ನಮಗೆ ಒಂದು ಪುಸ್ತಕ ಕೊಂಡು ಓದುವುದರ ಹಿಂದೆ ಒಂದು ಮಹತ್ತರ ಕಾರಣವಿರುತ್ತದೆ, ಉದಾಹರಣೆಗೆ, ಅದರ ವಸ್ತು, ಅದರ ಸಾಹಿತ್ಯ ಪ್ರಕಾರ, ಲೇಖಕನ ಹಿಂದಿನ ಪುಸ್ತಕಗಳ ಪ್ರಭಾವ, ಪುಸ್ತಕದ ಮೇಲಿನ ವಿಮರ್ಶೆಗಳು ಮುಂತಾದವು, ಆದರೆ ಈ ಪುಸ್ತಕ ಕೊಳ್ಳುವುದಕ್ಕೆ ಕಾರಣ ಲೇಖಕನ ಅಕ್ಷರಪ್ರೀತಿ.. ಹೌದು ನಾನು ಕೊಂಡು ಓದುವುದಕ್ಕೆ ಕಾರಣ ಪ್ರಶಾಂತರ ಪುಸ್ತಕ ಮತ್ತು ಅಕ್ಷರ ಪ್ರೀತಿ... ನನ್ನ ಹಾಗೆ ಅವರು "ಪುಸ್ತಕ ವಿಮರ್ಶೆಯ" ಹಿಂಬಾಲಕರೆಲ್ಲರೂ, ಇದನ್ನೂ ಓದೇ ಓದುವರು ಎಂಬ ನಂಬಿಕೆ ಅವರಿಗಿಂತ ಹೆಚ್ಚು ನನಗಿದೆ..
ಪುಸ್ತಕ ಕೊಳ್ಳುವುದಕ್ಕೆ, ಓದುವುದಕ್ಕೆ ಕಾರಣ ಇದಿರಬಹುದು.. ಆದರೆ ಪುಸ್ತಕ ಇಷ್ಟವಾಗಲು ಕಾರಣ ಕಥಾವಸ್ತು ಮತ್ತು ಅದರೊಳಗಿನ ರೋಚಕತೆ... ಲೇಖಕರು ಆಯ್ದುಕೊಂಡಿರುವ ವಸ್ತು ಕಠಿಣ, ಕ್ವಾಂಟಮ್ ಸಿದ್ದಂತಾದ ತಿರುಳನ್ನು ಇಟ್ಟುಕೊಂಡು ಒಂದು ಫ್ಯಾಂಟಸಿ ಅನ್ನಿಸುವ ಕಥೆಯನ್ನು ಹೇಳುತ್ತಾ ಹೋಗಿದ್ದಾರೆ... ಅದಕ್ಕೆ ಮುಖಪುಟದಲ್ಲೇ ಫಿಕ್ಷನ್ ಕಾದಂಬರಿ ಎಂಬ ಅಡಿಬರಹ... ಮೊದಲ 50 ಪುಟಗಳು ಕುದುರೆಗಿಂತ ವೇಗವಾಗಿ ಓಡುತ್ತದೆ... ನಂತರದ 30 ಪುಟಗಳು ನಿಧಾನವಾಗಿ ಅರ್ಥಮಾಡಿಕೊಂಡು ಓದಲು ಪ್ರೇರೇಪಿಸುತ್ತದೆ... ಕೊನೆಯ ಭಾಗವಂತೂ ಹಾರ್ದಿಕ್ ಪಾಂಡ್ಯ ಇನ್ನಿಂಗ್ಸ್ ಮಾದರಿ ಹಬ್ಬ... ಕೆಲವು ಬಾರಿಯಂತೂ ಯಂಡಮೂರಿ ಅಥವಾ ಕೆ ಏನ್ ಗಣೇಶಯ್ಯ ರವರ ಪುಸ್ತಕ ಓದುತ್ತಿರುವಂತೆ ಭಾಸವಾಗುತ್ತದೆ.
ಮೊದಲ ಪ್ರಯತ್ನದಲ್ಲೇ ಓದುಗನನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸುವ ಹಾಗೆ ಬರೆಯುವುದು ಕಷ್ಟ... ಆ ಪ್ರಯತ್ನದಲ್ಲಿ ಗೆದ್ದಿದ್ದಾರೆ... ಸಣ್ಣ ಪುಟ್ಟ ನ್ಯೂನ್ಯತೆಗಳಿದ್ದರೂ ಅವು negligible...
ಲೇಖಕರ ಈ ಪ್ರಯತ್ನ ಇಲ್ಲಿಗೆ ನಿಲ್ಲದೆ ಮುಂದುವರಿಯಲಿ ಎಂದು ಆಶಿಸುತ್ತೇನೆ.
Sci fi ಕಾದಂಬರಿ, ಅದೂ ಕನ್ನಡದಲ್ಲಿ! ಎನ್ನುವುದರ ಜೊತೆಗೇ ಸ್ವತಃ keen reader ಆದ ಪ್ರಶಾಂತರ ಕಾದಂಬರಿ ಎನ್ನುವುದೂ ಕುತೂಹಲದಿಂದ ಓದು ಶುರುಮಾಡಲು ಕಾರಣ. Advanced science ವಿಷಯಗಳನ್ನು ಯಥಾವತ್ತಾಗಿ ಓದಿ ಅರ್ಥ ಮಾಡಿಕೊಳುವುದೆ ಸವಾಲಿನ ವಿಷಯ. ಅದನ್ನು ಕಲ್ಪನೆಯೊಂದಿಗೆ ಬೆರೆಸಿ ಸುಲಭದಲ್ಲಿ ಓದುಗರಿಗೆ ಅರ್ಥವಾಗುವಂತಾ, ಎಲ್ಲೂ ಬೇಸರವಾಗಿಸದ ಇಷ್ಟು grasping and fast moving ಕತೆ ನೇಯುವುದು ನಿಜಕ್ಕೂ ಕಷ್ಟವೇ ಸರಿ. ಕಥೆಯಲ್ಲಿ ಆಂಪುಲ್ಗಳ ಸಂಖ್ಯೆ ಕಡಿಮಾದಂತೆ ಓದುವ ನಮ್ಮ ಬಿಪಿ ಹೆಚ್ಚಾಗುವುದು ಲೇಖಕರ ಗೆಲುವು. ಕಡೆಗೆ ಅನಂತ ಸಾಧ್ಯತೆಗಳೊಂದಿಗೆ ಕಾದಂಬರಿಯನ್ನು ಮುಗಿಸಿದ್ದು ಕೂಡ ಚೆನ್ನಾಗಿದೆ. It lets us go on in our mind about what might've happened next.
"ರೋಚಕ ಸೈನ್ಸ್ ಫಿಕ್ಷನ್ ಕಾದಂಬರಿ" ಎನ್ನುವ ಅಡಿಬರಹವನ್ನು ಸ್ವಲ್ಪ ಕಡೆಗಣಿಸಿದರೆ ಕಾದಂಬರಿಯ ಇನ್ನೊಂದು - ಬಹು ಮುಖ್ಯ ಮುಖ ನೋಡಬಹುದು. ನಾವೆಲ್ಲರೂ ಬದುಕಿನ ನಿರ್ಣಾಯಕ ತಿರುವುಗಳಲ್ಲಿ ನಿಂತು ಕಂಗೆಟ್ಟವರೇ. ಇಷ್ಟದ ಹಾದಿ ಮತ್ತು ಅಗತ್ಯದ ಹಾದಿಯ ನಡುವೆ ಇಷ್ಟದ ಹಾದಿಯನ್ನೇ ಆಯ್ದುಕೊಳ್ಳುವ ಸ್ವಾತಂತ್ರ್ಯ ಎಷ್ಟು ಜನರಿಗಿದೆ! ಹವ್ಯಾಸ ಮತ್ತು ಜವಾಬ್ದಾರಿ, ವೃತ್ತಿ ಮತ್ತು ಪ್ರವೃತ್ತಿ, ಆಯ್ಕೆ ಮತ್ತು ಅನಿವಾರ್ಯ ಒಂದೇ ಆದವರು ಅದೃಷ್ಟವಂತರೇ ಸರಿ. ಹಾಗಿಲ್ಲದವರು rest of our life time ಆ ಇನ್ನೊಂದು ಮಾರ್ಗದ ಕುರಿತು ಗೊತ್ತಿದ್ದೋ ಗೊತ್ತಿಲ್ಲದೆಯೋ ಯೋಚಿಸುತ್ತಲೇ ಇರುತ್ತೇವಷ್ಟೇ? If by luck ಇರುವೊಂದೇ ಜೀವಿತಾವಧಿಯಲ್ಲಿ ಬಿಟ್ಟು ಬಂದ ಅಥವಾ ಸಾಧ್ಯವಾಗಬಹುದಾದ ಎಲ್ಲಾ ಸಾಧ್ಯತೆಗಳನ್ನೂ ಹೊಕ್ಕು, ಪರಿಶಿಲಿಸಿ ಬೇಕಾದ ಬದುಕನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ನಮಗಿದ್ದರೆ ನಮ್ಮ ಆಯ್ಕೆ ಯಾವುದಾಗಿದ್ದೀತು - ಇದು ಕಾದಂಬರಿಯ ಮೂಲ ಕಥಾವಸ್ತು (as per my view) ಕನ್ನಡಿಯೊಳಗಿನ ಗಂಟಿಗಿಂತ ಕೈಯ್ಯಲ್ಲಿನ ದಂಟೇ ಲೇಸು ಎನ್ನುವ ಗಾದೆಮಾತು, ಇರುವ ಭಾಗ್ಯವ ನೆನೆದು ಬಾರೆನೆಂಬುದ ಬಿಡು ಎನ್ನುವ ಕಗ್ಗದ ಸಾಲುಗಳು ನೆನಪಾದವು.
