NUNNI is a modern Kannada novel written by karanam Pavan Prasad. Dealing with the truth seeking temperament of human creature. Novel revolves around female protagonist - who is basically a Nun. Story reveals the missionaries activities in prospect to the world by dragging our vision to the fundamental definitions about truth, service and harmony.
Karanam Pavan Prasad, a Kannada novelist and playwright from Bangalore, is celebrated for his distinctive storytelling that combines new-age perspectives with themes of urban ecology, identity, and faith. Transitioning from a successful theater career, he gained widespread acclaim with novels like Karma, Nunni, Grastha, Rayakonda, and Sattu, each exploring complex societal and philosophical themes. solidifying his place as a prominent voice in contemporary Kannada literature.
ನಾನು ಓದುವ ಅಲ್ಪ-ಸ್ವಲ್ಪ ಪುಸ್ತಕಗಳ ಕುರಿತು ಟಿಪ್ಪಣಿ ಬರೆಯುವುದು ಒಂದು ಅಭ್ಯಾಸ. ಆದರೆ ನನ್ನಿ ಅಂತಹ classic ಕಾದಂಬರಿಯ ಬಗ್ಗೆ ಬರೆಯುವುದು ಖಂಡಿತವಾಗಿ ದೂರದ ಮಾತು. ಒಂದು ವೇಳೆ ಬರೆದರೂ ಅದಕ್ಕೆ ಯಾವ ರೀತಿಯೂ ಸಮರ್ಥಿಸಲು ಸಾಧ್ಯವಿಲ್ಲ. ಹಾಗೆಯೇ, ಕಥೆಯ synopsisಅನ್ನು ಕೆಲವು ವಾಕ್ಯಗಳಲ್ಲಿ ಹೇಳಬಹುದಾರೂ, ಹಾಗೆ ಮಾಡಿದರೆ ಕಥೆಯು ನೀರಸವಾಗಿ ಅಥವಾ spoilerಅಂತೆ ಆಗಬಹುದೆಂಬ ಅಳುಕು. ಕೆಲವೊಂದು ಪುಸ್ತಕಗಳು ಇಂತಹ ವಿಶ್ಲೇಷಣೆಗಳಿಗೆ ಮೀರಿದ್ದು. ಅವುಗಳನ್ನು ಓದಿ ಆಸ್ವಾದಿಸಿ ಅನುಭವಿಸಬೇಕಷ್ಟೆ. ಈ ಪಟ್ಟಿಯಲ್ಲಿ ನನ್ನಿಯೂ ಕೂಡ ಸೇರುತ್ತದೆ.
ಈ ಪುಟ್ಟ ಪುಸ್ತಕದಲ್ಲಿ ಲೇಖಕರಾದ ಕರಣಂ ಪವನ್ ಪ್ರಸಾದ್ ಅದೆಷ್ಟು ಸುಂದರ ಮತ್ತು ಅರ್ಥವತ್ತಾದ ಸಾಲುಗಳನ್ನು ಪೋಣಿಸಿದ್ದಾರೆಂದರೆ ಅವುಗಳು ಓದುಗರ ಮನ ಮುಟ್ಟುತ್ತದೆ, ವಿಚಾರ ಮಾಡುವಂತೆ ಒತ್ತಾಯಿಸಿ ಅದರ ಗುಂಗಿನಲ್ಲೇ ಇರಿಸುತ್ತದೆ. ಅಂತಹ ಕೆಲವು ಸಾಲುಗಳು:
• "ಸತ್ಯ ಎಂದರೆ ಸೂರ್ಯವಿದ್ದಂತೆ ಹತ್ತಿರ ಹೋದರೂ ಸಾವು ದೂರ ಹೋದರೂ ಸಾವು."
• "ಮನುಷ್ಯತ್ವ ಎಂಬುದು ಮಾನವನು ತನ್ನ ಅನಾಚಾರಗಳನ್ನು, ಅಹಮಿಕೆಯನ್ನು ಜಗತ್ತಿಗೆ ತೋರಿಸದೆ ಹಾಕಿಕೊಳ್ಳುವ ಮುಖವಾಡ, ಶುದ್ಧ ಮುಖವಾಡ."
• "ಪುಸ್ತಕ ಮತ್ತು ಉಪದೇಶಗಳ ಶಾಂತಿಯು ಮಾನವನ ಕ್ರೌರ್ಯಕ್ಕೆ ವಿರಾಮವೇ ಹೊರತು, ಅಂತ್ಯವಲ್ಲ."
• "ಮನುಷ್ಯನು ಪ್ರಾಣಿಗುಣಗಳಿಂದ ಬೇರೆಯಾಗಿ ಬೆಳೆದು ನಿಂತು ವಿವೇಚನೆ ಪಡೆದುಕೊಂಡು, ವಿವೇಚನೆಯಿಂದ ಸ್ವೇಚ್ಛೆ ಪಡೆದುಕೊಂಡು, ಸ್ವೇಚ್ಛೆಯಿಂದ ಬೆತ್ತಲಾಗಿ, ಬೆತ್ತಲೆಯಿಂದ ಪುನಃ ತನ್ನ ಪ್ರಾಣಿ ಗುಣಗಳಿಗೆ ಮರಳುತ್ತಿದ್ದಾನೆ."
• "ಮಾನವನ ಮೂಲ ಗುಣವೇ ಸ್ವಾರ್ಥ. ತನ್ನೆಲ್ಲ ಅಪ್ರಾಕೃತಿಕ ಗುಣವನ್ನು ಹತೋಟಿಯಲ್ಲಿಟ್ಟುಕೊಂಡು, ಪ್ರಕೃತಿಯ ಜೊತೆ ಸಹಬಾಳ್ವೆ ನಡೆಸುತ್ತಿದ್ದ ಮಾನವ ಜನಾಂಗ ಮರೆಯಾಗುತ್ತಿದೆ. ಈಗಿರುವುದು ಮಿತಿಯನ್ನು ಮೀರಿದ ಜೀವ ಸಂತತಿ."
