Jump to ratings and reviews
Rate this book

ಅಶ್ವತ್ಥಾಮನ್

Rate this book

170 pages, Hardcover

Published March 1, 2020

4 people are currently reading
35 people want to read

About the author

ಜೋಗಿ | Jogi

79 books44 followers
Jogi Girish Rao Hatwar
ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ ಪತ್ನಿ ಜ್ಯೋತಿ, ಮಗಳು ಖುಷಿಯೊಂದಿಗೆ ಜೀವಿಸುತ್ತಿದ್ದಾರೆ.

WikiPage- https://kn.wikipedia.org/s/pyg
Facebook Profile- facebook.com/girish.hatwar

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
5 (8%)
4 stars
28 (49%)
3 stars
23 (40%)
2 stars
0 (0%)
1 star
1 (1%)
Displaying 1 - 7 of 7 reviews
Profile Image for Naresh Bhat.
10 reviews4 followers
March 8, 2020
ನಾನು ಓದಿದೆ ಎನ್ನುವುದಕ್ಕಿಂತ ಅದೇ ಓದಿಸಿಕೊಂಡು ಹೋಯ್ತು ಅನ್ನೋದು ಹೆಚ್ಚು ಸಮಂಜಸ ಅನ್ಸುತ್ತೆ. ಓದಿ ಮುಗಿಸಿದಾಗಿನಿಂದ ಒಂದು ಖಾಲಿತನ ಸೃಷ್ಟಿಯಾಗಿದೆ! ಮಿಸ್ ಮಾಡದೇ ಓದಿ
1 review1 follower
March 10, 2020
ಜೋಗಿಯವರ ಹೊಸ ಕಾದಂಬರಿ ಅಶ್ವತ್ಥಾಮನ್ ಓದಿ (ಮತ್ತು ಕೇಳಿ!) ಮುಗಿಸಿದೆ, ಮೈಲ್ಯಾಂಗ್ ಬುಕ್ಸ್ appನಲ್ಲಿ.

ಅದರ ಗುಂಗಿನಿಂದ ಇನ್ನೂ ಹೊರಬಂದಿಲ್ಲ! ಈ ಕಾದಂಬರಿಯ ಮುಖ್ಯ ಪಾತ್ರಧಾರಿ ಅಶ್ವತ್ಥಾಮನ್ ಆಗಿದ್ದರೂ, ‘ನಟನೆ’ ಎಂಬ ಮಾಯಾಜಾಲ ಅವನನ್ನೂ ಓದುಗರನ್ನೂ ಆವರಿಸಿ ನಿಂತುಬಿಡುತ್ತದೆ. ಹಾಗಾಗಿ ‘ನಟನೆ’ಯೇ ಇದರ ನಿಜವಾದ ಹೀರೋ. ನಟನೆ ಎನ್ನುವ ಫಿನಾಮಿನನ್-ನ ವಿವಿಧ ಪದರಗಳು ಜೇಡನ ಬಲೆಯಂತೆ ಎಲ್ಲರನ್ನೂ, ಎಲ್ಲವನ್ನೂ ಸುತ್ತಿಕೊಳ್ಳುತ್ತಾ ಹೋಗುತ್ತದೆ. ಕತೆಯೊಳಗೆ ಒಂದು ಪಾತ್ರವಾಗಿ ಕತೆಗೆ ಸಾಕ್ಷಿಪ್ರಜ್ಞೆಯಂತಿರುವ ಲೇಖಕನೂ ನಾಟಕದಲ್ಲಿ ಸೆಳೆಯಲ್ಪಟ್ಟು ತನ್ನ ವಸ್ತುನಿಷ್ಠತೆಯನ್ನು ಕಳೆದುಕೊಳ್ಳುವ ಪ್ರಕ್ರಿಯೆ ದಿಗಿಲು ಹುಟ್ಟಿಸುವಂತಿದೆ.