ಮುಖಪುಟ ವಿನ್ಯಾಸ, ಪೇಪರ್ ಕ್ವಾಲಿಟಿ ಎಲ್ಲವೂ ಗುಡ್. ಆದರೆ ಓದಿನ ಓಘಕ್ಕೆ ಕಿರಿಕಿರಿಯಾಗುವಷ್ಟು, ಕತೆ ಕನ್ಫ್ಯೂಸ್ ಆಗುವಷ್ಟು ಇರುವ ಮುದ್ರಣ ದೋಷದ ಕಾರಣಕ್ಕೆ ಒಂದು * ಕಡಿಮೆ.
_______________________
ಕಾದಂಬರಿಯ ನಡುವೆ ಬರುವ, ಕಥೆಯಾಚೆಗೂ ಸರ್ವಕಾಲಿಕ ಎನಿಸಿ ಇಷ್ಟವಾದ ಕೆಲ ಚೆಂದದ ಸಾಲುಗಳು -
1. ಕೆಲವೆಲ್ಲ ಯಾವ ಸಮಾನಾಂತರ ವಿಶ್ವದಲ್ಲಿ ಇದ್ದರೂ ಬದಲಾಗಲ್ಲ - p- 91
2. ನಾವು ಯಾರೂ ಹೋಗದ ಹಾದಿಯಲ್ಲಿ ಹೋದಾಗ, ಅದರಲ್ಲಿರುವ ಎಲ್ಲವೂ ಹೊಸದೇ! - p 91
3. ನಮಗೇ ಅಂತ ಒಬ್ಬರು ಇರುತ್ತಾರೆ. ಅವರಿಗಿಂತ ಚೆನ್ನಾಗಿರುವವರು ಸಿಕ್ಕರೂ ನಮಗೆ ಸರಿ ಹೋಗಲ್ಲ. ಕಡಿಮೆಯವರು ಸಿಕ್ಕರೂ ಸರಿ ಹೋಗಲ್ಲ' p- 120
4. ಎಲ್ಲದಕ್ಕೂ ಉತ್ತರ ಹುಡುಕುವುದು ಸಾಧ್ಯವಿಲ್ಲ. ಅದು ಸಾಧುವೂ ಅಲ್ಲ. P -125
science fiction ಅನ್ನುವಂತಹ ಕಾದಂಬರಿ ಪ್ರಕಾರವೊಂದಿದೆ ಅಂತ ಗೊತ್ತಾಗಿದ್ದೇ ಕೆಲವರ್ಷಗಳ ಹಿಂದೆ. ಇಂಗ್ಲಿಷ್ನಲ್ಲಿ ಮೊದಲ ಬಾರಿಗೆ sci-fiಪುಸ್ತಕವೊಂದನ್ನ ಓದಿದಾಗ ಎಷ್ಟು ಚೆಂದವಿದೆ ನಮ್ಮಲ್ಲಿ ಯಾಕೆ ಇಂತಹ ಪುಸ್ತಕಗಳು ಬರಲ್ಲ ಅಂತ ಅಂದುಕೊಂಡಿದ್ದೆ. ಪ್ರಶಾಂತ್ ಭಟ್ ಸರ್ ಅವರ 'ಕಾಲಬಂಧ' sci-fi ಪ್ರಕಾರದ ಕಾದಂಬರಿ ಅಂತ ತಿಳಿದಾಗಿನಿಂದ ಕುತೂಹಲವಿತ್ತು. ಹಾಗಾಗಿ ಪುಸ್ತಕ ಕೈ ಸೇರಿದ ಕೂಡಲೇ ಓದಲು ಶುರು ಮಾಡಿದ್ದಷ್ಟೇ. ಕೆಳಗಿಡಲು ಸಾಧ್ಯವಾಗದಂತೆ ಓದಿಸಿಕೊಂಡು ಹೋಯ್ತು. ವಿಜ್ಞಾನದ ಬಗೆಗಿನ ವಿವರಣೆ ಸರಳವಾಗಿದೆ. ಸುಲಭವಾಗಿ ಅರ್ಥವಾಗುತ್ತೆ. ಕೊನೆಯವರೆಗೂ ಕುತೂಹಲ ಕಡಿಮೆಯಾಗದೆ ರೋಚಕ ಅನುಭವವನ್ನು ಕೊಡತ್ತೆ ಪುಸ್ತಕ. ಕನ್ನಡದಲ್ಲಿ ಇಂತಹ ಪುಸ್ತಕಗಳನ್ನು ಓದೋದೇ ಒಂದು ಹೊಸ ಅನುಭವ. ಅದೂ ಸರಳವಾಗಿ ಪ್ರತಿ ಪುಟದಲ್ಲೂ ಕಾತುರತೆಯನ್ನು ಉಳಿಸಿಕೊಂಡು ಹೋಗುವಂತೆ ಇರುವ ಇಂತಹ ಪುಸ್ತಕ ಬಂದರೆ ಇನ್ನು ಖುಷಿ.
