Jump to ratings and reviews
Rate this book

ಪರ್ದಾ & ಪಾಲಿಗಮಿ [Purdah & Polygamy]

Rate this book
Purdah and Polygomy: Life In An Indian Muslim Household (‘ಪರ್ದಾ & ಪಾಲಿಗಮಿ: ಭಾರತೀಯ ಮುಸ್ಲಿಮ್ ಕುಟುಂಬವೊಂದರಲ್ಲಿ ಬದುಕು’) ಎಂಬ ಹೆಸರಿನ ಇಂಗ್ಲೀಷ್ ಕಾದಂಬರಿ ಬೆಂಗಳೂರಿನ ಹೊಸಾಳಿ ಮುದ್ರಣಾಲಯದಲ್ಲಿ ಮುದ್ರಿತವಾಗಿ 1944ರಲ್ಲಿ ಪ್ರಕಟವಾಯಿತು. ಇದನ್ನು ರಚಿಸಿದವರು ಬೆಂಗಳೂರಿನ ಇಕ್ಬಾಲುನ್ನೀಸಾ ಹುಸೇನ್ ಎಂಬ ಮುಸ್ಲಿಂ ಮಹಿಳೆ. ಆ ಮೂಲಕ ಇಂಗ್ಲೀಷ್‌ನಲ್ಲಿ ಸಾಮಾಜಿಕ ಕಾದಂಬರಿಯನ್ನು ಬರೆದ ಮೊದಲ ಭಾರತೀಯ ಮುಸ್ಲಿಮ್ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿ, ಇಕ್ಬಾಲುನ್ನೀಸಾ ಭಾರತೀಯ ಇಂಗ್ಲೀಷ್ ಸಾಹಿತ್ಯದ ಇತಿಹಾಸದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡರು.

ಈ ಕೃತಿಯನ್ನು ಇಂಗ್ಲೀಷ್‌ನಲ್ಲಿ ಬರೆಯಲ್ಪಟ್ಟ ಪ್ರಥಮ ಮುಸ್ಲಿಮ್ ಸುಧಾರಣಾವಾದಿ ಕಾದಂಬರಿಯೆಂದು ಅಥವಾ ಪ್ರಥಮ ಸ್ತ್ರೀವಾದಿ ಕಾದಂಬರಿಯೆಂದು ನೋಡಬಹುದು. ಒಂದಲ್ಲಾ ಒಂದು ರೀತಿಯಲ್ಲಿ ಮಹಿಳೆಯು ತನ್ನ ಹಕ್ಕುಗಳಿಗಾಗಿ ಹೋರಾಡುವುದು ಕೇವಲ ಇತ್ತೀಚಿನ ಬೆಳವಣಿಗೆಯಲ್ಲ ಮತ್ತು ಕೇವಲ ಪಾಶ್ಚಾತ್ಯ ರಾಷ್ಟ್ರಗಳಿಂದ ಆಮದು ಮಾಡಿಕೊಂಡ ವೈಚಾರಿಕತೆಯೂ ಅಲ್ಲ ಎಂಬುದಕ್ಕೆ ಇಕ್ಬಾಲುನ್ನೀಸಾ ಹುಸೇನ್ ಅವರ “ಪರ್ದಾ & ಪಾಲಿಗಮಿ” ಕಾದಂಬರಿ ಅತ್ಯುತ್ತಮ ನಿದರ್ಶನ. 21ನೆಯ ಶತಮಾನದಲ್ಲಿಯೂ ‘ಧಾರ್ಮಿಕ ಅಸ್ಮಿತೆ’ ಎಂಬ ನೆಪದಲ್ಲಿ ಎಲ್ಲಾ ಧರ್ಮಗಳ ನಾಯಕರೂ ಪರಂಪರಾಗತ ಸ್ತ್ರೀ-ಪುರುಷ ಶ್ರೇಣೀಕರಣವನ್ನು ಹಿಂಬಾಗಿಲಿಂದ ತರಲು ಪ್ರಯತ್ನಿಸುತ್ತಿರುವ ಕಾರಣದಿಂದ ಈ ಕಾದಂಬರಿ ಇಂದೂ ಕೂಡಾ ಅತ್ಯಂತ ಪ್ರಸ್ತುತವಾಗಿದೆ.

ಒಂದು ಅತ್ಯಂತ ಪ್ರಸ್ತುತವಾಗಿರುವ ಇಂಗ್ಲೀಷ್ ಕೃತಿಯನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿರುವ ದಾದಾಪೀರ್ ಜೈಮನ್ ಮತ್ತು ಈ ಕೃತಿಯನ್ನು ಅನುವಾದಿಸಲು ಜೈಮನ್ ಅವರನ್ನು ಪ್ರೋತ್ಸಾಹಿಸಿ, ಅನಂತರ ‘ಛಂದ ಪುಸ್ತಕ’ ಎಂಬ ತಮ್ಮದೇ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯ ಮೂಲಕ ಅನುವಾದಿತ ಕೃತಿಯನ್ನು ಪ್ರಕಟಿಸುತ್ತಿರುವ, ಪ್ರಸಿದ್ಧ ಕತೆಗಾರ-ಕಾದಂಬರಿಕಾರ ವಸುಧೇಂದ್ರ ಇವರಿಬ್ಬರಿಗೂ ನನ್ನ ಹಾರ್ದಿಕ ಅಭಿನಂದನೆಗಳು.

ಡಾ. ಸಿ.ಎನ್. ರಾಮಚಂದ್ರನ್

424 pages, Paperback

First published January 1, 1944

2 people are currently reading
74 people want to read

About the author

Iqbalunnisa Hussain

2 books1 follower

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
5 (21%)
4 stars
14 (60%)
3 stars
2 (8%)
2 stars
2 (8%)
1 star
0 (0%)
Displaying 1 - 13 of 13 reviews
Profile Image for Nayaz Riyazulla.
426 reviews94 followers
July 11, 2021
ಪರ್ದಾ ಮತ್ತು ಪಾಲಿಗಮಿ ಎಂಬುದು ಇಸ್ಲಾಂ ಧರ್ಮದ ಅನುಯಾಯಿಗಳು ಪಾಲಿಸಿಕೊಂಡು ಬಂದ ಕ್ರೂರ ಪದ್ಧತಿಗಳು, ಪರ್ದಾ ಪದ್ಧತಿಯಂದರೆ ಮುಸ್ಲಿಂ ಹೆಣ್ಣುಮಕ್ಕಳು ತಮ್ಮ ಗಂಡನ ಹೊರತು ಬೇರೊಬ್ಬರ ಗಂಡಸಿನ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಮುಖಕ್ಕೆ ಮುಸುಕು ಹಾಕಿಕೊಂಡು ಇರಬೇಕಾದ ಪದ್ಧತಿ, ಇನ್ನೂ ಪಾಲಿಗಮಿ ಎಂದರೆ ಬಹುಪತ್ನಿತ್ವ. ಇವೆರಡು ಜಿಹಾದ್ (ಧರ್ಮ) ಎಂದೇ ನಂಬಿಕೊಂಡು ತಮಗೆ ಅನುಕೂಲವಾಗುವಂತೆ ಬಳಸಿಕೊಂಡು ಹೆಣ್ಣು ಮಕ್ಕಳನ್ನು ಅಬಲೆಯರನ್ನಾಗಿ ಮಾಡಿದ ಪದ್ಧತಿಗಳು. ಇವೆರಡು ಪದ್ಧತಿಗಳು ಹೇಗೆ ಹೆಣ್ಣು ಮಕ್ಕಳ ಘೋರ ಸ್ಥಿತಿಗೆ ದಾರಿ ಮಾಡಿ ಕೊಟ್ಟಿವೆ ಎಂಬುದನ್ನು ಲೇಖಕರು ಇಲ್ಲಿ ಕಾದಂಬರಿಯ ರೂಪದಲ್ಲಿ ಹೇಳಿದ್ದಾರೆ.

