Jump to ratings and reviews
Rate this book

ಗ್ರಸ್ತ | Grasta

Rate this book
GRASTA is a contemporary novel written by Karanam Pavan Prasad. The protagonist of this novel is a common man by birth, individual by his attitude and scholar in his own orbit. He is engrossed by social, scientific, philosophical and personal aspects of his life. The novel is tending to find the ultimate truth of life through the protagonist. Scenarios stitched in between the story, is very well equipped to project the basic conflicts of life and death.

147 pages, Paperback

Published January 12, 2017

6 people are currently reading
115 people want to read

About the author

Karanam Pavan Prasad

7 books193 followers
Karanam Pavan Prasad, a Kannada novelist and playwright from Bangalore, is celebrated for his distinctive storytelling that combines new-age perspectives with themes of urban ecology, identity, and faith. Transitioning from a successful theater career, he gained widespread acclaim with novels like Karma, Nunni, Grastha, Rayakonda, and Sattu, each exploring complex societal and philosophical themes. solidifying his place as a prominent voice in contemporary Kannada literature.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
78 (50%)
4 stars
54 (34%)
3 stars
18 (11%)
2 stars
4 (2%)
1 star
2 (1%)
Displaying 1 - 24 of 24 reviews
Profile Image for Pradeep T.
120 reviews22 followers
February 7, 2017
Hindu philosophy also known as “Darshanikas” in Sanskrit reveals us a great deal of information on life, birth, death, love, sex, family, personalities, etc… and, there is Quantum Physics that explores the vast and bounds of universe with relevant experiments and theories. A book that combines the ideas of these two in a story is an attempt that requires a great study in those subjects. At least enough homework should be done before even attempting such a feat.

This book combines the ideas of Metaphysics, Philosophy, Darshanikas, Quantum Physics, and Electricity etc… But, we definitely cannot term this as a science novel; neither can we term this as a philosophical novel too. This book stands in between. The thin line of separation from Science and Philosophy is what makes this book as a class apart.

The main protagonist of the novel is Avinash, an Electronic scholar, more than that a truth seeker. He is a common man by his birth, individual by his attitude and scholar in his own accord. He is engrossed in social, scientific, philosophical and personal aspects of his life. He is kind of a person who doesn’t get excited by the happiness and doesn’t feel a sense of remorse when something bad happens.

As we read further into the book, we will get to read the tale of Avinash who rose from the ashes. He has built himself an identity by the help of good people that didn’t let him go astray. Now that he has a steady career but to enjoy his success, his parents are not alive. That’s kind of another struggle. Throughout the book we will realize, life is not what we aspired to be, instead life is what happens when you’re busy in making plans for it.

Rekha is another protagonist or I can say antagonist to some extent, enters the life of Avinash in the most unexpected way. This particular event makes Avinash question the life in many perspective, the reason being, should be read from the novel, and I am not going to include it in the review. Cheated by her boyfriend and her impotent husband drew Rekha towards Avinash. But her dubious plans remain intact till the end. Once we will realize what kind of woman is Rekha, we will sure feel pity for Avinash. He has done no fault, but still he agrees to the demand of Rekha and starts to live with her. Their relationship is one of a kind. He became her husband without marrying her. Became father to her child without even realizing. That’s where the novel hits like a storm. What is life? What are relationships? What are life goals? Is family is just a social agreement? Does every faults of a person become zero when living under a family? What is birth? What is death? What is the reason for man’s survival? These are the questions that haunts even after finishing the novel.

