‘ಬ್ರಹ್ಮ’ ಲೇಖಕ ಗೋಪಾಲಕೃಷ್ಣ ಪೈ ಅವರ ಕಾದಂಬರಿ. ಕರಾವಳಿಯ ಸಾಂಪ್ರದಾಯಿಕ ಕಲೆಗಳಾದ ಯಕ್ಷಗಾನ/ತಾಳಮದ್ದಳೆಗಳ ಸ್ಪೂರ್ತಿಯಿಂದ ರಚನೆಯಾದ ಈ ಕಾದಂಬರಿ ಮಹಾಭಾರತಕ್ಕೆ ಸಂಬಂಧಿಸಿದ್ದು, ಹೆಸರೇ ಸೂಚಿಸುವಂತೆ ಇದೊಂದು ಪೌರಾಣಿಕ ಕಾದಂಬರಿ. ಇಲ್ಲಿ ಕೌಶಿಕ ಪರ್ವ, ದ್ವೈಪಾಯನ ಪರ್ವ, ಕನೋಜ ಪರ್ವ, ವ್ಯಾಸ ಪರ್ವ, ಮನು ಪರ್ವ, ತ್ರಿಶಂಕು ಪರ್ವ, ಮನು ಪರ್ವ, ಪಿಂಜಲಾ ಪರ್ವ, ವಿಶ್ವಾಮಿತ್ರ ಪರ್ವ, ಮೇನಕಾ ಪರ್ವ, ಹಾಗೂ ವಸಿಷ್ಠ ಪರ್ವ ಎಂಬ ಹತ್ತು ಪರ್ವಗಳನ್ನು ಕಾದಂಬರಿ ಒಳಗೊಂಡಿದೆ.
ಸ್ವಪ್ನ ಸಾರಸ್ವತ ಎಂಬ ಸಾರಸ್ವತರ ಪುರಾಣವೇ ಆದ ಮಹೋನ್ನತ ಕೃತಿ ರಚಿಸಿದ ಗೋಪಾಲಕೃಷ್ಣ ಪೈ ಅವರ ಉಳಿದ ಯಾವ ಕೃತಿಗಳು ನನಗೆ ಓದಿನ ಖುಷಿ ಕೊಡಲಿಲ್ಲ. ಅವರ ಕಥೆಗಳಾಗಲೀ, ಅನುವಾದಗಳಾಗಲೀ ಈಗ ಬರೆದ ಬ್ರಹ್ಮ ಆಗಲಿ ರಸಾಸ್ವಾದನೆಗೆ ಅನುಕೂಲವಾಗಿಲ್ಲ. ಮಹಾಭಾರತ ಬರೆದ ವ್ಯಾಸರ ಮೂಲವಾಗಿಟ್ಟುಕೊಂಡು ಬರೆದ ಈ ಕೃತಿ ಪುಟ ಪುಟದಲ್ಲಿ ಕೂಡ ಗುರಿಯೆಡೆಗೆ ಹೂಡಿದ ಬಾಣ ಗುರಿ ತಪ್ಪಿದ ಹಾಗೆ ಅನಿಸಿ ಬೇಸರ ಮೂಡಿಸಿತು.
ಮಹಾಭಾರತದ ಕಥಾಪ್ರಸಂಗ ಗಳಿಗೆ ವ್ಯಾಸರಿಗೆ ಸ್ಪೂರ್ತಿ ಹೇಗೆ ಒದಗಿರಬಹುದು ಎನ್ನುವ ಹುಡುಕಾಟದ ಪ್ರಯತ್ನ ಚೆನ್ನ ಎನಿಸಿದರೂ,ಕೃತಿ ಯಲ್ಲಿ ಎಲ್ಲೂ ಎಳ್ಳಷ್ಟು ರಸಾನುಭವ ಆಗಲೇ ಇಲ್ಲ... ಎಷ್ಟೋ ಪ್ರಸಂಗಗಳು ಅಪ್ರಸ್ತುತ ಅನಿಸುವುದು ಖಚಿತ. ಮಹಾಭಾರತದಲ್ಲಿ ಇಲ್ಲದೆ ಇರುವುದು ಏನು ಇಲ್ಲ ಎಂಬ ಮಾತು ಈ ರೀತಿಯ ಪ್ರಯತ್ನ ಎಷ್ಟು ಕ್ಲಿಷ್ಟಕರ ಎಂಬುದು ಅರಿವಾಗುತ್ತದೆ ; ಆದರೂ ಗುರುಕುಲದ ವ್ಯವಸ್ಥೆ, ಕೌಶಿಕ ವಿಶ್ವಾಮಿತ್ರಾರಾಗಿ ಮೇನಕೆ ಯೊಡನೆ ಸೇರುವುದು, ತ್ರಿಶಂಕು ಸೃಷ್ಟಿಸಿದ್ಧು ಬೇರೆಬೇರೆ ಯಾಗಿ ಚನ್ನಾಗಿವೆಯೇ ಹೊರತು ಮೂಲ ಕೃತಿಗೆ ಹೊಂದಿಕೊಂಡಂತೆ ಭಾಸವಾಗುವುದಿಲ್ಲ.