ಸೃಷ್ಟಿಶಕ್ತಿಯಿಂದ ವಿಜ್ರಂಭಿಸುವ ಜೇವನಪ್ರವೃತ್ತಿ ಮತ್ತು ಆ ಶಕ್ತಿಯನ್ನು ಹತ್ತಿಕ್ಕುವ ಜೀವನಪರಿಸ್ಥಿತಿಯ ತಾಕಲಾಟವೇ 'ಜಲಪಾತ'ದ ಕಥಾವಸ್ತು. ನೀರು ಮತ್ತು ಮಣ್ಣಿನ ಶಕ್ತಿಯಿಂದ ಕಂಗೊಳಿಸುವ ವನಶ್ರೀ, ಗಂಡು ಹೆಣ್ಣುಗಳ ಮೂಲಶಕ್ತಿಯಾದ ಜೀವನಮಿಕಾಸ, ಮತ್ತು ಭೌದ್ಧಿಕಸ್ತರದಲ್ಲಿ ಆವಿರ್ಭವಿಸುವ ಕಲಾಸೌನ್ದರ್ಯ - ಇವು ಮೂರು, ವಿವಿಧಸ್ತರಗಳಲ್ಲಿ ಪ್ರಕಟವಾಗುವ ಒಂದೇ ಮೂಲಶಕ್ತಿ ಎಂಬುದನ್ನು ಕಾದಂಬರಿಯ ಅಂಗಗಳಾಗಿ ಬೆಳೆದಿರುವ ಪ್ರತೀಕಗಳು ಎತ್ತಿತೋರಿಸುತ್ತವೆ. ಸಂಯೋಗದ ಕರೆ ಮತ್ತು ಕ್ರಿಯೆ, ಗರ್ಭದ ವಿಕಾಸ, ಜನನಕ್ಕೆ ಪೂರ್ವಭಾವಿಯಾದ ನೋವಿನ ಅನುಭವ, ಮೊದಲಾದ ಸೃಷ್ಟಿಯ ಹಲವು ಹಂತಗಳನ್ನು ಅನುಭವದ ಹೊಚ್ಚ ಹೊಸತನದಿಂದ ಭಾಷೆಯಲ್ಲಿ ಹಿಡಿದಿಡಲು ಅನುಕೂಲವಾಗುವಂತೆ ಕಾದಂಬರಿಯ ಕತೆಯು, ಅದರ ಮೂಲ ಪಾತ್ರಗಳಾದ ಒಂದು ಗಂಡು ಮತ್ತು ಅದರ ಹೆಣ್ಣಿನ ಸ್ವಂತ ಅನುಭವಗಳ ವರ್ಣನೆಯ ರೀತಿಯಲ್ಲಿ ಸಾಗುತ್ತದೆ.
Dr S.L. Bhyrappa is a litterateur par excellence. He writes in the south Indian language, Kannada, and has been the bestselling novelist for over 25 years now. His novels are widely translated to pan Indian languages. He is the bestselling novelist in Marathi over the past decade and is among the top-five bestselling authors in Hindi. He is a conscious artist that depicts fundamental human emotions in his novels. In addition to his profound knowledge of Indian philosophical and cultural traditions, Professor Bhyrappa has since his childhood had intense personal experiences in both rural and urban milieu. Consequently, his characters are deeply rooted in Indian soil. Seminars have been and are being held on his novels, and volumes of literary criticism have been published on his works.
His books have found their way to the curriculum of undergraduate and postgraduate degree courses of the universities in the state of Karnataka, and have been the subject of about 20 PhD dissertations. He has penned 24 novels and four volumes of literary criticism and books on aesthetics, social issues and culture. Most of his novels are translated into almost all the Indian languages and six into English. He has served as a Prof. of Philosophy over three decades at NCERT.
Dr Bhyrappa is an avid listener of both Indian and Western classical music and has a keen eye for Art. Travelling has been his paasion since childhood and he has travelled across the globe touching the glaciers of poles, forests of Amazon, deserts of Africa, bustling cities of Europe and the United States. He has trekked in the Alps, the Rockies, Andes and in Fujiama, but the Himalayas remain his greatest passion.
Academic Publications in English -------------------------------------- Values in Modern Indian Educational Thought, 1968 (New Delhi: National Council of Educational Research and Training) Truth & Beauty: A Study in Correlations, 1964 (Baroda: M. S. University Press) 20 Research Papers published in various Journals like Indian Philosophical Quarterly, Darshana International, Journal of University of Baroda
Research and Fellowship ---------------------------- National Research Professor, Government of India, 2014 One of the five members of the Indian Literary Delegation that visited China on invitation by the Government of China, 1992 Ford Foundation Award to visit the USA to study the cultural problems of Indian immigrants to the USA, 1983 British Council Fellowship tenured at the School of Education, University of London, 1977
ಕಾದಂಬರಿ ಬರೆದು ಐವತ್ತು ವರ್ಷ ಕಳೆದಿದ್ದರೂ ಕಥಾವಸ್ತು ಹಳತು ಅನಿಸುವುದೇ ಇಲ್ಲ. ಗಂಡು ಹೆಣ್ಣಿನ ಸಂಬಂಧ, ನಗರ-ಹಳ್ಳಿಗಳ ಹೋಲಿಕೆ, ಚಿತ್ರಕಲೆ-ಸಂಗೀತಗಳ ಜ್ಞಾನ ಎಲ್ಲವೂ ಅಚ್ಚುಕಟ್ಟಾಗಿ ಮೂಡಿವೆ. ಹಳ್ಳಿಗಳು ಹಳ್ಳಿಗಳಾಗಿ ಉಳಿಯುತಿಲ್ಲ ಎಂಬ ಹಳಹಳಿಕೆ ಐವತ್ತು ವರುಷಗಳ ಹಿಂದೆಯೂ ಇತ್ತು ಎಂಬುದು ವಿಶೇಷ ಅನಿಸಿತು.. ಚೆಂದದ ಓದು..
ಜಲಪಾತವನ್ನು ದೂರದಿಂದ ನೋಡಲು ಮನೋಹರವಾಗಿರುತ್ತದೆ. ಅದರ ಹತ್ತಿರತ್ತಿರ ಹೋದಾಗಲೇ ಅದು ಕೊಡುವ ಅನುಭವ ಏನೆಂದು ಗೊತ್ತಾಗೋದು. ಅದು ಎತ್ತರದಿಂದ ಧುಮುಕಿ ಭುವಿಗೆ ಬೀಳುವುದನ್ನು ನೋಡುವ ಪರಿ, ಬಿದ್ದಮೇಲೆ ಅದರಿಂದ ಉಂಟಾದ ಶಬ್ದ ತರಂಗಗಳನ್ನು ಕೇಳುವ ಪರಿ, ಅಲ್ಲಿಂದ ಹೊರಟು ಬಂದ ಮೇಲೆ ಅದರ ಬಗ್ಗೆ ಧ್ಯಾನಿಸುವ ಪರಿ, ಎಲ್ಲವೂ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವ ನೀಡುತ್ತದೆ.
ಈ ಜಲಪಾತವು ಅಷ್ಟೇ, ಇಲ್ಲಿರುವ ತಿರುಳು ಒಬ್ಬೊಬ್ಬರಿಗೆ ಒಂದೊಂದು ರೀತಿ ಅನುಭವ ನೀಡುವುದಂತೂ ನಿಜ.
ಕಲೆ ಎನ್ನುವುದು ಒಂದು ಸುಂದರ ಕ್ರಿಯೆ ಅದು ಕೊಡುವ ಆನಂದ ಅನಂತವಾದುದು. ಇಂತಹ ಕಲೆಯ ಪೂರಕವಾಗಿ ಶ್ರೀಪತಿ ಮತ್ತು ಭೂದೇವಿಯ ಪಾತ್ರಗಳು.
ಭೂದೇವಿ ಸುಸಂಸ್ಕೃತ ಹೆಣ್ಣು. ಸಂಗೀತದಲ್ಲಿ ಆಸಕ್ತಿ. ಗಂಡ ಶ್ರೀಪತಿಯು ಅವಳನ್ನು ಮನೆಯ ಹತ್ತಿರವೇ ಇದ್ದ ಸಂಗೀತ ಪಾಠಶಾಲೆಗೆ ಕಳುಹಿಸುತ್ತಾನೆ. ಆದರೆ ನಾನಾ ಒತ್ತಡಗಳಿಂದ ಅವಳಿಗೆ ಸರಿಯಾಗಿ ಸಂಗೀತದಲ್ಲಿ ತೊಡಗಿಸಿಕೊಳ್ಳಲು ಆಗುವುದಿಲ್ಲ. ಆದರೆ ತನ್ನ ಗಂಡನ ಚಿತ್ರಕಲೆಯ ಬಗ್ಗೆ ಹೆಮ್ಮೆ. ಅವನ ಕೆಲಸಕ್ಕೆ ಒತ್ತಾಸೆಯಾಗಿ ಮತ್ತು ಅವನ ಜೊತೆ ಎಲ್ಲ ಕಷ್ಟ ನಷ್ಟಗಳ, ಸಂಕಟ- ಸಂತೋಷಗಳನ್ನೂಳಗೊಂಡ ಜೀವನ ಸಾಗಿಸುತ್ತಿರುತ್ತಾಳೆ.
