Jump to ratings and reviews
Rate this book

ಅಣ್ಣನ ನೆನಪು | Annana Nenapu

Rate this book
Annana A Memoir on Sri.Kuvempu written by K.P. Poorna Chandra Tejaswi [Hardcover] [Jul 07, 1905] Poorna Chandra Tejaswi

236 pages, Hardcover

Published January 1, 2015

138 people are currently reading
1858 people want to read

About the author

K.P. Poornachandra Tejaswi

58 books1,100 followers
K.P. Purnachandra Tejaswi was a prominent Kannada writer, novelist, photographer, ornithologist, publisher, painter and environmentalist. He made a great impression in the "Navya" period of Kannada literature and and inaugurated the bandaya sahitya.

Tejaswi was born on September 8, 1938. His father is the famous poet, Rashtrakavi Kuvempu. He completed his education in Mysore. Tejaswi has written in almost all forms of literature including poems, short stories, novels, travel literature, plays and science fiction. He has translated several English books to Kannada. His famous translations include the series on Kenneth Anderson's hunting expeditions and Henri Charrière's Papillon.

He has won several awards for his contribution to literature such as the Rajyotsava and Kannada Sahitya Academy awards.

Poornachandra Tejaswi died of cardiac arrest at the age of 69

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
438 (61%)
4 stars
186 (25%)
3 stars
68 (9%)
2 stars
13 (1%)
1 star
12 (1%)
Displaying 1 - 30 of 52 reviews
Profile Image for Dr Jyotsna Iyer.
7 reviews9 followers
August 26, 2023
ಈ ಪುಸ್ತಕ ತೇಜಸ್ವಿಯವರ ಅನುಭವ ಕಥನಗಳ ಸಂಕಲನ. ಈ ಪುಸ್ತಕ ಕುವೆಂಪುರವರ ವ್ಯಕ್ತಿತ್ವವನ್ನು ತೇಜಸ್ವಿ ಅವರ ದೃಷ್ಠಿಯಿಂದ ಪರಿಚಯಿಸುತ್ತದೆ. ಕುವೆಂಪು ಅವರ ವ್ಯಕ್ತಿತ್ವವನ್ನು ಒಬ್ಬ ಮಗನಾಗಿ ಕಟ್ಟಿಕೊಡುತ್ತಾರೆ ತೇಜಸ್ವಿ.
" ನನಗೆ ತಿಳಿದ ಹಾಗೆ ಅಣ್ಣ ತಮಾಷೆ ವಿನೋದಗಳೊಂದಿಗೆ ಅನ್ನ ತಿನ್ನುವ ನಮ್ಮೆಲ್ಲರಂತೆ ಬದುಕಿದ್ದರು. ಬದುಕನ್ನು ಒಂದು ವ್ರತದಂತೆ ಪರಿಗಣಿಸಿ ವ್ರತನಿಷ್ಟರಂತೆ ಅವಡುಗಚ್ಚಿ ಜೀವಿಸುತ್ತಿದ್ದುದನ್ನು ನಾನಂತೂ ಕಂಡಿಲ್ಲ."
Profile Image for Skanda Prasad.
70 reviews2 followers
May 5, 2022
3.5*


ಸರಾಗವಾಗಿ ಓದಿಸಿಕೊಂಡು ಹೋಗುವ ಕೃತಿ. ಹೆಚ್ಚಿನ ಕಥೆಗಳು ತೇಜಸ್ವಿ ಹಾಗೂ ಅವರ ಗೆಳೆಯರ ಕಥೆಗಳಲ್ಲಿ ಕುವೆಂಪು ಅವರು ಅತಿಥಿ ಪಾತ್ರವಾಗಿ ಕಾಣುತ್ತಾರೆ. ತೇಜಸ್ವಿಯವರು ಹೇಳಿದಂತೆ ಇದು ಕುವೆಂಪು ಬಗೆಗಿನ ಸಮಗ್ರ ಕೃತಿಯಲ್ಲ. ಕುವೆಂಪು ಅವರ ವಿಚಾರಧಾರೆಯ ಬಗ್ಗೆ ಹೆಚ್ಚು ಬೆಳಕು ಚೆಲ್ಲಿದ್ದಾರೆ. ತಂದೆಯಾಗಿ ಕುವೆಂಪು ಹೇಗೆ ಎನ್ನುವುದನ್ನು ಅವರ ಮಕ್ಕಳು ಮಾತ್ರ ಬಲ್ಲರು, ಅದನ್ನು ಇಲ್ಲಿ ಕಾಣಬಹುದು.
Profile Image for Soumya.
219 reviews49 followers
December 24, 2020
This book depicts about unseen and unheard stories about Kuvempu by his son Poornachandra Tejasvi.

I had altogether different image about Kuvempu before reading this book. Good that this book gave additional details about Kuvempu.
Profile Image for Gowrav Shenoy.
18 reviews
June 14, 2018
ತೇಜಸ್ವಿಯವರ ಸಹಜ ಭಾಷೆಯಲ್ಲಿ ಮಹಾಕವಿಯೋರ್ವರನ್ನು ಸಾಮಾನ್ಯರಲ್ಲೊಬ್ಬರನ್ನಾಗಿ ಕಂಡ ಪುಳಕ ನನ್ನದು.
ಕೃತಿಯು ಕುವೆಂಪುರವರ ಕುರಿತಾದದ್ದು. ಆದರೂ, ಓರ್ವ ಸರಸ್ವತೀ ಪುತ್ರನ ನಿತ್ಯ ಜೀವನ, ಪ್ರೇರಣೆ, ವೈಚಾರಿಕತೆ, ಸಾಹಿತ್ಯಕೃಷಿ, ಜನಜೀವನದ ಬಗೆಗಿನ ಅಭಿಪ್ರಾಯಗಳು ಇತ್ಯಾದಿಗಳ ಸಂಗ್ರಹವಿರುವ ಪುಸ್ತಕವಿದು.

