Jump to ratings and reviews
Rate this book

ಅಬ್ರಾಹ್ಮಣ

Rate this book

272 pages, Paperback

Published January 1, 2019

1 person is currently reading
9 people want to read

About the author

K.T. Gatti

30 books6 followers
Novelist, poet, short-story writer, essayist, playwright, educationist, linguist.... author of over 90 books in Kannada as well as English.
M. A. (English), B.Ed. from the University of Kerala; L.T.C.L. Diploma from Trinity College, London; A.C.P. Diploma from the College of Preceptors, Oxford; Taught English for 15 years in India and 9 years in Ethiopia; Published four books in the teaching of English language, grammar and Phonetics; Published in Kannada 47 novels, 5 anthologies of short stories, 6 anthologies of essays, 2 anthologies of poems, 28 plays, 17 radio plays and a travelogue; Published in the Tulu language a novel and a collection of poems translated from English.
Became a primary teacher at the age of 17 but still continued to learn more.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
2 (50%)
4 stars
1 (25%)
3 stars
1 (25%)
2 stars
0 (0%)
1 star
0 (0%)
Displaying 1 of 1 review
176 reviews22 followers
November 15, 2020
ಕೃತಿ: ಅಬ್ರಾಹ್ಮಣ

ಲೇಖಕರು: ಕೆ.ಟಿ.ಗಟ್ಟಿ

ಪ್ರಕಾಶಕರು: ಅಂಕಿತ ಪುಸ್ತಕ,ಬೆಂಗಳೂರು


ಭಾರತೀಯ ಸಮಾಜದಲ್ಲಿ ಕಂಡು ಬರುವ ಜಾತಿವ್ಯವಸ್ಥೆ ಮತ್ತು ಅದರ ವಿರುದ್ಧ ಧ್ವನಿಯೆತ್ತಿ ಪ್ರತಿಭಟಿಸುವ ಯಾವುದೇ ವ್ಯಕ್ತಿ ಪಡಬೇಕಾದ ವೈಯಕ್ತಿಕ ಹಾಗೂ ಸಾಮಾಜಿಕ ಅಡೆತಡೆಗಳು ಈ ಕಾದಂಬರಿಯ ಕಥಾವಸ್ತು.


ಸಂಪ್ರದಾಯನಿಷ್ಠ ಕುಟುಂಬದಲ್ಲಿ ಜನಿಸಿದ ಕಥಾನಾಯಕ ಅದರಲ್ಲಿ ನಂಬಿಕೆಯನ್ನು ಕಳೆದುಕೊಂಡು ಎಲ್ಲರೂ ಸಮಾನರು,ಈ ಭೂಮಿಯ ಮೇಲೆ ಜೀವಿಸಲು ಹಕ್ಕುಳ್ಳವರು ಎಂಬ ಮನೋಭಾವವನ್ನು ಬೆಳೆಸಿಕೊಂಡು ಬಂದ ವ್ಯಕ್ತಿ. ಆದರೆ ಅವನಿರುವ ಸಾಮಾಜಿಕ ವ್ಯವಸ್ಥೆ ಅದಕ್ಕೆ ವ್ಯತಿರಿಕ್ತವಾದುದು. ಶತಮಾನಗಳಿಂದಲೂ ಆಚರಣೆಯಲ್ಲಿರುವ ಪದ್ಧತಿಯ ವಿರುದ್ಧ ಧ್ವನಿ ಎತ್ತಿದಾಗ ನಮ್ಮ ಸಮಾಜವು ಆ ವ್ಯಕ್ತಿ ಅಥವಾ ಸಂಸ್ಥೆಯನ್ನು ಹಾಸ್ಯಾಸ್ಪದವಾಗಿ ನೋಡಲಾರಂಭಿಸುತ್ತದೆ. ಯಾವುದೇ ರೀತಿಯ ಬದಲಾವಣೆಗಳಿಗೆ ನಾವು ಸ್ಪಂದಿಸುವ ರೀತಿ ಇದು.


