K.P. Purnachandra Tejaswi was a prominent Kannada writer, novelist, photographer, ornithologist, publisher, painter and environmentalist. He made a great impression in the "Navya" period of Kannada literature and and inaugurated the bandaya sahitya.
Tejaswi was born on September 8, 1938. His father is the famous poet, Rashtrakavi Kuvempu. He completed his education in Mysore. Tejaswi has written in almost all forms of literature including poems, short stories, novels, travel literature, plays and science fiction. He has translated several English books to Kannada. His famous translations include the series on Kenneth Anderson's hunting expeditions and Henri Charrière's Papillon.
He has won several awards for his contribution to literature such as the Rajyotsava and Kannada Sahitya Academy awards.
Poornachandra Tejaswi died of cardiac arrest at the age of 69
ನಾನು ಹುಟ್ಟಿ ಬೆಳೆದದ್ದು ಹಾಗೂ ಈಗ ವಾಸವಿರುವುದು ಕೊಡ್ಯಮಲೆ ಎಂಬ ಕಾಡಿನ ತಪ್ಪಲಲ್ಲಿರುವ ಊರಿನಲ್ಲೇ,
ನಾನು ಚಿಕ್ಕಂದಿನಿಂದಿಲು ನಮ್ಮ ಹಿರಿಯರು,ನೆರೆ ಕರೆಯವರು ಕಾಡಿನ ಪ್ರಾಣಿಗಳ ಬಗ್ಗೆ,ಅವು ಹೇಗೆ ಊರ ಕಡೆ ಬಂದವು,ಅವರು ಅದನ್ನ ಎಲ್ಲೀ ಕಂಡರು ಎಂಬ ಮಾತುಗಳನ್ನು ಕೇಳಿದ್ದೇನೆ!
ಅವರಲ್ಲಿ ಕೆಲವರು ಕಾಡೆಮ್ಮೆ,ಜಿಂಕೆ,ಕಾಡುಹಂದಿ ಮುಂತಾದ ಜೀವಿಗಳನ್ನು ಕಂಡಿದ್ದರೆ!! ಕೆಲವರಂತೂ ಹುಲಿ,ಚಿರತೆಗಲೆಂತಹ ಕ್ರೂರ ಪ್ರಾಣಿಗಳನ್ನು ಕಂಡಿದ್ದಾರೆ ಎಂಬ ರೋಚಕಕಾರಿ ಕಥೆಗಳನ್ನು ತುಂಬಾ ಕೇಳುತ್ತ ಬೆಳೆದಿದ್ದೇನೆ.. ಆದರೆ ಈವರೆಗೆ ನಾನು ಯಾವುದೇ ಮೃಗಗಳನ್ನು ಕಣ್ಣಾರೆ ಕಂಡಿದ್ದಿಲ್ಲ.
ನಾಗರೀಕತೆ ಬೆಳೆಯುತ್ತ ,ಕಾಡ ನಡುವೆ ಸರ್ಕಾರಿ ಬಸ್ ಸಂಚರಕ್ಕಾಗಿ ಸ್ವಲ್ಪ ಕಾಡನ್ನು ಕಡಿದು ರಸ್ತೆ ನಿರ್ಮಿಸಬೇಕಾಗಿ ಬಂತು,ಹಾಗಾಗಿ ಕಾಡು ಜೀವಗಳು ಜನರಿಂದ ದೂರವಾದವು ಎನ್ನಬಹುದೇನೋ..
ಈ ಪುಸ್ತಕವನ್ನು ಓದುವಾಗ ನನಗೆ ನನ್ನ ಬಾಲ್ಯದ ಹಲವಾರು ತುಣುಕುಗಳು ನೆನಪಾದವು..
