Set in pre-independence India, Grihabhanga is a compelling story of one womans relentless struggle against abuse, treachery, poverty, famine and superstitions that riddle village life. Despite a shrewd mother-in-law who blames her for every misfortune, an incorrigible husband who refuses to take on any household responsibilities, and with all the baggage a mother has to bear, Nanjamma stands tall with her resilience, presence of mind and sheer courage. She takes upon herself her husbands job of handling the village accounts and steps out of the boundaries of home to earn a little more by making and selling leaf plates. Will Nanjammas dream of sending her son to school be fulfilled? Will she be able to marry off her daughter to a respectable school teacher in spite of her husbands wish to settle for a more financially convenient alliance? Can Nanjamma prevent her home from being destroyed? Will she succeed in endowing her children with the morals lacking in those around them? Or will meanness, disease and death thwart all hope?......
Dr S.L. Bhyrappa is a litterateur par excellence. He writes in the south Indian language, Kannada, and has been the bestselling novelist for over 25 years now. His novels are widely translated to pan Indian languages. He is the bestselling novelist in Marathi over the past decade and is among the top-five bestselling authors in Hindi. He is a conscious artist that depicts fundamental human emotions in his novels. In addition to his profound knowledge of Indian philosophical and cultural traditions, Professor Bhyrappa has since his childhood had intense personal experiences in both rural and urban milieu. Consequently, his characters are deeply rooted in Indian soil. Seminars have been and are being held on his novels, and volumes of literary criticism have been published on his works.
His books have found their way to the curriculum of undergraduate and postgraduate degree courses of the universities in the state of Karnataka, and have been the subject of about 20 PhD dissertations. He has penned 24 novels and four volumes of literary criticism and books on aesthetics, social issues and culture. Most of his novels are translated into almost all the Indian languages and six into English. He has served as a Prof. of Philosophy over three decades at NCERT.
Dr Bhyrappa is an avid listener of both Indian and Western classical music and has a keen eye for Art. Travelling has been his paasion since childhood and he has travelled across the globe touching the glaciers of poles, forests of Amazon, deserts of Africa, bustling cities of Europe and the United States. He has trekked in the Alps, the Rockies, Andes and in Fujiama, but the Himalayas remain his greatest passion.
Academic Publications in English -------------------------------------- Values in Modern Indian Educational Thought, 1968 (New Delhi: National Council of Educational Research and Training) Truth & Beauty: A Study in Correlations, 1964 (Baroda: M. S. University Press) 20 Research Papers published in various Journals like Indian Philosophical Quarterly, Darshana International, Journal of University of Baroda
Research and Fellowship ---------------------------- National Research Professor, Government of India, 2014 One of the five members of the Indian Literary Delegation that visited China on invitation by the Government of China, 1992 Ford Foundation Award to visit the USA to study the cultural problems of Indian immigrants to the USA, 1983 British Council Fellowship tenured at the School of Education, University of London, 1977
Another good book by Bhyrappa. What i admired about Bhyrappa is his books always have a strong woman character. Gruhabhanga, inspired by his own childhood, is a heart-rending saga of poverty, perversity and profundity etched into the early years of a destitute village boy. I can't imagine what Bhyrappa went through. Do read it. Brilliant book as always.
As a reader, When I read Kuvempu or Shivram Karanta's word every atom in my body and soul wanna lose everything it borrowed from society, and merge itself in the magical elixir of unshakable truth. But every time I read Bhyrappa's words in his books, the undigestable realities of life shaken the core of me every time. I am not saying he is pessimistic, But his talent in delivering a life for what it is put forth a struggle to conclude His works as either pessimistic or optimistic. This book is also delivered blunt reality with no remorse, A Dance of life and death throughout the book feels so tragic and engaging at the same time.
If you have read "Bhiti" by S.L Bhyrappa, You will understand half of the "Grihbhanga" is the author's real-life story. The sadness, misery, and hopelessness of "Nanjamma" consumed me till I reach the end and I still reflect on her undying will to survive when life itself is determined to crush and crumble her into ashes. I have managed to finish this book within 2 days Because I could relate to many characters. I have met people like Nanjamma, Vishwa, Kalesh, Chennigaraya, and Ayya in real life, This book was just a verbal extension to everything I have witnessed.
It's a beautifully crafted tragic story capable of making us rethink all the privileges we have and appreciate it with a tear in our dried eyes. Normally my eyes have no will to express emotions for any book. But when I read Bhyrappa's mother's destined tragedy in Bhitti and Grihbhanga, emotions filled my eyes in tears form and drenched the tips of my drained eyelashes.
Every character represented a different character and personality, It felt like self-reflection whenever I hold the hands of each character in the book. Gangamma wickedness, Nanjamma tolerance, Chennigaraya negligence, Ayya's kindness, and Kanti joyisha's tenacity are narrated eloquently without any philosophical jumble.
Maybe I have realized why I am disgusted by the idea of the victimhood mentality of men and women of a privileged class in the modern era. People have everything still complain, But here we have "Nanjamma" when everything was fighting against her still she stood firm without bragging about her victimhood. I have met a woman like her in my life, So I was overwhelmed while reading it.
I have started to appreciate life, family, friends, struggles, and everything after reading what the author and his mother went through in their life. Sometimes I read Bhyrappa works just to remind myself that I am privileged in life than all those people who are carrying dreadful dark memories.
This book is too much of a reality, even worse than reality. It is filled with sociology and psychology and makes you think—for me, a lot.
Throughout the book, I hoped it will take a happy turn, but it did not. Despite all the efforts, God may not grant us 'reward'. The book is too harsh even for reality and shows a mirror of society. I was consumed by the grief of the character 'Nanjamma', and people like her do exist in real life, in my case I saw 'Nanjamma' as one of my known. How much more can I relate to this book? Nanjamma's character was courageous, and often their resilience goes unnoticed. Throughout the book I wondered, how come the media never talks about these strong rural women who contributed more to their society, family single-handedly while still juggling and balancing between the two.
This book made me re-think the narrative war between feminists and meninists. After reading this book I am disillusioned by their "fight for equality". Those who cry most of these issues are those who sit comfortably in their sea-facing house who probably have never been to the rural area and never known anyone from these places. It is easy to cry for "equal rights" while you comfortably sit at home. Privileged ones feed on their malady and wring out their miseries to fill their bucket of propaganda, which helps them to pay their restaurant bills. The worst part is they are completely oblivious of the injustice done to them.
At one point in my life, I bought these "equal right" stories, I considered those medieval who did not believe the same as I did. "Men do not cry", "Free nipple movement" looks revolutionizing when you experience Scandinavian privilege every day. But, for a place where people still have to walk miles for primary education, all of those first-world problems seem superficial to me.
One particular thing that struck me was how education can change a family life- significantly. Education can free someone from social constraints, instill individuality, above all you can think for yourself- like Nanjamma could do, unlike her mother-in-law who never had any education. S.L Bhyrappa showed the contrast brilliantly. His writing and stories are so real that I felt related. In Nanjamma's village, the plague-stricken village had many superstitions about the disease, which kept them in the oblivion of the available treatment. In this pandemic, people from my village say someone suffered from cold and fever and died. They do not even know which disease struck them, for them it was just cold and fever and nobody is there to survey and acknowledge their death. Government officials for vaccination come, but they do not go, believing the fallacies that they will harvest their organs. Only if they were educated enough, things would have been different!
This book made me realize how privileged I am and I am grateful for it.
ನಮ್ಮ ಸಾಹಿತ್ಯ ಲೋಕ ಕಂಡ ಶ್ರೇಷ್ಠ ಗಧ್ಯಗಳಲ್ಲಿ ಗೃಹಭಂಗವೂ ಒಂದು. ಇದು ಮೂರು ತಲೆಮಾರಿನ ಕಥೆ, ಬೈರಪ್ಪನವರ ಜೀವನವೇ ಇಲ್ಲಿ ಕಾದಂಬರಿಯಾಗಿರುವುದು ವಿಶೇಷ. ಭೈರಪ್ಪನವರನ್ನು ಇಷ್ಟ ಪಡದೇ ಇರುವವರು ಕೂಡ ಇಷ್ಟಪಡದೇ ಇರಲಿಕ್ಕೆ ಸಾಧ್ಯವಿಲ್ಲದ ಕೃತಿ. ಮೂರು ಭಾರಿ ಓದಿದ್ದೇನೆ, ನೂರು ಭಾರಿ ಓದಿಯೂ ಮನ ಭಾರವನ್ನಾಗಿಸಲು ಸಿದ್ದನಿದ್ದೇನೆ.
ಸಾಮಾನ್ಯ ಪಾತ್ರಗಳೂ ಅಸಾಮಾನ್ಯ ಪ್ರಭಾವ ಬೀರಬಹುದು. ಇಲ್ಲಿ ಬರುವ ಮುಖ್ಯಪಾತ್ರ ನಂಜಮ್ಮ, ಅಂತದೇ ಒಂದು ಪಾತ್ರ. ಈ ಪಾತ್ರ "Extraordinary lives of Ordinary men" ಗುಂಪಿಗೆ ಸೇರಬಲ್ಲ ಜೀವನ. ಇದಕ್ಕೆ ತದ್ವಿರುದ್ದವಾಗಿ ಬರುವ ಅಪ್ರಯೋಜಕ ಸ್ವಭಾವ ಉಳ್ಳ ಪಾತ್ರ "ಚೆನ್ನಿಗರಾಯ". ಈ ಪಾತ್ರವನ್ನು ಓದಿ ಅಸಹ್ಯ ಪಟ್ಟುಕೊಳ್ಳದ ಓದುಗ ಖಂಡಿತ ಇರಲಾರನು. ಅಷ್ಟು ಜೀವಂತ ಪಾತ್ರ ಪೋಷಣೆ ಭ್ಯರಪ್ಪನವರದ್ದು. ಇಷ್ಟೇ ಅಲ್ಲದೆ ಗಂಗಮ್ಮಳ ಬಾಯಿಹರುಕುತನ, ಮಹಾದೇವಯ್ಯರ ಕೋಮಲತೆ, ನರಸಿಯ ವಾತ್ಸಲ್ಯ, ಕಂಠಿಜೋಯಿಸರ ಧೈರ್ಯ, ಅಪ್ಪಣ್ಣಯ್ಯನ ರೂಪಾಂತರ ಎಲ್ಲವೂ ಅಷ್ಟೇ ಸಮರ್ಥವಾಗಿ ಮೂಡಿ ಬಂದಿದೆ.
ಒಂದು ಸಮುದಾಯ ಅನುಭವಿಸಿದ ಕಷ್ಟ ಕೋಟಲೆಗಳನ್ನು ಪುಟಗಟ್ಟಲೇ ಬರೆದು ಯಾರನ್ನೋ ಬದಲಾಯಿಸುವ ಗೋಜಿಗೆ ಹೋಗುವ ಬರವಣಿಗೆ ಅಲ್ಲ ಇದು. ತಮ್ಮ ಜೀವನದಲ್ಲೇ ಕಂಡ, ಅನುಭವಿಸಿದ ದರ್ಶನವನ್ನು ಮತ್ತು ತಮ್ಮ ಸೃಜನಶೀಲತೆಯನ್ನು ಹದವಾಗಿ ಬೆರೆಸಿ ಬರೆದ ಒಂದು ಸುಕೃತಿ. ಎಲ್ಲರೂ ಓದಲೇಬೇಕಾದ ಕೃತಿ. ತಮ್ಮ ಮಿತಿಯ ಗೋಡೆಗಳನ್ನು ಹೊಡೆದು ಓದಿ, ಕೃತಾರ್ಥರಾಗಿ.
ನಂಜಮ್ಮ ನಿನಗೆ ಶರಣು ತಾಯಿ!! It's always a pleasure to read Bhyrappa books. I felt nostalgic as i was used to such stories narrated by my 97 year old grandfather. Since most of my childhood took place in the bayaluseeme of Mandya there was more connectivity to the characters and the places mentioned here. i felt as if it happened right next to my town such is the intense writing Sri SL Bhyrappa holds. Bowing down to Nanjamma one of the most selfless character i have some across the struggle she goes through is too excessive to imagine or even think of going through that phase. Every character that comes and goes have their own notion. Right from beginning till end it keeps you engaged to know what happens next. This is arguably one of the best books of this year..
A woke feminist in case picks this book will have nightmares from the first few pages itself..
ಸಾಮಾನ್ಯ ಕಥನವೊಂದು ಅದ್ಭುತವಾಗಿ ನಿರೂಪಣೆಗೊಂಡಿರುವ ಅಪ್ಪಟ ಗ್ರಾಮೀಣ ಸೊಗಡಿನ ಕಾದಂಬರಿ.
ಸ್ವಾತಂತ್ರ್ಯಪೂರ್ವದಲ್ಲಿ, ರಾಮಸಂದ್ರ ಎಂಬ ಹಳ್ಳಿಯಲ್ಲಿ ನಡೆಯುವಂಥ ಕಥೆ. ಊರ ತುಂಬ ಎಲ್ಲಾ ಥರಾದ ಜಾತಿಗಳಿವೆ, ವಿಭಿನ್ನ ವ್ಯಕ್ತಿಗಳಿದ್ದಾರೆ ಹಾಗೆ ವಿಭಿನ್ನ ಮನಸ್ಸುಗಳು ಕೂಡ.
