Jump to ratings and reviews
Rate this book

ಸಾಕ್ಷಿ [Saakshi]

Rate this book
Indian Fiction

Overcome by the abiding guilt of having perjured himself in a murder trial, a village elder commits suicide. Yama, the God of death and righteousness, commands him to return to earth in spiritual form to witness but not to intervene in the subsequent events. The village elder observes the other characters as they are confronted by difficult decisions and revelations which cause them look inward and attempt

324 pages, Paperback

First published January 1, 1986

46 people are currently reading
609 people want to read

About the author

S.L. Bhyrappa

50 books1,061 followers
Dr S.L. Bhyrappa is a litterateur par excellence. He writes in the south Indian language, Kannada, and has been the bestselling novelist for over 25 years now. His novels are widely translated to pan Indian languages. He is the bestselling novelist in Marathi over the past decade and is among the top-five bestselling authors in Hindi. He is a conscious artist that depicts fundamental human emotions in his novels. In addition to his profound knowledge of Indian philosophical and cultural traditions, Professor Bhyrappa has since his childhood had intense personal experiences in both rural and urban milieu. Consequently, his characters are deeply rooted in Indian soil. Seminars have been and are being held on his novels, and volumes of literary criticism have been published on his works.

His books have found their way to the curriculum of undergraduate and postgraduate degree courses of the universities in the state of Karnataka, and have been the subject of about 20 PhD dissertations. He has penned 24 novels and four volumes of literary criticism and books on aesthetics, social issues and culture. Most of his novels are translated into almost all the Indian languages and six into English. He has served as a Prof. of Philosophy over three decades at NCERT.

Dr Bhyrappa is an avid listener of both Indian and Western classical music and has a keen eye for Art. Travelling has been his paasion since childhood and he has travelled across the globe touching the glaciers of poles, forests of Amazon, deserts of Africa, bustling cities of Europe and the United States. He has trekked in the Alps, the Rockies, Andes and in Fujiama, but the Himalayas remain his greatest passion.

Academic Publications in English
--------------------------------------
Values in Modern Indian Educational Thought, 1968 (New Delhi: National Council of Educational Research and Training)
Truth & Beauty: A Study in Correlations, 1964 (Baroda: M. S. University Press)
20 Research Papers published in various Journals like Indian Philosophical Quarterly, Darshana International, Journal of University of Baroda

Research and Fellowship
----------------------------
National Research Professor, Government of India, 2014
One of the five members of the Indian Literary Delegation that visited China on invitation by the Government of China, 1992
Ford Foundation Award to visit the USA to study the cultural problems of Indian immigrants to the USA, 1983
British Council Fellowship tenured at the School of Education, University of London, 1977

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
137 (40%)
4 stars
138 (40%)
3 stars
52 (15%)
2 stars
9 (2%)
1 star
6 (1%)
Displaying 1 - 30 of 55 reviews
Profile Image for Ashish Iyer.
866 reviews625 followers
February 5, 2021
This was my 16th book of Bhyrappa, i have read. Those who are very closed to me know why I love his books. His each and every books are different from other book of his. Being a non-Kannadiga, i always look forward for his book whether it is available in Hindi or English.

Saakshi literally means to see, to observe or to witness. This book question the roots of human values. It question whether truth is the basis of principle or vice versa. Saakshi uses the Puranas and Vedanta as well as Gandhian philosophy to discuss the meaning of truth and its distortions through greed, sexuality and desire. It explores the idea of what happens after death in the context of our Puranas and Upanishad.

Even readers were perplex by the introduction of Preta, Yamadharma, Yamaloka and Chitraguptas while those who have read his Parva will find it quite contrasting. Parva book was full of rationalised and humanised. This is how Bhyrappa is, he is known for exploring different levels of truth. Intellectual freedom can be nurtured by the strong foundations laid in the teachings of rich Indian culture and values.

In between i felt this story could have shortened by 50 or 60 pages. Overall its a terrific book. I enjoyed it. This English translation too has been done with great care and finesse without twisting losing any of the original flavor. Hope Bhyrappa ji keeps on writing.
Profile Image for Ahtims.
1,661 reviews124 followers
March 18, 2018
Bhyrappa is a recently discovered Kannada regional author, who is quite famous in his state. I loved his previous works like Parva ( though only half read), Aavarana and Mandra, and jumped in at the opportunity to get hold of this beautiful hardback at almost half it's MRP in an Amazon sale.
It helped that Gorab, my friend and buddy in co reading Indian authors too bought it the same day , as did Sri... another close GR friend.
We decided upon a BR... And started off with gusto.
The beginning was intriguing.. all about the preta ( roughly translated in English as the eternal soul) of Parameshwarayya, a Gandhian principled man who committed suicide, and who meets the Lord of death , Yama in the NETHERWORLD and being asked to tell the truth as to why he committed suicide, starts upon his tale . He had committed perjury to save Manjayya, his estranged son in law from a murder case and this troubled his conscience in more ways than one..

Then unveils a story of human lust, greed, good deeds, bad deeds, tanled interpersonal relations, especially based on sexuality.

Parameshwarayya's wife drowned under mysterious circumstances when his youngest daughter was just a kid. This girl Savitri later grows up to be a beauty and is ensnared by Manjayya.

Manjayya is the local Lothario, an unprincipled scoundrel, who can kill or hurt at his whims and as the story unfolds turns out to.be a total sociopath as well as a sexual predator who preys upon all kinds of women, and is bent upon considering women who don't succumb to him as challenge to.his manhood.
He is the bad to all the goods shown in the story.
Savitri had an elder sister who died leaving behind her husband and son. The husband Satyappa turns out to be one of the best characters in the book. Neither saccharine nor bitter coated. He is well balanced and provides great support to Savitri, who has left Manjayya early in the marriage and is now staying alone, and to her brothers family.

There is much more to this book. Lots of introspection , justification, acceptance.

There are also minor characters who.will remain in my memory for long. Sarojakshi and Lakku, two other paramour of Manjayya are mentionworthy .

There are certain flaws in the book.. timeline cannot be determined properly as there were contradicting inflation rates, grammar was atrocious in places ( lied down is used extensively for lay down ).. and many tumultous incidences occurred, one atop the other.

Despite all This, I enjoyed the read.

thank you.. Gorab, Aravind and Sri... for reading along.
Profile Image for Abhi.
89 reviews18 followers
January 14, 2022
||• ಸಾಕ್ಷಿ •||

ಇದು ನನ್ನ ಭೈರಪ್ಪನವರ ಹದಿನಾರನೇ‌ ಪುಸ್ತಕ!!! ಬಹುವಾಗಿ ಕಾಡಿದ ಕಾಡುತ್ತಿರುವ ಪುಸ್ತಕ.‌ ಈ‌ ಪುಸ್ತಕವು ಶ್ರೀಯುತರ ಕಲಾತ್ಮಕತೆಗೆ ಹಿಡಿದ ಕೈಗನ್ನಡಿ. ಡಿ.ವಿ.ಗುಂಡಪ್ಪನವರು "ಬಾಳಿಗೊಂದು ನಂಬಿಕೆ" ಪುಸ್ತಕದಲ್ಲಿ ನಾವು ಮಾಡುವ ಪ್ರತಿಯೊಂದು ಕರ್ಮ ಅಥವಾ ಕಾರ್ಯವು ಅಂತ್ಯದಲ್ಲಿ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷದೆಡೆಗೆ ಸಾಗುತ್ತದೆ ಎಂದು ಹೇಳುತ್ತಾರೆ. ಓದುಗನು ಸೂಕ್ಷ್ಮಮತಿಯಾಗಿ ಆ ಮಾತನ್ನು ವಿಶ್ಲೇಷಿಸಿದರೆ ಅದು ಆತನ ಅಂತಃ ಸಾಕ್ಷಿಯನ್ನು ಅಲುಗಾಡಿಸಬಲ್ಲದು. ತನ್ನ ಪ್ರತಿ ಕರ್ಮವೂ ಒಂದಲ್ಲ‌‌ ಇನ್ನೊಂದು ಪುರುಷಾರ್ಥದೆಡೆಗೆ ನಿರ್ದೇಶನಗೊಳ್ಳುವುದನ್ನು ಕಾಣಬಹುದು. ಹಾಗೇ ನಮ್ಮ ಅನುಭವಕ್ಕೆ ಒಳಪಟ್ಟ ಒಂದು ಅಪರೂಪವಾದ ವಿದ್ಯಮಾನವು ಪುಸ್ತಕರೂಪ ಹೊಂದಿದರೆ ಅದು ಸಾಕ್ಷಿಯಂತಿರುತ್ತದೆ.

ಸಮಾರಂಭವೊಂದರಲ್ಲಿ ಶ್ರೀ ಭೈರಪ್ಪನವರು ತಮ್ಮ ನೆಚ್ಚಿನ ಪುಸ್ತಕದ ಬಗ್ಗೆ ಕೇಳಿದಾಗ ಸಾಕ್ಷಿ ಮತ್ತು ಪರ್ವ ಎಂದು ಹೇಳಿದ್ದರು. ಎರಡೂ ಪುಸ್ತಕಗಳ ಆಳಕ್ಕಿಳಿದ ಮೇಲೆ ಒಬ್ಬ ಲೇಖಕನ ಕಲ್ಪನಾ ಶಕ್ತಿ ಮತ್ತು ಸೃಜನಶೀಲ ಮನೋಭಾವ ಉನ್ನತ ಸ್ಥಿತಿಯನ್ನು ತಲುಪದ ಹೊರತು ಈ ರೀತಿಯ ಕಾದಂಬರಿ ‌ಬರೆಯಲು ಸಾಧ್ಯವೇ ಇಲ್ಲ ಅನಿಸಿದ್ದಂತೂ ಸುಳ್ಳಲ್ಲ. ಸಾಕ್ಷಿ ಪುಸ್ತಕದ ಮೊದಲ ಅಧ್ಯಾಯದಲ್ಲಿ ಅಂಥದ್ದೊಂದು ಅಭೂತಪೂರ್ವ ಅನುಭವಕ್ಕೆ ಓದುಗ ಒಳಪಡುತ್ತಾನೆ. "ಲೈಫ್ ಆಫ್ಟರ್ ಡೆತ್" ಕುರಿತಾದ ತನ್ನ ನಂಬಿಕೆಗಳನ್ನು ಪುನರ್ಮನನ‌ ಮಾಡಿಕೊಂಡು ಕಾದಂಬರಿಗಿಳಿಯುತ್ತೇವೆ.

ಭೈರಪ್ಪನವರ ಪುಸ್ತಕಗಳಲ್ಲಿ ಎರಡು ಧ್ರುವಗಳ‌ ಅರ್ಥಾತ್ ವ್ಯಕ್ತಿಗತ ಮೌಲ್ಯಗಳ ನಡುವೆ ಸಂಘರ್ಷಗಳು ಕಂಡುಬರುವುದು ಸಾಮಾನ್ಯ. ಎರಡು ಪಾತ್ರಗಳನ್ನು ಸಮರ್ಥವಾಗಿ ಚಿತ್ರಿಸಿ ನಂತರ ತಪ್ಪು ಒಪ್ಪುಗಳನ್ನು ಓದುಗನ ನಂಬುಗೆಯ ಅಂಗಳಕ್ಕೆಸೆಯುವುದೂ ಸಹ. ಅಂತೆಯೇ ಈ ಪುಸ್ತಕದಲ್ಲೂ ಎರಡು ನಂಬಿಕೆಗಳು ತಮ್ಮನ್ನು ತಾವು ಸಲುಹಿಕೊಳ್ಳುವುದು, ಒಬ್ಬರಿಂದ ಮತ್ತೊಬ್ಬರು ಪ್ರಭಾವಿತರಾಗುವುದು, ಸತ್ಯ, ಲಂಪಟತ್ವ ಮತ್ತು ಸಂತಸ‌ಗಳ ನಡುವೆ ಇರುವ ಸಣ್ಣ ಗೆರೆ, ಹೀಗೆ ಹಲವಾರು ಮಜಲುಗಳಲ್ಲಿ ಪುಸ್ತಕ ಓದುಗರನ್ನು ತನ್ನವರನ್ನಾಗಿಸಿಕೊಳ್ಳುತ್ತದೆ.

