Jump to ratings and reviews
Rate this book

ಶ್ರೀ ರಾಮಾಯಣ ದರ್ಶನಂ

Rate this book
If the tradition of the Mahakavya has been reestablished in 20th Century Kannada Literature, much of the credit should go to Kuvempu's Shri Ramayana Darshanam which exploded the popular belief that the age of the epic is over. A monumental epic penned by Kuvempu. The work is as much a product of individual sadhana as of the profound influence of Indian thought as a whole. This is the most popular work and the magnum opus by Kuvempu in Kannada based on the Hindu epic Ramayana. It earned him many distinctions including the Sahitya Akademi Award and the Jnanapeeth award in 1967.

875 pages, Paperback

First published January 1, 1949

48 people are currently reading
747 people want to read

About the author

Kuvempu

64 books556 followers
Kuppali Venkatappa Puttappa widely known by the pen name Kuvempu was a Kannada writer and poet, widely regarded as the greatest poet of 20th century Kannada literature. He is immortalised by some of his phrases, and in particular for his contribution to Universal Humanism or in his own words Vishwa maanavataa Vaada. He has penned the Karnataka State anthem Jaya Bharata Jananiya Tanujate.

He has written several Poems, stories and plays. His work Sri Ramayana Darshanam, the rewriting of the great ancient Indian epic Ramayana in modern Kannada, is regarded as revival of the era of Mahakavya (Epic poetry) in a contemporary form and charm.

He has received several awards for his works in the field of literature such as, Jnanpith Award, Sahitya Akademi Award , Pampa Award , Karnataka Ratna. He has also received The Padma Bhushan, the third highest civilian award in the Republic of India and Padma Vibhushan, the second highest civilian award in the Republic of India. He is the second among Kannada poets to be revered as Rashtrakavi

His son K P Poornachandra Tejaswi was a famous writer as well.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
72 (63%)
4 stars
29 (25%)
3 stars
9 (7%)
2 stars
0 (0%)
1 star
3 (2%)
Displaying 1 - 14 of 14 reviews
Profile Image for Nayaz Riyazulla.
417 reviews94 followers
September 17, 2024
ಮರು ಓದು

ಈ ಕೃತಿಯನ್ನು ಎಷ್ಟು ಭಾರಿ ಓದಿದರೂ ತೃಪ್ತಿ ಇಲ್ಲ,


ನಾವು ಹುಟ್ಟಿದ ಮೇಲೆ ಕೆಲ ಒಳ್ಳೆ ಕಾರ್ಯಗಳನ್ನು ಮಾನವರಾಗಿ ಮಾಡಲೇಬೇಕಾಗುತ್ತದೆ. ಅಂತಹ ಹಲವು ಕಾರ್ಯಗಳಲ್ಲಿ ಒಂದು ಕಾರ್ಯವೆಂದರೆ ಎಲ್ಲ ಮನುಜರು ಕುವೆಂಪು ರಚಿಸಿದ ಈ ಮಹಾಕಾವ್ಯವನ್ನು ಒಮ್ಮೆಯಾದರೂ ಓದಲೇಬೇಕು. ಇದು ಕುವೆಂಪುರನ್ನು ಸೃಜಿಸಿದ ಮಹಾಕಾವ್ಯವೆಂದು ಅವರೇ ಹೇಳಿಕೊಂಡಿದ್ದಾರೆ. ಇದರ ಮಹತ್ವವನ್ನು ಸಾರುವಂತೆ ನಮ್ಮ ವರಕವಿಯು ಕುವೆಂಪುವನ್ನು ಹೀಗೆ ಬಣ್ಣಿಸುತ್ತಾರೆ.

"ಯುಗದ ಕವಿಗೆ
ಜಗದ ಕವಿಗೆ
ಶ್ರೀ ರಾಮಾಯಣ ದರ್ಶನದಿಂದಲೇ ಕೈ
ಮುಗಿದ ಕವಿಗೆ - ಮಣಿಯದವರು ಯಾರು?"

