Kuppali Venkatappa Puttappa widely known by the pen name Kuvempu was a Kannada writer and poet, widely regarded as the greatest poet of 20th century Kannada literature. He is immortalised by some of his phrases, and in particular for his contribution to Universal Humanism or in his own words Vishwa maanavataa Vaada. He has penned the Karnataka State anthem Jaya Bharata Jananiya Tanujate.
He has written several Poems, stories and plays. His work Sri Ramayana Darshanam, the rewriting of the great ancient Indian epic Ramayana in modern Kannada, is regarded as revival of the era of Mahakavya (Epic poetry) in a contemporary form and charm.
He has received several awards for his works in the field of literature such as, Jnanpith Award, Sahitya Akademi Award , Pampa Award , Karnataka Ratna. He has also received The Padma Bhushan, the third highest civilian award in the Republic of India and Padma Vibhushan, the second highest civilian award in the Republic of India. He is the second among Kannada poets to be revered as Rashtrakavi
His son K P Poornachandra Tejaswi was a famous writer as well.
ತೀರಾ ಇತ್ತೀಚಿನವರೆಗೆ ಕುವೆಂಪುರವರು ಸಣ್ಣ ಕಥೆಗಳನ್ನು ಸಹ ಬರೆದಿದ್ದಾರೆ ಎಂಬ ವಿಷಯ ನನಗೆ ತಿಳಿದಿರಲಿಲ್ಲ. ಹಾಗಾಗಿ ಅವರ 'ನನ್ನ ದೇವರು ಮತ್ತು ಇತರ ಕಥೆಗಳು' ಹಾಗೂ 'ಸನ್ಯಾಸಿ ಮತ್ತು ಇತರ ಕಥೆಗಳು' ಕಥಾಸಂಕಲನಗಳು ಬಗ್ಗೆ ತಿಳಿದಾಗ ಕುತೂಹಲದಿಂದ ಖರೀದಿಸಿದೆ. ಬಹಳ ಸೂಕ್ಷ್ಮವಾಗಿ ಸುತ್ತಮುತ್ತಲಿನ ಪರಿಸರವನ್ನು, ಜನಜೀವನದ ಹಲವು ಮಜಲುಗಳನ್ನು ವಿವರವಾಗಿ ಅವರು ಚಿತ್ರಿಸುವ ಪರಿಗೆ ಬೆರಗಾಗಿದ್ದ ನಾನು ಸಣ್ಣ ಕಥೆಗಳ ಚೌಕಟ್ಟಿನಲ್ಲಿ ತಮ್ಮ ಸೃಜನಶೀಲತೆಯನ್ನು ಅವರು ಹೇಗೆ ಹಿಡಿದಿಟ್ಟಿರಬಹುದು ಎಂಬುದನ್ನು ಓದಲು ಕಾತರನಾಗಿದ್ದೆ. ಈ ಕಥಾಸಂಕಲವನ್ನು ಓದಿದ ಬಳಿಕ ನನ್ನಲ್ಲಿದ್ದ ಸಂಶಯಗಳೆಲ್ಲವೂ ನಿವಾರಣೆಯಾಗಿ ಅವರೇಕೆ ಮಹಾಕವಿ, ರಸ ಋಷಿ ಎಂದು ಪರಿಗಣಿಸಲ್ಪಟ್ಟಿದ್ದಾರೆ ಎಂದು ಮನವರಿಕೆಯಾಯಿತು. ಇದರಲ್ಲಿ ಒಟ್ಟು ಎಂಟು ಸಣ್ಣ ಕಥೆಗಳಿವೆ.
#ನನ್ನದೇವರು
ಆಕೆಯ ಗಂಡ ಮದುವೆಯಾದ ವರ್ಷದೊಳಗೆ ತೀರಿಕೊಂಡರು. ಗಂಡನ ಅಣ್ಣ ಒಬ್ಬ ಸರಳ ಸಜ್ಜನಿಕೆಯ ವ್ಯಕ್ತಿ. ಅವಿವಾಹಿತ. ಸದಾ ಓದು ಧ್ಯಾನಗಳಲ್ಲಿ ಮಗ್ನ. ಅವನು ಎಲ್ಲರಂತಿಲ್ಲದ ಕಾರಣ ಊರ ಜನರ ಕಣ್ಣಲ್ಲಿ ಒಬ್ಬ ಹುಚ್ಚ. ಕಾಲ ಉರುಳಿದಂತೆ ಆಕೆಗೆ ತನ್ನ ಭಾವನೆ ಮೇಲೆ ಅನುರಾಗ ಅರಳುತ್ತದೆ. ಅವನು ಸಹ ತನ್ನತ್ತ ಆಕರ್ಷಿತನಾಗಿದ್ದಾನೆ ಅನಿಸುತ್ತದೆ. ಒಂದು ದಿನ ಸಂಯಮ ಮೀರಿ ನೋಡು ರಾತ್ರಿಯ ಹೊತ್ತಿಗೆ ಅವನ ಕೋಣೆಗೆ ಹೋಗುತ್ತಾಳೆ.. ಮುಂದೇನಾಯಿತು?