ಸಾಕ್ಷಿ ಪುಸ್ತಕವನ್ನು ಓದುತ್ತಾ ಸಾಗಿದಂತೆ ಪಾತ್ರಗಳೊಂದಿಗೆ ಪಾತ್ರಗಳು ಬೆಸೆದುಕೊಳ್ಳುತ್ತಾ ಹೋಗುತ್ತವೆ ಮತ್ತು ಅದರ ಅಂತರಂಗವು ಅನಾವರಣಗೊಳ್ಳುತ್ತಾ ಹೋಗುತ್ತದೆ. ಇದು ಓದುಗರಿಗೆ ತಮ್ಮ ಅಂತಃ ಪ್ರಜ್ಞೆಯನ್ನು ಜಾಗೃತಗೊಳ್ಳುವಂತೆ ಮಾಡಬಲ್ಲದು. ಪ್ರಾಯಶಃ ಪುಸ್ತಕದ ಆಶಯ ಕೂಡ ಅದೇ ಇರಬಹುದೇನೋ.‌ ಒಟ್ಟಿನಲ್ಲಿ ನಮ್ಮತನವನ್ನು ನಮಗೆ ಸಾಕ್ಷಾತ್ಕಾರಗೊಳಿಸಿ ನಮ್ಮ ಮೌಲ್ಯಗಳಿಗೊಂದು ಮಾಪನ ನೀಡಿ ಉತ್ತಮರನ್ನಾಗಿಸುವಲ್ಲಿ ಸಾಕ್ಷಿಯು ಯಶಸ್ವಿಯಾಗಿದೆ.

ಅತಿ ಅಮೃತಂ ವಿಷಂ ಎನ್ನುತ್ತಾರೆ. ನನಗಂತೂ "ದಿ ಆರ್ಟ್ ಆಫ್ ನೋಯಿಂಗ್ ಹೌ ಮಚ್ ಇಸ್ ಟೂ ಮಚ್ ಇಸ್ ಆ್ಯನ್ ಅನ್‌ರಿಸಾಲ್ವ್ಡ್ ಮಿಸ್ಟರಿ". ಇಂದ್ರಿಯ ನಿಗ್ರಹ ಮತ್ತು ದೈಹಿಕ ವಾಂಛೆಗಳ ನಡುವೆ ಸಂತುಲನ ಏರ್ಪಡಿಸಿಕೊಳ್ಳುವುದು ಕೂಡ ಕಷ್ಟಕರವೇ. ಲೋಲುಪತೆ, ಅವಿವೇಕ ಕಾಮ, ಆದರ್ಶ, ವಾಸ್ತವ, ಪುಣ್ಯ, ಪಾಪ,‌ ಲಂಪಟತನ, ಲೋಭ, ಮೋಹ, ಜಿಪುಣತನಗಳೆಲ್ಲವನೂ ತನ್ನ ಒಡಲಿಗೆ ಕಟ್ಟಿಕೊಂಡು ಓದುಗರಿಗೆ ಹೊಸ ಲೋಕವೊಂದನ್ನು ಪರಿಚಯಿಸಬಲ್ಲ ಪುಸ್ತಕ ಸಾಕ್ಷಿ!!!

ನಾಗತಿಹಳ್ಳಿ ಚಂದ್ರಶೇಖರರು ತಮ್ಮ ನನ್ನ ಪ್ರೀತಿಯ ಹುಡುಗಿ ಸಿನಿಮಾದಲ್ಲಿ ಹೇಳುವಂತೆ ಅನುವಂಶೀಯವಾಗಿ ಬರುವುದು ಸಕ್ಕರೆ ಖಾಯಿಲೆ ಮಾತ್ರ. ಗುಣಾವಗುಣಗಳು ವ್ಯಕ್ತಿಗತವಾಗಿ ಅಭಿವೃದ್ಧಿಗೊಳ್ಳುತ್ತವೆ ಎಂದು ತಿಳಿಯಿತು. ಕಲಾತ್ಮಕವಾಗಿ ನಮಗ್ಯಾರಿಗೂ ಗೊತ್ತಿರದ ಲೋಕವೊಂದನ್ನು ಸೃಷ್ಟಿಸಿ ಗೊತ್ತಿರುವ ಲೋಕದ ಜಂಜಡಗಳನ್ನು ಚಿತ್ರಿಸಿಕೊಂಡಿರುವ ಸಾಕ್ಷಿ ಪುಸ್ತಕವನ್ನು ಒಮ್ಮೆ ಓದಿಬಿಡಿ. ಉನ್ನತಿಗಾಗಿ!!!

ಎಂದಿನಂತೆ, ಈಗಾಗಲೇ ಓದಿದದ್ದಲ್ಲಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ!!!

ಧನ್ಯವಾದಗಳು...

ಶುಭವಾಗಲಿ...

ಅಭಿ...
Profile Image for Ujjwala Singhania.
221 reviews68 followers
February 20, 2021
After reading a few books by Bhyrappa ji, I still am not done with his writings. Each book is different, each story is painstakingly detailed and beautifully crafted. I have few more on my TBR still.
This one is unique in its telling because it starts with a thumb-size preta given a unique opportunity to report his story truthfully to Yamadharma because he commits suicide after speaking one lie in his otherwise truthful life. Once finished with his narration, he was asked to go back to earth as preta itself and be a true Saakshi of what's going on in the minds of other participants in this earthly drama because he didn't wait to know what happened after he told that one lie.
With this we are taken on a journey of a human life which is evil in its greed, lust, power over women, manipulation. How his actions influenced the lives of everyone who came into its contact including the preta and his family. And how to save that person the preta told the lie.
This story is about truth and falsity, good and evil, a deeper walk into human psychology, philosophy and also metaphysics. And it is about a question whether our inaction to save our loved ones from lives' unpleasant truths really help them? Because our right to action is only till the time we are alive. After death one cannot participate, they can only be a Saakshi, no matter how hard it is.
Profile Image for Vasanth.
93 reviews20 followers
October 7, 2023
ಭೈರಪ್ಪನವರ ಕಾದಂಬರಿಗಳನ್ನು ಬಹಳ ಇಷ್ಟಪಟ್ಟು ಓದುವ ನಾನು, ಅವರ ಸಂದರ್ಶನಗಳನ್ನೂ ಅಷ್ಟೇ ಉತ್ಸುಕತೆ ಮತ್ತು ಕುತೂಹಲದಿಂದ ನೋಡುತ್ತೇನೆ. ಇತ್ತೀಚಿನ ಒಂದು ಸಂದರ್ಶನದಲ್ಲಿ, ಸಂದರ್ಶಕರು ಭೈರಪ್ಪನವರನ್ನು "ನಿಮ್ಮ ಕೆಲವು ಕಾದಂಬರಿಗಳಲ್ಲಿ ಕಾಮ ಅನ್ನುವುದು ಪ್ರಧಾನ ಅಂಶವಾಗಿರುತ್ತೆ ಮತ್ತು ಹೆಚ್ಚಾಗಿ ಅದರ ವಿವರಣೆ ಇರುತ್ತೆ, ಇದಕ್ಕೆ ಕಾರಣವೇನು?" ಎಂದು ಕೇಳುತ್ತಾರೆ. ಅದಕ್ಕೆ ಪ್ರತಿಯಾಗಿ ಭೈರಪ್ಪನವರು ಈ ರೀತಿಯಾಗಿ ಉತ್ತರ ಕೊಡುತ್ತಾರೆ, " ನೋಡಿ, ಈ ಕಾಮ ಅನ್ನುವಂತದ್ದು A concentrated form of ego, it's a real analysis of human nature and human moral principles are revolves around lust". ಎಂತ ಅದ್ಭುತ ಉತ್ತರ ಅಲ್ವಾ ? ಈ ರೀತಿಯ ವಿಭಿನ್ನ ಆಲೋಚನೆ ಮಹಾನ್ ಕಾದಂಬರಿಕಾರರಾದ ಭೈರಪ್ಪನವರಲ್ಲಿ ಮೂಡಿರುವುದರಲ್ಲಿ ಆಶ್ಚರ್ಯವೇನಿಲ್ಲ.

"ಸಾಕ್ಷಿ" ಕಾದಂಬರಿಯ ಪರಿಚಯ ಮಾಡುವ ನನ್ನ ಸಣ್ಣ ಪ್ರಯತ್ನಕ್ಕೆ ಮೇಲಿನ ಪೀಠಿಕೆ ಅವಶ್ಯವೆಂದು ನನಗನಿಸುತ್ತದೆ. ಅದಕ್ಕೆ ಕಾರಣ, ಭೈರಪ್ಪನವರು ಹೇಳಿದಂತಹ "Concentrated form of ego" ಹೊಂದಿರುವ ಪಾತ್ರವೊಂದು ಸಾಕ್ಷಿ ಕಾದಂಬರಿಯಲ್ಲಿ ಪ್ರ��ುಖವಾಗಿರುವುದು. ಬಹುಶಃ, ಸಾಕ್ಷಿ ಕಾದಂಬರಿಯನ್ನು ಈಗಾಗಲೇ ಓದಿರುವವರಿಗೆ ಆ ಪ್ರಮುಖ ಪಾತ್ರದ ರಚನಾ ವಿಧಾನ ಎಷ್ಟು ವೈಶಿಷ್ಟ್ಯವಾಗಿದೆ ಎನ್ನುವುದು ಅರ್ಥವಾಗುತ್ತದೆ.

"ಸಾಕ್ಷಿ" ಕಾದಂಬರಿಯು ಪೌರಾಣಿಕ ಕಲ್ಪನೆಯ ಭೂಮಿಕೆಯಲ್ಲಿ ರಚನೆಯಾಗಿದೆ. ನಮ್ಮ ಭಾರತೀಯ ಪುರಾಣಗಳಲ್ಲಿ ಬರುವ ಯಮಧರ್ಮ, ನರಕ, ಚಿತ್ರಗುಪ್ತ, ಮನುಷ್ಯ ಸತ್ತಮೇಲೆ ಯಮಲೋಕದಲ್ಲಾಗುವ ಅವನ ನ್ಯಾಯ ಅನ್ಯಾಯಗಳ ತೀರ್ಮಾನ ಮತ್ತು ಇಂದ್ರಿಯವಾಸ್ತವ ಪ್ರಪಂಚಗಳನ್ನು ಬೆಸೆದು ಮಾನವನ ನೀತಿಯ ಬೇರುಗಳನ್ನು ಶೋಧಿಸುತ್ತದೆ. ಸುಳ್ಳಿನ ಮೂಲ ಯಾವುದು? ನಿಜವು ನೀತಿಯ ನೆಲೆಯೋ ಅಥವಾ ನೀತಿಯು ನಿಜದ ನೆಲೆಯೋ ? ಎನ್ನುವಂತಹ ಮೂಲಭೂತ ಸವಾಲುಗಳ ಅನ್ವೇಷಣೆಯೇ ಕಾದಂಬರಿಯ ವಸ್ತು.

ಕಾದಂಬರಿಯ ವಸ್ತು, ಪಾತ್ರ ರಚನಾ ವಿಧಾನ ಮತ್ತು ಕಾದಂಬರಿಯಲ್ಲಿರುವ ಕಲಾತ್ಮಕ ಅನುಭವಗಳು ಬಹಳ ವಿಶಿಷ್ಟ ಮತ್ತು ಅಪರೂಪ. ಈ ಕಾರಣಕ್ಕಾದರೂ ಎಲ್ಲರು ಒಮ್ಮೆ ಓದಲೇ ಬೇಕಾದ ಕೃತಿ ಇದು.

ಧನ್ಯವಾದಗಳು.
Profile Image for Sanjay Manjunath.
177 reviews10 followers
September 3, 2025
ಸಾಕ್ಷಿ.
(Spoilers alert)

ಸತ್ಯ, ಸುಳ್ಳುಗಳ ವಿಚಾರಗಳಲ್ಲಿ ಸುಳ್ಳುಗಳಿಗೆ ಹೆಚ್ಚಾಗಿ ನಮ್ಮ ನಾಲಿಗೆ ಕುಣಿಕೆ ಒಡ್ಡಿರುತ್ತದೆ. ಆದರೆ ನಮ್ಮಲ್ಲಿರುವ ಮನಸಾಕ್ಷಿ ಮಾತ್ರ ಬಡಬಡಿಸುತ್ತಲೇ ಇರುತ್ತೆ 'ಸುಳ್ಳು ಹೇಳುತ್ತಿರುವೆ' ಎಂದು. ಮನಸ್ಸಾಕ್ಷಿಯೆಂದರೆ ಅದು ಮನಸಿನ ರೂಪ ಎನ್ನಬಹುದು.

