Jump to ratings and reviews
Rate this book

ಕಾಲೇಜು ರಂಗ

Rate this book

264 pages, Paperback

Published January 1, 2010

3 people are currently reading
43 people want to read

About the author

B.G.L. Swamy

19 books24 followers
Bengaluru Gundappa Lakshminarayana Swamy also known as B. G. L. Swamy and (Kannada: ಬಿ ಜಿ ಎಲ್ ಸ್ವಾಮಿ), was an Indian botanist and Kannada writer who served as professor and head of the department of Botany and as Principal of Presidency College, Chennai. He was the son of D. V. Gundappa (Kannada: ಡಿ.ವಿ. ಗುಂಡಪ್ಪ), an Indian writer and philosopher.

Swamy's literary works encompass a large range of topics. A large number of them are related to botany, and introduce botanical concepts to the layperson. A few of his books cover common plants used in everyday life in a scientific manner

Other works by Swamy pertain to literature, and some are partially autobiographical, dealing with his experiences as professor and principal. Apart from being an acclaimed botanist, BGL Swamy was also widely respected in the history and literary circles.
He extensively studied and researched the histories and literatures of both Kannada and Tamil languages. His book Tamilu Talegala Naduve (Among Tamil heads), is devoted to examining theories pertaining to languages' origins (especially the claims that were being made in those days by the Dravidian parties) and mostly debunking them

His book Hasiru honnu (Green is Gold) won the Kendra Sahitya Academy award given by Government of India. With that, Gundappa and Swamy, became the first father and son to win the prestigious award.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
20 (57%)
4 stars
13 (37%)
3 stars
0 (0%)
2 stars
2 (5%)
1 star
0 (0%)
Displaying 1 - 7 of 7 reviews
Profile Image for Raghavendra T R.
70 reviews17 followers
June 19, 2024
ಪ್ರಧ್ಯಾಪಕರಾಗಿದ್ದ ಸ್ವಾಮಿಯವರು ಒಲ್ಲದ ಮನಸ್ಸಿನಿಂದ ತಮಗೆ ಒಲಿದುಬಂದ ಪ್ರಿನ್ಸಿಪಾಲ್ ಹುದ್ದೆಯನ್ನು ಅಲಂಕರಿಸುತ್ತಾರೆ. ಆಗ ನಡೆಯುವ ಪ್ರಹಸನಗಳ ಅಥವಾ ಅನುಭವಗಳ ಕಥನ. ಅತ್ಯಂತ ಗಂಭೀರ ವಿಷಯವನ್ನೂ ಹಾಸ್ಯದ ಹಿನ್ನಲೆಯಲ್ಲಿ ಹೇಳುವ ಸ್ವಾಮಿಯವರ ಬರಹದ ಶೈಲಿ ರಚಿಸುತ್ತದೆ.
Profile Image for Prashanth Bhat.
2,156 reviews138 followers
March 22, 2018
'ಕಾಲೇಜು ರಂಗ'ದ ಒಂದು ಪ್ರಸಂಗ ಓದಿ. ಇದು ದಿ| ಬಿ.ಜಿ.ಎಲ್.ಸ್ವಾಮಿ ಬರವಣಿಗೆಯ ಒಂದು ಸ್ಯಾಂಪಲ್ ಮಾತ್ರ.

ನಾಗರಹಾವೊಂದು ಸರಕಾರದ ರೆಕಾರ್ಡು ,ವಿದ್ಯಾರ್ಥಿಗಳ ರೆಕಾರ್ಡು ಇಟ್ಟ ಬೀರುವೊಳಕ್ಕೆ ಸೇರಿಕೊಂಡಿತು. ಕಾಲೇಜಿನ ಕೆಲಸಗಳು ನಿಂತು ಹೋದವು.

