Jump to ratings and reviews
Rate this book

ಸರ್ಪಭ್ರಮೆ [Sarpabrame]

Rate this book
In the early hours of the morning, a newborn baby is left on the doorstep of a priest's house. The priest and his wife raise the baby, who grows up to become a young man named Yagi Jois. The family business of the priest involves performing 'apara karma', which are the ceremonies conducted after death.

Yagi Jois is a sensitive and intelligent young man, yet he is haunted by the mystery of his birth. The novel depicts how he transcends his modest upbringing, incorporating deep philosophical thoughts throughout his journey.

205 pages, Paperback

Published February 25, 2024

31 people want to read

About the author

M.R. Dattathri

6 books42 followers
M. R. Dattathri is a bilingual novelist, poet, translator, and columnist from Bengaluru, India.
After spending three decades as a senior IT professional in India and the US, he transitioned full-time to literature, publishing in both Kannada and English.
His fiction blends incisive social observation with a global outlook shaped by years spent on two continents. Dattathri’s novels have earned many of Karnataka’s highest honours, including the Masti Prashasti (2019), Book Brahma Novel of the Year (2023), Vardhamana Prashasti (2023), and the Sunanda Belgaokar Award (2024). Two of his books have appeared in Telugu, and his latest English book—What’s Your Price, Mr Shivaswamy?—was released by Penguin Random House India in April 2025.
In addition to five novels, he has published a poetry collection, several volumes of essays, and an acclaimed English edition of poems by Dr H. S. Venkateshamurthy, which he edited. Dattathri lives in Bengaluru, where he advocates for cross-cultural literary exchange.
More information is available at www.dattathri.in.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
17 (50%)
4 stars
15 (44%)
3 stars
2 (5%)
2 stars
0 (0%)
1 star
0 (0%)
Displaying 1 - 14 of 14 reviews
Profile Image for Prashanth Bhat.
2,158 reviews139 followers
March 7, 2024
ಸರ್ಪಭ್ರಮೆ - ಎಂ.ಆರ್.ದತ್ತಾತ್ರಿ

ದತ್ತಾತ್ರಿಯವರ ಕಾದಂಬರಿಗಳನ್ನೆಲ್ಲ ಗಮನಿಸಿದರೆ ನೀವು ಒಂದು ಅಂಶವನ್ನು ಸ್ಪಷ್ಟವಾಗಿ ನೋಡಿರುತ್ತೀರಿ. ಪ್ರತಿಯೊಂದೂ ಒಂದು ಹೊಸ ಬಗೆಯದು ಮತ್ತು ಅವರು ಓದುಗರ ಮೆಚ್ಚುಗೆಗಾಗಿ ಬರೆಯುತ್ತಿಲ್ಲ ಎಂಬುದನ್ನು.
ಅಲ್ಲಿ ಸಮಸ್ಯೆಗಳಿಗೆ ಪರಿಹಾರವನ್ನೇ ನೆಚ್ಚಿಕೊಂಡು ಕಾದಂಬರಿ ಬೆಳೆದಿಲ್ಲ. ' ದ್ವೀಪವ ಬಯಸಿ' ಕನ್ನಡದ ಮೊದಲಿನ ಜಾಗತಿಕ ಕಾದಂಬರಿಗಳಲ್ಲೊಂದು. ಆ ವಸ್ತು ಅಷ್ಟು ದೊಡ್ಡದು. ಹಾಗೆಯೇ ' ಮಸುಕು ಬೆಟ್ಟದ ಹಾದಿ' ವಿಶಿಷ್ಟ ಶಕ್ತಿಯ ಹುಡುಗನೊಬ್ಬನದಾದರೂ ಅದು ಅವನ ದುರಂತವೂ ಆದದ್ದು, 'ತಾರಾಬಾಯಿಯ ಪತ್ರ' ಇಡೀ ದೇಶದ ಜೀನ್ಸ್ ನಲ್ಲಿ ಸುಪ್ತವಾಗಿ ಹರಿಯುತ್ತಿರುವ ಮೇಲ್ ಈಗೋವನ್ನು ಕಟ್ಟಿದ್ದೂ ಮರೆಯುವಂತಿಲ್ಲ. ' ಒಂದೊಂದು ತಲೆಗೂ ಒಂದೊಂದು ಬೆಲೆ ' ಮಹಾನಗರದಲ್ಲಿ ನೆಲೆ ಊದುವ ತವಕದ ಎಲ್ಲರ ಸಮಸ್ಯೆಯೂ ಆಗಿ ಬೆಳೆಯುತ್ತದೆ.
ಹಾಗಾಗಿ ಈ ಕಾದಂಬರಿಯ ಬಗ್ಗೆ ತುಂಬಾ ಕುತೂಹಲವಿತ್ತು.

ಇದು ಹಿಂದಿನ ಕಾದಂಬರಿಗಳ ಪಾತಳಿಯನ್ನು ಹೊಂದಿದೆಯಾದರೂ, ಉದಾಹರಣೆಗೆ ವಲಸಿಗ ಬೇರಿಗೆ ಅರಸಿಕೊಂಡು ಬರುವ ಸನ್ನಿವೇಶ..ಇಲ್ಲಿ ಹುಡುಕಾಟದ ಉದ್ದೇಶ ಬೇರೆಯೇ. ಬಹುಶಃ ಹೊಟ್ಟೆಪಾಡಿಗಾಗಿ ಮತ್ತು ಭಾವನಾತ್ಮಕ ಅಗತ್ಯಗಳ ಮೀರಿದ ಮೇಲೆ ಇನ್ನೂ ಅತೃಪ್ತಿ ಉಳಿದಿರುತ್ತದಲ್ಲ ಅಂತಹ ಹುಡುಕಾಟ ಇದು.

ಮೊದಲನೆಯದಾಗಿ ನನಗೆ ಓದು ಆರಂಭಿಸುವಾಗ ಇವರು ಬಹಳ ಗೊಂದಲದಲ್ಲಿ ಬರೆಯುತ್ತಿದ್ದಾರೋ ಅನಿಸಿತು. ಓದುಗನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮಾದರಿಯಾಗಿ ಅನುನಯಿಸುವ ಧಾಟಿ ಇರಬಹುದು ಎಂದು. ಆದರೆ ಇದು ಹುಡುಕಾಟಕ್ಕೆ ಹೊರಟ ಎಲ್ಲರ ಸತ್ಯಾನ್ವೇಶಿಯ ಪಾಡು ಎಂದು ಅರ್ಥವಾದುದು ತಡವಾಗಿ.
ಕತೆಯ ಕೊನೆಯ ಎರಡು ಪುಟಗಳಲ್ಲಿ ಬರೆದದ್ದೆಲ್ಲ ಇಡೀ ಕಾದಂಬರಿ ಯಾಕೆ ಹೀಗಿದೆ ಎಂಬುದನ್ನು ಬಿಡಿಸಿತು. ಆದರೆ ಇದು ಓದಿ ಹಗುರಾಗುವ ಕಾದಂಬರಿ ಅಲ್ಲ. ಇದನ್ನು ಓದಿದವರೂ ಹೊತ್ತು ನಡೆಯುವ ಶಾಪ ಪಡೆದವರು. ಹಾಗಾಗಿ ನನಗೆ ಈ ಯಾರ ಮೆಚ್ಚಿಸಬೇಕಾದ ಅನಿವಾರ್ಯತೆ ಇಲ್ಲದ ಈ ಬರವಣಿಗೆ ಇಷ್ಟವಾಯಿತು.
ಆದರೆ ಒಂದು ಮಾತು ಕೊನೆಗೆ ಹೇಳಲೇಬೇಕು. ಕನ್ನಡದ ಓದುಗರು ಇದನ್ನು ಹೇಗೆ ಸ್ವೀಕರಿಸಿಯಾರು ಎಂಬ ಆತಂಕ ನನಗಿದೆ. ಯಾಕೆಂದರೆ ಅವರಿಗೆ ಸ್ಪೂನ್ ಫೀಡಿಂಗ್ ಬೇಕು ಕೊನೆಗೆ ಸುಖವೋ ದುಃಖವೋ ಒಂದು ಅಂತ್ಯ ಬೇಕು. ಅಂದರೆ ಪೂರ್ಣವಿರಾಮ ಬೇಕು. ಹಾಗಾಗಿ ಇದಕ್ಕೆ ತಕ್ಕ ಪ್ರತಿಕ್ರಿಯೆ ಬರದಿದ್ದರೆ ನಿರಾಶರಾಗಬೇಕಾದ ಅಗತ್ಯವಿಲ್ಲ. ಈ ಮಾದರಿ ಹೊಸದು. ಇದನ್ನು ಹೇಳಿದ್ದೇ ಹೊಸ ದಾರಿ ಅದಕ್ಕೆ ಸಮಯ ಬೇಕು.