ಕಾದಂಬರಿಯ ಮುಖಪುಟ ಸೂಚಿಸುವಂತೆ ಇದೊಂದು ನನ್ (nun) ಒಬ್ಬಳ ಕಥೆಯೆಂದು ಗೊತ್ತಾದರೂ, ಪುಸ್ತಕ ಓದಿದಾಗ ಮಾತ್ರ ಅದರ ನಿಜವಾದ ಆಳ ಮತ್ತು ವಿಸ್ತಾರ ತಿಳಿಯುವುದು. ಮಾನವ ಜಗತ್ತಿನ ಸತ್ಯಾಸತ್ಯತೆಗಳನ್ನು ಈ ಪುಸ್ತಕದಲ್ಲಿ ಕಾಣುವಂತೆ ಬಹುಶಃ ಇನ್ನೆಲ್ಲೂ ನೋಡಲಾಗುವುದಿಲ್ಲ. ಪ್ರತಿಯೊಂದು ಪಾತ್ರವೂ ಮನುಷ್ಯನ ಸಹಜ-ಸಾಮಾನ್ಯ ಗುಣಗಳನ್ನೇ ಪ್ರತಿಬಿಂಬಿಸುವ ಕನ್ನಡಿಯಾಗಿದೆ. ಲೇಖರ ಅಚ್ಚುಕಟ್ಟಾದ ಕಥಾ ನಿರೂಪಣೆ ಪುಸ್ತಕದ ಸ್ವಾರಸ್ಯವನ್ನು ಹೆಚ್ಚಿಸುತ್ತದೆ. ನನ್ನಿ ಒಂದು ಬಾರಿ ಓದಿ ಮರೆಯುವಂತಹ ಕಾದಂಬರಿಯಲ್ಲ. ಇದರಲ್ಲಿರುವ ವಿಷಯ ಮತ್ತೆ ಮತ್ತೆ ಮೆಲುಕು ಹಾಕುವಂತೆ ಮಾಡುತ್ತದೆ. ಪುನಃ ಪುನಃ ಪುಟಗಳನ್ನು ತಿರುವಿ ಹಾಕುವಂತೆ ಒತ್ತಾಯಿಸುತ್ತದೆ. ಪುಸ್ತಕ ಮುಗಿಸಿದ ನಂತರ ನಮ್ಮ ಅರಿವಿಲ್ಲದೆ ಕಣ್ಣು ತುಂಬಿ ಬಂದು ಒಂದು ರೀತಿ ನಿರ್ವಾತ ಭಾವವನ್ನು ಮೂಡಿಸುತ್ತದೆ. ಪುಸ್ತಕವನ್ನು ಓದಿ ಕೆಳಗಿಟ್ಟ ನನಗೆ ಅದೆಷ್ಟು ಹೊತ್ತು ನಿದ್ದೆ ಬರಲಿಲ್ಲವೆಂದು ನಿಜಕ್ಕೂ ಅರಿಯದು. ನನ್ನಿ ಒಂದು Soul Touching ಹೊತ್ತಿಗೆ ಎಂದು ಮಾತ್ರ ಹೇಳಬಲ್ಲೆ!
ಸತ್ಯಾನ್ವೇಷಣೆಯ ಕಾರ್ಯ ನಿಜಕ್ಕೂ ಅಪಾಯದ್ದು. ಸತ್ಯ ಹುಡುಕುತ್ತ ಹೋದಂತೆ ಮನುಷ್ಯನ ಕ್ರೂರತೆಯ ರೂಪ ಗೋಚರಿಸುತ್ತ ಹೋಗುತ್ತದೆ. ನನ್ ಆಗಿರುವ ಇಲ್ಲಿನ ನಾಯಕಿಯ ಸತ್ಯಾನ್ವೇಷಣೆಯೇ ಕಾದಂಬರಿಯ ಮುಖ್ಯ ಎಳೆ.
ಕಾದಂಬರಿಯ ದೊಡ್ಡ ಶಕ್ತಿಯೇ ಅದರ ಸಂಭಾಷಣೆ, ಕಡ್ಡಿ ಮುರಿದಂತೆ ನೇರವಾಗಿ ಹೃದಯಕ್ಕೆ ತಾಗುವಂತೆ ಬರೆದಿರುವ ಇಲ್ಲಿನ ದೃಶ್ಯಗಳು To the point. ಏರಿಕ್ ಬರ್ಗನ ಪುಸ್ತಕವೂ ಇಲ್ಲಿ ಒಂದು ಮುಖ್ಯ ಪಾತ್ರವಾಗಿ ನಮ್ಮೊಡನೆ ಸಂವಹನ ಮಾಡುವುದು ಲೇಖಕರ ಹೆಚ್ಚುಗಾರಿಕೆ.
ಎಲಿಸಾ, ರೋಣ ಮತ್ತು ಫ್ಯಾಬ್ರಿಗಾಸ್ರ ಕಥೆಗಿಂತ ರಾಯಪ್ಪನ sub plot ಹೆಚ್ಚು ಇಷ್ಟವಾಗುತ್ತದೆ. ರಾಯಪ್ಪನ ಪಾತ್ರದ Religious Dilemma ಹೆಚ್ಚು ಕಾಡುವ ಹಾಗೆ ಬರೆದಿದ್ದಾರೆ.
ಈ ಪುಸ್ತಕ ರಸಸೃಷ್ಟಿಯಿಂದಲೂ ಹಾಗೂ ವಿಷಯಮಂಡನೆಯಿಂದಲೂ ಗೆದ್ದಿದೆ, ಈ ರೀತಿಯ ವಿಷಯವನ್ನು ಕಾದಂಬರಿಯ ರೂಪದಲ್ಲಿ ಹೇಳುವುದು ಕಷ್ಟದ ಕೆಲಸ. ಕಡಿಮೆ ಹೇಳಿದರೆ ಹೇಳುವ ವಿಚಾರ ಸ್ಪಷ್ಟವಾಗಿ ಹೇಳುವ ಹಾಗೆ ಆಗುವುದಿಲ್ಲ, ಹೆಚ್ಚು ಹೇಳಿದರೇ ಕಾದಂಬರಿಗಿಂತ ಧರ್ಮದ ಆಚರಣೆಯ ಮೇಲಿನ Critical Criticism ಆಗುತ್ತದೆ, ಎರಡರ ನಡುವೆಯ ಈ ತೆಳು ಪದರವನ್ನು ಕಾಪಾಡಿಕೊಳ್ಳುವಲ್ಲಿ ಕರಣಂರು ಪೂರ್ಣವಾಗಿ ಗೆದ್ದಿದ್ದಾರೆ.
ಪುಸ್ತಕದಲ್ಲಿ ಮುದ್ರಣ ದೋಷಗಳು ಕೊಂಚ ಹೆಚ್ಚು ಅನ್ನುವಂತೆಯೇ ಇದೆ, ನನ್ನ ಬಳಿ ಇರುವುದು ಮೊದಲ ಮುದ್ರಣದ ಪ್ರತಿ ಆಗಿರುವದರಿಂದ ಮುಂದಿನ ಮುದ್ರಣಗಳಲ್ಲಿ ಸರಿಗೊಂಡಿದೆ ಎಂದು ಭಾವಿಸುತ್ತೇನೆ
ಪ್ರಸ್ತುತ ಕನ್ನಡ ಸಾಹಿತ್ಯದಲ್ಲಿ ನನ್ನ ಭರವಸೆ ಇರುವುದು ಇಬ್ಬರು ಲೇಖಕರ ಮೇಲೆ ಮಾತ್ರ, ಒಂದು ವಿವೇಕ ಶಾನಬಾಗ್ ಇನ್ನೊಬ್ಬರು ಕರಣಂ ಪವನ್ ಪ್ರಸಾದ್. ಈ ಪುಸ್ತಕ ಆ ನಂಬಿಕೆಯನ್ನು ಇನ್ನಷ್ಟು ಗಟ್ಟಿ ಮಾಡಿದೆ...