ಶ್ರೀಪತಿ ಬೊಂಬಾಯಿನಗರದ ಕಂಪೆನಿಯೊಂದರಲ್ಲಿ ಪ್ರಿಲಾನ್ಸ್ ಪೇಂಟರ್. ಅವನ ನೆಚ್ಚಿನ ಚಿತ್ರಕಲೆಗೆ ಸಂಬಂಧಪಟ್ಟಂತೆ ಕೆಲಸ ಅದು. ಆದರೂ ತನ್ನ ಮನಸ್ಸಿಗೆ ಸಮಾಧಾನ ತರುವಂಥದಲ್ಲ. ಚಿತ್ರಕಲೆಯನ್ನು ಅಭಿವ್ಯಕ್ತಿ ಪಡಿಸುತ್ತಿರುವುದು ತನ್ನ ಕಂಪೆನಿಗಾಗಿ ಹೊರತು, ತನ್ನ ಮನಸ್ಸಿಗೆ ತಕ್ಕಂತೆ ಅಲ್ಲ ಎನ್ನುವುದು ಅವನ ಅಭಿಪ್ರಾಯ. ಇದರ ನಡುವೆಯೂ ತನ್ನ ಹೆಂಡತಿಯ ಒತ್ತಾಸೆಯಂತೆ, ಎರಡನೇ ಮಗುವಿನ ಬಸುರಿನ ಸಮಯದಲ್ಲಿ ಖಂಡಾಲ ಪ್ರದೇಶಕ್ಕೆ ಹೋಗಿ, ಅದರ ಚಿತ್ರಣವನ್ನು ತನ್ನ ಮನಸ್ಸಿಗೆ ತೃಪ್ತಿಯಾಗುವಂತೆ ಚಿತ್ರಿಸುತ್ತಾನೆ. ಆದರೆ ಅವನ ಆರ್ಥಿಕ ಪರಿಸ್ಥಿತಿ ಆ ತೃಪ್ತಿಯನ್ನು ಕಸಿದುಕೊಳ್ಳುತ್ತದೆ. ಅಲ್ಲಿಂದಲೇ ಅವನಿಗೆ ತನ್ನ ಊರಾದ ಅಗ್ರಹಾರಕ್ಕೆ ಹೋಗುವ ಯೋಚನೆ ಹುಟ್ಟಿಕೊಳ್ಳುತ್ತದೆ.
ಇವೆರೆಡು ಪಾತ್ರಗಳ ಮೂಲಕ ಚಿತ್ರಕಲೆ ಮತ್ತು ಸಂಗೀತದ ಬಗ್ಗೆ, ಕಲಾವಿದರ ಮನಸ್ಥಿಯ ಬಗ್ಗೆ ಅನೇಕ ವಿಷಯಗಳು ತಿಳಿಯುತ್ತವೆ.
ನಗರವನ್ನು ಬಿಟ್ಟಿ, ಹಳ್ಳಿಯನ್ನು ಸೇರಿ, ಸುಂದರ ಜೀವನ ಸಾಗಿಸಬಹುದೆಂಬ ಕಲ್ಪನೆಯಲ್ಲಿ, ನಗರದಲ್ಲಿದ್ದಾಗ ಉಂಟಾಗುವ ಮಾನಸಿಕ, ದೈಹಿಕ ಚಡಪಡಿಕೆಗಳು, ಆರ್ಥಿಕ ಹಿಂಜರಿತಗಳು ಇವುಗಳನ್ನೆಲ್ಲ ಸುಧಾರಿಸಬಹುದೆಂದು ಯೋಚಿಸಿ ಹಳ್ಳಿಗೆ ಹಿಂತಿರುಗಿದಾಗ ತನ್ನ ಕಲ್ಪನಾಲೋಕದ ಹಳ್ಳಿಗೂ ಈಗ ಇರುವ ಹಳ್ಳಿಗೂ ಇರುವ ಭಾರಿ ವ್ಯತ್ಯಾಸ ಅರಿವಿಗೆ ಬಂದು ಈಗಿರೋ ಹಳ್ಳಿಗೆ ಹೊಂದಿಕೊಳ್ಳುವುದು ತಮ್ಮಂತವರಿಗೆ ಕಷ್ಟವೆಂದು ತಿಳಿದು, ಮತ್ತೆ ನಗರಕ್ಕೆ ಶ್ರೀಪತಿಯ ಕುಟುಂಬ ಹಿಂತಿರುಗವ ಹಾದಿಯೊಂದಿಗೆ ಕಾದಂಬರಿ ಮುಗಿಯುತ್ತದೆ.
ಹಾಗೇ, ಕಾಮವೆಂದರೆ ಗಂಡುಹೆಣ್ಣಿನ ಬಂಧನದ ಕೊಂಡಿ, ಮಾನವನ ದೈಹಿಕ, ಮಾನಸಿಕ ನೆಮ್ಮದಿಗೆ ಸಹಕಾರಿ, ಅದರಿಂದ ಆನಂದವನ್ನು ಪಡೆಯಬಹುದು ಜೊತೆಗೆ ಅಂಧ:ಪತನಕ್ಕೂ ಬೀಳಬಹುದು. ಅದನ್ನು ವೈಜ್ಞಾನಿಕ ದೃಷ್ಟಿಯಲ್ಲಿ ನೋಡುವುದು ಬೇರೆ, ಭಾರತೀಯ ಮನಸ್ಥಿತಿಯಲ್ಲಿ ನೋಡುವುದು ಬೇರೆ, ಹೀಗೆ ವಿವಿಧ ಪಾತ್ರಗಳಲ್ಲಿ ಅದನ್ನು ಚಿತ್ರಿಸಲಾಗಿದೆ.
ಪಶು ಗೈನಾಕಲಜಿಸ್ಟ್ ಆಗಿ, ಕಾಮವೆಂದರೆ ರತಿ ಸುಖವಷ್ಟೆ. ವಂಶಾಭಿವೃದ್ಧಿ ಏನಿದ್ದರೂ ಉತ್ತಮ ತಳಿಗಳಿಂದ ಆಗಬೇಕು ಎಂದು, ತನ್ನಿಂದ ಹುಟ್ಟುವ ಮಕ್ಕಳು ರೋಗಿಗಳಾಗುವುದಕ್ಕಿಂತ ಹುಟ್ಟುವುದೇ ಬೇಡವೆಂದು ನಿರ್ಧರಿಸಿರುವ ನಾಡಗೌಡ.. ಆದರೆ, ಅವನ ಹೆಂಡತಿ ಭಾರತೀಯ ಮನಸ್ಸುಳ್ಳವಳಾಗಿ, ವಿಜ್ಞಾನದೃಷ್ಟಿ ಅರ್ಥವಾಗದಿದ್ದರೂ, ಅದರ ಅರ್ಥಕ್ಕಿಂತ ಹೆಚ್ಚಾಗಿ ಮಗುವನ್ನು ಹಡೆದು ತಾಯಿಯಾಗುವ ಸುಖವನ್ನು ಪಡೆಯುವುದೇ ಮೇಲು ಎಂದು ಹಪಹಪಿಸುವ ಗೃಹಿಣಿಯಾಗಿ ಸುಧಾಬಾಯಿ. ಹೀಗೆ ಅವರಿಬ್ಬರ ಮಧ್ಯೆ ವೈಜ್ಞಾನಿಕತೆ ಮತ್ತು ವೈಚಾರಿಕತೆಗಳ ನಡುವಿನ ಸಂಘರ್ಷಗಳು, ತಾಕಲಾಟಗಳು ಉಂಟಾಗಿ, ಕೊನೆಗೆ ಅವರಿಬ್ಬರ ಜೀವನ ದುರಂತದಲ್ಲಿ ಕೊನೆಯಾಗುತ್ತದೆ.
ಹೀಗೆ ಸಾಗುವ ಕಥೆಯಲ್ಲಿ, ಮಧ್ಯಮ ವರ್ಗದ ಕಷ್ಟ ನಷ್ಟಗಳನ್ನು, ಸಂತೋಷದ ಕ್ಷಣಗಳನ್ನು, ಸಂಸಾರದ ಸೂಕ್ಷ್ಮಗಳನ್ನು, ಸತಿಪತಿಯ ಬಾಂಧವ್ಯವನ್ನು, ಬೊಂಬಾಯಿ ನಗರದ ಚಿತ್ರಣ, ಹಳ್ಳಿಗಳು ಬದಲಾಗುತ್ತಿರುವ ಪರಿಯನ್ನು (60-70ರ ದಶಕಗಳಿಗೂ ಈಗಲೂ ಅಂಥಹ ವ್ಯತ್ಯಾಸವೇನಿಲ್ಲ), ಪ್ರಾಮಾಣಿಕತೆ, ಸತ್ಯತೆಯಿಂದ ಧರ್ಮಕ್ಕೆ ಅನುಗುಣವಾಗಿ ಬದುಕುತ್ತಿದ್ದ ಶ್ರೀಪತಿ ಮಾವನ ಜೀವನ.. ಅವರ ತದ್ವಿರುದ್ಧವಾಗಿ ಅನ್ನೋದಕ್ಕಿಂತಲೂ ಈಗಿನ ಕಾಲಕ್ಕೆ ತಕ್ಕಂತೆ ಬದುಕುತ್ತಿರುವ ಮಾವನ ಮಗ ಸುಬ್ಬುವಿನ ಜೀವನ, ಜೋಗದ ಜಲಪಾತ ಮತ್ತು ಖಂಡಾಲ ಅರಣ್ಯ ಪ್ರದೇಶವನ್ನ ಚಿತ್ರಕಲಾವಿದ ನೋಡುವ ಪರಿ, ಅವುಗಳ ಸುಂದರ ವರ್ಣನೆ.. ಹೆಚ್ಚಾಗಿ ಹೆಣ್ಣಿನ ಪ್ರಸವ ವೇದನೆಯನ್ನು ಚಿತ್ರಿಸುವ ಪರಿ ಅಸಾಧ್ಯ (ಓದುವಾಗ ಸಂಕಟವಾಗುತ್ತಿರುತ್ತೆ). ಎಲ್ಲವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.
ಕಲಾ ಭಾಗಗಳಾದ ಸಂಗೀತ, ಚಿತ್ರಕಲೆ ಮತ್ತು ಜೀವನದ ಭಾಗಗಳಾದ ಕೆಲಸ, ಬ್ರಹ್ಮಚರ್ಯ, ಸಂತೋಷ, ದುಃಖ, ಕಾಮ ಇವುಗಳನ್ನು ಬೆರೆಸಿ ಚಿತ್ರಿಸುವ ರೀತಿ ಅನನ್ಯ. ಗಾತ್ರದಲ್ಲಿ ಚಿಕ್ಕದಾದರೂ ಕೃತಿಯೊಳಗಿನ ವಿಚಾರಧಾರೆ ಕೊಡುವ ಆನಂದ ದೊಡ್ಡದು.