ತೇಜಸ್ವಿಯವರನ್ನು ಹೊಗಳಲು ಮನಸ್ಸಿಲ್ಲ. ಪುಸ್ತಕ ಇಷ್ಟವಾಗಿದೆ. ತೇಜಸ್ವಿಯವರ ಬಾಲ್ಯ, ಅವರನ್ನು ಬೆಳೆಸಿರುವ ರೀತಿ, ವಿದ್ಯಾಭ್ಯಾಸ, ಕಾಲೇಜು ಪುರಾಣಗಳು, ಮಗನ ಯೋಚನೆಗಳನ್ನು ನಿಯಂತ್ರಿಸದೇ ಯೋಚನಾ ವಿಧಾನವನ್ನು ಸರಿ ದಿಕ್ಕಿನೆಡೆಗೆ ತೋರುತ್ತಿದ್ದ ದಾರ್ಶನಿಕತೆ, ಸಂಗೀತಾಭ್ಯಾಸ, ಶಾಮಣ್ಣ, ಕ್ಯಾಮರಾ, ಬೈಕ್ ಕತೆ, ಲೋಹಿಯಾ ವಿಚಾರಗಳು, ಸಾಹಿತಿಗಳ ಒಡನಾಟ ಹೀಗೆ ಹತ್ತಾರು ಸ್ವಾರಸ್ಯಕರ ವಿಚಾರಗಳು ಪುಸ್ತಕದಲ್ಲಿವೆ. ಹಾಗೆಯೇ ಯಾವುದೇ ಉತ್ಪ್ರೇಕ್ಷೆಯಿರದಂತೆ ಸಹಜವಾಗಿ ಹರಟಿರುವ ತೇಜಸ್ವಿಯವರು, ಕುವೆಂಪುವನ್ನು ತೋರಿಸಿರುವುದೂ ಒಬ್ಬ ಜವಾಬ್ದಾರ ತಂದೆಯಾಗಿ, ಆತ್ಮೀಯ ಮಿತ್ರನಾಗಿ, ಮಾರ್ಗದರ್ಶಕನಾಗಿ, ತಾನು ಕಂಡ ಆದರ್ಶ ವ್ಯಕ್ತಿಯಾಗಿ. ಪುಸ್ತಕವೂ ಜೀವನ ಚರಿತ್ರೆಯಂತಿರದೇ, ಆಯ್ದ ನೆನಪುಗಳ ಸಂಗ್ರಹವಾಗಿದೆ. ಹಲವು ಘಟನೆಗಳನ್ನು ಜೋಡಿಸಿ ಇದು ಇಷ್ಟು ಎನ್ನಲು ಸಾಧ್ಯವಾಗದಿದ್ದರೂ, ಅಚ್ಚಳಿಯದ ನೆನಪುಗಳು, ಅವುಗಳ ಹಿನ್ನೆಲೆ, ಘಟನೆಯ ಪ್ರಭಾವ, ಅದಕ್ಕೆ ಪ್ರತಿಕ್ರಿಯೆ ಹೀಗೆ ಹಲವಾರು ಸಂಗತಿಗಳು ಇಬ್ಬರ ವ್ಯಕ್ತಿತ್ವವನ್ನೂ ಪ್ರಚುರಪಡಿಸುತ್ತವೆ. ಹಲವೊಮ್ಮೆ ತಮ್ಮ ಅಬ್ಸರ್ವೇಶನ್ ಅನ್ನು ನಮ್ಮ ಮುಂದಿರಿಸಿ, ನಿರ್ಣಯವನ್ನು ಓದುಗರಿಗೇ ಬಿಟ್ಟಿದ್ದಾರೆ. ಸಾಹಿತ್ಯ ಲೋಕದ ಮಾತ್ಸರ್ಯ, ವಿಚಾರ ಶೂನ್ಯತೆ, ಜಾತಿವಾದ, ತತ್ವವಾದ ಹೀಗೆ ಹಲವು ವಿಷಯಗಳೂ ಸರಳವಾಗೇ ಉಲ್ಲೇಖವಾಗಿದೆ.
ಆದರೂ ತತ್ವಶಾಸ್ತ್ರದ ಕುರಿತಾದ ಹಲವು ಟಿಪ್ಪಣಿಗಳು ಬಹಳ ಆಳವಾಗಿರುವವುಗಳೂ ಸಾಮಾನ್ಯರಿಗೆ ಕೊಂಚ ಅಜೀರ್ಣವಾಗುವಂತಹವುಗಳು.

ಪುಸ್ತಕದಲ್ಲಿ ಉಲ್ಲೇಖಿಸಿದ ಈ ಕೆಲವು ವಿಚಾರಗಳು ಸ್ವಲ್ಪ ಹೆಚ್ಚು ಇಷ್ಟವಾದವು.
*ಕುವೆಂಪುರವರ ಸಾಹಿತ್ಯದ ಕೃಷಿಗೂ ಮೀರಿದ ಭಾಷಾ ಪ್ರೀತಿ.
*ವಿಚಾರ ವೈರುಧ್ಯಗಳನ್ನು ಕುವೆಂಪು ಸ್ವೀಕರಿಸುತ್ತಿದ್ದುದು.
*ರಾಷ್ಟ್ರಕವಿಯನ್ನು ತನ್ನ ಮೆಚ್ಚಿನ ತಂದೆಯನ್ನಾಗಿ, ಸಹಜ ಮನುಷ್ಯನಂತೆ ತೇಜಸ್ವಿ ತೋರಿರುವುದು.
Profile Image for Sanjay Manjunath.
201 reviews10 followers
June 28, 2023
ನಮ್ಮ ರಾಷ್ಟ್ರಕವಿ ಯಾರು ಎಂದೊಡನೆ ಇಂದಿಗೂ ಮೊದಲು ನೆನಪಾಗುವ ಹೆಸರು ಕುವೆಂಪು.