Read the full review here
Profile Image for Pavan Kumar.
1 review
February 4, 2017
ಎಲ್ಲಿಯ ಶಂಕರಾಚಾರ್ಯರು, ಎಲ್ಲಿಯ ನಿಕೋಲಾ ಟೆಸ್ಲಾ,ಎಲ್ಲಿಯ ಅದ್ವೈತ ಸಿದ್ಧಾಂತ ಎಲ್ಲಿಯ ನಿಸ್ತಂತು ವಿದ್ಯುತ್.ಈ ಮೂಡಣ ಹಾಗು ಪಡುವಣ ಮಹಾತ್ಮರ ವಿಚಾರಧಾರೆಯಲ್ಲಿ ಸಾಮ್ಯತೆಯನ್ನು "ಗ್ರಸ್ತ" ಕಾದಂಬರಿಯ ಕಥಾವಸ್ತುವಿನ ಮೂಲಕ ಓದುಗರಿಗೆ ಸಾಹಿತ್ಯದ ರಸಸ್ವಾದ ಉಣಬಡಿಸಿದ್ದಕ್ಕಾಗಿ ಅನಂತಾನಂಥ ಧನ್ಯವಾದಗಳು.
ಕರ್ಮ ಕಾದಂಬರಿಯ ಪುರುಷೋತ್ತಮ,ನನ್ನಿಯ ಏರಿಕ್ಬರ್ಗ್ ಇವರಲ್ಲಿ ವ್ಯಕ್ತವಾಗಿದ್ದ ಹಲವು ಆದರ್ಶಯುತ ವಿಚಾರಗಳಂತೆಯೇ ಲೇಖಕರು ಗ್ರಸ್ತದಲ್ಲಿ ಅವಿನಾಶನು ಚಿಂತಿಸುವ ಚಡಪಡಿಸುವ possibilities of renewable power generation and its implementations ಬಗ್ಗೆ ಸವಿಸ್ತಾರವಾಗಿ ವಿಶ್ಲೇಷಿಸಿರುವುದು ಟೆಸ್ಲಾ ಹಾಗು ಎಲಾನ್ ಮಸ್ಕ್ ಇವರೀರ್ವರನ್ನು ಅವರ ಕೊಡುಗೆಯನ್ನು ಪ್ರೀತಿಸುವ ನನಗೆ ಅತೀವ ಖುಷಿಯನ್ನುಂಟು ಮಾಡಿದ ವಿಚಾರ.
ಮನುಷ್ಯ ಸಹಜ ಬಲ ದುರ್ಬಲತೆಗಳು ಬಡತನ,ದಾಕ್ಷಿಣ್ಯ,ಪ್ರೀತಿ,ಮೋಹ, ಸ್ವಾರ್ಥ ಇವುಗಳ ಮಧ್ಯೆ ಮೌಲ್ಯಯುತ ಜೀವನಕ್ಕಾಗಿ, ಗೌರವಕ್ಕಾಗಿ ಪಾತ್ರಗಳು ಒಳಪಡುವ ತೊಳಲಾಟವನ್ನು ಕಥಾಹಂದರದಲ್ಲಿ ಅದ್ಭುತವಾಗಿ ಚಿತ್ರಿಸಿದೆ.
ಆದರೆ ಅವಿನಾಶನ ಪಾತ್ರ ಹಾಗು ಅವನ ಧೀರ್ಘ ಚಿಂತನೆಗಳು ಓದುಗರನ್ನು ಕಾಡುವುದಂತೂ ನಿಜ.
ಲೇಖಕರೇ ಹೇಳಿದಂತೆ
ವಿಜ್ಞಾನ,ವೇದಾಂತ,ಸಾಂಸಾರಿಕ ತೊಳಲಾಟ ಇವೆಲ್ಲವುಗಳಿಂದ ಆವರಿಸಲ್ಪಟ್ಟ ವ್ಯಕ್ತಿಯ ಅನಂತವಾದುದಕ್ಕೆ ಒಡ್ಡುಕೊಳ್ಳುವ ಪ್ರಕ್ರಿಯೆಯನ್ನು ಪ್ರತಿಮೆಯಾಗಿಸಿದೆ ಈ "ಗ್ರಸ್ತ".
ಕೃತಿಯ ವ್ಯಾಪ್ತಿ ಅಪಾರ,ಅದರ ಸಾಧನೆಯ ದುಡಿಮೆಯು ತಪಸ್ಸಿನಂತೆ.
ಇಂತಹ ಅಧ್ಭುತ ಅನುಭೂತಿ ನೀಡಿದ ಈ ಕೃತಿಗಾಗಿ ಮಗದೊಮ್ಮೆ ಧನ್ಯವಾದಗಳು
Profile Image for Shreeshail Magadum.
11 reviews8 followers
July 1, 2017
ಮಾನವ ಜೀವನದ ಅಮೂಲ್ಯ ಅಂಶಗಳಾಗಿರುವ ವಿಜ್ಞಾನ ಹಾಗೂ ತತ್ವಜ್ಞಾನ ಎಂಬ ವಿಭಿನ್ನ ಮಗ್ಗುಲಗಳನ್ನು ಒಂದುಗೂಡಿಸಿ ಭಟ್ಟಿ ಇಳಿಸಿ ಉಣಬಡಿಸಿರುವುದು ಕನ್ನಡ ಸಾಹಿತ್ಯದಲ್ಲಿ ಕರಣಂ ಪವನ್ ಪ್ರಸಾದ್ ಅವರ ಗ್ರಸ್ತ ಒಂದು ವಿಶಿಷ್ಟ ಪ್ರಯೋಗ. ಒಬ್ಬ ವ್ಯಕ್ತಿಯಲ್ಲಿರುವ ವೈಜ್ಞಾನಿಕವಾದ ಸುಪ್ತ ಭಾವನೆಗಳನ್ನು ಉದ್ದೀಪನಗೊಳಿಸುವಲ್ಲಿ ಗ್ರಸ್ತದಂತಹ ಕಾದಂಬರಿ ಕನ್ನಡ ಸಾಹಿತ್ಯಕ್ಕೆ ಸದ್ಯದ ಮಟ್ಟಿಗಂತೂ ಅವಶ್ಯಕವಾದ್ದು. ಅದರಲ್ಲಿ ನಿರೂಪಿಸಿದಂತೆ ವಿಜ್ಞಾನಕ್ಕಿಂತ ತತ್ವಜ್ಞಾನ ಮುಂದೆ ಓಡುತ್ತಿದೆ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಎಷ್ಟೆ ಮುಂದುವರೆದಿದ್ದರೂ, ಅದರ ಮೂಲ ತಳಹದಿಯಾದ ವಿದ್ಯುತ್ ಕ್ಷೇತ್ರದಲ್ಲಿ ಹಿಂದೆ ಉಳಿದಿದ್ದು ಕೂಡ ಸಮಾಜಕ್ಕೆ ಅಷ್ಟು ಒಳಿತಲ್ಲ ಅನ್ನುವ ಕಲ್ಪನೆ ಅದತ್ಭವಾದದ್ದು. ಒಂದು ದೇಶಕ್ಕೆ ಮೂಲಭೂತವಾಗಿ ಬೇಕಾಗಿರುವುದು ನೀರು,ರಸ್ತೆ, ವಿದ್ಯುತ್. ಈ ಮೂರು ಅಶ್ಯಕತೆಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಒಂದು ದೇಶವನ್ನು ನಿರ್ಮಿಸುವಲ್ಲಿ ಉಚ್ಚಮಟ್ಟದ ಪಾತ್ರ ವಹಿಸುತ್ತದೆ ಎನ್ನುವುದು ಎಷ್ಟು ವಾಸ್ತವವಾದದ್ದು. ಹುಟ್ಟು ಮುಖ್ಯವಲ್ಲ, ಹುಟ್ಟಿನ ಪರಿಣಾಮ ಮುಖ್ಯ ಎಂದು ಕಾದಂಬರಿಯುದ್ದಕ್ಕೂ ತೋರಿಸಿದ ಅವಿನಾಶನ ಪಾತ್ರ ಇನ್ನಿಲ್ಲದಂತೆ ಕಾಡುತ್ತದೆ.

