“೨೦೨೫ ರ ವಿಧಾನಸೌಧ ಪುಸ್ತಕ ಸಮ್ಮೇಳನದಲ್ಲಿ ಲೇಖಕರಾದ ವಸುಧೇಂದ್ರರವರನ್ನು ‘ ಸಾರ್ ಯವ್ದಾದ್ರೂ ಹೊಸ ತರ ಕೃತಿ ಕೊಡಿ ಎಂದಾಗ, ಇದ್ನ ತಗೊಳೋ ಮಜವಾಗಿದೆ ಓದೋಕೆ’ ಅಂತ ಕೈಗಿತ್ರು. ಅತಿ ಪುಟ್ಟ ಕವಿತೆ ಕೃತಿ, ಮಧ್ಯಸಾರ ಶೀರ್ಷಿಕೆ ನೋಡಿದಾಗ ಕುಡಿತದ ಬಗ್ಗೆ ಇರೋ ಕವಿತೆಗಳು ಅನ್ಕೊಂಡಿದ್ದೆ, ಆದ್ರೆ ಓದುತ್ತಾ ಹೋದಂತೆ ಅನಿಸಿದ್ದು ಇವೆಲ್ಲಾ ಕುಡಿದಾಗಲೇ ಬರೋ ಕವಿತೆಗಳೆಂದು. ಕೆಲವು ಕಡೆ ಬೀಚಿಯವರ quotes ಎಂಬಂತೆ ಬಾಸವಾಗಿದ್ದು ಉಂಟು.
“ಎಲ್ಲವೂ ಮಧ್ಯದ ವಸ್ತುವಿನ ಜೊತೆ ಮನುಷ್ಯನಲ್ಲಿರುವ ಭಾವನೆ, ನೋವು-ನಲಿವುಗಳನ್ನು ಬಿಂಬಿಸಿರುವಂತವು. ಒಳ್ಳೆಯ ಮಜಾ ಕೊಡುವಂಥ ಕವನ ಸಂಕಲನ, ಕೆಲವೊಂದು ಆಳ ಚಿಂತನೆಯನ್ನು ಕೂಡ ಉಳ್ಳದಾಗಿದ್ದು ತತ್ವಗಳನ್ನು ಕೂಡ ಒಳಗೊಂಡಿದೆ. ಆದರೆ ಅನಿಸಿದ್ದು ನಿಜವಾಗಿಯೂ ಲೇಖಕರು ನಶೆಯಲ್ಲಿದ್ದಾಗಲೇ ಬರಿದಿದ್ದಾರಾ ಅಂತ, ಹೌದಾದರೆ ನಶೆಯಲ್ಲಿದ್ದಾಗ ನೆನಪಿನಲ್ಲಿಡೋಕೆ ಹೇಗೆ ಸಾಧ್ಯ.? ಇದೆ ಸಾಲಗಳನ್ನು ಕುಡಿತದ ಅಮಲಿನಲ್ಲಿಲ್ಲದೆ ಹೇಳಿದ್ದಾದರೆ ವೇದವಾಕ್ಯ ಎನಿಸುವುದುಂಟು ಓದುಗನಿಗೆ. ನಶೆಯನ್ನು ಹಲವು ರೀತಿಗಳಲ್ಲಿ ಅನುಭವಿಸಿ ಸಾಹಿತ್ಯ ರೂಪದಲ್ಲಿ ಆನಂದಿಸಬಹುದು ಎನ್ನುವುದಕ್ಕೆ ಈ ಕೃತಿ ಉದಾಹರಣೆ ಅನ್ಸುತ್ತೆ. ಕೃತಿಯಲ್ಲಿರುವ ಚಿತ್ರಗಳು ಆಕರ್ಷಣೀಯವಾಗಿ ಖುಷಿ ಕೊಟ್ಟದ್ದುಂಟು. ಒಟ್ಟಾರೆಯಾಗಿ ಮನಸ್ಸಿಗೆ ಮುದ ನೀಡುವ ಕವಿತೆಗಳು ಅಂದ್ರೆ ತಪ್ಪಿಲ್ಲ.