ಮೂಲ ರಾಮಾಯಣವನ್ನೇ ಆಧಾರಿಸಿ ತಮ್ಮ ನುಡಿಗಟ್ಟುಗಳನ್ನು, ತಮ್ಮ ಪದಗಳ ಅಲಂಕಾರವನ್ನು ತುಂಬಿ ಓದುಗನ ಹೃದಯದ ಆಳವನ್ನು ಮುಟ್ಟಿ ಗೆಲ್ಲುತ್ತಾರೆ ನಮ್ಮ ಕವಿಗಳು.

ಮೂಲ ಮಹಾಕಾವ್ಯವನ್ನು ಓದಿರುವೆ. ಇದಲ್ಲದೇ ದೇ.ಜವರೇಗೌಡರ ಅನುವಾದ, ನಿ. ರಾಜಶೇಖರ್ ಅವರ ಅನುವಾದವು ಓದಿದ್ದೇನೆ. ಈ ಕೃತಿ ವಚನದೀಪಿಕೆ ಜಿ. ಕೃಷ್ಣಪ್ಪ ರವರು ಮಾಡಿರುವ ಅತ್ಯದ್ಭುತ ಅನುವಾದ. ಕೃಷ್ಣಪ್ಪರವರು ಬೇಂದ್ರೆ ಸಾಹಿತ್ಯವನ್ನೂ ನಮಗೆಲ್ಲ ತಿಳಿಯಾಗಿ ಹೇಳಿಕೊಟ್ಟವರು. ಕುವೆಂಪು ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಬೇಂದ್ರೆ ಮತ್ತು ಕುವೆಂಪುರ ಕಾವ್ಯ ಕೃಷ್ಣಪ್ಪರ ಎರಡು ಅಕ್ಷಿಗಳು ಎಂದು ವಿಮರ್ಶಲೋಕ ಕರೆಯುತ್ತದೆ. ಇವರು ಅನುವಾದ ಮಾಡಿರುವಾಗ ಕಳಪೆ ಆಗಲು ಸಾಧ್ಯವೇ ಇಲ್ಲ ಎಂಬ ನಿರ್ಧಾರದಲ್ಲೇ ಪುಸ್ತಕ ಕೊಂಡು ಓದಿದ್ದೇನೆ. "ಶ್ರೀ ರಾಮಾಯಣ ದರ್ಶನಂ" ಕೃತಿಯ ಮಹೋನ್ನತ ಅನುವಾದ ಯಾವುದು ಎಂದರೆ ಇದನ್ನೇ ನಾನು ಹೆಸರಿಸುವೆ. ಸಾಮಾನ್ಯ ಓದುಗನಿಗೂ ಅರ್ಥವಾಗುವ ರೀತಿಯಲ್ಲಿ ಬರೆದಿರುವ ಶೈಲಿ ಶ್ಲಾಘನೀಯ.