ಈ ಕಾದಂಬರಿಯನ್ನು ಇಬ್ಬಾಲುನ್ನೀಸಾ ಹುಸೇನ್ 1944 ರಲ್ಲಿ ಆಂಗ್ಲ ಭಾಷೆಯಲ್ಲಿ ಬರೆದಿದ್ದಾರೆ, ಅಂದರೆ ಅವರು 1920 - 1940 ರಲ್ಲಿ ಕಂಡ ಪರಿಸ್ಥಿತಿಯನ್ನು ಅವಲೋಕಿಸಿ ಬರೆದಿದ್ದಾರೆ. ಸ್ವಾತಂತ್ರ್ಯ ಪೂರ್ವದ ಸ್ಥಿತಿಯನ್ನು ಅವರು ಹೇಳಿದ್ದಿದ್ದಾರೂ ಈಗಿನ ಪರಿಸ್ಥಿತಿಗೆ ಇದು ಅಷ್ಟು ಭಿನ್ನವಲ್ಲ, ಹಾಗಂತ ಅಷ್ಟು ಕ್ರೂರ ಪರಿಸ್ಥಿತಿಯಲ್ಲೂ ಈಗಿಲ್ಲ. ಇದ್ದರೂ ನಮ್ಮ ದೇಶದಲ್ಲಂತೂ ಇಲ್ಲ.

ಇದು ಮೂರು ತಲೆಮಾರಿನ ಕಥೆ, ಉಮರ್, ಕಬೀರ್ ಮತ್ತು ಅಕ್ರಮ್. ಈ ಮೂವರ ಜೀವನದಲ್ಲಿ ನಡೆದ ಆಗುಹೋಗುಗಳ ಕಥೆ. ಈ ಮೂವರು ಪುರುಷರ ಕೈಯಲ್ಲಿ ಹೇಗೆ ಸ್ತ್ರೀ ತಂಗಿಯಾಗಿ, ಹೆಂಡತಿಯಾಗಿ, ಕೆಲಸದವಳಾಗಿ, ಮಗಳಾಗಿ ನಲುಗುತ್ತಾಳೆ ಎಂಬುದೇ ಕಥೆಯ ಸತ್ವ.

ನನಗೆ ಇಲ್ಲಿ ಪುರುಷನ ಅಸಮಾನ ಅಧಿಕಾರಶಾಹಿ ವರ್ತನೆಗಿಂತ ಹೆಚ್ಚು ಕಾಡುವುದು ಮತ್ತು ಸಿಟ್ಟು ತರಿಸುವುದು ಹೆಣ್ಣಿನ ಅಸಹಾಯಕತೆ ಮತ್ತು ಪುರುಷರ ಅಧಿಕಾರಶಾಹಿ ವರ್ತನೆಯನ್ನು ಧರ್ಮದ ಆಧಾರದ ಮೇಲೆ ಸ್ವೀಕಾರ ಮಾಡಿಕೊಳ್ಳುವುದು. ಈ ಕಾದಂಬರಿಯಲ್ಲಿ ಬರುವ ಕಬೀರ್ ನ ನಾಲ್ಕು ಪತ್ನಿಯರು ಇದನ್ನು ಸ್ವೀಕಾರ ಮಾಡಿ ದಿಲ್ಕುಶ್ ಎಂಬ ಬಂಗಲೆಯನ್ನೇ ತಮ್ಮ ಸೆರೆಮನೆಯನ್ನಾಗಿ ಮಾಡಿಕೊಳ್ಳುತ್ತಾರೆ, ಈ ನಾಲ್ವರಲ್ಲಿ ಬಹುವಾಗಿ ಕಾಡುವುದು ಮುನೀರ ಎಂಬ ಪಾತ್ರ. ಈಕೆ ಕೊನೆಯವರೆಗೂ ಕಬೀರ್ ನ ಹೆಂಡತಿಯಾಗಿ ಅಥವಾ ಜುಹ್ರಳ ಸೊಸೆಯಾಗಿ ಉಳಿಯದೆ ಕೇವಲ ಒಬ್ಬ ಅಡುಗೆಯವಳಾಗೆ ಉಳಿಯುತ್ತಾಳೆ.

ಉಮರ್ ತಲೆಮಾರಿನಲ್ಲಿ ಇದ್ದ ಕಟ್ಟುನಿಟ್ಟು ಅಕ್ರಮ್ ತಲೆಮಾರಿನಲ್ಲಿ ತಿಳಿಯಾಗುವ ನಿಟ್ಟಿನಲ್ಲಿ ಹೋಗುತ್ತಿರುತ್ತವೆ. ಉದಾಹರಣೆಗೆ ಅಕ್ರಮ್ ವಿಧವೆಗೆ ಬಾಳು ಕೊಡಲು ಮನಸ್ಸು ಮಾಡುತ್ತಾನೆ, ಪರಧರ್ಮಿಯ ಹುಡುಗಿಯನ್ನು ಪ್ರೀತಿಸಲು ಇಚ್ಚಿಸುತ್ತಾನೆ, ಜೂಬ್ಬವನ್ನು ಬಿಟ್ಟು ಕೋಟ್ ಧರಿಸುತ್ತಾನೆ.. ಹೀಗೆ ತಿಳಿಯಾಗುವ ಸಂದರ್ಭದಲ್ಲಿ ಇಂತಹ ಬೆಳವಣಿಗೆಯನ್ನು ಸಹಿಸದ ಜನರು ಅವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಯಥಾಸ್ಥಿತಿಯನ್ನೇ ಅಪ್ಪಿ ಗೆದ್ದು ಸೋಲುತ್ತಾರೆ. ಕೊನೆಗೆ ಏನು ಬದಲಾವಣೆ ಆಗದೆ ದಿಲ್ಕುಶ್ ಬಂಗಲೆ ಜುಹ್ರಾಳ ಕುತಂತ್ರದಿಂದ ಅಕ್ರಮ್ ಳ ತಾಯಿಯ ಕುತಂತ್ರಕ್ಕೆ ವರ್ಗವಾಗುತ್ತದೆಯಷ್ಟೇ.

