Jump to ratings and reviews
Rate this book

ಕರಿಮುಗಿಲ ಕಾಡಿನಲಿ

Rate this book

Unknown Binding

3 people want to read

About the author

Jayaramachari

7 books2 followers

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
0 (0%)
4 stars
2 (66%)
3 stars
1 (33%)
2 stars
0 (0%)
1 star
0 (0%)
Displaying 1 - 2 of 2 reviews
Profile Image for Spoorthi Chandrashekhar.
67 reviews17 followers
September 2, 2024
ಪುಸ್ತಕದ ಬಗ್ಗೆ ಮಾತಾಡುವ ಮುನ್ನ

“ಜಯರಾಮಚಾರಿ ಅವರ Underrated book ಇದು”.

ಪ್ರತಿ ಪುಸ್ತಕ ಓದಿ ಮುಗಿಸಿದಾಗಲು ಒಂದು ರೀತಿಯ ಸಂಭ್ರಮ, ದುಃಖ, ದೀರ್ಘ ಆಲೋಚನೆ, ಹೀಗೆ ಒಂದೊಂದು ಭಾವನೆಗಳು ನಮಗೆ ಗೊತ್ತಿಲ್ಲದೆ ಸೃಷ್ಟಿಯಾಗುತ್ತಾ ಹೋಗುತ್ತದೆ. ಕರಿಮುಗಿಲ ಕಾಡಿನಲಿ ಪುಸ್ತಕ ನನಗೆ ಬದುಕು ಹಾಗೂ ವ್ಯಕ್ತಿ‌ ಇದರ ಬಗ್ಗೆ ದೀರ್ಘ ಅವಲೋಕನ ಸೃಷ್ಟಿ ಮಾಡಿಸಿತು.
ಬಹುಶಃ ಬರಹಗಾರನ ಕಲೆ ಇದಕ್ಕೆಲ್ಲ ಕಾರಣ ಅನ್ನಿಸುತ್ತದೆ.

ಈ ಪುಸ್ತಕದಲ್ಲಿ ಸ್ಮಿತಾ, ನಾನು, ಅವಳು ಕತೆಯನ್ನ ೨೦೨೧ರಲ್ಲಿ ಓದಿದ್ದೆ(thank my memory power) ಅದು ಸರ್ ಯಾವುದೊ ಎಡಿಟಿಂಗ್ ಕೆಲಸ ಕೊಟ್ಟಾಗ. ಆದರೆ ಆಗ ನಾನು ಪೂರ್ತಿ ಪುಸ್ತಕ ಓದುವ ಗೋಜಿಗೆ ಹೋಗಲಿಲ್ಲ.

ಆದರೆ ಈ ಬಾರಿ ನಾನೇ ಖುದ್ದಾಗಿ ಓದಿದ ಪುಸ್ತಕ. ಒಂದೇ ಪದದಲ್ಲಿ ಈ ಪುಸ್ತಕದ ಬಗ್ಗೆ ಮಾತಾಡಬೇಕೆಂದರೆ ಜಯರಾಮಚಾರಿ ಅವರು ಒಬ್ಬ ಕತೆಗಾರನಾಗಿ + ಸಿನಿಕರ್ತನಾಗಿ ಬರೆದ ಪುಸ್ತಕ.
ತುಂಬಾ ಸೂಕ್ಷ್ಮವಾಗಿ ಬದುಕನ್ನು ವೀಕ್ಷಿಸಿ ಕತೆಗಳನ್ನು ಗೀಚಿದ್ದಾರೆ.
೨೦೧೫ ರಲ್ಲಿ ಅವರಿಗಿದ್ದ ಬರವಣಿಗೆಯ ಹಿಡಿತ, ಪದ ಬಳಕೆ ಭಾಷೆಯ ಮತ್ತು ಬರವಣಿಗೆಯ ಬಗ್ಗೆ ಇರುವ ಗ್ರೀಪ್ ಈಗಲೂ ಹಾಗೇ ಇದೆ. ತುಂಬಾ matured way of approaching the readers.