ಪ್ರಿನ್ಸಿಪಾಲ ಅಹವಾಲು ಬರೆದ
" ಸರ್ಕಾರದ ರೆಕಾರ್ಡುಗಳನ್ನೂ ಹಣವನ್ನೂ ಇಡುವ ಬೀರುವಿನೊಳಕ್ಕೆ ನಾಗರಹಾವೊಂದು ಹೋಗಿ ಸೇರಿಕೊಂಡುಬಿಟ್ಟಿದೆ. ಬೀರುವನ್ನು ತೆರೆಯಲು ಸಿಬ್ಬಂದಿಯೆಲ್ಲ ಹೆದರುತ್ತಾರೆ.ಕಾಲೇಜಿನ ಕೆಲಸಗಳೆಲ್ಲ ನಿಂತು ಹೋಗಿವೆ.ಹಾವಾಡಿಗನನ್ನು ಕರೆಸಿ ಹಾವನ್ನು ಹಿಡಿಯುವುದಕ್ಕೆ ಅನುಮತಿ ಬೇಡುತ್ತೇನೆ.ಇದಕ್ಕೆ ತಗಲುವ ಖರ್ಚನ್ನು ಮಂಜೂರು ಮಾಡಬೇಕೆಂದು ಬೇಡುತ್ತೇನೆ.
ಮೂರು ದಿನಗಳ ಬಳಿಕ 'ಅವಸರ'ದ ಉತ್ತರ ಬಂತು. "ಹಾವಾಡಿಗರಿಂದ ಮೊದಲು ಮೂರು ಕೊಟೇಷನ್ಗಳನ್ನು ಪಡೆದು ಕಳಿಸಿ.ಕಾಂಪಿಟೆಟಿವ್ ಕೋಟೇಷನ್ ಗಳಿಲ್ಲದೆ ಯಾವ ಖರ್ಚನ್ನೂ ಮಂಜೂರು ಮಾಡಲಾಗದು"
ಪ್ರಿನ್ಸಿಪಾಲನ ಬದಲು:
"ಇಲ್ಲಿಂದ ಹತ್ತು ಮೈಲಿ ಸುತ್ತಿನೊಳಗಾಗಿ ಹಾವಾಡಿಗರಾರೂ ಇಲ್ಲವೆಂದು ವಿಷಾದದಿಂದ ತಿಳಿಸುತ್ತೇನೆ. ನಿನ್ನೆ ರಾತ್ರಿ ಈ ಹಳ್ಳಿಯನ್ನು ಹಾದು ಹೋಗುತ್ತಿದ್ದ ಹಾವಾಡಿಗನನ್ನು ತಡೆದು ನಿಲ್ಲಿಸಿಟ್ಟುಕೊಂಡಿದ್ದಾನೆ.ಅವನಿಗೆ 2.5 ರೂಪಾಯಿಕೊಟ್ಟರೆ ಹಾವನ್ನು ಹಿಡಿಯುತ್ತಾನಂತೆ.ದಯವಿಟ್ಟು ಹಣವನ್ನು ಮಂಜೂರು ಮಾಡಬೇಕು"
ಮೂರು ದಿನ‌ ಬಿಟ್ಟುಕೊಂಡು ಕೈ ಸೇರಿದ ಉತ್ತರ : " ಪ್ರಿನ್ಸಿಪಾಲರ ಕೇಳಿಕೆಯನ್ನು ಮಂಜೂರು ಮಾಡುವುದಕ್ಕೆ ಸರ್ಕಾರದ ರೂಲುಗಳಲ್ಲಿ ಅವಕಾಶವಿಲ್ಲ. ಆದ್ದರಿಂದ ಈ ಜರೂರು ಪರಿಸ್ಥಿತಿಯಲ್ಲಿ ಪ್ರಿನ್ಸಿಪಾಲರೇ ಖುದ್ದಾಗಿ ಹತ್ತು ಮೈಲಿಯಾಚೆ ಇರುವ ಪ್ರದೇಶಗಳನ್ನು ಸಂಚರಿಸಿ ಮೂರು ಕೋಟೆಷನ್ನುಗಳನ್ನು ಸಂಪಾದಿಸಿ ಬೇಗನೆ ರವಾನಿಸುವುದು"