ಕಥೆಯ ಈ ಸಾಲುಗಳನ್ನು ನೋಡಿ. "ಎಷ್ಟು ಕರಗಿದರೂ ಅದೆಂದೂ ಹಿಮಾಲಯವೇ. ಅಲ್ಲದೆ ಮಂಜು ಕರಗಿದರೂ ಅದು ಪವಿತ್ರವಾದ ಗಂಗಾ ನದಿಯಾಗದೆ ಕೊಳಕು ಕಾಲುವೆಯಾಗುವುದೇ? ಗಂಗೆ ಕೊಳಕು ಕಾಲುವೆಯನ್ನು ತೊಳೆದು ಪುನೀತವನ್ನಾಗಿ ಮಾಡದೆ ತಾನೇ ಎಂದಿಗಾದರೂ ಕೊಳಕಾಗುವುದೇ?" ಎಂತಹಾ ಅರ್ಥಗರ್ಭಿತ ಸಾಲುಗಳು…. ಎಷ್ಟು ಸರಳವಾಗಿ ನಮ್ಮ ವ್ಯಕ್ತಿತ್ವವು ಕೆಟ್ಟದನ್ನು ಸಹ ಪರಿಶುಧ್ಧವಾಗಿ ಮಾರ್ಪಡಿಸಬಹುದು ಎಂಬುದನ್ನು ಹೇಳಿದ್ದಾರೆ. ಆದರೆ ವಿಚಾರಶುಧ್ಧಿ ಇರಬೇಕಷ್ಟೇ…. ತನ್ನ ಜೊತೆಗೆ ಕೆಟ್ಟ ವಿಚಾರಗಳು ಆಲೋಚನೆಗಳನ್ನು ಸಹ ಶುಭ್ರಗೊಳಿಸಿ ನಿವಾರಿಸಬಲ್ಲಂತಹ ವ್ಯಕ್ತಿತ್ವದ ವ್ಯಕ್ತಿ ದೈವತ್ವವನ್ನು ಪಡೆಯಬಹುದು ಅನ್ನುವುದನ್ನು ಇದಕ್ಕಿಂತ ಚೆನ್ನಾಗಿ ಹೇಗೆ ಹೇಳಲು ಸಾಧ್ಯ…..
#ಔದಾರ್ಯ
ಯಾವ ವ್ಯಕ್ತಿಗೆ ಎಷ್ಟು ಔದಾರ್ಯ ತೋರಬೇಕು ಎಂಬುದು ಸಹ ಜಾಣತನದ ಲೆಕ್ಕ. ಅಳತೆ ಮೀರಿದ ಔದಾರ್ಯವನ್ನು ಯಾರಿಗೂ ತೋರಬಾರದು. ಅದೇ ನಮಗೆ ಉರುಳಾಗುವ ಸಂಭವಗಳು ಜಾಸ್ತಿ ಎಂದು ಈ ಕಥೆ ಹೇಳುತ್ತದೆ. ತುಂಗಾ ನದಿಯ ರಾಮ ತೀರ್ಥದಲ್ಲಿ ನಿರೂಪಕ ಮತ್ತು ಅವರ ಮೇಷ್ಟರ ನಡುವೆ ನಡೆಯುವ ಸಂಭಾಷಣೆ, ಅಪಾತ್ರರಿಗೆ ಅತಿಯಾದ ಔದಾರ್ಯ ತೋರಿದಾಗ ಉಂಟಾದ ಅವಘಡಗಳನ್ನು ಹೇಳುತ್ತದೆ. ಇಲ್ಲಿ ನಮ್ಮ ಜೀವನದ ಪ್ರಾಮುಖ್ಯತೆ ಮತ್ತು ಔಚಿತ್ಯವನ್ನು ಜಿಜ್ಞಾಸೆಗೆ ಒಳಪಡಿಸುವ ಈ ಉಪಮೆಯನ್ನು ನೋಡಿ.
"ದೂರ ಪಶ್ಚಿಮ ದಿಕ್ಕಿನಿಂದ ಪರ್ವತ ಕಂದರಗಳ ನಡುವೆ ನುಗ್ಗಿ ಬಂದು ಕಾಣಿಸಿಕೊಂಡು ಮತ್ತೆ ಪೂರ್ವದಿಕ್ಕಿನ ಪರ್ವತಗಳ ಇಡುಕಿನಲ್ಲಿ ನುಸಿದು ಕಣ್ಮರೆಯಾಗುವ ತುಂಗೆ ಅನಂತದಿಂದ ಮಿಂಚಿ ಮರಳಿ ಅನಂತದಲ್ಲಿ ಮರೆಯಾಗುವ ದಿವ್ಯ ಭಾವದಂತೆ ಮಂಗಳ ಮನೋಹರವಾಗಿ ತೋರಿದಳು"
ಮನುಜ ಜನ್ಮವೂ ಅಷ್ಟೇ… ಎಲ್ಲಿ ಮೊದಲಾಗಿ ಎಲ್ಲಿಗೆ ಕೊನೆಯಾಗುವುದು ಗೊತ್ತಿಲ್ಲ. ಪ್ರಕಟವಾಗಿ ಹರಿಯುವ ನದಿಗೆ ಇರುವ ಪ್ರಾಮುಖ್ಯತೆ ನಾವು ಸವೆಸುವ ದಿನಗಳಿಗಿರುತ್ತದೆ. ಆದರ್ಶ ಔದಾರ್ಯಗಳಲ್ಲಿ ಕೊಚ್ಚಿ ಹೋಗದೆ ಅಜ್ಞಾತವಾಗಿ ಅನಂತವನ್ನು ಸೇರುವುದು ಉತ್ತಮ ಅಲ್ಲವೇ….