ತುಣುಕುಗಳು ಎಂಬ ಕತೆ ನನಗೆ ದೃಶ್ಯದ ರೀತಿ ಕಂಡಿತು. ಒಂದೇ ರೀತಿಯ ಮೂರು ಕತೆಗಳು action cut ರೀತಿ ಬರೆದಿದ್ದಾರೆ. ಸೂರ್ಯ, ಚಂದ್ರಿ, ವಸುಂಧರೆ ಕತೆ ಈ ರೀತಿಯೇ ಆದರೆ ವಿಭಿನ್ನ ಶೈಲಿಯಲ್ಲಿದೆ.ಇನ್ನೊಂದು ಕಡೆ ಬಂದರೆ ನೀವುಗಳೆಲ್ಲ ಮೊನ್ನೆ ಅವರು ಬರೆದ ಕತೆ "ಯಾರೂ ಪತ್ರ ಬರೆಯದ ಕರ್ನಲನಿಗೆ ಹೋಟೆಲ್ ಪ್ರೊಯೆಟ್ರಿಯಲ್ಲಿ ಸಿಕ್ಕ ಪಾಪದ ಹೂ" ಓದಿ ಮೆಚ್ಚಿದಿರಿ heheh ಆದರೆ 2015 ರಲ್ಲೆ ಬೋದಿಲೆರ್ ನ ಪಾಪದ ಹೂಗಳ ಮಧ್ಯೆ ನಾನು ಎಂಬ ಕತೆಯನ್ನ ನಿರ್ಮಿಸಿದ್ದಾರೆ. ಹೆಂಗೆ?!twistu 😆
ಇನ್ನೂ ಜಯಂತನ ಕತೆ ಓದಿದವರಿಗೆ ಮಾತ್ರ ಗೊತ್ತು ಎಷ್ಟು ಸೂಕ್ಷ್ಮ ಕತೆ ಎಂದು.
ಕರಿಮುಗಿಲ ಕಾಡಿನಲಿ ಕತೆ ತುಂಬಾ ಆಳವಾಗಿದೆ. ಮನವಿ ಕತೆ ಓದಿ ಕಣ್ಣು ವದ್ದೆಯಾದದಂತೂ ನಿಜ.

ಈ ಪುಸ್ತಕದಲ್ಲಿ ಕೆಲವು ಕತೆಗಳು ಸಂಸಾರದ ಬಗ್ಗೆ ಮಾತಾಡಿದರೆ, ಕೆಲವು ಆಕರ್ಷಣೆ, ಪ್ರೀತಿ, ಕಾಮ, ತೊರೆದವರ ಬಗ್ಗೆ, ಇನ್ನೂ ಕೆಲವು ಜೀವನದ ಘೋರ ದುರ್ಘಟನೆಗಳ ಬಗ್ಗೆ ತುಂಬಾ ಆಪ್ತವಾಗಿ ಹೇಳುತ್ತದೆ. ಕೆಲವು ಕತೆ ಓದಿ ಮುಗಿದ ಮೇಲೆ ಕಾಡುವುದಂತೂ ಸುಳ್ಳಲ್ಲ. ನನ್ನ ಪ್ರಕಾರ ಇವತ್ತಿನವರೆಗೂ he never disappointed his readers ಕತೆಗಳಲ್ಲಿ ಟ್ವಿಸ್ಟ್, ರೋಲ್, ಒಳ್ಳೊಳ್ಳೆ unexpected endingನ ಓದುಗರಿಗೆ ಕೊಟ್ಟಿದ್ದಾರೆ.

“Nevertheless till date he's a good writer”.

ಯಾವ ಕತೆ ಇಷ್ಟ ಆಯ್ತು ಅಂತ ಹೇಳಲಿಕ್ಕೆ ಆಗಲ್ಲ.

ನನ್ನಿಷ್ಟದ ಸಾಲುಗಳು:

1. ಮನುಷ್ಯ ಮೇಲಿರದಷ್ಟು ಅವನ ಆತ್ಮವಿಶ್ವಾಸ ಹೀಗ್ಗುತ್ತೆ ಅದಕ್ಕೆ ಬೆಟ್ಟ ಗುಡ್ಡಗಳನ್ನು ಸುತ್ತಬೇಕು.

2. ಸಣ್ಣ ತಪ್ಪು ನೋವನ್ನು, ಸಣ್ಣ ನೋವು ಬದುಕನ್ನು ಬದಲಿಸಬಹುದು.