ಬೆಳ್ಳಂದೂರಿನ ನರಭಕ್ಷಕ ಇದು ತೇಜಸ್ವಿಯವರು ಬರೆದ ಕೆನೆತ್ ಆಂಡರ್ಸನ್ ಕಥೆಗಳ ಭಾವಾನುವಾದ. ತೇಜಸ್ವಿಯವರು ಬರೆಯುವ ನರಭಕ್ಷಕ ಕಥೆಗಳು ಬಹಳ ರೋಚಕವಾಗಿರುತ್ತದೆ. ಈ ಪುಸ್ತಕದಲ್ಲಿ ಮೂರು ನರಭಕ್ಷಕ ಹುಲಿಗಳ ಚರಿತೆಯಿದೆ.ಮೊದಲೆನೆಯದು ಬೆಳ್ಳಂದೂರಿನ ನರಭಕ್ಷಕ. ಸಾಮಾನ್ಯವಾಗಿ ಯಾವುದೇ ಪ್ರಾಣೀಯೂ ಹುಟ್ಟುತ್ತಾ ನರಭಕ್ಷಕವಾಗಿರುವುದಿಲ್ಲ. ಇದು ಮನುಷ್ಯರ ಕಾರಣದಿಂದ ನರಭಕ್ಷಕವಾಗುವ ಪ್ರಸಂಗಗಳೇ ಹೆಚ್ಚು.ಬೆಳ್ಳಂದೂರಿನ ಹುಲಿಯನ್ನು ಅಲ್ಲಿಯ ಜನರು ಕಟುವಾಗಿ ಹಿಂಸಿಸಿ ಗಾಯಗೊಳಿಸಿದ್ದರಿಂದಲೇ ಅದು ನರಭಕ್ಷಕವಾಗಿ ಹಲವಾರು ಜನರ ಬಲಿ ತೆಗೆದುಕೊಂಡಿತು. ನಂತರ ಆಂಡೆರ್ಸನ್ ಅವರ ಉಪಾಯ ಹಾಗೂ ಅಗಾಧ ಧೈರ್ಯದಿಂದ ಅದನ್ನು ಬೇಟೆಯಾಡಲಾಯಿತು. ಎರಡನೆಯದು ಷೇರ್ ಖಾನ್. ಲಂಟಾನ ಮರಗಳ ಸಂಖ್ಯೆ ಹೆಚ್ಚಾಗಿ ಜಿಂಕೆ, ಆನೆಗಳ ಸಂಖ್ಯೆ ಕಡಿಮೆಯಾಗಿ ಕ್ರೂರ ಪ್ರಾಣಿಗಳಿಗೆ ಆಹಾರವಿಲ್ಲದೆ ಜನವಸತಿಗಳ ಕಡೆ ಬಂದು ನರಭಕ್ಷಕವಾದ ಹುಲಿಯ ಕಥೆಯಿದಾಗಿದೆ.ಈ ಹುಲಿಯ ಬೇಟೆಯಾಡುವಾಗ ಆಂಡೆರ್ಸನ್ ಅವರು ಎರಡು ಬಾರಿ ಜೀವ ಕೈಲಿಟ್ಟುಕೊಂಡು ಹುಲಿಗೆ ಎದುರಾದರೂ ಧೈರ್ಯಗೆಡದೆ ಷೇರ್ ಖಾನ್ ನ ಜೊತೆಗೂಡಿ ಜನರಿಗೆ ಆ ನರಭಕ್ಷಕನಿಂದ ಮುಕ್ತಿಕೊಡಿಸಿದ ಬಗೆ ಅದ್ಭುತ. ಮೂರನೆಯದು ವೈನಾಡಿನ ನರಭಕ್ಷಕನ ಕಥೆಯಾಗಿದೆ. ಇದರ ಉಪಟಳ ತಾಳಲಾಗದ ಗ್ರಾಮಸ್ಥರು ಆಂಡೆರ್ಸನ್ ಅವರ ಮೊರೆ ಹೋಗಿ ಇದರಿಂದ ಮುಕ್ತಿ ಕೊಡಬೇಕೆಂದು ಕೇಳಿದಾಗ ಅವರು ತಮ್ಮ ಮಿತ್ರ ತಿಮ್ಮಯ್ಯನ ಜೊತೆಗೂಡಿ ಅದರ ಬೇಟೆಯಾಡಿದರು. ಒಟ್ಟಾರೆ ತೇಜಸ್ವಿಯವರ ಭಾವಾನುವಾದ ನಮ್ಮನ್ನು ಈ ಲೋಕದಿಂದ ಕಾಡಿನ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಅವರ ಲೇಖನ ಶೈಲಿಯಲ್ಲಿ ಈ ಕತೆಗಳನ್ನು ಓದುವ ಮಜವೇ ಬೇರೆ.
ಕಳೆದ ೨-೩ ವರ್ಷಗಳಿಂದ Jim Corbettರ ಹಲವಾರು ಪುಸ್ತಕಗಳನ್ನು ಓದಿರುವೆ . ಈ genreಯ ಪುಸ್ತಕಗಳು ನನಗೆ ತುಂಬಾ ಪ್ರಿಯವೆನಿಸಿತು. ಹಿಮಾಲಯದ ಚಾರಣವನ್ನು ಹಲವಾರು ಬಾರಿ ಮಾಡಿದರಿಂದ ಅವರ ಬರಹಗಳು, ಅಲ್ಲಿನ ಜನರ ಕಥೆಗಳು ಮನಸ್ಸಿಗೆ ಹತ್ತಿರವಾದವು . ಆದರೆ Corbettನ ಎಲ್ಲಾ ಪುಸ್ತಕಗಳನ್ನು Englishನಲ್ಲಿ ಓದಿದೆ. ಅದರಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿರುವ "Man Eater of Rudraprayag "ವನ್ನು ತೇಜಸ್ವಿಯವರು ಅನುವಾದಿಸಿದ್ದಾರೆ ಮತ್ತು ಅದು ಸೊಗಸಾಗಿದೆ ಎಂದು ನನ್ನ ಪುಸ್ತಕ ಪ್ರೇಮಿ ಸ್ನೇಹಿತರೆಲ್ಲರೂ ಅನುಮೋದಿಸಿದರು.
