Yashwant Vithoba Chittal was a Kannada fiction writer born in Hanehalli, Uttara Kannada District
He completed his primary school education from his village school and his high school from the Gibbs High School, Kumta (1944).Later he did his Bachelors in science and Bachelors in technology both from Bombay University being a top ranker and gold medalist in the year 1955 and master's degree in chemical engineering from Stevens Institute of Technology, United States, and simultaneously pursued a career in science and technology along with literature. His contributions in the field of Polymer Science and synthetic resins was well recognized and he was selected as Fellow of Plastics and Rubber Institute, London.
He is well know for his short stories as well as novels earning him Karnataka Sahitya Academy Award, Sahitya Academy Award, Vardhamana Award, Adikavi Pampa Award etc
ಚಿತ್ತಾಲರ ಪುಸ್ತಕಗಳು ಅದ್ಭುತ. ಅವರ ಆಳವಾದ ಆ ಬರಹಗಳು ನಾವು ಓದಿದರೂ ಅರ್ಥವಾಗದೇ ಮತ್ತೊಂದು ಸಲ ಹಿಂದಕ್ಕೆ ಓದುವ ಹಾಗೆ ಮಾಡುತ್ತದೆ. ಈ ಪುಸ್ತಕದಲ್ಲಿಯ ಕೆಲ ಕಥೆಗಳು ಹಾಗೆಯೇ ಇವೆ. ಕೆಲವು ಆರಾಮಾಗಿ ಓದಿಸಿಕೊಂಡು ಹೋದರೆ ಕೆಲವು ಸ್ವಲ್ಪ ಕ್ಲಿಷ್ಟ. ಒಟ್ಟು ಏಳು ಕಥೆಗಳನ್ನು ಹೊಂದಿರುವ ಈ ಪುಸ್ತಕದಲ್ಲಿ ಸಾಧಾರಣವಾಗಿ ಹಳ್ಳಿಯಲ್ಲಿ ನಡೆಯುವ ಹಗರಣ ಅಥವಾ ಬೇರೆಯವರ ಜೀವನದಲ್ಲಿ ಆಗುಹೋಗುಗಳ ಬಗ್ಗೆ ಬಹಳ ಉತ್ಸಾಹ. ಚಿತ್ತಾಲರ ಊರು ಹನೇಹಳ್ಳಿಯು ಹಾಗೆಯೇ ಅಂತ ಅವರ ಹಲವಾರು ಲೇಖನಗಳಿಂದ ತಿಳಿದುಬರುತ್ತದೆ. ಮೊದಲನೆಯ ಕಥೆಯಲ್ಲಿ ಎಷ್ಟೋ ವರ್ಷಗಳ ತರುವಾಯ ಊರಿನಲ್ಲಿ ತನ್ನ ಗೆಳೆಯನನ್ನು