ಯಾವ ಭಾರದ ಹಂಗಿಲ್ಲದೆ ಖುಷಿಗೆ ಗಿಡುಗಕ್ಕೆ ಬರೆದ ಬರವಣಿಗೆ ಇದು. ಅದಕ್ಕೆ ಗಣಿತ ಮತ್ತು ತತ್ವಶಾಸ್ತ್ರದ ಚೌಕಟ್ಟು ಹದವಾಗಿದೆ.
Profile Image for That dorky lady.
375 reviews73 followers
April 7, 2024
ಸರ್ಪಭ್ರಮೆ!
ಹೆಸರಿನಂತೆಯೇ ಮಾಯಕವಾದೊಂದು ಕಾದಂಬರಿ. 'ನನಗೆ ಇಷ್ಟವಾಯ್ತು, ಚೆನ್ನಾಗಿದೆ‌' ಎನ್ನುವುದರ ಆಚೆಗೆ ಕಾದಂಬರಿಯ ಕುರಿತು ಏನನ್ನು ಹೇಳುವುದೂ ಚೂರು ಕಷ್ಟದ ಕೆಲಸವೇ. ಸಾಮಾನ್ಯ ಕತೆಯ ಚೌಕಟ್ಟಿನಲ್ಲಿರದೇ ಆದಿ-ಮದ್ಯ-ಅಂತ್ಯ ಅನ್ನೊ ಯಾವ ಶಾಸ್ತ್ರೀಯ ವಿಚಾರಗಳಿಗೂ ಕಟ್ಟುಬೀಳದ ಕಾದಂಬರಿ ಒಂದರೊಳಗೊಂದು, ಅದರ ಹಿಂದೆ ಮತ್ತೊಂದು ಕತೆಯನ್ನು ಪೋಣಿಸಿದಂತೆ ಹೇಳುತ್ತಾ ಸಾಗಿ ನಿರ್ದಿಷ್ಟ ಅಂತ್ಯದ ಹಂಗಿಲ್ಲದೇ ಮುಗಿದರೂ journey is important than the destination ಅನ್ನುವ ಮಾತಿನಂತೆ ಸುಗಮವಾಗಿ ಸಾಗಿ ಓದಿನ ಸವಿ ಉಣಿಸುತ್ತದೆ.

ಕಾದಂಬರಿ ಓದುತ್ತಾ ಮನಸಿಗೆ ಬಂದಿದ್ದು ಹಾಗೇ ಗೀಚಿಟ್ಟುಕೊಂಡವು ಕೆಲ ಸಾಲುಗಳು.. ಓದಿನ ಟಿಪ್ಪಣಿಯೋ ಎಂತದೋ ಒಂದು.

* ಜನನ- ಮರಣ ಚಕ್ರದಲ್ಲಿ ಹುಟ್ಟು ಕಣಿವೆಯೊಂದರ ಬುಡದಿಂದ ಚಾರಣ ಹೊರಟ ಸ್ಥಿತಿ ಎಂದುಕೊಂಡರೆ ಆ ಕಣಿವೆಯನ್ನು ದಾಟಿ ಬೆಟ್ಟದ ತುದಿ ತಲುಪಲು ಜೀವಮಾನ ಪರ್ಯಂತ ನಡೆಸುವ ಎಲ್ಲವೂ ನಮ್ಮ ಬದುಕಿನ ಪಯಣ. ಅದರ ದಾರಿಯಾಗಿ ಮತ್ತು ಆಧಾರಕ್ಕಾಗಿ ನಾವು ಆಯ್ಕೆ ಮಾಡಿಕೊಂಡ ಸಹಚರ್ಯ, ಉದ್ಯೋಗ, ಪ್ರವೃತ್ತಿ.. ಒಟ್ಟಾರೆ ಪ್ರತಿಯೊಂದು ನಿರ್ಧಾರವೂ ಹಗ್ಗವೋ ಹಾವೋ ಎಂಬುದು ಕಾಲದ ಓಘದಲ್ಲಿ ಸ್ಪಷ್ಟವಾಗುವ ವಿಚಾರ.

* ನಂಬಿಕೆ ಒಂದು ವಿಚಿತ್ರವಾದ ಸಂಗತಿ. ಸಾಲವಾಗಿ ಕೊಟ್ಟ ಹಣವೋ ಇನ್ನೆಂತದೋ ಮರಳಿ ಬರುತ್ತದೆನ್ನುವ ಸಂಗತಿ ನಂಬಲು ಅಳುಕುವ ಮನಸ್ಸು ಯಾಗಿ ಒಬ್ಬ ಹ್ಯೂಮನ್ ಲೈ ಡಿಟೆಕ್ಟರ್ ಅನ್ನೋದನ್ನ; ಏಲಿಯನ್ಸ್ ಕನಸಿನಲ್ಲಿ ಬಂದರು, ದೃಷ್ಯಾವಳಿಗಳನ್ನು ತೋರಿಸಿದರು ಅನ್ನೋದನ್ನ ಸುಲಭವಾಗಿ ನಂಬುತ್ತದೆ. When reality becomes too unbearably ordinary, fiction gives us something to hold on to ಎನ್ನುವ ಮಾತು ಸುಮ್ಮನೇ ಅಲ್ಲ

* We see what we are seeking ಅನ್ನೋ ಉಕ್ತಿಯಿದೆ. ದೃಷ್ಟಿ ಅರಸುವುದನ್ನು ಸೃಷ್ಟಿ ಅನುಗ್ರಹಿಸುತ್ತದೆ ಎನ್ನುತ್ತಾರೆ. ಯಾಜ್ಞವಲ್ಕ್ಯರು ತಮ್ಮೊಳಗಿನ ಧನಾತ್ಮಕ ಅಂಶಗಳನ್ನೇ ಎದುರಿನ ಪ್ರತಿಯೊಬ್ಬರಲ್ಲೂ ಕಾಣುತ್ತಾ ಜಗತ್ತಿನ ಎಲ್ಲವೂ ಪೂರ್ವನಿರ್ಧರಿತ ಮಣಿಮಾಲೆ ಎಂದು ನಂಬುವಂತೆಯೇ ಶಾರದಾ, ಕಮಲಾರು ತಮ್ಮ ಅನುಭವಕ್ಕೆ ಸಿಕ್ಕ ಋಣಾತ್ಮಕ ಅನುಭವಗಳ ಭಾರ ಹೊತ್ತು ಅದರ ಪ್ರಕಾರ ಮುಂದಿನ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳುವವರು‌. ಅವೆರಡೂ ಬೆರೆತ ಬ್ಯಾಲೆನ್ಸಿಂಗ್ ಆ್ಯಕ್ಟ್ ರೂಢಿಸಿಕೊಳ್ಳುವ ಹಾದಿಯಲ್ಲಿ ಹಸಿರು ಪುಟಗಳ ಜೊತೆಗೇ ಗುಲಾಬಿ ಪುಟಗಳನ್ನು ಸೇರಿಸುತ್ತಾ ಬರೆಯುವ ಮತ್ತು ಬೇರೆ ಬಣ್ಣಗಳ‌ನ್ನೂ ಸ್ವೀಕರಿಸುವ ಸಂದೀಪನಂತವರು - ಕಾದಂಬರಿ ಓದುತ್ತಿರುವ ನಾವುಗಳು.