'ಮಲೆನಾಡಿನ ಚಿತ್ರಗಳು' ನಾನು ಓದಿದ ಅವರ ಮೊದಲ ಕೃತಿ. ಮಲೆಗಳಲ್ಲಿ ಮದುಮಗಳು ಇತ್ತೀಚೆಗೆ ಓದಿದ್ದು. 'ವಿಮರ್ಶೆಯ ವಿಮರ್ಶೆ' ಕೃತಿಯಲ್ಲಿ ಕುವೆಂಪು-ತೇಜಸ್ವಿಯವರ ನಡುವಿನ ಮಾತುಕತೆಯ ಅಧ್ಯಾಯದಲ್ಲಿ ಕುವೆಂಪುರವರ ವ್ಯಕ್ತಿ ಚಿತ್ರಣ ಸ್ವಲ್ಪ ಅರ್ಥವಾಗಿತ್ತು. 'ಅಣ್ಣನ ನೆನಪು' ಕೃತಿಯ ಮುಖಾಂತರ ಕುವೆಂಪುರವರಿಗಿದ್ದು ವಿಭಿನ್ನ ದೃಷ್ಟಿಕೋನಗಳು ಸಿಕ್ಕಿದಂತಾಯಿತು.

ಅಣ್ಣನ ನೆನಪು, ತೇಜಸ್ವಿಯವರು ತಂದೆ ಕುವೆಂಪು ಅವರೊಂದಿಗಿನ ಒಡನಾಟದ ಅನೇಕ ನೆನಪುಗಳನ್ನು ಸರಳವಾಗಿ ನಿರೂಪಿಸಿರುವ ಕೃತಿ.

ಸಾಹಿತ್ಯ, ರಾಜಕೀಯ, ತತ್ತ್ವಜ್ಞಾನ, ಕನ್ನಡ ಮತ್ತು ಕರ್ನಾಟಕ, ದೈವ ಭಕ್ತಿ, ಸಂಪ್ರದಾಯಗಳು, ಸಾಮಾಜಿಕ ವಿಷಯಗಳ ಬಗ್ಗೆ ಕುವೆಂಪುರವರಿಗೆ ಇದ್ದ ಅನಿಸಿಕೆಗಳನ್ನು ಕೆಲವು ಅಧ್ಯಾಯಗಳಲ್ಲಿ ತೆರೆದಿಟ್ಟಿದ್ದಾರೆ.

ಕುಟುಂಬಕ್ಕೆ ಸಂಬಂಧಪಟ್ಟ ವಿಚಾರಗಳು, ತೇಜಸ್ವಿ ಮತ್ತು ಅವರ ಗೆಳೆಯರು ಮಾಡಿದ ಮತ್ತು ಮಾಡಿಕೊಂಡ ತರ್ಲೆಗಳು, ಅವಾಂತರಗಳು ಮತ್ತು ಅವುಗಳಿಗೆ ಕುವೆಂಪುರವರ ಪ್ರತಿಕ್ರಿಯೆಗಳು ಎಲ್ಲವೂ ನವಿರಾದ ಹಾಸ್ಯದಲ್ಲಿದೆ.

ಇಷ್ಟೇ ಅಲ್ಲದೆ, ಕುವೆಂಪುರವರನ್ನು ಸಂಕಟಕ್ಕೆ ಒಡ್ಡಿದ ಪ್ರಸಂಗಗಳು, ಜನರು ಅವರನ್ನು ಕಾಣುತ್ತಿದ್ದ ರೀತಿ ಮತ್ತು ಜನರಿಂದಾಗುತ್ತಿದ್ದ ತೊಂದರೆಗಳು.. ಹೀಗೆ ಬೇರೆ-ಬೇರೆ ವಿಚಾರಗಳು ಕೂಡ ಇವೆ.

ಸಾಮಾನ್ಯ ಜನರ ದೃಷ್ಟಿಯಲ್ಲಿ ಕಾಣುತ್ತಿದ್ದ ಕುವೆಂಪುರವರ ಜೀವನ ಮತ್ತು ವಿಶಿಷ್ಟ ಮತ್ತು ವೈವಿಧ್ಯಪೂರ್ಣ ವ್ಯಕ್ತಿತ್ವ ಹೊಂದಿದ್ದ ಕುವೆಂಪು ರವರ ಜೀವನ.. ಎರಡನ್ನೂ ತೇಜಸ್ವಿರವರ ಕಣ್ಣಿನ ಮೂಲಕ ನಾವು ಓದಿ ಸವಿಯಬಹುದು. ಉತ್ತಮ ಕೃತಿ ❤️
Profile Image for Harini  S T.
28 reviews9 followers
August 3, 2021
ತೇಜಸ್ವಿಯವರ ಬರಹ ಕುತೂಹಲ ಹುಟ್ಟಿಸುವ ಜಾದುಗಾರ ಒಂದ್ಸಲ ಓದಕ್ಕೆ ಶುರು ಮಾಡಿದ್ದಾರೆ ಮುಂದೇನಾಗುತ್ತೆ ಮುಂದೇನಾಗಬಹುದು ಅನ್ನು ವಿಚಾರದಲ್ಲಿ ಬುಕ್ಕುಕೆಳಕ್ಕೆ ಇಡೋಕೆ ಮನಸ್ಸಾಗಲ್ಲ .
ಇನ್ನೂ ಅಣ್ಣನ ನೆನಪಿನಲ್ಲಿ ಬರುವ ಆಸ್ಥಾನದ ಕ್ಷೌರಿಕನ ಮೇಲೆ ಚಾಡಿ ಹೇಳುವುದು .ಕಂತ್ರಿ ನಾಯಿಂದ ಜಾತಿ ನಾಯಿ ಮಾಡೋ ಸಾಹಸಗಳು . ಕುವೆಂಪು ಅವರು ಕೂಸಿನ ಕನಸು ಕವನವನ್ನು ಓದಿ ಬೇಂದ್ರೆಯವರ ನಾಟಕ ಸಾಯೋಆಟ ಅಷ್ಟು ಜನ ಮಕ್ಕಳನ್ನು ಕೂಡಿಸಿಕೊಂಡು ಓದಿ ಹೇಳುತ್ತಿದ್ದರು .
ತೇಜಸ್ವಿಯವರು ಬಾಲ್ಯದಲ್ಲಿ' ಚಾಟರಬಿಲ್ಲು' ಮಾಡೋದಕ್ಕೆ ಹೋಗಿ ಸರಿಯಾಗಿ ಪೆಟ್ಟನ್ನು ತಿಂದದ್ದು . ಇಲಿ ಬೋನು ಉಪಯೋಗಿಸಿ ಅಳಿಲು ಹಿಡಿದಿದ್ದು . ಸೈಕಲ್ ಕಾರಣದಿಂದ ಎಂಟು ರೂಪಾಯಿ ದಂಡ ಕೊಟ್ಟಿರುವುದು ..ಹೀಗೆ ಅನೇಕ ಕಥೆಗಳು ಬರುವ ಅಣ್ಣನ ನೆನಪು ನಲ್ಲಿ ಕೊನೆಗೆ ಒಂದು ಸಣ್ಣ ನಗು ಕೊಡುತ್ತೆ , ಸಹಜವಾಗಿ ಎಲ್ಲರಿಗೂ ಓದಿದವರಿಗೆ ಅಣ್ಣನ ನೆನಪು ಅಥವಾ ಶಾಮಣ್ಣನ ನೆನಪು ಬರೆದಿದ್ದಾರೆ ಅನ್ಕೋತೀವಿ .ತೇಜಸ್ವಿ ಹಾಗೂ ಶಾಮಣ್ಣ ಸಂಗೀತಾಭ್ಯಾಸ ಈ ಕಥೆಯಲ್ಲಿ ಪ್ರಧಾನವಾಗಿದೆ ..ಅಣ್ಣನ ನೆನಪು ಕಥೆ ಹೇಳಲು ಹೊರಟರೆ ಸುಮಾರ್ ಇದೆ . ಸಮಯ ಮಾಡಿಕೊಂಡು ಓದಿ .
9 reviews1 follower
September 7, 2017
Best biography book to read and know little facts about Kuvempu, as comment given by the editor this book tells a lot about the author than Kuvempu, there is lot of humour in the book when he narrates the incident of his musical practise which I loved the most.