ರಾಮಾಯಣ ದರ್ಶನಂ ಒಂದು ಕೃತಿಯಾಗಿ ಎಂದಿಗೂ ನನಗೆ ಉಳಿದಿಲ್ಲ. ಅದರಲ್ಲಿ ಏನೋ ಗಹನ ಶಕ್ತಿಯೊಂದಿದೆ. ಇದು ಸಾಮಾನ್ಯರು ಸೃಜಿಸಬಲ್ಲ ಸೃಷ್ಟಿಯಲ್ಲ. ಕುವೆಂಪುರವರಲ್ಲಿ ಯಾವುದೋ ದಿವ್ಯಶಕ್ತಿಯೇ ಬರೆಸಿರಬೇಕು ಎಂದೆನಿಸುತ್ತದೆ. ಯಾವ ಪಾತ್ರವನ್ನು ಕೆಟ್ಟದಾಗಿ ಬಿಂಬಿಸದೇ ರಾಮನನ್ನು ಅವತಾರ ಪುರುಷನನ್ನಾಗಿ ಮಾಡಲು ಹೊರಟ ದಿವ್ಯಾತ್ಮಗಳೆಂದೇ ಕುವೆಂಪು ಬಿಂಬಿಸಿದ್ದಾರೆ. ಅದರಲ್ಲೂ ಮಂಥರೆಯ ಪಾತ್ರ. ರಾಮಾಯಣ ದರ್ಶನಂ ಕೃತಿಯಲ್ಲಿನ ಮಂಥರೆಯ ಪಾತ್ರದ ಚೌಕಟ್ಟು ಹಿರಿದಾದ್ದುದು. ಈ ವಿಷಯದ ಮೇಲೆ ಉನ್ನತ ಪದವಿಯನ್ನೇ ಮಾಡಬಹುದು. ಅಷ್ಟೂ ಚೆಲುವು. ಇನ್ನೂ ರಾವಣ ಮತ್ತು ಕುಂಭಕರ್ಣರ ಅಂತ್ಯದ ಸೊಗಸೋ, ಆಹಾ..! ಕೊನೆಗೆ ಕಾಳಿದೇವಿ ರಾವಣನಿಗೆ ಒಂದು ವರ ಕೊಡುತ್ತಾಳೆ. ನೀವಿಬ್ಬರು ಸೀತೆಗೆ ಪ್ರಿಯರಾಗುತ್ತೀರಿ ಎಂದು. ಇದಕ್ಕೆ ನಿದರ್ಶನವಾಗಿ ರಾವಣನಿಗೆ ತನ್ನ ಮುಂದಿನ ಜನುಮದಲ್ಲಿ ಕುಂಭಕರ್ಣನ ಜೊತೆಯಾಗಿ ವೈದೇಹಿಯ (ಸೀತೆ) ಶಿಶುಗಳಾಗಿ ಅಂದರೆ ಲವ ಕುಶರಾಗಿ ಹುಟ್ಟುವ ಕನಸೊಂದು ಬೀಳುತ್ತದೆ. ಇದಕ್ಕಿಂತ ಅನರ್ಘ್ಯ ಕಾವ್ಯಸೃಷ್ಟಿ ಇನ್ನೊಂದಿದೆಯೇ.

ಇದರಲ್ಲಿನ ಅಗ್ನಿಪ್ರವೇಶದ ಸಂಚಿಕೆಯಂತೂ ರೋಮ ರೋಮಗಳಲ್ಲೂ ಮಿಂಚು ಸಂಚಾರ ಮಾಡುವಂತ ಬರವಣಿಗೆ. ಸೀತೆಯ ಪಾವಿತ್ರತೆಯನ್ನು ಸಾರಲು ರಾಮನ ಈ ಕಠಿಣ ನಿಲುವು ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ. ಅಗ್ನಿ ಪ್ರವೇಶಕ್ಕೆ ಸೀತೆ ಹೊರಟಾಗ. ರಾಮನು ಅವಳ ಕೈ ಹಿಡಿದು ಅಗ್ನಿ ಪ್ರವೇಶ ಮಾಡುತ್ತಾನೆ. ಈ ಸಂಚಿಕೆಯ ಪದ ಬಳಕೆ ಮತ್ತು ವಿವರಿಸಿರುವ ಪರಿ ಎಂತಹ ಕಲ್ಲು ಹೃದಯವನ್ನು ಛಿದ್ರ ಛಿದ್ರ ಮಾಡುವಷ್ಟು ತೀಕ್ಷ್ಣ ಬರವಣಿಗೆ.

ಕುವೆಂಪುರವರು ಕೈಕೆಯ ಪಾತ್ರಕ್ಕೆ ಕೊಡುವ ಮುಕ್ತಾಯ ಓದಿದರೆ ಈ ಕೃತಿಯ ಹಿರಿಮೆಯು ಗೋಚರಿಸಬಹುದು
"ಕೈಕೆಯ ಪಾದಗಳಿಗೆ ನಮಸ್ಕರಿಸಿದ ಶ್ರೀರಾಮನನ್ನು ಹಿಡಿದೆತ್ತಿದಳು! ನಾನು ನಿನ್ನನ್ನು ಹೆತ್ತ ತಾಯಿಯಲ್ಲ. ಆದರೆ, ನಿನ್ನ ಆತ್ಮವನ್ನು ಹೆತ್ತವಳೆಂಬ ಹೆಮ್ಮೆ ನನ್ನದು ಎಂಬುದನ್ನು ಮಾತಾಡದೆ ನುಡಿದಳು ಎನ್ನುವಂತೆ ಚಿನ್ಮಯ ಮಹಾಮೌನದಿಂದ ಆಶೀರ್ವದಿಸಿದಳು"