#ಆದರ್ಶಸಾಧನೆ
ಪ್ರತಿಯೊಬ್ಬ ವ್ಯಕ್ತಿಗೂ ತಾನು ಬದುಕಿನಲ್ಲಿ ಏನಾದರೂ ಸಾಧಿಸಬೇಕು… ತನ್ನದು ಇತರರಿಗಿಂತ ಹೆಚ್ಚು ಹೆಚ್ಚು ಆದರ್ಶ ಸಾಧನೆಯಾಗಿರಬೇಕು ಎಂಬ ಆಕಾಂಕ್ಷೆ ಇರುತ್ತದೆ. ಆದರೆ ವಾಸ್ತವವು ನಮ್ಮ ಮುಂದೆ ಒಡ್ಡುವ ಸವಾಲುಗಳ ಮುಂದೆ ಆದರ್ಶಗಳು ಒಂದೊಂದಾಗಿ ಕುಸಿಯಲಾರಂಭಿಸುತ್ತವೆ. ಆದರ್ಶ ಸಾಧನೆಗೆ ಉತ್ತಮ ಮಾರ್ಗ ಎಂಬುದು ಇರುವುದೇ ಅಥವಾ ವಾಸ್ತವದಲ್ಲಿ ಸ್ವಾಭಾವಿಕವಾಗಿ ಜೀವಿಸಿಕೊಂಡು,ಲೋಕರೂಢಿಯ ಬದುಕನ್ನು ಬದುಕುತ್ತಾ ಕೆಸರಿನಲ್ಲರುವ ಪದ್ಮದಂತೆ ಯಾವುದಕ್ಕೂ ಅಂಟಿಕೊಳ್ಳದೆ ಸಾಧನೆ ಮಾಡಬಹುದೇ? ಸನ್ಯಾಸ ಬ್ರಹ್ಮಚರ್ಯದಂತಹ ಮಾರ್ಗದಲ್ಲಿ ನಡೆದರೆ ಅದು ಉತ್ತಮವೇ ಅಥವಾ ಸಂಸಾರಿಯಾಗಿ ನಾಲ್ಕು ಜನರಿಗೆ ಹಿತವಾಗುವಂತೆ ಬಾಳುವುದು ಉತ್ತಮವೇ? ನಿರೂಪಕನ ಈ ಮಾತುಗಳನ್ನು ಕೇಳಿ...ನಿರ್ಧಾರ ನಮ್ಮ ವಿವೇಚನೆಗೆ ಬಿಟ್ಟಿದ್ದು….. "ನೀರಿನಲ್ಲಿ ಇರಬೇಕಾದ ಮೀನು ಭೂಮಿಯ ಪ್ರಾಣಿಗಳನ್ನು ನೋಡಿ ನೆಲದ ಮೇಲೆ ಓಡಾಡುವುದೇ ನೀರಿನಲ್ಲಿ ಈಜುವುದಕ್ಕಿಂತ ಉತ್ತಮ ಆದರ್ಶವೆಂದು ತಿಳಿದು ನೆಗೆದರೆ ಆತ್ಮಹತ್ಯೆ ಮಾಡಿಕೊಂಡಂತೆ ಆಗುವುದಿಲ್ಲವೇ? ಅಸ್ವಾಭಾವಿಕವಾದುದೆಲ್ಲವೂ ಅಧರ್ಮವಲ್ಲವೇ?"
#ಧನ್ವಂತರಿಚಿಕಿತ್ಸೆ
ತಮಗೆ ಆಗಾಗ ಕೇಳಿಬರುವ ಹೃದಯವಿದ್ರಾವಕ ಆರ್ತನಾದದ ಮೂಲವನ್ನು ಹುಡುಕುತ್ತಾ ಋಷಿಗಳಾದ ವಿಶ್ವಾಮಿತ್ರ ಮತ್ತು ಪರಶುರಾಮರು ನಾರದ ಮಹರ್ಷಿಯ ಸಲಹೆಯಂತೆ ನಂದನವನದಿಂದ ಭೂಮಿಗೆ ಬರುತ್ತಾರೆ… ಭೂಮಿಯ ಮೇಲಿರುವ ಹಲವಾರು ಆಧುನಿಕ ಸೌಲಭ್ಯಗಳು ಸೌಕರ್ಯಗಳು ಮತ್ತು ಸಂಸ್ಕೃತಿ ನಾಗರಿಕತೆಯ ಹೆಸರಿನಲ್ಲಿ ಅಳಿಯುತ್ತಿರುವ ಮೌಲ್ಯಗಳನ್ನು ನೋಡಿದಾಗ ದಿಗ್ಭ್ರಾಂತರಾಗುತ್ತಾರೆ. ತಾವು ನಗರದಲ್ಲಿ ಇರುವಷ್ಟು ದಿವಸ ಕೇಳದ ಆರ್ತನಾದ ಅಲ್ಲಿಂದ ಹೊರ ಹೋದಂತೆ ಮತ್ತೆ ಕೇಳಲಾರಂಭಿಸುತ್ತದೆ. ಬೆನ್ನಟ್ಟಿ ಹೋದವರಿಗೆ ಒಂದು ಗುಡಿಸಲಿನಿಂದ ಶಬ್ದವು ಬರುತ್ತಿದೆ ಎಂಬುದು ಮನವರಿಕೆಯಾಗುತ್ತದೆ. ಒಳಗಡೆಗೆ ನೋಡಿದಾಗ ಒಂದು ರೈತ ಕುಟುಂಬವು ದಟ್ಟ ದಾರಿದ್ರ್ಯದಲ್ಲಿ ಬದುಕುತ್ತಿರುತ್ತದೆ. ಹಾಗಾದರೆ ಆರ್ತನಾದ ಏಕೆ ಬರುತ್ತಿತ್ತು? ರೈತನಿಗೆ ಅಂಟಿಕೊಂಡಿದ್ದ ರೋಗವೇನು? ಸ್ವರ್ಗಕ್ಕೆ ಕೇಳುವ ಅವನ ಕೂಗು ನಗರದಲ್ಲಿನ ಅಬ್ಬರದ ನಡುವೆ ಏಕೆ ಮರೆಯಾಯಿತು? ಆ ರೈತನ ರೋಗವು ವಾಸಿಯಾಯಿತೇ?ಕಥೆಯನ್ನು ಓದಿ ನೋಡಿ…. ಈ ಸಂಕಲನದ ಅತ್ಯುತ್ತಮ ಕಥೆ. ಸಂವೇದನಾಶೀಲತೆಯನ್ನು ಕಳೆದುಕೊಂಡ ಸಮಾಜದ ಅಧಃಪತನವನ್ನು ಕುಟುಕುವ ಈ ಕಥೆ ಇಂದಿಗೂ ಪ್ರಸ್ತುತ… ಮತ್ತು ಲೇಖಕರ ಕಾಲಘಟ್ಟಕ್ಕೂ ಇಂದಿಗೂ ಒಂದು ಚೂರು ಸಹ ವ್ಯತ್ಯಾಸ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಏಳೆಂಟು ಪುಟಗಳಿಷ್ಟಿರುವ ಕಥೆಗಳು ಮಲೆನಾಡಿನ ಜೀವನ ಚಿತ್ರದ ಜೊತೆಗೆ ಜೀವನ ಮೌಲ್ಯಗಳ ಕುರಿತಾಗಿ ಒಟ್ಟು ಸಮಾಜವು ಯಾವ ದಿಕ್ಕಿನಲ್ಲಿ ದಾರಿ ತಪ್ಪಿದೆ ಮತ್ತು ಅದು ಹೇಗೆ ನಡೆಯಬೇಕಿತ್ತು ಎಂಬುದನ್ನು ತಿಳಿಸಿ ವಿವೇಚನೆಗೆ ಹಚ್ಚುತ್ತದೆ.
ಅತ್ಯದ್ಭುತ! ನಾನು ಇಷ್ಟು ಹಿತವಾದ ಕನ್ನಡವನ್ನು ಓದಿ ತುಂಬಾ ದಿನವಾಗಿತ್ತು. ಕುವೆಂಪುರವರು ನನಗೆ ಮತ್ತೊಮ್ಮೆ ಕನ್ನಡವನ್ನು ಸುಲಲಿತವಾಗಿ ಓದಿ, ಕೇಳುವ ಆನಂದ ತಂದುಕೊಟ್ಟರು.
ಪ್ರಕೃತಿಯ ಸೌಂದರ್ಯವನ್ನು ಕುವೆಂಪುರವರು ವರ್ಣಿಸುವಂತೆ ಜಗತ್ತಿನಲ್ಲಿ ಇನ್ಯಾರು ವರ್ಣಿಸಲು ಅಸಾಧ್ಯ. "ಔದಾರ್ಯ" ಕಥೆ ಓದುತ್ತಾ ದಿಗ್ಭ್ರಾಂತನಾಗಿ ಒಂದಿಷ್ಟು ಕಾಲ ಹಾಗೆ ಕುಳಿತುಬಿಟ್ಟೆ.
ಆಶ್ಚರ್ಯ ಎಂತನಿಸಿದ್ದು ಕುವೆಂಪುರವರ ಅದ್ಭುತವಾದ ಹಾಸ್ಯದ ಬರವಣಿಗೆ. " 'ಗಂಟು' ಅಥವಾ ಗುಪ್ತಧನ" ಹಾಗು "ಆದರ್ಶ ಸಾಧನೆ" ಕಥೆಗಳಲ್ಲಂತೂ, ಕೋಣೆಯಲ್ಲಿ ಒಬ್ಬನೆ ಕೂತು ಜೋರಾಗಿ ನಗುತ್ತಿದ್ದೆ. ಕುವೆಂಪುರವರ ವಿನಯವಾದ ಶೈಲಿಯಲ್ಲಿ, ವ್ಯಂಗ್ಯ-ವಿಡಂಬಣೆಯಿಂದ, ಚಾಣಾಕ್ಷತೆಯಿಂದ ಹಾಸ್ಯವನ್ನು ಓದಿ ತುಂಬಾ ಉಲ್ಲಾಸವಾಯಿತು.
