Jump to ratings and reviews
Rate this book

Madhyaghatta

Rate this book

230 pages, Paperback

First published August 1, 2020

3 people are currently reading
54 people want to read

About the author

Shivananda Kalave

6 books4 followers
ಶಿವಾನಂದ ಕಳವೆ ಅವರು ಶಿರ್ಸಿ ಬಳಿಯ ಕಳವೆ ಗ್ರಾಮದವರು. ವೃತ್ತಯಿಂದ ಪತ್ರಕರ್ತರು. ಪರಿಸರ ಜಾಗೃತಿ ಮೂಡಿಸುವ ಬರೆಹಗಳು ಇವರ ವೃತ್ತಿ ವೈಶಿಷ್ಟತೆ. ಶಿರಸಿ ಸಮೀಪದ ನೀರ್ನಳ್ಳಿಯ ‘ಮಲೆನಾಡ ಮಳೆಕೇಂದ್ರ’ದ ರೂವಾರಿಯೂ ಹೌದು. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಅಲ್ಲಿಯ ಕೃಷಿ, ಪರಿಸರ, ಪರಿಸರ, ಜನಜೀವನಗಳನ್ನು ದಾಖಲಿಸಿದ್ದಾರೆ. ಈ ಪ್ರವಾಸದ ಬರವಣಿಗೆ ‘ಕಾಡುನೆಲದ ಕಾಲಮಾನ’. ದೇಸೀ ಜ್ಞಾನದ ವಿವಿಧ ಮಜಲುಗಳ ಅಧ್ಯಯನ ನಡೆಸಿದ್ದಾರೆ.

ಮುಡೇಬಳ್ಳಿ, ಮುಳ್ಳೆಹಣ್ಣು (ಸಂಪದ.ನೆಟ್ ಅಂತರ್ಜಾಲ ಪತ್ರಿಕೆ), ಬಹುಧಾನ್ಯ (ಉದಯವಾಣಿ), ದಾಟ್ ಸಾಲು (ನೀರ ಸಂರಕ್ಷಣೆಯ ಕಾರ್ಯದ ದಾಖಲಾತಿ)-ಇವು ಅಂಕಣಗಳ ಶೀರ್ಷಿಕೆಗಳು.

ಪ್ರಮುಖ ಕೃತಿಗಳು: ಕಾನ್ ಗೌರಿ, ಗೌರಿ ಜಿಂಕೆಯ ಆತ್ಮಕಥೆ, ಅರಣ್ಯ (ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿತ), ಅರಣ್ಯ ಜ್ಞಾನದ ಹತ್ಯಾಕಾಂಡ, ಕಂಪ್ಯೂಟರ್ ಊಟ ಹಳ್ಳಿ ಮಾರಾಟ, ಪತ್ರಕರ್ತರೇ ಟೈಂ ಉಂಟಾ?, ಮಳೆ ಮನೆಯ ಮಾತುಕಥೆ, ಕಾನ್ ಬಾಗಿಲು, ಮಣ್ಣಿನ ಓದು, ಒಂದು ತುತ್ತಿನ ಕಥೆ, ಕ್ಷಾಮ ಡಂಗುರ, ಜಲ ವರ್ತಮಾನ, ಅನ್ನ ಕೊಡುವ ಅನನ್ಯ ತೋಟ – ತದ್ರೂಪಿ ಕಾಡು ( ಜಿ. ಕೃಷ್ಣ ಪ್ರಸಾದ್ ಅವರ ಜೊತೆ ಸಂಪಾದನೆ), ಒಡಲ ನೋವಿನ ತೊಟ್ಟಿಲ ಹಾಡು, ಪಶ್ಚಿಮ ಘಟ್ಟದಲ್ಲಿ ಮೋನೋಕಲ್ಚರ್ ಮಹಾಯಾನ, ಕಾನ್ ಚಿಟ್ಟೆ, ಹಸಿರು ಪುಸ್ತಕದ ಹಳೆಯ ಪುಟಗಳು, ಕಾಡು ನೆಲದ ಕಾಲಮಾನ, ಕಾನ್ಮನೆಯ ಕಥೆಗಳು, ಕಾವೇರಿ ಖಂಡ ಇತ್ಯಾದಿ.

ಕರ್ನಾಟಕ ರಾಜ್ಯ ಸರ್ಕಾರದಿಂದ ಪರಿಸರ ಪತ್ರಿಕೋದ್ಯಮಿ ಪ್ರಶಸ್ತಿ, ಸುವರ್ಣ ಸುದ್ದಿವಾಹಿನಿಯ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಪತ್ರಕರ್ತರಿಗೆ ಪರಿಸರ ಕಾಳಜಿಯ ಪಾಠ ಹೇಳುವ ಶಿವಾನಂದ ಕಳವೆ ಅವರಿಗೆ ರಾಜ್ಯದ ವಿವಿಧ ಸಂಘಸಂಸ್ಥೆಗಳು ಗೌರವಿಸಿವೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
15 (39%)
4 stars
18 (47%)
3 stars
5 (13%)
2 stars
0 (0%)
1 star
0 (0%)
Displaying 1 - 11 of 11 reviews
Profile Image for Soumya.
220 reviews49 followers
February 16, 2023
ಮುಕ್ಕಾಲು ಪುಸ್ತಕ ಹವ್ಯಕ ಕನ್ನಡದಲ್ಲಿ ಇದೆ.
ಓದುತ್ತಾ ಹೋದರೆ ಯಾವ್ದೋ ಹಳೆ ಕಾಲದ serial ನೋಡಿದ ಹಾಗೆ ಅನ್ನಿಸ್ತು.