ಕಾದಂಬರಿಯ ಪ್ರಧಾನ ಬಿಂದು #ನಂಜಮ್ಮ. ಗಟ್ಟಿಗಿತ್ತಿ. ಪರಮ ಬೇಜವಾಬ್ದಾರಿಯ ಪತಿ, ಮಾತುಗಳಿಂದಲೇ ಕೊಲ್ಲುವ ಅತ್ತೆ, ವಿಚಿತ್ರ ಬುದ್ಧಿಯ ಮೈದುನ ಇಂಥವರ ನಡುವೆ ಅವಳ ಜೀವನ. ಇವರುಗಳ ಜೊತೆಗೆ ಪ್ಲೇಗ್ ಎಂಬ ಮಾರಿಯಿಂದ ತನ್ನೆರಡೂ ಮಕ್ಕಳನ್ನು ಕಳೆದುಕೊಳ್ಳುತ್ತಾಳೆ. ಇಂತಹ ಅನೇಕ ಕಷ್ಟ ಕೋಟಲೆಗಳನ್ನು ಸಹಿಸಿಕೊಂಡು ಬಾಳುವ ಗಟ್ಟಿಜೀವ.
#ಚನ್ನಿಗರಾಯ. ಹೆಸರಿಗಷ್ಟೇ ಶ್ಯಾನುಭೋಗ. ಪರಮ ಬೋಳೇತನದ ವ್ಯಕ್ತಿತ್ವ. ತನ್ನ ಹೊಟ್ಟೆ ತುಂಬಿದರೆ ಸಾಕು ಬೇರೆಯೊಬ್ಬರಿಗೆ ಏನಾದರೂ ಆಗಬಹುದು ಅದಕ್ಕೂ ನನಗೂ ಸಂಬಂಧವೇ ಇಲ್ಲ ಅನ್ನುವ ವ್ಯಕ್ತಿ. ಅದರಲ್ಲೂ ತನ್ನ ಮಗು ಹುಟ್ಟಿದಾಗ , ಅದನ್ನ ಎತ್ತಿ ಮುದ್ದಾಡುವುದಿರಲಿ ಎತ್ತಿಕೊಳ್ಳಲು ಸಹ ಯೋಚಿಸುವುದಿಲ್ಲ.. ಅಂತಹ ವ್ಯಕ್ತಿತ್ವ.
#ಗಂಗಮ್ಮ. ಜಗಳಗಂಟಿ. ಬಾಯಿಬಿಟ್ಟರೆ ಬರೀ ಕೆಟ್ಟ ಮಾತುಗಳೇ ಜಾಸ್ತಿ. ತನ್ನದೇ ನಡೆಯಬೇಕೆಂಬ ಹಠ. ತನಗಿಲ್ಲದಿದ್ದರೂ ತನ್ನ ಮಕ್ಕಳಿಗೋಸ್ಕರ ಎಲ್ಲವೂ ಬೇಕು ಅವಳಿಗೆ. ಆದರೂ ಮಕ್ಕಳನ್ನು ಕೂಡ ಬಯ್ಯುತ್ತಾಳೆ ಅದರಲ್ಲೂ ಸೊಸೆ ನಂಜಮ್ಮನನ್ನು ಕಂಡರೆ ಅತಿ ಕೋಪ. ಕೊನೆಯಲ್ಲಿ ಪ್ಲೇಗ್ ಗೆ ತುತ್ತಾಗುವ ನಂಜಮ್ಮನನ್ನು ಅವಳು ಆರೈಕೆ ಮಾಡುವುದು ಎಂಥ ವಿಪರ್ಯಾಸ ಎನಿಸುತ್ತದೆ.
#ಅಪ್ಪಣ್ಣಯ್ಯ. ವಿಚಿತ್ರ ಬುದ್ಧಿಯ ಜೀವಿ. ಅಲೆಮಾರಿತನದ ವ್ಯಕ್ತಿತ್ವ. ಅಮ್ಮನ ಮಾತೇ ವೇದವಾಕ್ಯ. ಕೊನೆಗೆ ಅಮ್ಮನನ್ನು ಬಯ್ಯುತ್ತಾನೆ. ಬೈದು ದೂರ ಇಡುತ್ತಾನೆ. ಕಟ್ಟಿಕೊಂಡ ಹೆಂಡತಿಯನ್ನು ಬಾಳಿಸಲಾಗದೆ, ಅಮ್ಮನ ಮಾತಿಗೆ ತಲೆಬಾಗಿ ತಾಳಿಯನ್ನೇ ಕಿತ್ತು ಕಳುಹಿಸುತ್ತಾನೆ. ಕೊನೆಗೂ ಸರಿದಾರಿಗೆ ಬರುತ್ತನಾದರು ಅಲೆಮಾರಿಯಾಗುತ್ತಾನೆ
#ಗುಡಿಯ_ಮಾದೇವಯ್ಯನವರು. ಜಂಗಮ. ಕಂತೆ-ಭಿಕ್ಷೆ ಎತ್ತಿ ಆ ದಿನದ ಜೀವನವನ್ನ ಸಾಗಿಸುವ ಸನ್ಯಾಸಿ. ನಂಜಮ್ಮನಿಗೆ ಮಾನಸಿಕವಾಗಿ ಶಕ್ತಿ ತುಂಬುವಂತಹ ಪಾತ್ರ. ನಂಜಮ್ಮನ ಕಿರಿಯ ಮಗ ವಿಶ್ವನಿಗೂ ಅವರಿಗೂ ಅನ್ಯೋನ್ಯ ಸಂಬಂಧ. ಇಡೀ ರಾಮಸಂದ್ರಕ್ಕೆ ಪೂಜನೀಯ. ಗಂಗಮ್ಮಳಿಗೆ ಹೊರತುಪಡಿಸಿ.
#ಕಂಠಿಜೋಯಿಸ. ನಂಜಮ್ಮಳ ತಂದೆ. ಪ್ರಚಂಡ. ನಾನಾತರಹದ ವಿದ್ಯೆಗಳನ್ನು ಕರತಲಾಮ���ಕ ಮಾಡಿಕೊಂಡಿರುವವನು. ಅವನನ್ನು ಎದುರಿಸಿ ನಿಲ್ಲುವುದು ಯಾರಿಗೂ ಸಾಧ್ಯವಿಲ್ಲ. ಸಂಚಾರಿ. ಆದರೆ ಅವನು ಮಾಡುವ ನಿರ್ಧಾರಗಳಿಂದಲೇ ಅವನ ಮಕ್ಕಳ ಬಾಳು ಹಾಳಾಗುತ್ತದೆ.
ಇವಿಷ್ಟು ಪ್ರಧಾನ ಪಾತ್ರಗಳು. (ಅದರಲ್ಲೂ ನಾನು ಆ ಪಾತ್ರಗಳ ಬಗ್ಗೆ ಬರೆದಿರುವುದು ತುಂಬಾ ಸಂಕ್ಷಿಪ್ತವಾಗಿ ಅವುಗಳ ವಿಸ್ತಾರ ತುಂಬಾ ಇದೆ ಕಾದಂಬರಿಯಲ್ಲಿ ) ಇವುಗಳ ಜೊತೆಗೆ ಅಕ್ಕಮ್ಮ, ಕಲ್ಲೇಶ, ನರಸಿ, ಸರ್ವಕ್ಕ, ರೇವಣ್ಣ ಶೆಟ್ಟಿ, ಗುಂಡೇಗೌಡ, ಶಿವೇಗೌಡ, ಪಾರ್ವತಿ, ರಾಮಣ್ಣ ಇನ್ನು ಮುಂತಾದ ಅನೇಕ ಪಾತ್ರಗಳಿವೆ. ಎಲ್ಲಕ್ಕೂ ಜೀವವಿದೆ, ಎಲ್ಲವೂ ಅರ್ಥಪೂರ್ಣವಾಗಿವೆ.
ಪುಸ್ತಕ ಪ್ರೇಮಿಯಾದವನು ಖಂಡಿತವಾಗಿಯೂ ಓದಲೇಬೇಕಾದ ಪುಸ್ತಕವಿದು.
ನಿನ್ನೆ ರಾತ್ರಿ ಸುಮಾರು 12:38ಕ್ಕೆ ಕಾದಂಬರಿಯನ್ನು ಓದಿ ಮುಗಿಸಿದೆ. ಓದಿದ ನಂತರ ಮನಸ್ಸೆಲ್ಲಾ ಸಂಕಟ, ಏನೋ ಒಂದು ರೀತಿಯ ಪ್ರಶ್ನೆ, ಕಳವಳದ ಭಾವ; ಬಹುಶಃ ತುಂಬಾ ತಿಂಗಳ ನಂತರ ಓದಿದ ಮತ್ತೊಂದು ಶ್ರೇಷ್ಠ ಪುಸ್ತಕ ಎಂದರೆ ತಪ್ಪಾಗಲಾರದು.
ಗೃಹಭಂಗ ಇದೊಂದು ಪುಸ್ತಕ ಎಂದರೆ ತಪ್ಪು. ಗೃಹಭಂಗ ಎಂದರೆ ಬದುಕು. ಬದುಕಿನ ಸಂಕೋಲೆಗಳ ಪದರವನ್ನು ಎಳೆಎಳೆಯಾಗಿ ತೆರೆದಿಡುವ ಪುಸ್ತಕ ಇದು.
ಒಂದೆಡೆ ಎರಡು ಪೀಳಿಗೆಯನ್ನು ಕುರಿತು ಹೇಳುವ ಕತೆಯಾದರೆ, ಇನ್ನೊಂದೆಡೆ ಬದುಕಿನ ಅರ್ಥವನ್ನು ತಿಳಿಹೇಳಿ, ಹುಟ್ಟು ಎಂದರೆ ಏನು? ಸಂಬಂಧಗಳ ಅರ್ಥವೇನು? ಬದುಕಿನ ಜಂಜಾಟ, ಹೋರಾಟವನ್ನು ಬಿಂಬಿಸುವ ಕತೆ ಇದು. ನಾನು ಎಸ್ ಎಲ್ ಭೈರಪ್ಪ ನವರನ್ನು ಓದುತ್ತಿರುವ ಮೊದಲ ಪುಸ್ತಕ ಇದು. ಅತ್ಯಂತ ಶುಭ್ರವಾಗಿ, ಸ್ವಚ್ಛಂದವಾಗಿ ಬರೆದಿದ್ದಾರೆ. ಪ್ರತಿ ಅಧ್ಯಾಯವು ಒಬ್ಬ ಓದುಗನ ಮನಸ್ಸಿನ ಆಳಕ್ಕೆ ಹೇಗೆ ಹೋಗಬೇಕು ಎಂದು ಭಾವಿಸಿ ಬರೆದಿರುವ ಪುಸ್ತಕ. ಕತೆ ಶುರುವಿನಿಂದ ಕೊನೆಯವರೆಗೂ ಎಲ್ಲೂ ಕೂಡ ಕತೆಯ ಲಯ ಕೊಂಚವೂ ತಪ್ಪದೆ, ಪ್ರತಿ ಸನ್ನಿವೇಶಗಳು ಕಣ್ಣಮುಂದೆ ಬಂದಂತೆ ಶಿಸ್ತಾಗಿ ಬರೆದಿದ್ದಾರೆ. ಒಂದು ಸಾಲಲ್ಲಿ It's a Perfect unlimited festival dinner ತರ flavourised ಆಗಿ ಒಂದೊಂದು ಅಧ್ಯಾಯವು ಹದವಾಗಿತ್ತು. ಎಲ್ಲಾ ಪಾತ್ರಗಳಿಗೂ ನ್ಯಾಯವನ್ನು ಒದಗಿಸುವ ಮೂಲಕ ಬದುಕನ್ನು ಬದುಕಾಗಿ ನೋಡುವ ಕತೆಯಂತೆ ಇದನ್ನು ನಮಗೆ ನೀಡಿದ್ದಾರೆ. ನಿಜಕ್ಕೂ ಅವರಿಗೆ ಅವರೇ ಸಾಟಿ. ಚೆನ್ನಿಗರಾಯ, ನಂಜಮ್ಮ, ಗಂಗಮ್ಮ, ಅಪ್ಪಣ್ಣಯ್ಯ, ಕಂಠೀಜೋಯಿಸರು, ಕಲ್ಲೇಶ, ಅಕ್ಕಮ್ಮ, ಮಾದೇವಯ್ಯ ಇದು ಹೆಚ್ಚಾಗಿ ಕಂಡ ಪಾತ್ರವಾದರೆ, ನಮ್ಮೆಲ್ಲರನ್ನು ಕಾಡುವ ಪಾತ್ರ ಮಾತ್ರ ನಂಜಮ್ಮ.
ನಂಜಮ್ಮ ಈ ಕಾದಂಬರಿಯ ಉಸಿರು ಅಂತ ಹೇಳಿದ್ರೆ ತಪ್ಪಾಗಲ್ಲ, ತನ್ನ ಸಂಸಾರಕ್ಕೆ ಹೇಗೆ ಜೀವಿಸುತ್ತಾಳೆ, ತನ್ನ ಬದುಕನ್ನು ನಿಸ್ವಾರ್ಥದಿಂದ ಶುರುಮಾಡಿ ಸಾರ್ಥಕತೆಯ ದಡಕ್ಕೆ ಬಂದು ನಿಲ್ಲುತ್ತಾಳೆ. ಮುಂದೆನಾಯಿತ್ತು?? ಪುಸ್ತಕವನ್ನು ಕೊಂಡು ಓದಿ. ನನ್ನ ಹಾಗೆ ನೀವು ಕಳೆದುಹೋಗುವಿರಿ.
ಈ ಕಾದಂಬರಿಯಲ್ಲಿ ೧೩ ಮತ್ತು ೧೫ನೇ ಅಧ್ಯಾಯ ನನ್ನನ್ನು ಬಹಳ ಕಾಡಿತು.
