Kota Shivaram Karanth was a Kannada writer, social activist, environmentalist, Yakshagana artist, film maker and thinker. He was described as the "Rabindranath Tagore of Modern India who has been one of the finest novelists-activists since independence"by Ramachandra Guha. He was the third person among eight recipients of Jnanpith Award for Kannada the highest literary honour conferred by the Govt. of India.
Shivaram Karanth was born on 10 October 1902, in Kota near Udupi in the Udupi district of Karnataka to a Kannada family.He was influenced by Gandhi's principles and took part in Indian Independence movement while he was in college. He did not complete his education and went to participate in the Non-cooperation movement and canvassed for khadi and swadeshi for five years up to 1927. By that time Karanth had already started writing fiction-detective novels, to begin with as well as plays.
Karanth was an intellectual and environmentalist who tremendously contributed to art and culture of Karnataka. He is considered one of the greatest novelist in Kannada. Apart from his 47 novels, he also wrote 31 plays, four short stories, six books of essays and sketches, thirteen books on art, 2 volumes of poems, 9 encyclopedias, and 100+ of articles on various issues and subjects, including a history of world art in Kannada and a work on Chalukyan sculpture and architecture, a standard treatise on the Yakshagana (with which dramatic form, his name is identified), a three volume book of knowledge for children, a four volume encyclopedia on science for grown ups, 240 children's books, six books on travel, two books on birds, three Travelogues, an autobiography.
He has received several literary awards,.Namely, Jnanpith Award, Padma Bhushan, Sahitya Academy award and Pampa Award.
He passed away on 9th December 1997 in Manipal, Karnataka.
ಯೂಟ್ಯೂಬ್ನಲ್ಲಿ ಪೂರ್ಣಚಂದ್ರ ತೇಜಸ್ವಿರವರ ಸಂದರ್ಶನದ ತುಣುಕೊಂದಿದೆ, ಅದರಲ್ಲಿ ಬರುವ ಮೊದಲ ಮಾತೇ - "ಕುಡಿಯರ ಕೂಸು ಮತ್ತು ಬೆಟ್ಟದ ಜೀವ ಓದಿದರೇ ಕಾಡು ನಮಗೆಷ್ಟು challenging ಆಗಿತ್ತು ಎನ್ನುವುದು ಗೊತ್ತಾಗುತ್ತೆ" ಅನ್ನುವುದು. ಹಾಗೇ ನನ್ನ ಮನದಲ್ಲಿ register ಆಗಿದ್ದ ಈ ಕೃತಿಯನ್ನು ಓದಿರುವುದು ಒಂದು ಸುಂದರ ಅನುಭವ.
ಇದನ್ನೊಂದು ಕಾದಂಬರಿ ಎನ್ನುವದಕ್ಕಿಂತ ಹೆಚ್ಚಾಗಿ ಅನುಭವ ಕಥನ ಎನ್ನಬಹುದೇನೋ, ಏಕೆಂದರೆ ಇಲ್ಲಿ ಕಥೆ ಪ್ರಧಾನವಾಗಿರದೇ ಕಥೆಯ ಸುತ್ತಮುತ್ತಲಿನ ಜಗತ್ತಿನ ವರ್ಣನೆ ಹೆಚ್ಚಾಗಿರುವುದು ಕಾಣಬಹುದು. ಕಾಡಿನ ಬೆಟ್ಟಗಳ, ಗುಡ್ಡಗಳ, ಅಬ್ಬೆಗಳ, ಹಸಿರುಗಳ, ಖಗಗಳ, ಮಿಗಗಳ ವರ್ಣನೆಯನ್ನು ಶ್ರೀಮಂತವಾಗಿ ಚಿತ್ರಿಸಿಲಾಗಿದೆ. ಕಾರಂತರ ಬಹುತೇಕ ಕಾದಂಬರಿಗಳಲ್ಲಿ ಪಾತ್ರಗಳ ಪೋಷಣೆಗೆ ಹೆಚ್ಚು ಮಹತ್ವವಿರುತ್ತದೆ, ಕಥಾಜಗತ್ತಿನ ವರ್ಣನೆಗೆ ಹೆಚ್ಚು ಒತ್ತು ಕಾಣಸಿಗದು, ಆದರೆ ಇಲ್ಲಿ ಅದಕ್ಕೆ ವಿರುದ್ಧವಾಗಿ ವಸ್ತು ಮೂಡಿರುವುದು ಕಾಣಬಹುದು.
ಸ್ಮೃತಿಪಟಲದಿಂದ ಕೃತಿಯಲ್ಲಿನ ಲೇಖನಯೊಂದರಲ್ಲಿ ಕಾರಂತರು ಹೀಗೆ ಹೇಳುತ್ತಾರೆ, ನಾನು ಬರೆದಿರುವ ಕಾದಂಬರಿಗಳಲ್ಲಿ, ಕಥೆಗಳಲ್ಲಿ ಬರುವ ಪರಿಸರವೆಲ್ಲವೂ ನಾನು ನನ್ನ ಜೀವನದಲ್ಲಿ ನೋಡಿರುವಂತ ಜಾಗಗಳೇ ವಿನಃ ನನ್ನ ಕಲ್ಪನೆಗಳಲ್ಲ, ಹಾಗೇ ನೋಡಿದರೆ ಇಲ್ಲಿ ಬರುವ ದುರ್ಗಮ ಜಾಗಗಳನ್ನು ನೋಡಿರುವ ನಮ್ಮ ಕಾರಂತರು ಅಸಾಮಾನ್ಯರು.