Most of the content in the book is about the author and his experiences rather than explaining in details about his father, there is an incident in the book which shows his love towards Kannada language and literature. Annana Nenapu can be recommended to the readers as it was the funniest book I have read so far
Profile Image for Vishwas Solagi.
17 reviews9 followers
December 19, 2020
ಊರಿಗೇ ರಾಜನಾದರೂ, ತಾಯಿಗೆ ಮಗನೇ ಎನ್ನುತ್ತಾರೆ. ಹಾಗೆಯೇ, ನಾಡಿಗೇ ರಾಷ್ಟ್ರಕವಿ ಆದರೂ, ಮಗನಿಗೆ ತಂದೆಯೇ ಅಲ್ಲವೇ? ಅದಕ್ಕೆ ಈ ಕೃತಿ ವಿಶೇಷವಾದದ್ದು.

ಇಲ್ಲಿರುವುದು ಕುವೆಂಪು ಬಗ್ಗೆ ಅವರ ಮಗ ತೇಜಸ್ವಿ ಅವರ ನೆನಪುಗಳು. ಕೇವಲ ತೇಜಸ್ವಿ ಅವರ ತಂದೆಯ ನೆನಪುಗಳ ಕುರಿತಷ್ಟೇ ಆಗಿದ್ದರೆ ಈ ಕೃತಿ ಮಹತ್ತರ ಆಗುತ್ತಿರಲಿಲ್ಲವೇನೊ. ತೇಜಸ್ವಿ ಅವರ ತಂದೆ ರಾಷ್ಟ್ರಕವಿಯೂ, ಕನ್ನಡಕ್ಕ�� ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕವಿಯೂ, ನಾಡು ಕಂಡ ಅತ್ಯಂತ ಪ್ರಖರ ಚಿಂತಕರೂ, ಅದ್ಭುತ ಅಕಾಡಿಮಿಷಿಯನ್ ಆಗಿರುವುದು ಈ ಕೃತಿ ನಮ್ಮ ನಾಡಿನ ಇತಿಹಾಸದಲ್ಲಿ ಒಂದ��� ಪ್ರಮುಖ ಸಾಂಸ್ಕೃತಿಕ ದಾಖಲೆಯಾಗಿ ಉಳಿಯುವಂತೆ ಮಾಡಿವೆ.

ಕುವೆಂಪು ನಮ್ಮ ನಾಡು ಕಂಡ ಅತೀ ಸಂಕೀರ್ಣ ವ್ಯಕ್ತಿಗಳಲ್ಲಿ ಒಬ್ಬರು ಎನ್ನುತ್ತಾರೆ ತೇಜಸ್ವಿ. ಈ ಕೃತಿ ಓದುತ್ತಾ ಅದು ನಮಗೆ ಮನದಟ್ಟಾಗುತ್ತಾ ಸಾಗುತ್ತದೆ. ಚಿಕ್ಕ ಮಕ್ಕಳ ಅತೀ ತುಂಟತನಕ್ಕೆ ಶಿಕ್ಷಿಸುವ ತಂದೆ, ಮಗನ ಬೆಳವಣಿಗೆಗೆ ಸ್ವಾತಂತ್ರ್ಯ ನೀಡುವ ತಂದೆ, ವಿಗ್ರಹ ಪೂಜೆ ವಿರೋಧಿಸಿದರೂ, ದೇವರ ಕೋಣೆಯಲ್ಲಿ ತಾಸುಗಟ್ಟಲೇ ಧ್ಯಾನಿಸುವ ವ್ಯಕ್ತಿ, ಮದುವೆಯ ಸಂಪ್ರದಾಯಗಳಿಗೆ ಮರು ವ್ಯಾಖ್ಯಾನ ಬರೆದ ಚಿಂತಕ ಎಲ್ಲರೂ ಕುವೆಂಪು ಎಂಬ ವ್ಯಕ್ತಿತ್ವದಲ್ಲಿ ಅಡಕವಾಗಿದ್ದಾರೆ. ಈ ಕೃತಿಯನ್ನು ಓದುತ್ತ ಅಂತಹ ವ್ಯಕ್ತಿತ್ವದ ಕಿರು ಪರಿಚಯ ನಮಗಾಗುತ್ತದೆ.