ಇನ್ನೂ ಬಹುಮುಖ್ಯವಾಗಿ ಲೇಖಕರು ಹೇಳುವ ಸಂದೇಶ ಹೆಣ್ಣಿನ ಶಿಕ್ಷಣ, ಇದಕ್ಕೆ ಉದಾಹರಣೆಯಾಗಿ ಲೇಖಕರು ಮಕ್ಬುಲ್ ಎಂಬ ಪಾತ್ರವನ್ನು ಬಹು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ. ಈಕೆ ವಿದ್ಯೆ ಎಂಬ ದೀವಿಗೆ ಹಿಡಿದು ಹೇಗೆ ಈ ನರಕದ ಕೂಪದಿಂದ ಪಾರಾಗುತ್ತಾಳೆ ಎಂಬುವ ಸಂದೇಶವನ್ನು ರವಾನಿಸಿದ್ದಾರೆ.

ಈ ಕಾದಂಬರಿಯನ್ನು ನಾನು ಓದಲು ಬಹು ಮುಖ್ಯ ಕಾರಣ ಈ ಕಾದಂಬರಿಯ ಅನುವಾದಕ ದಾದಾಪೀರ್ ಜೈಮನ್. ಈತನ ಕಥೆಗಳು ಕವನಗಳು ನನಗೆ ಅಚ್ಚುಮೆಚ್ಚು, ಈತ ಪೂರ್ಣ ಪ್ರಮಾಣದ ಲೇಖಕನಾಗುವುದಕ್ಕೆ ಇಚ್ಚಿಸುತ್ತಿದ್ದ ಜನರಲ್ಲಿ ನಾನು ಒಬ್ಬ. ಛಂದ ಪ್ರಕಾಶನ ಸಂಸ್ಥೆಯಿಂದ ಈತ ಪರಿಚಯವಾಗಿದ್ದು ನನಗೆ ಸಂತೋಷ. ಈ ಕಾದಂಬರಿಯನ್ನು ಅಚ್ಚುಕಟ್ಟಾಗಿ ಅನುವಾದ ಮಾಡಿದ್ದಾರೆ. ಈ ಕಾದಂಬರಿಯ ಕೆಲವು ಅಧ್ಯಾಯಗಳನ್ನು ಇಂಗ್ಲಿಷ್ನಲ್ಲಿ ಓದಿರುವದರಿಂದ ನಾನು ಈ ಅಭಿಪ್ರಾಯ ಹೇಳಬಲ್ಲೆ. ಕೆಲ ಅನುವಾದಗಳು ಮೂಲಕ್ಕಿಂತ ಇಷ್ಟವಾಗುತ್ತವೆ, ಅದರಲ್ಲಿ ನನಗೆ ಇದು ಒಂದು.

ಈ ಕಾದಂಬರಿಯಲ್ಲಿ ಹೆಚ್ಚು ಉರ್ದು ಪದಗಳು ಬರುತ್ತವೆ, ಅವಕ್ಕೆಲ್ಲ ಕೊನೆಯಲ್ಲಿ ಅರ್ಥ ಕೊಟ್ಟಿದ್ದರೆ, ಉರ್ದು ತಿಳಿಯದೆ ಇರುವ ಇತರ ಓದುಗರಿಗೆ ಸುಲಭವಾಗುತ್ತಿತ್ತು. ಏಕೆಂದರೆ ಕೆಲ ಪದಗಳಿಗೆ ಇಲ್ಲಿ ಅರ್ಥ ಕೊಟ್ಟಿಲ್ಲ.

ಒಂದು ಸುಂದರ ಓದು. ಓದಿ ಓದಿಸಿ
Profile Image for Ashish Iyer.
874 reviews637 followers
February 18, 2024
This book gives you glimpses of Muslim household. It tell us about the issues of purdah, Zenana, mardana and polygamy. Even though story is written in colonial times but it is still very relevant. Indian laws still give Muslim exception for having multiple wives. Sadly being a democratic secular country, India still doesn't have equal laws for everyone. Thank you Iqbalunnisa Hussain for writing this amazing book. Every woman deserve to be educated and be independent on their own. This book is also available in Kannada. I was looking for more Iqbalunnisa Hussain's works. Sadly, I couldn't come across any.

If you are looking for more books on plight of women. Do check out.

1. Halala by Bhagwandas Morwal
2. Breaking ties (Chandragiri Theeradhalli) by Sara Aboobakar
3. Blasphemy by Tehmina Durrani
Profile Image for Sowmya K A Mysore.
40 reviews35 followers
August 22, 2021
ಪುಸ್ತಕ ವಿಮರ್ಶೆ: "ಪರ್ದಾ ಮತ್ತು ಪಾಲಿಗಮಿ"
ಮೂಲ‌ ಲೇಖಕರು: ಇಕ್ಬಾಲುನ್ನೀಸಾ ಹುಸೇನ್
ಅನುವಾದಕರು: ದಾದಾಪೀರ್ ಜೈಮನ್

ಈ ಪುಸ್ತಕ ಓದಲು ಮುಖ್ಯವಾದ ಕಾರಣವೆಂದರೆ ಇದರ ಮುನ್ನುಡಿ ಬರೆದುಕೊಟ್ಟಿರುವ ಡಾ. ಸಿ.ಎನ್.ರಾಮಚಂದ್ರನ್ ಅವರ ಮಾತುಗಳು. ಅವರ ಮಾತುಗಳು ಈ ಪುಸ್ತಕವನ್ನು ಓದಲೇಬೇಕೆಂದು ಪ್ರೇರೇಪಿಸುತ್ತವೆ. ನಾನು ಮೂಲ ಇಂಗ್ಲೀಷ್ ಕಾದಂಬರಿ ಓದಿಲ್ಲ. ಹಾಗಾಗಿ ಅನುವಾದವೆಂದರೆ, ಅದರಲ್ಲಿಯೂ ಸ್ವಾತಂತ್ರ್ಯ ಪೂರ್ವದ ಕಾದಂಬರಿ ಬಹುಶಃ ಡಾಕ್ಯುಮೆಂಟರಿ ಥರ ನೀರಸವಾಗಿರುತ್ತದೆ ಎಂದುಕೊಂಡಿದ್ದೆ. ಆದರೆ ಅನುವಾದಕರು ಎಷ್ಟು ಲವಲವಿಕೆಯಿಂದ ಅನುವಾದ ಮಾಡಿದ್ದಾರೆಂದರೆ ಓದುತ್ತಾ ಹೋದಂತೆ ನಮಗೆ ಇದು ಇಂಗ್ಲೀಷಿನ ಅನುವಾದ ಅಂತ ಮರೆತೇ ಹೋಗುತ್ತದೆ. ಅನುವಾದರು ಬಳಸುವ ಕನ್ನಡದ ಸಂಭಾಷಣೆ, ಸಂದರ್ಭಕ್ಕೆ ತಕ್ಕ ಹಾಸ್ಯ, ಆಗಾಗ ಬಳಸುವ ಉರ್ದು ಪದಗಳು ನಮಗೆ ಕಾದಂಬರಿಯನ್ನು ಮತ್ತಷ್ಟು ಆತ್ಮೀಯವಾಗಿಸುತ್ತದೆ. ಇಡೀ ಕಾದಂಬರಿಯಲ್ಲಿ ಪಾತ್ರಗಳ ನಡುವೆ ನಡೆಯುವ ಸಂಭಾಷಣೆಯೇ ನನಗೆ ಬಹಳ ಇಷ್ಟವಾದುದು.