* ಎಳೆಪ್ರಾಯದ ಹುಡುಗನೊಬ್ಬ ವೃದ್ಧ ಬ್ರಾಹ್ಮಣರ ಜೊತೆ ಸಂವಾದಿಸುತ್ತಾ ಕಾಡ ನಡುವಿನ ಹಾದಿಯಲ್ಲಿ ನಡೆದು ಹೋಗುವ ದೃಶ್ಯ, ಅದೇ ಹುಡುಗ ಸುತ್ತಲೂ ಹಸುರಿನಿಂದ ಕೂಡಿರುವ ಪುರಾತನ ದೇವಸ್ಥಾನವೊಂದರ ಜಗುಲಿಯಮೇಲೆ ಕುಳಿತು ಸಾಹಿತ್ಯದ ಪುಸ್ತಗಳನ್ನು ಓದುತ್ತಿರುವ ದೃಶ್ಯ ಇನ್ನು ಬಹುಕಾಲ ಮನಸ್ಸನ್ನು ಕಾಡುತ್ತಾ ತಂಪೀಯುತ್ತಾ ಇರುತ್ತವೆ ಎನಿಸುತ್ತದೆ. ಇಂತಹ ಸುಂದರ ಕಲ್ಪನಾ ಲೋಕ ಕಟ್ಟಿಕೊಟ್ಟಿದ್ದಕ್ಕೆ ದತ್ತಾತ್ರಿಯವರಿಗೆ ನನ್ನಿ.
Profile Image for Soumya.
217 reviews48 followers
June 1, 2024
ನಾ ಓದಿದ ಎಲ್ಲಾ ಪುಸ್ತಕಕ್ಕಿಂತ ಭಿನ್ನವಾದದ್ದು.
ಅದು ಕಥೆ ಹೇಳಿರುವ ಶೈಲಿ ಆಗಿರಬಹುದು, ಕಥಾ ವಸ್ತು ಆಗಿರಬಹುದು ಹಾಗು ಅದನ್ನ end ಮಾಡಿದ ರೀತಿ ಕೂಡ ಒಂಥರ different.
ಕಥೆಯಲ್ಲಿ ಕಥೆ concept ಚೆನ್ನಾಗಿದೆ.
ಸರಾಗವಾಗಿ ಓದಿಸಿಕೊಂಡು ಹೋಗತ್ತೆ. ಕೆಲವೊಂದು ಕಡೆ life and reality ಬಗ್ಗೆ ಇರೋ punching lines ನ ಮತ್ತೆ ಮತ್ತೆ ಓದೋ ಅಷ್ಟು ಚೆನ್ನಾಗಿದೆ.
ಪುಸ್ತಕದ ಕೆಲವೊಂದು ಭಾಗಗಳನ್ನ ಆತುರ ಮಾಡದೆ ನಿಧಾನಕ್ಕೆ ಓದಿದರೆ ಇನ್ನೂ ಹಿಡಿಸುತ್ತೆ ಅಂತ ನಂಗೆ ಅನ್ನಿಸಿತು.
Profile Image for Adarsh ಆದರ್ಶ.
115 reviews24 followers
August 6, 2024
ಎಂ ಆರ್ ದತ್ತಾತ್ರಿ ಅವರ ಬೇರೆ ಕಾದಂಬರಿಗಳಿಗಿಂತೆ ವಿಭಿನ್ನ ವಾದದ್ದು. ತೀರಾ ಇತ್ತೀಚಿಗೆ ನಾನು ದ್ವೀಪವ ಬಯಸಿ ಓದಿದ್ದೆ. ತುಂಬಾನೆ ಹಿಡಿಸಿತ್ತು ಮತ್ತೆ ನಿರಾಯಾಸವಾಗಿ ಓದಿಸಿಕೊಂಡು ಹೋಗಿತ್ತು.
ಯಾಕೋ ಈ ಪುಸ್ತಕ ಅದರಷ್ಟು ರುಚಿಸಲಿಲ್ಲ ಅಂತಲ್ಲ ಸ್ವಲ್ಪ ಗೊಂದಲವಾಗಿ ಇದ್ದ ಮಧ್ಯದ ಕಥೆಗಳು.
ಯಾಗಿ ಯವರ ಪಾತ್ರ ಹಿಡಿಸಿತು ಅವರ ಜೀವನದ ದೃಷ್ಟಿ ಕೋನ ಎಲ್ಲರಲ್ಲೂ ಕಂಡುಕೊಳ್ಳಲು ಸಾಧ್ಯವಿಲ್ಲ ಹಾಗಾಗಿ ಯಾಗಿ ಜೋಯಿಸರಂತವರು ವಿಶೇಷವಾಗಿ ನಿಲ್ಲುತ್ತಾರೆ.
“ಜಗತ್ತು ಪ್ರೀತಿಸುವುದಷ್ಟನ್ನೇ ನಾವು ಪ್ರೀತಿಸುವುದಾದರೆ ಉಳಿದವನ್ನು ಪ್ರೀತಿಸಲು ಯಾರಿದ್ದಾರೆ?”
ಅಲ್ಲಲ್ಲಿ ಭೈರಪ್ಪನವರ ಛಾಯೆ ಕಂಡರೂ ತಮ್ಮ ಎಂದಿನ ಬರೆವಣಿಗೆಗೆ ಮತ್ತೆ ಹಿಂದುರುಗುತ್ತಾರೆ. ಅದೇ ಅವರ ವೈಶಿಷ್ಟ್ಯತೆ!

ಅಂಕಿತ ಅವರ ಮುದ್ರಣ ಪಕ್ವವಾಗಿ ಇರಲಿಲ್ಲ ಕೆಲವೊಂದು ಹಾಳೆಗಳೇ ಮಾಯವಾಗಿದ್ದವು ಮತ್ತೆ ಮುದ್ರಿತವಾಗಿರುವ ಕೆಲುವು ಪುಟಗಳು. ನನ್ನ ಪುಸ್ತಕ ವೇಗಕ್ಕೆ ರಸ್ತೆ ಉಬ್ಬಿನ ರೀತಿ ಬಂದವು.ಹೊಸ ಪುಸ್ತಕ ಕೊಳ್ಳುವಾಗ ಪರಿಶೀಲಿಸಿ ಕೊಳ್ಳಿ.

ಇದರ ಹೊರತಾಗಿಯೂ ಪುಸ್ತಕ ಹಿಡಿಸಿತು ಸಾವಕಾಶವಾಗಿ ಓದಿದರೆ ಇನ್ನಷ್ಟು ಹುಡುಸಬಹುದು.
Profile Image for Kanarese.
137 reviews19 followers
January 11, 2026
Sarpa Brahme is an experimental novel that unfolds through two parallel narratives set in different time periods. One follows Yajnavalka (also known as Yagi Jois), a renowned mathematician, while the other centers on Sandeep, an energetic and ambitious entrepreneur. Though their lives appear separate at first, the stories gradually intersect.

The title felt misleading. Based on the name, I expected something very different from what the book actually delivered. One of the characters even describes the concept might be as “Hyper Sensory Perception,” yet this theme plays only a minor role in the overall narrative, so the choice of title somewhat puzzling. Anyways, once I set aside this expectation, the novel felt refreshingly original — almost like a dual biography of two very different individuals.

What makes the story compelling is how characters, personalities, and situations seem to reappear in new forms, as if echoing across timelines. The author presents the plot from both scientific and emotional perspectives. The editing is a major strength, giving the novel a smooth structure despite its complexity. I was especially satisfied with the ending — the final paragraph, dramatic and “filmy,” provided a fitting emotional closure.

This is not a fast-paced book. It demands patience, as the narrative unfolds slowly, revealing layers within layers — much like Russian matryoshka dolls, where one story hides inside another. The novel is rich with references to philosophy, the Upanishads, and medical terminology, adding depth and intellectual weight to the reading experience.