ಕಂಡಾಗ ಅವನ ಹಿಂದೆ ಜನರು ಕಟ್ಟಿದ ಕಥೆಗಳು, ಅವನೇ ಹೇಳಿದ ಸ್ವಂತ ಕಥೆ ಕೇಳಿದಾಗ ನಮಗೆ ಯಾವುದು ಸತ್ಯ ಎನ್ನುವುದೇ ತಿಳಿಯದಾಗುತ್ತದೆ, ಇಲ್ಲಿಯ ಕಥಾನಾಯಕನಿಗೂ ಕೂಡ ಅಷ್ಟೇ. ಅದೇ ತರಹದ ಕಥೆಯು ನಮ್ಮ ಸುಂದರಿ ಕಥೆಯಲ್ಲಿಯೂ ಮೂಡಿ ಬಂದಿದೆ. ಕಾಮಾಕ್ಷಿ ಮಾಡಲೆಳಸಿದ ಅತಿ ದಿಟ್ಟ ಕೆಲಸ ಕಥೆಯಲ್ಲಿ ಕಾಮಾಕ್ಷಿ ತನ್ನ ಮದುವೆಯ ತರುವಾಯ ಸಂದರ್ಭವೊOದರಲ್ಲಿ ಎದುರಿಸಿದ ಬವಣೆ ಅವಳಿಗೆ ತುಂಬಾ ಕುಗ್ಗಿದಂತೆ ಮಾಡುತ್ತದೆ. ಆದರೆ ಅವಳು ಗಟ್ಟಿಮನಸಿನವಳು. ಅದಕ್ಕೆ ಅವಳೊಂದು ಗಟ್ಟಿ ತೀರ್ಮಾನಕ್ಕೆ ಬರುತ್ತಾಳೆ. ಅದನ್ನ ನೀವು ಓದಿ ತಿಳಿಯಬೇಕು. ಅಂದು ಬರೆದ ಕಥೆಯು ಈ ದಿನಗಳಲ್ಲಿಯೂ ಎಷ್ಟೋ ಮನೆಗಳಲ್ಲಿ ನಾವು ಕಾಣಬಹುದಾಗಿದೆ. ಪುಟ್ಟನ ಹೆಜ್ಜೆ ಕಾಣೋದಿಲ್ಲಾ ಕಥೆಯಲ್ಲಿ ಮೇಲೆ ಹೇಳಿದಂತೆ ಹಳ್ಳಿಯಲ್ಲಿ ಜನರು ಬೇರೆಯವರ ಮೇಲೆ ಕಥೆ ಹುಟ್ಟಿಸಿ ಅದೇ ಸತ್ಯವಾದದ್ದು ಎಂದು ತೀರ್ಮಾನಿಸಿಬಿಡುತ್ತಾರೆ. ಅದರಿಂದ ಆ ಊರಿನಲ್ಲಿ ನಡೆಯುವ ಸಂದರ್ಭಗಳು, ಆ ಕುಟುಂಬದವರು ಎದುರಿಸುವ ಕಷ್ಟಗಳು ಕಥೆಗಳಲ್ಲಿ ಮೂಡಿಬಂದಿವೆ. ಒಟ್ಟಿನಲ್ಲಿ ಬಹಳ ಆಳವಾಗಿ ಆಲೋಚಿಸುವ ಮತ್ತು ಗಾಂಭೀರ್ಯದ ಪುಸ್ತಕ ಚಿತ್ತಾಲರದ್ದು. ಓದಿ ಆನಂದಿಸಿ
ನಾನು ಓದಿರುವ ಚಿತ್ತಾಲರ ಒಂದೊಂದು ಕೃತಿಯೂ ಸುಂದರವಾಗಿದೆ, ಅರ್ಥ ಗ್ರಹಿಸಲು ಸ್ವಲ್ಪ ಸಮಯವೂ ಹಿಡಿಸುತ್ತದೆ,ಆದರೆ ಅವರ ಕೃತಿಗಳು ಅರ್ಥವಾದರೆ ನಾವು ಗೆದ್ದ ಹಾಗೆ. ಆದ್ದರಿಂದ ಚಿತ್ತಾಲರ ಕಾದಂಬರಿಗಳು, ಸಮಗ್ರ ಕಥೆಗಳು ತುಂಬಾ ಇಷ್ಟ, ಶಿಕಾರಿ, ಪುರುಷೋತ್ತಮ, ದಿಗಂಬರ ಕಾದಂಬರಿಗಳು ನನಗೆ ಅಚ್ಚುಮೆಚ್ಚು. ಹನೇಹಳ್ಳಿ ಅವರ ಎಲ್ಲಾ ಕಾದಂಬರಿಯಲ್ಲಿ ಕಾಣಿಸಿಕೊಳ್ಳುತ್ತದೆ, ಶಿಕಾರಿಯ ನಾಗನಾಥ್ ಪುರುಷೋತ್ತಮದ ಪುರುಷೋತ್ತಮ, ಮೂರು ದಾರಿಗಳು ಕಾದಂಬರಿಯಲ್ಲಿ ಬರುವ ನಿರ್ಮಲೆ, ಕತೆಯಾದಳು ಹುಡುಗಿಯಲ್ಲಿ ಬರುವ ಜಾನಕಿ, ಕೇಂದ್ರ ವೃತ್ತಾಂತದಲ್ಲಿ ಬರುವ ಅಭಿಜಿತ್, ಛೇದ ದಲ್ಲಿ ಬರುವ ಬೆಹರಾಮ್ ಈ ಎಲ್ಲಾ ಪಾತ್ರಗಳು ನನಗೆ ಇನ್ನೂ ನೆನಪಿವೆ, ಮರೆಯಲು ಸಾಧ್ಯವಿಲ್ಲ, ನಾಗನಾಥ್ ಪಾತ್ರವಂತೂ ನನಗೆ inspiration.