ಅನುವಾದಕರೇ ಹೇಳುವಂತೆ "ಅನುವಾದ ಕೇವಲ ಭಾಷಾಂತರ ಕ್ರಿಯೆಯಲ್ಲ. ಅನುವಾದದಲ್ಲೂ ಮೂಲದ ಒಂದಿಷ್ಟು ಸೋರಿಹೋಗಿರುತ್ತದೆ. ಹಾಗೆಯೇ ಅದರಲ್ಲಿ ಮತ್ತೇನೋ ಹೊಸತು ದಕ್ಕಿಬಿಟ್ಟಿರುತ್ತದೆ". ಹೌದು... ಕೆಲವು ಸಂಭಾಷಣೆಗಳು ನಮ್ಮಲ್ಲಿ ಮಾತ್ರ ನಡೆಯುವಂಥವು. ಅದನ್ನೆಲ್ಲಾ ಗುರುತಿಟ್ಟುಕೊಂಡು ಎಲ್ಲಿ ಸೇರಿಸಬೇಕೋ ಅಲ್ಲಿ ಸೇರಿಸಿ ಸಮಯಪ್ರಜ್ಞೆ ತೋರಿಸಿದ್ದಾರೆ ಅನುವಾದಕರು. ಅದರಿಂದಲೇ ಇಡೀ ಕಾದಂಬರಿ ಲವಲವಿಕೆಯಿಂದ ಕೂಡಿದೆ.

ಕಥಾವಸ್ತು ಬಹಳ ಆಳವಾದುದು.

ಮೂರು ತಲೆಮಾರಿನಲ್ಲಿ ನಡೆಯುವ ಕಥೆ ಇದು. ಆ ಮೂರು ತಲೆಮಾರಿಗೂ ಸೇರಿದ ಹೆಣ್ಣುಮಕ್ಕಳ ವ್ಯಥೆಯನ್ನು ಇಲ್ಲಿ ಸೆರೆ ಹಿಡಿಯಲಾಗಿದೆ. ಈ ಹೆಣ್ಣುಮಕ್ಕಳಲ್ಲಿ ಹೊರಗಿನ ಪ್ರಪಂಚ ತಿಳಿಯದ ಅಜ್ಞಾನಿಗಳೂ ಇದ್ದಾರೆ, ಓದಿದ ವಿದ್ಯಾವಂತರೂ ಇದ್ದಾರೆ, ಅನಕ್ಷರಸ್ತರೂ ಇದ್ದಾರೆ, ಮನೆಕೆಲಸ ಮಾತ್ರ ಬಲ್ಲವರೂ ಇದ್ದಾರೆ, ಹಾಗೆಯೇ ಕಸೂತಿ-ಹಾಡುಗಾರಿಕೆ ಬಲ್ಲ ಪ್ರತಿಭಾವಂತರೂ ಇದ್ದಾರೆ.

ಆದರೆ ಇವರೆಲ್ಲರ ಜೀವನ ಒಂದೇ ರೀತಿ ಸಾಗುತ್ತದೆ.

ಏಕೆಂದರೆ ಮದುವೆಯಾದ ನಂತರ ಆಕೆಯ ಏಕೈಕ ಗುರಿ ತನ್ನ ಗಂಡನನ್ನು ತೃಪ್ತಿಪಡಿಸುವುದೇ ಆಗಿರುತ್ತದೆ. ಅವಳ ಓದು, ಜ್ಞಾನ, ಪ್ರತಿಭೆ ಮೂಲೆ ಸೇರುತ್ತದೆ. ಅವಳಿಗೆ ಅಡುಗೆ ಮಾಡಲು, ಮನೆ ಸಂಭಾಳಿಸಲು ಬಂದರೆ ಆಯ್ತು. ಉಳಿದ ವಿದ್ಯೆಗಳು ಅಪ್ರಯೋಜಕ. ಒಂದು ಕಾಲದಲ್ಲಿ ಹೆಣ್ಣುಮಕ್ಕಳು ಈ ರೀತಿ ಬದುಕಿದ್ದರು ಅಂತ ಕೇಳಿದರೆ ಆಘಾತವಾಗುತ್ತದೆ ಅಲ್ಲವೇ? ಆದರೆ ಅವರ ಪರಿಸ್ಥಿತಿ್ಳಗಳಿಗೆ ಅವರವರೇ ಕಾರಣರಾಗಿರುತ್ತಾರೆ.

ಮನೆಯ ಗಂಡಸರು ಆಚೆಗೆ ಹೋದ ಕೂಡಲೇ ಮನೆಯಲ್ಲಿ ಉಳಿಯುವವರು ಇದೇ ಹೆಂಗಸರು. ಅದು ಅತ್ತೆ ಇರಬಹುದು, ದೊಡ್ಡ ಸೊಸೆ ಇರಬಹುದು ಅಥವಾ ಮನೆಕೆಲಸದವಳು/ ಅಡುಗೆಯವಳಿರಬಹುದು. ಎಲ್ಲರೂ ಹೆಣ್ಣಾಗಿದ್ದರೂ ಸಹ ಎಲ್ಲರೂ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮತ್ತೊಬ್ಬ ಹೆಣ್ಣಿನ ಮೇಲೆ ಸವಾರಿ ಮಾಡಲು ಬಯಸುತ್ತಾರೆ. ಆ ಎಲ್ಲರೂ ತಾವು ಒಂದೇ ರೀತಿ ಶೋಷಣೆಗೆ ಒಳಪಟ್ಟಿದ್ದೇವೆ ಎಂದು ಎಲ್ಲರೂ ಒಗ್ಗಟ್ಟಾಗಿ ಇರಬಹುದಿತ್ತು. ಆದರೆ ಹಾಗಾಗುವುದಿಲ್ಲ.

ಇನ್ನು ಮನೆಯ ಗಂಡಸರೋ??