ಶಿರಸಿ ಸುತ್ತ ಮುತ್ತ ಊರಿನ ಚಿತ್ರಣ.
ಎಷ್ಟೊಂದು ಬಗೆಯ ಗಿಡ ಮರಗಳ ಬಗ್ಗೆ ಹೇಳಿದ್ದಾರೆ.
ಒಂದು ಕುಗ್ರಾಮ development ಆಗ್ತಾ ಆಗ್ತಾ ಹೇಗೆ ಬದಲಾಗುತ್ತೆ ಅನ್ನೋದನ್ನ ಹೇಳಿಯೂ ಹೇಳದ ರೀತಿ ಅಲ್ಲಿ ಬರೆದಿದ್ದಾರೆ.

ಸಾವಿತ್ರಮ್ಮ/ಪುಡಿಯಮ್ಮ character ಇಷ್ಟ ಆಯ್ತು.

ಓದಿದಾಗ ಏನೋ ಒಂಥರಾ ಹಿತ ಅನ್ನಿಸಿದ ಪುಸ್ತಕದ ಸಾಲುಗಳು.
" ನಿಂಗೆ ಬೇಜಾರಾದ್ರೆ ಸುಮ್ಮನೆ ಅಳುತ ಕೂಡ್ರಬೇಡ. ತೋಟ, ಬೆಟ್ಟ, ನೀರು, ಹರಣಿ, ದೇವಿಕಾನು ನೋಡ್ತಾ ಹೋಗು. ಖುಷಿಯಾದಲ್ಲಿ ನಿಲ್ಲು. ಚಿಗುರೊ ಮರ ನೋಡು, ಸೀಗೆ ಬಳ್ಳಿ ಹೂ ನೋಡು, ಗುಡ್ಡದಿಂದ ಬರೋ ನೀರಿನ ಸಪ್ಪಳ ಕೇಳು, ಬೆಳ್ಳಂ ಬೆಳಗ್ಗೆ ನಂದಿ ಮರದ ಹೂವಿಗೆ ಬರೋ ಜೇನಿನ ಝೇಂಕಾರ ಕೇಳು.
ನಾವು ನಮ್ಮ ದುಃಖ ದೊಡ್ಡದು ಮಾಡಿ ಬದುಕು ಮುಳಿಗಿದಂಗೆ ಕುಸಿದು ಕುಳಿತರೆ ಜಗತ್ತು ಸುಮ್ನೆ ಇರತ್ತ? "


" ತಣ್ಣೀರು ಆದ್ರೂ ತಣಿಸಿ ಕುಡಿಯವು.
ಜಗಳ ಮಾಡ್ತಾ ಹೋದ್ರೆ ಮನುಷ್ಯ ಎಷ್ಟು ವರ್ಷ ಬದುಕ್ತಾ? ಎಲ್ಲರೂ ಒಂದಲ್ಲ ಒಂದು ದಿನ ಮಣ್ಣಿಗೆ ಹೋಪದೆ ಅಲ್ದಾ"
Profile Image for Prashanth Bhat.
2,164 reviews141 followers
August 16, 2020
ಮಧ್ಯಘಟ್ಟ - ಶಿವಾನಂದ ಕಳವೆ.

ಓಯ್, ಬನ್ನಿ ಮಾರ್ರೇ. ಒಂದು ಸವಾರಿ ಹೋಪ.
ಎಲ್ಲಿಗೆ ಅಂತ‌ ಕೇಳಿದ್ರಾ?ಸಮಾ ಆತು. ಎಲ್ಲಿಗೆ ಅಂತ‌ ಕೇಳಬಾರದು.ಕೆಲಸ ಕೆಡ್ತದೆ.ದೂರ ಅಂತ ಕೇಳಬೇಕು. ಪರವಾಗಿಲ್ಲ ನಾ ಈಗಷ್ಟೇ ಪ್ರಯಾಣ ಮುಗಿಸಿ ಬಂದ ಕಾರಣ ನಿಮಗೆ ತಲೆಬಿಸಿಯಿಲ್ಲ.
ಕಾಲ ಯಾವುದು ಕೇಳಿದ್ರಾ? ತುಂಬಾ ಹಳೇದು ಮಾರ್ರೇ.
ಕಥೆಯಾ? ಕುಂಬಳೆ ಸೀಮೆಂದ ಮಧ್ಯಘಟ್ಟ ಆ ಕಾಡಿಗೆ ಕೊಟ್ಟ ಮಗಳು ಹೇಗಿದಾಳೆ ನೋಡಲು ಒಂದು ಹೆಂಗಸು ಮಕ್ಕಳ‌ ಕಟ್ಟಿಕೊಂಡು ಹೊರಟದ್ದು.ಅದೂ ಕಾಲ್ನಡಿಗೇಲಿ. ಹವ್ಯಕರಿಂಗೆ ಕೂಸು ಸಿಕ್ಕದ್ದು ಈಗಿನ ಸಮಸ್ಯೆ ಅಂದಿರಾ?
ಏ ಅಲ್ಲ ಮಾರ್ರೇ. ಆ ಕಾಡಲ್ಲಿ ಹೊರಗಿನ ಪ್ರಪಂಚಕ್ಕೆ ಸುಳಿವೇ ಇಲ್ಲದ ಹಾಗೆ ಅಕ್ಕಿ ಮುಗಿದಾಗ ಬಾಳೆಹಣ್ಣು ,ಗೆಣಸು ತಿಂದೂ ಬದುಕುವ ಜನ.
ಹೀಗೆ..