ನನ್ನಿ ಇಷ್ಠವಾಯಿತು.. ಕರ್ಮಕ್ಕಿಂತ ವಿಭಿನ್ನವಾಗಿ ಮೂಡಿ ಬಂದಿದೆ. ನನ್ನಿ ಕಥೆಯ ನಿರೂಪಣೆ ಚೆನ್ನಾಗಿದೆ.. ನನ್ನಿಯಿಂದಾಗಿ ಕ್ರೈಸ್ಥ ಮತದ ಬಗ್ಗೆ ಇದ್ದ ನನ್ನ ಎಷ್ಟೋ ಅಭಿಪ್ರಾಯಗಳು ಸ್ಪಷ್ಟವಾದವು..
ರಾಚಪ್ಪ ಮತ್ತು ಎರಿಕ್ ಬರ್ಗ ಪಾತ್ರಗಳು ತುಂಬಾ ಇಷ್ಟವಾದವು..
" ಮನುಷ್ಯ ಪ್ರಾಣಿ ಸರ್ವನಾಶವಾಗುವುದನ್ನ ನಾನು ಬಯಸುತ್ತೀನೆ. ಅದಾದ ದಿನ ದೇವರು, ಮತ, ಜಾತಿ, ವರ್ಗ, ವರ್ಣ ಇದಾವುದು ಇಲ್ಲದ ಶುದ್ಧ ಜೀವಸಂಕುಲ ಭೂಮಿಯನ್ನು ಆಳುತ್ತದೆ. ಜಗತ್ತಿನ ಅತಿ ಕ್ರೂರವಾದ ಪ್ರಾಣಿಗೆ ವಿಳಾಸವಿದೆ, ದೇವರಿದ್ದಾನೆ, ಹೆಸರಿರುತ್ತದೆ!" ಎರಿಕ್ ಬರ್ಗ ಪಾತ್ರದ ಈ ಮಾತುಗಳು ಈಗಲೂ ನನ್ನೂಳಗೆ ಧ್ವನಿಸುತ್ತಿವೆ..
'ನನ್ನಿ' ಎಂದರೆ ಸತ್ಯ. ಮುಖಪುಟದಲ್ಲಿ ನನ್ ಒಬ್ಬಳ ಫೋಟೋ ಇರುವುದರಿಂದ ಇದು ನನ್ ಒಬ್ಬಳ ಕಥೆ, ಅದಕ್ಕಾಗಿ ನನ್ನಿ ಎಂದಿಟ್ಟಿದ್ದಾರೆ ಎಂದುಕೊಂಡಿದ್ದೆ. ಆದರೆ ನನ್ನಿ ಎಂಬುದು ಕನ್ನಡ ಪದ ಅಂತ ಕನ್ನಡಿಗಳಾಗಿರುವ ನನಗೆ ಕಾದಂಬರಿ ಮುಗಿಸಿದ ಮೇಲೆ ಕಡೆಯ ಪುಟದ ಲೇಖಕರ ಹಿನ್ನುಡಿ ನೋಡಿ ಅರ್ಥವಾಯ್ತು.
ನಮಗೆ ಪರಿಚಿತತೆಗಿಂತಲೂ ಅಪರಿಚಿತತೆ ಕಡೆಯೇ ಒಲವು ಜಾಸ್ತಿ. ಏಕೆಂದರೆ ಅವರ ಬಗ್ಗೆ ಹೆಚ್ಚು ತಿಳಿದಿರುವುದಿಲ್ಲವಲ್ಲ. ಇಲ್ಲಿಯೂ ಬಾಲಕಿಯಾದ ದುರ್ಗಾ ತನಗೆ ಎದುರಾಗುವ ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಬೇರೆ ದಾರಿಯಿಲ್ಲದೇ 'ನನ್' (ಸಿಸ್ಟರ್ ರೋಣ) ಆಗುತ್ತಾಳೆ. ಅದಾದ ನಂತರವೇ ಅವಳಿಗೆ ಅಲ್ಲಿನ ಕರಾಳ ಮುಖ ತೆರೆದುಕೊಳ್ಳುತ್ತಾ ಹೋಗುತ್ತದೆ.
ಕರಾಳವೆಂದರೆ.....
ಇವಳ ಜೊತೆ ಯಾರೂ ಕೆಟ್ಟದಾಗಿ ನಡೆದುಕೊಳ್ಳುವುದಿಲ್ಲ ಅಥವಾ ಇವಳ ಮೇಲೆ ದೈಹಿಕವಾಗಿ ಆಗಲೀ ಮಾನಸಿಕವಾಗಿಯಾಗಲೀ ದೌರ್ಜನ್ಯ ನಡೆಸುವುದಿಲ್ಲ. ಆದರೆ ಸೇವೆಯ ನೆಪದಲ್ಲಿ ಬಡಜನರ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಂಡು ಆಕೆ ಕೊರಗುತ್ತಾಳೆ. ಏಕೆಂದರೆ ಅವರ ಸಿ.ಎಂ.ಸಿ (Charity Mission for culcutta) ಸಂಸ್ಥೆಯಲ್ಲಿರುವ ಅನಾಥರು, ವಯೋವೃದ್ಧರು ಖಾಯಿಲೆಯಿಂದಲೋ ಹಸಿವೆಯಿಂದಲೋ ನೋವು ಅನುಭವಿಸುತ್ತಿರುವುದನ್ನು ಕಂಡು 'ಅವರು ಪಾಪ ಅನುಭವಿಸುತ್ತಿದ್ದಾರೆ' ಎಂದು ಅವರಿಗೆ ಚಿಕಿತ್ಸೆ ಕೊಡದೇ ಸಾಯಲು ಬಿಡುವುದು, ಊಟ ಹಾಕುತ್ತೇವೆ ಅಂತ ಪ್ರಚಾರ ಕೊಟ್ಟು ಊಟಕ್ಕಾಗಿ ಬರುವ ಭಿಕ್ಷುಕರನ್ನು ಓಡಿಸುವುದು, ಕ್ರಿಸ್ತ ಅವರಿಗೆ ಸಾವಿನ ದಾರಿಯನ್ನು ಆಯ್ಕೆ ಮಾಡಿದ್ದಾನೆ ಎನ್ನುವುದು ಇದೆಲ್ಲರಿಂದ ಕಥಾನಾಯಕಿ ರೋಣ ಬೇಸತ್ತು ಹೋಗಿರುತ್ತಾಳೆ.