ಇದನ್ನು ಬರೆಯಲು 9 ವರ್ಷಕ್ಕೂ ಅಧಿಕ ವರ್ಷಗಳನ್ನು ತೆಗೆದುಕೊಂಡ ನನ್ನ ಕವಿಗೆ ಇದು ಕೇವಲ ಕೃತಿಯಾಗಿ ಉಳಿದಿಲ್ಲ, ಇದು ತಪಸ್ಸು. ನನ್ನ ಕವಿಯ ದಿವ್ಯತಪಸ್ಸು. ನನ್ನ ಹೃದಯಾಂತರಾಳದಲ್ಲಿ ಶಾಶ್ವತವಾಗಿ "ಶ್ರೀ ರಾಮಾಯಣ ದರ್ಶನಂ" ನೆಲೆಸಿ ಎಲ್ಲ ಆತ್ಮಗಳಲ್ಲೂ ಒಳಿತನ್ನೇ ಕಾಣುವ ಆ ದಿವ್ಯ ಪ್ರಭೆ ಬೆಳಗಲಿ ಎಂದು ಆಶೀರ್ವದಿಸಿ.
Profile Image for Karanam Prasad.
Author 7 books194 followers
December 29, 2023
ಈ ಮಹಾಕಾವ್ಯವನ್ನು ಓದಿದರೆ, ಈ ಮಹಾ ರಸಪರ್ವತವನ್ನು ಏರಿದರೆ, ಈ ಮಹಾ ಪ್ರತಿಭಾನಭವನ್ನು ಕಾಣುವ ನಮ್ಮ ಒಳಗಣ್ಣು ತೆರೆದರೆ, ಬರುವ ಉದ್ಗಾರ ಒಂದೇ... ಕನ್ನಡದ ಭಾಗ್ಯ ಕುವೆಂಪು!

ನಮಿಪೆ ಮಹಾಕವಿ ನಮಿಪೆ ಕಾವ್ಯಖನಿ
ನಮಿಪೆ ಕನ್ನಾಡ ದಿವ್ಯಭವಿಯೇ....
ನಮಿಪೆ ಕನ್ನಾಡ ದಿವ್ಯಭವಿಯೇ...
Profile Image for Nayaz Riyazulla.
417 reviews94 followers
January 11, 2023
ಜವರೇಗೌಡರು ರಾಮಾಯಣ ದರ್ಶನಂ ಕೃತಿಯ ಬಗ್ಗೆ ಒಂದು ಮಾತು ಹೇಳಿದ್ದರು "ಈ ಕೃತಿಯನ್ನು ಒಮ್ಮೆ ಓದಿ ಮುಚ್ಚಿಬಿಡುವುದಲ್ಲ ; ಮತ್ತೆ ಮತ್ತೆ ಓದಿದಂತೆಲ್ಲ ಮೆಲುಕು ಹಾಕಿದಂತೆಲ್ಲ ಇದರ ಮಹಿಮೆ ಗರಿಮೆ ಗಹನತೆಗಳು ವ್ಯಕ್ತವಾಗುತ್ತವೆ" ಇದು ಅಕ್ಷರಷಃ ಸತ್ಯ. ಐದು ಭಾರಿ ಓದಿದರೂ ಇದರ ಮಹತ್ವ ಶಿಖರದಷ್ಟೇ ಏರುತ್ತಾ ಹೋಗುತ್ತಿದೆ... ಈ ಭಾರಿಯೂ ಇನ್ನೊಂದಷ್ಟು ಕೃತಿಯ ಘನತ್ವ ಗೋಚರಿಸಿತು, ಮೊನ್ನೆ ಕರಣಂರ ಅನಿಸಿಕೆ ಓದಿ, ಮತ್ತೆ ಓದಲೇಬೇಕೆಂದು ಮನಸ್ಸುಮಾಡಿ ಮೂಲ ಓದಿದೆ, ಅಮೃತಪಾನದಷ್ಟೇ ಸಂತೃಪ್ತಿ.... ಕುವೆಂಪು ಎಂಬ ಶಕ್ತಿಯ ಪರಿಚಯ ಮತ್ತೆ ಸೂರೆಗೊಂಡಿದೆ.