ಪ್ರತಿಯೊಬ್ಬರೂ ಓದಲೇ ಬೇಕಾದ ಪುಸ್ತಕ. ಅದರಲ್ಲೂ ಪ್ರತಿ "ಹೆಣ್ಣು" ಓದಲೇ ಬೇಕಾದ ಪುಸ್ತಕ ಇದು.. ಬದುಕಿನ ಸತ್ಯಾಂಶವನ್ನು ಕಣ್ಣ ಮುಂದೆ ತೆರೆದಿಡುವ ಪುಸ್ತಕಕ್ಕೆ ಕೋಟಿ ಕೊಟ್ಟರೂ ಕಮ್ಮಿ.
ನನ್ನನ್ನು ನಿಮ್ಮ ದೊಡ್ಡ ಮಗಳೆಂದು ಈ ಪುಸ್ತಕವನ್ನು ನನ್ನ ಕೈಗಿಟ್ಟ Bharath G Babu ಗೆ ಈ ರಿವ್ಯೂ ಅರ್ಪಿಸುವೆ...😀
SL Bhyrappa has become something of a darling for pro-Hindutva activists in India. I don’t care about that but I do hope that his political leanings don’t take away the focus of his work as an artist. ‘Grihabhanga’ is one of my Mom’s favorite books and for long I had wanted to read this. But when I started reading it, I was taken aback by the extent of swearing in the novel. I came back enriched with a new vocabulary.
Set in pre-Independence India, Bhyrappa bases his story of pathos and anguish in a small village near Tiptur. As a narrative of poverty, the book is unstinting in detail. It made me cringe thinking of how privileged I am. I also cringed throughout the book for another reason - the misogyny and abuse. Wives are routinely beaten up. A rape is condoned and casually brushed aside. Women are all considered sluts. Children are abused violently, verbally and physically.
In the midst of it all, there’s one woman, Nanjamma, who braves an utterly idiotic husband to bring up a family in a relentless battle against prejudice, plague, and poverty. It’s for her that I like the book. She is representative, to a certain extent, of the courage that women embody, in ways that defy the norms of a society bent on humiliating them. How broken are those families that view women as commodities, bartered, sold, and thrown away.
Oh, this book! What an emotional rollercoaster ride, this one was. Heart wrenching fictionalized account of Bhyrappa Ji's own life. Well, almost, if not all. Though I have not read Bhitti, his autobiography yet, I had already read about his life and the hardships he went through.
What I like the most about his works is that not only he has strong female characters in his books, but also the fact that it's not conspicuous. You just notice as you progress through the book. That's never the selling point. They are as human as all of us are.
In Grihabhanga, the "strong woman character" Nanjamma is not someone who does something extraordinary, or something out of this world, yet it's her relentless struggle to make her and her children's life, livable, to say the least. Her mundane and over tiring work day in and day out, throughout her life: through the poverty, famine and life taking diseases made me think how much life can be inflicting at times. Nanja could be anyone for you, she could be your mother, sister, or even house help. It makes you appreciate them more. It also represents one universal thing: the mothers with endless potential who could conquer the world if given a chance, and wanting only the best for their children surpassing all the limitations life poses. And going so far in this pursuit, unflinchingly, through it all.
SLB makes zero adjustments to make this book any less brutal on his reader's mind. And goes on to show an unfiltered representation of life as it is, or as it used to be a century ago. And not a rosy picture of how it should be, or like the ones you read to escape your reality. This one will take you so close to the grim reality of life that it will look extra. But at the same time, you can't deny it. And that's when it made me so grateful for how far we have come in terms of technology, medical advancements, and availability of information.
I really loved the character of Maadevayya, it reminded me of Venkatramana from Tabbaliyu Neenade Magane. When Maadevayya said: "Don't turn and look in that direction, just walk forward, child." to the little boy, Vishwa; I couldn't stop wondering how future is scary for them, but they just can't run back to their brutal past because it's familiar. No matter how comfortable we are with the brutal and hopeless present, or scared of the future, we should always look forward. The future can be scary and unpredictable, but it could be full of hope and promises. We know who Vishwa represents and who he ends up becoming at the end of all the uncertainties and struggle.
Out of the 4 works of him I have read so far, I feel this is the only till now with no rushed ending.
. TW: strong verbal and physical abuses, some selfishness at its peak.
ಗೃಹಭಂಗ ಬದುಕನ್ನು ಪರಪರದೆಯಾಗಿ ತೆರೆದು ಕೈಗಿಡುತ್ತಾ ಹೋದಂತೆ, ನಾವು ವಿಧಿಯೆಂಬ ಸಾರೋಟಿನಡಿಯಲ್ಲಿ ಸಿಲುಕುವ ಮುನ್ನ ಏನೋ ಸಾಧಿಸಲು ಹೊರಟವರು ಅನಿಸಿಬಿಡುತ್ತದೆ. ಯಾವುದೋ ಅದಮ್ಯ ಶಕ್ತಿಯ ಎದುರು ಕ್ಷುದ್ರ ಶಕ್ತಿಯೊಂದು ಗೆಲುವು ಸಾಧಿಸದಂತನಿಸುತ್ತದೆ. ಭಗವಂತನಿಗೆ ಪ್ರಿಯವಾಗುವುದು ಸಜ್ಜನ ಮತ್ತು ಸತ್ವವುಳ್ಳ ಜನರೇ ಅನಿಸುತ್ತದೆ. ಭಗವಂತ ಕ್ಷುದ್ರ ಶಕ್ತಿಯೆದುರು ಸೋತಂತನಿಸುತ್ತದೆ. ಭಗವಂತ ಸರ್ವಶಕ್ತನಲ್ಲ ಎಂಬ ಅಸಹಾಯಕ ಭಾವವೊಂದು ಪುಸ್ತಕದ ಕೊನೆ ಪುಟದ ನಿಟ್ಟುಸಿರಿನಲ್ಲಿ ಹುಟ್ಟಿ ನಂಬಿಕೆಯ ಜೀವ ಸಲಿಲ ಸಿಗದೇ ಕೈ ಕಾಲು ಬಡಿದುಕೊಂಡು ಚೀತ್ಕರಿಸುತ್ತದೆ. ನಿಜವಾಗಿಯೂ ಇದು ಗೃಹಭಂಗವೇ...!
ಭೈರಪ್ಪನವರ ಸಾರ್ವಕಾಲಿಕ ಶ್ರೇಷ್ಠ ಕಾದಂಬರಿಗಳಲ್ಲೊಂದಾದ ಗೃಹಭಂಗ ನಮ್ಮ ಅಸ್ತಿತ್ವವನ್ನು ಈ ಮಟ್ಟಿಗೆ ಅಲುಗಾಡಿಸಬಲ್ಲದು ಎಂಬುದರ ಅರಿವಿದಿದ್ದರೇ ಈ ಪುಸ್ತಕವನ್ನು ಓದುವ ಧೈರ್ಯ ಮಾಡುತ್ತಿರಲಿಲ್ಲ. ಮನುಷ್ಯನೆಂಬ ಪ್ರಾಣಿಯ ಅತಿ ತುಚ್ಛ ಮತ್ತು ಅತಿ ಶ್ರೇಷ್ಠ ಪ್ರಕೃತಿಗಳನ್ನು ಸಮೀಕರಿಸಿ, ಇಷ್ಟೊಂದು ತೀವ್ರವಾಗಿ ಘಾತವಾಗಿಸಬಹುದು ಎಂಬ ಅರಿವಿದಿದ್ದರೂ ಸಹ.
ಸ್ವಾತಂತ್ರ್ಯ ಪೂರ್ವದಲ್ಲಿ ಏರ್ಪಡುವ ಗೃಹಭಂಗದಲ್ಲಿ ಹತ್ತಾರು ಪಾತ್ರಗಳು ಕಂಡುಬಂದರೂ ಮುಖ್ಯವಾಗಿ ಒಂದೆರಡು ಮನೆತನಗಳ ಕಥೆ. ಸುಮಾರು ೧೯೧೦-೧೯೪೫ರ ಕಾಲಮಾನದಲ್ಲಿ ಜರುಗುವ ಗೃಹಭಂಗ ಅಂದಿನ ಕಾಲದ ಜೀವನ ಚಿತ್ರಣವನ್ನು ಬಿಚ್ಚಿಡುತ್ತದೆ. ಮೂಢನಂಬಿಕೆ, ದರ್ಪ, ದಬ್ಬಾಳಿಕೆಗಳಾದಿಯಾಗಿ ಆತ್ಮವಿಶ್ವಾಸ, ಜೀವನ ಸಂಘರ್ಷಗಳನ್ನು ಪುಟಪುಟದಲ್ಲೂ ಹೊತ್ತಿದೆ. ಪ್ರತಿ ಪಾತ್ರವೂ ಓದುಗನ ನೈತಿಕತೆ ಮತ್ತು ತಾತ್ವಿಕತೆಯನ್ನು ಬಡಿದೆಚ್ಚರಿಸುತ್ತವೆ. ಓದಿ ಎರಡು ಮೂರು ದಿನ ಕಳೆದರೂ ಗೃಹಭಂಗದ ಪ್ರತಿ ಪಾತ್ರಗಳು ಇನ್ನೂ ಕಾಡುತ್ತಿವೆ, ಪ್ರಾಯಶಃ ಮುಂದಿನ ಮರು ಓದುಗಳೆಲ್ಲದರಲ್ಲೂ ಹೀಗೆ ಕಾಡುತ್ತವೆ.
ಗೃಹಭಂಗದ ಮುಖ್ಯವಾಹಿನಿಯಲ್ಲಿ ಒಂದೇ ಮನೆಯಿದ್ದರೂ ಎಲ್ಲಿಯೂ ಓದುವಾಗ ಬೇಸರವೆನಿಸುವುದಿಲ್ಲ. ನಾಲ್ಕುನೂರು ಪುಟಗಳು ಯಾವಾಗ ಕಳೆದವು ಎಂಬುದೂ ತಿಳಿಯುವುದಿಲ್ಲ. ಅಷ್ಟು ವೈವಿಧ್ಯ ಮತ್ತು ವೈಶಿಷ್ಟ್ಯಗಳನ್ನು ಮೈಗೂಡಿಸಿಕೊಂಡಿರುವ ಕಾದಂಬರಿಯಲ್ಲಿ ಪ್ರತಿಯೊಂದು ಆಯಾಮಕ್ಕೂ ವಿರುದ್ಧವಾದ ಮತ್ತೊಂದು ಆಯಾಮ ಕಂಡುಬರುತ್ತದೆ. ದೊಡ್ಡವರ ಮತ್ತು ಉಳ್ಳವರ ಆಷಾಢಭೂತಿತನಗಳು ಹೇಯವನ್ನು ಹುಟ್ಟಿಸುತ್ತವೆ. ಬದುಕಬೇಕು ಎಂದುಕೊಂಡವರ ಆತ್ಮವಿಶ್ವಾಸ ಮತ್ತು ಹಂಬಲ ಬದುಕಿಗೊಂದು ಚೇತನ ನೀಡುತ್ತವೆ. ಹಾಗೇ ಬರುವ ಅನಿರೀಕ್ಷಿತ ತಿರುವುಗಳು ನಮ್ಮನ್ನು. ಅಸಹಾಯಕರನ್ನಾಗಿಸುತ್ತವೆ. ಹೀಗೆ ಇಷ್ಟೇ ಎಂದು ಬರಹದಲ್ಲಿ ಕಟ್ಟಿಡಲಾಗದ ಅತಿ ಸಮರ್ಥ ಕಾದಂಬರಿಗೆ ಕಾಲಾತೀತ ಮಾನ್ಯತೆ ದೊರಕಿರುವುದು ಏಕೆ ಎಂದು ತಿಳಿದುಕೊಳ್ಳಲಾದರೂ ಗೃಹಭಂಗ ಓದಲೇಬೇಕು.
ಪುಸ್ತಕದಲ್ಲಿ ಕಂಡುಬರುವ ಸಾಮಾಜಿಕ ಸ್ಥಿತಿಗತಿ ಅದರಲ್ಲೂ ಗ್ರಾಮೀಣ ಪ್ರದೇಶದ ರೀತಿ ರಿವಾಜುಗಳು ಹುಬ್ಬೇರಿಸುವಂತೆ ಮಾಡುತ್ತವೆ. ಸ್ತ್ರೀ ಶೋಷಣೆ, ಸಾಮಾಜಿಕ ಅಸಮಾನತೆ, ಮೈಗಳ್ಳತನ, ಹಸಿವು, ಪದ್ಧತಿ, ಗೊಡ್ಡು ಆಚಾರ ವಿಚಾರಗಳು, ಬಂಧನಗಳು, ಬಡವರ ಅಸಹಾಯಕತೆ ಎಲ್ಲವನ್ನೂ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ ಶ್ರೀ ಭೈರಪ್ಪನವರು. ಮೊದಮೊದಲು ಸಾಮಾಜಿಕ ಕಾದಂಬರಿ ಎನಿಸಿದರೂ ನಮ್ಮಂತಹ ಸಾಮಾನ್ಯರ ವರ್ಗೀಕರಣಕ್ಕೆ ಸಿಗದ ಯಾವುದೋ ಮಾಯದಂತನಿಸಿ ಪುಸ್ತಕ ನಮ್ಮೊಳಗೆ ಸೇರಿಹೋಗುತ್ತದೆ. ಉತ್ತಮರನ್ನಾಗಿಸುತ್ತದೆ.
ಮೊಸರಿನಲ್ಲಿ ಕಲ್ಲು ಹುಡುಕಲೇಬೇಕು ಎಂದರೆ ಪುಸ್ತಕದಲ್ಲಿ ಬಳಸಿರುವ ಅವ್ಯಾಚ್ಯ ಶಬ್ದಗಳನ್ನು ಸ್ವಲ್ಪ ಕಡಿಮೆಯಾಗಿಸಬಹುದಿತ್ತು. ಪುಸ್ತಕದಲ್ಲಿರುವ ಎಲ್ಲಾ ಮೌಲ್ಯಗಳೆ��ುರು ಅದು ನಗಣ್ಯವೆಂದರೂ ತಪ್ಪಲ್ಲ
ಬಹುಶಃ ಸಾಕು.
