*ಹುಲಿಯ ಹಾಲಿನ ಮೇವು*: Huliya Haalina Mevu is a 1979 Indian Kannada historical period film acted by Dr.Rajkumar, based on a novel of the same name by *Bharathisutha*. In 70's-90's almost all kannada films are novel based , Reading novel and watching novel based movie makes lot of difference.
ಭಾರತಿಸುತರವರು ಕೊಡಗಿನ ಚರಿತ್ರೆಯನ್ನು ಆಧಾರವಾಗಿಟ್ಟುಕೊಂಡು ಬರೆದ ಕಾದಂಬರಿ. ಕೊಡಗಿನ ಇತಿಹಾಸಕ್ಕೆ ಸಂಬಂಧಪಟ್ಟ 3ಕೃತಿಗಳು-- *ಜ್ಞಾನಪೀಠ ಪುರಸ್ಕ್ರತ ಮಾಸ್ತಿರವರ ಚಿಕವೀರರಾಜೇಂದ್ರ ಕಾದಂಬರಿ, ನಿರಂಜನರವರ ಅಪರಂಪಾರ ಹಾಗೂ ಕಲ್ಯಾಣಸ್ವಾಮಿ* ಭಾರತೀಸುತರವರ ಹುಲಿಯ ಹಾಲಿನ ಮೇವು ಸಹ ಕೂಡಗಿನ ಇತಿಹಾಸಕ್ಕೆ ಸಂಬಂಧಪಟ್ಟದ್ದು.ಇವರು ಕೊಡಗಿನ ಪದಗಳನ್ನು,ಗಾದೆಗಳನ್ನು ಕಾದಂಬರಿಯಲ್ಲಿ ಉಪಯೋಗಿಸಿಕೊಂಡು, ಅದಕ್ಕೆ ಅರ್ಥ ಸಮೇತವಾಗಿ ವಿವರಿಸಿದ್ದಾರೆ.
*ಕೊಡಗಿನ ದೊರೆಗಳಾದ ದೊಡ್ಡವೀರಪ್ಪ ಪ್ರಭುಗಳು*, ಆತನ ಭಂಟ ಚೆಂಗುಮಣಿ*. ಚೆಂಗುಮಣಿಯು ತನ್ನ ದೊರೆಗೆ ಯಾವರೀತಿಯಲ್ಲೂ ಕೇಡಾಗದೆ ಇರುವಂತೆ ನೋಡಿಕೊಳ್ಳುತ್ತೇನೆಂದು ಸದಾ ರಕ್ಷಕನಾಗಿರುತ್ತೇನೆಂದು ಪ್ರಮಾಣ ಮಾಡಿರುತ್ತಾನೆ. ಈ ಕಾದಂಬರಿಯಲ್ಲಿ ಚೆಂಗುಮಣಿಯ ಪಾತ್ರವು ಅತಿ ಮುಖ್ಯವಾದುದು, ಆ ಪಾತ್ರಕ್ಕೆ ಭಾರತಿಸುತರವರು ಕೊಟ್ಟಿರುವ ಮಹತ್ವ ಅಷ್ಟಿಷ್ಟಲ್ಲ. ಚೆಂಗುಮಣಿ ಹಾಗೂ ಪೂವಿಯ ಪ್ರೇಮದ ಪ್ರಸಂಗವನ್ನು,ಪೂವಿಯ ತಂದೆಯಾದ ನಾಡತಕ್ಕ ಸುಬ್ಬಯ್ಯನನ್ನು ಮೋಸಮಾಡಿ ಪೂವಿ ಚೆಂಗುಮಣಿಯರು ವಿವಾಹ ಮಾಡಿಕೊಂಡ ಪ್ರಸಂಗವನ್ನು,ತಾಯಿ ಮಗನ ಸಂಬಂಧವನ್ನು,ದೊರೆಗೆ ನಿಷ್ಟೆಯಿಂದ ಸೇವೆಸಲ್ಲಿಸುವುದನ್ನು,ಚೆಂಗುಮಣಿ ಹಾಗು ತಂಗವ್ವ ಬಾಲ್ಯದಿಂದಲೇ ಒಳ್ಳೆಯ ಸ್ನೇಹಿತರಾಗಿ, ಆ ಸ್ನೇಹಿವು ಪ್ರೇಮಕ್ಕೆ ಪರಿವರ್ತನೆಗೂಂಡು, ಅದೇ ಸಮಯದಲ್ಲಿ ಪೂವಿಯ ಮೇಲೆ ಮನವೊಲಿಸುವ ಪ್ರಸಂಗವನ್ನು *ಮನುಷ್ಯರ ಸಂಬಂಧಗಳ ಬಗ್ಗೆ, ಒಟ್ಟಾಗಿ ಚಂಗುಮಣಿಯ ಪಾತ್ರವನ್ನು ಆಧಾರವಾಗಿಟ್ಟುಕೊಂಡು , ತಾಯಿಗೆ ತಕ್ಕ ಮಗನಾಗಿ, ತಂಗವ್ವನಿಗೆ ಒಳ್ಳೆಯ ಸ್ನೇಹಿತನಾಗಿ, ಪೂವಿಗೆ ಒಳ್ಳೆಯ ಗಂಡನಾಗಿ, ದೊರೆಗೆ ಪ್ರಾಮಾಣಿಕನಾಗಿ, ನಿಷ್ಠಾವಂತ ಸೇವಕನಾಗಿ,ಯುದ್ಧ ಸಮಯದಲ್ಲಿ ದೊರೆಗೆ ನೆರವಾಗಿ, ಕಾವೇರಿಯಮ್ಮನ ಭಕ್ತನಾಗಿ ಇನ್ನೂ ಹಲವಾರು ಲಕ್ಷಣಗಳನ್ನು ತೋರಿಸಿಕೊಟ್ಟಿದ್ದಾರೆ*.
