Kota Shivaram Karanth was a Kannada writer, social activist, environmentalist, Yakshagana artist, film maker and thinker. He was described as the "Rabindranath Tagore of Modern India who has been one of the finest novelists-activists since independence"by Ramachandra Guha. He was the third person among eight recipients of Jnanpith Award for Kannada the highest literary honour conferred by the Govt. of India.
Shivaram Karanth was born on 10 October 1902, in Kota near Udupi in the Udupi district of Karnataka to a Kannada family.He was influenced by Gandhi's principles and took part in Indian Independence movement while he was in college. He did not complete his education and went to participate in the Non-cooperation movement and canvassed for khadi and swadeshi for five years up to 1927. By that time Karanth had already started writing fiction-detective novels, to begin with as well as plays.
Karanth was an intellectual and environmentalist who tremendously contributed to art and culture of Karnataka. He is considered one of the greatest novelist in Kannada. Apart from his 47 novels, he also wrote 31 plays, four short stories, six books of essays and sketches, thirteen books on art, 2 volumes of poems, 9 encyclopedias, and 100+ of articles on various issues and subjects, including a history of world art in Kannada and a work on Chalukyan sculpture and architecture, a standard treatise on the Yakshagana (with which dramatic form, his name is identified), a three volume book of knowledge for children, a four volume encyclopedia on science for grown ups, 240 children's books, six books on travel, two books on birds, three Travelogues, an autobiography.
He has received several literary awards,.Namely, Jnanpith Award, Padma Bhushan, Sahitya Academy award and Pampa Award.
He passed away on 9th December 1997 in Manipal, Karnataka.
ಈ ಕಾದಂಬರಿಯಲ್ಲಿ ಕಾರಂತರು ಗಂಡು ಹೆಣ್ಣುಗಳ ಮೈ ಮನಗಳ ಸಂಬಂಧದ ಚೆಲವು,ಅಸಹ್ಯಗಳನ್ನು ಮಂಜುಳೆಯಂಬ ಒಬ್ಬ 'ಗರತಿ'ಯಲ್ಲದವಳ ಬಾಳಿನ ಮೂಲಕ ಚಿತ್ರಿಸಿದ್ದಾರೆ. ಈ ಕಥೆ ನಡೆಯುವುದು ವಸಪುರ ಅಂದರೆ ಈಗಿನ ಬಸರೂರಿನ ಹಾಗು ಅದರ ಸುತ್ತ ಮುತ್ತಲಿನ ಪ್ರದೇಶದಲ್ಲಿ. ಸಾಮಾನ್ಯವಾಗಿ ಕೆಲವರು ಬಸರೂರಿಗೆ ಹೋಗಿ ಬರುವುದನ್ನು ಕಂಡರೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಕಾಲವೂ ಇತ್ತು ಕಾರಣ ಬಸರೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಸಿರಾಗದ ಮನೆಯಿಲ್ಲ, ಹಳ್ಳಿಯಿಲ್ಲ, ಪಟ್ಟಣವಿಲ್ಲ ಎಂಬ ಭಾವನೆ ನಗುವವರ ಮನಸ್ಸಿನಲ್ಲಿ ಅಚ್ಚಳಿದುಬಿಟ್ಟದ್ದು. ಇದು ಕರಾವಳಿ ಪ್ರದೇಶವಾದುದರಿಂದ ೧೭ನೆ ಶತಮಾನದಲ್ಲಿ ಇಂಗ್ಲೀಷರು, ಪೋರ್ಚುಗೀಸರು ವ್ಯಾಪಾರಕ್ಕಾಗಿ ಬಂದವರು ಕ್ರಮೇಣ ಅರಿವೆಯ ಸಾಗಾಣಿಕೆ, ಮೆಣಸಿನ ಸಾಗಾಣಿಕೆಯ ವ್ಯಪಾರಕ್ಕೂ ತೊಡಗಿದರು. ಅದೇ ಕಾರಣದಿಂದ ಊರೂರು ಅಲೆದಾಡುತ್ತಿದ್ದರು, ಆ ಸಮಯದಲ್ಲಿ ಅವರ ಮನವೊಲಿಸುವ ಪದಾರ್ಥ ವೇಶ್ಯಾ ಲಲನೆಯರು. ಅವರಿಗೆ ಮತ್ತೊಂದು ವಿದ್ಯೆಯೂ ಇತ್ತು ಕೆಲವರು ಸಂಗೀತ ಹಾಡುವುದು, ಪಿಟೀಲು ನುಡಿಸುವುದು, ನೃತ್ಯ ಮಾಡುವುದು. ಕ್ರಮೇಣ ಇದೆಲ್ಲವೂ ಒಟ್ಟುಗೂಡಿ ಒಂದು ಕಸುಬಾಗಿಯೇ ಬೆಳೆಯಿತು, ನಂತರ ಅದೇ ಕಸಬು ವ್ಯಾಪಾರವಾಗುವ ಕಾಲವೂ ಬಂದೊದಗಿತು. *ಸಂಸಾರ ಹೊರೆಯುವ ಭಾರ ಗಂಡಿಗೆ ಅದನ್ನು ಹೊರುವ ಭಾರವೆಲ್ಲವೂ ಹೆಣ್ಣಿಗೆ*. ಆದರೇ ವೇಶ್ಯಾಲಲನೆಯವರಿಗೆ ಆ ಸಂಸಾರ ಎಂಬ ಭಾರವಿಲ್ಲ, ಅವರ ಕಸುಬಿಗೆ ಮೇಲು, ಕೀಳು ಎಂಬ ಅಂತರವಿಲ್ಲ, ಜಾತಿ ಕೋಮುಗಳ ಅಂತರವಿಲ್ಲ, ತಮ್ಮ ಜೀವನಕ್ಕೆ ಬೇಕಾದ ಅರಿವೆ, ಹೊಟ್ಟೆ ತುಂಬ ಅನ್ನ ಇದ್ದರೆ ಆಯಿತು ಅದಕ್ಕಿಂತ ಸುಖವಾದ ಜೀವನ ಯಾವುದಿದೆ ಎನ್ನುವುದು ಅವರ ಅಭಿಪ್ರಾಯ. ಇಂಥದೇ ಜೀವನ ನಡೆಸುತ್ತಿದ್ದ ಮಂಜುಳ ಜನರ ಬಾಯಲ್ಲಿ ಮಂಜಿ, ಇಲ್ಲಿ ಅವಳ ಜೀವನವನ್ನು, ಮನ್ನಸ್ಸಿನ ಭಾವನೆಗಳನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಈ ವೃತ್ತಿಯು ಅವರ ಕುಟುಂಬದಲ್ಲಿ ತಲೆತಲಾಂತರದಿಂದ ಬಂದದ್ದೇ, ಮಂಜಿಯ ತಾಯಿಯು ನಂತರ ಮಂಜಿಯ ಮಗಳು ಶಾರಿಯದು ಇದೇ ಜೀವನ. ಆದರೆ ಶಾರಿಯ ಮಗಳಾದ ಚಂದ್ರಿ ಈ ವೃತ್ತಿಯನ್ನು ಅಳವಡಿಸಿಕೊಳ್ಳಲಿಲ್ಲ. ಆ ವೃತ್ತಿಯು ಆಕೆಗೆ ಅಸಹ್ಯವಾಗಿ ಕಾಣುತಿತ್ತು ಆದರೂ ಜನರು ಇವರನ್ನು ಕಾಣುವ ರೀತಿಯೇ ಬೇರೆ, ಹಲವಾರು ಪ್ರಸಂಗಗಳಿಂದ ಚಂದ್ರಿ ತುಂಬಾ ದುಃಖಕ್ಕೆ ಒಳಗಾಗುತ್ತಾಳೆ. ಒಮ್ಮೆ ಆಕಸ್ಮಿಕವಾಗಿ ತನ್ನ ಅಜ್ಜಿಯ (ಮಂಜುಳೆ) ಜೀವನ ಚರಿತ್ರೆಯ ಕುರಿತು ಬರೆದ ಪುಸ್ತಕ ಸಿಗುತ್ತದೆ, ಅದನ್ನು ಚಂದ್ರಿ ಓದುತ್ತಾ ಹೋಗುತ್ತಾಳೆ.
ಎಷ್ಟೋವರ್ಷಗಳಾದ ಮೇಲೆ ನನ್ನ ತಾಯಿಗೆ ಒಬ್ಬಳೇ ಬಬ್ಬಳು ಹುಟ್ಟಿದವಳೇ ನಾನು, ನಂತರ ತಂಗಿ ಕಪಿಲೆ, ಆಕೆಯು ನನಗಿಂತ ಅದೃಷ್ಟಶಾಲಿ ಎಂಬ ಭಾವನೆ, ಮಕ್ಕಳ ವಿಷಯದಲ್ಲಾಗಲಿ,ಬುದ್ದಿಯಲ್ಲಾಗಲಿ. ನನಗೆ ಇರುವ ಒಂದೇ ಕೊರತೆ ಮಕ್ಕಳಿಲ್ಲದಿರುವುದು, ಹತ್ತು ಜನರು ಓಡಾಡಿರುವ ಜಾಗದಲ್ಲಿ ಹುಲ್ಲು ಬೆಳೆಯುತ್ತದೆಯೇ? ಅದೇಯೇ ನನ್ನ ಬಾಳು ಸಹ. ಅಂತೂ ಸಮಾಜದಲ್ಲಿ ತಾವು ಗರತಿಯರೆಂದೇ ಪ್ರಸಿದ್ಧರಾದೆವು, ಅದು ವ್ಯಂಗ್ಯವೋ, ಅಥವಾ ಬೈಗುಳವೋ ಏನೋ ಸಹಿಸಬೇಕಾದದ್ದು ತಾವೇ ತಮ್ಮ ಜೀವನ ನಡೆಸಲು. ನಮ್ಮವರು ಹುಟ್ಟಿಸಿದ ಅಪ್ಪನಿಗೆ *ಪಾಳ* ಎನ್ನುವುದು ವಾಡಿಕೆ, ಪಾಳನು ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು, ಹಣ, ಅರಿವೆ, ಇತರ ಸೌಕರ್ಯಗಳನ್ನು ಒದಗಿಸಿಕೊಡುತ್ತಿದ್ದನು, ಆದರೆ ಜನರ ದೃಷ್ಟಿಯಲ್ಲಿ ಆ ಪಾಳನಿಗೆ ನನ್ನ ತಾಯಿಯು ಇಟ್ಟುಕೊಂಡವಳು ಎಂದೇ ಅಭಿಪ್ರಾಯ. ನಮ್ಮ ಜೀವನ ಸಾಗಿಸಲು ಮನಸ್ಸಿಲ್ಲದೆಯೇ ನಮ್ಮ ಮೈಯ್ಯನ್ನು ಮಾರಿಕೊಳ್ಳುವುದು ಅನಿವಾರ್ಯ, ಅದೇ ಜೀವನ ನಾನು ನಡೆಸಬಾರದೆಂದು ನನ್ನ ತಾಯಿಯು ನನಗೆ ಸಂಗೀತ ವಿದ್ಯೆ, ನೃತ್ಯ ಕಲಿಯಲು ಅವಕಾಶ ಒದಗಿಸಿಕೊಟ್ಟಳು. ಆದರೆ ಕಲಿತ ವಿದ್ಯೆ ಬೇರೆತರನೆ ಉಪಯೋಗವಾಯಿತು. ನನಗೆ ಹಲವಾರು ಕಡೆ ಸಂಗೀತ ಕಾರ್ಯಕ್ರಮ ಕೊಡಲು ಅವಕಾಶ ವದಗಿಬರುತಿತ್ತು, ರಾಮೋತ್ಸವ, ಯುಗಾದಿ, ನವರಾತ್ರಿಗಳಲ್ಲಂತೂ ಬಿಡುವೇ ಇಲ್ಲದೇ ಇರುವ ಮಟ್ಟಿಗೆ,ನನ್ನ ಜೊತೆ ಪಿಟೀಲು ಪದ್ಮನಾಭ ಸದಾ ಸಂಗೀತ ಕಚೇರಿಯಲ್ಲಿ ಭಾಗವಹಿಸುತ್ತಿದ್ದನು.