ಮಧ್ಯಘಟ್ಟದ ಕಥೆ ಹಳೆಯದು.
ಇಲ್ಲಿ ಅಡಿಕೆ ಕೊಟ್ಟು ಮಗುವಿನ ಖರೀದಿ ಮಾಡಿದವರಿದ್ದಾರೆ, ಬೇಟೆಯಾಡಲು ಹೊರಟು ಏನೋ ಆಗಿ ವಿಧಿ ಎಂದು ವಿಷಾದಪಡುವಂತಹ ಘಟನೆಗಳಿವೆ. ಬೆಟ್ಟದ ಜೀವವ ನೆನಪಿಗೆ ತರುವ ಸಾಹಸವಿದೆ.
ಜಾಸ್ತಿ ತಿನ್ನಬಾರದು ಎಂದು ಹೊಟ್ಟೆಗೆ ಹಗ್ಗ ಬಿಗಿಸಿಕೊಂಡು ಅದೇ ಹಾವಿನ ತರಹ ಪಟ್ಟೆಯ ಗುರುತು ಉಳಿಸಿಕೊಂಡವರಿದ್ದಾರೆ.ಅಲೆಮನೆಯ ಚಿತ್ರಣವಿದೆ, ಮದ್ದು ಅರೆಯುವ ಕೆಲಸವಿದೆ, ಮೈ ಮುರಿಯುವ ದುಡಿಮೆಯ ವಿವರಗಳಿವೆ.
ನಿಧಿ ಕಾಯುವ ಭೂತಗಳಿವೆ.

ಇದು ಕಾದಂಬರಿ ಅನ್ನುವುದಕ್ಕಿಂತ ಜೀವನ ಚಿತ್ರಣ. ಹರಿವ ನದಿಯ ಗುಂಟ ಅದರ ಹರಿವು ನೋಡುತ್ತಾ ಹೋದ ಹಾಗೆ.
ಏನೆಲ್ಲ ಕಾಣುತ್ತದೋ ಅದೇ ಭಾಗ್ಯ!

ಇಲ್ಲಿ ಹವ್ಯಕ ಭಾಷೆಯ ಬಳಕೆ ಎಷ್ಟಿದೆ ಎಂದರೆ ಓದುವಾಗ ಇದು ಹವ್ಯಕ ಕಾದಂಬರಿ ಎಂದು ಅನಿಸುವಷ್ಟು!

ಇದು ಬದುಕಿನ ಕಥನ.
ಹೋರಾಟದ ಕಥನ.
ಪ್ರಕೃತಿಯ ಜೊತೆಗೂಡಿ ಬದುಕಿದವರ ಕಥನ.
ಕೊನೆಗೆ ಬದಲಾವಣೆಯ ಪರ್ವಕ್ಕೆ ಎದುರುಗೊಂಡವರ ಕಥನ.

ಶಿವಾನಂದ ಕಳವೆಯವರ ಕಾನ್‌ಬಾಗಿಲು ಓದಿದ್ದೆ. ಅವರ ಬರಹಗಳ ಹಸಿರುವಾಸಿಯಲ್ಲಿ ಓದಿದ್ದೆ. ಪ್ರಕೃತಿಯ ಜೊತೆಯ ಒಡನಾಡಿಯೊಬ್ಬ ಮಾತ್ರ ಬರೆವ ಬರಹಗಳು ಅವು.
ಈ‌ ಕಾದಂಬರಿಯಲ್ಲಿ ಬರುವ ಸಸ್ಯಗಳು,ಮರಗಳು,ಪ್ರಾಣಿಗಳು ,ಬದುಕಿನ ರೀತಿ ಎಲ್ಲವೂ ಅದನ್ನೇ ಹೇಳುವುದು.

'ದೇವರು ಸಂಕಷ್ಟ ಹಾಗೂ ಪರಿಹಾರ ಒಟ್ಟಿಗೆ ಇಟ್ಟು ಭೂಮಿಯಲ್ಲಿ ಆಟ ಆಡತ. ಹುಡುಕಲೆ ಕಣ್ಣಿದ್ದರೆ ಇಲ್ಲೇ ಎಲ್ಲವೂ ಇದ್ದು' ಎಂಬ ಸಾರ ಸಾರುವ ಕಥೆ ಇದು.

ಮುಖಚಿತ್ರ ಹಾಗೂ ಒಳಪುಟಗಳಲ್ಲಿ ಬರುವ ಚಿತ್ರಗಳ ಬರೆದ 'ಸತೀಶ್ ಯಲ್ಲಾಪುರ' ಅವರ ಅದ್ಭುತ ಕೆಲಸವ ಉಲ್ಲೇಖಿಸದಿದ್ದರೆ ಅದು ಕಾದಂಬರಿಗೆ ಮಾಡುವ ಅಪಚಾರ!