ಹೊರಲೋಕದ ಪರಿಚಯವಿಲ್ಲ ಕಾಡೇ ತಮ್ಮ ಪ್ರಪಂಚ, ನಿಸರ್ಗವೇ ದೇವರು ಎಂದು ತಮ್ಮ ಜೀವನ ಸಾಗಿಸುವ ಕುಡಿಯ ಜನಾಂಗದ ಒಂದು ಕತೆ. ತಮ್ಮಲ್ಲಿ ನಡೆವ ಕೆಲವು ಸಾವು ನೋವುಗಳಿಗೆ ತಮ್ಮ ಮಲೆ ಕಾಯೋ ದೈವ ಕಲ್ಕುಡನ ಸಿಟ್ಟು ಕಾರಣ, ಅವನಿಗೆ ದಕ್ಕಬೇಕಾದ ವರ್ಷಂಪ್ರತಿ ಪೂಜೆಯಲ್ಲಿ ಏನೋ ದೋಷವಿರಬೇಕು ಅಥವಾ ವಿಳಂಬವಿರಬೇಕೆಂದು ನಂಬುವ ಜನ ಕುಡಿಯರು. ಎಲ್ಲಾ ದೈವದಂತಲ್ಲ ಕಲ್ಕುಡ, ಅವನು ಎಲ್ಲರಿಗಿಂತ ಶಕ್ತಿಶಾಲಿ, ಉಗ್ರ. ಅವನಿಗೆ ಸಿಟ್ಟು ಬಂದರೆ ಅವನ ಎದುರು ಹಾಕಿಕೊಂಡು ಬಾಳಲಸಾದ್ಯ ಎಂದು ದೈವಕ್ಕೆ ಕಟ್ಟುಬಿದ್ದು ಭಯ-ಭಕ್ತಿಯಿಂದ ಜೀವನ ಸಾಗಿಸುವವರು ಈ ಮಲೆಯ ಕುಡಿಯರು. ಕಲ್ಕುಡನ ಕೋಲದಲ್ಲಿ ದೈವ ಕೊಡುವ ನುಡಿಯುವಂತೆ ಕತೆಯು ಹೆಣೆದುಕೊಂಡು ಸಾಗುತ್ತದೆ. ಎಪ್ಪತ್ತು ವರ್ಷಗಳ ಹಿಂದೆ ಕಾಡುಗಳಲ್ಲಿ ವಾಸಿಸುವವರ ಜೀವನ ಶೈಲಿ, ದೈವ ಹಾಕಿದ ಗೆರೆ ದಾಟದ ಜನರು, ಕಾಡು,ಬೆಟ್ಟ,ಕಣಿವೆಗಳಲ್ಲಿನ ಅಲೆದಾಟ, ಊರಿನ ಮುಖಂಡನೆಂಬ ಗುರಿಕಾರ ಪಟ್ಟಕ್ಕೆ ಆಂತರಿಕ ಒಳಜಗಳ, ಸ್ವಾರ್ಥ, ಅಸೂಯೆ, ಕರಡಿ ಹುಲಿ, ಚಿರತೆಗಳ ಶಿಕಾರಿ ಅಂತಲ್ಲದೆ ನಿಗೂಢತೆ ಹಾಗೂ ರಹಸ್ಯಗಳನ್ನೆ ಹೊತ್ತೊಯ್ಯುವ ಕತೆಯ ಪ್ರತಿಯೊಂದು ಪುಟವು ದೃಶ್ಯಗಳಾಗಿ ಕಣ್ಮುಂದೆ ಮೂಡುವುಡು.
ಕಾರಂತರ ಮೊದ ಮೊದಲಿನ ಕಾದಂಬರಿಗಳ ಸೊಗಸೇ ಬೇರೆ. ಬೆಟ್ಟದ ಜೀವದ ದಟ್ಟ ಕಾಡೊಳಗೆ ಕಳೆದು ಹೋದವರಿಗೆ ಅಲ್ಲೇ ಒಂಚೂರು ತಡಕಾಡಿದರೆ ಸಿಗುವ ನಿಧಿಯೇ ಕುಡಿಯರ ಕೂಸು. ಅದರಲ್ಲಿ ಬೆಟ್ಟ ಕಡಿದು ಕೃಷಿ ನೆಲ ಮಾಡಿದ ಸಾಹಸಿ ಬ್ರಾಹ್ಮಣರ ಜೀವನ ಚಿತ್ರವಿದ್ದರೆ ಇದು ನಿಸರ್ಗದ ಮಕ್ಕಳಾದ ಕುಡಿಯರ ಹಾಡು ಪಾಡು. ಇಲ್ಲಿ ಅವರು ಭೂಮಿಯ ಒಡೆಯರಲ್ಲ. ಧನಿಯ ಒಕ್ಕಲು ಮಕ್ಕಳು. ಮಲೆ ಖರೀದಿಸಿದ ಧನಿಯ ಕೆಳಗೆ ಕೆಲಸ ಮಾಡುತ್ತಾ ವರ್ಷಕ್ಕೆರಡೋ ಮೂರೋ ಬಾರಿ ಬರುವ ಅವರ ಸೇವೆ ಮಾಡುತ್ತಾ ಏಲಕ್ಕಿ ಕುಯ್ದು ಅವರಿಗೆ ಕೊಟ್ಟು ತಮಗೆ ಅಗತ್ಯವಾದ ಉಪ್ಪು,ಬಟ್ಟೆಯ ತೆಗೆದುಕೊಳ್ಳುವವರು. ಅದಷ್ಟೇ ಹೊರ ಜಗತ್ತಿನಿಂದ ಅವರಿಗೆ ಬೇಕಾಗುವಂತಹದ್ದು ಎನ್ನುವುದು ಈಗಿನ ಕಾಲದಲ್ಲಿ ನಂಬಲೂ ಅಸಾಧ್ಯದ ಸಂಗತಿ!! ಇಂತಹ ಕುಡಿಯರ ಕೆಂಚನ ಮೊಮ್ಮಗ ಕರಿಯ ..