ಜೀವನದಲ್ಲಿ ಒಂದು ಬಾರಿಯೂ ಸುಳ್ಳು ಹೇಳದ ಪರಮೇಶ್ವರಯ್ಯ, ತನ್ನ ಮನಸ್ಸಾಕ್ಷಿಗೆ ವಿರುದ್ಧವಾಗಿ, ತನ್ನ ಮಗಳಾದ ಸಾವಿತ್ರಿಯ ಬಾಳು ಸರಿಮಾಡಲು, ಸುಳ್ಳು ಸಾಕ್ಷಿ ನೀಡಲು ಕೋರ್ಟ್ ಗೆ ಹೋಗಿ, ನಂತರ ತಪ್ಪಿತಸ್ಥನ ಭಾವನೆ ಮೂಡಿ, ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಸತ್ತ ನಂತರ, ಯಮನ ಸನ್ನಿಧಿಯಲ್ಲಿ ಅವನ ಆತ್ಮದ ವಿಚಾರಣೆ ನಡೆಯುವ ಸಂದರ್ಭದಿಂದ ಕಾದಂಬರಿ ಶುರುವಾಗುತ್ತದೆ.
(ಕಾದಂಬರಿಯ ಮೊದಲ ಮತ್ತು ಕೊನೆಯ ಭಾಗ ಸೇರಿಸಿದರೆ ಒಂದು ಅದ್ಭುತ ಮ್ಯಾಜಿಕ್ ರಿಯಲಿಸಂ ಕಥೆಯಾಗುತ್ತದೆ ಎಂದು ಅನಿಸಿತು)

ಎಲ್ಲದಕ್ಕೂ ಮೂಲವಾಗಿರುವ, ಎಲ್ಲವುಗಳ ಬೆಸುಗೆಯಂತಿರುವ #ಮಂಜಯ್ಯನ ಪಾತ್ರ ಸೃಷ್ಟಿ ನಿಕೃಷ್ಟವೆನಿಸಿದರೂ ಒಂದು ಗಟ್ಟಿ ಪಾತ್ರ. ಅವನ ವಿಚಾರಗಳಲ್ಲಿ ಬೇರೆ ಯಾವುದೂ ಅಡ್ಡಿಬರುವುದಿಲ್ಲ, ಸ್ಪಷ್ಟತೆಯಿಂದ ಮಾಡುತ್ತಿರುತ್ತಾನೆ. ಅವನು ಬರಿ ಕಾಮ ಲೋಲುಪ ಅಲ್ಲ. ಅವನೊಬ್ಬ ಉತ್ತಮ ವಾಗ್ಮಿ, ವ್ಯಾಪಾರಿ, ಇನ್ನೊಬ್ಬರನ್ನು, ಸನ್ನಿವೇಶಗಳನ್ನು, ತನ್ನ ಅಧೀನಕ್ಕೆ ಒಳಪಡಿಸುವ ಚಾಣಾಕ್ಷತೆ ಇರುತ್ತದೆ. ಅವನ ಸೆಳೆತಕ್ಕೆ ಸಿಕ್ಕ ಹೆಣ್ಣು ಮತ್ತೊಮ್ಮೆ ಅವನಿಗಾಗಿ ಹಂಬಲಿಸುವುದು ಕೂಡ ಅಷ್ಟೇ ಸತ್ಯ. ಹೆಣ್ಣುಗಳು ಮಾತ್ರವಲ್ಲ, ಇತರ ಪಾತ್ರಗಳು ಅವನ ಸೆಳೆತಕ್ಕೆ ಸಿಕ್ಕಂತವೆ.

ಇಂತಹ ಮಂಜಯ್ಯನ ಸೆಳೆತಕ್ಕೆ ಸಿಕ್ಕಿದ..
#ಸಾವಿತ್ರಿ. ಹದಿನೈದು ವರ್ಷದ ಕೆಳಗೆ ಹಠಮಾಡಿ ಮದುವೆಯಾಗಿ, ಅವನ ಆಟಗಳನ್ನು ಆರೇ ತಿಂಗಳಲ್ಲಿ ಅರಿತು ಬಿಟ್ಟು ಬಂದು, ಅಪ್ಪನ ಮನೆಯಲ್ಲೂ ಇರದೆ, ಚನ್ನರಾಯಪಟ್ಟಣದಲ್ಲಿ ಅಧ್ಯಾಪಕಿಯಾಗಿ ಜೀವನ ನಿರ್ವಹಿಸುತ್ತಿರುತ್ತಾಳೆ. ಈಗ, ತನಗಾಗಿ ಸುಳ್ಳು ಹೇಳಿ ನಂತರ ಮನನೊಂದು ಆತ್ಮಹತ್ಯೆ ಮಾಡಿಕೊಂಡ ತನ್ನಪ್ಪನ ಮರಣದಿಂದ ಮಂಜಯ್ಯನ ವಿಷಯದಲ್ಲಿ ಮತ್ತಷ್ಟು ಕಠಿಣಳಾಗುತ್ತಾಳೆ.
ಆದರೆ ಒಂದು ದಿನ ಮಂಜಯ್ಯ ಮೋಸದಿಂದ ಅವಳನ್ನು ಕೆಡಿಸುತ್ತಾನೆ. ಅದರಿಂದ ಉಂಟಾದ ಬಸಿರಿನಿಂದ ಅವಳು ಅಸಾಧ್ಯ ನೋವಿಗೆ ಗುರಿಯಾಗಿ, ಬಾವ ಸತ್ಯಪ್ಪನ ಜೊತೆಗಿನ ಮಾತುಕತೆಯಿಂದ ಜೀವನದ ದಾರಿ ಕಂಡುಕೊಳ್ಳುತ್ತಾಳೆ ಮತ್ತು ಆ ದಾರಿಯಲ್ಲಿ ಸತ್ಯಪ್ಪನು ಮದುವೆಯಾಗಲು ಮುಂದಾಗುತ್ತಾಳೆ. ಸಾತ್ವಿಕ ಮನೆತನದಿಂದ ಬಂದ ಹೆಣ್ಣು ಹರೆಯದಲ್ಲಿ ಹಟಮಾರಿತನದಿಂದ ಕಳೆದುಕೊಂಡ ಬದುಕನ್ನು ಹೇಗೆಲ್ಲ ಬದುಕ ಬೇಕಾಗುತ್ತದೆ ಎಂಬುದನ್ನು ಈ ಪಾತ್ರದಲ್ಲಿ ಚಿತ್ರಿಸಿದ್ದಾರೆ.

#ರಾಮಕೃಷ್ಣ. ಪರಮೇಶ್ವರಯ್ಯನ ಮಗ. ತಂದೆಯಂತೆ ಸಾತ್ವಿಕ ಮತ್ತು ಮೌನಿ. ತಂದೆ ತೀರಿದ ನಂತರ ಅಧ್ಯಾತ್ಮಿಕತೆಗೆ ಇನ್ನೂ ಹತ್ತಿರವಾಗುತ್ತಾನೆ. ಜಿಪುಣ ಮಾವ ಸತ್ತಾಗ, ಮಾವನಲ್ಲಿದ್ದ ಆರು ಲಕ್ಷ ರೂಗಳನ್ನು ಹುಡುಕಿ, ಹೆಂಡತಿ ಮಾತಿಗೆ ವಿರುದ್ಧವಾಗಿ ಹಣವನ್ನು ಚಿತೆಯಲ್ಲಿ ಸುಡುತ್ತಾನೆ. ಆದರೆ ಅವನ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳದ ಹೆಂಡತಿ ಮತ್ತು ಮಗ ಅವನಿಂದ ದೂರವಾಗಿ ವ್ಯಾಪಾರ ನೋಡಿಕೊಳ್ಳಲು ಮುಂದಾಗುತ್ತಾರೆ. ಇದರಿಂದ ಮತ್ತೊಮ್ಮೆ ಒಂಟಿಯಾಗುವ ಅವನು ಊರ ಜನರ ಕಣ್ಣಲ್ಲಿ ಹುಚ್ಚನಂತಾಗುತ್ತಾನೆ. ಮಂಜಯ್ಯ ಸತ್ತಾಗ, ಅವನ ಕಾರ್ಯವನ್ನು ತಾನೇ ಮಾಡಿದಾಗ ಎಂಥ ಗಟ್ಟಿ ವ್ಯಕ್ತಿತ್ವ ಅನಿಸುತ್ತದೆ. ಅದಕ್ಕಿಂತ ಹೆಚ್ಚಾಗಿ ಮಂಜಯ್ಯನ ವಿಷಯದಲ್ಲಿ ಕುಟುಂಬಕ್ಕೆ ಸಂಬಂಧಿಸಿದ ಆಘಾತಕಾರಿ ವಿಷಯ ತಿಳಿದಾಗಲೂ ಮನಸ್ಸನ್ನು ಸ್ತಿಮಿತಕ್ಕೆ ತಂದುಕೊಳ್ಳುವ ಅವನನ್ನು ಒಪ್ಪಿಕೊಳ್ಳಲು ಸಾಮಾನ್ಯ ಓದುಗರಿಗೆ ಕಷ್ಟವೇ. ಎಲ್ಲವನ್ನೂ ಸಮಚಿತ್ತಕ್ಕೆ ತಂದುಕೊಂಡು ಮುನ್ನಡೆಯುವ ಸಂಕೀರ್ಣ ಪಾತ್ರವಿದು.

#ಲಕ್ಕು. ಮಂಜಯ್ಯನಿಗೆ ಇವಳ ಮೇಲಿನ ಅಂಥ ಆಸೆಯೇನೂ ಇರುವುದಿಲ್ಲ. ಅವಳ ಗಂಡನ ಕೊಲೆಯಿಂದ ಬಚಾಯಿಸಿಕೊಳ್ಳಲು ಇವಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾನೆ. ಪ್ರತಿ ಹೆಣ್ಣಿಗೆ ನಂಬಿಸಿದಂತೆ ಇವಳನ್ನು ಮದುವೆಯಾಗುವುದಾಗಿ ನಂಬಿಸುತ್ತಾನೆ ಕೂಡ. ಇವಳಿಗೆ ಮತ್ತು ಹಾಸನದಲ್ಲಿ ಓದುತ್ತಿರುವ ಹರೆಯದ ಮಗಳಾದ ಲತಾಳ ಜೀವನೋಪಾಯಕ್ಕಾಗಿ ಅಂಗಡಿ ಇಡಲು ಸೂಚಿಸಿ, ಸಹಾಯ ಮಾಡುತ್ತಾನೆ ಕೂಡ. ಮಂಜಯ್ಯ ಮೋಸ ಮಾಡುತ್ತಿದ್ದಾನೆ ಎನ್ನುವದು ಅರಿತರು, ಅವನಿಂದ ಸಿಗುವ ಸುಖಕ್ಕೆ ಮತ್ತು ಒಂದಲ್ಲ ಒಂದು ದಿನ ಅವನನ್ನು ತನ್ನ ಅಂಕೆಯಲ್ಲಿಟ್ಟುಕೊಳ್ಳುತ್ತೇನೆ ಎಂಬ ಸುಳ್ಳಿನ ಭರವಸೆ ಮೇಲೆ ಸುಮ್ಮನಿರುತ್ತಾಳೆ. ಆದರೆ ಯಾವಾಗ ಮಗಳು ಲತಾಳು ಕೂಡ ಅವನ ಕಾಮಕ್ಕೆ ಬಲಿಯಾದಳು ಎಂಬುದು ಗೊತ್ತಾದಾಗ, ಅವನ ಗಂಡಸ್ಥನವನ್ನು ಇಲ್ಲವಾಗಿಸಿ, ಅವನ ಸಾವಿಗೆ ಕಾರಣಳಾಗುತ್ತಾಳೆ.
ಅನಕ್ಷರಸ್ಥೆಯಾದರೂ, ಒಂದು ನಿರ್ಣಯಕ್ಕೆ ಬದ್ಧಳಾದಾಗ, ಬೇರೆಯವರನ್ನು ಮಾತುಗಳಲ್ಲೇ ಮರುಳು ಮಾಡುತ್ತಿದ್ದ ಮಂಜಯ್ಯನನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸಿ, ಸಾವಿಗೆ ಕಾರಣಳಾದ ಅವಳ ಧೈರ್ಯವು ಓದುಗನಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತದೆ.

