Jump to ratings and reviews
Rate this book

ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ಸಾವರಕರ್

Rate this book

260 pages, Paperback

First published January 1, 2004

2 people are currently reading
42 people want to read

About the author

ಚಕ್ರವರ್ತಿ ಸೂಲಿಬೆಲೆ ವಾಗ್ಮಿ, ಚಿಂತಕ, ಅಂಕಣಕಾರ, ಬರಹಹಾರ ಮತ್ತು ಸಾಮಾಜಿಕ ಕಾರ್ಯಕರ್ತ. ಜೊತೆಗೆ ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕರು. ಅವರ ಸಾಮಾಜಿಕ ಸೇವೆ ಮತ್ತು ಪರಿಹಾರ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರ ಮೂಲ ಹೆಸರು 'ಮಿಥುನ್ ಚಕ್ರವರ್ತಿ'.
ಇವರು ೧೯೮೦ರ ಏಪ್ರಿಲ್ ೯ ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕೊಂಕಣಿ ಮಾತನಾಡುವ ದೈವಜ್ಞ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಂದೆಯ ಹೆಸರು ದೇವದಾಸ್ ಸುಬ್ರಾಯ ಶೇಟ್. ಇವರು ಸೂಲಿಬೆಲೆಯ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಓದಿ ಬೆಳೆದದ್ದು ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಎಂಬ ಗ್ರಾಮದಲ್ಲಿ. ನಂತರ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ವಿಶ್ವವಿದ್ಯಾಲಯ ಪೂರ್ವ ಶಿಕ್ಷಣವನ್ನು ಪಡೆದರು. ಮುಂದೆ ಭಟ್ಕಳದ ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗಣಕ ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಸ್ವಾಮಿ ವಿವೇಕಾನಂದರ ಲೇಖನಗಳ ಪ್ರಭಾವಕ್ಕೆ ಒಳಗಾದ ಇವರು ರಾಮಕೃಷ್ಣ ಪರಮಹಂಸರ ಚಿಂತನೆಗಳನ್ನು ಹೊತ್ತೊಯ್ಯುವ ರಾಮಕೃಷ್ಣ ಆಶ್ರಮದ ಸಂಪರ್ಕಕ್ಕೆ ಬಂದರು.
ಆರಂಭದಲ್ಲಿ ಚಕ್ರವರ್ತಿಯವರು 'ಹೊಸ ಸ್ವಾಂತಂತ್ರ್ಯದ ಬೆಳಕು' ಮುಖ್ಯ ಸಂಪಾದಕರಾಗಿ ಕೆಲಸ ಮಾಡಿದರು. ನಂತರ ಅವರು 'ಗರ್ವ' ಟ್ಯಾಬ್ಲಾಯ್ಡ್‌ ವ್ಯವಸ್ಥಾಪಕ ಸಂಪಾದಕರಾಗಿ ಕೆಲಸ ಮಾಡಿದರು. ಎರಡು ವರ್ಷಗಳಿಗೂ ಹೆಚ್ಚು ಕಾಲ ವಿಜಯ ಕರ್ನಾಟಕದಲ್ಲಿ ಅಂಕಣಕಾರರಾಗಿದ್ದರು. 'ವಿಜಯವಾಣಿ', 'ಹೊಸ ದಿಗಂತ', 'ಸಂಯುಕ್ತ ಕರ್ನಾಟಕ', ಕರ್ಮವೀರ, ವಿವೇಕ ಸಂಪದ ಮತ್ತು ಇತರ ಕೆಲವು ನಿಯತಕಾಲಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದರು. ಇವರು ವಿಜಯವಾಣಿಯಲ್ಲಿ 'ವಿಶ್ವಗುರು' ಎಂಬ ಹೆಸರಿನ ಅಂಕಣಗಳನ್ನು ಬರೆಯುತ್ತಿದ್ದರು.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