ಇದೇ ಸಮಯದಲ್ಲಿ ನನ್ನ ಚೆಲುವು, ನಿಲುವು,ಕಂಠ,ಕುಣಿತ ಎಲ್ಲಕ್ಕೂ ಮರುಳಾದ ಗಂಡಸರಿಂದ ಪತ್ರ ಬರತೊಡಗಿದವು. ರಂಭೆ, ಊರ್ವಶಿ, ಮೇನಕೆ ಯರಿಗೆ ಹೋಲಿಸಿಬಿಡುತ್ತಿದ್ದರು.ಮೊದಲು ಪತ್ರ ಬಂದದ್ದೇ ಕಂಡಲೂರು ಸಾಹೇಬರಿಂದ ಅವರ ಮಗಳ ಮದುವೆಯಲ್ಲಿ ಹಾಡಲು ಅವಕಾಶ ದೊರಕಿತು. ಈ ನೆಪದಲ್ಲೇ ಕಂಡಲೂರು ಸಾಹೇಬರು ನನ್ನ ಮೇಲೆ ಅವರ ಗಂಡಸುತನ ತೋರಿಸಿಬಿಟ್ಟರು. ನನ್ನ ಮನಸ್ಸಿನ ಭಾವನೆಗಳನ್ನು ಅರಿಯದೆ ನನ್ನ ಮೈಯ್ಯನ್ನು ಅನುಭವಿಸಿದರು, ಅಂದು ಮೊದಲಬಾರಿಗೆ ನನ್ನ ಯೌವನದ ಬೆಡಗು,ಬಿನ್ನಾಣ, ಮೋಹ, ಉನ್ಮತ್ತ ಕುದಿದುಬಂದು ಅದೇ ವೇಳೆಯಲ್ಲಿ ಅವರ ತೋಳಿಗೆ ಸಿಕ್ಕಿ ಅನುಭವ ಪಡೆದೆ. ಆದರೆ ಮನಸ್ಸಿಗೆ ನೋವಾಯಿತು ನನ್ನ ಬದುಕು ಸಹ ಅಮ್ಮನ ಬದುಕಿನ ರೀತಿಯಲ್ಲಿ ಸಾಗುತ್ತಿದೆಯೆಂದು. *ನನ್ನ ತಾಯಿ ಮೈಯ್ಯೇ ಬೇರೆ; ಮನಸ್ಸೇ ಬೇರೆ ಎಂದು ಬೊಧಿಸಿ ಹೋಗಿದ್ದಾಳೆ. ಆದರೆ ಸಾಹುಕಾರರ ವಿಷಯದಲ್ಲಿ ಮೈಯ್ಯೇ ಇಲ್ಲದೆ ಮನಸ್ಸೊಂದೇ ಇದ್ದವಳಂತೆ ವರ್ತಿಸಿದ್ದೇನೆ*.ನಂತರ ಸಾಹುಕಾರರು ಸಂಗೀತ ಕೇಳುವ ನೆಪದಿಂದ ನನ್ನ ಬಳಿ ಬಂದು ಸಂಗೀತದ ನೆಪವೊಡ್ಡಿ ನನ್ನನ್ನು ಅನುಭವಿಸುತ್ತಿದ್ದರು. ಹೀಗೆ ಕಂಡಲೂರು ಸಾಹುಕಾರರಿಗೆ ಮಾರಿದ ನನ್ನ ಮೈ ನಂತರ ಉಳ್ಳೂರು ಸುಬ್ರಾಯರಿಗೆ, ನಂತರ ಮುರಗೋಡು ನಂಜಪ್ಪನವರಿಗೆ, ನಂತರ ಮೆಕ್ಕೆಮನೆಯವರಿಗೆ, ಕಡೆಗೆ ಲಕ್ಷ್ಮಣರಾಯರಿಗೂ ಮಾರಿದ ಪ್ರಸಂಗ ಬಂತು, ಮನೆಗೆ ಸಂಗೀತ ಕೇಳಲು ಬರುವುದು ನಂತರ ಅವರ ಚಟ ತೀರಿಸಿಕೊಳ್ಳುವುದು . ಈ ಗಂಡಸರಲ್ಲಿ ಉಳ್ಳೂರು ಸುಬ್ರಾಯರನ್ನು ಬಿಟ್ಟರೆ ಉಳಿದವರು ನನ್ನ ಮನಸ್ಸನ್ನು ಅರ್ಥಮಾಡಿಕೊಳ್ಳದೆ ಬರೀ ನನ್ನ ಮೈಯ್ಯನ್ನೇ ಅನುಭವಿಸಿದರು. ಆದರೆ ಉಳ್ಳೂರರು ಹಾಗಲ್ಲ ನನ್ನ ಮನಸ್ಸನ್ನು ಅರ್ಥ ಮಾಡಿಕೊಂಡ ಏಕೈಕ ವ್ಯಕ್ತಿ. ಅವರ ಜೊತೆ ಪ್ರತಿ ಸಮಾಗಮದಲ್ಲೂ ಸುಖವನ್ನು ಪಡೆದೆ ಅವರಿಂದ ಮಗು ಪಡೆಯುವ ಹಂಬಲ ಹೆಚ್ಚಿತು ಆದರೆ ಅದು ಸಾಧ್ಯವಾಗಲಿಲ್ಲ ಹಾಗು ಅದಕ್ಕೆ ಅವರು ಯೋಗ್ಯರಲ್ಲವೆಂದು ಅವರೇ ತಿಳಿಸಿದಾಗ ಆಘಾತವಾಯಿತು. ನಂತರ ಮುರುಗೋಡು ನಂಜಪ್ಪನ ವ್ಯಾಘ್ರ ಅವತಾರಕ್ಕೆ ಬಲಿಯಾಗಿ ಗರ್ಭಿಣಿಯಾಗಿ ಆ ಶಿಶುವೂ ಉಳಿಯದೇ ಏಕಾಂಗಿಯಾದೆ. ನನ್ನ ಸಂಗಸುಖ ಬಯಸಿ ನನ್ನ ತಂಗಿಯ ಸಂಗಸುಖ ಅನುಭಿವಿಸಿದರೆಂದು ಅಸಹ್ಯಪಟ್ಟು ಕಂಡಲೂರು ಸಾಹುಕಾರರನ್ನು ತ್ಯಜಿಸಿದೆ, ಮುರುಗೋಡು ನಂಜಪ್ಪನು ಕಳ್ಳತನ ಮಾಡಿ ಪೋಲಿಸರಿಗೆ ಸಿಕ್ಕಿಬಿದ್ದಾಗ ಅಂತಹ ವ್ಯಕ್ತಿಗೆ ನನ್ನ ಬಾಳನ್ನು ಅರ್ಪಿಸಿದನೆಂದು ಅಸಹ್ಯಪಟ್ಟು ಆತನನ್ನು ತ್ಯಜಿಸಿದೆ. ಉಳ್ಳರು ಸುಬ್ರಾಯರು ಅವರೇ ಹಾಸಿಗೆ ಹಿಡಿದು ನನ್ನನ್ನು ತ್ಯಜಿಸಿದರು, ಕಡೇ ಕಾಲದಲ್ಲಿ ಅವರ ಸೇವೆ ಮಾಡುವ ಭಾಗ್ಯವಾದರೂ ದೊರಕಿತು.
ಇನ್ನು ಲಕ್ಷ್ಮಣರಾಯರು ಸಿಕ್ಕಿದಾಗ ಅವರಿಗೆ ಇದರಲ್ಲಿ ಅನುಭವವಿಲ್ಲ, ಅವರು ನನಗೆ ಹೊಸ ವೀಣೆಯಂತೇ ಕಾಣಿಸಿದರು, ಎಲ್ಲಾ ತಂತಿಗಳು ಇವೆ,ಬಿರಡೆ ಬಿಗಿದು ನಾನೇ ನುಡಿಸಬೇಕಾಯಿತು. ಅವರ ಮೃದುವಾದ ಮಾತಿಗೆ, ರೂಪಕ್ಕೆ ಮಾರುಹೋಗಿ ಅವರಲ್ಲಿ ನಾನೊಬ್ಬಳಾದೆ, ಹಲವಾರು ಕಾಲ ಅವರ ಬಳಿ ಸುಖ ಅನುಭವಿಸಿದೆ, ಆದರೆ ಅವರು ಸನ್ಯಾಸಿ, ಕಡೆಗೆ ನನ್ನ ಮನಸ್ಸನ್ನು ಅರ್ಥಮಾಡಿಕೊಳ್ಳದೆ ತ್ಯಜಿಸಿ ಹೋದರ, ಅವರು ಹೋದ ದಿನ ಹೊಸ ವೀಣೆ ಮುರಿದುಹೋದಷ್ಟು ದುಃಖವಾಯಿತು.
ಹೀಗೆ ನಾಲ್ವರು ನನ್ನ ಬಾಳಿನಲ್ಲಿ ಚಿರವಾಗಿ ಉಳಿದು ನಿಂತಿದ್ದಾರೆ. ಒಬ್ಬರು ಯಾವ ಸಂಬಂಧವೂ ಇರದವರು, ಒಬ್ಬರು ಬಂದವರು, ಒಬ್ಬರು ಬಂದೂ ಬಾರದವರು. ಅವರಿಂದ ನನ್ನ ಬದುಕಿಗೆ ಸಮಾಧಾನವು ಇತ್ತೋ ಇಲ್ಲವೋ ತಿಳಿಯೇ. ಕಾಲವು ನನ್ನನ್ನು ಅವರಿಂದ ದೂರಮಾಡಿತು. ನಾನು ಚಿರನಲ್ಲ ಅವರೂ ಅಲ್ಲ. ಆದರೆ ಉಳ್ಳೂರರು ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಬಿಟ್ಟರು. ನನ್ನ ವಿವೇಕ ಸಾಲದ ಬದುಕಿಗೆ ಉಳ್ಳೂರರೇ ಮಾರ್ಗದರ್ಶಕರು. *ಮಂಚಕ್ಕೆ ನನ್ನ ಮನಸ್ಸು ಸೀಮಿತವಾಗಿರಲಿಲ್ಲ, ಮಂಚದಿಂದ ಮೈಯ್ಯನ್ನು ತುಂಬಿತ್ತು, ಮೈಯ್ಯಿಂದ ಮನಸ್ಸು ತುಂಬಿತ್ತು, ಆ ಮೈ ಮನಗಳೆರಡೂ ನನ್ನ ಬಾಳಿನ ಎಲ್ಲಾ ಕ್ಷಣಗಳನ್ನೂ ತುಂಬಿದವು.* ಇದನ್ನೆಲ್ಲಾ ಓದಿದ ಚಂದ್ರಿ ತನ್ನ ತಾಯಿಗೆ ಅಜ್ಜಿ ಬರೆದಿರುವುದನ್ನು ತೋರಿಸಲು ಇಷ್ಟಪಡುವುದಿಲ್ಲ. ಅಂತೂ ಮರ್ಯಾದೆಯಿಂದ ಬದುಕು ನಡೆಸಬೇಕೆಂಬ ಆಸೆ ಅವಳಲ್ಲಿ ಬೇರೂರಿತು.
