ಲೇಖಕ ಡಾ. ಗಜಾನನ ಶರ್ಮ ಅವರು ಬರೆದ ಐತಿಹಾಸಿಕ ಕಾದಂಬರಿ "ಚೆನ್ನಭೈರಾದೇವಿ". ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು 54 ವರ್ಷಗಳವರೆಗೂ ಆಳಿದ ಚೆನ್ನಭೈರಾದೇವಿ, ಕರಿಮೆಣಸಿನ ರಾಣಿಯ ಅಕಳಂಕ ಚರಿತೆ ಈ ಕೃತಿ. ಸಾಹಿತಿ ಜೋಗಿಯವರು ಈ ಕೃತಿಗೆ ಬೆನ್ನುಡಿ ಬರೆದು,"ಚೆನ್ನಭೈರಾದೇವಿ"ಯ ಬದುಕಿನ ಅಪರೂಪದ ಘಟನೆಗಳನ್ನು ತಂದು ಕಾದಂಬರಿಕಾರರು ನಮ್ಮ ಮುಂದಿಟ್ಟಿದ್ದಾರೆ. ಪುಟಪುಟದಲ್ಲೂ ರೋಮಾಂಚನಗೊಳಿಸುವ ವಿವರಗಳ ಜತೆಗೇ ರಾಜನೀತಿ, ಜೀವನ ವಿಧಾನ, ಧೀಮಂತಿಕೆ, ಉತ್ಕಟವಾದ ಪ್ರೇಮ ಮತ್ತು ಹೆಣ್ಣಿನ ಅಂತಃಸತ್ವವನ್ನು ತೆರೆದಿಡುವ ಈ ಕೃತಿ, ಕನ್ನಡ ಚಾರಿತ್ರಿಕ ಕಥನಗಳ ಪಟ್ಟಿಗೆ ಅಮೂಲ್ಯ ಸೇರ್ಪಡೆ. ಇತ್ತಿಚಿನ ಮೂರು ನಾಲ್ಕು ದಶಕಗಳಲ್ಲಿ ನಾನು ಇಷ್ಟು ಸಮೃದ್ಧವಾದ ಪ್ರಾಮಾಣಿಕವಾದ ಐತಿಹಾಸಿಕ ಕಾದಂಬರಿಯನ್ನು ಓದಿಲ್ಲʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಡಾ| ಗಜಾನನ ಶರ್ಮಾರವರು ಪ್ರಸಿದ್ಧ ನಟ, ನಾಟಕಕಾರ, ನಿರ್ದೇಶಕ ಮತ್ತು ಸಾಹಿತಿಯು ಹೌದು. ವೃತ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿದ್ದರು ಕನ್ನಡ ಸಾಹಿತ್ಯದ ಹಲವಾರು ರಂಗಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ’ಪುನರ್ವಸು’ ಇವರ ಪ್ರಮುಖ ಕಾದಂಬರಿ. 'ನಾಣಿ ಭಟ್ಟನ ಸ್ವರ್ಗದ ಕನಸು', 'ಗೊಂಬೆ ರಾವಣ', ಆಗ ಮತ್ತು ಸುಂದರಿ', 'ಹಂಚಿನಮನೆ ಪರಸಪ್ಪ', 'ಪುಸ್ತಕ ಪಾಂಡಿತ್ಯ' ಮುಂತಾದ ಹತ್ತಕ್ಕೂ ಹೆಚ್ಚು ಮಕ್ಕಳ ನಾಟಕ, 'ಕನ್ನಂಬಾಡಿಯ ಕಟ್ಟದಿದ್ದರೆ', 'ದ್ವಂದ್ವ ದ್ವಾಪರ', 'ಬೆಳ್ಳಿಬೆಳಕಿನ ಹಿಂದೆ' ಮುಂತಾದ ನಾಟಕಗಳನ್ನು ರಚಿಸಿದ್ದಾರೆ.
ವಿಶ್ವೇಶ್ವರಯ್ಯನವರ ವೃತ್ತಿ ಜೀವನದ ಆತ್ಮಕಥೆಯನ್ನು ಕನ್ನಡಕ್ಕೆ 'ನನ್ನ ವೃತ್ತಿ ಜೀವನದ ನೆನಪುಗಳು' ಎಂಬ ಶೀರ್ಷಿಕೆಯಡಿ ಅನುವಾದಿಸಿದ್ದಾರೆ. 'ಕನ್ನಡದಲ್ಲಿ ಮಕ್ಕಳ ನಾಟಕ ಮತ್ತು ರಂಗಭೂಮಿ' ಎಂಬ ಮಹಾಪ್ರಬಂಧಕ್ಕಾಗಿ ಹಂಪಿಯ ಕನ್ನಡ ವಿಶ್ವವಿದ್ಯಾ ಲಯದಿಂದ ಡಾಕ್ಟೋರೇಟ್ ಪದವಿ ಪಡೆದಿದ್ದಾರೆ. ಕನ್ನಡ ಸುಗಮ ಸಂಗೀತದ ಮೇರುಪ್ರತಿಭೆ ಗರ್ತಿಕೆರೆ ರಾಘಣ್ಣನವರ ಬದುಕಿನ ಚಿತ್ರಣವಾದ 'ಕಾಡು ಕಣಿವೆಯ ಹಾಡುಹಕ್ಕಿ ಗರ್ತಿಕೆರೆ ರಾಘಣ್ಣ' ಇವರ ಇನ್ನೊಂದು ಮಹತ್ವದ ಕೃತಿ. ’ಕೈಲಾಸ ಮಾನಸ', 'ಗೋಮುಖಆಗಿ ಹೋಗುವ ಮುನ್ನ ಕಣ್ಣುಂಬಿಕೊಳ್ಳೋಣ' (ಪ್ರವಾಸ ಕೃತಿ), “ನನ್ನ ವೃತ್ತಿಯ ನೆನಪುಗಳು” ಕೃತಿಯಲ್ಲಿ ಅವರ ವೃತ್ತಿ ಬದುಕಿನ ಅನುಭವವನ್ನು ದಾಖಲಿಸಿದ್ದಾರೆ.
Bowing to the great queen Chennabhairadevi I'd love to begin the review with my namaskaram to the author of this book Sri Gajanana Sharma for giving us this wonderful literary gem and helping us know of the Queen whom we barely studied about. As his foreword states, Queen Chennabhairadevi, the last of the Sāluva Dynasty isn't discussed in our history textbooks. However she ruled for half a century taking care of her kingdom as a mother she's still alive in the hearts of so many locals even today. One among them is the author who grew up listening about her from his elders. Chennabhairadevi, the name itself makes one feel she's the epitome of a goddess herself! I felt like I could see the forms of Shakti in her. As Parvati she tended for her kingdom, as Laxmi she uplifted her people such that her Nagire-Gerusoppe kingdom was renown as the richest province in the Southern India. As Durga she gave shelter to the Saraswata Brahmins and others who were forced out of their homes by the Portuguese forces and as Ma Kali she unleashed her shakti and kept every enemy at bay. She was such a beloved queen that in a place called Avarsi she's being worshipped as a goddess, being addressed as Avvarasi. Praised by the Portuguese themselves as 'Raina de Pimenta' (Queen of Peppers) being equated to the English Queen Elizabeth I, Chennabhairadevi gave a series of defeat to the Portugal forces and the rival kingdoms like Keladi and others. Queen Chennabhairadevi of Matriarchal Saluva Dynasty, ruled her kingdom such a way that it was more like a Rama Rajya. Riches flooded in her province such that there are many places which received their present titles due to the gold and silvers that found their homes there. It's a sad state that no history talks of such a ruler who raised the glory of India to peak. This book, Chennabhairadevi, is a beautifully crafted historical fiction which gives us a walk into the life and principles of the brave Queen. The novel begins from the little girl asking her mother shouldn't a queen be adorned with all the riches and silk when she meets the queen in nothing of that sort who galloped across her on the horseback. This alone shows that queen herself wasn't after personal glory or praise. Her goal was to keep her people safe from the invaders and empower them and she was successful in it. As any woman she had her own hurdles. The author writes with a note of sadness how there were certain people who tried to malign her character which is unfortunately has been passed down and recognised by some local authorities too. However looking at the respect and ārādhanā bhāva the locals even today hold for her and her long ruling with no single uprisal shows that it was nothing but a mere attempt to malign the great queen's name out of jealousy. This broke my heart somewhat because badmouthing is such a terrifying calamity that even a queen herself had to face it. She not only had to fight the enemies of her land but also deal with the enemies of her persona. The author has done a tremendous work by giving us this historical fiction. This helps one understand the political and social affairs, the religious advents and identical crisis etc during the 1500s and early 1600s. The author strategically narrates how the Queen engages her forces in the guerrilla warfare. The book has amazing character like Shabalé, Satrajita, Nagabbe and others. There's a beautiful context of pure love. The fatherly prime minister. The satvik Jinadatta. A Portuguese woman whose motherly love surpasses the bounds of country, faith and languages. At the same time the backstabbers who didn't like a woman raising to highness. Mainly, the epic burning of the Portuguese to be unable to defeat a pagan woman. The queen never waged wars against anyone but there was nobody who wasn't defeated by her when they pounced upon her kingdom. This book not only talks about the Queen who's often not talked much about but also makes the reader feel that they're reading a book on a common woman who stood firmfeet and faced all the obstacles and troubles on her way. If you have read Swapna Saraswata book you should try reading this too. My days in Verané through Gopalakrishna Pai flooded back to my mind whilst I was reading Chennabhairadevi. It made me feel like it's a twin. It kinda also gives us the aftermath since Swapna Saraswata mainly focuses on the Saraswata Brahmins and later on the descendants of Vittu Pai this book, on the other hand, also narrates the dawn of the Portuguese downfall. Also the mention of Tejo river took me back to the story of Gabriel and I couldn't help but relate one character to him at some minute levels. Chennabhairadevi became the huge dome of protection to the refugees who were driven out of their homelands in the name of religious conversions, persecutions and inquisition. Queen Chennabhairadevi wasn't just a queen who raised her Gerusoppe's name to the highest glory but also was a brave mother who didn't expect anything for her own self but dedicated her complete life to her people. The author's writing is just apt he takes his readers back to the history. I realised writing historical fiction is such a hard task, especially when you don't have much historical documentations at hands but still the author has done a great work by introducing us to the great Queen through the mode of fiction. He has blended the facts and fiction marvelously. By sticking to the true history he has created characters needed as per the requirements for the story. I can't express in words how grateful I am to the author for penning this. Also as I read I couldn't help but see so much of similarities between her and Sambhaji. Both shouldered the ruling responsibility at a very young age, they had to deal with certain enemies by side who couldn't resist their dedication to truth and other principles and just the same way they were backstabbed by the trusted ones. By reading this book one would realise hadn't it been for Queen Chennabhairadevi the malnad and coastal provinces of North Canera would have succumbed to the same dangers Gomantaka had to face. I highly recommend this book. Read this, know of your queen. This put me under the pondering. I wonder how many kings and queens are hidden in the dark corners of history just like her. Under elders like Shri Gajanana Sharma it's our duty to dug our ancestors out and spread their glorious histories to all the directions. I'm thankful to the author for doing us a great favour, to the friends who let me know of this great queen and help me buy the book. My naman to the Avvarasi, the brave queen whose selfless ruling has no bound. Again, if you have read Swapna Saraswata book and you loved it you should definitely give this book on a Queen who kept the Dharma safe and stood as a fort against all the intolerance. HIGHLY RECOMMENDED. Hope this book gets translated to other languages sooner.
ಚೆನ್ನಭೈರಾದೇವಿ - ಗಜಾನನ ಶರ್ಮ. ಕೆಲವು ಪುಸ್ತಕಗಳ ಬಗ್ಗೆ ಜಾಸ್ತಿ ಬರೆಯಲು ಹೋಗಬಾರದು.ಅದನ್ನು ಓದುವವರಿಗೆ ಕಿರಿಕಿರಿ ಅದು. ಬೆಳ್ಳಿ ಕಾಳ ಬಳ್ಳಿ ಓದಿದವರಿಗೆ ಈ ರಾಣಿಯ ಬಗ್ಗೆ ಗೊತ್ತಿರಬಹುದು. ಅದು ಬಿಟ್ಟರೆ ಇತಿಹಾಸಜ್ಞರಾಗಲೀ ನಮ್ಮ ಪಠ್ಯ ಪುಸ್ತಕದವರಾಗಲೀ 54 ವರ್ಷ ರಾಜ್ಯ ಆಳಿದ ಈ ರಾಣಿಯ ಬಗ್ಗೆ ತೋರಿದ್ದು ನಿರ್ಲಕ್ಷ್ಯ.. ಹಾಗೆಯೇ ಆಕೆಗೆ ಯಾರೋ ವಿದೇಶಿ ಬರೆದ ನಾಲ್ಕು ಸಾಲುಗಳ ಆಧರಿಸಿ ಕಳಂಕವನ್ನೂ ಮೆತ್ತಿದರು. ಗಜಾನನ ಶರ್ಮರು 'ಪುನರ್ವಸು' ಎಂಬ ಕಾದಂಬರಿ ,'ಗೋಮುಖ' ಎಂಬ ಪ್ರವಾಸ ಕಥನ, 'ನನ್ನ ವೃತ್ತಿಜೀವನದ ನೆನಪುಗಳು' ಎಂಬ ಸರ್ ಎಂ ವಿಶ್ವೇಶ್ವರಯ್ಯನವರ ಆತ್ಮಕಥೆ ಅನುವಾದದ ಮೂಲಕ ಪರಿಚಿತರು. ಅವರ ಉತ್ಕೃಷ್ಟ ಭಾಷೆಯ ಬಳಕೆ ಮತ್ತು ಸಂಶೋಧನೆ ಈ ಕೃತಿಯ ಕಟ್ಟಿದೆ.
ಕನ್ನಡದಲ್ಲಿ ಇತ್ತೀಚೆಗೆ ಪೌರಾಣಿಕ ,ಐತಿಹಾಸಿಕ ಕೃತಿ ಬರೆಯುವವರಲ್ಲಿ ಭಾಷಾ ಬಳಕೆಯಲ್ಲಿ ಗೋಪಾಲಕೃಷ್ಣ ಪೈ, ಶ್ರೀಧರ ಡಿಎಸ್, ಮತ್ತು ಗಜಾನನ ಶರ್ಮರ ಕೃತಿಗಳು ನನಗೆ ಖುಷಿ ಕೊಟ್ಟವು. ಓದಿ. ಕರಿಮೆಣಸಿನ ರಾಣಿ ಅಕಳಂಕಿತ ಚರಿತ್ರೆಯ. ಓದಿದ ಮೇಲೆ ಓದಿಸಿ.
(ಪುಸ್ತಕಕ್ಕಾಗಿ 9844192952 ರಾಧಾಕೃಷ್ಣ ಇವರಿಗೆ ಮೆಸೇಜ್ ಮಾಡಿ)
It’s been a full day since I have finished reading ‘Chennabhairadevi’ by Dr. Gajanana Sharma and I still feel hung over with all the emotions the books made me feel.
Somewhere along history’s murky depths, the story of this extraordinary queen, the last ruler of the Tuluva-Salva lineage who probably had the longest reign as a woman ruler has been forgotten, except in the memories of people in some parts of her erstwhile empire.
Almost all stories of kings and queens are filled with wars fought, kingdoms conquered and the wealth they accumulated. Chennabhairadevi did not care for any of these but the welfare of her subjects. Throughout her rule, her focus stayed on building up her people’s lives and keeping her kingdom together.
How many of us is aware now that she singlehandedly kept the Portuguese from occupying all of the land south of Goa? That she provided refuge to thousands of people who were desperate to escape the Portuguese’s forced religious conversions in Goa? She built up the spice trade with Europe, especially pepper, and earned the title “Raina de Pimenta” or the ‘Pepper Queen’ from the Portuguese.
The book not only describes in vivid detail the queen’s shrewdness, her idealism and her spiritualism, but also manages to show her sensitive side, and her instinctive way of responding to her people’s needs. Other people in the story like Jinadatta, Shabale and Satrajita have such depth of characters and I will not forget them soon. The way the places, villages, nature, forts and palaces have been described took me straight there and is another reason why I’m still hung over!
The last few pages of the book brought tears to my eyes. The scene where the 74-year old queen stands on the balcony of her palace in pouring rain, her hands chained, admitting to her people that she failed in protecting their land, requesting them to remain calm and peaceful and assuring them that they will not be harmed is so poignant, and shows the author’s writing prowess. My only complaint about this book is that I didn’t want it to end. I could have just kept on reading.
The book might be a work of fiction, although based on facts and events painstakingly put together piece-by-piece by the author, but the fact shines through that Chennabhairadevi was an extraordinary queen. It pains my heart that even with all my interest with Indian history, I had not heard of this queen until just a few years ago, who ruled almost the entire coastal Karnataka, (the place where my origins lay) for a whopping 54 years!
The author has written in detail about why she remained in the shadows all these years in his introduction to the book, and that itself is though-provoking, even before you start reading the actual story.
It makes me furious and frustrated that stories like hers are not told, but are kept hidden, deliberately and sometimes with envy and malice. These are the people on whom our heritage stands. THIS is our history, and THIS is what needs to be taught to our children.
Thank you Gajanana sir for such a beautifully written book! I hope this book gets translated to English soon, so that more people even outside of Karnataka can read it and appreciate this powerful, brave, benevolent and kind queen.
What a book!! ಭಾರತದ ಪುಣ್ಯ ಭೂಮಿಯಲ್ಲಿ ಶೌರ್ಯ ಪರಾಕ್ರಮಿಗಳಿಗೆ ಕೊರತೆ ಇಲ್ಲ ಆದರೆ ಅದನ್ನ ಮರೆ ಮಾಚಿ ಭರತಖಂಡದ ಇತಿಹಾಸದಲ್ಲಿ ಬರಿ ದಾಳಿ, ದಾಸ್ಯ, ಸೋಲು ಅಷ್ಟನ್ನೆ ಇತಿಹಾಸ ಎಂದು ಬಿಂಬಿಸಿ ಈ ಡೋಂಗಿ ಇತಿಹಾಸಕಾರರು ಮುಚ್ಚಿಟ್ಟ ಕತೆಗಳೆಷ್ಟೋ. ಅಂತ ಒಂದು ಮುಚ್ಚಿಟ್ಟ ಕಥೆಯಲ್ಲಿ ಇದು ಒಂದು. ಕಾಳು ಮೆಣಸಿನ ರಾಣಿ "Pepper Queen" ಎಂದೇ ಪೋರ್ಚುಗೀಸರ ಬಾಯಿಯಲ್ಲಿ ಕರೆಯಲ್ಪಟ್ಟಿದ್ದ ಚೆನ್ನಭೈರದೇವಿಯ ಆಕಳಂಕ ಚರಿತೆ. ಸಾಮಾನ್ಯ ಶಕ 1552 ರಿಂದ 1606 ಒಟ್ಟು 54 ವರ್ಷಗಳ ಕಾಲ ನಗಿರೆ ಮತ್ತು ಹಾಡುವಳ್ಳಿಗಳ ರಾಣಿಯಾಗಿದ್ದ ಚೆನ್ನಭೈರದೇವಿಯನ್ನು ಪಾಶ್ಚಾತ್ಯ ಇತಿಹಾಸಗಾರ್ತಿ ವೋಜಿಹೋವ್ಸ್ಕಿ ಆಗಿನ ಇಂಗ್ಲೆಂಡಿನ ರಾಣಿ ಎಲಿಜೆಬೆತ್ನ ಹಲವು ಸಂಗತಿಗಳಲ್ಲಿ ಸರಿಸಮಾನರು ಎಂದು ತನ್ನ ಒಂದು ಪ್ರಬಂಧದಲ್ಲಿ ಉಲ್ಲೇಖಿಸಿದ್ದಾಳೆ. ಹೀಗಿದ್ದಾಗ ನಮ್ಮದೇ ನೆಲದ ಇತಿಹಾಸಕಾರರು ಯಾವನೋ ಒಬ್ಬ ಐರೋಪ್ಯದ ಡೋಂಗಿ ತಲೆಕೆಟ್ಟ ತಿರುಕನ ಇತಿಹಾಸವನ್ನೇ ನಿಜ ಅಂತ ನಂಬಿ ಚೆನ್ನಭೈರದೇವಿಯಂತ ಪ್ರಜಾನುರಾಗಿ , ದಕ್ಷ ಹಾಗೂ ತನ್ನ ವಿರುದ್ದ ದಂಗೆ ಯೆದ್ದ ಎಲ್ಲ ವಿರೋಧಿಗಳನ್ನು ಮಟ್ಟ ಹಾಕುತ್ತಾ ವಿರೋಧಿಸಿದ ಎಲ್ಲ ರಾಜ್ಯಗಳ ಜತೆ ಒಳ್ಳೆಯ ಭಾಂದವ್ಯ ಬೆಸೆಯುತ್ತ ಒಂದು ಅದ್ಭುತ ಸಾಮ್ರಾಜ್ಯವನ್ನು ಕಟ್ಟಿದ ದೀರ ವನಿತೆಯನ್ನ ಚರಿತ್ರೆಯಿಂದ ಹೊರಗಿಡುವ ಪರಯತ್ನ ಮಾಡಿದ್ದು ನಮ್ಮ ನಾಡಿನ ದುರ್ದೈವ. ಎಲ್ಲೋ ಮರೆತು ಹೋದ ಮಹಾನ್ ವೀರಾಗ್ರಣಿಯ ಬಗ್ಗೆ ಅತ್ಯದ್ಭುತ ಕಾದಂಬರಿ ರಚಿಸಿದ ಶ್ರೀ ಗಜಾನನ ಶರ್ಮರಿಗೆ ನನ್ನ ನಮನಗಳು.. Must read and this year's best read..
ನಾ ಓದಿದ ಅದ್ಭುತ ಪುಸ್ತಕಗಳಲ್ಲಿ ಇದು ಒಂದು. ಎಲ್ಲರೂ ಓದಲೇ ಬೇಕಾದ ಪುಸ್ತಕ.
ಸ್ವತಂತ್ರ ಪೂರ್ವದ ರಾಣಿಯರ ಹೆಸರುಗಳು ಬಂದಾಗ ಕೆಲವೇ ಕೆಲವು ಹೆಸರನ್ನ ಕೇಳಿರುತ್ತೇವೆ. 54 ವರ್ಷಗಳ ಕಾಲ ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು ಆಳಿದ ಸಾಳುವ ವಂಶದ ಕಡೆಯ ರಾಣಿ ಚೆನ್ನಭೈರದೇವಿಯ ಕುರಿತು ಈ ಪುಸ್ತಕ. ಈ ಧೀರ ರಾಣಿಯ ಕುರಿತು ನಮ್ಮ ಪಠ್ಯದ ಯಾವುದೇ ಭಾಗದಲ್ಲಿ ಪ್ರಸ್ತಾಪವಿಲ್ಲ. ಚೆನ್ನಭೈರದೇವಿಯ ಕುರಿತು ಓದಿದಾಗ ಮೈ ಜುಮ್ಮ್ ಅನ್ನತ್ತೆ, ಅಂತ ಧಿಟ್ಟ ರಾಣಿ. ಪೋರ್ಚುಗೀಸರ ನಿದ್ರೆಗೆಡಿಸಿದ ಜ್ವಾಲಾಮಾಲಿನಿ. ಪೋರ್ಚುಗೀಸರ ಪಾಲಿನ "ರೈನಾ ದ ಪಿಮೆಂಟ"!!
ಈ ಪುಸ್ತಕದ ಸಲುವಾಗಿ ಗಜಾನನ ಶರ್ಮ ಅವರು ಮಾಡಿರುವ ಅಧ್ಯಯನಕ್ಕೆ hats off!!
ಮೊಟ್ಟಮೊದಲ ಬಾರಿಗೆ ನಮ್ಮ ತಲೆ ಒಳಗೆ ಕಾಡುವ ಪ್ರಶ್ನೆ ಈ ಹಿಂದೆ ನಾವು ಚೆನ್ನಬೈರಾದೇವಿ ರಾಣಿ ಅವರ ಇತಿಹಾಸ ಚರಿತ್ರೆ ಕಥೆ ಕಾದಂಬರಿ ಇದುವರೆಗೂ ಕೇಳಿರದ ರಾಣಿ ಹೆಸರು! ಮುನ್ನುಡಿಯಲ್ಲಿ ಲೇಖಕರು ಸುದೀರ್ಘವಾದ ವಿವರಣೆಯನ್ನು ನೀಡಿದ್ದಾರೆ .
ಪ್ರಜೆಗಳ ಮನಸ್ಸಿನಲ್ಲಿ ತನ್ನನ್ನು ಚಾಪಿಸಿಕೊಳ್ಳಲು ಮುಂದಾಗಲಿಲ್ಲ. ತಾನೇ ತಾನಾಗಿ ಮೆರೆಯಲು ಪ್ರಯತ್ನಿಸಲಿಲ್ಲ . ಚರಿತ್ರೆಯಲ್ಲಿ ತಾನು ಅಜರಾಮರಳಾಗಲು ಆಸೆಪಡಲಿಲ್ಲ .ತನ್ನ ಕುರಿತು ಶಾಸನಗಳನ್ನು ಬರಿಸಿ ನಡೆಸಲಿಲ್ಲ .ಚರಿತ್ರೆ ಕಾವ್ಯಗಳನ್ನು ಬರೆಸಲಿಲ್ಲ .
ದಕ್ಷಿಣ ಕೊಂಕಣಿ ಹಾಗೂ ಮಲೆನಾಡನ್ನು 54 ವರ್ಷಗಳ ಕಾಲ ಆಳಿದ ಚೆನ್ನಬೈರಾದೇವಿ . ಯುದ್ಧ, ಹೋರಾಟ ,ದ್ವೇಷ ,ಅಸೂಯೆ ,ಪ್ರಭುತ್ವ ,ಜನ-ಜೀವನ , ಕಾಳುಮೆಣಸಿನ ವ್ಯಾಪಾರ , ರಾಜಕಾರಣ ,ಗೂಢಚರ್ಯ, ಹೀಗೆ ಸಾಕಷ್ಟು ಕಥಾವಸ್ತುಗಳನ್ನು ಒಳಗೊಂಡ ಕಾದಂಬರಿ . ಮರೆಯಾದ ಚೆನ್ನಬೈರಾದೇವಿ ರಾಣಿ ಕಾದಂಬರಿಯ ಮೂಲಕ ಡಾ. ಗಜಾನನ ಶರ್ಮ ಆಳ ಮತ್ತು ಒಳನೋಟದ ಸೂಕ್ಷ್ಮವಾದ ಬರವಣಿಗೆ .
ಕೆಲವೊಮ್ಮೆ ಹೆಚ್ಚಾಗಿ ಕಥೆಯ ಬಗ್ಗೆ ಹೇಳಲು ಹೋಗಬಾರದು ಓದುಗರಿಗೆ ಕಿರಿಕಿರಿಯಾಗಬಹುದು .ಓದಲೇಬೇಕಾದ ಕಾದಂಬರಿ. ಸಮಯ ಮಾಡಿಕೊಂಡು ಒಮ್ಮೆ ಓದಿ.