ಕಾಲಬಂಧದ ಲೇಖಕರ ವಿಮರ್ಶೆಗಳ ಓದುಗಳಾಗಿ ಈ ಪುಸ್ತಕ ಕೊಂಡುಕೊಂಡೆ. ಆದರೆ disappointed and disillusioned.
ಈ ಕಾದಂಬರಿ ಲೇಖಕರು ಮೆಚ್ಚಿದ ಇಂಗ್ಲಿಷ್ ಪುಸ್ತಕವೊಂದರಿಂದ ಪ್ರೇರಿತ ಎಂದು ಹೇಳಿಕೊಂಡಿದ್ದಾರೆ. ಆದರೆ ಮುನ್ನುಡಿ ಬೆನ್ನುಡಿಗಳಲ್ಲಿ ಎಲ್ಲೂ ಮೂಲ ಪುಸ್ತಕದ ಹೆಸರಿಲ್ಲ.
ಕಾದಂಬರಿಯೊಂದನ್ನು ಮೂಲ ಲೇಖಕರ, ಕೃತಿಯ ಹೆಸರಿನ ಪ್ರಸ್ತಾಪವೇ ಇಲ್ಲದೆ ಭಾವಾನುವಾದ (?) ಮಾಡುವುದು ಎಷ್ಟು ಸರಿ? ಅದೊಂದು ಕರ್ಟಸಿ ಸಾಹಿತ್ಯ ಪ್ರೇಮಿಗಳಾದ ಮತ್ತು ವಸ್ತುನಿಷ್ಠ ವಿಮರ್ಶಕರಾದ ಲೇಖಕರಿಂದ ಓದುಗರು ನಿರೀಕ್ಷಿಸಬಹುದೇನೋ ಎಂದು ಅನಿಸಿತು.
ಬರವಣಿಗೆಯ ವಿಚಾರಕ್ಕೆ ಬಂದರೆ, ಮೊದಲನೇ ಪ್ರಯತ್ನ, ಹೊಸ ಪ್ರಕಾರ, ಎಂಬ consideration ನೊಂದಿಗೆ ಓದಿದರೂ ಬಹಳ ನಿರಾಸೆ ಮೂಡಿಸಿತು. ಕಥೆಯಲ್ಲಾಗಲಿ ಪಾತ್ರಗಳಲ್ಲಾಗಲಿ ಓದುಗರನ್ನು invest ಮಾಡಿಸುವಂಥ ಗಟ್ಟಿತನ ಕಾಣಲಿಲ್ಲ.
ಕನ್ನಡದಲ್ಲಿ ಕಾಲ್ಪನಿಕ ವೈಜ್ಞಾನಿಕ ಕಾದಂಬರಿಗಳು ಬಲು ಅಪರೂಪ .ಈ ನಿಟ್ಟಿನಲ್ಲಿ ನಾನು ಓದಿರುವ ಕೆಲವು ಕೃತಿಗಳು ರಾಜಶೇಖರ ಭೂಸನೂರಮಠ ಅವರು ಬರೆದದ್ದು.ಕಾಲ ಬಂಧ ಸಹ ಇದೇ ಜಾಡಿನ ಕಾದಂಬರಿ.
ಒಂದು ರೀತಿಯಲ್ಲಿ ಹೇಳಬೇಕಾದರೆ ಕಲ್ಪನೆಗೂ ಮಿಂಚಿದ ಕಲ್ಪನೆಯಿದು. ಹೀಗೊಂದು ಸಂಗತಿ ನಡೆದರೆ ಹೇಗಿರಬಹುದು ಎಂದು ಊಹಿಸಿದರೆ ರೋಮಾಂಚಕಾರಿಯಾಗಿರುತ್ತದೆ. ಕಾಲದ ನಡೆಯಲ್ಲಿ ವಿಶ್ವದ ಬೇರೆ ಬೇರೆ ಮೂಲೆಗಳಲ್ಲಿ ಸಮಾನಾಂತರ ಬದುಕು ನಡೆಯುತ್ತಿರಬಹುದು...!!! ಅಲ್ಲಿಯೂ ಸಹ ನಮ್ಮ ತರಹ ಜನವೇ ...ಅಂದರೆ ಥೇಟಾ ಥೇಟು ನಮ್ಮ ತದ್ರೂಪಿಗಳೇ ಬದುಕು ನಡೆಸುತ್ತಿರಬಹುದು... ಅಂತಹ ನಮ್ಮಂತ ನಾವೇ ಪರಸ್ಪರ ಎದುರಾದರೆ ಹೇಗಿರಬಹುದು ...???!!ಆ ಸನ್ನಿವೇಶ ಮೈ ಜುಮ್ಮೆನಿಸುವಂತಹ ಅನೂಹ್ಯವಾದ ಅನುಭವಕ್ಕೆ ಪಕ್ಕಾದರೆ ನಮ್ಮ ಪ್ರತಿಕ್ರಿಯೆ ಹೇಗಿರಬಹುದು???!!! ನಮ್ಮನ್ನು ಕಂಡು ನಮ್ಮ ತದ್ರೂಪಿ ಗಳ ಪ್ರತಿಕ್ರಿಯೆ ಇನ್ನೂ ಹೇಗಿರಬಹುದು....???