ತನ್ನಜ್ಜ ಕಾಲವಾದ ನಂತರ ಗುರಿಕಾರಿಕೆ ನಡೆಸಬೇಕೆಂದು ದೈವ ಹೇಳಿದ ಕಾರಣ ಆದವ. ಕಾಡಿನ ಮಗ. ಇಲ್ಲಿ ಕಥಾನಾಯಕ ಅಂತ ಯಾರಿಲ್ಲ. ಮನುಷ್ಯ ಸಹಜ ಕಾಮನೆಗಳು, ಅವರ ಚರ್ಯೆ ನಿರ್ದೇಶಿಸುವ ದೈವದ ನುಡಿಗಳು, ನಡುವೆ ಮತಾಂತರ ಮಾಡಲು ಬಂದ ಪಾದ್ರಿಗಳು ಸೋತು ಹಿಮ್ಮೆಟ್ಟುತ್ತಾರೆ..ಆದರೆ ಅವರೊಳಗಿನ ಒಡಕಿಗೆ ಹೊರಗಿನವರು ಯಾಕೆ ಬೇಕು? ಎಲ್ಲ ಕಡೆ ಇರುವಂತೆ ಒಳಗೊಳಗೆ ಅಸಮಾಧಾನ ಬೆಂಕಿಯಾದರೆ ಸಾಕಲ್ಲ! ಧನಿ ತಿರುಮಲ ಭಟ್ಟರ ಹೆಣ್ಣು ಚಪಲ ಕುಡಿಯರ ಹೆಣ್ಣುಗಳತ್ತ ಹರಿದಾಗ ಉಂಟಾಗುವ ಘಟನೆಗಳು, ಅವರು ತಮ್ಮ ಕಟ್ಟುಪಾಡುಗಳಲ್ಲಿ ಪ್ರವೇಶಿಸಿದ್ದಕ್ಕೆ ಕುಡಿಯರಿಗಾದ ಬೇಸರ ಇವೆಲ್ಲ ಕಥೆಯ ಜಾಡನ್ನು ಬೇರೆ ಕಡೆ ತಿರುಗಿಸುತ್ತದೆ. ಆದರೆ ಇಡಿಯ ಕಥೆ ಹಬ್ಬಿದ ಅರಣ್ಯದಂತೆ ಮನುಷ್ಯ ಮತ್ತು ಪರಿಸರದ ಸಂಬಂಧವನ್ನು ವಿಸ್ತಾರವಾಗಿ ತೆರೆದಿಡುತ್ತದೆ.
ಒಂದು ಕಾದಂಬರಿಯನ್ನು ಹೀಗೆ ಪಟ್ಟಾಗಿ ಒಂದೇ ಸಲ ಕೂತು ಓದಿ ಯಾವ ಕಾಲವಾಗಿತ್ತೋ! ಮಧ್ಯಾಹ್ನ ಶುರು ಮಾಡಿದವ ಸಂಜೆಯವರೆಗೆ ಕುತೂಹಲ ಕಾಯ್ದುಕೊಂಡು ಓದಿಸಿಕೊಂಡದ್ದು ಕೃತಿಯ ಹೆಚ್ಚುಗಾರಿಕೆ. ಶಿವರಾಮ ಕಾರಂತರ ಒಳ್ಳೆಯ ಕಾದಂಬರಿಗಳ ಸಾಲಿಗೆ ನಿರ್ವಿವಾದವಾಗಿ ಸೇರಿಸಬಹುದಾದ ಕೃತಿ ಇದು. ಎಲ್ಲಕ್ಕಿಂತ ಮುಖ್ಯ ಇದರಲ್ಲಿ ಉಲ್ಲೇಖಿಸಲಾದ ವಿಟ್ಲ ನನ್ನೂರು! ಅದು ಓದಿನ ಖುಷಿಯ ಇನ್ನಷ್ಟು ಹೆಚ್ಚಿಸಿತು.
ಶಿವರಾಮ ಕಾರಂತರು ಕನ್ನಡ ಸಾಹಿತ್ಯದಲ್ಲಿ ಸಮಾಜಮುಖಿ ಚಿಂತನೆಗೆ ಧ್ವನಿಯಾಗಿರುವ ಮಹತ್ವದ ಲೇಖಕರು. ೧೯೫೧ ರಲ್ಲಿ ಪ್ರಕಟವಾಗಿರುವ ಈ ಕೃತಿ ಇವತ್ತಿಗೂ ಬೆಚ್ಚನೆಯ ಓದಿನ ಅನುಭವ ಕೊಟ್ಟಿದ್ದರಲ್ಲಿ ಸಂದೇಹವಿಲ್ಲ. ಬೆಟ್ಟದ ಜೀವದಲ್ಲಿನ ಕೃತಿಯ ಕಾಡಿನ ಪರಿಚಯ ಈ ಕೃತಿಯಲ್ಲಿ ಮತ್ತಷ್ಟು ಎತ್ತರದ ಸ್ಥರಕ್ಕೇರಿದೆ ಎಂದರೆ ತಪ್ಪಿಲ್ಲ. ಕಾಡಿಗೂ ಒಂದು ಆತ್ಮವಿದೆ, ಆ ಆತ್ಮದ ಒಳಗೆ ಜೀವಿಸುವವರೇ ಮಲೆ-ಕುಡಿಯ ಮಕ್ಕಳು. ಇವರಿಗೆ ದುಡ್ಡಿನ ಬೆಲೆ ಗೊತ್ತಿಲ್ಲವೆಂದಲ್ಲ, ಅದು ಬೇಕಿಲ್ಲವಷ್ಟೇ.. ವರ್ಷಕ್ಕೆ ಮೂರು ನಾಲ್ಕುಬಾರಿ ಬಂದುಹೋಗುವ ಧನಿಯರಿಂದ ಆಶಿಸುವುದು ಉಪ್ಪು ಮತ್ತು ವರುಷಕ್ಕೆ ಒಂದು ಜೊತೆ ಬಟ್ಟೆಯನ್ನು ಮಾತ್ರವೆಂದರೆ ಊಹಿಸಿಕೊಳ್ಳಿ ಅದೆಷ್ಟು ಮುಗ್ದ ನೆಮ್ಮದಿಜೀವನವೆಂದು.
