Jump to ratings and reviews
Rate this book

ಒಂದು ಕನಸಿನ ಪಯಣ

Rate this book

344 pages, Paperback

First published January 1, 1999

2 people are currently reading
41 people want to read

About the author

ನೇಮಿಚ೦ದ್ರ

15 books67 followers

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
13 (61%)
4 stars
6 (28%)
3 stars
1 (4%)
2 stars
0 (0%)
1 star
1 (4%)
Displaying 1 - 5 of 5 reviews
Profile Image for That dorky lady.
375 reviews70 followers
January 16, 2022
ನೇಮಿಚಂದ್ರರು ಪ್ರವಾಸದ ಕುರಿತು ಬರೆದರೆ ತಮ್ಮ ಅನುಭವವನ್ನು ಓದುಗರಿಗೆ ದಾಟಿಸಿದಂತಲ್ಲ ಓದುಗರನ್ನೇ ಖಂಡಾಂತರ ದಾಟಿಸಿದಂತೆ ಎಂದು 'ಪೆರುವಿನ ಪವಿತ್ರ ಕಣಿವೆಯಲ್ಲಿ ಓದುವಾಗ ಅನಿಸಿತ್ತು, ಇಲ್ಲಿಯೂ ಅದೇ ಭಾವ ಮುಂದುವರಿಕೆ.

ತಿರುಗಾಟ/ಪ್ರವಾಸ ಎಂದರೆ ತಿಂಗಳಾನುಗಟ್ಟಲೆ ತಯಾರಿ ಮಾಮೂಲಿ. ಹೋಗಬೇಕಿರೋ ಜಾಗಗಳ ಬಗ್ಗೆ ಯಾರೋ ಬರೆದ ರಿವ್ಯೂ ಓದುವುದು, ಅಲ್ಲಿನ ಸ್ಥಳೀಯ ಖಾದ್ಯ ಇತ್ಯಾದಿಗಳ ಮಾಹಿತಿ ಸಂಗ್ರಹಿಸುವುದು, ವಾಸ ವ್ಯವಸ್ಥೆ ಬುಕ್ಕಿಂಗ್'ಗಳು ಇವಷ್ಟೇ ಅಲ್ಲದೆ ನೋಡಹೊರಟ ತಾಣಗಳ ಫೋಟೋಗಳನ್ನು ಗೂಗಲ್ನಲ್ಲಿ‌ ನೋಡಿಯೇ ಹೊರಡುವ ನನ್ನಂತವರಿಗೆ ನೇಮಿಚಂದ್ರರು ಹೊರಟಂತೆ ಎಲ್ಲೋ ಒಂದು ವ್ಯವಸ್ಥೆ ಆಗುತ್ತದೆ ಎಂಬ ಬರವಸೆಯನ್ನೇ ಹಿಡಿದು ಹೊರಡುವ ಇಂತದ್ದೊಂದು ಪ್ರವಾಸ ಕನಸಿಗೂ ಸಾಧ್ಯವಿಲ್ಲ.

ಇಂಗ್ಲೆಂಡ್, ಪ್ಯಾರಿಸ್ಸಿನ ಗಲ್ಲಿಗಳಲ್ಲಿ ನೇಮಿಚಂದ್ರರ ಹಿಂದೆ ಯಾರೊ ಮರೆತ ಕವಿ ಮನೆ, ಮೂಸಿಯಂ, ಮೊನಲಿಸಳ ನಗು , ಕಳೆದು ಹೋದ ಪಾಂಪೆ, ಮೇರಿಕ್ಯೂರಿಯ ಲ್ಯಾಬ್, ರೋಮ್'ನ ಕಲೋಸಿಯಂ, ಮೈಕಲೆಂಜಲೋನ ಲಾಸ್ಟ್ ಜಡ್ಜ್ಮೆಂಟ್ ,ಚಂದದ ವೆನಿಸ್, ಆನ್ ಫ್ರಾಂಕಳ ಆನೆಕ್ಸ್ ಹೀಗೆ ಹತ್ತಾರು ಜಾಗೆಗಳನ್ನು ಹುಡುಕುತ್ತಾ ನಾವೂ ಅಲೆಯುತ್ತಿದ್ದೇನೇನೋ ಎಂದು ಅನ್ನಿಸುವಂತಾ ಗಾಢವಾದ ವಿವರಣೆಗಳು ಅವಸರವಿಲ್ಲದೇ ಓದುವವರಿಗೆ ರಸದೌತಣ.‌
Profile Image for Soumya.
217 reviews48 followers
January 20, 2022
ಒಂದು ಕನಸಿನ ಪಯಣ

Mobile phones, Handheld GPS, Internet ಎಲ್ಲಾ ಇಲ್ಲದ or limited access ಇದ್ದಂತ time ಅಲ್ಲಿ conducted tour ಬೇಡ ಅಂತ ಇಬ್ಬರೇ ಮಹಿಳಾ ಮಣಿಯರು ಕೈಗೊಂಡ Euro tripನ travelogue ಈ ಪುಸ್ತಕ.