ಈ ಕಾದಂಬರಿಯನ್ನೊಮ್ಮೆ ಸಾದ್ಯವಾಗಿಸಿಕೊಂಡು ಓದಿ, ಖಂಡಿತಾ ಇಷ್ಟ ಆಗತ್ತೆ.

ಅವರಿಂದ ಇನ್ನೂ ವಿಭಿನ್ನ ರೀತಿಯ ಕೃತಿಗಳನ್ನು ಎದುರು ನೋಡುತ್ತಾ ಹೇಳುವುದಾದರೆ ಕನ್ನಡ ಸಾರಸ್ವತ ಲೋಕಕ್ಕೆ ಇನ್ನೂಬ್ಬ ಭೈರಪ್ಪನವರು ಉದಯಿಸುತ್ತಿದ್ದಾರೆ ಎನ್ನುವುದು ಅತಿಶಯೋಕ್ತಿ ಅಲ್ಲ.
Profile Image for Karthik.
61 reviews18 followers
March 22, 2022
ಬ್ರಹ್ಮ , ಆತ್ಮ , ಅದ್ವೈತ , ವಿಜ್ಞಾನ , ತಂತ್ರಜ್ಞಾನ,ಮನಸ್ಸು = ಗ್ರಸ್ತ !
--
ಗ್ರಸ್ತ ಎಂದರೆ "he who has been eaten by (another)" ಅಂತ ಅರ್ಥ. ಬ್ರಹ್ಮಾಂಡದ ಊಹ್ಯಾತೀತ ವಿಚಾರಗಳಿಂದ,ಸಂಬಂಧಗಳ ಸರಪಳಿಯಿಂದ ಬಂಧಿತನಾದ ಓರ್ವ ವಿಜ್ಞಾನಿ, ಸಂಪೂರ್ಣವಾಗಿ "ಗ್ರಸ್ತ"ನಾಗುತ್ತಾ ಕೊನೆ ಮುಟ್ಟುವ ಈ ಕಾದಂಬರಿ, one of a kind.

ವಿದ್ಯುತ್ತನ್ನು ನಿಸ್ತಂತುವಾಗಿ transmit ಮಾಡುವ ಕುರಿತು ಅಧ್ಯಯನ ಮಾಡುವ "ಅವಿನಾಶ್" ಈ ಕಾದಂಬರಿಯ ಮುಖ್ಯ ಪಾತ್ರಧಾರಿ. ಆತನ ಪಾತ್ರ ತೆರೆದುಕೊಂಡಷ್ಟು ಅಗೋಚರವಾಗಿಯೇ ಉಳಿದುಬಿಡುತ್ತದೆ.ಅಂತರ್ಜಾತಿ ವಿವಾಹ ಮಾಡಿಕೊಂಡ ಅವಿನಾಶನ ತಂದೆ-ತಾಯಿ ಎಲ್ಲರಿಂದ ದೂರ ಉಳಿದು ಬದುಕು ಕಟ್ಟಿಕೊಳ್ಳುವ ರೀತಿ ಬೆಂಗಳೂರಿನ ಬಡತನಕ್ಕೆ ಮೂಕ ಸಾಕ್ಷಿ. ಲೇಖಕರೇ ಹೇಳುವಂತೆ ನಗರದ ಬಡತನ ಚಿನ್ನದಂಗಡಿಯ ಬಳಿಯಿರುವ ಚರಂಡಿಯಂತೆ! i agree. ನಂತರ ಅವಿನಾಶ್ ಪ್ರೊಫೆಸರ್ ಓರ್ವರ ಹಂಗಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದು, ಲ್ಯಾಬ್ ಸಹಾಯಕನಾಗಿ ಕೆಲಸಕ್ಕೆ ಸೇರಿ ಮುಂದೆ ಎಲ್ಲರು ಹುಬ್ಬೇರಿಸುವಂಥ ವಿಜ್ಞಾನಿಯಾಗಿದ್ದು ಆತನೊಳಗಿದ್ದ ತುಡಿತಗಳ ಪರಿಣಾಮದಿಂದ.'ಹುಟ್ಟು ಮುಖ್ಯವಲ್ಲ, ಹುಟ್ಟಿನ ಪರಿಣಾಮ ಮುಖ್ಯ' - ಇದನ್ನು ಸಾಧಿಸಿ ತೋರಿಸಿದ.
ಹೊಟ್ಟೆಯ ಹಸಿವು, ದೇಹದ ಹಸಿವು - ಹೀಗೆ ಸಾಮಾನ್ಯರಿಗೆ ಬಾಧಿಸುವ ಎಲ್ಲವನ್ನೂ ಅನುಭವಿಸಿ,ಪರಬ್ರಹ್ಮನ ಶಕ್ತಿಯನ್ನು derive ಮಾಡುವ ಅವಿನಾಶನದ್ದು ಅದೆಂತ ಹಸಿವು! ಅದೇ ಬ್ರಹ್ಮದ ಹಸಿವು! infact, ಅವನಿಗೆ ಸಂಭಂದಗಳೇ ಬೇಕಿರಲಿಲ್ಲ. ಎಲ್ಲರನ್ನೂ, ಎಲ್ಲವನ್ನೂ ಅವನು ಹಂತ ಹಂತವಾಗಿ ತೊರೆಯುವಾಗ ನಿಮಗೂ ಹಾಗೆಯೇ ಅನಿಸಬಹುದು.ಅಂತಹ goal oriented ವ್ಯಕ್ತಿತ್ವ ಅವನದ್ದು.