ಅಶ್ವತ್ಥಾಮನಿಗೆ ಬದುಕು ಮತ್ತು ನಟನೆಗಳು ಬೇರೆ ಬೇರೆಯಲ್ಲ. ಅವನ ವ್ಯಕ್ತಿತ್ವದಲ್ಲಿ ಅವೆರೆಡೂ ಬೇರ್ಪಡಿಸಲಾಗದಂತೆ ಬೆರೆತು ಹೋಗಿವೆ. ಹಾಗಾಗಿ ಅವನು ಮೂಲಭೂತವಾಗಿ ಒಬ್ಬ ಇಂಡಿವಿಜುಯಲ್ ಆಗಿರದೇ, ನಿಜ ಜೀವನದಲ್ಲೂ ತೆರೆಯ ಮೇಲೂ ಅವನು ನಟಿಸುತ್ತಿರುವ ಪಾತ್ರಗಳೆಲ್ಲ ಬೆರೆಕೆಯಾಗಿರುವ ಒಂದು fluid entity ಆಗಿದ್ದಾನೆ. ಇದು ಬರೀ ಅವನು ಹಾಕಿ ತೆಗೆವ ವೇಷಗಳಿಂತಿರದೇ, ಅವನ ಆತ್ಮಕ್ಕೆ ಇಳಿದಿರುವ ವಾಸ್ತವವೇ ಆಗಿದೆ.

ಇದನ್ನು ಓದುವಾಗ ನನಗೆ ನೆನಪಾದದ್ದು ಕ್ರಿಸ್ಟೋಫರ್ ನೋಲನ್-ನ ‘ದಿ ಪ್ರಿಸ್ಟೀಜ್’ ಚಿತ್ರದ ನಾಯಕ ಬೋರ್ಡೆನ್. ಅವನು ಒಬ್ಬ ಪ್ರೊಫೆಶನಲ್ ಮ್ಯಾಜೀಶಿಯನ್ ಅಷ್ಟೇ ಆಗಿರದೇ ಅವನ ಬದುಕೇ ಒಂದು ಮ್ಯಾಜಿಕ್ ಆಗಿರುತ್ತದೆ. ಅವನು ಸ್ಟೇಜಿನ ಮೇಲೆ ಮಾತ್ರ ಮ್ಯಾಜಿಕ್ ಮಾಡಿ ಆಮೇಲೆ ವಾಸ್ತವದಲ್ಲಿ ಬದುಕಿದ್ದರೆ, ಅವನು ಆ ಮಟ್ಟದ ಮ್ಯಾಜೀಶಿಯನ್ ಆಗುವುದು ಸಾಧ್ಯವಾಗುತ್ತಿರಲಿಲ್ಲ. ಅವನ ಬದುಕಿನ ಪ್ರತಿ ಕ್ಷಣವೂ ಅವನ ಮ್ಯಾಜಿಕ್ ಟ್ರಿಕ್-ನ ಭಾಗವೇ ಆಗಿರುತ್ತದೆ. ಅವನ ಸಾವು ಅವನ ಅಂತಿಮ ಮತ್ತು ಅತ್ಯುನ್ನತ ಮ್ಯಾಜಿಕ್ ಟ್ರಿಕ್ ಆಗಿಬಿಡುತ್ತದೆ.

ಅಂತೆಯೇ ಅಶ್ವತ್ಥಾಮನ ಪ್ರತಿ ಹೆಜ್ಜೆ, ಪ್ರತಿ ಸನ್ನಿವೇಶವೂ ನಾಟಕದ ಯಾವುದೋ ಒಂದು ಭಾಗವೇ ಆಗಿರುತ್ತದೆ. ಕಾದಂಬರಿಯ ಕ್ಲೈಮ್ಯಾಕ್ಸ್ ಆಂತೂ ಒಂದು ಅಸಂಗತ ನಾಟಕದ ಕೊನೆಯ ಅಂಕದಂತೆ ಮೂಡಿಬಂದಿದೆ. ಇಲ್ಲಿ ಕಾದಂಬರಿಯು ನಟನೆಯೆಂಬ ರೂಪಕವನ್ನು ತನ್ನ ಪರಾಕಾಷ್ಠತೆಗೆ ತಂದು ನಿಲ್ಲಿಸುತ್ತದೆ.
Profile Image for Udaykiran Joshi.
78 reviews6 followers
April 27, 2020
Something different than what I have read in the past in kannada literature. Interesting and thought provoking in parts. However the story was too confusing as it jumped from one scene to another abruptly. I was actually listening to the audio version through 'My Lang' app. It could be because of the narration... Not sure. The audio was breaking up a bit (for a second or so) every now and then. So overall it was good book. I did enjoy a kannada book after a long time. Thanks to My Lang app and audio format.
7 reviews1 follower
April 4, 2020
In every page you will get to read minimum two or three thought provoking sentences...a nice book though end is very abrupt.
6 reviews
November 16, 2023
ನಟನೊಬ್ಬನ ಒಳಜಗತ್ತಿನ ತುಮುಲಗಳ ಬಗ್ಗೆ
Displaying 1 - 7 of 7 reviews

Can't find what you're looking for?

Get help and learn more about the design.