ಉಮರ್ ಅಂತೂ ಮಿತವ್ಯಯದ ಕಾರಣ ಒಬ್ಬಳೇ ಹೆಂಡತಿಯನ್ನು ಹೊಂದಿರುತ್ತಾನೆ. ಹಾಗಾಗಿ ಆತನಿಗೆ ಮಾನಸಿಕವಾಗಿಯಾದರೂ ಕೊಂಚ ನೆಮ್ಮದಿ ಅಂತಿರುತ್ತದೆ. ಆದರೆ ಆತನ ಮಗ ಕಬೀರ್ 'ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ' ಎನ್ನುವ ಹಾಗೆ ಯಾರದೋ ಮೇಲಿನ ಕೋಪಕ್ಕೆ ಒಂದಕ್ಕಿಂತ ಹೆಚ್ಚು ಮದುವೆಯಾಗಿ ಎಲ್ಲರನ್ನೂ ಏಕಕಾಲಕ್ಕೆ ಸಂಭಾಳಿಸಲಾಗದೇ ಬಸವಳಿಯುತ್ತಾನೆ. ಅತ್ತ ಕಡೆ ತಾಯಿಯನ್ನೂ ಗಮನಿಸಿಕೊಳ್ಳಬೇಕು, ಇತ್ತ ಕಡೆ ಮೂವರು ಹೆಂಡತಿಯರ ಬಳಿ ಇದ್ದಾಗಲೂ ಅವರವರೇ ಸರಿ ಎಂಬ ಮಾತುಗಳನ್ನಾಡಬೇಕು. ಮತ್ತೊಂದು ಕಡೆ ಮನೆಯ ವ್ಯವಹಾರಗಳನ್ನೂ ನೋಡಿಕೊಳ್ಳಬೇಕು. ಅಕಸ್ಮಾತ್ ಯಾರಿಗಾದರೂ ಕೊಂಚ ಪ್ರಾಮುಖ್ಯತೆ ಹೆಚ್ಚುಕೊಟ್ಟಂತೆ ಕಂಡರೆ ಉಳಿದವರ ಕೋಪವನ್ನೂ ಎದುರಿಸಬೇಕು.

ಈ ವಿಷಯದಲ್ಲಿ ಆತನ ತಂಗಿಯ ಗಂಡ ಹೇಳುವ ಮಾತು ಅಕ್ಷರಶಃ ಸತ್ಯವಾಗಿದೆ.

"ಒಂದು ವಿಷಯವನ್ನು ಯಾವುದೇ ಹಿಂಜರಿಕೆಯಿಲ್ಲದೇ ಹೇಳುತ್ತೇನೆ ಕಬೀರ್. ನಿನ್ನ ಜೀವನವನ್ನು ನೀನೇ ಅಸ್ತವ್ಯಸ್ತಗೊಳಿಸಿಕೊಂಡುಬಿಟ್ಟೆ. ನಿನ್ನ ಸಂತೋಷವನ್ನು ನೀನೇ ಹಾಳುಮಾಡಿಕೊಂಡುಬಿಟ್ಟೆ" ಅನ್ನುತ್ತಾನೆ ಅವನು. ಇದು ನಿಜ ಕೂಡ. ಇರುವುದರಲ್ಲಿಯೇ ಸಂತೃಪ್ತಿ ಕಾಣುವ ಬದಲು ಇನ್ನಷ್ಟು-ಮತ್ತಷ್ಟು ಪಡೆಯುವ ಮೂಲಕ ತನಗೇ ಗೊತ್ತಿಲ್ಲದೇ ಕಬೀರ್ ತನ್ನನ್ನು ಬಗೆಹರಿಸಿಕೊಳ್ಳಲಾಗದ ಸಮಸ್ಯೆಯೊಳಕ್ಕೆ ತಳ್ಳಿಕೊಳ್ಳುತ್ತಿರುತ್ತಾನೆ. ಕೊನೆಗೂ ಹೊರಬರಲಾರದೇ ಚಡಪಡಿಸುತ್ತಿರುತ್ತಾನೆ.

ಈ ಕಾದಂಬರಿಯಲ್ಲಿ ಮುಖ್ಯಪಾತ್ರಧಾರಿಗಳನ್ನು ಬಿಟ್ಟರೆ ಗಮನ ಸೆಳೆಯುವವರು ಕನ್ಯಾಪಿತೃಗಳು. ಒಬ್ಬ ತಂದೆ ಮಗಳ ಮದುವೆಯನ್ನು ಧಾಂ ಧೂಂ ಎಂದು ಮಾಡಿದರೂ, ಆಕೆಯ ಮುಂದಿನ ಜೀವನಕ್ಕೆ ಯಾವುದೇ ದಾರಿ ಮಾಡದೇ ಕೇವಲ ಮದುವೆಯನ್ನು ಮಾತ್ರ ವಿಜೃಂಭಣೆಯಿಂದ ಮಾಡಿರುತ್ತಾನೆ. ಅದೇ ಮತ್ತೊಬ್ಬ ತಂದೆ ಮಗಳಿಗೆ ಎಲ್ಲಾ ರೀತಿಯಿಂದಲೂ ಜೀವನಕ್ಕೆ ಭದ್ರತೆ ಮಾಡಿ, ಅಕಸ್ಮಾತ್ ಆಕೆ ಒಂಟಿಯಾದರೂ ಸಹ ಜೀವನ ನಿರ್ವಹಿಸುವ ರೀತಿ ವ್ಯವಸ್ಥೆ ಮಾಡಿರುತ್ತಾನೆ. ಈ ವಿಷಯ ಈಗಿನ ಕಾಲಕ್ಕೂ ಕನ್ಯಾಪಿತೃಗಳಿಗೆ ಅನ್ವಯಿಸುತ್ತದೆ.

ಓದುತ್ತಾ ಓದುತ್ತಾ ಇದು ನಮ್ಮ ಜೀವನದ ಕಥೆಯೇ ಅಂತನ್ನಿಸತೊಡಗುತ್ತದೆ ಎಲ್ಲರಿಗೂ. ಏಕೆಂದರೆ ಇದು ಮನಸ್ಸಿನ ಅಹಂಗೆ ಸಂಬಂಧಿಸಿದ್ದು. ಕಬೀರ್ ಅಷ್ಟು ಮದುವೆಯಾದದ್ದು ತನ್ನ ಅಹಂ ಅನ್ನು ತಣಿಸಲು. ಅತ್ತೆಯಾದವಳು ಸೊಸೆಯರ ಶೋಷಣೆ ಮಾಡುವುದೂ ಸಹ ತನ್ನ ಅಹಂ ತಣಿಸಿಕೊಳ್ಳಲು. ಮನುಷ್ಯನ ಅಹಂಕಾರಕ್ಕೆ ಯಾವ ಜಾತಿಯಿದೆ? ಯಾವ ಧರ್ಮವಿದೆ?

ಕಾದಂಬರಿ ಅಂತೂ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಇಲ್ಲಿನ ಸಂಭಾಷಣೆಗಳು ಓದುತ್ತಿದ್ದರೆ ಕಣ್ಮುಂದೆ ನಡೆದಂತೆ ಭಾಸವಾಗುತ್ತದೆ. ಕೆಲವೊಮ್ಮೆ ಹೊಟ್ಟೆ ಹಿಡಿದು ನಕ್ಕರೆ, ಕೆಲವೊಮ್ಮೆ ಕಣ್ಣಂಚಿನಲ್ಲಿ ನೀರು ತುಳುಕಿಸುತ್ತದೆ. ಮೂಲ ಲೇಖಕರು ಮತ್ತು ಅನುವಾದಕರು ಇಬ್ಬರಿಗೂ ನನ್ನ ಮನಃಪೂರ್ವಕ ಕೃತಜ್ಞತೆಗಳು.