ಮಲೆಗೂ ಒಂದು ಆತ್ಮ, ಬೆಟ್ಟಕ್ಕೂ ಆತ್ಮ, ಬೆಟ್ಟದ ಒಂದು ಕೋಡಿಗೂ ಆತ್ಮ, ಗಾತ್ರವಾದ ಮರಕ್ಕೂ ಒಂದು ಆತ್ಮ, ಹೆಬ್ಬೆಗೂ ಒಂದು ಆತ್ಮ- ಹೀಗೆ ಜಡವಸ್ತುಗಳಿಗೆ ಪ್ರೇರೇಪಿಸಿ ಊಹಿಸುವ ಮನೋವೃತ್ತಿಯುಳ್ಳ ಈ ಜನಕ್ಕೆ ತಮ್ಮ ಸುತ್ತಲಿನ ನಿಸರ್ಗಕ್ಕೆ ತಕ್ಕಂತೆ ನಡೆದುಕೊಳ್ಳಬೇಕೆಂಬ ನಿತ್ಯಮನೋವೃತ್ತಿ ಉಂಟಾಗುತ್ತದೆ. ಏನಿದ್ದರೂ ಅವರ ಕೆಚ್ಚು ಆ ರಂಗದಲ್ಲಿ ನಲಿದಾಡುವ ಪಶುಪ್ರಾಣಿಗಳ ಮೇಲಷ್ಟೇ.
ಕಥೆಯ ಕೇಂದ್ರವಾಗಿ ನಾಯಕನಿಲ್ಲ. ಕೃತಿಯಲ್ಲಿನ ಗಟ್ಟಿತನವೆಂದರೆ ಕುಡಿಯರ ಮಾನವ ಸಂಬಂಧಗಳು, ಸಹಾನುಭೂತಿ. ಜೊತೆ-ಜೊತೆಗೆ ಕಾಲಕ್ರಮೇಣ ಗುಂಪಿನಲ್ಲುಂಟಾದ ಬದಲಾವಣೆಯ ಆಶಾವಾದ , ರಾಗ-ದ್ವೇಷ, ಅಸೂಯೆ, ನಂಬಿಕೆಗಳು ಪ್ರಕೃತಿಯ ದೈವದ ಮುಂದೆ ತನ್ನ ತನ್ನ ಕರ್ಮಕ್ಕನುಸಾರವಾಗಿ ಪ್ರಾಯಶ್ಚಿತ ಪಟ್ಟು ಕೊನೆಗೆ ಒಳ್ಳೆಯತನವೇ ಮಲೆ-ಕುಡಿಯರನ್ನು ಉಳಿಸುತ್ತದೆ.
ದನಿಯಲ್ಲಿನ ಕಾಮ ಚಪಲತೆ ಕುಡಿಯರ ನಡುವಿನ ಹೆಂಗಸರಲ್ಲಿ ಅಸೂಯೆಯನ್ನು ಹೆಚ್ಚಿಸಿದ ಮೇಲೆ ಕಥೆಯು ಹಲವು ತಿರುವುಗಳನ್ನು ಪಡೆದು ತಮ್ಮಲ್ಲೇ ನಂಬಿಕೆ ಕಳೆದುಕೊಂಡು ಬಿರುಕು ಮೂಡಿ ಕಿರಿಮಲೆ ಹೊಡೆದ ಮಡಕೆಯಂತೆ ಛಿದ್ರವಾಗುತ್ತದೆ. ಇದರಿಂದ ಹೊಸ ನೆಲೆಯ ಮಲೆ ಕಂಡುಕೊಳ್ಳುವ, ಇರುವ ಗುರಿಕಾರಿಕೆಯನ್ ಜೊತೆಗೆ ತಮ್ಮವರನ್ನೇ ತೊರೆಯುವ ಜನ ಸಮೃದ್ಧಿ ಜೀವನ ನಡೆಸಿ ನಾಗರಿಕತೆಯ ಕಡೆ ಹೆಜ್ಜೆ ಹಾಕುತ್ತಾರೆ. ಇದರ ಜೊತೆಗೆ ಮಲೆನಾಡನ್ನು ಜ್ವರದಂತೆ ಕಾಡುವ ಪಾದ್ರಿಗಳ ಮತಾಂತರ ಪ್ರಕ್ರಿಯೆ ಜನಗಳ ನಂಬಿಕೆಗೆ ಕಿಚ್ಚನ್ನೇ ಹೆಚ್ಚಿಸಿ ಇರುವ ಅಲ್ಪ ನೆಮ್ಮದಿಯ ಕಟ್ಟು ಪಾಡಿಗಳಿಗೂ ಕಂಠಕ ಒಡ್ಡುತ್ತಾರೆ. ಒಟ್ಟಾರೆ ಕಥೆಯಾಗಿ ಕಾಡಿನ ಹೃದಯಬಡಿತವನ್ನು ಮನುಷ್ಯ ಸಂಬದದ ಮುಖೇನ ಕಾರಂತರು ವಿಸ್ತೃತವಾಗಿ ಕಟ್ಟಿಕೊಡುವುದರ ಜೊತೆ ಶಿಕಾರಿಯ ವಿವರಣೆಯನ್ನು ಮೈ ರೋಮಾಂಚನಗೊಳ್ಳುವಂತೆ ವಿಸ್ತಾರವಾಗಿ ಬಣ್ಣಿಸಿದ್ದಾರೆ.
ಚಾರಣ ಮಾಡುವವರು, ಕಾಡಿನ ಬಗ್ಗೆ ಕುತೂಹಲಉಳ್ಳವರು, ಕಾರಂತರ ಕಾಡನ್ನು ತಿಳಿಯ ಬಯಸುವವರು ಬೆಟ್ಟದ ಜೀವ, ಕುಡಿಯರ ಕೂಸು ಓದಲೇಬೇಕಾದ ಕೃತಿಗಳು.