#ಸರೋಜಾಕ್ಷಿ. ಮಂಜಯ್ಯನನ್ನು ಹೆಣ್ಣಿನ ವಿಷಯದಲ್ಲಿ ಕಟ್ಟಿ ಹಾಕುವವರು ಯಾರೂ ಇಲ್ಲವೇ ಎಂದು ಯೋಚಿಸುತ್ತಿರುವಾಗಲೇ ಸರೋಜಾಕ್ಷಿಯ ಪಾತ್ರವೂ ಬರುತ್ತದೆ. ಎಲ್ಲಾ ಹೆಣ್ಣುಗಳ ಮೇಲಿನ ಆಸೆಯಂತೆ ಇವಳ ಮೇಲೂ ಆಸೆ ಉಂಟಾಗುತ್ತದೆ ಮಂಜಯ್ಯನಿಗೆ. ಆದರೆ ಅದು ಆಸೆಗಿಂತ ಹೆಚ್ಚಾಗಿ ಮತ್ತಿನ್ನೇನೋ ಆಕರ್ಷಣೆ ಉಂಟಾಗುತ್ತದೆ. ಅವಳ ಸಂಗ ಬಯಸಲು ಮೊದಲು ಮಾಡಿದಾಗ ಪೆಟ್ಟು ತಿನ್ನುತ್ತಾನೆ. ಅದೇ ಸಿಟ್ಟಲ್ಲಿ ಅವಳ ಗಂಡನ ಕೆಲಸಕ್ಕೆ ಕುತ್ತು ತರುತ್ತಾನೆ. ಸರೋಜಾಕ್ಷಿಯು ಅವನಿಂದ ಆಕರ್ಷಿತಳಾಗಿರುತ್ತಾಳೆ. ಅವಳಿಗೂ ಅವನ ಮೇಲೆ ಕಾಮಕ್ಕಿಂತ ಹೆಚ್ಚಾದ ಭಾವ ಮೂಡಿರುತ್ತದೆ. ಅವಳು ಮಾಡುವ ಎಡವಟ್ಟುಗಳಿಂದ ಅವರಿಬ್ಬರ ಮಧ್ಯದಲ್ಲಿ ಮಾತುಕತೆ ನಿಂತು ಹೋಗುತ್ತೆ. ಹೇಗೋ ಮಾಡಿ ತನ್ನ ಗಂಡನ ಕೆಲಸ ಉಳಿಸಿಕೊಳ್ಳುತ್ತಾಳೆ.
ಕೊನೆಗೆ ಮಂಜಯ್ಯನನ್ನು ಕರೆಸಿಕೊಳ್ಳುತ್ತಾಳೆ ಕೂಡ. ಆ ದಿನ, ಅವನಲ್ಲಿ ಎಲ್ಲ ವಿಷಯಗಳನ್ನು ಹೇಳಿಕೊಳ್ಳುತ್ತ, ಕಾಮ ಸುಖಕ್ಕಿಂತ ಹೆಚ್ಚಾಗಿ ಬಯಸುತ್ತಿರುವ ವಿಷಯವನ್ನೂ ಕೂಡ ಅರಹುತ್ತಾಳೆ. ಅದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ಮಂಜಯ್ಯ ಯಾವ ಮಾತು ಆಡದೆ, ಯಾವ ಸುಖಕ್ಕೂ ಆಸ್ಪದ ಕೊಡದೆ, 'ಮಂಜಿನಂತೆ' ಹೆಪ್ಪುಗಟ್ಟಿ ಮೌನಿಯಾಗುತ್ತಾನೆ. ಇದರಿಂದ ದುಃಖಗೊಂಡ ಅವಳು, ಬೈದು ದೂರ ಮಾಡಿಕೊಳ್ಳುತ್ತಾಳೆ.

#ಸತ್ಯಪ್ಪ. ಪರಮೇಶ್ವರಯ್ಯನ ಮೊದಲ ಮಗಳ ಗಂಡ. ಗಾಂಧಿವಾದಿ. ಹೆಂಡತಿಯನ್ನು ಕಳೆದುಕೊಂಡ ಮೇಲೆ ಇದ್ದೊಬ್ಬ ಮಗನನ್ನು ಸಲಹುತ್ತ ಸಮಾಜ ಸೇವೆ ಮಾಡುತ್ತಿರುತ್ತಾನೆ. ಮಂಜಯ್ಯನ ಪರಿಚಯವಿದ್ದರೂ, ಅವನ ಸಾಹಸಗಳನ್ನು ಅವನ ಬಾಯಿಯಿಂದಲೇ ಕೇಳಿದ್ದರೂ, ಯಾವುದೇ ಪ್ರಭಾವಕ್ಕೊಳಗಾಗದ ವ್ಯಕ್ತಿಯಾಗಿರುತ್ತಾನೆ. ಸಾವಿತ್ರಿಯ ಬಾಳನ್ನು ಸರಿಮಾಡಲು ಹೋಗಿ, ಮಂಜಯ್ಯನ ಮಾತುಗಳಿಗೆ ಉತ್ತರಿಸಲಾಗದೇ ಹೊರಬಂದು, ಅದೇ ಮಾತುಗಳು ಅವನಿಗೆ ಹೊರೆಯಾಗಿ, 'ಆ ಸುಖ'ವನ್ನು ನೀಗಿಸಿಕೊಳ್ಳಲು ಅವನ ಹತ್ತಿರವೇ ಬಂದು, ಅವನು ವ್ಯವಹಾರ ಮಾಡಿದ ಹೆಣ್ಣೊಂದಿಗೆ ಮಲಗಿ, ರೋಗ ಹತ್ತಿಸಿಕಕೊಳ್ಳುತ್ತಾನೆ. ಅದೇ ಭ್ರಮೆಯಲ್ಲಿ ಆತ್ಮಹತ್ಯೆಗೂ ಪ್ರಯತ್ನ ಮಾಡುತ್ತಾನೆ ಕೂಡ.
ನಂತರ ರೋಗವನ್ನು ಸರಿಪಡಿಸಿಕೊಂಡು, ತನ್ನ ಬದುಕಿನ ಗುರಿಯನ್ನು ಕಂಡುಕೊಂಡು, ತನ್ನ ನಾದಿನಿ ಸಾವಿತ್ರಿಯ ಒಡನಾಟದಲ್ಲಿ ಹುರುಪು ಕಂಡು ಕೊಂಡು, ಎಲ್ಲವನ್ನೂ ಒಂದು ಹದಕ್ಕೆ ತರವುದಕ್ಕೆ ಹೋರಾಡುವ ಪಾತ್ರವಿದು.
ಸತ್ಯಪ್ಪನ ಪಾತ್ರ, ಓದುಗನಲ್ಲಿ ನಿಜವಾಗಲೂ ಕಾಡುತ್ತದೆ. ಆ ಪಾತ್ರದೊಂದಿಗೆ ಸೃಜಿಸಿರುವ ಎಷ್ಟೋ ವಿಷಯಗಳು ಚೆನ್ನಾಗಿವೆ.

#ಪರಮೇಶ್ವರಯ್ಯ. ತಪ್ಪನ್ನು ಅರಿಯುವ ಮುಂಚೆಯೇ ಆತ್ಮಹತ್ಯೆ ಮಾಡಿಕೊಂಡು, ಯಮನ ಸಾನ್ನಿಧ್ಯದಲ್ಲಿ ವಿಚಾರಣೆಗೊಳಪಟ್ಟು, ಪೂರ್ತಿ ವಿಚಾರ ಅರಿಯುವುದಕ್ಕೆ ಯಮನಿಂದ ವಿಶೇಷ ಶಕ್ತಿ ಪಡೆದು, ದೂರದಿಂದಲೇ ಮಿಕ್ಕೆಲ್ಲ ಪಾತ್ರಗಳನ್ನು ಗಮನಿಸುತ್ತ, ಪೂರ್ತಿ ವಿಷಯ ಅರಿವಾಗಿ, ತನ್ನಲ್ಲೆ ಉಳಿಸಿಕೊಂಡ ಆಘಾತಕಾರಿ ವಿಷಯಕ್ಕೂ ಸ್ಪಷ್ಟತೆ ಪಡೆದು ಮರೆಯಾಗುವ ಪಾತ್ರ. ಸಾತ್ವಿಕತೆಯಿಂದ ಕೂಡಿದರೂ ತೀರಾ ಗಟ್ಟಿ ಪಾತ್ರ ಅನ್ನಿಸಲಿಲ��ಲ.

ಇಷ್ಟು ಮುಖ್ಯಪಾತ್ರಗಳ ಜೊತೆಗೆ.. ಸುಕನ್ಯಾ, ಗಣೇಶ, ರಾಮಚಂದ್ರ, ನಾಗಪ್ಪ, ಉಸ್ಮಾನಿ, ಹಕೀಂ, ಅಪ್ಪಾಜಪ್ಪ ಮತ್ತು ಇತರ ಪಾತ್ರಗಳು ಸಂದರ್ಭಗಳಿಗೆ ತಕ್ಕಂತೆ ಯೋಜಿತವಾಗಿವೆ.
ಕೊನೆಯಲ್ಲಿ ಬರುವ ಒಂದು ಆಘಾತಕಾರಿ ತಿರುವು, ಕಾದಂಬರಿಗೆ ಒಂದು ವಿಶೇಷ ಅರ್ಥ ತುಂಬಿದೆ.

ಇಷ್ಟರ ಜೊತೆಗೆ ಕೆಲವು ಪ್ರಶ್ನೆಗಳು ಹುಟ್ಟಿಕೊಂಡವು ನನಗೆ,

1.ಮಂಜಯ್ಯನ ಹಿನ್ನೆಲೆ ಎಲ್ಲೂ ಸಿಗುವುದೇ ಇಲ್ಲ. ಅವನ ಮನೆತನವಾಗಲೀ, ತಂದೆತಾಯಿಯ ವಿಚಾರಗಳಾಗಲಿ ಬಂಧುತ್ವದ ಬಗ್ಗೆ ಆಗಲಿ ಯಾವುದೂ ಕೂಡ.

2.ಅವನಲ್ಲಿ ಮೇಳೈಸಿರುವ ಕಾಮಕ್ಕೆ ಕಾರಣಗಳಾವುವು? ಅದು ಅನುವಂಶಿಕತೆಯ, ಜಾತಕವ ಇತ್ಯಾದಿ.

3. ಸರೋಜಾಕ್ಷಿಯನ್ನು ಅಷ್ಟೊಂದು ಬೇಕೆಂದು ಬಯಸುತ್ತಿದ್ದ ಅವನಿಗೆ, ಬರೀ ಅ���ಳ ಮಾತುಗಳಿಗೆ ನಿಶ್ಶೇಶನಾಗಲು ಕಾರಣವೇನಿರಬಹುದು?

ಓದುಗನೂ ಕೂಡ ಕಾದಂಬರಿಯೊಳಗೆ ಒಂದು ಪಾತ್ರವಾಗುವ, ಓದು ಮುಗಿದ ಮೇಲೂ ಅನೇಕ ವಿಚಾರಗಳಿಂದ ಕಾಡುವ ವಿಶೇಷ ಕೃತಿ.
Profile Image for Gorab.
834 reviews148 followers
March 21, 2018
3.5
Powerful and interesting beginning wasted away. Did not enjoy many deviations, and felt around 100 pages were extra with repeated thoughts and theme.