13 (76%)
4 stars
2 (11%)
3 stars
0 (0%)
2 stars
2 (11%)
1 star
0 (0%)
Displaying 1 - 3 of 3 reviews
Profile Image for ಸುಶಾಂತ ಕುರಂದವಾಡ.
431 reviews26 followers
November 19, 2021
ಕೊನೆಯ ತನಕ ಹೇಗೋ ಓದಿಕೊಂಡು ಹೋಗಬಹುದು ಆದರೆ ಕೊನೆಯ ಘಟ್ಟಕ್ಕೆ ಬಂದಾಗ ನಿಮ್ಮ ಮೈಯಲ್ಲಿರುವ ರಕ್ತ ಕುದಿಯುವುದು ಮಾತ್ರ ಖಂಡಿತ. YouTubeಲಿ ಕಾಲಾಪಾನಿ ನೋಡಿದಾಗಲೇ ವಿದ್ರಾವಕ ಅನಿಸುತ್ತದೆ ಇನ್ನು ಸಾವರ್ಕರ್ ಅವರು 50 ವರ್ಷ ಅಲ್ಲಿ ಸೆರೆವಾಸ ಅನುಭವಿಸುತ್ತಾರೆ ಅಂದ್ರೆ ಅದೂ ಒಂದು ದಿನವೂ ತಮ್ಮ ಸೋಲನ್ನು ಒಪ್ಪದೆಯೇ ಇದೊಂದು ಅದ್ಭುತವೇ ಸರಿ. ಆದರೆ ಎಷ್ಟೋ ಜನಕ್ಕೆ ಆ ಅದ್ಭುತದ ಅರಿವೇ ಇಲ್ಲದಾಯಿತು. ಎಷ್ಟೋ ಜನ ಹಿಯಾಳಿಸಿದರೆ, ತೆಗಳಿದ್ದು ಎಷ್ಟೋ ಜನವೋ ಏನೋ. ಆದರೂ ಛಲ ಬಿಡದೆ, ಭಾರತಿಯರನ್ನ ಜಾಗೃತಗೊಳಿಸಿ, ಹಿಂದೂಗಳ ಹೃದಯದಲ್ಲಿ ಕ್ರಾಂತಿಕಾರಿಯ ಕಿಚ್ಚನ್ನೆಬ್ಬಿಸಿ ಆ ಜ್ವಾಲೆ ಎಂದೂ ಆರಬಾರದು ಹಾಗೆ ಮಾಡಿಬಿಟ್ಟರು.
ಇನ್ನೊಂದು ನೋವೆಂದರೆ, ಸೆರೆವಾಸದ ದಿನಗಳಲ್ಲಿ ತಮ್ಮ ಸ್ವಾರ್ಥಕ್ಕಾಗಿ ಹೃದಯಹೀನ ತುಚ್ಛಗಳಾದ ರಾಜಕಾರಣಿಗಳು ವೀರರಿಗೆ ಬೆಂಬಲ ನೀಡದೆ ಷಂಡರಂತೆ ನಿಂತಿದ್ದು ಉಂಟು, ಆದರೆ ಇತಿಹಾಸದಲ್ಲಿ ಇವೆಲ್ಲ ಕಣ್ಮರೆ. ಈಗಲೂ ನಮ್ಮ ಪುಸ್ತಕದಲ್ಲಿ ಓದಲು ಸಿಗುವುದು ಅಕ್ಬರ್ ಒಬ್ಬ ಸೇನಾನಿ ಅಂತ, ಆದ್ರೆ ಮಹಾರಾಣಾ ಪ್ರತಾಪರ ಸುಳಿವೇ ಇಲ್ಲ.
ಚಕ್ರವರ್ತಿ ಅವರ ಈ ಪುಸ್ತಕ ಓದುದಾಗ ಪ್ರತಿಯೊಬ್ಬ ಹಿಂದೂವಿಗೆ ಎಲ್ಲೋ ಒಂದು ಕಡೆ ನೋವಾಗುವುದು ಖಂಡಿತ.
Profile Image for Manjunath Gollar.
19 reviews2 followers
January 1, 2020
Veer Savarkar = Shivaji Maharaj+ Giuseppe Mazzini+Bal Gangadhar Tilak + Bhagat Singh
Displaying 1 - 3 of 3 reviews

Can't find what you're looking for?

Get help and learn more about the design.