ಕಾರಂತರ ಬರವಣಿಗೆ ನನಗೆ ಯಾಕೆ ತುಂಬಾ ಇಷ್ಟವಾಗುತ್ತದೆ ಎಂದರೆ ಅವರ ಪುಸ್ತಕದಲ್ಲಿ ಒಂದು ಹುಡುಕಾಟ ಇರುತ್ತದೆ. ಎಲ್ಲರಿಗೂ ಕಷ್ಟಗಳಿರುತ್ತದೆ. ತಮ್ಮ ಜೀವನವನ್ನು ಜೀವಿಸಲು ಅವರು ಯಾವುದೇ ಒಂದು ಅನಿಷ್ಟ ಮಾರ್ಗವನ್ನು ಆಯ್ಕೆ ಮಾಡಿರಬಹುದು. ಆದರೆ ಆ ಕೆಲಸಕ್ಕೆ ಪ್ರಭಾವ ಬೀರಿರುವುದು ತನ್ನ ಪರಿಸ್ಥಿತಿಯಾಗಿರಬಹುದು ಆಥವಾ ಬೇರೊಬ್ಬ ವ್ಯಕ್ತಿಯಾಗಿರಬಹುದು ಅಥವಾ ಬೆಳೆದುಬಂದ ಪರಿಸರವಾಗಿರಬಹುದು. ಯಾರನ್ನೂ ಅವರ ಬದುಕುವ ರೀತಿ, ಕೆಲಸ ಹಾಗೆ ಅವರ ಮೇಲ್ನೋಟವನ್ನು ನೋಡಿ ಸುಲಭವಾಗಿ ಅಳೆಯಬಾರದು.
ಬಸರೂರು ಆಥವಾ ಬಸ್ರೂರು ಎಂವ ಊರಿಗೆ ವಸುಪುರ ಅಂತ ಹೆಸರಿತ್ತಂತೆ. ಹಳೇ ಕಾಲದಲ್ಲಿ ಅಲ್ಲಿ ವೇಶ್ಯಾವಾಟಿಕೆ ಹೇರಳವಾಗಿ ನಡೆಯುತ್ತಿದ್ದರಿಂದ ಕಾಲಾನುಕೃಮವಾಗಿ ಅದಕ್ಕೆ ಬಸರೂರು ಅಂತ ಹೆಸರು ಬಂತು ಎಂದು ನಾನು ಊರಲ್ಲಿ ದಂತಕಥೆಗಳನ್ನು ಕೇಳಿದ್ದೆ. ಈ ಬಸರೂರು ಮತ್ತೆ ಅಂದಿನ ಕಾಲದ ಜನಜೀವನ ತಿಳಿಯುವ ಕುತೂಹಲ ಇದ್ದಿದ್ದರಿಂದ ಈ ಪುಸ್ತಕ ಕೈಗೆತ್ತಿಕೊಂಡೆ.
ಬಸರೂರು ಪೋರ್ಚುಗೀಸರ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಕುಂದಾಪುರದ ಸಮುದ್ರ ತೀರದಿಂದ ಹಾಲಾಡಿ ನದಿಯ ಮೂಲಕ 2-3 ಮೈಲಿ ಜಲಮಾರ್ಗವಾಗಿ ಬಂದರೆ ಬಸರೂರು ಸಿಗುತ್ತದೆ. ಆ ಕಾಲದಲ್ಲಿ ಬಸರೂರಿನ ತನಕ ನದಿಯೂ ತುಂಬಾ ಅಗಲವಾಗಿದ್ದ ಕಾರಣ ಹಡಗು ಹೋಗಬಹುದಿತ್ತಂತೆ. ಈಗ ನದಿ ಇಕ್ಕೆಲಗಳು ಮುಚ್ಚಿ ಹೋಗಿ ನದಿ ಕಿರಿದಾಗಿದೆ. ಹಾಗೆ ವರ್ಷಗಟ್ಟಲೆ ಹಡಗಿನಲ್ಲಿ ಪ್ರಯಾಣ ಬೆಳೆಸುವ ಪೋರ್ಚುಗೀಸ್ ನಾವಿಕರಿಗೆ ದೇಹಸುಖದ ಕೊರತೆಯಿಂದಾಗಿ ವಸುಪುರದಲ್ಲಿ ವೇಶ್ಯಾವಾಟಿಕೆಯು ನಾಂದಿ ಹಾಡಿತು.
ಈ ಕಾದಂಬರಿಯಲ್ಲಿ ಬರುವ ನಾಲ್ಕು ತಲೆಮಾರಿನ ಕಥೆಗಳಲ್ಲಿ ಎರಡನೇ ತಲೆಮಾರಿನ ಮಂಜುಳೆಯದ್ದೆ ಸಿಂಹಪಾಲು. ಇವರದ್ದು ಅನುವಂಶೀಯವಾಗಿ ವೇಶ್ಯವಾಟಿಕೆಯನ್ನೇ ಅನುಸರಿಸಿಕೊಂಡು ಬಂದಿರುವ ಕುಟುಂಬಾ. ದುಡ್ಡಿನಾಸೆಗೋ ಅಥವಾ ಜೀವಿಸುವುದಕ್ಕಾಗಿಯೋ ಈ ದಾರಿಯಲ್ಲಿ ಬದುಕುವವರು. ಬರೀ ಇಷ್ಟೇ ಅಲ್ಲದೆ ಹಾಡು, ಪಿಟೀಲು, ವಾದ್ಯಗಳನ್ನು ಕಲಿತು ಊರಿನ ಉತ್ಸವಗಳಲ್ಲಿ, ಮದುವೆಗಳಲ್ಲಿ ಹಾಡು, ಕುಣಿತದಿಂದ ಊರ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಸೆಳೆಯುತ್ತಿದ್ದರು.