'ಜೀವನ ಚೆನ್ನಭೈರಾದೇವಿಗೆ ಅತ್ಯುತ್ತಮವಾದನ್ನು ಕೊಟ್ಟಿರುವುದೋ ಇಲ್ಲವೋ, ಆದರೆ ಇವಳು ತನ್ನ ಪ್ರಜೆಗಳಿಗೆ ಅತ್ಯುತ್ತಮ ಜೀವನವನ್ನೇ ಕೊಟ್ಟಳು' ಇದು ಕಾದಂಬರಿಯಲ್ಲಿ ಬರುವ ಸಾಲುಗಳು. ಈಕೆ ಅಕ್ಷರಶಃ ತನ್ನ ಪ್ರಜೆಗಳಿಗಾಗಿ ಪ್ರಜೆಗಳಿಂದಲೇ ಸತತ ೫೪ ವರ್ಷಗಳ ಕಾಲ ಆಳಿದಳು, ಶಾಶ್ವತವಾಗಿ ಅಲ್ಲಿನ ಭಾಗದ ಜನಗಳ ಮನಸ್ಸಿನಲ್ಲಿ ಉಳಿದಿರುವಳು. ಇಂತಹ ರಾಣಿಯ ಬಗ್ಗೆ ಅಷ್ಟಾಗಿ ಕೇಳಿರಲಿಲ್ಲ ಅದಕ್ಕೆ ಮುಖ್ಯ ಕಾರಣವನ್ನು ಲೇಖಕರು ಮುನ್ನುಡಿಯಲ್ಲಿ ವಿಸ್ತಾರವಾಗಿ ವಿವರಿಸಿದ್ದಾರೆ. ಕಾದಂಬರಿ ಶುರುವಿನಂದ ಕೊನೆಯವರೆಗೂ ಕುತೂಹಲಕಾರಿಯಾಗಿ ಇದೆ. ಒಂದು ಕಡೆ ಪೋರ್ಚುಗೀಸ್ ರ ಕಾಟ, ಮತ್ತೊಂದು ಕಡೆ ಕೆಳದಿಯವರ ರಾಜ್ಯದಾಹ, ಈಕೆ ಹೆಣ್ಣು ಎಂದು ಕೆಳಗಿಳಿಸಲು ತನ್ನ ಸ್ವಂತ ಸೋದರಮಾವನಿಂದಲೇ ಸಂಚು. ಹೀಗೆ ಪ್ರತಿಯೊಂದು ಎದುರಿಸುವ ಧೀರೆ. ಸರ್ವಧರ್ಮ ಸಮನ್ವಯದ ಸಂಕೇತ ಈಕೆ. ಗೋವಾದಲ್ಲಿ ಪರಂಗಿಗಳ ಮತಾಂತರಕ್ಕೆ ಸಿಲುಕಿದವರನ್ನು ಕಾಪಾಡುವಳು, ತನ್ನ ಜನರಿಗೆ ಸದಾ ಬೆಂಗಾವಲಾಗಿ ಇರುವಳು, 'ರೈನಾ ದಿ ಪೆಮೆಂಟೊ' ಎಂದು ಪೋರ್ಚುಗೀಸರಿಂದಲೇ ಬಿರುದು ಪಡೆದುಕೊಳ್ಳುವಳು. ಗೋವಾದಲ್ಲಿ ಪೋರ್ಚುಗೀಸರ ಮಾರಣ ಮತಾಂತರ, ಪೋರ್ಚುಗೀಸರ ವಿರುದ್ಧ ದಿಗ್ವಿಜಯ, ವಿದೇಶಿಗಳಲ್ಲಿ ಯಾವುದಕ್ಕೆ ಬೆಲೆ ಜಾಸ್ತಿಯೆಂದೆಲ್ಲಾ ತಿಳಿದು ಇಲ್ಲಿನ ಜನಕ್ಕೆ ಅದನ್ನು ಬೆಳೆಯುವಂತೆ ಮಾಡುವಳು. ಈ ಕಾದಂಬರಿ ಕೇವಲ ಒಂದು ರಾಜ್ಯ ಅಥವಾ ರಾಣಿ ಬಗ್ಗೆ ಹೇಳದೇ ವಿದೇಶಿ ವ್ಯಾಪಾರ ವಹಿವಾಟು ಹೇಗೆ ನಡೆಯುತ್ತಿತ್ತು ಎಂಬುದನ್ನು ತಿಳಿಸುತ್ತದೆ. ಅಕಳಂಕ ಭಟ್ಟಾಚಾರ್ಯ ಕನ್ನಡ ಶಬ್ದಕೋಶದ ನಿಘಂಟನ್ನು ಸಂಸ್ಕೃತದಲ್ಲಿ ಬರೆದವರು, ಅವರು ಈಕೆಗೆ ವೈರಾಗ್ಯವೆನಿಸಿದಾಗ ಹೇಳುವ ಮಾತುಗಳು, ಚನ್ನಭೈರಾದೇವಿ ಯಾವುದೇ ಶಾಸನ, ವೀರಗಲ್ಲುಗಳು ಹೆಚ್ಚಾಗಿ ಹಾಕಿಸದ ಕಾರಣಗಳು, ಸಾಳುವ ವಂಶ ಮುಂದುವರೆಯಲು ಉತ್ತರಾಧಿಕಾರಿಯನ್ನು ಹುಡುಕಬೇಕು ಎಂದಾಗ ಈಕೆ 'ಅಂತಹ ರಾಮ,ಕೃಷ್ಣ ರಾಳಿದ ವಂಶಗಳೇ ಉಳಿದಿಲ್ಲ ಇನ್ನೂ ನಮ್ಮದು ಯಾವ ಲೆಕ್ಕ' ಎನ್ನುವ ಪ್ರಬುದ್ಧ ನುಡಿಗಳು ಎಲ್ಲವೂ ಅದ್ಬುತ. ಇಂದಿನ ಅರಾಜಕತೆಯ ದಿನಗಳಲ್ಲಿ ಚನ್ನಭೈರಾದೇವಿಯಂತಹ ಪ್ರಜೆಗಳಿಗೆ ಬದುಕನ್ನು ಮುಡಿಪಾಗಿಟ್ಟ ರಾಣಿ ಬಗ್ಗೆ ತಿಳಿದುಕೊಳ್ಳಲು ಈ ಕಾದಂಬರಿ ಸೂಕ್ತ. ಧನ್ಯವಾದಗಳು ಗಜಾನನ ಸಾರ್ ಈ ಅದ್ಬುತ ಕಾದಂಬರಿ ಕೊಟ್ಟಿದ್ದಕ್ಕೆ.
ಗಜಾನನ ಶರ್ಮ ಅವರ ಸಂಶೋಧನೆ ಅಪಾರವಾಗಿ ಈ ಕಾದಂಬರಿಯಲ್ಲಿ ಹೆಣೆಯಲ್ಪಟ್ಟಿದೆ, ಇ1500 ರ ಕರಾವಳಿಯ ಜನ ಜೀವನ, ಪೋರ್ಚುಗೀಸರ ದುರಾಡಳಿತ, ಮತಾಂಧತೆ. ನಾನು ಈ ವರೆಗೆ ಕೇಳಿರದ ರಾಣಿ ಭೈರಾದೇವಿಯ ನೇರ ಆಡಳಿತ ಮತ್ತು ವ್ಯಾಪಾರ ಚತುರತೆ ಎಲ್ಲವೂ ಕಣ್ಣಿಗೆ ಕಟ್ಟಿದಂತೆ ಆಯಿತು.
ಕನ್ನಡ ಉತ್ಕೃಷ್ಟ ಕಾದಂಬರಿಗಳಲ್ಲಿ ಒಂದು. ಐತಿಹಾಸಿಕ ಹಿನ್ನಲೆಯ ಈ ಪುಸ್ತಕ ರಾಣಿ ಚೆನ್ನಬೈರಾದೇವಿಯ ವೀರಗಾಥೆಯನ್ನು ನೈಜತೆಯೊಂದಿಗೆ ಚಿತ್ರಿಸಿದೆ. ಲೇಖಕರ ಅಧ್ಯಯನಶೀಲತೆಗೆ ಸಹಸ್ರ ಪ್ರಣಾಮಗಳು. ರಾಜಕೀಯ, ಯುದ್ಧ ತಂತ್ರ ಇವುಗಳ ಜೊತೆ ಜೊತೆಗೆ ಬರುವ ವೈಚಾರಿಕತೆ, ಆಧ್ಯಾತ್ಮ ಹಾಗೂ ಸ್ತ್ರೀ ಸಂವೇದನೆಗಳ ಜಳಕು ಬಹಳ ಮೆಚ್ಚುಗೆಯಾಯ್ತು. ರೊಚಕ ಕತೆಗಾಗಿ ಮೊದಲನೇ ಸಲ ಓದಿದರೆ, ಎರಡನೇ ಓದು ಕತೆಯ ಹೊರತಾದ ಹಲವು ಸ್ವಾರಸ್ಯಗಳ ಬಿಚ್ಚಿಟ್ಟಿತ್ತು. ನನಗೆ ಓದುವಾಗ ನಮ್ಮ ವೆರಣೆಯ ವಿಟ್ಟು ಪೈ ( ಸ್ವಪ್ನ ಸಾರಸ್ವತದ ಮುಖ್ಯ ಪಾತ್ರ) ಬಹಳ ನೆನಪಾದರು. ಮುಂದೆ ವೆರಣೆಯ ಬಗ್ಗೆ ಉಲ್ಲೇಖ ಬಂದಾಗ ಖುಷಿಯಾಯ್ತು. ಅವ್ವರಸಿಯಾಗಿ ಅರ್ಧ ಶತಮಾನ ಆಳಿದರು ಇತಿಹಾಸ ಮರೆತಿರುವ ( ಅಥವಾ ಬೇಕಂತಲೇ ಅಳಿಸಿರುವ) ಇಂತಹ ನಾಯಕಿ/ ನಾಯಕರ ಕುರಿತಾದ ಪುಸ್ತಕಗಳನ್ನು ಪ್ರತಿಯೊಬ್ಬರು ಓದ ಬೇಕೆಂಬುದು ನನ್ನ ಅಭಿಪ್ರಾಯ.
A well written historical novel, that tracks the life of Rani Chennabhairadevi. Based on historical edicts, the story builds the life and times of this 16th century queen from coastal Karnataka. On the side, it also covers the sad story of the Portuguese rule in Goa, leading wiping out of the Hindus there by forced conversions.
The characters are well brought out by the author. The language is simple, and also has the regional flavor of Kannada from these areas.
ಇತಿಹಾಸ ಮರೆತ ರಾಣಿಯೊಬ್ಬಳ ಕತೆ. ಮಲೆನಾಡಿನ ಕಗ್ಗಾಡುಗಳ ಜನರ ಜೀವನವನ್ನ ಶ್ರೀಮಂತವಾಗಿಸಿದ, ಸಾಮಾನ್ಯರಂತೆ ಇದ್ದ ಅಸಮಾನ್ಯ ರಾಣಿಯೊಬ್ಬಳ ಗಾಥೆ. ಲೇಖಕರೇ ಹೇಳುವಂತೆ, ತನ್ನ ಸಾಮ್ರಾಜ್ಯವನ್ನ ಯಾವುದೇ ಅಪೇಕ್ಷೆಯಿಲ್ಲದೆ 54 ವರ್ಷಗಳ ಕಾಲ ಪೊರೆದ "ಕಾಳುಮೆಣಸಿನ ರಾಣಿ", ಚೆನ್ನಭೈರಾದೇವಿಯ ಚರಿತ್ರೆ. ನೇಪಥ್ಯಕ್ಕೆ ಸರಿದ ಸಾಮ್ರಾಜ್ಞೆಯೊಬ್ಬಳ ಯಶೋಗಾಥೆಯನ್ನು, ತಮ್ಮ ಅಧ್ಯಯನದ ಹಿನ್ನಲೆಯಲ್ಲಿ ಡಾ|| ಗಜಾನನ ಶರ್ಮರವರು ಅತ್ಯಂತ ಸೊಗಸಾಗಿ ಚಿತ್ರಿಸಿದ್ದಾರೆ.
Hindus are the only community that accepts the lies of slavers and shamelessly justifies the lies of slavers. We are filled with an inferiority complex and irrational admiration towards the whitewashed truth. All these problems arise from ignorance of history. Marxist historians deliberate attempt to hide the resistance movement by kings and queens against the heinous crimes of colonizers kept us in the dark pit colonized mindset. The real stories of our Kings and queens valor eradicated with the poison of secularism, And copies of repeated lies served as truth for a mass of the young generation of this holy land. In between this hostile environment, "Gajanana Sharma" deserves appreciation for freeing historical figures from the clutches of masculinist European historians and pseudo-intellectuals. Even though I am from Karnataka, I had little knowledge of "Chenna Bhiradevi" until I read this historical novel. Our history books have chapters for those who killed the spirit of this holy land like Aurangzeb, Taimur, Hitler, Karl Marx, Vascodigama, and the British. But why can't it have chapters for those who kept the civilization and culture alive for the last 5000 years? It's good to see Authors like Ghajanana Sharma, Vikram Sampath, Rajiv Malhotra, and J sai Deepak dedicating their life to decolonizing Indians mindset by introducing us to the unbiased Indian history.
Even though it's a fictional novel, it's based on a real story of a great ruler feared and admired by enemies. The eurocentric perception of being a great ruler is associated with conquest and violence. Our colonial mind led to passive ignorance towards native rulers who ruled with sacrifice and service as their ethics. This depravity led to the ignorance of a queen who uplifted the Kokana region for nearly 54 years with prosperity and harmony.
Napoleon Bonaparte, Krishnadevaraya, Shivaji, Immadi Pulakesi, and Nalvadi Krishna raja Wodeyar has been my favorite rulers till this time because of their conquest and administration. But after reading the Historical Novel about "Chenna Bhyra Devi", Everyone seems small in front of her greatness.
Her administration and Decision-making skills, Effort to keep religious unity, Harmonious relation with Vijayanagara and Bijapur empire, the practice of Dharma, Ferociasness and strategic skills in war, Selfless love towards her people, and Expansion of Bussiness till Europe makes her one of the immaculate rulers ever existed in the history among mighty rulers. She was also called as a contemporary of Queen "Elizabeth" of England for outwitting the multiple adversities in her life.
Black pepper queen story must be added to Indian school textbooks instead of Mughals and British so our young generation could grow up with the values and courage of pepper queen. If the government cares about the upliftment of underprivileged women, Chennabhyra Devi's story must be part of our education. She could become an inspiration to men and women to live an honest life.
Book also gives us an Exposure to the culture and tradition of Jains, atrocities of Christian missionaries, the Grandeur of the Nagire dynasty, Trade between Europe and India, and the political situation of the 15-16th century.
I should thank the Goodread community for introducing me to this phenomenal work.