Overall, Sarpa Brahme is a thoughtful and unique kind of novel. It is best for readers who enjoy deep stories and don’t mind taking time to understand the plot.
Profile Image for Aadharsha Kundapura.
60 reviews
May 21, 2025
ಬದುಕಿನ ಸಾರ್ಥಕತೆ ಯಾವುದು? ಸಾಧನೆಯೆ? ಅಲ್ಲಾ.. ಬೆಳೆದು ಬಂದ ಹಾದಿಯನ್ನು ಮರೆಯದೆ ತನ್ನಂತೆ ಇನ್ನೊಬ್ಬರನ್ನು ದಡ ತಲುಪುವಂತೆ ಮಾಡುವುದಲ್ಲವೆ...?
ಕಾರಂತರ ಬರವಣಿಗೆಯನ್ನು ಇಷ್ಟಪಡುವ ನನಗೆ ದತ್ತಾತ್ರಿಯವರ ಪುಸ್ತಕ ಇಷ್ಟವಾಗಲು ಜಾಸ್ತಿ ಪುಟಗಳು ಬೇಕಾಗಿರಲಿಲ್ಲ. ಜೀವನ ಮೌಲ್ಯಗಳು, ಸತ್ಯಾನ್ವೇಷಣೆ, ಹುಡುಕಾಟ, ನೊಂದ ಜೀವಗಳು‌- ಗಟ್ಟಿ ಪಾತ್ರಗಳು ಕಾರಂತರನ್ನು ನೆನಪಿಸಿತ್ತು.
ತತ್ವಶಾಸ್ತ್ರದ ಚೌಕಟ್ಟಿನ ಸುತ್ತ ಹೆಣೆದಿರುವ ಕಥೆ. ಜೀವನವು ಪಾಠವನ್ನು ಕಲಿಸುತ್ತದೆ, ಕಲಿಯಬೇಕು. ಕಲಿಯದಿದ್ದರೆ ಇನ್ನೊಮ್ಮೆ ಕಲಿಸುತ್ತದೆ. ಎಲ್ಲಿಯ ತನಕ? ಕಲಿಯುವ ತನಕ. Life gives second Chance. ತಿಳಿದು-ಅರಿತು ಬಾಳುವುದೇ ಜೀವನ.
ಮನೆಯ ಹೊಸ್ತಿಲಿನಲ್ಲಿ ಸಿಕ್ಕ ಮಗುವನ್ನು ಬೆಳೆಸಿದ ಅಜ್ಜ-ಅಜ್ಜಿ. ಮಗ ಟಿಬಿ ಬಂದು ಹಾಸಿಗೆ ಹಿಡಿಯುತ್ತಾನೆ, ಸೊಸೆ ಓಡಿ ಹೋಗುತ್ತಾಳೆ. ಸಿಕ್ಕ ಮಗು ದೊಡ್ಡವನಾಗಿ ಮನೆ ಜವಬ್ದಾರಿ ಹೊರುವಂತಾಗುತ್ತದೆ. ಪರಿಶ್ರಮ ಮತ್ತೆ ವಿಧಿ ಅವನನ್ನು ಗಣಿತದಲ್ಲಿ ಪಿ,ಹೆಚ್,ಡಿ, ಗಳಿಸಿ ಜೀವನದಲ್ಲಿ ಸಾಧಕನಾಗಿಸುತ್ತದೆ.
ಅಷ್ಟೇ ಸಾಕೇ? ಇಲ್ಲಿಗೆ ಜೀವನ ಪರಿಪೂರ್ಣವಾಯ್ತಾ? ತನ್ನಂತೆ ಅಪ್ಪ - ಅಮ್ಮ ಇಲ್ಲದ ಮಗುವನ್ನು ದತ್ತು ತೆಗೆದುಕೊಂಡು ಅದನ್ನು ತನ್ನಂತೆ ರೂಪಿಸುವ ಮನೋಭಾವ ಎಷ್ಟು ದೊಡ್ಡದು.
ಇದೊಂದಲ್ಲದೆ ಇನ್ನು ಹಲವಾರು ಸನ್ನಿವೇಶಗಳು ಇಲ್ಲಿ ಸಿಗುತ್ತದೆ. ಒಂದೊಳ್ಳೆ ಜೀವಾನಾನುಭವ ಕೊಟ್ಟ ಕೃತಿ.
Profile Image for Ramaprasad KV.
Author 3 books64 followers
March 3, 2025
ಕಿಮೇತಯಾ ನೋಪಕೃತಂ ರಜ್ಜ್ವಾ ವಾ ಸರ್ಪಚೇತಸಃ ।
ರಜ್ಜುಸ್ವರೂಪಾವಿದುಷೋ ಯೋಽಹಂ ಯದಜಿತೇಂದ್ರಿಯಃ ॥

(ಭಾಗವತ ಹನ್ನೊಂದನೆಯ ಸ್ಕಂಧ — ಹದಿನಾರನೇ ಅಧ್ಯಾಯ — ಪದ್ಯ ಹದಿನೆಂಟು)

ಹಗ್ಗವನು ಹಾವೆಂದು ಭ್ರಮಿಸುತ್ತ ಮರುಳಾಗಿ
ಮುಗ್ಗರಿಸಿ ಹೆದರಿದರೆ ಕೊರೆ ಯಾರದಯ್ಯ?
ಹಗ್ಗವನ್ನರಿಯದಿರೆ ನಾ ಹೆಡ್ಡನಲ್ಲದೆಯೆ
ಅಗ್ಗಳನು ಆದೇನೆ? ಮುದ್ದುರಂಗ
(ನನ್ನ ಭಾವಾನುವಾದ — ಮೂಲಕ್ಕಿಂತ ತೆಳುವಾದ ಅನುವಾದ, ಕ್ಷಮೆ ಇರಲಿ!)

ಎಂ ಆರ್ ದತ್ತಾತ್ರಿ ಅವರ ಅವರ ಕಾದಂಬರಿ ಸರ್ಪಭ್ರಮೆ. ಓದಲು ತೊಡಗಿದರೆ ಪುಸ್ತಕವನ್ನು ಕೆಳಗಿಡಲಾಗದಂತಹ ಪುಸ್ತಕ ಅಂತ ಹೇಳುವುದು ಒಂದು ಸಾಲಿನ ವಿಮರ್ಶೆಯಾಗುತ್ತದೆ. ಆದರೆ ಅದು ಸುಲಭವಾಗಿ ಈ ಕಾದಂಬರಿ ಬಗ್ಗೆ ಮಾಡಬಹುದಾದ ಟಿಪ್ಪಣಿ. ಸ್ವಲ್ಪ ವಿಲಕ್ಷಣವಾದ, ಅಪರೂಪವಾದ ವಿಷಯಗಳನ್ನ ಕಾದಂಬರಿಯ ವಿಷಯಗಳಾಗಿ ಈ ಹಿಂದೆಯೂ ತೆಗೆದುಕೊಂಡಿರುವ ಅವರು ಸರ್ಪಭ್ರಮೆಯಲ್ಲಿ ಕೂಡ ಅಂದೇ ತಂತ್ರವನ್ನ ಬಳಸಿದ್ದಾರೆ.

ಕಥೆಗಾರನೊಬ್ಬ ಜಗತ್ತನ್ನು ನೋಡುವ ಪರಿಯನ್ನ, ಮತ್ತೆ ಅದರಿಂದ ಬಾಳಿನ ಸುಖ ದುಃಖಗಳನ್ನು ಜರಡಿಯಾಡುವ ಒಂದು ವಂದರಿಯನ್ನ ಹೇಗೆ ಗಳಿಸಿಕೊಳ್ಲಬಹುದು, ಅಥವಾ ಗಳಿಸಿಕೊಳ್ಳಬೇಕು ಅನ್ನುವುದನ್ನ ಒಂದು ತಾತ್ತ್ವಿಕವಾಗಿ ತಿಳಿಸುವ ಈ ಕಾದಂಬರಿಯನ್ನ ಆಧ್ಯಾತ್ಮಿಕ ಎನ್ನುವುದೋ ಅಲ್ಲವೋ ತಿಳಿಯುತ್ತಿಲ್ಲ. ಆದರೆ ಅಲೌಕಿಕ ಅನುಭವಗಳಿಂದ ತುಂಬಿದೆ ಅನ್ನುವುದಂತೂ ದಿಟ.