ಇದು ತಿಳಿದಿರುವ ಕಥೆಯಾದರೂ, ಈ ಕಾವ್ಯ ಇಷ್ಟು ಇಷ್ಟವಾಗೋದು ಯಾಕೆ? ಅಂತ ತುಂಬಾ ಜನ ಕೇಳಿದ್ದರು, ಹೌದು, ಇದು ಗೊತ್ತಿದ್ದ ಕಥೆಯಾದರೂ ಇದನ್ನು ಹೇಳಿರುವ ರೀತಿ ನವೀನ, ಉಪಯೋಗಿಸಿರುವ ಅಲಂಕಾರಗಳು ಶ್ರೇಷ್ಠದಲ್ಲಿ ಶ್ರೇಷ್ಠ, ಕೆಲ ಉದಾಹರಣೆಗಳು,
ರಾಮ ಕಾಡಿಗೆ ಹೋದ ಸಂದರ್ಭದಲ್ಲಿ ಭರತ ಅಯೋದ್ಯೆಗೆ ಬಂದಾಗ ಅದರ ಸ್ಥಿತಿಯನ್ನು ಕುವೆಂಪು "ಕನ್ನಡಿಗರು ಹಂಪೆಗೆ ಬಂದಾಗ ಬೇಸರ ಮೂಡುವಂತೆ, ಇವರಿಗೆ ಬೇಸರ ಮೂಡಿತು" ಎನ್ನುತ್ತಾರೆ. ಕುಂಭಕರ್ಣ ಯುದ್ಧಕ್ಕೆ ತೆರಳುವ ಸಂದರ್ಭದಲ್ಲಿ ಶಿವ ಶಿವೆಯರ ಸಂಭಾಷಣೆ, ರಾವಣ ನನ್ನ ಹೆಸರು ದಶಶಿರ, ಹಾಗಂತ ನನಗೆ 10 ತಲೆ ಅಂತ ಆರ್ಯ ಜನ ಹಿಯಾಳಿಸಿಸುತ್ತಾರೆ, ದಶರಥ ಅಂತ ಹೆಸರಿಟ್ಟುಕೊಂಡ ಎಂದು 10 ಕಾಲು ಎಂದು ನಾವು ಹೇಳೊಲ್ಲ ಅನ್ನುವುದಾಗಲಿ, ಕಥೆಯ ಸೊಬಗನ್ನು ಉನ್ನತಗೊಳಿಸುತ್ತದೆ.

ಒಂದು ಮಾತು : ಜವರೇಗೌಡರು ಇದನ್ನು "ವಚನಚಂದ್ರಿಕೆ" ಎಂಬ ಹೆಸರಿನಲ್ಲಿ ಗದ್ಯಾನುವಾದ ಮಾಡಿದ್ದಾರೆ
ನಿ. ರಾಜಶೇಖರ್ ಅವರು ಇದನ್ನು ಗದ್ಯಾನುವಾದ ಮಾಡಿದ್ದಾರೆ
ಜಿ ಕೃಷ್ಣಪ್ಪರವರು ಇದನ್ನು "ವಚನದೀಪಿಕೆ" ಎಂಬ ಹೆಸರಿನಲ್ಲಿ ಗದ್ಯಾನುವಾದ ಮಾಡಿದ್ದಾರೆ.
ನಿಮಗೆ ಅನುವಾದದಿಂದಲೇ ಓದಬೇಕು ಎಂದರೆ ಕೃಷ್ಣಪ್ಪರ ವಚನದೀಪಿಕೆ ಓದಿ.
ಸಾಧ್ಯವಾದರೆ ಮೂಲವನ್ನೇ ಓದಿ, ಈ ಕಾವ್ಯದ ಎಂತಹ ಉತ್ತಮ ಅನುವಾದ ಇದ್ದರೂ ಅದು ಕಡಲಿನ ಮುಂದೆ ಹನಿಯಷ್ಟೇ.
Profile Image for ಸುನೀಲ್.
22 reviews2 followers
May 10, 2020
ಸಾಹಿತ್ಯದ-ಕಾವ್ಯದ ಉತ್ತುಂಗ ಅಂತಿದ್ದರೆ ಅದು ಈ ಮಹಾಕಾವ್ಯ.
If there's something called a peak of 'Kaavya Rachane'(EPIC) this would probably be one.
Profile Image for Bharath Manchashetty.
121 reviews1 follower
October 10, 2025
“ಶ್ರೀರಾಮಾಯಣದರ್ಶನಂ” – ಕುವೆಂಪು, ಕನ್ನಡಕ್ಕೆ ಮೊದಲ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಜ್ಞಾನಪೀಠ ಪ್ರಶಸ್ತಿ ಗಳಿಸಿಕೊಟ್ಟ ಮಹಾಕಾವ್ಯ. ಜೊತೆಗೆ ಕುವೆಂಪುರವರನ್ನೇ ಸೃಷ್ಟಿಸಿದ ಶಿಖರಕೃತಿ.”