ಸಕ್ಕತ್ ಆಗಿ ಇದೆ. Trip planning ಇಂದ ಹಿಡಿದು ವಾಪಸ್ ಬರುವವರೆಗೂ ಚೆನ್ನಾಗಿ ಹೇಳಿದ್ದಾರೆ. ಎಷ್ಟ್ ಚೆನ್ನಾಗಿದೆ ಅಂದ್ರೆ ನಾವು ಅವರ ಜತೆ ಅವ್ರು ಹೋದ ಜಾಗಗಳಿಗೆ ಹೋಗಿದ್ದೆವು ಅನ್ನೋ ರೀತಿ ಅನ್ಸತ್ತೆ.
Conducted tour ಅಲ್ಲಿ ಇವರಿಗೆ ಬೇಕಾದಂತಹ offbeat ಜಾಗಗಳು cover ಆಗಲ್ಲ, ಯದ್ವ ತದ್ವ charges ಬೇರೆ ಅಂತ ಅವರೇ plan ಮಾಡಿ, ಕೆಲವೊಂದು ಕಡೆ ಎಡವಟ್ಟು ಮಾಡಿಕೊಂಡು, ಬಡ ಭಾರತನ ಆ ಶ್ರೀಮಂತ ರಾಷ್ಟ್ರಗಳಿಗೆ ಹೋಲಿಸಿ ತೆಗಳದೆ, unbiased travelogueನ ಬಹಳ ಚೆನ್ನಾಗಿ ಕಟ್ಟಿ ಕೊಟ್ಟಿದಾರೆ ನೇಮಿಚಂದ್ರ ಅವರು.
ಅಲ್ಲದೆ ಅವರು ಈ ಪುಸ್ತಕ ಬರೆದ ಸಮಯದಲ್ಲಿ ಭಾರತದಲ್ಲಿ ಇನ್ನೂ use and throw concept ಮೊಳಕೆ ಒಡಿತ ಇತ್ತು ಅಷ್ಟೇ. ಆಗಲೇ ಅವರು ಅದರ ಬಗ್ಗೆ ಚೆನ್ನಾಗಿ ಹೇಳಿದ್ದಾರೆ. ಅವರು ಈ ವಿಚಾರ (use and throw concept, imbibing the western culture blindly etc..) ಹೇಳುವಾಗ ನನ್ನ ಆಪ್ತರು ಪಕ್ಕ ಕೂತು ಹೇಳಿದಂತೆ ಅನ್ಸತ್ತೆ.
ತುಂಬಾ ಇಷ್ಟ ಆಯ್ತು book.
ವಿಪರ್ಯಾಸ ಅಂದ್ರೆ ಅವರು ಈ book ಬರೆದ ಸಮಯದಲ್ಲಿ ವಿದೇಶಗಳಲ್ಲಿ ಕಂಡ ಕೆಲವು ವಿಚಾರಗಳನ್ನು, ಅಬ್ಬಾ ಈ ವಿಚಾರದಲ್ಲಿ ಭಾರತ ಇನ್ನೂ ಇಲ್ಲಿ ಅಷ್ಟು ಹಾಳಗಿಲ್ಲ ಅಂತ ಹೇಳಿದ್ದರೋ, ಆ ವಿಚಾರಗಳಲ್ಲಿ ಇಂದು ಭಾರತ ನಾನೇನು ಕಮ್ಮಿ ಅನ್ನುವ ಮಟ್ಟಕೆ ಇರುವುದು ಬೇಜಾರಿನ ಸಂಗತಿ.

ನೇಮಿಚಂದ್ರರ ಪೆರುವಿನ ಪವಿತ್ರ ಕಣಿವೆಯಲ್ಲಿ ಪ್ರವಾಸ ಕಥನ ಕೂಡ ಇಷ್ಟೇ ಚೆನ್ನಾಗಿದೆ.