ಆದರೆ ಕೆಲುವೊಮ್ಮೆ ಅನಿಸಿದ್ದು ಕುವೆಂಪುರವರ ಕಥೆ ಕಟ್ಟುವ ಕ್ರಮ ನನಗೆ ಹೊಂದದೆ ಇರುವುದು. ಅವರ ಆ ಮನೋಹರವಾದ, ಕಾವ್ಯಸ್ಪದದ ಸಾಲುಗಳ ಮಧ್ಯೆ, ಮೂಲ ಕಥೆ ಎಲ್ಲೋ ಕಳೆದುಹೋಯಿತೆಂದೆನಿಸಿತು.
ಕೊನೆಯದಾಗಿ, "ನನ್ನ ದೇವರು ಮತ್ತು ಇತರ ಕಥೆಗಳು" ನನ್ನ ಕನ್ನಡ ಪದಸಂಪತ್ತನ್ನು ಇನ್ನಷ್ಟು ವಿಸ್ತರಿಸಲು ನೆರವಾಯಿತು. ಎಷ್ಟೋ ಹಿತವಾದ ಮತ್ತು ಆಳವಾದ ಕನ್ನಡ ಪದಗಳನ್ನು ನನಗೆ ಕುವೆಂಪುರವರು ಪರಿಚಯಿಸಿದರು.
--- ನನ್ನ ದೇವರು -- ಆಕೆ. ಸಣ್ಣದರಲ್ಲೆ ಮದುವೆಯಾಗಿದೆ. ಗಂಡ ಒಂದು ದಿನ ತೀರಿಕೊಂಡ. ಗಂಡನಿಗೊಬ್ಬ ಅಣ್ಣ. ಗಂಡ ತೀರಿಕೊಂಡ ಕೊರಗಲ್ಲಿ ಕುಗ್ಗಿದ್ದ ಆಕೆಯನ್ನು ಮೇಲೆತ್ತಿದ್ದು ಆಕೆಯ ಭಾವ.(ಗಂಡನ ಅಣ್ಣಾ). ಆತನೊಬ್ಬ ಹುಚ್ಚ ಎಂದು ಕೆಲವರು ವ್ಯಂಗ್ಯ ಮಾಡಿದರೆ, ಇನ್ನೂ ಕೆಲವರು ಆತನೊಬ್ಬ ವೈರಾಗಿ, ಅಧ್ಯಾತ್ಮಿ,ಆತನ ಮುಖದ ಕಳೆ ಬಲು ಅಪರೂಪ ಎಂದು ಗೌರವಿಸುತ್ತಿದ್ದರು. ಆತನಿಗೆ ಕಾವ್ಯ,ದೇವರು, ಧರ್ಮ,ಅಧ್ಯಾತ್ಮ ಹೀಗೆ ಹಲವು ವಿಚಾರಗಳ ಮೇಲೆ ಆಸಕ್ತಿ. ಇವರ ಪ್ರಭಾವದಿಂದ ಆಕೆಯೂ ಕೂಡ ಏನ���ನೋ ಓದುತ್ತಿದ್ದಳು. ಹಾಡುತ್ತಿದ್ದಳು. ನಿಧಾನವಾಗಿ ಗಂಡನ ನೆನಪು ಮಾಸುತ್ತದೆ. ದಿನಗಳುರುಳಿದಂತೆ ಭಾವ ನ ಮೇಲೆ ತನಗಿರುವುದು ಪ್ರೇಮ ಎಂಬ ಕಹಿ ಸತ್ಯದ ಅರಿವಾಗಿ ತನ್ನ ಮೇಲೆ ಅಸಹ್ಯವೂ ಆಗಿ ಮುಂದೆ ಆ ಭಾವವೇ ನಿಜವೆಂದು ಅರಿವಾಗಿ, ಅವರೂ ತನ್ನನ್ನು ಬಯಸುತ್ತಿರುವರು ಎಂಬ ಭ್ರಮೆಗೆ ಒಳಪಡುತ್ತಾಳೆ. ಇದೆಲ್ಲವೂ ಕೊನೆಯಾಗಿದ್ದು ಆ ಒಂದು ರಾತ್ರಿಯಲ್ಲಿ. ಭಾವನ ಜಾಗದಲ್ಲಿ ತನ್ನ ಗಂಡನ ರೂಪ ಪ್ರತ್ಯಕ್ಷ ವಾದಾಗ ! ಆ ಒಂದು ಘಟನೆ ಆಕೆಯೊಳಗಿದ್ದ ಭ್ರಮೆಯ ಪರದೆಯನ್ನು ಸರಿಸಿ ಆಕೆಯನ್ನು ಪರಿಷ್ಕರಿಸಿತ್ತದೆ. ಮನುಷ್ಯನ ಚಂಚಲ ಮನಸ್ಸು, ಕ್ಷಣಿಕ ಬಂಧನಗಳ ಅನಾವರಣ ಈ ಕಥೆ !!