ಹೋದಾ ಪುಟ್ಟಾ ಬಂದಾ ಪುಟ್ಟಾ, ಪುಟ್ಟನ ಹೆಜ್ಜೆ ಕಾಣೋದಿಲ್ಲಾ, ಇದೊಂದು ಜನಪ್ರಿಯ ಒಗಟು, ಉತ್ತರ: ದೋಣಿ
ಶಿಕ್ಷಣಕ್ಕೆಂದು ಧಾರವಾಡಕ್ಕೆ, ನೌಕರಿಗೆಂದು ಮುಂಬಯಿಗೆ ಹೋಗಿ ಮುಂಬಯಿಯಲ್ಲೇ ಕೆಲಸ, ನಂತರ ಮದುವೆ, ಇಬ್ಬರ ಗಂಡು ಮಕ್ಕಳ ತಂದೆಯಾಗಿ ೧೭ ವರ್ಷಗಳ ನಂತರ ಒಮ್ಮೆ ಊರಿಗೇ ಹೋಗುವ ಆಸೆಯಾಗುತ್ತದೆ. ಮುಂಬಯಿಗೆ ಹೊರಡುವ ಮೊದಲು ಧಾರವಾಡ ಬಿಟ್ಟಾಗಲೇ ತಂದೆ ತಾಯಿ ತೀರಿಕೊಂಡಿದ್ದರು, ಇನ್ನು ಊರಲ್ಲಿ ತಮಗಿರುವವರೆಂದರೆ ಚಿಕ್ಕಪ್ಪ ಚಿಕ್ಕಮ್ಮ ಹಾಗು ಇವರ ಜೊತೆ ತನಗಿಷ್ಟವಾದ ಸೋದರತ್ತೆಯೂ ಇದ್ದಳು, ಚಿಕ್ಕಮ್ಮ ಚಿಕ್ಕಪ್ಪರಿಗೆ ಮಕ್ಕಳಿಲ್ಲದ ಕಾರಣ ತನ್ನನ್ನೇ ಸ್ವಂತ ಮಗನೆಂದು ಭಾವಿಸಿ ಮುದ್ದಾಡುತ್ತಿದ್ದ ನೆನಪು ಮರುಕಳಿಸಿ ಅವರೆನ್ನೆಲ್ಲಾ ನೋಡುವ ಬಯಕೆಯಾಗಿ ತಮ್ಮನ್ನು ಹೇಗೆ ಬರಮಾಡಿ ಕೊಳ್ಳುತ್ತಾರೆನ್ನುವುದೇ ಯೋಚನೆಯಾಗುತ್ತದೆ, ಕುಮಟ ತಲುಪಿದಾಗ ಅವರು ನಮ್ಮನ್ನು ಸ್ವಾಗತಿಸಿದ ರೀತಿ ಇಷ್ಟವಾಗುತ್ತದೆ. ಮುಂಬಯಿಯಲ್ಲಿ ಬೆಳೆದ ತನ್ನ ಮಕ್ಕಳಿಗೆ ಹಳ್ಳಿ ಪರಿಸರ ತೋರಿಸೋಣವೆಂದರೆ ೧೭ ವರ್ಷಗಳ ನಂತರ ಎಷ್ಟೆಲ್ಲಾ ಬದಲಾವಣೆಗಳನ್ನು ಕಂಡು ಹಳ್ಳಿಯ ಪರಿಸರವೇ ಇಲ್ಲದಾಗಿ ಬೇಸರವಾಗುತ್ತದೆ. ಆದರೆ ಅಂಗಳದಲ್ಲಿ ಅತ್ತೆ ಬೆಳಸಿದ ಹೆಚ್ಚಿನ ಹೂಗಿಡಗನ್ನು ಕಂಡು ಸಂತೋಷವಾಗುತ್ತದೆ. ಇವರ ಜೊತೆ ಮಾತುಕತೆಯಲ್ಲಿ ನಿರತನಾದಾಗ ಊರಿನ ಹಿರಿಯರೆಲ್ಲರೂ ತನ್ನನ್ನು ಮಾತಾನಾಡಿಸುವ ನೆಪದಿಂದ ನಾಗವೇಣಿ ಮುಂಬಯಿಯಲ್ಲಿ ಸಿಗುತ್ತಿರಬೇಕೆಲ್ಲವೇ ಎಂದು ಪ್ರಶ್ನಿಸಿದಾಗ ಯಾರು ಈ ನಾಗವೇಣಿ? ಇವರೆಲ್ಲರು ತನ್ನನ್ನೇಕೆ ಪ್ರಶ್ನಿಸುತ್ತಾರೆಂಬುದೆ ತಿಳಿಯುವುದಿಲ್ಲ. ಆಕೆಯ ಕುರಿತು ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗುತ್ತದೆ.