ಅತ್ಯುತ್ತಮ ಕೃತಿ.
This entire review has been hidden because of spoilers.
It very long to read, good one can be read once., yet again no less for thoughts put in. Has given a different kind of thought process thru Nadagoudar concept though it cannot be applied practically. The pain a women undergo in delivery well explained.
ಜೀವನದ ಕೆಲ ಗಹನವಾದ ವಿಷಯಗಳನ್ನು ಆಳವಾಗಿ ಚರ್ಚಿಸುವ ಕಾದಂಬರಿ "ಜಲಪಾತ".
ಸೃಷ್ಟಿಶಕ್ತಿಯೇ ಜೀವನದ ಮೂಲ. ಆ ಶಕ್ತಿಯೇ ಜೀವನಪ್ರವೃತ್ತಿ ಮತ್ತು ಜೀವನಪರಿಸ್ಥಿತಿಗಳ ನಡುವಿನ ತಾಕಲಾಟದ ಮೂಲವೂ ಆದರೆ? ಶೇಕಡಾ ೯೦ ರಷ್ಟು ಕತೆ ಮುಂಬಯಿಯಲ್ಲಿ ನಡೆಯುವುದರಿಂದ, ೬೦ ನೇ ದಶಕದ ಮುಂಬಯಿಯ ಜೀವನಶೈಲಿಯನ್ನು ಒಬ್ಬ ಚಿತ್ರಕಲಾವಿದನ ದೃಷ್ಟಿಕೋನದಿಂದ ಕಾಣಬಹುದು. ಮುಂಬಯಿ ಎನ್ನುವುದು ಜೀವನ ನಾಡಿಗಳನ್ನು ಆಳುವ ಹೃದಯ. ಇಂತಹ ಊರಿನಲ್ಲಿ ಚಿತ್ರ ಉಳಿಯುತ್ತದೆಯೇ? ಸಂಗೀತ ಹುಟ್ಟುತ್ತದೆಯೇ? ಪ್ರಜ್ಞೆಯು ತಲುಪದ ಯಾವುದೋ ವೈಜ್ಞಾನಿಕ ವಾದದ ಆಧಾರದ ಮೇಲೆ ನಮ್ಮ ವಿಶ್ವಾಸಗಳನ್ನು ಗಾಳಿಗೆ ತೂರಲಾಗುತ್ತದೆಯೇ? ಜೀವಸೃಷ್ಟಿಯೆಂದರೆ ದುರಂತವೇ? ಜೀವಸೃಷ್ಟಿ ಮತ್ತು ರತಿಗಳೆರಡೂ ಭಿನ್ನವಾದ ಕ್ರಿಯೆಗಳೇ? ಹೀಗೆ ಕಾದಂಬರಿಯ ಕತೆಯು, ಮೂಲ ಪಾತ್ರಗಳಾದ ಒಂದು ಗಂಡು ಮತ್ತು ಹೆಣ್ಣಿನ ಸ್ವಂತ ಅನುಭವಗಳ ವರ್ಣನೆಯ ರೀತಿಯಲ್ಲಿ ಸಾಗುತ್ತದೆ. ಗರ್ಭದ ವಿಕಾಸ ಮತ್ತು ಜನನಕ್ಕೆ ಪೂರ್ವಭಾವಿಯಾದ ಗರ್ಭಿಣಿಯ ನೋವಿನ ಅನುಭವವನ್ನು ವಿವರಿಸಿರುವ ರೀತಿಯಂತೂ ಅತ್ಯದ್ಭುತ.
ಜೀವನ ಒಂದು ನಿತ್ಯೋತ್ಸವ; ಜಗತ್ತು ಅದಕ್ಕೆ ಚೇತನ! ಆದರೆ ನಮ್ಮಲ್ಲಿ ಎಷ್ಟು ಜನ ಇದನ್ನ ಆಚರಿಸ್ತಿವಿ, ಅಲ್ಲವೇ? ಸಂಸಾರ, ಸಂಚಾರ, ಸಂಪಾದನೆ, ಧ್ಯೇಯ, ಜವಾಬ್ದಾರಿಗಳ ಸಂಕೋಲೆಗಳಲ್ಲಿಯೇ ಬಂಧನವಾಗಿರ್ತಿವಿ! ಮತ್ತೆ ಈ ನಿತ್ಯೋತ್ಸವದಲ್ಲಿ ಭಾಗಿಯಾಗೋದು ಯಾವಾಗ? ಈ ಸಮಸ್ತ ಸೃಷ್ಟಿಯನ್ನ ಆರಾಧಿಸುವುದು ಯಾವಾಗ? ಈ ಜೀವನ್ಮರಣಗಳ ಅರ್ಥವೇನು? ನಾವೇ ನಿರ್ಮಿಸಿಕೊಂಡ ಈ ಬಂಧನದಿಂದ ಬಿಡುಗಡೆ ಯಾವಾಗ? ಜೀವನದ ನಿಜವಾದ ಸಂಪಾದನೆ ಯಾವುದು?
ಲೇಖಕರ ನಿರಾಳವಾದ ವಿಚಾರ ಲಹರಿಯಿಂದ ಸೃಷ್ಟಿಯಾದ ಇಂತಹ ಕಾದಂಬರಿಗಳಲ್ಲಿ ಓದುಗರಿಗೆ ಹಲವು ಆಳವಾದ ಚಿಂತನೆಗಳಿಗೆ ಪುಷ್ಟಿ ದೊರೆಯುವುದು. ಓದುಗರ ಭಾವನಾ ಲಹರಿಯನ್ನು ಮೀಟುವ ಈ ಪುಸ್ತಕದಲ್ಲಿ ಭೈರಪ್ಪನವರು ಜಟಿಲವಾದ ಮಾನವನ ಸಾಮಾಜಿಕ ವ್ಯವಹಾರಗಳಲ್ಲಿನ ಕೆಲವು ಸಂಕೀರ್ಣತೆಗಳನ್ನ ಇಲ್ಲಿ ತೆರೆದಿಡಲು ಪ್ರಯತ್ನಿಸಿದ್ದಾರೆ ಅಂತ ನನ್ನ ಅನಿಸಿಕೆ. ಹಾಗೆಯೇ ಜೀವನದ ಅರ್ಥವೇನು ಎನ್ನುವ ಪ್ರಶ್ನೆಯೂ ನನ್ನನ್ನು ಇಲ್ಲಿ ಕಾಡದಯೇ ಇರಲಿಲ್ಲ ಕೂಡ!
ಮನುಷ್ಯನ ಶರೀರದಲ್ಲಿ ಪರಸ್ಪರ ಸಂಬಂಧ ಕಲ್ಪಿಸಿಕೊಂಡು ಪಸರಿಸಿರುವ ನರಮಂಡಳದಂತೆ ಅಥವಾ ರಕ್ತನಾಳಗಳಂತೆ ಎಲ್ಲಾ ದಾರಿಗಳು ಮುಂಬೈಯನ್ನೇ ತಲುಪುತ್ತವೆ. ನರಮಂಡಲದ ಹೋಲಿಕೆಯಂತೆ ಭಾವಿಸಿದರೆ ಮುಂಬೈ ಈ ದೇಶದ ಮೆದುಳಿನ ಕೇಂದ್ರವಾಗಬೇಕು; ರಕ್ತನಾಳಗಳು ಉಪಮಯಂತೆ ಕಲ್ಪಿಸಿದರೆ ಅದು ದೇಶದ ಹೃದಯವಾಗಬೇಕು. ಆದರೆ ಮುಂಬೈಗೆ ಮೆದುಳು ಇಲ್ಲ, ಹೃದಯವು ಇಲ್ಲ . ಆದರೂ ಅದೇ ದೇಶದ ಕೇಂದ್ರ- ಅಲ್ಲ ,ಅದೇ ದೇಶ. ಅರಿಸುತ್ತನೊಣಗಳಂತೆ ಡಬ್ಬಿಗಳಲ್ಲಿ ಅಳತೆ ಮೀರಿ ತುಂಬಿರುವ ಇತರ ಮನುಷ್ಯ ಪ್ರಾಣಿಗಳನ್ನು ಕೆಳಗೆ ಒಗೆದು ನಮಗೆ ಉಸಿರಾಡಲು ಅನುವು ಮಾಡಿಕೊಡಿ ಎಂದು ರೈಲ್ವೆಗೆ ಕಂಪ್ಲೇಂಟ್ ಬರೆಯಲು ಅನೇಕ ಬಾರಿ ಯೋಚಿಸಿದ್ದೇನೆ ಆದರೆ ಅದಕ್ಕಾಗಿ ಕಿಟಕಿಯಿಂದ ಕೆಳಗೆ ಇಳಿದರೆ ಮತ್ತೆ ಗಾಡಿಯೊಳಗೆ ತೂರಿ ಕೊಳ್ಳುವುದು ಅಸಾಧ್ಯವೆಂದು ತಿಳಿದು ಎಂದು ಕೆಳಗೆ ಇಳಿದಿಲ್ಲ. ಇಡೀ ರೈಲ್ವೆಗಳನ್ನೇ, ರೈಲು ಮಾರ್ಗಗಳನ್ನೇ ರದ್ದುಗೊಳಿಸಿ ಎಂದು ಕಂಪ್ಲೇಂಟ್ ಬರೆಯಬೇಕೆಂದು ಯೋಚನೆ ಬರುತ್ತಿದೆ" ಹೀಗೆ ಆರಂಭವಾಗುವ ಈ ಕೃತಿಯು ಸರಸ್ವತಿ ವರಪುತ್ರ ಶ್ರೀಯುತ ಎಸ್ ಎಲ್ ಭೈರಪ್ಪ ಅವರ ಮಾನಸಿನಿಂದ ಆವಿಭವಿಸಿದ ಎಂಟನೆಯ ಕೃತಿಯಾಗಿದೆ ಕಾದಂಬರಿಯ ಬಹುಭಾಗ ಮುಂಬೈನ ಮಹಾನಗರಿಯಲ್ಲಿಯೇ ನಡೆಯುತ್ತದೆ. ಈ ವಾಣಿಜ್ಯ ನಗರಿಯಲ್ಲಿ ಸಕುಟುಂಬವಾಗಿ ಬದುಕುತ್ತಿರುವ ಒಬ್ಬ ಚಿತ್ರಕಲಾ ಕಾರಣ ತೊಳಲಾಟದ ಒಂದು ಅದ್ಭುತ ಕಥಾನಕ ಆಗಿದೆ. ಶ್ರೀಪತಿ ಎಂಬ ಚಿತ್ರಕಲಾಕಾರ, ಅವನ ಪತ್ನಿಯಾದ ವಸು ಹಾಗೂ ಮುಂಬೈಯಲ್ಲಿ ಇವರ ನೆರೆಮನೆಯವರಾದ ಪಶು ವೈದ್ಯ ಡಾ. ನಾಡಗೌಡರು, ಹಾಗೂ ಅವರ ಪತ್ನಿ ಸುಧಾಬಾಯಿ ಈ ಕಾದಂಬರಿಯಲ್ಲಿ ಬರುವ ನಾಲ್ಕು ಪ್ರಮುಖ ಪಾತ್ರಗಳು. ಮುಂಬೈ ನಗರದ ವರ್ಣನೆ, ಅಲ್ಲಿ ನಡೆಯುವ ಘಟನೆಗಳು ಓದುಗನನ್ನು ನೇರವಾಗಿ ಮುಂಬೈ ನಗರಕ್ಕೆ ಒಯ್ಯುತ್ತವೆ ಅಷ್ಟು ಮೆಜೆಸ್ಟಿಕ್ ಆಗಿ ಅಲ್ಲಿನ ನಿತ್ಯ ನೈತಿಕ ಜೀವನವನ್ನು ಲೇಖಕರು ಸ್ವತಃ ಕಣ್ಣಿನಿಂದಲೇ ಕಂಡು ಅನುಭವಿಸಿ ತಮ್ಮ ಶಾಹಿಯ ಮೂಲಕ ಹಾಳೆಗೆ ಇಳಿಸಿದ್ದಾರೆ ಎಂದು ಪ್ರತಿಯೊಬ್ಬ ಓದುಗನಿಗೂ ಅನುಭವಕ್ಕೆ ಬರುತ್ತದೆ. ಕಲಾವಿದನ ಮನಸ್ಸಲ್ಲಿ ಉಂಟಾಗುವ ಹೊಯ್ದಾಟ ವೃತ್ತಿ ಹಾಗೂ ವೈಯಕ್ತಿಕ ಜೀವನದ ಸಮತೋಲನ ಹಾಗೂ ಅದರ ಮಹತ್ವ ,ದಾಂಪತ್ಯ ವ್ಯವಸ್ಥೆ, ಉದ್ಯೋಗವನ್ನು ಹೊಟ್ಟೆಗೆ ಕೂಳು ಹಾಕುವ ಜಾಗದಲ್ಲಿ ಮಾಡಬೇಕೆ? ಅಥವಾ ಕೂಳಿಗೆ ತೊಂದರೆಯಾದರೂ ಮನಸ್ಸಿಗೆ ತೃಪ್ತಿಯಾಗುವ ಜಾಗದಲ್ಲಿ ಮಾಡಬೇಕೆ,? ಕಲಾವಿದನು ಇನ್ನೊಬ್ಬರ ಕೆಳಗೆ ತನ್ನ ಕಲಾ ಶಕ್ತಿಯನ್ನು ಪ್ರವಾಹಿಸಿ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವುದು ಸರಿಯೇ ಅಥವಾ ಕಲಾ ಶಕ್ತಿಯು ಸರ್ವಸ್ವತಂತ್ರ. ಆದ್ದರಿಂದ ಅದನ್ನು ಹೊಟ್ಟೆಗೆ ಹುಟ್ಟಿಸಿಕೊಳ್ಳಲು ಬಳಸಿಕೊಳ್ಳಬಾರದು. ದಾಂಪತ್ಯದ ಫಲವಾಗಿ ಮಗುವನ್ನು ಪಡೆಯುವುದು ಪ್ರತಿ ದಂಪತಿಗಳ ಕನಸು ಆದರೆ ವರ್ತಮಾನದ ಪರಿಸ್ಥಿತಿಗೆ ಅನುಗುಣವಾಗಿ, ವೈಜ್ಞಾನಿಕ ಕಾರಣದಿಂದಾಗಿ ದಾಂಪತ್ಯ ಏನಿದ್ದರೂ ಎರಡು ಜೀವಗಳ ದೈಹಿಕ ಆಸೆಯನ್ನು ತಣಿಸಲು ಮಾತ್ರ. ಮಗುವನ್ನು ವೈಜ್ಞಾನಿಕವಾಗಿ ಕೂಡ ಆರೋಗ್ಯವಂತ ಬುದ್ದಿವಂತ ಇನ್ನೊಂದು ವ್ಯಕ್ತಿಯಿಂದ ಪಡೆಯಬಹುದು. ಇದು ಎಷ್ಟು ಸರಿ ಎಷ್ಟು ತಪ್ಪು ಸಂಸಾರಕ್ಕೆ ಮಾಡುವ ಮೋಸವೇ ಅಥವಾ ಇದು ಕೂಡ ಸಹಜವೇ ಎಂಬ ಮುಂತಾದ ವಿಷಯಗಳನ್ನು ಅದ್ಭುತವಾಗಿ ತಾರ್ಕಿಕವಾಗಿ ವಿಶ್ಲೇಷಣೆಯನ್ನು ಮಾಡುತ್ತದೆ. ಕಾದಂಬರಿಯ ಮಧ್ಯದಲ್ಲಿ ಬರುವ ಪ್ರಸವ ಸನ್ನಿವೇಶವನ್ನು ಎಂತಹ ಓದುವನನ್ನು ಕೂಡ ದಿಗ್ಮೂಢ ಡನನ್ನಾಗಿ ಮಾಡುತ್ತದೆ. ಆ ಸನ್ನಿವೇಶ ಓದಿದ ಮೇಲೆ ಎಂತಹವನಿಗೂ ಕೂಡ ನಿದ್ದೆ ಬಾರದು. ಅಷ್ಟು ಅದ್ಭುತವಾಗಿ, ಎಂತಹ ಕಲ್ಲು ಹೃದಯ ಕೂಡ ಕರಗಿ ನೀರಾಗುವಂತೆ ಸೃಷ್ಟಿಯ ಮಹಾ ಚೇತನವಾದ ಹೆಣ್ಣಿನ ಪ್ರಸವ ವೇದನೆ, ಇನ್ನೊಂದು ಚೈತನ್ಯವನ್ನು ಭೂಮಿಗಿಳಿಸುವ ಆ ಹೆಣ್ಣಿನ ಮನಸ್ಸಲ್ಲಿ ಉಂಟಾಗುವ ಸಂವೇದನೆ, ಆಲೋಚನೆಗಳನ್ನು ಅತ್ಯದ್ಭುತವಾಗಿ ಬರೆದಿದ್ದಾರೆ.
Probably this is one of the book from SL Bhyrappa that I didn't like it much. It is a small book with relatively less characters. This book basically explores the idea of recreation and the idea of sex life. Author SLB had once again let his thoughts flow in this book. The protagonist Sripathi is a self made man, an artist but with an unusal liking towards philosophy. His wife, a graduate who stood up for her husband's decisions. There is one more character Dr. Nadagowda whose thoughts about having sex and having kids is entirely a new concepts which is really difficult to understand. Overall, I somehow didn't enjoyed this book. Can be read once.
I enjoyed the description of painting and artist. I visualize the pain a mother gets during the baby delivery. I got shocked to see the different views of same topic by two different characters. Totally, I enjoyed the book, It took time to complete.
"ಕಲೆ ಎಂಬುದು ಒಂದು ಸೃಷ್ಟಿಯಲ್ಲ,ಜೀವನಾಭಿವ್ಯಕ್ತಿ.ಜೀವನದಲ್ಲಿ ಆನಂದವು ಸತ್ಯವಾಗಿದ್ದರೆ ಕಲೆಯೂ ಸತ್ಯ.ಇಲ್ಲದಿದ್ದರೇ ಕಲೆಯ ಹೆಸರನಿಲ್ಲಿ ನಡೆಯುವುದೆಲ್ಲ ತಾಂತ್ರಿಕ ದೊಂಬರಾಟ ಮಾತ್ರ"
ಮುಂಬಯಿ ಮತ್ತು ಕರ್ನಾಟಕದಲ್ಲಿ ನಡೆಯುವ ಈ ಕಥೆ, ಸಂತಾನ,ಜೀವ ನಿಯಂತ್ರಣ ಮತ್ತು ಮೃತ್ಯುವಿನ ಮೂಲ ಜಿಜ್ಞಾಸೆಯನ್ನು ಒಳಗೊಂಡಿದೆ.
ಕಲೆ,ಮೌಲ್ಯಗಳು ಮತ್ತು ಸಹಜ ಜೀವನ ,ಮುಂಬಯಿಂತಹ ವಹಾನಗರಿ ಹಾಗು ಹಳ್ಳಿಯ ಬದುಕಿನ ವಾಸ್ತವ-ವೈರುಧ್ಯಗಳು,ತನ್ನ ಪರಿವಾರ ಹಾಗು ಭೂಮಿಯನ್ನು ಉಳಿಸಲು ಪಡುವ ವ್ಯಥೆ ಹಾಗು ಹಳ್ಳಿ ಜನರ ಬದಲಾಗುತ್ತಿರುವ ದೃಷ್ಟಿಕೋನದ ಬಗ್ಗೆ ಗಮನ ಹರಿಸುತ್ತದೆ.