ಒಂದು ಸಮಾಜದಲ್ಲಿ ಗೌರವದಿಂದ ಜೀವನ ಸಾಗಿಸಲು ಜಾತಿ ಮುಖ್ಯವೋ ಅಥವಾ ಮಾನವೀಯತೆ ಮುಖ್ಯವೋ ಎಂಬುದೇ ಇಲ್ಲಿ ಲೇಖಕರು ಎತ್ತಿರುವ ಪ್ರಶ್ನೆ. ನಮ್ಮಲ್ಲಿ ಆಚರಣೆಯಲ್ಲಿರುವ ಕೆಲವೊಂದು ಪದ್ಧತಿಗಳು ಅಥವಾ ವಿಚಾರಗಳು ಮನುಷ್ಯನನ್ನು ಎಷ್ಟೊಂದು ಸಂವೇದನಶೀಲರಹಿತರನ್ನಾಗಿ ಮಾಡುತ್ತದೆ ಎಂಬುದನ್ನು ನೆನೆದಾಗ ಖೇದವಾಗುತ್ತದೆ. ಇಲ್ಲಿ ಯಾವುದೇ ಒಂದು ವರ್ಗವನ್ನು ಲೇಖಕರು ದೂಷಿಸುವುದಿಲ್ಲ. ಮೇಲ್ವರ್ಗದ ಎಲ್ಲರೂ ತನಗಿಂತ ಕೆಳಸ್ತರದಲ್ಲಿ ಇರುವವರನ್ನು ಶೋಷಿಸುವವರೇ. ಇಲ್ಲಿ ಬ್ರಾಹ್ಮಣ ವೈಶ್ಯ ಶೂದ್ರ ಎಂಬ ಭೇದ ಭಾವ ಇಲ್ಲ ಎಂಬುದನ್ನು ಕಥೆಯ ಪಾತ್ರವೊಂದರ ಮೂಲಕ ಬಹಳ ಚಂದವಾಗಿ ಹೇಳುತ್ತಾರೆ.ಯಾವುದೇ ಒಂದು ಸಮಾಜವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರಿದಾಗ ಮಾತ್ರ ಜಾತೀಯತೆಯ ಗೆರೆಗಳು ಮಸುಕಾಗುತ್ತವೆ ಎಂಬ ಅಂಶವನ್ನು ಮುಂಬಯಿಯ ನಗರೀಕರಣದ ಹಿನ್ನೆಲೆಯಲ್ಲಿ ಲೇಖಕರು ವಿವರಿಸಿದ್ದಾರೆ.


ಒಬ್ಬ ಮನುಷ್ಯನ ಅನಿಶ್ಚಿತ ಬದುಕಲ್ಲಿ ಬೆಳೆದು ಬಂದ ನಂಬಿಕೆಗಳು,ಅವನ ಕನಸುಗಳು,ಆಕಾಂಕ್ಷೆಗಳು ಕೆಲವು ಸಲ ಎಷ್ಟು ಅರ್ಥಹೀನವಾಗಿ ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತವೆ ಎಂಬುದು ಮತ್ತಷ್ಟು ಸ್ಫುಟವಾಗಿ ಮನಸ್ಸಿನಲ್ಲಿ ಅಚ್ಚೊತ್ತುತ್ತದೆ. ಎಲ್ಲವೂ ಎಲ್ಲರೂ ನಮ್ಮದು ನಮ್ಮವರು. ಆದರೆ ಯಾವುದು ನಮಗೆ ಸೇರಿದ್ದಲ್ಲಎನ್ನುವುದನ್ನು ಕಾದಂಬರಿ ಚೆನ್ನಾಗಿ ಅರ್ಥ ಮಾಡಿಸುತ್ತದೆ.


ಇಷ್ಟವಾದ ಸಾಲುಗಳು.                 . "ತೊಟ್ಟಿಲಲ್ಲಿರುವ ಮಗುವಿನ ಕಣ್ಣುಗಳ ಹೊಳಪು ದರ್ಶನಶಾಸ್ತ್ರ. ಚಟ್ಟದ ಮೇಲೆ ಮಲಗಿರುವಾತನ ಕಣ್ಣುಗಳ ಒಳಗೆ ಹುದುಗಿರುವುದು ರಿಯಲಿಸಂ"


ನಮಸ್ಕಾರ,

ಅಮಿತ್ ಕಾಮತ್


 
Displaying 1 of 1 review

Can't find what you're looking for?

Get help and learn more about the design.