ಸಂಸ್ಥೆಯ ಮದರ್ ಎಲಿಸಾರ ಬಗ್ಗೆ ರೋಣಳಿಗೆ ದ್ವಂದ್ವ. ಅವರು ಮಾಡುತ್ತಿರುವುದು ಸರಿಯೋ ಅಥವಾ ಮಾನವೀಯತೆ ಸರಿಯೋ ಅಂತ. ಬಹುಪಾಲು ಈ ಯೋಚನೆಗಳಲ್ಲಿಯೇ ಬಸವಳಿಯುತ್ತಿರುತ್ತಾಳೆ. ಅವಳೂ ಸಹ ಉಳಿದ ಎಲ್ಲರಂತೆ ಇರಬಹುದಿತ್ತು. ನೋಡಿಯೂ ನೋಡದ ಹಾಗೆ..... ಈ ದೀನ-ಅಶಕ್ತರ ಕರ್ಮವನ್ನು ಕಂಡು 'ಅವರ ಪಾಪವನ್ನು ಅವರು ಅನುಭವಿಸುತ್ತಾರೆ, ನನಗ್ಯಾಕೆ ಆ ಗೊಡವೆ?' ಅಂತ ರೋಣಾಳು ಸಹ ಕೆಸರಿಗಂಟದ ಕಮಲದ ಹಾಗೆ ಇದ್ದುಬಿಡಬಹುದಿತ್ತು. ಆದರೆ ರೋಣಾಳ ಸೂಕ್ಷ್ಮ ಮನಸ್ಸು ಹಾಗಿರಲು ಬಿಡದೇ ತನಗೆ ತಾನೇ ಅಪಾಯ ತಂದೊಡ್ಡುತ್ತಿರುತ್ತದೆ.
ಜೀವನದ ನಿರ್ಧಾರವನ್ನು ಕೇವಲ ಕೆಲವೇ ಸೆಕೆಂಡುಗಳಲ್ಲಿ ಮಾಡಿಬಿಡಬಹುದು. ಆದರೆ ಆ ನಿರ್ಧಾರಕ್ಕೆ ಬದ್ಧವಾಗಿ ಜೀವನದ ಕೊನೆವರೆಗೂ ನಡೆದುಕೊಳ್ಳುವುದು ಬಹಳ ಕಷ್ಟವಿದೆ. ಮದುವೆಯಾದರೆ ಒಂದು ಪಕ್ಷ ಜಗಳವಾಡಲು ಗಂಡನಿರುತ್ತಾನೆ, ಬೇಸರ ಮರೆ���ಲು ಮಕ್ಕಳಿರುತ್ತಾರೆ, ಬಂಧು-ಬಳಗವಿರುತ್ತದೆ. ಆದರೆ ಐಹಿಕ ಭೋಗಗಳನ್ನು ತ್ಯಜಿಸಿ ತನ್ನನ್ನು ಕ್ರಿಸ್ತನಿಗಾಗಿ ಅರ್ಪಿಸಿಕೊಂಡ ನನ್ ಒಬ್ಬಳಿಗೆ ತನ್ನವರು ಎನಿಸಿಕೊಳ್ಳುವವನು ಕ್ರಿಸ್ತನೊಬ್ಬನೇ. ಆತನೊಂದಿಗೇ ಆಕೆ ಸಂವಹನ ಮಾಡಬೇಕು. ಆಕೆಯ ಅಳು-ನಗು-ಸುಖ-ದುಃಖ ಎಲ್ಲವೂ ಕ್ರಿಸ್ತನಿಗೇ ಮೀಸಲು.
ಆದರೂ ಇದು ತ್ಯಾಗ ಎನಿಸಿಕೊಳ್ಳೋಲ್ಲ. ಏಕೆಂದರೆ ಪ್ರವಾದಿ ಸ್ಯಾಮ್ಯುಯೆಲ್ ನಿಗೆ ತ್ಯಾಗ ಬೇಕಿ್ಲಲ್ಲ. ವಿಧೇಯತೆ ಮಾತ್ರ ಬೇಕು. ಹೇಳಿದಂತೆ ಪಾಲಿಸುವವರು ಮಾತ್ರವೇ ಉಳಿಯಬೇಕು (ಸ್ಯಾಮ್ಯುಯೆಲ್ ೧೫:೩)
ರೋಣಾಳೋ ಎಲ್ಲವನ್ನೂ ಪ್ರಶ್ನಿಸಿ ಕಷ್ಟಗಳನ್ನು ಎದುರು ಹಾಕಿಕೊಳ್ಳುವಂತಹ ವ್ಯಕ್ತಿತ್ವ ಉಳ್ಳವಳು. ಮದರ್ ಎಲಿಸಾರನ್ನೇ ತನ್ನ ವಾದದಿಂದ ಸೋಲಿಸುವ ಧೈರ್ಯ ಉಳ್ಳವಳು. ಆದರೆ ಪ್ರೇಮದ ವಿಚಾರದಲ್ಲಿ ಮಾತ್ರ ಆಕೆಗೆ ಈ ಧೈರ್ಯವಿಲ್ಲ. ತನಗೆ ಸಹಾಯ ಮಾಡಿದ ಮಿಲ್ಟನ್ ಫ್ಯಾಬ್ರಿಗಾಸನನ್ನು ಆಕೆಯೂ ಒಪ್ಪಿ ಅಪ್ಪಿಬಿಡುತ್ತಾಳೆ. ಅವನೊಬ್ಬನೇ ಆಕೆಯ ಬಲಹೀನತೆ. ಇದನ್ನು ಹೊರತು ಪಡಿಸಿ 'ನನ್' ಆಗಿ ತಾನು ಪರಪುರುಷನೊಂದಿಗೆ ಸಂಬಂಧ ಇರಿಸಿಕೊಂಡಿರುವೆ ಎಂಬ ಗಿಲ್ಟ್ ಆಕೆಯನ್ನು ಕಾಡುವುದಿಲ್ಲ. ಈ ನಡುವೆ ಮಿಲ್ಟನ್ ಆಕೆಗೆ ನೀಡುವ ಎರಿಕ್ ಬರ್ಗ್ ಪುಸ್ತಕಗಳನ್ನು ಓದುತ್ತಾ ಜೀವನದ ಸತ್ಯಗಳನ್ನು ಅರಿಯುತ್ತಾ ಹೋಗುತ್ತಾಳೆ.
ಇದರ ಜೊತೆಜೊತೆಗೇ ಮತ್ತೊಂದು ಕಥೆಯಿದೆ. ಅದರಲ್ಲಿ ಮತಾಂತರವಿದೆ, ಜಾತಿ ಜಗಳವಿದೆ, ಆಸ್ತಿ ವಿವಾದವಿದೆ, ತಂದೆ-ಮಗಳ ಪ್ರೇಮವಿದೆ, ಇಬ್ಬರು ಹುಡುಗಿಯರ ಸ್ನೇಹವಿದೆ, ಬೆಕ್ಕಿನ ಸಹವಾಸವಿದೆ, ಮದುವೆಯಿದೆ, ಕೊನೆಗೆ ಸಿಸ್ಟರ್ ರೋಣಾಳೂ ಈ ಕಥೆಯ ಒಂದು ಭಾಗವಾಗುತ್ತಾಳೆ. ಇಲ್ಲಿಂದ ರೋಣಾ ಜೀವನದ ಮತ್ತೊಂದು ಭಾಗವನ್ನು ಎದುರಿಸುತ್ತಾಳೆ.
