Jump to ratings and reviews
Rate this book

ವಕೀಲರೊಬ್ಬರ ವಗೈರೆಗಳು

Rate this book

656 pages, Hardcover

Published January 1, 2017

Loading...
Loading...

About the author

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
3 (50%)
4 stars
3 (50%)
3 stars
0 (0%)
2 stars
0 (0%)
1 star
0 (0%)
Displaying 1 of 1 review
193 reviews23 followers
May 23, 2026
#ಪರಿಚಯ_೨೧_೨೦೨೬
ಕೃತಿ: ವಕೀಲರೊಬ್ಬರ ವಗೈರೆಗಳು
ಲೇಖಕರು: ಸಿ.ಎಚ್.‌ ಹನುಮಂತರಾಯ
ಪ್ರಕಾಶಕರು: ಸಪ್ನ ಬುಕ್ ಹೌಸ್, ಬೆಂಗಳೂರು

ಈ ಪುಸ್ತಕವನ್ನು ಆತ್ಮಕಥನ ಅಥವಾ ಅನುಭವ ಕಥನ ಎಂತಲೂ ಕರೆಯಬಹುದು. ಪುಸ್ತಕದ ಪರಿವಿಡಿಯಲ್ಲಿ ಒಟ್ಟು ನೂರು ಪ್ರಸಂಗಗಳ ಪಟ್ಟಿಯನ್ನು ಕೊಟ್ಟಿದ್ದಾರೆ. ಹಾಗಾಗಿ ಪ್ರತಿಯೊಂದು ಪ್ರಸಂಗವು ಅಪರಾಧ ಜಗತ್ತಿನ ಬಗ್ಗೆ ಇರಬಹುದು ಎಂಬ ನಿರೀಕ್ಷೆಯಲ್ಲಿ ಓದಲು ಪ್ರಾರಂಭಿಸಿದೆ. ಹೆಚ್ಚು ಕಡಿಮೆ ಅಂದುಕೊಂಡಿದ್ದಂತೆಯೇ ಪುಸ್ತಕದ ತಿರುಳು ಇದೆ.

ಮೊದಲ ನಾಲ್ಕಾರು ಅಧ್ಯಾಯಗಳಲ್ಲಿ ಲೇಖಕರು ಬಾಲ್ಯದಲ್ಲಿ ಕೇಳಿದ ವಕೀಲಿಕೆಯ ಕತೆಗಳು ತಮ್ಮ ಮೇಲೆ ಹೇಗೆ ಪ್ರಭಾವವನ್ನು ಬೀರಿ ತಾನು ಸಹ ಮುಂದೊಂದು ದಿನ ಹೆಸರಾಂತ ವಕೀಲನಾಗಬೇಕೆನ್ನುವ ಗಟ್ಟಿ ನಿರ್ಧಾರಕ್ಕೆ ಬರಲು ಬುನಾದಿಯಾಯಿತು ಎಂಬುದರ ವಿವರಗಳಿವೆ. ಅದರಲ್ಲಿ ಪ್ರಮುಖವಾಗಿ ಅಂದಿನ ಕಾಲದ ಖ್ಯಾತ ಕ್ರಿಮಿನಲ್ ಲಾಯರ್ ಮತ್ತವರ ಕುಟುಂಬದ ಬರ್ಬರ ಹತ್ಯೆಯ ತನಿಖಾ ವಿವರಗಳು ಮುಖ್ಯವಾದವು. ಹೀಗೆ ತನ್ನ ಕನಸನ್ನು ಬೆಂಬತ್ತಿದ ಲೇಖಕರು ಧೃಡ ಮನಸ್ಸಿನಿಂದ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಾ ಕಾಲೇಜು ಪ್ರವೇಶಿಸಿ, ಇಂಗ್ಲೀಷ್ ಭಾಷೆಯು ಬಾರದೆ ಕೀಳರಿಮೆಗೆ ಒಳಗಾಗುತ್ತಾರೆ. ಆದರೇನು? ಮತ್ತೆ ಧೈರ್ಯವಾಗಿ ಮುನ್ನುಗ್ಗಿ ಚೆನ್ನಾಗಿ ಓದಿ ಕಾನೂನು ಕಾಲೇಜಿಗೆ ಪ್ರವೇಶ ದೊರಕಿಸಿಕೊಳ್ಳುತ್ತಾರೆ. ಇವುಗಳ ನಡುವೆ ಒಟ್ಟಾರೆ ಜೀವನದಲ್ಲಿ ಅವರಿಗಾದ ಹತ್ತು ಹಲವು ಅನುಭವಗಳು ಒಬ್ಬ ಪರಿಪೂರ್ಣ ವಕೀಲ ಮತ್ತು ವ್ಯಕ್ತಿಯಾಗಲು ಮೆಟ್ಟಿಲುಗಳು ಆಗುತ್ತವೆ. ಇವುಗಳಲ್ಲಿ ಲಂಕೇಶ್ ಅವರ ಜೊತೆಗಿನ ಒಡನಾಟ, ಹಳ್ಳಿಯಲ್ಲಿ ನಡೆದ ಗಲಾಟೆಗಳಲ್ಲಿ ಆಗಾಗ ಪೋಲೀಸ್ ಸ್ಟೇಷನ್ನಿನ ಮೆಟ್ಟಿಲು ಹತ್ತಬೇಕಾಗಿ ಬಂದದ್ದು ಪ್ರಮುಖವಾದವುಗಳು.