ಆದೇ ಕಸುಬಿನ ಮಂಜುಳೆಯ ಜನ್ಮವೃತ್ತಾಂತವೇ ಈ ಮೈ ಮನಗಳ ಸುಳಿಯಲ್ಲಿ. ದೇವಕನ್ಯೆಯಂತ ಚೆಲುವು, ಮೋಹಿನಿಯ ಮೈಮಾಟ, ಹಾಡಲು ಕುಳಿತರೆ ಸಾಕ್ಷಾತ್ ಮೀರಾಬಾಯಿ ಜನ್ಮತಳೆದಂತೆ ಅನ್ನಿಸುವುದಂತೆ. ಊರಿನ ಅದೆಷ್ಟೋ ಜಮೀನುದಾರರ ಕಣ್ಣು ಇವಳ ಮೇಲೆ ಬಿದ್ದಿರುತ್ತದೆ. ಕೈತುಂಬ ದುಡ್ಡು, ಮೈತುಂಬ ಒಡವೆ, ಅರಿವೆ ಸಿಗುತ್ತಿತ್ತಾದರೂ ಮಂಜುಳೆ ಈ ಮೈ ಮನಗಳ ಸುಳಿಯಲ್ಲಿ ಸಿಲುಕುತ್ತಾಳೆ. ತಾನು ಮೈಮಾರಿ ಜೀವನಮಾಡಬಹುದು ಆದರೆ ನನ್ನ ಆತ್ಮ ತೃಪ್ತಿಗೆ ಮನ ಮಾರಲಾದೀತೆ. ಮೈ ಕುಣಿಸಿದಂತೆ ಕುಣಿಯುವವಳು ನಾನೇ? ಅಥವಾ ಈ ಮನ ಕುಣಿಸಿದಂತೆ ಕುಣಿಯುವವಳೇ? ಈ ಎರಡರಲ್ಲಿ ನಿಜವಾದ ನಾನು ಯಾರು? ಹೀಗೆ ಅವಳು ಹುಡುಕಾಟದಲ್ಲಿ ತೊಡಗುತ್ತಾಳೆ. ಈ ಹುಡುಕಾಟದಲ್ಲಿ ಕೊನೆಯಲ್ಲಿ ಪ್ರತಿಭಾವಂತ ಚೆಲುವೆ ಮಂಜುಳೆಗೆ ಅನ್ನಿಸಿದಿಷ್ಟೇ
"ಇನ್ನೊಂದು ಜಾತಿಯಲ್ಲಿ ಹುಟ್ಟಿ, ಹತ್ತು ಹದಿನೆರಡೋ ವರ್ಷಕ್ಕೆ ಮದುವೆಯಾಗಿ ಹೋಗಿದ್ದರೆ ಇರುತ್ತಿದ್ದೇನೆ ಈ ತೆರ? ಎಲ್ಲೋ ಒಂದು ಕಸದ ಮೂಲೆಯಲ್ಲಿ ಇರುತ್ತಿದ್ದೆ ಸಾವಿರರಂತೆ ನಾನೂ ಒಬ್ಬಳು."
ಹಾಗೇ ಇವಳ ಮಗಳು ಶಾರಿಯದೊಂದಿಷ್ಟು ಕತೆ, ಹಾಗೇ ಅವಳ ಮಗಳು ಚಂದ್ರಿಯದೊಂದೆರಡ್ಮೂರು ಪುಟ ಕತೆ ಇದೆ. ಈ ಕತೆ ನೆಡೆಯುವಾಗ ಮಂಜುಳೆ ಬದುಕಿರುವುದಿಲ್ಲ. ಅಟ್ಟದ ಮೇಲೆ ಏನೋ ಹುಡುಕುವಾಗ ಇನ್ನೂ ಶಾಲೆಗೆ ಹೋಗತ್ತಿರುವ ಹಾಗೆ ಅವಳ ಜಾತಿಯ ಕಸುಬು ಇಷ್ಟವಿಲ್ಲದ ಚಂದ್ರಿಗೆ ಸಿಕ್ಕಿರುವ ಅವಳ ಅಜ್ಜಿ ಮಂಜುಳೆ ಬರೆದಿಟ್ಟಿರುವ ಆತ್ಮವೃತ್ತಾಂತ ಇಲ್ಲಿ ಕತೆ ಹೇಳುತ್ತದೆ.
Finally, after a long time, I was able to read a translated Kannada novel. Shivarama Karanth is, of course, one the giants of Indian literature, and I regret that I haven’t read as many authors from my own language as I should have. However, time always offers you an opportunity to make up for all that you regret.
In Sharada Prasad’s excellent translation, Karanth takes you on a journey to North Karnataka, weaving in a tale of women who make a living from their ‘patrons.’ Considering that this book was written in the 1970s, it was an astonishingly bold work. In the titular character of Manjula, Karanth is giving a nod to that elephant in the room - a woman’s sexual desire. The narrative moves fast, and I loved the insights into a ‘profession’ I had not much idea about. I rate it a tad low because the book ended abruptly and left you with the feeling that there was something more left.
One of the book which was there in my 'To-read' list from long time. Hats off to Shivaram karanth for the very well explanation between mind & Body.
ಕಾದಂಬರಿ ಉದ್ದಕ್ಕೂ ಮಹಿಳೆಯೊಬ್ಬಳ ಆತ್ಮ ವೃತ್ತಾಂತ ಸಾಗುತ್ತದೆ. ಎಲ್ಲಿಯೂ Bore ಎನ್ನಿಸೋದಿಲ್ಲ ಅಷ್ಟು ಚಂದವಾಗಿ ಕಟ್ಟಿ ಕೊಟ್ಟಿದ್ದಾರೆ ಕಾರಂತರವರು. ಒಂದು ಪುಟದಲ್ಲಿ ದುಂಬಿಯೊಂದು ಪಾತರಗಿತ್ತಿಯಾಗಿ ಬಣ್ಣ ಬಣ್ಣದ ಹೂವುಗಳಿಂದ ಆಕರ್ಷಣೆಗೊಳಗಾಗಿ ತನ್ನನ್ನು ತಾನು ಮರೆಯುವ ಪರಿಯನ್ನು ವರ್ಣಿಸಿದ ರೀತಿಯಂತೂ ಅತಿ ಅದ್ಭುತ.
