ಅಡಿಗರ ಪುಸ್ತಕವನ್ನು ನಾನು ಓದಿದ್ದು ಇದೇ ಮೊದಲು. ಸಾಮಾಜಿಕ ಕಟ್ಟುಪಾಡುಗಳು, ತನ್ನ ದೌರ್ಬಲ್ಯಗಳು, ಸರಿ ತಪ್ಪುಗಳ ನಡುವೆ ಹೊಯ್ದಾಟ ಚಂದವಾಗಿ ಚಿತ್ರಿತವಾಗಿದೆ ಈ ಕಾದಂಬರಿಯಲ್ಲಿ.ಈಗ್ಗೆ 50-100 ವರ್ಷಗಳ ಹಿಂದಿನ ಜೀವನದ ನವಿರಾದ ವಿವರಣೆ ಇದೆ. ಪದ್ಮ, ರಾಮಚಂದ್ರ, ಶ್ರೀನಿವಾಸ ಇವರೆಲ್ಲರ ನಡುವೆ ನಡೆಯುವ ಕಥೆ ಕೊನೆಯವರೆಗೂ ಓದಿಸಿಕೊಂಡು ಹೋಗುತ್ತದೆ.