!•ಒಂದು ಬದಿ ಕಡಲು•!|
ವಿವೇಕ ಶಾನಭಾಗ
ಒಂದು ಬದಿ ಸಹ್ಯಾದ್ರಿ ಒಂದು ಬದಿ ಕಡಲು
ನಡು ಮಧ್ಯದಲ್ಲಿ ಅಡಿಕೆ ತೆಂಗುಗಳ ಮಡಿಲು.
ಶರಾವತಿ ನದಿ ಸಮುದ್ರ ಸೇರುವುದು ಹೊನ್ನಾವರದಲ್ಲಿ .ಮೀನು ದೋಣಿಗಳು,ಲಾಂಚುಗಳು,ದೊಡ್ಡ ತೆಪ್ಪಗಳು,ಮೀನು ಮಾಡುವವರು,ನದಿ ದಾಟುವವರ,ದಾಟಿ ಬಂದವರು ,ಅನಗತ್ಯ ಓಡಾಡುವವರು,ದೋಣಿಯಲ್ಲಿ ಹತ್ತಿ ಕೋರುತ್ತಿರುವ ಜನರು ಹುಟ್ಟು ಹಾಕುವ ಅಂಬಿಗರ ಉದ್ಗಾರಗಳು ದೋಣಿ ಇನ್ನೊಂದು ಬದಿ ತಲುಪಿದ ನಂತರ ದೋಣಿ ಮತ್ತೆ ಮರಳಿ ಹೊನ್ನಾವರಕ್ಕೆ ಆಗಮನ.
ಕಾಸರಗೋಡು ಊರಿನ ಪುರಂದರ ಬೇಸಿಗೆಯ ರಜಾ ದಿನಗಳನ್ನು ಕಳೆಯಲು ಹೊನ್ನಾವರದ ದೇವರಾಯನ ಮಾವನ ಮನೆಗೆ ಪುರಂದರ ಬಂದಿದ್ದು.ಪಂಢರಿ ಮತ್ತು ಯಮುನೆ ಇಬ್ಬರು ವಿಧವೆಯರು ಘಾಟಿ ಹೆಂಗಸರು.ದೇವರಾಯ ಹಾಗೂ ಪಂಢರಿಯನೇ ಮನೆ ಅಕ್ಕಪಕ್ಕ .ಎರಡು ಅಷ್ಟು ದೊಡ್ಡ ದೊಡ್ಡ ಮನೆಗಳಲ್ಲದಿದ್ದರೂ ಮಹಡಿಗೆ ಹಂಚು ಹಾಕಿಸಿದ್ದರು ಸ್ವಲ್ಪ ಘನವಾಗಿ ಕಾಣಿಸುತ್ತಿತ್ತು.
ಎರಡು ಮನೆಯ ಹಿಂಭಾಗದಲ್ಲಿ ದೊಡ್ಡ ದೊಡ್ಡ ಎತ್ತರದ ಮರಗಳು ಮಾವಿನಮರಗಳು ನಾನಾ ಹೂಬಳ್ಳಿಗಳು, ತರಕಾರಿ,ದೇವರಾಯನ ಭಾಗಕ್ಕಿಂತ ಅತ್ತೆ-ಸೊಸೆ ಜಾಸ್ತಿ ಇದ್ದರೂ ಅವರು ಸ್ವಚ್ಛವಾಗಿ ಬೆಳೆಸಿದ್ದರು.
ಪಂಢರಿ ಮನೆಗೆ ದೂರದ ಸಂಬಂಧವಾಗಬೇಕು ರಜೆಯ ಕೆಲವು ದಿನಗಳು ಕಳೆಯಲು ಬಂದಿದ್ದಳು ಅವಳ ಹೆಸರು ಮೋಹಿನಿ.ಇವರಿಬ್ಬರೂ ಹಿಂಭಾಗದ ಹಿತ್ತಿಲಿನಲ್ಲಿ ಮಾವಿನಕಾಯಿ ಹುಡುಕುತಿದ್ದರು ಯಾರಿಗೆ ಮೊದಲು ಸಿಗುತ್ತದೆ? ಯಾರಿಗೆ ಎಷ್ಟು ಸಿಗುತ್ತದೆ? ಪುರಂದರ ಹಾಗೂ ಮೋಹಿನಿ ಮೊದಲು ಯಾರು ಹಿತ್ತಲಿಗೆ ಬರುವುದು ಮಾವಿನಕಾಯಿ ಹುಡುಕುವುದು ಇವರಿಬ್ಬರ ನಡುವೆ ಪಂದ್ಯ ಶುರುವಾಯಿತು.ಪುರಂದರನಿಗೆ ಅವಳ ಮೇಲೆ ಮನಸಾಯ್ತು ಆದರೆ ಅವನಿಗೆ ಹೇಳಿಕೊಡಲು ಧೈರ್ಯವಿಲ್ಲ.ಪುರಂದರನಿಗೆ ಮೋಹಿನಿ ಅವನ ಮನಸ್ಸಿನಲ್ಲಿ ಆಳವಾಗಿ ಉಳಿದುಬಿಟ್ಟಳು ಮತ್ತೆ ಅವಳನ್ನು ಬೆಟ್ಟಿ ಯಾಗುವ ಅವಕಾಶ ಅವನಿಗೆ ಸಿಗಲಿಲ್ಲ .
