’ಚಿತ್ರಗುಪ್ತನ ಸನ್ನಿಧಿ’ಯಲ್ಲಿ ಕಥಾ ಸಂಕಲನದಲ್ಲಿ ಮನುಷ್ಯನ ವಿಕೃತ ಮನಸ್ಥಿತಿ ಅನಾವರಣಗೊಂಡಿದೆ. ದೈಹಿಕ ವಿಕೃತಿಗಳಿಂದಾಗಿ ತಮ್ಮ ಸುತ್ತಲಿನ ಜನರ ಬಗ್ಗೆ ಅನಾದರ, ಅವಹೇಳನ ಎದುರಿಸಬೇಕಾಗುತ್ತದೆ. ವಿಧಿಯು ಯಾರಿಗೂ ಬಾಗುವುದಿಲ್ಲ. ಎಲ್ಲರೂ ಸಮಯಕ್ಕೆ ತಲೆ ಬಾಗಲೇಬೇಕು. ಅಕಾಲಿಕ ಮರಣಕ್ಕೆ ತುತ್ತಾದವರ ಬಗ್ಗೆ ಜನರ ಪಿಸು ಮಾತುಗಳು ಕತೆಯ ಭಾಗವಾಗಿವೆ. ಕಥೆಗಳು ಜೀವನದ ನಿಗೂಢತೆ ಮತ್ತು ಬಿಡಿಸಲಾಗದ ನಿರ್ಧಾರಗಳ ಬಗ್ಗೆ ಕಟ್ಟಿ ಕೊಡುತ್ತವೆ. ಕಥೆ ಓದಲು ಆರಂಭಿಸಿದಾಗ ಭಾಷೆ ತುಂಬ ಗಾಢ ಎನ್ನಿಸಿದರೂ ಓದುತ್ತಾ ಹೋದಂತೆ ತೀರಾ ಆಪ್ತವಾಗುತ್ತವೆ. ಕಥೆಯ ಪಾತ್ರಗಳಲ್ಲಿ ನಮ್ಮನ್ನು ನಾವು ಹುಡುಕಿಕೊಳ್ಳುತ್ತಾ ಹೋಗುವಂತಾಗುತ್ತದೆ. ಲೇಖಕಿ ಜೀವನದ ಎಲ್ಲಾ ಸಾಧ್ಯತೆಗಳನ್ನು ಹಲವು ಆಯಾಮಗಳಲ್ಲಿ ಗ್ರಹಿಸಿ ವಿಶಿಷ್ಟ ರೀತಿಯಲ್ಲಿ ಕಥೆ ಕಟ್ಟಿದ್ದಾರೆ.