ಅನಕೃ ಅವರ ಆಶೀರ್ವಾದ ಕಾದಂಬರಿಯ ಮುಂದುವರಿದ ಭಾಗ. ಇದರಲ್ಲಿ ಕೆಟ್ಟು ಹೋದ ಪಾರ್ವತಿಯ ಸಂಸಾರವನ್ನು ಗುಂಡಾಭಟ್ಟರು ಒಂದಾಗಿಸುತ್ತಾರೆ. ಮಗಳಾದಂತಹ ಗೌರಿ ಮನೋರೋಗದಿಂದ ತುತ್ತಾಗಿ ಹಾಸಿಗೆ ಹಿಡಿಯುತ್ತಾಳೆ. ಗುಂಡಾಭಟ್ಟರಿಗೆ ಇದನ್ನು ತಡೆಯಲಾಗದೇ ಪಾರ್ವತಿಯನ್ನು ಚಂದ್ರಶೇಖರ ಮುಂದೆ ಕ್ಷಮಾಪಣೆ ಕೇಳಿಸಿ ಸಂಸಾರವನ್ನು ಒಂದಾಗಿಸುತ್ತಾರೆ. ಈ ಒಂದಾಗುವಿಕೆಗೆ ಗೌರಿಯ ಅನೋರೋಗ್ಯ ಕಾರಣ ಎನ್ನುವುದು ದುರಂತ. ಆ ಮಕ್ಕಳ ಕರುಳ ಕೂಗೆ ಹಾಗೆ, ತಂದೆ ತಾಯಿ ಎಷ್ಟೇ ನಿರ್ದಯಿ ಇದ್ದರೂ ಆ ಕೂಗಿಗೆ ಓ ಕೊಡಲೇ ಬೇಕಾಗುತ್ತದೆ. ಇದು ಸನಾತನ ಧರ್ಮದ ಚಮತ್ಕಾರ. ಇನ್ನುಳಿದಂತೆ ಕಾದಂಬರಿಯಲ್ಲಿ ಶೃಂಗೇರಿಯ ಪೀಠಾಧಿಪತಿಗಳಾಗಿದ್ದಂತಹ ಶ್ರೀ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳ ಅಲ್ಪ ಜೀವನಚರಿತ್ರೆಯನ್ನು ಬರೆದಿದ್ದಾರೆ.