The inherent theme of Karanth works is emulated even in "Kudiyara Kossu", if "Bettada jiva" Work fired the curiosity towards the atmosphere and lifestyle of Children of nature there is no doubt in "Kudiyara kusu" serving the same praiseworthy content.
The entire content mainly focused on Kudiya tribe beliefs, social system, tradition, and lifestyle. there are no speculation, surprise, and introspection to interpolate in our reservoir of intellect in this book. but Its unadulterated narration of tribal people's lifestyle and their innocence, Rekindle the extinguished fire of lucid human nature.
Shivram Karanth convinced me, the antidote to all misery of humans are in the womb of mother nature and in the presence of affectionate community.
ಮಲೆಕುಡಿಯರ ಬಗೆಗಿನ ಬಹಳ ಸೊಗಸಾದ ಕಥೆಯನ್ನೊಳಗೊಂಡಿರುವ ಪುಸ್ತಕ. ಓದಿ ಬಹಳ ದಿನಗಳವರೆಗೂ ಕಥೆಯ ಪಾತ್ರಗಳು, ಬೆಟ್ಟ, ಗುಡ್ಡ, ಬಯಲು, ಮಳೆ, ಅಬ್ಬಿಗಳು ಮನಸ್ಸನ್ನಾವರಿಸಿದ್ದವು. ಒಂದೊಮ್ಮೆ ಕಿರಿಮಲೆಗೆ ಹೋಗಿ ಅಲ್ಲಿಯ ಬೆಟ್ಟಗುಡ್ಡಗಳಲ್ಲಿ ಕಳೆದುಹೋಗಬೇಕೆಂಬ ಬಯಕೆ ಮೂಡಿದ್ದು ಸುಳ್ಳಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ, ಸುಬ್ರಹ್ಮಣ್ಯ, ಧರ್ಮಸ್ಥಳ ಕಾಡು ಪ್ರದೇಶದಲ್ಲಿ *ಮಲೆಕುಡಿಯರು* ಇದ್ದರು, ಈಗಲೂ ಇದ್ದಾರೆಯೋ ಇಲ್ಲವೋ ತಿಳಿಯದು. ಶಿವರಾಮ ಕಾರಂತರ ಕುಡಿಯರ ಕೂಸು ಕಾದಂಬರಿಯಿಂದ ಅವರು ಮಲೆಕುಡಿಯರ ಬಗ್ಗೆ ನಮಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಈ ಕಾದಂಬರಿಯನ್ನು ಓದಿದರೆ ನಮಗೆ ಅರ್ಥವಾಗುತ್ತದೆ ಅವರ ಜೀವನ ಹೇಗಿತ್ತೆಂಬುದು.
ಕಿರಿಮಲೆ ಮತ್ತು ಹಿರಿಮಲೆ ಎಂಬ ಎರೆಡು ಗ್ರಾಮದಲ್ಲಿ ನಡೆಯುವ ಕಥೆಯನ್ನು ಇಲ್ಲಿ ಕಾಣಬಹುದು. ಮಲೆಕುಡಿಯರಿಗೆ ತಮ್ಮ ಪ್ರದೇಶವನ್ನು ಬಿಟ್ಟು ಇತರ ಮನುಷ್ಯ ಸಂಪರ್ಕವು ತೀರಾ ಕಡಿಮೆ. ಅವರು ವಾಸಿಸುವುದು ಕಾಡಿನಲ್ಲೆ. ಆ ಮಲೆಗೆ ಒಬ್ಬ ಗುರಿಕಾರನನ್ನು (ಮುಖ್ಯಸ್ತ) ನೇಮಕ ಮಾಡಿರುತ್ತಾರೆ. ಯಾವುದೇ ವಿಷಯದಲ್ಲಾಗಲಿ ಗುರಿಕಾರನ ಸಲಹೆ ಪಡೆಯುತ್ತಿದ್ದರು, ಆ ಸಲಹೆಯನ್ನು ಗೌರವಿಸುತ್ತಿದ್ದರು. ಇಲ್ಲಿ ಬರುವ ಕೆಂಚ ಹಾಗು ಕೆಂಚ ತೀರಿಹೋದ ನಂತರ ತನ್ನ ಮೊಮ್ಮಗ ಕರಿಯ ಒಳ್ಳೆಯ ಗುರಿಕಾರರಾಗಿದ್ದರು. ಆದರೆ ಕೆಲವರಲ್ಲಿ ದ್ವೇಷ,ಅಸೂಹೆ ಇರುವುದು ಸಹಜ, ಗುರಿಕಾರತ್ವವನ್ನು ಹೇಗಾದರೂ ವಷ ಪಡಿಸಿಕೋಬೇಕೆಂಬ ಹಂಬಲ ತುಕ್ರನಿಗೆ ಅದಕ್ಕೆ ಮಲೆಯ ಧನಿಗಳಾದ ತಿರುಮಲ ಭಟ್ಟರ ನೆರವೂ ಇರುತ್ತದೆ, ತುಕ್ರನಿಗೆ ಗುರಿಕಾರತ್ವ ಬಂದರೂ ಅದು ಹೆಚ್ಚು ಕಾಲ ಉಳಿಯುವುದಿಲ್ಲ.