ಸಂತಾನ,ಜೀವನ ಮತ್ತು ಮೃತ್ಯು ಮನುಷ್ಯನ ಕೈಯಲ್ಲಿ ಇಲ್ಲದಿರುವ ಕಾರಣ ಜಗತ್ತಿನಲ್ಲಿ ಒಂದು ಪೃಕೃತಿ ಆಧಾರಿತ ಸಮತೋಲನ ಸಾದ್ಯ. ಇವೆಲ್ಲವೂ ಮನುಷ್ಯನ ವೈಜ್ಞಾನಿಕತೆ,ಮತ್ತು ವೈಚಾರಿಕತೆಯ ಭ್ರಾಂತಿಯ ವ್ಯಾಪ್ತಿಯಲ್ಲಿ ಬಂದರೇ ಅವನು,ಹುಟ್ಟು-ಸಾವಿನ ನಿಯಂತ್ರಣಕ್ಕೆ ಕೈಯಿಟ್ಟು ತನ್ನನೇ ತಾನು ಭಸ್ಮ ಮಾಡಿಕ್ಕೊಳ್ಳುತ್ತಾನೆ.ಈ ವಿಚಾರಧಾರೆ Adolf Hitler ನ ''Final Soultion" ಗೆ ಬಹು ನಿಕಟವಾದ್ದದು,ಹಾಗು ಇದಕ್ಕೆ ತದ್ವಿರುದ್ದವಾದ ಭಾರತೀಯ ಮೌಲ್ಯಗಳ ಚಿಂತನೆ ನಾವು ನೋಡಬಹುದು.
ಉತ್ತರ ಕಾಂಡ ಓದಿ ನಂತರ ಕೈಗೆತ್ತಿಕೊಂಡ ಪುಸ್ತಕವಿದು. ಭೈರಪ್ಪನವರ ಜಿಜ್ಞಾಸೆಯ spectrum ವಸುವಿನಿಂದ ಸೀತೆಗೆ, ರಾಮನಿಂದ ಶ್ರೀಪತಿಗೆ . ಆಹಾ! ಲೀಲಾ ಜಾಲ. ಸೃಷ್ಟಿಯ ಪ್ರಕ್ರಿಯೆ, ಸೃಷ್ಟಿಯ ಆನಂದ, ಶಾಂತಿ ಗಳ ನಡುವಿನ ಅಂತರ, ಸಮಾನ ಗಳನ್ನು ಚಿತ್ರಿಸುವ ರೀತಿ ಅದ್ಭುತ. ದೇಶ ವಿದೇಶಗಳ ನಡುವೆ ಅಂತರ ಕಡಿಮೆಯಾಗಿ global village ಆಗಿರುವ ಇಂದಿನ ದಿನದಲ್ಲೂ, ಬೊಂಬಾಯಿಯ ಜೀವನದ, ಅಗ್ರಹಾರ ಗತ ವೈಭವದ ವಿಷಯ ಬಹಳ ಪ್ರಸ್ತುತ. ಒಂದೇ ಗುಕ್ಕಿನಲ್ಲಿ ಓದಬಹುದಾದರೂ , ಅದು SLB ಅವರ ಬರವಣಿಗೆಯ ಜಾದು ವೇ ಹೊರತು ವಿಷಯದ ಗಹನತೆ ಕಡಿಮೆಯಿಂದಲ್ಲ!
ವೈವಾಹಿಕ ಜೀವನವನ್ನು ಬ್ರಾಡ್ ಕ್ಯಾನ್ವಾಸ್ ಆಗಿಸಿಕೊಂಡು, ಈ ಹೊತ್ತಿಗೂ relevant ಅನಿಸುವ ಹುಟ್ಟು, ಕಲೆ, ಬಡತನ ಮತ್ತು ಸಂತಾನದಂತಹ(surprisingly Eugenics) ಜೀವನ ಸೂಕ್ಷ್ಮ ವಿಚಾರಗಳನ್ನು ತಾತ್ವಿಕ ಮತ್ತು pratical ನೆಲೆಗಟ್ಟಿನಲ್ಲಿ ಚೆನ್ನಾಗಿ ಹೇಳಿದ್ದಾರೆ. ಕೊನೆಕೊನೆಗೆ ಕಣ್ಣಂಚಿನಲ್ಲಿ ನೀರು ಬರುವಾಗೆ, ಎದೆಗೆ ಭಾರವೇನಿಸುವಾಗೆ ಬರೆದಿದ್ದಾರೆ. ಆಗಾಗ್ಗೆ ಹಿಂದಿನ ಕಾಲದ ಸುಸಂಸ್ಕೃತ & so-called simple ಅಗ್ರಹಾರ ಜೀವನವನ್ನು Romanticise ಮಾಡುವ ಪ್ರವೃತ್ತಿಗೆ ಇದೊಂದು ಕನ್ನಡಿ ಇತ್ತಂಗಿದೆ. started with least expectations. didn't disappoint.
Must read for young generation to understand how the people of village and nature have been evolved and its shows how difficult to earn and grow as a farmer other side of story shows how Metropolitan city have been developed Other intersting part is 1960 Author had a scientific knowledge about method of getting healthy progeny by various scientific methods
ಬಹುತೇಕ ಎಸ್ ಎಲ್ ಭೈರಪ್ಪನವರ ಎಲ್ಲ ಕಾದಂಬರಿಗಳಲ್ಲಿ ಕಂಡು ಬರುವ ದುಃಖ, ಖಿನ್ನತೆ, ಹತಾಶೆ, ನೋವು, ಕಷ್ಟ, ಹೋರಾಟ ಅಂಶಗಳಿರುವ ಮತ್ತೊಂದು ಕಾದಂಬರಿ. ಗಂಡ ಹೆಂಡತಿಯರ ನಡುವಿನ ಸಾಮರಸ್ಯವನ್ನು ಇಬ್ಬರ ದೃಷ್ಟಿಕೋನದಲ್ಲಿ ಪ್ರತ್ಯೇಕವಾಗಿ ಸೊಗಸಾಗಿ ಬರೆದಿದ್ದಾರೆ.
ನಾಡಗೌಡರ ಅನಿಸಿಕೆಗಳನ್ನು ಮುಂದಿಟ್ಟು ಅವು ಎಷ್ಟು ಸರಿ ಅಥವಾ ತಪ್ಪು ಎಂದು ಓದುವಾಗ ಗೊಂದಲಗೊಳಿಸುತ್ತದೆ. ನೇರವಾಗಿ ಆತ ತಪ್ಪು ಮಾಡಿದನೆಂದು ಹೇಳುವ ಬದಲು ಆತನ ನಿರ್ಧಾರದಿಂದ ನಡೆದ ಘಟನೆಗಳ ಮೂಲಕ ಅವನಿಂದಲ್ಲಿ ಆತನ ಲೋಪಗಳನ್ನು ಮನವರಿಕೆ ಮಾಡಿಸಿ ಬರೆಯುವುದು ಭೈರಪ್ಪನವರ ವೈಶಿಷ್ಟ್ಯತೆ.
ಆಗಿನ ಕಾಲದ ಮುಂಬೈ ನಗರದ ಪರಿಚಯವನ್ನು ಪುಸ್ತಕದ ಉದ್ದಕ್ಕೂ ಬಣ್ಣಿಸಿದ್ದಾರೆ.
ನೋವನ್ನು ಸಹಿಸಿಕೊಳ್ಳುವ ಶಕ್ತಿ ಗಂಡಸಿಗಿಂತ ಹೆಚ್ಚು ಹೆಣ್ಣಿಗೆ ಇರುತ್ತದೆಂಬುದು, ಹೆಣ್ಣು ಜನ್ಮ ನೀಡುವ ಸಮಯದಲ್ಲಿ ಪಡುವ ನೋವನ್ನು ,ಹೆಣ್ಣಿನ ತಾಯ್ತನವನ್ನು ವಸುಂಧರೆಯ ಪಾತ್ರದ ಮೂಲಕ ಹೇಳಿದ್ದಾರೆ. ಒಂದೊಂದು ಋತುವಿನಲ್ಲೂ ಲೋಣಾವಾಳ,ಖಂಡಾಲದಲ್ಲಾಗುವ ಪರಿಸರದ ಬದಲಾವಣೆಗಳನ್ನು ಪ್ರತಿಯೊಂದು ಮಾಸದಲ್ಲಿ ವಸುಂಧರೆಯ ಗರ್ಭದಲ್ಲಾಗುವ ಬದಲಾವಣೆಗಳ ಮೂಲಕ ವಿವರಿಸಿದ್ದಾರೆ. ವಸು ಜನ್ಮ ನೀಡುವಾಗ ತಾನು ಈ ನೋವನ್ನು ಅನುಭವಿಸುವ ಬದಲು ಸಾಯುವುದೇ ಲೇಸೆಂದು ಭಾವಿಸುತ್ತಾಳೆ, ಆದರೆ ತಾನು ಈ ನೋವನ್ನು ಅನುಭವಿಸಿದರೇ ತಾನೆ ತನ್ನಲ್ಲಿರುವ ಜೀವಕ್ಕೆ ಉಸಿರು ತುಂಬುವುದೆಂದು ನೆನೆದು ನೋವನ್ನು ಅನುಭವಿಸುತ್ತಾಳೆ. ತಾಯಿಯು ಎಷ್ಟು ನೋವು ಅನುಭವಿಸಿರುತ್ತಾಳೆಯೋ ಅಷ್ಟೇ ಪ್ರೀತಿ ತನ್ನ ಮಕ್ಕಳ ಮೇಲೆ.
