ಲಿ ೨೪ ಗೆರೆಗಳಿವೆ, ಆ ೨೪ ಗೆರೆಗಳು ೨೪ ಸ್ಥಳಗಳನ್ನು ಸೂಚಿಸುತ್ತವೆ. ಅಶೋಕನು ಆ ನಿಧಿಯನ್ನು ಬೌದ್ಧ ಧರ್ಮ ಪ್ರಚೋದನೆಗಾಗಿ ಉಪಯೋಗಿಸಿದನೆಂದು ಹಾಗು ಹಲವಾರು ಬೌದ್ಧ ದೇವಾಲಯದ ನಿರ್ಮಾಣಕ್ಕೆ ಉಪಯೋಗಿಸಿದನೆಂದು ಕಥೆಗಳಿವೆ.ಹಾಗೂ ತಾನು ಸುರಕ್ಷಸಿದ್ಧ ನಿಧಿಯ ಜಾಗದಲ್ಲಿ ಅಶೋಕನ ಸ್ತಂಭವಿದ್ದು ಅದರ ಮೇಲೆ ಸಿಂಹದ ಲಾಂಚನವಿರುವುದೆಂದು ಆ ಸಿಂಹದ ಲಾಂಚನವು ಅಲೆಕ್ಸಾಂಡರ್ ನನ್ನು ಸೂಚಿಸುತ್ತದೆ ಇಟ್ಟ. *ಅಶೋಕನ ಧರ್ಮಚಕ್ರವನ್ನು ನಮ್ಮ ಬಾವುಟಕ್ಕೆ ಉಪಯೋಗಿಸಿದ್ದಾರೆ, ಯಾವ ಧರ್ಮ?ಬೌದ್ಧ ಧರ್ಮವೇ?ಅಥವಾ ಇನ್ನಿತರ ಕಾರಣಗಳೆ, ಓದಿ ತಿಳಿಯಬೇಕು*.
ಒಟ್ಟಾರೆ ಈ ನಿಧಿಯನ್ನು ಕೂಳ್ಳೆ ಹೊಡೆಯಲು ಸಿಬಾಲ್, ರಾರ್ಲ್ಪ,ಸೈಮನ್ ಹಾಗು ಇನ್ನಿತರರು ಶಾಲಿನಿಯಿಂದ ಕೆಲವು ಮಾಹಿತಿ ಪಡೆದು ಆಕೆಯನ್ನು ಸಾಯಿಸುತ್ತಾರೆ. ನಂತರ ಪೂಜಾ ಮತ್ತು ರಚಿತಾರ ಸಂಶೋಧನೆಯ ಬಗ್ಗೆ ರಚಿತಾ ಪೂಜಾರವರ ಅರಿವಿಲ್ಲದೆ ಟ್ರ್ಯಾಕ್ ಮಾಡುತ್ತಿರುತ್ತಾರೆ. ಈ ವಿಷಯವನ್ನು ತಿಳಿದ ರಾಜೇಶ್, ಸಿಬಾಲ್, ರಾರ್ಲ್ಪ,ಸೈಮನ್ ರನ್ನು ಬಂಧಿಸಿ ರಚಿತಾ ಹಾಗು ಪೂಜಾರನ್ನು ಅಪಾಯದಿಂದ ಪಾರುಮಾಡುತ್ತಾನೆ. ಕಡೆಯಲ್ಲಿ ಸಿಕಂದರನ ಸಿರಿಯು ಇದೆಯೋ ಅಥವಾ ಇಲ್ಲವೋ,ಇದ್ದಲ್ಲಿ ಯಾರ ಬಳಿ ಎಲ್ಲಿ ಹೇಗೆ ಎಂಬುದನ್ನೆಲ್ಲ ಓದಿದರೆ ಉತ್ತಮ. ----*ಕಾರ್ತಿಕ್*
ಗಣೇಶಯ್ಯನವರ ಕರಿಸಿರಿಯಾನ ಓದಿದ ನಂತರ ಅವರ ಯಾಲ್ಲಾ ಪುಸ್ತಕಗಳನ್ನು ಓದಬೇಕೆಂಬ ಹಂಬಲದಿಂದ ಓದಿದ ಎರಡನೇ ಪುಸ್ತಕ ಚಿತಾದಂತ.. ಗಣೇಶಯ್ಯನವರ ಕೃತಿಗಳು ಇಷ್ಟವಾಗಲು ಇತಿಹಾಸದ ದಾಖಲೆಗಳನ್ನೆಲ್ಲ ತೆಗೆದು ವರ್ತಮಾನಕ್ಕೆ ತಾಳೆ ಹಾಕಿ, ರೋಚಕತೆಯನ್ನು ಸೇರಿಸಿ ಬರೆಯುವ ಶೈಲಿ.