3. ಅಪರಿಚಿತ ಹಾಡುಗಳನ್ನು ಕೇಳುವುದರಲ್ಲಿ ಒಂದು ತರ ಖುಷಿ, ಕುತೂಹಲ. ಜೀವನ ಕೂಡ ಅಪರಿಚಿತ ಹಾಡಿನಂತೆ, ಯಾವ ಕ್ಷಣವಾದರೂ ರಾಗ ಬದಲಾಗಬಹುದು, ಮಂದ್ರದಿಂದ ತಾರಕಕ್ಕೆ. ಮುಂದಿನ ಸಾಲುಗಳು ಸಹ. ಅಲ್ಲಲ್ಲೇ ಸುತ್ತುಹೊಡೆಯುತ್ತಲೋ, ಇಲ್ಲವೇ ವಿಚಿತ್ರ ಪದಗಳನ್ನು ಹುಟ್ಟು ಹಾಕಿ ಹೋಗಬಹುದು. ಯಾವ ವಾದ್ಯ, ಯಾವಾಗ ನಡೆಯುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ರಾಗ, ತಾಳ, ಭಾವ, ಗೀತ ಸಂಗೀತಗಳೆಲ್ಲಾ ಕ್ಷಣಕ್ಷಣಕೂ ಬದಲಾಗಬಹುದು; ಜೀವನದಲ್ಲಿನ ಘಟನೆಗಳಲ್ಲಿನ ವ್ಯಕ್ತಿಗಳಂತೆ, ಅವರ ಮಾತಿನಂತೆ! ( ಹಂಸಾಕ್ಷರದ ಹುಟ್ಟು ಈ ಸಾಲುಗಳಿಂದಲೇ ಇರಬಹುದು).

4. ವರ್ತುಲದ ಕೇಂದ್ರವಾಗಿ ಸುತ್ತ ಪರಿಧಿಯಲ್ಲಿ ಬಿಂದು ಬಿಂದುಗಳಾಗಿ ನಿಂತಿರೊ ಪ್ರೇಮ,ಕಾಮ, ಸ್ನೇಹ, ಈಗೋಗಳಿಗೆ ಜೀವನದ ತ್ರಿಜ್ಯ ಮುತ್ತಿಟ್ಟು ಸಾಗುತ್ತಿತ್ತು. ನಾನು ನನ್ನೊಳಗೆ ಬೆಳೆದೆ, ಮೀರಲಿಲ್ಲ

5. ಮನುಷ್ಯ ತನ್ನದೆನ್ನಬಹುದಾದ ಎಲ್ಲಾ ಪೊರೆ ಕಳಚಿ ದೂರದಿಂದ ಅವನನ್ನು ಅವನೇ ನೋಡಿಕೊಳ್ಳಬೇಕು ಆಗ ಅವನಿಗೆ ಅವನು ಅರಿವಾಗುತ್ತಾನೆ.

6. ಸೂಳೇ ಎನ್ನುವುದು ಒಂದು ಪವಿತ್ರ ಶಬ್ಧ. ಅನುಮಾನಿಸಿ ಅದನ್ನು ಒಬ್ಬರಿಗೆ ಹೊರುವುದು ಅತ್ಯಾಚಾರಕ್ಕೆ ಸಮ. ಯಾಕೆಂದರೆ ಸೂಳೆಯಲ್ಲಿ ಧ್ಯಾನದಂತ ಬದ್ಧತೆಯಿರುತ್ತದೆ. ಆಕೆ ನಿಸ್ವಾರ್ಥದ ಕಡಲು.

7. ಮನುಷ್ಯ ಎಂದೆಂದಿಗೂ ಮೋಹಿಯೇ.
ಅಮರತ್ವ ದೇವರನ್ನ ಹುಟ್ಟು ಹಾಕೋಲ್ಲ, ದೇವರು ಅಮರ.
ಮೋಹದಲ್ಲಿ ಸ್ವಂತ ಮೋಹ, ಕಂಡವರ ಮೋಹ ಎಂಬ ವಿಭಾಗಗಳಿಲ್ಲ.
ಯಾರನ್ನೊ ನೀ ಮೋಹಿಸಿದರೆ ಅದು ಸ್ವಂತ , ನಿನ್ನ ಗೆಳೆಯನ ಗೆಳತಿಯನ್ನೊ, ಅವನ ಗುಪ್ತ ಸಖಿಯನ್ನೊ ಮೋಹಿಸಿದರೆ ಅದು ಕಂಡವರ ಮೋಹ ಏನಲ್ಲ. ಮೋಹ ಒಂದೇ.

8. ಸುಖದ ಘಳಿಗೆಗಳನ್ನು ಮೆಲುಕು ಹಾಕುವಂತೆ, ದುಃಖದ, ಅವಮಾನಗಳನ್ನು ಮೆಲುಕು ಹಾಕಲು ಅಸಾಧ್ಯ.