ತೇಜಸ್ವಿ ಅವರ ಟಿಪಿಕಲ್‌ ಬರವಣಿಗೆ ಇಲ್ಲೂ ಇದೆ. ಒಂದೆಡೆ ಹಾಸ್ಯಭರಿತ ಲೇಖನಗಳಿದ್ದರೆ, ಇನ್ನೊಂದೆಡೆ ಸಾಹಿತ್ಯ, ಸಂಸ್ಕೃತಿ,‌ ಸಮಾಜಗಳ ಬಗ್ಗೆ ಗಂಭೀರ ಚಿಂತನೆಯಿದೆ. ಈ ಎಲ್ಲ ಕಾರಣಗಳಿಗೆ ಈ ಕೃತಿ ಒಂದು ಅದ್ಭುತ ಅನುಭವವನ್ನ ನಿಮ್ಮದಾಗಿಸುತ್ತದೆ.

ಓದಿಲ್ಲದಿದ್ದರೆ ಖಂಡಿತ ಓದಿ.
Profile Image for Naresh Bhat.
10 reviews4 followers
April 21, 2018
'ಅಣ್ಣನ ನೆನಪು' ಒಂಥರಾ ಡಬಲ್ ಧಮಾಕ! ಒಂದೇ ಹೊತ್ತಿಗೆಯಿಂದ ಕುವೆಂಪು ಮತ್ತು ತೇಜಸ್ವಿ ಇಬ್ರ ಬಗ್ಗೆನೂ ಹಲವಾರು ವಿಷ್ಯಗಳು ಗೊತ್ತಾಗತ್ತೆ. ಕುವೆಂಪು ಅವ್ರ ತತ್ವವನ್ನ, ಜೀವನದ ಧ್ಯೇಯವನ್ನ ತೇಜಸ್ವಿ ಮೇಲೆ ಹೇರಿಕೆ ಮಾಡ್ದೇ ಇದ್ದಿದ್ರಿಂದ್ಲೇ ತೇಜಸ್ವಿ, 'ತೇಜಸ್ವಿ' ಆಗಿದ್ದು ಅಂತ ಗೊತ್ತಾಗತ್ತೆ. ಕುವೆಂಪು ಅವ್ರ ತತ್ವವನ್ನ ಪಾಲಿಸೊ ಬದ್ಲು ನಾವು ಹೇಗೆ ಅವ್ರನ್ನ ಮಾತ್ರ ಆಚರಿಸ್ತಾ ಇದಿವಿ ಅನ್ನೋ ವಿಷ್ಯ ಬಹಳ ಕಾಡೋಕೆ ಶುರು ಆಗ್ತಾ ಹೊತ್ತಿಗೆ ಮುಗ್ಯತ್ತೆ. ಮಿಸ್ ಮಾಡ್ದೆ ಓದಿ :)
2 reviews1 follower
August 19, 2014
Really nice book, if you written any apology letters during collage days, done lot of tarles read this book.
when ever i feel bored up, i read it once again.
Profile Image for J Pooja.
37 reviews2 followers
August 11, 2023
I liked the memoir, Tejaswi's perspective of Kuvempu
Profile Image for Bhuvan N.
74 reviews26 followers
November 9, 2025
3.5/5

It has everything you expect in a good memoir- childhood memories, humour, nostalgia, coming of age, & the serious topics. When it's good, it's really good. 2/3rds of the book is 5/5. Especially the chapters where Kuvempu is featured prominently or Tejaswi is talking about his experiences & explorations.

Kuvempu explaining the unique sounds of a language using T S Eliot's Auditory Imagination is a major highlight of the book. That chapter should be translated into English/Hindi & thrown at the face of every "National Language" Idiot who calls for a "link language" in the name of "language is only for communication".

As a fellow photographer, I can relate to his struggles to get good portraits out of his father. (A photograph is of someone, a portrait is about someone). You can watch this Sean Tucker Video to know more about the Churchill portrait by Yousuf Karsh (& what it means to be to be a portrait photographer) that Tejaswi talks about in the book.

Coming to the parts that are meh....

Tejaswi's cognitive dissonance is palpable around the fact that his father is a believer in Hindu Dharma. Whenever this comes up, Tejaswi is either playing to the galleries or trying to escape from his father's shadow.

Finally, comes the mental gymnastics he does for his man-crush, Hindi Chauvinist Lohia (Read the introduction to Abachurina Post Office for more of this blind admiration). You don't need the advantage of hindsight to see through the flaws & contradictions in the recipes of this Lohia fellow. I don't know if Tejaswi overcame this blindspot in his later years, but it's glaring for someone with a reputation of being "rational".
28 reviews
June 16, 2024
ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಕುವೆಂಪು ಮತ್ತು ರಾಜ್ ಕುಮಾರ್ ಅವರು ನೀಡಿರುವ ಕೊಡುಗೆ ಅನನ್ಯ ಹಾಗೂ ಅಗಾಧ. ಇವರಿಬ್ಬರನ್ನು ಶತಮಾನದ ಕನ್ನಡದ ವ್ಯಕ್ತಿಗಳೆಂದು ಕರೆದರೆ ಅತಿಶಯೋಕ್ತಿ ಏನಿಲ್ಲಾ.

ಈ ಕೃತಿಯನ್ನು ಕುವೆಂಪು ಅವರ ಆತ್ಮಕತೆ ಅನ್ನುವುದಕ್ಕಿಂತ ಅವರ ನೆನಪಿನ ಆಯ್ದ ಬರಹಗಳ ಎನ್ನುವುದು ಸೂಕ್ತ. ಕುವೆಂಪು ಅವರನ್ನು ಒಬ್ಬ ಶ್ರೇಷ್ಠ ಬರಹಗಾರನಾಗಿ ಅಲ್ಲದೆ ಒಬ್ಬ ಸಾಮಾನ್ಯ ತಂದೆಯಾಗಿ ಅವರನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ.