ಈ ಕಾದಂಬರಿ ಕೈಯಲ್ಲಿ ಹಿಡಿಯಿರಿ ಮತ್ತು ಹೊಸ ಪ್ರಪಂಚಕ್ಕೆ ಕಾಲಿರಿಸಲು ಸಿದ್ಧರಾಗಿ.

**************
ಕೆ.ಎ.ಸೌಮ್ಯ
ಮೈಸೂರು
Profile Image for That dorky lady.
377 reviews72 followers
September 18, 2022
ಅಬ್ಬಾ, ಲೇಖಕಿಯ ಧೈರ್ಯವೇ!
ಇಷ್ಟೊಂದು ಮುಕ್ತವಾಗಿ ತಮ್ಮ ಸಮಯದಾಯದ ಆಂತರಿಕ ವಿಷಯಗಳನ್ನು 1944ರಲ್ಲೇ ಸಾಹಿತ್ಯ ಕೃತಿಯ ರೂಪದಲ್ಲಿ ತೇರೆದಿಡುವುದು ಕಡಿಮೆ ಸಾಹಸವೇನೂ ಅಲ್ಲ.
ಪರಿಸ್ಥಿತಿಯ ಚಿತ್ರಣವನ್ನು ಎಳೆಯೆಳೆಯಾಗಿ ನಮ್ಮ ಮುಂದಿಡುವ ಲೇಖಕಿ ಪರಿಹಾರವನ್ನು ಸೂಚಿಸುವ ಪ್ರಯತ್ನವನ್ನು ಸೂಕ್ಷ್ಮವಾಗಿ ಚಾಲಾಕಿನಿಂದ ಮಾಡಿದ್ದಾರೆ. ಪ್ರತಿ ಪಾತ್ರದ ಹಿನ್ನೆಲೆ, ಬೆಳೆದ ರೀತಿ, ಶಿಕ್ಷಣ ಇವುಗಳ ಮೂಲಕ ತಮಗೇನು ಹೇಳುವುದಿದೆಯೋ ಅದನ್ನು ಹೇಳಿಸಿದ್ದಾರೆ. ಕಾದಂಬರಿಯುದ್ದಕ್ಕೂ ಮನಶ್ಶಾಸ್ತ್ರ ಅಭ್ಯಾಸಿಗಳಿಗೆ ಉತ್ತಮ ಅಧ್ಯಯನ ವಸ್ತುವಾಗಬಹುದಾದಂತ ಪಾತ್ರಗಳಿಂದ ತುಂಬಿದೆ.
ಅನುವಾದ ಕೂಡ ಉತ್ತಮವಾಗಿದೆ. Its a good read 👍
Profile Image for Prashanth Bhat.
2,164 reviews141 followers
July 30, 2021
ಪರ್ದಾ ಮತ್ತು ಪಾಲಿಗಾಮಿ - ಇಕ್ಬಾಲುನ್ನೀಸಾ ಹುಸೇನ್ ಅನುವಾದ - ದಾದಾಪೀರ್ ಜೈಮನ್

ಈ ಕಾದಂಬರಿ ಇಂಗ್ಲೀಷ್‌ನಲ್ಲಿ ಬರೆದ ಮೊದಲ ಸುಧಾರಣಾವಾದಿ ಕಾದಂಬರಿ ಎಂದು ಗುರುತಿಸಲಾಗಿದೆ. ಮುಸ್ಲಿಂ ಸಮಾಜದ ಹೆಣ್ಣು ಮಕ್ಕಳ ಸ್ಥಿತಿಗತಿಯ ಬಗ್ಗೆ ಮೂರು ತಲೆಮಾರುಗಳ ಈ ಕತೆ ಬಿಚ್ಚಿಕೊಳ್ಳುತ್ತದೆ. ಸ್ತ್ರೀ ತನ್ನ ಹಕ್ಕುಗಳಿಗೆ ಹೋರಾಡುವುದು ಹೊಸ ಸಂಗತಿಯೇನು ಅಲ್ಲ ಎಂಬುದನ್ನು 1944ರ ಈ ಕಾದಂಬರಿ ಹೇಳುತ್ತದೆ. ಈ ಕಾದಂಬರಿ ಯಾವ ರೀತಿಯಾಗಿ ಮುಸ್ಲಿಂ ಮಹಿಳೆ ಈ ಸಂಕೋಲೆಯಿಂದ ಹೊರಬರಬಹುದು ಎಂದು ಹೇಳುತ್ತದೆ. ಆದರೆ ಈ ಕುರಿತು ಚರ್ಚೆಗಳಾಗಬೇಕು. ಆದರೆ ಈಗಲೂ ಹೆಚ್ಚು ಕಮ್ಮಿ ಅದೇ ಪರಿಸ್ಥಿತಿ ಮುಂದುವರೆದಿರುವುದು ಕಾಣಬಹುದು.
ಮುಖ್ಯ ವಿಷಯ ಏನೆಂದರೆ ಒಬ್ಬ ಓದುಗನಾಗಿ ನನಗೆ ಅಷ್ಟಾಗಿ ಈ ಕಾದಂಬರಿ ಕನೆಕ್ಟ್ ಆಗಲಿಲ್ಲ. ಅದಕ್ಕೆ ಕಾದಂಬರಿಯ ಅನುವಾದವಾಗಲೀ ಚಿತ್ರಣವಾಗಲೀ ಕಾರಣವಲ್ಲ. ಅದರ ಕಥಾವಸ್ತು ಮತ್ತು ಆ ವಿವರಣೆಗಳು ಶಕ್ತವಾಗಿದ್ದರೂ ಅದು ಯಾವಾಗಲೂ ಕಾಣುವ , ಕಂಡ ಮುಸ್ಲಿಂ ಮಹಿಳೆಯರ ದುಃಸ್ಥಿತಿ ಅಂತಷ್ಟೇ ಅನಿಸಿತು.
ಸೊಗಸಾಗಿದೆ ಅನುವಾದ ‌ಆದರೆ ಬಹುಶಃ ಇದು ಎತ್ತುವ ಪ್ರಶ್ನೆಗಳನ್ನು ಈ ಪುಸ್ತಕವನ್ನೂ ಉದ್ದೇಶಪೂರ್ವಕವಾಗಿ ಹಿನ್ನೆಲೆಗೆ ತಳ್ಳುತ್ತಾರೆ ಎನ್ನುವುದು ನಿಸ್ಸಂಶಯ.
67 reviews14 followers
December 14, 2022
"Unequal distribution of labour and regard is the social code made by man in his own interest."