PS - ಈ book ಓದುವಾಗ ಬೇಡ ಬೇಡ ಅಂದ್ರೂ ನನ್ನ ಶಾಲಾ ದಿನಗಳು ನೆನಪು ಆದವು. ಆಗ ಒಂದು family trip ಹೋಗಬೇಕು ಅಂದ್ರೆ, ಹೊರಡುವ ಮುಂಚೆನೇ ಹೋಗುವ ದಾರಿ details ಎಲ್ಲಾ ಪ್ಲಾನ್ ಮಾಡ್ಕೋತಾ ಇದ್ವಿ. ರಸ್ತೆಯಲ್ಲಿ ಇರುವ ಮೈಲಿಗಲ್ಲು ನೋಡಿ ದಾರಿ ಸಾಗಿಸ್ತ ಇದ್ವಿ. ದಾರಿ ತಪ್ಪಿದಾಗ ಅಲ್ಲೇ ಇರುವ localites ನ ದಾರಿ ಕೇಳ್ತಾ ಇದ್ವಿ.
ಈಗ ಇದನೆಲ್ಲ ಮಾಡಿ ಎಷ್ಟೋ ವರ್ಷ ಆಯ್ತು ಅನ್ನೋ feeling.. ಯಾಕೆ ? ಎಲ್ಲಾ google maps ಕೃಪೆ!
ಅಂದ್ರೂ ಹಿಂದೆ ಹೋದ ಆ ರೀತಿ trips ಇಂದು ನೆನಪಿನ ಪುಟದಲ್ಲಿ ಇದೆ. Google map ಕೃಪೆ ಈ ತರ memories ನ ಕರುಣಿಸಿದ್ದು ಬಹಳ ಕಡಿಮೆ.
Profile Image for Prashanth Bhat.
2,156 reviews138 followers
September 11, 2021
ಒಂದು ಕನಸಿನ ಪಯಣ - ನೇಮಿಚಂದ್ರ.

ಕನ್ನಡದ ಮಟ್ಟಿಗೆ ಸ್ತ್ರೀವಾದಿ ನೆಲೆಯಲ್ಲೂ ,ಸರ್ಜನಶೀಲತೆಯ ಹಲ ದಿಕ್ಕುಗಳ ಚಾಚಿಕೊಂಡ ಆಯಾಮಗಳಲ್ಲೂ ಬರಹಗಾರ್ತಿಯಾಗಿ ನೇಮಿಚಂದ್ರ ಬಹುಮುಖ್ಯ ಹೆಸರು. ವ್ಯಾನ್‌ಗೋನ ಕುರಿತಾದ ಅವರ ಪುಟ್ಟ ಪುಸ್ತಕ 'ನೋವಿಗದ್ದಿದ ಕುಂಚ' ಎಷ್ಟು ಪ್ರಭಾವಶಾಲಿಯಾಗಿ ನಮ್ಮೊಳಗೆ ಇಳಿಯುತ್ತದೆ ಎಂದರೆ ವ್ಯಾನ್ ಗೋ ನಮ್ಮವನೇ ಎನಿಸಿಬಿಡುತ್ತಾನೆ. ಇದಲ್ಲದೆ 'ಯಾದ್ ವಶೇಂ' ಕಾದಂಬರಿ, ಕಥೆಗಳು, ಬದುಕ ಬದಲಿಸಬಹುದು ಸರಣಿ, ಪೆರುವಿನ ಪವಿತ್ರ ಕಣಿವೆಯಲ್ಲಿ ಪ್ರವಾಸಕಥನ ಇದೆಲ್ಲದರಲ್ಲೂ ನೇಮಿಚಂದ್ರರದೇ ಎಂದು ಹೇಳಬಹುದಾದ ಛಾಪಿದೆ‌.