ರೇಖಾ ! 'ಕೆಡುಕಿಲ್ಲದ ಸ್ವಾರ್ಥ ಒಳ್ಳೆಯದು' - ಈ ಸಾಲಿಗೆ ಹೇಳಿ ಮಾಡಿಸಿದ ಪಾತ್ರ ಈಕೆಯದ್ದು. no words ! ಅವಿನಾಶನ ಕಾಲೇಜಿನಲ್ಲಿ ಅಧ್ಯಾಪಕಿ ಆಗಿದ್ದ ಈಕೆ, ಕೊನೆಗೆ ಅವಿನಾಶನ ಬಾಳನ್ನು ಹಂತ ಹಂತವಾಗಿ ಕಬಳಿಸುತ್ತಾ ಬಂದದ್ದು ವಿಪರ್ಯಾಸ. ಒಮ್ಮೆ ಅಮಾಯಕಳಂತೆ ಕಂಡು, ಆಕೆಯ ನೈಜ ಪಾತ್ರದ ಅನಾವರಣವಾದ ಇನ್ನಷ್ಟೂ ಕಾಡಿಬಿಡುತ್ತಾಳಲ್ಲ ಈ ರೇಖಾ.

ಗ್ರಸ್ತದಲ್ಲಿ ಸಾಕಷ್ಟು ವಿಷಯಗಳಿವೆ. ತರ್ಕಕ್ಕೆ ಸುಲಭವಾಗಿ ನಿಲುಕದ ವಿಚಾರಗಳು ಕೆಲವೊಮ್ಮೆ ಕಂಡುಬಂದರೆ, ಮರು ಕ್ಷಣದಲ್ಲೇ ವಿಜ್ಞಾನ ಮೇಳೈಸಿಬಿಡುತ್ತದೆ. ೧೪೩ ಪುಟಗಳ unique ಓದು ! ಒಂದೇ ಸಮನೆ ಓದಿಸಿಕೊಂಡಿದೆ.

ಧನ್ಯವಾದ, ಕರಣಂ ಪವನ್ ಪ್ರಸಾದ್ ಸರ್.

- ಕಾರ್ತಿಕ್ ಕೃಷ್ಣ
೨೨-೦೩-೨೦೨೨
2 reviews
February 3, 2017
Very happy to say that Grasta novel has something beyond to offer than regular sop and added new dimensions by introducing the science fiction to the plot which induce the readers glued to the subject.

I'm not sure whether this can termed as fiction work or not ,who knows this might turn into reality in near future .This in turn has spiced up the novel to a greater extent.

Everyone can correlate the character names .Built up with lovely logic ,this shows that author has put in nice thought process while sketching the each character's role.

Mix of sci-emotion-philosophy has been crafted beautifully from each character perspective. Loved Avinash character to the core .Literally character was defined & refined to teach us, preach us that if we work hard in silence , success will Roar at one point of time and at the same time to be humble as well and to stop being worrisome and concentrate on your path.

Finally would thank the author for shedding light about Shankaracharya philosophy & Nicolas Tesla scientific findings which is rarity these days especially in main stream Kannada novels in recent past and proudly is on par with the global standard with respect to issues discussed and highlighted

Few questions eclipsed and started to haunt me like

- Who are you?
- Purpose of life?
- Is Avinash Adunika Shankaracharya ?