ಜನರ ವಿವಿಧ ಮುಖಗಳ ಪರಿಚಯ ಅವಳಿಗಾಗುತ್ತದೆ. ಸಂದರ್ಭಕ್ಕೆ ತಕ್ಕಂತೆ ಬದಲಾಗುವ ಮನುಷ್ಯರ ಗುಣ ಕಂಡು ರೋಣ ಬೆರಗಾಗುತ್ತಾಳೆ. ಅವಳ ಜೀವನದಲ್ಲಿ ಬದಲಾಗದೇ ಉಳಿದವಳೆಂದರೆ ಅವಳ ಸ್ನೇಹಿತೆ ಸಿಸ್ಟರ್ ಶುಭಾ ಮಾತ್ರ. ಉಳಿದವರು ಗಾಳಿ ಬಂದಂತೆ ತೂರುವವರು. ಅದಕ್ಕಾಗಿಯೇ ನೇರ ನಡೆನುಡಿಯ ರೋಣಳನ್ನು ಕಂಡರೆ ಯಾರಿಗೂ ಆಗದು. ಹಾಗಂತ ಅವಳನ್ನು ಎದುರೆದುರು ಖಂಡಿಸಲೂ ಅವರಿಂದಾಗದು. ಹಿಂದಿನಿಂದ ಗಾಳಿಸುದ್ದಿ ಹರಡುವುದಷ್ಟೇ ಅವರ ಕೆಲಸ.
'ನನ್ನಿ'ಯಲ್ಲಿ ಸಿಸ್ಟರ್ ರೋಣಾಳ ಜೊತೆಜೊತೆಯಲ್ಲಿಯೂ ನಮಗೂ ಸಹ ಸತ್ಯದ ದರ್ಶನವಾಗುತ್ತಾ ಹೋಗುತ್ತದೆ. ರೋಣಾಳ ಚರ್ಚಿನ ಜೀವನ ಮತ್ತು ರಾಯಪ್ಪನ ಕರುಣಾಜನಕ ಕಥೆಯ ಜೊತೆಯಲ್ಲಿಯೇ ಮತ್ತೊಂದು ಸತ್ಯದ ಅನಾವರಣವಿದೆ. ದೀನ-ಅಶಕ್ತರಿಗಾಗಿ ಒಂದು ಸಂಸ್ಥೆಯನ್ನು ತೆರೆದು ಆ ಜನರ ಕಣ್ಣೀರು-ಖಾಯಿಲೆಗಳನ್ನೇ ಬಂಡವಳ ಮಾಡಿಕೊಂಡು, ಪ್ರಪಂಚದೆಡೆಯಿಂದ ಹಣವನ್ನು ವಂತಿಕೆಯನ್ನಾಗಿ ಸ್ವೀಕರಿಸಿ ದುಡ್ಡು ಮಾಡಿಕೊಳ್ಳುವ ಜನರ ಬಗೆಗೂ ಸೂಕ್ಷ್ಮವಾಗಿ ತಿಳಿಸಲಾಗಿದೆ. ಇವರಿಗಿಂತಲೂ ಮಕ್ಕಳಿಗೆ ಪಾಠ ಹೇಳಿಕೊಡುವ ನಾನೇ ಗ್ರೇಟ್ ಅಂತ ರೋಣಾ ಹೆಮ್ಮೆ ಪಡುತ್ತಾಳೆ.
ಹೆಣ್ಣಿನ ಮಾನಸಿಕ ತುಮುಲ, ಆಕೆಯ ಭಾವಾಭಿವ್ಯಕ್ತಿಗನ್ನು ಲೇಖಕರು ಸಮರ್ಥವಾಗಿ ಚಿತ್ರಿಸಿದ್ದಾರೆ. ಅದಕ್ಕಿಂತ ಹೆಚ್ಚು ಬೆರಗುಗೊಳಿಸುವುದು ಬೂಸಿ ಎಂಬ ಬೆಕ್ಕಿನ ವಿವರ. ಬೆಕ್ಕು ಸಾಕಿದವರಿಗೆ ಮಾತ್ರವೇ ಅರ್ಥವಾಗುವ ಬೆಕ್ಕಿನ ನಡವಳಿಕೆ ಓದಿ ನಿಜಕ್ಕೂ ದಂಗಾದೆ. ಒಬ್ಬ ಮನುಷ್ಯ ಇಷ್ಟೆಲ್ಲಾ ಅಧ್ಯಯನ ಮಾಡಿರಲು ಸಾಧ್ಯವಾ ಎಂದೆನಿಸಿತು. ಅದಕ್ಕಿಂತಲೂ ಹೆಚ್ಚಾಗಿ ಈ ಪುಸ್ತಕ ನಮ್ಮ ಮಕ್ಕಳಿಗೆ ಪಠ್ಯವಾದರೆ 'ದೂರದ ಬೆಟ್ಟ ನುಣ್ಣಗೆ' ಅಂತ ತಿಳಿದವರಿಗೆ ಜ್ಞಾನೋದಯವಾಗಬಹುದು ಎಂದೆನಿಸಿತು.
It’s been two days I finished reading Nunni and still could not come out of it. The ending is very hard to digest. I feel depressed, angry, betrayed and helpless all at once.
The book has two parallel stories, one Sister Rona, a nun in a missionary house in Calcutta and the other Rayappa, a low-caste person stays in the outskirts of Bangalore, he later gets converted to Christianity. With Sister Rona, you will travel around Calcutta caring the needy, seeking the truth and revolting the odds of missionary house. With Rayappa, you experience the Bangalore in 70’s. You will learn on how the people were targeted for conversions, how the society reacted to it and the friction it created.
Nunni is more strong and tough than author’s previous novel KARMA. Great work Pavan Sir..
