ಎಲ್ಲ ಮರೆಸಿ ಓದಿಸಿಕೊಂಡು ಹೋಗುವ, ಓದಲು ಸಲಹೆ ನೀಡಬಹುದಾದ ನೆಚ್ಚಿನ ಪುಸ್ತಕದ ಸಾಲಿಗೆ ಇನ್ನೊಂದು ಸೇರ್ಪಡೆ ಗಿರೀಶ ಕಾರ್ನಾಡರ ಸಮಗ್ರ ನಾಟಕ ಕೃತಿ!
ಅದಷ್ಟೇ? ಅಲ್ಲವೇ ಅಲ್ಲ!
ಹಲವಾರು ವಿದ್ವಾಂಸರ ಗ್ರಂಥಗಳನ್ನು ಓದಿ ಬರೆದ ತಲೆದಂಡದಲ್ಲಿರುವ ಆಧ್ಯಾತ್ಮಿಕ ಹೊಳಹುಗಳು...
ತತ್ವ, ವಿಚಾರಗಳು
ಯೋಚನೆ, ಚರ್ಚೆಯ ಮಟ್ಟದಲ್ಲಿರುವವರೆಗೆ ಕಾಣುವ ಸ್ವಾತಂತ್ರ್ಯ, ಅನುಷ್ಠಾನಗೊಳಿಸುವಾಗ ಕಾಣುವ ವಿರೋಧಾಭಾಸ, ಘರ್ಷಣೆಗಳು...
ಹೂವು ನಾಟಕದಲ್ಲಿನ ಹೂವಿನ, ಹೆಣ್ಣಿನ ಅಲಂಕಾರ, ಅರ್ಚಕನ ಪರಿಸರ ಕುರಿತ ರೂಪಕಗಳು ಆಸಕ್ತಿಕರವಾಗಿವೆ ...
ಪ್ರತಿಭೆ, ಹೆಣ್ಣು, ದೇವರು, ಹೆಂಡತಿಯ ಸುತ್ತಿರುವ ನಾಟಕ ಈ ಭಾಣ ರೂಪಕ..
ನಾಗಮಂಡಲ ಚಲನಚಿತ್ರಕ್ಕಿಂತಲೂ ವಿವರವಾಗಿದ್ದು ಜಾನಪದ, ಭಾಷೆ, ಕಾವ್ಯಾಸಕ್ತರಿಗೆ ಮತ್ತು ಈ ನೆಲೆಗಳನ್ನು ಕಾಣಬಯಸುವವರಿಗೆ ಹೆಚ್ಚು ಇಷ್ಟವಾಗುತ್ತೆ, ಸಾರ ಘನವಾಗಿದೆ.
ಹಯವದನ, ಯಾಯತಿ,
ಇತಿಹಾಸದಲ್ಲಿ ಕಾಣಲ್ಪಡುವ
ತುಘಲಕ್ ನ ಬೇರೆಯದೇ ಮನೋರಂಗ, ಬಲಿ
ಅಗ್ನಿ ಮತ್ತು ಮಳೆ,
ಟಿಪ್ಪೂ ಸುಲ್ತಾನ ಕಂಡ ಕನಸು,
ಒಡಕಲು ಬಿಂಬದ ಕ್ಲೈಮ್ಯಾಕ್ಸ್..
ಹನ್ನೆರಡು ನಾಟಕಗಳಲ್ಲಿ ಒಂದೆರಡು ಬಿಟ್ಟು
ಒಂದೊಂದು ನಾಟಕವೂ ರೋಚಕ, ಅದ್ಭುತ!
ಅಬ್ಬಾ ಇನ್ನೊಮ್ಮೆ ಓದಲೇಬೇಕು. ಇದರ ಅಂತರಂಗ ಇನ್ನಷ್ಟು ಸ್ಪಷ್ಟವಾಗಿ ತಿಳಿಯಬೇಕು.
ಈ ನಾಟಕಗಳ ಕುರಿತ ವಿಮರ್ಶೆ, ಸಂಬಂಧಿತ ಗ್ರಂಥಗಳನೋದಿ, ಅರಿತವರಲ್ಲಿ ಚರ್ಚಿಸಿ
ಎಷ್ಟರ ಮಟ್ಟಿಗೆ ಇವು ವಾಸ್ತವ, ಕಾಲ್ಪನಿಕ ತಿಳಿಯಬೇಕಿದೀಗ!