ಅವರು ಆರಾಧಿಸುವ ದೇವರು *ಕಲ್ಕುಡ, ಮಲೆರಾಯ ಹಾಗು ಕುಕ್ಕೆ ಸುಬ್ರಹ್ಮಣ್ಯ*. ಕರಡಿ, ಚಿರತೆ, ಹುಲಿಯನ್ನು ಬೇಟೆಯಾಡುವುದು ಅವರ ವಾಡಿಕೆ ಕರಿಯನು ಒಳ್ಳೆಯ ಹುಲಿ ಬೇಟೆಗಾರನಾಗಿರುತ್ತಾನೆ. ಮಲೆಯಲ್ಲಿ ಏಲಕ್ಕಿ ಬೆಳೆಯುವುದು, ಧನಿಗಳಿಗೆ ಏಲಕ್ಕಿ ಮಾರಿ ಅವರಿಂದ ಸಿಗುವ ದವಸಿ ಧಾನ್ಯಗಳಿಂದ ಹಾಗು ಮೊಲ,ಕರಡಿ, ಜಿಂಕೆಯನ್ನು ಬೇಟೆಯಾಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದೇ ಅವರ ಜೀವನ. ಅವರಾಯಿತು ಅವರ ಮಲೆಯರ ಗುಂಪಾಯಿತು. ಇತರ ಮನುಷ್ಯರ ಜೊತೆ ಸಂಪರ್ಕವೇ ಕಡಿಮೆ. ಆ ಮಲೆಯಲ್ಲಿ ಚಿನ್ನಿಯಂತಹ ಒಳ್ಳೆಯ ಹೆಂಗಸು, ಗಿಡ್ಡಿ,ಕೆಂಪಿಯಂತಹ ಕೆಟ್ಟ ಹೆಂಗಸರೂ ಇದ್ದರು. ಬೂದನನ್ನು ಮದುವೆಯಾದ ಕೆಂಪಿಗೆ ಧನಿಗಳ ವೇಷಭೂಷಣಗಳನ್ನು ಕಂಡು ಅದಕ್ಕೆ ಮಾರುಹೋಗಿ ಅಕ್ರಮ ಸಂಬಂಧವನ್ನು ಬೆಳೆಸುತ್ತಾಳೆ, ಕಡೆಯಲ್ಲಿ ಆಕೆ ಖಾಯಿಲೆಯಿಂದ ಸಾಯುತ್ತಾಳೆ. ನಮ್ಮ ಸಮಾಜದಲ್ಲಿ ಕೆಂಪಿಯಂತಹ ಎಷ್ಟೋ ಹೆಂಗಸರಿದ್ದಾರೆ ದುಡ್ಡು, ಚಿನ್ನ, ಕಾಮ ಇವುಗಳಿಗೆ ಮಾರುಹೋಗಿ ತಮ್ಮ ಜೀವನವನ್ನೇ ನಾಶಮಾಡಿಕೊಂಡಿರುವವರನ್ನು ಹಾಗೆಯೇ ಧನಿಗಳಂತೆ ಸದಾ ಕಾಮವನ್ನು ಬಯಸುವ ಗಂಡಸರನ್ನೂ ಕಾಣಬಹುದು.
ಮತ್ತೂಂದು ಆಶ್ಚರ್ಯಕರವಾದ ಸಂಗತಿಯಂದರೆ *ಕಲ್ಕುಡನನ್ನು ಆರಾಧಿಸುವುದು*. ಪ್ರತಿ ವರ್ಷವೂ ಕಲ್ಕುಡನಿಗೆ ಪೂಜೆಯಾಗಲೇ ಬೇಕು ಆತನಿಗೆ ಮಾಂಸದ ನೈವೇದ್ಯ ಅರ್ಪಿಸಲೇಬೇಕು. ಪೂಜೆ ನಡೆಸದಿದ್ದಲ್ಲಿ ಕಲ್ಕುಡ ಅಲ್ಲಿರುವ ಯಾರನ್ನಾದರೂ ಬಲಿತೆಗೆದುಕೊಳ್ಳುತ್ತಿತ್ತು. ಅಲ್ಲಿರುವ ಜನರ ನಂಬಿಕೆಯೇ ಹೀಗೆ ಕಲ್ಕುಡನಿಗೆ ವರ್ಷ ವರ್ಷ ಪೂಜೆ ಮಾಡಿದರೆ ಯಾವ ಅಪಾಯ ವಿರಲಾರರೆಂದು ತಪ್ಪಿದರೆ ಏನಾದರೂ ಅಪಶಕುನಗಳು ಎದುರಾಗುತ್ತವೆಂದು ಅವರ ನಂಬಿಕೆ. ಪೂಜೆಯನ್ನು ಅವರು *ಕೋಲ* ಎಂದು ಕರೆಯುವುದುಂಟು. ಕೋಲದ ದಿನ ಪೂಜಾರಿಯ ಮೇಲೆ ಕಲ್ಕುಡ ಬರುವುದು, ಇವರು ಕೇಳುವ ಪ್ರಶ್ನೆಗೆ ಉತ್ತರ ಕೊಡುತ್ತಿತ್ತು. ಕಲ್ಕುಡನಿಗೆ ಯಾರು ತಪ್ಪು ಮಾಡಿದರು ತಿಳಿಯುತ್ತಿತ್ತು, ತಪ್ಪು ಮಾಡಿದವರಿಗೆ ಕಾಣಿಕೆ ಕೊಟ್ಟು ತಮ್ಮ ತಪ್ಪನ್ನು ಪರಿಹಾರ ಮಾಡಿಕೊಳ್ಳಬೇಕೆಂದು ಆದೇಶಿಸುತ್ತಿತ್ತು. ಕಲ್ಕುಡನೆಂದರೆ ಎಲ್ಲಿಲ್ಲದ ಭೀತಿ. ಇದು ಎಷ್ಟು ನಿಜವೋ ಸುಳ್ಳೋ ಅವರ ನಂಬಿಕೆ ಅದು.
ಇಲ್ಲಿ ಬರುವ ಕರಿಯನ ಪಾತ್ರ ಸೊಗಸಾಗಿದೆ, ಆತನಿಗೆ ಚಿಕ್ಕ ವಯಸ್ಸಿನಿಂದಲೇ ಬೆಟ್ಟ ಹತ್ತಬೇಕು, ಜೇನು ಗೂಡು ಕಂಡರೆ ಅದನ್ನು ಹೇಗಾದರೂ ಹಿಡಿದು ಸವಿಯಬೇಕು, ಆನೆಯನ್ನು ಫಳಗಿಸಬೇಕು, ಹುಲಿ ಚಿರತೆಯನ್ನು ಭೇಟೆಯಾಡಬೇಕು ಇನ್ನು ಹಲವಾರು ಕೋರಿಕೆಗಳು. ಅದು ಫಲಿಸುತ್ತದೋ ವಿಫಲಿಸುತ್ತದೋ ಎಂಬುದು ಈ ಕಾದಂಬರಿಯ ಮುಖ್ಯ ಉದ್ದೇಶ.