ಭೈರಪ್ಪನವರ ಸೃಜನಶೀಲತೆಯೊಂದಿಗೆ ಕಟು ವಾಸ್ತವ ತಳುಕು ಹಾಕಿಕೊಂಡರೇ ಓದುಗನೆದೆಯಲಿ ಕಣ್ಣೀರು ಜಿನುಗುವುದು ತಪ್ಪಿದ್ದಲ್ಲ. ಆದರೂ ಓದಿ...
ಕಾರಂತರ 'ಮರಳಿ ಮಣ್ಣಿಗೆ' ಯಷ್ಟೇ ಈ ಕಾದಂಬರಿಯೂ ತುಂಬಾ ಮನಸ್ಸಿಗೆ ಹತ್ತಿರವಾಯ್ತು. ಇವೆರಡೂ ಕಾದಂಬರಿಗಳ ಅಂತರಾಳಗಳು ಬಹಳ ಸಾಮ್ಯವಾಗಿವೆ ಅಂತ ನನ್ನ ಅನಿಸಿಕೆ. ಕಳೆದ ಶತಮಾನದಲ್ಲಿ ಪ್ಲೇಗ್ ಕಾಯಿಲೆ ಬಂದಂತಹ ಸಂದರ್ಭದಲ್ಲಿ, ಅರಸೀಕೆರೆಯ ಹತ್ತಿರದೊಂದು ಕುಗ್ರಾಮದಲ್ಲಿ ನೆಡೆಯುವ ಒಂದು ಕೌಟುಂಬಿಕ ಕಥೆ. ಈ ಪುಸ್ತಕಗಳನ್ನ ಯಾವತ್ತೂ ಕೈಯಲ್ಲಿ ಹಿಡಿದಾಗಲೂ ಏನೋ ಒಂದು ಭಾವುಕತೆ ಹೊಮ್ಮುವುದು.
ಒಂದು ವಿಪರ್ಯಾಸ ನನಗೆನ್ನಿಸುವುದು ಏನೆಂದರೆ, ಈ ಕಾರ್ಪೊರೇಟ್ ಯುಗದಲ್ಲಿ ಕುಳಿತು, ಕೇವಲ ಏಳು ದಶಕಗಳ ಹಿಂದಿನ ಭಾರತ ಹಾಗೂ ಭಾರತೀಯರ ಸ್ಥಿತಿಯನ್ನು ಕಲ್ಪಿಸಿಕೊಳ್ಳಲು ಎಷ್ಟು ಕಷ್ಟವಾಗುವುದು! ಅಲ್ಲವೇ?! ಈ generational memoriesನ ಉಳಿಸುವಲ್ಲಿ ಭಾರತೀಯರು ತೋರಿಸುವಷ್ಟು ತಾತ್ಸಾರ ಬೇರೆ ಯಾರೂ ತೋರಿಸಿರಲು ಸಾದ್ಯವಿಲ್ಲ! ಈ ವಿಷಯ ಏಕೆ ಪ್ರಸ್ತಾಪಿಸಿದೆನೆಂದರೆ ಭಾರತದಲ್ಲಿ ಪ್ಲೇಗ್ ಬಂದಾಗಿನ ಕಾಲದ ವೃತ್ತಾಂತಗಳನ್ನ ನನಗೆ ನನ್ನ ಮುತ್ತಜ್ಜಿ ಹೇಳಿದ ನೆನಪು ಬಿಟ್ಟರೆ ಈ ಕಾದಂಬರಿಯಂತಹ ಪುಸ್ತಕಗಳಲ್ಲಿ ಸಿಕ್ಕಂತಹ ಮಾಹಿತಿಗಳು ಅಷ್ಟೇ! ಬಡತನ, ಅನಿಶ್ಚಿತತೆ, ಅಸಹಾಯಕತೆಗಳ ಆ ಒಂದು ಕಾಲಕ್ಕೂ improved life expectancy and luxury ಗಳ ಈ ಕಾಲಕ್ಕೂ ಎಷ್ಟು ಅಜಗಜಾಂತರ!
ಭೈರಪ್ಪನವರ ಕಾದಂಬರಿಗಳಲ್ಲಿ ಬರುವ ಸ್ತ್ರೀ ಪಾತ್ರಗಳು ಮತ್ತು ಆ ಒಂದೊಂದು ಸ್ತ್ರೀ ಪಾತ್ರಗಳ ಆದರ್ಶತೆ, ಪ್ರೌಢತೆ ಹಾಗೂ ಸಂಕಲ್ಪ ಎಂದೂ ಆದರ್ಶನೀಯ. ಭಾರತದಲ್ಲಿ ಸರ್ವೇ ಸಾಮಾನ್ಯವಾಗಿದ್ದ patriarchal ಸಮಾಜ ಮತ್ತು ಅಲ್ಲಿ ಕೆಲವು ಮಹಿಳೆಯರು ಪಟ್ಟ ಪಾಡು ಈ ಕಾದಂಬರಿಯಲ್ಲಿ ಒಬ್ಬ ಮುಗ್ಧ ಹೆಣ್ಣು ಮಗಳ ಮೂಲಕ ಅವಳು ಒಬ್ಬ ಹೆಂಡಿತಿಯಾಗಿ, ಸೊಸೆಯಾಗಿ ಅನುಭವಿಸಿದ ಕಾರ್ಪಣ್ಯಗಳನ್ನು ತುಂಬಾ ಭಾವನಾತ್ಮಕವಾಗಿ ಚಿತ್ರಿಸಿದ್ದಾರೆ. ಅಸಹಕಾರಿ ಗಯ್ಯಾಳಿ ಅತ್ತೆ, ಅನಾಚಾರಿ ತಿರ್ಬೋಕಿ ದುರಹಂಕಾರಿ ಗಂಡನಿದ್ದರೆ ದೇವರೇ ಗತಿ! ಆಗಿನ ಕಾಲವಾದರೇನು ಈಗಿನ ಕಾಲವಾದರೇನು? ಬದುಕು ಬವಣೆಯೇ! ತಾಯಿಯೊಲವು ಎಷ್ಟು ನಿರಾಳ ನಿಸ್ವಾರ್ಥ ಹಾಗೂ ನಿಷ್ಕಲ್ಮಶ ಅನ್ನೊದಕ್ಕೆ ಈ ಕಾದಂಬರಿಯ ಕಥಾನಾಯಕಿಯೇ ಸಾಕ್ಷಿ; ತನ್ನೆಲ್ಲಾ challenges ಗಳಿಗೆ ಧೃತಿಗೆಡದೆ, ತನ್ನ ಮನೆ ಮಕ್ಕಳು ಹಾಗೂ ಸಂಸಾರಗಳನ್ನ ಉಳಿಸಿ ಬೆಳೆಸಿ, ಕೊನೆಯಲ್ಲಿ ತನಗೆ ಪ್ಲೇಗ್ ಮಾರಿ ಅಂಟಿದ್ದರಿಂದ ತನ್ನನ್ನು ತಾನು ತನ್ನ ಮಕ್ಕಳಿಂದ ದೂರಾಗಿಸಿ ಪರಲೋಕಕ್ಕೆ ಸಾಗಿದ ಪುಣ್ಯಾತ್ಗಿತ್ತಿ!
ಒಂದು ಸಮಾಜವನ್ನ, ಮಾನವ ಸಂಬಂಧಗಳನ್ನ ಒಂದು ನೈತಿಕ ನೆಲೆಯಲ್ಲಿ ತುಲನೆ ಮಾಡಿ, ನಿಷ್ಪಕ್ಷಪಾತವಾದ ದೃಷ್ಟಿಯಿಂದ ನಮ್ಮ ಸಾಹಿತ್ಯ ರಚನೆ ಮಾಡಿದ್ದವರಲ್ಲಿ ಭೈರಪ್ಪನವರು ಒಬ್ಬರು. ಜ್ಞಾನಪೀಠ ಅಥವಾ ಬುಕ್ಕರ್ ಪ್ರಶಸ್ತಿಗಳು ಲಭಿಸಬಹುದಂತಹ ಎಷ್ಟೋ ಅತ್ಯುತ್ತಮ ಸಾಹಿತ್ಯ ನಮ್ಮ ಭಾಷೆಯಲ್ಲಿವೆ; ಇಂತಹ ಎಷ್ಟೋ ಉನ್ನತ ಕೃತಿಗಳು ಇತರೆ ಪ್ರಾಪಂಚಿಕ ಭಾಷೆಗಳಲ್ಲಿ ಅನುವಾಗಳಾಗದೆ ನಮ್ಮಲ್ಲಿಯೇ ಉಳಿದವಲ್ಲ ಅನ್ನೋ ಬೇಸರ ಅಷ್ಟೇ! ಭೈರಪ್ಪನವರೇ ಹೇಳುವ ಹಾಗೆ ಅವರು ಪ್ರಶಸ್ತಿಗಾಗಿ ಎಂದೂ ಬರೆಯಲಿಲ್ಲ ಬದಲಿಗೆ ತಮ್ಮ ಬರಹದ ಮೂಲಕ ತಮ್ಮ ಭಾವ ಇತರರಿಗೆ ತಲುಪುವಂತಾಗಬೇಕು ಎಂದು; ಹಾಗೆಯೇ ಕನ್ನಡಿಗರ ಭಾವ ಬದುಕು ಬರಹಗಳ ಮೂಲಕ ಪ್ರಪಂಚದಾದ್ಯಂತ ತಲುಪಲಿ ಎನ್ನುವುದೇ ನನ್ನ ಆಶಯ!
Occasionally, one reads a book that would leave a deep impact on the reader’s mind. Dr. S. L. Bhyrappa is writer par excellence whose works have been widely acclaimed. When I picked up this book, rarely did I imagine that I would be left haunted, my inners churned and totally disturbed at the end of the book. This review is perhaps written and rewritten in the mind before putting into words on a paper / notepad. Considered as one of the classics of SLB, this book is quite an emotional, psychological and philosophical journey which could perhaps comes across differently to different readers. Here’s my review of the one of the most revered works in Kannada literature.
Gruhabanga is the story of a village, of many women characters with various shades, of a Jangama, of Plague, of Life, of unanswered questions. This is easily one of the most darkest (in terms of psychological impact) books I have read. I wouldn’t be surprised if many readers have shed tears as they witness the journey of Nanjavva, her trials and tribulations in the society set in 1900 - 1940 timeline. Now, the first thought is about who is the protagonist and antagonist of this novel? This would be a very difficult choice indeed. While Nanjavva would stand out as the lead character, one could look at the novel from an entirely different perspective of Ayyanovru too or consider this as a prelude to Vishwa’s journey. For the latter one, there are enough characters who could claim their right including the Plague. However, for this review, the protagonist and the antagonist is the LIFE which holds the narrative through out. It may come across as a weird view, but there is no one stand out differentiating character which makes a stronger appeal compared to all others. This is entirely due to the genius of SLB.
Gruhabanga - Destruction of a house. What could cause this? Is it the lack of empathy of the male members who refuse to take responsibility for their actions and family? Or is it lack of culture of the mother who brings up her children to be absolute wastrel? Or is it Plague whose hunger is not satiated until it consumes the very essence of the house? Quite difficult to comprehend that one single reason which leads to the destruction of a life carefully and painstakingly constructed.
Nanjavva is the central character with whom many can relate to in the modern society as well as the era gone by. A lady who tries to win against odds, who fights against the societal norms, endures the trials and tribulations of life sans the support from anyone else. As a daughter to a strong headed person to a loving sister, a caring mother, empathetic leader of society and abuse tolerating wife, she dons multiple hats across various scenarios. In every single interaction, she would evoke the deepest sympathy one can have for a human being. Her constant endurance to provide for a better life against all odds is beautifully and excruciatingly etched out by the master story teller. However, the tragic fate that befalls on her was quite unexpected when everyone expected a happy ending. Nanjavva epitomises the Bharatiya Naari, one who erodes herself like a sandal piece, but gives the beautiful fragrance of sandal to her family and society.
The book though has some interesting characters. Narsi is one another complex character. While one could paint her with a single blasphemous brush due to the era this story is set in, the author has added other shades to her character including one of a motherly instinct. The reviewer is left with an unanswered question: Why did Ayyanovru decide against Narsi taking care of Vishwa? Perhaps, there is a deeper philosophical meaning to the same, but to the common reader, she could have lived the words that Nanjavva would have uttered when Narsi would have cared Vishwa back to health. Perhaps, the biases took more precedence compared to a more humane approach.
However, the one character that stands out is Ayyanovru - The conscience of the novel. As a sanyasi, he observes as an impartial observer, yet is drawn into the spirals of the samsara, when he develops affection for Nanjavva and her family. As a constant support character with impeccable integrity, he provides a fine example on how one can be attached, yet detached. He provides ample feedback, yet shows immense restraint when certain eventualities are revealed. One could make peace that he decides to entangle himself and become the caretaker of Vishwa, yet his decision of not entrusting the youngster to Narsi is thought provoking. Ayyanovru has a unique poise, yet demonstrates the humane behaviour when he is hurt by the words of few. Could he have done more than what he tried to do? This question will definitely haunt the reader for sometime.
There are many characters who lend a supporting hand, representative of the Bharatiya culture where the ecosystem becomes part of one’s life. One can’t help but grieve for the 2 children, specially Ramanna who was on his way to a better life. Why? Just why did he have to face the eventuality hurts maximum. The language is strong - Its part of the context and hence, one shouldn’t take offence. The English translation is quite good, but the translation of swear words at times is hilarious.