ಈ ಪ್ರವಾಸ ಕಥನ ಇವತ್ತಿನದಲ್ಲ. ಇದು ಸರಿ ಸುಮಾರು ಎರಡು ದಶಕ ಮೊದಲಿದ್ದು. ಲೇಖಕಿ ತನ್ನ ಗೆಳತಿ ಹೇಮಲತಾ ಮಹಿಷಿ ಅವರ ಜೊತೆಗೂಡಿ ಹೊರಟದ್ದು. ಪೈಸೆಗೆ ಪೈಸೆಗೆ ಜೋಡಿಸಿ ಕಂಡ ಕನಸಿನ ಬೆನ್ನು ಹತ್ತಿದ್ದು. ಹಾಗಾಗಿ ಇಲ್ಲಿ ಅವರ ಅನುಕ್ಷಣದ ಹಣ ಉಳಿಸುವ ಪಡಿಪಾಟಲು, ಕನಸು ನನಸಾಗಿಸುವ ತವಕ ಎಲ್ಲವೂ ಕ್ಯಾನ್‌ವಾಸ್‌ಗೆ ಹತ್ತಿದ ಗಾಢ ಬಣ್ಣದ ಹಾಗೆ ನಮ್ಮೊಳಗೆ ಅಂಟಿ‌ ನಿಲ್ಲುತ್ತದೆ. ಈ ಪ್ರವಾಸ ಕಥನ ಈಗ ಓದುವಾಗ ಎರಡು ದಶಕ ಮೊದಲು ಅವರು ವಿದೇಶೀ ನೆಲದಲ್ಲಿ 'ಸದ್ಯ ನಮ್ಮ ದೇಶದಲ್ಲಿ ಹೀಗಿಲ್ಲ' ಎಂದು ಗಾಬರಿಪಟ್ಟದ್ದೆಲ್ಲ ಈಗ ಇಲ್ಲಿಗೆ ಬಂದಿರುವುದು ಕಣ್ಣಿಗೆ ರಾಚುತ್ತದೆ‌.
ಆ ಅನುಭವಕ್ಕಾದರೂ ಇದು ವಿಶಿಷ್ಟ.
Profile Image for Mallikarjuna M.
51 reviews14 followers
May 23, 2022
ಪೆರುವಿನ ಪವಿತ್ರ ಕಣಿವೆಯಲ್ಲಿ, ಯಾದ್ ವಶೇಮ್ ಕೃತಿಯಲ್ಲಿ ಈಗಾಗಲೇ ಕಂಡಂತೆ ಈ ಕೃತಿಯಲ್ಲಿಯೂ ನೇಮಿಚಂದ್ರರವರು ತಮ್ಮ ಓದುಗರನ್ನು ಕುಳಿತಲ್ಲಿಯೇ ಸಪ್ತ ಸಾಗರದಾಚೆ ಸೆಳೆದುಕೊಂಡು ಹೋಗುವುದಲ್ಲದೇ, ಸ್ಥಳ ಪುರಾಣದ ಜೊತೆಗೆ ಇತಿಹಾಸ, ಸಂಸ್ಕೃತಿ, ಕಲೆ, ಭಾರತದೊಂದಿಗಿರುವ ಸಾಮ್ಯತೆ ಅಥವಾ ವಿವಿಧತೆಯನ್ನು ಅತ್ಯದ್ಭುತವಾಗಿ ಕಟ್ಟಿಕೊಟ್ಟಿರುತ್ತಾರೆ.
ನೇಮಿಚಂದ್ರರವರು ಶ್ರೀಮತಿ ಹೇಮಲತಾ ಮಹಿಷಿಯವರೊಡನೆ ಕಾಲು ಶತಮಾನದ ಹಿಂದೆ ಆಧುನಿಕ ಸಂವಹನ ಉಪಕರಣಗಳಾಗಲಿ ಅಥವಾ ಮಾಧ್ಯಮಗಳಿಲ್ಲದ ಕಾಲದಲ್ಲಿ ಭೂಪಟಗಳನ್ನು ಹಿಡಿದುಕೊಂಡು ಇಡೀ ಯುರೋಪ್ ತಿರುಗಿದ ಮತ್ತು ತಮ್ಮ ಕನಸಿನ ಒಂದೊಂದೇ ಮಜಲುಗಳನ್ನು(ವಿಜ್ಞಾನಿಗಳ, ಕಲಾವಿದರ, ಸಾಹಿತಗಳ, ಆನ್ ಫ್ರಾಂಕ್ ಅಂತಹ ಪ್ರೇರಣಾತ್ಮಕ ಚೇತನಗಳು ಬೆಳೆದ, ಕೃತಿ ರಚಿಸಿದ, ಪ್ರಯೋಗ ನಡೆಸಿದ, ಜೀವಿಸಿದ ಸ್ಥಳಗಳು) ಈಡೇರಿಸಿಕೊಂಡ ಆತ್ಮೀಯ ಪ್ರವಾಸ ಕಥನವೇ "ಒಂದು ಕನಸಿನ ಪಯಣ".

