ಮುದ್ದಣ್ಣ ನ ಅಂತ್ಯದೊಂದಿಗೆ ದುರ್ಗಕ್ಕೆ ಕವಿದ ಕಾರ್ಮೋಡ ಸರಿಯಿತು ಎಂಬ ಭ್ರಮೆಯಲ್ಲಿ ಮೈಮರೆತ ದುರ್ಗಕ್ಕೆ ಒಂದು ಹೊಸ ಸಮಸ್ಯೆ ಎದುರಾಗಿದೆ.. ಅದೇ.. ಮುಂದಿನ ನಾಯಕ ಯಾರಾಗಬೇಕು ಎಂಬುದು.
ಹಿಂದೆ ಮುದ್ದಣ್ಣ ಪಟ್ಟಕ್ಕೆ ತಂದ ರಂಗಪ್ಪ ನಾಯಕರೋ ಅಥವಾ ಹೊಸ ತಲೆ ಯೋ?
ಜನರ ಬೆಂಬಲದೊಂದಿಗೆ ಪಟ್ಟಕ್ಕೆ ಬಂದ ಹಿಂದೆ ಕುರಿ ಕಾಯುತ್ತಿದ್ದ ಭರಮಪ್ಪ ನಾಯಕರು ಏನೇನು ಮಾಡಿದರು? ಅವರು ನಡೆಸಿದ ಜೀರ್ಣೋದ್ಧಾರ ಕಾರ್ಯಗಳು ಎಂತಹುದು? ಅದಕ್ಕಾಗಿ ಅವರು ಜನರನ್ನು ಹೇಗೆ ಒಗ್ಗೂಡಿಸಿದರು? ಇಂತಹ ಸನ್ನಿವೇಶದಲ್ಲಿ ನೆರೆಯ ಹರಪಹಳ್ಳಿಯ ಪಾಳಯಗಾರರ ಪಿತೂರಿ ಸಫಲವಾಯಿತೇ?
ದುರ್ಗದಲ್ಲಿ ನವ ಯುಗ ಆರಂಭವಾಗಿದೆ, ಜೊತೆಗೆ ಹೊಸ ರಾಜಕಾರಣದ ಸಮಸ್ಯೆಗಳೂ! ಹೊಸ ನಾಯಕರು - ಹೊಸ ಗುರುಗಳ ಜೊತೆಗೆ ಬೆನ್ನೆಲುಬಾಗಿ ಹಳೇ ತಲೆಗಳು !
ಭರಮಪ್ಪ ನಾಯಕರ ಪಟ್ಟಾಭಿಷೇಕ, ದುರ್ಗದಲ್ಲಿ ಅವರು ನಡೆಸಿದ ಸಮಾಜಮುಖಿ ಕೆಲಸಗಳು, ಸೆರೆಯಲ್ಲಿದ್ದ ರಂಗಪ್ಪ ನಾಯಕನನ್ನ ಹರಪನಹಳ್ಳಿಯವರು ಉಪಾಯವಾಗಿ ಬಿಡಿಸಿದ್ದು,
ಮಾಯಕೊಂಡ ಗೌಡ ಹಾಗೂ ಹೊಳಲಕೆರೆ ಗೌಡ ಸೇರಿಕೊಂಡು ರಂಗಪ್ಪ ನಾಯಕನ ಸಂಚು ಮುರಿದು ಆತನ ತಲೆ ಹಾರಿಸಿದ್ದು , ಸೇಡು ತೀರಿಸಿಕೊಳ್ಳಲು ಹರಪನಹಳ್ಳಿಯವರು ಅಣಜಿ ಕೋಟೆಯಲ್ಲಿ ಹತ್ಯಾಕಾಂಡ ನಡೆಸಿದ್ದು , ನಂತರ ನಡೆದ ಅಣಜಿ ಯುದ್ಧದಲ್ಲಿ ದುರ್ಗದ ಸೋಲು, ಸೋಲಿನಿಂದ ನೆಲಕಚ್ಚಿ ಹಾಸಿಗೆ ಹಿಡಿದ ಭರಮಪ್ಪ ನಾಯಕ, ಅವನ ಆತ್ಮವಿಶ್ವಾಸವನ್ನು ಮತ್ತೆ ಮೇಲೆತ್ತಿದ ಮುರುಘಾ ರಾಜೇಂದ್ರ ಸ್ವಾಮಿಗಳು , ಮತ್ತೆ ಸಮಯ ನೋಡಿ ಮತ್ತೆ ಅಣಜಿ ಕೋಟೆಯನ್ನು ವಶಪಡಿಸಿಕೊಂಡದ್ದು ! ಹೀಗೆ ಹಲವು ಸನ್ನಿವೇಶಗಳನ್ನು ಸೊಗಸಾಗಿ, ಕಾವ್ಯಾತ್ಮಕವಾಗಿ ವಿವರಿಸಿದ್ದಾರೆ ಲೇಖಕರು.
ಅಣಜಿಯನ್ನು ಗೆದ್ದು ದಳವಾಯಿ ಭರಮಣ್ಣ ತನ್ನ ಮಾತು ಉಳಿಸಿಕೊಂಡ, ಹರಪನ ಹಳ್ಳಿಯನ್ನು ಗೆದ್ದು ಭರಮಪ್ಪ ನಾಯಕ ತನ್ನ ಪ್ರತಿಜ್ಞೆ ಉಳಿಸಿಕೊಳ್ಳುವನೇ?
' ವಿಜಯೋತ್ಸಾಹ ' ದೊಂದಿಗೆ ಮತ್ತೆ ಸಿಗುವೆ .
- ಕಾರ್ತಿಕ್ ಕೃಷ್ಣ
24/12/2021