Probably few might have got answers and self-realized or still searching????
Profile Image for Anirudh Kulkarni.
49 reviews1 follower
January 11, 2021
This is a unique, experimental new generation fiction work in Kannada literature. It brings out profound concepts of Electronics, Philosophy and Spirituality. It draws parallels between them in a thought-provoking way. For me, this read less like a novel and more like an introspective monologue of someone who overindulges in any field of study. Like the writer's previous work 'Karma', this book too showcases the conflict of the modern mind, this time its critique of a conservative mentality against scientific exploration. For me, the heart of the book lies in character transition, sharp observation, analysis and description of various concepts and Socio-Cultural stereotypes prevalent in modern urban society. It also lightly touches the plight of urban poverty and repercussions of an extra-marital relationship in a rigid society. One can enjoy this book even with no particular knowledge about Physics or Electronics, which stand as a central theme throughout the work.
Profile Image for Goutam Hebbar.
165 reviews11 followers
August 16, 2022
ಇಂದಿನ ಕಾಲದಲ್ಲಿ ಜಾತಿ ನಿರ್ಧಾರವಾಗೋದು ಹುಟ್ಟಿನಿಂದ. ಅಷ್ಟಕ್ಕೂ ಅಪ್ಪನ ಜಾತಿ ಬೇರೆ ಅಮ್ಮನ ಜಾತಿ ಬೇರೆಯಾದರೆ ಹುಟ್ಟೋಮಗೂದು ಯಾವ ಜಾತಿ? ವ್ಯಾವಹಾರಿಕವಾಗಿ ಯಾವ ಜಾತಿ ಲಾಭವೋ ಅದೇ ಜಾತಿ!!

ತನ್ನ ಮೂಲವೇ ಅತಂತ್ರ, ಆದರೆ ವಿಜ್ಞಾನಿಯಾಗಿ ಏನಾದರೂ ಸಾಧಿಸಬೇಕೆಂದು ಕೊಂಡಿರುವ 'ಅವಿನಾಶ್' ಕಾದಂಬರಿಯ ಮುಖ್ಯ ಪಾತ್ರ.
ಆತನ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ವೈಜ್ಞಾನಿಕ ಕಾರಣ ಎನ್ನುವ ಬಣ್ಣ ಹಚ್ಚಲು ಪ್ರಯತ್ನಿಸುತ್ತಾನೆ ಆದರೆ ಕೆಲವೊಂದು ವಿಜ್ಞಾನಕ್ಕೂ ಮೀರಿದ್ದು, ಕೇವಲ ಆಧ್ಯಾತ್ಮಿಕ ದ್ರಷ್ಟಿಕೋನದಿಂದ ಮಾತ್ರ ನೋಡಲು ಸಾಧ್ಯ.

ಆತನ ಜೀವನದಲ್ಲಿ ಅನಿರೀಕ್ಷಿತವಾಗಿ ಹಲವರು ಬರುತ್ತಾರೆ, ಅವನ ಮೇಲೆ ವಿವಿಧ ರೀತಿಯ ಪ್ರಭಾವ ಬೀರುತ್ತಾರೆ, ಹಾಗೆಯೇ ಅವನನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೇ ಕೂಡ, ಹಾಗೆಂದೂ ಅವನ ಸಾಧನೆ ನಿಲ್ಲವುದಿಲ್ಲಾ.
ನಿಕೋಲಾ ಟೆಸ್ಲಾನ ಕನಸಿನ ಕೂಸಾದ ಅನಿಯಮಿತ ಉಚಿತ ವಿದ್ಯುತ್ ಅನ್ನು ಸಾಧಿಸುವುದು ಅವಿನಾಶನ ಗುರಿ. ಆತ ಸಾಧಿಸುತ್ತಾನೇಯೆ? ನೀವೆ ಓದಿ ನೋಡಿ.
1 review
May 20, 2019
Just Completed Reading Grasta...
It took more than two hours to come out of that Mood

This book gives different perception to individuals based on visualization, it take couple of minutes to digest the twist that you usually give at the end (both in Karma and Grasta) which is cannot be presumed by any one.

The way you carved out the reality of human mindset and conscience is amazing

Continue your work Sir...

Hats off for your works Karma and Grasta
Profile Image for Nikita.
17 reviews13 followers
September 25, 2022
ಎಂದಿನಂತೆ ಇದು ಬುಕ್ ರಿವ್ಯೂ ಖಂಡಿತವಾಗಿಯೂ ಅಲ್ಲ! ನಾನು ಯಾವಾಗಲೂ ಹೇಳುವ ಹಾಗೆ ಕೆಲವೊಂದು ಪುಸ್ತಕಗಳು ಒಂದು ರೀತಿಯ ಬೇರೆಯದೇ ಅನುಭವವನ್ನು ನೀಡುತ್ತದೆ. ಆ ಅನುಭವವು ವಿವರಣೆಗೆ ನಿಲುಕದ್ದು. ಹಿಂದೆ 'ನನ್ನಿ' ಓದಿದಾಗ ಈ ರೀತಿ ಅನುಭವವಾದದ್ದು, ಈಗ ಮತ್ತೊಮ್ಮೆ ಕರಣಂ ಪವನ್ ಪ್ರಸಾದ್ ಅವರವದ್ದೇ ಇನ್ನೊಂದು ಕಾದಂಬರಿಯಾದ ಗ್ರಸ್ತ ಓದಿದ ಮೇಲೂ ಅಂತಹದ್ದೇ ವಿವರಿಸಲಾಗದ ಮತ್ತೊಂದು ತರಹದ ಅನುಭವವಾಯಿತು. ಆದರೆ ಪುಸ್ತಕ ಓದಿ ಮುಗಿಸಿದಾಗಲಿಂದ ಬಿಟ್ಟು ಬಿಡದೆ ಕಾಡುತ್ತಿರುವ ಕಾರಣ ಅದರ ಕುರಿತು ಒಂದು ಟಿಪ್ಪಣಿ ಬರೆಯಲು ಒತ್ತಾಯಿಸುತ್ತಿದೆ. ಹಾಗಾಗಿ ಇದು ಪುಸ್ತಕದ ಕುರಿತು ನನ್ನ ಅನುಭವವೇ ಹೊರತು, ಅದರ ವಿಮರ್ಶೆಯಲ್ಲ.