That said, still enjoyed it a lot more than an average book. Had higher expectations from the author and especially from the blurb.
Profile Image for Karthikeya Bhat.
107 reviews17 followers
November 22, 2022
ಸಾಕ್ಷಿ:

ಇಲ್ಲಿ ಬರುವ ಪಾತ್ರಗಳು:ಮಂಜಯ್ಯ, ಸತ್ಯಪ್ಪ, ಪರಮೇಶ್ವರಯ್ಯ,ತನ್ನ ಮಕ್ಕಳು ರಾಮಕೃಷ್ಣ,ಸೀತೆ,ಸಾವಿತ್ರಿ. ಸುಕನ್ಯೆ( ರಾಮಕೃಷ್ಣನ ಹೆಂಡತಿ),ಗಣೇಶ ( ರಾಮಕೃಷ್ಣನ ಮಗ), ಕಂಚಿ,ಲಕ್ಕು,ಸರೋಜಾಕ್ಷಿ ಮತ್ತು ಅಪ್ಪಾಜಪ್ಪ. ಕಾಮವು ಮನುಷ್ಯನನ್ನ ಯಾವ ಸ್ಥಿತಿಗೆ ಒಯ್ಯುತ್ತೆಂದರೆ. ಮಂಜಯ್ಯನಿಂದ ಕಾಮಕ್ಕೂಳಗಾದ ಸಾವಿತ್ರಿ,ಲಕ್ಕು,ಸರೋಜಾಕ್ಷಿ,ಜಾನಕಮ್ಮ ಮತ್ತು ಸತ್ಯಪ್ಪರವರ ಜೀವನವನ್ನು ನೆನಸಿಕೂಂಡರೆ ದುಃಖವಾಗುತ್ತದೆ. ಇಲ್ಲಿ ಪ್ರತಿಯೊಂದು ಘಟನೆಗೂ ನಾವೇ‌ ಸಾಕ್ಷಿಯಾಗುತ್ತೇವೆ, ಓದುಗರೇ‌ ಸಾಕ್ಷಿ.* ಮಂಜಯ್ಯನ ಬಗ್ಗೆ ಓದಿದಾಗ ಅವನಿಗೆ‌ ಏನು ಅನ್ನಿಸುತ್ತೋ ಅದನ್ನು ಮಾಡಿಯೇ ತೀರುತ್ತಿದ್ದ. ಅವನ ಧೈರ್ಯ ಮೆಚ್ಚಬೇಕಾದದ್ದೇ. ಸಂಧರ್ಭಕ್ಕೆ ತಕ್ಕಂತೆ ಯಾವುದೇ ಸಂದರ್ಭವನ್ನು‌ ತನ್ನ ಮಾತಿನ ಚತುರತೆಯಲ್ಲೆ ನಿಭಾಯಿಸುವ ಒಂದು ಗುಣವೂ ಇದೆ, ಆದರೆ ಇವನಿಗೆ ಒಂದು ಚಟ ಅದು ಕಾಮ.

ಎಷ್ಟೋ ಜನರ ನಂಬಿಕೆಯ ಪ್ರಕಾರ ಸತ್ತ ಮೇಲೆ ಪಾಪ ಮಾಡಿದವರು ನರಕಕ್ಕೆ ಹೋಗುತ್ತಾರೆಂದು. ಇಲ್ಲಿ‌ ಪರಮೇಶ್ವರಯ್ಯನವರು ಮಾಡಿದ್ದು ಪಾಪವೇ? ಹೌದು ಆತ್ಮಹತ್ಯೆ ಮಾಡಿಕೊಳ್ಳುವುದು ಮಹಾಪಾಪಕರ. ಮಂಜಯ್ಯನಂತವನನ್ನು ಕಾಪಾಡಲು ಒಂದು ಸುಳ್ಳು ಸಾಕ್ಷಿ ಹೇಳಿದ್ದು ಪಾಪಕರವೆ. ಪರಮೇಶ್ವರಯ್ಯನವರು ನಿಯಂತೃವಿನ ಜೊತೆ ಸಂಭಾಷಣೆಯಲ್ಲಿ‌ ನಿರತನಾದಾಗ ತಾನು ಹೇಳಿರುವ ಸಾಕ್ಷಿಯಿಂದ ಮಂಜಯ್ಯನಿಗೆ‌‌ ಬೈಲು ಸಿಗಲಿಲ್ಲವೆಂದು ಹಾಗು‌ ಆತನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದನೆಂದು ತಿಳಿದಾಗ ಆಶ್ಚರ್ಯವಾಗುತ್ತದೆ. ಅಷ್ಟಕ್ಕೂ ಯಾರ ಸಾಕ್ಷಿಯಿಂದ ಮಂಜಯ್ಯ ಹೊರಬಂದನೆಂದು ಹಾಗು ತಾನು ಆತ್ಮಹತ್ಯೆ ಮಾಡಿಕೊಂಡಿದ್ದು ಇತರರ ಮೇಲೆ ಹೇಗೆ ಪರಿಣಾಮ ಬೀರಿತೆಂದು ತಿಳಿಯಲು ಭೂಲೋಕಕ್ಕೆ ಹೋಗಿ ಎಲ್ಲರ ಮನಸ್ಸಿನ ಭಾವನೆಗಳನ್ನು ಅರಿತು ವರದಿಯನ್ನ ಒಪ್ಪಿಸಲು ನಿಯಂತೃ ಅನುಮತಿ ಕೂಡುತ್ತಾನೆ.

ಹೋಟೆಲ್ನಲ್ಲಿ ಲಕ್ಕು ‌ಜೊತೆ‌‌ ಮಂಜಯ್ಯ ಮಲಗಿರುವಾಗ, ತನ್ನ ತೋಟಕ್ಕೆ ನುಗ್ಗಿದ ಲಕ್ಕುವಿನ ಗಂಡ ಕಂಚಿಯನ್ನು ಕೊಂದ ಪ್ರಸಂಗವನ್ನು ‌ನೆನೆಯುತ್ತಾ ಹೋಗುತ್ತಾನೆ, ನೆನೆಯುವುದರಲ್ಲೆ ಒಂದು ಸುಖ.‌ ತನ್ನ ತಂಟೆಗೆ ಬಂದರೆ ಯಾರೂ ಉಳಿಯದಿಲ್ಲವೆಂದು ಸುತ್ತಮುತ್ತಲಿನ ಜನರೆಲ್ಲರಿಗೂ ಗೊತ್ತು, ಆದರೂ ಕಂಚಿ ಅಂಥವನನ್ನು ಕೊಂದದ್ದೆ‌ ಸರಿ ಎಂದು ತನ್ನನ್ನು ತಾನು ಸಮರ್ಥಿಸಿಕೊಂಡ. ಕಂಚಿಯನ್ನು ಕೊಂದಾಗ ಅವನು ಮರದಿಂದ ಬಿದ್ದು ಸತ್ತು ಹೋದನೆಂದು ನಂಬಿಸಲು ಸಾಕ್ಷಿಗಳನ್ನು ಸೃಷ್ಟಿ ಮಾಡುತ್ತಾನೆ. ಎಷ್ಟೋ ಜನರ ತೋಟದಲ್ಲಿ ಕಳ್ಳತನ ಮಾಡುತ್ತಿದ್ದ ಕಂಚಿಯನ್ನು ‌ಹೆದರಿಸಲು ಭಯ ಪಡುತ್ತಿದ್ದರು ಅಂಥದ್ದರಲ್ಲಿ ಮಂಜಯ್ಯನ ತೋಟಕ್ಕೆ ನುಗ್ಗಿದರೆ ಸುಮ್ಮನಿರ್ತಾನೆಯೇ, ಏನಾದರು ಮಂಜಯ್ಯನ ಧೈರ್ಯ ಮೆಚ್ಚಬೇಕಾದದ್ದೆ ಎಂದು ಜನರು ಅವನನ್ನು ಹೊಗಳುತ್ತಾರೆ. ಆದರೆ ಇವನು ಕಂಚಿಯನ್ನು ಕೊಂದದ್ದು ಲಕ್ಕುವನ್ನು ದಕ್ಕಿಸಿಕೊಳ್ಳಲು. ಸಮಯ ಸಿಕ್ಕಾಗಲೆಲ್ಲಾ ಲಕ್ಕುವಿನ ಸಂಗಡ ಸುಖ ಅನುಭವಿಸುತ್ತಿದ್ದ, ಅವಳಿಗೂ ಸಹ ಇವನೆಂದರೆ ಮೋಹ. ಅವನ ಮಾತಿನ ಚತುರತೆಗೆ ಎಂಥವಳಾದರೂ ವಶರಾಗಿ ಬಿಡುತ್ತಿದ್ದರು. ಅಂತು ಲಾಯರ್ ಮಳಲಿ ವೆಂಕಟರಮಣ ಸಹಾಯದಿಂದ, ಲಕ್ಕುವೇ ತನ್ನ ಗಂಡ ತೋಟದಲ್ಲಿ ಮರದಿಂದ ಜಾರಿ ಬಿದ್ದನೆಂದು ಸುಳ್ಳು ಹೇಳಿ ಮಂಜಯ್ಯನನ್ನು ಪಾರುಮಾಡುತ್ತಾಳೆ.