“His polygamous nature has an excuse: a man doing brave deeds needs every sacrifice by others... The great fuss made over him gives him no time for introspection. He has accepted and assimilated the dogmas without analysing them."

"A woman who does not show the proper spirit by gulping down ready-made beliefs is condemned by the rest as ‘douzahki’ (hellish)."

Some of these quotes tell us about the society we are living in.
94 reviews18 followers
December 14, 2022
This story is very relevant to current society. We need lots of reform and need UCC.
Profile Image for Abhi.
89 reviews20 followers
September 24, 2021
||• ಪರ್ದಾ‌ ಆ್ಯಂಡ್ ಪಾಲಿಗಮಿ •||

ಲಂಪಟತನಕ್ಕೆ ಸಂಪ್ರದಾಯದ ಪುಷ್ಟಿ ಸಿಗಬಾರದು. ಸಿಕ್ಕಲ್ಲಿ ಲಂಪಟರಿಗೆ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಎಂಬಂತಾಗಿ ಹೋಗುತ್ತದೆ.

ಪರ್ದಾ ಆ್ಯಂಡ್ ಪಾಲಿಗಮಿ ಓದುವಾಗ ಹಲವಾರು ಬಾರಿ ಇದೂ ಕೂಡ ಮತ್ತೊಂದು ಸಾಮಾಜಿಕ‌ ಕಾದಂಬರಿ. ಅದೇ ಅತ್ತೆ ಸೊಸೆತುತ್ತಾ ಮುತ್ತಾ ಕತೆ ಎಂದು ಮೂಗು ಮುರಿಯುವಂತಾಗುತ್ತದೆ. ಆದರೆ ಪುಸ್ತಕದ ಆಳಕ್ಕಿಳಿದಂತೆ ಮತ ಮತ್ತು ಅದರ ಸಂಪ್ರದಾಯ ಪುರುಷನನ್ನು ದೈವಾಂಶ ಸಂಭೂತ ಎಂಬಂತೆ ನಡೆಸಿಕೊಳ್ಳುವ ವೈಚಿತ್ರ್ಯ ಕಾಡಲು ಶುರು ವಿಟ್ಟುಕೊಳ್ಳುತ್ತದೆ.

ಪರ್ದಾ ಮತ್ತು ಪಾಲಿಗಮಿ ಎಂಬ ಪದಗಳು ನಮ್ಮ ಸಮಾಜಕ್ಕೆ ಹೊಸತಲ್ಲ. ಪವಿತ್ರ ಇಸ್ಲಾಂ ಧರ್ಮದ‌ ಒಡನಾಡಿಗಳಿದ್ದರೆ ಪ್ರಾಯಶಃ ಪರ್ದಾದ ಸಂಪ್ರದಾಯದ ಬಗ್ಗೆ ಹೇಳಿಯೂ ಇರುತ್ತಾರೆ. ಸ್ವಲ್ಪ‌ ಮಟ್ಟಿಗೆ ವಿಚಿತ್ರ ಎನಿಸಿದರೂ ಅವರ ನಂಬಿಕೆಗಳನ್ನು ಗೌರವಿಸಬೇಕು. ಆಧುನಿಕತೆ ಬೆಳೆದಂತೆ ಈ ಸಂಸ್ಕೃತಿಯು ಮೆಲ್ಲಗೆ‌ ಮರೆಯಾಗುತ್ತಿರುವುದು ಉತ್ತಮ ಬೆಳವಣಿಗೆ!!

ಆದರೆ ಈ ಪುಸ್ತಕದಲ್ಲಿ ಪರ್ದಾ ಸಂಸ್ಕೃತಿಗಿಂತ ಕಾಡಿದ್ದು ಪಾಲಿಗಮಿ. ಪಾಲಿ ಎಂದರೆ ಒಂದಕ್ಕಿಂತ ಹೆಚ್ಚು ಎಂದರ್ಥ.

ಪಾಲಿಗಮಿ ಎಂದರೆ ಬಹುಪತ್ನಿತ್ವ ಎಂಬುದು ಗೊತ್ತಿರುವ ವಿಷಯವೇ. ಸಂಪ್ರದಾಯ ಬಹುಪತ್ನಿತ್ವವನ್ನು ಒಪ್ಪಿದ್ದು ದುರಂತವೇ. ಒಂದು ಧರ್ಮದ ಗಂಡು ಎಂದು ಬೆರಳು ಮಾಡಿದರೆ ತಪ್ಪಾಗಬಹುದು ಅಥವಾ ಬಹುಪತ್ನಿತ್ವವೆಂಬ ಪಿಡುಗಿನ ವಿಸ್ತಾರ ಕಡಿಮೆಯಾಗಿ ಬಿಡಬಹುದು. ಧರ್ಮ ಕಾನೂನುಗಳ ಹೊರತಾಗಿಯೂ, ಅದರ ಪುಷ್ಟಿ ಇಲ್ಲದೆ ಇದ್ದರೂ ಬಹುಪತ್ನಿಯರನ್ನು ಹೊಂದಿರುವುದರಿಂದ ಗಂಡು ಎಂದೇ ಸಾಮಾನ್ಯೀಕರಿಸಬಹುದು.‌ ಇಂತಹ ಗಂಡೊಬ್ಬ ತನ್ನ ತೃಷೆಗಾಗಿ ತನ್ನ ಸ್ವಾರ್ಥಪರತೆಗಾಗಿ ತಾನು ತನಗೆ ಕೊಟ್ಟುಕೊಂಡ ಕಾರಣಗಳು ಬಹುವಾಗಿ ಕಾಡಿದವು! ಅದಕ್ಕೆ ಮೇಲೆ ಹೇಳಿದಂತೆ ಸಂಪ್ರದಾಯದ ಪುಷ್ಟಿ ದೊರೆತದ್ದು ಅಂತ್ಯದ ಆರಂಭವೇ ಸರಿ.

ಕಾದಂಬರಿ ಭಾಗಶಃ ಗೆದ್ದಿದೆ. ಹೆಣ್ಣಿಗಿರುವ ಹಲವಾರು ಕಟ್ಟಳೆಗಳನ್ನು, ಅತಿರೇಕ ಎನಿಸಬಲ್ಲ ನಿಯಮಗಳನ್ನು ಧೀರೋದಾತ್ವವಾಗಿ ಬರೆದಿದ್ದರೂ ಅದರ ನಿರ್ಮೂಲನೆಯ ಕುರಿತು ಅಷ್ಟಾಗಿ ಬರೆಯದಿರುವುದು ಅಪೂರ್ಣತೆಯ ಕೊರಗನ್ನು ಉಳಿಸಿತು. ಬರೆಯಲಾರದ ಅಸಹಾಯಕತೆ ಇತ್ತಾ ಎಂಬುದು ಪ್ರಶ್ನಾತೀತ. ಗಂಡಬಿಟ್ಟವಳು ಎಂದನ್ನುವ ಸಮಾಜ ಹೆಂಡತಿ ಬಿಟ್ಟವನು ಎನ್ನದ ಮಲತಾಯಿ ಧೋರಣೆಯು ಕೂಡ! ಧರ್ಮಾಂಧತೆ, ಅಂಧ ಶ್ರದ್ಧೆ, ಸಾಂಸ್ಕೃತಿಕ ಬದಲಾವಣೆ, ಲಂಪಟತನ, ದಬ್ಬಾಳಿಕೆ, ಕೀಳರಿಮೆ, ಬಂಡಾಯ, ಇಸ್ಲಾಂ ಸಂಪ್ರದಾಯ ಹೀಗೆ ಹತ್ತು ಹಲವಾರು ವಿಷಯಗಳನ್ನು ಈ ಕಾದಂಬರಿ ತನ್ಜ ಒಡಲೊಳಗೆ ಕಟ್ಟಿಕೊಂಡಿದೆ.