ಎಷ್ಟೋ ಬಾರಿ ಬಹಳ ಕಡಿಮೆ ಸಾಮಾಗ್ರಿಗಳನ್ನು ಬಳಸಿ ಮಾಡುವ ಅಡಿಗೆಯೂ ಕೆಡುವುದುಂಟು. ಅಂತಹುದರಲ್ಲಿ ಕರಣಂ ಅವರು, ವೇದ-ವೇದಾಂತ, ವಿಜ್ಞಾನ, ಸಮಾಜ, ಬಂಧ-ಬಾಂಧವ್ಯ, ಮನುಷ್ಯನ ಭಾವನೆ, ಸ್ವಭಾವಗಳು ಹೀಗೆ ಹತ್ತು ಹಲವು ಗಂಭೀರ ವಿಷಯಗಳನ್ನಿಟ್ಟುಕೊಂಡು ಒಂದು ಅಚ್ಚುಕಟ್ಟಾದ ರಸಪಾಕವನ್ನೇ ತಯಾರಿಸಿದ್ದಾರೆ. ಇಷ್ಟೆಲ್ಲಾ ಗಂಭೀರವಾದ ವಿಷಯಗಳಿಂದ ಕೂಡಿದ್ದರೂ, ಕಾದಂಬರಿಯನ್ನು ಓದಬೇಕಾದರೆ ಸ್ವಲ್ಪವೂ ಕೂಡ information overload ಎನ್ನಿಸದೇ, ಹದವಾಗಿ ಬೆಂದ ಹೂರಣದಿಂದ ತಯಾರಿಸಿದ ಹೋಳಿಗೆಯನ್ನು ಸವಿದ ತೃಪ್ತಿಯನ್ನು ನೀಡುತ್ತದೆ. ವೇದಾಂತ ಮತ್ತು ವಿಜ್ಞಾನ ಎರಡು ವ್ಯತಿರಿಕ್ತವಾದ ವಿಷಯಗಳು ಎಂಬುದು ಸಹಜವಾಗಿರುವ ಕಲ್ಪನೆ. ವೇದಾಂತವನ್ನು ಕೇವಲ philosophical/spiritual ಪಂಗಡಕ್ಕೆ ಸೀಮಿತ ಪಡಿಸಿದರೆ, ವಿಜ್ಞಾನವನ್ನು logical/factual ಸಾಮ್ರಾಜ್ಯದ ಮುಕುಟದಂತೆ ಪರಿಗಣಿಸಲಾಗುತ್ತದೆ. ಆದರೆ, ಈ ಎರಡೂ ಹೇಗೆ ಒಂದಕ್ಕೊಂದು ಪೂರಕವಾಗಿದೆ ಎಂದು ಗ್ರಸ್ತ ಕಾದಂಬರಿಯಲ್ಲಿ ಓದಬಹುದು. 'Where Physics ends Metaphysics begins' ಎಂಬುದು ನನ್ನ ನಂಬಿಕೆ. ಆದರೆ ಈ ಎರಡು ವಿರುದ್ಧ ಎನ್ನಿಸವ ವಿಷಯಗಳನ್ನು ಬೆಸೆದು ವೇದಾಂತ ವಿಜ್ಞಾನದ್ದೇ continuum ಎಂಬುದನ್ನು ವಿದ್ಯುತ್ ಪರಿಕಲ್ಪನೆಯನ್ನು ಅದ್ವೈತ ಸಿದ್ಧಾಂತದ ಮೂಲಕ ವಿವರಿಸಿರುವ ಪ್ರಯತ್ನವನ್ನು ಗ್ರಸ್ತ ಅತ್ಯಂತ ಸೊಗಸಾಗಿ ಮಾಡಿದೆ. ಭಾರತೀಯ ತತ್ವಶಾಸ್ತ್ರನ್ನು ಬಹಳ ಸುಲಭವಾಗಿ ಅರ್ಥವಾಗುವಂತೆ ಭೌತಶಾಸ್ತ್ರದ ನಿದರ್ಶನಗಳೊಂದಿಗೆ ವಿವರಿಸಲಾಗಿದೆ.

ಈ ಕಾದಂಬರಿಯಲ್ಲಿರುವ ಪ್ರತಿಯೊಂದು ಪಾತ್ರವೂ ಮನುಷ್ಯ ಗುಣ-ಸ್ವಭಾವಗಳನ್ನು ನುರಿತಾಗಿ ಪ್ರತಿಬಿಂಬಿಸುತ್ತದೆ. ಪ್ರತಿಯೊಂದು ಪಾತ್ರದ ಬೆಳವಣಿಗೆ ಅಷ್ಟೇ ಉತ್ತಮವಾಗಿ ಮೂಡಿಬಂದಿದೆ. ಇದಲ್ಲದೇ, ಈ ಕಾದಂಬರಿಯಲ್ಲಿರುವ ಪ್ರತಿಯೊಂದು ಪಾತ್ರದ ಬಗ್ಗೆಯೇ ಪ್ರತ್ಯೇಕ ಟಿಪ್ಪಣಿಯನ್ನು ಬರೆಯುವಷ್ಟರ ಮಟ್ಟಿಗೆ ಆಳವಾಗಿದ್ದೂ, ಕೆಲವು ಪಾತ್ರಗಳ spin-off ಕಥೆಯಾಗಿ ಮಾಡಬಹುದೆನೋ ಎಂದೆನಿಸುತ್ತದೆ.

ಒಂದು ಕಾದಂಬರಿಗೆ ಕಥೆ ಹಾಗೂ ಕಥಾವಸ್ತು ಎರಡೂ ಬಹುಮುಖ್ಯ. ಹಲವಾರು ಬಾರಿ ಸಂಶೋಧನೆಯನ್ನು ಪುಸ್ತಕದಲ್ಲಿ ಭಟ್ಟಿ ಇಳಿಸುವ ತರಾತುರಿಯಲ್ಲಿ ಕಥಾವಸ್ತು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡು ಒಂದು ಶೈಕ್ಷಣಿಕ ಅಧ್ಯಯನದಂತೆ ಅನಿಸಬಹುದು. ಗ್ರಸ್ತದಲ್ಲಿ ಕಥೆಗೆ ಯಾವುದೇ ತರಹದ ಧಕ್ಕೆ ಉಂಟಾಗದೇ, ಕಥಾವಸ್ತುವಿಗೆ ಪೂರಕವಾಗುವುದರ ಜೊತೆಗೆ ಅತ್ಯಂತ ರೋಚಕವಾಗಿದೆ. ಕಥೆಯ ಅಂತ್ಯ ಭಾಗವಂತೂ ಊಹೆಗೂ ಮೀರಿದ್ದು. ಪುಸ್ತಕ ಓದಿ ಮುಗಿಸುವಷ್ಟರಲ್ಲಿ ಓದುಗರಿಗೆ ಹಲವು ಬಗೆಯ ಭಾವನೆಗಳು ಮೂಡಿಸಿ ವಿಶೇಷ ಅನುಭವವನ್ನು ನೀಡುವುದರಲ್ಲಿ ಹೆಚ್ಚು ಸಂಶಯವಿಲ್ಲ. ಗ್ರಸ್ತ ಖಂಡಿತವಾಗಿಯೂ ಒಂದು Masterpiece!

Up next ಕರ್ಮ!
18 reviews
June 22, 2018
Its interesting. That's all I need to say. Others have explained the outline of story. Just read it!
Profile Image for Harish SG.
52 reviews9 followers
January 28, 2021
ಕರಣಂ Karanam Pavan Prasad ಅವರ ಒಂದೊಳ್ಳೆಯ ಕಾದಂಬರಿ. ವಿಜ್ಞಾನವೂ ಸೇರಿಕೊಂಡು ಕಾದಂಬರಿಯನ್ನು ಒಂದದ್ಭುತವನ್ನಾಗಿಸಿದೆ. ಅವಿನಾಶನ ಪಾತ್ರವನ್ನು ಕಟ್ಟಿಕೊಟ್ಟ ರೀತಿ ಮತ್ತು ಅವನ ಆಲೋಚನೆಗಳು, ಅವನು ಜೀವನವನ್ನೆದುರಿಸುವ ರೀತಿ, ಒಂದೊಂದು ಸಾರಿ ಅವನ ತಾಯಿಯ ಪಾತ್ರದ ಅನುಭವಗಳನ್ನೂ ಮೀರಿಸಿವೆ.
ಅಲ್ಲೆಲ್ಲೋ ಮುಳ್ಳಯ್ಯನ ಗಿರಿಯಲ್ಲೋ, ಚಿಕ್ಕಮಗಳೂರಿನ ಬೆಟ್ಟ ಗುಡ್ಡ ಕಾಡು ಪರ್ವತದಲ್ಲೆಲ್ಲೋ ಓಡಾಡಿಕೊಂಡು ಬ್ರಹ್ಮದ ಕಲ್ಪನೆ ಮತ್ತು ವಿವರಣೆ ಮತ್ತು ಶೈಲಿ ತುಂಬಾ ಚೆನ್ನಾಗಿದೆ.
Profile Image for MK  Book Reader .
9 reviews
April 29, 2025
ಗ್ರಸ್ತ : ಕರಣಂ ಪವನ್ ಪ್ರಸಾದ್ ರವರು ಬರೆದಿರುವ ವಿಜ್ಞಾನ ಹಾಗೂ ತತ್ವಜ್ಞಾನ ಎಂಬ ವಿಭಿನ್ನ ವಿಚಾರಗಳನ್ನು ಒಳಗೊಂಡ ಒಂದು ವಿಭಿನ್ನ ರೀತಿಯ ವಿಶಿಷ್ಟ ಕಾದಂಬರಿ.