ಚಿಕ್ಕಪ್ಪನೆ ನಾಗವೇಣಿಯ ಕುರಿತು ಹೇಳತೊಡಗಿದರು, ನಾಗವೇಣಿ ಮನೆ ಬಿಡುವಾಗ ಅವುರ್ಸೆಯ ಸೋದರಮಾವನ ಮನೆಗೆ ಹೋಗಿ ಬರುತ್ತಾನೆಂದು ಹೇಳಿ ಹೊರಟವಳು ಅಲ್ಲಿಂದ ಮುಂಬಯಿಗೆ ಪರಾರಿಯಾದದ್ದು ತಿಳಿದ ನಾಗವೇಣಿ ತಾಯಿಗೆ ಆಘಾತವಾಗುತ್ತದೆ. ನಾಗವೇಣಿಯ ಪರಾರಿಯಿಂದ ಊರಿನಲ್ಲಿ ಗುಸುಗುಸು ಶುರುವಾಗುತ್ತದೆ, ಇಂತಹವನನ್ನೇ ಕಟ್ಟಿಕೊಂಡು ಹೋದಳು, ಯಾರೋ ಈಕೆಯನ್ನು ಅಪಹರಿಸಿ ಹೋದರು ಇನ್ನೂ ಹಲವು ಕಾರಣಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ನಾಗವೇಣಿ ಹೋದದ್ದಾದರು ಎಲ್ಲಿಗೆ, ಹೋಗಲು ಕಾರಣವೇನು, ಆಕೆಯು ಸ್ವಂತ ಖುಷಿಯಿಂದ ಹೋದಳೋ? ಸುಳ್ಳು ಆಮಿಷ ತೋರಿಸಿ ಅರಿಯದ ಹುಡುಗಿಯನ್ನು ಹಾರಿಸಿಕೊಂಡು ಹೋದರೋ? ಯಾರಿಗೂ ತಿಳಿಯಲಿಲ್ಲ, ತನಗೇಕೆ ತಿಳಿದುಕೊಳ್ಳುವ ಕುತೂಹಲವೋ ತನಗೆ ತಿಳಿಯುತ್ತಿಲ್ಲ, ನಾಗವೇಣಿ ಅಮ್ಮನ ಬಳಿ ಮಾತನಾಡಿದಾಗಲೇ ಆಕೆಯು ಮನೆಬಿಟ್ಟು ಹೋದ ಕಾರಣ ಸ್ವಲ್ಪಮಟ್ಟಿಗೆ ತಿಳಿಯಿತು, ಆದರೆ ಪೂರ್ತಿ ವಿವರ ಸೋದರತ್ತೆಯ ಬಳಿ ಮಾತಾನಾಡುವಾಗಲೇ ಗೊತ್ತಾದದ್ದು. ಆ ಕಾರಣ ತಿಳಿದು ಆಕೆಯನ್ನು ಎಂದೂ ಕಾಣದೇ ಇರುವ ತನ್ನಲ್ಲೂ ಕಣ್ಣೀರು ಜಿನುಗಿತು. ಸೋದರಮಾವನೇ ನಾಗವೇಣಿಯನ್ನು ಕೆಟ್ಟ ದಾರಿಗೆ ದೂಡಿದ, ದೊಡ್ಡ ವಜ್ರದ ವ್ಯಾಪಾರಿಯ ಮಗನಿಗೆ ಮಾರಿದ ಎಂದು ಆಕೆಯ ತಾಯಿ ಕಾರಣಕೊಟ್ಟರೆ, ಸೋದರತ್ತೆಯ ಜೊತೆ ಮಾತನಾಡಿದಾಗ ಆಕೆಯನ್ನು ವಜ್ರದ ವ್ಯಾಪಾರಿಗೆ ಮಾರಿರಲಿಲ್ಲ, ಮಾರಿದ್ದು ಸೂಳೇಗರಿ ಎನ್ನುವ ನರಕದ ದಂಧೆಯಲ್ಲಿ, ಆ ದಂಧೇಯಲ್ಲಿ ಜೀವನ ಸವೆಸಿ ತನ್ನ ಬದುಕೇ ನರಕವಾಗುವುದಕ್ಕೆ ಆಕೆಯ ಸೋದರಮಾವನೇ ಕಾರಣ ಎಂದು ತಿಳಿದಾಗ ಆತನ ಮೇಲೆ ಕೋಪವುಂಟಾಗುತ್ತದೆ.