ವಿರಾಮ ತಗೊಂಡು ,ಮೊಬೈಲ್ ,ನೆಟ್ ಎಲ್ಲಾ ಪಕ್ಕಕ್ಕಿಟ್ಟು ಈ ಯಾತ್ರೆಗೆ ಹೊರಡಿ. ಬಿಡಿ ಬಿಡಿ ಚಿತ್ರಗಳ ಈ ಗುಚ್ಛ ನಿಮ್ಮ ಒಳಗಲ್ಲೂ ಬೆಳಗಿ ' ಆ ಕಾಲ ಒಂದಿತ್ತು ದಿವ್ಯ ತಾನಾಗಿತ್ತು' ಎಂದನಿಸದಿದ್ದರೆ ಕೇಳಿ!
Profile Image for Adarsh ಆದರ್ಶ.
115 reviews25 followers
October 31, 2022
ಯಾವತ್ತಿಗೂ ಪಶ್ಚಿಮ ಘಟ್ಟದ ಕಾಡುಗಳು ನಮಗೆ ಅದರಲ್ಲೂ ಹಳೆಯ ಮೈಸೂರು ಪ್ರಾಂತ್ಯದವರಿಗೆ ನಿಗೂಢವೆ ಸರಿ. ಕಾರಂತರು, ಗಿರಿಮನೆ ಶ್ಯಾಮರಾವ್, ತೇಜಸ್ವಿ ಅವರ ಪುಸ್ತಕಗಳ ಮೂಲಕ ಘಟ್ಟ ಪರಿಚಯ ಅತವಾ ಯಾವಾಗಲಾದರೂ ಚಾರಣದ ಹಾದಿಯಲ್ಲಿ ಸಾಗಿರುವ ಅನುಭವವೇ ಹೊರತು ನಿಜವಾದ ಘಟ್ಟ ಪ್ರದೇಶದ ಜನರ ಜೀವನ ಶೈಲಿ, ಬವಣೆ, ವರ್ಷಕ್ಕೆ ೬ ತಿಂಗಳು ಸುರಿವ ಹುಚ್ಚು ಮಳೆ, ಕಾಡು ಮೃಗಗಳ ಉಪದ್ರವ. 'ಅಡಿಕೆಗೆ ಕೊಳೆ ರೋಗ, ಕೈಹೊಲಿಗೆಯಲ್ಲಿ ಅಂಗಿ ಹೊಲಿಯುತ್ತಿದ್ದ ಕಾಲದಲ್ಲಿ ಒಂದೇ ಒಂದು ಅಂಗಿ ತೊಡದೆ ಜೀವನ ಸಾಗಿಸಿದವರೇ ಜಾಸ್ತಿ . ವರ್ಷಕ್ಕೆರಡು ಸೀರೆ ತಂದು ಕೊಟ್ಟರೆ ಹೆಂಗಸರಿಗೆ ಬೇಕಾದಷ್ಟು. ಎರಡು ಹೊತ್ತು ಊಟ ಮಾಡುವವರು ಅತ್ಯಂತ ಶ್ರೀಮಂತರು ' ಕಥೆಯಲ್ಲಿ ಹಿರಿಯರು ಹೇಳುತಿದ್ದ ಸಾಲುಗಳಿವು.
ಕಥೆ ಶುರುವಾಗುವುದು ಕೇರಳದ ಕುಂಬಳೆ ಸೀಮೆಯ ಶ್ರೀದೇವಿಯನ್ನು ಹೊಸಕಟ್ಟಿಯ 60 ವರ್ಷದ ಗೋಪಯ್ಯ ಹೆಗಡೆಗೆ ಕರೆತಂದು ಮದುವೆ ಆದಾಗಿನಿಂದ ದಟ್ಟ ಕಾಡಿನೊಂದಿಗೆ ಬೆಸೆದುಗೊಂಡಿದೆ. ಶ್ರೀದೇವಿಯ ತಾಯಿ ಭೂದೇವಿ ತನ್ನ ಮಗಳನ್ನು ನೋಡಲು ಶಿರಸಿಯ ಘಟ್ಟದವರೆಗೆ ನಡೆದುಕೊಂಡು ಬಂದ ಸಾಹಸದ ಜೊತೆಗೆ ತನ್ನ ಮಗ ಜಮೀನು ಮಾಡಿ ಮದುವೆ ಯಾಗಿ ನಿಲ್ಲುವವರೆಗಿನ ಮೂವತ್ತು ವರ್ಷಗಳ ಕಥೆ ಸಾಗುತ್ತದೆ. ಶಿರಸಿಯು ಬದಲಾವಣೆಯ ಬೇರುಗಳು ಒಂದೊಂದಾಗಿ ಬಿಟ್ಟುಕೊಳ್ಳಲು ತನ್ನ ಹಳೆಯ ಛಾಪು ಕಳೆದುಕೊಂಡು ಹೊಸ ಪರ್ವ ಬಂದಿದ್ದರೊಂದಿಗೆ ಕಥೆಯು ಮುಗಿಯುತ್ತದೆ..
Profile Image for Sanjay Manjunath.
201 reviews10 followers
November 5, 2023
ಇದೊಂದು ಊರಿನ ಕಥೆಗಿಂತ ಹೆಚ್ಚಾಗಿ ಒಂದು ಕಾಲಮಾನದಲ್ಲಿ ಜರುಗಿದ ಜನರ ಜೀವನದ ಸುಂದರ ಚಿತ್ರಣದ ಕಥೆ.

ಕಾಡನ್ನೆ ಧ್ಯಾನಿಸುವ, ಅದರ ನಿಗೂಢತೆ ಅಪ್ಪಿಕೊಳ್ಳುವ, ಅದರಿಂದ ನಾನಾ ಉಪಯೋಗಗಳನ್ನು ಪಡೆದು ಮತ್ತು ಅದರ ಮಧ್ಯದಲ್ಲೇ ಜೀವನ ನಡೆಸುವ ಜನರ ಹಲವು ಮಗ್ಗುಲುಗಳು ಇಲ್ಲಿವೆ.

ಆಹಾರ-ವಿಹಾರಗಳು, ಸಂಪ್ರದಾಯಗಳು, ವ್ಯವಹಾರಿಕ ಬಂಧಗಳು, ಪರಸ್ಪರ ವಿಶ್ವಾಸ ನಂಬಿಕೆಗಳು, ಕಷ್ಟಗಳಿದ್ದಾಗಲೂ ಸಂತೋಷ ಪಡುವ ಮನಸ್ಥಿತಿ.. ಎಲ್ಲವೂ ಸಹಜ ಸುಂದರ..

ಆಲೆಮನೆ, ಶಿಕಾರಿ, ಬಾಳೆಕಾಯಿ, ಹೆರಿಗೆ ಮನೆ, ವಿಧವಾ ವಿವಾಹ , ದೆವ್ವ-ಭೂತಗಳ ಜೊತೆಗೆ ಸಾಗುವ ಮಧ್ಯಘಟ್ಟ ಕಾಲಾಂತರದಲ್ಲಿ ಸ್ಥಿತ್ಯತಂತರಗೊಂಡು ಮತಿಘಟ್ಟ ಆಗುವುದೊರಂದಿಗೆ ಮುಗಿಯುತ್ತದೆ..