ಪರಮೇಶ್ವರಯ್ಯನವರ ವೈಕುಂಠದ ದಿನ ಮೊದಲನೆ ಅಳಿಯ ಸತ್ಯಪ್ಪ, ಪರೇಮೇಶ್ವರಯ್ಯ ಸೊಸೆಯಾದ ಸುಕನ್ಯೆಯ ತಂದೆ (ಬಂಡಿ ನಾಗಪ್ಪ) ಬಂದಿರುತ್ತಾರೆ. ಸಾವಿತ್ರಿಯನ್ನು ಕಂಡ ಸತ್ಯಪ್ಪನಿಗೆ ಎಲ್ಲಿಲ್ಲದ ದುಃಖವಾಗುತ್ತದೆ. ತನ್ನ ಮನೆಯಲ್ಲಿ ಬೆಳದ ಅವಳು. ಮಂಜಯ್ಯ ನಂಥವನನ್ನು ಮೊದುವೆಯಾದದ್ದೆ ಇವಳ ಕರ್ಮ. ಇಂಥ ಒಳ್ಳೆಯ ಹೆಂಡತಿ ಇದ್ದರೂ ಯಾಕೆ ಅವನಿಗೆ ಹೆಂಗಸರೆಂದರೆ ಎಲ್ಲಿಲ್ಲದ ಚಪಲ ಎಂದು ಬೇಸರ ಪಡುತ್ತಾನೆ. ಅಂದು ರಾತ್ರಿ ಸಾವಿತ್ರಿಯು ಸತ್ಯಪ್ಪನ ಬಳಿ ಎಲ್ಲವೂ ತೋಡಿಕೊಳ್ಳುತ್ತಾಳೆ. ಮಂಜಯ್ಯನನ್ನೇ ಮದುವೆಯಾಗುತ್ತೇನೆಂದು ಹಠವಿಡಿದಾಗ ಅಣ್ಣ ರಾಮಕೃಷ್ಣ ಎಷ್ಟು ಬೈದ, ತನ್ನ ಮೇಲೆ ಎಂದೂ ಕೈ ಎತ್ತದೇ ಇರುವವರಾದ ಅಪ್ಪ (ಪರಮೇಶ್ವರಯ್ಯ) ಅಂದು ಹೇಗೆಲ್ಲಾ ಹೊಡೆದರು, ಅಣ್ಣ ತಡೆಯದೇ ಇದ್ದಿದ್ದರೆ ಅಂದು ತಾನು ಸತ್ತೇ ಹೋಗುತ್ತಿದ್ದನೇನೋ. ಮಂಜಯ್ಯನನ್ನು ಮೊದಲು ಕಂಡದ್ದು ಬಟ್ಟೆ ಒಗಿಯಲು ಹೋದಾಗ ಒಂಟೆ ಬಂಡೆಯ ಹತ್ತಿರ, ಅವನನ್ನು ಕಂಡಾಗಲೆಲ್ಲಾ ಹಾಗು ಅವನ ಆಕೃತಿಯನ್ನು ಕಂಡಾಗಲೆಲ್ಲಾ ಇವನನ್ನೇ ಮದುವೆಯಾಗಬೇಕೆಂಬ ಬಯಕೆ. ಅಂತೂ ಅವನ ಜೊತೆ ಮದುವೆಯೂ ಆಯಿತು. ಅವನ ಮನೆಗೆ ಹೋದಾಗ ತನ್ನಂತ ಪುಣ್ಯವಂತಳು ಬೇರೆಯಾರಿಲ್ಲಾ ಅನ್ನೋ ರೀತಿ ತನ್ನ ನೋಡಿಕೊಂಡ. ಮದುವೆಯಾದ ಕೆಲವು ತಿಂಗಳು ಚನ್ನಾಗಿಯೇ ಇತ್ತು,ಆ ಸಮಯದಲ್ಲಿ ಎಲ್ಲಾ ರೀತಿಯ ಸುಖವನ್ನೂ ಅನುಭವಿಸಿದೆ. *ಈ ಮೋಹ ಅನ್ನೋದು ಯಾಕೆ ಹುಟ್ಟುತ್ತೆ ಹೇಗೆ ಹುಟ್ಟುತ್ತೆ ಅನ್ನೋದು ತಿಳಿದುಕೊಳ್ಳುವುದೇ ಅಸಾಧ್ಯ*. ಹೀಗೆ ಒಂದು ದಿನ ದೊಡ್ಡಮ್ಮತ್ತೆ *ಮಂಜಯ್ಯ‌ ಹೆಣ್ಣಿನ ಚಾಳಿ ಬಿಟ್ಟನೋ ಇಲ್ಲವೋ? ಮಂಜಯ್ಯ ನಿನ್ನ ಹತ್ತಿರಕ್ಕೆ ಬರುತ್ತಾನೆಯೇ ಎಂದು ಕೇಳಿದಳು. ಆ ಪ್ರಶ್ನೆಯ ಆಳವು ಅರ್ಥವಾದದ್ದು ತಾನು ಇನ್ನಾ ಬಸುರಿಯಾಗಿಲ್ಲವೆಂದು. ಸಾಧಾರಣವಾಗಿ ಹೊಸದಾಗಿ ಮೊದುವೆಯಾದ ಹುಡುಗಿಯರನ್ನು ಕೇಳುವ ಪ್ರಶ್ನೆ ಇದು *. ಇದನ್ನು ಮಂಜಯ್ಯನಿಗೆ ತಿಳಿಸಿದಾಗ ಅವನು ಆಕೆಯನ್ನು ಬೈದದ್ದು ಹಂಗಿಂಗಲ್ಲ. *ಆದರೂ ಸಮಾಧಾನವಾಗಲಿಲ್ಲಾ, ಹೆಂಗಸರಿಗೆ ಕುತೂಹಲ ಜಾಸ್ತಿ, ಇಂಥ ವಿಷಯದಲ್ಲಿ ಇನ್ನೂ ಹೆಚ್ಚು*. ಇದೇ ಸಮಯದಲ್ಲಿ ತನ್ನ ಮನೆಯ ಕೆಲಸದವಳಾದ ಕೆಂಪಮ್ಮನ ಸಂಗಡ ಹೇಳಿಕೊಂಡಾಗ ಆಕೆಯು ಇವನ ರಾಸಲೀಲೆಗಳನ್ನೆಲ್ಲಾ ವರ್ಣಿಸಿ ಅವನ ತೋಟದ ಗುಡುಸಿಲಿನ ಕಥೆಯನ್ನೂ ವಿವರಿಸಿದಳು. ಲಕ್ಕುವಿನ ಜೂತೆ ಸಂಬಂಧವನ್ನು ತಿಳಿದ ಅವಳು ತನ್ನ ಆಯ್ಕೆಯ ಬಗ್ಗೆ ಅಸಹ್ಯವಾಗಿ ಮಂಜಯ್ಯನನ್ನು ತ್ಯಜಿಸಿ ಹೋಗುತ್ತಾಳೆ. ಹೀಗೆ ಮಂಜಯ್ಯನು ಹಲವಾರು ಹೆಂಗಸರ ಜೊತೆ ಸಂಬಂಧವಿಟ್ಟುಕೂಂಡಿರುತ್ತಾನೆ.
ಮಂಜಯ್ಯನು ಅರಣ್ಯ ಇಲಾಕೆಯ ಕೆಲಸದಲ್ಲಿರಬೇಕಾದರೆ ಅಪ್ಪಾಜಪ್ಪನ ಹೆಂಡತಿ ಸರೋಜಾಕ್ಷಿಯ ಜೂತೆ ಸಂಬಂಧ ಬೆಳಸುತ್ತಾನೆ. ಸರೋಜಾಕ್ಷಿಗೂ ಅದೇ ಬೇಕಾದಿದ್ದಿತು,ಅಷ್ಟು ಹೆಣ್ಣಿನ ಜೊತೆ ಸಂಬಂಧವಿರುವ ಈತನಿಗೆ ಸರೋಜಾಕ್ಷಿಯ ಮೇಲೆ ತಂಬಾ ಮೋಹ.

ಪರಮೇಶ್ವರಯ್ಯನವರ ಧರ್ಮೋದಕ ದಿನ ಹಲವರು ಸತ್ಯಪ್ಪನ ಮುಂದೆ ಕಂಚಿಯನ್ನು ಕೊಂದ ಮಂಜಯ್ಯನನ್ನು ಹೊಗಳತೊಡಗಿದರು. *ಸ್ವಲ್ಪ ಕಚ್ಚೆ ಬಿಗಿಯಾಗಿದ್ದರೆ ಅವನಂತ ರುಸ್ತುಮು ಗಂಡು ತಾಲ್ಲೂಕಿನಲ್ಲೇ ಇಲ್ಲವೆಂದು ಹೇಳಿದರು*. ಈ ಪ್ರಸಂಗವು ಸತ್ಯಪ್ಪನಿಗೆ ವಿಪರ್ಯಾಸವಾಗಿ ಕಂಡಿತು ತಾನು ೩೩ ವರ್ಷದ ಹಿಂದೆ ಸ್ವಾತಂತ್ರ ಚಳುವಳಿ, ಗಾಂಧಿ ಮಾರ್ಗಗಳಿಗೆ ಧುಮುಕಿದಾಗ ಏನೆಲ್ಲಾ ಸಮಾಜ ಉದ್ದರಿಸುವ ಕನಸು ಕಂಡಿದ್ದೆ. ತನ್ನ ತೋಟದಲ್ಲೂ ಎಷ್ಟೋ ಸಲ ಕಳ್ಳತನವಾಗಿವೆ ತಾನು ಮಂಜಯ್ಯನ ರೀತಿ ಏಕೆ ಮಾಡಲಿಲ್ಲ ಇದು ತನ್ನ ಅಧೈರ್ಯವೋ ಅಥವಾ ಗಾಂಧೀಮಾರ್ಗವೊ. ಅಂತು ಮಂಜಯ್ಯನ ಸಹವಾಸದಿಂದ ತಪ್ಪು ಮಾಡಿ, ಆ ತಪ್ಪು ಮಾಡಿದ ಅರಿವಾಗಿ ಆ ಒಂದು ತಪ್ಪಿಗೆ ಪ್ರಾಯಶ್ಚಿತ್ತವು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಕೊನೆಯ ಕ್ಷಣದಲ್ಲಿ ಸಾವಿಗೆ ಅರ್ಥ ಕಾಣದೇ ಹಿಂತಿರುಗಿ ಬಂದು ತನ್ನದೇ ದಾರಿಯಲ್ಲಿ ಗ್ರಾಮಾಭಿವೃದ್ಧಿಗೆ ಪ್ರಯತ್ನಿಸುವ ಸತ್ಯನಾರಾಯಣಪ್ಪನವರು ಆದರ್ಶ ವ್ಯಕ್ತಿಯಾಗಿ ಕಾಣುತ್ತಾರೆ.

ಸುಕನ್ಯೆ ತಂದೆ ಬಂಡಿ ನಾಗಪ್ಪನವರಿಗೆ ಖಾಯಿಲೆಯಾದಾಗ ರಾಮಕೃಷ್ಣ ಸುಖನ್ಯೆ ಗಣೇಶರು ಹೋಗುತ್ತಾರೆ. ಎಷ್ಟೇ ಖರ್ಚಾದರೂ ಮಾವನನ್ನು ಉಳಿಸಿಕೊಡಿ ಅವರ ಶುಶ್ರೂಷೆ ಮಾಡೋಕ್ಕೆ ಇರ್ತೀನಿ ಎಂದು ಡಾಕ್ಟರ್ ಬಳಿ ಕೇಳಿಕೊಳ್ಳುತ್ತಾನೆ, ಆದರೆ ಪರಿಸ್ಥಿತಿ ಕೈಮೀರಿರುತ್ತದೆ. ಬಂಡಿ ನಾಗಪ್ಪನವರು ಸಾಯುತ್ತಾರೆ ಸಾಯುವ ಮುಂಚೆ ಕಬ್ಬಿಣದ ಪೆಟ್ಟಿಗೆ ಬೀಗದಕೈ ಹಿಡದೆ ಸಾಯುತ್ತಾರೆ, ಇವರು ಎಷ್ಟು ಪ್ರಯತ್ನಿಸಿದರೂ ಅದೂ ಬರುವುದಿಲ್ಲ ಕಡೆಗೆ ಆ ಬೀಗದಕೈ ತೆಗೆದು ಪೆಟ್ಟಿಗೆಯಲ್ಲಿ ೬ಲಕ್ಷ ದುಡ್ಡನ್ನು ಕಂಡಾಗ ರಾಮಕೃಷ್ಣನಿಗೆ ವ್ಯಥೆಯಾಗುತ್ತದೆ. ಸಾಯುವ ಮುಂಚೆಯೂ ಇವರ ಗುಣ ಬದಲಾಗಲಿಲ್ಲವೇ ಎಂದು. ೬ಲಕ್ಷವನ್ನೂ ಚಿತೆಯೊಂದಿಗೆ ಸುಟ್ಟುಬಿಡುತ್ತಾನೆ, ಇದು ಅವರು ಬಯಸಿದ್ದು ಅವರಿಗೇ ಸೇರಲೆಂದು, ಈ ವರ್ತನೆ‌ ಕಂಡ ಸುಕನ್ಯೆ ಗಣೇಶರಿಗೆ ಸಿಟ್ಟು ಬರುತ್ತದೆ ೬ಲಕ್ಷವೆಂದರೆ ಸುಮ್ಮನೆಯೇ ಇವರೊಬ್ಬರು ಅಯೋಗ್ಯರು. ಮಗನ ಸ್ಥಾನದಲ್ಲಿ ನಿಂತುಕೊಂಡು ನಾಗಪ್ಪನವರ ಕರ್ಮಗಳನ್ನು ಮಾಡುತ್ತಾನೆ. ಕರ್ಮ ನಡೆಯುವ ಸಮಯದಲ್ಲಿ ರೈಟರ್ ನಂಜಪ್ಪನವರು ಬಂದು ನಾಗಪ್ಪನವರ ಬಂಡಿಯ ವ್ಯಪಾರವನ್ನು ಹಾಗು ಅವರ ಬ್ಯಾಂಕ್ ನಲ್ಲಿ ಇಟ್ಟಿರುವ ಹಣದ ಬಗ್ಗೆ ವಿವರಿಸಿದಾಗ ಅದರ ಜವಾಬ್ದಾರಿ ತೆಗೆದುಕೊಳ್ಳಲು ಸುಖನ್ಯೆ ಗಣೇಶ ನಿರ್ಧರಿಸುತ್ತಾರೆ. *ನೀವು ಹೋಗಿ ಆ ಪ್ರಾರಬ್ದದೊಳಕ್ಕೆ ಸಿಕ್ಕಿಕೊಳ್ಳುವುದು ಯಾವ ವಿವೇಕ? ಇದೊಂದು ಥರ ಕಳ್ಳತನ,ಕಂಡೋರ ತೋಟಕ್ಕೆ ಕದ್ದು ನುಗ್ಗುವ ಕಳ್ಳತನ ಎಂದು ರಾಮಕೃಷ್ಣ ಹೇಳಿದಾಗ* ಅವರು ಕೇಳುವುದಿಲ್ಲ, ಕರ್ಮ ನಡೆಯುತ್ತಿರಬೇಕಾದರೂ ಅವರಿಗೆ ಆಸ್ಥಿಯೇ ಮುಖ್ಯ ಅಂದೇ ಅವರು ಊರಿಗೆ ಹೊರಟುಬಿಡುತ್ತಾರೆ. *ಆದರೆ ರಾಮಕೃಷ್ಣ ಮಗನ ಸ್ಥಾನದಲ್ಲಿ ನಿಂತು ಕರ್ಮ ಮುಗಿಸುತ್ತಾನೆ, ಬಂಡೀ ವ್ಯಾಪಾರಕ್ಕೆ ಒಡೆಯನಾಗುವ ಅವಕಾಶ ಬಂದರೂ ಅದಕ್ಕೆ ಆಸೆ ಪಡುವುದಿಲ್ಲ. ರಾಮಕೃಷ್ಣನು ಸಹ ಆದರ್ಶ ವ್ಯಕ್ತಿಯಾಗಿ ನಿಲ್ಲುತ್ತಾನೆ.*