*ಹನೇಹಳ್ಳಿ ಎನ್ನುವ ಸಣ್ಣಗ್ರಾಮದಲ್ಲಿ ಬಡ ತಂದೆ ತಾಯಿಗಳ ಒಬ್ಬಳೇ ಮಗಳಾಗಿ ಹುಟ್ಟಿದ ನಾಗವೇಣಿ ಹೆಸರಿನ ಮುಗ್ಧೆ ತಾನಿನ್ನೂ ಕಂಡೇ ಇರದ ಮುಂಬಯಿ ಜೀವನದ ವೈಭೋಗದ ಝಗಮಾಟಕ್ಕೆ ಮರುಳಾದ ತಪ್ಪಿಗೆ, ಏನೂ ಸುಖಪಡದೆ ಪ್ರಾಯದಲ್ಲೇ ಜೀವಕ್ಕೆ ಎರವಾದಳು*. ನಾಗವೇಣಿ ನಿಜಕ್ಕೂ ಏನಾದಳು ಎಂದು ಮರುದಿನ ಊರಿನ ಹಿರಿಯರು ತನ್ನನ್ನು ಪ್ರಶ್ನಿಸಿದಾಗ, ನಮ್ಮ ದುಷ್ಟ ಕುತೂಹಲದಲ್ಲಿ ಕೆಟ್ಟದ್ದನ್ನು ಊಹಿಸುವುದು ಬೇಡ, ಅವಳು ಎಲ್ಲೇ ಇರಲಿ, ಹೇಗೇ ಇರಲಿ ಅವಳು ಕಂಡ ಕನಸುಗಳೆಲ್ಲಾ ನನಸಾಗುವ ಜಾಗದಲ್ಲಿರಲಿ ಯಾವಾಗಲೂ ಖುಷಿಯಲ್ಲಿರಲಿ ಎಂದು ಪ್ರಾರ್ಥಿಸೋಣ ಎಂದು ಹೇಳಿದಾಗ ಹಿರಿಯರೆಲ್ಲರೂ, ಅಲ್ಪ ಸಮಾಧಾನ ಪಟ್ಟರು, ನಂತರ ತನ್ನನ್ನೂ ಏನೂ ಪ್ರಶ್ನಿಸದೆ ಹೊರಟುಹೋದರು. ಆದರೆ ತನ್ನಲ್ಲಿ ಎಂದೂ ಕಾಣದಿರುವ ನಾಗವೇಣಿ ಪ್ರಶ್ನೆಯಾಗಿಯೇ ಉಳಿದುಬಿಟ್ಟಳು*.
ನಾಗವೇಣಿ ಏನಾದಳು ಎಂಬ ಪ್ರಶ್ನೆಗೆ ನಗರದಿಂದ ಬಂದವನಿಗೆ ಉತ್ತರ ಕೊಡಲು ಸವಾಲಾಗುತ್ತದೆ. ಬಂದವರಲ್ಲಿ ಎಷ್ಟು ಜನರು ನಾಗವೇಣಿಯ ಬಗ್ಗೆ ಪ್ರಶ್ನಿಸಿದ ರೀತಿ ನೋಡಿದರೆ ಈ ಹನೇಹಳ್ಳಿಯಲ್ಲಿ ನಾಗವೇಣಿ ಎಲ್ಲರಿಗೂ ಪರಿಚಯ ಮಾತ್ರವಲ್ಲದೆ ಎಲ್ಲರಿಗೂ ತೀರಾ ಹತ್ತಿರದವಳೂ ಕೂಡ ಎಂಬುದರಲ್ಲಿ ಸಂಶಯವೇ ಇಲ್ಲ. ಈ ಮುಗ್ದೆಯ ದುರಂತ ಒಬ್ಬರಿಂದ ಒಬ್ಬರಿಗೆ ಒಂದೊಂದು ಕತೆಯಾಗಿ ಗಾಳಿ ಸುದ್ದಿ ಹರಡಿ ಕೊನೆಗೆ ನಗರದಿಂದ ಬಂದವನಿಗೆ ಮಾತ್ರ ಸತ್ಯ ಸಂಗತಿ ತಿಳಿಯುತ್ತದೆ, ಊರಿನ ಜನರಿಗೆ ಮಾತ್ರ ಬಾರದಿರುವ ನಾಗವೇಣಿಯು ಮುಂಬಯಿಯಲ್ಲೇ ಎಲ್ಲೋ ನೆಲಸಿರಬೇಕೆಂಬ ಅಲ್ಪ ಮನಸ್ಸಿನಿಂದ ತಮ್ಮ ತಮ್ಮ ಮನೆಗಳಿಗೆ ಹೊರಟುಹೋಗುತ್ತಾರೆ.