ಕಾದಂಬರಿಯ ಕಥೆಯನ್ನು ನಾನು ಹೇಳಹೋಗುವುದಿಲ್ಲ. ಆದರೆ ಅದರಲ್ಲಿ ಏನಿದೆ ವಿಶೇಷ ಅಂತ ಮಾತ್ರ ತುಸು ಹೇಳಬಹುದು. ಇವರ ಹಿಂದಿನ ಕಾದಂಬರಿ “ಮಸುಕು ಬೆಟ್ಟದ ದಾರಿ” ಯಲ್ಲಿನ ನಾಯಕನಿಗೆ ಇದ್ದ ನೆನಪಿನ ಖಾಯಿಲೆಯ (ಅಥವಾ ಶಕ್ತಿ ಎನ್ನುವುದೇ ?) ರೀತಿಯೇ ಇದರ ಒಂದು ಮುಖ್ಯ ಪಾತ್ರಕ್ಕೂ ಒಂದು ವಿಲಕ್ಷಣ ಶಕ್ತಿ ಇದೆ. ಇವರದೇ ಇನ್ನೊಂದು ಕಾದಂಬರಿ “ತಾರಾಬಾಯಿಯ ಪತ್ರ” ದ ಹಾಗೆ ಇಲ್ಲೂ ಕೂಡ ಹಲವು ಪಾತ್ರಗಳು ತಮ್ಮ ತಮ್ಮ ಮಾತಿನಲ್ಲೇ ಕಥೆ ಹೇಳುತ್ತ ಹೋಗುತ್ತವೆ. “ದ್ವೀಪವ ಬಯಸಿ” ಯಂತೆ, ಇಲ್ಲೂ ಹುಡುಕಾಟವಿದೆ. ಯಾವುದಕ್ಕೆ ಎಂದು ಓದಿಯೇ ತಿಳಿಯಬೇಕು!

ಕತ್ತಲಲ್ಲಿ ಬಿದ್ದ ಹಗ್ಗವನ್ನು ಹಾವೆಂದು ತಿಳಿಯುವುದಕ್ಕೆ ಸರ್ಪಭ್ರಮೆ ಎಂಬ ಪಾರಿಭಾಷಿಕ ಪದವಿದೆ. ನಾವೆಲ್ಲ ನಮ್ಮ ನಮ್ಮ ಜೀವನದ ಹಾದಿಯಲ್ಲಿ ಇಂಥ ಹಾವಿನಂತಿದ್ದ ಹಗ್ಗಗಳನ್ನ ಕಂಡೇ ಇರುತ್ತೇವೆ. ಆದರೆ ಈ ಹಗ್ಗಗಳನ್ನ ಗುರುತಿಸೋದಕ್ಕೆ, ಹಗ್ಗವೆಂದು ಗುರುತಿಸಿ ಮುಂದು ಹೋಗೋದು ಕಷ್ಟಸಾಧ್ಯವೇ. ಅದಕ್ಕೆಂದು ನಮ್ಮೊಳಗೇ ಒಂದು ಶಕ್ತಿ ಬೆಳೆಸಿಕೊಳ್ಳಬೇಕಾಗುತ್ತೆ — ಜೀವನದಲ್ಲಿ ಅಂತಹ ಒಂದು ತನ್ನನ್ನೇ ತಾನು ಹುಡುಕಿಕೊಳ್ಳುವ ಒಂದು ಪಯಣದ ಕಥೆಯೇ “ಸರ್ಪಭ್ರಮೆ”.

ಕಾದಂಬರಿಯ ಪಾತ್ರಗಳ ಪೋಷಣೆ ಸೊಗಸಾಗಿದೆ. ಕಾದಂಬರಿಯ ಕತೆಗಾರ ಸಂದೀಪ್, ಮತ್ತು ಅವನಿಗೆ ಕತೆ ಹೇಳುವ ಯಾಗಿ ಜೋಯ್ಸ ಇಬ್ಬರ ಜೀವನಾನುಭವಗಳು ಪೂರ್ತಿ ಬೇರೆಬೇರೆಯಾಗಿದ್ದರೂ ಅವರವರ ಹಾದಿ ಒಂದು ಕಡೆ ಸೇರುವುದೂ, ಯಾಗಿಯ ಕಥೆ ನ್ಯಾಯಾನ್ಯಾಯಗಳ ವಿಮರ್ಶೆಯ ನೋಟವನ್ನು ಸಂದೀಪನಿಗೆ ನೀಡುವುದೂ ಕಾದಂಬರಿಯ ಕೊನೆಯಲ್ಲಿ ಊಹಿಸಬಹುದಾದ ಅಂತ್ಯವೇ ಇದ್ದರೂ, ಆ ಬರಹದ ಹೊಳೆ ಹರಿಯುವ ದಾರಿಯ ಕಲ್ಲುಬಂಡೆಗಳು ಮಾತ್ರ ಅನಿರೀಕ್ಷಿತವೇ!

ಕಥೆಯೊಳಗೆ ಕಥೆಯೊಳಗೆ ಕಥೆ ಬರುವ ತಂತ್ರವನ್ನೂ , ಅದೃಶ್ಯ ಪಾತ್ರಗಳಿಂದ ಕಥೆ ಹೇಳಿಸುವ ತಂತ್ರವನ್ನೂ ನಾವು ಮಹಾಭಾರತದಂತಹ ಮಹಾಕಾವ್ಯಗಳಲ್ಲಿ ನೋಡಿರುತ್ತೇವೆ. ಅಂತಹ ಒಂದು ಸುಂದರ ಶೈಲಿಯನ್ನು ದತ್ತಾತ್ರಿ ಸರ್ಪಭ್ರಮೆಯಲ್ಲಿ ತಂದಿದ್ದಾರೆ. ಕಾದಂಬರಿಯೊಳಗಿನ ಕಥೆಯಾಗಿ ಬರುವ “ಕಮಲಾ ಮತ್ತು ಕುಞಿಕುಟ್ಟನ್ ನ ಯಕ್ಷಿಣಿ ನಾಣ್ಯ” ಅದರ ಅಲೌಕಿಕ ಘಟನೆಗಳಿಂದ ಬೇರೆಯದೇ ಒಂದು ಕಥೆಯಾಗಿದ್ದರೂ ಬಹಳ ಕುತೂಹಲವಾಗಿ ಓದಿಸಿಕೊಳ್ಳುತ್ತಿತ್ತು! ಅದು ಕಾದಂಬರಿಗೆ ಬಹಳ ಪೂರಕವಾಗಿ ಬೆಳೆದಿದೆ.

ಗಣಿತ, ತತ್ತ್ವಶಾಸ್ತ್ರ, ಅಲೌಕಿಕ ಸಂವೇದನೆ ಮೊದಲಾಗಿ ಹಲವು ವಿಷಯಗಳ ಸುತ್ತ ಮುತ್ತ ಓಡಾಡಿಸುವ ಈ ಕಾದಂಬರಿ ಇತ್ತೀಚಿಗೆ ನಾನು ಓದಿರುವ ಕಾದಂಬರಿಗಳಲ್ಲಿ ಬಹಳ ಮೆಚ್ಚುಗೆಯಾಯಿತು. ಗಾತ್ರದಲ್ಲಿ ಚಿಕ್ಕದಾಗಿದ್ದರೂ ಮನಸ್ಸಿನ ಮೇಲೆ ಪರಿಣಾಮ ಬೀರುವಂತಹ ಈ ಕಾದಂಬರಿ ನನ್ನ ಓದುಗ ಮಿತ್ರರಿಗೂ ಮೆಚ್ಚುಗೆಯಾಗುತ್ತದೆ ಎಂದು ನನ್ನ ಭಾವನೆ.

-ಹಂಸಾನಂದಿ
Profile Image for Manasa Kulkarni.
23 reviews
February 25, 2025
ಹಗ್ಗವನ್ನು ನೋಡಿ ಹಾವು ಎಂದುಕೊಂಡು ಹೆದರುತ್ತೇವಲ್ಲ ಅದೇ ಸರ್ಪಭ್ರಮೆ. ಆದರೆ, ಅದು ಹಗ್ಗ ಎಂದು ಅರಿವಾದ ಮಾತ್ರಕ್ಕೆ ಮತ್ತೆ ನಿರಾಳವಾಗುತ್ತೇವಲ್ಲ ಬದುಕು ಹಾಗೆ.