ಈ ಸಮಾನಾಂತರ ವಿಶ್ವದ ಕಲ್ಪನೆ ನಮಗೆ ತೀರಾ ಹೊಸದು. ಆದರೂ ಸಹ ಇದು ಒಂದು ತರಹ ಖುಷಿ ಹುಟ್ಟಿಸುವ ಕಲ್ಪನೆ ಅಲ್ಲವೇ ,??ಇಂದ್ರ ತೆಲುಗು ಚಲನಚಿತ್ರದಲ್ಲಿ ಹೇಳುತ್ತಾರಲ್ಲ ಹಾಗೆ ಗಂಗಾನದಿಯಲ್ಲಿ ಅದ್ದಿದರೆ ವ್ಯಕ್ತಿ ಇಬ್ಬರಾಗುತ್ತಾರೆ ..ಅದು ಒಂದೇ ತರಹ .ಒಂದು ಪಕ್ಷ ನಮ್ಮ ಸ್ಥಾನವನ್ನು ನಮ್ಮ ಪ್ರತಿರೂಪಿ ಆಕ್ರಮಿಸಿದರೆ ದಾಂಪತ್ಯ ಜೀವನದ ಪರಿಸ್ಥಿತಿ ಏನಾಗಬಹುದು?? ಏನೆಲ್ಲಾ ಗೋಜಲುಗಳು... ಎಷ್ಟೆಲ್ಲ ಸಂದಿಗ್ಧಗಳು...ಅಂತಹ ಪರಿಸ್ಥಿತಿ ಯಲ್ಲಿ ನಾವು ನಾವಾದ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವೇ??ನಾವು ನಾವೇ ಎಂದು ನಿರೂಪಿಸಿಕೊಳ್ಳಲು ಏನೆಲ್ಲಾ ಪಡಿಪಾಟಲು ಬೀಳಬೇಕಾಗಬಹು��ೆಂಬ ಅಚ್ಚರಿ ಕೂಡಾ..ಒಂದು ರೀತಿ ಗೊಂದಲದ ಪರಿಸ್ಥಿತಿ ಅಲ್ಲವೇ??
ಆದರೆ ಇದು ಲೇಖಕರೇ ಹೇಳುವಂತೆ ಲೇಖಕರ ಮೂಲ ಕಲ್ಪನೆ ಅಲ್ಲ ..ಬದಲಿಗೆ ಒಂದು ಇಂಗ್ಲಿಷ್ ಕಾದಂಬರಿಯಿಂದ ಪ್ರೇರಿತ. ಅವರೇ ಹೇಳುವಂತೆ ಕಲ್ಪನೆಗಳು ಹುತ್ತಗಟ್ಟಿದರೂ ಅದರಿಂದ ಭಾರೀರ ಸರ್ಪಗಳೇ ಹೊರ ಬಂದಂತಾಗಿದೆ !!ಲೇಖಕರೊಬ್ಬರು ಹೇಳುವಂತೆ ನೀ ಮಾಯೆಯೋ ನಿನ್ನೊಳಗೆ ಮಾಯೆಯೋ ಮಾಯೆಯೊಳಗೆ ಮಾಯೆ ಒಂದಾಗಿ ಮಾಯಾಲೋಕ ಸೃಷ್ಟಿಯಾದಂತೆ ಆಗಿದೆ.
ಒಂದು ಘಟ್ಟದಲ್ಲಿ ಅಂತೂ ಆಂಪ್ಯೂಲ್ಗಳು ಖಾಲಿಯಾಗುತ್ತಾ ಹೋದಂತೆ ನಮ್ಮಲ್ಲಿ ತಳಮಳವು ಹೆಚ್ಚುತ್ತಾ ಹೋಗುತ್ತದೆ. ವಿಕಾಸ್ ನ ಗತಿ ಮುಂದೆ ಏನಾಗಬಹುದು ಎಂಬ ಕುತೂಹಲ ಹುಟ್ಟುತ್ತದೆ.ಯಾವುದೇ ಆಯ್ಕೆಗಳೇ ಇಲ್ಲದ ಬದುಕು ನಮ್ಮ ಪಾಲಿಗೆ ಕಟ್ಟಿಟ್ಟಿದ್ದರೆ ಆಗ ಬದುಕಿನ ಗತಿ ಏನಾಗಬಹುದು??ನಾವೇ ರೂಪಿಸಿಕೊಂಡ ಸುಂದರ ಜಗತ್ತು ಏಕಾಏಕಿ ಹೊಸದೊಂದು ಆಯಾಮಕ್ಕೆ ತಿರುಗಿ ಬಿಟ್ಟರೆ ಅದನ್ನು ಎದುರಿಸುವ ಮಾರ್ಗ ಯಾವುದು ??ಬದುಕನ್ನು ಬಂದ ಹಾಗೆ ಬದುಕಲು ಬಿಡುವುದೇ ಉಳಿಯುವ ಏಕೈಕ ದಾರಿ!!! ವಿಕಾಸ್ ಮಾಡುವುದು ಅದನ್ನೇ.