ಕಾದಂಬರಿಯ ಬಗ್ಗೆ ಹೆಚ್ಚಿನ ವಿವರಣೆಗಾಗಿ ಕೆಳಗಿನ ಬ್ಲಾಗ್ ನ್ನು ಓದಿ.
ಮಂಜುಳಾ, ಅವಳ ದತ್ತು ಮಗಳು ಶಾರಿಕೆ, ಶಾರಿಕೆಯ ಮಗಳು ಚಂದ್ರಿ ಇವರೆಲ್ಲ ಬಸರೂರಿನಲ್ಲಿ ಗೆಣಿಕೆ ಮಾಡುವ ಕುಲದವರು.
ಮಂಜುಳಾ ಒಬ್ಬಳು ಅದ್ಭುತ ಗಾಯಕಿ. ಶಾರಿಕೆ ಕುಲದ ವೃತ್ತಿ ಮುಂದುವರೆಸಿದರೂ ಒಂದು ಕಾಲದಲ್ಲಿ ನಾಟಕದ ಹುಚ್ಚಿಗೆ ಮರುಳಾಗಿ ತನ್ನ ಮನೆ ಆಸ್ತಿ ಕಳೆದುಕೊಳ್ಳುವ ಹಂತಕ್ಕೆ ಬಂದವಳು. ಆದರೆ ಚಂದ್ರಿ ಶಾಲೆಗೆ ಹೋಗಿ ವಿಧ್ಯಾಭ್ಯಾಸ ಮಾಡಿ, ತಾನು ಈ ವೃತ್ತಿ ಮಾಡುವುದೇ ಇಲ್ಲ ಎಂದು ಹಠ ತೊಟ್ಟು ಯಾವುದಾದರೂ ಮಾಸ್ತರಿಕೆ ನೌಕರಿ ಹಿಡಿದು ಜೀವನ ಮಾಡುತ್ತೇನೆ ಅಂತ ಪಣ ತೊಟ್ಟವಳು.
ಇಲ್ಲಿ ಕಥೆ ಶಾರಿಕೆ ಮತ್ತು ಚಂದ್ರಿ ಇಂದ ತೆಗೆದುಕೊಂಡರೂ, ಚಂದ್ರಿಗೆ ತನ್ನ ಅಜ್ಜಿ ಮಂಜುಳೆ ಬರೆಯುತ್ತಿದ್ದ ಅವಳ ಬದುಕಿನ ವೃತ್ತಾಂತದ ಪುಸ್ತಕ ಸಿಗುತ್ತದೆ. ಅಲ್ಲಿಂದ ಮುಂದೆ ಕಥೆ ಮಂಜುಳೆಯ ಬದುಕಿನ ಸುತ್ತ ಸುತ್ತತ್ತದೆ.
ಮಂಜುಳ ತನ್ನ ಅಮ್ಮನಿಂದ ತಮ್ಮ ಕುಲದವರು ಮನಸ್ಸು ಬೇರೆ ದೇಹ ಬೇರೆ ಎನ್ನುವ ಹಾಗೆ ಬದುಕಬೇಕು ಅನ್ನೋ ತಿಳುವಳಿಕೆಯ ಜೊತೆಗೆ ಬೆಳೆದವಳು. ಅದನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಮತ್ತು ಹಾಗೂ ಬದುಕಲು ಪ್ರಯತ್ನಿಸುತ್ತಲೇ ಬದುಕು ನಡೆಸಿದವಳು. ಅವಳ ಸಂಗೀತ ಕಲಾರಧನೆ ಮತ್ತು ಅವಳ ಬದುಕಿನಲ್ಲಿ ಬಂದು ಹೋಗುವ ವ್ಯಕ್ತಿಗಳು, ಅವಳ ಮಾನಸಿಕ ತಳಮಳ, ದೈಹಿಕ ಆಕಾಂಕ್ಷೆಗಳ ಚಿತ್ರಣವೇ ಕಥೆ.
ದೇಹ ಮತ್ತು ಮನಸ್ಸುಗಳ ನಡುವೆ ಸುತ್ತೋ ಸೂಕ್ಷ್ಮ ಎಳೆಯ ಕಥೆ ಮೈ ಮನಗಳ ಸುಳಿಯಲ್ಲಿ.
ನನಗನ್ನಿಸಿದ ಹಾಗೆ, ಇಡೀ ಪುಸ್ತಕದ ತಿರುಳು "ನಾವಿರುವುದು ಮೈಮಾರಿ ಕೊಳ್ಳುವುದಕ್ಕೇ ಹೊರತು ಮನಸ್ಸನ್ನಲ್ಲ".
ಕಾರಂತರು ಪುಸ್ತಕವನ್ನು ಬಸ್ರೂರಿನ ಸ್ಥಳಪುರಾಣದೊಂದಿಗೆ ಪ್ರಾರಂಭಿಸಿ, ನಂತರ ಅಲ್ಲಿನ ವಾರಾಂಗನೆಯರ ಬಗ್ಗೆ ಬರೆಯುತ್ತಾರೆ. ಈ ಪದ್ಧತಿ ಹೇಗೆ ಹುಟ್ಟಿತು, ಒಂದೂರಿನಲ್ಲಿ ನಿಲ್ಲುವ ಜನ, ಅಲೆದಾಡುವ ಜನರ ಸಂಬಧದ ವಿವರಣೆ ಇದೆ.