Rating: 5 stars Author: ಡಾ. ಗಜಾನನ ಶರ್ಮ Book name: Chennabhairadevi
ಧೀಮಂತ ರಾಣಿಯ ಚೇತೋಹಾರಿ ಕಥನ -ಡಾ. ಮೋಹನ್ ತಲಕಾಲುಕೊಪ್ಪ ಇದು ಕಾಳುಮೆಣಸಿನ ರಾಣಿಯಂದೇ ಪ್ರಖ್ಯಾತಿ ಗಳಿಸಿದ್ದ ಚೆನ್ನಭೈರಾದೇವಿಯ ಕಥನ. ಹದಿನಾರನೇ ಶತಮಾನದಲ್ಲಿ ಕರಾವಳಿಯ ಕುಂದಾಪುರದ ತ್ರಾಸಿಯಿಂದ ಕಾರವಾರ ಸಮೀಪದ ಚಿತ್ತಾಕುಲದವರೆಗೆ, ಶರಾವತಿ ನದಿ ಕಣಿವೆ ಭಾಗಗಳ ಜೊತೆಗೆ ಸಾಗರ ತಾಲೂಕಿನ ಆವಿನಹಳ್ಳಿಯವರೆಗೂ ವಿಸ್ತರಿಸಿದ್ದ ಅನನ್ಯ ಸಾಮ್ರಾಜ್ಯದ ಅದ್ಭುತ ಕಥೆ. ಮುನ್ನುಗ್ಗಿ ಬಂದ ಪೋರ್ಚುಗೀಸರನ್ನು ಶೌರ್ಯದಿಂದ ಹಿಮ್ಮೆಟ್ಟಿಸಿ ಗೋವೆಗೆ ಸೀಮಿತವಾಗುವಂತೆ ಮಾಡಿದ, ಬಿಳಗಿ, ಬಿಜಾಪುರ, ಕಾರ್ಕಳ, ಬಸ್ರೂರು, ಕಲ್ಲಿಕೋಟೆ ಮುಂತಾದ ಪ್ರದೇಶದ ಅರಸರೊಂದಿಗೆ ಸೌಹಾರ್ದಯುತ ಸಂಬಂಧ ಇರಿಸಿಕೊಂಡು ನಗಿರೆಯ ಶ್ರೀಮಂತ ರಾಜ್ಯ ಕಟ್ಟಿದ ರಾಣಿಯ ಚರಿತೆ, ಇನ್ನಿತರ ಸಾಂಬಾರ ಪದಾರ್ಥಗಳೊಟ್ಟಿಗೆ ವಿಶೇಷವಾಗಿ ಕಾಳುಮೆಣಸಿನ ಕೃಷಿ ಹಾಗೂ ನಿರ್ಯಾತಕ್ಕೆ ಅಭೂತಪೂರ್ವ ಉತ್ತೇಜನ ನೀಡಿದ ವ್ಯವಹಾರ ಕುಶಲಿಯ ಕಥೆ. ಚಾಣಾಕ್ಷ ಆಡಳಿತದ ಮೂಲಕ ಬರೋಬ್ಬರಿ 54 ವರ್ಷ ಯಶಸ್ವಿಯಾಗಿ ರಾಜ್ಯಭಾರ ಮಾಡಿದ, ರಾಣಿಯಂತೆ ಮೆರೆಯದೆ ಸರ್ವ ಜನಾನುರಾಗಿಯಾಗಿ ಸರಳತೆ ಮೆರೆದ ಹೆಣ್ಣೊಬ್ಬಳ ಸಾಹಸಗಾಥೆ. ಎಲ್ಲಕ್ಕೂ ಮಿಗಿಲಾಗಿ ನಾನು ಬೆಳೆದ ಪರಿಸರದ (ಸಾಗರ ತಾಲೂಕಿನ ಹಿರೇಮನೆ ಗ್ರಾಮ; ಶರಾವತಿ ನದಿಗೆ ಕಟ್ಟಿದ ಲಿಂಗನಮಕ್ಕಿ ಡ್ಯಾಮ್ ಸಮೀಪ) ವೈಭವೋಪೇತವಾಗಿ ಮೆರೆದ ಸಂಸ್ಥಾನದ ಐತಿಹ್ಯ ಎಂಬ ಹಿನ್ನೆಲೆಯಲ್ಲಿ ವಿಶೇಷ ಆಸಕ್ತಿ ಹುಟ್ಟಿಸಿದ ಕಥನ. ಮೊದಲ ಬಾರಿಗೆ ಚೆನ್ನಭೈರಾದೇವಿಯ ಕಾನೂರು ಕೋಟೆಯ ಬಗ್ಗೆ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲೋ ಅಥವಾ ಸುಧಾದಲ್ಲೋ ಬಹಳ ಹಿಂದೆ ಓದಿದ ಅಸ್ಪಷ್ಟ ನೆನಪು. ನನ್ನ ಗುರುಗಳಾದ ಡಾ. ಕೆ. ಎನ್. ಗಣೇಶಯ್ಯನವರು ಸಮಕಾಲೀನ ವ್ಯಕ್ತಿಗಳ ಮೂಲಕ ರೂಪಿಸಿರುವ ಚಾರಿತ್ರಿಕ ಥ್ರಿಲ್ಲರ್ ‘ಬಳ್ಳಿಕಾಳ ಬೆಳ್ಳಿ’ ಎಂಬ ಕಾದಂಬರಿಯಲ್ಲಿ ರಾಣಿಯ ವಿವರಗಳಿವೆ ಎಂದು ಕೇಳಿದ್ದೆ (ಅದನ್ನು ನಾನು ಓದಿಲ್ಲ). ಇತ್ತೀಚೆಗೆ ಕನ್ನಡದಲ್ಲಿ ಬಂದ ಐತಿಹಾಸಿಕ ಕಾದಂಬರಿಗಳು – ವಸುಧೇಂದ್ರರ ತೇಜೋ ತುಂಗಭದ್ರಾ, ಅರುಣ್ ಪ್ರಸಾದರ ಬೆಸ್ತರರಾಣಿ ಚಂಪಕಾ- ರೀತಿಯ ಇತಿಹಾಸವನ್ನು ಪುನರ್ರಚಿಸುವ ನಿಟ್ಟಿನಲ್ಲಿ ಮೂಡಿದ ಮಹತ್ವದ ಕಾದಂಬರಿ ಇದು. ಪಾಶ್ಚಾತ್ಯ ಇತಿಹಾಸಕಾರರ ಅಪಕಲ್ಪನೆಯಿಂದ ಹುಟ್ಟಿದ ‘ಅನೈತಿಕ ಸಂಬಂಧದ ಸುಳಿಯಲ್ಲಿ ಸಿಲುಕಿ ಅವನತಿ ಹೊಂದಿದ ರಾಣಿ” ಎಂಬ ಕಳಂಕವನ್ನು ಸೋದಾಹರಣವಾಗಿ ಅಲ್ಲಗಳೆಯುವ ವಿವರಗಳನ್ನು ಇಲ್ಲಿನ ‘ಲೇಖಕರ ಮಾತು’ ತೆರೆದಿಟ್ಟಿದೆ. ಕಾದಂಬರಿಯಲ್ಲಿ ರಾಣಿಯ ಧೈರ್ಯ, ಸ್ಥೈರ್ಯ, ರಾಜಕೀಯ ಪ್ರಜ್ಞೆ, ನೀತಿ-ನಿರ್ಧಾರಗಳ ಜೊತೆಗೆ ಶಬಲೆಯ ಬೇಹುಗಾರಿಕೆ, ಜಿನದತ್ತನ ದುರಂತಮಯ ಬದುಕು, ಸತ್ರಾಜಿತನ ಬುದ್ಧಿವಂತಿಕೆ, ಸಭಾಹಿತರ ನಿರ್ಣಯ ಶಕ್ತಿ - ಹೀಗೆ ಎಲ್ಲ ಪಾತ್ರ ಚಿತ್ರಣ ಮನೋಹರವಾಗಿ ಮೂಡಿಬಂದಿವೆ. ರಾಣಿಯ ಮೇಲಿನ ದ್ವೇಷದಿಂದ ಅವಳ ಮಾವ ಕೃಷ್ಣದೇವರಸ ಹಬ್ಬಿಸುವ ರಾಣಿ ಮತ್ತು ಅವಳ ಅಂಗರಕ್ಷಕ ಚೆನ್ನಗೊಂಡನ ಅನೈತಿಕ ಸಂಬಂಧದ ಕಟ್ಟುಕತೆಯನ್ನು ಪ್ರಧಾನಿ ಸಭಾಹಿತರು ಮತ್ತು ರಾಣಿ ನಿರ್ವಹಿಸಿದ ಬಗೆ ಚೆನ್ನಾಗಿ ರೂಪಿತ. ಪೋರ್ಚುಗೀಸರನ್ನು ಯುದ್ಧದಲ್ಲಿ ಗೆದ್ದು ಮರಳಿ ಬರುವ ಹೊತ್ತಿಗೆ ಕಪಟದಿಂದ ದಾಳಿ ಮಾಡಿದ ಕೆಳದಿಯ ಸೈನ್ಯವನ್ನು ಕತ್ಲೆಕಾನಿನ ದಟ್ಟ ಅಡವಿಯಲ್ಲಿ ನಾನಾ ಉಪಾಯಗಳಿಂದ ಸೋಲಿಸಿದ ವಿವರಗಳು ಕುತೂಹಲಕಾರಿ. ಆ ಕಾಲದಲ್ಲಿ ರಾಜದ್ರೋಹ/ಅಪರಾಧ ಎಸಗಿದವರನ್ನು ಬಾಯಿಬಿಡಿಸಲು ಬಳಸುತ್ತಿದ್ದ ವಿವಿಧ ಕ್ರಮಗಳು ಆಶ್ಚರ್ಯ ತರಿಸುತ್ತವೆ. ರಾಣಿಯ ಗುರುಗಳಾದ ವರ್ಧಮಾನ ಸಿದ್ಧಾಂತಿಗಳ ಪತ್ನಿ ನಾಗಬ್ಬೆ ಜೀವತ್ಯಾಗ ಮಾಡುವುದಕ್ಕಾಗಿ ಅನುಸರಿಸುವ, ಜೈನಧರ್ಮಕ್ಕೇ ವಿಶಿಷ್ಟವಾದ ‘ಸಲ್ಲೇಖನ ವ್ರತ’ದ ವಿವರಗಳು ಗಮನ ಸೆಳೆಯುತ್ತವೆ. ಪೋರ್ಚುಗೀಸರ ಕ್ರೌರ್ಯ, ದೌರ್ಜನ್ಯ, ಮತಾಂತರಗಳ ಬಗ್ಗೆ ಕನ್ನಡದ ಓದುಗರಿಗೆ ಸ್ವಪ್ನಸಾರಸ್ವತ, ತೇಜೋತುಂಗಭದ್ರಾ ಮುಂತಾದ ಕಾದಂಬರಿಗಳ ಮೂಲಕ ಈಗಾಗಲೇ ಅಲ್ಪಸ್ವಲ್ಪ ಗೊತ್ತಾಗಿದೆ. ಈ ಕಾದಂಬರಿಯಲ್ಲೂ ಅದರ ಮಾಹಿತಿ ಹಾಗೂ ಮತಾಂತರದ ಪ್ರಕ್ರಿಯೆಯನ್ನು ರಾಣಿ ತನ್ನ ರಾಜ್ಯದಲ್ಲಿ ತಡೆಯಲು ಮಾಡಿದ ಪ್ರಯತ್ನಗಳು, ಜೊತೆಗೆ ಪೋರ್ಚುಗೀಸರ ಕಾಟವನ್ನು ತಾಳಲಾರದೆ ಗೋವೆ ಬಿಟ್ಟು ಬಂದ ಸಾರಸ್ವತ ಸಮುದಾಯಕ್ಕೆ ಆಶ್ರಯ ಕೊಟ್ಟ ವಿವರ ಲಭ್ಯ. ಜೈನಧರ್ಮಕ್ಕೆ ಸೇರಿದ ರಾಣಿಯ ಪಟ್ಟಾಭಿಷೇಕವಾಗುವಾಗ ವೈದಿಕ–ಜೈನಧರ್ಮದ ಎರಡೂ ಸಂಪ್ರದಾಯಗಳನ್ನು ಅನುಸರಿಸುವುದು ಆಶ್ಚರ್ಯವೇ. ಪಟ್ಟಾಭಿಷೇಕದ ತಯಾರಿ ಹಾಗೂ ಅದರ ವಿವರಗಳು ಅನ್ಯಾದೃಶ. ರಾಜರಿಲ್ಲದ ಈ ಕಾಲದಲ್ಲಿ ನಮ್ಮ ಪೀಳಿಗೆಗೆ ಆ ಕಲ್ಪನೆಯೇ ಇರುವುದಿಲ್ಲ! ಮುಖಪುಟ ಅತ್ಯಾಕರ್ಷಕ. ನಿರೂಪಣೆ ಲಾಲಿತ್ಯಮಯ. ಲೇಖಕರ ಭಾಷಾ ಫ್ರೌಢಿಮೆ ಹಾಗೂ ಕುಸುರಿ ಕೆಲಸ ಮನಸೆಳೆಯುತ್ತದೆ. ಅವರ ವ್ಯಕ್ತಿತ್ವದ ಲವಲವಿಕೆ ಕಾದಂಬರಿಯಲ್ಲಿ ಪ್ರತಿಫಲನ. ತರ್ಕಬದ್ಧ. ಎಲ್ಲೂ ಮಿತಿಮೀರದ ಸಂಯಮ. ಸಾಕಷ್ಟು ಅಧ್ಯಯನ ಮಾಡಿ ಸಮಚಿತ್ತದಲ್ಲಿ ರಚಿಸಿದ ಕಾದಂಬರಿ. ಇದೊಂದು ಮಾದರಿ ಕೆಲಸ. ಇಂಥಾ ಸಶಕ್ತ ಬರಹಗಾರರನ್ನು ನಾನು ಈವರೆಗೆ ಓದದೇ ಯಾಕೆ ತಪ್ಪಿಸಿಕೊಂಡೆ ಎಂಬುದು ಗೊತ್ತಾಗುತ್ತಿಲ್ಲ. ಡಾ. ಶರ್ಮರ ಅಭಿಜಾತ ಪ್ರತಿಭೆ ವಿವರವನ್ನು ಕಟ್ಟಿಕೊಡುವುದರಲ್ಲಿ ಹಾಗೂ ಪಾತ್ರಗಳ ಸಂವಾದದಲ್ಲಿ ಅನಾವರಣ. ವಿವಿಧ ವ್ಯಕ್ತಿಗಳ ಅಂತರಂಗದ ತುಮುಲ, ಭಾವನೆಗಳ ತಾಕಲಾಟ ಹಾಗೂ ಇನ್ನಿತರ ವಿವರಗಳ ಸೊಗಸಾದ ನಿರ್ವಹಣೆ ಇಲ್ಲಿದೆ. ರಾಣಿಯ ಸಾಮ್ರಾಜ್ಯವಿದ್ದ ಶರಾವತಿ ಕಣಿವೆ ಭಾಗದವರಾದ ಡಾ. ಶರ್ಮರ ಆಳವಾದ ಪ್ರಾದೇಶಿಕ ಅಧ್ಯಯನ ಈ ಕಾದಂಬರಿಗೆ ಅಧಿಕೃತತೆ ಒದಗಿಸಿದೆ. ಈ ರೀತಿಯ ಕಾದಂಬರಿಗಳ ಮೂಲಕ ವಾಸ್ತವತೆಗೆ ಹತ್ತಿರವಾದ ಇತಿಹಾಸವನ್ನು ತಿಳಿಯುವುದು ಮನೋರಂಜನೆಯ ಜೊತೆಗೆ ಮಾಹಿತಿಯನ್ನು ಅರಗಿಸಿಕೊಳ್ಳುವ ಪ್ರಕ್ರಿಯೆ. ಇಲ್ಲಿ ಚಿತ್ರಿತವಾದ ಐತಿಹಾಸಿಕ ವ್ಯಕ್ತಿ/ಅಂಶಗಳು ಭಾರತದ ಪ್ರತಿಯೊಂದು ಪ್ರಾಂತ್ಯದಲ್ಲಿಯೂ ಇರಬಹುದು. ಅವುಗಳನ್ನು ಈ ರೀತಿ ನಮ್ಮ ಅಧ್ಯಯನಕಾರರೇ ಕೂಲಂಕಷವಾಗಿ ಅಭ್ಯಸಿಸಿ ಇತಿಹಾಸವನ್ನು ಪ್ರಾಮಾಣಿಕವಾಗಿ ಪುನರ್ರಚನೆ ಮಾಡುವುದು ಯುವಪೀಳಿಗೆಗೆ ಆಸಕ್ತಿದಾಯಕ ಮಾಹಿತಿಯ ಆಕರ. ಇಲ್ಲದಿದ್ದರೆ ಈ ರಾಣಿಯ ವಿಚಾರದಲ್ಲಿ ಈವರೆಗೆ ಆದಂತೆ ಪಾಶ್ಚಾತ್ಯರ ತಿರುಚಿದ ಬರವಣಿಗೆ ಹಾಗೂ ವ್ಯಕ್ತಿತ್ವ ಹನನದ ಇತಿಹಾಸವನ್ನೇ ಓದಬೇಕಾದೀತು. ರಾಣಿ ಕಟ್ಟಿಸಿದ ಚತುರ್ಮುಖ ಬಸದಿ, ಕೋಟೆ-ಕೊತ್ತಲಗಳು ಹಾಗೂ ಆ ಪ್ರದೇಶದಲ್ಲಿ ಇವತ್ತಿಗೂ ಇರುವ ಚೆನ್ನಾಭೈರಾದೇವಿ ಹಾಗೂ ಕಾತ್ಯಾಯಿನಿ ಮೊದಲಾದ ದೇಗುಲಗಳ ಫೋಟೋ ಇದ್ದಿದ್ದರೆ ಓದುಗರಿಗೆ ಆ ಕಾಲದ ಕಥೆಯನ್ನು ಕಲ್ಪಿಸಿಕೊಳ್ಳಲು ಇನ್ನಷ್ಟು ಸುಲಭವಾಗುತ್ತಿತ್ತು. ಕಾದಂಬರಿಗೊಂದು ವಿಶಿಷ್ಟ ಮೋಹಕತೆ ಪ್ರಾಪ್ತವಾಗುತ್ತಿತ್ತು. ನನ್ನ ದೃಷ್ಟಿಯಲ್ಲಿ ಕಥನದ ಮೂಲಕ ನೈಜ ಇತಿಹಾಸವನ್ನು ಅರಿಯುವುದರ ಜೊತೆಗೆ ಇಂತಹ ಕಾದಂಬರಿಗಳಲ್ಲಿ ಪ್ರಸ್ತುತ ದಿನಮಾನಕ್ಕೆ ಬೇಕಾದ ಉಪಯುಕ್ತ ಅಂಶಗಳಿದ್ದರೆ ಅನುಕೂಲ. ಹಾಗಂತ ಇದು ಕಡ್ಡಾಯವಲ್ಲ. ಈ ನಿಟ್ಟಿನಲ್ಲೂ ಈ ಪುಸ್ತಕ ಕುತೂಹಲಕಾರಿ. ರಾಜಪೀಠಕ್ಕೆ ಯಾವತ್ತೂ ಇರಬೇಕಾದ ಪ್ರಜಾಹಿತದ ದೃಷ್ಟಿಯ ಜೊತೆಗೆ ಕಾದಂಬರಿಯಲ್ಲಿ ನಗಿರೆ ಸಾಮ್ರಾಜ್ಯದ ಕಾಡುಗಳಲ್ಲಿ ಲಭ್ಯವಿದ್ದ ಹದಿನಾರು ಕಾಳು ಮೆಣಸಿನ ತಳಿಗಳ ಬಗ್ಗೆ ಪ್ರಸ್ತಾಪ ಬರುತ್ತದೆ. ಚೌಕಟ್ಟಿನಿಂದ ಸ್ವಲ್ಪ ಹೊರಹೋದರೂ ಆ ತಳಿಗಳ ಬಗ್ಗೆ ಒಂದಷ್ಟು ಮಾಹಿತಿ ಇದ್ದಿದ್ದರೆ ನನ್ನಂತಹ ಸಸ್ಯ/ಕೃಷಿ ವಿಜ್ಞಾನಿಗೆ ಅನುಕೂಲವಾಗುತ್ತಿತ್ತು ಎನ್ನುವುದು ನನ್ನ ಸ್ವಾರ್ಥ! ಸಾಮ್ರಾಜ್ಯ ಮೆರೆದ ಪ್ರದೇಶದಲ್ಲಿದ್ದ (ಇವತ್ತಿಗೂ ಇರಬಹುದಾದ) ದಟ್ಟ ಕಾಡಿನ/ಮರಗಳ ವೈವಿಧ್ಯ ಕುತೂಹಲಕಾರಿ. ಗೇರುಸೊಪ್ಪೆಗೆ ಅಲ್ಲಿ ಹೇರಳವಾಗಿ ಬೆಳೆಯುವ ಗುಡ್ಡೆಗೇರು ಮರಗಳಿಂದಾಗಿ ‘ಭಲ್ಲಾತಕೀಪುರ’ ಎಂಬ ಹೆಸರು ಬಂದಿದ್ದು. ಚಂದಕ್ಕನ ಮರದ ಅಂಟು ಹಾಗೂ ಬೈನೆಮರದ ನಾರಿನ ಪದರವನ್ನು ಕಾಡುಕೋಣ ತಿವಿತದ ಗಾಯಕ್ಕೆ ಕಟ್ಟುವುದು, ಮರವೆ ಬಳ್ಳಿ, ತುರುಚೆ ಬಳ್ಳಿ, ಒಳಗೆರೆ ಮರ, ಗುಳಮಾವು, ಸುರಹೊನ್ನೆ ಮುಂತಾದ ಸಸ್ಯಗಳ ಮಾಹಿತಿ, ರಾಜವೈದ್ಯರು ಕೆಲವು ಗಿಡಮೂಲಿಕೆಗಳ ಔಷಧಿಯನ್ನು ಕೊಟ್ಟು ರಾಣಿಯ ಖಿನ್ನತೆಯನ್ನು ನಿವಾರಿಸುವುದು ಇತ್ಯಾದಿ ವಿವರಗಳು ಆಸಕ್ತಿಕರ. ಈ ಬಗ್ಗೆ ಅಧ್ಯಯನ ಮಾಡುವುದಕ್ಕೆ ಕಾದಂಬರಿ ಹೊಳಹು ನೀಡಿದೆ. ಕಾದಂಬರಿಯ ಕೊನೆಯ ಭಾಗದಲ್ಲಿ, ನಗಿರೆಯ ಸೈನ್ಯವನ್ನು ಸೋಲಿಸಿದ ಕೆಳದಿಯ ವೆಂಕಟಪ್ಪ ನಾಯಕನ ಸೈನ್ಯ ರಾಣಿಯ ಸಾಮ್ರಾಜ್ಯದ ಎಲ್ಲ ಕುರುಹುಗಳನ್ನೂ ಧ್ವಂಸಗೈಯುತ್ತದೆ. ಎಲ್ಲ ಆಕ್ರಮಣಕಾರರೂ ಒಂದು ಸಂಸ್ಥಾನವನ್ನು ಗೆದ್ದು ಸಂಪತ್ತನ್ನು ಲೂಟಿ ಮ���ಡಿದ ಮೇಲೆ ಅಲ್ಲಿನ ಕೋಟೆ, ಅರಮನೆ, ದೇಗುಲ ಇತ್ಯಾದಿ ರಚನೆಗಳನ್ನು ಯಾಕಾದರೂ ಧ್ವಂಸ ಮಾಡುತ್ತಾರೋ? ಅವನ್ನು ಹಾಗೇ ಬಿಟ್ಟಿದ್ದರೆ ನಾವು ಈಗ ನೋಡಬಹುದಿತ್ತು ಎಂಬ ಆಸೆ ಮನದಲ್ಲಿ ಮೂಡುತ್ತದೆ. ಆದರೆ ಮನುಷ್ಯನ ಕ್ರೌರ್ಯಕ್ಕೆ ಕೊನೆ ಎಲ್ಲಿದೆ? ಇಂತಿದ್ದರೂ ರಾಣಿಯ ಸಾಮ್ರಾಜ್ಯ ವ್ಯಾಪಿಸಿದ್ದ ಹಾಡುವಳ್ಳಿ, ನಗಿರೆ, ಗೇರುಸೊಪ್ಪೆ, ಕಾನೂರು, ಹೆನ್ನಿ, ಮೇದಿನಿ, ಕತ್ಲೆಕಾನು ಇತ್ಯಾದಿ ಪ್ರದೇಶಗಳನ್ನು ಮತ್ತು ಅಲ್ಲಿನ ಅವಶೇಷಗಳನ್ನು ಪ್ರತ್ಯಕ್ಷ ನೋಡುವ ಕುತೂಹಲ ಹುಟ್ಟಿಸಿದ ಕಾದಂಬರಿ. ಕೆಳದಿಯ ದೊರೆಗೆ ಸೆರೆಸಿಕ್ಕ ವೃದ್ಧ ರಾಣಿಯ ಅಂತ್ಯದೊಂದಿಗೆ ಮುಗಿಯುವ ಕಾದಂಬರಿ ಉಳಿಸಿದ್ದು ಗಾಢ ವಿಷಾದ. ಕೆಲವು ಕಡೆ ಪಾತ್ರ/ವಿವರಗಳು ಇಡಿಕಿರಿದು ಓದನ್ನು ಸ್ವಲ್ಪ ನಿಧಾನಗೊಳಿಸುವುದು ಬಿಟ್ಟರೆ ಇದೊಂದು ರಮ್ಯಾದ್ಭುತ ಕಾದಂಬರಿ ಎನ್ನುವುದು ನಿಸ್ಸಂಶಯ. ತನ್ನ ಸಮಕಾಲೀನಳಾದ ಇಂಗ್ಲೆಂಡಿನ ಎಲಿಜೆಬತ್-I ರಾಣಿಗೆ ಸರಿಮಿಗಿಲೆನಿಸುವ ಸಾಧನೆಗೈದ ನಮ್ಮ ನೆಲದ ಚೆನ್ನಭೈರಾದೇವಿಯ ಈ ಕಥನ ಇಂಗ್ಲೀಷ್, ಹಿಂದಿ ಹಾಗೂ ದೇಶದ ಇನ್ನಿತರ ಭಾಷೆಗಳಿಗೆ ಅನುವಾದವಾಗುವ ಅಗತ್ಯ ತೀರಾ ಇದೆ. ಜೊತೆಗೆ ಇದನ್ನು ಸಿನಿಮಾ ನಿರ್ದೇಶಕರಾದ ನಾಗಾಭರಣ ‘ಕಲ್ಲರಳಿ ಹೂವಾಗಿ’ ಚಿತ್ರದಲ್ಲಿ, ರಾಜಮೌಳಿ ‘ಬಾಹುಬಲಿ’ ಯಲ್ಲಿ, ಸಂಜಯ್ ಲೀಲಾ ಬನ್ಸಾಲಿ ‘ಪದ್ಮಾವತ್’ ಚಿತ್ರದಲ್ಲಿ ಮಾಡಿದ ಹಾಗೆ ಒಂದು ಅಪೂರ್ವ ಸಿನಿಮಾವಾಗಿ ಅರಳಿಸಿ ವಿಶ್ವದೆಲ್ಲೆಡೆ ಪಸರಿಸಬಹುದಾದ ಎಲ್ಲ ರೋಚಕ ಹಾಗೂ ಮನಾಕರ್ಷಕ ಅಂಶಗಳು ಕಾದಂಬರಿಯಲ್ಲಿವೆ. ವಿಸ್ಮೃತಿಗೆ ಹಾಗೂ ಕಳಂಕಿತ ಚರಿತ್ರೆಗೆ ಸಂದಿದ್ದ ಕನ್ನಡನಾಡಿನ ಹೆಮ್ಮೆಯ ರಾಣಿ ‘ಚೆನ್ನಭೈರಾದೇವಿ’ಯ ಅಕಳಂಕ ಚರಿತೆಯನ್ನು ಮರುರೂಪಿಸಿದ ಡಾ. ಶರ್ಮರಿಗೆ ಅಭಿನಂದನೆ ಹಾಗೂ ಅಭಿವಂದನೆ.
ಇತ್ತೀಚಿನ ಐತಿಹಾಸಿಕ ಕಾದಂಬರಿಗಳು ತುಂಬಾ ನಿರಾಸೆ ಮೂಡಿಸುತ್ತಿವೆ, ಮೊನ್ನೆ ಯಾರೋ ಮಯೂರವರ್ಮನ ಇತಿಹಾಸವೆಂದು ಕಸ ಬರೆದ ಹಾಗೆ ಇದೂ ಕೂಡ ದುರ್ಬಲ ಬರಹ. ಚೆನ್ನಭೈರಾದೇವಿ ಇತಿಹಾಸವನ್ನು ತಿಳಿದುಕೊಳ್ಳುವುದಕ್ಕಾಗಿ ಹಂಪನಾ ಮತ್ತು ಕಮಲ ಹಂಪನಾ ರವರ ಪುಸ್ತಕಗಳನ್ನು ಓದಿ... ಇದು ಓದುಗರನ್ನು ಭಾವಪರವಶರನ್ನಾಗಿ ಮಾಡಿ ಇತಿಹಾಸವೆಂದು ತಮ್ಮದೇ ಪೂರ್ವನಿರ್ಧರಿತ ಕಥೆಯನ್ನು ಹೇಳುವ ಹುನ್ನಾರವಷ್ಟೇ.
೫೪ ವರ್ಷಗಳ ಕಾಲ (೧೫೫೨ - ೧೬೦೬) ಹೈವ, ತುಳು,ಕೊಂಕಣಾದಿ ರಾಜ್ಯಗಳನ್ನು ಪಾಲಿಸಿದ ಚೆನ್ನಭೈರಾದೇವಿಯ ಕಥೆಯನ್ನು ಶರ್ಮರವರು ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಗೇರುಸೊಪ್ಪೆ,ನಗಿರೆ-ಬಸ್ತಿಕೇರಿಯಲ್ಲಿ ರಾಜ್ಯವಾಳಿದ ಚೆನ್ನಭೈರಾದೇವಿ. ಕೆಳೆದಿಯ ಕೃಷ್ಣದೇವರಸು, ಬಿಜಾಪುರ ಸುಲ್ತಾನರು, ಗೋವೆಯಲ್ಲಿದ್ದ ಪೋರ್ಚುಗೀಸರು ಹಲವಾರು ಸಲ ದಂಡೆತ್ತಿ ಬಂದರೂ ಈಕೆಯ ವಿರುದ್ಧ ಸೋತೋ ಅಥವಾ ಸಂಧಾನ ಮಾಡಿಕೊಂಡು ಹಿಂದುರುಗಿದ ಪ್ರಸಂಗಗಳನ್ನು ಇಲ್ಲಿ ಕಾಣಬಹುದು. ಜೋಗಕ್ಕೆ ಗೇರುಸೊಪ್ಪೆ ಜಲಪಾತ ಎಂಬ ಹೆಸರು ಆಕೆಯಿಂದ ಬಂದದ್ದು, ಪರಂಗಿಗಳು ಸುಟ್ಟು ಹಾಕಿದ್ದ ಹೊನ್ನಾವರ, ಭಟ್ಕಳ ಮತ್ತೆ ಆಕೆಯೇ ನಿರ್ಮಾಣಮಾಡಿದ್ದೂ, ಜೈನಧರ್ಮದ ಆಚಾರಣೆಗಳ ಕುರಿತೂ, ಇನ್ನೂ ಹಲವಾರು ಪ್ರಸಂಗಗಳನ್ನು ಇಲ್ಲಿ ಕಾಣಬಹುದು.