On an ending note, one needs to ponder over the name of the novel. Just what is broken? Is it human relationships? Or is it human will? Or is it ego which doesn’t allow the human to transcend over the veil of ignorance? Or is it the unmissable, but the ever impactful presence of life? Or is the house the metaphor for the will of Nanjavva which gave up finally? Was it Plague that consumed her or she had enough and decided not to battle one more. I wouldn’t be surprised if the reader feels broken at the end of the novel.
An invigorating, thought provoking novel. MASTERPIECE. Highly recommended read.
No words in English or Kannada to describe what this story tries to do to the reader. This can definitely not be categorized as a fictional story but at the same time no one in the current generation or the next generation can ever imagine this story as something that could take place until they are aware of the rural background of a vast country such as India. I started this book after i had seen the television series and thought i will not think of it to an extent that can make me emotional. By the end of the book, i had a gloomy day ahead of me. I doubt there will ever be a writer like SLB in Kannada Literature.
They say reading improves imagination, imagination is the basis for success in any humans life - from invention of the wheel to the invention of the latest memory device. Any person who reads this has no choice but to put himself/herself in every character and at the end of the day realize no character is wrong in his/her position, but still you end up making heroes and villains and they keep changing with every chapter.
A book to read to understand and realize what rural karnataka life was. Whatever one may argue about the language used in the book, i can challenge that it existed and still exists in many parts of the country.
My Hero/Heroine - Nanjavva My Villian - Gangamma Surprise Transformation - Appanna turning to live his own life Swallowed by situation - The village prostitute Helpless Hero - Kalleshi Impact of the story - Impact and misconceptions that resulted to hurt Nanjavva's life were inhuman. Apparently it exists today as well.
ಈಗ್ಗೆ ಇಪ್ಪತ್ತೆರಡು ವರ್ಷಗಳ ಹಿಂದೆ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ಟೀವಿ ಧಾರವಾಹಿಯಾಗಿ ಇದನ್ನು ಮೊದಲಬಾರಿಗೆ ನೋಡಿದ್ದು. ಅಲ್ಲಿಯ��ರೆಗೂ ಮನೆಯಲ್ಲೇ ಕಾದಂಬರಿ ಪುಸ್ತಕ ಇದ್ದರೂ ಅದನ್ನು ಓದಲು ನನಗೆ ಸುಲಭಸಾಧ್ಯವಾಗಿರಲಿಲ್ಲ, ಧಾರಾವಾಹಿ ಮುಗಿದ ನಂತರ ಓದಿ ಕೆಳಗಿಟ್ಟವಳು ಮತ್ತೀಗ ಎರಡನ್ನೂ ಹೊಸದಾಗಿ ಓದಿ, ನೋಡಿ ಮುಗಿಸಿದೆ. (all 75 episodes are available on YouTube)
ಕಥೆಯ ಬಗ್ಗೆ, ಪಾತ್ರಗಳ ಬಗ್ಗೆ ಏನನ್ನಾದರೂ ಹೇಳುವ ಶಕ್ತಿಯೇ ಇಲ್ಲವಾಗಿದೆ. ಹುಟ್ಟಿನಿಂದ ಪದವಿ ದೊರೆಯಬಹುದೇ ವಿನಃ ಸಂಸ್ಕಾರ, ಸನ್ನಡತೆ, ವಿದ್ಯೆಗಳು ಪೋಷಕರ ಕೊಡುಗೆಯಾಗೇ ದಕ್ಕುವಂತದ್ದು ಎನ್ನಲು ಗಂಗಮ್ಮ ಸಾಕಿದ ಮಕ್ಕಳು - ನಂಜಮ್ಮ ಸಾಕಿದ ಮಕ್ಕಳು ಅತ್ಯತ್ತಮ ಉದಾಹರಣೆ. ಕಾದಂಬರಿಯ ಓದು ಮುಗಿಯುವ ಹೊತ್ತಿಗೆ ಅಯ್ಯನವರಲ್ಲಿ ನರಸಮ್ಮ ಕೇಳುವ "ಅಯ್ಯಾರೇ, ಈ ಊರಾಗೆ ನಂಜವ್ವನಂತಾ ಒಳ್ಳೇ ಗರತಿ ಇಲ್ಲ. ಆ ಯಮ್ಮನಿಗೆ ಬಂದಂತಾ ಕಷ್ಟ ಯಾರಿಗೂ ಬರ್ನಿಲ್ಲ. ಈಗ ಮತ್ತೆ ಅವರಿಗೆ ಪಿಳೇಗ್ ಆಗೈತೆ. ದರ್ಮವಾಗಿ ಯಾಕಿರಬೇಕು ನೀವೇ ಯೇಳಿ" ಎಂಬ ಪ್ರಶ್ನೆ ನಮ್ಮದೂ ಆಗಿರುತ್ತದೆ.
Amazing read this is..❤️ ನಂಜಮ್ಮನ ಪಾತ್ರ ಮರೆಯಲಾಗದ್ದು. ಇಂದಿನ ಜೀವನದಲ್ಲೂ ಎಷ್ಟೋ ಮನೆಯಲ್ಲಿ ನಂಜಮ್ಮನ್ನಂತವರನ್ನ ಕಾಣಬಹುದು. ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿಕೊಂಡು, ಸೋಂಬೇರಿ ಗಂಡನನ್ನು ನಿಭಾಯಿಸಿಕೊಂಡು, ಜಗಳಗಂಟಿ ಅತ್ತೆಯನ್ನು ಸಂಭಾಳಿಸಿಕೊಂಡು, ಮನೆಯನ್ನು ಸರಿದೂಗಿಸಿಕೊಂಡು ಹೋಗುವ ರೀತಿಯೇ ಅಧ್ಭುತ..
ಕೆಟ್ಟ ಶಬ್ದದ ಬಳಕೆ ಓದಲು ಸ್ವಲ್ಪ ಹಿಂಸೆ ಎನ್ನಿಸಿದ್ದು ಬಿಟ್ಟರೆ ಮನಕಲಕುವಂತಹ ಪುಸ್ತಕ.. ❤️
Marvelous story!!! It changed my life.. - Stopped having food outside and going expensive to restaurants - Started Savings - Started reading more books - Started thinking positively
ಪೂರ್ತಿ ಪುಸ್ತಕ ಓದಿ ಮುಚ್ಚುವಾಗ ನನಗರಿವಿಲ್ಲದೆ ರಾತ್ರಿ 1:30 ಆಗಿತ್ತು. ಅದೆಷ್ಟು ತಡೆದರೂ ಭಾವನೆಗಳು ಕೇಳುತ್ತಿರಲಿಲ್ಲ.. ಅಳು ಒತ್ತರಿಸಿಕೊಂಡು ಬರುತ್ತಿತ್ತು. ಕಣ್ಣೀರು ಪುಟಗಳ ನಡುವೆ ಸಿಲುಕಿಕೊಂಡು ಒದ್ದಾಡುತ್ತಿತ್ತು. ಕೆಲವೊಮ್ಮೆ ದೃಶ್ಯಗಳು ಮಾಡಲಾಗದ ಬದಲವಾಣೆಗಳು ಅಕ್ಷರಗಳು ಮಾಡುತ್ತವೆ. ಇದೇ ಸಾಹಿತ್ಯಕ್ಕಿರುವ ಶಕ್ತಿ.
ಗ್ರಹಭಂಗದಂತಹ ಕೃತಿಗಳು ಜೀವನದುದ್ದಕು ಪರಿಸ್ಥಿತಯ ಕಠೋರತೆ ಹಾಗು ಹಾಳು ಸಮಾಜದ ಜೊತೆ ಜೊತೆಯಾಗಿ ತನಗಲ್ಲದಿದ್ದರೂ ತನ್ನನ್ಮು ಅವಲಂಬಿಸಿದವರಿಗೋಸ್ಕರವಾದರೂ ಬದುಕುವ ಕೆಲವು ಗಟ್ಟಿ ಜೀವಗಳ ಆದರ್ಶಗಳನ್ನು ಸಾರುವಂತವು. ಇಂತಹ ಕೃತಿಯನ್ನು ಕೊಟ್ಟ ಭೈರಪ್ಪ ಅವರಿಗೊಂದು ದೊಡ್ಡ ಸಲಾಮ್..
ಇಲ್ಲಿ ಬರುವ ನಂಜಮ್ಮ ಈ ಕಾದಂಬರಿಯ ಮುಖ್ಯ ಪಾತ್ರ. ಗಂಡ ನಾಲಾಯಕ, ಅತ್ತೆ ಬಾಯಿಬಿಟ್ಟರೆ ಹೊಲಸು, ಬೈಗುಳ. ಆರು ತಿಂಗಳ ಗರ್ಭಿಣಿ ತನ್ನ ಮನೆ ತೊರೆದು ಕೈಯಲೊಂದು, ಕಂಕುಳಲೊಂದ ಮಗು ಇಟ್ಟುಕೊಂಡು ತಾನೆ ಸ್ವಾವಲಂಬಿಯಾಗಿ ಬದುಕಿ ತೋರಿಸುತ್ತೇನೆ ಎಂದು ಹೊರಟ ದಿಟ್ಟ ಹೆಂಗಸು ನಂಜಮ್ಮ. ಇಡೀ ಸಮಾಜವೆ ತನ್ನನ್ನು ನೋಡಿ ಹೊಟ್ಟೆಉರಿದುಕೊಳ್ಳುವಂತೆ ಬದುಕಿದವಳು. 'ದೇವರು ಒಳ್ಳೆಯವರನ್ನು ಕಾಪಡುತ್ತಾನೆ, ಕೆಟ್ಟವರನ್ನು ಶಿಕ್ಷಿಸುತ್ತಾನೆ' ಎಂಬ ಮಾತು ಇಲ್ಲಿ ಉಲ್ಟ ಹೊಡೆದಿತ್ತು. ನಂಜಮ್ಮ ಇಲ್ಲಿ ಲೋಕಮಾತೆಯಾಗಿ ಅದೆಷ್ಟೊ ಜನರಿಗೆ ಮಾದರಿಯಾಗಿದ್ದಾಳೆ.
ನಂಜಮ್ಮನ ಗಂಡ ಚೆನ್ನಿಗರಾಯ ಹುಟ್ಟು ಸೋಂಬೇರಿ, ಮಕ್ಕಳ ಅನ್ನ ಕದ್ದು ತಿನ್ನುವಂತಹ ನಾಲಾಯಕ. ಅಸಹ್ಯ ಮೂಡಿಸುವಂತಹ ಪಾತ್ರ. ತನ್ನ ಮಗಳು ಹುಷಾರು ತಪ್ಪಿದಾಗ ಪಕ್ಕದ ಮನೆಯ ಹೆಂಗಸು ಮಗುವಿಗಾಗಿ ತಂದ ಊಟವನನ್ನು, 'ಅದು ಸತ್ರೆ ಸಾಯ್ಲಿ, ನನಗೆ ಹಸಿವೆಯಾಗುತ್ತಿದೆ' ಎಂದು ಊಟ ಮಾಡುವಂತಹ ನೀಚ.
ಇಷ್ಟೆ ಅಲ್ಲದೆ ಇನ್ನು ಹಲವು ಅದ್ಭುತ ಪಾತ್ರಗಳನ್ನು ಕಟ್ಟಿ ಕೊಟ್ಟಿದ್ದಾರೆ. ನಂಜಮ್ನನ ಅತ್ತೆ ಗಂಗಮ್ಮ ತಾನೊಬ್ಬಳೆ ಒಳ್ಳೆಯವಳು, ಉಳಿದವರೆಲ್ಲ ಕೆಟ್ಟವರೆಂದು ಬಾಯಿ ತುಂಬ ಹೊಲಸು ಪದಗಳಲ್ಲೇ ಬೈಯ್ದು, ಸಿಕ್ಕವರಿಗೆಲ್ಲ ಶಾಪ ಹಾಕುವಂತಹ ಪಾತ್ರ. ಚೆನ್ನಿಗರಾಯನ ತಮ್ಮ ಅಣ್ಣಪಯ್ಯ ಕೆಟ್ಟವನಾಗಿದ್ದರು ಕೊನೆಗೆ ಮನಪರಿವರ್ತನೆಯಾಗಿ ಒಳ್ಳೆಯವನಾಗುತ್ತಾನೆ. ವೇಶ್ಯಯರೆಲ್ಲ ಕೆಟ್ಟವರು, ಮರ್ಯಾದಸ್ತರೆಲ್ಲ ಒಳ್ಳೆಯವರೆಂದು ಗುರುತಿಸಿಕೊಳ್ಳುವ ಸಮಾಜದಲ್ಲಿ, ವೇಶ್ಯೆ ನರಸಿಯ ಒಳ್ಳೆಯತನ, ಹಾಗು ನಂಜಮ್ಮನ ಪರವಾಗಿ ಸಹಾಯ ಮಾಡುವ ಸರ್ವಕ್ಕ, ಮೇಷ್ಟ್ರು, ಸನ್ಯಾಸಿ ಮಾದೇವಯ್ಯನವರು, ಅಕ್ಕಮ್ಮ ಅಜ್ಜಿ, ನಂಜಮ್ಮನ್ನ ಅಪ್ಪ ಧೈರ್ಯಶಾಲಿಯಾದ ಕಂಠೀಜೋಯಿಸ, ಮಕ್ಕಳು ಪಾರ್ವತಿ, ರಾಮ, ವಿಶ್ವ ಸಾದಾ ನೆನಪಿನಲ್ಲಿರುವಂತಹ ಪಾತ್ರಗಳು.. ನೆಚ್ಚಿನ ಪುಸ್ತಕಗಳ ಪಟ್ಟಿಗೆ ಹೊಸ ಸೇರ್ಪಡೆ. ಒಂದೊಳ್ಳೆ ಕಾದಂಬರಿ. ಓದಿ, ಓದಿಸಿ..