ಕೆಲವು ದಿನಗಳಾದ ಮೇಲೆ ಮಂಜಯ್ಯನು ಸರೋಜಾಕ್ಷಿಯ ಬಳಿ ಹೋಗುತ್ತಾನೆ, ಇವನನ್ನು ಕಂಡ ಅವಳಿಗೂ ಖುಷಿ, ಅಂತೂ ಅವರಿಬ್ಬರು ಸಂಧಿಸುತ್ತಾರೆ. ಆದರೆ ಅಷ್ಟರಲ್ಲಿ ಮಂಜಯ್ಯನು ಎಲ್ಲಾ ರೀತಿಯ ಉತ್ಸುಕತೆಯನ್ನು ಕಳೆದುಕೊಂಡಿರುತ್ತಾನೆ, ಇದೇನು ತನ್ನ‌ ದೇಹಕ್ಕೆ ಲಕ್ವ ಹೊಡದಿದೆಯೋ ಹೇಗೆ ? ಇತ್ತೀಚೆಗೆ ಹೆಣ್ಣಿನ ಮೇಲೆ ಮೋಹವೆ ಆಗುತ್ತಿಲ್ಲವೆ, ಸರೋಜಾಕ್ಷಿಯನ್ನು ಪಡೆಯಲು ಎಷ್ಟು ಪ್ರಯತ್ನಪಟ್ಟೆ ಆದರೆ ಅಲ್ಲಿಂದ ಹೊರಟು ಹೋಗುತ್ತಾನೆ, ಸರೋಜಾಕ್ಷಿಗೆ ಇವನ ವರ್ತನೆಕಂಡು ಇವನ ಬಗ್ಗೆ ಹೇಗೆಲ್ಲಾ ಕನಸು ಕಂಡಿದ್ದೆ ಎಂದು ಬಿಕ್ಕಿ ಬಿಕ್ಕಿ ಅಳುತ್ತಾಳೆ. ಸಾವಿತ್ರಿಯಿಂದ ತಿರಸ್ಕ್ರತಗೊಂಡು ಸರೋಜಾಕ್ಷಿಯನ್ನು ಬಿಟ್ಟುಬಂದು ತಾನೇನು ಸಾಧಿಸಿದೆ ಎಂದು ಮಂಜಯ್ಯ ಯೋಚನೆ ಮಾಡುತ್ತಾನೆ. ತಾನು ಯಾಕೆ ಇಷ್ಟು ಜನರ ಹೆಂಗಸರ ಬಳಿ ಸೇರುತ್ತಿದ್ದೆ, ಅದರಿಂದ ಏನು ಲಾಭವಾಯಿತು, ಸರೋಜಾಕ್ಷಿಯಲ್ಲಿ ಅಂಥದ್ದು ಏನು ಕಂಡೆ, ಅವಳು ಹೇಳಿದ ಹಾಗೆ ಇವರೆಲ್ಲರಲ್ಲೂ ಏನು ವಿಶೇಷ ಕಂಡೆ ಎಂದು ಯೋಚಿಸತೊಡಗಿದನು, ಆದರೆ ಉತ್ತರ ಹೊಳೆಯಲೇ ಇಲ್ಲ. ಸರೋಜಾಕ್ಷಿಯು ತನ್ನನ್ನು ನನಗೆ ಅರ್ಪಿಸಿದಾಗ ಕೂಡ ನಾನೇನೂ ಮಾಡಲಿಲ್ಲ ಏಕೆ, ಅವಳು ಥಟ್ಟನೆ ಹೇಗೆಂದಳು ಗಂಡಸುತನವಿಲ್ಲದೋರೆ ಪ್ರತಾಪ ಹೇಳಿಕೊಳ್ಳುವುದು ಜಾಸ್ತಿ, ಅವಳು ಅಷ್ಟು ಹೇಳುತ್ತಿದ್ದರು ತಾನೇಕೆ ಶಕ್ತಿ ಇಲ್ಲದವನಂತೆ ಮಲಗಿದ್ದೆ, ತನಗೇಕೆ ಹೀಗಾಗುತ್ತಿದೆ ಎಂದು ಬೇಸರ ಪಡುತ್ತಾನೆ.

ಕಥೆಯ ಅಂತ್ಯದಲ್ಲಿ ಲಕ್ಕುವಿಗೆ ತನ್ನ ಮಗಳು ಬಸುರಾಗಿರುವುದು ಅದಕ್ಕೆ ಕಾರಣ ಮಂಜಯ್ಯನೆ ಅಂತ ತಿಳಿದಾದಮೇಲೆ ತಾಯಿ ಮಕ್ಕಳು ಒಬ್ಬರ ಮುಖವನ್ನೊಬ್ಬರು ನೋಡಿಕೂಳ್ಳುವ ಅಸಹ್ಯವಾಗುತ್ತದೆ. ಹೀಗೆ ಬಿಟ್ಟರೆ ಇನ್ನು ಎಷ್ಟು ಹೆಣ್ಣು ಮಕ್ಕಳಿಗೆ ಅನ್ಯಾಯವಾಗುತ್ತೆಂದು, ಲಕ್ಕು ಮಂಜಯ್ಯನನ್ನ ಅವನ ತೋಟದಲ್ಲೇ ಸಾಯಿಸಿ ಶರಣಾಗುತ್ತಾಳೆ. ಸಾವಿತ್ರಿ, ಸತ್ಯಪ್ಪ, ರಾಮಕೃಷ್ಣ ಜೈಲಿನಲ್ಲಿ ಲಕ್ಕುವನ್ನು ಭೇಟಿಮಾಡಿ ಅವಳ ಸಂಗಡ ಮಾತಾಡುತ್ತಾರೆ, ತಾನೇಕೆ ಮಂಜಯ್ಯನನ್ನು ಕೊಂದದ್ದು ಎಂದು, ಸಾಯುವ ಮುಂಚೆ ಏನು ಮಾತಾಡಿದ ಎಂದು ಕೇಳುತ್ತಾರೆ. *ತಾಯಿ ಸಂಗಡ ಮಾಡಿದಮೇಲೆ ಮಗಳನ್ನ ಮದುವೆಯಾಗೋದು ಯಾವ ಧರ್ಮ ಅಂತ ಲಕ್ಕು ಕೇಳಿದ್ದಕ್ಕೆ, ಪರಮೇಶ್ವರಯ್ಯ ನವರಿಗಿಂತ ಗೊತ್ತ ನಿನಗೆ ಧರ್ಮ ಅಂದುಬಿಟ್ಟ ಮಂಜಯ್ಯ, ಅವಾಗ ಅರ್ಥವಾಗಲಿಲ್ಲ, ಬಿಡಿಸಿ ಹೇಳಿದಾಗ ಅರ್ಥವಾಯ್ತು.ತಾನು ಪರಮೇಶ್ವರಯ್ಯ ಹೆಂಡತಿ ಜಾನಕಮ್ಮನನ್ನು ಸಂಗಡ ಮಾಡಿದ್ದೆನೆಂದು, ನಾವು ಸಂಗಡ ಮಾಡಿರುವುದು ಅವರಿಗೆ ಗೊತ್ತಾಗಿ ಜಾನಕಮ್ಮ ಕೆರೆಗೆ ಬಿದ್ದು ಸತ್ತುಹೋದಳು. ತದನಂತರ ತಾನು ಅದೇ ರೂಪ ಲಕ್ಷಣಗಳಿರುವ ಸಾವಿತ್ರಿಯನ್ನು ಮೊದುವೆಯಾಗಲಿಲ್ಲವೇ ಎಂದುಬಿಟ್ಟ. ಇದನ್ನು ಕೇಳಿದ ಸಾವಿತ್ರಿಯು ತಲೆ ತಿರುಗಿ ಬಿದ್ದೇ ಹೋಗುತ್ತಾಳೆ, ಅಪ್ಪನಿಗೆ ಈ ವಿಷಯ ಗೊತ್ತಿದ್ದರೂ ತಮಗೆ ತಿಳಿಸಲಿಲ್ಲ, ತಾನು ಮಂಜಯ್ಯನನ್ನು ಮದುವೆಯಾಗುತ್ತೇನೆಂದಾಗ ಈ ಕಾರಣಕ್ಕೇ ತನ್ನನ್ನು ಹೊಡದಿರಬೇಕು.*

ಕಡೆಗೆ ಸಾವಿತ್ರಿ ಸತ್ಯಪ್ಪನವರು ಒಟ್ಟುಗೂಡಿ ಗಾಂಧೀ ಮಾರ್ಗದಲ್ಲಿ ಸಮಾಜ ಸೇವೆ ಮಾಡುತ್ತಾರೆ. ತನ್ನ ಮಾವನ ಆಸ್ತಿಗೆ ಆಸೆಪಡದೆ, ಇರುವಲ್ಲಿ ಜೀವನವನ್ನು ನಡೆಸುವ ರಾಮಕೃಷ್ಣ ನಮಗೆ ಆದರ್ಶ ವ್ಯಕ್ತಿಯಾಗುತ್ತಾನೆ, ಸುಕನ್ಯೆ ಅಪ್ಪನ ಆಸ್ತಿಯಲ್ಲಿ ಮೆರೆಯುತ್ತಾಳೆ, ಗಣೇಶ ಬಂಡಿ ವ್ಯಾಪಾರ ಚೆನ್ನಾಗಿ ನೋಡಿಕೊಳ್ಳುತ್ತಾನೆ ಅದರೆ ಅವನಿಗೆ ಅಷ್ಟರಲ್ಲೇ ಮಂಜಯ್ಯನ ಗಾಳಿ ಬೀಸಿರುತ್ತದೆ ಮತ್ತೊಬ್ಬ ಮಂಜಯ್ಯನೇ ಹುಟ್ಟಿದರೆನ್ನುತ್ತಾರೆ. ಬಂಡೀ ನಾಗಪ್ಪ ದುಡ್ಡು ಕೂಡಿಟ್ಟು ಜಿಪುಣ ಜೀವನ ನಡೆಸಿ ಕೊನೆಗೆ ಅನಾರೋಗ್ಯದಿಂದ ಬಳಲಿ ಸತ್ತರು, ಇದರಿಂದ ಸಾಧಿಸಿದ್ದೇನು?. ಕಾಮದಿಂದ ಬಳಲಿದ ಮಂಜಯ್ಯನ ಕಥೆ ಏನಾಯಿತು.? ನಮ್ಮ ಸಮಾಜದಲ್ಲಿ ಹಲವಾರು ಮಂಜಯ್ಯರನ್ನು ಕಾಣಬಹುದು. *"ಕಾಮ ಅನ್ನುವುದು ಮೂಲ, ಆಸ್ತಿಯ ರೂಪ ತಾಳಬಹುದು, ಹೆಣ್ಣಿನ ರೂಪ ತಾಳಬಹುದು, ಒಂದು ಇನ್ನೊಂದಕ್ಕೆ ಪೂರಕ"*

ಯಮಲೋಕದಲ್ಲಿ ಪರಮೇಶ್ವರಯ್ಯನವರು ಮುಂದುವರೆಸುತ್ತಾರೆ: ತಾನು ಕಂಡಿರುವ ಸತ್ಯಗಳನ್ನು ನಿಯಂತೃವಿಗೆ ಹೇಳುತ್ತಾ ಹೋಗುತ್ತಾರೆ, *ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಹೋದ ನನ್ನಿಂದ ಅವನಿಗೆ ತೊಂದರೆಯೇ ಆಯಿತು, ಲಕ್ಕುವಿನ ಸಾಕ್ಷಿಯಿಂದಲೇ ಅವನು ಬಿಡುಗಡೆಗೊಂಡ*. *ಸತ್ಯಕ್ಕೆ ಸುಳ್ಳಿನ ಶಕ್ತಮೂಲವಿರುವುದನ್ನು ಕಂಡುಕೊಂಡೆ, ಸಂಶಯವೆಂದರೆ ಸಂಬಂಧದಲ್ಲಿ ಸುಳ್ಳನ್ನು ಹುಡುಕುವುದು ತಾನೆ, ನಾನು ಜಾನಕಿಯನ್ನು ಮಂಜಯ್ಯನ ಜೊತೆ ಕಾಣುವ ಮೊದಲು ಅವಳ ಮೇಲೆ ಸಂಶಯವೇ ಇರಲಿಲ್ಲ, ಕಂಡ ಮೇಲೆ ಅವಳೆಂದರೆ ಆಗುತ್ತಿರಲಿಲ್ಲ . ನಂಬಿಕೆಯೇ ಸಂಬಂಧದ ಮೂಲಧಾರ. ಆದರೂ ನನ್ನ ಮಕ್ಕಳಿಗೆ‌ ಹೇಳದೇ ಆ ಸತ್ಯವನ್ನು ಮುಚ್ಚಿಟ್ಟುಕೊಳ್ಳುವುದು ಮಾನಸಿಕವಾಗಿ ಎಷ್ಟು ಬಂಧನವಾಯಿತು. ಆತ್ಮಹತ್ಯೆ ‌ಮಾಡಿಕೊಂಡು ಏನು ಸಾಧಿಸಿದೆ ನಾನು, ಬದುಕಿದ್ದರೆ ಎಲ್ಲಿ ಬೇಕಾದರೂ ಹೋಗಬಹುದಿತ್ತು ಏನಾದರೂ ಯೋಚಿಸಬಹುದಿತ್ತು*.

*ಇಲ್ಲಿ ಪ್ರತಿಯೊಂದು ಘಟನೆಗೂ ನಾವೇ (ಓದುಗರೇ) ಸಾಕ್ಷಿಗಳು*

*ಕಾರ್ತಿಕೇಯ*

Profile Image for Ramaprasad KV.
Author 2 books64 followers
July 22, 2024
ಓದಲು ತೊಡಗಿದರೆ, ಕೆಳಗಿಡಲಾಗದಂತಹ ಪುಸ್ತಕ!
Profile Image for Abhishek.
91 reviews8 followers
May 31, 2019
Saakshi: The Witness is one of the weirdest books I've read, and I mean that in a positive way. It is as far removed from what I expected out of a Bhyrappa novel, and it's another testament to his literary diversity. Saakshi weaves mythology, Vedanta, Puranas, and Gandhian principles in a tale which explores the human psyche from the depths of one's inner conscience.

Saakshi tells the story of an old man Parameshwarayya, who's preta (soul) finds itself in the court of Yamadharmaraja with an opportunity to present his case himself as Yama wonders why he committed suicide for uttering a single lie in his life. What starts as an account of his reasons that led to his decision evolves into an exploratory tale where his preta listens to the voice of the different characters in his life and questions the very essence of what truth is.

There is violence, lust, greed, jealousy, and anger on one side and innocence, spirituality, morality, and adherence to dharma on the other, and the author composes a tale where the characters exhibit these qualities at various points during the story. Though the story drags at times, it picks pace soon after and gets increasingly intricate as the story progresses until it reaches a climax which leaves one puzzled about the objective of the story.

The writing style is unique, and so are the dialogues. Being a translation from the original, it does feel like the sentiments of the author are lost in translation at times, but for the most part, keeps the reader engaged.

Saakshi is a one-of-a-kind novel, a phrase I seem to reserve for every Bhyrappa novel I read.
Profile Image for Srikanth.
230 reviews
October 12, 2016
'Saakshi' is a very philosophical novel by Dr. S.L. Bhyrappa that delves into the various facets of the concepts of Dharma, Artha, Kaama and Moksha through the dialogues of the characters. There is lot of depth in each of the main characters of this novel and we can draw parallels to various aspects of our lives through those characters.
(Dr. Shatavadhani Ganesh has mentioned in one of his discourses that 'Saakshi' is SLB's most favourite novel. This novel has also been translated to English under the title 'Witness'. )
Profile Image for Ramya.
8 reviews10 followers
April 23, 2018
ಮನಃಸಾಕ್ಷಿಯನ್ನು ಕಲಕಿ ಅರೆಜೀವಾವಸ್ಥೆಯಲ್ಲಿ ಬಿಡುವ "ಸಾಕ್ಷಿ"..
Yet another masterpiece from SLB. Food for Thought book. Super twist and turns , very neatly structured Presentation which has a Opening , Body & Closing. Kavalu & Saakshi are the novels for ETHICS.
Profile Image for Nitin Sridhar.
24 reviews3 followers
May 28, 2020
This book deserves more than 5 star but here it 3.96, I really don't understand why people have given less than 5...
Profile Image for Smitha Murthy.
Author 2 books410 followers
March 3, 2019
My second SL Bhyrappa book and I think this is an author who won't leave me disappointed. I was expecting a social commentary like 'Aavarana' but here, SLB delves deep into the question of truth - and the lies our minds weave. You are left unsure in the end if any of the narrators really told you the truth. But I guess that's life too.

Bear in mind that there is nothing genteel about this book either. SLB shocks you with a lot of violence and sex - families values are torn asunder - yet there is a certain philosophical undertone to. Who are we? And what are we answerable to when we all face Death, the Master Controller?
Profile Image for Sanyam.
10 reviews
February 13, 2023
Saakshi is a beautifully placed fiction story from SL Bhyrappa. The author has established a class of his own and his writings are unique in their own way. The way he digs deep philosophical aspects through his writings can be great topic to discuss altogether.

In Saakshi, he has tried to understand the different dimensions of truth and falsehood. The last two chapters of the book can be considered as the nectar of this flower, namely Saakshi.
Profile Image for Swathi  Manchili.
84 reviews9 followers
August 15, 2018
Saakshi, written by S L Bhyrappa, begins with Preta, soul of Parameshwarayya (roughly translated) who is presented before Yama to tell the truth behind his suicide. The author devises a unique way of presenting the incidents through thumb-sized preta of parameshwarayya. The story mainly revolves around human greed, justice, truth, perjury and mainly sexuality. The novel shows an intersection of myths, philosophy through the characters of Manjayya, Savitri, Ramakrishnayya, Sukanya, Ganesha.
The characters of Lakkoo and Sarojakshi, though small but are quite well etched. At a few places, it was tough to keep track of characters and also the places. Except for that, I thoroughly enjoyed reading and would recommend to anyone interested in reading about philosophy through a story.
Profile Image for Vaishali Bhat.
9 reviews22 followers
December 4, 2023
S L Bhyrappa always takes his stories to extremes and plays deeply with your emotions, ethical dilemmas, beliefs by beautifully intertwining his thoughts with the characters. 'Sakshi' is the epitome of human inner voice. How a person becomes witness to his own choices, delusions, decisions, regrets just leaves the reader with tons of mixed emotions and thoughts about one's own life. Reading this book just makes you aware of your own inner voice and it's workings. A very fine line between dharma, artha, kaama and moksha has been beautifully shown with the creative storyline and characters. Throughout the read u can see your own convictions growing stronger.
Profile Image for VENKATRAMAN C K.
227 reviews16 followers
April 14, 2020
A fantastic novel.

The story telling is straightforward and one is transported into the village environment of the 1960s . The characters are strong, well fleshed out and ring true.The innocence and deviousness of people in that young independent Indian village is captured vividly.

One needs a certain maturity to comprehend multi layered complex story that comments on so many things- Truth, Ethics, Societal values, passion , sexuality and selfishness in human relationships. It explores all these in depth and leaves questions in ones mind .

One has to be mentally tough to read this book as because the author literally moves you into the minds of the characters and you can be depressed .

17 reviews1 follower
March 29, 2019
Excellent read

Brilliantly written. It's a reader's delight!
The way truth and lies unfold in a human's life is beautifully depicted. A master piece in fiction writing!
Profile Image for Rakshith Kumar P.
22 reviews1 follower
February 23, 2018
every book of sl bhyrappa is different in it's approach and presentation... this novel gives message about true, lie and it's effects... and more importantly author gives a message to live and do something
Profile Image for Yashwanth Balighatta.
17 reviews13 followers
February 12, 2017
ಮನುಷ್ಯನಿಗಿರುವುದು ಎರಡೇ ಆಯ್ಕೆಗಳು ನಿಜ ಅಥವಾ ಸುಳ್ಳು ಇವೆರಡರ ಹೊರತು ಯಾವುದೇ ಮದ್ಯಮಾರ್ಗವಿಲ್ಲ.
Profile Image for Karthik Jodangi.
16 reviews
November 17, 2024
ಎಸ್.ಎಲ್. ಭೈರಪ್ಪನವರ ಸಾಕ್ಷಿ ಕಾದಂಬರಿಯು ತತ್ವ ಜ್ಞಾನವನ್ನು ಕಾದಂಬರಿಯ ಅನೇಕ ಘಟನೆಗಳ ಮೂಲಕ ನೈಜ ರೀತಿಯಲ್ಲಿ ತಿಳಿಸಿದ್ದಾರೆ.

ನನಗೆ ಈ ಕಾದಂಬರಿಯ ಕೆಲವು ಭಾಗಗಳು ಮತ್ತು ಅದರಲ್ಲಿ ತಿಳಿಸಿದ ಜೀವನ ಪಾಠಗಳು ತುಂಬಾ ಪ್ರಭಾವಶಾಲಿಯಾಗಿವೆ:
ಕಾಮ: ಭೈರಪ್ಪನವರು ಕಾಮವನ್ನು ಮೂಲಭೂತ ಪ್ರವೃತ್ತಿಯೆಂದು ಶ್ರೇಣಿಸುತ್ತಾರೆ. ಇದು ಆಸ್ತಿಯ ರೂಪ ತಾಳಬಹುದು ಅಥವಾ ಹೆಣ್ಣಿನ ರೂಪ ತಾಳಬಹುದು, ಒಂದು ಇನ್ನೊಂದಕ್ಕೆ ಪೂರಕ.

ಸಾಕ್ಷಾತ್ಕಾರ: “ನಾನು ಅಂಜಿರುವುದು ನಾನು ಸುಳ್ಳು ಹೇಳಿದೆ ಎಂಬ ಜನಾಭಿಪ್ರಾಯಕ್ಕೋ ಅಥವಾ ನನ್ನ ಆತ್ಮಸಾಕ್ಷಿಗೋ” ಎಂಬುದನ್ನು ಅರ್ಥಪೂರ್ಣವಾಗಿ ಪ್ರಕಟಿಸಲಾಗಿದೆ.

ನಮಗೆ ಅನ್ಯಾಯ ಅಥವಾ ಮೋಸ ಸಂಭವಿಸಿದಾಗ, ಅದಕ್ಕೆ ನಮ್ಮ ಪಾಲು ಎಷ್ಟಿದೆ ಎಂಬುದರ ಬಗ್ಗೆ ಮನವರಿಕೆ ಮಾಡಿಕೊಳ್ಳುವುದು.

ಒಟ್ಟಿನಲ್ಲಿ, ಸಾಕ್ಷಿ ಕಾದಂಬರಿಯು ಓದುಗರಿಗೆ ಬುದ್ಧಿವಂತಿಕೆ, ಆತ್ಮಾವಲೋಕನ, ಮತ್ತು ಬದುಕಿನ ನೈತಿಕ ದಾರ್ಶನಿಕತೆಯನ್ನು ಸ್ಮರಿಸುತ್ತಾ, ಜೀವನದ ನೈಜ ಸಂದೇಶಗಳನ್ನು ನೀಡುತ್ತದೆ. ಭೈರಪ್ಪನವರ ಈ ಕೃತಿಯು ಎಂದಿನಂತೆ ಕೇವಲ ಕಥಾಸಾರವನ್ನು ಮಾತ್ರವಲ್ಲ, ಜೀವನದ ಪಾಠವನ್ನೂ ಸಹ ನೀಡುತ್ತದೆ.
48 reviews13 followers
March 18, 2018
Different from your usual Bhyrappa novels. The center point of the story is a man who is knows as the most cunning and deceitful. And there are other characters who suffer from this man and try to make their life better.
Profile Image for Manjunath.
2 reviews1 follower
February 7, 2017
One of the best book of SLB. This book interprets truth, sex and relationships with cleverly crafted realistic story which could be well imagined in Indian society.
Profile Image for Prashanth Bhat.
2,084 reviews138 followers
March 22, 2017
rereading bhairappa does not make any difference .still same pleasure
Displaying 1 - 30 of 55 reviews

Can't find what you're looking for?

Get help and learn more about the design.