ಈ ಪುಸ್ತಕವನ್ನು ಓದುವಾಗ ಕುವೆಂಪು ಅವರಿಗಿಂತಲೂ ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಕತೆಗಳೇ ಹೆಚ್ಚು ಇದೆ ಮತ್ತು ಇಷ್ಟವಾಗುತ್ತ ಹೋಗುತ್ತದೆ. ತೇಜಸ್ವಿ ಅವರು ಯಾವುದೇ ಯಾವುದೇ ಸಿದ್ಧ ಕಟ್ಟು ಪಾಡುಗಳಿಗೆ ಸಿಲುಕದೆ ತಮ್ಮಿಷ್ಟದಂತೆ ಬರೆಯುವ ಬರಹಗಾರ ಅದನ್ನು ಇಲ್ಲಿ ಕೂಡ ಕಾಣಬಹುದು.

ಕುವೆಂಪು ಅವರನ್ನು ಕವಿಯಾಗಿ, ಬರಹಗಾರನಾಗಿ ಅಲ್ಲದೆ ಅವರು ಕನ್ನಡದ ಬಗ್ಗೆ ಅವರ ಅಪಾರ ಅಭಿಮಾನ ಹಾಗೂ ಸಮಾಜದಲ್ಲಿ ಇರುವಂತಹ ಅನಿಷ್ಟ ಪದ್ದತಿಗಳಾದ ಮೂಡಚಾರಣೆ ಹಾಗೂ ಜಾತಿ ಪದ್ಧತಿಯ ಬಗ್ಗೆ ಕುವೆಂಪು ಅವರಿಗೆ ಇರುವ ಸ್ಪಷ್ಟ ನಿಲುವು ಮತ್ತು ಹೋರಾಟವನ್ನು ಚೆನ್ನಾಗಿ ವಿವರಿಸಿದ್ದಾರೆ. ಕುವೆಂಪು ಅವರ ದಾರ್ಶನಿಕತೆ ಹಾಗೂ ತತ್ವ ಶಾಸ್ತ್ರದ ಒಲವು ಓದುವಾಗ ಚಕಿತಗೊಳಿಸುತ್ತದೆ, ಕುವೆಂಪು ಹಾಗೂ ತೇಜಸ್ವಿ ನಡುವಿನ ಈ ವಿಷಯಗಳ ಚರ್ಚೆ ಓದುಗರನ್ನು ಚಿಂತನೆಗೆ ತಳ್ಳುತ್ತವೆ.

ಇನ್ನು ತೇಜಸ್ವಿಯವರ ಕುರಿತು ಓದಿದಾಗ ಅವರು ವಿಭಿನ್ನ ವ್ಯಕ್ತಿಯಾಗಿ ಕಾಣಿಸುತ್ತಾರೆ. SSLC ಪರೀಕ್ಷೆಯಲ್ಲಿ ಮೂರು ಬಾರಿ ಫೇಲಾಗಿ ನಂತರ ಪದವಿಯಲ್ಲಿ ಇಂಗ್ಲೀಷ್ ಎಕ್ಸಾಮ್ ನಲ್ಲಿ He ಬದಲು hi, she ಬದಲು shi ಬರೆದು ಹಲವಾರು ಬರೆದು ಫೇಲಾದದ್ದನ್ನು ಸ್ವಾರಸ್ಯಕರವಾಗಿ ತಿಳಿಸಿದ್ದಾರೆ. ತೇಜಸ್ವಿಯವರು ಬರಹಗಾರ ಎನ್ನುವುದಕ್ಕಿಂತ ಸಂಗೀತ, ಫೋಟೋಗ್ರಫಿ, ಕೃಷಿ, ಚಳುವಳಿ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ಅವರು ಜೀವನವನ್ನು ಜೀವಿಸಿದ್ದಾರೆ ಅನಿಸುತ್ತದೆ.

ಕಡಿದಾಳ್ ಶಾಮಣ್ಣ ಅವರ ಬಗ್ಗೆ ವಿಷಯಗಳು ಅಚ್ಚರಿ ಮೂಡಿಸುವುದರ ಜೊತೆಗೆ ಈ ರೀತಿ ವ್ಯಕ್ತಿ ಇದ್ದರ ಅಂತ ಅನಿಸಿದರೆ ತಪ್ಪೇನಿಲ್ಲ. ತೇಜಸ್ವಿ ಹಾಗೂ ಶಾಮಣ್ಣ ಅವರ ತರಲೆಗಳು ಹಾಸ್ಯ ಬರಹಕ್ಕಿಂತ ಹೆಚ್ಚು ನಗೆ ತರಿಸುತ್ತವೆ.

ಸಂಪೂರ್ಣ ಕುವೆಂಪು ಅವರ ಬಗ್ಗೆ ಓದಬೇಕು ಅನಿಸಿದರೆ ಅವರ ಆತ್ಮ ಕಥನ "ನೆನಪಿನ ದೋಣಿಯಲಿ" ಓದಿ, ಕುವೆಂಪು ಹಾಗೂ ತೇಜಸ್ವಿ ಇಬ್ಬರ ಬಗ್ಗೆಯೂ ಆಸಕ್ತಿ ಇದ್ದರೆ ಈ ಕೃತಿ ಓದಬಹುದು.
Profile Image for mahesh.
271 reviews26 followers
October 25, 2020
It's not a biography of KUVEMPU.

Poornachandra tejaswi has tried to serve as the significant moment of Kuvempu in his life. By the end of this book, you can see Tejswai has tried very hard to fit Kuvempu into his framework but he fails every time with hatred towards Sanatan Dharma. I haven't read the works of Kuvempu yet so it's very wrong to give an opinion based on Tejaswi's biased viewpoint.

Apart from the biased idea about society and particular community, Book comes out well with the fusion of freedom of expression and lucidity. He has cultivated a story around Kuvempu from childhood to adulthood. Throughout the book, Kuvempu treated Tejaswi as friend, and never tried to restrain him with any sort of conditioning. Kuvempu allowed Tejaswi to blossom as a wildflower, it might be the reason why the Tejaswi writing style is different than Kuvempu's writings.

There are a few chapters that require extra attention because they present you with the Kuvempu viewpoint about marriage, the Kannada language, and society.