P.S.: ನಾನು ಈ ಕೃತಿ ಓದಿದ ಸಮಯವೇ ಒಂದು ವಿಶೇಷ ಎನ್ನಬಹುದು, ಕಾಕತಾಳೀಯವೆಂಬಂತೆ ಲೇಖಕರು ಪ್ರಯಾಣ ಆರಂಭಿಸಿದ ೨೫ ವರ್ಷಗಳ ನಂತರ ಅದೇ ದಿನ ಓದಲು ಪ್ರಾರಂಭಿಸಿ ಲೇಖಕರು ಭಾರತಕ್ಕೆ ಹಿಂದಿರುಗಿದ ದಿನವೇ ಓದನ್ನು ಸಂಪೂರ್ಣಗೊಳಿಸಿದೆ, ಈ ಅವಧಿಯಲ್ಲಿ ನಾನು ಕೈಗೊಂಡ ಹಿಮಾಲಯ ಚಾರಣದಲ್ಲಿ ಈ ಕೃತಿಯು ನನ್ನ ಸಂಗಾತಿಯಾಗಿತ್ತು.
Profile Image for Ashwini.
35 reviews2 followers
December 18, 2022
ಇಂದಿನ ಕಾಲಮಾನದಲ್ಲಿ ಹೆಣ್ಣೊಬ್ಬಳು ದೇಶಾಂತರ ಪ್ರವಾಸ ಹೋಗುವುದು ಒಂದು ವಿಶೇಷ ಎನಿಸುವ ವಿಷಯವಲ್ಲ. ಅದೇ ಸರಿಸುಮಾರು ಕಾಲು ಶತಮಾನದ ಹಿಂದೆ ಮಹಿಳೆಯರಿಬ್ಬರೇ ದೇಶಾಂತರ ಅಲ್ಲಲ್ಲ, ಖಂಡಾಂತರ ಹೋಗುವುದು ಹುಬ್ಬು ಏರಿಸಬೇಕಾದಂತ ವಿಷಯವೇ ಆಗಿತ್ತು. ಅದೂ ಹೋಗಿರುವುದು ಕಂಡಕ್ಟ್ ಟೂರ್ ಅಲ್ಲ. ಅವರಿಬ್ಬರೇ ಅವರಿಬ್ಬರಿಗೂ ನೋಡಬೇಕಾದ ಸ್ಥಳಗಳನ್ನು ಆ ದೇಶದ ಮ್ಯಾಪ್ ಪುಸ್ತಕವನ್ನು ಹಿಡಿದು ನೋಡಿ ಬಂದಿರುವುದು ಅಂದರೆ ಆ ಪ್ರವಾಸದ ವಿಶೇಷತೆಯನ್ನು ತಿಳಿಯಿರಿ.
ಈ ಕೃತಿಯ ಲೇಖಕಿ ನೇಮಿಚಂದ್ರ ಕತೆಗಾರ್ತಿಯಾಗಿ, ಅಂಕಣ ಬರಹಗಾರ್ತಿಯಾಗಿ ಪರಿಚಿತರು. ವಿಜ್ಞಾನ ಕ್ಷೇತ್ರ ಅವರ ವೃತ್ತಿ, ಸಾಹಿತ್ಯ ಅವರ ಆಸಕ್ತಿ, ಮತ್ತು ಮಹಿಳಾ ಅಧ್ಯಯನ ಅವರ ಕಳಕಳಿ. ನೇಮಿಚಂದ್ರ ಅವರಿಗೆ ಇರುವ ವಿಭಿನ್ನ ಕ್ಷೇತ್ರಗಳ ಬಗೆಗಿನ ಆಸಕ್ತಿಯನ್ನು ಈ ಪ್ರವಾಸ ಕಥನದಲ್ಲಿ ನಾವು ಕಾಣಬಹುದು. ಬರಿ ವಿದೇಶ ಪ್ರವಾಸ ಮಾಡಿ ಬರುವ ಆಸೆ ಇರಲಿಲ್ಲ ಅವರಿಗೆ, ಒಂದಿಷ್ಟು ಪುಸ್ತಕಗಳಲ್ಲಿ ಓದಿದ ವಿಷಯಗಳನ್ನು ಅನುಭವಿಸಿ ಬರಬೇಕಿತ್ತು. ಉದಾಹರಣೆಗೆ ಅವರಿಗೆ ಮೇಡಂ ಕ್ಯೂರಿಯ ಪ್ರಯೋಗ ಶಾಲೆಯನ್ನು ನೋಡಬೇಕಿತ್ತು. ಎಮಿಲಿ ಬ್ರಾಂಟೆ ಮತ್ತು ಅವಳ ಸಹೋದರಿಯರು ಬರೆದ ಕಾದಂಬರಿಯಲ್ಲಿ ಬರುವ ಬೋಡು ಬೆಟ್ಟಗಳಲ್ಲಿ ಓಡಾಡಿ ಬರಬೇಕಿತ್ತು. ವರ್ಡ್ಸ್ ವರ್ತ್ ಬಾಳಿ ಬದುಕಿದ ಮನೆಯನ್ನು ನೋಡಬೇಕಿತ್ತು. ಇಂಗ್ಲಿಷ್ ಭಾಷೆ ಕವಿ ಜಾನ್ ಕಿಟ್ಸ್ ಕೊನೆಯುಸಿರು ಎಳೆದ ಕೋಣೆಯಲ್ಲಿ ಮೌನವಾಗಿ ಕೂತು ಬರಬೇಕಿತ್ತು. ಒಟ್ಟಿನಲ್ಲಿ ತೆರೆಮರೆಯಲ್ಲಿ ಉಳಿದು ಹೋದ ಒಂದಿಷ್ಟು ಮಹಿಳಾ ಸಾದಕಿಯರ ಜೀವನವನ್ನು ಅನುಭವಿಸಿ ಬರಬೇಕಿತ್ತು. ಅದಕ್ಕಾಗಿ ಯಾವುದೇ ಕಂಡಕ್ಟಿಂಗ್ ಟೂರಗೆ ಹೋಗದೆ ತಾವೇ ಸ್ವತಃ ಓಡಾಡಿ ಬೊಗಸೆ ತುಂಬಾ ಅನುಭವಗಳನ್ನು ಬಾಚಿ ತಂದಂತ ಪ್ರವಾಸದ ���ಥೆ.
ಲೇಖಕಿ ತುಂಬಾ ಸರಳವಾಗಿ ನಮ್ಮನ್ನು ಪುಸ್ತಕದ ಒಳಗೆ ಸುತ್ತಾಡಿಸಿದ್ದಾರೆ. ಎಲ್ಲಿಯೂ ಒಂದು ಕ್ಷಣಕ್ಕೂ ಬೇಸರ ತರಿಸದ ಬರಹ. ಹಿತಮಿತವಾದ ಹಾಸ್ಯ.
ಪಾಶ್ಚಿಮಾತ್ಯರು ಅವರ ಪುರಾತನ ವಸ್ತುಗಳನ್ನು ಕಾಪಾಡುವ ಬಗ್ಗೆ ಹೊಗಳುತ್ತಾ, ಪಾಶ್ಚಿಮಾತ್ಯರ ಬಗ್ಗೆ ಇರುವಂತಹ ಅತಿಯಾದ ಸುಂದರ ತಪ್ಪು ಕಲ್ಪನೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಪಾಶ್ಚಿಮಾತ್ಯರು ಸರ್ವಶ್ರೇಷ್ಟರಲ್ಲ ಅವರಿಂದ ಶುರುವಾದ ಕೊಳ್ಳುಬಾಕಾತನ ಜಗತ್ತನ್ನು ಯಾವ ರೀತಿ ಹಾಳು ಮಾಡುತ್ತಿದೆ, ಅವರ ಊರಿನ ರಸ್ತೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕೊಳಕುತನ ವಿರುವುದರ ಬಗ್ಗೆ ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ.
ವಿಶಿಷ್ಟವಾದ ಅನುಭವಗಳನ್ನು ಪಡೆಯಲು ಸಿದ್ಧಸೂತ್ರಗಳನ್ನು ಅನುಸರಿಸುವುದರ ಬದಲು ವಿಭಿನ್ನ ರೀತಿಯಲ್ಲಿ ಪ್ರಯತ್ನಿಸಿದರೆ ದೊರಕುವ ಅನುಭವವೇ ಬೇರೆ ಸ್ತರದ್ದು ಎಂಬುದು ಈ ಪುಸ್ತಕದಿಂದ ನನ್ನ ಅನುಭವಕ್ಕೆ ಬಂದಂತಹ ಅಭಿಪ್ರಾಯ.
ಅದು ಪುಸ್ತಕವೇ ಆಗಿರಲಿ, ಪ್ರವಾಸವೇ ಆಗಿರಲಿ, ಜೀವನವೇ
Displaying 1 - 5 of 5 reviews

Can't find what you're looking for?

Get help and learn more about the design.