9. ಬಡತನ ಅದೆಷ್ಟೇ ಅವಮಾನ, ನೋವು ಕೊಟ್ಟರು ಅದು ಕೊಡುವ ನೆಮ್ಮದಿ ಇದೆಯಲ್ಲ ಅದನ್ನು ಯಾವ ಸಿರಿವಂತಿಕೆಯೂ ಕೊಡಲು ಅಶಕ್ತ.

___

ಸಣ್ಣ ಕತಾಸಂಕಲನದಲ್ಲಿ ಇದೊಂದು ಉತ್ತಮವಾದ ಪುಸ್ತಕ.

ಪುಸ್ತಕವನ್ನು ಕೊಂಡು ಓದಿ.
ನಿಮಗೆ ಯಾವ ಕತೆ ಕಾಡಿತು ಅಂತ ಹೇಳಿ.
Profile Image for Nayaz Riyazulla.
436 reviews93 followers
March 30, 2022
ಇಲ್ಲಿನ ಕಥೆಗಳ ಹಕ್ಕುದಾರ ನನಗೆ ಕಥೆಗಾರನಾಗುವ ಮುನ್ನ ನನ್ನ ಗೆಳೆಯ. ಆಗಾಗಿ ಇಲ್ಲಿನ ಕಥೆಗಳನ್ನು ನಾನು ಓದುಗನಾಗಿ ಓದುವುದಕ್ಕಿಂತ ಹೆಚ್ಚಾಗಿ ಸ್ನೇಹಿತನಾಗಿ ಓದಿದ್ದೇನೆ. ಮುದ್ದು ಹಾಲ್ಗಲ್ಲಿನ ಕೂಸು ಮೊದಲಿಗೆ ತಪ್ಪು ಹೆಜ್ಜೆಗಳನ್ನು ಇಟ್ಟಾಗ ತಾಯಿ ಸಂತಸ ಪಡುವಷ್ಟೇ ಸಂತಸ ಪಟ್ಟಿದ್ದೇನೆ.

ಇವು ಕಥೆಗಾರನ ಆರಂಭದ ಕೃಷಿಯ ಫಲಗಳು. ಇಲ್ಲಿನ ಕಥೆಗಳಲ್ಲಿ ವಯಸ್ಸಿಗೆ ತಕ್ಕ ನೋವುಗಳಿವೆ, ತುಂಟತನವಿದೆ ಅವೆಲ್ಲವೂ ವಿಚಿತ್ರ ಪ್ರೀತಿ ಹುಟ್ಟಿಸುತ್ತದೆ. ಕೆಲ ಕಥೆಗಳು ಬಹು ಸೊಗಸಾಗಿವೆ. ಬಹುತೇಕ ಕಥೆಗಳಿಗೆ ಅಂತ್ಯವೇ ಇಲ್ಲ, ನನ್ನ ಮಟ್ಟಿಗೆ ಕಥೆಗಳಿಗೆ ಅಂತ್ಯವಿರಬಾರದು. ಅಲ್ಲಿ ಕಥೆಗಳು ಬೆಳೆಯುವುದಿಲ್ಲ, ನೀವು ಗಮಿನಿಸಿದರೆ ಕಥೆಗಳು ಅಪೂರ್ಣವಾದಾಗಲೇ ಗೆದ್ದಿರುವ ಉದಾಹರಣೆಗಳು ಹೆಚ್ಚು.

ಕಥೆಗಾರ ಪ್ರಬುದ್ಧ ಓದುಗ. ಹಲವಾರು ಕಥೆಗಳನ್ನು ಓದಿರುವ ಕಥೆಗಾರನಿಗೆ ಯಾರದೋ ಬಲವಾದ influence ಇದೆ ಅಂತ ಸಾಲು ಸಾಲಿಗೆ ಬಲವಾಗಿ ಭಾಸವಾಗುತ್ತದೆ. ಇದು ಶಕ್ತಿಯು ಆಗಬಹುದು, ದೌರ್ಬಲ್ಯಯೂ ಆಗಬಹುದು. ಕಥೆಗಾರ ಕಥೆ ಕಥೆಗೂ ಬೆಳೆಯುತ್ತ ಹೋಗಬೇಕು, ಮುಗಿಲಿಗೆ ಮಿತಿಯಿಲ್ಲ. ಮುಂದೆ ಇನ್ನೂ ಸದಭಿರುಚಿಯಾದ ಕಥೆಗಳು ಹರಿದು ಬರಲಿ ಎಂದು ಪ್ರೀತಿಯಿಂದ ಆಶಿಸುತ್ತೇನೆ.
Displaying 1 - 2 of 2 reviews

Can't find what you're looking for?

Get help and learn more about the design.