ಗೋದಾವರಿ ಗಂಡ ಸರ್ವೋತ್ತಮ ಕುಟುಂಬ ಸಮೇತ ಹೊನ್ನಾವರದ ದೇವರಾಯರ ಮನೆಯಲ್ಲಿ ವಾಸಿಸುತ್ತಾರೆ .ಸುನಂದೆ ತಾಯಿ ಬಾವಿಯಲ್ಲಿ ಬಿದ್ದು ಸತ್ತಳು,ತಂದೆ ಮುಡೇಶ್ವರ ಸಮುದ್ರದಲ್ಲಿ ತೀರಿಕೊಂಡರು, ಗೋದಾವರಿ ಅವಳನ್ನು ಮಗಳ ಹಾಗೆ ಬೆಳೆಸಿದಳು. ಸುನಂದಳ ಮದುವೆಗಾಗಿ ಗಂಡು ಹುಡುಕಾಟ .ಅವಳ ಜಾತಕದಲ್ಲಿ ತಂದೆಯಿಲ್ಲದ ಹುಡುಗನನ್ನು ಮದುವೆಯಾಗಬೇಕು.
ಧಾರವಾಡದಲ್ಲಿ ಬಿಎ ಮುಗಿದನಂತರ ಪುರಂದರ ಹುಬ್ಬಳ್ಳಿಯಲ್ಲಿ ದಿನನಿತ್ಯದ ಖಾನಾವಳಿ ಅಲ್ಲಿ ಊಟ.ಪುರಂದರನ ಗೆಳೆಯ ಯಶವಂತ ತನ್ನ ಆಸೆ ಎಂಬಂತೆ ಪುಣೆ ನಾಟಕ ಕಂಪನಿಗೆ ಹೋಗಿದ್ದಾನೆ.
ರಾತ್ರೋರಾತ್ರಿ ಯಾರಿಗೂ ಹೇಳದೆ ಯಶವಂತ ಪುಣೆಗೆ ಹೋಗಿದ್ದಾನೆ ಅವನ ಮನೆಯಲ್ಲಿ ಅವನಿಗಾಗಿ ಹುಡುಕಾಟ.ನಾಟಕಗಾರ ಬಗ್ಗೆ ಹೇಳುವುದು ಉಂಟೆ ರಸಿಕತೆ, ರಾಮಲೀಲೆ,ನಾಟಕ ಕಂಪನಿ ಅಂದಮೇಲೆ ಎಲ್ಲಾ ಬಗ್ಗೆ ಅನುಭವಗಳು,ಒಂದೂರಿನಿಂದ ಮತ್ತೊಂದು ಊರು ಎಲ್ಲವೂ ಯಶವಂತನ ಬದುಕಿನಲ್ಲಿ ನಡೆದುಹೋದ ಘಟನೆಗಳು.
ರಮಕಾಂತ್ ಮಾಸ್ತರ ಮನಃಸ್ಪೂರ್ತಿಯಾಗಿ ಇಷ್ಟಪಟ್ಟಿದ್ದ ವಿಧವೆ ಎಂಬ ಕಾರಣಕ್ಕೋ ಅಥವಾ ಅವಳ ಸೌಂದರ್ಯಕ್ಕೆ ಅಥವಾ ಅವಳ ಮನೆಗೆ ಹೋಗಿ ಬರುವ ಕಾರಣಕ್ಕೂ.ಯಮುನೆಯನ್ನು ಇಷ್ಟಪಟ್ಟಿದ್ದರು. ರಮಾಕಾಂತ ಮಾಸ್ತರ್ ಕ್ರಾಂತಿಯೆಂಬ ಬಂಡಾಯವನ್ನು ಹೊರತುಪಡಿಸಿ ಪದ್ಧತಿ ಮುರಿದು ವಿಧವೆಯಾದ ಯಮುನೆ ಮದುವೆಯಾದರೂ ಅವಳ ಬದುಕಿಗೊಂದು ಅರ್ಥ ಕಲ್ಪಿಸಿಕೊಟ್ಟರು.
ಬ್ಯಾಂಕೊಂದರಲ್ಲಿ ಕಾಯಂ ನೌಕರಿ
ಕಾರ್ಯನಿರ್ವಹಿಸುತ್ತಿದ್ದ ಪುರಂದರ ಸುನಂದೆಯನ್ನು ಮದುವೆಯಾದ. ಇದೊಂದು ನಮ್ಮ ಸುತ್ತಮುತ್ತಲಿನ ನಡೆಯುವ ಕಾದಂಬರಿ.ಕಥೆಯ ಬಗ್ಗೆ ಸಾಕಷ್ಟು ಹೇಳಬಹುದು. ಪಾತ್ರಗಳು ಹಲವಾರು . ಇಲ್ಲಿ ಬಡತನದ ನೋವಿದೆ. ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಮದುವೆ ಮಾಡಬೇಕೆಂಬ ಹಿರಿಯರ ತಯಾರಿ.ನೌಕರಿಯಿಲ್ಲ,ಬರುವ ಸಂಬಳದಲ್ಲಿ ಸಂಸಾರ ನಡೆಸುವುದು ಕಷ್ಟವಿದ್ದರೂ ಹೇಳಲಾಗುವುದಿಲ್ಲ .ಈಗಿನ ಕಾಲಘಟ್ಟಕ್ಕೆ ನಡೆಯುವ ಕಥೆಯ ಆಧಾರ ಕಾದಂಬರಿಯ ರೂಪದಲ್ಲಿ ಇದು ನಿಜವಾಗಲೂ ಓದಲೇ ಬೇಕಾಗಿರುವುದು.
ಹರಿಣಿ