-- ಸಾಲದ ಮಗು --
ಊರ ಗೌಡರು. ಅವರ ಬಳಿ ಜೀತಕ್ಕಿರುವ ೧೦ ವಯಸಿನ ಬಾಲಕ. ಹೊರಗೆ ಜೋರು ಮಳೆ. ಗೌಡರಿಗೆ ಮಧ್ಯ ರಾತ್ರಿಯಲ್ಲೂ ಗದ್ದೆಯ ಬಳಿ ಸಿಕ್ಕಿರುವ ಮೀನಿನ ಚಿಂತೆ. ಗೌಡರ ದರ್ಪ ದೌರ್ಜನ್ಯಕ್ಕೆ ಸಿಲುಕಿ ಆ ಮಳೆಯ ರಾತ್ರಿಯಲ್ಲಿ ಮೀನು ಹೆಕ್ಕಲು ಹೋದ ಜೀತದಾಳು ಏನಾದ? ಇಲ್ಲಿ ಮಲೆನಾಡಿನ ಮಳೆಯನ್ನು ಅಮೋಘವಾಗಿ ವರ್ಣಿಸಿದ್ದಾರೆ ಲೇಖಕರು.
-----ಆದರ್ಶ ಸಾಧನೆ---- ಜೀವನದಲ್ಲಿ ಆದರ್ಶವಾದಿಯಾಗುವುದು ಹೇಗೆ ? ಸನ್ಯಾಸದಿಂದ ಆದರ್ಶ ಜೀವನವ ಸಾಧಿಸಬಹುದೇ? ಅಥವಾ ಅಜೀವ ಪರ್ಯಂತ ಬ್ರಹ್ಮಚರ್ಯ ವನ್ನು ಅನುಸರಿಸುವುದರಿಂದ ಕಾರ್ಯ ಸಾಧನವಾಗಬಹುದೇ ? ಇನ್ನೂ ಒಂದು ಮಜಲು ಮುಂದೆ ಹೋಗಿ, ಮದುವೆ ಯಾಗಿ, ಕರ್ಮ ಯೋಗಿಯಂತೆ ಆದರ್ಶ ಜೀವನ ಸಿದ್ಧಿಸಬಹುದೇ? ಏನೇ ಹೇಳಿ, ಮನೋ ನಿಗ್ರಹವಿಲ್ಲದೆ ಯಾವ ಸಾಧನೆಯೂ ಅಪೂರ್ಣವಲ್ಲವೆ?
-- ಔದಾರ್ಯ-- ಒಬ್ಬರ ಮೇಲೆ ಎಷ್ಟೊಂದು ಔದಾರ್ಯ ತೋರಬಹುದು? ಔದಾರ್ಯ ತೋರಿದ ಮೇಲೂ ಅವರ ನಡುವಳಿಕೆ ಬದಲಾಗಬೇಕು ಎಂದೇನಿಲ್ಲವಲ್ಲ ! ಇಲ್ಲೊಂದು ಸುಂದರ ಕಥೆಯಿದೆ. ಮಂಡ್ಯ ದಿಂದ ತೀರ್ಥ ಹಳ್ಳಿಗೆ ವರ್ಗವಾಗಿ ಬರುವ ಕಥಾ ನಾಯಕ ಒಂದು ಹುಣ್ಣಿಮೆಯ ರಾತ್ರಿ ರಾಮತೀರ್ಥ ಸುಂದರ ಪ್ರಕೃತಿಯನ್ನು ಆಸ್ವಾದಿಸುತ್ತಿರುವಾಗ ಬರುವ ಡೇವಿಡ್ ಮಾಸ್ತರರು ಅವರು ತೋರಿದ ಔದಾರ್ಯದ ದುರಂತ ಕಥೆಯನ್ನು ಹೇಳ ತೊಡಗುತ್ತಾರೆ.ಒಟ್ಟಿನಲ್ಲಿ, ಅರ್ಹರಿಗೆ , ತಕ್ಕಮಟ್ಟಿಗೆ ಔದಾರ್ಯ ತೋರುವುದಷ್ಟೆ ಒಳಿತು.
-- ‘ಗಂಟು’ ಅಥವಾ ಗುಪ್ತ ಧನ --
ಹಿಂದೆಲ್ಲ ಭುವಿಯ ಒಳಗೆ ಅಡಗಿದ್ದ ಗುಪ್ತ ನಿಧಿಯ ವಶ ಮಾಡಿಕೊಳ್ಳಲು ಹೆಣಗುತ್ತಿದ್ದ ಜನರ ಮೌಢ್ಯವೇ ಈ ಕಥೆಯ ಮೂಲ. ಮರವೊಂದಕ್ಕೆ ಕೈ ಮೂಡಿದರೆ ಅದರ ಬುಡದಲ್ಲಿ ನಿಧಿಯಿರುತ್ತದೆಯಂತೆ, ಕೈ ಎಷ್ಟು ಉದ್ದವಿದೆಯೋ ಅಷ್ಟು ಆಳ ಆಗಿಯಬೇಕಂತೆ, ಆಗಿಯುವ ಮೊದಲು ಭೂತ ಪಿಶಾಚಿಗಳನ್ನು ಸಂತೃಪ್ತಗೊಳಿಸಬೇಕಂತೆ. ಇಂಥಾ ಮೌಢ್ಯದ ಬೆನ್ನು ಬಿದ್ದು ಮಂಜಣ್ಣ ಎನ್ನುವವರ ಕಥೆಯನ್ನು ಸೊಗಸಾಗಿ ವಿವರಿಸಿದ್ದಾರೆ ಲೇಖಕರು.