ಅದೆಲ್ಲದರ ಮಧ್ಯೆಯೂ ಮೆನ್ ವಿಲ್ ಬಿ ಅಲ್ವೇಸ್ ಮೆನ್ ಎನ್ನುವಂತೆ ಅಂತಹ ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗಿ ತನ್ನ ಸಹಜ ಬದುಕನ್ನು ಮತ್ತೆ ಪಡೆದ ಸಂದರ್ಭದಲ್ಲಿಯೂ ಸಹ ತನ್ನದೇ ತದ್ರೂಪಿ ತನ್ನ ಹೆಂಡತಿಯ ಹಾಸಿಗೆ ಹಂಚಿಕೊಂಡಿರು ಬ ಹುದೇ ಎಂಬ ಅನುಮಾನ ವಿಕಾಸ್ ಗೆ ಬರುವುದು ಅತ್ಯಂತ ಮಾನವ ಸಹಜ ಹುಲು ಪ್ರಕ್ರಿಯೆ ಆಗಿಬಿಡುತ್ತದೆ... ಲೇಖಕರೇ ಹೇಳುವಂತೆ ಸಣ್ಣ ಸಣ್ಣ ವಿಷಯಗಳಿಗೆ ಬದುಕು ಬದಲಾಗಿಬಿಡುತ್ತದೆ... ಅದು ಎಷ್ಟು ಸಣ್ಣ ಎನ್ನುವುದು ಅವರವರ ಮನೋಭಾವಕ್ಕೆ ಬಿಟ್ಟಿದ್ದು...
ಆದರೂ ಸಹ ಈ ಕಾದಂಬರಿಯು ತೀರಾ ಸರಳ ಎಂದು ನನಗೆ ಅನಿಸಲಿಲ್ಲ. ಚಿಕ್ಕ ಕಾದಂಬರಿಯಾದರೂ ಒಂದೇ ಗುಕ್ಕಿಗೆ ದಕ್ಕುವಂತದ್ದೂ ಅಲ್ಲ... ಕೆ ಎನ್ ಗಣೇಶಯ್ಯನವರ ಕಾದಂಬರಿಗಳ ಹಾಗೆ ನಿಧಾನವಾಗಿ ಗಮನವಿಟ್ಟು ಓದಿ ಮನಸ್ಸಿಗೆ ಇಳಿಸಿ ಕೊಳ್ಳುವಂತಹ ಕಾದಂಬರಿ.
ಕನ್ನಡದಲ್ಲಿ ಒಂದು ಅಪರೂಪದ ಚಂದದ ಪ್ರಯತ್ನ ಲೇಖಕರು ಮೊದಲ ಪ್ರಯತ್ನದಲ್ಲಿಯೇ ಸಿಕ್ಸರ್ ಬಾರಿಸಿದ್ದಾರೆ ಎಂದರೂ ತಪ್ಪಾಗಲಾರದು .
ಪುಸ್ತಕ ಓದಿದ ನಂತರ, ಒಂದೆರಡು ಇಂಗ್ಲೀಷ್ ಸೈಸ್ನ್ಸ್ ಫಿಕ್ಷನ್ ಸಿನಿಮಾಗಳನ್ನು ನೋಡಿದಂತಾಯಿತು. ಕಣ್ಣಿಗೆ ಕಟ್ಟುವಹಾಗೆ ಕತೆ ಹೆಣೆದಿದ್ದಾರೆ. ಸ್ವತಃ ಲೇಖಕರೇ ಹೇಳುವ ಹಾಗೆ ಕನ್ನಡಲ್ಲಿ ಈ ತರಹದ ಸೈಸ್ನ್ಸ್ ಆಧಾರಿತ ಫಿಕ್ಷನ್ ಗಳ ಸಂಖ್ಯೆ ಕಡಿಮೆ.