ರಷ್ಯನ್ ಮಾರ್ತ್ಯೋಸ್ಕ ಗೊಂಬೆಗಳಂತೆ ಉದರದೊಳಗೆ ಮತ್ತೊಂದು ಗೊಂಬೆಗಳು ಇರುವಂತೆ ನಿಮಗೆ ಕಥೆಯೊಳಗೊಂದು ಕಥೆ ಸಿಗುತ್ತದೆ. ಸಂದೀಪ್ ಕೃಷ್ಣಸ್ವಾಮಿ ಎಂಬಾತ ಅಮೇರಿಕೆಯಿಂದ ತನ್ನ ಕೆಲಸಕ್ಕಾಗಿ, ಜೊತೆಗೆ ಸ್ವತಃ ಕಥೆಗಾರನಾದ ಆತನಿಗೆ ತಂದೆ ಕೃಷ್ಣಸ್ವಾಮಿ ಅವರು ಭೇಟಿ ಮಾಡಲು ಹೇಳಿ ಕಳುಹಿಸುವ ವ್ಯಕ್ತಿ - ಯಾಗಿ ಜೋಯಿಸ್ - ರನ್ನು ಭೇಟಿ ಮಾಡಲು ಭಾರತಕ್ಕೆ ಬರುತ್ತಾನೆ. ಮೊದಲು ಸಂದೀಪ್ ನ ಕಥೆ ಎಂದುಕೊಳ್ಳುತ್ತೇವೆ, ಆಮೇಲೆ ಯಾಗಿಯವರದ್ದು, ಆಮೇಲೆ ಯಾಗಿಯ ಚಿಕ್ಕಮ್ಮನದ್ದು ಊಹು ಅದು ಅಲ್ಲ ಕಮಲಳದ್ದು.. ಹೀಗೆ ಒಂದರೊಳಗೊಂದು ಹೆಣೆದುಕೊಂಡು ಕೊನೆಗೆ ನಮ್ಮ ನಿಮ್ಮೆಲ್ಲರ ಕಥೆಗಳಾಗುವ ಕಥೆಯೇ ಈ ಸರ್ಪಭ್ರಮೆ. ಜೊತೆಗೆ, ನಚಿಕೇತನ ಕಥೆ, ವಾಮದೇವನ ಕಥೆ ಹೀಗೆ ಹಲವು ಬಂದು ಹೋಗುತ್ತವೆ. ಯಾಗಿ ಜೋಯಿಸ್ ಗಣಿತಜ್ಞನ ಪಾತ್ರವಾದ್ದರಿಂದ ಹಲವು ಗಣಿತದ ವಿಚಾರಗಳು, ತತ್ತ್ವಶಾಸ್ತ್ರದ ವಿಚಾರಗಳು ಎಲ್ಲವೂ ಇವೆ.

ಬದುಕು ರಿಗ್ರೆಷನ್ ಈಕ್ವೆಷನ್ ನಂತೆ ಎಂದದ್ದು ನನಗೆ ಹಿಡಿಸಿತು. ನಮ್ಮ ಬದುಕಿನ ಹಿಂದಿನ ಬಿಂದುಗಳನ್ನು ಕೂಡಿ ಒಂದು ಮಾಡೆಲ್ ಮಾಡಿ ಮುಂದಿನ ಬದುಕನ್ನು ಪ್ರಿಡಿಕ್ಟ್ ಮಾಡಬಹುದು ಎಂಬುದು ಹೊಸ ವಿಚಾರ. ಹಾಗೆಯೇ, ಹಿಂದಿನ ಬಿಂದುಗಳ ರೀತಿ ತಪ್ಪಿ ಹೊಸ ಸಂಭವನೀಯತೆ ಬರಬಹುದು. ಔಟ್ಲೈಯರ್ಸ್ ಗಳಂತೆ ಜೀವನದಲ್ಲಿ ಒಂದಕ್ಕೊಂದು ಸಂಬಂಧವಿಲ್ಲದೆಯೂ ಘಟನೆಗಳು ಘಟಿಸಬಹುದು. ಲೇಖಕರು ಹೇಳುವ ಹಾಗೆ ನಡುವಿನ ಅಂತರ ಬಿಟ್ಟು ನೋಡಿದರೆ ಆ ಔಟ್ಲೈರ್ಸ್ ಗಳು ಸೇರಿ ಒಂದು ಗುಂಪಿಗೆ ಸೇರಿರುತ್ತದೆ ಎನ್ನುತ್ತಾರೆ. ಇದು ಇನ್ನೂ ನನ್ನನ್ನು ಕಾಡುತ್ತಿರುವ ಕುತೂಹಲಕಾರಿ ಅಂಶ, ಎಲ್ಲೋ ದೂರದ ಬಿಂದು ಹಾಗೆ ಸೇರುತ್ತದೆಯೇ???

ಇದಲ್ಲದೆ, ಕಥೆಯಲ್ಲಿ ಅವ್ಯಾಹತವಾಗಿ ಬರುವ ಪುತಿನ ಅವರ, ಮಾಸ್ತಿ ಅವರ ಕವನ ಕಥೆಯ ಉಲ್ಲೇಖಗಳು. ಅಡಿಗರ 'ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದ ಎದೆಗೆ ಸತತ' ಎಂಬುದೇ ಈ ಕಾದಂಬರಿಯ ಒಟ್ಟು ಸ್ವರೂಪ ಎಂದರೂ ತಪ್ಪಾಗಲಾರದೇನೋ. ಜೀವನದಲ್ಲಿ ನಾವು ಕೂಡ ಯಾಗಿಯವರ ಹಾಗೆ altruistic world syndrome ಬೆಳೆಸಿಕೊಂಡರೆ ಜಗತ್ತು ಇನ್ನೂ ಚಂದವಾಗಿ, ನಮ್ಮ ಭಾವಕೋಶದಲ್ಲಿ ಸೇರಿ ಅನುಭವಿಸಿ ಬಾಳಬಹು��ೇನೋ?!!

ಹೊಸಿಲಲಿ ಬಂದ ಅನಾಥ ಮಗುವನ್ನು ಸಾಕಿ ಪ್ರಿತಿಯಿಂದ ಸಲಹುವ ಅಜ್ಜ, ಸುತ್ತಲೂ ಎಲ್ಲರೂ ಅಪ್ಪಿಕೊಂಡು ಬೆಳೆಸುವ ವಾತಾವರಣ, ಲಾರೆನ್ಸ್ ಡಿಕೋಸ್ಟ ಅವರ ಸರ್ವ ಧರ್ಮ ಸಹಬಾಳ್ವೆ, ಮಕ್ಕಳ ಅನಾಥಾಶ್ರಮದ ಬದುಕು, ಶಾರದಾಳ ಪಾತ್ರ ಎಲ್ಲವೂ ಅದ್ಭುತವಾಗಿ ಚಿತ್ರಣಗೊಂಡಿದೆ.

ಕಾಡುವ ಓದು .... ಯಾವುದಕ್ಕೂ ಅಂತ್ಯ ಅಥವಾ ಮುಕ್ತಾಯ ಸಿಗುವುದಿಲ್ಲ. ಇನ್ಸೆಪ್ಷನ್ ಮಾತ್ರ.. ದ ಎಂಡ್ ಇರುವುದಿಲ್ಲ.. ಕಥೆಯಲ್ಲಿಯೂ, ಜೀವನದಲ್ಲಿಯೂ..