ಶತಾವಧಾನಿ ಗಣೇಶ್ ರವರು ಹೇಳಿದಂತೆ ಇದೊಂದು ಅಮೋಘ ಕಾದಂಬರಿಯೇ, ಪ್ರತಿಯೊಂದು ಪದವೂ ಅರ್ಥಪೂರ್ಣವಾಗಿದೆ. ಶ್ರೀಪತಿ ವಸುಂಧರೆಯನ್ನು ಮದುವೆಯಾಗಿ ಮುಂಬಯಿಯಲ್ಲಿ ಒಂದು ಜಾಹಿರಾತು ಕಂಪನಿಯಲ್ಲಿ ಕೆಲಸಮಾಡತ್ತಿರುತ್ತಾನೆ, ಅಲ್ಲಿ ತನ್ನ ಸಹಪಾಠಿ ರೆಬೆಲೋ ಸಹ ಕೆಲಸಮಾಡುತ್ತಿರುತ್ತಾಳೆ. ಶ್ರೀಪತಿಯ ಮನೆ ಹತ್ತಿರ ಇರುವ ಸಮುದ್ರಕ್ಕೂ ರೆಬೆಲೋ ಮನೆ ಹತ್ತಿರ ಇರುವ ಸಮುದ್ರಕ್ಕೂ ವ್ಯತ್ಯಾಸವನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ರೆಬೆಲೋ ಮನಸ್ಸಿನಂತೆ ಅವಳ ಸಮುದ್ರವು ಸಹ. ಸದಾ ಲಾಂಜು, ಸ್ಟೀಮರ್ಗಳು ಇರಲೇಬೇಕು ಖಾಲಿ ಇದ್ದರೆ ಅವಳ ಮನಸ್ಸು ಒಪ್ಪುವುದಿಲ್ಲ ಹಾಗೆಯೇ ಅವಳಿಗೆ ಬೇಕಾದವರು ಸದಾ ಅವಳ ಮನೆಗೆ ಬಂದುಹೋಗಬೇಕೆಂಬ ಬಯಕೆ. ಆದರೆ ಶ್ರೀಪತಿಯ ಸಮುದ್ರ ಅತ್ಯಂತ ನಿರ್ಮಲವಾದದ್ದು ಅವನಮನಸ್ಸಿನಂತೆ ಅವನ ಸಮುದ್ರವು, ಎಷ್ಟು ಅರ್ಥಪೂರ್ಣ.
ಗೋವನ್ನು ನಾವು ದೇವರೆಂದೇ ಭಾವಿಸುತ್ತೇವೆ, ಆ ಗೋವಿನ ಮಹತ್ವವನ್ನು ಹಾಗೂ ಮನುಷ್ಯನು ತನ್ನ ನೀಚ ಕಾರ್ಯಗಳಿಗೆ ಗೋವನ್ನು ಹೇಗೆ ಉಪಯೋಗಿಸಿಕೊಳ್ಳುತ್ತಾನೆಂಬುದು ಇಲ್ಲಿ ಕಾಣಬಹುದು, ಇದನ್ನು ಓದುವಾಗ ನೆನಪಾಗಿದ್ದೇ ಭೈರಪ್ಪನವರ ತಬ್ಬಲಿ ನೀನಾದೆ ಮಗನೆ ಕಾದಂಬರಿ. ಮುಂಬಯಿಯಲ್ಲಿ ಸಂಸಾರ ಸಾಗಿಸುವುದು ಕಷ್ಟವೆಂದು ಶ್ರೀಪತಿ ಮತ್ತು ವಸು ತಮ್ಮ ಹುಟ್ಟೂರಿಗೆ ಹೋಗಿ ಅಲ್ಲಿ ತಿನ್ನಕ್ಕೂ ಗತಿಯಿಲ್ಲದೇ ಕಷ್ಟಪಡುವ ಜೀವನವನ್ನು , ನಗರಕ್ಕೂ ಹಳ್ಳಿಯ ಜೀವನಕ್ಕೂ ಇರುವ ವ್ಯತ್ಯಾಸವನ್ನು ತಿಳಿಸಿದ್ದಾರೆ. ಎಷ್ಟೋ ಒಂಟಿ ಹೆಣ್ಣುಮಕ್ಕಳಿಗೆ ಅಣ್ಣನೋ ತಮ್ಮನೋ ಇದ್ದಿದ್ದರೆ ತನ್ನಲ್ಲಿರುವುದನ್ನೆಲ್ಲ ತೋಡಿಕೊಳ್ಳಬೇಕೆಂಬ ಬಯಕೆ, ಆದರೆ ಕೆಲವರಲ್ಲಿ ಇರುವ ಸ್ವಂತ ಅಣ್ಣ ತಮ್ಮಂದಿರು ತನ್ನ ಅಕ್ಕ ತಂಗಿಯರನ್ನು ನೋಡಿಕೊಳ್ಳುವುದನ್ನು ನೆನದರೆ ದುಃಖವಾಗುತ್ತದೆ. ಇಲ್ಲಿ ಬರುವ ವಸುವಿನ ಅಣ್ಣ ಸುಬ್ಬುವಿನ ಪಾತ್ರವೂ ಹಾಗೆಯೇ ಎಷ್ಟು ಬೇಕೋ ಅಷ್ಟು. ಇಲ್ಲಿ ಬರುವ ನಾಡಗೌಡರ ಪಾತ್ರ ಒಳ್ಳೆಯದು ಆದರೆ ಆತನ ವೈಜ್ಞಾನಿಕ ಪ್ರಯೋಗಗಳಿಗೆ ಬಲಿಪಶುವಾಗುವುದು ಆಕೆಯ ಪತ್ನಿ ಸುಬ್ಬುಲಕ್ಷ್ಮಿ. ಆ ದಂಪತಿಗಳಿಗೆ ಸಂತಾನವಿರುವುದಿಲ್ಲ ನಾಡಗೌಡರ ಪ್ರಕಾರ ಸಂತಾನವೆಂದರೆ ಆತನದೆ ವೈಜ್ಞಾನಿಕ ಮನೋಭಾವನೆಗಳಿರುತ್ತವೆ, ಸುಬ್ಬುಲಕ್ಷ್ಮಿಯ ಪಾತ್ರವು ಹೆಣ್ಣಿಗೆ ಸಂತಾನವೆಂಬುದು ಎಷ್ಟು ಮುಖ್ಯವೆಂದು ತೋರುತ್ತದೆ.
ಒಟ್ಟಾಗಿ ಈ ಹಿಂದೇ ಹೇಳಿದಂತೆ ಲೋಣಾವಾಳ,ಖಂಡಾಲದಲ್ಲಾಗುವ ಪರಿಸರದ ಬದಲಾವಣೆಗಳನ್ನು ,ತಾಯ್ತನವನ್ನು, ತಾಯಿಯ ಗರ್ಭದಲ್ಲಿ 9 ಮಾಸದಲ್ಲಾಗುವ ಬದಲಾವಣೆಗಳನ್ನು, ಗೋವಿನ ಮಹತ್ವವನ್ನು ,ನಗರಕ್ಕೂ ಹಳ್ಳಿಯ ಜೀವನಕ್ಕೂ ಇರುವ ವ್ಯತ್ಯಾಸವನ್ನು, ರೆಬೆಲೋ ಹಾಗು ಶ್ರೀಪತಿಯರ ಮನಸ್ಸಿನ್ನು ಸಮುದ್ರಕ್ಕೆ ಹೋಲಿಸಿ ಹೇಳಿರುವುದನ್ನು, ಕೆಲವು ಕಡೆ ಸಂಗೀತದ ಬಗ್ಗೆಯೂ, ಉಪನಿಷತ್ತಿನಲ್ಲಿ ಹೇಳಿದಂತೆ *ಅನ್ನಂ ನನಿಂದ್ಯಾತ್* ಅನ್ನದ ಮಹತ್ವವನ್ನು ಇನ್ನು ಎಷ್ಟೋ ವಿಷಯಗಳ ಬಗ್ಗೆ ಈ ಪುಟ್ಟ ಕಾದಂಬರಿಯಲ್ಲೇ ವಿವರಣೆ ನೀಡಿದ್ದಾರೆ. *ಕಾರ್ತಿಕ್*
ಒಂದು ಕೃತಿ ಅನುಗಾಲ ಬದುಕಬೇಕು ಎಂದರೆ ಅದರಲ್ಲಿನ ವಿಷಯ ಸಾರ್ವಕಾಲಿಕವಾಗಿರಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಆದಷ್ಟೂ ಕಥೆಯನ್ನು ಬಿಟ್ಟುಕೊಡದೇ ರಸಭಂಗ ಮಾಡದಿರಲು ಪ್ರಯತ್ನಿಸುವೆ. ಹೇಳಿ ಕೇಳಿ ಮೊದಲೇ ಭೈರಪ್ಪರವರ ಕೃತಿ!!!
ಭಾಷಾಪ್ರಯೋಗ, ಕಾದಂಬರಿಯಲ್ಲಿ ಪಾತ್ರಗಳು ಬಂದು ಹೋಗುವ ರೀತಿ, ಕಾದಂಬರಿಯುದ್ದಕ್ಕೂ ಎರಡು ಮುಖ್ಯ ಪಾತ್ರಗಳ ನಿರೂಪಣೆ ಮತ್ತು ಅದರಲ್ಲಿನ ವಿಭಿನ್ನತೆ, ತೀಕ್ಷ್ಣ ವಿಷಯಗಳನ್ನು ಹೇಳುವಲ್ಲಿ ಸೃಷ್ಟಿಸಿರುವ ಮಾರ್ಮಿಕತೆ ಎಲ್ಲವೂ ಮಿಳಿತಗೊಂಡು ಅಲೆದಲೆದು ಓದುಗನೆದೆಗೆ ಸೀದಾ ಧುಮ್ಮಿಕ್ಕುವ ಅತಿ ಅಪರೂಪದ ಪುಸ್ತಕ "ಜಲಪಾತ". ಪುಸ್ತಕದಲ್ಲಿ ಭೈರಪ್ಪನವರೊಳಗಿನ ಬರಹಗಾರ ಎಂದಿನಂತೆ ಟಾಪ್ ನಾಚ್ ಆಗಿದ್ದರೂ ಇಲ್ಲಿ ಮನಸೆಳೆಯುವುದು ಅವರೊಳಗಿನ ದಾರ್ಶನಿಕ. ೧೯೬೦ರ ಆಸುಪಾಸಿನಲ್ಲಿ ಮುದ್ರಣ ಕಂಡ ಈ ಪುಸ್ತಕ ಇಂದಿಗೂ ಪ್ರಸ್ತುತವಾಗಿದೆ. ಮತ್ತೆ ಹೇಳುವೆ "ಇಂದಿಗೆ" ಪ್ರಸ್ತುತವಾಗಿದೆ.