ಕಾನೂನು ಕಾಲೇಜು ಸೇರಿಕೊಂಡ ಬಳಿಕ ತಮಗಿಂತ ವಯಸ್ಸಿನಲ್ಲಿ ಹಿರಿಯರ ಜೊತೆಗೆ ಅಭ್ಯಾಸಮಾಡಬೇಕಾಗಿ ಬಂದಿದ್ದು ಮತ್ತು ಅದರ ಸಲುವಾಗಿ ಬೆಳಿಗ್ಗೆ ಹತ್ತೂವರೆಯ ನಂತರ ಅವರಿಗೆ ಕಾಲೇಜಿನಿಂದ ಬಿಡುಗಡೆ ಸಿಕ್ಕುತ್ತಿದ್ದುದು ವರದಾನವಾಗಿ ಪರಿಣಮಿಸಿತು. ಈ ಬಿಡುವಿನ ಸಮಯದಲ್ಲಿ ನ್ಯಾಯಾಲಯಗಳಿಗೆ ಎಡತಾಕುವ ಮೂಲಕ ಪ್ರಾಯೋಗಿಕ ಶಿಕ್ಷಣವನ್ನು ಪಡೆದುಕೊಂಡ ಲಾಭ, ಅವರ ವೃತ್ತಿಜೀವನದಲ್ಲಿ ಯಶಸ್ಸನ್ನು ಸಾಧಿಸಲು ಬಹುತೇಕ ಕಾರಣವಾಯಿತು. ಒಬ್ಬ ವ್ಯಕ್ತಿಗೆ ತನ್ನ ಕನಸು,ವೃತ್ತಿ ಮತ್ತು ಪ್ರವೃತ್ತಿಗಳು ಒಂದೇ ಆದಾಗ ಈ ಬಗೆಯ ನಿಷ್ಠೆ ಆಸಕ್ತಿಗಳು ಹುಟ್ಟಿಕೊಳ್ಳಬಹುದೇನೋ.

ಒಂದು ಬಾರಿ ವಕೀಲರಾದ ಬಳಿಕ ಅವರು ಕೇಸುಗಳನ್ನು ನಡೆಸಿದ ರೀತಿ, ಎದುರಾದ ಸವಾಲುಗಳು, ಕೇಸುಗಳ ವಾದಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆ, ತನ್ನ ಕೇಸು ಮತ್ತು ಕಕ್ಷಿದಾರರ ಬಗೆಗಿನ ಬದ್ಧತೆಗಳು ರೋಮಾಂಚನಕಾರಿಯಾಗಿದ್ದು ಪತ್ತೇದಾರಿ ಕತೆಗಳಂತೆ ಓದಿಸಿಕೊಂಡು ಹೋಗುತ್ತವೆ. ವೈಯಕ್ತಿಕವಾಗಿ ಸೋಜಿಗವನ್ನುಂಟು ಮಾಡಿದ ‌ಸಂಗತಿ ತಮ್ಮ ಅನುಭವಗಳನ್ನು ನಿರೂಪಿಸುವಾಗ ಲೇಖಕರು ಸಂಬಂಧಪಟ್ಟ ವ್ಯಕ್ತಿಗಳ ಹೆಸರುಗಳನ್ನು ನೇರವಾಗಿ ಪ್ರಸ್ತಾಪಿಸಿರುವುದು. ಸಾಮಾನ್ಯವಾಗಿ ಖ್ಯಾತನಾಮರ ಹೆಸರುಗಳನ್ನು ಉಲ್ಲೇಖಿಸಿದೆ ಸೂಚ್ಯವಾಗಿ ಹೇಳುವುದು ವಾಡಿಕೆ. ಆದರೆ ಈ ಲೇಖಕರ ಧೈರ್ಯವನ್ನು ಮೆಚ್ಚಲೇಬೇಕು.

ನಮಸ್ಕಾರ,
ಅಮಿತ್ ಕಾಮತ್
Displaying 1 of 1 review