ಪ್ರಿನ್ಸಿಪಾಲ ಮೂರು ದಿನ ಕಳೆದು ತಿರುಗಿ ಬಂದ ಮೂರು ಕೊಟೇಷನ್ನುಗಳನ್ನು ಹಿಡಿದುಕೊಂಡು. ಒಂದೊಂದು ಕೊಟೇಷನ್ನು ಇಂಗ್ಲೀಷಿನಲ್ಲಿದ್ದದ್ದಲ್ಲದೆ ಕೋಟೇಷನ್ನನ್ನೂ ಕೊಟ್ಟವನೂ ಇಂಗ್ಲೀಷಿನಲ್ಲೇ ಸಹಿ ಮಾಡಿದ್ದ! ವಿದ್ಯಾವಂತ ಹಾವಾಡಿಗರು! ಒಬ್ಬ ಹತ್ತು ರೂಪಾಯಿ ಎಂದಿದ್ದ; ಇನ್ನೊಬ್ಬ 8 ರೂಪಾಯಿ, ಮತ್ತೊಬ್ಬ 5 ರೂಪಾಯಿ. ಅವಸರದ ಕೊಟೇಷನ್ನುಗಳಲ್ಲವೇ? ಎಲ್ಲ ಕೊಟೇಷನ್ನುಗಳ ಬರವಣಿಗೆ ಒಂದೇ ಕೈಯಿನದು,ಒಂದೇ ಲೇಖನಿಯದು,ಒಂದೇ ಮಸಿಯದು. ಸಹಿಯಲ್ಲಿ‌ ನಮೂದಾಗಿದ್ದ ಹೆಸರುಗಳು ಮಾತ್ರ ಬೇರೆ ಬೇರೆ.ಪ್ರೊಸೀಜರು ಸರಿಯಾದಂತಾಯಿತಲ್ಲವೇ?
ಇವನ‌ ಪತ್ರಕ್ಕೆ ಬಂದ ಬದಲು :
" ಒಂದು ಹಾವು ಹಿಡಿಯುವುದಕ್ಕೆ ಐದು ರೂಪಾಯಿ ತುಂಬಾ ದುಬಾರಿ. ಹಿಂದೆ 2.5 ರೂಪಾಯಿಗೆ ಹಿಡಿಯುವೆನೆಂದು ಒಬ್ಬ ಹೇಳಿದ್ದನಲ್ಲವೇ? ಅವನನ್ನೇ ಕರೆದು ಹಿಡಿಸುವುದು"
ಇವನ‌ ಗೋಳು:
"ಈಗ ಅವನು ಊರು ಬಿಟ್ಟು 12 ಮೈಲಿಯಾಚೆಯಿರುವ ತಟ್ಟಿಪಟ್ಟಿಯಲ್ಲಿ ಮೊಕ್ಕಾಂ ಮಾಡಿದ್ದಾನೆ. ನಾನು ಅಲ್ಲಿಗೆ ಹೋಗಿ ಅವನನ್ನು ಎಷ್ಟೆಷ್ಟೋ ಪುಸಲಾಯಿಸಿದೆ. ಹೋಗಬರ ಬಸ್ಸು ಛಾರ್ಜು ಜಾತಾ 20ರೂಪಾಯಿ ಕೊಟ್ಟರೆ ಹಾವನ್ನು ಹಿಡಿಯುತ್ತೇನೆ ಎನ್ನುತ್ತಾನೆ. ಅವನ‌ ಬಸ್ಸೂ ಛಾರ್ಜೂ ಸೇರಿಸಿ ಒಟ್ಟು ಖರ್ಚು 25 ರೂಪಾಯಿ 10 ಪೈಸೆ ಆಗುತ್ತದೆ.ಮುಂದೇನು ಮಾಡಬೇಕೆಂದನ್ನು ತಿಳಿಸಿ"

25 ರೂಪಾಯಿಗೆ ಮೀರಿದ ಖರ್ಚನ್ನು ಮಂಜೂರು‌ ಮಾಡಲು ನಮ್ಮ ಆಫೀಸಿಗೆ ಅಧಿಕಾರವಿಲ್ಲ. ನಿಮ್ಮ ಅಹವಾಲನ್ನು ಮೇಲಧಿಕಾರಿಗಳಿಗೆ ಕಳುಹಿಸಿದ್ದೇವೆ.ಏತನ್ಮಧ್ಯೆ ಹಿಂದೇನಾದರೂ ಇಂಥ ಪ್ರಸಂಗಗಳಿಗಾಗಿ ಖರ್ಚುಮಾಡಿದ ಪ್ರಸಂಗಗಳು ನಿಮಗೇನಾದರೂ ತಿಳಿದಿವೆಯೇ ಎಂಬುದನ್ನು ತಕ್ಷಣ ತಿಳಿಸಿ"

ಆ ಕಾಲೇಜಿನ ಹೆಡ್ ಗುಮಾಸ್ತನಿಗೆ ಅವನ ತಾತ ಹೇಳಿದ ಸಂಗತಿಯೊಂದು ಜ್ಞಾಪಕದಲ್ಲಿತ್ತು.ಇದನ್ನು ಕೇಳಿ ಕೊಂಡು ಪ್ರಿನ್ಸಿ ಉತ್ತರ ಬರೆದ.
" ನಮ್ಮ ಹೆಡ್ ಗುಮಾಸ್ತನ‌ ಹೇಳಿಕೆಯ ಪ್ರಕಾರ ಇಲ್ಲಿನ‌ ತಾಲೂಕು ಆಫೀಸಿನಲ್ಲಿ ಒಂದು ದಿನ ಕಳ್ಳನೊಬ್ಬನು ಇಳಿಬಿದ್ದು ಅಲ್ಲಿದ್ದ ಹಣವನ್ನು ಕದಿಯುವುದರಲ್ಲಿದ್ದನಂತೆ. ಅವನ ಅಡ್ಡ ಹೆಸರು ನಾಗರಹಾವು ಅಂತೆ. ಈ ನಾಗರಹಾವು ಆಫೀಸೀನ‌ ಬೀರುವೊಳಗೆ ಬಚ್ಚಿಟ್ಟು ಒಳಗೆ ಚಿಲಕ ಹಾಕಿಕೊಂಡು ಬಿಟ್ಟನಂತೆ. ಪೋಲೀಸರಿಗೆ ಹೇಳಿ ಕಳುಹಿಸಿ ಬೀರು ಒಡೆಸಿದರಂತೆ. ಆ ರಿಪೇರಿ ಖರ್ಚನ್ನು ತಾಲೂಕು ಆಫೀಸರ ಸಂಬಳದಿಂದ ಹಿಡಿಯಲಾಯಿತಂತೆ. ಈ ಪ್ರಸಂಗ ಬಿಟ್ಟು ನಮಗೇನೂ ತಿಳಿಯದು"

ಒಂದು ತಿಂಗಳು ಬಿಟ್ಟು ಇದಕ್ಕೆ ದೊರೆತ ಉತ್ತರ
1. ಹಾವನ್ನು ಹಿಡಿಯಲು ನೀವು ಕೇಳಿದ ಖರ್ಚು 25ರೂಪಾಯಿ 10 ಪೈಸೆಯನ್ನು ಮೇಲಿನ ಕಛೇರಿ ಮಂಜೂರು ಮಾಡಿದೆ.ಒಡನೆಯೆ ಹಾವಾಡಿಗನನ್ನು ಕರೆಸಿ ಹಾವನ್ನು ಹಿಡಿಸುವುದು.
2.ಹಾವನ್ನು ಹಿಡಿಯುವಲ್ಲಿ ಬೀರುವಿಗೆ ಜಖಂ ಆದರೆ ಪ್ರಿನ್ಸಿಪಾಲರ ಸಂಬಳದಲ್ಲಿ ಹಿಡಿಯುವುದು.

ಪ್ರಿನಿಸಿಪಾಲನು ಈ ಕಾಗದವನ್ನೋದಿ ಕುಸಿದು ಬಿದ್ದು ಪಕ್ಕೆಲುಬು ಮುರಿದುಕೊಂಡ. ಬೀರುವನ್ನು ತೆರೆದು ನೋಡಿದಾಗ ಹಾವು ಸತ್ತು ಒಣಗಿ ಕರಕಲು ಕಟ್ಟಿಕೊಂಡಿತ್ತು. ಇವನ‌ ಪಕ್ಕೆಲುಬು ರಿಪೇರಿಗೆ 400 ಖರ್ಚಾಯಿತು.