ಭಾರತದಲ್ಲಿ ಸಿಗುವ ಮಸಾಲ ಪದಾರ್ಥಗಳಿಗಾಗಿ ಮಾರುಹೋಗಿ, ಅದರಲ್ಲೂ ನಗಿರೆ-ಬಸ್ತೀಕೇರಿಯಲ್ಲಿ ದೊರಕುತ್ತಿದ್ದ ಕರಿಮೆಣಸು, ಬಿಳಿಮೆಣಸಿನ ವ್ಯಾಪಾರಕ್ಕಾಗಿ ಬಂದ ಪೋರ್ಚುಗೀಸರು, ಅಲ್ಬುಕರ್ಕ್ ನೇತೃತ್ವದಲ್ಲಿ ಗೋವೆಯನ್ನು ಆಕ್ರಮಣ ಮಾಡಿ ಅಲ್ಲಿರುವ ಹಿಂದೂ,ಮಹ್ಮದೀಯರನ್ನು ಕ್ರಿಶ್ಚಿಯನ್ನಾಗಿ ಮತಾಂತರಿಸಲು ಹೊರಟರು. ಕೆಳದಿ,ಬಿಜಾಪುರ,ವಿಜಯನಗರದ ಅರಸರೊಂದಿಗೆ ವೈರತ್ವವನ್ನು ಬೆಳೆಸಿಕೊಳ್ಳದೇ ಹಾಗು ತನ್ನ ರಾಜ್ಯವನ್ನು ಅಭಿವೃದ್ಧಿಪಡಿಸಲು ಪರಂಗಿಗಳ ಜೊತೆ ಚತುರತೆಯಿಂದ ವ್ಯಾಪಾರ ಮಾಡಿದ ಚೆನ್ನಭೈರಾದೇವಿಯ ವ್ಯವಹಾರದ ಕೌಶಲ್ಯವನ್ನು ಮೆಚ್ಚಿ *ಪೋರ್ಚುಗಲ್ ಚಕ್ರವರ್ತಿ "ರೈನಾದಿ ಪಿಮೆಂಟಾ" ಅದರರ್ಥ ಚೆನ್ನಭೈರಾದೇವಿ ಕರಿಮೆಣಸಿನ ರಾಣಿಯೆಂದು ಬಿರುದು ಕೊಡುತ್ತಾರೆ. ಅಲ್ಬುಕರ್ಕ್ ನಂತರ ನಗಿರೆಯನ್ನು, ಹೊನ್ನಾವರವನ್ನು ಆಕ್ರಮಣ ಮಾಡಲು ಗೋವೆಯ ವೈಸ್ರಾಯ್ *ಲೂಯಿಸ್ ಡೆ ಅಟಾಯಿಡೆ* ಚೆನ್ನಭೈರಾದೇವಿಯೊಡನೆ ಯುದ್ಧದಲ್ಲಿ ಸೋತು ಅವಮಾನದಿಂದ ಹಿಮ್ಮೆಟ್ಟುತ್ತಾನೆ. ಅದರಿಂದ ಆಕೆಯೊಂದಿಗೆ ಹೋರಾಡದೆ ಹಳೆಯ ವೈರವನ್ನೆಲ್ಲಾ ಮರೆತು ಪರಂಗಿಗಳು ಘನತೆಯಿಂದ ನಡೆದುಕೊಳ್ಳುತ್ತಾರೆ. ಆದರೆ ತನ್ನ ಜೀವನದಲ್ಲಿ ತುಂಬಾ ಹತ್ತಿರವಿರುವವರನ್ನು ಕಳೆದುಕೊಂಡು ಆ ದುಃಖದಲ್ಲಿ ವೈರಾಗ್ಯತಾಳುತ್ತಾಳೇ. ಇದನ್ನರಿತ ವೆಂಕಪ್ಪನಾಯಕ ನಗಿರೆಯನ್ನು ಹಾಗು ತನ್ನ ಸಾಗರೋತ್ತರ ವ್ಯವಹಾರಕ್ಕೆ ಅನುಕೂಲವಾಗುವಂತೆ ಹೊನ್ನಾವರ, ಭಟ್ಕಳದ ಕೋಟೆಗಳನ್ನು ಮುತ್ತಿಗೆ ಹಾಕಿ ರಾಣಿಯನ್ನು ಸೆರೆಹಿಡಿಯುತ್ತಾನೆ. ತನ್ನ ೫೪ ವರ್ಷಗಳ ಕಾಲದಲ್ಲಿ ಹೈವ,ತುಳು,ಕೊಂಕಣಾದಿ ರಾಜ್ಯಗಳನ್ನು ಆಳಿ, ಪೋರ್ಚುಗೀಸರಗೆ ತಡೆಯಾಗಿ ನಿಂತು, ಇತರ ರಾಜ್ಯಗಳ ಜೊತೆ ಪ್ರೀತಿಯಿಂದ ವರ್ತಿಸುತ್ತಾ, ನಗಿರೆಯ ಜನರಿಗೆ ಅವ್ವರಸಿಯಾಗಿದ್ದ ಚೆನ್ನಭೈರಾದೇವಿ ಸಲ್ಲೇಖನ ವ್ರತವನ್ನು ಕೈಗೊಂಡು ತನ್ನ ಕೊನೆಯುಸಿರು ಎಳೆಯುತ್ತಾಳೆ.
ಸಾಳುವ ವಂಶದ ಚೆನ್ನಭೈರಾದೇವಿಯ 54 ವರ್ಷಗಳ ಸುಧೀರ್ಘ ಆಳ್ವಿಕೆ ಆಕೆಯ ತಾಕತ್ತು ಮತ್ತು ಮನೋಬಲವನ್ನು ಸೂಚಿಸುತ್ತದೆ. ಅದ್ಯಾಕೋ ಜೈನರು ಆಡಂಬರ, ಹೊಗಳಿಕೆ ಬೇಡವೆಂದೋ ಶಾಸನಗಳನ್ನು ಬರೆಯದಿದ್ದುದರಿಂದ ಆಕೆಯ ಕತೆಗಳು ನಮಗೆ ತಿಳಿಯಲಿಲ್ಲ. ಆದರೆ ಆಕೆಯ ಬಗೆಗಿನ ಜಾನಪದ ಕತೆಗಳು, ಆಕೆಯ ಕಾಲದ ಗೇರುಸೊಪ್ಪೆಯ ಬಸದಿಗಳು,ಕಾನೂರು ಕೋಟೆ, ಚಂದ್ರಗಿರಿ ಬೆಟ್ಟ ಆಕೆಯ ಕತೆಗಳನ್ನು ಮೌನವಾಗಿ ಹೇಳುತ್ತಿವೆ. ಆ ಮೂಖ ಬೆಟ್ಟ, ಬಸದಿಗಳ ಕಂಠವಾಗಿದ್ದಾರೆ ಲೇಖಕರು ಗಜಾನನ ಶರ್ಮ.
ಲೇಖಕರ ಮುನ್ನುಡಿಯಂತೆ ಚೆನ್ನಭೈರಾದೇವಿಯ ಜೀವನದ ಸತ್ಯ ಘಟನೆಗಳ ಚುಕ್ಕಿಗಳಿಗೆ ಲೇಖಕರು ಗೆರೆ ಎಳೆದು ಸುಂದರ ರಂಗೋಲಿಯನ್ನು ಹಾಕಿದ್ದಾರೆ.
ಈ ಚಾರಿತ್ರಿಕ ಕಾದಂಬರಿಯಲ್ಲಿ ಯಾವುದು ಸತ್ಯ ಘಟನೆ, ಯಾವುದು ಲೇಖಕರ ಉಪಮೆ ಎಂಬುದು ನನಗೆ ಇನ್ನೂ ಸ್ಪಷ್ಡವಾಗಿಲ್ಲ. ಅಷ್ಟರ ಮಟ್ಟಿಗೆ ನೈಜತೆಯ ಕಾದಂಬರಿ ಹೆಣೆದಿದ್ದಾರೆ. ಕಥೆಯನ್ನು ರೋಚಕಗೊಳಿಸಲು ಎಲ್ಲೂ ಕತೆಗಳನ್ನು ತುರುಕಿದಂತೆ ಅನ್ನಿಸುವುದೇ ಇಲ್ಲ. ಒಂದೇ ರಭಸದಲ್ಲಿ ಓದಿಸಿಕೊಂಡು ಹೋಗುವ ಕಾದಂಬರಿ ಇದು. ಪುಸ್ತಕದ ಮುಖಪುಟದಲ್ಲಿ ಎದುರಿಗೆ ಕಾಣುವ ಕುದುರೆಯೇರಿ ಯುದ್ಧ ಸನ್ನದ್ಧವಾಗಿರುವ ರಾಣಿ, ಜೀವನದುದ್ದಕ್ಕೂ ಮನೊಸ್ಸೊಳಗೆ ಬೈರಾಗಿಯಂತೆ ಜೀವನ ನಡೆಸಿದುದರ ಸಾರಾಂಶವನ್ನು ಸುಂದರವಾಗಿ ಚಿತ್ರಿಸಿದ್ದಾರೆ.
ಸಭಾಹಿತರು, ಶಬಲೆ, ಜಿನದತ್ತ, ಸಿದ್ಧಾಂತಿಗಳು,ಸತ್ರಜಿತನಂಥ ರಾಣಿಗೆ ವಿಧೇಯರಾಗಿದ್ದಂತಹ ಪಾತ್ರಗಳೂ ಒಂದು ಸುದೀರ್ಘ ರಾಜ್ಯಾಭಾರಕ್ಕೆ ಬಹಳ ಅಗತ್ಯ ಎಂಬುದನ್ನು ಬಹಳ ಸಂಧರ್ಭಗಳಲ್ಲಿ ಗೊತ್ತುಮಾಡಿಸುತ್ತದೆ.
ಈ ಪುಸ್ತಕದುದ್ದಕ್ಕೂ ಬರುವ ಸ್ಥಳಗಳಾದ ಚಂದ್ರಗಿರಿ ಬೆಟ್ಟ, ಗೇರುಸೊಪ್ಪೆ, ಚತುರ್ಮುಖ ಬಸದಿ, ಹೊನ್ನಾವರ, ಪವಿನಕುರ್ವೆ ಸಮುದ್ರ ತೀರ, ಮಿರ್ಜಾನ್ ಕೋಟೆ, ಗೋವಾ ಹಾಗೂ ಇನ್ನಿತರ ಸ್ಥಳಗಳಿಗೆ 2021 ರಲ್ಲಿ ಪ್ರವಾಸ ಹೋಗಿದ್ದೆ ಹಾಗಾಗಿ ಈ ಎಲ್ಲಾ ಸ್ಥಳಗಳ ಬಗೆಗಿನ ಕಥೆಗಳು ನನ್ನನ್ನು ಭೈರಾದೇವಿಯ ಕಾಲಕ್ಕೆ ನನ್ನನ್ನು ಕೊಂಡೊಯ್ಯಲು ಮತ್ತಷ್ಟು ಪುಷ್ಟಿಕೊಟ್ಟಿತು. ನೀವು ಈ ಮೇಲಿನ ಸ್ಥಳಗಳಿಗೆ ಈ ಮೊದಲು ಭೇಟಿ ಕೊಟ್ಟಿಲ್ಲವಾದರೆ ಈ ಪುಸ್ತಕ ಓದಿದ ನಂತರ ಖಂಡಿತಾ ಹೋಗಬೇಕು ಮತ್ತು ಆಕೆಯ ಕಾಲದ ವೈಭವದ ಸಾಕ್ಷಿಗಳನ್ನು ವೀಕ್ಷಿಸಬೇಕು.
ಗಜಾನನ ಶರ್ಮ ಅವರ ಪುನರ್ವಸು ಓದಿದ ಮೇಲೆ ಅವರ ಚೆನ್ನಭೈರಾದೇವಿ ಓದಲೇಬೇಕಾಗಿ ಬಂತು. ಕಾರಣ ಪುನರ್ವಸು ಪುಸ್ತಕದ ಕತೆ ಮತ್ತು ವಸ್ತುವನ್ನು ನಾನು ಆ ಮಟ್ಟಿಗೆ ಕಳೆದುಹೋಗಿದ್ದೆ, ಅದೇ ಕಾರಣಕ್ಕಾಗಿ ಚೆನ್ನಭೈರಾದೇವಿ ಪುಸ್ತಕ ಓದಲೇಬೇಕು ಅಂತ ಪಟ್ಟು ಹಿಡಿದೆ ಆದರೆ ಅನೇಕ ಪುಸ್ತಕಗಳು ಪಟ್ಟಿಯಲ್ಲಿದ್ದ ಕಾರಣ ಈ ಪುಸ್ತಕ ಓದಿ ಮುಗಿಸಲು ಇಷ್ಟೊತ್ತು ಹಿಡಿಯಿತು. ಎಂದಿನಂತೆ ಗಜಾನನ ಶರ್ಮರವರ ಅದ್ಭುತ ಬರವಣಿಗೆ ಶೈಲಿ ಈ ಪುಸ್ತಕದಲ್ಲಿ ಮೂಡಿ ಬಂದಿದೆ, ಪುಸ್ತಕದಲ್ಲೇ ಕಳೆದುಹೋಗುವಂತಾಯಿತು. ಇನ್ನು ಈ ಪುಸ್ತಕದ ಬಗ್ಗೆ ಹೇಳುವುದಾದರೆ ಇದು ಕರಿಮೆಣಸಿನ ರಾಣಿ ಎಂದೇ ಖ್ಯಾತವಾದ ಚೆನ್ನಭೈರಾದೇವಿ ರಾಣಿಯ ಚರಿತೆ. ಯಾವ ಗಂಡಸಿನ ಸಾಹಾಯವಿಲ್ಲದೆ ಐದು ದಶಕಗಳ ಕಾಲ ಗೇರುಸೊಪ್ಪೆಯನ್ನು ಆಳಿದ ಧೀಮಂತ ನಾಯಕಿ. ಕಾಳುಮೆಣಸಿನ ರಫ್ತನ್ನು ಯಾವುದೇ ಅಳುಕಿಲ್ಲದೆ, ಯಾವ ರಾಜರ ಬೆದರಿಕೆಗೆ ಅಂಜದೇ ನಿರ್ವಹಿಸಿದ ದಿಟ್ಟ ಮಹಿಳೆ. ಬಾಲ್ಯದಲ್ಲಿ ಜಿನದತ್ತನಲ್ಲಿ ಪ್ರೀತಿಯ ಬಳ್ಳಿಯನ್ನು ಬೆಳೆಸಿದ ರಾಣಿಯು ಕೊನೆಗೆ ಆ ಪ್ರೀತಿಯಿಂದ ಯಾವುದೇ ಫಲವು ಅವಳಿಗೆ ಪ್ರಾಪ್ತಿಯಾಗಲಿಲ್ಲ. ಜಿನದತ್ತನು ಅನಾಥನಾಗಿದ್ದರಿಂದ ಯಾವುದೇ ದಾರಿ ಕಾಣದೆ ಪ್ರೋರ್ಚುಗೀಸರೊಂದಿಗೆ ಅವರ ದೇಶಕ್ಕೆ ಪ್ರಯಾಣ ಬೆಳಿಸಿ ಅಲ್ಲೇ ನೆಲೆಯೂರುತ್ತಾನೆ. ಆದರೆ ಇಲ್ಲಿ ಜಿನದತ್ತನು ಬದುಕಿಲ್ಲ ಎಂದು ತಿಳಿದು ಅದೇ ಮನಸ್ಥಿತಿಯಲ್ಲಿರುತ್ತಾರೆ. ಆದರೆ ಶಬಲೆಯು ಹುಡುಕಾಡಿ, ಶೋಧಿಸಿ ಕೊನೆಗೆ ಜಿನದತ್ತನು ಬದುಕಿದ್ದಾನೆಂದು ರಾಣಿಗೆ ತಿಳಿಸುತ್ತಾಳೆ ಆದರೆ ರಾಣಿಯು ಮಾಡುವೆಯಾಗುವುದಿಲ್ಲವೆಂದು ನಿರ್ಧರಿಸಿರುತ್ತಾಳೆ. ಪ್ರೋಚುಗೀಸರೊಂದಿಗೆ ನಡೆದ ಯುದ್ಧದಲ್ಲಿ ತನ್ನ ಚಾಣಕ್ಯತೆಯಿಂದ ಯುದ್ಧದಲ್ಲಿ ಜಯಶಾಲಿಯಾಗುತ್ತಾಳೆ. ಆದರೆ ಮುಂದೆ ತಮ್ಮವರಿಂದಲೇ ಮೊಸಕ್ಕೊಳಗಾಗಿ ಮರಣವನ್ನು ಹೊಂದುತ್ತಾಳೆ. ಇತಿಹಾಸದಲ್ಲಿ ಮರೆಮಾಚಿದ ಇಂತಹ ವೀರವನಿತೆಯರು ಕರ್ನಾಟ���ದಲ್ಲಿ ಮೆರೆದಿದ್ದಾರೆ. ಇನ್ನು ಎಷ್ಟೋ ರಾಣಿಯರು ಇತಿಹಾಸದಲ್ಲಿ ಮರೆಯಾದ ಇಂತಹ ರಾಣಿಯರನ್ನು ಬೆಳಕಿಗೆ ತಂದು, ಕನ್ನಡದ ಜನರಿಗೆ ಪರಿಚಯಿಸಿದ ಲೇಖಕರಿಗೆ ಅನಂತ ಧನ್ಯವಾದಗಳು.