ಇವರ ಕರ್ಮ ಪುಸ್ತಕ ಓದಿದಾಗ, ಭೈರಪ್ಪನವರ ಬರಹದ ಪ್ರಭಾವ ಇದೆ ಎನಿಸಿತ್ತು. ಆದರೆ ನನ್ನಿ ಓದಿದಾಗ ಅದು ತಪ್ಪೇನಿಸಿತು. ನನ್ನಿ ಒಂದು ಒಳ್ಳೆಯ ಕಥಾವಸ್ತು ಹೊಂದಿರುವ ಕಾದಂಬರಿ. ಲೇಖಕರೇ ಹೇಳಿದಂತೆ ಇದು ವ್ಯಕ್ತಿಯು ತನ್ನತನವನ್ನೇ ಹುಡುಕಿಕೊಳ್ಳುವ ಪ್ರಯತ್ನ. ಒಬ್ಬ ಹಿಂದೂ ಬೇರೆ ಧರ್ಮಕ್ಕೆ ಮತಾಂತರಗೊಂಡಾಗ ಅನುಭವಿಸುವ ಕಷ್ಟಗಳು ಮತ್ತು ಅದರಿಂದ ಹೇಗೆ ಪಾರಾಗುವುದು ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕುವ ಪ್ರಯಾಸ. ಒಬ್ಬ ನನ್ ತನ್ನ ಜೀವತಾವಧಿಯಲ್ಲಿ ತಾನು ಕಂಡ ತಪ್ಪುಗಳನ್ನು ಸಹಿಸಲಾಗದೆ ಏನೂ ಮಾಡಲು ದಿಕ್ಕು ತೋಚದೆ ಸುಮ್ಮನಾಗುವುದು. ಇನ್ನೊಂದು ಭಾಗದಲ್ಲಿ, ಒಬ್ಬ ಅಂಗವಿಕಲ ಹುಡುಗಿ ನನ್ ಆಗಲು ಬಯಸಿ ಪ್ರಾಣ ಕಳೆದುಕೊಳ್ಳುವ ಸಂಧರ್ಭ. ಇದಕ್ಕೆ ಮತಾಂತರಕ್ಕೆ ಕುಮ್ಮಕ್ಕು ನೀಡಿದ ಜನರೇ ಕಾರಣ ಎಂದು ತಿಳಿದಾಗ ಹುಡುಗಿಯ ತಂದೆ ಕಂಡ ವ್ಯಥೆ ಅಷ್ಟಿಷ್ಟಲ್ಲ. ಮತಾಂತರ ಆದಾಗ ನಮಗೆ ಜನರಿಂದ ಪ್ರೀತಿ ದೊರೆಯುತ್ತದೆ ಎಂಬ ಸುಳ್ಳು ಅವಲೋಕನದಿಂದ ಎಷ್ಟೋ ಜನ ಮತಾಂತರಗೊಳ್ಳುತ್ತಾರೆ ಆದರೆ ಅದರಿಂದ ಅವರ ಬಯಕೆಗಳೆಲ್ಲ ಈಡೇರುವುದಿಲ್ಲ ಬದಲಾಗಿ ದುಃಖ ಮಾತ್ರ ಹೆಚ್ಚುತ್ತದೆ. ಅವರ ಜೀವನದಲ್ಲಿ ಎಲ್ಲೋ ಒಂದು ಕಡೆ ನನ್ನ ನೈಜ ದೇವರು, ಜೀವನವನ್ನು ನಾನು ಕಳೆದುಕೊಂಡೆನಲ್ಲ ಎಂದು ಕೊರಗು ಇದ್ದೆ ಇರುತ್ತದೆ. ಕೊನೆಯದಾಗಿ ಹೇಳಬೇಕಾದರೆ, ಕರಣಂ ಪವನ್ ಪ್ರಸಾದರ ಈ ಕಾದಂಬರಿ ಒಳ್ಳೆಯ ಕಥಾವಸ್ತು ಹೊಂದಿರುವ ಕಾದಂಬರಿ.
Nanni, the fictitious tale of Mother Elisa that runs a destitute house for the poor, underprivileged and sick people in Kolkata. Sister Rona, a young Nun who gets sick at the diabolical thoughts and actions of Mother Elisa and tries to question the wrong doings in the Church and also questions herself about why she was chosen to be on this path. In another parallel tale, Rayappa, a backward caste person who later converts to Christianity and promises the Church to give away his daughter once her illness gets treated. All these stories are somehow connected to the destitute house run by the Mother Elisa.
There is an interesting character called Milton Fabregas who is strong enough to fund the destitute house run by the mother Elisa and whereabouts of the money that he gets for the funding is still a question mark.
The story exposes quite dramatically about a famous Saint from India who received the Bharat Ratna in the late 1990's. If you have read the books by the author Christopher Hitchens (especially The Missionary Position and the Arguable Essays), you will get a complete picture of this novel.
Karanam Pavan Prasad has written this story exceptionally without revealing much details about the real life characters, but, you soon realize which personality that the author is referring in his story. After the success of his first novel Karma, Prasad has scored yet another goal in this second novel. It is absolutely brilliant and highly recommended.
ಬದುಕಿನ ಸತ್ವ ತಿಳಿಯಲು ಈ ಪುಸ್ತಕ ಸಹಾಯಕಾರಿ. ಸೇವೆಗಿಂತ ಸಹಕಾರ ದೊಡ್ಡದು ಎಂಬ ಮೌಲ್ಯ ತಿಳಿ ಹೇಳಿದ ಕತೃಗೆ ನನ್ನ ವಂದನೆಗಳು. ಕಾದಂಬರಿಯು ನನ್ನಲ್ಲಿ ಮೂಡುತಿದ್ದ ಅದೆಷ್ಟೋ ಮಾನಸಿಕ ಗೊಂದಲಗಳಿಗೆ ಕಾರಣ ತಿಳಿಸಿ ಬಹು ಉಪಕಾರ ಮಾಡಿದೆ. ಪ್ರತಿಯೊಬ್ಬರು ಓದಲೇ ಬೇಕಾದ ಮಹಾ ಪುಸ್ತಕವಿದು.