ಕೃತಿಯಲ್ಲಿ ಒಂದು ಕಡೆ ಬರುವ
"ಕಾಡಿನಲ್ಲಿ ಕಂಡಿದ್ದೆಲ್ಲಾ ಮುಟ್ಟಡ, ನೋಡಿದಲ್ಲಿ ಕದಡ, ಮನುಷ್ಯ ಜನ್ಮ ಈ ಭೂಮಿಗೆ ಬಂದದ್ದು ಕೈ ಮುಗಿದು ಹೊರತು, ಎಲ್ಲವನ್ನೂ ಎತ್ತಿ ಬಾಚಿ ತಗಾಂಡು ಗಟ್ಟು ಕಟ್ಟಿಕೊಂಡು ಹೋಪಲೆ."
ಎಂಬ ಮಾತು ಕೃತಿಯ ಆಶಯವೆನ್ನಬಹುದು ಮತ್ತು ಅದು ಸಾರ್ವಕಾಲಿಕ ಸತ್ಯ ಕೂಡ..

ಮಲೆನಾಡಿನ ಪರಿಸರದ ದಟ್ಟ ಚಿತ್ರಣಗಳನ್ನು ಕಟ್ಟಿಕೊಡುವ ಅನೇಕ ಸಶಕ್ತ ಕಾದಂಬರಿಗಳ ಸಾಲಲ್ಲಿ ಈ ಕೃತಿಯು ನಿಲ್ಲುತ್ತದೆ. ಉತ್ತಮ ಕೃತಿ.
173 reviews22 followers
March 16, 2021
ಕೃತಿ: ಮಧ್ಯಘಟ್ಟ

ಲೇಖಕರು: ಶಿವಾನಂದ ಕಳವೆ

ಪ್ರಕಾಶಕರು: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ


ಪ್ರಕೃತಿ ನಮಗೆ ಎಲ್ಲವನ್ನೂ ನೀಡಿದೆ. ಕಷ್ಟ ಸುಖಗಳಿಗೆ,ನೋವು ನಲಿವುಗಳಿಗೆ,ರೋಗ ರುಜಿನಗಳಿಗೆ ಹಬ್ಬ ಹರಿದಿನಗಳಲ್ಲಿ ಎಲ್ಲದಕ್ಕೂ ನಿಸರ್ಗದ ಮಡಿಲು ಯಾವತ್ತೂ ಒದಗುತ್ತದೆ. ಇಂತಹ ಪ್ರಕೃತಿಯ ಬಗ್ಗೆ ನಮಗೆ ಗೊತ್ತಿರುವುದೇನು? ಎಂತಹ ವಿಷಮ ಸ್ಥಿತಿಯಲ್ಲಿ ಸಹ ಪ್ರಕೃತಿಯ ನಡುವೆ ಹೊಂದಿಕೊಂಡು ಅಗತ್ಯವಿದ್ದಷ್ಟು ಮಾತ್ರ ಸಂಪನ್ಮೂಲಗಳನ್ನು ಬಳಸಿ ಬದುಕು ಕಟ್ಟಿಕೊಂಡ ಹಿರಿಯ ತಲೆಮಾರಿನ ಕುರಿತು ನಮಗೆಷ್ಟು ಗೊತ್ತು? ನಮ್ಮ ಸುತ್ತಮುತ್ತಲಿನ ಪರಿಸರದ ಕುರಿತ ಅಸಡ್ಡೆ ಅಥವಾ ಸಸ್ಯಸಂಪತ್ತಿನ ಕುರಿತಾಗಿ ಸರಿಯಾಗಿ ಜ್ಞಾನ ವರ್ಗಾವಣೆಯಾಗದೆ ಇಂದಿನ ತಲೆಮಾರಿಗೆ ಉಂಟಾದ ನಷ್ಟವೇನು? ಈ ಪ್ರಶ್ನೆಗಳನ್ನು ಮತ್ತು ಇವಕ್ಕೆ ಉತ್ತರ ಹುಡುಕುವ ಪ್ರಯತ್ನವನ್ನು "ಮಧ್ಯಘಟ್ಟ" ಕಾದಂಬರಿಯಲ್ಲಿ ಕಾಣಬಹುದು.


ಕಾಡಿನ ಮಧ್ಯೆ ಇರುವ ಮಧ್ಯಘಟ್ಟ ಎಂಬ ಊರಿನ ಗೋಪಾಲ ಹೆಗಡೆ ಇವರ ಕುಟುಂಬದ ಸುತ್ತ ನಡೆಯುವ ಕಥೆಯು ನಮ್ಮ ಸುತ್ತಲಿನ ಪರಿಸರ,ಸಸ್ಯಸಂಪತ್ತು, ಪ್ರಾಣಿ ಪಕ್ಷಿಗಳ ಬಗ್ಗೆ ಅನೇಕ ವಿಚಾರಗಳನ್ನು ತಿಳಿಯಪಡಿಸುತ್ತದೆ. ಕಾಡಿನೊಳಗಣ ಹಲವು ಜೀವ ವೈವಿಧ್ಯದ,ಜೀವ ರಾಶಿಗಳ ನಡುವಣ ಇರುವ ಅವಿನಾಭಾವ ಸಂಬಂಧದ ಹೊಸ ಪ್ರಪಂಚಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಸಣ್ಣ ಪುಟ್ಟ ಆರೋಗ್ಯ ತೊಂದರೆಯಿಂದ ಹಿಡಿದು ಮಧುಮೇಹ ಮತ್ತು ಬಂಜೆತನದಂತಹ ಗಂಭೀರ ಸಮಸ್ಯೆಗಳಿಗೆ ನಮ್ಮ ಸಸ್ಯಸಂಕುಲದಲ್ಲಿ ಪರಿಹಾರ ಲಭ್ಯವಿದೆ. ಆದರೆ ಅದನ್ನು ಬಳಸಿಕೊಳ್ಳುವ ಜ್ಞಾನ ಸಂಪತ್ತು ನಮ್ಮಲ್ಲಿಲ್ಲದಿರುವುದು ಹಳಹಳಿಸುವಂತೆ ಮಾಡುತ್ತದೆ.