ಮೇಲೆ ಹೇಳಿದ ಹಾಗೆ ಅದು ಹರಿಯುವ ಅಮೃತವಾಹಿನಿ.....!
Profile Image for ಸುಶಾಂತ ಕುರಂದವಾಡ.
422 reviews25 followers
March 1, 2024
ಪುಸ್ತಕ: ಸರ್ಪಭ್ರಮೆ
ಲೇಖಕರು: ಎಂ ಆರ್ ದತ್ತಾತ್ರಿ

ದತ್ತಾತ್ರಿ ಅವರ ಕಾದಂಬರಿಯನ್ನು ಓದಿರುವ ನಾನು, ಈ ಕಾದಂಬರಿಯ ಮೇಲೆ ಇಟ್ಟುಕೊಂಡ ನಿರೀಕ್ಷೆ ಹುಸಿಹೋಗಲಿಲ್ಲ. ಅವರ ಎಲ್ಲ ಕಾದಂಬರಿಗಳೂ ವಿಭಿನ್ನ, ಅದರಂತೆಯೇ ಇದು ಕೂಡು. ಕಾದಂಬರಿಯಲ್ಲಿ ಇವರೇ ಕಥಾನಾಯಕ ಅಂತ ಹೇಳುವಂತಿಲ್ಲ ಆದರೆ ನಿರೂಪಕ ಅಂತ ಹೇಳಬಹುದು. ಅವನು ಸಂದೀಪ. ಅವನಿಗೆ ಸಾಹಿತ್ಯದಲ್ಲಿ ಬಹಳ ಪ್ರೀತಿ ಅದಕ್ಕಾಗಿ ತಾನೊಂದು ಕಾದಂಬರಿ ಬರೆಯಲು ಕೈಹಾಕುತ್ತಾನೆ. ತಂದೆಯು ಕಥೆಗಾರರಾಗಿದ್ದ ಕಾರಣ ಈ ಹವ್ಯಾಸ ಅವನ ರಕ್ತದಲ್ಲೇ ಬಂದಿತ್ತು. ತಂದೆಯವರ ಸಲಹೆಯಂತೆ ಅವನು ಅವರ ತಂದೆಯ ಗೆಳೆಯ ಯಾಜ್ಞವಲ್ಕ್ಯ ಜೋಯಿಸ್ ಉರ್ಫ್ ಯಾಗಿ ಅವರ ಮನೆಗೆ ಹೋಗುತ್ತಾನೆ. ಅಲ್ಲಿ ಪ್ರಕೃತಿಯ ಮಡಿಲಲ್ಲಿ ಯಾಗಿಯವರ ಕಥೆ ಕೇಳಲು ಪ್ರಾರಂಭಿಸುತ್ತಾನೆ.
ಜೋಯಿಸರಿಗೆ ಕೂಸಾಗಿ ಮನೆ ಮುಂದೆ ಸಿಕ್ಕಿದ್ದು. ಅದನ್ನು ಪ್ರೀತಿಯಿಂದ ಬೆಳೆಸಿ ಯಾಜ್ಞವಲ್ಕ್ಯ ಎಂದು ನಾಮಕರಣ ಮಾಡಿದರು. ಮನೆಯಿಂದ ಅಷ್ಟೇನೂ ಶ್ರೀಮಂತರಲ್ಲದ ಜೋಯಿಸರು ಕರ್ಮಾದಿಗಳಿಂದ ಮನೆಯನ್ನು ಸಾಗಿಸುತ್ತಿದ್ದರು. ಆ ಮನೆಯಲ್ಲಿ ನಡೆದ ಕೆಲಸಂಗತಿಗಳು ಬಾಲಕ ಯಾಗಿಯನ್ನು ತಲ್ಲಣಗೊಳಿಸುತ್ತದೆ. ಆದರೂ ಅವನು ಓದಿ ಮುಂದೆ ಒಳ್ಳೆಯ ನೌಕರಿ ಸೇರಿಕೊಳ್ಳುತ್ತಾನೆ. ಅಲ್ಲಿಯೇ ಯಾಗಿ ಸಂದೀಪನ ತಂದೆಯನ್ನು ಸಂಧಿಸಿ ಇಬ್ಬರೂ ಒಳ್ಳೆಯ ಮಿತ್ರರಾದರು. ಇದೊಂದೇ ಕಥೆಯಲ್ಲದೇ ಈ ಪುಸ್ತಕದಲ್ಲಿ ಮತ್ತೊಂದು ಕಥೆಯನ್ನು ದತ್ತಾತ್ರಿಯವರು ಹೆಣೆದಿದ್ದಾರೆ. ಅದನ್ನು ಇಲ್ಲಿ ಹೇಳುವುದು ಸೂಕ್ತವಲ್ಲ, ಓದಿ ಆನಂದಿಸಿ.
ಯಾಗಿಯವರ ಕಥೆ ಸಾಮಾನ್ಯವೆನಿಸಿದರೂ ಆ ಕಥಾವಸ್ತುವನ್ನು ಪ್ರಸ್ತುತತೆಗೆ ತಂದಿದ್ದು ವಿಭಿನ್ನ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋದಾಗ ಲೇಖಕರು ಗಜಾನನ ಶರ್ಮರು ಈ ಪುಸ್ತಕದ ಬಗ್ಗೆ ಹೇಳುವಾಗ ಪುಸ್ತಕದಲ್ಲಿಯ ಸಂದೀಪನಲ್ಲಿ ನಾವು ದತ್ತಾತ್ರಿಯವರನ್ನು ಕಾಣುತ್ತೇವೆ ಎಂದರು. ನನಗೂ ಅನಿಸಿದ್ದು ಹಾಗೆಯೇ. ಕಾದಂಬರಿಯ ಆ ಶೋಧನೆ ಮತ್ತು ಸಂದೀಪ ಅಲ್ಲಿ ಏನೋ ಮಾತನಾಡಿದಾಗ ದತ್ತಾತ್ರಿಯವರೇ ಹೇಳುತ್ತಿದ್ದಾರೇನೋ ಅಂತ ಅನಿಸುತ್ತದೆ. ಒಟ್ಟಾರೆ ಹೇಳಬೇಕೆಂದರೆ, ದತ್ತಾತ್ರಿಯವರಿಂದ ಮತ್ತೊಂದು ಅದ್ಭುತ ಕಾದಂಬರಿ, ಓದಿ ಆನಂದಿಸಿ
63 reviews9 followers
November 27, 2025
ಒಂದೊಳ್ಳೆಯ ಓದು,
ಪುಸ್ತಕ ಖರೀದಿಸಿ ಅನೇಕ ದಿನಗಳಾದರೂ, ಓದುವ ಪ್ರೇರಣೆಯಾಗಿರಲಿಲ್ಲ. ಅದ್ಯಾವ ಕಾರಣಕ್ಕೋ ದಿಢೀರನೆ ಕಪಾಟಿನಿಂದ ಈ ಪುಸ್ತಕವನ್ನು ಹೊರಗೆಳೆದು ಓದಲು ಕುಳಿತೆ. ಓದು ನನ್ನನ್ನು ನಿರಾಸೆಗೊಳಿಸಲಿಲ್ಲ. ಇದೇ ಮೊದಲೆನೆಯ ಸಾರಿ ನಾನು ದತ್ತಾತ್ರಿಯವರ ಪುಸ್ತಕವನ್ನು ಓದಿದ್ದು. ಸರಳವಾದ ಬರವಣಿಗೆ, ಪುಸ್ತಕದಲ್ಲಿ ಅದೆಷ್ಟೋ ರೀತಿಯ ವಿಷಯಗಳ ಬಂದಿದ್ದರೂ, ಪಾತ್ರಗಳು, ಸನ್ನಿವೇಶಗಳು, ಸಂದರ್ಭಕ್ಕನುಗುಣವಾಗಿರುವ ವಿವರಣೆ.
ಸಂದೀಪನ ಬದುಕು, ಆಸಕ್ತಿ, ಅಮೇರಿಕ, ತಂತ್ರಜ್ಞಾನ ಕ್ಷೇತ್ರ, startup, ಕತೆಗಳು, ಯೋಗಿ ಜೋಯಿಸರ ಭೇಟಿ, ಅವರ ಸಂಪೂರ್ಣ ಕತೆ, ಕತೆಯೊಳಗಿರುವ ಮತ್ತೊಂದು ಕತೆ, ಅಲ್ಲಿರುವ ಪಾತ್ರಗಳು ಓದುಗನನ್ನು ಅವುಗಳ ಜೊತೆಗೆ ಕರೆದುಕೊಂಡು ಹೋಗುವುದರಲ್ಲಿ ಅನುಮಾನವಿಲ್ಲ.
ಅವರೇ ಹೇಳುವಂತೆ, "ಕತೆಯ ಬಗ್ಗೆ ನಿರ್ಭಾವುಕವಾಗಿ, ವಿಮರ್ಶಾತ್ಮಕವಾಗಿ ಮಾತನಾಡಲು ಸಾಧ್ಯವಾಗುವುದು ಮಾತನಾಡುವವರು ಮತ್ತು ಕೇಳುವವವರು ಅದರ ಪಾತ್ರಗಳಾದಾಗ ಮಾತ್ರ". ಇದರ ಓದಿನಲ್ಲಿ, ಅಲ್ಲೆಲ್ಲೋ ಸಂದೀಪ ಮತ್ತು ಅವನ ತಂದೆ ಕೃಷ್ಣಸ್ವಾಮಿಯ ಮಾತನಾಡುವಾಗ ಮೂಲೆಯಲ್ಲಿ ನಿಂತು ನೋಡಿದಂತೆ, ಯೋಗಿಯವರ ಭೇಟಿ ಮತ್ತು ಕತೆ, ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ನಡುವಿನ ಭಾಂದವ್ಯ ಮತ್ತು ಸಂಭಾಷಣೆಗಳು, ಬಾಲ್ಯ, ವಿದ್ಯಾಭ್ಯಾಸ, ನೆಡೆದು ಬಂದ ದಾರಿ, ಯೋಗಿ ಮತ್ತು ಕಾವೇರಿಯ ಮದುವೆ, ಇವೆಲ್ಲವೂಗಳಲ್ಲೂ ಓದುಗನು ಎಲ್ಲೆಲ್ಲೋ ನಿಂತು ನೋಡುತ್ತಿರುವಂತೆ, ಇವೆಲ್ಲವೂ ಕಣ್ಣು ಮುಂದೆಯೇ ನೆಡೆಯುತ್ತಿರುವ ಸನ್ನಿವೇಶಗಳೇನೋ ಎಂಬ ಭಾವ.
ಕತೆಯೊಳಗಿನ ಇನ್ನೊಂದು ಕತೆ ಹೇಮಾ ಚಂದ್ರನ್ ರವರು ಬರೆದಿರುವ ಕತೆಯ ಪಾತ್ರಗಳು ಸೀತಾ ಮತ್ತು ಎಕ್ಸ್ ನ ಸಂಭಾಷಣೆ, ಕಮಲಾಳ ಕತೆ, ಇವಗಳು ಪ್ರಸ್ತುತ ಪಡಿಸುವಿಕೆ ಚೆನ್ನಾಗಿದೆ. ಲಾರೆನ್ಸ ಡಿಕೋಸ್ಟಾ ಅನ್ನುವ ಪಾತ್ರ ನಾವಾಗಬೇಕಿತ್ತು ಎನ್ನಿಸಿದರೆ ಆಶ್ಚರ್ಯವಾಗಬೇಕಿಲ್ಲ.
ಗಣಿತಜ್ಞಾನ, ಮನೋಶಾಸ್ತ್ರ, ಕಲೆ, ಆಧುನಿಕ ತಂತ್ರಜ್ಞಾನ, ಕಾಲ್ಪನಿಕ ಜಗತ್ತು, ಇವೆಲ್ಲವುಗಳನ್ನು ಬಳಸಿಕೊಂಡು ಕತೆ ಕಟ್ಟುವುದು, ಅದರಲ್ಲಿಯೂ ಈಗಿನ ಓದುಗನನ್ನು ಕಟ್ಟಿ ಹಾಕುವ ಕಲೆ ದತ್ತಾತ್ರಿವರಿಗಿದೆ ಎಂಬುದು ನನ್ನ ಅಭಿಪ್ರಾಯ.
Profile Image for Raghavendra Shekaraiah.
34 reviews
January 17, 2025
ಪುಸ್ತಕದಲ್ಲಿ ಬಹಳ ಸರಳವಾದ ಭಾಷೆ ಬಳಕೆ ಮಾಡಿದ್ದಾರೆ. ಓದಲು ತುಂಬ ಸುಲಭವಾಗಿದೆ. ಸಮಯ ಕೊಟ್ಟರೆ ಕೆಲವೇ ಗಂಟೆಗಳಲ್ಲಿ ಓದಿ ಮುಗಿಸಬಹುದು. ಆದರೆ ಬರವಣಿಗೆ ಇನ್ನೂ ಪಕ್ವ ಆಗಿಲ್ಲ ಅನ್ನಿಸ್ತು.

