ದೇವುಡು(೧೮೮೬ ಡಿಸೆಂಬರ್ ೨೯ - ೧೯೬೨ ಅಕ್ಟೋಬರ್ ೨೭) ಎಂದೇ ಖ್ಯಾತರಾದ ದೇವುಡು ನರಸಿಂಹಶಾಸ್ತ್ರಿಯವರು ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿಗಳಲ್ಲೊಬ್ಬರು. ಅವರು ಅನೇಕ ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ಕಾದಂಬರಿಗಳನ್ನು ಬರೆದಿದ್ದಾರೆ. ಅವರ "ಮಹಾಕ್ಷತ್ರಿಯ" ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ದೇವುಡು ಅವರ ಬರಹದ ಶೈಲಿ ಬಹಳ ಅದ್ಭುತ. ಕಥಾನಾಯಕಿ ಚಿನ್ನಾಸಾನಿಯ ನರ್ತನಾಭಿನಯದ ವಿವರಣೆಯನ್ನು ಓದಿದಾಗ ನಾವೇ ಅಲ್ಲಿದ್ದೇವೇನೋ ಎಂಬ ಭಾವ. ಆದರೆ ಪ್ರಾರಂಭದ ಆ ತನ್ಮಯತೆ ಮುಂದೆ ಸಿಗಲಿಲ್ಲ. ಅದೇಕೋ ಬಹಳಷ್ಟು ಪುಸ್ತಕಗಳು ಪ್ರಾರಂಭದಲ್ಲಿ ಹಿಡಿಸಿದರೂ, ಆಮೇಲೆ ಕಥೆಯ ಜಾಡು ಎಲ್ಲೆಲ್ಲೋ ಮುಂದುವರಿದು, ಪ್ರಾರಂಭಕ್ಕೂ, ಅಂತ್ಯಕ್ಕೂ ಸಂಬಂಧವೇ ಇಲ್ಲದಂತಾಗುತ್ತದೆ.