ಕ್ರಮಬದ್ಧವಾದ ನಮ್ಮ ಪಠ್ಯಕ್ರಮದ ಅಧ್ಯಯನದಿಂದಾಗಿ, ಅನೇಕ ಸಾರಿ ವಿಜ್ಞಾನವು ಆಂಗ್ಲಕ್ಕೆ ಮಾತ್ರ ಬೆಸೆದುಕೊಂಡಿದೆ ಎಂಬ ಸಮಾರೋಪಕ್ಕೆ ಬಂದಿರುತ್ತೇವೆ. ಆದರೆ ವಿಜ್ಞಾನ, ವಿಷಯಗಳು, ಸಿದ್ಧಾಂತಗಳು ಯಾವುದೇ ಭಾಷೆಗೆ ಮೇಲೆ ಅವಲಂಬಿತವಾಗಿರುವುದಿಲ್ಲ ಎನ್ನುವ ಸತ್ಯ ಅದನ್ನು ಬೇರೆ ಭಾಷೆಗಳಲ್ಲಿ ಅಕ್ಷರಕ್ಕಿಳಿಸಿದಾಗ ಮನದಟ್ಟಾಗುತ್ತದೆ. ಮಾಡ್ರನ್ ಫಿಸಿಕ್ಸ್, ಕ್ವಾಂಟಮ್ ಫಿಸಿಕ್ಸ್ ಗಳು ಕಬ್ಬಿಣದ ಕಡಲೆ. ಹಲವು ದಿನದ ನಿರಂತರ ಅಭ್ಯಾಸದಿಂದಲೂ ಒಂದೊಂದು ಸಾರಿ ಅರ್ಥವಾಗುವಿದಿಲ್ಲ. ಈ ತರಹದ ಅಡಿಪಾಯದಲ್ಲಿ ವಿಷಯಗಳ ಅಧ್ಯಯನ ಮಾಡಿ, ಕನ್ನಡಲ್ಲಿ ಅಕ್ಷರ ರೂಪಕ್ಕಿಳಿಸಿದ ಲೇಖಕರಿಗೊಂದು ದೀರ್ಘದಂಡ ನಮಸ್ಕಾರಗಳು.
ಇನ್ನೂ ಕಾದಂಬರಿಯು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಅಲ್ಲಲ್ಲಿ ಕೆಲವು ಸಾರಿ ಚಿಂತೆಗೆ ಒಡ್ಡುತ್ತದೆ ಮತ್ತು ಕೆಲವೊಂದು ಸಾರಿ ವಿಷಯಗಳನ್ನು ಡೈಜೆಸ್ಟ್ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ವಿಕಾಸ್, ನೇಹಾ , ಸುದರ್ಶನ್, ರಚನಾ, ಪ್ಯಾಟ್ರಿಕ್ ಪಾತ್ರಗಳು ಹಾಗೆ ಸ್ಮೃತಿಪಟಲದಲ್ಲಿ ಉಳಿಯುತ್ತವೆ. ಬಾಕ್ಸ್ ಸಿಕ್ಕಾಗ ಒಂದು ದೀರ್ಘ ಉಸಿರು, ಆಂಪುಲ್ಗಳು ಕಡಿಮೆ ಆದಾಗ ಉಸಿರಾಟದ ಏರಿಳಿತಗಳು, ವಿಕಾಸ್ ತಾನು ಅಸ್ಥಿತ್ವದಲ್ಲಿರುವ ಪ್ರಪಂಚಕ್ಕೆ ತಲುಪುತ್ತಾನೋ ಇಲ್ಲವೋ ಎಂಬ ಆಸೆ/ಹತಾಶೆ/ನಿರಾಶೆಗಳು ಒಂದು ತರಹದ ಕುತೂಹಲಕ್ಕೆ ತಂದು ನಿಲ್ಲಿಸುತ್ತವೆ. ಅಲ್ಲಲ್ಲಿ ವಾಕ್ಯಗಳಲ್ಲಿನ "ಅವನನ್ನು" ಎನ್ನುವ ಪದ, ಓದುಗನಾದ ನನಗೆ ಸ್ವಲ್ಪ ಗೊಂದಲಕ್ಕೀಡು ಮಾಡಿತು. ಆದರೆ ಇದು ನಗಣ್ಯ.
ಒಮ್ಮೆ ನೀವೇ ಓದಿ ನೋಡಿ. ಖಂಡಿತಾ ನಿರಾಸೆಯಾಗುವುದಿಲ್ಲ. ವಿಜ್ಞಾನದ ವಿಷಯಗಳನ್ನು ಕಲ್ಪನೆಗೆ ಒಡ್ಡಿಕೊಳ್ಳುವುದು ಪ್ರತಿಯೊಬ್ಬ ಓದುಗನ ಸಾಮರ್ಥ್ಯ. ಲೇಖಕರಿಂದ ಇನ್ನೂ ಅನೇಕ ಕಾದಂಬರಿಗಳು ಹೊರಬರಲಿ ಎಂಬ ಹೆಬ್ಬಯಕೆ.