೧೯೪೪ರ ಕಾಲಮಾನದಲ್ಲಿ ಬರೆದ ಕಾದಂಬರಿ ಈಗಿನ ಸಾಮಾಜಿಕ ಸ್ಥಿತಿಗತಿಗೆ ಎಷ್ಟು ಹೊಂದಿಕೆ ಯಾಗುತ್ತದೆ ಎಂಬುದನ್ನು ಉತ್ತರಿಸಲಾರೆ. ಆದರೆ, ಸರಿ ಸುಮಾರು ನಾಲ್ಕುನೂರು ಪುಟಗಳ ಉತ್ಕೃಷ್ಟ ಓದು‌‌. ಅನುವಾದಕರ ಕೈ ಚಳಕವೂ ಪ್ರಶಂಸನೀಯ. ಕನ್ನಡದ ಸ್ವಂತ ಕೃತಿಯೇ ಎಂದನಿಸುವಂತಹ ಅತ್ಯುತ್ತಮ ಅನುವಾದ. ಒಟ್ಟು ಓದಲೇಬೇಕಾದ ಕೃತಿ!!!

ಧನ್ಯವಾದಗಳು :)

- ಅಭಿ...
Profile Image for Nishu Thakur.
129 reviews
December 14, 2022
This book is believed to be one of the first full-length English language novel by an Indian Muslim woman in the pre-Partition era. Writer was an Indian feminist and activist who dedicated her life to the cause of empowering the lives of Muslim women in India. This book gives you idea of Life in An Indian Muslim Household.
114 reviews
December 14, 2022
This book was written almost 80 years ago, Iqbalunnisa Hussain’s book offers one of the earliest and most scornful assessment of toxic patriarchy in Muslim society.
Profile Image for ಪ್ರಕಾಶ್ ನಾಯಕ್.
Author 1 book7 followers
January 25, 2023
ಭಾರತದ ಮುಸ್ಲಿಂ ಮನೆತನದಲ್ಲಿ ಮೂರು ತಲೆಮಾರುಗಳಲ್ಲಿನ ಆಗುಹೋಗುಗಳನ್ನು - ಮುಖ್ಯವಾಗಿ ಬಹುಪತ್ನಿತ್ವದ ಬಹುಮುಖಗಳನ್ನು ದಾಖಲಿಸುವ ಕಥೆ. ಕಾದಂಬರಿಯೊಳಗಿನ ಸಾಂಸ್ಕೃತಿಕ ಹಿನ್ನಲೆ ಇರದೆ ಇಂತಹ ಕಾದಂಬರಿಗಳನ್ನು ಅನುವಾದಿಸುವುದು ಕಷ್ಟ. ಕನ್ನಡದ್ದೇ ಆದ ಕಾದಂಬರಿ ಎನ್ನಬಹುದಾದಷ್ಟು ಸುಂದರ ಅನುವಾದ.
ಮೂಲ ಲೇಖಕಿಯ ವಿಶಿಷ್ಟ ವ್ಯಕ್ತಿತ್ವವನ್ನೂ ಇಲ್ಲಿ ನೆನೆಯಲೇಬೇಕು. ಯಾವುದನ್ನೂ ಅತಿಯಾಗಿಸದೆ ಸಮಾಜದ ಓರೆಕೋರೆಗಳನ್ನು ದಾಖಲಿಸುವುದು ಯಾರಿಗೂ ಸುಲಭವಲ್ಲ. ಕಾದಂಬರಿಗ ಆಗಿನ ಪ್ರತಿಕ್ರಿಯೆ ಹೇಗಿತ್ತೋ ಗೊತ್ತಿಲ್ಲ, ಆದರೆ ಇಂದಿಗೂ ದಾಖಲಿಸಲು ಹಿಂಜರಿಯುವಂತೆ ಮಾಡಬಹುದಾದ ವಸ್ತು.
ಕಾದಂಬರಿಯ ಸ್ವರೂಪ, ಕೆಲವೊಮ್ಮೆ ವಾಚ್ಯವೆನಿಸುವ ವಿವರಣೆಗಳು, ವಿಡಂಬನೆ-ನೇರ ತಾತ್ವಿಕ ಸಮಾಲೋಚನೆಯ ನಡುವೆ ಅದಲುಬದಲಾಗುವ ನಿರೂಪಣೆ ಆ ಕಾಲಕ್ಕೆ ಸರಿಯೂ ಇರಬಹುದೇನೋ? ಈಗ ಸ್ವಲ್ಪ ಇರುಸುಮುರಿಸಾಗುವ ಹಾಗಿದೆ. ಕೊನೆ ಸ್ಲಲ್ಪ ನಾಟಕೀಯವಾಗಿದೆ. ನಿರಾಶಾದಾಯಕವಾಗಿ ಮುಗಿಸಬಾರದೆನ್ನುವ ಸಾಮಾಜಿಕ ಕಾಳಜಿ ಇರಬಹುದು.
ಸಾಮಾನ್ಯವಾಗಿ ತಲೆಮಾರುಗಳ ಕಥನದಲ್ಲಿ ಕಾಣಬರುವ ಪರಂಪರೆಗಳ ಸಮರ್ಥನೆಯಾಗಲೀ, ವಿನಾಕಾರಣ ದೂಷಣೆಯಾಗಲೀ ಕಾಣುವುದಿಲ್ಲ. ಅದೇ ಕಾರಣಕ್ಕೆ ಇತ್ತೀಚೆಗೆ ಓದಿದ ತಲೆಮಾರುಗಳ ಕಥನಗಳಲ್ಲಿ ಬಹುಕಾಲ ನೆನಪಲ್ಲಿ ಉಳಿಯುವಂತಹುದು.
Profile Image for Saher.
71 reviews2 followers
July 15, 2021
The story is about the differences between men and women of a household in the pre partition era. The story circulates around the feeling of women and how they are the fooled by into guarding toxic patriarchy deeply embedded in the society.
Displaying 1 - 13 of 13 reviews

Can't find what you're looking for?

Get help and learn more about the design.