'ನನ್ನಿ' ಕಥೆಯ ಬಗ್ಗೆ ಹೇಳಿದರೆ ಓದುಗರಿಗೆ ತಾಜಾತನ ಮತ್ತು ಕುತೂಹಲ ಕಡಿಮೆ ಆದಂತೆ ನನ್ನ ಭಾವನೆ, ಆದ್ದರಿಂದ ಇಲ್ಲಿ ನಾನು ಬರೀ ಲೇಖಕರ ಬಗ್ಗೆಯೇ ಒಂದೆರಡು ಮಾತು ಹೇಳುತ್ತೇನೆ. 'ಕ���್ಮ' ದಲ್ಲೇ ಓದುಗರ ಆಕರ್ಷಿಸಿದ್ದ ಲೇಖಕ " ಕರಣಂ ಪವನ ಪ್ರಸಾದ್ " ಪ್ರಥಮ ಪಂದ್ಯದಲ್ಲೇ ಶತಕ ಹೊಡೆದು ಬಹಳ ನಿರೀಕ್ಷೆ ಮೂಡಿಸಿದಂತಹ ಯುವ ಲೇಖಕ. ತಮ್ಮ ಎರಡನೇ ಕಾದಂಬರಿಯಲ್ಲಿ ಬೇರೆಯೇ ವಸ್ತುವಿನ ಬಗ್ಗೆ ಬಹಳ ಆಳವಾದ ಅಧ್ಯಯನ, ನಿರೂಪಣಾ ಶೈಲಿ, ಓದುಗರನ್ನೇ ಸಹಪಾತ್ರಧಾರಿಯಾಗಿಸುವಂತಹ ಅವರ ರಂಗಭೂಮಿಯ ಅನುಭವ ಇಲ್ಲಿ ಬಹಳ ಉಪಯೋಗವಾಗಿದೆ. 'ನನ್ನಿ' ಶೀರ್ಷಿಕೆಯೇ ಬಹಳ ಚೆಂದ ಮತ್ತು ಕುತೂಹಲ ಮೂಡಿಸುತ್ತದೆ! ಈ ಕಾದಂಬರಿಯ ಕಾಲಘಟ್ಟವನ್ನು ದೃಢೀಕರಿಸಲು ಉಪಯೋಗಿಸಿರುವ ಉದಾಹರಣೆಗಳು ತುಂಬಾ ವಿಭಿನ್ನವಾಗಿವೆ, ಅದರಲ್ಲೂ ನಾ ಕಂಡ ನನ್ನ ಹಳೆಯ ಬೆಂಗಳೂರನ್ನು ನೆನಪಿಸುವ ಪ್ರಸಂಗಗಳು ನನ್ನ ಬಾಲ್ಯದ ನೆನಪಿಗೆ ಜಾರಿಸಿ ಕಥೆಯಲ್ಲಿ ಇನ್ನೂ ಆಳವಾಗಿ ಪ್ರವೇಶಿಸುವಂತೆ ಮಾಡಿತು. ಈ ಕಾದಂಬರಿಯ ಯಾವ ಪಾತ್ರವೂ ಅನಗತ್ಯವೆನಿಸದೆ ಕಥೆಯ ಓಟಕ್ಕೆ ಪೂರಕವಾಗಿವೆ. ಯುವ ಸಾಹಿತಿಗಳ ಕೊರತೆಯನ್ನು ನೀಗಿಸುವಲ್ಲಿ ಹಾಗೂ ಗಟ್ಟಿ ಕಥಾ ವಸ್ತುವಿನ ಆಯ್ಕೆಯಲ್ಲಿ ಆಳವಾದ ಅಧ್ಯಯನ ಮಾಡುವ ಯುವಕರಿದ್ದಾರೆ ಎಂಬುದೇ ಒಂದು ಸಂತಸದ ಸುದ್ದಿ, ಕರಣಂ ಅವರ ಈ ಕೃತಿಗೆ ನನ್ನ ಮೆಚ್ಚಿಗೆ ಸೂಚಿಸುತ್ತಾ ಹಾಗೂ ಮುಂದಿನ ಅವರ ಕೃತಿಗಳಿಗೆ ಶುಭಕೋರುತ್ತೇನೆ.
ಸತ್ಯ ಕಾದಂಬರಿಯಲ್ಲಿ ಹೇಳಿದಂತೆ ಸೂರ್ಯ ನಿದ್ದಂತೆ...ಹತ್ತಿರ ಹೋದರು ಸಾವು..ದೂರ ಹೋದರೂ ಸಾವು. ಕ್ಯಾಥರೀನಾಳ ಸಾವು ಎಂತಹ ನೋವು ತರುತ್ತೆ ಅಂದ್ರೆ ಕರುಳು ಕಿವುಚತ್ತೆ. ರಾಯಪ್ಪನ ಗೋಳು ಯಾವ ಮನುಷ್ಯಂಗೂ ಬಾರದೆ ಇರ್ಲಿ. ಧರ್ಮದ ಹೆಸರಲ್ಲಿ ಆಗುತ್ತಿರುವ ಕರ್ಮ ಕಾಂಡಗಳನ್ನೆಲ್ಲ ಬಗೆದು ತೆಗ್ದಿದಾರೆನೋ ಅನ್ನಿಸ್ತು. ನನ್ನಲ್ಲಿ ಇನ್ನು ಸತ್ಯ ಅರಗಿಸಿ ಕೊಳ್ಳೋ ಶಕ್ತಿ ಇಲ್ವೇನೋ ಅನ್ನಿಸೋಕೆ ಶುರು ಆಯ್ತು ಕೊನೆ ಕೊನೆಗೆ.
ಈ ಹಿಂದೆ ಓದಿರುವ ಕಾದಂಬರಿ ಲೇಖಕರು ಬರೆದಿರುವ ರಾಯಕೊಂಡ ಈ ಕಾದಂಬರಿಯಲ್ಲಿ ಕೂಡ ಹೆಣ್ಣೊಬ್ಬಳ ಮೂಲ ಕೇಂದ್ರಬಿಂದು ಕಥೆಯ ರೂಪಾಂತರ.ಕರ್ಣಂ ಪವನ್ ಪ್ರಸಾದ್ ಅವರ 'ನನ್ನಿ' ಎರಡನೇ ಕಾದಂಬರಿ.
'ನನ್ನಿ' ಎಂದರೆ ದಿಟ್ಟ ಹಾಗೂ ಸತ್ಯ ಎಂಬರ್ಥ.ಸತ್ಯವನ್ನು ಹುಡುಕಲು ಹೊರಟಿರುವ ಕಥೆಯ ನಾಯಕಿ ರೋಣ.ಸತ್ಯ ಎಂದರೆ ಸೂರ್ಯನಂತೆ ಹತ್ತಿರ ಹೋದರು ಸಾವು,ದೂರ ಹೋದರು ಸಾವು ಎಂಬುದನ್ನು ನಿರೀಕ್ಷಿಸುತ್ತದೆ. ಸಿಸ್ಟರ್ ರೋಣಳ ಬದುಕಿನಲ್ಲಿ ನಡೆಯುವ ಘಟನೆಗಳು ಅವಳ ಬದುಕಿನ ಆಘಾತಗಳು ಪ್ರತಿ ಪ್ರತಿಯಾಗಿ ಅಕ್ಷರ ರೂಪಾಂತರಗಳು ಪಡೆದಿದೆ.ಕೆಲವೊಂದು ಪದದ ಸಾಲುಗಳು ಮತ್ತೆ ಮತ್ತೆ ಓದುವ ಹಂಬಲಗಳು ಮೂಡುತ್ತದೆ.
ಕಾಳಿಘಟ್ ಆಶ್ರಮದಲ್ಲಿ ಮಕ್ಕಳು,ಅನಾಥರು,ಬುದ್ದಿಮಾಂದ್ಯ ಮಕ್ಕಳು,ರೋಗಿಗಳು,ಕುಷ್ಠ ರೋಗಿಗಳು,ವೃದ್ಧರು,ಅದಕ್ಕಿಂತ ಹೆಚ್ಚಾಗಿ ಇಲ್ಲಿ ಸಾಯುವ ಸಂಖ್ಯೆ ಅವರೇ ಹೆಚ್ಚು. ಸಿ.ಎಂ.ಸಿ.(Charity Mission of Calcutta)ಸಿಎಂಸಿಯಲ್ಲಿ ತನ್ನ ಸೇವೆ ಸಲ್ಲಿಸುತ್ತಿರುವ ಸಿಸ್ಟರ್ ರೋಣಳ ಸೂಕ್ಷ್ಮ ಸ್ವಭಾವದ ಮನಸ್ಸು, ಸತ್ಯಾಂಶ ಗೊತ್ತಿದ್ದರೂ ಹೇಳಲಾಗದ ಭಾವನೆಗಳು.ತನ್ನ ಬದುಕಿನ ಉದ್ದಕ್ಕೂ ಕ್ರೈಸ್ತನೇ ಗಂಡ ಅವನಿಗಾಗಿ ಎಲ್ಲವನ್ನು ಅರ್ಪಣೆ ಮಾಡಲು ಹೊರಟಿರುವ ರೋಣಳ ಬದುಕಿಗೆ ಅನಿರೀಕ್ಷಿತವಾಗಿ ಮಿಲ್ಟನ್ ಫಾಬ್ರಿಗಾಸ್.ಕಥೆ ಪೂರ್ತಿಯಾಗಿ ಹೇಳಿದರೆ ಕಥೆಯ ಮೂಲ ಸತ್ವ ಕಳೆದುಹೋಗುತ್ತದೆ.ಕಾದಂಬರಿ ಓದಲೇ ಬೇಕಾದ್ದು.
