Jump to ratings and reviews
Rate this book

Deep Simplicity: Bringing Order to Chaos and Complexity

Rate this book
Over the past two decades, no field of scientific inquiry has had a more striking impact across a wide array of disciplines–from biology to physics, computing to meteorology–than that known as chaos and complexity, the study of complex systems. Now astrophysicist John Gribbin draws on his expertise to explore, in prose that communicates not only the wonder but the substance of cutting-edge science, the principles behind chaos and complexity. He reveals the remarkable ways these two revolutionary theories have been applied over the last twenty years to explain all sorts of phenomena–from weather patterns to mass extinctions.

Grounding these paradigm-shifting ideas in their historical context, Gribbin also traces their development from Newton to Darwin to Lorenz, Prigogine, and Lovelock, demonstrating how–far from overturning all that has gone before–chaos and complexity are the triumphant extensions of simple scientific laws. Ultimately, Gribbin illustrates how chaos and complexity permeate the universe on every scale, governing the evolution of life and galaxies alike.

279 pages, Hardcover

First published January 1, 2004

Loading...
Loading...

About the author

John Gribbin

294 books888 followers
John R. Gribbin is a British science writer, an astrophysicist, and a visiting fellow in astronomy at the University of Sussex. His writings include quantum physics, human evolution, climate change, global warming, the origins of the universe, and biographies of famous scientists. He also writes science fiction.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
499 (31%)
4 stars
646 (40%)
3 stars
345 (21%)
2 stars
69 (4%)
1 star
22 (1%)
Displaying 1 - 1 of 1 review
Profile Image for Chandrashekar BC.
72 reviews10 followers
June 16, 2017
Deep Simplicity : ಪುಸ್ತಕಾನುಭವ :