-- ಮೀನಾಕ್ಷಿಯ ಮನೆಮೇಷ್ಟರು --
ಇನ್ನೊಬ್ಬರ ಮೇಲಿರುವ ತಪ್ಪು ಕಲ್ಪನೆಗಳು ಯಾ ಭಾವನೆಗಳನ್ನು , ಪರಸ್ಪರ ಮಾತುಕತೆ ಯಿಂದಲೇ ಸರಿ ಮಾಡಿಕೊಳ್ಳಬೇಕೇ ಹೊರತು , ಮನಸಿನ ಭೂತದ ದಾಸನಾಗಬಾರದು ಎಂಬುದೇ ಈ ಕಥೆಯ ಆಶಯ. ಮೀನಾಕ್ಷಿ ಗೆ ಒಬ್ಬರು ಮನೆ ಮೇಷ್ಟ್ರು ಇದ್ದರು. ಅವರಿಗಿದ್ದ ಒಂದು ಸಮಸ್ಯೆಯೆಂದರೆ , ತಾವು ಓದಿದ ಪುಸ್ತಕದಲ್ಲಿ ಬರುವ ಪಾತ್ರಗಳಿಗೆ ನಿಜ ಜೀವನದ ವ್ಯಕ್ತಿಗಳನ್ನು ಕಲ್ಪಿಸಿ ಜೀವಿಸುವುದು. ಕಾಲ ಕಳೆದಂತೆ, ಮೇಷ್ಟರು ಮೀನಾಕ್ಷಿ ಯೆಡೆ ಆಕರ್ಷಿತರಾಗುತ್ತಾರೆ. ಮೀನಾಕ್ಷಿಯೂ ತಮ್ಮನ್ನು ಇಷ್ಟ ಪಡುವಂತೆ ಭ್ರಮಿಸುತ್ತಾರೆ. ಈ ಭ್ರಮೆಯಿಂದ ಏನೆಲ್ಲಾ ಜರಗುತ್ತದೆ ಎಂದು ಕಥೆ ಓದಿ ತಿಳಿದುಕೊಳ್ಳಿ.
-- ಧನ್ವಂತರಿಯ ಚಿಕಿತ್ಸೆ --
ಹೃದಯ ವಿದ್ರಾವಕ ಕೂಗನ್ನು ಬೆನ್ನಟ್ಟಿಕೊಂಡು ಭೂಲೋಕಕ್ಕೆ ಬಂದ ವಿಶ್ವಾಮಿತ್ರ - ಪರಶುರಾಮ ರಿಗೆ ಕಂಡದ್ದು ಮರಣ ಶಯ್ಯೆಯಲ್ಲಿದ್ದ ಓರ್ವ ರೈತ. ಆತನ ರೋಗದ ಮೂಲವನ್ನು ಪರೀಕ್ಷಿಸಿದ ಧನ್ವಂತರಿ ಗೆ ಕಂಡದ್ದು ಆತನ ಎದೆಯ ಮೇಲಿರುವ ಯಮ ಭಾರ ! ದಬ್ಬಾಳಿಕೆ ! - ಇಂದಿಗೂ ವಾಸ್ತವ ಎನಿಸುವ ಈ ಕತೆಯಲ್ಲಿ ರೈತನ ಮೇಲಾಗುವ ಶೋಷಣೆಯನ್ನು ಮಾರ್ಮಿಕವಾಗಿ ಲೇಖಕರು ವಿಡಂಬನೆ ಮಾಡಿದ್ದಾರೆ.
-- ವೈರಾಗ್ಯದ ಮಹಿಮೆ --
ಅಟ್ಟಿದರೆ ಓಡುತ್ತದೆ;ಬಿಟ್ಟರೆ ಹಿಂಬಾಲಿಸುತ್ತದೆ.
ಸೋಮಾರಿಯಾದ ಒಬ್ಬ ಮದುವೆಯ ಕನಸು ಕಂಡು ವೈರಾಗ್ಯದ ದೀಕ್ಷೆ ಪಡೆದರೆ ಏನಾಗಬಹುದು ? ವೈರಾಗ್ಯ ವೆಂದರೆ ಇಷ್ಟ ಪಟ್ಟದನ್ನು ತ್ಯಜಿಸುವುದು ಯಾ ಬಿಡುವುದು. ಆದರೆ ಏನನ್ನು ತ್ಯಜಿಸಬೇಕು ಎಂದು ನಿರ್ಧರಿಸಿದ್ದನೋ , ಸನ್ಯಾಸಿಯಾದ ಮೇಲೆ ಅದು ತಾನಾಗೇ ಇವನ ಬಳಿ ಬಂದು ಸೇರುತ್ತದೆ. ವೈರಾಗ್ಯದ ಪರದೆಯ ಹಿಂದೆ !!
Loved the hilarious short stories in the book. Some question social norms while others drill into human emotions and inadequacies. Some mock the ‘wannabe idealists’ around us. A short entertaining read.
This collection of stories covers a wide range of genres, from psychological struggles to social satire, with each story bringing unique perspectives on life, love, and philosophy.