ಮುಂಬಯಿಯಲ್ಲಿ ನೆಲೆಯಾದ ಅಂತರ್ಮುಖಿ ದಂಪತಿಗಳಿಂದ ಆರಂಭವಾಗುವ ಪುಸ್ತಕ ಅವರ ಸುತ್ತಲೇ ನಡೆಯುತ್ತದೆ. ಭೂಪತಿ ಅಂದರೆ ಗಂಡ ಕಲಾವಿದನಾದರೇ ವಸು ಅಂದರೆ ಹೆಂಡತಿ ಗೃಹಿಣಿ ಹಾಗೂ ಅಕ್ಷರಸ್ಧೆ. ವಿಶ್ವ ಎಂಬ ಮಗನೊಬ್ಬ. ಭೂಪತಿ, ಕಂಪನಿಯೊಂದರಲ್ಲಿ ಕೇವಲ ಕಲೆಯ ಆಧಾರದ ಮೇಲೆ ಕೆಲಸ ಗಿಟ್ಟಿಸಿಕೊಂಡು ಎಣ್ಣೆಗೆ ದೀಪಕ್ಕೆ ಆಗುವಷ್ಟು ದುಡಿಯುತ್ತಿರುವ ಸಾಮಾನ್ಯ ಮಧ್ಯಮ ವರ್ಗದ ಪುರುಷ. ವಸುಂಧರಾ ಮುಂಬಯಿಯಂತಹ ದೊಡ್ಡ ಶಹರದಲ್ಲಿ ಉದ್ಯೋಗ ಮಾಡುವ ಮನಸಿದ್ದರೂ ಅಂದಿನ ಕೌಟುಂಬಿಕ ಕಟ್ಟುಪಾಡುಗಳೊಂದಿಗೆ ಬಂದಿದ್ದರಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದವಳು. ಇವರ ಜೀವನದಲ್ಲಿ ಬರುವ ಏರಿಳಿತಗಳು, ಬರುವ ಪಾತ್ರಗಳು, ಕಾಣಿಸುವ ಕಲ್ಚರಲ್ ಚೇಂಜಸ್, ಮಧ್ಯಮ ವರ್ಗದ ಲೆಕ್ಕಾಚಾರ, ಹೊಸ ಚಿಂತನೆಗಳು ಈ ಪುಸ್ತಕದ ಒಡಲು.
ಪುಸ್ತಕದಲ್ಲಿ ಬರುವ ಡಾ.ನಾಡ ಗೌಡ ಮತ್ತು ಸುಧಾ ಬಾಯಿ ಪಾತ್ರಗಳು ಭೂಪತಿ ಮತ್ತು ವಸುವಿಗಿಂತ ಕಾಡಬಹುದು. ನಾಡ ಗೌಡರಲ್ಲಿನ ನವ್ಯ ಚಿಂತನೆಗಳು ಮತ್ತು ಸುಧಾ ಬಾಯಿ ಬಯಸುವ ಸಾಮಾನ್ಯ ಆಸೆಗಳು ಒಂದು ರೀತಿಯ ಕೋಲಾಹಲ ಎಬ್ಬಿಸುತ್ತವೆ ಮನಸಿನಲ್ಲಿ. ಒಂದು ವರ್ಗದ ಓದುಗರಿಗೆ ಡಾ.ಗೌಡರ ಚಿಂತನೆಗಳು ಆಸಕ್ತಿದಾಯಕವೆನಿಸಬಹುದು. ಹಲವರಿಗೆ ಸುಧಾಬಾಯಿಯ ಕುರಿತು ಅನುಕಂಪ ಹುಟ್ಟುತ್ತದೆ. ಯಾವ ಚಿಂತನೆ ಎಂಬ ಪ್ರಶ್ನೆಗೆ ಉತ್ತರ ಪುಸ್ತಕದಲ್ಲಿದೆ.
ಶಹರದಲ್ಲಿನ ಸುಖ ಸಾಕಾಗಿ ಭೂಪತಿ ದಂಪತಿಗಳು ಮುಂಬಯಿಯ ಸಹವಾಸ ಸಾಕೆನಿಸಿ ಕರ್ನಾಟಕಕ್ಕೆ ಬರಲು ನಿರ್ಧರಿಸುತ್ತಾರೆ. ನಂತರ ಬರುವ ತಿರುವುಗಳು ಪುಸ್ತಕರ ಓಘವನ್ನು ದುಪ್ಪಟ್ಟು ಮಾಡಿವೆ. ಇಲ್ಲಿಂದಾಚೆಗೆ ಕಣ್ಣು ಸಾಕಷ್ಟು ಬಾರಿ ಒದ್ದೆಯಾಗಬಹುದು. ನೈಜತೆಯೆಂಬ ವ್ಯಾಘ್ರ ನಮ್ಮೊಳಗೂ ಹೊಕ್ಕಿ ತುಸು ಕೊಲ್ಲುತ್ತಾನೆ. ಈ ರೀತಿಯವು ಮಾತ್ರವಲ್ಲದೇ ಶೃಂಗಾರದ ವರ್ಣನೆಯೂ ಇದೆ. ಅತಿ ನಾಜೂಕಾಗಿ!!! ಜಲಪಾತ, ಸಂಗೀತ ಮತ್ತು ಕುಂಚಗಳಲಿ ಎಲ್ಲವನೂ ಹೇಳಿ ವಾಹ್ ಎನಿಸುವಂತೆ ಮಾಡಿದ್ದಾರೆ. ಒಂದಷ್ಟು ಗಂಟೆಗಳ ಓದಿನ ಸುಖ ಮೋಸವಿಲ್ಲ.
ನೀವು ಈ ಪುಸ್ತಕವನ್ನು ಓದಿದ್ದೇ ಆದಲ್ಲಿ ಪ್ರಸವ ವೇದನೆಯ ಕುರಿತು ಬರೆದಿರುವ ನಾಲ್ಕೈದು ಪುಟಗಳನ್ನು ಮರೆಯದೇ ಪೂರ್ತಿಯಾಗಿ ಅನುಭವಿಸಿ. ಕಲ್ಪನೆಗಳು ಬರಹಗಳಾಗಬೇಕು ಎನ್ನುವ ಭೈರಪ್ಪನವರ ಕಲ್ಪನೆಯು ಎಷ್ಟು ಅತೀತವಾದದ್ದು ಎಂದು ಇಲ್ಲಿ ತಿಳಿಯುತ್ತದೆ. ಯಾರಿಗಾದರೂ ಜೀವ ನಡುಗುತ್ತದೆ.
ಇನ್ನೇನೂ ಹೇಳಲಾರೆ! ಸಮಯ ಸಿಕ್ಕಾಗ ಈ ೧೭೦ ಪುಟಗಳ ಪುಸ್ತಕವನ್ನು ಓದಿ, ಸುಖಿಸಿ. ಎಂದಿನಂತೆ ಈ ಪುಸ್ತಕ ಓದಿದ್ದಲ್ಲಿ ನಿಮ್ಮ ಅಭಿಪ್ರಾಯವನ್ನು ನನ್ನೊಂದಿಗೂ ಹಂಚಿಕೊಳ್ಳಿ! ಶುಭವಾಗಲಿ
ಈ ಕಾದಂಬರಿ ಬರೆವಾಗ ಶ್ರೀ ಎಸ್ ಎಲ್ ಬಿ ಗೆ ಬಹುಶಃ ೩೫-೩೬ ರ ಹರೆಯ ಆದರೆ ಆ ವಯಸ್ಸಿನಲ್ಲೇ ಎಂಥಹ ಪ್ರೌಢಿಮೆ.ಇದರಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತಹವು.
"Jalapatha" intricately explores the lives of Vasu and Shripathi as they navigate the bustling city of Mumbai after relocating from their serene hometown in Mysore. The novel vividly contrasts the nuances of life in Mumbai & Agrahara. The scene depicting Uma's birth is depicted with remarkable detail, immersing the reader in the extraordinary experience of childbirth.
The tragic narrative of Nadagowda and Sudhabai underscores the profound impact of Nadagowda's research and philosophical musings, particularly his controversial theory of genetic filtration. His assertion that individuals with hereditary conditions like diabetes should refrain from having children due to the heightened risk of passing on the condition prompts a moral dilemma, challenging readers to grapple with the implications of genetic inheritance.
ಈ ಕಾದಂಬರಿಯನ್ನ ನಾನು ಮೊದಲು ಓದಿದ್ದು ಪಿಯುಸಿಯಲ್ಲಿದ್ದಾಗ. ಆಗ ಇದು ಕೇವಲ ಒಂದು ಸಾಂಸಾರಿಕ ಕಾದಂಬರಿಯಾಗಿ ಕಂಡಿತ್ತು. ಇದರಲ್ಲಿ ಬರುವ ವಿವರಗಳು ಸಹ ಮನಸ್ಸಿಗೆ ಹಿಡಿಸಿರಲಿಲ್ಲ.