ಒಮ್ಮೆ ಸುಮ್ಮನೆ ನಿಂತು ನಮ್ಮ ಸುತ್ತಲೂ ಏನಿದೆಯೆಂದು, ಎನಾಗುತ್ತಿದೆಯೆಂದು ನಮಗೇ ಪ್ರಶ್ನೆ ಹಾಕಿಕೊಂಡು ನೋಡಿದಾಗ, ವಿಸ್ಮಯತೆ ನಿಧಾನವಾಗಿ ನಮ್ಮ ಚಿಂತನೆಯನ್ನಾವರಿಸುತ್ತದೆ? ಬೆಟ್ಟದ ಮೇಲೆ ನಿಂತಾಗ ಕಾಣುವ ಅರಣ್ಯ ಆಗಸ ನದಿ ಮೋಡಗಳ ನೋಟವಾಗಿರಬಹುದು, ಮಾರುಕಟ್ಟಯಲ್ಲಿ ಜನದಟ್ಟಣಣೆಯ ಮಧ್ಯದಲ್ಲಿ ನಿಂತು ನೋಡುವಾಗ ಸಿಗುವ ಲೋಕ ವ್ಯಾಪಾರದ ಚಿತ್ರಣವಿರಬಹುದು, ಪ್ರಾಣಿ ಪಕ್ಷಿ ಕೀಟಗಳ ಜೀವನ ರೀತಿಯಿರಬಹುದು, ಅಥವಾ ರಾತ್ರಿಯ ಹೊತ್ತು ಮನುಷ್ಯ ಕಟ್ಟಿರುವ ಸಮಾಜದಿಂದ ದೂರ, ಕತ್ತೆತ್ತಿ ಆಗಸದೆಡೆಗೆ ನೋಡಿದಾಗ ಕಾಣುವ ನಕ್ಷತ್ರ ಗ್ರಹ ಚಂದ್ರ ಸಮೂಹವಿರಬಹುದು, ಎಲ್ಲವೂ ತಮ್ಮ ಇರುವಿಕೆಯಲ್ಲೇ ಜಟಿಲತೆಯನ್ನು ಪ್ರದರ್ಶಿಸುತ್ತಿವೆ. ಸ್ವತಂತ್ರವಾಗಿದ್ದರೂ ಪರಸ್ಪರ ಸಂಭಂದವಿರುವಂತೆ, ವಿರುದ್ದವಾಗಿದ್ದರೂ ಒಂದಕ್ಕೊಂದು ಆಧಾರವಾಗಿ, ಎಲ್ಲವೂ ಒಟ್ಟಿಗೆ ಯಾವುದೋ ಗುರಿಯತ್ತ ಚಲಿಸುವಂತೆ ಕಾಣುವುದಲ್ಲವೆ? ಆದಿಯಿಂದ ಇಲ್ಲಿಯವರೆಗೂ, ಮುಂದೆ ಅನಂತದೆಡೆಗೂ ವಿಕಾಸವಾಗುತ್ತಲೇ ಬಂದಿವೆಯಾದರೂ, ಕಾಲವೊಂದೇ ಈ ಅನಂತ ಚಲನೆಗೆ ಸಾಕ್ಷಿಯಾಗಿದೆ!
ಹೌದು ನಮ್ಮೀ ಅರಿವಿನ ವಿಸ್ತಾರ ವಿಶಾಲವಾಗುತ್ತಿರುವುದೇ ನಾವು(ಬುದ್ಧಿ) ಕೇಳುತ್ತಿರುವ ಪ್ರಶ್ನೆಗಳಿಂದ. ಪ್ರಶ್ನೆಗಳಿಗೆ ಉತ್ತರಗಳು ಸರಳವಾಗಿರಬಹುದು ಅಥವಾ ಸಂಕೀರ್ಣವಾಗಿರಬಹುದು. ಸೂರ್ಯ ಏಕೆ ಪಶ್ಚಿಮದಲ್ಲೇ ಮುಳುಗುತ್ತಾನೆ ? ಮಳೆಬಿಲ್ಲಿನಲ್ಲಿ ಅಷ್ಟೊಂದು ಬಣ್ಣಗಳಿರಲು ಕಾರಣವೇನು? ಗ್ರಹಣ ಉದ್ಭವಿಸಲು ಕಾರ್‍ಅಣವೇನು? ನೀರು ಏಕೆ ಹರಿಯುತ್ತದೆ ? ಸೇಬು ಕೆಳಗೆ ಏಕೆ ಬೀಳುತ್ತದೆ? ಆಹಾ ಎಂಥ ಸುಲಭವಾದ ಮುಗ್ಧ ಪ್ರಶ್ನೆಗಳು. ಈ ರೀತಿಯ ಪ್ರಶ್ನೆಗಳಿಗೆ ನಮ್ಮ ಪೂರ್ವದ ವಿಜ್ಞಾನಿಗಳು ಅನೇಕ ಉತ್ತರಗಳನ್ನು ಕಂಡುಕೊಂಡಿದ್ದಾರೆ. ಇಂತಹ ಪೂರ್ವದ ವಿಜ್ಞಾನಿಗಳ ಗೌರವಾರ್ಥ ಐಸಾಕ್ ನ್ಯೂಟನ್ ನುಡಿದಿದ್ದು ಹೀಗೆ - "ನಾನೇದರೂ ದೂರವನ್ನು ದರ್ಶಿಸಿದ್ದರೆ, ಅದು ದಿಗ್ಗಜರ ಹೆಗಲ ಮೇಲೆ ನಿಂತು". ಅಂದರೆ ಆ ವಿಜ್ಞಾನಿಗಳು(ದಿಗ್ಗಜರು) ತಮ್ಮ ಪ್ರಶ್ನೆಗಳಿಗೆ ಕಂಡುಕೊಂಡ ಉತ್ತರಗಳೇ ಮುಂದಿನ ವಿಜ್ಞಾನಿಗಳ ಅನ್ವೇಷಣೆಗಳಿಗೆ ಅಡಿಪಾಯವಾಗಿದೆ. ಇಪ್ಪತ್ತನೇ ಶತಮಾನದ ಪ್ರಾರಂಭದ ಹೊತ್ತಿಗೆ ಭಾಗಶಃ ಎಲ್ಲ ಸರಳ ಪ್ರಶ್ನೆಗಳಿಗೆ, ಪ್ರಕೃತಿಯ ವಿಚಿತ್ರಗಳಿಗೆ ಉತ್ತರಗಳು ದೊರೆತಿದ್ದವು. ಅವುಗಳಿಗೆ ವಿಜ್ಞಾನ ಸೂತ್ರಗಳ ಮೂಲಕ ಅರ್ಥ ವಿವರಣೆಗಳೂ ಸ್ಪಷ್ಟವಾಗಿದ್ದವು. ಹೀಗೆ ಸೂತ್ರವೊಂದು ಇನ್ನೊಂದು ಸೂತ್ರಕ್ಕೆ ಆಸರೆಯಾಗಿ ಬೆಸೆದುಕೊಂಡು ಮತ್ತೊಂದು ಸೂತ್ರವಾಗಿ ಬೆಳೆದು, ವಿಶ್ವದ ಅನೇಕ ಅಜ್ಞಾತ ವಿಷಯವನ್ನು ಅರ್ಥದ ಬೆಳಕಿಗೆ ತರುವಲ್ಲಿ ಯಶಸ್ವಿಯಾದವು. ಅಲ್ಲಿಂದ ಇಲ್ಲಿಯವರೆಗೂ ಎಂದೂ ನಿಲ್ಲದ ಈ ಪ್ರಶ್ನೆಗಳು ಅನ್ವೇಷಣೆಗಳು ನಮ್ಮ ಸುತ್ತಲಿನ ಇನ್ನೂ ಸಂಕೀರ್ಣವಾದ ವಿಷಯಗಳನ್ನು ವಿಜ್ಞಾನ ಸೂತ್ರಗಳ ಮೂಲಕ ಅರ್ಥೈಸಲು ಪ್ರಯತ್ನಿಸುತ್ತಲೇ ಇವೆ.
ವಿಜ್ಞಾನದ ಉತ್ತರಗಳು ಸಂಕೀರ್ಣವಾಗುತ್ತಾ ಹೋದಂತೆ ಅದು ಜನಸಾಮಾನ್ಯರನ್ನು ಮುಟ್ಟುವುದೂ ಕಷ್ಟವಾಗತೊಡಗಿದವು. ಆಗಾಗ್ಗೆ ವಿಜ್ಞಾನಿಗಳು ವಿಜ್ಞಾನದ ಅನೆಕ ಸಿದ್ದಾಂತ ಅವಿಷ್ಕಾರಗಳನ್ನು ಸಾಮನ್ಯ ಜನರಿಗೆ ಸುಲಭಗ್ರಾಹ್ಯವಾಗುವಂತೆ ಉಪದೇಶಿಸಿದರೂ, ಅವುಗಳ ಅನುಸಂಧಾನ ಸಮಾಜದಗೊಳಗೆ ಅಷ್ಟೊಂದು ಆಳವಾಗಿಲ್ಲ. ಅಲ್ಲಿನ ವಿಚಾರಗಳು ಸಾಮಾನ್ಯರ ವಿಚಾರಪರತೆಯ ನಿಲುಕಿಗೆ ದೂರವಾಗಿಯೇ ಉಳಿದಿದೆ. ಇಂತಹ ಜಟಿಲ ಸಂಕೀರ್ಣ ಜ್ಞಾನವನ್ನು ಎಲ್ಲರೂ ಆದಷ್ಟೂ ಸುಲಭಸಾಧ್ಯವಾಗುವಂತೆ ತಿಳಿಹೇಳುವ ಪ್ರಯತ್ನಗಳಲ್ಲಿ ಜಾನ್ ಗ್ರಿಬ್ಬಿನ್ ಬರೆದಂತಹ "ಡೀಪ್ ಸಿಂಪ್ಲಿಸಿಟಿ" ಎಂಬ ಪ್ರಸ್ತುತ ಪುಸ್ತಕ ಕೂಡ ಒಂದು. ಗ್ರಿಬ್ಬಿನ್ ತಮ್ಮ ಈ ಪುಸ್ತಕದಲ್ಲಿ , ಹೊರನೋಟಕ್ಕೆ ಅಂಕೆಯಿಲ್ಲದಂತೆ ಕಾಣುವ ಈ ವಿಶ್ವವು, ಹೇಗೆ "ಕಾರಣ ಮತ್ತು ಪರಿಣಾಮ" ವನ್ನು ಪ್ರತಿನಿಧಿಸುವ ಕೆಲವು ಸಾಮಾನ್ಯ ಸೂತ್ರಗಳ ಮೇಲೆ ನಿಂತಿದೆ ಎಂಬುದನ್ನು ಅನಾವರಣಹೊಳಿಸುತ್ತಾರೆ. ವಿಶ್ವವ್ಯಾಪಾರವನ್ನು "ಕಾರಣ ಮತ್ತು ಪರಿಣಾಮ"ದ ಆಯಾಮಾದ ಮೂಲಕ ಹೇಗೆ ಅರ್ಥೈಸಬಹುದು ಮತ್ತು ಗಣಿತ,ಭೌತ,ರಸಾಯನ ಶಾಸ್ತ್ರಗಳ ಸೂತ್ರಗಳ ಮೂಲಕ ಹೇಗೆ ವಿಜ್ಞಾನಿಗಳು ಈ ಅರ್ಥಗಳಿಗೆ ಆಧಾರವನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ಸರಳ ಉದಾಹರಣೆಗಳೊಂದಿಗೆ ತಿಳಿಹೆಳಿದ್ದಾರೆ. ಇಲ್ಲಿನ ವಿಚಾರಗಳು ಹೇಗೆ ದಾರಿಯಲ್ಲಿ ಕೆಟ್ಟು ಹೋದ ಒಂದೇ ಒಂದು ಗಾಡಿ ಟ್ರಾಫಿಕ್ ಜಾಮ್‍ಗೆ ಕಾರ್‍ಅಣವಾಗುತ್ತದೆ?, ವಾತವರಣದಲ್ಲಿ ಆದ ಒಂದು ಚಿಕ್ಕ ಬದಲಾವಣೆ ಹೇಗೆ ಚಂಡಮಾರುತವನ್ನೇ ಸೃಷ್ಟಿಸುತ್ತದೆ?, ಕೆಲವು ಸಮುದ್ರ ತಟಗಳು ಅಂಕುಡೊಂಕಾಗಿಯೂ ಇನ್ನು ಕೆಲವು ನೇರವಾಗಿಯು ಇರಲು ಕಾರಣವೇನು?, ಯುಗಗಳ ಹಿಂದೆ ಕೇವಲ ಅಚೇತನ ವಸ್ತುಗಳಿಂದ ಮಾತ್ರ ತುಂಬಿದ್ದ ಈ ಬ್ರಹ್ಮಾಂಡದಲ್ಲಿ, ಹೇಗೆ ಒಂದಕ್ಕೊಂದು ಬೆಸೆದುಕೊಂಡು ಜೀವಿಗಳನ್ನು ಸೃಷ್ಟಿಸಿತು? ಎಂಬ ಪ್ರಶ್ನೆಗಳಿಗೆ ಮಾನವ ನಿರ್ಮಿತ ವಿಜ್ಞಾನದ ದರ್ಶಕದಿಂದ ಅವಲೋಕಿಸುತ್ತದೆ. ಅರ್ಥವಾಗದ ಪ್ರಪಂಚದ ಗಹನ ವಿಚಾರಗಳನ್ನು ಮಾನವ ಬುದ್ಧಿಗೆ ಅರ್ಥವಾಗುವಂತೆ ನಿರೂಪಿಸುತ್ತವೆ. ಚಿಟ್ಟೆಯ ರೆಕ್ಕೆಯ ಮೇಲಿನ ಅದ್ಭುತ ವರ್ಣವಿನ್ಯಾಸ, ಕಾಮನ ಬಿಲ್ಲಿನ ಬಣ್ಣದ ಕಮಾನು, ಸಮುದ್ರದ ಅಲೆಗಳನ್ನು ನಿಯಂತ್ರಿಸುವ ಚಂದ್ರನ ದೂರ, ತನ್ನಷ್ಟಕ್ಕೇ ತಿರುಗುತ್ತಾ ಸೂರ್ಯನ ಸುತ್ತಲೂ ಭ್ರಮಿಸುವ ಭೂಮಿಯ ಚಲನೆ, ಇಡೀ ಬ್ರಹ್ಮಾಂಡದ ಹುಟ್ಟು, ಇನ್ನೂ ಅನೇಕ ಗಹನ ಸಮಷ್ಠಿ ಸರ್ವಗಳಿಗೂ ಸೂಕ್ಷ್ಮ ಸಾಮಾನ್ಯ ಘಟನೆಗಳೇ ಅಧಾರಶಿಲೆಯಾಗಿ ನಿಂತಿವೆ, ಎಂಬುದನ್ನು ಅನೆಕ ವಿಜ್ಞಾನಿಗಳ ಸಿದ್ಧಾಂತಗಳ ಸಹಾಯದಿಂದ ವಿವರಿಸಿದ್ದಾರೆ. ವಿಶ್ವರಹಸ್ಯಗಳ ಸಂಕೀರ್ಣತೆಗಳನ್ನು ವಿಚಾರಣೆಯ ಓರೆಗಲ್ಲಿಗೆ ಹಿಡಿದು, ವಿಚಾರಶೀಲವಾಗಿ ಚಿಂತಿಸಿ ದುಡಿದು, ಅವೆಲ್ಲವೂ ಮುಂದಿನ ಜನಾಂಗಕ್ಕೆ ಗ್ರಾಹ್ಯವಾಗುವಂತೆ "ಅವ್ಯವಸ್ಥೆಯ ಸಿದ್ಧಾಂತ"ದಂತಹ(Chaos Theory) ಅನೇಕ ಆವಿಷ್ಕಾರಗಳನ್ನು ಜಗತ್ತಿಗೆ ನೀಡಿದ ವಿಜ್ಞಾನಿ ಸಮಸ್ತರಿಗೆ ನಾವೆಲ್ಲರೂ ಋಣಿಯಾಗಿರಲೇಬೇಕು ಎಂದು ನೆನಪಿಸಿಕೊಳ್ಳುತ್ತಾರೆ ಕೂಡ.
- ಚಂದ್ರಹಾಸ
Displaying 1 - 1 of 1 review