ಕಥೆ ಶುರುವಾಗುವಾಗ 'ನಾನು' (ಬರಹಗಾರ) ಮತ್ತು 'ನಾನು' (ಪಾತ್ರ) ಎಂದು ವ್ಯತ್ಯಾಸ ಮಾಡಿ ತಿಳಿಸುತ್ತಾರೆ. ಮೊದಲ ಪುಟಗಳಲ್ಲಿ ಇದು ಗೊಂದಲ ಮಾಡಿದರೂ, ಬರಹಗಾರ ತನ್ನನ್ನು 'ನಾನು ಸಂದೀಪ್' ಎಂದು ಕರೆದುಕೊಳ್ಳುವ ಮೂಲಕ ಈ ಗೊಂದಲವನ್ನು ನಿವಾರಿಸಿದ್ದಾರೆ. ಕಥೆಯ ಆರಂಭ ಚೆನ್ನಾಗಿದ್ದರೂ, ಮುಂದೆ ಹೋದಂತೆ ಕಥೆ ತನ್ನ ದಿಕ್ಕನ್ನು ಕಳೆದುಕೊಂಡು, ಏನು ಹೇಳ್ತಾ ಇದ್ದಾರೆ ಅನ್ನೋದೇ ಅರ್ಥ ಆಗಲಿಲ್ಲ. ಕೆಲವೊಮ್ಮೆ ಯಾರದ್ದೋ ಆತ್ಮಕಥೆ ಓದ್ತಾ ಇದ್ದ ಹಾಗೆ ಅನ್ನಿಸ್ತು, ಅದರಲ್ಲೂ ಸಣ್ಣ ಕಥೆಗಳನ್ನು ಜೋಡಿಸಿದ ಹಾಗೆ. ಕೆಲವು ಸಂದರ್ಭಗಳಲ್ಲಿ ಬರಹಗಾರರು ಪಾತ್ರಗಳ ಮತ್ತು ಸನ್ನಿವೇಶಗಳ ಮೂಲಕ ಜೀವನದ ಬಗ್ಗೆ ಸಂದೇಶ ನೀಡಲು ಪ್ರಯತ್ನಿಸುತ್ತಿದ್ದಾರೆ ಅನ್ನಿಸಿದರೂ, ಅದು ಸ್ಪಷ್ಟವಾಗಿ ಮೂಡಿ ಬಂದಿಲ್ಲ. ಕಾದಂಬರಿಯ ಕೊನೆಯ ಪುಟಗಳಲ್ಲಿ ಸಿನಿಮಾ ನಿರ್ದೇಶಕನ ಹಾಗೆ ಪ್ರತಿಯೊಂದು ದೃಶ್ಯವನ್ನು ವಿವರಿಸಿದ್ದಾರೆ. ಬೇಡದ ವಿವರಗಳನ್ನು ಸಹ ಸೇರಿಸಿದ್ದಾರೆ ಅನ್ನಿಸ್ತು, ಅದು ಸ್ವಲ್ಪ ಹೆಚ್ಚಾಗಿಯೇ ಹೋಯಿತು.

ಒಟ್ಟಾರೆ, ಹೊಸ ಬರಹಗಾರರ ಪ್ರಯತ್ನ ಚೆನ್ನಾಗಿದೆ. ಬರವಣಿಗೆ ಕೂಡ ಚೆನ್ನಾಗಿದೆ. ಆದರೆ ಸರಿಯಾದ ಅಂಶಗಳನ್ನು ಮಾತ್ರ ಆಯ್ದು ಬರೆದಿದ್ದರೆ ಇದು ಒಂದು ಉತ್ತಮ ಕೃತಿ ಆಗಬಹುದಿತ್ತು.
2 reviews
April 13, 2024
A book leaning towards spritual genre. It is not about saints or anything but some of the characters have such lineage. Sorry for the spoilers ahead but it is about coming full circle by an orphan. Mythology and contemporary story telling well intertwined. I curse my limited vocabulary and comprehension skills but reading the book gives one an inexplicable joy!
1 review
February 26, 2024
Read the book in one sitting. Rather, watched it as a 3D movie. Many memorable plots worth revisiting. Many lines worth contemplating.

Congratulations to the author Shri Dattathri and thanks for this book.
1 review
April 5, 2024
Its easily one of the best in recent times. Every page is exciting. The Author's outlook is absolutely amazing!. I am awestruck after finishing it.

Its a must read for a great experience.
Displaying 1 - 14 of 14 reviews

Can't find what you're looking for?

Get help and learn more about the design.