ಇವಿಷ್ಟೇ ಅಲ್ಲದೆ ನಮ್ಮ ಹಿರಿಯ ತಲೆಮಾರಿನ ಬಡತನದ ಬವಣೆಗಳು,ಕಾಡಿನ ಸಂಪನ್ಮೂಲಗಳನ್ನು ಬಳಸಿಕೊವಲ್ಲಿ ಅವರಿಗಿದ್ದ ಜಾಣ್ಮೆ,ಪ್ರಕೃತಿಯ ಬಗ್ಗೆ ಅವರಿಗಿದ್ದ ಆರಾಧನಾ ಮನೋಭಾವ,ಬಡವ ಧನಿಕನೆಂಬ ಭೇದವಿಲ್ಲದೆ ಅವರೊಳಮೂಡಿದ್ದ ಪರಸ್ಪರ ವಿಶ್ವಾಸ ನಂಬಿಕೆಗಳು, ಜೀವನ ಕಟ್ಟಿಕೊಳ್ಳಲು ಪರಸ್ಪರ ಸಹಾಯವಾಗುವ ಅಂತಃಕರಣ, ಆಧುನಿಕತೆಯ ಸ್ಪರ್ಶದಿಂದ ಉಂಟಾದ ಸ್ಥಿತ್ಯಂತರಗಳು ಬಹಳ ಚೆನ್ನಾಗಿ ಮೂಡಿಬಂದಿವೆ. ಪ್ರಕೃತಿಯನ್ನು ಸರಿಯಾಗಿ ಅರ್ಥಮಾಡಿಕೊಂಡು ಮಿತವಾಗಿ ಬಳಸಿಕೊಳ್ಳುವ ಕಲೆ ಸಿಧ್ಧಿಸಿದರೆ ಎಲ್ಲೇ ಇದ್ದರೂ ನೆಮ್ಮದಿಯಾಗಿರಬಹುದು ಎಂಬ ಆಶಾಭಾವನೆಯನ್ನು ಕಾದಂಬರಿ ಹುಟ್ಟಿಸುತ್ತದೆ.


ಕೆಲವೊಂದು ಕಡೆ ಅಧ್ಯಾಯದಿಂದ ಅಧ್ಯಾಯಕ್ಕೆ ಸಂಬಂಧವಿಲ್ಲದಂತೆ ಕಥೆಯನ್ನು ಹೆಣೆದಿರುವಂತೆ ಅನಿಸಿ ಅಲ್ಪ ಮಟ್ಟಿನ ಕಿರಿಕಿರಿಯನ್ನುಂಟು ಮಾಡುತ್ತದೆ. 


ನಮಸ್ಕಾರ,

ಅಮಿತ್ ಕಾಮತ್ 
Profile Image for pustakamare.
89 reviews13 followers
February 17, 2023
ಕಾನೂರು ಹೆಗ್ಗಡತಿ, ಮಲೆಗಳಲಿ ಮದುಮಗಳು, ಮರಳಿ ಮಣ್ಣಿಗೆ ಓದಿಯಾದ ಮೇಲೆ ಈ ಕೃತಿಯಲ್ಲಿಯೇ ಅವೆಲ್ಲ ಕೃತಿಯ ಸಂಪೂರ್ಣವನ್ನೋ ಭಾವ ಮತ್ತೆ ಸಿಕ್ಕಿದ್ದು. ಭಾವನಾತ್ಮಕವಾಗಿ ಇಷ್ಟಪಟ್ಟಿದ್ದು. ಇಲ್ಲಿಯೂ ಸುಧಿರ್ಗವಾದ ಹೊಳೆ ಕೇರಳದಿಂದ ಶಿರಸಿ ಸೀಮೆಯ ಮಧ್ಯಘಟ್ಟದ ಸುತ್ತಲಿನ ಗುಡ್ಡಗಳಿಗೆ ಹರಿಯುತ್ತೆ. ಅಲ್ಲಿನ ಜನರ ಜೀವನವನ್ನು, ಹೆಣ್ಣೆಂಬ ಜೀವದ ಕರುಣಾಳು ಬದುಕನ್ನು, ಕಾಲದೊಂದಿಗಿನ ಜನರ ಹೋರಾಟವನ್ನು ಪ್ರತಿಬಿಂಬಿಸುತ್ತೆ. ಮಲಯಾಳಿ ಕನ್ನಡದ ಗಮವನ್ನು, ದೌರ್ಭಾಗ್ಯದ ಜೀವನವನ್ನು ಹೊತ್ತು ತರುತ್ತೆ.
ಶ್ರೀದೇವಿ, ಭೂದೇವಿ, ಸಾವಿತ್ರಮ್ಮ ಎಲ್ಲರೂ ಒಂದೊಂದು ತರಹ ಪರಿಸರ ಜೀವನದ ಮುಖಗಳು ಅನಿಸಿ ಬಿಟ್ರು. ಪರಿಸರವೇ ಜೀವನ ಅನ್ಸಿಬಿಡ್ತು.
ಕನ್ನಡದ ನಡುವೆ ಬರುವ ಗ್ರಾಮ್ಯ ಭಾಷೆಯ ಸೊಗಡು ಕಾದಂಬರಿಗೆ ಆತ್ಮೀಯನಾಗಿಸಿಬಿಟ್ತು. ಎಲ್ಲೋ ಕಾಲದೊಂದಿಗಿನ ಕುದುರೆಯ ಜೊತೆಯ ಓಟದಲ್ಲಿ ನಾವು ಒಂದು ಸುಂದರ ಜೀವನಕ್ರಮವನ್ನು ಕಳೆದುಕೊಂಡೆವ ಅನಿಸ್ತು. ಜೊತೆಗೆ ಈಗ ನಮ್ಮ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಜೊತೆಗೆ ಬದಲಾಗಿದೆಯೆನ್ನೋದನ್ನ ಯೋಚಿಸುವಂತೆ ಮಾಡ್ತು. ಒಟ್ನಲ್ಲಿ ಕಾದಂಬರಿ ಕಾದಂಬರಿಯಾಗಿರದೆ ಬೂತ ಭವಿಷ್ಯದ ಕನ್ನಡಿಯಂತಾಯ್ತು.
Profile Image for ಸುಶಾಂತ ಕುರಂದವಾಡ.
429 reviews25 followers
May 10, 2023
ಪುಸ್ತಕ: ಮಧ್ಯಘಟ್ಟ
ಲೇಖಕರು: ಶಿವಾನಂದ ಕಳವೆ