ಈಗ ಮತ್ತೊಮ್ಮೆ ಕೇಳಿದಾಗ ನನ್ನ ಗ್ರಹಿಕೆ ಸಂಪೂರ್ಣ ಭಿನ್ನವಾಗಿದೆ. Midlife crisis ಎಂದು ಇತ್ತೀಚೆಗೆ ಬಹಳಷ್ಟು ಕೇಳಿ ಬರುತ್ತದಲ್ಲ.. ಅಂತಹದೇ ಒಂದು midlife crisis ನಿಂದ ಬಳಲುವ ನಾಯಕ to be or not to be ಎಂಬ ಸಂದಿಗ್ಧತೆಯಲ್ಲಿ ತೊಳಲಾಡುತ್ತಾನೆ. ಕಾದಂಬರಿ ಉದ್ದಕ್ಕೂ ತನ್ನನ್ನೇ ಅವಲೋಕನ ಮಾಡಿಕೊಳ್ಳುತ್ತ ಯಾವುದು ಸರಿ ಎಂಬುದರ ಬಗ್ಗೆ ಚಿಂತಿಸುತ್ತಲೇ ಇರುತ್ತಾನೆ. 1967 ರಲ್ಲಿ ಪ್ರಕಟವಾದ ಈ ಕಾದಂಬರಿಯಲ್ಲಿ ಬರುವ ಅಂಶಗಳು ಇಂದಿಗೂ ಪ್ರಸ್ತುತ ಎಂದರೆ ಆಶ್ಚರ್ಯವಾಗುತ್ತದೆ. ಆ ಸಮಯದಲ್ಲಿಯೇ ಬದಲಾಗಿ ಹೋದ ಹಳ್ಳಿಗಳು ಈಗ ಹೇಗಾಗಿರಬೇಡ ಎಂದು ಊಹಿಸಿಕೊಳ್ಳಲು ಸಹ ಭಯವಾಗುತ್ತದೆ.
ಪ್ರತಿಯೊಂದು ಪುಸ್ತಕ ಬದುಕಿನ ಅನೇಕ ಹಂತಗಳಲ್ಲಿ ಭಿನ್ನವಾಗಿ ತೆರೆದುಕೊಳ್ಳುತ್ತದೆ ಎಂಬುದು ಸತ್ಯ. ಅದಕ್ಕೆ ನಾನು ಭೈರಪ್ಪನವರ ಪುಸ್ತಕಗಳೆಲ್ಲವನ್ನು ಮತ್ತೊಮ್ಮೆ ತೆರೆದು ನೋಡುತ್ತಿದ್ದೇನೆ.
ಭೈರಪ್ಪರ ಕಾದಂಬರಿಗಳು ಓದುಗನಿಂದನೂ ಕೂಡ ಕೆಲವು ಸಾಮಾನ್ಯ ಜ್ಞಾನ ಬಯಸುತ್ತವೆ ಅನ್ನಿಸ್ತು. ನನಗೆ ಸಂಗೀತದ ಜ್ಞಾನ ಅಶ್ಟಕ್ಕಶ್ಟೇ. ಇಲ್ಲಿ ಬರುವ ವಸುಂದರಳ ಸಂಗೀತ ಕಲಿಕೆ ಅವಳು ಜೋಗ ಜಲಪಾತದಲ್ಲಿ ಅನುಭಸುವ ಸಂಗೀತ ಅನುಭೂತಿ ಹಾಗು ನಿರಾಸೆ ನಂಗೆ ಅರ್ಥ ಮಾಡಿಕೊಳ್ಳೋಕೆ ಸ್ವಲ್ಪ ಸಮಯ ಹಿಡಿಸ್ತು ಆದ್ರೂ ನಂಗೆ ಆ ಅದ್ಯಾಯ ಇನ್ನು ಸಂಪೂರ್ಣ ಅರ್ಥ ಆಗಿಲ್ಲ. ಶ್ರೀಪತಿ (ಭೂಪತಿ ) ಅನುಭವಿಸುವ ತಳಮಳ ಎಲ್ಲಾ ತಾಯಿನೆಲ ತ್ಯಜಿಸಿ ದೊಡ್ಡ ನಗರ ಸೇರಿರುವ ಎಲ್ಲಾ ಮನುಷ್ನಲ್ಲಿಯೂ ಇರುತ್ತೆ. ಆದ್ರೆ ಸ್ವಲ್ಪ ಸಮಯದ ನಂತ್ರ ನಾವು ತಾಯಿ ನೆಲಕ್ಕೆ ಮರಳಿದರೆ ಅಲ್ಲಿ ಮತ್ತೆ ನಾವು ಹೊಂದಿಕೊಳ್ಳೋಕೆ ಆಗೋಲ್ಲ ಯಾಕಂದ್ರೆ ನಮ್ಮ ಮನಃ ಪಟಲದಲ್ಲಿ ನಾವು ಬಿಟ್ಟು ಹೋದ ನಮ್ಮ ಹಳ್ಳಿಯೇ ಇರುತ್ತೆ ನಾವು ಅದರ ಹುಡುಕಾಟದಲ್ಲಿ ಬದಲಾದ ಊರಿಗೆ ಹೊಂದಿಕೊಳ್ಳೋಕೆ ಆಗದೆ ಇರಲು ಆಗದೆ ಇರ್ತೇವೆ. 1967 ರಲ್ಲಿ ಈ ಕಾದಂಬರಿ ಬಂದ್ರೂ ಇಂದಿಗೂ ಇದು ಪ್ರಸ್ತುತ. ವಸು ಅನುಭವಿಸುವ ಪ್ರಸವ ವೇದನೆ ನಾವೇ ಅನುಭವಿಸಿದಂತೆ ಅನ್ನಿಸ್ತು.
ಪಟ್ಟಣದ ಕೆಲಸ ಬಿಟ್ಟು ಹಳ್ಳಿಗೆ ಹೋಗುವ ಮುಂಚೆ ಪ್ರತಿಯೊಬ್ಬನೂ ಓದಬೇಕಾದ ಕಥೆಯಿದು. ಕಥೆಯಂತೆ ಜೀವನವಲ್ಲದಿದ್ದರೂ ಕೆಲವೊಂದು ಸಂಗತಿಗಳಂತೂ ಯಾವುದೇ ಕಾಲಕ್ಕೂ ಪ್ರಸ್ತುತವಾದಂತವುಗಳು. ಕಥೆಯ ಮೊದಲಾರ್ಧದಲ್ಲಿ ಒಂದು ಸಂಸಾರ ಪಟ್ಟಣದ ಜೀವನ ಶೈಲಿಗೆ ಹೊಂದಿಕೊಳ್ಳುತ್ತಾ ಯಾಂತ್ರಿಕ ಜೀವನ ನಡೆಸುತಿದ್ದವರು ಕ್ರಮೇಣ ಮನಸ್ಸು ಹಳ್ಳಿ ಕಡೆಗೆ ತಿರುಗಿ ಅಲ್ಲಿ ಹೋಗಿ ಜೀವನ ನಡೆಸಲು ಪಡುವ ಪಾಡನ್ನು ಮನಸ್ಸಿಗೆ ನಾಟುವಂತೆ ಚಿತ್ರಿಸಿದ್ದಾರೆ ಭೈರಪ್ಪನವರು. 60ನೇ ದಶಕದಲ್ಲಿ ಬರೆದ ಈ ಕಾದಂಬರಿಯ ಕಥೆ ಇಂದಿಗೂ ಪ್ರಸ್ತುತ. ರೋಚಕವಾದ ಕತೆಯಲ್ಲದಿದ್ದರೂ ಅದರೊಳಗಿನ ಭಾವನಾ ಲಹರಿ ಓದಿಸಿಕೊಂಡು ಹೋಗುತ್ತದೆ. ಪುಸ್ತಕ ಮಡಚಿದ ನಂತರವೂ ಕಥೆ ಕಾಡುತ್ತಿರುತ್ತದೆ. ಹುಟ್ಟಿ ಬೆಳೆದ ಹಳ್ಳಿ ಬಿಟ್ಟು, ಪಟ್ಟಣದಲ್ಲಿ ಸಂಸಾರ ನಡೆಸಿಕೊಂಡಿರುವವನು ಮರಳಿ ತನ್ನ ಹಳ್ಳಿಗೆ ಬರುವಾಗ ಅನೇಕ ಸಂಗತಿಗಳನ್ನು ಅಗೌಣ ಮಾಡಿ ಪಶ್ಚಾತಾಪ ಪಡುವ ಒಂದು ಸಂಸಾರದ ಕಥೆಯಿದು.
Such a relevant story if read now, more than five decades after it was written! The conflicts and confusions in the human minds about the law of nature, creative forces, human ignorance are all so well narrated. Being an outsider in mumbai 16 years back and now owning it as my own, I could connect so well to the life of mumbai (from all those decades back) that Bhyrappa has narrated so well.
There are so many things that are eternal around us and in our behaviour, though we feel everything keeps changing!!
ಒಬ್ಬ ಚಿತ್ರಗಾರನ ಬದುಕು ಮುಂಬೈ ಎಂಬ ದೊಡ್ಡ ನಗರದಲ್ಲಿ ಹೇಗೆ ನಡಿಸಿಕೊಳ್ಳುತ್ತಾನೆ, ಹೇಗೆ ಅದಕ್ಕೆ ಒಗ್ಗದೆ ಹಳ್ಳಿಗೆ ಬಂದು ನೆಲೆಸಲು ಬಯಸುತ್ತಾನೆ. ಅದೂ ಆಗದೆ ಮತ್ತೆ ಮುಂಬೈಗೆ ಹೋಗಿ ತನ್ನ ಜೀವನ ಮುಂದುವರೆಸುತ್ತಾನೆ. ಈ ಸಮಯದಲ್ಲಿ ಅವನ ಜೀವದನದಲ್ಲಿ ಅವನು ಏನೇನು ಕಂಡುಕೊಳ್ಳುತ್ತಾನೆ, ಕಳೆದುಕೊಳ್ಳುತ್ತಾನೆ.
Found it boring at most of the places. Maybe this is not the book to start with to love or enjoy reading Bairappa's books. Yet the narration is extra-ordinary. His way of explaining things with musical touch is amazing.