ಪುಸ್ತಕದಂಗಡಿಯಲ್ಲಿ ಪುಸ್ತಕಗಳನ್ನು ತಡಕಾಡುವಾಗ ಡಾ. ಕೆ.ಎನ್.ಗಣೇಶಯ್ಯನವರ 'ಬಳ್ಳಿಕಾಳ ಬೆಳ್ಳಿ' ಕಾದಂಬರಿಯ ಮುಖಪುಟದಲ್ಲಿ ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿಯ ಕುರಿತ ಪ್ರಸ್ತಾಪವನ್ನು ಓದಿದ್ದು ಬಿಟ್ಟರೆ ಹೀಗೊಬ್ಬಳು ರಾಣಿಯು ನಮ್ಮ ರಾಜ್ಯದಲ್ಲಿ ಇದ್ದಳು ಎಂಬ ಕನಿಷ್ಠ ಮಾಹಿತಿಯೂ ಇರಲಿಲ್ಲ. ನಗಿರೆ ಮತ್ತು ಹಾಡುವಳ್ಳಿ ಅವಳಿ ರಾಜ್ಯಗಳನ್ನು ಸುಮಾರು ಐವತ್ನಾಲ್ಕು ವರ್ಷಗಳ ಸುಧೀರ್ಘ ಕಾಲ ಮುನ್ನೆಡೆಸಿ ಪೋರ್ಚುಗೀಸರ ದಾಳಿ ಹಾಗೂ ಮತಾಂತರದ ಹುನ್ನಾರ ತನ್ನ ರಾಜ್ಯದಲ್ಲಿ ನಡೆಯದಂತೆ ಸಮರ್ಥವಾಗಿ ತಡೆದು ನಿಲ್ಲಿಸಿದ,ತನ್ನ ನೆರೆಯ ರಾಜ್ಯಗಳ ಜೊತೆ ಸ್ನೇಹಕ್ಕೂ ಸಿದ್ಧ ಸಮರಕ್ಕೂ ಬಧ್ಧ ಎಂಬಂತೆ ಇದ್ದು, ಕರಿಮೆಣಸಿನ ವ್ಯಾಪಾರದ ಮೂಲಕ ದಕ್ಷಿಣಭಾರತದ ಶ್ರೀಮಂತ ಸಂಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾದ ವೀರವನಿತೆಯ ಕುರಿತು ನಮ್ಮ ಇತಿಹಾಸ ಅಸಡ್ಡೆ ತೋರಿದ್ದು ಸಖೇದಾಶ್ಚರ್ಯವನ್ನುಂಟು ಮಾಡಿತು ಈ ಪುಸ್ತಕವನ್ನು ಓದಿ ಮುಗಿಸಿದಾಗ…..
ಕಿರಿಯ ವಯಸ್ಸಿನಲ್ಲಿ ತನ್ನ ಸೋದರಮಾವನಿಂದ ರಾಜ್ಯದ ಉಸ್ತುವಾರಿಯನ್ನು ವಹಿಸಿಕೊಂಡು ಜನಾನುರಾಗಿಯಾಗಿ ಆಡಳಿತ ನಡೆಸಿದ ಚೆನ್ನಭೈರಾದೇವಿ ಎಲ್ಲಾ ವರ್ಗಗಳ ಜನರನ್ನು ಸಮಾನವಾಗಿ ನೋಡುತ್ತಿದ್ದಳು. ತಾನಾಗಿ ಸಾಮ್ರಾಜ್ಯ ವಿಸ್ತರಣೆಗೆ ಹೋಗದೆ ತನ್ನ ಪಾಡಿಗೆ ತಾನಿದ್ದು ಕೃಷಿ ಚಟುವಟಿಕೆಗಳಿಗೆ, ಕಾಡುಗಳಲ್ಲಿ ಬೆಳೆಯುವ ಕರಿಮೆಣಸನ್ನು ಕೃಷಿ ಬೆಳೆಯನ್ನಾಗಿ ಬೆಳೆಯಲು ಪ್ರೋತ್ಸಾಹಿಸಿ, ವ್ಯಾಪಾರಕ್ಕೆ ಅನುಕೂಲವಾಗುವಂತೆ ರಾಜ್ಯದ ಉದ್ದಗಲಕ್ಕೂ ರಸ್ತೆಗಳನ್ನು ನಿರ್ಮಿಸಿ,ಸಮುದ್ರ ವ್ಯಾಪಾರವನ್ನು ಸಹ ತನ್ನ ಹತೋಟಿಯಲ್ಲಿಟ್ಟುಕೊಂಡು ತನ್ನ ರಾಜ್ಯದ ಗಡಿಗಳನ್ನು ಭದ್ರಪಡಿಸಿಕೊಂಡಿದ್ದ ಈಕೆಯ ಬಗ್ಗೆ ಪ್ರಜೆಗಳು ಸಹ ಗೌರವ ಭಾವದಿಂದಿದ್ದು ವಿಧೇಯರಾಗಿದ್ದರು. ಅದಾಗಲೇ ಗೋವೆಯನ್ನು ವಶಪಡಿಸಿಕೊಂಡ ಪೋರ್ಚುಗೀಸರ ಕ್ರೌರ್ಯ ದಬ್ಬಾಳಿಕೆಗೆ ಬೇಸತ್ತು ನಗಿರೆಗೆ ವಲಸೆ ಬರುತ್ತಿದ್ದ ಹಿಂದೂಗಳಿಗೆ ಯಾವ ಬೆದರಿಕೆಗೂ ಸೊಪ್ಪು ಹಾಕದೆ ಆಶ್ರಯವನ್ನಿತ್ತು ಸೈ ಎನಿಸಿಕೊಂಡಿದ್ದನ್ನು ಓದುವಾಗ ಸಹಜವಾಗಿ ಆಕೆಯ ಮೇಲೆ ಗೌರವಾದರಗಳು ಮೂಡಿತು.
ಚೆನ್ನಭೈರಾದೇವಿಯ ನೇರ ನಡೆ ನುಡಿಗಳು, ಪ್ರಜಾವಾತ್ಸಲ್ಯ, ವ್ಯವಹಾರ ಜಾಣ್ಮೆ, ಸಮರ ಕೌಶಲ್ಯ,
ರಾಜಕೀಯ ಮುತ್ಸದ್ದಿತನ, ರಾಜಕೀಯ ಪರಿಸ್ಥಿತಿಯನ್ನು ಸರಿಯಾಗಿ ಅವಲೋಕಿಸಿ ತೆಗೆದುಕೊಳ್ಳುವ ದೂರಗಾಮಿ ನಿರ್ಧಾರಗಳು,ಕೃಷ್ಣದೇವರಸನ ಕುತಂತ್ರ,ಜೈನ ಧರ್ಮದ ಆಚಾರ ಮತ್ತು ವಿಚಾರಗಳು ಮತ್ತು ಪೋರ್ಚುಗೀಸರ ಕುಟಿಲತೆ, ಮತಾಂಧತೆ ಹಾಗೂ ಗೋವಾ ಇನ್ಕ್ವಿಸಿಷನ್ ಕಾಯ್ದೆಯ ಕರಾಳ ಮುಖಗಳ ವಿವರಗಳು ಚೆನ್ನಾಗಿ ಓದಿಸಿಕೊಂಡು ಹೋಗುತ್ತವೆ. ಈ ಎಲ್ಲಾ ಅಂಶಗಳನ್ನು ಒಳಗೊಂಡ ಕೃತಿಯನ್ನು ಬರೀ ಒಣ ಮಾಹಿತಿಗಳ ಗುಚ್ಛವನ್ನಾಗಿಸದೆ ಅಲ್ಲಲ್ಲಿ ರೋಚಕ ತಿರುವುಗಳನ್ನು ನೀಡುವುದರ ಮೂಲಕ ಮುಂದೇನು ಎಂಬ ಕಾತುರತೆಯನ್ನು ಕಾಯ್ದುಕೊಳ್ಳುವಲ್ಲಿ ಲೇಖಕರ ಕಥನ ಶೈಲಿ ಯಶಸ್ವಿಯಾಗಿದೆ.
'ರೈನಾ ದ ಪಿಮೆಂಟಾ'(ಕರಿಮೆಣಸಿನ ರಾಣಿ) ಎಂಬ ಬಿರುದನ್ನು ಸ್ವತಃ ಪೋರ್ಚುಗೀಸರೆ ನೀಡಿ ಗೌರವಿಸಿದ,ಇತಿಹಾಸ ಮರೆತುಹೋದ ನಮ್ಮ ಕನ್ನಡನಾಡಿನ ವೀರ ವನಿತೆಯ ಜೀವನ ಚರಿತ್ರೆಯನ್ನು ಕಟ್ಟಿಕೊಟ್ಟ ಲೇಖಕರಿಗೆ ಧನ್ಯವಾದಗಳು…..
Chennabhairadevi is a novel about a forgotten queen who held her own against the Portuguese and her aggressive neighbours for nearly fifty years. While her kingdom in modern day terms was the size of half a district, according to the novel, her land was prosperous and strong enough to hold aggression in check.
There doesn't seem to be a lot of information about the queen which is not surprising given than Indian history is not always well preserved. The author seems to have done a lot of research to dig out as much information as possible and has embedded it into his story. There are detailed descriptions of small towns, villages and natural landmarks which really give depth to the overall story.
It seems to be a conscious choice to have a uniform Kannada Dialect and diction for all characters. Both queen and village girl speak in the same manner. However this is very common in Kannada literature as it makes it more accessible to general readers.
Typical of the style of writing used in Kannada, characters are painted black and white easily. The queen is portrayed as a pious, self righteous woman who only thinks about her people and has no flaws. Her close aides are also very similar. Since it's her story, her enemies sometimes come across as moustache twirling evil and selfish people. This is not a realistic portrayal of people. However it's a generally accepted way of writing about historical characters in Kannada.
Overall a good effort to shed some light on a little known piece of history.
ಒಂದು ಕಾದಂಬರಿಯನ್ನು ಅದರಲ್ಲಿರುವ ಪರಿಸರ ಮತ್ತು ಪರಿಸ್ಥಿತಿಯ ಅನುಗುಣವಾಗಿ ಕಲ್ಪನೆ ಮಾಡಿಕೊಂಡು ಒಬ್ಬ ಓದುಗ ಓದಲ್ಪಟ್ಟಾಗ ಅಂತಹ ಕಲ್ಪನಾ ಲೋಕದಿಂದ ಹೊರಬರಲು ಸುಮಾರು ದಿನಗಳು ಬೇಕಾಗಬಹುದು. ಅಂತಹ ಒಂದು ಸಂದಿಗ್ಧ ಪರಿಸ್ಥಿತಿಗೆ ತಂದೊಡ್ಡಿದ ಕಾದಂಬರಿಗಳಲ್ಲಿ ಈ ಕೃತಿಯು ಒಂದು.
ಮೊದಲನೆಯದಾಗಿ, ಈ ಕಾದಂಬರಿಯನ್ನು ಬರಿಯಲಿಕ್ಕೆ , ಲೇಖಕರು ಮಾಡಿದ ತಯಾರಿಗೆ / ಸಂಶೋಧನೆಗೆ ನನ್ನದೊಂದು ನಮಸ್ಕಾರ.
54 ವರ್ಷಗಳ ಕಾಲ ಹೈವ, ಕೊಂಕಣ, ತುಳುದೇಶಗಳನ್ನು ರಾಣಿಯಾಗಿ ಆಳಿ, ಪೋರ್ಚುಗೀಸರಿಗೆ ದುಃಸ್ವಪ್ನವಾಗಿದ್ದ ಕರಿಮೆಣಸಿನ ರಾಣಿಯ ಕಥೆ ನಮ್ಮ ಶಾಲೆಗಳ ಪಠ್ಯಪುಸ್ತಕಗಳಲ್ಲಿ ಏಲ್ಲೂ ಉಲ್ಲೇಖವಾಗಿಲ್ಲ ಎಂಬುದು ಬೇಜಾರಿನ ಸಂಗತಿಯೇ ಸರಿ.
ಚೆನ್ನಭೈರಾದೇವಿಯ ವ್ಯವಹಾರ ಕೌಶಲ್ಯವನ್ನು ಮೆಚ್ಚಿ ಪೋರ್ಚುಗಲ್ ಚಕ್ರವರ್ತಿ ಮಹಾರಾಣಿಗೆ “ರೈನಾ ದಿ ಪಿಮೆಂಟಾ “ ಎಂಬ ಬಿರುದನ್ನು ಕೊಟ್ಟಿದ್ದರು. ಅದರರ್ಥ ಮಹಾರಾಣಿ ಚೆನ್ನಭೈರಾದೇವಿ ಕಾಳುಮೆಣಸಿನ ರಾಣಿ ಎಂದು.
ಭಾರತದ ಇತಿಹಾಸದಲ್ಲೇ ಸುಧೀರ್ಘ ಕಾಲ ರಾಜ್ಯವಾಳಿದ ಹೆಗ್ಗಳಿಕೆ, ಕನಾ೯ಟಕದ ಹೈವ, ಕೊಂಕಣ, ಮಲೆನಾಡು ಪ್ರದೇಶಗಳನ್ನಾಳಿದ, ಶೌರ್ಯವಂತೆ, ಶಾಂತಿಪ್ರಿಯೆ, ಶ್ರಾವಕಿ ಚೆನ್ನಭೈರಾದೇವಿಗೆ ಸಲ್ಲಬೇಕು.
ಇತ್ತ ಪೋರ್ಚುಗೀಸರ ವಿರುದ್ಧ ಎಷ್ಟೋ ಕಡಲ್ಗಾಳಗ ಹಾಗೂ ನೆಲಗಾಳಗಗಳನ್ನ ಸೆಣಸಿ, ಅವರನ್ನ ಮಣ್ಣು ಮುಕ್ಕಿಸಿದ ವೀರವಂತೆ. ಅಂತೆಯೆ ಸುತ್ತಲ ರಾಜ್ಯಗಳ (ಪೋರ್ಚುಗೀಸರು, ಬಿಜಾಪುರ ಸುಲ್ತಾನರು, ವಿಜಯನಗರದ ಅರಸರು, ಹಾಗೂ ಸಣ್ಣ ಪುಟ್ಟ ಪಾಳೆಯಗಾರರು) ಜೋತೆ ಚಾಣಕ್ಷ್ಯದಿಂದ ಶಾಂತಿ ಸಂಧಾನ ಗೈದು ಎಷ್ಟೋ ಆಕ್ರಮಣಗಳನ್ನ ತಡೆದ ರಾಜಕೀಯ ಚತುರೆ.