ಶಿರಸಿ ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳೆದ ಲೇಖಕರು ಅಲ್ಲಿಯ ಜೀವನವನ್ನು ಸವಿದು ಅಲ್ಲಿಯ ಚಿತ್ರಣವನ್ನು ಚಿತ್ರಿಸಿದ್ದಾರೆ. ಗಿರಿಮನೆ ಶ್ಯಾಮರಾವ್, ಪೂಚಂತೆ, ಜನಾರ್ಧನ ಭಟ್ ಅವರ ಪುಸ್ತಕಗಳನ್ನೆಲ್ಲ ಓದಿದಾಗ ಜನರಿಗೆ ತಾವೂ ಮಲೆನಾಡಿಗೆ ಹೋಗಿ ಅಲ್ಲಿಯ ವಾತಾವರಣವನ್ನು ಸವಿಯಬೇಕೆಂಬ ಬಯಕೆ ಬರುವುದು ಸಹಜ ಆದರೆ ಅಲ್ಲೇ ನೆಲೆಸಿರುವವರಿಗೆ ಗೊತ್ತು ಅಲ್ಲಿಯ ಕಷ್ಟ. ಮೊಟ್ಟಮೊದಲು ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುವುದೇ ಸವಾಲು. ಅದಾದ ಮೇಲೆ ಅಲ್ಲೇ ರೈತಾಪಿ ಜನರು ಎದುರಿಸುವ ಕಷ್ಟಗಳು ಲೆಕ್ಕವಿಲ್ಲದಷ್ಟು. ಇವೆಲ್ಲವನ್ನೂ ಲಕ್ಷದಲ್ಲಿಟ್ಟುಕೊಂಡು ಲೇಖಕರು ಚೆನ್ನಾಗಿ ಬರೆದಿದ್ದಾರೆ. ಈ ಪುಸ್ತಕದಲ್ಲಿ ಇವರ ಪಾತ್ರವೇ ಪ್ರಧಾನ ಅಂತ ಎನ್ನಲಾಗುವುದಿಲ್ಲ. ಒಂದು ರೀತಿಯಲ್ಲಿ ಮಲೆಗಳಲ್ಲಿ ಮದುಮಗಳು ರೀತಿಯ ಕತೆಯನ್ನು ಹೋಲುತ್ತದೆ. ಅರವತ್ತು ವಯಸ್ಸಿನ ಹೆಗಡೆಯವರಿಗೆ ಹದಿನೆಂಟು ವಯಸ್ಸಿನ ಶ್ರೀದೇವಿಯನ್ನು ಮದುವೆ ಮಾಡಿಕೊಡುತ್ತಾರೆ. ಅಲ್ಲಿ ಅವರ ಕುಟುಂಬದ ಚಿತ್ರಣವನ್ನು ಬರೆದಿದ್ದಾರೆ. ಅದರ ಜೊತೆಗೆ ಮಧ್ಯಘಟ್ಟದಲ್ಲಿ ನಡೆಯುವ ಪ್ರಸಂಗಗಳನ್ನು ಬರೆಯಲಾಗಿದೆ. ಬರೀ ಕುಟುಂಬದ ಕಥೆಗೆ ಈ ಪುಸ್ತಕ ಸೀಮಿತವಾಗಿಲ್ಲ. ಮಧ್ಯಘಟ್ಟದಲ್ಲಿಯ ಹಲವಾರು ಜನಜೀವನ ವ್ಯವಸ್ಥೆಯನ್ನು ಬರೆದ ರೀತಿ ಇಷ್ಟವಾಗುವುದು ಖಂಡಿತ. ಒಬ್ಬರೇ ಲೇಖಕರ ಮಲೆನಾಡಿನ ಕಥೆಗಳನ್ನು ಓದಿ ಬೇಜಾರಾಗಿದ್ದರೆ ಈ ಪುಸ್ತಕ ಒಮ್ಮೆ ಟ್ರೈ ಮಾಡಬಹುದು.
Profile Image for Raghavendra Shekaraiah.
34 reviews
November 18, 2024
ಶಿವಾನಂದ ಕಳವೆಯವರ 'ಮಧ್ಯಘಟ್ಟ' ಕಾದಂಬರಿ ಪ್ರಾರಂಭದಲ್ಲಿ ಓದುಗರನ್ನು ತನ್ನತ್ತ ಸೆಳೆದುಕೊಳ್ಳುತ್ತದೆ. ಭೂದೇವಿ ತನ್ನ ಮಗಳನ್ನು ನೋಡಲು ಕುಂಬಳೆ ಸೀಮೆಯಿಂದ ಕಾಲ್ನಡಿಗೆಯಲ್ಲಿ ಮಧ್ಯಘಟ್ಟಕ್ಕೆ ಬರುವ ಸಾಹಸದೊಂದಿಗೆ ಕಥೆ ಆರಂಭವಾಗುತ್ತದೆ. ಆದರೆ ಕಥೆ ಮುಂದುವರೆದಂತೆ ಅದು ಕಾಲಾನುಕ್ರಮವಾಗಿ ಜೋಡಿಸಿದ ಘಟನೆಗಳ ಸರಣಿಯಂತೆ ಕಾಣುತ್ತದೆ.