ಆದರೆ ಎಲ್ಲ ಐತಿಹಾಸಿಕ ಕಥೆಗಳಲ್ಲಿ ಕೇಳಿರುವ ಹಾಗೆ, ಇಲ್ಲೂ ಒಂದು ಪಾತ್ರವು ತನ್ನ ಸ್ವಾರ್ಥಕ್ಕಾಗಿ ದೊರೆಯ ಸಿಂಹಾಸನವನ್ನು ಹೇಗಾದರೂ ಮಾಡಿ ವಶಪಡಿಸಿ ತಾನು ನಾಯಕನಾಗಬೇಕೆಂಬ ಕೆಟ್ಟಬುದ್ಧಿ *ನಾಡತಕ್ಕ ಉತ್ತನಿಗೆ*. ಆ ಸಮಯದಲ್ಲಿ *ಮೈಸೂರು ರಾಜರಾದ ಚಿಕ್ಕದೇವರಾಜರು* ಪಿರಿಯಾಪಟ್ಟಣವನ್ನು ಆಕ್ರಮಿಸಿ ಕೊಡಗಿನ ಮೇಲೆ ದಂಡೆತ್ತಿ ಬರುತ್ತಾರೆ, ಇದನ್ನರಿತ ಉತ್ತ ಮಳೆಯಾಳಿ ಪ್ರಾಂತದ *ಕೋಟೆಯಂಗಡಿಯ ರಾಜನಾದ ವೀರವರ್ಮನಿಗೆ* ಕೊಡಗನ್ನು ಮುತ್ತಿಗೆಹಾಕಲು ಸಹಾಯ ಕೋರುತ್ತಾನೆ. ಆದರೆ ಕೊಡಗಿನ ಸೈನ್ಯ ಅಲ್ಪವಿದ್ದರೂ ಅವರು ಮೈಸೂರು ಸೈನ್ಯವನ್ನು ಎದುರಿಸಿ ಅವರನ್ನು ಹಿಮ್ಮೆಟ್ಟುವ ಪ್ರಸಂಗ ಓದಿದರೆ ಉತ್ತಮ, ದೊಡ್ಡವೀರಪ್ಪ ನೇತೃದ್ವದಲ್ಲಿ ಚಿಕ್ಕದೇವರಾಜರ ಸೈನ್ಯವು ಸೋತು, ಸ್ನೇಹ ಸಂಧಾನಕ್ಕೆ ಬಂದು ಅವರು ಮೈಸೂರಿಗೆ ಹಿಂದುರುಗುತ್ತಾರೆ.
ಕೋಟೆಯಂಗಡಿಯ ವೀರವರ್ಮನ ಕಥೆಯು ಹಾಗೆಯೇ ಆಗುತ್ತದೆ. ವೀರವರ್ಮನಿಗೆ ನೆರವಾಗಿ ಕೊಡಗಿನ ಜನರೆಲ್ಲರೂ ಸಹಾಯ ಮಾಡುತ್ತಾರೆಂದು ಉತ್ತನು ನಂಬಿಸಿರುತ್ತಾನೆ, ಆದರೆ ಅವರೆಲ್ಲರೂ ದೊಡ್ಡವೀರಪ್ರಭುಗಳಿಗೆ ನೆರವಾದಾಗ ವೀರವರ್ಮನಿಗೆ ಉತ್ತನ ಮಾತನ್ನು ನಂಬಿ ತಮ್ಮ ಕೈಯ್ಯನ್ನು ತಾವೇ ಸುಟ್ಟುಕೊಂಡವೆಂದು ವೀರವರ್ಮ ಉತ್ತನ ಮೇಲೆ ಕ್ರೋಧನಾಗುತ್ತಾನೆ. ವೀರವರ್ಮನ ಸೈನ್ಯವನ್ನು ದೊಡ್ಡವೀರಪ್ಪ ಪ್ರಭುಗಳ ನೇತೃತ್ವದಲ್ಲಿ ಧ್ವಂಸಮಾಡುತ್ತಾರೆ. ವೀರವರ್ಮ ದೊಡ್ಡವೀರಪ್ಪಪ್ರಭುಗಳು ಕದನವಾಡುವ ಸಮಮದಲ್ಲಿ ಚೆಂಗುಮಣಿಯು ದೊರೆಗೆ ಕೊಟ್ಟ ಮಾತಿನಂತೆ ತನ್ನ ಪ್ರಾಣವನ್ನು ತೆತ್ತು ದೊರೆಯನ್ನು ಕಾಪಾಡುತ್ತಾನೆ.
ಕೊಡಗರ ವೀರತ್ವದ ಬಗ್ಗೆ ಭಾರತಿಸುತರವರು ಅದ್ಭುತವಾಗಿ ವಿವರಿಸಿದ್ದಾರೆ.