ಈ ಕಾದಂಬರಿಯಲ್ಲಿ ಬರುವ ಸಾಲಿನ ಹಾಗೇ

"ಹುಟ್ಟು ಮುಖ್ಯವಲ್ಲ ಹುಟ್ಟಿನ ಪರಿಣಾಮ ಮುಖ್ಯ"

ಹಾಗೇ, ಶಂಕರಾಚಾರ್ಯರ ಅದೈತ ಸಿದ್ಧಾಂತ ಹಾಗೂ ನಿಕೋಲಾ ಟೆಸ್ಲಾ ಅವರ ನಿಸ್ತಂತು ವಿದ್ಯುತ್ ಎರಡನ್ನು ಒಟ್ಟುಗೂಡಿಸಿ ವೈರುಧ್ಯ ವಿಚಾರದಾರೆಗಳ ಬಗ್ಗೆ ಹಾಗೂ ಇವೆರಡರುಗಳ ನಡುವಿನ ಸಾಮ್ಯತೆಯನ್ನು ಈ ಕಾದಂಬರಿಯಲ್ಲಿ ಓದುಗರಿಗೆ ಸ್ಪಷ್ಟವಾಗಿ ತಿಳಿಸಿಕೊಟ್ಟಿದ್ದಾರೆ.

ವಿಜ್ಞಾನ, ವೇದಾಂತ, ಸಾಂಸಾರಿಕ ತೊಳಲಾಟ ಇವೆಲ್ಲವುಗಳಿಂದ ಆವರಿಸಲ್ಪಟ್ಟ ವ್ಯಕ್ತಿ, ನಂತರ ಅನಂತವಾದುದಕ್ಕೆ ಒಂದು ಕೊಳ್ಳುವ ಪ್ರಕ್ರಿಯೆಯನ್ನು ಈ ಪುಸ್ತಕದಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದರು. ಮನುಷ್ಯನ ಅಂತರ, ಅಂತರಂಗ ಹಾಗೂ ಬ್ರಹ್ಮಾಂಡದ ತುಣುಕನ್ನು ವಿಜ್ಞಾನ ಮತ್ತು ಸೂಕ್ಷ್ಮ ಸೂಕ್ಷ್ಮವಾಗಿ ತಿಳಿಸುತ್ತಾ ಹೋಗುತ್ತದೆ.

ಒಟ್ಟು 143 ಪುಟಗಳನ್ನು ಹೊಂದಿರುವ ಈ ಕಾದಂಬರಿ ಒಂದೇ ಸಮನೇ ಓದಿಸಿಕೊಂಡು ಹೋಗುವಂತಹ ಕಾದಂಬರಿ.
Profile Image for pustakamare.
86 reviews9 followers
April 10, 2025
ಬದುಕು, ಜೀವ್ನ, ವಿಜ್ಞಾನ, ದ್ವಂದ್ವ, ನಂಬಿಕೆ, ಭರವಸೆಗಳು ಅಂತೆಲ್ಲ ವಿಷಯಗಳು ಬಂದಾಗ ಕಿರಿಕಿರಿ ಅನುಭವಿಸೋ ಜನ ನಾನು. ಅಂತಹ ಜನ ನನ್ನನ್ನ ನನಗೆ ಗೊತ್ತು, ನಿನಗೆ ಇಷ್ಟ ಆಗುತ್ತೆ ಓದು ಮಗನೆ ಕೂರಿಸಿ, ಬಹಳ ಆಸಕ್ತಿ ಕೆರಳಿಸಿ ಇಷ್ಟ ಪಟ್ಟು ಓದಿಸಿಕೊಂಡು ಹೋಯ್ತು ಈ ಕಾದಂಬರಿ.
ಗ್ರಸ್ತ ಕಾದಂಬರಿಯ ಮುಖ್ಯಪಾತ್ರ ಅವಿನಾಶ್ ಬೇಗ ಇಷ್ಟ ಆಗ್ತಾನೆ; ಅರ್ಥ ಆದಷ್ಟು ಅಗೋಚರವಾಗೇ ಉಳಿತಾನೆ. ಅವನ್ನ ಹೀಗೆ ಈ ಜನ ಅಂತ ಹೇಳೋಕೆ ಆಗಲ್ಲ. ಸುಮಾರು ವಿಷಯಗಳಿರುವ ಗ್ರಸ್ತ ಒಂದು ವಿಶೇಷ ಓದು ಅನಿಸ್ತು ನನಗೆ. ಒಟ್ಟಾರೆ ಒಂತರ ಹಲವು ವಿಷಯಗಳಲ್ಲಿ ಆಧ್ಯಾತ್ಮ ಮತ್ತು ವಿಜ್ಞಾನ ನಡುವಲ್ಲಿ ಸಿಲುಕುವ ಅವಿನಾಶನ ಕತೆ ಗ್ರಸ್ತ
Profile Image for Karthikeya Bhat.
2 reviews2 followers
October 5, 2020
ಓದುಗರನ್ನು ಚಿಂತನೆಗೆ ಹಚ್ಚುವ ವಿಷಯ , ನಿರೂಪಣೆಯಲ್ಲಿ ಸ್ವಲ್ಪ ಮಟ್ಟಿಗೆ ಎಡವಿದಂತೆ ಭಾಸವಾಯಿತು.
Profile Image for Skanda Prasad.
69 reviews2 followers
April 10, 2022
ಫಿಲಾಸಫಿ ಅಷ್ಟೊಂದು ಹಿಡಿಸಲಿಲ್ಲ. ಓದಬಹುದು. ಓದಿಸಿಕೊಂಡು ಹೋಗುವ ಪುಸ್ತಕ
Displaying 1 - 24 of 24 reviews

Can't find what you're looking for?

Get help and learn more about the design.