ಇದನ್ನು ಪ್ರವಾಸ ಕಥನ ಅಂತ ಕರೆಯಲಾಗದು. ವೃತ್ತಿ ನಿಮಿತ್ತ ಅಂಗೋಲಾದಲ್ಲಿ ವಾಸಿಸುವ ಲೇಖಕ ಬರೆದ ಅಂಕಣ ಬರಹ ಸಂಗ್ರಹ ಅಂದರೂ ಸರಿಯಾಗದು. ಇದೊಂತರಾ ಒಳಗೊಂದು ಜಗತ್ತು ಹೊರಗೊಂದು ಜಗತ್ತಿನ ಹಾಗೆ. ನಮಗೆಲ್ಲ ಆಫ್ರಿಕಾ ಬಗ್ಗೆ ಇರುವ ಅನೇಕ ಪೂರ್ವಗ್ರಹಗಳ ತೊಡೆದು ಹಾಕುತ್ತದೆ. ಅನೇಕ ನಂಬಿಕೆಗಳ ಪುಷ್ಟೀಕರಿಸುತ್ತದೆ. ಇಡೀ ಕೃತಿಯಲ್ಲಿ ಭಾಷೆಯನ್ನು ಎಷ್ಟು ಚಂದವಾಗಿ ಬಳಸಿದ್ದಾರೆ ಅಂದರೆ ಎಲ್ಲೂ ತೊಡಕಾಗುವುದಿಲ್ಲ. ಪ್ರತೀ ಸಲವೂ ಹೊಸ ವಿಷಯ ಕೊಡಬೇಕು ಅನ್ನುವ ಲೇಖಕರ ಶ್ರಮ ಎದ್ದು ಕಾಣುತ್ತದೆ. ಸ್ವ ಅನುಭವಗಳ ಹೇಳಿಕೊಳ್ಳುವಲ್ಲೂ ಲೇಖಕರು ಪರಿಧಿ ಮೀರುವುದಿಲ್ಲ. ಆದರೆ ಅಪರಿಚಿತನೊಬ್ಬ ಪರದೇಶಕ್ಕೆ ಹೋದರೆ ಅವ ತೆರೆದುಕೊಳ್ಳುವ ಬಗೆ ಚೆನ್ನಾಗಿ ಬಂದಿದೆ. ಇಷ್ಟಾಗಿಯೂ ಇದ್ದ ಒಂದು ಕೊರೆ ಎಂದರೆ ಇದು ಅಂಕಣಗಳಾದ ಕಾರಣ ಪುಸ್ತಕ ರೂಪದಲ್ಲಿ ಬರುವಾಗ ಒಂದೆರಡು ಕಡೆ ಎಡಿಟ್ ಮಾಡಬಹುದಿತ್ತು. ಆಗ ಸಾರ್ವತ್ರಿಕತೆ ಬರುತ್ತಿತ್ತು ಅಂತ. ಪುಸ್ತಕ ಓದಿ ಮುಗಿಸಿದಾಗ ಎಷ್ಟೆಲ್ಲ ಮಾಹಿತಿಗಳು ಮತ್ತು ಮನಸಲ್ಲಿ ಹೊಳೆದ ಮಾತುಗಳು ' ಸಕತ್ತಾಗಿ ಬರ್ದಿದಾರಲ್ಲ ' ಅಂತ!
Thank God I didn't miss reading this book. A travelogue to be read.!! ಅದ್ಭುತವಾದ ಬರಹ ಮತ್ತು ಅಲ್ಲಿ ನಡೆದ ಒಂದೊಂದು ಸನ್ನಿವೇಶಗಳನ್ನು ವಿವಿಧ ಹೂಗಳಂತೆ ಅವುಗಳನ್ನು ಸಂಗ್ರಹಿಸಿ ಅವರದೇ ಆದ ಶೈಲಿಯಲ್ಲಿ ಒಂದು ಹೊಸ ಹೂ ಗೊಂಚಲನ್ನು ನಮಗೆ ಹಾಯ್ ಅಂಗೋಲಾ! ಎಂದು ಹೆಸರಿಟ್ಟು ಕೊಟ್ಟ ಪ್ರಸಾದ್ ಅವರಿಗೆ ಅಭಿನದನೆಗಳು. ಇನ್ನು ಹೆಚ್ಚು ಬರವಣಿಗೆಯ ನಿರೀಕ್ಷೆಯಲ್ಲಿ ಇದ್ದೇನೆ. ಖಂಡಿತಾ ಪ್ರಸಾದ್ ಅವರ ಹಾಯಿ ಅಂಗೋಲವನ್ನ ಮಿಸ್ ಮಾಡದೇ ಪ್ರಯಾಣ ಮಾಡಿ.