ಇದನ್ನು Englishನಲ್ಲಿ ಓದಿರುವುದರಿಂದ ಕನ್ನಡದಲ್ಲಿರುವ Kenneth Andersonರ ಕಥೆಗಳನ್ನು ಓದಲು ಶುರುಮಾಡಿದೆ.
ಇದು ಭಾವಾನುವಾದವಾಗಿರುವುದರಿಂದ, ಕನ್ನಡದಲ್ಲಿ ಓದಿದಾಗಲೂ ಅದೇ ಶಿಕಾರಿಯ ಕಥೆಯ ಅನುಭವವಾಯಿತು. ಈ ಕಥೆಗಳು ದಕ್ಷಿಣ ಭಾರತದ ಸಹ್ಯಾದ್ರಿಯ ನಿತ್ಯಹರಿದ್ವರ್ಣದ ಕಾಡುಗಳು , ಕುರುಚಲು ಕಾಡುಗಳಲ್ಲಿ ನಡೆದವು. ಇಲ್ಲಿನ ಸೋಲಿಗರು , ಜೇನು ಕುರುಬರ ಜೀವನದ ಬಗ್ಗೆಯು ಬೆಳಕೊಡ್ಡುತ್ತದೆ .
This is one of the first thriller novels that I've read in Kannada.. Probably the best thriller I have ever read.. It feels as if you are sitting alongside the author while shooting.. Feels surreal.. You won't even remember that this is a translation and I'm pretty sure that the translated version is better than the original one.. My favourite author of all time..
Very enjoyable and adventurous journey by Kenneth Anderson, I like it thanks to tejaswi sir for the accurate translation, not feel any boredom yeah many times it feels unreal but at that time without technology hunters were left with no choice in the evergreen forest.
My second book of ಪೂ ಚಂ ತೆ and I'm glad I've understood why people appreciate his work so much. This book definitely held me tighter and closer to the world of the deccan forests. Lovely read.
ಅಗಾಧ ಅನುಭವ, ನಾವೇ ಶಿಕಾರಿ ಹೊರಟು ಹುಲಿಯು ಕಣ್ಮುಂದೆ ಬಂದ ಅನುಭವ. ಹುಲಿಯ ಅಂತರಂಗಕ್ಕೂ, ಮನುಷ್ಯನ ಬಹಿರಂಗ ಜೀವನಕ್ಕೂ ಇರುವ ಭಯ, ಮನುಷ್ಯನ ಭೂಮಿ ಆಸೆಗೆ ಕಾಡು ಕ್ಷೀಣಿಸಿದಂತೆ, ಮೃಗಗಳು ಕ್ರೂರವಾಗಿ ಮನುಷ್ಯನ ಮಾಂಸ ರುಚಿ ಕಂಡು ಮತ್ತೆ ಮತ್ತೆ ಭೇಟೆಯಾಡುವ ತುಮುಲ. ಹುಲಿಯ ಹಾವ ಭಾವ ಮನಸ್ಥಿತಿ ಯೋಚನೆ ಗಳನ್ನು ಈ ಎಲ್ಲ ಕೃತಿಗಳು ಅಚ್ಚುಕಟ್ಟಾಗಿ ತೆರೆದಿಡುತ್ತವೆ. ಮೃಗಾಲಯಕ್ಕೆ ಹೋಗಿ ಹುಲಿ, ಸಿಂಹ, ಕಾಡಾನೆ, ಜಿಂಕೆ ಇತ್ಯಾದಿ ಪ್ರಾಣಿಗಳನ್ನು ನೋಡಿದಾಗ ಈ ಕೃತಿಯು ನಮ್ಮೊಳಗೆ ಗೊತ್ತಿಲ್ಲದಂತೆ ಅವುಗಳ ಚಲನೆಗಳನ್ನು ಪರಾಮರ್ಶಿಸುತ್ತದೆ. ಕೆನೆತ್ ಆ್ಯಂಡರ್ಸನ್ ರವರ ನರಭಕ್ಷಕ ಹುಲಿ ಮತ್ತು ಚಿರತೆಯ ಶಿಕಾರಿಗಳನ್ನು ಕಾಡಿನ ಕಥೆಗಳನ್ನಾಗಿ ಅತ್ಯಂತ ಭಾವನಾತ್ಮಕವಾಗಿ ಕನ್ನಡೀಕರಿಸಿದ್ದಾರೆ ತೇಜಸ್ವಿಯವರು. ಬರಿ ಶಿಕಾರಿಯ ಬಗ್ಗೆ ಬರೆಯದೆ, ಕಾಡಿನ ಸೌಂದರ್ಯ, ಕಾಡು ಪ್ರಾಣಿಗಳ ಜೀವನ ಶೈಲಿ ಅಲ್ಲದೆ ಕಾಡು ಜನರ ಒಡನಾಟವನ್ನೂ ಅಷ್ಟೇ ಜಾಗರೂಕತೆಯಿಂದ ವರ್ಣಿಸಿದ್ದಾರೆ ಲೇಖಕರು. ಇನ್ನು ತೇಜಸ್ವಿಯವರ ಪುಸ್ತಕಗಳು ಪರಿಸರದ ಕಾಳಜಿ, ಕಾಡಿನ ಮಹತ್ವ ಮತ್ತು ಕಾಡು ಜೀವಿಗಳ ಅವಶ್ಯಕತೆಯನ್ನು ಒತ್ತಿ ಹೇಳುತ್ತವೆ. ಅವರ ಪುಸ್ತಕಗಳನ್ನು ಓದು��ುದೇ ಒಂದು ಸುಖ.
ಇದು ಭಾವಾನುವಾದವಾಗಿರುವುದರಿಂದ, ಕನ್ನಡದಲ್ಲಿ ಓದಿದಾಗ ಅದೇ ಶಿಕಾರಿಯ ಕಥೆಯ ಅನುಭವವಾಯಿತು. ಈ ಕಥೆಗಳು ದಕ್ಷಿಣ ಭಾರತದ ಸಹ್ಯಾದ್ರಿಯ ನಿತ್ಯಹರಿದ್ವರ್ಣದ ಕಾಡುಗಳು , ಕುರುಚಲು ಕಾಡುಗಳಲ್ಲಿ ನಡೆದವು. ಇಲ್ಲಿನ ಸೋಲಿಗರು , ಜೇನು ಕುರುಬರ ಜೀವನದ ಬಗ್ಗೆಯು ಬೆಳಕೊಡ್ಡುತ್ತದೆ.
ಸಾಮಾನ್ಯವಾಗಿ ಯಾವುದೇ ಪ್ರಾಣೀಯೂ ಹುಟ್ಟುತ್ತಾ ನರಭಕ್ಷಕವಾಗಿರುವುದಿಲ್ಲ. ಇದು ಮನುಷ್ಯರ ಕಾರಣದಿಂದ ನರಭಕ್ಷಕವಾಗುವ ಪ್ರಸಂಗಗಳೇ ಹೆಚ್ಚು.ಬೆಳ್ಳಂದೂರಿನ ಹುಲಿಯನ್ನು ಅಲ್ಲಿಯ ಜನರು ಕಟುವಾಗಿ ಹಿಂಸಿಸಿ ಗಾಯಗೊಳಿಸಿದ್ದರಿಂದಲೇ ಅದು ನರಭಕ್ಷಕವಾಗಿ ಹಲವಾರು ಜನರ ಬಲಿ ತೆಗೆದುಕೊಂಡಿತು. ನಂತರ ಆಂಡೆರ್ಸನ್ ಅವರ ಉಪಾಯ ಹಾಗೂ ಅಗಾಧ ಧೈರ್ಯದಿಂದ ಅದನ್ನು ಬೇಟೆಯಾಡಲಾಯಿತು..
ಈ ಕೃತಿಯನ್ನು ತರ್ಜುಮೆ ಅಂತ ಹೇಳೋದು ತುಂಬಾ ಕಷ್ಟ. ಅಷ್ಟು ಅಚ್ಚುಕಟ್ಟಾಗಿ ನಮಗೆ ಬೆಲ್ಲದ ಪಾನಕ ಥರ ಹಂಚಿದ್ದಾರೆ ಲೇಖಕರು.
This book is a collection of tales from Kenneth Anderson's book. Tejaswi called it ' ಭಾವಾನುವಾದ '. Despite the fact that it's a translation, there is no other writer who can make you feel chilled and stop your breath while reading.
This is the first book I read of KP Purnachandra Tejaswi. Just after reading two pages curiosity started and i dindt keep down. I beacame a fan of KP PTC. I finished all four parts in a row.