I consider Grihabhanga - An Ode to Every Strong woman like Nanjamma ( The lead character of this tale ) struggling and living a determined life whilst all the odds and troubles caused by either Abusive husbands or family members by themselves!
There are a zillion women out here leading their lives like Nanjamma and Bhyrappa through his UNVARNISHED writing - made me not only feel pity for them but instead - Respect their Valour towards life!!
ನಂಜಮ್ಮನಂಥ ಪಾತ್ರ ಶ್ರುಷ್ಟಿಸಿದ ಭ್ಯಾರಪ್ಪರವರಿಗೆ 🙏🙏. ಈ ಕಾದಂಬರಿಯ ಪ್ರತಿಯೊಂದು ಪಾತ್ರವು ತುಂಬಾ ವಿಭಿನ್ನವಾಗಿ ಮೂಡಿದೆ ಹಾಗೂ ಮನಸಿಗೆ ತುಂಬಾ ಹತ್ತಿರವೇನುಸತ್ತದೆ. ನಂಜಮ್ಮ ಜೀವನದಲ್ಲಿ ಸ್ವಲ್ಪವಾದರೂ ಸುಖ ಅನುಭವಿಸಲಿಲ್ಲವಲ್ಲ ಎಂದು ಮನಸಿಗೆ ತುಂಬಾ ಸಂಕಟವಾಯಿತು. ಭ್ಯಾರಪ್ಪರವರು ಚೂರಾದರು ಕರುಣೆ ತೋರಿಸಲಿಲ್ಲವಲ್ಲ ಎಂದು ಅನಿಸಿದ್ದುಂಟು.
ಒಂದು ಪುಸ್ತಕ, ಒಂದು ಕಥೆ, ಒಂದು ಪಾತ್ರ ಅತಿಯಾಗಿ ಕಾಡಿದ್ದು, ಪೂರ್ತಿಯಾಗಿ ಮನಸನ್ನ ಆವರಿಸಿಕೂಡಿದ್ದು ' ಗೃಹಭಂಗ ' ದಲ್ಲಿ.
ಮೊದಲನೆಯದಾಗಿ ಈ ಕಥೆಯ ನಾಯಕ/ನಾಯಕಿ ಆಗಿರುವ ನಂಜಮ್ಮ ನ ಪಾತ್ರ feminism ಅಥವಾ women empowerment ಗೆ ಅತ್ಯುತ್ತಮ ಉದಾಹಣೆಯಾಗಿದೆ.
ಎರಡನೆಯದು ಇದು ಏಕತಾನತೆಯ ಸಾಮಾಜಿಕ ಕಾದಂಬರಿ ಅಲ್ಲ. ಇಲ್ಲಿ ಬರೀ ಒಂದು ಕುಟುಂಬದ ಹೆಣಗಾಟದ ವಿವರಣೆ ಇಲ್ಲ. ಕಥೆಗೂ ಮೀರಿದ ಸತ್ಯದ ಅನಾವರಣವಿದೆ. ಸಮಾಜದ ಒಂದು ಪರಿಣಾಮಕಾರಿಯಾದ ವಿಷಯದ ಸುತ್ತ ಕಥೆ ಹೆಣೆದು ಓದುಗರ ಮನಸ್ಸು ಮುಟ್ಟೊ ಹಾಗೆ ಬರೆಯೋಕೆ ಸಾಧ್ಯ ಆಗೋದು ಭೈರಪ್ಪ ಅವರ ಬರವಣಿಗೆಯ ಹಿರಿಮೆ.
ಒಂದೇ ಕಥೆಯಲ್ಲಿ ಎರಡು ವಿರುದ್ಧ ಪಾತ್ರಗಳು. ಗಂಗಮ್ಮ, ತಾಯಿಯಾಗಿ ಅತ್ತೆಯಾಗಿ ಕನಿಷ್ಟ ಪಕ್ಷ ಮಾನವೀಯತೆ ಇರುವ ಒಂದು ಹೆಣ್ಣಾಗಿ ಹೇಗೆಲ್ಲಾ ಇರಬಾರದು ಅನ್ನೋದಕ್ಕೆ ಸಾಕ್ಷಿ.
ಇನ್ನೊಂದು ಕಡೆ ನಂಜಮ್ಮ ಘಾಟಿ ಅತ್ತೆ, ನಿರ್ಲಜ್ಜ ಗಂಡ ಮತ್ತು ಮೈದುನ, ಇವರೊಡನೆ ಹೇಗೆ ಗಟ್ಟಿಗಿತ್ತಿಯಾಗಿ ನಿಂತು ಸಂಸಾರದ ಜವಾಬ್ದಾರಿ ತಾನು ಒಬ್ಬಳೇ ಹೇಗೆ ನಿರ್ವಹಿಸುತ್ತಾಳೆ ಅನ್ನೋದನ್ನ ಓದುತ್ತಿದ್ದರೆ, ಮೈ ರೋಮಾಂಚನ ಆಗತ್ತೆ.
ಪೂರ್ತಿ ಪುಸ್ತಕ ಓದುವ ಹೊತ್ತಿಗೆ ಕೋಪ, ಆಕ್ರೋಶ, ನಿರಾಸೆ, ಬೇಸರ, ಹತಾಶೆ, ಎಲ್ಲಾ ಭಾವನೆಗಳ ಒಳಗೂ ನೀವು ಹೋಗಿ ಬಂದಿರುತ್ತೀರ.
ಕೊನೆಯದಾಗಿ ನರಸಿ ಅನ್ನೋ ಪಾತ್ರ ಕೇಳೋ ಹಾಗೆ ಒಳ್ಳೆಯವರಿಗೆ ಯಾಕೆ ಕೆಟ್ಟದಗತ್ತೆ. ಹಾಗಾದ್ರೆ ಒಳ್ಳೆಯವರಾಗಿರೋದೆ ತಪ್ಪಾ ಅನ್ನೋ ಭಾವನೆಯೊಂದಿಗೆ ಪುಸ್ತಕ ಮುಚ್ಚಿದೋ ಹಾಗೆ ಆಗತ್ತೆ.
ಒಂದು ಅದ್ಬುತ ಓದು. ಓದಿ ಮುಗಿಸಿದಾಗ ಖಂಡಿತವಾಗಿ ಬದುಕಿನ ಸತ್ಯಾಸತ್ಯತೆಯ ಬಗೆಗೆ ಒಂದು ಪ್ರಶ್ನೆಯೊಂದಿಗೆ ಎಲ್ಲೋ ಮನಸ್ಸಿನ ಆಳದಲ್ಲಿ ಒಂದು ಬದಲಾವಣೆಯ ಕೂಗು ಕೇಳುತ್ತದೆ.
ಗೃಹಭಂಗ – ಒಂದು ಗೃಹದ ಬಿಕ್ಕಟ್ಟು ಅಲ್ಲ, ಆತ್ಮಸಾಕ್ಷಾತ್ಕಾರದ ಪಥ.
ಎಸ್. ಎಲ್. ಭೈರಪ್ಪ ಅವರ “ಗೃಹಭಂಗ” ಕಾದಂಬರಿ ನನಗೆ ಅತ್ಯಂತ ಆಳವಾದ ಮನಸ್ಸಿನ ಸ್ಪರ್ಶವನ್ನುಂಟುಮಾಡಿದ ಕೃತಿಗಳಲ್ಲೊಂದು. ಈ ಕಾದಂಬರಿ ಶೀರ್ಷಿಕೆ ಕೇಳುತ್ತಿದ್ದಂತೆ ಕೇವಲ ಒಂದು ಕುಟುಂಬದ ಸಂಕಟ ಅಥವಾ ಸಂಬಂಧಗಳ ಬಿಕ್ಕಟ್ಟು ಎಂದು ಅನಿಸಬಹುದು. ಆದರೆ ಓದಿದ ನಂತರ ಅದು ಕೇವ�� ‘ಗೃಹಭಂಗ’ವಲ್ಲ, ಅದು ಸಂಸ್ಕೃತಿಯ ಭಂಗ, ಮೌಲ್ಯಗಳ ಕುಸಿತ, ಮತ್ತು ಶೋಷಿತ ಬದುಕಿಗೆ ಬೆಳಕಾದ ಬಿಕ್ಕಟ್ಟು ಎಂಬುದು ಸ್ಪಷ್ಟವಾಗುತ್ತದೆ.
ನಂಜಮ್ಮ ಎಂಬ ನಾಯಕಿ ಪಾತ್ರ ಈ ಕಾದಂಬರಿಯ ಹೃದಯ. ಅವಳ ಜೀವನದಲ್ಲಿ ಬರುವ ತಿರುವುಗಳು, ತಾಳ್ಮೆ, ನಿರಂತರ ಪ್ರಯತ್ನ ಮತ್ತು ನೈತಿಕ ಶಕ್ತಿ—all serve as a mirror to countless unsung women in our society.
ಪತಿಯಾದ ಚೆನ್ನಿಗರಾಯನ ಅಜ್ಞಾನ, ಸ್ವಾರ್ಥಪರತೆ ಮತ್ತು ನಿರ್ಲಕ್ಷ್ಯವನ್ನು ನಂಜಮ್ಮ ತಾಳ್ಮೆಯಿಂದ ಎದುರಿಸುತ್ತಾಳೆ. ಅವಳ ಬದುಕಿನಲ್ಲಿ ತಂದೆಯಾದ ಕಂಠಿ ಜೋಯಿಸ್ ಒಬ್ಬ ಶ್ರದ್ಧೆಮಯ, ಶಿಸ್ತಿನ ದೀಪ.
ಸಾಮಾಜಿಕ ಹಿನ್ನೆಲೆ, ಧಾರ್ಮಿಕ ನಂಬಿಕೆಗಳು, ಜಾಡು-ಮಂತ್ರದ ಪ್ರಭಾವ, ಇವೆಲ್ಲವೂ ಕಾದಂಬರಿಯಲ್ಲಿ ನೈಸರ್ಗಿಕವಾಗಿ ಹಬ್ಬಿಕೊಂಡಿವೆ. ಭೈರಪ್ಪರ ವಾಸ್ತವಿಕ ಮತ್ತು ನಿಖರವಾದ ನಿರೂಪಣಾ ಶೈಲಿ ಈ ಕಥೆಯನ್ನು ಅಪ್ಪಿಕೊಳ್ಳುವಂತಾಗಿ ಮಾಡುತ್ತದೆ.
ಭೈರಪ್ಪ ಈ ಕೃತಿಯ ಮೂಲಕ ಪ್ರೇಮ, ಕುಟುಂಬ, ಮಹಿಳೆಯ ಧೈರ್ಯ, ಪಿತೃಸತ್ತಾತ್ಮಕ ಸಮಾಜದ ಸವಾಲುಗಳು ಮತ್ತು ಮನುಷ್ಯನ ನೈತಿಕ ಸಂಕಟಗಳನ್ನು ಆಳವಾಗಿ ವಿಶ್ಲೇಷಿಸುತ್ತಾರೆ.
“ಗೃಹಭಂಗ” ಒ��ದು ಕಾಲಪರಂಪರೆಯ ಸತ್ಯದ ಪ್ರತಿಬಿಂಬ. ಇದು ಕೇವಲ ಓದಲು ಸುಂದರವಾದ ಕಥೆ ಅಲ್ಲ, ನಮ್ಮನ್ನು ಅಂತರಂಗದಲ್ಲಿ ಪ್ರಶ್ನೆ ಮಾಡಿಸುತ್ತವೆ: ನಾನು ನನ್ನ ಜೀವನದ ಯಾವ ಭಾಗದಲ್ಲಿ ನಂಜಮ್ಮನಂತಿದ್ದೇನೆ ?
One of the finest books of S.L.Bhyrappa. I have Heard so many people saying that his novels Are good. Its not only good its the best. As i started reading this book i was Shocked to find so many bad words. Thanks to him i now know A lot of words. But as i progressed,the way nanjamma deals and fights her Life with the help of Her children ,i was amazed. the strength,the smartness,the intelligence of hers is the one which made Me awed. The part where two of her children die is where i Felt as if i lost my own kin. That is the way he has Written the book. One of the best books i have ever read and one of the books which made me Cry for nanjamma. I have learnt many things from nanjamma which i Will use it in my life. Thank you sir for writing such An amazing book.
This book is one emotional rollercoaster and also philosophical at times for me.
The root question of "why bad things happen to good people" is one of the questions I was always interested in and unfortunately this book also doesn't answer that, though it ponders that question multiple times through it. Maybe nobody knows...
The novel is set in the British India era, almost 70% of the story is done by the time the world war 2 heats up. it describes the livelihood and customs and culture that was thriving at that time. Come to think of it, the unorthodox methods still rooted in us even after all these years, not to mention apart from technological upgrades we are very much the same. In a way this is similar to Marali Mannige by Shivaram Karanth but the positive ending does not happen here. Years later we will also see what happens to the remaining survivors or the story in another book author wrote known as Anveshana. But a heart touching or rather I should say ripping story of a person who loses everything including her own life in process of struggling to make a living by a humble way.
One of the best novels in Kannada. The character of the mother in law is one that would forever be imprinted in memory of the reader. A moving story set in rural India. Though not based on any particular story many aspects of this novel depict the true state of Rural India in the time period.