ನೀತಿ: ದುಂದುಗಾರಿಕೆಯಾದರೂ ಪ್ರೊಸೀಜರ್ ನೆಟ್ಟಗಿರಬೇಕು"


( ಬಿ.ಜಿ.ಎಲ್.ಸ್ವಾಮಿ ಪುಸ್ತಕಗಳು ದೊರೆಯುವ ಸ್ಥಳ
ಡಿ.ವಿ.ಜಿ.ಪುಸ್ತಕ ಭಂಡಾರ
ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಪ್ರಿಮೈಸಸ್
ಬುಲ್ ಟೆಂಪಲ್ ರೋಡ್,ಎನ್.ಆರ್.ಕಾಲನಿ
ಬೆಂಗಳೂರು - 560019)
Profile Image for Karthikeya Bhat.
109 reviews13 followers
July 3, 2021
ಕಾಲೇಜು ರಂಗ
ಡಾ ಬಿ.ಜಿ.ಎಲ್. ಸ್ವಾಮಿ

ಕಾಲೇಜು ರಂಗ ಕಾದಂಬರಿಯಲ್ಲಿ ಸ್ವಾಮಿ ಯವರು ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು ಪ್ರಿನ್ಸಿಪಾಲ್ ಹುದ್ದೆಗೆ ನೇಮಕವಾಗುತ್ತಾರೆ. ಪ್ರಿನ್ಸಿಪಾಲ್ ಆಗಿ ಕಾಲೇಜಿನ ಹಲವಾರು ತಲೆಗಳ ನಡುವೆ ತಾವು ಅನುಭವಿಸಿದ ಕಷ್ಟವನ್ನು ಹಾಸ್ಯ ಪೂರ್ವಕವಾಗಿ ವಿವರಿಸಿದ್ದಾರೆ. ಸರ್ಕಾರಿ ಕಾಲೇಜಿಗೆ ಸೇರಿದ್ದು ಮುಖ್ಯಕಾರಣ ತಮಗೆ ಸಂಶೋಧನೆಗೆ ಅನುಕೂಲವಾಗುತ್ತದೆಂದು, ಆದರೆ ಸರ್ಕಾರದ ಆದೇಶ ಪ್ರಕಾರ ಅವರು ಪ್ರಿನ್ಸಿಪಾಲ್ ಹುದ್ದೆಗೆ ನೇಮಕವಾದಾಗ ಇದೊಂದು ಶನಿದಶೆ ಅಂಟಿಕೊಂಡಿತಲ್ಲ ಎಂದು ಗಾಬರಿಪಟ್ಟರು, ಆದರೆ ಸರ್ಕಾರದ ಆದೇಶವನ್ನು ಪಾಲಿಸಲೇ ಬೇಕಲ್ಲ ಎಂದು ಸಂಶೋಧನೆಯ ಜೊತೆ ಈ ವೃತ್ತಿಯನ್ನು ಕೆಲವು ವರ್ಷ ಮುಂದುವರೆಸಿದರು.