ಈ ಮತಾಂತರ ಇದೆ,ಬಡತನದ ಹಸಿವು,ಕಷ್ಟದ ಕಾರ್ಪಣ್ಯ,ಅಪ್ಪ ಮಗಳ ಪ್ರೀತಿಯ ವಾತ್ಸಲ್ಯ ,ಬಾಲ್ಯದ ನೆನಪು,ದೌರ್ಜನ್ಯ ಹಾಗೂ ಲೈಂಗಿಕ ಒಳಗಿರುವ ಮರ್ಮ.ಹೆಣ್ಣೊಬ್ಬಳ ನೋವಿನ ಸಂಕಟ ಅವಳಲ್ಲಿರುವ ಬಯಕೆ,ಆಸೆ ಎಲ್ಲವನ್ನು ಒಟ್ಟುಗೂಡಿ ನನ್ನಿ.
ಒಂದು ಕಾದಂಬರಿಯನ್ನು ಓದುವ ಮುನ್ನ ಅಥವಾ ಯಾವುದೇ ಒಂದು ಪುಸ್ತಕವನ್ನು ಓದುವ ಮುನ್ನ ಒಂದು ಚಿಕ್ಕ ತಯಾರಿ ಇರಬೇಕೆಂದು ಅನ್ನಿಸಿದ್ದ ಈ ಕಾದಂಬರಿಯ ಹಿಂದಿನ ಕೆಲ ಅಂಶಗಳನ್ನು ತಿಳಿದುಕೊಂಡು ಓದಲು ಪ್ರಾರಂಭಿಸಿದ್ದರಿಂದ. ಅದಕ್ಕೆ ಎಂಬಂತೆ ಕಾದಂಬರಿ ಸುಲಭವಾಗಿ ಹೆಚ್ಚು ಆಳಕ್ಕೆ ಇಳಿಯುತ್ತಾ ಹೋಗಲು ಸಹಕಾರಿಯಾಯಿತು.
ಕೆಲವು ತಿಂಗಳ ಹಿಂದೆ ಕಲ್ಕತ್ತೆಯ ಎರಡು ಕತ್ತಲುಗಳನ್ನು ಕಂಡು ಅಲ್ಲಿನ ಕೆಲ ಪ್ರಸಿದ್ಧ ಜಾಗೆಗಳ ಹೆಸರುಗಳನ್ನು ತಿಳಿದುಕೊಂಡದ್ದರಿಂದ ಈ ಕಾದಂಬರಿಯ ಆರಂಭ ನನಗೆ ಪರಿಚಿತದ ಹಿನ್ನೆಲೆಯ ಜಾಗವೆಂದು, ಕಥಾ ಪಾತ್ರಗಳ ಚಲನೆಯನ್ನು ಅರಿತುಕೊಳ್ಳಲು ಸಹಕಾರಿಯಾಯಿತು. ಇನ್ನು ಬೆಂಗಳೂರು ಹತ್ತಿರವೇ. ಕರಣಂರ ಪುಸ್ತಕಗಳ ಈ ಹಿಂದಿನ ಓದು ನನ್ನನ್ನು ಮುಂದಿನ ಅವರ ಕಾದಂಬರಿಗಳನ್ನು ಓದಲು ಪ್ರೇರಣೆ ನೀಡಿತು ಎನ್ನಬಹುದು. ಕರ್ಮದಿಂದ ಬೆಳೆದ ಕರಣಂರ ಬರವಣಿಗೆಯ ಗಟ್ಟಿ ಅದ್ಭುತವಾದದ್ದು.ಇಲ್ಲಿ ಕಾದಂಬರಿಯನ್ನು ವಿಮರ್ಶಿಸುವ ಯಾವ ಉಮೇದು ನನ್ನದಲ್ಲ. ಒಂದು ಅತ್ಯುತ್ತಮ ರಸಾನುಭವ ನೀಡುವ ಈ ಕಾದಂಬರಿಯನ್ನು ಓದಿದ ಸಂತಸ. ಖುಷಿ. ಹಲವು ವಿಷಯಗಳ ಬಗ್ಗೆ ತಿಳಿದುಕೊಂಡ, ಚಿಂತಿಸುವಂತೆ ಮಾಡಬಲ್ಲ ಕೃತಿ ಇಂದು ನನ್ನದಾಯಿತಲ್ಲ ಎಂಬ ತೃಪ್ತಿ.
ಇದು "ಸತ್ಯ ಹಾಗೂ ಸೇವೆ"ಯ ನಿಜವಾದ ಅರ್ಥದ ಹುಡುಕಾಟ. ಅದೆಷ್ಟೆ ಕೆದಕುತ್ತಾ ಕೂತರು ಸಿಗದ ಆಳವಾದ ವಜ್ರದ ಹುಡುಕಾಟದಂತೆ. ಅಲ್ಲಲ್ಲಿ 'ಹೌದಲ್ಲಾ' ಎಂದು ಪ್ರಶ್ನೆ ಹುಟ್ಟಿಸುವ, ಗೋಜಲು ಗೋಜಲು ಎಂಬಂತೆ ಭಾಸವಾಗುವ ಅಂಶಗಳು. ಹೌದು ಇದೇ ಸರಿ ಎಂದು ನಂಬಿದ ಅಂಶಗಳನ್ನು ಬುಡಮೇಲು ಮಾಡಿ ಅಲ್ಲಾಡಿಸಿ ಅದರ ಹಿಂದಿನ ಒಂದು ಸತ್ಯಶೋಧನೆಯನ್ನು ಮಾಡುವ ಪಾತ್ರಗಳ ಸಂದರ್ಭಗಳು. ಮನುಷ್ಯ ಇದೆಲ್ಲದಕ್ಕೂ ಒಗ್ಗಿ ಯಾವುದು ನಾನು, ಯಾವುದು ನಾನಲ್ಲ ಎಂದು ಅರಿಯಬೇಕಾದ ಒಂದು ಕಥಾನಕ.