ತಟ್ಟನೆ ಯಾರೋ ದೂಡಿದ ಹಾಗಾಯಿತು. ಎದ್ದು ಕುಳಿತೆ. ಸುತ್ತಲೂ ನೋಡಿದೆ. ನನ್ನ ಮನೆಯಂತಹ ಮನೆ. ಆದರೆ ನನ್ನದಲ್ಲ. ಇದೆಂಥ ವಿಚಿತ್ರ! ರಾತ್ರಿ ಮಲಗಿದ್ದು ನನ್ನ ಮನೆಯಲ್ಲಿಯೇ. ಎದ್ದು ನೋಡುವಾಗ ಮನೆಯವರೂ ಇಲ್ಲ, ನನ್ನ ಮನೆಯೂ ಇದಲ್ಲ!
ಯಾರೋ ಬಾಗಿಲು ತಟ್ಟಿದರು. ಕಾಲಿಂಗ್ ಬೆಲ್ ಇದ್ದರೂ ಬಾಗಿಲು ತಟ್ಟುವರಲ್ಲ ಅಂದುಕೊಂಡೆ. ಕಾಲಿಂಗ್ ಬೆಲ್ ಸ್ವಿಚ್ ಆಫ್ ಇದೆಯಾ ನೋಡಿದೆ, ಈ ಮನೆಗೆ ಕಾಲಿಂಗ್ ಬೆಲ್ ಇಲ್ಲವೇ ಇಲ್ಲ!
ಬಂದದ್ದು ಯಾರು? ಎದೆ ಬಡಿತ ಜೋರಾಯಿತು. ಬಾಗಿಲು ತೆರೆದೆ. ಅವಳು ಬಂದು ನಿಂತಿದ್ದಳು. ಅವಳು ಅಂದರೆ ತಕ್ಷಣಕ್ಕೆ ನೆನಪಾಗಲಿಲ್ಲ. ಇವಳು ಅವಳೇ ಹೈಸ್ಕೂಲಿನಲ್ಲಿ ಎದುರು ಬೆಂಚಿನಲ್ಲಿ ಕೂರುತ್ತಿದ್ದ ಹುಡುಗಿ. ಈ ನೆನಪು ಅಸ್ಪಷ್ಟ.
ಮದುವೆ ಆದರೆ ನಿನ್ನನ್ನೇ ಅಂತ ನಾನು ಕಾಯ್ತಾ ಇದ್ರೆ ನೀನು ಇಲ್ಲಿ ಬಂದು ಅಡಗಿ ಕುಳಿತಿದ್ದೀಯಾ? ಎಂದಳು ಕೆನ್ನೆ ಕೆಂಪು ಮಾಡಿಕೊಂಡು.
ಏಯ್, ನನಗೆ ಮದುವೆ ಆಗಿದೆ ಅಂದೆ. ಇವಳನ್ನು ನೋಡಿದ ನೆನಪು ಈಗ ಸ್ಪಷ್ಟವಾಗಿತ್ತು. ಆದರೆ ಈ ಪ್ರೀತಿ ಗೊತ್ತಿಲ್ಲ ನನಗೆ.
ಇದೆಲ್ಲ ನಾಟಕ ಬೇಡ, ಎಂದು ಕೈ ಹಿಡಿದು ಎಳೆದುಕೊಂಡು ಹೊರಟಳು.
ನಾನು ನಿನ್ನ ಹುಡುಗ ಅಲ್ಲ ಅಂದೆ. ಅವಳು ಕೇಳಲಿಲ್ಲ. ಅದೇ ಹೊತ್ತಿಗೆ ಒಬ್ಬ ಬಂದ. ಅವನು ನನ್ನಂತೆಯೇ ಇದ್ದ. "ಅವನು ನಿನ್ನ ಹುಡುಗ ಅಲ್ಲ ಕಣೇ, ನಾನು ಎಂದವನೇ ನನ್ನತ್ತ ಕೋಪದಿಂದ ನೋಡುತ್ತಾ, ನಾನು ಇವನು ಯಾರು ತದ್ರೂಪಿ ? ಅಂದುಕೊಳ್ಳುತ್ತಾ ಇರುವಾಗಲೇ ಗನ್ ತೆಗೆದು ನನ್ನನ್ನು ಶೂಟ್ ಮಾಡಿದ.
ಅವನು #ಕಾಲಬಂಧ
**
ನಿಮ್ಮ ಹಳೇ ಗೆಳತಿ ಅಲ್ಲಿರಬಹುದು. ನಿಮಗಾಗಿ ಕಾಯುತ್ತಾ ಇರಬಹುದು.
ಯಾವ ಥಿಯರಿ ಮೇಲೆ ಕಾದಂಬರಿ ಇದ್ಯೋ ಆ ಥಿಯರಿನ ಇನ್ನಷ್ಟು ವಿವರಿಸಬಹುದಿತ್ತು. ಯಾವ್ದೋ English ಸಿನಿಮಾನ 2X ಸ್ಪೀಡಲ್ಲಿ ನೋಡಿ ಬುಕ್ ಬರ್ದಿರೋತರ ಇದೆ. Overall Below average with lots of typo.