ಕಾಲೇಜು ರಂಗ ಇಂದಿನ ಶಿಕ್ಷಣದ ಪರಿಸ್ಥಿತಿಯನ್ನು ಎತ್ತಿ ಹೇಳುವ ಕಾದಂಬರಿ, ಇಲ್ಲಿ ಬರುವ ಹಲವಾರು ಪ್ರಸಂಗಗಳು ಉದಾ: ಕನ್ನಡದ ಕೊಲೆ, ಆಡಿಟರ್ ದಾಂಧಲೆ, ಚಾಮರೋಪಾಖ್ಯಾನ, ಹಕ್ಕುಗಳ ಪೈಪೋಟಿ ಇನ್ನೂ ಹಲವು. ಈ ಪ್ರಕರಣಗಳು ಹಾಸ್ಯಪ್ರಿಯವಾಗಿದ್ದರೂ ಅವನ್ನು ನೆನೆದಾಗ ಭಯವೂ ಆಗುತ್ತದೆ. ಸ್ವಾಮಿಯವರು ಸತ್ಯನಿಷ್ಠರು, ಇದರಿಂದ ಅಲ್ಲಿರುವ ಇತರ ಪ್ರಾಧ್ಯಾಪಕರಿಗೆ ಇವರ ರೀತಿ ಸಹಿಸಲು ಸಾಧ್ಯವಾಗುವುದಿಲ್ಲ. ಕಾಲೇಜ್ ಅಂದಮೇಲೆ ಎಷ್ಟೆಲ್ಲಾ ಸಮಸ್ಯೆಗಳು ಇದ್ದೇ ಇರುತ್ತದೆ. ಭಾಷೆಯ ಸಮಸ್ಯೆ, ವಿದ್ಯಾರ್ಥಿಗಳ ಸಮಸ್ಯೆ, ಮೂರ್ಖರಾದರೂ ಅಧಿಕಾರ ನಡೆಸುವ ಡೈರೆಕ್ಟರ್, ಯಾವುದೇ ಕಾರ್ಯದಲ್ಲಿ ತಪ್ಪು ಹುಡುಕುವ ಕರಟಕ ದಮನಕರು, ಪಾಠಮಾಡುವುದರಲ್ಲಿ ಆಸಕ್ತಿ ತೋರದೆ ಇತರದಲ್ಲಿ ಸಲಹೆ ಸೂಚಿಸುವ ಅಧ್ಯಾಪಕರು, ಒಂದಾ ಎರಡಾ ಇನ್ನೂ ಹಲವೂ. ಇವರು ಪ್ರಿನ್ಸಿಪಾಲ್ ಆದರೂ ಏನೇ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದರೆ ಆ ನಿರ್ಧಾರವೆಲ್ಲ ತಮ್ಮ ಮೇಲಿನ ಅಧಿಕಾರಿಗಳದು ಹಾಗು ರಾಜಕಾರಣಿಗಳದು. ಹೀಗೆ ಒಂದಲ್ಲಾ ಎರಡಲ್ಲ ಹಲವಾರು ಸಮಸ್ಯೆಗಳು ಅಂಥದರಲ್ಲೂ ಸಹ ತಮ್ಮ ವೃತ್ತಿಯನ್ನು ನಿಷ್ಠಯಿಂದ ಪಾಲಿಸಲು ಶ್ರಮಪಟ್ಟ ಸ್ವಾಮಿಯವರು ಕಾಲೇಜು ರಂಗದಲ್ಲಿ ಹಾಸ್ಯರೂಪದಲ್ಲಿ ವಿವರಿಸಿದ್ದಾರೆ.

ಈ ಮುಖಪುಟದಲ್ಲಿನ ಒಂದು ಪ್ರಸಂಗವನ್ನು ಇಲ್ಲಿ ಹಂಚಿಕೊಳ್ಳುತ್ತೇನೆ.
೧. ಡೈರೆಕ್ಟರ್: ಎಷ್ಟು ವರ್ಷ ಆಗುತ್ತದೆ ಪಿ.ಎಚ್.ಡಿ. ತೆಗೆದುಕೊಳ್ಳುವುದಕ್ಕೆ.
ಸ್ವಾಮಿ: ಬುದ್ಧಿವಂತನಿಗೆ ಮೂರು ವರ್ಷ, ಸಾಮಾನ್ಯವಾದ ಬುದ್ಧಿ ಮಟ್ಟವಿರುವವನಿಗೆ ನಾಲ್ಕು ವರ್ಷ, ಇನ್ನೂ ಕೆಳಗಿನ ಮಟ್ಟದವನಿಗೆ ಐದಾರು ವರ್, ಮೂರು ಸಲ ಫೇಲಾಗಿ ಮೂರನೇ ತರಗತಿಯಲ್ಲಿ ತೇರ್ಗಡೆಯಾಗದವನಿಗೆ ಈ ಜನ್ಮದಲ್ಲಿಲ್ಲ.
ಡೈರೆಕ್ಟರ್: ಕೊನೆಯದರ ವಿಷಯವಾಗಿ ನಿಮ್ಮನ್ನು ನಾನು ಕೇಳಲಿಲ್ಲ ಕಂಡರೆ ತಿಳಿಯಿತೇ,
ಸ್ವಾಮಿ: ನೋಟೆಡ್ ಸರ್, ತಿಳಿಯಿತು ಸರ್.