“ಇದು ಕೇವಲ ರಾಮಾಯಣದ ಕಥನವೇ ಅಲ್ಲ, ಬದಲಿಗೆ ಮಾನವ ಜೀವನದ ತತ್ತ್ವ, ದಾರ್ಶನಿಕತೆ ಹಾಗೂ ಸಮಗ್ರ ಮಾನವತೆಯ ಸಂದೇಶವನ್ನು ಸಾರುತ್ತದೆ. ಕುವೆಂಪು ಪರಂಪರೆಯ ರಾಮಾಯಣವನ್ನು ನೇರವಾಗಿ ಅನುಸರಿಸದೆ, ಅದನ್ನು ತಮ್ಮ ಕಣ್ಣಿನಿಂದ, “ದರ್ಶನ” ರೂಪದಲ್ಲಿ ಮರುಸೃಷ್ಟಿಸಿದ್ದಾರೆ. ಇಲ್ಲಿ ರಾಮನು ಕೇವಲ ಪೌರಾಣಿಕ ನಾಯಕನಲ್ಲ; ಅವನು ಸತ್ಯ, ನೀತಿ, ಧರ್ಮದ ಪ್ರತೀಕ. ಸೀತಾ, ಲಕ್ಷ್ಮಣ, ಹನುಮಂತರು ಎಲ್ಲರೂ ಮಾನವೀಯ ಗುಣಗಳ ಪ್ರತಿರೂಪಗಳಾಗಿ ಕಾಣಿಸುತ್ತಾರೆ.”

“ಇದಕ್ಕೂ ಮೀರಿದ ವಿವರಣೆಯನ್ನು ಕೃತಿಯ ಬಗ್ಗೆ ಕೊಡುವ ಮಟ್ಟವನ್ನು ನಾನು ತಲುಪಿಲ್ಲ ಎಂದರೆ ತಪ್ಪಿಲ್ಲ. ದರ್ಶನದ ಮಹಾಕೃತಿಯನ್ನು ಓದಿಯೇ ಅನುಭವಿಸಬೇಕು ಅಷ್ಟೇ. ದೇವರು ಪ್ರತ್ಯಕ್ಷವಾದಾಗ ಕಣ್ಣು ತುಂಬಿಕೊಂಡು ದರ್ಶನ ಪಡೆಯಬೇಕೆ ಹೊರತು selfie ತಗೋಬೇಕು ಅನ್ನುವುದು ದಡ್ಡತನವಷ್ಟೇ ಎನ್ನುವ ಹಾಗೆ ಕೃತಿಯನ್ನು ಓದಿ ಅರಿಯಬೇಕು.”

“ತಪ್ಪದೇ ಓದಿ ಮತ್ತು ಓದಿನ ದರ್ಶನವನ್ನು ಪಡೆಯಿರಿ.”

-ಭರತ್ ಎಂ
ಓದಿದ್ದು ೨೫.೦೮.೨೦೨೫
2 reviews
Want to read
May 3, 2018
i very intrest to read this book
This entire review has been hidden because of spoilers.
Displaying 1 - 14 of 14 reviews

Can't find what you're looking for?

Get help and learn more about the design.