'Grihabhanga' is the story set up during pre- independence era in Ramasandra village of Karnataka. Nanjamma is married to Chinnagarayaru, who is an absolutely selfish and greedy person. Her peevish mother in law and lazy brother in law are an add-ons to the already slothful family. The whole family yells profanities towards everyone and none in the village shows respect towards them. ✍️ Chinnagarayaru, inherits his father's job as Shanubhoga( village accountant) thanks to Nanjamma's father after their marriage. Being dumb and gluttonous by nature , his focus is merely on food & sleep, never cares the slightest of his duties. Nanjamma, an intelligent, smart & wise lady looks after all the accounts, revenues and taxations of the villagers and she gains immense appreciation & support from higher authorities. ✍️✍️ Nanjamma bears the mantle of nurturing & protecting her kids from continuous reccurence of vicious pandemic -plague besides facing extreme poverty & draught. She alone sails a restless journey full of thorns with her children's risky lives handy. Nanjamma with her stern mettle stands unwavering shedding her blood & sweat protecting the quivering light of her family from putting off by whirlpool of many inevitable events( a few of which were really disturbing ). ✍️✍️ I haven't read a folktale based on Karnataka region. It is always good to know the culture, customs and traditions of other states & the author has discussed many such things. Though the book goes in a slow pace , I somehow liked the facets of the rural life the book has majorly focussed on. The blind superstitions followed by villagers in bygone days like believing a pandemic to be the result of wrath by village goddess & the effect of money lending system on the meagre incomes of farmers with heaps of interest were well showcased. It was distressing to read about verbal abuse on women with obscene language by fellow family members & how the women were made scape goats in the name of domestic violence. ✍️ Aavarana, the veil by S L Bhariyappa, being my favourite book of all time, I have expected a bit more from this book, and it had lived up to my expectations only to some extent .I have a few issues with this book which could not be definitely ignored. I have ardently desired Nanjamma to be the most riveting & fate changing element in the overwhelmed story of melancholy, but that did not happen to which I was disappointed. Also the loose translation by using true translations of a few expressions & adages here and there distracts us from the flow of reading. And the length of the book could have been very much trimmed and I personally felt the last 40 pages of the book were hastily written up to draw a conclusive ending.
ಗೃಹಭಂಗ, ನಿಜಕ್ಕೂ ಗೃಹಭಂಗವೇ ನಂಜಮ್ಮನ ಸಾವು , ಆಕೆಯ ಇಬ್ಬರ ಮಕ್ಕಳ ಸಾವು,ತಾಯಿಯ ಕಣ್ಣು ಮುಂದೆಯೇ ತನ್ನ ಇಬ್ಬರ ಮಕ್ಕಳನ್ನು ಕಳೆದುಕೊಂಡಾಗ ತಾಯಿಗಾಗುವ ಸಂಕಟ ಇನ್ನೂ ಹಲವಾರು ಪ್ರಸಂಗಗಳನ್ನು ಓದುತ್ತಾ ಹೋದಾಗಲೆಲ್ಲಾ, ನಂಜಮ್ಮನ ಜೀವನವನ್ನು ನೆನೆದಾಗ ಕಣ್ಣೀರು ಬರುತ್ತದೆ. ನಂಜಮ್ಮನಿಗೆ ಪ್ಲೇಗ್ ಆದಾಗ ತನ್ನ ಜೀವನವನ್ನೇ ನೆನೆಯುತ್ತಾಳೆ. ಗಂಡ ಅನ್ನಿಸಿಕೊಂಡವನು ಚನ್ನಿಗರಾಯರಂತೂ ಪ್ರಯೋಜನವಿಲ್ಲ. ತನಗೆ ಪ್ಲೇಗ್ ಆದಾಗ ಮಾದೇವಯ್ಯನವರನ್ನು ಕರೆತರಲು ಕೇಳಿಕೊಂಡಾಗ ತನಗೆಲ್ಲಿ ನಿದ್ರಾಭಂಗವಾಗುತ್ತದೆಂದು ಹಾಗೆಯೇ ಮಲಗುತ್ತಾರೆ. ಇನ್ನು ಆತನ ಬಗ್ಗೆ ನೆನಸಿಕೊಂಡರೆ ದೇವರೆ ಇಂತಹಾ ಗಂಡಂದಿರೂ ಇರುತ್ತಾರೆಯೇ ಎಂಬ ಯೋಚನೆ ಬರುತ್ತದೆ. ಹೆಣ್ಣಾದವಳು ತನ್ನ ತವರು ಮನೆಯನ್ನು ಬಿಟ್ಟು ಗಂಡನ ಮನೆಗೆ ಬಂದರೆ ಆಕೆಯನ್ನು ಗಂಡನಾದವನು ಅತ್ತೆಯಾದವರು ಸ್ವಂತ ಮಗಳಿನಂತೆ ಕಾಣಬೇಕು. ಆದರೆ ಅತ್ತೆ ಗಂಗಮ್ಮ, ಗಂಡ ಚನ್ನಿಗರಾಯರು ಹಾಗು ಮೈದುನ ಅಪ್ಪಣ್ಣಯ್ಯ ಈಕೆಯನ್ನು ಕಾಣುವುದು ನೆನೆದರೆ ಎಷ್ಟೋ ಹೆಣ್ಣು ಮಕ್ಕಳ ಜೀವನವೂ ನಂಜಮ್ಮನ ರೀತಿಯೇ ಇರಬಹುದೆಂದು ಅನಿಸುತ್ತಿದೆ. ತನಗೆ ಪ್ಲೇಗ್ ಆದಾಗ ಗಂಡನು ತಾನು ನಿದ್ದೆಮಾಡಬೇಕು ಬೆಳಿಗ್ಗೆ ಹೋದರಾಯ್ತು ಎನ್ನುವಾಗ ಆಕೆಯೇ ಅಷ್ಟು ಜ್ವರ ಇದ್ದರೂ ದೇವಸ್ಥಾನದ ವರೆಗೂ ನಡೆದುಹೋಗಿ ಅಯ್ಯನವರನ್ನು ಕರೆಯುತ್ತಾಳೆ. ಏನೂ ಸಂಬಂಧವಿಲ್ಲದಿರುವ ಮಾದೇವಯ್ಯನವರಿಗೆ ನಂಜಮ್ಮನೆಂದರೆ ಎಷ್ಟು ಗೌರವ. ಗುಂಡೇಗೌಡರೂ ನಂಜಮ್ಮನಿಗೆ ಎಷ್ಟೆಲ್ಲಾ ಸಹಯಮಾಡಿದರು, ಆದರೆ ತನ್ನ ಗಂಡ ಅತ್ತೆ ಅನಿಸಿಕೊಂಡವಳಾದ ಗಂಗಮ್ಮ ಇದ್ದು ಪ್ರಯೋಜನವಾದರೂ ಏನು?
ತಾಯಿಯ ಪಾತ್ರ ಬಹು ಮುಖ್ಯವಾದದ್ದು, ಆದರೆ ಗಂಗಮ್ಮ ಮಾತೆದ್ದಿದರೆ ಮುಂಡೆ, ರಂಡೆ ಇಂತಾ ಪದಗಳೆ, ಇನ್ನ ತನ್ನ ಮಕ್ಕಳು ಸುಮ್ಮನಿರುತ್ತಾರೆಯೇ ಅವರೂ ತಾಯಿಗೆ ಸರಿಸಮಾನವಾಗಿ ಆ ಪದಗಳನ್ನು ಬಳಸುವುದು. ತಾಯಿಯ ಮಾತನ್ನು ಕೇಳಿ ಅಪ್ಪಣ್ಣಯ್ಯ ತಾಯಿಯ ಸ್ಥಾನದಲ್ಲಿರುವ ನಂಜಮ್ಮನನ್ನೇ ಒದೆಯುತ್ತಾನೆ ಆ ಪ್ರಸಂಗ ನೆನೆದರೆ ದುಃಖವಾಗುತ್ತದೆ. *ನಂಜಮ್ಮ ತಾನು ಹುಟ್ಟಿದಾಗಲೇ ಅಮ್ಮ ತೀರಿಕೊಂಡಳಂತೆ,ಒಂದು ವರ್ಷದ ಮಗುವಾಗಿದ್ದಾಗ ತೊಟ್ಟಿಲಲ್ಲಿ ಒಂದೇಸಮನೆ ಅಳುತ್ತಿರುವಾಗ ಮಂತ್ರಪಟನೆ ಮಾಡುತ್ತಿದ್ದ ಕಂಠೀಜೋಯಿಸರಿಗೆ ಸಿಟ್ಟುಬಂದು ತೊಟ್ಟಿಲನ್ನು ಮಳೆನೀರು ಸುರಿಯೋ ಸೂರುಕಟ್ಟಿನ ಕೆಳೆಗೆ ಇಟ್ಟು ಬಂದರಂತೆ, ತನ್ನ ಮುಖ ಬೀಳೋ ನೀರಿನ ಕೆಳೆಗೆ ಇರದೆ ಕಾಲು ಮಾತ್ರ ಇತ್ತಂತೆ ಅದನ್ನು ಅಕ್ಕಮ್ಮ ನೋಡಿದ್ದರಿಂದು ತಾನು ಸಾಯದೇ ಉಳುಕೊಂಡೆ. ಅಂದೇ ಸಾಯಬೇಕಾದವಳು ತನ್ನ ಜೀವನದಲ್ಲಿ ಇಷ್ಟೆಲ್ಲಾ ಕಷ್ಟ ಪಟ್ಟು ಸಾಯುತ್ತಿರುವುದು ಏಕೆ ಎಂದು ಅಯ್ಯನವರನ್ನು ಪ್ರಶ್ನಿಸಿದಾಗ ಅವರಿಗೆ ಉತ್ತರ ತೋಚಲಿಲ್ಲ*.
ಮಕ್ಕಳಾದ ಪಾರ್ವತಿ, ರಾಮಣ್ಣನನ್ನು ಕಳೆದುಕೊಂಡಾಗ ನಂಜಮ್ಮ ಅಯ್ಯನವರಿಗೆ ಪ್ರಶ್ನೆ ಕೇಳುತ್ತಾಳೆ. *ತಾಯಿಯ ಕಣ್ಣುಮುಂದೆ ಮಕ್ಕಳು ಏಕೆ ಸಾಯುತ್ತಾರೆ, ದೇವರು ಏಕೆ ಇಷ್ಟು ಪರೀಕ್ಷೆ ಮಾಡುತ್ತಾನೆಂದಾಗ, ಅವರು ಕೃಷ್ಣನು ತನ್ನ ತಾಯಿಯಾದ ಗೋಪಿಕೆಯ ಪ್ರೀತಿಯನ್ನು ಪರೀಕ್ಷೆ ಮಾಡುವ ಕಥೆಯನ್ನೂ ವಿವರಿಸುತ್ತಾರೆ. ಕೃಷ್ಣನು ತಾನು ಸತ್ತರೆ ನೀನೇನು ಮಾಡುತ್ತಿಯಾ ಎಂದಾಗ ಆಕೆ ನಿನ್ನ ಬಿಟ್ಟು ನಾನು ಇರಲು ಸಾಧ್ಯವಿಲ್ಲ ನಾನು ನಿನ್ನ ಜೊತೆ ಬಂದುಬಿಡುತ್ತೇನೆ ಎನ್ನುತ್ತಾಳೆ, ಕೃಷ್ಣನು ನೀರಿನೊಳಗೆ ಬಿದ್ದಾಗ ಅವನು ಮುಳುಗಿಹೋದಾಗ ಗೋಪಿಕೆಯು ಸಾಯುವುದಕ್ಕೆ ಹಿಂಜರಿಯುತ್ತಾಳೆ. ಎಷ್ಟೋ ಹೊತ್ತಾದಮೇಲೆ ಕೃಷ್ಣ ಪ್ರತ್ಯಕ್ಷವಾಗಿ ಇದೇನಾ ನಿನ್ನ ಪ್ರೀತಿ ಎಂದು ಜಗತ್ತಿನಲ್ಲಿ ತಾಯಿಯ ಕಣ್ಣುಮುಂದೆಯೇ ಮಕ್ಕಳು ಸಾಯಲಿ ಎಂದು ಶಾಪಕೊಡುತ್ತಾನೆ. ಇದು ನಿಜವೋ ಅಥವಾ ಅಯ್ಯನವರು ಆ ಸಂದರ್ಭಕ್ಕೆ ಹೇಳಿದರೋ ತಿಳಿಯದು ಆದರೆ ನಂಜಮ್ಮನಿಗೆ ದುಃಖವಾಗುತ್ತದೆ ಅಂದು ಗೋಪಿಕೆ ಒಬ್ಬಳು ನೀರಿನಲ್ಲಿ ಮುಳುಗಿದ್ದರೆ ಪ್ರಪಂಚದಲ್ಲಿ ಯಾವ ತಾಯಿಗೂ ಮಕ್ಕಳನ್ನು ಕಳೆದುಕೊಂಡ ಸಂಕಟ ವಿರುತ್ತಿರಲೆಂದು*. ನರಸಿ ಆಕೆ ವೇಶ್ಯೆಯಾದರೂ, ಆಕೆಯ ವೃತ್ತಿ ಎಂಥದೇ ಆದರೂ ನಂಜಮ್ಮನ ಇಬ್ಬರ ಮಕ್ಕಳನ್ನು ಕಳೆದುಕೊಂಡು ವಿಶ್ವನಿಗೂ ಜ್ವರ ತಗುಲಿದಾಗ ನರಸಿ ಹಾಗು ಅಯ್ಯನವರು ವಿಶ್ವವನ್ನು ಬಚಾವು ಮಾಡಿಸುತ್ತಾರೆ, ಆಕೆಯು ಎಂಥವಳೇ ಆಗಿರಲಿ ಆಕೆಯಲ್ಲಿರುವ ಮಾನವತ್ವ ಮೆಚ್ಚಬೇಕಾದದ್ದೆ. *ನಂಜಮ್ಮನಿಗೆ ಪ್ಲೇಗ್ ಆದಾಗ ನರಸಿ ಅಯ್ಯನವರನ್ನು ಯಾಕೆ ದೇವರು ಆಯ್ಯಮ್ಮನಿಗೆ ಜೀವನ ಪೂರ್ತಿ ಕಷ್ಟಗಳನ್ನೇ ಕೊಡುತ್ತಿದ್ದಾನೆ ಏಕೆ ಇಷ್ಟು ಪರೀಕ್ಷೆ*. ಇವರಿಬ್ಬರ ಪ್ರಶ್ನೆಯಿಂದ ಅಯ್ಯನವರು ನಿರುತ್ತರರಾಗು���್ತಾರೆ.
