ತ.ರಾ.ಸು ಅವರ ಚಿತ್ರದುರ್ಗ ಇತಿಹಾಸದ ಕುರಿತ ಕಾದಂಬರಿ ಮಾಲೆಯ ಐದನೆಯ ಕೃತಿ.
ಭರಮಣ್ಣನಾಯಕನ ಧೀರ ಜೀವನದ ಮತ್ತು ದುರ್ಗದ ಪ್ರಗತಿಯ ಮುಂದುವರೆದ ಭಾಗ.
ಸೀರ್ಯದವರ ಸಾಮಂತ ಪದವಿ ಸ್ವೀಕಾರ ಮಾಡಬೇಕೆಂದು ಅಲ್ಲಿಯ ದಿವಾನ್ ಫೌಜುದಾರ್ ತನ್ನ ವಕಿಲನನ್ನು ಮತ್ತು ಬಿಜಾಪುರದ ಪ್ರಸಿದ್ದ ಗಾಯಕಿ, ಮೆಹರ್ ಬಾನುವನ್ನು ದುರ್ಗಕ್ಕೆ ಕಳುಹಿಸುತ್ತಾನೆ. ದುರ್ಗ ಅದನ್ನು ನಿರಾಕರಿಸಿ ಪ್ರತ್ಯುತ್ತರವಾಗಿ ಸ್ನೇಹ ಸಂಬಂಧವನ್ನ ಪ್ರಸ್ತಾಪಿಸುತ್ತದೆ.
ಮರಾಠ ಸೇನೆ ಸಂತೋಜಿ ಗೋರ್ಪಡೆ ನಾಯಕತ್ವದಲ್ಲಿ ಸುತ್ತ ಹಳ್ಳಿಗಳಲ್ಲಿ ದರೋಡೆ ಮಾಡುತ್ತಿದ್ದು, ಹೀಗೆ ವಿದೇಶಿಯೋರ್ವ ಜಾನ್ ಡ್ಯುವೇರೋನ, ಸಂಪತ್ತು ಲೂಟಿ ಮಾಡಿದ್ದರು.
ದೊಡ್ಡೇರಿಯಲ್ಲಿ ಸೀರ್ಯದವರು ದುರ್ಗದವರ ಸಹಾಯದಿಂದ ಮರಾಠರನ್ನ ಸೋಲಿಸುತ್ತಾರೆ. ಜಾನ್ ಡ್ಯುವೇರೋ ಸಂತೋಜಿಯನ್ನು ವಧಿಸುತ್ತಾನೆ.
ಗಮನಾರ್ಹ ಸಾಲುಗಳು:
ಮೆಹರ್ ಬಾನುವಿನ ಜಾತ್ಯತೀತ ಭಾವನೆ:
“ಸರ್ವಧರ್ಮ ಸಮಾನತೆಯನ್ನು ಸಾರುವ 'ದೀನ್-ಇಲಾಹಿ' ಮತಸ್ಥಾಪಕ ಅಕ್ಟರ್, ಗೀತೋಪನಿಷತ್ತುಗಳಲ್ಲಿ ತನ್ನ ಬಾಳ ಬೆಳಕನ್ನು ಕಂಡುಕೊಂಡ ದಾರಾಷ್ಹುಕೊ `ರಾಮ-ರಹೀಮ್, ಈಶ್ವರ ಅಲ್ಲಾ, ಕಾಶಿ-ಕಾಬಾ' ಎಲ್ಲವೂ ಒಂದೇ ಎಂದು ಸಾರಿದ ದೀನಬಂಧು ಕಬೀರ್, 'ದೇವವಧು'ವಾದ ಜೇಬುನ್ನೀಸಾ, ಮಹಾಕವಿ ಉಮರ್‌ಕಯ್ಯಂ ಇವರು ನಿಜವಾದ ಮುಸ್ಲಿಮರು. ಇಸ್ಲಾಂ ಎಂದರೆ ಕೊಲೆಗಡುಕತನಕ್ಕೆ ಪರ್ಯಾಯ ಶಬ್ದವಲ್ಲ ಜಹಾಪನ, ಪೈಗಂಬರರು ತಮ್ಮ ಪವಿತ್ರ ಖುರಾನಿನಲ್ಲಿ ಸಾರಿದ 'ಅಲ್ಲಾಹೊ ಅಕ್ಟ' ಎಂಬ ಘೋಷವೂ, ಉಪನಿಷತ್ತಿನಲ್ಲಿ 'ಏಕಂ ಸದ್ವಿಪ್ರಾ ಬಹುಧಾ ವದಂತಿ' ಎಂಬ ಘೋಷವೇ; ಬಸವಣ್ಣನವರು ಹೇಳಿದ ದೇವನೊಬ್ಬ ನಾಮ ಹಲವು ಕಾಣಿರೋ ಎಂಬ ಮಾತೇ. ಇಸ್ಲಾಂ ಒಂದೇ ಪವಿತ್ರ ಮತ, ಉಳಿದದ್ದೆಲ್ಲವೂ ಹಲಾಲ್' ಎಂದು ಹೇಳುವವರು, ತಮ್ಮ ಕುರುಡುಗಣ್ಣಿಗೆ ಕಂಡ ಕತ್ತಲೇ ಬೆಳಕೆಂದು ಸಾರುವ ಗೂಬೆಗಳು. ಅಂಥ ಹಿಸುಣರ ಮಾತನ್ನೇ ಸತ್ಯವೆಂದು ಪ್ರಭುಗಳೂ ಭ್ರಮಿಸಬಾರದು."