1. Nanna Devaru - A psychological tale capturing the conflict between respect and romantic desire. Rating: 7/10 2. Saalada Magu - A deeply moving story, truly heartbreaking. Rating: 8/10 3. Adarsha Saadhane - Explores the struggle between celibacy and family life, offering a philosophical angle. Rating: 4/10 4. Audarya - Set against the beautiful landscapes of Malenadu, the story of David Master’s attempt at suicide takes off in the second half. Rating: 6/10 5. Gantu Athava Guptadhana - The story of a deceitful monk tricking treasure hunters. Rating: 5/10 6. Meenakshiya Mane Maestru - A simple story with a cinematic feel, detailing the emotions of a young couple on love and marriage. Rating: 2/5 7. Dhanvanthariya Chikitse - A social and philosophical tale, featuring Parashurama and Vishwamitra’s search for the source of a recurring cry of agony. Rating: 5/5 8. Vairagyada Mahime - Chronicles the journey of a lazy man who transforms into a revered teacher, portraying inner struggles similar to Bhyrappa’s themes (ನಿರಾಕರಣ). Rating: 3/10
Each story brings out human emotions in distinct settings, reflecting societal and philosophical issues.
“ನನ್ನ ದೇವರು- 1940 ರಲ್ಲಿ ಪ್ರಕಟವಾಗಿರೋ ಈ ಸಣ್ಣ ಕತೆಗಳ ಕಥಾವಸ್ತು ಇವತ್ತಿಗೂ ಪ್ರಸ್ತುತ ಮತ್ತು ಸಾರ್ವಕಾಲಿಕವಾಗಿವೆ. -ನನ್ನ ದೇವರು; ಪತಿಯನ್ನು ಕಳೆದುಕೊಂಡ ತರುಣೆ, ವಯಸ್ಸಾದಂತೆ ತಮ್ಮ ಭಾವನವರ ಆದರ್ಶಕ್ಕೆ ಮಾರುಹೋಗಿ ಯೌವ್ವನದ ಬೇಗುದಿಯಲ್ಲಿ ಬೆಂದು ಮನಸ್ಸನ್ನ ಸೂರೆಗೊಳಿಸಿಕೊಂಡು ಹತ್ತಿರಹೋದಾಗ ಅವಳಿಗೆ ಕಾಣುವುದು ಅವಳ ಗಂಡನೇ..! - ಸಾಲದ ಮಗು; ಓದಿದಾಗ ಸುಬ್ಬನ ಸಾವು ಕಾಡುತ್ತದೆ, ಜೀತದಾಳು ಮತ್ತು ಒಡೆಯರ ನಿರ್ದಾಕ್ಷಿಣ್ಯತೆ ಇವತ್ತಿಗೂ ಪ್ರಸುತ. - ಆದರ್ಶ ಸಾಧನೆ; ಅಂತರಂಗದಲ್ಲೊಂದು ಬಹಿರಂಗದಲ್ಲೊಂದು ಗುರಿ ಇಟ್ಟುಕೊಂಡರೆ ಆದರ್ಶ ಸಾಧನೆ ಅಸಾಧ್ಯ..! - ಔದಾರ್ಯ; ಓದುವಾಗ ಅವರು ಪರಿಸರವನ್ನು ವಿವರಿಸುವ ರೀತಿ ಯಾವತ್ತೂ ಶ್ಲಾಘನೀಯ, ಮತ್ತು ಇದರೊಳಗೆ ಒಂದು horror ಸಸ್ಪೆನ್ಸ್ ಕೂಡ ಓದಿದಾಗ ಮೈ ಜುಮ್ಮನಸುತ್ತದೆ. - ಗಂಟು ಅಥವಾ ಗುಪ್ತಧನ; ನಿಧಿಯ ಹುಡುಕಾಟದಲ್ಲಿ ಜೀವನವನ್ನು ಬರ್ಬರವಾಗಿಸಿಕೊಳ್ಳುವುದು ಇವತ್ತಿಗೂ ಇದೆ. - ಮೀನಾಕ್ಷಿ ಮನೆಮೇಷ್ಟರು; ಸಾಹಿತ್ಯಾಸಕ್ತ ಮನಸ್ಸಿನಲ್ಲಿ ಬರುವ ಪಾತ್ರಗಳನ್ನು ವಾಸ್ತವತೆಗೆ ಹೋಲಿಸಿದಾಗ ನೋಡಿದರೆಲ್ಲರೂ ಕೆಟ್ಟವರೆಂದು ಭಾವಿಸುತ್ತದೆ ಮತ್ತು ಅದರ ಪರಿಣಾಮವನ್ನು ಅಚ್ಚುಕಟ್ಟಾಗಿ ವರ್ಣಿಸಿದ್ದಾರೆ. - ಧನ್ವಂತರಿಯ ಚಿಕಿತ್ಸೆ; ಕುವೆಂಪುರವರ ಎಲ್ಲಾ ಕೃತಿಗಳಲ್ಲೂ ರೈತನಿಗೆ ತೋರುವ ಪೂಜ್ಯ ಮನೋಭಾವಕ್ಕೆ ವಿಶ್ವಾಮಿತ್ರ ಮತ್ತು ಪರಶುರಾಮನನ್ನೇ ಭೂಮಿಗೆ ಕರೆಸಿ ಪರಿಹಾರ ಒದಗಿಸಿದ್ದಾರೆ. - ವೈರಾಗ್ಯದ ಮಹಿಮೆ; ದೇವರ ಹೆಸರಿನಲ್ಲಿ ಮಾಡುವ ಕಾಮದ ಕಸುಬು ಇವತ್ತಿಗೂ ಎಲ್ಲಕಡೆಯೂ ನೋಡುತ್ತೇವೆ.”