What a beautiful book. I picked this up since i had finished Bettada Jeeva book of Sri Karanth Sir. He takes you 70-80 years back to the Malenadu. The lifestyle of Kudiya people then is written beautifully by Karanth Sir. Politics, greed, lust, oppression- all are brought out in right quantum in this book. I would recommend this book to every Kannada book reader.
#ಹೊತ್ತಿಗೆಯೊಡನೆ ಒಡನಾಟ #ಓದಿನ ಸಂತೃಪ್ತಿ ಹೊತ್ತಿಗೆ:ಕುಡಿಯರ ಕೂಸು. ಲೇಖಕರು:ಶಿವರಾಮ ಕಾರಂತರು. ಸಿಕ್ಕಿದ್ದು:ಕನ್ನಡ&ಸಂಸ್ಕೃತಿ ಇಲಾಖೆ ವಿಜಯಪುರ. ಬೆಲೆ:#೨೦ ರೂಪಾಯಿಗಳು. ಈ ಕಾದಂಬರಿ;ಆಧುನಿಕ ನಾಗರಿಕತೆಯ ಸೋಂಕಿನ ಸ್ಪರ್ಶಕ್ಕೆ ಒಳಗಾಗದೇ ತಮ್ಮದೇ ಚೌಕಟ್ಟಿನಡಿಯಲ್ಲಿ ಜೀವನದ ನಿತ್ಯ ವ್ಯಾಪಾರ ಸಾಗಿಸುತ್ತಿರುವ,ಪರಿಶ್ರಮಿಗಳಾದ ಮಲೆಕುಡಿಯರ ಜನಾಂಗದ ಜೀವನಗಾಥೆ.ಈ ಜನಾಂಗದ ಸಂಸ್ಕೃತಿ ,ಕಲ್ಕುಡ ದೈವದ ಮೇಲಿನ ಭಯ-ಭಕ್ತಿ,ಅವರ ಕುಮರಿ ಬೇಸಾಯ,ಶಿಕಾರಿಯಲ್ಲಿನ ಆಸಕ್ತಿ ಹಾಗೂ ಮಲೆನಾಡಿನ ಪ್ರಾಕೃತಿಕ ವೈಭವದ ಚಿತ್ರಣವು ನಮ್ಮೆದರು ವ್ಯಕ್ತವಾಗಿರುವ ಪರಿ ಅದ್ಭುತ . ಕಿರಿಮಲೆಯ ಗುರಿಕಾರಿಕೆಯ ಪಟ್ಟ ಕೆಂಚನ ತರುವಾಯ ಯಾರಿಗೆ?ಎಂಬ ಸನ್ನಿವೇಶ ಬಂದಾಗ,"ಅವನ ಮೊಮ್ಮಗನಾದ ಕರಿಯನೇ ಆಗಬೇಕು"ಎಂಬ ಕಲ್ಕುಡನ ಅಪ್ಪಣೆಯಂತೆ,ಕರಿಯ ಗುರಿಕಾರಿಕೆಯ ಜವಾಬ್ದಾರಿಗೆ ಅಂಟಿಕೊಳ್ಳುತ್ತಾನೆ.ನರಜೀವನ ಪ್ರಪಂಚದಲ್ಲಿ ಕಾಣಸಿಗುವ ಅಧಿಕಾರ ಮೋಹದ ಛಾಯ ಕಿಡಿಯ ಪರ್ಯಾಯ ಭಾಗವಾಗಿ,ತುಕ್ರನ ಗುರಿಕಾರಿಕೆ ಪಟ್ಟದ ಆಕಾಂಕ್ಷೆ ಇಲ್ಲಿ ವ್ಯಕ್ತವಾಗಿದೆ.ಕಿರಿಮಲೆಯ ಅಧಿಪತ್ಯ ವಹಿಸಿದ-ತಿರುಮಲ ಧನಿಗಳ ಏಲಕ್ಕಿ ತೋಟದಲ್ಲಿನ ಶ್ರಮದ ದುಡಿತಕ್ಕೆ ದಕ್ಕಿದ ಉಪ್ಪು,ಮೆಣಸು,ಬಟ್ಟೆಗಳಲ್ಲಿಯೇ ತೃಪ್ತಿಪಟ್ಟು ಬದುಕುತಿಹ ಮುಗ್ಧ ಜೀವಿಗಳು;ಮಲೆಕುಡಿಯರು. ಕ್ರೈಸ್ತ ಮತದವರ ಮತಾಂತರದ ಆಟಕೆ ತೋರಿದ ಪ್ರತಿಭಟನಾ ಮನೋಭಾವ,ಕರಡಿ ಹಾಗೂ ನರಭಕ್ಷಕ ಹುಲಿಯನ್ನು ಕರಿಯ ಭೇಟಿಯಾಡಿದ ಸನ್ನಿವೇಶಗಳು,ಅವನ ಶೌರ್ಯ-ಸಾಹಸಕ್ಕೆ ಸಾಕ್ಷಿಗಳು.ಒಟ್ಟಾರೆಯಾಗಿ ಮಲೆಕುಡಿಯರ ಬದುಕ-ಭವಣೆಯ ಶರಧಿಯಲ್ಲಿ ನಾನಂತೂ ಮಿಂದಾಗಿದೆ.���ಾಹಿತ್ಯ ಪ್ರೇಮಿಗಳು ಒಂದೊಮ್ಮೆ ಓದಲೇಬೇಕಾದ ಕಾದಂಬರಿ.ಕನ್ನಡ ಸಾಹಿತ್ಯ ಓದಿನಿಂದ ವ್ಯಕ್ತಿತ್ವ ರೂಪಗೊಳ್ಳುವದಂತೂ ಸಾರ್ವಕಾಲಿಕ ಸತ್ಯ-ಎಂಬುದು ನನ್ನ ಅಭಿಪ್ರಾಯ.ಕಾರಂತರ ಪಾದಕ್ಕೆ ನನ್ನ ಮನ:ಪೂರ್ವಕ ನಮನಗಳು.