There are so many things to write, but I don't want to add spoilers. Try to read without any prejudice and pre-conditioning, definitely book offer the joy in a unique way.
Profile Image for Santhosh Kumar .
23 reviews
April 9, 2024
ವಿಶ್ಲೇಷಣೆ ಮತ್ತು ಸಂಶ್ಲೇಷಣೆ ಕುರಿತ ಅಧ್ಯಾಯದೊಂದಿಗೆ ಆರಂಭವಾಗುವ ಪುಸ್ತಕದಲ್ಲಿ ತೇಜಸ್ವಿಯವರು ತಮ್ಮ ನೆನಪಿನ ಬುತ್ತಿಯಿಂದ ಹೆಕ್ಕಿ ತೆಗೆದಿರುವ ಘಟನೆಗಳ ಮೂಲಕ ಕುವೆಂಪು ಅವರ ಕುರಿತು ಒಂದು ಚಿತ್ರವನ್ನು ಕಟ್ಟಿ ಕೊಡುತ್ತಾರೆ .

ಇದು ಕುವೆಂಪು ಅವರ ಸಂಶ್ಲೇಷಣಾತ್ಮಕ ಚಿತ್ರ ಅಂತ ಹೇಳುವ ಅಗತ್ಯವಿಲ್ಲ ಎಂದು ಕೊಳ್ಳುತ್ತೇನೆ.

"ಫೋಟೋಗ್ರಫಿ ಯನ್ನು ಗಂಭೀರ ಕಲಾಭಿವ್ಯಕ್ತಿ ಎಂದು ಪರಿಗಣಿಸಿದವನು ಆ ಕಲಾಮಾಧ್ಯಮದ ಒಂದು ಅಂಶವನ್ನು ಗಮನಿಸಿರಬಹುದು. ಅದರಲ್ಲಿ ಎಂದೂ ಕಲಾವಿದ ಕಥಾನಾಯಕನಾಗಲು ಸಾಧ್ಯವಿಲ್ಲ. ಏಕೆಂದರೆ ಅದರಲ್ಲಿ ಕಲಾವಿದ ಕ್ಯಾಮರದ ಹಿಂದೆಯೇ ಇರುವುದು ಅನಿವಾರ್ಯ. ಒಂದು ದೃಶ್ಯವನ್ನೋ ಘಟನೆಯನ್ನೂ ಪರಿಸರವನ್ನೋ ವ್ಯಾಖ್ಯಾನಿಸುವ ಲ್ಲಿ ಮಾತ್ರ ಕಲಾವಿದನ ವ್ಯಕ್ತಿತ್ವ ಇರುತ್ತದೆಯೇ ಹೊರತು ಅವನೆಂದೂ ಪಾತ್ರಧಾರಿಯಾಗಿ ಆ ಕಲಾಕೃತಿಯ ನಾಯಕನಾಗಲು ಸಾಧ್ಯವಿಲ್ಲ. ಈ ವಿಚಿತ್ರ ಶಿಸ್ತಿನಿಂದಲೆ ನನ್ನ ಬಹುಪಾಲು ಬರವಣಿಗೆಯಲ್ಲಿ ಕತೆಗಾರ ನಾಯಕನಾಗದೆ ಉಳಿಯುತ್ತನೆಂಡು ಅನ್ನಿಸುತ್ತದೆ"

ಪುಸ್ತಕದಲ್ಲಿ ಕುವೆಂಪುಗಿಂತ ಹೆಚ್ಚಾಗಿ ಬೇರೆಯವದ ಬಗ್ಗೆ ಅಥವಾ ಸಂಬಂಧವಿಲ್ಲದ ಘಟನೆಗಳೇ ಇದೆ ಅನ್ನಿಸಿದರೆ ಅದಕ್ಕೆ ತೇಜಸ್ವಿಯವರ ಈ ವಾಕ್ಯಗಳು ಉತ್ತರವಾಗಬಹುದು. ಇಡೀ ಪುಸ್ತಕ ದಲ್ಲಿ ತೇಜಸ್ವಿ ಒಬ್ಬ ಫೋಟೋಗ್ರಾಫರ್/ಚಿತ್ರ ಕಾರನಂತೆ ವ್ಯಕ್ತಿತ್ವ ಕಟ್ಟಿಕೊಟ್ಟಿದ್ದಾರೆ. ತಾಳ್ಮೆಯಿಂದ ಗಮನಿಸಬೇಕು ಅಷ್ಟೇ !
30 reviews1 follower
January 26, 2025
ಕುವೆಂಪು ಎಂದರೆ ಮಹಾಕಾವ್ಯ "ಶ್ರೀ ರಾಮಾಯಣ ದರ್ಶನಂ" ಬರೆದ ಮಹಾಕವಿ, ಅಖಂಡ ಕರ್ನಾಟಕ ಕಟ್ಟಬೇಕೆಂದು ಹೋರಾಡಿದ ಅಪ್ಪಟ ಕನ್ನಡಿಗ ಎಂದಷ್ಟೇ ನಮ್ಮ ಕಲ್ಪನೆ.

ಇದೊಂದು ಗಂಭೀರವಾದ ಪುಸ್ತಕವೆಂದು ನಾನು ಭಾವಿಸಿದ್ದೆ, ಆದರೆ ಈ ಪುಸ್ತಕ, ಮಹಾಕವಿ ಕುವೆಂಪು ಅವರನ್ನು ಸಾಮಾನ್ಯರಲ್ಲೊಬ್ಬರನ್ನಾಗಿ ತೋರಿಸುವ ಛಾಯಾಚಿತ್ರವಾಗಿದೆ.

ತೇಜಸ್ವಿ ಅವರ ಅವಾಂತರಗಳು ಅವರ ಉಡಾಫೆ ಮಾತುಗಳು, ಅದಕ್ಕೆ ಕುವೆಂಪು ಅವರ ಟೀಕೆಗಳು ಅವರದೇ ಆದ ಶೈಲಿಯಲ್ಲಿ ಹೇಳಿದ ಜೀವನ ಪಾಠಗಳನ್ನು ತೋರುವ ಪ್ರತಿಬಿಂಬವಾಗಿದೆ.