ಕೃತಿಯ ಬಗ್ಗೆ ಹೇಳುವುದಾದರೆ ಜಗತ್ತನ್ನೇ ಗೆಲ್ಲಲು ಹೊರಟ ಅಲೆಕ್ಸಾಂಡರ್ ಭಾರತಕ್ಕೆ ಬಂದಾಗ ಏನಾಯಿತು? ಅವನ ಅಪರಿಮಿತವಾದ ನಿಧಿಯನ್ನು ಸುರಕ್ಷಿತವಾಗಿ ಬಚ್ಚಿಡಲು ಕಾರಣಗಳೇನು? ನಿಧಿಯ ಸುರಕ್ಷತೆಗಾಗಿ ಕೈಗೊಂಡ ಯೋಜನೆಗಳೇನು? ಮತ್ತು ನಿಧಿಯ ಗೌಪ್ಯ ಕಾಪಾಡಲು ಮತ್ತು ನಿಧಿಯನ್ನು ರಹಸ್ಯವಾಗಿ ಬಚ್ಚಿಡಲು ಆಯ್ಕೆ ಮಾಡಿಕೊಂಡ ವ್ಯಕ್ತಿ ಯಾರು? ಎಂಬುದೇ ಕೃತಿಯ ಮೂಲದ್ರವ್ಯ..
ಬೌದ್ಧ ಧರ್ಮದ ಬಗ್ಗೆ ಹೆಚ್ಚಾಗಿ ಬರೆದಿರುವ ಲೇಖಕರು ಅದರ ಉಗಮ ಮತ್ತು ಇಂದಿಗೂ ಚರ್ಚೆ ಆಗುವ ಬುದ್ಧನ ದಂತ ಮತ್ತು ಅವುಗಳ ಸುತ್ತ ಹಬ್ಬಿರುವ ರಹಸ್ಯದ ಬಗ್ಗೆ ಸವಿಸ್ತಾರವಾಗಿ ಹೇಳಿದ್ದಾರೆ. ನಕ್ಷೆಗಳು, ಉಲ್ಲೇಖಗಳು, ಚಿತ್ರಗಳು, ಲಿಪಿಗಳ ಸಹಿತ ವಿವರಣೆ ನೀಡುವುದು ಇವರ ಶೈಲಿ ಆದ್ದರಿಂದ ಯಾವುದು ಸತ್ಯ ಯಾವುದು ಸುಳ್ಳು ಎಂದು ನಂಬಲು ಓದುಗನಿಗೆ ಗೊಂದಲ ಉಂಟು ಮಾಡುತ್ತದೆ..ಆದರೆ ಪುಸ್ತಕ ಓದಿದ ನಂತರ ಒಮ್ಮೆ ಇತಿಹಾಸದ ಪುಟಗಳನ್ನು ಓದ ಬೇಕು ಎಂದುಕೊಳ್ಳುವುದಂತು ಸತ್ಯ...
ಚಾಣಕ್ಯ, ಚಂದ್ರಗುಪ್ತ ಮೌರ್ಯ, ಅಶೋಕ, ಅಮಾತ್ಯ ರಾಕ್ಷಸ, ಮೌರ್ಯರು, ನಂದರು, ಅಲೆಕ್ಸಾಂಡರ್, ಅಶ್ವಘೋಷ, ದಲೈ ಲಾಮಾ, ತೇರವಾದಿಗಳು, ಅಜೈವಿಕರು, ಭಾರತ ಪಾಕಿಸ್ತಾನ ವಿಭಜನೆ, ಒಸಾಮಾ ಬಿನ್ ಲಾಡೆನ್, ಭಾರತದ ಸಂಸ್ಕೃತಿ , ಹಿಂದೂಕುಷ್ ಕಣಿವೆ ಈ ಹೆಸರುಗಳೇ ಸಾಕು ಈ ಪುಸ್ತಕದ ತೂಕ ಹೆಚ್ಚಿಸಲು..🙏