ಆದರೂ ಈ ಕಾದಂಬರಿ ನಮಗೆ ಒಂದು ಮಹತ್ವದ ಸಂದೇಶವನ್ನು ನೀಡುತ್ತದೆ - ಪ್ರಕೃತಿ ಕೇವಲ ಮರ-ಗಿಡಗಳ ಸಮೂಹವಲ್ಲ, ಅದು ಒಂದು ಶಕ್ತಿ, ಜೀವಂತ ಚೈತನ್ಯ. ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವುದು ಮತ್ತು ಅದನ್ನು ಗೌರವಿಸುವುದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರಬೇಕು ಎಂಬುದನ್ನು ಲೇಖಕರು ಸುಂದರವಾಗಿ ನಿರೂಪಿಸಿದ್ದಾರೆ. ಹವ್ಯಕ ಭಾಷೆಯ ಬಳಕೆ ಕಥೆಗೆ ಒಂದು ವಿಶಿಷ್ಟ ಸ್ವಾದವನ್ನು ನೀಡಿದೆ.

ಕಾಡು-ನಾಡಿನ ನಡುವಿನ ಸಂಬಂಧ, ಮನುಷ್ಯ-ಪ್ರಕೃತಿ ಬಾಂಧವ್ಯ, ಮತ್ತು ಪ್ರಕೃತಿಯ ಮಡಿಲಲ್ಲಿ ಬದುಕುವ ಜನರ ಸರಳ ಜೀವನದ ಚಿತ್ರಣ ಇಲ್ಲಿದೆ. ನಿಸರ್ಗವನ್ನು ಪೂಜಿಸುವ, ಅದರೊಂದಿಗೆ ಬಾಳುವ ಜನರ ಸಂಸ್ಕೃತಿಯನ್ನು ಈ ಕಾದಂಬರಿ ಸಮರ್ಥವಾಗಿ ಚಿತ್ರಿಸುತ್ತದೆ. ಸತೀಶ್ ಯಲ್ಲಾಪುರ ಅವರ ಚಿತ್ರಗಳು ಕಾದಂಬರಿಯ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿವೆ.
Profile Image for Hemanth Hegde.
2 reviews
October 1, 2025
ಮಧ್ಯಘಟ್ಟ ( ಈಗ ಮತ್ತಿಘಟ್ಟ ) ಎಂದು ಕರೆಸಿಕೊಳ್ಳುವ ಶಿರಸಿಯ ಸಮೀಪದ ಊರಿನ ಜನ ಜೀವನಕ್ಕೆ ಸಂಬಂಧಿಸಿದ ಕಾದಂಬರಿಯಿದು.
ಕುಂಬಳ ಸೀಮೆಯ ಶ್ರೀದೇವಿಯನ್ನು ಮಧ್ಯಘಟ್ಟದಲ್ಲಿರುವ ಹೊಸಕಟ್ಟೆಯ ಗೋಪಯ್ಯ ಹೆಗಡೆ ಅವರಿಗೆ ಮದುವೆಯಾಗುವುದರಿಂದ ಶುರುವಾಗುವ ಕಾದಂಬರಿ ಅಲ್ಲಿನ ಜನ-ಜೀವನ, ಆಚಾರ-ವಿಚಾರ, ಹೇಗೆ ಅಲ್ಲಿನ ಜನರು ಪ್ರಕೃತಿಯೊಂದಿಗೆ ಒಂದಾಗಿ ಬದುಕುತ್ತಿದ್ದರು ಎಂಬುದನ್ನು ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ಅಲ್ಲಲ್ಲಿ ಬರುವ ಹವ್ಯಕ ತಿಂಡಿ ತಿನಿಸುಗಳು, ಮಲೆನಾಡಿನ ರೀತಿಗಳು ಮನಸ್ಸಿಗೆ ಮುದ ನೀಡುತ್ತದೆ. ನಾನೂ ಮಲೆನಾಡಿನವನಾದ ಕಾರಣ ಈ ಕಾದಂಬರಿ ನನಗೆ ಬಹಳ ಹತ್ತಿರವಾಯಿತು. ಖಂಡಿತ ಒಮ್ಮೆ ಓದಿ.
3 reviews1 follower
September 3, 2022
A good read to know about the life style of a generation behind us. Definitely people hails from western ghats of Karnataka will like this book.
Profile Image for Anirudh .
833 reviews
April 11, 2025
In a day and age where Kannada literature is in slow decline, any new book that attempts to revive it earns appreciation.

Madhyaghatta is a peek into the past. A collection of tales of a bygone era. Set in the dense forests of Uttara Kannada, Madhyaghatta follows the life of a mother and her family through several decades. The book is a collection of stories which often read as essays rather than a continuous novel.

The author has taken great pains to be as faithful as possible to the rural life of malenadu. It's the small details and characters that truly shine. Whether it's the local customs (Which change drastically depending on where you are) the hard and uncertain life or the characters and their interactions, all give an authentic feel to the book.

A lot of the book is in regional Kannada and some people may find it difficult to understand the language. The individual stories also sometimes deviate from the main story and might break the fluidity of the narrative. However these are minor issues and should not ruin the reading experience

Here's to hoping that more books will be written in Kannada and one day we might experience Kannada literature in all its splendor.
Displaying 1 - 11 of 11 reviews

Can't find what you're looking for?

Get help and learn more about the design.