ಈ ಪುಸ್ತಕ ಮಹಾಕವಿ ಕುವೆಂಪು ಅವರ ಬಗ್ಗೆ ಇರುವ ನಮ್ಮ ಎಷ್ಟೋ ಭ್ರಮೆಗಳನ್ನು ಸುಳ್ಳಾಗಿಸುತ್ತದೆ. ಕುವೆಂಪುರವರ ವ್ಯಕ್ತಿತ್ವ ಮತ್ತು ಸಿದ್ಧಾಂತಗಳನ್ನು ತೋರಿಸುವ, ಅಪ್ಪನ ಅಭಿಮಾನಿಯಾಗಿ ಮಗ ಮಾಡಿರುವ ಒಂದು ಸಣ್ಣ ಪ್ರಯತ್ನವೇ "ಅಣ್ಣನ ನೆನಪು".
25 reviews
January 9, 2024
ತೇಜಸ್ವಿ ಅವರು ತಮ್ಮ ಹುಟ್ಟಿನಿಂದ, ಕುವೆಂಪು ಅವರ ಕೊನೆ ಉಸಿರಿನವರೆಗೂ ತಾವು ಕಂಡಾಂತ ತಮ್ಮ ತಂದೆ ಕುವೆಂಪು ಅವರ ನೆನಪುಗಳನ್ನು, ಬಹುಮುಖ್ಯ ಘಟನೆಯನ್ನು, ತಮ್ಮ ಮೇಲೆ ಬೀರಿದ ಪರಿಣಾಮ ಇಲ್ಲಿ ಚಿತ್ರಿಸಿದ್ದಾರೆ. ಅದಲ್ಲದೆ ಕುವೆಂಪು ಅವರ ಸಮಯದಲ್ಲಿ ಕುವೆಂಪು ಅವರು ಅನುಭವಿಸಿದ ದೊರಣೆ, ಕಷ್ಟ, ವಿರೋಧ ವಿಮರ್ಶೆ ಬಗ್ಗೆ ಹೇಳಿದ್ದಾರೆ. ತೇಜಸ್ವಿ ಅವರು ತಮ್ಮ ಕೆಲವೊಂದು ನೆನಪುಗಳನ್ನು ಸಹಾ ಮೆಲುಕು ಹಾಕಿದ್ದರೆ. ಇಡೀ ಪುಸ್ತಕವನ್ನು ಒಂದು ಕಾದಂಬರಿಯ ತರಹ ಎಲ್ಲ ನೆನಪುಗಳನ್ನು ಮೆಲುಕು ಹಾಕಿರುವುದು ತೇಜಸ್ವಿ ಅವರ ವಿಶೇಷ. ಕುವೆಂಪು ಅವರ ಇನ್ನೊಂದು ದೃಷ್ಟಿಕೋನದಿಂದ ನೋಡ ಬಯಸುವರು ಇದನ್ನು ಕಂಡಿತ ಓದಿ.
1 review
August 28, 2024
The narrative style is intimate, blending nostalgia with insightful observations. Tejasvi's writing captures the essence of the bond between a father and son, showing how Kuvempu's ideals and values shaped his own worldview. The book is more than just a memoir; it's a reflection on life, philosophy, and the cultural heritage of Karnataka. The anecdotes are sometimes humorous, sometimes poignant, but always sincere and heartfelt.
1 review
May 17, 2024
ಅತೀ ಸುಂದರವಾದ ಬರವಣಿಗೆಯ ಮೂಲಕ ಈಗಿನ ಯುವಜನರಲ್ಲಿ ಕನ್ನಡವೆಂದರೆ ಅಸಡ್ಡೆ ತೋರುವ ಜನಾಂಗಕ್ಕೆ ರಸದೌತಣ ಎಂದರೆ 'ಅಣ್ಣನ ನೆನಪು'. ನೆನಪಿನ ಬುತ್ತಿ ಎನ್ನುವುದಕ್ಕಿಂತ ಒಂದು ಕಾದಂಬರಿ ಅವತಾರದ ಚಿಕ್ಕ ಮೂರ್ತಿ ಅಥವಾ ಪ್ರಬಂಧ ಸ್ವರೂಪಿ ಎನ್ನಬಹುದು. ಕುವೆಂಪು ಮತ್ತು ತೇಜಸ್ವಿ ಇಲ್ಲದೆ ಕನ್ನಡ ಸಾಹಿತ್ಯ ಎಷ್ಟು ಕಳೆದುಕೊಂಡಿದೆ ಎಂದು ಯೋಚಿಸಿದರೆ ಮನಸ್ಸಿಗೆ ನೋವುಂಟು ಮಾಡುವುದು ಸಹಜ...
Profile Image for Bharath Manchashetty.
134 reviews3 followers
December 22, 2025
ಈ ಕೃತಿ ಕುವೆಂಪುರವರ ಜೊತೆಸೇರಿ ತೇಜಸ್ವಿಯವರ ಆತ್ಮಕಥೆಯಂತೆ ಕೂಡ ರೂಪ ಪಡೆದಿದೆ. ಕೃತಿಯ ಉದ್ದಕ್ಕೂ ಇರುವ ಹಾಸ್ಯಪ್ರಜ್ಞೆಗೆ ಅದೇಷ್ಟುಬಾರಿ ನಕ್ಕಿದ್ದೆನೋ ಲೆಕ್ಕವಿಲ್ಲ.

ಸಲೀಸಾಗಿ ಓದಿಸಿಕೊಳ್ಳುವ ಕೃತಿಯನ್ನು ಬರೆದಿರುವ ತೇಜಸ್ವಿಯರ ಸೃಜನಶೀಲತೆ ಅನನ್ಯ ಮತ್ತು ಅಸಾಧಾರಣ ಎಂದರೆ ತಪ್ಪಾಗಲಾರದು.
2 reviews
August 9, 2020
i just enjoyed while i was reading this book. it's awesome. Kuvempu, kadidala shamanna, Tejasvi.🙏
1 review
October 23, 2020
ಇದು ಪೂರ್ಣಚಂದ್ರ ತೇಜಸ್ವಿಯವರು ಕಂಡ ಕುವೆಂಪು ಕಥೆಯಾಗಿದೆ
Displaying 1 - 30 of 52 reviews

Can't find what you're looking for?

Get help and learn more about the design.