ಪೋರ್ಚುಗೀಸರ ಧರ್ಮಾಂಧತೆ, ಪರಧರ್ಮ ಅಸಹಿಷ್ಣುತೆ, ಗೋಮಾಂತಕದಲ್ಲಿ ಮುಗಿಲು ಮುಟ್ಟಿದ ಕಾಲವದು. ಆ ಪೈಶಾಚಿಕ ಕೃತ್ಯಗಳನ್ನ ಸಹಿಸಲಾಗದೆ ದಕ್ಷಿಣದೆಡೆಗೆ ಪಲಾಯನಗೊಂಡ ಎಷ್ಟೋ ಹಿಂದುಗಳಿಗೆ ಮುಖ್ಯವಾಗಿ ಸಾರಸ್ವತರಿಗೆ ಆಶ್ರಯ ನೀಡಿದ ಮಹಾತಾಯಿ. ಅಂತೆಯೆ ಕರ್ನಾಟಕವನ್ನ ಗೋವಾದಂತಾಗದೆ ತಡೆಯುವಲ್ಲಿ ಶ್ರಮಿಸಿದ ನಿಷ್ಠಾವಂತೆ.
ಪೂರ್ವ ಬಂದರುಗಳನ್ನ ಉಳಿಸಿ ಬೆಳೆಸುವಲ್ಲಿ, ಪಶ್ಚಿಮಾತ್ಯ ದೇಶಗಳೊಂದಿಗೆ ಕಡಲ ಮೂಲಕ ವ್ಯಾಪಾರ ವಹಿವಾಟು ನಡೆಸುವಲ್ಲಿ, ಮುಖ್ಯವಾಗಿ ಸಾಂಬಾರು ಪದಾರ್ಥಗಳ ಅದರಲ್ಲೂ ಕಾಳುಮೆಣಸಿನ ವ್ಯಾಪಾರದಲ್ಲಿ (ಕಾಡಲ್ಲಿ ಬೆಳೀತಾ ಇದ್ದ ಕಾಳುಮೆಣಸನ್ನ ತೋಟದಲ್ಲಿ ಬೆಳೆಸಲು ತೊಡಗಿದ ಮೊದಲ ರಾಜಕಾರಣಿ) ತೊಡಗಿಕೊಂಡು ತನ್ನ ರಾಜ್ಯವನ್ನು ಶ್ರೀಮಂತ ಹಾಗೂ ಸಂಪದ್ಭರಿತವಾಗಿಸಿ, 'ಕಾಳುಮೆಣಸಿನರಾಣಿ' ಎಂದೇ ಆ ಕಾಲಘಟ್ಟದಲ್ಲಿ ಪ್ರಸಿದ್ಧಿಯಾದ ಚತುರೆ.
ತನ್ನ ಕೊನೆ ಉಸಿರಿನವರೆಗೂ ತನ್ನ ರಾಜ್ಯವನ್ನ, ತನ್ನವರನ್ನ ಪೊರೆದ ಮಹದಾಜ್ಞೆ. ಕನ್ನಡಿಗರಿಗೆ ಇಂತ ಮಹನೀಯರ, ಹಾಗೂ ತಮ್ಮ ಇತಿಹಾಸದ ಬಗ್ಗೆ ಅರಿವೇ ಇಲ್ಲದೇ ಇರೋದು ಬೇಸರದ ಸಂಗತಿ. ಇಂತ ಎಷ್ಟೋ ವೀರರನ್ನ ಪಠ್ಯ ಕ್ರಮದಿಂದ ಹೊರಗಿಟ್ಟು, ಬರೇ ಪರಕೀಯರನ್ನ, ಆಕ್ರಮಣಕಾರಿಗಳನ್ನ ವೈಭವೀಕರಿಸಿ ನಮ್ಮವರಿಗೆ ಇತಿಹಾಸ ವಂಚನೆ ಮಾಡ್ತಾಯಿರೋ ಸರಕಾರದ ಈ ಕೃತ್ಯ ವಿಷಾದನೀಯ.
ಇತಿಹಾಸದ ಅರಿವನ್ನ ಮೂಡಿಸುವಲ್ಲಿ, ಹಾಗೂ ಚೆನ್ನಭೈರಾದೇವಿಯ ಸಾಹಸಗಾಥೆಯನ್ನ ಕನ್ನಡಿಗರ ಮುಂದಿಡುವಲ್ಲಿ ಗಜಾನನ ಶರ್ಮಾರವರ ಶ್ರಮಕ್ಕೆ ಎಂದೂ ಚಿರಃಋಣಿ.
Hats off to the author for having spent time and energy in gathering information on the last queen of Gerusoppa.
This was more of a fiction read for me. From the history point of view, the facts were less. Also some of the information here feels redundant if you have read Tejo Tungabhadra or Swapna Saraswatha!
If you are drama/fiction lover then go for this book. If you are interested only in the history, I would suggest - Goa Kanara Portuguese Relations 1498-1763 by BS Shastry.
ಚಿತ್ರದುರ್ಗ ಮತ್ತು ಮರಾಠಾ ರಾಜಮನೆತನಗಳ ಏಳುಬೀಳುಗಳ ಕಥನವನ್ನೋದಿದವರಿಗೆ ಇದು ಕನ್ನಡ ಕರಾವಳಿಯನ್ನು ಆಳಿದ, ರೋಮಾಂಚನ ಹುಟ್ಟಿಸುವ ಕಥನ. ಇತಿಹಾಸದ ನೈಜತೆಯನ್ನೋ, ಪಾತ್ರಗಳ ನೈಜತೆಯನ್ನೋ ಪ್ರಶ್ನಿಸದೇ ಒಂದು ಕಾಲದಲ್ಲಿ ಕನ್ನಡ ಕರಾವಳಿ ಹೀಗಿತ್ತಲ್ಲ ಎಂದು ಹಿಗ್ಗು ಉಂಟುಮಾಡುವ ಕಾದಂಬರಿ.
This book narrates a splendid and spectacularly written story of Pepper Queen Chenna Bhyradevi who ruled large parts of the Coastal Karnataka region withstanding the Portuguese conquests.
Easily one of the top 10 books I have ever read in Kannada so far.
A gem of a book. I would like to begin the review with a salute to her Highness Chennabhyradevi- The Pepper Queen. The unsung heroine of the South Konkan and Malenadu regions. I am a person who enjoys historical fiction novels but sincerely speaking, this was a different level one!! Fast-paced, to the point and very gripping.
Did our history classrooms speak of the true history of India? Isn't this a peak time to revise and rewrite the textbooks?
"Until the Lions have their historians the history of the hunt will always glorify the hunter" ~~ Chinua Achebe These lines stand authentic.
If the valour, strength and power of a queen who ruled our state so successfully for about 54 years haven't been penned down ,and here we are just given a fabricated handiwork of Nehruvian academicians, how justifiable is this?
Thanks to the author Dr Gajanana Sharma for this wonderful book, the characters are defined with crude honesty. A book like this gives vigour and emotions to history so that it remains pinned down to your memories and energize you from within.
Chennabhyradevi was the last of the Saluva dynasty, her kingdom Nagire-Gerusoppe was popularly known for its riches in southern India. Her people worshipped her in the name of-- Avvarasi-- The last chapter made my heart ache with her pain and also swell with pride in our heritage.
This book is close to my heart, as it speaks of my locale, this book speaks of those places which I hold close to my heart and it speaks of that dear Queen who might have walked on the pathway that I walk today❤️ I am in every way very grateful to the author for letting us recognize her Highness Chennabhyradevi ⭐⭐⭐⭐⭐❣
ಸಾಮಾನ್ಯವಾಗಿ ಭಾರತ ವರ್ಷದ ರಾಣಿಯರಲ್ಲಿ ಎಲ್ಲರು ಕೇಳಿರುವ ಹೆಸರೆಂದರೆ ಲಕ್ಷ್ಮಿ ಭಾಯಿ, ಕರ್ನಾಟಕದವರು ಕಿತ್ತೂರು ಚೆನ್ನಮ್ಮ, ಅಬ್ಬಕ್ಕ ಹೆಸರನ್ನು ಕೇಳಿರುತ್ತಾರೆ. ಆದರೆ ಚೆನ್ನಭೈರಾದೇವಿ ಹೆಸರು ಕೇಳಿದವರು ತುಂಬಾ ಕಡಿಮೆ. ಅವರ ಬಗ್ಗೆ ತಿಳಿದವರು ಇನ್ನೂ ಕಡಿಮೆ. ನಗಿರೆ ಅಂದರೆ ಇಂದಿನ ಗೇರುಸೊಪ್ಪಾ ಹಾಗೂ ಹಾಡುವಳ್ಳಿಯನ್ನು ಸುಮಾರು ೫೪ ವರ್ಷಗಳ ಕಾಲ ಆಳಿದ್ದಾಳೆ. ಆಕೆ ತನ್ನ ಆಳ್ವಿಕೆ ಕಾಲದಲ್ಲಿ ಪೊರ್ಚ್ಗೀಸರನ್ನು ಸೋಲಿಸಿರುತ್ತಾಳೆ! ಈ ಪುಸ್ತಕ ಚೆನ್ನಭೈರಾದೇವಿಯ ಬಾಲ್ಯದಿಂದ ಆಕೆ ಜಿನೈಕ್ಯವಾಗುವ ತನಕದ ಜೀವನವನ್ನು ಈ ಕಾದಂಬರಿ ಹೇಳುತ್ತದೆ. ಈ ಕಾದಂಬರಿಯ ಅತ್ಯಂತ ಆಕರ್ಷಣೀಯ ವಿಚಾರವೆಂದರೆ ವಿವರಣೆಗಳ ಗಮನ. ಸಣ್ಣ ಪುಟ್ಟ ವಿಚಾರಗಳನ್ನು ಸಹ ಬಹಳ ಚೆನ್ನಾಗಿ ಬಿಂಬಿಸುತ್ತದೆ. ಲೇಖಕರ ಭಾಷಾ ಪ್ರೌಡಿಮೆ ಚೆನ್ನಭೈರಾದೇವಿ ಮಹಾಮಂಡಲಾದೀಶ್ವರಿಯಾಗಿ ಪಟ್ಟಾಭಿಷೇಕಗೊಳ್ಳುವ ಕೆಲವು ಪುಟಗಳಲ್ಲಿ ಸಾಭೀತಾಗುತ್ತದೆ. ಹದಿನಾರನೇ ಶತಮಾನದ ಪರಿಸರ, ರಾಜಕೀಯ, ಜನ ಜೀವನ, ವಿದೇಶಿ ವ್ಯಾಪಾರ ವಹಿವಾಟು ಮುಂತಾದವುಗಳ್ಳನ್ನು ಕಾದಂಬರಿ ಹೇಳುತ್ತದೆ. ಗೋವದಲ್ಲಿ ನೆಡೆದ Spanish Inquisitionನ ಕ್ರೌರ್ಯವನ್ನು ಹೃದ್ಯವಿದ್ರಾವಕವಾಗಿ ಚಿತ್ರಿಸದ್ದಾರೆ. ಚೆನ್ನಭೈರಾದೇವಿಯ ಬಗ್ಗೆ mainstream historyಯಲ್ಲಿ ಹೆಚ್ಚೇನು ಮಾಹಿತಿ ಇರದಿರುವ ಕಾರಣ ಈ ಕಾದಂಬರಿಯ ಪ್ರಾಮುಖ್ಯತೆ ಅಧಿಕವಾಗಿದೆ.
ಇದು ಚೆನ್ನಭೈರಾದೇವಿಯ ಕಥೆ ಅಲ್ಲ. ಚೆನ್ನಭೈರಾದೇವಿಯನ್ನು ಆಧರಿಸಿದ ಒಂದು ಐತಿಹಾಸಿಕ ಕಾಲ್ಪನಿಕ ಕಾದಂಬರಿ.
ಮೊದಲನೆಯದಾಗಿ ಸುದೀರ್ಘ 54 ವರ್ಷ ಮಲೆನಾಡು, ಕರಾವಳಿ ಪ್ರದೇಶ ಆಳಿದ ರಾಣಿಯ ಬಗ್ಗೆ ನಮ್ಮ ಪಠ್ಯ ಪುಸ್ತಕದಲ್ಲಿ ಎಲ್ಲೂ ಉಲ್ಲೇಕ ಇಲ್ದೆ ಇರದು ವಿಪರ್ಯಾಸ.
ಇತಿಹಾಸದ ಆಸಕ್ತಿ ಇರುವವರಿಗೆ ಇದೊಂದು ರೋಚಕ ಓದು. ರಾಣಿಯ ಬಗ್ಗೆ ಉಲ್ಲೇಖಗಳು ಕಡಿಮೆ ಎಂದು ಲೇಖಕರು ಹೇಳಿದ್ದಾರೆ. ಆದರೆ ದೊರತ ವಿಷಯಗಳನ್ನು ಬಳಸಿಕೊಂಡು ಗಜಾನನ ಶರ್ಮಾ ಅವರು ಅದ್ಬುತವಾಗಿ ಕಥೆ ಹೆಣೆದಿದ್ದಾರೆ. ಓದಿ ಮುಗಿಸೋವರೆಗೂ ಒಂದು ಕುತೂಹಲ ಇದ್ದೇ ಇರುತ್ತೆ.
ರಾಣಿಯ ಆಡಳಿತ, ಯುದ್ದ ವೈಖರಿ, ಸರಳತೆ ಮತ್ತು ಜನರ ಮೇಲಿನ ಕಾಳಜಿ ಮುಂದಾಲೋಚನೆ ಎಲ್ಲವೂ ಓದಿ ಮುಗಿಸಿದರೂ ಮನಸ್ಸಲ್ಲಿ ಉಳಿದು ಕಾಡುತ್ತದೆ. ಪೋರ್ಚುಗೀಸರಿಂದ ಕರಿ ಮೆಣಸಿನ ರಾಣಿ ಎ೦ದು ಬಿರುದು ಪಡೆದ ರಾಣಿ. ಆದರೆ ತನ್ನ ವ್ಯಕ್ತಿತ್ವಕ್ಕೆ ಕಳಂಕ ಅಂಟಿಸಿಕೊಂಡೇ ಬದುಕಿದ ರಾಣಿ. ಅದು ಸತ್ಯವೋ ಸುಳ್ಳೂ ಎ೦ದು ಪರಿಗಣಿಸದೆ ಮಂದೆ ಅದೇ ಚರಿತ್ರೆ ಆಗಿದ್ದು ಮಾತ್ರ ದುರಾದೃಷ್ಟ.
ಇನ್ನಾದರೂ ನಮ್ಮದೇ ನಾಡಿನ ನಮ್ಮ ಇತಿಹಾಸ ಮರೆತಿರುವ ಹೆಮ್ಮಯ ರಾಣಿಯ ಬಗ್ಗೆ ಜನರಿಗೆ ತಲುಪುವಂತಾಗಬೇಕು.