'ಕುಡಿಯರ ಕೂಸು' ಓದುಗರನ್ನು ಕೈ ಹಿಡಿದು ದಟ್ಟ ಕಾಡಿನ ಒಳಗೆ ಕರೆದೊಯ್ದು ಅಲ್ಲಿನ ಮೂಲ ನಿವಾಸಿಗಳಾದ ಕುಡಿಯರ ನಿತ್ಯ ಜೀವನವನ್ನು ತೋರಿಸುವ ಅದ್ಭುತ ಹಾಗೂ ಯಶಸ್ವಿ ಪ್ರಯತ್ನ.
ಕೆಲವು ಕಥೆಗಳನ್ನು ಓದುವಾಗ ಪಾತ್ರಗಳು ನಮ್ಮ ಕಣ್ಣ ಮುಂದೆ ಬಂದು ಅಭಿನಯಿಸಿದ ಹಾಗೆ ಕಾಣುತ್ತದೆ. ಕಥೆಯಲ್ಲಿನ ಘಟನೆಗಳು ನಮ್ಮ ಮುಂದೆಯೇ ನಡೆದ ಹಾಗೆ ಭಾಸವಾಗುತ್ತದೆ. ಆದರೆ 'ಕುಡಿಯರ ಕೂಸು' ಅದಕ್ಕಿಂತಲೂ ಒಂದು ಹೆಜ್ಜೆ ಮುಂದಿದೆ ಎಂದು ನನ್ನ ಭಾವನೆ. ಈ ಕಥೆಯನ್ನು ಓದುವಾಗ ಯಾರೋ ಒಬ್ಬರು ನಮ್ಮ ಜೊತೆಯೇ ಇದ್ದು, ನಮ್ಮ ಪಕ್ಕದಲ್ಲಿ ಕುಳಿತು, ನಮ್ಮ ಜೊತೆಯಲ್ಲೇ ನಡೆದು ಅಲ್ಲಿ ನಡೆಯುತ್ತಿರುವ ಘಟನೆಗಳನ್ನು ನಮ್ಮ ಕಿವಿಯಲ್ಲಿ ಹೇಳಿದ ಅನುಭವವಾಗುತ್ತದೆ. ಕೆಲವೊಮ್ಮೆ ಅರ್ಥವಾಯಿತೇ ಅಥವಾ ಇನ್ನಷ್ಟು ಹೇಳಬೇಕೇ? ಎಂದು ಪ್ರಶ್ನಿಸಿ ಇನ್ನಷ್ಟು ವಿವರಿಸಿದ ಹಾಗಾಗುತ್ತದೆ.
ಇನ್ನು ಕಥೆಯಲ್ಲಿ ಬರುವ ಕೆಲವು ಘಟನೆಗಳ ವಿವರಣೆಯಂತೂ ಇದು ಕಥೆಯೇ ಅಥವಾ ಕಾರಂತರು ತಾವು ಕಣ್ಣಾರೆ ಕಂಡದ್ದನ್ನು ಚಾಚೂ ತಪ್ಪದೇ ನಮಗೆ ಹೇಳುತ್ತಿದ್ದಾರೆಯೇ? ಎಂದನಿಸುತ್ತದೆ.
ಬೆಟ್ಟದ ಜೀವ ಕಾದಂಬರಿಯಲ್ಲಿ ಮುಳುಗಿ ಹೋದವರಿಗೆ ಅಲ್ಲೇ ತಡಕಾಡಿದರೆ ಸಿಗುವ ಸಂಪತ್ತೇ ಕುಡಿಯರ ಕೂಸು. ಇಲ್ಲಿ ಕಾಡು ಮಕ್ಕಳಾದ ಕುಡಿಯರ ಕಥೆಯಿದೆ. ಇವರು ಒಡೆಯರಲ್ಲ. ಧನಿಯರ ಒಕ್ಕಲು ಆಳು. ಏಲಕ್ಕಿ ಬೆಳೆದು ಧನಿಯರಿಗೆ ನೀಡಿ ಉಪ್ಪು ಉಡುಗೆ ಪಡೆದು ಜೀವಿಸುವವರು. ಹೀಗೆ ಇವರ ನಡುವೆ ಗಿರಕಾರ, ಮನೆಯವ, ಸ್ನೇಹಿತ, ಆಪತ್ಭಾಂಧವ ಸಂಬಂಧಗಳ ಹೊತ್ತು ಜೀವನ ನಡೆಸುತ್ತ ಸುಖದುಃಖಗಳನ್ನು ಸಾಗಿಸಿಕೊಂಡು ಹೋಗುವ ಇವರ ಕಥೆಯೇ ಕಾದಂಬರಿ. ಕಥಾ ನಾಯಕ ಎಂದು ಯಾರಿಲ್ಲ. ಮನುಷ್ಯ ಸಹಜ ಭಾವನೆಗಳೇ ಇಲ್ಲಿ ಮುಖ್ಯ ಪಾತ್ರದಾರಿ. ಕರಿಯ, ತುಕ್ರ, ಭಟ್ಟ, ಗಿಡ್ಡಿ, ಕೆಂಪಿ, ಬೂದ, ಕೆಂಚ ಹೀಗೆ ಪ್ರತಿ ಪಾತ್ರಗಳಿಗೂ ಅದರದೇ ಆದ ಇಂಪಾರ್ಟೆನ್ಸಿದೆ.
Very nice book by Shivarama karantha. As you are reading, you will get indulge in the beauty of western ghats. The monsoon season is well described. If you are born and brought up in western ghats , you will definitely refresh your childhood memories.