ಮಂಜುಳಾ ಎಂಬ ಪಾತ್ರದ ಬಗ್ಗೆ ಪ್ರಸ್ತಾಪಿಸಿ ಕಥೆ ಅವಳ ಮಗಳ ಮತ್ತು ಮೊಮ್ಮಗಳ ಕಥೆಯನ್ನು ಹೇಳುತ್ತದೆ. ನಂತರ ಮಂಜುಳಾ ಪ್ರಧಾನ ಪಾತ್ರವಾಗಿ ಒಂದು Diaryಯ ಮೂಲಕ ಬರುತ್ತಾಳೆ.
ಮಂಜುಳೆಯ ಜೀವನದ ಮತ್ತು ಮನಸ್ಸಿನ ಭಾವನೆಗಳ ಕಥೆ ಮುಂದೆ ನಿಮಗೆ ಕಾದಿದೆ.
ಕಾರಂತರ ಈ ಪುಸ್ತಕ ನನಗೆ ಯಾಕೋ ಸ್ವಲ್ಪ ಬೋರ್ ಹೊಡಿಸಿತು. ಕತೆಯನ್ನು ಸ್ವಲ್ಪ ಅವರು ಎಳೆದರೇನೋ ಅನ್ನುವ ಅನುಭವ ನನಗಾಯಿತು. ಮೈ ಮಾರಿಕೊಂಡು ಬದುಕುವ ಒಂದು ಮಹಿಳೆಯ ಜೀವನ ವೃತ್ತಾಂತ ಈ ಕಥೆಯಲ್ಲಿದೆ.
(ನಾನು ಓದಿರುವ)ಕಾರಂತರ ಕೃತಿಗಳಲ್ಲಿ ಒಂದಾದರೂ ಸಶಕ್ತ ಹೆಣ್ಣಿನ ಪಾತ್ರ ಇದ್ದೇ ಇರುತ್ತದೆ. ಮೈ ಮಾರಿಕೊಂಡು ಬದುಕುವ ಬೆಲವೆಣ್ಣಿನ ಮನಸ್ಸಲ್ಲಿ ಏಳುವ ಸುಳಿಗಳಲ್ಲಿ, ಆಕೆಯ ಬದುಕಿನಲ್ಲಿ ಬಂದು ಹೋದ ಪಾತ್ರಗಳ ಅನಾವರಣವಾಗುತ್ತದೆ. ಅಚ್ಚುಕಟ್ಟಾದ ಪಾತ್ರಗಳ ನಿರೂಪಣೆ ಹಾಗೂ ಅತ್ಯಂತ ಪ್ರೌಢ ಕಥಾವಸ್ತು
ಯಾರೂ ಇಣುಕದ ಅಂತರಾತ್ಮದ ಆಸೆ-ವಾಂಚೆಗಳಿಗೂ ಮತ್ತು ಎಲ್ಲರೂ ಕಾಣುವ ಬಹಿರಂಗದ ನಡವಳಿಕೆಗಳಿಗೂ ಇರುವ ಸಹಜ ತಿಕ್ಕಾಟದ ಕನ್ನಡಿ ಈ ಸುಳಿ. ಗೌರವ ಸ್ವತ್ತು ಸಹ ಅಲ್ಲ, ಪ್ರೀತಿಯ ಧಾರೆಗೆ ಭೇಧವಿಲ್ಲ ಆದರೆ ಅದಕೆ ಕಂದಕ ಕಾಲುವೆಗಳ ತೋಡಿ, ಅದನು ಎಲ್ಲಿಗೆ ಹೇಗೆ ಬೇಕೆಂದ ಹಾಗೆ ಹರಿಸುವ ನಮಗೆ ನಮ್ಮದೇ ಭಯ ಇದ್ದೇ ಇದೆ ಅನ್ನುವುದು ಇಲ್ಲಿಯ ಸೂಕ್ಷ್ಮ ಸಾರಾಂಶ
ಒಬ್ಬ ಬೆಲೆವೆಣ್ಣು ಕೂಡ ಒಂದು ಗೌರವದ ಜೀವನ ನಡೆಸಬಹುದು ಅಥವಾ ಒಂದು ಬೆಲೆವೆಣ್ಣಿಗೂ ಒಂದು ಸ್ವಾಭಿಮಾನದ, ಗೌರವದ ಬದುಕುಯಿರುತ್ತದೆ ಅನ್ನುವದನ್ನು ಕಾರಂತರು ತೋರಿಸಿಕೊಟ್ಟಿದ್ದಾರೆ ಅಂತ ನನ್ನ ಅಭಿಪ್ರಾಯ. ಅಲ್ಲದೇ ಆ ಕಸುಬಿನಲ್ಲಿ ಎಲ್ಲರೂ ಸಫಲರಾಗುವದಿಲ್ಲ ಅಂತ ಹೇಳುವದಕ್ಕೆ ಶಾರಿಯ ಬದುಕು ಒಂದು ಉದಾಹರಣೆ. ಇನ್ನು ಕೊನೆಯಯ ತಲೆಮಾರಿನ ಹುಡುಗಿ ಚಂದ್ರಿ ಆಧುನಿಕ ವಿಚಾರವುಳ್ಳವಳು, ಹಣದ ಆಸೆಗೆ ಬೀಳದೆ, ತನ್ನ ಕುಲ ಕಸುಬನ್ನು ಬಿಟ್ಟು, ಯಾವುದಾದರೂ ಮರ್ಯಾದೆ ಗಳಿಸುವ ವೃತ್ತಿ ಮಾಡಬೇಕೆಂದು ಹಂಬಲಿಸುವವಳು. ಕಾಲ ಘಟ್ಟದಲ್ಲಿ ಬದಲಾಗುತ್ತಿರುವ, ಒಂದೇ ವೃತ್ತಿಯ ಮೂರು ತಲೆಮಾರಿನ ಮೂರು ಸ್ಥಿತಿಗಳನ್ನು ಕಾರಂತರು ವಿವರಿಸಿದ್ದಾರೆ.