ಅಯ್ಯನವರು ನಂಜಮ್ಮನ ಜೀವನವನ್ನು ಒಮ್ಮೆ ತಿರುವಿ ಹಾಕುತ್ತಾರೆ, _ಆಕೆಯು ಮದುವೆಯಾಗಿ ರಾಮಸಂದ್ರಕ್ಕೆ ಬಂದದ್ದು, ಬಂದ ಹೊಸದರಲ್ಲಿ ಯಾರ ಕೈಲೂ ಮಾತಾನಾಡುತ್ತಿರಲಿಲ್ಲ, ಅತ್ತೆ ಮನೆಯ ಸೊಸೆಯಂತೆ ಇದ್ದಳು, ಆದರೆ ಗಂಗಮ್ಮ ಸೊಸೆಯಂತೆ ಕಾಣಲೇ ಇಲ್ಲ, ಈಕೆಯನ್ನು ಬಾಳಿಸದ ಗಂಡ, ಕಂಠೀಜೋಯೀಸರು ಶಿವೇಗೌಡನಿಂದ ಶಾನುಭೋಗಿಕೆ ಇಸಿಕೊಂಡು ಚನ್ನಿಗರಾಯರಿಗೆ ವಹಿಸಿಕೊಟ್ಟದ್ದು, ಆದರೆ ಶಾನುಭೋಗಿಕೆ ಲೆಕ್ಕ ಬರೆಯುವುದು, ಇತರೆ ಶಾನುಭೋಗಿಕೆಯನ್ನು ಆಕೆಯು ಮಾಡುತ್ತಿದ್ದುದು, ಆಕೆ ಮಾಡುತ್ತಿದ್ದುದಕ್ಕೆ ಬದುಕುಳಿದರು ಇವರೆಲ್ಲ, ಮಧ್ಯದಲ್ಲಿ ತಾಯಿ ಮಗನ ಬೇಜವಬ್ದಾರಿಯಿಂದ ಜಮೀನು ಕಳಕೊಂಡದ್ದು ಆಕೆ ಎಷ್ಟು ಪ್ರಯತ್ನಪಟ್ಟರೂ ಉಳಿಸಿಕೊಳ್ಳಲಾಗಲಿಲ್ಲ, ಅಯ್ಯಾಶಾಸ್ತ್ರಿಗಳು, ಅಣ್ಣಾಜೋಯಿಸರು ಇವರಿಗೆ ಬಹಿಷ್ಕಾರ ಹಾಕಿದಾಗ ಚನ್ನಿಗರಾಯರು ಗಂಗಮ್ಮ ಈಕೆಯನ್ನು ದೂರ ಮಾಡಿದ್ದು, ಏನೋ ಗುಂಡೇಗೌಡರದು ದೊಡ್ಡ ಹೃದಯ ಅವರದೇ ಒಂದು ಹಾಳು ಬಿದ್ದಿರುವ ಮನೆಯಲ್ಲಿ ಇರುವುದಕ್ಕೆ ಆಶ್ರಯಕೊಟ್ಟದ್ದು. ಅಂತೂ ತನ್ನ ಜೀವನವೆಲ್ಲಾ ಕಷ್ಟಪಟ್ಟು ತನಗೆ ಹೊಟ್ಟೆಗಿಲ್ಲದಿದ್ದರೂ ಮಕ್ಕಳನ್ನು ಬೆಳೆಸಿ ಓದಿಸಿದಳು,ಮಳೆ ಬೆಳೆ ಇಲ್ಲದೆ ಊರಿಗೆ ಬರ ಬಂದಾಗ ಕಷ್ಟ ಪಟ್ಟು ಮಕ್ಕಳನ್ನು ಸಾಕಿದ್ದು, ತನ್ನ ಮಕ್ಕಳಿಗೂ ಅಷ್ಟೆ ಅಮ್ಮನೆಂದರೆ ಎಷ್ಟು ಪ್ರೀತಿ ತಂದೆಯ ಗುಣವನ್ನು ತಿಳಿದ ಮಕ್ಕಳು ಆತನನ್ನು ಕಂಡರೆ ಆಗುತ್ತಿರಲಿಲ್ಲ. ಅಂತೂ ಪಾರ್ವತಿಗೆ ಮದುವೆಯೂ ಮಾಡಿದಳು, ಮದುವೆಯ ದಿನ ಚೆನ್ನಿಗರಾಯರು ತನಗೆ ಕಲಾಪತ್ತಿನ ಪಂಚೆಯೇ ಬೇಕೆಂದು ಹಟಹಿಡಿದುದು, ರಾಮಣ್ಣನಿಗೆ ಉಪನಯನವನ್ನೂ ಮಾಡಿಸಿದಳು. ಶಾನುಭೋಗಿಕೆಯಲ್ಲಿ ಬರುವ ಹಣ, ಎಲೆ ಹಚ್ಚುವುದರಲ್ಲಿ ಬರುವ ಹಣ ಚನ್ನಿಗರಾಯರಿಗೆ ಕಾಣದೆ ಮಕ್ಕಳ ಭವಿಷ್ಯಕ್ಕಾಗಿ ಕೂಡಿರುತ್ತಿದ್ದಳು, ಕಾರಣ ಆತನಿಗೆ ದುಡ್ಡು ಕಂಡರೆ ಎಲ್ಲಾ ತಿಪಟೂರಿನ ಹೋಟಲು ಪಾಲಾಗುತ್ತಿತ್ತು. ತಾನಾಯಿತು ತನ್ನ ಹೊಟ್ಟೆಪಾಡಾಯಿತು, *ಗಂಡ ಹೆಂಡ್ತೀನ ಹೊಡೆದರೂ ಸರಿ, ಅವಳು ಉಂಡಳೇ ಉಪವಾಸ ಮಾಡಿದಳೇ, ಮಕ್ಕಳ ಹೊಟ್ಟೆಗೆ ಏನಾಯ್ತು ಅಂತ ಕೇಳುವಷ್ಟಾದರೂ ಅಂತಃಕರಣ ಇಲ್ಲದಿದ್ದರೆ ಅದೆಂಥ ಸಂಸಾರ*. ಆದರೆ ಪಾರ್ವತಿಗೆ ಮದುವೆಯಾದ ಕೆಲವೇ ದಿನಗಳಲ್ಲಿ ಪ್ಲೇಗ್ ಬಡಿದು ಸತ್ತು ಹೋದದ್ದು, ಅದೇ ದಿನ ರಾಮಣ್ಣನೂ ಸತ್ತದ್ದು. ಅಂತೂ ವಿಶ್ವ ಬಚಾವಾದ. ವಿಶ್ವ ಇಲ್ಲದಿದ್ದರೆ ಆಕೆಯೂ ನೀರಿನಲ್ಲಿ ಮುಳುಗಿ ಸಾಯುತ್ತಿದ್ದಳೇನೋ ಆಕೆ ಸತ್ತರೆ ವಿಶ್ವ ತಬ್ಬಲಿಯಾದನೆಂಬ ಒಂದೇ ಕಾರಣದಿಂದ ಆಕೆ ಉಳಿದಳು.*ತಾನು ಹುಟ್ಟಿದಾಗಲೇ ಸಾಯಬೇಕಾದವಳು ಇಷ್ಟು ವರ್ಷ ಬೆಳೆದು ಇಂಥಾ ಗಂಡನ ಕೈಹಿಡಿದು, ಇಷ್ಟು ಒಳ್ಳೆ ಮಕ್ಕಳನ್ನ ಹೆತ್ತು ಅವನ್ನೂ ಕಳಕಂಡು, ಈಗ ಸಾಯಬೇಕೆ ಇದೆಲ್ಲಾ ಯಾಕೆ ಹೀಗಾಗುತ್ತೆ ಅಂದರೆ ಅಯ್ಯನವರು ಏನು ಹೇಳುವುದು*_. ನಂಜವ್ವ ಏನು ಕೆಟ್ಟದು ಮಾಡಿದಳು?ಅತ್ತೆಯ ಅವಿವೇಕ ಗಂಡನ ಹೀನತನಕ್ಕೆ ಈಕೆಯು ಪಟ್ಟ ಕಷ್ಟ. ಆದರೆ ಪ್ಲೇಗುಮಾರಿ ಇವಳ ಮನೆಗೆ, ಮಕ್ಕಳಿಗೆ, ಕೊನೆಗೆ ಇವಳಿಗೆ ಒಡೆಯಬೇಕೆ? ಇದೇನು ಶಿವಾ ನಿನ್ನ ಆಟ ಎಂದು ದುಃಖಪಡುತ್ತಾರೆ.
ನಂಜಮ್ಮ ಸತ್ತಾಗ ವಿಶ್ವ ನಂಬಲೇ ಇಲ್ಲ, ತನ್ನ ತಾಯಿ ಸತ್ತೇ ಇಲ್ಲವೆಂಬುದು ಅವನ ನಂಬಿಕೆ, ತಾಯಿ ಸತ್ತು ಮಾವನ ಮನೆಯಲ್ಲಿ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ, ಮಾವ ಅತ್ತೆ ಬಯ್ಯುವುದು, ಹೊಡೆಯುವುದು. *ಮಕ್ಕಳಿಗೆ ತಾಯಿಯಂಬವಳು ಇಲ್ಲದೇ ಇದ್ದರೆ ಖಂಡಿತಾ ತಬ್ಬಲಿಗಳಾಗುತ್ತಾರೆ*. ವಿಶ್ವವನ್ನು ಕಂಡು ಅಯ್ಯೋ ಅಂದವರು ಇಬ್ಬರೆ ಅಯ್ಯನವರು ಮತ್ತು ನರಸಿ. ಅವನು ಪಡುತ್ತಿರುವ ಕಷ್ಟಗಳು ಇವರಿಗೆ ತಿಳಿದಾಗ ಅಯ್ಯನವರೆ ಅವನನ್ನು ಸಾಕಿ ಓದಿಸಲು ನಿಶ್ಚಯಮಾಡಿ ಅವನನ್ನು ನಾಗಲಾಪುರದಿಂದ ಕರೆದುಕೊಂಡು ಹೊರಟುಹೋಗುತ್ತಾರೆ.
*೪ ದಿನದಲ್ಲಿ ಈ ಕಾದಂಬರಿ ಓದಿ ಮುಗಿಸಿದ ಮೇಲೆ ಇಲ್ಲಿ ಬರುವ ಕೆಲವು ಪಾತ್ರಗಳು ಮನಸ್ಸಿನಲ್ಲೇ ಉಳಿದುಬಿಟ್ಟಿದೆ, ಮಕ್ಕಳು ತಂದೆ ಇಲ್ಲದೇ ಬದುಕಬಹುದು, ಆದರೆ ತಾಯಿಯಿಲ್ಲದ ಬದುಕು ನರಕವೇ, ಕಾದಂಬರಿ ಉದ್ದಕ್ಕೂ ಈ ತಾಯಿಪಟ್ಟ ಕಷ್ಟಗಳು ಕಣ್ಣೀರು ತರಿಸುತ್ತದೆ*
ನಾ ಡಿಸೋಜಾ ಅವರ ದ್ವೀಪ ಕಾದಂಬರಿಯಲ್ಲಿ ಮುಖ್ಯ ಪಾತ್ರವಾದ ಹೆಂಗಸು ತನ್ನ ಬೇಜಾವಾಬ್ದಾರಿ ಗಂಡನನ್ಙು ಸಂಭಾಳಿಸಿಕೊಂಡು ತನ್ನ ಸಂಸಾರವನ್ನು ಉಳಿಸಿಕೊಳ್ಳುವ ರೀತಿ ಇಲ್ಲಿಯೂ ನಂಜಮ್ಮ ತನ್ನ ಬೇಜಾವಾಬ್ದಾರಿ ಗಂಡ ಚೆನ್ನಿಗರಾಯರನ್ನು ಸಂಭಾಳಿಸಿಕೊಂಡು ಹಾಗೂ ಎಲ್ಲಾ ಕಷ್ಟಗಳಿಂದ ಮೇಲೆದ್ದು ಬರುವ ರೀತಿ ಆಕೆಯ ಮೇಲೆ ಅತಿಯಾದ ಗೌರವ ಬೆಳೆಯುವಂತೆ ಮಾಡುತ್ತದೆ ಕೃತಿ. ರಾಮಸಂದ್ರ ಎಂಬ ಹಳ್ಳಿಯಲ್ಲಿ ನಮ್ಮನ್ನು ಹಳ್ಳಿಯವರನ್ನಾಗಿಸಿ ಕಥೆಯ ಆಳಕ್ಕೆ ಇಳಿಸಿ ನಂಜಮ್ಮನನ್ನು ನಮ್ಮ ಹತ್ತಿರದ ಸಂಭಂದಿಯೇನೋ ಎಂಬತೆ ಅನಿಸಿಬಿಡುತ್ತದೆ. ಇಂತಹ ಕಾದಂಬರಿಯನ್ನು ಓದಿ ಮುಗಿಸಿ ದೀರ್ಘ ಉಸಿರು ತೆಗೆದು ಬಿಡುವಾಗ ಭೈರಪ್ಪನವರು ಸರಸ್ವತಿ ಪುತ್ರರೇ ಸರಿ ಎನ್ನಿಸಿಬಿಡುತ್ತದೆ