೨. ಪರೀಕ್ಷಾ ಸಮಯದಲ್ಲಿ ಡೆಮಾನಸ್ಟ್ರೇಟರಾಗಿ ಬಂದ ಬೇರೆ ಕ���ಲೇಜಿನ ಡೈರಕ್ಟರಿಗೆ ಕರಟಕ ದಮನಕರ ಮಾತನ್ನು ಕೇಳಿ ಶ್ರೀಗಂಧದ ಹಾರವನ್ನು ತರಿಸಿ ಇವನ ಕೊರಳಿಗೆ ಹಾಕಿದೆ. ಮೂಸಿ ನೋಡಿ ಏನ್ರೀ ಫಾರಿನ್ ಶೆಂಟೋ?ಎಂದ. ಅಲ್ಲ ಸರ್ ಶ್ರೀಗಂಧ ಮರ, ಏನ್ರೀ ಹೆಣ ಸುಡುವ ಮರದಿಂದ ಮಾಡಿದ ಹಾರ ಹಾಕಿಬಿಟ್ರಿ, ಅಯ್ಯೋ ಎಲ್ಲರಿಗೂ ಮಾಡುವುದಕ್ಕೆ ಶಕ್ತಿಯಿರುವುದಿಲ್ಲ,ಅನುಕೂಲವಿದ್ದವರು ಮಾಡುತ್ತಾರೆ. ಹಾಗೆ ತಿಳಿಬೇಡಿ ಊದುಬತ್ತಿ ಮಾಡುವುದಕ್ಕೂ ಇದೇ‌ಮರದ ಪುಡಿಯನ್ನು ಉಪಯೋಗಿಸುತ್ತಾರೆ. ಹಾಗೋ ಪರವಾಗಿಲ್ಲ ಕಣ್ರೀ ನೀವು ಏನೇನೋ ತಿಳಿದುಕೊಂಡಿದ್ದೀರಿ.ನಿಮ್ಮ ವಿಷಯ ನಂಗೆಲ್ಲ ಗೊತ್ತು ಕಣ್ರೀ.

ಹೀಗೆ ಹಲವಾರು ಪ್ರಸಂಗಗಳನ್ನು ಚಿತ್ರದ ಮೂಲಕ ಪ್ರತಿ ಅಧ್ಯಾಯದಲ್ಲಿ ಹಾಸ್ಯರೂಪವಾಗಿ ವಿವರಿಸಿದ್ದಾರೆ.

*ಕಾರ್ತಿಕೇಯ*
Profile Image for ಸುಶಾಂತ ಕುರಂದವಾಡ.
422 reviews25 followers
May 2, 2021
ಸ್ವಾಮಿಯವರ ವಿಡಂಬನ ಮತ್ತು ಹಾಸ್ಯ ಕಾದಂಬರಿ. ಸರ್ಕಾರಿ ಕಾಲೇಜುಗಳಲ್ಲಿ ಎಂಥ ಗುಳ್ಳೆ ತಲೆಗಳ ನಡುವೆ ಇರಬೇಕಾದ ಪರಿಸ್ಥಿತಿ ಬರುತ್ತದೆ ಎನ್ನುವ ಸಾರಾಂಶ ಹೊಂದಿರುವ ಕಥೆ
Profile Image for Veena Sridhar.
44 reviews2 followers
December 4, 2020
I could relate to many events in various contexts in campus even today. All in campus must read.
Profile Image for Anirudh .
833 reviews
July 7, 2018
Yet another humourous book by BGL. Enjoyed reading this a lot.
Displaying 1 - 7 of 7 reviews

Can't find what you're looking for?

Get help and learn more about the design.